ಅತ್ತೂರು ಕಾರ್ಕಳ ಮೈನರ್ ಬೆಸಿಲಿಕಾದಲ್ಲಿ ಸೇಂಟ್ ಲಾರೆನ್ಸ್ ಅವರ ವಾರ್ಷಿಕ ಹಬ್ಬ ಅವರ ಗಂಭೀರ ಆಶೀರ್ವಾದದೊಂದಿಗೆ ಅಟ್ಟೂರು ಭವ್ಯವಾದ ಟಿಪ್ಪಣಿಯೊಂದಿಗೆ ಪ್ರಾರಂಭವಾಯಿತು ಸೇಂಟ್ ಲಾರೆನ್ಸ್ ಅವರ ಅದ್ಭುತ ಪ್ರತಿಮೆ ಮತ್ತು ಅದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತದೆ ಪೂಜೆಯ ಸ್ಥಳ. ಧರ್ಮಸ್ಥಳದ ಧರ್ಮಗುರುಗಳಾದ ರೆ.ಫಾ.ಅಲ್ಬನ್ ಡಿಸೋಜ ಪ್ರತಿಮೆಯನ್ನು ಆಶೀರ್ವದಿಸಿದರು, ಫಾದರ್ ಲ್ಯಾರಿ ಡಿಸೋಜಾ ಅವರು ಸಂತ ಲಾರೆನ್ಸ್ ಅವರ ಪುತ್ಥಳಿಯನ್ನು ನೆರವೇರಿಸಿದರು ಮತ್ತು ಫಾದರ್ ರೋಮನ್ ಮಸ್ಕರೇನ್ಹಸ್ ಜೊತೆ ಇದ್ದರು.
ಬಳಿಕ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು ಸ್ಥಳೀಯ ಮುಖಂಡರಾದ ಶ್ರೀ ಉದಯ ಕುಮಾರ್ ಶೆಟ್ಟಿಯವರು ನಿರ್ವಹಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ನಾಡು ಭೂಮಿಯ ಮೇಲಿನ ಸ್ವರ್ಗವಾಗಿದೆ. ಅಲ್ಲಿ ನಮ್ಮ ಜಿಲ್ಲೆಯಲ್ಲಿ ಅನೇಕ ಜನರು ಭೇಟಿ ನೀಡುವ ಅನೇಕ ಪವಿತ್ರ ಕ್ಷೇತ್ರಗಳಾಗಿವೆ. ಹಬ್ಬ ಹರಿದಿನಗಳಿಗೆ ಶುಭ ಹಾರೈಸಿದರು. ನಂತರ ದೇಗುಲದಲ್ಲಿ ಪವಿತ್ರ ಯೂಕರಿಸ್ಟ್ ಅನ್ನು ಫಾ ಜೆಪ್ಪು ಸೆಮಿನರಿಯಿಂದ ವಿನ್ಸೆಂಟ್ ಸಿಕ್ವೇರಾ, ಜೆಪ್ಪುವಿನಿಂದ ಫಾದರ್ ನವೀನ್ ಪಿಂಟೋ ಸೆಮಿನರಿ, Msgr. ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿಯ ವಿಕಾರ್ ಜನರಲ್ಜೆ ಪ್ಪು ಸೆಮಿನರಿಯಿಂದ ಧರ್ಮಪ್ರಾಂತ್ಯದ ಫಾದರ್ ರಾಜೇಶ್ ರೊಸಾರಿಯೋ, ಫಾದರ್ ರೋಕ್ ಡಿಸೋಜಾ ಮೌಂಟ್ ರೋಸರಿ ಸಂತೆಕಟ್ಟೆಯಿಂದ, ಫ್ರಾ ಬೋನಿಫೇಸ್ ಪಿಂಟೋ ಜೆಪ್ಪುವಿನಿಂದ ಸೆಮಿನರಿ ಮತ್ತು ಫಾದರ್ ಚೇತನ್ ಕಪುಚಿನ್, ಬಿಜೈ. ವಿಶೇಷ ಗಂಭೀರ ಸಮೂಹ ಈ ದಿನವನ್ನು ಧರ್ಮಗುರು ಅಲೋಶಿಯಸ್ ಪೌಲ್ ಡಿಸೋಜಾ ಬಿಷಪ್ ಅವರು ಆಚರಿಸಿದರು ಸಂಜೆ 4.30ಕ್ಕೆ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ. ಈ ಭಾನುವಾರದಿಂದ ದೇವರ ವಾಕ್ಯಕ್ಕೆ ಸಮರ್ಪಿತವಾದ ಎಲ್ಲಾ ಪ್ರತಿಬಿಂಬಗಳು ಈ ವಿಷಯದ ಮೇಲಿದ್ದವು. ಫಾ ಸಿರಿಲ್ ಲೋಬೋ ಮತ್ತು ಫಾದರ್ ಪ್ರವೀಣ್ ಅಮೃತ್ ಸಮಾರಂಭದ ಮುಖ್ಯಸ್ಥರಾಗಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ದೇಗುಲಕ್ಕೆ ಆಗಮಿಸಿದ್ದರು.
ನಾಳೆ (ಸೋಮವಾರ) ಸಂಜೆ 6 ಗಂಟೆಗೆ ಅತಿ ವಂದನೀಯ ಬಿಷಪ್ ಫ್ರಾನ್ಸಿಸ್ ಸೆರಾವೋ ಶಿವಮೊಗ್ಗ ಮಹಾಮಸ್ತಕಾಭಿಷೇಕದ ಅಧ್ಯಕ್ಷತೆ ವಹಿಸುವರು.
