ಶ್ರೀನಿವಾಸಪುರ: ; ಜ.1: ಬಡವರ ಹಸಿವಿನ ಮೇಲೆ ಸರ್ಕಾರ ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕೆಂದು ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಸರ್ಕಾರಗಳಿಗೆ ಎಚ್ಚರಿಕೆಯ ಜೊತೆಗೆ ಮನವಿ ಮಾಡಿದರು.
ಹೊಸ ವರ್ಷ ಆಚರಣೆಯನ್ನು ತಾಲೂಕು ಕಚೇರಿ ಮುಂದೆ ರೈತರು ಬೆಳೆಯುವ ತರಕಾರಿಗಳನ್ನು ಉಚಿತವಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡಿ ಮಾತನಾಡಿದ ಅವರು, ಈ ವರ್ಷ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಿ ನಕಲಿ ಬಿತ್ತನೆ ಬೀಜ ಕೀಟನಾಶಕಗಳ ಹಾವಳಿಯಿಂದ ಮುಕ್ತಿಯಾಗಲಿ. ದುಡಿಮೆಗೆ ತಕ್ಕ ಬೆಲೆ ಸಿಗಲಿ ರೈತರ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವ ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕೃಷಿ ಕ್ಷೇತ್ರವನ್ನು ರಕ್ಷಣೆ ಮಾಡದೆ ಇದ್ದರೆ ತುತ್ತು ಅನ್ನಕ್ಕಾಗಿ ಹೊರದೇಶದ ಬಳಿ ಕೈಚಾಚುವ ಕಾಲ ದೂರವಿಲ್ಲವೆಂದು ಸರ್ಕಾರಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದರು.
ಇಡೀ ದೇಶಕ್ಕೆ ಅನ್ನ ಹಾಕುವ ಅನ್ನದಾತನು ತನ್ನ ಸ್ವಾರ್ಥಕ್ಕಾಗಿ ಯಾವುದೇ ಕೆಲಸ ಮಾಡುವುದಿಲ್ಲ. 3 ತಿಂಗಳು ಭೂಮಿ ತಾಯಿಗೆ ಕಷ್ಟಪಟ್ಟು ಬಿತ್ತನೆ ಹಾಕಿ ಬೆವರು ಸುರಿಸಿ ರಾತ್ರಿ ಹಗಲು ಎನ್ನದೆ ದುಡಿಯುವ ರೈತರನ್ನು ಅಧಿಕಾರಕ್ಕೆ ಬರುವ ಸರ್ಕಾರಗಳು ಪ್ರಮಾಣವಚನ ಸ್ವೀಕಾರ ಮಾಡಿ ಆನಂತರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ರೈತನು ಬೆಳೆಯುವ ಅನ್ನವನ್ನು ತಟ್ಟೆಯಲ್ಲಿ ಹಾಕಿಕೊಂಡು 3 ಹೊತ್ತು ಹೊಟ್ಟೆ ತುಂಬ ತಿನ್ನುವ ಅಧಿಕಾರಿಗಳು, ಸರ್ಕಾರಗಳು ರೈತರನ್ನು ಮರೆತರೆ ಮತ್ತೊಂದೆಡೆ ರೈತ ಮಕ್ಕಳನ್ನು ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುವ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿ ರೈತ ಮಕ್ಕಳನ್ನು ಮದುವೆಯಾದರೆ ಕನ್ಯಾ ಯೋಜನೆಯಲ್ಲಿ 5 ಲಕ್ಷರೂ ಗ್ಯಾರೆಂಟಿ ಭರವಸೆ ಇಲ್ಲವೇ ಸರ್ಕಾರಿ ಉದ್ಯೋಗದಲ್ಲಿ ಶೇ.25ರಷ್ಟು ಮೀಸಲಿಡುವ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಹದಗೆಟ್ಟಿರುವ ತಾಲೂಕು ಆಡಳಿತವನ್ನು ಸರಿಪಡಿಸಿ, ಹೆಜ್ಜೆಹೆಜ್ಜೆಗೂ ಗ್ರಾಮೀಣ ಪ್ರದೇಶದ ಬಡ ರೈತ ಕೂಲಿಕಾರ್ಮಿಕರನ್ನು ಶೋಷಣೆ ಮಾಡುವ ದಲ್ಲಾಳಿಗಳ ಹಾವಳಿಗೆ ಇಲಾಖೆಯಲ್ಲಿ ಕಡಿವಾಣ ಹಾಕಿ ಜನಪರ ಇಲಾಖೆಯನ್ನಾಗಿ ಮಾಡಬೇಕೆಂದು ಒತ್ತಾಯ ಮಾಡಿದರು.
ತಾಲೂಕಿನಾದ್ಯಂತ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ಗೋಮಾಳ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಪ್ರತಿ ಪಂಚಾಯಿತಿಗೆ ಒಂದು ಕನಿಷ್ಟ 200 ಎಕರೆ ಗೋಮಾಳ ಜಾನುವಾರುಗಳಿಗೆ ಮೀಸಲಿಡುವ ಜೊತೆಗೆ ಈಗಾಗಲೇ ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಒತ್ತುವರಿ ತೆರವುಗೊಳಿಸಿದ ಅರಣ್ಯ ಅಧಿಕಾರಿಗಳು ಸಣ್ಣಪುಟ್ಟ ರೈತರ ಮೇಲೆ ತಮ್ಮ ಪ್ರತಾಪವನ್ನು ತೋರಿಸಿ ಬಲಾಢ್ಯ ಶ್ರೀಮಂತ ರಾಜಕಾರಣಿಗಳ ಭೂ ಒತ್ತುವರಿಯನ್ನು ತೆರವುಗೊಳಿಸದೆ ರಕ್ಷಣೆ ಮಾಡಲು ಹೊರಟಿರುವ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಒತ್ತುವರಿ ಮುಂದುವರೆಸಲು ಒತ್ತಾಯ ಮಾಡಿದರು.
