ಶ್ರೀನಿವಾಸಪುರ 1 : ಸ್ವಚ್ಚಭಾರತ್ ನಿರ್ಮಾಣ ಬಗ್ಗೆ ಎಲ್ಲರೂ ಗಮನಹರಿಸಿದರೆ ಮಾತ್ರ ಮಹಾತ್ಮ ಗಾಂಧೀಜಿ ಕಂಡಂತಹ ಕನಸು ನನಸು ಆಗುತ್ತದೆ. ಹಾಗಾಗಿ ಸಾರ್ವಜನಿಕರು ಪಟ್ಟಣವನ್ನು ಸ್ವಚ್ಚ ಸುಂದರವಾಗಿ ಮಾಡಲು ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಅವಶ್ಯಕ ಪಟ್ಟಣದ ಜನತೆ ಪ್ಲಾಸ್ಟಿಕ್ ನೀಷೆದಿಸಬೇಕು ಹಾಗಾಗಿ ಪಟ್ಟಣದ ನಾಗರೀಕರು ಸ್ವಚ್ಚತೆಯನ್ನು ಕಾಪಾಡಬೇಕೆಂದು ಪುರಸಭೆಯ ಆರೋಗ್ಯ ನಿರೀಕ್ಷಕ ಕೆ.ಜಿ. ರಮೇಶ್ ತಿಳಿಸಿದರು.
ಪಟ್ಟಣದ ಪುರಸಬೆ ಕಾರ್ಯಾಲಯ ಮುಂದೆ ನಂದೀಶ್ವರ ರೂರಲ್ ಡೆವಲಪ್ಮೆಂಟ್ ಸೆಂಟರ್ ರವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಪುನರ್ ಬಳಿಕೆ ಮಾಡುವ ಪ್ಲಾಸ್ಟಿಕ್ನ್ನು ಬಳಿಸಬೇಕು ನಮ್ಮ ಮನೆಯಿಂದಲೇ ಸ್ವಚ್ಚಕಾರ್ಯಕ್ರಮವನ್ನು ಪ್ರಾರಂಭಿಸಬೇಕು ಪ್ರಧಾನ ಮಂತ್ರಿ ಕಂಡ ಸ್ವಚ್ಚಭಾರತ್ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಸಬೇಕೆಂದ ಇವರು ಎಲ್ಲಂದರಲ್ಲಿ ಕಸ ಹಾಕುವುದರಿಂದ ಮಲೇರಿಯಾ, ಡೇಗ್ಯೂ ಜ್ವರದಂತಹ ಸಂಕ್ರಾಮಿಕ ರೋಗಗಳು ಹರಡುತ್ತವೆ. ಆದ್ದರಿಂದ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟಿಕೊಳ್ಳುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮವನ್ನು ನಂದೀಶ್ವರ ರೂರಲ್ ಡೆವಲಪ್ಮೆಂಟ್ ಸೆಂಟರ್ನ ನಿರ್ದೇಶಕ ವೆಂಕಟರವಣಪ್ಪ ಸಿಬ್ಬಂದಿಯಾದ ಹರೇಂದ್ರ , ಅರುಣ, ಪುರಸಬೆಯ ಕಂದಾಯ ನಿರೀಕ್ಷಕ ಮಂಜುನಾಥ್, ಜೆ.ಇ. ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
Month: January 2024
ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರ ಅತ್ತೂರು ಕಾರ್ಕಳ ವಾರ್ಷಿಕ ಮಹೋತ್ಸವದ 3 ನೇ ದಿನ / The 3rd day of the feast of St. Lawrence at Attur Basilica
ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥಿಸೋಣ. ಪರಮಪೂಜ್ಯ ಡಾ. ಜೀವರ್ಗಿಸ್ ಮಾರ್ ಮಕಾರಿಯೋಸ್
ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನದ ಭಕ್ತಿ ಕಾರ್ಯಗಳು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಈ ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥಿಸೋಣ’ ಎಂಬ ಹಬ್ಬದ ದಿನದ ವಿಷಯವನ್ನು ಧ್ಯಾನಿಸಲಾಯಿತು. ದೈನಂದಿನ ಜೀವನದಲ್ಲಿ ನಾವೆಲ್ಲರು ವಿವಿಧ ಪ್ರಲೋಭನೆಗಳನ್ನು ಎದುರಿಸಿ ಹಿಮ್ಮೆಟ್ಟಿ ನಿಂತು ಅವೆಲ್ಲವನ್ನು ಗೆಲ್ಲಬೇಕು. ಪ್ರಭು ಕ್ರಿಸ್ತರು ಸೈತಾನನ ಪ್ರಲೋಭನೆಯನ್ನು ಮೆಟ್ಟಿ ನಿಂತರು. ಆದರೆ ಆದಾಮ್ ಹಾಗೂ ಹಾವ್ವ ವಿಷಸರ್ಪದ ಪ್ರಲೋಭನೆಗೆ ಒಳಗಾದರು. ಹೀಗಾಗಿ ಪ್ರಲೋಭನೆ ನಮ್ಮನ್ನು ಸದಾಕಾಲಾ ಕಾಡುತ್ತಿರುವಾಗ ಯೇಸುವಿನಂತೆ ನಾವೆಲ್ಲರು ಅದನ್ನು ಎದುರಿಸಿ ಜಯಶೀಲರಾಗಬೇಕು.
ಭಕ್ತಜನತೆ ಬಸಿಲಿಕದ ಸುತ್ತಮುತ್ತ ಒಂದುಗೂಡಿ ತಮ್ಮ ಭಕ್ತಿಕಾರ್ಯಗಳಲ್ಲಿ ಒಂದಾದರು.
ಜನವರಿ 23 ರಂದು ಬೆಳಿಗ್ಗೆ ಪುಣ್ಯಕ್ಷೇತ್ರದ ಸಂತ ಲಾರೆನ್ಸರ ಪವಿತ್ರ ಅವಶೇಷ ಹಾಗೂ ಪವಾಡ ಮೂರ್ತಿಯ ಸಂಪುಟದ ದಿವ್ಯ ಪ್ರಸನ್ನತೆಯನ್ನು ಕಾಣಲು ಭಕ್ತಜನರು ಸಾವಿರಾರು ಸಂಖ್ಯೆಯಲ್ಲಿ ಧಾವಿಸಿದರು. ಅಂತೆಯೇ ಹಲವಾರು ರೋಗಿಗಳು, ಅಸ್ವಸ್ತರು ವಿಶೇಷ ಪ್ರಾರ್ಥನೆಗಳಿಗಾಗಿ ಆಶೀರ್ವಾದಕ್ಕಾಗಿ ಭಕ್ತಿಯುತವಾಗಿ ಪಾಲುಗೊಂಡರು
ವಾರ್ಷಿಕ ಮಹೋತ್ಸವದ ಪ್ರಮುಖ ಸಾಂಭ್ರಾಮಿಕ ಆಡಂಭರದ ಗಾಯನ ಬಲಿಪೂಜೆಯನ್ನು ಪುತ್ತೂರಿನ ಧರ್ಮಾಧ್ಯಕ್ಷರಾಂದತಹ ಪರಮಪೂಜ್ಯ ಜೀವರ್ಗಿಸ್ ಮಾರ್ ಮಕಾರಿಯೋಸ್ ನೆರವೇರಿಸಿ ಪ್ರಲೋಭನೆಗೆ ಒಳಗಾಗದೆ ಅಚಲವಾಗಿ ಸರ್ವವನ್ನು ಎದುರಿಸಬೇಕು ಎಂದು ಪ್ರಬೋಧನೆಯನ್ನು ನೀಡಿದರು.