Month: January 2024
ಎಂ.ಸಿ.ಸಿ. ಬ್ಯಾಂಕ್ ‘ಮೈಲಿಗಲ್ಲು’ ಸಂಭ್ರಮಾಚರಣೆ ನಡೆಯಲಿದೆ
1912 ರಲ್ಲಿ ಕ್ರೈಸ್ತ ಸಮಾಜದ ಅದ್ವಿತೀಯ ಸಮಾಜಮುಖಿ ಧುರೀಣ ಪಿ.ಎಫ್.ಎಕ್ಸ್ ಸಲ್ಡಾನ್ಹಾ ಇವರ ನೇತೃತ್ವದಲ್ಲಿ ಹತ್ತು ಸಾವಿರ ರೂಪಾಯಿ ಬಂಡವಾಳದೊಂದಿಗೆ ಸೊಸೈಟಿಯಾಗಿ ಆರಂಭಗೊಂಡ ಎಮ್.ಸಿ.ಸಿ. ಬ್ಯಾಂಕ್ ಇಂದು ಸಾವಿರ ಕೋಟಿ ರುಪಾಯಿ ವಹಿವಾಟಿನ ಸಹಕಾರಿ ಕ್ಷೇತ್ರದ ಅಗ್ರಮಾನ್ಯ ಬ್ಯಾಂಕಾಗಿ ಅಭಿವೃದ್ದಿಯ ಪಥದಲ್ಲಿ ಮುನ್ನುಗ್ಗುತ್ತಿದೆ. ಬ್ಯಾಂಕಿನ ಪ್ರಸ್ತುತ ಆಧ್ಯಕ್ಶ ಶ್ರಿ ಅನಿಲ್ ಲೋಬೊ ನ್ಟೇತೃತ್ವದ ಆಡಳಿತ ಮಂಡಲಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಮೇಲೆ, ಬ್ಯಾಂಕಿನ ಸರ್ವಾಂಗೀಣ ಪ್ರಗತಿ ಇಮ್ಮಡಿಯಾಗಿದೆ. 2018 ರಲ್ಲಿ ಬರೀ 503 ಕೋಟಿ ರುಪಾಯಿ ಇದ್ದ ಬ್ಯಾಂಕಿನ ವ್ಯವಹಾರ ಐದೇ ವರ್ಷದ ಅವಧಿಯಲ್ಲಿ 1000 ಕೋಟಿ ರುಪಾಯಿ ದಾಟಿರುವುದೇ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಸಾಕ್ಷಿ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿಯ ಪ್ರಮುಖ ಸಾಧನೆಗಳು
■ ಬ್ಯಾಂಕಿನ ಅರ್ಥಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 1.37 ಶೇಕಡಾಕ್ಕೆ ಎನ್.ಪಿ.ಎ. ಇಳಿಸಿ ನಿವ್ವಳ ಲಾಭ 10.38 ಕೋಟಿ ದಾಕಲಿಸಿದ್ದು.
■ 2002 ರಲ್ಲಿ ಕೇವಲ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ 16 ಶಾಖೆಗಳಿಗೆ ಸ್ಥಗಿತಗೊಂಡಿದ್ದ, ಬ್ಯಾಂಕಿನ ವಿಸ್ತರಣೆಯನ್ನು ಸಪ್ತ ಜಿಲ್ಲೆಗಳಿಗೆ ( ದ. ಕ. & ಉಡುಪಿ ಜೊತೆಗೆ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು) ವಿಸ್ತರಿಸಿದ್ದು.
■ ಪ್ರತ್ಯೇಕ ಘಟಕ ನಿರ್ಮಾಣ, ಸಹಮಿಲನ, ಸಮಾವೇಶ ಮುಂತಾದ ವಿಶೇಷ ಕಾರ್ಯಕ್ರಮಗಳ ಮೂಲಕ ಅನಿವಾಸಿ ಭಾರತೀಯ ಖಾತೆಗಳಿಗೆ ಚುರುಕು ಮುಟ್ಟಿಸಿ, ಕರಾವಳಿಯ ಸಹಕಾರಿ ರಂಗದ ಬ್ಯಾಂಕುಗಳಲ್ಲಿ ಅನಿವಾಸಿ ಭಾರತೀಯರಿಗೆ ಸೇವೆ ಒದಗಿಸುತ್ತಿರುವ ಏಕೈಕ ಬ್ಯಾಂಕ್ – ಎಂಸಿಸಿ. ಬ್ಯಾಂಕ್ ಎಂಬ ಮನ್ನಣೆ ದೊರಕಿಸಿ ಕೊಟ್ಟದ್ದು.
■ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಿಗೆ ಸಹಕಾರಿ ರತ್ನ ಪ್ರಶಸ್ತಿಯ ಹಿರಿಮೆಗೆ ಪಾತ್ರವಾಗಿಸಿದ್ದು.
2018 ರಲ್ಲಿ ಕೇವಲ 503 ಕೋಟಿ ರುಪಾಯಿ ಇದ್ದ ವ್ಯವಹಾರ 1000 ಕೋಟಿಗೆ ತಲಪಿಸಿದ್ದು.
1000 ಕೋಟಿ ವ್ಯವಹಾರ ಬ್ಯಾಂಕಿನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಆಗಿರುವುದರಿಂದ ದಿನಾಂಕ 21 ಜನವರಿ 2024 ರಂದು MILESTONE ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಮಾರಂಭಕ್ಕೆ ಅನಿವಾಸಿ ಉದ್ಯಮಿ, ಸಮಾಜಸೇವಕ ಮತ್ತು ಮಹಾದಾನಿ ಶ್ರೀ ಮೈಕಲ್ ಡಿ ಸೊಜಾ ಮುಖ್ಯ ಅತಿಥಿಯಾಗಿ ಆಗಮಿಸುವರು. ಹಿರಿಯ ಲೆಕ್ಕ ಪರಿಷೋಧಕ ರುಡೋಲ್ಫ್ ರೊಡ್ರಿಗಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಿಲಾಗ್ರಿಸ್ ಚರ್ಚಿನ ಪ್ರಧಾನ ಗುರು ವಂ। ಬೊನವೆಂಚರ್ ನಜ್ರೆತ್, ಮಾಜಿ ವಿದಾನ ಸಭಾ ಸದಸ್ಯ ಶ್ರೀ ಜೆ. ಆರ್. ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ ಸೊಜಾ, ಖ್ಯಾತ ಉದ್ಯಮಿ ಶ್ರೀ ರೋಹನ್ ಮೊಂತೇರೊ, ಸಮಾಜಮುಖಿ ನಾಯಕ ಶ್ರೀ ಪಿಯುಸ್ ಎಲ್. ರೊಡ್ರಿಗಸ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ.