ಕಾರ್ಯಕ್ರಮದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್ ಅವರು, ಸಮಸ್ತ ರೈತ ಕೂಲಿಕಾರ್ಮಿಕರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ರೈತರ ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ದಲ್ಲಾಳಿಗಳ ನೆರವಿಲ್ಲದೆ ನಮ್ಮನ್ನು ಸಂಪರ್ಕ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದೆಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟಿ ಶಿವು, ಶೇಖ್ ಶಫಿಉಲ್ಲಾ, ದ್ಯಾವಂಡಹಳ್ಳಿ ರಾಜೇಂದ್ರಪ್ಪ, ಸಹದೇವಣ್ಣ, ಸುಪ್ರೀಂ ಚಲ ಮುಂತಾದವರಿದ್ದರು.
Month: January 2024
ಸರ್ಕಾರಗಳ ಸಾಲ ಮತ್ತು ಸಬ್ಸಿಡಿ ಯೋಜನೆಗಳು ಯಶಸ್ವಿಯಾಗಬೇಕಾದರೆ ಬ್ಯಾಂಕ್ ಗಳ ಸಂಪೂರ್ಣ ಸಹಕಾರ ಅಗತ್ಯ:ಜಿ.ಪಂ ಸಿಇಓ ಪದ್ಮ ಬಸವಂತಪ್ಪ
ಕೋಲಾರ, ಜ.1 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಲ ಮತ್ತು ಸಬ್ಸಿಡಿ ಯೋಜನೆಗಳು ಯಶಸ್ವಿಯಾಗಬೇಕಾದರೆ ಬ್ಯಾಂಕ್ ಗಳ ಸಂಪೂರ್ಣ ಸಹಕಾರ ಅಗತ್ಯ ಎಂದು ಜಿ.ಪಂ ಸಿಇಓ ಪದ್ಮ ಬಸವಂತಪ್ಪ ಹೇಳಿದರು.
ನಗರದ ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬ್ಯಾಂಕರ್ ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಲ ಮತ್ತು ಸಬ್ಸಿಡಿ ಯೋಜನೆಗಳು ಅಶಕ್ತರ ಪಾಲಿಗೆ ವರದಾನ. ಅಂತಹ ಮಹತ್ವದ ಯೋಜನೆಗಳಿಗೆ ಬ್ಯಾಂಕ್ ಗಳು ಪ್ರಥಮ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳು ರೈತರಿಗೆ ಕೃಷಿ ಸಾಲ ನೀಡಲು ಹಿಂಜರಿಯಬಾರದು. ಅತಿ ಹೆಚ್ಚು ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡುವ ಶಕ್ತಿ ಇರುವ ಕೃಷಿ ವಲಯವು ಅಭಿವೃದ್ದಿಯಾಗಬೇಕಾದರೆ ಬ್ಯಾಂಕರ್ ಗಳು ರೈತರಿಗೆ ಹೆಚ್ಚಿನ ಸಾಲ ನೀಡುವತ್ತ ಗಮನಹರಿಸಬೇಕು ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಧೀರ್.ಎಸ್. ಮಾತನಾಡಿ, ಕೃಷಿ, ಸಣ್ಣ, ಮಧ್ಯಮ ಕೈಗಾರಿಕೆ, ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಬ್ಯಾಂಕ್ ಗಳು ಮುಂದಾಗಬೇಕು ಎಂದು ಹೇಳಿದರು.
ಅರ್ಹ ವ್ಯಕ್ತಿಗಳಿಗೆ ತಡ ಮಾಡದೆ ಸಾಲ ನೀಡುವ ಮೂಲಕ ಬ್ಯಾಂಕ್ ಗಳು ವಿಶ್ವಾಸ ಉಳಿಸಿಕೊಳ್ಳಬೇಕು. ವಿನಾ ಕಾರಣ ಅಲೆದಾಡಿಸದೆ ಸಕಾಲದಲ್ಲಿ ಅರ್ಹರಿಗೆ ಸೌಲಭ್ಯ ನೀಡಬೇಕು ಎಂದರು.
ರಿಸರ್ವ್ ಬ್ಯಾಂಕ್ ಇಂಡಿಯಾ ಪ್ರಾದೇಶಿಕ ಅಧಿಕಾರಿ ವೆಂಕಟರಾಮಯ್ಯ ಮಾತನಾಡಿ, ಆರ್.ಬಿ.ಐ ಚಲಾವಣೆಗೆ ತಂದಿರುವ 10 ರೂ. ನಾಣ್ಯಗಳನ್ನು ಬ್ಯಾಂಕ್ ಗಳು ಹಾಗೂ ಸಾರ್ವಜನಿಕರು ಮುಕ್ತವಾಗಿ ಸ್ವೀಕರಿಸಿ, ಚಲಾವಣೆ ಮಾಡಬಹುದು.
ಕೆಲ ವದಂತಿಗಳಿಂದ ಸಾರ್ವಜನಿಕರು 10 ರೂ. ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದು, ಈ ಬಗ್ಗೆ ಬ್ಯಾಂಕ್ ಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಸಭೆಯಲ್ಲಿ ನಬಾರ್ಡ್ ಬ್ಯಾಂಕ್ ಅಧಿಕಾರಿ ಎಂ.ಜಿ ಮನೋಜ್ ಕುಮಾರ್, ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಅಶೋಕ್ ಕುಮಾರ್, ಯೂನಿಯನ್ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಗುಲ್ ಶಾನ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ, ಯೋಜನಾ ನಿರ್ದೇಶಕ ರವಿಚಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.