ದಿನದ ಇತರ ಬಲಿಪೂಜೆಗಳನ್ನು ವಂದನೀಯ ಜೋಕಿಮ್ ಡಿಸೋಜ, ಕಾಪುಚಿನ್, ಉಡುಪಿ, ವಂದನೀಯ ಆಲ್ವಿನ್ ಸಿಕ್ವೇರಾ, ಕಾರ್ಮೆಲ್ ಸಭೆ, ವಂದನೀಯ ಲೂಯಿಸ್ ಡೇಸಾ, ನಕ್ರೆ, ವಂದನೀಯ ವಿನ್ಸೆಂಟ್ ಕುವೆಲ್ಲೊ, ಬೈಂದುರ್, ವಂದನೀಯ ಲಿಯೋ ಪ್ರವೀಣ್ ಡಿಸೋಜ, ಉದ್ಯಾವರ್, ಅನಿಲ್ ಡಿಸೋಜ, ಪೆರಂಪಳ್ಳಿ, ಪರಮಪೂಜ್ಯ ಡಾ. ಜೀವರ್ಗಿಸ್ ಮಾರ್ ಮಕಾರಿಯೋಸ್ ಪುತ್ತೂರಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ವಂದನೀಯ ವಾಲ್ಟರ್ ಡಿಮೆಲ್ಲೊ ಬೆಳ್ತಂಗಡಿ, ವಂದನೀಯ ಒನಿಲ್ ಡಿಸೋಜ, ಮೂಡಬಿದ್ರೆ, ವಂದನೀಯ ಹೆರಾಲ್ಡ್ ಪಿರೇರಾ, ಕಣಜಾರ್ ಇವರುಗಳು ಅರ್ಪಿಸಿದರು.
ಜಾತಿ ಭೇದವಿಲ್ಲದೆ ಜನಸ್ತೋಮವು ತಮ್ಮ ಹರಕೆಯ ಮೊಂಬತ್ತಿಯನ್ನು ಬೆಳಗಿಸಿದರು, ಪವಿತ್ರ ಪುಪ್ಕರಣಿಯ ಸನ್ನಿಧಿ ಧಾವಿಸಿ ತೀರ್ಥವನ್ನು ಪಡೆದು, ದೀರ್ಘ ಜಪತಪ ವಿಶೇಷ ಪ್ರಾರ್ಥನೆ ಹಾಗೂ ಬಸಿಲಿಕದ ಮಹಾನ್ ಪಾಲಕ ಸಂತ ಲಾರೆನ್ಸರ ದಿವ್ಯ ಸಾನಿಧ್ಯ ಬಳಿ ಧಾವಿಸಿ ಪ್ರಾರ್ಥಿಸಿ ತೆರಳಿದರು. ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 10 ಗಂಟೆಗೆ ನೆರವೇರಿಸಿ ಮಹೋತ್ಸವದ ತ್ರತೀಯ ದಿನದ ಬಲಿಪೂಜೆಗಳನ್ನು, ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಭಕ್ತಿ-ಆಚರಣೆಗಳನ್ನು ಭಕ್ತಿಯುತವಾಗಿ ನೇರವೇರಿಸಿ ಮುಕ್ತಾಯಗೊಳಿಸಲಾಯಿತು.
The 3rd day of the feast of St. Lawrence at Attur Basilica
The 3rd day of the feast of St. Lawrence at Attur Basilica The 3rd day of the feast of St Lawrence at Karkal Attur Basilica was marked by prayers and devotions. Thousands of people flocked to the Shrine to pay their reverence and love towards the Saint. The days masses were celebrated by Rev Frs. Joaquim DSouza OFM Cap. Alwyn Sequeira OCD, Vincent Coelho- Byndoor, Leo Praveen Udyavar, Louis D’Sa Nakre, Anil DSouza Perampally, Walter DMello, Belthangady, Onil DSouza Moodbidri, Herald Pereira Kanajar. The theme of the day was “Pray that you may not fall into temptations”- the prayer of Jesus in the garden of Gethsemane. All celebrants preached on the theme of temptations that we all face today that draw us away from Christ. Prayers were offered for the sick during and after every Mass. The main Eucharistic Celebration was presided over by Bishop Jevarghese Mar Makarios, the Bishop of Puttur. In his homily Bishop Macarios said “ We are all tempted but in our temptations we don’t despair, instead we look up to Christ who was tempted more than anyone of us. Let us cooperate with the Grace and overcome all obstacles that take us away from Christ. The last Mass was celebrated at 10pm. Fr Alban the rector of Basilica Fr. Larry Asst Pastor Fr. Cyril the Director of Liturgical Center and Rev. Msgr. Ferdinand Gonsalves were present for the occasion
ಶ್ರೀನಿವಾಸಪುರ: ಶ್ರೀರಾಮ ಭಜನೆ ಮಂದಿರದಲ್ಲಿ ಅಯೋಧ್ಯ ಪ್ರತಿಷ್ಟಾಪನೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ
ಶ್ರೀನಿವಾಸಪುರ ತಾಲೂಕಿನ ರಾಮನ ಭಕ್ತರು ಅಯೋದ್ಯಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ದಿನದೊಂದು ರಾಮನನ್ನು ಪೂಜಿಸಿ ಆರಾಧಿಸಿದರು
ಶ್ರೀನಿವಾಸಪುರ : ತಾಲೂಕಿನ ಜನರಲ್ಲಿ ವಿಶೇಷ ಉತ್ಸಾಹ, ಪುಳಕ, ಅವರವರ ಮುಖದಲ್ಲೂ ತೇಜಸ್ಸು, ಉತ್ಸಾಹ, ಶ್ರೀರಾಮ್ ಘೋಷಣೆಗಳು, ಒಟ್ಟಿನಲ್ಲಿ ಸೋಮವಾರ ದಿನವು ಸರ್ಕಾರಿ ರಜ ದಿನವಂತೆ ಘೋಚರವಾಗಿತ್ತು. ತಾಲೂಕಿನ ಪ್ರಮುಖ ರಸ್ತೆಗಳು ದಟ್ಟಣೆ , ಅಂಗಡಿ ಬೀದಿಗಳು ಅಘೋಷಿತ ಬಂದ್ನಂತೆ ಕಂಡು ಬಂದವು.ತಾಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ರಾಮಮಯವಾಗಿ ಕಂಡುಬಂತು.
ಅಲ್ಲದೆ ಕೆಲವು ರಾಮನ ದೇವಸ್ಥಾನಗಳಲ್ಲಿ ರಾಮನ ಪಟ್ಟಾಭಿಷೇಕ, ಕಲ್ಯಾಣೋತ್ಸಾವ , ಮೆರವಣಿಗೆ, ಭಜನೆ, ರಾಮಕೋಟಿ ಹೀಗೆ ಅನೇಕ ರೀತಿಯಲ್ಲಿ ಅಯೋದ್ಯಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ದಿನದೊಂದು ರಾಮನ ಭಕ್ತರು ರಾಮನನ್ನು ಪೂಜಿಸಿ ಆರಾಧಿಸಿದರು.