ಮೈಲಿಗಲ್ಲು ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿ ಪಾಲನೆಯ ಭಾಗವಾಗಿ – ಶಿಕ್ಷಣದಿಂದ ವಂಚಿತರಾದ ಮಕ್ಕಳು, ಹಿರಿಯ ನಾಗರಿಕರು, ಪೋಷಕರು ಇಲ್ಲದ ಮಕ್ಕಳು ಮುಂತಾದ ಅಶಕ್ತರನ್ನು ಆರೈಕೆ ಮಾಡುವ ಸಂಘ ಸಂಸ್ಥೆಗಳಾದ ಉಡುಪಿ ಪಾಂಬೂರಿನ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಸುರಕ್ಷ ಚಾರಿಟೇಬಲ್ ಟ್ರಸ್ಟ್, ಕಾರ್ಕಳ, ಪ್ರಜ್ಞ ಚಿಣ್ಣರ ತಂಗುದಾಮ ಕೇಂದ್ರ, ಕಾಪಿಕಾಡ್, ಮಂಗಳೂರು ಇವರಿಗೆ ದೇಣಿಗೆಯನ್ನು ನೀಡಲಾಗುವುದು. ಹಾಗೂ ಭವಿಷ್ಯದ ಯೋಜನೆಗಳಾದ ಇ-ಲಾಬಿ, ಪಾಸ್ ಬುಕ್ ಕಿಯೋಸ್ಕ್, Personalized Cheque Book, ಮೈಲಿಗಲ್ಲು ಸಾಧನೆಯ ವಿಶೇಷ ಕೊಡುಗೆಗಳನ್ನು ಅನಾವರಣ ಮಾಡಲಾಗುವುದು. ಬ್ಯಾಂಕಿನ ಬುಲೆಟಿನ್ ನಾಲ್ಕನೇ ಸಂಚಿಕೆಯನ್ನೂ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಬ್ಯಾಂಕಿನ ಗ್ರಾಹಕರ ಶುಭದಿನಗಳ ಆಚರಣೆ, ಪ್ರಶಸ್ತಿ ಪುರಸ್ಕಾರ ಪಡೆದವರನ್ನು ಗುರುತಿಸಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಇವರನ್ನು ಸನ್ಮಾನಿಸಲಾಗುವುದು. ಲಘು ಸಂಗೀತ ಮತ್ತು ಸಹಬೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುವುದು.
ಮಹಿಳೆಯರು ಇಂದು ಪುರಷರಂತೆ ಸರಿ ಸಮಾನರಾಗಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡಿದ್ದಾರೆ : ವಕೀಲೆ ಸೌಭಾಗ್ಯ
ಶ್ರೀನಿವಾಸಪುರ : ಮಹಿಳೆಯರು ಇಂದು ಪುರಷರಂತೆ ಸರಿ ಸಮಾನರಾಗಿದ್ದು , ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಗುರ್ತಿಸಿಕೊಂಡಿದ್ದಾರೆ ಎಂದು ವಕೀಲೆ ಸೌಭಾಗ್ಯ ತಿಳಿಸಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಗಾಟಿಸಿ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಎನ್. ಬಿ.ವೇಣುಗೋಪಾಲ್ ಮಾತನಾಡಿ ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿ ಗುರ್ತಿಸಿಕೊಳ್ಳುತ್ತಿದ್ದು, ಇದರಿಂದ ದೇಶವು ಅಭಿವೃದ್ಧಿಯತ್ತಾ ಸಾಗುತ್ತಿದೆ. ಕುಟುಂಬದಲ್ಲಿ ಒಬ್ಬ ಮಹಿಳೆಯು ಕುಟುಂಬ ಒಂದು ಕಂಬ, ಕುಟುಂಬವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಭಲರಾಗಲು ಸಾಧ್ಯ ಎಂದರು.
ಪಿಎಸ್ಐ ರಮಾದೇವಿ, ಎಎಸ್ಐ ರವೀಂದ್ರ , ಜಿಲ್ಲಾ ನಿರ್ದೇಶಕ ಪದ್ಮಯ್ಯಗೌಡ, ಜಿಲ್ಲಾ ಜನಜಾಗೃತಿ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ, ಜ್ಞಾನ ವಿಕಾಸ ಯೋಜನಾಧಿಕಾರಿ ಸಂದ್ಯಾ, ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ಇತರರು ಇದ್ದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ನಾಗರೀಕರಿಗೆ ಅರಿವು ಮೂಡಿಸುವುದೇ ಮೂಲ ಉದ್ದೇಶ – ಸಂಸದ ಎಸ್.ಮುನಿಸ್ವಾಮಿ
ಶ್ರೀನಿವಾಸಪುರ : ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೂಲಕ ನರೇಂದ್ರಮೋದಿ ರವರ ನೇತೃತ್ವದ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ನಾಗರೀಕರಿಗೆ ಅರಿವು ಮೂಡಿಸುವುದೇ ಮೂಲ ಉದ್ದೇಶ ಸಂಸದ ಎಸ್.