ಕರವೇ ಟಿ.ಎ.ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿ-ಮೇಡಿಹಾಳ ರಾಘವೇಂದ್ರ
ಕೋಲಾರ,ಜ.01: ಕನ್ನಡ ಪರ ಹೋರಾಟಗಾರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು ಮತ್ತು ಕಾರ್ಯಕರ್ತರ ಮನೆಗಳಿಗೆ ಪೆÇಲೀಸರು ತೆರಳಿ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕ.ರ.ವೇ ಜಿಲ್ಲಾ ಅಧ್ಯಕ್ಷ ಮೇಡಿಹಾಳ ರಾಘವೇಂದ್ರ ನೇತೃತ್ವದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ಬಳಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಕಳೆದ ತಿಂಗಳ ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸುವುದವರ ವಿರುದ್ದ ನಡೆಸಿದ ಪ್ರತಿಭಟನೆಯಲ್ಲಿ ಕ.ರ.ವೇ. ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣಗೌಡರನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದು, ತಕ್ಷಣ ಬೇಷರತ್ತಾಗಿ ಸರ್ಕಾರ ಕನ್ನಡ ಕನ್ನಡಕ್ಕೆ ಪರ ಹೋರಾಟಗಾರ ಹಾಗೂ ಕ.ರ.ವೇ.ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡರನ್ನು ಹಾಗೂ ಕಾರ್ಯಕರ್ತರನ್ನು ತಕ್ಷಣ ಬೇಷರತ್ತಾಗಿ ಸರ್ಕಾರದ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಸರ್ಕಾರದ ಆದೇಶದಂತೆ ಅಂಗಡಿ-ಮುಂಗಟ್ಟುಗಳ, ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ವ್ಯಾಪಾರ ಸಂಸ್ಥೆಗಳು, ಸಮಾಲೋಚನ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನೆ ಕೇಂದ್ರಗಳು ಹೋಟೆಲ್ಗಳು, ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ದೇವಾಲಯಗಳು, ಚರ್ಚುಗಳು, ಮಸೀದಿಗಳು ತಮ್ಮ ನಾಮ ಫಲಕಗಳಲ್ಲಿ ಹಾಗೂ ಜಾಹಿರಾತು ಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಭಾಷೆಯನ್ನು ಫೆಬ್ರವರಿ 28 ರ ಒಳಗೆ ಅಳವಡಿಸಿಕೊಳ್ಳಬೇಕು ಇಲ್ಲದಿದ್ದರೆ ಕ.ರ.ವೇ ಉಗ್ರ ಹೋರಾಟ ಮಾಡಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
ಈಗಾಗಲೇ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕನ್ನಡ ಭಾಷೆಯ ಅಳವಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ನಾಮ ಫಲಕಗಳಲ್ಲಿ 60 ರಷ್ಟು ಕನ್ನಡ ಭಾಷೆಯನ್ನು ಬಳಸಲು ಸೂಕ್ತ ಕ್ರಮ ಕೈ ಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕ.ರ.ವೇ ಜಿಲ್ಲಾ ಗೌರವ ಅಧ್ಯಕ್ಷ ಮುನಿರಾಜು, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ರೈತ ಘಟಕದ ಉಪಾಧ್ಯಕ್ಷ ಶಂಕರರೆಡ್ಡಿ,ವಿದ್ಯಾರ್ಥಿ ಘಟಕದ ಯಶ್ವಂತ್, ಚಂದನ್, ಶ್ರೀಕಾಂತ್, ಗುರುಕಿರಣ್, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
ಶೌಚಾಲಯ ನಿರ್ಮಿಸಿ ಇಲ್ಲವೇ ನಿರ್ಮಿಸಲು ಅವಕಾಶ ಕೊಡಿ: ಕನ್ನಡ ಸೇನೆ ಒತ್ತಾಯ
ಕೋಲಾರ,ಜ.01: ನಗರದ ಕೋಲಾರಮ್ಮ ದೇವಾಲಯ ಹಾಗೂ ಸೋಮೇಶ್ವರ ದೇವಾಲಯಗಳಿಗೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಶೌಚಾಲಯ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದ್ದು, ಕೊಡಲೇ ಎರಡು ದೇವಾಲಯಗಳಲ್ಲಿ ಸುಸಜ್ಜಿತವಾದ ಶೌಚಾಲಯ ನಿರ್ಮಾಣ ಮಾಡುವಂತೆ ಕನ್ನಡ ಸೇನೆ ಮುಖಂಡರು ಜಿಲ್ಲಾಧಿಕಾರಿ ಆಕ್ರಂಪಾಷ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ, ಕೋಲಾರ ನಗರದ ಅಧಿದೇವತೆ ಕೋಲಾರಮ್ಮ ದೇವಾಲಯ ಹಾಗೂ ಶಿಲ್ಪಕಲೆಯ ಸೊಬಗನ್ನು ಹೊಂದಿರುವ ಸೋಮೇಶ್ವರ ದೇವಾಲಯವನ್ನು ವೀಕ್ಷಿಸಲು ಪ್ರತಿನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಕೋಲಾರ ಜಿಲ್ಲೆ ಅಲ್ಲದೇ ನೆರೆಯ ಆಂಧ್ರ ಹಾಗೂ ತಮಿಳುನಾಡಿನಿಂದ ಸಹ ಸಾಕಷ್ಟು ಜನರು ಕೋಲಾರಮ್ಮ ತಾಯಿಯ ದರ್ಶನ ಪಡೆಯಲು ಆಗಮಿಸುತ್ತಾರೆ. ಇನ್ನೂ ತನ್ನ ವಾಸ್ತುಶಿಲ್ಪ ಕಲೆಯಿಂದ ಪ್ರವಾಸಿಗರನ್ನು ಸೆಳೆಯುವ ಸೋಮೇಶ್ವರ ದೇವಾಲಯ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಾರೆ, ಆದರೆ ಈ ಎರಡು ದೇವಾಲಯಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ದೇವಾಲಯಕ್ಕೆ ಬರುವ ಸಾರ್ವಜನಿಕರು ಪ್ರಮುಖವಾಗಿ ಮಹಿಳೆಯರು ತ್ರೀವ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬೇಸರಿಸಿದರು.
ಈ ಎರಡು ದೇವಾಲಯಗಳು ಮುಜರಾಯಿ ಇಲಾಖೆಗೆ ಒಳ್ಳಪಟ್ಟಿದ್ದು ದೇವಾಲಯಗಳಿಂದ ಉತ್ತಮ ಆದಾಯ ಕೊಡ ಮುಜರಾಯಿ ಇಲಾಖೆಗೆ ಬರುತ್ತಿದೆ, ಇನ್ನೂ ಹಬ್ಬಹರಿದಿನಗಳು, ನವರಾತ್ರಿ, ಕೋಲಾರಮ್ಮ ದೇವಿಯ ಜನ್ಮದಿನ, ಮಹಾಶಿವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ಕೋಲಾರಮ್ಮ ಮತ್ತು ಸೋಮೇಶ್ವರ ದೇವಾಲಯಗಳಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ, ಇಂತಹ ಸಂದರ್ಭಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೇ ಜನರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ. ಇದರಿಂದಾಗಿ ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆಯನ್ನು ಜನರು ದೂರವಂತಾಗಿದೆ. ಶೌಚಾಲಯ ನಿರ್ಮಾಣ ಮಾಡಲು ದೇವಾಲಯದಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದು ಕೊಡಲೇ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಶೌಚಾಲಯ ನಿರ್ಮಾಣ ಮಾಡಲು ಅನುಮತಿ ನೀಡಿದರೆ ನಮ್ಮ ಕನ್ನಡ ಸೇನೆವತಿಯಿಂದ ಎರಡು ದೇವಾಲಯಗಳಲ್ಲಿ ಸುಸಜ್ಜಿತವಾದ ಶೌಚಾಲಯ ನಿರ್ಮಾಣ ಮಾಡುತ್ತೇವೆ ಎಂದು ಕನ್ನಡ ಸೇನೆ ಮುಖಂಡರು ಜಿಲ್ಲಾಧಿಕಾರಿ ಆಕ್ರಂಪಾಷ ಅವರನ್ನು ಒತ್ತಾಯಿಸಿದ್ದಾರೆ.
ಈ ವೇಳೆ ಕನ್ನಡ ಸೇನೆ ವೆಂಕಟಪ್ಪ, ಗೌರವ ಆಧ್ಯಕ್ಷ ವೆಂಕಟಕೃಷ್ಣಪ್ಪ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ರಾಜ್ಯಧ್ಯಕ್ಷ ಕೆ.ಸಿ ಸಂತೋಷ, ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಅಧ್ಯಕ್ಷ ಟಮಕ ಶ್ರೀನಾಥ್, ಕನ್ನಡ ಸೇನೆ ನಗರಾಧ್ಯಕ್ಷ ನಾಗೇಶ್, ಕನ್ನಡ ಸೇನೆ ನಗರ ಸಂಚಾಲಕ ನವೀನ ಉಪಸ್ಥಿತರಿದ್ದರು.
ಕುಂದಾಪುರ ಸಂತ ಜೋಸೆಫ್ ವಿದ್ಯಾರ್ಥಿ ನಿಲಯದ ಶಾಲಾ ಮಕ್ಕಳೊಂದಿಗೆ ಹೊಸವರ್ಷಾಚರಣೆ
ಕುಂದಾಪುರ, ಜ.2: ಸ್ಥಳೀಯ ಸಂತ ಜೋಸೆಫ್ ವಸತಿ ಶಾಲಾ ಮಕ್ಕಳೊಂದಿಗೆ ಹೊಸವರ್ಷಾಚರಣೆಯನ್ನು ಕುಂದಾಪುರದ ಐವನ್ ಆಲ್ಮೇಡ ಕುಟುಂಬದ ವತಿಯಿಂದ 2024, ಜನವರಿ 1 ರಂದು ಸಂಜೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿದ್ದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ನಮಗೆ ನಿಮ್ಮ ಜೊತೆ ಹೊಸವರ್ಷಾಚರಣೆಯನ್ನು ಆಚರಿಸಲು ತುಂಬಾ ಸಂತೋಷವಾಗುತ್ತದೆ. ನೀವು ಕರ್ನಾಟಕದ ಎಲ್ಲಾ ಭಾಗಗಳಿಂದ ಬಂದು ಇಲ್ಲಿ ನೆಲಸಿ ಎಲ್ಲರೂ ಒಟ್ಟಾಗಿ ಪ್ರೀತಿ ಪ್ರೇಮದಿಂದ ಬಾಳುತಿದ್ದಿರಿ. ಇಲ್ಲಿ ನಿಮಗೆ ಉತ್ತಮ ಶಿಕ್ಷಣ ದೊರೆಯುತ್ತದೆ. ಈ ವಸತಿಶಾಲೆಯಲ್ಲಿ ಎಲ್ಲಾ ಕಡೆಗಳಿಂದಲೂ ಬಂದ ಹೆಣ್ಣು ಮಕ್ಕಳು, ಚೆನ್ನಾಗಿ ಕಲಿತು ನೆಮ್ಮದಿಯ ಜೀವನ ನಡೆಸುತ್ತಾರೆ, ನೀವು ಕೂಡ ವಸತಿ ಶಾಲೆಯ ಮಕ್ಕಳು ಚೆನ್ನಾಗಿ ಕಲಿತು ಶಾಲೆಗೆ ಕೀರ್ತಿ ತರಬೇಕು, ನಿಮಗೆ ಉರಿನಲ್ಲೊಂದು ತಾಯಿ ಇದ್ದರೆ, ಇಲ್ಲಿ ನಿಮ್ಮನ್ನು ನೋಡಿಕೊಳ್ಳುವ ಭಗಿನಿ ನಿಮ್ಮನ್ನು ಎರಡೆನೇ ತಾಯಿಯಾಗಿ ಅದೇ ಥರಹ ನೋಡಿಕೊಳ್ಳುತ್ತಾರೆ” ಎಂದು ಮೆಚ್ಚುಗೆಯ ನುಡಿಗಳನ್ನಾಡಿ ಹೊಸವರ್ಷದ ಶುಭಾಶಯಗಳನು ಕೋರಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ ಮಾತನಾಡುತ್ತಾ ‘ಈ ವಸತಿಶಾಲೆಯಲ್ಲಿದ್ದು ಕಲಿಯುವ ಹೆಣ್ಣುಮಕ್ಕಳು ಹೆಚ್ಚಾಗಿ ಬಡವರು. ಅವರಿಗೆ ಸಂತ ಜೋಸೆಫ್ ಶಾಲೆಯಲ್ಲಿ ಕಲಿಯುವ ಉತ್ತಮ ಅವಕಾಶ ಲಭಿಸಿದೆ. ಯೇಸು ಕ್ರಿಸ್ತರ ಸಾಕು ತಂದೆ ಸಂತ ಜೋಸೆಫರು ನಿಜವಾಗಿಯೂ ಕೂಲಿನ ಮನೆತವವರಲ್ಲಾ, ಅವರು ರಾಜಾ ದಾವಿದನ ಮನೆತನದವರು, ದೇವರು ದಾವಿದ ರಾಜಾನಿಗೆ ವಾಗ್ದಾನ ನೀಡಿದ್ದನು, ನಿನ್ನ ಕುಲದಲ್ಲಿ ದೇವರ ಮಗ ಹುಟ್ಟುತ್ತಾನೆಂದು, ಹಾಗೇಯೆ ಮುಂದೆ ಯೇಸುಕ್ರಿಸ್ತನೂ ಪವಿತ್ರ ಆತ್ಮನ ಶಕ್ತಿಯ ಮುಖಾಂತರ ಮೇರಿ ಮಾತೆಯ ಗರ್ಭದೊಳಗೆ ಹುಟ್ಟುತ್ತಾನೆ, ಆದರೆ ಅವನು ಹುಟ್ಟಿದ್ದು ಬಡವನಾಗಿ ಆನಾಥರಂತೆ. ಯಾಕೆಂದರೆ ಯೇಸು ಕ್ರಿಸ್ತರಿಗೆ ಬಡವರೆಂದರೆ ಪ್ರೀತಿ, ಸಂತ ಜೋಸೆಫ್ ದಾವಿದ ಅರಸನ ವಂಶಸ್ಥನಾಗಿದ್ದರೂ, ಕೊನೆಗೆ ಆ ವಂಶಸ್ಥನಾದರು ಬಡವಾರಾದರೂ, ಅಂದರೆ ಈ ಪ್ರಪಂಪಚದ ಶ್ರೀಮಂತಿಕೆ ಅಧಿಕಾರ ಎಂದೂ ಶಾಸ್ವತವಲ್ಲಾ ಎಂದು ತಿಳಿದುಕೊಳ್ಳಬೇಕು. ಎಲ್ಲವೂ ಬುಡ, ಮೇಲೆ ಕೆಳಗೆ ಆಗುತ್ತೆ, ಆದರೆ ನಮ್ಮ ದಾನ ಧರ್ಮ, ನ್ಯಾಯ ನೀತಿ, ಇಲ್ಲದವರಲ್ಲಿ ಹಂಚಿಕೊಳ್ಳುವ ಗುಣ ಮಾತ್ರ ಮುಕ್ತಿಯ ಮಾರ್ಗಕ್ಕೆ ಕೊಡಯ್ಯುವುದಲ್ಲದೆ, ಅದುವೇ ಶಾಸ್ವತ ಎಂಬುದನ್ನು ಅರಿತು, ಮುಂದೆ ನೀವು ಕೂಡ ದಾನ ಧರ್ಮಿಗಳಾಬೇಕು’ ಎಂದು ತಿಳಿಸಿದರು. ಮತ್ತೊರ್ವ ಅತಿಥಿ ಕುಂದಾಪುರ ಫೆಡರಲ್ ಬ್ಯಾಂಕಿನ ಸೀನಿಯರ್ ವ್ಯವಸ್ಥಾಪಕರಾದ ಅನೀಷ್ ಕುಮಾರ್ ಮಾತಾನಾಡಿ ಮಕ್ಕಳಿಗೆ ತಿಳಿವಳಿಕೆಯನ್ನು ನೀಡಿದರು.
ವಸತಿಶಾಲೆಯ ಮಕ್ಕಳ ಜೊತೆ ಹೊಸವರ್ಷಾಚರಣೆಯನ್ನು ನಡೆಸಿಕೊಡುತ್ತೀರುವ ದಾನಿ ಪೆÇೀಷಕರರಾದ ಐವನ್ ಆಲ್ಮೇಡಾ ಮಾತನಾಡಿ ‘ನನಗೆವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನ ಮಾಡಲು ತುಂಬ ಸಂತೋಷ. ಇಲ್ಲದವರ ಜೊತೆ ನಾವು ಹಂಚಿಕೊಳ್ಳಬೇಕು. ಬಡ ಮಕ್ಕಳು ತಮ್ಮ ತಂದೆ ತಾಯಿಗಳಲ್ಲಿ ಮಿತಿ ಮೀರಿದ ವಸ್ತುಗಳಿಗಾಗಿ ಒತ್ತಾಯ ಮಾಡಬಾರದು, ಅದು ಅನರ್ಥಗಳಿಗೆ ಕಾರಣಾವಾಗ ಬಹುದು, ಅದಕ್ಕೆ ನಾವೇ ಉತ್ತಮವಾಗಿ ಕಲಿತು, ಅಭಿವ್ರದ್ದಿ ಹೊಂದಿ, ಮುಂದೆ ಅವಗಳನ್ನು ನಿವೇ ಪಡೆದುಕೊಳ್ಳುವ ಕ್ಷಮತೆ ಬೆಳಸಿಕೊಳ್ಳಬೇಕು. ಹಾಗೇ ಜೀವನದಲ್ಲಿ ಒರ್ವ ವಿದ್ಯಾರ್ಥಿಯ ಶಿಕ್ಷಣಕ್ಕಾಗಿಯಾದರೂ, ಸಹಾಯಧನ ನೀಡಲು ನೀವು ಪಣತೊಡಗಬೇಕು’ ಎಂದು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಅಧ್ಯಕ್ಷತೆಯನ್ನು ವಹಿಸಿ ನಮ್ಮ ಸಂತ ಜೋಸೆಫ್ ವಸತಿಶಾಲೆಯ ಮಕ್ಕಳ ಮೇಲೆ ಪ್ರೀತಿ ಇಟ್ಟು ಕಾರ್ಯಕ್ರಮ ನಡೆಸಿಕೊಟ್ಟದಕ್ಕೆ, ತುಂಬು ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಿಕೆಯಲ್ಲಿ ಮುಂದಿದ್ದ ವಸತಿ ಶಾಲೆಯ ಹಲವು ವಿದ್ಯಾರ್ಥಿಗಳಿಗೆ ಐವನ್ ಆಲ್ಮೇಡಾ ಮತ್ತು ಕುಟುಂಬದವರು ನಗದು ಬಹುಮಾನವನ್ನು ವಿತರಿಸಿದರು. ಕಿರು ಆಟಗಳನ್ನು ನಡೆಸಲಾಯಿತು. ಮಕ್ಕಳು ವಿವಿಧ ನ್ರತ್ಯ ಹಾಡುಗಳ ಮೂಲಕ ರಂಜಿಸಿದರು. ಕ್ರಿಸ್ಮಸ್ ಕೇಕ್ ಮತ್ತು ಉಟೋಪಚಾರದಿಂದ ಸಂತೋಷಪಡಿಸಲಾಯಿತು.