ಅರಿಕೆರೆಯ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಪಟ್ಟಾಭಿಷೇಕ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿರಥದಲ್ಲಿ ಉತ್ಸವ ವಿಗ್ರಹಗಳ ಮೆರವಣಿಗೆಯನ್ನು ಭಜನೆ ಹಾಗೂ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು . ಅರಿಕರೆ ಶ್ರೀಕೋದಂಡರಾಮಸ್ವಾಮಿ ದೇವಸ್ಥಾನ ಧರ್ಮದರ್ಶಿ ಇಂದಿರಾಭವನ್ ರಾಜಣ್ಣ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು
ನಾಪತ್ತೆಯಾಗಿದ್ದ ಶಿಕ್ಷಕಿ ಮೇಲುಕೋಟೆಯ ತಪ್ಪಲಿನಲ್ಲಿ ಶವವಾಗಿ ಪತ್ತೆ: ಹಂತಕರು ಬೆಟ್ಟದ ತಪ್ಪಲಲ್ಲಿ ಹೂತಿಟ್ಟು ಪರಾರಿ:ಒರ್ವನ ಮೇಲೆ ಆರೋಪ
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ನೆಲದಲ್ಲಿ ಹೂತಿಟ್ಟಿದ್ದ 28 ವರ್ಷದ ಖಾಸಗಿ ಶಾಲೆಯ ಶಿಕ್ಷಕಿಯ ಶವ ನಿನ್ನೆ ಸೋಮವಾರ ಪೊಲೀಸರಿಗೆ ಪತ್ತೆಯಾಗಿದೆ. ಮೇಲುಕೋಟೆಯ ಮಾಣಿಕ್ಯನಹಳ್ಳಿ ಗ್ರಾಮದ ನಿವಾಸಿ ಹಾಗೂ ದೇವಸ್ಥಾನ ಪೇಟೆಯ ಎಸ್ಇಟಿ ಪಬ್ಲಿಕ್ ಸ್ಕೂಲ್ನಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೀಪಿಕಾ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಕಿ ಲೋಕೇಶ್ ಎಂಬಾತನನ್ನು ಮದುವೆಯಾಗಿದ್ದು, ದಂಪತಿಗೆ ಎಂಟು ತಿಂಗಳ ಮಗುವಿದೆ. ಪ್ರತಿನಿತ್ಯ ದೀಪಿಕಾ ತನ್ನ ಸ್ಕೂಟರ್ನಲ್ಲಿ ಶಾಲೆಗೆ ಹೋಗುತ್ತಿದ್ದರು. ಜನವರಿ 20ರಂದು ಕರ್ತವ್ಯ ಮುಗಿಸಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಲೆ ಬಿಟ್ಟಿದ್ದರು.
ಕೊಲೆಯಾಗಿರುವ ದೀಪಿಕಾ ಅವರು ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 20ರಂದು ಮಧ್ಯಾಹ್ನ ಶಾಲೆಯಿಂದ ತೆರಳಿದ್ದ ಶಿಕ್ಷಕಿ ಸಂಜೆಯಾದರೂ ಮನೆಗೆ ಬಂದಿಲ್ಲ. ಇದರಿಂದ ಆತಂಕದಲ್ಲಿದ್ದ ಪೋಷಕರು, ತಂದೆ ವೆಂಕಟೇಶ್ ಮಗಳು ನಾಪತ್ತೆ ಆಗಿದ್ದಾಳೆ ಅಂತ ದೂರು ನೀಡಿದ್ದಾರೆ. ದೂರು ನೀಡಿದ ಮೇಲೆ ಹುಡುಕಾಡಿದಾಗ ದೀಪಿಕಾ ಬಳಸುತ್ತಿದ್ದ ಡಿಯೋ ಸ್ಕೂಟರ್ ಪತ್ತೆಯಾಗಿದೆ.
ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದ ಸ್ಫೋಟಕ ಸಂಗತಿಗಳು ಬಯಲಾಗಿವೆ.ನಿತೀಶ್ ಎಂಬುವನು ಮೇಲೆ ಸಂಶಯಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಯತೀಶ್ ಅವರು ಭೇಟಿ ನೀಡಿದ್ದು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಶಿಕ್ಷಕಿಯನ್ನು ಕೊಲೆಗೈದ ಹಂತಕರು ಬೆಟ್ಟದ ತಪ್ಪಲಲ್ಲಿ ಹೂತಿಟ್ಟು ಪರಾರಿಯಾಗಿದ್ದಾರೆ. ಕಳೆದ ಜನವರಿ 20ರಂದೇ ಪಾಂಡವಪುರ ತಾ. ಮೇಲುಕೋಟೆಯಲ್ಲಿ ಶಿಕ್ಷಕಿ ದೀಪಿಕಾ ಅವರ ಕೊಲೆಯಾಗಿದೆ. ಮಗಳು ನಾಪತ್ತೆಯಾಗಿದ್ದಾಳೆ ಅಂತ ತಂದೆ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೂರು ದಿನದ ಬಳಿಕ ಬೆಟ್ಟದ ತಪ್ಪಲಿನಲ್ಲೇ ದೀಪಿಕಾ ಮೃತದೇಹ ಪತ್ತೆಯಾಗಿದ್ದು, ನಿತೀಶ್ ಎನ್ನುವ ಯುವಕನ ಮೇಲೆ ಪೋಷಕರು ಕೊಲೆ ಮಾಡಿರೋ ಆರೋಪ ಮಾಡಿದ್ದಾರೆ.
ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಮೃತದೇಹದ ವಾಸನಗೆ ಹದ್ದು, ಕಾಗೆ ಹಾರಾಡುತ್ತಾ ಇದ್ದು, ಸ್ಥಳೀಯರಿಗೆ ಸಂಶಯ ಮೂಡಿತ್ತು. ಅನುಮಾನ ಬಂದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ದೀಪಿಕಾ ಕೊಲೆಯಾಗಿದ್ದು ಪತ್ತೆಯಾಗಿದೆ. ದೀಪಿಕಾಳನ್ನು ಕೊಲೆಗೈದ ದುಷ್ಕರ್ಮಿಗಳು ಬೆಟ್ಟದ ತಪ್ಪಲಲ್ಲಿ ಹೂತಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ರೀಲ್ಸ್ ಮತ್ತು ಆ್ಯಕ್ಟಿವ್ ಆಗಿದ್ದ ಶಿಕ್ಷಕಿ ದೀಪಿಕಾ ಅವರ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಹಾಗೂ ನಿತೀಶ್ ಜಗಳವಾಡ್ತಿದ್ದ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದೆ.
ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರ ಅತ್ತೂರು ಕಾರ್ಕಳ ವಾರ್ಷಿಕ ಮಹೋತ್ಸವದ 2 ನೇ ದಿನ
ಅತ್ತೂರು ಕಾರ್ಕಳ: ಎಡೆಬಿಡದೆ ಪ್ರಾರ್ಥಿಸೋಣ, ಅವಿರತ ಜಪಿಸೋಣ: ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ.
ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇಯ ದಿನವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ಎಡೆಬಿಡದೆ ಪ್ರಾರ್ಥಿಸೋಣ’ ಎಂಬ ದಿನದ ವಿಷಯವನ್ನು ಧ್ಯಾನಿಸಲಾಯಿತು. ಶಸ್ತ್ರ ಚಿಕಿತ್ಸೆ ಕೆಲಸ ಮಾಡುವುದಿಲ್ಲ, ತಂತ್ರಜ್ಞಾನ ಕೆಲಸಮಾಡುವುದಿಲ್ಲ. ಮೊಣಕಾಲೂರಿ, ನಿರಂತರ ಪ್ರಾರ್ಥಿನೆ ಫಲವನ್ನು ಕೊಡುತ್ತದೆ. ಪ್ರಾರ್ಥನೆ ರೀತಿನಿಯಮಗಳನ್ನು ಪಾಲಿಸಿದರೆ ಮಾತ್ರ ವರದಾನ ಲಭಿಸುತ್ತದೆ. ಪ್ರಾರ್ಥನೆಯಲ್ಲಿ 3 ಹಂತಗಳಿವೆ ವಿಶ್ವಾಸ, ಆಸೆ ಬಯಕೆ, ಆಂತರಿಕ ಸ್ವಾತಂತ್ರ್ಯ ಎಂಬ ಸಂದೇಶವನ್ನು ನೀಡಿದರು.