ಮುನಿಸ್ವಾಮಿ ಎಂದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಶನಿವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನರೇಂದ್ರ ಮೋದಿಯವರು ಬಡ ಕುಂಟುಂಬ ದಿಂದ ಬಂದಿರುವುದರಿಂದ ಬಡ ಕುಟುಂಬಗಳು ಏಳಿಗೆಗಾಗಿ ಈಗಾಗಲೇ ಆಯುಷ್ಮಾನ್ ಯೋಜನೆ, ಭಾರತ್ ಮುದ್ರಾಯೋಜನೆ, ಕಿಸಾನ್ ಸನ್ಮಾನ್ ಯೋಜನೆ, ಪ್ರಧಾನ ಮಂತ್ರಿ ಅವಾಸ್ ಯೋಜನೆ, ಉಜ್ವಲ್ ಯೋಜನೆ , ಸ್ವಚ್ಚ ಭಾರತ್ ಮಿಷನ್ ಯೋಜನೆಗಳನ್ನು ಜಾರಿಗೆ ತಂದಿದ್ದು, ಬಹುತೇಕರು ಇದರ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯು ಬಹಳಷ್ಟು ಜನರಿಗೆ ಸದುಪಯೋಗ ಪಡಿಸಿಕೊಂಡು ಜೀವಗಳನ್ನು ಉಳಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖಂಡರಾದ ರೋಣೂರು ಚಂದ್ರಶೇಖರ್, ವಿಶ್ವಹಿಂದು ಪರಿಷತ್ ತಾಲೂಕಿನ ಮಾಜಿ ಅಧ್ಯಕ್ಷ ವೇಮಣ್ಣ, ಪರಸಭೆ ಮುಖ್ಯ ಅಧಿಕಾರಿ ವೈ.ಎನ್. ಸತ್ಯನಾರಾಯಣ್, ವ್ಯವಸ್ಥಾಪಕ ನವೀನ್ ಚಂದ್ರ, ಪರಿಸರ ಅಭಿಯಂತರರು ಲಕ್ಷ್ಮೀಶ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪಶು ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ್, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್, ಟಿಎಚ್ಒ ಶರೀಫ್, ಎಸ್ಬಿಐ ಬ್ಯಾಂಕ್ನ ಸರ್ವಿಸ್ ಮೆನೇಜರ್ ಲಲೀತಾ, ಮಾರುಕಟ್ಟೆ ವ್ಯವಸ್ಥಾಪಕ ಶ್ರೀನಿವಾಸ್, ರಿವಿಜನಲ್ ಆಫೀಸ್ ಅಧಿಕಾರಿ ಅಂಬರೀಶ್, ಹಾಗೂ ಅಂಚೆ ಇಲಾಖೆ ಸಿಬ್ಬಂದಿಗಳು ಇದ್ದರು.
ಪಟ್ಟಣದಲ್ಲಿ ಸ್ವಚ್ಚತೆ ಹಾಗು ನೈರ್ಮಲ್ಯಗಳನ್ನು ಕಾಪಾಡುವುದು ಪೌರಕಾರ್ಮಿಕರೆ, ಅವರನ್ನು ಪ್ರತಿಯೊಬ್ಬರು ಗೌರವಿಸಬೇಕು:ಸಂಸದ ಎಸ್.ಮುನಿಸ್ವಾಮಿ
ಶ್ರೀನಿವಾಸಪುರ : ಪಟ್ಟಣದಲ್ಲಿ ಸ್ವಚ್ಚತೆ ಹಾಗು ನೈರ್ಮಲ್ಯಗಳನ್ನು ಕಾಪಾಡುವುದು ಪೌರಕಾರ್ಮಿಕರೆ, ಪೌರಕಾರ್ಮಿಕರು ಪಟ್ಟಣದಲ್ಲಿ ತಮ್ಮಗೆ ಯಾವುದೇ ರೀತಿಯಾದ ಅನಾರೋಗ್ಯವಿರಲಿ ತಮ್ಮ ಕರ್ತವ್ಯದ ನಿಮಿತ್ತ ತಮ್ಮಗೆ ಒಪ್ಪಿಸಿರುವ ಕೆಲಸ ಕಾರ್ಯಗಳನ್ನು ಜವ್ದಾರಿಯುತವಾಗಿ ನಿರ್ವಹಿಸುತ್ತಾರೆ ಎಂದರು. ಅವರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಪಟ್ಟಣದ ನಗರೇಶ್ವರ ದೇವಾಲಯಲದಲ್ಲಿ ಶನಿವಾರ ಪುರಸಭಾ ವತಿಯಿಂದ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ನಡೆದ ಸ್ವಚ್ಚತಾ ಅಭಿಯಾನದಲ್ಲಿ ದೇವಾಲಯ ಆವರಣವನ್ನು ಸ್ವಚ್ಚತೆಯನ್ನು ಹಮ್ಮಿಕೊಂಡು ಮಾತನಾಡಿದರು.
ಜನವರಿ 22 ರಂದು ಅಯೋದ್ಯೆಯಲ್ಲಿ ರಾಮಮಂದಿರ ಉದ್ಗಾಟನೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ದೇಶಾದ್ಯಂತ ಎಲ್ಲಾ ಗ್ರಾಮ ಗ್ರಾಮಗಳಲ್ಲಿ ದೇವಾಲಯಗಳ ಸ್ವಚ್ಚತೆ ಮಾಡಲಾಗುತ್ತಿದೆ. 22 ರಂದು ದೇಶದ ಎಲ್ಲಾ ಗ್ರಾಮಗಳ ದೇವಾಲಯಗಳಲ್ಲಿ ವಿಶೇಷ ಪೂಜೆ , ಸಾಂಸ್ಕøತಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಗಿದ್ದು, ನಾಗರೀಕರೆಲ್ಲರೂ ಸೇರಿ ಅಂದು ರಾಮನ ಸ್ಮರಣೆ ಮಾಡುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಪಾದಗಳನ್ನು ತೊಳೆದು, ಸನ್ಮಾನಿಸಿ ಗೌರವಿಸಿದರು. ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್, ಜಿ.ಪಂ.ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಮುಖಂಡ ರೋಣೂರು ಚಂದ್ರಶೇಖರ್, ರಾಮಾಂಜಿ, ಸುರೇಶ್ನಾಯಕ್ ಪುರಸಭಾ ವ್ಯವಸ್ಥಾಪಕ ನವೀನ್ ಚಂದ್ರ, ಪರಿಸರ ಅಭಯಂತರ ಲಕ್ಷ್ಮೀಶ, ಬಾಲಕೃಷ್ಣ ಕಂದಾಯ ನಿರೀಕ್ಷ ಶಂಕರ್ ನರಗರೇಶ್ವರ ಸೇವ ಸಮಿತಿ ಅಧ್ಯಕ್ಷ ಪಿ.ಗಿರೀಶ್, ಕಾರ್ಯದರ್ಶಿ ಬಿ.ಶಿವಕುಮಾರ್, ಖಜಾಂಚಿ ಹರೀಶ್, ಸೇವ ಸಮಿತಿ ಸದಸ್ಯರಾದ ಮೋಹನ್, ಅನಿಲ್ಕುಮಾರ್, ಪಿ.ನರೇಂದ್ರ , ದಿಲೀಪ್, ರಾಮಲಿಂಗ, ನವೀನ್,ರಾಜಶೇಖರ್, ಕೆ.ಎಸ್.ಮಂಜುನಾಥ್, ಮುರಳಿ, ಗೋಪಿನಾಥ್, ಇದ್ದರು .
