ಕೋಟೇಶ್ವರ:ಸರಕಾರಿ ಶಾಲೆಯ ಅಭಿವೃದ್ದಿಯಲ್ಲಿ ದಾನಿಗಳು,ಪೋಷಕರು, ಹಳೆ ವಿದ್ಯಾರ್ಥಿಗಳು ಕೈ ಜೋಡಿಸಿದಾಗ ಅಭಿವೃದ್ದಿ ಸಾಧ್ಯ.ಬೀಜಾಡಿ ಮೂಡು ಶಾಲೆ ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ಇನ್ನೂ ಎತ್ತರಕ್ಕೆ ಏರಲಿ ಎಂದು ಕುಂದಾಪುರದ ಶಾಸಕ ಎ.ಕಿರಣಕುಮಾರ್ ಕೊಡ್ಗಿ ಹೇಳಿದರು. ಅವರು ಶುಕ್ರವಾರ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಸಂಭ್ರಮ ‘ಪರಿಕ್ರಮ-2024’ ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾ.ಪಂ.ಅಧ್ಯಕ್ಷ ಪ್ರಕಾಶ ಜಿ.ಪೂಜಾರಿ ವಹಿಸಿದ್ದರು. ಶಾಲಾ ವಾಹನದ ಕೀಯನ್ನು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಶಾಲೆಗೆ ಹಸ್ತಾಂತರಿಸಿದರು.ಮಾರಣಕಟ್ಟೆ ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ ಪ್ರವರ್ತಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಶಾಲೆಯಲ್ಲಿ ಹಿಂದೆ ಸೇವೆ ಸಲ್ಲಿಸಿದ ಗುರುಗಳನ್ನು ಸನ್ಮಾನಿಸಿದರು.ಹೊಟೇಲ್ ಉದ್ಯಮಿ ರಾಮಚಂದ್ರ ರಾವ್ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು.ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ ಎಂ, ಸಿಆರ್ಪಿ ಪ್ರಕಾಶ್ ಎಚ್.ಎನ್,ಶಾಲಾ ಮುಖ್ಯ ಶಿಕ್ಷಕಿ ಪ್ರವೀಣಾ ಶೆಟ್ಟಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಾ ಸಂಜನಾ, ಖುಷಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ಗಣೇಶ ಕಾಂಚನ್, ರಾಘವೇಂದ್ರ ಅಮೀನ್ ಅವರನ್ನು ಗುರುತಿಸಲಾಯಿತು.
ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಮಕೃಷ್ಣ ಬಾಯರಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ ಗಾಣಿಗ, ಅಮೃತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ತೋಳಾರ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಅಮೀನ್, ವಿದ್ಯಾರ್ಥಿ ನಾಯಕ ಮಾ.ಪ್ರೀತಮ್ ಉಪಸ್ಥಿತರಿದ್ದರು.
ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೂಪ್ಕುಮಾರ್ ಬಿ.ಆರ್ ವಂದಿಸಿದರು. ಶಾಲಾ ಶಿಕ್ಷಕಿಯರಾದ ಮಂಜುಳಾ, ಅಶ್ವಿನಿ, ಸುಮಾನ ಬಹುಮಾನಿತರ ಪಟ್ಟಿ ವಾಚಿಸಿದರು. ಹಳೆ ವಿದ್ಯಾರ್ಥಿ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಚಿಣ್ಣರಿಂದ ಚಿಣ್ಣರ ಚಿಲಿಪಿಲಿ, ಹಳೆ ವಿದ್ಯಾರ್ಥಿಗಳಿಂದ ನೃತ್ಯಾಮೃತ, ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಯಕ್ಷಗಾನ ಅಭಿಮನ್ಯು ಕಾಳಗ ಪ್ರದರ್ಶನಗೊಂಡಿತು.
Month: January 2024
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಅಂತರ್ ಜಿಲ್ಲಾ ಮಟ್ಟದ ಪುರುಷರ ವಿಭಾಗದಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ 24ನೇ ವರ್ಷಾಚರಣೆ ಅಂಗವಾಗಿ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ರಂಗಮಂದಿರದ ಬಳಿ ಅಂತರ್ ಜಿಲ್ಲಾ ಮಟ್ಟದ ಪುರುಷರ ವಿಭಾಗದ ಮ್ಯಾಟ್ ಅಂಕಣದ 65 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ಜರಗಿತು.