ಭಕ್ತಜನಸಾಗರ ಎಂದಿನಂತೆ ಬಸಿಲಿಕದ ವಠಾರದಲ್ಲಿ ಒಂದುಗೂಡಿ ತಮ್ಮ ಭಕ್ತಿಕಾರ್ಯಗಳಲ್ಲಿ ಮಗ್ನರಾಗಿ ಪ್ರಾರ್ಥಿಸಿದರು. ಜನವರಿ 22 ರಂದು ಬೆಳಿಗ್ಗೆ ಪುಣ್ಯಕ್ಷೇತ್ರದ ಸಂತ ಲಾರೆನ್ಸರ ಪವಿತ್ರ ಅವಶೇಷ ಹಾಗೂ ಪವಾಡ ಮೂರ್ತಿಯ ಸಂಪುಟವನ್ನು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಟಾಪಿಸಿದರು. ಅಂತೆಯೇ ಭಕ್ತಜನರು ಆ ಸಂಪುಟದ ದಿವ್ಯದರ್ಶನ ಹಾಗೂ ಆಶೀರ್ವಾದಕ್ಕಾಗಿ ಭಕ್ತಿ ಪರವಶೆಯಿಂದ ಪಾಲುಗೊಂಡರು
ವಾರ್ಷಿಕ ಮಹೋತ್ಸವದ ಪ್ರಮುಖ ಸಾಂಭ್ರಾಮಿಕ ಆಡಂಭರದ ಗಾಯನ ಬಲಿಪೂಜೆಯನ್ನು ಶಿವಮೊಗ್ಗದ ಧರ್ಮಾಧ್ಯಕ್ಷರಾಂದತಹ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊ ಎಸ್.ಜೆ. ನೆರವೇರಿಸಿ ಪ್ರಾರ್ಥನಾ ವಿಷಯವಾಗಿ ಪ್ರಬೋಧನೆಯನ್ನು ನೀಡಿದರು.
ಲೂಕನ ಶುಭಸಂದೇಶದಿಂದ ಆರಿಸಲ್ಪಟ್ಟಂತಹ ದೈವವಾಕ್ಯ “ಎಡೆಬಿಡದೆ ಪ್ರಾರ್ಥಿಸೋಣ” ಪ್ರವಚನಕ್ಕೆ ಆರಿಸಲ್ಪಟ್ಟ ಪ್ರಮುಖ ಚಿಂತನಾ ವಿಷಯ. ಇದಕ್ಕನುಗುಣವಾಗಿ ಧರ್ಮಾಧ್ಯಕ್ಷರು ತಮ್ಮ ಪ್ರವಚನದಲ್ಲಿ ಇಂತೆಂದು ಬೋದಿಸಿದರು.
ದಿನದ ಇತರ ಬಲಿಪೂಜೆಗಳನ್ನು ವಂದನೀಯ ಜೋಯ್ ಜೊಲ್ಸನ್ ಅಂದ್ರಾದೆ, ಕಲ್ಯಾಣ್ಪುರ್, ವಂದನೀಯ ಜೆ.ಬಿ. ಸಲ್ಡಾನ್ಹ ಬಿಜೈ ಮಂಗಳೂರು, ವಂದನೀಯ ಡಾ. ರೋಷನ್ ಡಿ’ಸೋಜ, ಕುಲಪತಿ, ಉಡುಪಿ ಧರ್ಮಕ್ಷೇತ್ರ, ವಂದನೀಯ ವಿಜಯ್ ಡಿ’ಸೋಜ ಪಾಂಗ್ಳಾ, ವಂದನೀಯ ಬೊನವೆಂಚರ್ ನಜ್ರೆತ್ ಮಿಲಾಗ್ರಿಸ್ ಮಂಗಳೂರು, ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ವಂದನೀಯ ಪೌಲ್ ರೇಗೊ ವಲಯಾಧಿಕಾರಿಗಳು, ಕಾರ್ಕಳ ವಲಯ.
ಜನಸ್ತೋಮವು ಸೂರ್ಯಾಸ್ತಮಯ ಸಮಯದಲ್ಲಿ ತಮ್ಮ ಹರಕೆಯ ಮೊಂಬತ್ತಿಯನ್ನು ಬೆಳಗಿಸಿ, ದಿವ್ಯ ತೈಲವನ್ನು ಸ್ವೀಕರಿಸಿ, ಪವಿತ್ರ ಪುಪ್ಕರಣಿಯ ಸನ್ನಿಧಿ ಧಾವಿಸಿ, ಪುಣ್ಯಕ್ಷೇತ್ರದ ಪುಣ್ಯ ತೀರ್ಥವನ್ನು ಪಡೆದು, ಜಪತಪ ಪ್ರಾರ್ಥನೆ ಹಾಗೂ ಬಸಿಲಿಕದ ಶ್ರೇಷ್ಠ ಪಾಲಕ ಸಂತ ಲಾರೆನ್ಸರ ದಿವ್ಯ ಸಾನಿಧ್ಯ ಬಳಿ ಧಾವಿಸಿ ಪ್ರಾರ್ಥಿಸಿ ತೆರಳಿದರು. ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 8 ಗಂಟೆಗೆ ನೆರವೇರಿಸಿ ಮಹೋತ್ಸವದ ದ್ವಿತೀಯ ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಭಕ್ತಿ-ಆಚರಣೆಗಳನ್ನು ಭಕ್ತಿಯುತವಾಗಿ ನೇರವೇರಿಸಿ ಮುಕ್ತಾಯಗೊಳಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯ ಬೈಬಲ್ ದೊಡ್ಡ ಸಮ್ಮೇಳನವನ್ನು ಆಯೋಜಿಸಲಿದೆ / Mangalore Diocese will organize a big Bible conference
ಮಂಗಳೂರು : ಶ್ರೀಮಂತ 49 ವರ್ಷಗಳ ಇತಿಹಾಸವನ್ನು ಆಚರಿಸುತ್ತಾ, ಕ್ಯಾಥೋಲಿಕ್ ವರ್ಚಸ್ವಿ ನವೀಕರಣ ಚಳುವಳಿಯು 1975 ರಲ್ಲಿ ಬಿಷಪ್ ಲೇಟ್ ರೆ. ಡಾ. ಬೇಸಿಲ್ ಡಿಸೋಜ ಮತ್ತು ಬಿಷಪ್ ಎಮೆರಿಟಸ್ ಮೋಸ್ಟ್ ರೆ. ಡಾ ಪೀಟರ್ ಪಾಲ್ ಸಲ್ದಾನ. ಮಂಗಳೂರು ಧರ್ಮಪ್ರಾಂತ್ಯದ ಸೇವಾ ಕಮ್ಯುನಿಯನ್ ಮತ್ತು ಬೈಬಲ್ ಕಮಿಷನ್ ಆಯೋಜಿಸಿದ್ದು, ಪಾದ್ರಿಗಳು ಮತ್ತು ಧಾರ್ಮಿಕ ಸಮುದಾಯಗಳೊಂದಿಗೆ, ಹಲವಾರು ಪರಿಣಾಮಕಾರಿ ತರಬೇತಿ ಕಾರ್ಯಕ್ರಮಗಳು, ಪ್ರಾರ್ಥನಾ ಕೂಟಗಳು ಮತ್ತು ಸಮ್ಮೇಳನಗಳು ಡಯಾಸಿಸ್ನಲ್ಲಿ ಸಾವಿರಾರು ಜನರನ್ನು ಧನಾತ್ಮಕವಾಗಿ ಪ್ರಭಾವಿಸಿದೆ.