ಕಾರ್ಯಕ್ರದಲ್ಲಿ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಕೊಂಕಣಿ ಸಾಹಿತಿ ಕ್ಲೆರನ್ಸ್ ಫೆರ್ನಾಂಡಿಸ್ ಕಾರ್ಯಕ್ರಮದ ಪೆÇೀಷಕಿ ಜಾನೆಟ್ ಆಲ್ಮೇಡಾ, ಕಿಯೋನಾ ಪರ್ಲ್ ಆಲ್ಮೇಡಾ, ಕಾನ್ವೆಂಟಿನ ಎಲ್ಲಾ ಧರ್ಮಭಗಿನಿಯರು ಉಪಸ್ಥಿತರಿದ್ದರು.ವಸತಿ ನಿಲಯದ ಮುಖ್ಯಸ್ಥೆ ಸಿಸ್ಟರ್ ಆಶಾ ಸ್ವಾಗತಿಸಿ, ಭೋಜನದ ಮೇಲೆ ಆಶಿರ್ವಾದವನ್ನು ಬೇಡಿದರು. ವಿಲ್ಸನ್ ಡಿಆಲ್ಮೇಡಾ ಕಾರ್ಯಕ್ರಮವನ್ನು ನಿರೂಪಿಸಿದರು.ವಸತಿ ನಿಲಯದ ವಿದ್ಯಾರ್ಥಿನಿ ವಂದಿಸಿದಳು.
New Year’s Eve observed at Milagres Cathedral, Kallianpur
Udupi : The Solemnity of Mother, the Holy Mother of God and vigil of New Year’s eve was celebrated with devotion and vigor at Milagres Cathedral, Kallianpur in Diocese of Udupi here on December 31, 2023.
The beautiful evening liturgy began with adoration of the Holy Sacrament from 7pm led by Rev Fr. Joy Andrade, assistant parish of the Milagres Cathedral along with beautiful hymns sung by choir members composed and directed by Very Rev Fr. Valerian Mendonca.
Bishop of Udupi Diocese Most Rev Dr. Gerald Isaac Lobo concelebrated the Solemn High Mass along with Very Rev Fr. Valerian Mendonca, Rector, Rev Fr. Joy Andrade assistant parish priest, Rev Fr. Hector D’Souza SJ guest priest, Rev Fr. Nithesh D’Souza Vocational Director of Pilar Fathers, Kallianpur and Rev Fr. Ronson D’Souza parishioner and Manager of Holy Cross Fathers, Katapady.
In his beautiful homily, Bishop Gerald Isaac Lobo Mother Mary washed the water from the faces of those who are in difficulties. Mother Mary is the mother of God in heaven with her children. She is beside us always. All the world calls Mary the Mother of us and God. Mother Mary is God’s gift to us.
Mother Mary accepted the word of God. She conceived Jesus by the work of the Holy Spirit and every Christian, each one of us, is called to accept the Word of God, to accept Jesus inside of us and then to bring him to everyone. Mary, trusted in God’s promises, was obedient to God’s word of invitation in her life, surrendered to the mystery before her, and committed herself to be part of God’s plan of salvation of Jesus. Mary said, My soul glorifies the Lord.
Mary was favoured by God for the important task of giving birth to, loving, and nurturing Jesus and along with her husband, Jospeh, Mary allowed Jesus to increase in wisdom, in stature and in favor with God and other people. Mary is the model of perfect love and obedience to Christ.
Mary’s obedience became a blessing for humanity. By miracle, the Son of God entered into history and space and took on humanity.
Mother Mary is the real Mother of us and Son of God. Mother Mary is the role model of every mothers. It is a reminder of the role she played in the salvation of humankind. Mary being chosen by God, the Father, to bring Jesus Christ into this world, and her willingness to do so is great cause for celebration.
At the end of the mass, Rector Very Rev Fr. Valerian Mendonca conveyed wishes on the occasion of New Year 2024 and conveyed gratitude for the Bishop, priests and all concerned faithful on the celebration of New Year’s Eve. Bishop distributed decorated candles to the main sponsor and other co-sponsors of the celebration.
Followed by Bishop Gerald Isaac Lobo conveyed the message and wishes to parishioners and non -resident parishioners on the occasion of the celebrations.
After the mass, prizes were distributed to winners of greeting card competition organized by YCS members and crib along with star competition held by ICYM members. The prizes also were distributed to the winners of a bible quiz organized by the editorial of Milarchi Laram. Housie game was also conducted by the YCS and ICYM members.
Earlier, the New Year celebrations were released by torch balloon to the air by the Bishop and the Rector which were organized by the ICYM members. Very large crowd of faithful gathered in the Cathedral for observing the New Year’s Eve with thanksgiving mass. After the mass, the faithful conveyed new year’s greetings with each other.
ಶ್ರದ್ಧೆಯಿಂದ ಶಿಕ್ಷಕರು ಭೋದಿಸುವಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ – ಜಿಲ್ಲಾರಕ್ಷಣಾಧಿಕಾರಿ ಎಂ.ನಾರಾಯಣ್ ವಿದ್ಯಾರ್ಥಿಗಳಿಗೆ ಸಲಹೆ
ಶ್ರೀನಿವಾಸಪುರ 1 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವುದು ಕಷ್ಟ . ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಭೋದಿಸುವಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದು ಜಿಲ್ಲಾರಕ್ಷಣಾಧಿಕಾರಿ ಎಂ.ನಾರಾಯಣ್ ಸಲಹೆ ನೀಡಿದರು.
ತಾಲೂಕಿನ ರೋಣೂರು ಕ್ರಾಸ್ ಬಳಿಯ ವಿಐಪಿ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಶಾಲಾಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮುಖ್ಯವಾಗಿ ಮಕ್ಕಳ ತಂದೆತಾಯಿಂದಿರು 10 ನೇ ತರಗತಿ ಹಾಗು ಪಿಯುಸಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್ಗಳನ್ನು ತಗೆಸಿಕೊಡಬೇಡಿ ಎಂದು ಕಿವಿಮಾತು ಹೇಳಿದರು. ತಮ್ಮ ಮಕ್ಕಳೊಂದಿಗೆ ತಂದೆತಾಯಿಂದರು ಮಕ್ಕಳೊಂದಿಗೆ ಕ್ಷೇಮ ಸಮಾಚಾರಗಳನ್ನು ಹಾಗು ಇತರೆ ಮಾತುನಾಡಿ , ಮಕ್ಕಳಿಗೆ ಕೇವಲ ಅಂಕಗಳನ್ನೇ ಮಾನದಂಡ ಮಾಡಬಾರದು . ಮಕ್ಕಳಿಗೆ ಓದುವುದರ ಜೊತೆಗೆ ಮೌಲ್ಯಗಳನ್ನು ಕಲಿಸಿಕೊಡಿ ಎಂದು ಸಲಹೆ ನೀಡಿದರು.
ಶ್ರೀನಿವಾಸಪುರ ಹೆಸರನ್ನ ಪ್ರಂಪಚನಾದ್ಯಾಂತ ವಿವಿಧ ಕ್ಷೇತ್ರಗಳಲ್ಲಿ ಪಸರಿಸಲು ಎಲ್ಲಾ ವಿದ್ಯಾರ್ಥಿಗಳು ಶ್ರಮವಹಿಸಿ ಓದಿ ಗುರಿಯನ್ನು ಮುಟ್ಟುವಂತೆ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಕೈಗೊಂಡು, ಪೋಷಕರ ಹಾಗು ಶಾಲೆಯ ಹೆಸರು ಮುನ್ನೆಲೆಗೆ ತರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ಶಾಲೆ ಹೆಸರನ್ನು ರಾಜ್ಯಮಟ್ಟದಲ್ಲಿ ಹೆಸರು ತರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ವಿದ್ಯಾಸಂಸ್ಥೆ ತಮ್ಮ ಮಕ್ಕಳ ಗುರಿಯ ಸಾಧನೆಗೆ ಶಾಲೆಯ ಶಿಕ್ಷಕರು, ಶಾಲಾ ಆಡಳಿತ ಮಂಡಲಿ, ಪೋಷಕರು ಹಗಲಿರಲು ದುಡಿಯುತ್ತಾರೆ ಈ ಒಂದು ದೃಷ್ಟಿಯಲ್ಲಿ ವಿದ್ಯಾರ್ಥಿಗಳು ಪೋಷಕರ, ಶಿಕ್ಷಕರ ಕನಸನ್ನು ನನಸು ಮಾಡಲು ಶ್ರದ್ಧಾಭಕ್ತಿಯಿಂದ ಓದಬೇಕು.
ಆಡಳಿತ ಮಂಡಲಿ ಅಧ್ಯಕ್ಷ ಡಾ|| ಕೆ.ಎನ್.ವೇಣುಗೋಪಾಲ್ ಮಾತನಾಡಿ ವಿದ್ಯಾರ್ಥಿಗಳು ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಕನಸುಗಳನ್ನು ಕಟ್ಟಿಕೊಂಡು ಶಿಕ್ಷಣ ಕೊಡಿಸುವ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು . ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ರಾಜೀವ್ಗಾಂದಿ ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ|| ಎಂ.ಆರ್.ರವಿಕುಮಾರ್, ಡಾ|| ವೆಂಕಟಗಿರಿ , ಕಾರ್ಯದರ್ಶಿ ಡಾ|| ಕವಿತಾ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಆಹಾರ ಇಲಾಖೆ ಜಿಲ್ಲಾ ನಿವೃತ್ತ ಉಪನಿರ್ದೇಶಕ ನಾರಾಯಣಪ್ಪ , ಎಲ್ಐಸಿ ಡೆವಲಪ್ಮೆಂಟ್ ಅಧಿಕಾರಿ ರವೀಂದ್ರಯ್ಯ ಕುಲಕರ್ಣಿ, ಪ್ರಾಂಶುಪಾಲೆ ಅಸ್ಮತಬುಸಮ್ ಹಾಗು ಶಿಕ್ಷಕ ಸಿಬ್ಬಂದಿ ವರ್ಗದವರು ಇದ್ದರು.
ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ
ಶ್ರೀನಿವಾಸಪುರ: ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್ ಅವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರಿದ್ದಾರೆ. ಹಿಂದಿನ ಸರ್ಕಾರದಲ್ಲಿ ಶೇ.17 ರಷ್ಟು ಮಧ್ಯಂತರ ಪರಿಹಾರ ಪಡೆದುಕೊಳ್ಳುವಲ್ಲಿ ಸಂಘ ಯಶಸ್ವಿಯಾಯಿತು. ಈಗ ಎನ್ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೆ ಸತತ ಪ್ರಯತ್ನ ನಡೆಸಲಾಗುತ್ತಿದೆ. ಆ ಬಗ್ಗೆ ಚರ್ಚಿಸಲು ಜ.6 ರಂದು ಮಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಚರ್ಚೆ ಬಳಿಕ ಮುಂದಿನ ನಿರ್ದಾರ ತೆಗೆದುಕೊಳ್ಳಲಾಗುವುದು. ಸಂಘದ ನಿರ್ದಾರಕ್ಕೆ ಎಲ್ಲ ಸರ್ಕಾರಿ ನೌಕರರು ಬದ್ಧರಾಗಿರಬೇಕು ಎಂದು ಹೇಳಿದರು.
ಬಂಗವಾದಿ ನಾಗರಾಜ್ ಮಾತನಾಡಿ, ಸಂಘದ ಇತರ ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಹಕಾರದಿಂದಾಗಿ ಯಾವುದೇ ಅಡ್ಡಿಯಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಮುಂದೆ ಯಾರೇ ಬಂದರೂ ಸರ್ಕಾರಿ ನೌಕರರ ಹಿತರಕ್ಷಣೆಗಾಗಿ ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತರಾದ ಮುಖ್ಯ ಶಿಕ್ಷಕ ಬಂಗವಾದಿ ನಾಗರಾಜ್ ದಂಪತಿಯನ್ನು ಸನ್ಮಾನಿಸಲಾಯಿತು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರನ್ನಾಗಿ ಕಂದಾಯ ನಿರೀಕ್ಷಕ ಎಸ್.ವಿ.ಜನಾರ್ಧನ್ ಅವರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಹಿರಿಯ ಉಪಾಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ನಾಗಭೂಷಣ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಅಶೋಕರೆಡ್ಡಿ, ನಟರಾಜ್, ಶ್ರೀನಿವಾಸಗೌಡ, ಶ್ರೀನಿವಾಸ್, ಅಪ್ಪೂರು ಮಂಜು, ಅಶೋಕ್, ವೇಣುಗೋಪಾಲ್, ನಾರಾಯಣರೆಡ್ಡಿ, ವಿ ತಿಪ್ಪಣ್ಣ, ಮುಖಂಡ ಕೆ.ಕೆ.ಮಂಜು ಇದ್ದರು.
ಮಂಗಳೂರಿನ ಅವರ್ ಲೇಡಿ ಆಫ್ ಮಿಲಾಗ್ರೆಸ್ ಚರ್ಚಿನಲ್ಲಿ ಹೊಸ ವರ್ಷಾಚರಣೆ ಮತ್ತು ಉಪಕಾರ ಸ್ಮರಣೆಯ ಆರಾಧನೆ / New Year Celebration and Remembrance Worship at Our Lady of Miracles Church, Mangalore
ಹೊಸ ವರ್ಷದ 2024 ರ ಸಂತೋಷದ ಪ್ರಾರಂಭದಲ್ಲಿ, ಮಂಗಳೂರಿನ ಅವರ್ ಲೇಡಿ ಆಫ್ ಮಿಲಾಗ್ರೆಸ್ ಚರ್ಚ್ ರೆವ. ಫಾ. ರಾಬಿನ್ ಅವರ ನೇತೃತ್ವದಲ್ಲಿ ಥ್ಯಾಂಕ್ಸ್ಗಿವಿಂಗ್ ಆರಾಧನೆಯ ಮೂಲಕ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ದೇವಮಾತೆ ಮೇರಿ ಅವರ ಶ್ರದ್ಧಾಭಕ್ತಿಯು ಪವಿತ್ರ ಯೂಕರಿಸ್ಟ್ನ ನೇತೃತ್ವವನ್ನು ರೆ.ಫಾ. ಉದಯ್ ಫೆರ್ನಾಂಡಿಸ್ ಅವರು ಶ್ರದ್ಧೆಯಿಂದ ಆಚರಿಸಿದರು.ದೇವರ ಮಾತುಗಳನ್ನು ರೆವ. ಫ್ರಾ ಮ್ಯಾಕ್ಸಿಮ್ ಹಂಚಿಕೊಂಡರು. ರೆ.ಫಾ.ಬೋನವೆಂಚರ್, ರೆ.ಫಾ.ಮೈಕಲ್, ರೆ.ಫಾ.ರಾಬಿನ್, ಮತ್ತು ರೆ.ಫಾ.ಸಿರಿಲ್ ಅವರು ಯೂಕರಿಸ್ಟ್ ಅನ್ನು ಕೇಂದ್ರೀಕರಿಸಿದರು. ಅವರ್ ಲೇಡಿ ಆಫ್ ಮಿಲಾಗ್ರೆಸ್ ಚರ್ಚ್ನಲ್ಲಿ ನೆರೆದಿದ್ದ ನಿಷ್ಠಾವಂತರು ಸಮುದಾಯದೊಳಗೆ ಏಕತೆ ಮತ್ತು ಭಕ್ತಿಯ ಭಾವವನ್ನು ಬೆಳೆಸುವ ಮೂಲಕ ವರ್ಷಕ್ಕೆ ಆಧ್ಯಾತ್ಮಿಕವಾಗಿ ಉನ್ನತಿಗೇರಿಸುವ ಆರಂಭವನ್ನು ನೀಡಲಾಯಿತು.
New Year Celebration and Remembrance Worship at Our Lady of Miracles Church, Mangalore
In a joyous commencement of the New Year 2024, Our Lady of Milagres Church in Mangalore radiated warmth and gratitude through a Thanksgiving Adoration, led by Rev. Fr Robin.
The solemnity of Mary the Mother of God, was fervently celebrated by Rev. Fr Uday Fernandes presiding over the Holy Eucharist.
The words of God were shared by Rev. Fr Maxim. Rev. Fr Bonaventure, Rev. Fr Michael, Rev. Fr Robin, and Rev. Fr Cyril concentrated the Eucharist.
The faithful gathered at Our Lady of Milagres Church were treated to a spiritually uplifting start to the year, fostering a sense of unity and devotion within the community.