ನಂದಳಿಕೆ ಅಬ್ಬನಡ್ಕ ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ದಿನೇಶ್ ಪೂಜಾರಿ, ಬೀರೊಟ್ಟು ಅವರು ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಅರುಣ್ ಕುಮಾರ್ ಅವರು ಕಬಡ್ಡಿ ಪಂದ್ಯಾಟ ಉದ್ಘಾಟಿಸಿದರು. ಕಾಪು ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಸೂಡ ರಿತೇಶ್ ಶೆಟ್ಟಿ ಅವರು ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್, ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಮುನಿಯಾಲು ಉದಯ ಶೆಟ್ಟಿ, ನಂದಳಿಕೆ ಗ್ಲೆನಿಶಿಯಾ ವುಡ್ ಇಂಡಸ್ಟ್ರೀಸ್ ಮಾಲಕರಾದ ಗ್ರೆಗರಿ ಮಿನೇಜಸ್, ದೈವಾರಾಧಕರಾದ ಬೋಳ ಜಗದೀಶ್ ನಲ್ಕೆ, ಅಂತರಾಷ್ಟ್ರೀಯ ಕ್ರೀಡಾಪಟು ಅಕ್ಷತಾ ಪೂಜಾರಿ ಬೋಳ, ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಟ್ರಾನ್ಸ್ಪೋಟ್ರ್ಸ್ ಮಾಲಕರಾದ ಹರೀಶ್ ಕುಮಾರ್ ನಂದಳಿಕೆ, ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಬೋಳ ಜಯರಾಮ್ ಸಾಲ್ಯಾನ್, ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನಿಟ್ಟೆ ಪ್ರವೀಣ್ ಸಾಲ್ಯಾನ್, ಬೋಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬೋಳ ಸತೀಶ್ ಪೂಜಾರಿ, ಇನ್ನಾ ಗ್ರಾಮ ಪಂಚಾಯತ್ ನಿಕಟ ಪೂರ್ವಾಧ್ಯಕ್ಷರಾದ ಕುಶ ಮೂಲ್ಯ ಇನ್ನಾ, ಬೆಳ್ಮಣ್ಣು ಸೂರಜ್ ಹೊಟೇಲ್ ಮಾಲಕರಾದ ಶೋಧನ್ ಕುಮಾರ್ ಶೆಟ್ಟಿ, ಉದ್ಯಮಿ ಕಾಡಿಕಂಬಳ ಸುರೇಶ್ ಶೆಟ್ಟಿ, ಬೆಳ್ಮಣ್ಣು ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಇಂದಾರು ಪ್ರಭಾಕರ್ ಶೆಟ್ಟಿ, ಮಂಗಳೂರು ಎಂ.ಸಿ.ಎಫ್. ಮಾರ್ಕೆಟ್ ಡೆವಲಪ್ಮೆಂಟ್ ಜೆ.ಜಿ.ಎಂ. ಕೆ.ಬಿ.ಕೀರ್ತನ್ ಕುಮಾರ್ ಕಾರ್ಕಳ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮುಂಡ್ಕೂರು ರವೀಂದ್ರ ಶೆಟ್ಟಿ, ಉದ್ಯಮಿಗಳಾದ ನಂದಳಿಕೆ ಉಮೇಶ್ ಶೆಟ್ಟಿ, ನ್ಯಾಯವಾದಿಗಳಾದ ಬೆಳ್ಮಣ್ಣು ರವೀಂದ್ರ ಶೆಟ್ಟಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷರಾದ ಇನ್ನಾ ವಿಠಲ ಮೂಲ್ಯ, ಕಬಡ್ಡಿ ಪಂದ್ಯಾಟದ ನಿರ್ದೇಶಕರಾದ ಬೋಳ ಉದಯ ಅಂಚನ್, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಮೊದಲಾದವರಿದ್ದರು.
ಆಸರೆ ಗೆಳೆಯರ ಬಳಗ ಮಂಗಳೂರು(ರಿ) ಮಂಗಳೂರು
ಮಂಗಳೂರು: ಆಸರೆ ಗೆಳೆಯರ ಬಳಗ ಮಂಗಳೂರು ರಿಮಂಗಳೂರು ಇವರ ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ ಮತ್ತು ಏಳನೆಯ ವರ್ಷದ ವಾರ್ಷಿಕೋತ್ಸವ ಬಡ ರೋಗಿಗಳಿಗೆ ಸಹಾಯಧನ ವಿತರಣೆ, ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಆಸರೆ ಸಪ್ತ ಸಂಭ್ರಮ:26-01-2024ನೇ ಶುಕ್ರವಾರ ಸುಮಸದನ, ಲಯನ್ಸ್ ಸೇವಾ ಮಂದಿರದ ಮುಂಭಾಗ, ಮಲ್ಲಿಕಟ್ಟೆ ಕದ್ರಿ, ಮಂಗಳೂರು ಇಲ್ಲಿ ನಎಯಿತು.
ಕಾರ್ಯಕ್ರಮವನ್ನು ವಂದನೀಯ ಸಿಸ್ಟರ್ ಎಲೆನ್ ಮಾರಿ ಉದ್ಘಾಟಿಸಿದರು ನಿವೃತ್ತ ನರ್ಸಿಂಗ್ ಸೂಪರಿಂಟೆoಡೆಂಟ್ ಫಾದರ್ ಮುಲ್ಲರ್ ಆಸ್ಪತ್ರೆ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿ ಮಂಗಳೂರು ಅಧ್ಯಕ್ಷತೆ ವಹಿಸಿದ್ದು, ಶ್ರೀ ಜಗನ್ನಾಥ ಬಂಗೇರ ಅಧ್ಯಕ್ಷರು ಆಸರೆ ಗೆಳೆಯರ ಬಳಗ ಮಂಗಳೂರು( ರಿ ) ಮಂಗಳೂರು ವಿಶೇಷ ಆಹ್ವಾನಿತರಾಗಿದ್ದರು. ಮುಖ್ಯ ಅತಿಥಿಗಳು :ಡಾಕ್ಟರ್ ವೆಂಕಟೇಶ್ ಕುಂಪಲ ನಿವೃತ ಅಧಿಕಾರಿಗಳು ಭಾರತೀಯ ಸೇನೆ ಡಾಕ್ಟರ್ ರೋಹಚಂದ್ರ. ಆರ್ ಗಟ್ಟಿ ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞರು ಹಾಗೂ ಮುಖ್ಯಸ್ಥರು ಅರ್ಬುದ ಶಸ್ತ್ರ ಚಿಕಿತ್ಸಾ, ವಿಭಾಗ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ,ಮಂಗಳೂರು ಡಾಕ್ಟರ್ ವಿದ್ಯಾ ವಿನುತ ಡಿಸೋಜಾ ಸಹಾಯಕ ಪ್ರಾಧ್ಯಾಪಕರು ಸಾಮಾಜಿಕ ಸೇವಾ ವಿಭಾಗ, ಇಂಡಿಯಾನ ಆಸ್ಪತ್ರೆ ಮಂಗಳೂರಿನ ಫಿಸಿಯೋತೆರಫಿ ವಿಭಾಗದ ಮುಖ್ಯಸ್ಥರು,
ಡಾಕ್ಟರ್ ವಿದ್ಯಾ ವಿನುತ ಡಿಸೋಜಾ ಸಹಾಯಕ ಪ್ರಾಧ್ಯಾಪಕರು , ಸಮಾಜಸೇವಾ ವಿಭಾಗ ಸಂತ ಅಲೋಶಿಯಸ್ ಮಹಾವಿದ್ಯಾಲಯ ಮಂಗಳೂರು ಅತಿಥಿಗಳಾಗಿದ್ದರು.
ಶ್ರೀ ವಿಲಿಯಂ ಸಲ್ದಾನ್ಹ ಪ್ರಗತಿಪರ ಕೃಷಿಕರು,ಸಮಾಜ ಸೇವಕರು,ನಿರ್ದೇಶಕರು ಒಯಸಿಸ್ ಕೇಟರಿಂಗ್ ಮೇರ್ಲಪದವು
ಶ್ರೀ ಲೋಲಾಕ್ಷ, ಗೌರವಾಧ್ಯಕ್ಷರು ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಇವರು ಸಮಾರoಭದಲ್ಲಿ ಉಪಸ್ಥಿತರಿದ್ದರು.
ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ
” ನಮ್ಮ ನಾಗರೀಕ ಜೀವನದ ಪ್ರತಿಯೊಂದು ಹಂತದಲ್ಲಿಯೂ ಅಗತ್ಯವಿರುವ ದಾಖಲೆಯನ್ನು ಅನುಮೋದಿಸುವುದೇ ಘನ ಸರಕಾರ. ಅಂಥ ಸರಕಾರ ನೀಡುವ ಸೌಲಭ್ಯಗಳನ್ನು ಎಲ್ಲರೂ ಇತಿಮಿತಿಯಲ್ಲಿ ಬಳಸಿಕೊಳ್ಳುವುದು ಅವಶ್ಯಕ. ಸ್ವಾರ್ಥ ಮನೋಭಾವದಿಂದ ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಕೂಡ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದಂತೆಯೇ ” ಎಂದು 75 ನೇ ಗಣರಾಜ್ಯೋತ್ಸವದ ಅಂಗವಾಗಿ ಕಾಲೇಜಿನಲ್ಲಿ ಧ್ವಜಾರೋಹಣವನ್ನು ನರವೇರಿಸಿದ ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ್ ಕುಮಾರ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರ್ದೇಶಿಸಿದರು. ಕಾಲೇಜಿನ ಎಲ್ಲ ಬೋಧಕ- ಬೋಧಕೇತರ ಸಿಬ್ಬಂಧಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇಶದಲ್ಲಿ ಕೋಮು ಭಾವನೆಗಳನ್ನು ಕೆರಳಿಸಿದವರು ಇಂದು:ಆಡಳಿತ ನಡೆಸುತ್ತಿದ್ದಾರೆ ಮುಂದಿನ ಚುನಾವಣೆಯಲ್ಲಿ ಯುದ್ಧದಂತೆ ಹೋರಾಡಿ ಕಾಂಗ್ರೆಸನ್ನು ಗೆಲ್ಲಿಸಬೇಕು-ಲಕ್ಷ್ಮೀ ಆರ್ ಹೆಬ್ಬಾಳ್ಕರ್
ಕುಂದಾಪುರ:”ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು, ಆದರೆ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯಕರ್ತರ ಪಡೆ ಸಜ್ಜಾಗಬೇಕು’ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್’ ಹೆಬ್ಬಾಳ್ಕರ್ ಕರೆ ನೀಡಿದರು.
ಶನಿವಾರ ಕುಂದಾಪುರದ ಆರ್.ಎನ್, ಶೆಟ್ಟಿ ಭವನದಲ್ಲಿ ನಡೆದ ಕುಂದಾಪುರ ಬ್ಲಾರ್ ಕಾಂಗ್ರಸ್ ರಾರ್ಪಶರ್ತರ ಸಭಯಲ್ಲಿ ಮಾತನಾಡಿದ
ಸಚಿವರು, ಸರ್ಕಾರದ ಪಂಚ ಗ್ಯಾರಂಟಿಗಳ ಪ್ರಯೋಜನವನ್ನು ಕಾರ್ಯಕರ್ತರು ಜನರಿಗೆ ತಲುಪಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಪ್ರತಿ 45 ದಿನಕ್ಕೊಮ್ಮೆ ಬ್ಲಾಕ್ ಮಟ್ಟದ ಕಾರ್ಯಕರ್ತರನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಲಾಗುವುದು. ಮುಂಬರುವ
ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಳ್ಳಬೇಕು. ಸ್ಥಳೀಯ ನಾಯಕರು, ಬ್ಲಾಕ್ ಮಟ್ಟದ ಅಧ್ಯಕ್ಷರು
ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಬೇಕು. ನಾಯಕರು ಕಾರ್ಯಕರ್ತರಿಗೆ ಹತ್ತಿರವಾದಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ ಎಂದರು.
ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರವು ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳಿದೆ. ಕೇವಲ 4 ವರ್ಷಗಳಲ್ಲಿ ಸುಮಾರು ಮೂರೂವರೆ ಲಕ್ಷ ಕೋಟಿ ರೂ. ಸಾಲದ ಹೊರೆಯನ್ನು ಹೊರಿಸಿದೆ ಎಂದು ಸಚಿವರು ಕಿಡಿಕಾಡಿದರು. ದೇಶದಲ್ಲಿ ಕೋಮು ಭಾವನೆಗಳನ್ನು ಕೆರಳಿಸಿದವರು ಇಂದು ಆಡಳಿತ ನಡೆಸುತ್ತಿದ್ದಾರೆ. ಅಂಥ ಬ್ರಿಟಿಷರಿಗೆ ಹೆದರದ ಕಾಂಗ್ರೆಸ್ ಪಕ್ಷ ಇವರಿಗೆ ಹೆದರೋ ಮಾತೇ ಇಲ್ಲ. ಮುಂದಿನ ಚುನಾವಣೆಯಲ್ಲಿ ಯುದ್ಧದಂತೆ ಹೋರಾಡಿ ಗೆಲುವಿಗೆ ಶ್ರಮಿಸಬೇಕೆಂದು ಸಚಿವರು ಹೇಳಿದರು.
ಎಂ.ಸಿ.ಸಿ. ಬ್ಯಾಂಕ್ ಸುರತ್ಕಲ್ ಶಾಖೆಯ ಹೊಸ ಆವರಣದ ಉದ್ಘಾಟನೆ ಮತ್ತು ರಜತ ಮಹೋತ್ಸವಆಚರಣೆ (1999-2024)
ಬ್ಯಾಂಕ್ನ ಗೌರವಾನ್ವಿತ ಗ್ರಾಹಕರ ಅನುಕೂಲಕ್ಕಾಗಿ, ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್ನ ಸುರತ್ಕಲ್ ಶಾಖೆಯನ್ನು 26.01.2024ರಂದು ಲ್ಯಾಂಡ್ ಲಿಂಕ್ಸ್ ಪರ್ಲ್, ಸರ್ವಿಸ್ ರಸ್ತೆ, ಸುರತ್ಕಲ್, ಮಂಗಳೂರಿನ ನೆಲ ಮಹಡಿಯಲ್ಲಿರುವ ಸಂಪೂರ್ಣ ಹವಾನಿಯಂತ್ರಿತ ಆವರಣಕ್ಕೆ ಸ್ಥಳಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಸುರತ್ಕಲ್ ಶಾಖೆಯ ಬೆಳ್ಳಿಹಬ್ಬವನ್ನು ಆಚರಿಸಲಾಯಿತು.