ಆಂದೋಲನದ 50 ನೇ ವರ್ಷವನ್ನು ಗುರುತಿಸಿ, ‘ಸುವರ್ಣ ಮಹೋತ್ಸವ ಮೇಘಾ ಸಮ್ಮೇಳನ’ವನ್ನು ಕುತೂಹಲದಿಂದ ನಿರೀಕ್ಷಿಸಲಾಗಿದೆ. ಈ ಮೈಲಿಗಲ್ಲು ಸ್ಮರಣಾರ್ಥವಾಗಿ 2024 ರ ಫೆಬ್ರವರಿ 22 ರಿಂದ 25 ರವರೆಗೆ ಮಂಗಳೂರಿನ ಕಾರ್ಡೆಲ್ ಮೈದಾನದಲ್ಲಿರುವ ಹೋಲಿ ಕ್ರಾಸ್ ಚರ್ಚ್ನಲ್ಲಿ ಗೋಲ್ಡನ್ ಜುಬಿಲಿ ಕನ್ವೆನ್ಶನ್ ಅನಾವರಣಗೊಳ್ಳಲಿದೆ. ಡಿವೈನ್ ರಿಟ್ರೀಟ್ ಸೆಂಟರ್ ಕೇರಳದಿಂದ ಜೋಸೆಫ್ ಎಡಟ್ಟು ವಿ.ಸಿ. ನಾಲ್ಕು ದಿನಗಳ ಈವೆಂಟ್ನಲ್ಲಿ ಸುಮಾರು 6,000 ಭಾಗವಹಿಸುವ ನಿರೀಕ್ಷೆಯಿದೆ, ಮಂಗಳೂರು ಮತ್ತು ಇತರ ಕರ್ನಾಟಕ ಡಯಾಸಿಸ್ಗಳಾದ್ಯಂತ ನಾಯಕರಿಗೆ ಅರ್ಧ ದಿನದ ತರಬೇತಿ ಅವಧಿಗಳನ್ನು ಒಳಗೊಂಡಿರುತ್ತದೆ. ಈ ಸಭೆಯು ಆಧ್ಯಾತ್ಮಿಕವಾಗಿ ಸಮೃದ್ಧಗೊಳಿಸುವ ಪರಿಸರವನ್ನು ಭರವಸೆ ನೀಡುತ್ತದೆ, ಅನನ್ಯ ಧಾರ್ಮಿಕ ಆಚರಣೆಗಳನ್ನು ಸಂಯೋಜಿಸುತ್ತದೆ ಮತ್ತು ಕುಟುಂಬದ ಸಮೃದ್ಧಿ, ಜಾಗತಿಕ ಶಾಂತಿ ಮತ್ತು ಎಲ್ಲಾ ಮಾನವೀಯತೆಯ ಯೋಗಕ್ಷೇಮಕ್ಕಾಗಿ ದೈವಿಕ ಆಶೀರ್ವಾದವನ್ನು ಪಡೆಯಲು ಪಾಲ್ಗೊಳ್ಳುವವರಿಗೆ ಅವಕಾಶವನ್ನು ಒದಗಿಸುತ್ತದೆ.
ಡಯಾಸ್ನಲ್ಲಿ ಹೆಚ್ಚಿನ ರೆವ್ ಡಾ. ಪೀಟರ್ ಪಾಲ್ ಸಲ್ಡಾನ್ಹಾ, ವಿ ಜಿ ಫ್ರಾ ಮ್ಯಾಕ್ಸಿಮ್ ನೊರೊನ್ಹಾ, ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಫಾ. ರೂಪೇಶ್ ಮಾಡ್ತಾ, ಶ್ರೀ ರಾಯ್ ಕ್ಯಾಸ್ಟಲಿನೋ, ಶ್ರೀ ಕೆವನ್ ಡಿಸೋಜಾ, ಶ್ರೀ ಎಲಿಯಾಸ್ ಫೆರ್ನಾಂಡಿಸ್.
Mangaluru Diocese Bible organized a big conference
Celebrating a rich 49-year history, the Catholic Charismatic Renewal movement began in 1975 under the guidance of Bishop Late Rev. Dr. Basil D’Souza and Bishop Emeritus Most Rev. Dr Aloysius Paul D’Souza, with ongoing support from Most Rev. Dr Peter Paul Saldhana. Organized by Mangalore Diocesan Service Communion and Bible Commission, along with clergy and religious communities, numerous impactful training programs, prayer gatherings, and conferences have positively influenced thousands in the diocese.
Marking the movement’s 50th year, the ‘Golden Jubilee Megha Conference’ is eagerly anticipated. To commemorate this milestone, the Golden Jubilee Convention is set to unfold at Holy Cross Church, Cordel Grounds, Mangalore, from February 22nd to 25th, 2024. Led by Rev. Fr. Joseph Edattu V. C. from Divine Retreat Centre Kerala, the four-day event expects around 6,000 participants, featuring half-day training sessions for leaders across Mangalore and other Karnataka Dioceses. This gathering promises a spiritually enriching environment, incorporating unique religious rituals and providing attendees an opportunity to seek divine blessings for family prosperity, global peace, and the well-being of all humanity.
On the Dias were most Rev Dr. Peter Paul Saldanha, V G Fr Maxim Noronha, Fr. Clifford Fernandes, Fr. Roopesh Madta, Mr. Roy Castelino, Mr. Kevan D’souza, Mr. Elias Fernandes.
PROVINCIAL ASSEMBLY AND JUBILEE CELEBRATION OF BETHANY SISTERS, MANGALORE PROVINCE / ಮಂಗಳೂರು ಪ್ರಾಂತ್ಯದ ಪ್ರಾಂತೀಯ ಬೆಥನಿ ಸಹೋದರಿಯರ ಅಸೆಂಬ್ಲಿ ಮತ್ತು ಸಹೋದರಿಯರ ಜಯಂತಿ ಆಚರಣೆ
Report by; Sr Florine Jyothi BS Photos: Stany Bantval
21.01.2024 Province assembly of Mangalore Province of the Sisters of the Little Flower of Bethany Congregation held on 19th and 20th of January 2024 at Bethany Provincialate, Vamanjoor, Mangalore with the theme, ‘Pilgrims of Hope with a special reference to Prayer.’ In her key note address Sr Cicilia Mendonca BS the Provincial Superior expounded the theme of the Jubilee Year 2025 wherein Pope Francis urges Catholics to prepare for the Jubilee by spending time in studying the four Constitutions of the Second Vatican Council and focusing on Prayer. Rev Fr Arun Luis SJ the Director of Ashirvad Bangalore in two sessions on the first day highlighted on Prayer and preparation for forthcoming General Elections of the Country. He enabled the group to understand 9 steps that help in Prayer, Purpose of Prayer and Stages in Prayer. Next day Ms Kripanjali TellisNayak from Attavar, Mangalore dealt on the topic of Gerentology. She highlighted the various issues of old age and care of the elderly.
On 21st January at 9.45am the felicitation programme for Silver and Golden Jubilarians was held in the Bethany Provincialate hall. Sr Shanthi Agnes the Silver Jubilarian and Sr Agnes Mary, Sr Deepika, Sr Lilly Ange, Sr Laetitiabeth, Sr Lillybethand Sr Sharon the Golden jubilarians were honoured and greeted by the Provincial Superior and the Councillors along with Province Assembly members. Superiors and few members from the various communities were represented. Sisters from St Raymond’s community echoed the Jubilee chorus. SrLoyanBS from Bethany Provincialate compeered the felicitation programme. It was followed by Eucharistic Celebration officiated by Rev Fr Wilfred Prakash DSouza the director of St Joseph Engineering College, Vamanjoor and concelebrated by Rev Fr Kenneth Crastathe Assistant Director. In his homily he highlighted the qualities of a true disciple. Being the Sunday of the Word of God, he expounded the importance of Word of God in our day today life. He also appreciated the generous services of the Silver and Golden Jubilarians towards Bethany Congregation, Church and humanity through various apostolates. Sisters from St Raymond’s community assisted the Eucharist through melodious choir and the members of the Province assembly conducted the meaningful liturgy on the occasion. It was culminated by fellowship meal in St Raymond’s Convent refectory.
ಮಂಗಳೂರು ಪ್ರಾಂತ್ಯದ ಪ್ರಾಂತೀಯ ಬೆಥನಿ ಸಹೋದರಿಯರ ಅಸೆಂಬ್ಲಿ ಮತ್ತು ಸಹೋದರಿಯರ ಜಯಂತಿ ಆಚರಣೆ
21.01.2024 2024 ರ ಜನವರಿ 19 ಮತ್ತು 20 ರಂದು ಮಂಗಳೂರಿನ ವಾಮಂಜೂರಿನ ಬೆಥನಿ ಪ್ರಾಂತ್ಯದಲ್ಲಿ ನಡೆದ ಬೆಥನಿ ಲಿಟಲ್ ಫ್ಲವರ್ ಆಫ್ ಬೆಥನಿ ಸಭೆಯ ಸಹೋದರಿಯರ ಮಂಗಳೂರು ಪ್ರಾಂತ್ಯದ ಪ್ರಾಂತ ಅಸೆಂಬ್ಲಿ, ‘ವಿಶೇಷ ಉಲ್ಲೇಖದೊಂದಿಗೆ ಭರವಸೆಯ ಯಾತ್ರಿಗಳು’ ಎಂಬ ವಿಷಯದೊಂದಿಗೆ. ಅವರ ಪ್ರಮುಖ ಟಿಪ್ಪಣಿ ವಿಳಾಸ Sr Cicilia Mendonca BS ಪ್ರಾಂತೀಯ ಸುಪೀರಿಯರ್ 2025 ರ ಜುಬಿಲಿ ವರ್ಷದ ವಿಷಯವನ್ನು ವಿವರಿಸಿದರು, ಇದರಲ್ಲಿ ಪೋಪ್ ಫ್ರಾನ್ಸಿಸ್ ಕ್ಯಾಥೋಲಿಕರು ಎರಡನೇ ವ್ಯಾಟಿಕನ್ ಕೌನ್ಸಿಲ್ನ ನಾಲ್ಕು ಸಂವಿಧಾನಗಳನ್ನು ಅಧ್ಯಯನ ಮಾಡುವ ಮೂಲಕ ಮತ್ತು ಪ್ರಾರ್ಥನೆಯ ಮೇಲೆ ಕೇಂದ್ರೀಕರಿಸುವ ಮೂಲಕ ಜುಬಿಲಿಗಾಗಿ ತಯಾರಿ ನಡೆಸುವಂತೆ ಒತ್ತಾಯಿಸಿದರು. ಮೊದಲ ದಿನದ ಎರಡು ಸೆಷನ್ಗಳಲ್ಲಿ ಆಶೀರ್ವಾದ್ ಬೆಂಗಳೂರಿನ ನಿರ್ದೇಶಕರಾದ ರೆ.ಫಾ.ಅರುಣ್ ಲೂಯಿಸ್ ಎಸ್.ಜೆ ಅವರು ಪ್ರಾರ್ಥನೆ ಮತ್ತು ದೇಶದ ಮುಂಬರುವ ಸಾರ್ವತ್ರಿಕ ಚುನಾವಣೆಯ ತಯಾರಿಯ ಬಗ್ಗೆ ಹೈಲೈಟ್ ಮಾಡಿದರು. ಪ್ರಾರ್ಥನೆಯಲ್ಲಿ ಸಹಾಯ ಮಾಡುವ 9 ಹಂತಗಳನ್ನು ಅರ್ಥಮಾಡಿಕೊಳ್ಳಲು ಅವರು ಗುಂಪನ್ನು ಸಕ್ರಿಯಗೊಳಿಸಿದರು, ಪ್ರಾರ್ಥನೆಯ ಉದ್ದೇಶ ಮತ್ತು ಪ್ರಾರ್ಥನೆಯ ಹಂತಗಳು. ಮರುದಿನ ಮಂಗಳೂರಿನ ಅತ್ತಾವರದ ಭಗಿನಿ ಕೃಪಾಂಜಲಿ ಟೆಲ್ಲಿಸ್ನಾಯಕ್ ಅವರು ಜೆರೆಂಟಾಲಜಿ ವಿಷಯದ ಕುರಿತು ವ್ಯವಹರಿಸಿದರು. ಅವರು ವೃದ್ಧಾಪ್ಯ ಮತ್ತು ಹಿರಿಯರ ಆರೈಕೆಯ ವಿವಿಧ ಸಮಸ್ಯೆಗಳನ್ನು ಎತ್ತಿ ತೋರಿಸಿದರು.