20, ಎಸ್ವಿಪುರ್
ST AGNES HIGH SCHOOL “FEAST DAY CELEBRATION”/ ಸೇಂಟ್ ಆಗ್ನೆಸ್ ಹೈಸ್ಕೂಲ್ “ಫೀಸ್ಟ್ ಡೇ ಸೆಲೆಬ್ರೇಶನ್”
On 20th Saturday St. Agnes High School celebrated the feast of its Alma mater. The students of class 8B conducted pleasingly, a meaningful programme in honour of the young martyr Saint Agnes. The whole programme highlighted the purity and sacrifice of St. Agnes. The program began with a solemn prayer service, focusing her patronage on children youth, maidens, gardeners and girl guides. The prayer service filled the air with spiritual fervor.
An alluring and flawless dance was staged on the empowered woman was a befitting tribute to the amazing women who are the real architects of our society.
A captivating skit of St. Agnes life and martyrdom was enacted by the students. The skit conveyed the very essence of her unwavering faith in God in her short yet inspiring journey.
A buoyant zumba dance enthralled the gathering with a message of fitness and de-stress during examination time.
The chief guest Mrs. Lavina Aranha remembered with gratitude her tmemories associated with St. Agnes from KG till her graduation. She even emphasized the significant virtues of truth and honesty and its connection with the school values. The endowment prizes and scholarship winners were honored by the chief guest.
The Headmistress Sr. Gloria A.C congratulated the students of class 8B for their active participation and vibrant performance. She also commended the class teacher Mrs. Preema Frank for diligent planning and meticulous execution the whole program.
A sweet- toned group song was sung by the whole class honouring the patron saint was a harmonious blend of musical talent and team – work.
The program was smartly compered by Ritu Jean Lobo and Snehal Miranda, Thrisha welcomed the gathering and Varnika proposed the vote of thanks.
ಸೇಂಟ್ ಆಗ್ನೆಸ್ ಹೈಸ್ಕೂಲ್ “ಫೀಸ್ಟ್ ಡೇ ಸೆಲೆಬ್ರೇಶನ್”
20ನೇ ಶನಿವಾರದಂದು ಸೇಂಟ್ ಆಗ್ನೆಸ್ ಹೈಸ್ಕೂಲ್ ತನ್ನ ಅಲ್ಮಾ ಮೇಟರ್ ಹಬ್ಬವನ್ನು ಆಚರಿಸಿತು. ಯುವ ಹುತಾತ್ಮ ಸಂತ ಆಗ್ನೆಸ್ ಅವರ ಗೌರವಾರ್ಥ ಅರ್ಥಪೂರ್ಣ ಕಾರ್ಯಕ್ರಮವನ್ನು 8 ಬಿ ತರಗತಿಯ ವಿದ್ಯಾರ್ಥಿಗಳು ಮನಸೂರೆಗೊಳಿಸಿದರು. ಇಡೀ ಕಾರ್ಯಕ್ರಮವು ಸೇಂಟ್ ಆಗ್ನೆಸ್ ಅವರ ಶುದ್ಧತೆ ಮತ್ತು ತ್ಯಾಗವನ್ನು ಎತ್ತಿ ತೋರಿಸುತ್ತದೆ. ಕಾರ್ಯಕ್ರಮವು ಗಂಭೀರವಾದ ಪ್ರಾರ್ಥನಾ ಸೇವೆಯೊಂದಿಗೆ ಪ್ರಾರಂಭವಾಯಿತು, ಮಕ್ಕಳು ಯುವಕರು, ಕನ್ಯೆಯರು, ತೋಟಗಾರರು ಮತ್ತು ಹೆಣ್ಣು ಮಾರ್ಗದರ್ಶಿಗಳ ಮೇಲೆ ಅವಳ ಪ್ರೋತ್ಸಾಹವನ್ನು ಕೇಂದ್ರೀಕರಿಸಿತು. ಪ್ರಾರ್ಥನೆ ಸೇವೆಯು ಆಧ್ಯಾತ್ಮಿಕ ಉತ್ಸಾಹದ ಸ್ಪೂರ್ತಿ ತುಂಬಿತು.
ಸಶಕ್ತ ಮಹಿಳೆಯ ಮೇಲೆ ಆಕರ್ಷಕ ಮತ್ತು ದೋಷರಹಿತ ನೃತ್ಯವನ್ನು ಪ್ರದರ್ಶಿಸಲಾಯಿತು, ಇದು ನಮ್ಮ ಸಮಾಜದ ನಿಜವಾದ ವಾಸ್ತುಶಿಲ್ಪಿಗಳಾದ ಅದ್ಭುತ ಮಹಿಳೆಯರಿಗೆ ಸೂಕ್ತವಾದ ಗೌರವವಾಗಿದೆ.
ವಿದ್ಯಾರ್ಥಿಗಳಿಂದ ಸೇಂಟ್ ಆಗ್ನೆಸ್ ಜೀವನ ಮತ್ತು ಹುತಾತ್ಮತೆಯ ಮನಮೋಹಕ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ಸ್ಕಿಟ್ ತನ್ನ ಚಿಕ್ಕದಾದ ಆದರೆ ಸ್ಪೂರ್ತಿದಾಯಕ ಪ್ರಯಾಣದಲ್ಲಿ ದೇವರಲ್ಲಿ ಅವಳ ಅಚಲ ನಂಬಿಕೆಯ ಸಾರವನ್ನು ತಿಳಿಸಿತು.
ಪರೀಕ್ಷೆಯ ಸಮಯದಲ್ಲಿ ಫಿಟ್ನೆಸ್ ಮತ್ತು ಒತ್ತಡವನ್ನು ನಿವಾರಿಸುವ ಸಂದೇಶದೊಂದಿಗೆ ತೇಲುವ ಜುಂಬಾ ನೃತ್ಯವು ಸಭೆಯನ್ನು ಆಕರ್ಷಿಸಿತು.
ಮುಖ್ಯ ಅತಿಥಿ ಶ್ರೀಮತಿ ಲವಿನಾ ಅರಾನ್ಹಾ ಅವರು ಕೆ.ಜಿ.ಯಿಂದ ಪದವಿಯ ತನಕ ಸೇಂಟ್ ಆಗ್ನೆಸ್ ಅವರೊಂದಿಗಿನ ಅವರ ನೆನಪುಗಳನ್ನು ಕೃತಜ್ಞತೆಯಿಂದ ಸ್ಮರಿಸಿದರು. ಅವರು ಸತ್ಯ ಮತ್ತು ಪ್ರಾಮಾಣಿಕತೆಯ ಗಮನಾರ್ಹ ಸದ್ಗುಣಗಳನ್ನು ಮತ್ತು ಶಾಲೆಯ ಮೌಲ್ಯಗಳೊಂದಿಗೆ ಅದರ ಸಂಪರ್ಕವನ್ನು ಒತ್ತಿಹೇಳಿದರು. ಮುಖ್ಯ ಅತಿಥಿಗಳಿಂದ ದತ್ತಿ ಬಹುಮಾನ ಹಾಗೂ ವಿದ್ಯಾರ್ಥಿ ವೇತನ ವಿಜೇತರನ್ನು ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಗ್ಲೋರಿಯಾ ಎ.ಸಿ ಅವರು 8 ಬಿ ತರಗತಿಯ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ರೋಮಾಂಚಕ ಪ್ರದರ್ಶನಕ್ಕಾಗಿ ಅಭಿನಂದಿಸಿದರು. ಇಡೀ ಕಾರ್ಯಕ್ರಮವನ್ನು ಶ್ರದ್ಧೆಯಿಂದ ಯೋಜಿಸಿ ಮತ್ತು ನಿಖರವಾಗಿ ನಿರ್ವಹಿಸಿದ್ದಕ್ಕಾಗಿ ಅವರು ತರಗತಿ ಶಿಕ್ಷಕಿ ಶ್ರೀಮತಿ ಪ್ರೀಮಾ ಫ್ರಾಂಕ್ ಅವರನ್ನು ಶ್ಲಾಘಿಸಿದರು.
ಸಂಗೀತ ಪ್ರತಿಭೆ ಮತ್ತು ತಂಡದ ಕೆಲಸದ ಸಾಮರಸ್ಯದ ಮಿಶ್ರಣವಾಗಿದ್ದು, ಪೋಷಕ ಸಂತರನ್ನು ಗೌರವಿಸುವ ಸಲುವಾಗಿ ಇಡೀ ತರಗತಿಯಿಂದ ಸಿಹಿಯಾದ ಗುಂಪು ಹಾಡನ್ನು ಹಾಡಲಾಯಿತು.
ಕಾರ್ಯಕ್ರಮವನ್ನು ರಿತು ಜೀನ್ ಲೋಬೋ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು ಮತ್ತು ಸ್ನೇಹಲ್ ಮಿರಾಂಡಾ ಸ್ವಾಗತಿಸಿದರು, ತ್ರಿಷಾ ಸ್ವಾಗತಿಸಿದರು ಮತ್ತು ವರ್ಣಿಕಾ ವಂದಿಸಿದರು.
ಬೀಜಾಡಿಮೂಡು ಶಾಲೆ ಅಮೃತ ಮಹೋತ್ಸವ: ಕ್ರೀಡಾಕೂಟ ಉದ್ಘಾಟನೆ
ಬೀಜಾಡಿ: ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ನಾವು ಕಲಿತ ಶಾಲೆಯ ಅಮೃತ ಮಹೋತ್ಸವವನ್ನು ಊರಿನ ಹಬ್ಬದ ಹಾಗೇ ಸಂಭ್ರಮದಿಂದ ಆಚರಿಸಿಕೊಳ್ಳಲು ಸಕಲ ರೀತಿಯಲ್ಲಿ ಸಹಾಯ-ಸಹಕಾರ ನೀಡಬೇಕು.ಒಂದು ಮಾದರಿ ಕಾರ್ಯಕ್ರಮವಾಗಿ ಸಂಘಟನೆಗೊಳ್ಳಬೇಕು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿಮೂಡು ಇದರ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ, ಬೀಜಾಡಿ ಗ್ರಾ.ಪಂ. ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಹೇಳಿದರು.ಅವರು ಭಾನುವಾರ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಪ್ರಯುಕ್ತ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳಿಗೆ ನಡೆದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೀಜಾಡಿ ಪೂಜಾ ಟೈಲ್ಸ್ ಮಾಲಿಕ ಸುಭಾಷ್ ಜೀ ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್.,ಎಸ್ಡಿಎಂಸಿಯ ಅಧ್ಯಕ್ಷ ಪ್ರಕಾಶ್ ಗಾಣಿಗ, ಅಮೃತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಶಾಂತ ತೋಳಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೂಪ್ಕುಮಾರ್ ಬಿ.ಆರ್., ಕಾರ್ಯದರ್ಶಿ ರಾಘವೇಂದ್ರ ಅಮೀನ್, ಮುಖ್ಯ ಶಿಕ್ಷಕಿ ಪ್ರವೀಣಾ ಶೆಟ್ಟಿ, ತೀರ್ಪುಗಾರ ರಾಜೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಚಂದ್ರಶೇಖರ ಬೀಜಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ ರೋಜರಿ ಚರ್ಜ್: ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣ ಪೃಕ್ರಿಯೆ ಬಗ್ಗೆ ಮಾಹಿತಿ ಕಾರ್ಯಕ್ರಮ
ಕುಂದಾಪುರ, ಜ.21: ಇ – ಆಸ್ತಿ ತಂತ್ರಾಂಶವನ್ನು ಸರಳೀಕರಣ ಪøಕ್ರಿಯೆ ಬಗ್ಗೆ ಮಾಹಿತಿ ಕಾರ್ಯಕ್ರಮವು ಜನವರಿ 21 ರಂದು ಕುಂದಾಪುರ ಕಥೊಲಿಕ್ ಸಭಾ ಘಟಕದ ವತಿಯಿಂದ ಕುಂದಾಪುರ ರೋಜರಿ ಚರ್ಚ್ ಸಭಾಭವನದಲ್ಲಿ ನಡೆಯಿತು ಸರ್ಕಾರದ ಆದೇಶದ ಅನ್ವಯ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿರು ಎಲ್ಲಾ ವಾಸ್ತವ್ಯ ಮತ್ತು ವಾಣಿಜ್ಯ ಕಟ್ಟಡಗಳ ಹಾಗೂ ಖಾಲಿ ನಿವೇಶನಗಳ ಆಸ್ತಿ ಕಣಜ ತಂತ್ರಾಂಶದಲ್ಲಿ ನಮೂದು ಮಾಡಿಕೊಳ್ಳುವ ಪೃಕ್ರಿಯೆ ಕೆಲವು ಸಮಯದ ಹಿಂದೆಯೇ ಆರಂಭವಾಗಿದೆ. ಇದು ಇನ್ನಷ್ಟು ವೇಗವಾಗಿ ಅನುಷ್ಟಾನಗೊಳಿಸ ಬೇಕಾದ ಕಾರಣ ಪುರಸಭಾ ವ್ಯಾಪ್ತಿಯಲ್ಲಿರುವ ಕುಂದಾಪುರ ರೋಜರಿ ಚರ್ಚಿನ ಕುಟುಂಬಗಳಿಗೆ ಮಾಹಿತಿ ನೀಡಲು ಕುಂದಾಪುರ ಪುರಸಭೆಯ ರೆವಿನ್ಯೂ ಅಧಿಕಾರಿ ಅಜಂನಿ ಗೌಡ ಇವರು ಮಾಹಿತಿ ನೀಡಿದರು.
“ಒಂದು ಸಲ ಇ-ಆಸ್ತಿಯ ಅಕೌಂಟ್ ಆರಂಭ ಆದಲ್ಲಿ, ಮುಂದೆ ವಾರಿಸುದಾರರಿಗೆ ತೆರಿಗೆ ಕಟ್ಟಲು ಸುಲಭವಾಗುತ್ತದೆ. ದೂರವಿರುವ (ಪರವೂರಿನಲ್ಲಿರುವರಿಗೆ) ವಾರಿಸುದಾರರು ತೆರಿಗೆ ಕಟ್ಟಲು ಸುಲಭವಾಗುತ್ತದೆ. ಈ ಬಗ್ಗೆ ಸಲಹೆ ಸೂಚನೆ ನಾವು ನೀಡಲು ಸಿದ್ದರಿದ್ದೇವೆ” ಎಂದು “ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಲು ಬೇಕಾದ ಅಗತ್ಯ ದಾಖಲೆಗಳ ಬಗ್ಗೆ ವಿವರಿಸಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಇದು ಒಳ್ಳೆಯ ಕಾರ್ಯಕ್ರಮ ಆದರೆ ಅಷ್ಟೆ ಪ್ರಯಾಸ ಇದೆ. ಆದರೆ ನಾವೆಲ್ಲ ಇದಕ್ಕೆ ಸಹಕರಿಸೋಣ” ಎಂದು ಶುಭ ನುಡಿದರು. ಈ ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಪುರಸಭೆಯ ಸಹಾಯಕ ರೆವಿನ್ಯೂ ಅಧಿಕಾರಿ ಸತೀಶ್ ಖಾರ್ವಿ, ಪುರಸಭೆಯ ತಾಂತ್ರಿಕ ವಿಭಾಗದ ಅರುಣ್ ಡಿಸೋಜಾ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ನಾ, ಕಥೊಲಿಕ್ ಸಭಾದ ಪದಾಧಿಕಾರಿಗಳು, ಸದಸ್ಯರು ಮತ್ತು ಚರ್ಚಿನ ಜನತೆ ಹಾಜರಿತ್ತು.
ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ವಂದಿಸಿದರು. ಕಥೊಲಿಕ್ ಸಭಾದ ಪದಾಧಿಕಾರಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ನಿರೂಪಿಸಿದರು.
ಕೊಟೇಶ್ವರ ಕಟ್ಕರೆ ಬಾಲಯೇಸುವಿನ ಮಠಾಶ್ರಮದಲ್ಲಿ ವಾರ್ಷಿಕ ಮಹೊತ್ಸೋವ
ಕುಂದಾಪುರ,ಜ.21 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದಲ್ಲಿ ಬಾಲಾಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 20 ಶನಿವಾರದಂದು ಸಂಜೆ ಶ್ರದ್ದಾ ಭಕ್ತಿಯ ಬಲಿದಾನ ಅರ್ಪಿಸುವ ಮೂಲಕ ಜರುಗಿತು,
ವಂ|ಧರ್ಮಗುರು ಉಡುಪಿ ಧರ್ಮ ಪ್ರಾಂತ್ಯದ ಛಾನ್ಸಲರ್ ಡಾ|ರೋಶನ್ ಡಿಸೋಜಾ ಇವರು ಉತ್ಸವದ ಪ್ರಧಾನ ಯಾಜಕರಾಗಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ದಿನ ನಿತ್ಯವೂ ಸರ್ವೇಶ್ವರನ ಮುಖವನ್ನು ಹುಡುಕೋಣ” ಎಂಬ ಧ್ಯೇಯವಾಕ್ಯವನ್ನು ಓತ್ತಿ ಹೇಳಿದರು. ಸರ್ವೇಶ್ವರನು ನಮ್ಮ ಪ್ರಾರ್ಥನೆಗಳಿಗೆ ಕಿವಿ ಕೊಟ್ಟಿದ್ದಾನೆ. ನಾವು “ನನ್ನ ಜೀವವು ಸರ್ವೇಶ್ವರನಿಗಾಗಿ ಸ್ಥುತಿಗಾಯನ ಮಾಡುತ್ತಿದೆ, ಏಕೆಂದರೆ ನನ್ನ ಜೀವನದಲ್ಲಿ ಅದ್ಬುತ ಕಾರ್ಯಗಳನ್ನು ಮಾಡಿದೆ” ಯೇಸು ಕ್ರಿಸ್ತರ ಮಾತೆ ಮೇರಿ ಹೇಳಿದಂತೆ ನಾವೂ ಸರ್ವೇಶ್ವರ ಸ್ಥುತಿಗಾಯನ ಮಡುವ’ ಎಂದು ಹೇಳುತ್ತಾ “ನಾವು ಈ ಪ್ರಪಂಚದಲ್ಲಿ ಜೀವಿಸುವಾಗ ನಮಗೆ ಕಶ್ಟ ಕಾರ್ಪಣ್ಯಗಳು, ರೋಗ ರೂಜಿನಗಳು ಬರುತ್ತವೆ, ಏಷ್ಟು ಐಶ್ವರ್ಯ ಇದ್ದರೂ ಕೆಲವೊಂದು ಸಲ ಪ್ರಯೋಜನ ಆಗುವುದಿಲ್ಲ, ಅದು ದೇವನಿಗೆ ಮಾತ್ರ ಗುಣಪಡಿಸಲು ಸಾಧ್ಯ. ಆತನು ಎಲ್ಲಾ ಸಮಸ್ಯೆಗಳಿಗೆ ಪರಿಹಾರ, ಅದಕ್ಕಾಗಿ ನಾವು ದೇವರನ್ನು ಹುಡುಕಬೇಕು. ದೇವರು ನಮಗೆ ಶಾಂತಿ ಸಮಾಧಾನ ನೀಡುತ್ತಾನೆ. ನಾವು ದೇವರನ್ನು ಹುಡುಕತೊಡಗಿದರೆ ಆತನು ನಮ್ಮನ್ನು ಬಿಟ್ಟು ಹಾಕುವುದಿಲ್ಲಾ, ಯಾಕೆಂದರೆ ಆತ ನಮ್ಮನ್ನು ಬಹಳ ಪ್ರೀತಿಸುತ್ತಾನೆ, ನಮ್ಮ ದೇವರು ಪ್ರೀತಿಸುವ ದೇವರು” ಎಂದು ಸಂದೇಶ ನೀಡಿದರು.
ಈ ಉತ್ಸವದ ತಯಾರಿಗಾಗಿ ಆಶ್ರಮದಲ್ಲಿ 3 ದಿನಗಳ ಧ್ಯಾನ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಧ್ಯಾನ ಕೂಟವನ್ನು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರು ವಂ|ಪಿಯುಸ್ ಡಿಸೋಜಾ, ಸಹೋದರ ಮುಂಬಯಿಯ ಬೆಂಡ್ರಾದ ಪ್ರಕಾಶ್ ಡಿಸೋಜಾ ನೆಡೆಸಿಕೊಟ್ಟರು. ಕಾರ್ಮೆಲ್ ಸಂಸ್ಥೆಯ ಸಲಹಗಾರರಾದ ವಂ|ಧರ್ಮಗುರು ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಮತ್ತೋರ್ವ ಸಲಹೆಗಾರರಾದ ವಂ|ಧರ್ಮಗುರು ಆಲ್ಫೋನ್ಸ್ ಬ್ರಿಟ್ಟೊ ಕಟ್ಕೆರೆ ಮಠಾಶ್ರಮದ ಕಾರ್ಮೆಲ್ ಸಂಸ್ಥೆಯ ವಂ|ಧರ್ಮಗುರು ಜ್ಯೋ ತಾವ್ರೊ, ವಂ|ಧರ್ಮಗುರು ಜೊಸ್ಸಿ ಡಿ ಸೋಜಾ, ವಂ|ಧರ್ಮಗುರು ಜೋನ್ ಸಿಕ್ವೇರಾ, ಉಜ್ವಾಡ್ ಕೊಂಕಣಿ ಪತ್ರದ ಸಂಪಾದಕರಾದ ವಂ|ಕಾರ್ಮೆಲ್ ಧರ್ಮಗುರು ಆಲ್ವಿನ್ ಸಿಕ್ವೇರಾ, ಅತಿಥಿ ಧರ್ಮಗುರುಗಳಾದ ಕಾರ್ಮೆಲ್ ಸಂಸ್ಥೆಯ ಹಲವಾರು ಧರ್ಮಗುರುಗಳು, ಕುಂದಾಪುರದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಕೆರೆಕಟ್ಟೆ ಸಂತ ಅಂತೋನಿ ಆಶ್ರಮದ ರೆಕ್ಟರ್ ವಂ|ಸುನೀಲ್ ವೇಗಸ್ ಮತ್ತು ಕುಂದಾಪುರ ವಲಯದ ಹಲವಾರು ಧರ್ಮಗುರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆರೆಕಟ್ಟೆ ಬಾಲಾಯೇಸು ಮಠಾಶ್ರಮದ ರೆಕ್ಟರ್ ಕಾರ್ಮೆಲ್ ಧರ್ಮಗುರು ವಂ|ಪ್ರವೀಣ್ ಪಿಂಟೊ ಹಬ್ಬದ ಶುಭಾಶಯಗಳನ್ನು ಅರ್ಪಿಸಿ, ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.