ಸುರತ್ಕಲ್ ಶಾಖೆಯ ನೂತನ ಆವರಣವನ್ನು ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ಸುರತ್ಕಲ್ನ ಸೇಕ್ರೆಡ್ ಹಾರ್ಟ್ ಚರ್ಚ್ನ ಧರ್ಮಗುರುಗಳಾದ ರೆ| ಫಾ| ಆಸ್ಟಿನ್ ಪೀಟರ್ ಪೆರಿಸ್ ಅವರು ನೂತನ ಆವರಣವನ್ನು ಆಶೀರ್ವಚಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಮಂಗಳೂರು ಇದರ ಮಾಜಿ ಜನರಲ್ ಮ್ಯಾನೇಜರ್ ಶ್ರೀ ಜೋಸೆಫ್ ಕ್ವಾಡ್ರಸ್ ಮತ್ತು ಗೌರವಾನ್ವಿತ ಅತಿಥಿಯಾಗಿ ಉದ್ಯಮಿ ಶ್ರೀ ರಾಜೇಶ್ ಶೆಟ್ಟಿಗಾರ್ ಹಾಜರಿದ್ದರು. ಸೇಫ್ ರೂಮನ್ನು ಮುಖ್ಯ ಅತಿಥಿಗಳಾದ ಶ್ರೀ ಜೋಸೆಫ್ ಕ್ವಾಡ್ರಸ್ ಉದ್ಘಾಟಿಸಿದರು. ಗೌರವ ಅತಿಥಿಗಳಾದ ಶ್ರೀ ರಾಜೇಶ್ ಶೆಟ್ಟಿಗಾರ್ ಇ-ಸ್ಟ್ಯಾಂಪ್ ಸೌಲಭ್ಯವನ್ನು ಉದ್ಘಾಟಿಸಿದರು. ಉದ್ಘಾಟನಾ ಮತ್ತು ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ವಹಿಸಿದ್ದರು.
ಬ್ಯಾಂಕ್ನ ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶಾಖೆಯನ್ನು ನೆಲಮಹಡಿಯಲ್ಲಿ ಹೆಚ್ಚು ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಕಳೆದ ವರ್ಷ ನಡೆದ ಗ್ರಾಹಕರ ಸಭೆಯಲ್ಲಿ ಆಡಳಿತ ಮಂಡಳಿ ನೀಡಿದ ಭರವಸೆಯನ್ನು ಸಭೆಗೆ ತಿಳಿಸಿದರು. ಪಾರ್ಕಿಂಗ್ ಸೌಲಭ್ಯ ಪೂರೈಸಲಾಗಿದ್ದು, ಸದ್ಯ ಎಂ.ಸಿ.ಸಿ ಬ್ಯಾಂಕ್ನಲ್ಲಿ ಲಭ್ಯವಿರುವ ಎಲ್ಲಾ ಬ್ಯಾಂಕಿಂಗ್ ಸೇವೆಗಳು – ರಾಷ್ಟ್ರೀಕೃತ ಮತ್ತು ಇತರ ವಾಣಿಜ್ಯ ಬ್ಯಾಂಕ್ಗಳಿಗೆ ಸಮಾನವಾಗಿದ್ದು, ಗ್ರಾಹಕರ ಅಗತ್ಯತೆ ಮತ್ತು ಆಶೋತ್ತರಗಳಿಗೆ ಬ್ಯಾಂಕ್ ಸ್ಪಂದಿಸುತ್ತಿದೆ. ಗ್ರಾಹಕರ ಬ್ಯಾಂಕಿಂಗ್ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ ಹೆಚ್ಚು ಗ್ರಾಹಕ ಕೇಂದ್ರಿತವಾಗಿರಲು ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ ಮತ್ತು ಬ್ಯಾಂಕ್ನೊಂದಿಗೆ ನಿಧಿಯ ಸುರಕ್ಷತೆಗಾಗಿ ಠೇವಣಿಗಳನ್ನು ಡಿಐಜಿಸಿಸಿ ವಿಮೆ ಮಾಡಲಾಗಿದೆ. 112 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಬ್ಯಾಂಕನ್ನು ಬೆಂಬಲಿಸಿ ಬ್ಯಾಂಕ್ನ ಪ್ರಗತಿಯೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಸಹಕರಿಸುವಂತೆ ಗ್ರಾಹಕರಿಗೆ ಕರೆ ನೀಡಿದರು. ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿಯವರು ತೋರಿದ ಬೆಂಬಲ ಮತ್ತು ವಿಶ್ವಾಸ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮದಿಂದ ತಾವು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾಗಲು ಸಹಕಾರಿಯಾಗಿದೆ ಹಾಗೂ ಬ್ಯಾಂಕ್ನ 1000 ಕೋಟಿ ವ್ಯವಹಾರ ವಹಿವಾಟಿನ ಮೈಲಿಗಲ್ಲು ಸಾಧನೆ ಮತ್ತು ಈ ಸಂದರ್ಭದಲ್ಲಿ ಪರಿಚಯಿಸಲಾದ ಕೊಡುಗೆಗಳ ಕುರಿತು ಅವರು ಸಭೆಗೆ ತಿಳಿಸಿದರು.