ಜನವರಿ 21 ರಂದು ಬೆಳಿಗ್ಗೆ 9.45 ಕ್ಕೆ ಬೆಥನಿ ಪ್ರಾಂತೀಯ ಸಭಾಂಗಣದಲ್ಲಿ ಬೆಳ್ಳಿ ಮತ್ತು ಸುವರ್ಣ ಮಹೋತ್ಸವದ ಸಮಾರಂಭವನ್ನು ಆಯೋಜಿಸಲಾಯಿತು. ಭಗಿನಿ ಶಾಂತಿ ಆಗ್ನೆಸ್ ರಜತ ಮಹೋತ್ಸವ ಮತ್ತು ಭಗಿನಿ ಆಗ್ನೆಸ್ ಮೇರಿ, ಭಗಿನಿ ದೀಪಿಕಾ, ಭಗಿನಿ ಲಿಲ್ಲಿ ಅಂಗೆ, ಭಗಿನಿ ಲೈಟಿಟಿಯಾಬೆತ್, ಭಗಿನಿ ಲಿಲ್ಲಿ ಬೆತಾಂಡ್ ಭಗಿನಿ ಶರೋನ್ ಸುವರ್ಣ ಮಹೋತ್ಸವವನ್ನು ಪ್ರಾಂತೀಯ ಅಸೆಂಬ್ಲಿ ಸದಸ್ಯರೊಂದಿಗೆ ಪ್ರಾಂತೀಯ ವರಿಷ್ಠರು ಮತ್ತು ಕೌನ್ಸಿಲರ್ಗಳು ಗೌರವಿಸಿದರು ಮತ್ತು ಅಭಿನಂದಿಸಿದರು. ವಿವಿಧ ಸಮುದಾಯಗಳ ಮೇಲಧಿಕಾರಿಗಳು ಮತ್ತು ಕೆಲವು ಸದಸ್ಯರು ಪ್ರತಿನಿಧಿಸಿದ್ದರು. ಸೇಂಟ್ ರೇಮಂಡ್ ಸಮುದಾಯದ ಸಹೋದರಿಯರು ಜುಬಿಲಿ ಕೋರಸ್ ಅನ್ನು ಪ್ರತಿಧ್ವನಿಸಿದರು. ಬೆಥನಿ ಪ್ರಾಂತ್ಯದ Sr Loyan BS ಅಭಿನಂದನಾ ಕಾರ್ಯಕ್ರಮವನ್ನು ನಿರ್ವಹಿಸಿದರು. ನಂತರ ವಾಮಂಜೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ವಂದನೀಯ ಫಾದರ್ ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಅವರು ಪೂಜ್ಯಕಾರ್ಯಕ್ರಮವನ್ನು ನೆರವೇರಿಸಿದರು ಮತ್ತು ಸಹಾಯಕ ನಿರ್ದೇಶಕರಾದ ರೆ.ಫಾ.ಕೆನೆತ್ ಕ್ರಾಸ್ತಾ ಅವರು ತಮ್ಮ ಪ್ರವಚನದಲ್ಲಿ ಅವರು ನಿಜವಾದ ಶಿಷ್ಯನ ಗುಣಗಳನ್ನು ಎತ್ತಿ ತೋರಿಸಿದರು. ದೇವರ ವಾಕ್ಯದ ಭಾನುವಾರವಾಗಿರುವುದರಿಂದ, ಅವರು ನಮ್ಮ ಇಂದಿನ ಜೀವನದಲ್ಲಿ ದೇವರ ವಾಕ್ಯದ ಮಹತ್ವವನ್ನು ವಿವರಿಸಿದರು. ಬೆಥನಿ ಸಭೆ, ಚರ್ಚ್ ಮತ್ತು ವಿವಿಧ ಧರ್ಮಪ್ರಚಾರಕರ ಮೂಲಕ ಮಾನವೀಯತೆಯ ಕಡೆಗೆ ಬೆಳ್ಳಿ ಮತ್ತು ಸುವರ್ಣ ಮಹೋತ್ಸವದ ಉದಾರ ಸೇವೆಗಳನ್ನು ಅವರು ಶ್ಲಾಘಿಸಿದರು. ಸೇಂಟ್ ರೇಮಂಡ್ ಸಮುದಾಯದ ಸಹೋದರಿಯರು ಸುಶ್ರಾವ್ಯವಾದ ಗಾಯನದ ಮೂಲಕ ಯೂಕರಿಸ್ಟ್ಗೆ ಸಹಕರಿಸಿದರು ಮತ್ತು ಪ್ರಾಂತ ಅಸೆಂಬ್ಲಿಯ ಸದಸ್ಯರು ಈ ಸಂದರ್ಭದಲ್ಲಿ ಅರ್ಥಪೂರ್ಣ ಪ್ರಾರ್ಥನೆಯನ್ನು ನಡೆಸಿದರು. ಇದು ಸೇಂಟ್ ರೇಮಂಡ್ ಕಾನ್ವೆಂಟ್ ರೆಫೆಕ್ಟರಿಯಲ್ಲಿ ಫೆಲೋಶಿಪ್ ಭೋಜನದ ಮೂಲಕ ಕೊನೆಗೊಂಡಿತು.
MCC Bank Milestone Event/ಎಂ.ಸಿ.ಸಿ. ಬ್ಯಾಂಕ್ ‘ಮೈಲಿಗಲ್ಲು’ ಸಂಭ್ರಮಾಚರಣೆ
MCC Bank Limited was founded with a capital of mere ten thousand rupees in 1912 by visionary community leader P F X Saldanha just as a co-operative Society. Today the Bank has grown and reached a milestone of 1000 crore turnover, that too the turn over got doubled in just the past 5 years under the able leadership of dynamic youth leader Anil Lobo.
In the year 2018 the turnover of the bank was just 503 crores and the profit was just 3 crore. Today the Bank reached a milestone turnover of 1000 crore and recorded a profit of Rs.10.38 crore. This indicated the all round development of the bank in just five years, under the leadership of Anil Lobo and his dedicated team.
To record few achievements by the team led by Anil Lobo for the past FIVE years :
· Considerable growth in the financial health of the bank. First time in the history of 112 years of the bank, NPA has dropped to 1.37% and net profit leaped to 10.38 Crore
· Expansion and setting up new branches almost came to stand still in the year 2002 with 16 branches and area of operation confined to D.K and Udupi Districts. Now the bank got permission to expand its area of operation to 5 more districts named Chikmagalur, Shimoga, Kodagu, Hasan and Uttara Kannada
· Complete upliftment of NRI facilities in the MCC Bank has gained the tag of the only bank in the co operative sector in coastal Karnataka offering complete NRI facilities.
· In the 112 years of the Bank the chairman of the bank got Sahakara Ratna from Government of Karnataka and Anil Lobo became the first Mangalorean Roman Catholic to get the coveted Sahakara Ratna Award.
· The turnover got doubled from 503 crore (2018) to 1000 crore (Today)
As reaching 1000 crore turnover is an important milestone in the history of 112 years of the bank, to celebrate and share the joy an event was held on Sunday 21st January 2024 at Milagres Jubilee Hall – MILESTONE EVENT CELEBRATION – 1000 crore business turnover at 6.00 p.m.
CA Rudolp Rodgrigues delivered the Keynote address and NRI Entrepreneur and philanthropist Michael D Souza was the Chief guest. Rev Fr Bonaventure Nazareth, Parish Priest, Milagres Church, J R Lobo, former MLA, Ivan D Souza, Former MLC, Rohan Monterio, MD of Rohan Corporation and Community Leader and former director of Pollution Control Board Pius L Rodrigues were guest of honors.
Chairman Anil Lobo will preside over the function. On the occasion the chairman of the bank Anil Lobo will be felicitated for bagging the prestigious Sahakara Ratna Award.
To make the event memorable and express solidarity with society in general financial aids will be distributed to Manasa Rehabilitation and Training Centre, Pambur, Udupi, Suraksha Charitable Trust, Karkala, Prajna Chinnara Tangudama Kendra, Kapikad,Mangalore.
New projects of the bank like E Lobby, Passbook printing Kiosk, Personalised cheque book were launched and fourth bulletin of the bank was released.
The celebration concluded with light classical music and fellowship dinner
ಎಂ.ಸಿ.ಸಿ. ಬ್ಯಾಂಕ್ ‘ಮೈಲಿಗಲ್ಲು’ ಸಂಭ್ರಮಾಚರಣೆ
1912 ರಲ್ಲಿ ಕ್ರೈಸ್ತ ಸಮಾಜದ ಅದ್ವಿತೀಯ ಸಮಾಜಮುಖಿ ಧುರೀಣ ಪಿ.ಎಫ್.ಎಕ್ಸ್ ಸಲ್ಡಾನ್ಹಾ ಇವರ ನೇತೃತ್ವದಲ್ಲಿ ಹತ್ತು ಸಾವಿರ ರೂಪಾಯಿ ಬಂಡವಾಳದೊಂದಿಗೆ ಸೊಸೈಟಿಯಾಗಿ ಆರಂಭಗೊಂಡ ಎಮ್.ಸಿ.ಸಿ. ಬ್ಯಾಂಕ್ ಇಂದು ಸಾವಿರ ಕೋಟಿ ರುಪಾಯಿ ವಹಿವಾಟಿನ ಸಹಕಾರಿ ಕ್ಷೇತ್ರದ ಅಗ್ರಮಾನ್ಯ ಬ್ಯಾಂಕಾಗಿ ಅಭಿವೃದ್ದಿಯ ಪಥದಲ್ಲಿ ಮುನ್ನುಗ್ಗುತ್ತಿದೆ. ಬ್ಯಾಂಕಿನ ಪ್ರಸ್ತುತ ಆಧ್ಯಕ್ಶ ಶ್ರಿ ಅನಿಲ್ ಲೋಬೊ ನ್ಟೇತೃತ್ವದ ಆಡಳಿತ ಮಂಡಲಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಮೇಲೆ, ಬ್ಯಾಂಕಿನ ಸರ್ವಾಂಗೀಣ ಪ್ರಗತಿ ಇಮ್ಮಡಿಯಾಗಿದೆ. 2018 ರಲ್ಲಿ ಬರೀ 503 ಕೋಟಿ ರುಪಾಯಿ ಇದ್ದ ಬ್ಯಾಂಕಿನ ವ್ಯವಹಾರ ಐದೇ ವರ್ಷದ ಅವಧಿಯಲ್ಲಿ 1000 ಕೋಟಿ ರುಪಾಯಿ ದಾಟಿರುವುದೇ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಸಾಕ್ಷಿ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿಯ ಪ್ರಮುಖ ಸಾಧನೆಗಳು :
■ ಬ್ಯಾಂಕಿನ ಅರ್ಥಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 1.37 ಶೇಕಡಾಕ್ಕೆ ಎನ್.ಪಿ.ಎ. ಇಳಿಸಿ ನಿವ್ವಳ ಲಾಭ 10.38 ಕೋಟಿ ದಾಕಲಿಸಿದ್ದು.
