ಕುಂದಾಪುರ,ಜ.24: ಚಾರಿತ್ರಿಕ ಹಿನ್ನೆಲೆಯುಳ್ಳ ಉಡುಪಿ ಜಿಲ್ಲೆಯ ಅತೀ ಹಿರಿಯ ಚರ್ಚ್ ರೋಜರಿ ಮಾತಾ ಚರ್ಚಿಗೆ ಹೊಸ ವರ್ಷದ ಪ್ರಯುಕ್ತ 2023 ರ ಡಿಸೆಂಬರ್ 31 ರ ಸಂಜೆ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮಿ ಆಗಮಿಸಿ ಚರ್ಚ್ ಜನತೆಗೆ ಶುಭ ಕೋರಿದರು.
“ದೇವರು ಮನುಷ್ಯರ ಮೆಲೆ ಓದಾರ್ಯೆತೆಯುಳ್ಳವನಾಗಿದ್ದಾರೆ. ಆತ ನಮಗೆ ಈ ಲೋಕದಲ್ಲಿ ಜೀವಿಸಲಿಕ್ಕಾಗಿ ನಮಗೆ ಎಲ್ಲವನ್ನು ಒದಗಿಸಿದ್ದಾನೆ. ದೇವರು ಈ ಭೂಮಿ ಮೇಲೆ ಬೇಕಾದಷ್ಟು ವಿಸ್ಮಯಗಳನ್ನು ನಿರ್ಮಿಸಿದ್ದಾನೆ, ಎಂದು ತಿಳಿಸುತ್ತಾ, ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಅವರು ಹಾಸನದ ಕ್ರಿಶ್ಚಿಯನ್ ಶಾಲೆಯಲ್ಲಿ ಕಲಿತಿದ್ದರಿಂದ, ಶಾಲಾ ಮಕ್ಕಳ ಜೊತೆ ಕ್ರಿಸ್ಮಸ್ ಗೀತೆಗಳನ್ನು ಮನದಟ್ಟು ಮಾಡಿಕೊಂಡಿದ್ದರಿಂದ ಕನ್ನಡ ಕ್ರಿಸ್ಮಸ್ ಗೀತೆಯನ್ನು ಶುಶ್ರಮಯವಾಗಿ ಹಾಡಿ, ಹಾಜರಿದ್ದವರಿಗೆ ಚಕಿತ ಪಡಿಸಿದರು.
ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿ “ಆರು ವರ್ಷಗಳಿಂದ ನಾನಿಲ್ಲಿದ್ದೇನೆ, ಯಾರೊಬ್ಬ ಉನ್ನತ ಮಟ್ಟದ ಅಧಿಕಾರಿ ಭೇಟಿ ನೀಡಿರಲಿಲ್ಲಾ, ಶೋಭಾ ಲಕ್ಷ್ಮಿ ಮೇಡಮ್ ಬಂದಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿ ಅವರು ಉತ್ತಮ ಅಧಿಕಾರಿ ಜನಸ್ನೇಹಿ ಎಂದು ಜನ ಮಾತನಾಡಿಕೊಳ್ಳುತ್ತಾರೆಂದು ತಿಳಿಸುತ್ತಾ, ಹೂ ಗುಚ್ಚ ನೀಡಿ ಗೌರವಿಸಿದರು. ಪಾಲನ ಮಂಡಳಿ ಪರವಾಗಿ ಪಾಲನ ಮಂಡಳಿ ಉಪಾಧ್ಯಕ್ಷೆಯಾದ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಹೂಗುಚ್ಚ ನೀಡಿದರು.
ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಅತಿಥಿ ಧರ್ಮಗುರು ವಂ|ರೆಜಿನಾಲ್ಡ್ ಫೆರ್ನಾಂಡಿಸ್, ಧರ್ಮಭಗಿನಿಯರು, ಕುಂದಾಪುರ ಸರ್ಕಾರಿ ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ, ಡಾ|ರೊಬರ್ಟ್ ರೆವೆಲ್ಲೊ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.
Month: January 2024
ಕುಂದಾಪುರ ಹೋಲಿ ರೊಜರಿ ಚರ್ಚಿನಲ್ಲಿ ಹೊಸ ವರ್ಷಾಚರಣೆ – ಮೇರಿ ಮಾತೆಯ ಜೀವನ ನಮ್ಮ ಜೀವನದಲ್ಲಿ ಕೇಂದ್ರಿಕೃತವಾಗಲಿ : ಫಾ|ಅಶ್ವಿನ್
ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2023 ರ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಮಹಾ ಬಲಿದಾನವನ್ನು ಅರ್ಪಿಸಿದರು ‘’ಮೇರಿ ಮಾತೆಯ ರೀತಿಯಲ್ಲಿ ನಮ್ಮ ಜೀವನವನ್ನು ಈ ಪ್ರಪಂಪಚದಲ್ಲಿ ಯೇಸು ಕ್ರಿಸ್ತರ ಮೇಲೆ ಕೇಂದ್ರಿಕ್ರತ ಮಾಡಲು ನಮಗೆ ಅಹ್ವಾನ ದೊರೆತಿದೆ. ಅದರಂತೆ ಮೇರಿ ಮಾತೆಯ ಜೀವನ, ನಮ್ಮ ಜೀವನದಲ್ಲಿ ಕೇಂದ್ರಿಕೃತವಾಗಲಿ : ಮೇರಿ ಮಾತೆಗೆ ದೇವರು ಏನು ಭರವಸೆ ನೀಡಿದನ್ನು ಅವರೆಲ್ಲಾ ಈಡೇರಿಸಿದ್ದಾರೆ. ದೇವರ ಇಚ್ಚೆಯಂತೆ ದೇವರ ಪುತ್ರ ಮೇರಿ ಮಾತೆಯ ಮಡಿಲಲ್ಲಿ ಕುಟ್ಟಿ ದೇವ ಮಾತೆಯಾದಳು.ನಾವು ಇಂದು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ ವರ್ಷದ ಆಚರರಣೆ ಮತ್ತೊಂದು ಮೇರಿ ಮಾತೆ ‘ದೇವರ ತಾಯಿ’ ಎಂಬ ಧರ್ಮಸಭೆ ಅಧಿಕÅತವಾಗಿ ಸಾರಿದ ಹಬ್ಬ. ಮೇರಿ ಮಾತೆ ಇತರರ ಕಷ್ಟಗಳಿಗೆ ನೆರವಾದರು, ನಾವು ಅವರಂತೆ ಇತರರ ಕಷ್ಟಗಳಿಗೆ ನೆರವಾಗಬೇಕು. ಮೇರಿ ಮಾತೆ ಯೇಸುವಿನ ಯೋಜನೆಯಲ್ಲಿ ಕೊನೆ ತನಕ ಜೊತೆ ನೀಡಿ ಮಹತ್ತರ ಪಾತ್ರ ವಹಿಸಿದ್ದಾಳೆ ಅವರು ನಮ್ಮ ಜೀವನದಲ್ಲ್ಲಿ ಪ್ರೇರಣೆಯಾಗಲಿ’ ಎಂದು ಬಲಿದಾನದಲ್ಲಿ ಸಹಭಾಗಿಯಾಗಿದ್ದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಂದೇಶ ನೀಡಿದರು.
ಅದಕ್ಕೂ ಮುನ್ನಾ ಘತ ವರ್ಷದಲ್ಲಿ ನಮ್ಮನ್ನು ಕಾಪಾಡಿ ಸಲಹಿದಕ್ಕೆ, ನಮಗೆ ಹಲವು ರೀತಿಗಳಿಂದ ಉಪಕಾರ ಮಾಡಿದಕ್ಕೆ ದೇವರಿಗೆ ಕ್ರತಜ್ಞತೆಗಾಗಿ ಪರಮ ಪ್ರಸಾದರ ಆರಾಧನೆಯನ್ನು ಪ್ರಧಾನ ಧರ್ಮಗುರು ಅ| ವ| ಸ್ಟ್ಯಾನಿ ತಾವ್ರೊ ನಡೆಸಿಕೊಟ್ಟು ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು. ಚರ್ಚಿನ ವಾಳೆಯವರಿಗಾಗಿ ಎರ್ಪಡಿಸಿದ ಗೋದಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅತಿಥಿ ಧರ್ಮಗುರು ವಂ|ರೆಜಿನಾಲ್ಡ್ ಫೆರ್ನಾಂಡಿಸ್, ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷೆಯಾದ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.