ನೂತನ ಆವರಣವನ್ನು ಆಶೀರ್ವದಿಸಿದ ರೆ| ಫಾ| ಆಸ್ಟಿನ್ ಪೀಟರ್ ಪೆರಿಸ್ ಅವರು ಶಾಖೆಯನ್ನು ಹೆಚ್ಚಿನ ಅನುಕೂಲಕ್ಕಾಗಿ ಸ್ಥಳಾಂತರಣೆ ಮತ್ತು ಸುರತ್ಕಲ್ ಶಾಖೆಯ ಬೆಳ್ಳಿಹಬ್ಬವನ್ನು ಆಚರಣೆಯ ಸಂದರ್ಭದಲ್ಲಿ ಅಭಿನಂದಿಸಿದರು. ಬ್ಯಾಂಕಿನ ಸುಧಾರಣೆಗಾಗಿ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾರಿಗೊಳಿಸುವ ಮೂಲಕ ಬ್ಯಾಂಕ್ ಸ್ಥಿರ ಗತಿಯಲ್ಲಿ ಸಾಗಬೇಕೆಂದು ಅವರು ಕರೆ ನೀಡಿದರು. ಶ್ರೀ ಜೋಸೆಫ್ ಕ್ವಾಡ್ರಸ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಬ್ಯಾಂಕಿನ ಬೆಳವಣಿಗೆಯಲ್ಲಿ ಅಧ್ಯಕ್ಷರ ದೂರದೃಷ್ಟಿ ಮತ್ತು ನಾಯಕತ್ವವನ್ನು ಅವರು ಶ್ಲಾಘಿಸಿದರು. ಕಳೆದ 5 ವರ್ಷಗಳಲ್ಲಿ ದ್ವಿಗುಣಗೊಂಡಿರುವ ಬ್ಯಾಂಕಿನ ಹಣಕಾಸು ವಿವರಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಶಾಖೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ಜೊತೆಗಿದ್ದ 25 ಗ್ರಾಹಕರನ್ನು ಬೆಳ್ಳಿಹಬ್ಬದ ಗ್ರಾಹಕರು ಎಂದು ಪರಿಗಣಿಸಿದರು. ಶಾಖೆಯ ಪ್ರಥಮ ವ್ಯವಸ್ಥಾಪಕರಾಗಿದ್ದ ಶ್ರೀ ಲೆಸ್ಲಿ ಪಾಯ್ಸ್ ಮತ್ತು ಹಿಂದಿನ ಆವರಣದ ಮ್ಹಾಲಕರಾದ ಶ್ರೀ ವಿಜಯ್ ಕುಮಾರ್ ಇಡ್ಯ ಮತ್ತು ಶ್ರೀ ಉದಯ ಶಂಕರ್ ರಾವ್ ಹಾಗೂ ನೂತನ ಆವರಣದ ಮ್ಹಾಲಕರಾದ ಶ್ರೀ ಕೇಶವ ಸಾಲಿಯಾನ್ ಮತ್ತು ಸಿವಿಲ್ ಇಂಜಿನಿಯರ್ ಶ್ರೀ ಕಾರ್ತಿಕ್ ಕಿರಣ್ ಇವರನ್ನು ಗೌರವಿಸಲಾಯಿತು.
ಅಧ್ಯಕ್ಷರು ಮುಖ್ಯ ಅತಿಥಿಗಳು ಮತ್ತು ಗೌರವಾನ್ವಿತ ಅತಿಥಿಗಳನ್ನು ಕೃತಜ್ಞತೆಯ ಸಂಕೇತವಾಗಿ ಸ್ಮರಣಿಕೆ ನೀಡಿ ಗೌರವಿಸಿದರು. ನಿರ್ದೇಶಕರಾದ ಡಾ ಜೆರಾಲ್ಡ್ ಪಿಂಟೊ, ಹೆರಾಲ್ಡ್ ಜಾನ್ ಮೊಂತೇರೊ, ಡೇವಿಡ್ ಡಿಸೋಜಾ, ಮೆಲ್ವಿನ್ ಅಕ್ವಿನಾಸ್ ವಾಸ್, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಐರಿನ್ ರೆಬೆಲ್ಲೊ, ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು. ಶಾಖೆಯ ಶಾಖಾ ಸಹಾಯಕ ನಿರ್ದೇಶಕರಾದ ಶ್ರೀ ಅನಿಲ್ ಪತ್ರಾವೊ ಸ್ವಾಗತಿಸಿದರು. ಶಾಖಾ ಪ್ರಬಂಧಕಿ ಶ್ರೀಮತಿ ಸುನೀತಾ ಡಿಸೋಜಾ ವಂದಿಸಿದರು. ಮನೋಜ್ ಫೆನಾರ್ಂಡಿಸ್, ಕಿರೆಂ ಕಾರ್ಯಕ್ರಮ ನಿರೂಪಿಸಿದರು.
INAUGURATION OF NEW PREMISES OF MCC BANK SURATHKAL BRANCH AND SILVER JUBILEE CELEBRATION (1999-2024)
For the convenience of the esteemed customers of the Bank, the Surathkal branch of MCC Bank Limited was shifted to the fully air-conditioned premises on the ground floor of Land Links Pearl, Service Road, Surathkal, Mangalore on 26.01.2024. During the occasion, the silver jubilee of the Surathkal branch was also celebrated.
The new premises of Surathkal branch was inaugurated by the chairman, ‘SahakaraRatna’ Mr Anil Lobo
V. Rev. FrAustin Peter Peris, Parish Priest, Sacred Heart Church, Surathkal, blessed the new premises.
Mr Joseph Quadras, Former General Manager of M.C.C Bank Ltd., Mangalore, was the chief guest for the theprogramme and Mr Rajesh Shettigar, Businessman, was the guest of honour.
Safe Room was inaugurated by the chief guest, Mr Joseph Quadras.
Mr. Rajesh Shettigar, guest of honour, inauguratedthe E-Stamp facility.
The inaugural& Silver Jubilee programme was presided over by the Chairman, ‘SahakaraRatna’ Mr Anil Lobo.
The Programmebegan with a prayer song conducted by Prem S. Dsouza and team.
‘SahakaraRatna’ MrAnil Lobo, Chairman of the Bank, in his presidential address informed the gathering that the assurance given by the management at the customer meet held last year that the branch will be shifted to a more convenient location on the ground floor with parking facility, has been fulfilled. He said that all the banking services available at MCC Bank are at par with nationalized and other commercial banks. He said that the bank has been responsive to the needs and aspirations of the customers. The staff members of the Bank have been trained to be more customer centric giving preference to the banking needs of the customers. He also assured the customers about the safety and security of the funds with the bank, as the bank is regulated by the Reserve Bank of India and the deposits are insured by DIGCC. He called upon the customers to support the bank with a long history of 112 years so that more employment opportunities can be created along with the progress of the bank. He emphasised that because of the support and confidence shown by the members,customers,Board of Directors and the hardwork rendered by the staff members has helped him to be the award winner as SahakaraRatna. He also informed the gathering on the milestone achievement of 1000 crore business turnover of the Bank and that the offers introduced on this occasion.
V.Rev. FrAustin Peter Peris, who blessed the new premises, congratulated the Chairman and his team and all the constituents for shifting the branch to a more convenient and for celebrating the silver jubilee of the Surathkal branch. He appreciated for providing good parking facility, convenient space for the customers to conduct their transactions in a comfortable manner. He called upon the bank to move in a steady pace by implementing the innovative products and services for the betterment of the Bank. He emphasised the neccessity of 3 “C”s in Banking, viz, Customers, Customisation and Confidence; implementation of which would help the Bank to move to greater acheivements. He wished all the very best for the development of the Bank.
Mr Joseph Quadras, while addressing the gathering, congratulated the management for providing customer friendly ambience. He appreciated the vision and leadership of the chairman, in the growth of the bank. He presented the financials of the Bank which have doubled in the last 5 years. .
On this occasion, 25 customers who were with the Bank from the date of opening of the branch till date by treating them as silver jubilee customers. The 1st Manager of the branch, Mr Leslie Pais and the landlords of the erstwhile premises, Mr Vijay Kumar Iddya and MrUday Shankar Rao, were honoured by the chairman.
MrKeshavaSalian,owner of new premises and MrKarthikKiran, civil engineer were honoured for providing the premises and the excellent work done at the new premises, respectively.
The Chairman honoured the chief guests and guest of honour with memento as a token of gratitude. The Directors Dr Gerald Pinto, Herald John Monteiro, David Dsouza, Melwyn Aquinas Vas, SushanthSaldanha,Felix Dcruz, Irene Rebello, General Manager MrSunil Menezes were present on the occasion.
MrAnil Patrao, Branch Support Director of the branch welcomed the gathering.
MrsSunithaDsouza, Branch Manager, proposed vote of thanks and ManojFernandes, Kiremcompered the programme.
ಶ್ರೀನಿವಾಸಪುರ ಗಣರಾಜ್ಯೋತ್ಸವ : ಪ್ರತಿಯೊಬ್ಬರು ಹಕ್ಕು ಮತ್ತು ಕರ್ತವ್ಯಗಳನ್ನು ಜೊತೆ ಜೊತೆಯಾಗಿ ಜೋಡಿ ಎತ್ತುಗಳಂತೆ ಮುನ್ನೆಡಯಬೇಕು- ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ
ಶ್ರೀನಿವಾಸಪುರ : ಪ್ರತಿಯೊಬ್ಬರು ಹಕ್ಕು ಮತ್ತು ಕರ್ತವ್ಯಗಳನ್ನು ಜೊತೆ ಜೊತೆಯಾಗಿ ಜೋಡಿ ಎತ್ತುಗಳಂತೆ ಮುನ್ನೆಡಯಬೇಕು ಎಂದು ಸಲಹೆ ನೀಡಿದರು ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ವ್ಯಾಖ್ಯಾನಿಸಿದರು.
ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗು ತಾಲೂಕು ಆಡಳಿತ ಮಂಡಲಿ ವತಿಯಿಂದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ನಮ್ಮ ದೇಶವು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನೇತೃತ್ವದಲ್ಲಿ ಅಭಿವೃದ್ದಿಯತ್ತಾ ಸಾಗುತ್ತಿದ್ದು, ಭಾರತ ದೇಶದ ಗಣತಂತ್ರದ ತಾಯಿ ಎಂಬ ಘೋಷ ವಾಕ್ಯದ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ದೇಶದ ಅಭಿವೃದ್ಧಿಯ ಬಗ್ಗೆ ತಿಳಿಸಲಾಗುತ್ತಿದೆ. ನಮ್ಮ ದೇಶವು ಸಂವಿಧಾನದ ಮುಖೇನ ಸಂವಿದಾನದಂತೆ ವ್ಯವಸ್ಥೆಗಳನ್ನು ಬಳಸುತ್ತಿರುವ ಏಕೈಕ ರಾಷ್ಟ್ರವೆಂದರೆ ನಮ್ಮ ಭಾರತ ದೇಶ .
ಈ ಹಿಂದೆ ಭಾರತ ದೇಶ ಹಳ್ಳಿಗಳ ದೇಶ, ಭಾರತ ದೇಶ ಬಡವರ ದೇಶ, ಭಾರತ ದೇಶ ಕೂಲಿ ಕಾರ್ಮಿಕರ ದೇಶ ಎಂದು ಹೇಳಿಕೊಳ್ಳಲಾಗಿತ್ತು ಆದರೆ ಇಂದು ದೇಶವು ಅನೇಕ ರೀತಿಯಲ್ಲಿ ಪ್ರಗತಿ ಕಾಣುತ್ತಿದೆ. ಇಂದು ಕೇಂದ್ರ ಸರ್ಕಾರವು ಎಲೆಮರಿಕಾಯಿಯಂತೆ ಇರುವ ಆದರ್ಶ ವ್ಯಕ್ತಿಗಳನ್ನು ಪಕ್ಷಾತೀತಿವಾಗಿ, ಜ್ಯಾತ್ಯಾತೀತವಾಗಿ ಗುರ್ತಿಸಿ ಕೇಂದ್ರ ನೀಡುವ ಪ್ರದ್ಮಶ್ರೀ, ಪದ್ಮವಿಭೂಷಣ ಗಳಂತಹ ಅನೇಕ ಪುರಸ್ಕಾರಗಳಿಗೆ ಆಯ್ಕೆ ಮಾಡುತ್ತಿರುವುದು ಆದರ್ಶ ವ್ಯಕ್ತಿಗಳಿಗೆ ಗೌರವ ತಂದಂತೆ ಎಂದರು.
ಶೈಕ್ಷಣಿಕವಾಗಿ ರಾಜ್ಯದಲ್ಲಿ ತಾಲೂಕು ದ್ವಿತೀಯ ಸ್ಥಾನವನ್ನು ಪಡೆದಿರುವುದ ಹೆಮ್ಮಯ ಸಂಗತಿ . ಮುಂದಿನ ದಿನಗಳಲ್ಲಿ ಇನ್ನು ಹೆಚ್ಚ ಪರಿಶ್ರಮದೊಂದಿಗೆ ಪ್ರಥಮ ಸ್ಥಾನವನ್ನು ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರು ಪರಿಶ್ರಮ ಪಡುವಂತೆ ಸಲಹೆ ನೀಡಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಭಾರತ ದೇಶವು ಪ್ರಪಂಚದಲ್ಲಿ ಬಲಿಷ್ಠ ರಾಷ್ಟವಾಗಿ ಹೊರಹೊಮ್ಮುತ್ತಿದೆ . ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ದೇಶವು ಅಭಿವೃದ್ಧಿ ರಾಷ್ಟ್ರವಾಗುತ್ತಿದೆ.
ಕ್ಷೇತ್ರ ಅಭಿವೃದ್ಧಿ ಪಡಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳವು ಹಿನ್ನೆಲೆಯಲ್ಲಿ ಪಟ್ಟಣವನ್ನು 30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಟ್ಟಣವನ್ನು 2 , 3 ತಿಂಗಳಲ್ಲಿ ಕೆಲಸವನ್ನು ಪ್ರಾರಂಭಿಸಿ ಪಟ್ಟಣವನ್ನು ಅಭಿವೃದ್ಧಿ ಪಡಿಸಲಾಗುವುದು.
ನರಸಾಪುರ, ವೇಮಗಲ್ನಲ್ಲಿ ಯಾವು ರೀತಿಯಲ್ಲಿ ಕೈಗಾರಿಕ ವಲಯವು ಅಭಿವೃದ್ಧಿಯಾಗುತ್ತಿದೆಯೋ ಅದೇ ರೀತಿಯಾಗಿ ಕ್ಷೇತ್ರದಲ್ಲಿ ಕೈಗಾರಿಕ ವಲಯವನ್ನು ಅಭಿವೃದ್ಧಿ ಪಡಿಸಲಾಗುದು ಚಿಂತನೆ ಮಾಡಲಾಗುತ್ತಿದೆ . ಇದರಿಂದ ಯುವಕರಿಗೆ ಉದ್ಯೋಗವನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಕ್ಷೇತ್ರದಲ್ಲಿ 5 ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯವನ್ನು ಸೃಷ್ಠಿ ಮಾಡಲಾಗುವುದು.
ಶ್ರೀನಿವಾಸಪುರ ಕ್ರೀಡಾಂಗಣಕ್ಕೆ 5 ಕೋಟಿ ರೂ ಗಳನ್ನು ನೀಡುವಂತೆ ಸರ್ಕಾರದಲ್ಲಿ ಪ್ರಸ್ತಾವಣೆ ಸಲ್ಲಿಸಿದ್ದೇನೆ. ಅಬೇಂಡ್ಕರ್ ಭವನವನ್ನ 2 ಕೋಟಿ ವೆಚ್ಚದಲ್ಲಿ ಸ್ಥಾಪನೆ ಮಾಡಲು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.
ಶ್ರೀನಿವಾಸಪುರ –ಕೋಲಾರ ರಸ್ತೆ 7.5 ಮೀಟರ್ ಅಗಲಿಕರಿಸಿ 40 ಕೋಟಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಪ್ರಾರಂಭಸಿಲಾಗಿದೆ . ಮುಂದಿನ ಬಜೆಟ್ನಲ್ಲಿ 10 ಕೋಟಿ ವೆಚ್ಚದಲ್ಲಿ ಮಾವಿನ ಹಣ್ಣು ಸಂಸ್ಕರಣ ಘಟಕವನ್ನು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗುತ್ತದೆ. ಜಲ ಜೀವನ್ ಮಿಷನ್ ವತಿಯಿಂದ ಹಳ್ಳಿ ಹಳ್ಳಿಗೂ ನಲ್ಲಿಯ ಮೂಲಕ ನೀರನ್ನ ಮನೆಗಳಿಗೆ ಹರಿಸಲಾಗುವುದು.
ತಾಲೂಕಿನಲ್ಲಿ ನಿರಾಶ್ರಿತರು ಇರುವುದರಿಂದ ನಾನೇ ಖುದ್ದು ಪ್ರತಿ ಪಂಚಾಯಿತಿಗೂ ಬೇಟಿ ನೀಡಿ ನಿರಾಶ್ರಿತರಿಗೆ ಮನೆಗಳನ್ನು ಕಲ್ಪಸಲಾಗುವುದು. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೊಂಡು ನಿಮ್ಮ ತಂದೆ ತಾಯಿಗೆ , ಶಾಲೆಗೆ ಕೀರ್ತಿ ತರುವಂತೆ ಸಲಹೆ ನೀಡಿದರು. ತಾಲೂಕನ್ನು ಸರ್ವತೋಮುಖ ಅಭಿವೃದ್ಧಿಗಾಗಿ ಅಧಿಕಾರಿಗಳು ಸಾರ್ವಜನಿಕರು ಸಹಕರಿಸಬೇಕು ಎಂದರು.
ಪೊಲೀಸರಿಂದ , ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು ಹಾಗು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.ಶಾಸಕರು ವಿದ್ಯಾರ್ಥಿಗಳೊಂದಿಗೆ ನೃತ್ಯ ಪ್ರದರ್ಶವನ್ನು ಮಾಡುವುದರ ಮೂಲಕ ಎಲ್ಲರ ಗಮನವನ್ನು ಸಳೆದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಬಿಇಒ ಮುನಿಲಕ್ಷ್ಮಯ್ಯ, ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಅರಣ್ಯ ಇಲಾಖೆ ಅರಣ್ಯಾಧಿಕಾರಿ ಕೆ.ಮಹೇಶ್, ಖಜಾನೆ ಅಧಿಕಾರಿ ಕಮಲಾಕ್ಷಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜನಾರ್ಧನ್, ಬಿಆರ್ಸಿ ಕೆ.ಸಿ.ವಸಂತ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕಟಸ್ವಾಮಿ, ರೇಷ್ಮ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಸಿಡಿಪಿಒ ನವೀೀನ್ಕುಮಾರ್, ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಆರ್ಐ ಗಳಾದ ಮುನಿರೆಡ್ಡಿ, ಹರಿ ಇದ್ದರು.
ಕುಂದಾಪುರ: ಎಚ್.ಎಮ್.ಎಮ್.ವಿ.ಕೆ.ಆರ್ ಶಾಲೆಯಲ್ಲಿ ಗಣರಾಜ್ಯೋತ್ಸವ
ಕುಂದಾಪುರ (ಜ.26) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ 75ನೇ ಗಣರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿರುವ ಕುಂದಾಪುರದ ವಿದ್ಯುತ್ ಗುತ್ತಿಗೆದಾರರೂ ಆಗಿರುವ ಕೆ. ರತ್ನಾಕರ್ ನಾಯಕ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ವಿದ್ಯಾವಂತರಾಗುತ್ತಾರೆ, ಆರ್ಥಿಕವಾಗಿ ಸಭಲರಾಗುತ್ತಾರೆ, ಹಣವಂತರಾಗುತ್ತಾರೆ. ಆದರೆ ಹೃದಯವಂತರಾಗುವುದೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಆದರೆ ಇಂದಿನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದೊಂದಿಗೆ, ಮೌಲ್ಯಾಧಾರಿತ ಶಿಕ್ಷಣ ನೀಡಿ, ಉತ್ತಮ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿ ಶಿಕ್ಷರಾಗಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷರಾಗಿರುವ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ.ಎನ್ ಗಣರಾಜ್ಯೋತ್ಸವದ ಸಂದೇಶವನ್ನು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಸುಗುಣಾ ಶೆಟ್ಟಿ ಕಾರ್ಯಕ್ರಮ ನಿರೋಪಿಸಿ ವಂದಿಸಿದರು.
ಸಾಧನೆ ಮಾಡಿದ ಹೆಚ್ಚಿನವರು ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದಲ್ಲಿ ಕೋಟ ಶ್ರೀನಿವಾಸ ಪೂಜಾರಿ
ಕೋಟೇಶ್ವರ:ಸಾಧನೆ ಮಾಡಿದ ಹೆಚ್ಚಿನವರು ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು.ಇಲ್ಲಿ ಅನೇಕ ಸೌಲಭ್ಯಗಳಿಂದು ಅದನ್ನು ಪೋಷಕರು ಸರಿಯಾಗಿ ಬಳಸಿಕೊಳ್ಳಬೇಕು. ಸರಕಾರಿ ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷಕರು ಕೆಲಸ ಮಾಡುತ್ತಿದ್ದು, ಅವರು ವಿದ್ಯಾರ್ಥಿಗಳನ್ನು ಚೆನ್ನಾಗಿ ರೂಪಿಸಬಲ್ಲ ಶಕ್ತಿ ಉಳ್ಳವರು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶುಕ್ರವಾರ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಸಂಭ್ರಮ ‘ಪರಿಕ್ರಮ-2024’ರಲ್ಲಿ ಶಾಲೆಗೆ ನೀಡಲಾದ ವಾಹನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ ಗಾಣಿಗ ಗಣರಾಜ್ಯದ ಧ್ವಜಾರೋಹಣವನ್ನು ಮಾಡಿದರು. ಅಮೃತ ಮಹೋತ್ಸವದ ನೆನಪಿಗಾಗಿ ಶಾಲೆಗೆ ನೀಡುವ ಶಾಲಾ ವಾಹನದ ಮೆರವಣಿಗೆಗೆ ಖ್ಯಾತ ಅರಿವಳಿಕೆ ತಜ್ಞ ಡಾ.ಶೇಖರ್ ಚಾಲನೆ ನೀಡಿದರು. ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ್ ನೆರವೇರಿಸಿದರು.ಅಮೃತ ಮಹೋತ್ಸವದ ಶಾಶ್ವತ ನಾಮಫಲಕವನ್ನು ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್ ಅನಾವರಣಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ವಹಿಸಿದ್ದರು.
ಕುಂದಾಪುರದ ಬಿಇಓ ಶೋಭಾ ಶೆಟ್ಟಿ, ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಗುಲಾಬಿಯಮ್ಮ, ಸುಮತಿ ನಾಗರಾಜ, ಚಂದ್ರ ಬಿ.ಎನ್, ಶೇಖರ ಛಾತ್ರಬೆಟ್ಟು, ಮಂಜುನಾಥ ಕುಂದರ್, ಅನಿಲ ಛಾತ್ರಬೆಟ್ಟು, ಪ್ರಸನ್ನ ದೇವಾಡಿಗ, ಪುಟ್ಟು, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾೈಕ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಐಇಆರ್ಟಿ ಶಂಕರ್ ಕುಲಾಲ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ತೋಳಾರ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೂಪ್ಕುಮಾರ್ ಬಿ.ಆರ್.,ಕಾರ್ಯದರ್ಶಿ ರಾಘವೇಂದ್ರ ಅಮೀನ್,ವಿದ್ಯಾರ್ಥಿ ನಾಯಕ ಮಾ.ಪ್ರೀತಮ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಪ್ರವೀಣಾ ಶೆಟ್ಟಿ ಸ್ವಾಗತಿಸಿದರು.ಶಾಲಾ ಶಿಕ್ಷಕಿಯರಾದ ಮಂಜುಳಾ, ಅಶ್ವಿನಿ, ಸುಚಿತ್ರಾ, ಚೈತ್ರ, ಪ್ರೇಮಾ, ಸುಮಾನ ಬಹುಮಾನಿತರ ಪಟ್ಟಿ ವಾಚಿಸಿದರು. ಹಳೆ ವಿದ್ಯಾರ್ಥಿ ಚಂದ್ರಶೇಖರ ಬೀಜಾಡಿ ವಂದಿಸಿದರು.ಅಕ್ಷತ್ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.