■ 2002 ರಲ್ಲಿ ಕೇವಲ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ 16 ಶಾಖೆಗಳಿಗೆ ಸ್ಥಗಿತಗೊಂಡಿದ್ದ, ಬ್ಯಾಂಕಿನ ವಿಸ್ತರಣೆಯನ್ನು ಸಪ್ತ ಜಿಲ್ಲೆಗಳಿಗೆ ( ದ. ಕ. & ಉಡುಪಿ ಜೊತೆಗೆ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು) ವಿಸ್ತರಿಸಿದ್ದು.
■ ಪ್ರತ್ಯೇಕ ಘಟಕ ನಿರ್ಮಾಣ, ಸಹಮಿಲನ, ಸಮಾವೇಶ ಮುಂತಾದ ವಿಶೇಷ ಕಾರ್ಯಕ್ರಮಗಳ ಮೂಲಕ ಅನಿವಾಸಿ ಭಾರತೀಯ ಖಾತೆಗಳಿಗೆ ಚುರುಕು ಮುಟ್ಟಿಸಿ, ಕರಾವಳಿಯ ಸಹಕಾರಿ ರಂಗದ ಬ್ಯಾಂಕುಗಳಲ್ಲಿ ಅನಿವಾಸಿ ಭಾರತೀಯರಿಗೆ ಸೇವೆ ಒದಗಿಸುತ್ತಿರುವ ಏಕೈಕ ಬ್ಯಾಂಕ್ – ಎಂಸಿಸಿ. ಬ್ಯಾಂಕ್ ಎಂಬ ಮನ್ನಣೆ ದೊರಕಿಸಿ ಕೊಟ್ಟದ್ದು.
■ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಿಗೆ ಸಹಕಾರಿ ರತ್ನ ಪ್ರಶಸ್ತಿಯ ಹಿರಿಮೆಗೆ ಪಾತ್ರವಾಗಿಸಿದ್ದು.
2018 ರಲ್ಲಿ ಕೇವಲ 503 ಕೋಟಿ ರುಪಾಯಿ ಇದ್ದ ವ್ಯವಹಾರ 1000 ಕೋಟಿಗೆ ತಲಪಿಸಿದ್ದು.
1000 ಕೋಟಿ ವ್ಯವಹಾರ ಬ್ಯಾಂಕಿನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಆಗಿರುವುದರಿಂದ ದಿನಾಂಕ 21 ಜನವರಿ 2024 ರಂದು MILESTONE ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಮಾರಂಭಕ್ಕೆ ಅನಿವಾಸಿ ಉದ್ಯಮಿ, ಸಮಾಜಸೇವಕ ಮತ್ತು ಮಹಾದಾನಿ ಶ್ರೀ ಮೈಕಲ್ ಡಿ ಸೊಜಾ ಮುಖ್ಯ ಅತಿಥಿಯಾಗಿ ಆಗಮಿಸುವರು. ಹಿರಿಯ ಲೆಕ್ಕ ಪರಿಷೋಧಕ ರುಡೋಲ್ಫ್ ರೊಡ್ರಿಗಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಿಲಾಗ್ರಿಸ್ ಚರ್ಚಿನ ಪ್ರಧಾನ ಗುರು ವಂ। ಬೊನವೆಂಚರ್ ನಜ್ರೆತ್, ಮಾಜಿ ವಿದಾನ ಸಭಾ ಸದಸ್ಯ ಶ್ರೀ ಜೆ. ಆರ್. ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ ಸೊಜಾ, ಖ್ಯಾತ ಉದ್ಯಮಿ ಶ್ರೀ ರೋಹನ್ ಮೊಂತೇರೊ, ಸಮಾಜಮುಖಿ ನಾಯಕ ಶ್ರೀ ಪಿಯುಸ್ ಎಲ್. ರೊಡ್ರಿಗಸ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ.
ಮೈಲಿಗಲ್ಲು ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿ ಪಾಲನೆಯ ಭಾಗವಾಗಿ – ಶಿಕ್ಷಣದಿಂದ ವಂಚಿತರಾದ ಮಕ್ಕಳು, ಹಿರಿಯ ನಾಗರಿಕರು, ಪೋಷಕರು ಇಲ್ಲದ ಮಕ್ಕಳು ಮುಂತಾದ ಅಶಕ್ತರನ್ನು ಆರೈಕೆ ಮಾಡುವ ಸಂಘ ಸಂಸ್ಥೆಗಳಾದ ಉಡುಪಿ ಪಾಂಬೂರಿನ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಸುರಕ್ಷ ಚಾರಿಟೇಬಲ್ ಟ್ರಸ್ಟ್, ಕಾರ್ಕಳ, ಪ್ರಜ್ಞ ಚಿಣ್ಣರ ತಂಗುದಾಮ ಕೇಂದ್ರ, ಕಾಪಿಕಾಡ್, ಮಂಗಳೂರು ಇವರಿಗೆ ದೇಣಿಗೆಯನ್ನು ನೀಡಲಾಗುವುದು. ಹಾಗೂ ಭವಿಷ್ಯದ ಯೋಜನೆಗಳಾದ ಇ-ಲಾಬಿ, ಪಾಸ್ ಬುಕ್ ಕಿಯೋಸ್ಕ್, Personalized Cheque Book, ಮೈಲಿಗಲ್ಲು ಸಾಧನೆಯ ವಿಶೇಷ ಕೊಡುಗೆಗಳನ್ನು ಅನಾವರಣ ಮಾಡಲಾಗುವುದು. ಬ್ಯಾಂಕಿನ ಬುಲೆಟಿನ್ ನಾಲ್ಕನೇ ಸಂಚಿಕೆಯನ್ನೂ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಬ್ಯಾಂಕಿನ ಗ್ರಾಹಕರ ಶುಭದಿನಗಳ ಆಚರಣೆ, ಪ್ರಶಸ್ತಿ ಪುರಸ್ಕಾರ ಪಡೆದವರನ್ನು ಗುರುತಿಸಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಇವರನ್ನು ಸನ್ಮಾನಿಸಲಾಗುವುದು. ಲಘು ಸಂಗೀತ ಮತ್ತು ಸಹಬೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುವುದು.