ಶ್ರೀನಿವಾಸಪುರ: ಶ್ರೀನಿವಾಸಪುರ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ವೈ.ಆರ್.ನಾಗೇಂದ್ರಬಾಬು ರವರನ್ನ ಭಾನುವಾರ ದಾವಣಗರೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಾಸವಿಕನ್ಯಕಾಪರಮೇಶ್ವರಿ ದೇವಾಲಯಗಳ ಒಕ್ಕೂಟ ಪ್ರಥಮ ಸಮಾವೇಶದಲ್ಲಿ ಮೆಡಲ್ ನೀಡುವುದರ ಮೂಲಕ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಾಸವಿಕನ್ಯಕಾಪರಮೇಶ್ವರಿ ದೇವಾಲಯದ ಒಕ್ಕೂಟದ ಅಧ್ಯಕ್ಷ ಪ್ರಭಾಕರ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಎಸ್.ಆರ್. ಅಮರನಾಥ್, ಶ್ರೀನಿವಾಸಪುರ ಆರ್ಯವೈಶ್ಯ ಸಂಘದ ಸದಸ್ಯ ಎಸ್.ವಿ.ರಾಮನಾಥ್ ಇದ್ದರು
Month: January 2024
ಮಾಲೂರು ಶಾಸಕ ಕೆ.ವೈ.ನಂಜೇಗೌಡರಿಗೆ ಇಡಿ ಶಾಕ್ ಮನೆ, ಕ್ರಷರ್, ಆಪ್ತರ ಮನೆಗಳ ಮೇಲೆ ದಾಳಿ ಶೋಧ
ಟೇಕಲ್ ಜ 8 : ಮಾಲೂರು ತಾಲ್ಲೂಕಿನ ಶಾಸಕರು ಹಾಗೂ ಕೋಚಿಮುಲ್ ಅಧ್ಯಕ್ಷರಾದ ಕೆ.ವೈ.ನಂಜೇಗೌಡರಿಗೆ ಸೋಮವಾರ ಅವರ ಮನೆ, ಜೆಲ್ಲಿ ಕ್ರಷರ್ ಹಾಗೂ ಆಪ್ತರ ಮನೆಗಳ ಮೇಲೆ ಮುಂಜಾನೆಯಿಂದಲೇ ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅವರ ಸ್ವಗ್ರಾಮ ಟೇಕಲ್ನ ಕೊಮ್ಮನಹಳ್ಳಿಯ ಮನೆಗೆ ಮುಂಜಾನೆ 5-30 ಗಂಟೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಶಾಸಕರು ಕಣ್ಣು ಬಿಡುವ ಹೊತ್ತಿಗೆ ಇಡಿ ಅಧಿಕಾರಿಯು ಮನೆಯೊಳಗೆ ಪ್ರವೇಶಿಸಿ ಅವರ ಬಳಿ ಎಲ್ಲಾ ಮಾಹಿತಿಯನ್ನು ಪಡೆದಿದ್ದಾರೆ. ಕೆಲವು ಮೂಲ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಪತ್ನಿ ರತ್ನಮ್ಮನಂಜೇಗೌಡರು ಕುಟುಂಬದ ಇತರೆ ಸದಸ್ಯರನ್ನು ವಿಚಾರಣೆ ನಡೆಸಲಾಗಿದೆ. ಮನೆಯ ಪ್ರತಿ ರೂಮ್ನಲ್ಲಿ ಇಡಿ ಅಧಿಕಾರಿಗಳು ಇಂಚು ಇಂಚು ಶೋಧ ಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ಕಾರ್ಯದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದು.
ಕ್ರಷರ್ ಪರಿಶೀಲನೆ : ನಂತರ ಶಾಸಕರ ಮಗ ಕೆ.ಎನ್.ಹರೀಶ್ರವರ ಒಡೆತನದ ಶ್ರೀ ನಂಜುಂಡೇಶ್ವರ ಸ್ಟೋನ್ ಕ್ರಷರ್ ಬಳಿ ಸುಮಾರು ಆರು ಮಂದಿ ಅಧಿಕಾರಿಗಳು ತೆರಳಿ ವಿವಿಧ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಹರೀಶ್ನನ್ನು ಮನೆಯಿಂದ ಕ್ರಷರ್ಗೆ ಕರೆತಂದು ನಂತರ ಕ್ರಷರ್ಗೆ ಕರೆದೊಯ್ದು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಆಪ್ತ ಕಾರ್ಯದರ್ಶಿ ಮನೆ ಮೇಲೆ ದಾಳಿ : ಟೇಕಲ್ ಸಮೀಪದ ದೊಡ್ಡಮಲ್ಲೆ ಗ್ರಾಮದ ಶಾಸಕರ ಆಪ್ತ ಕಾರ್ಯದರ್ಶಿ ಹರೀಶ್ ಮನೆ ಮೇಲೆ ದಾಳಿ ಮಾಡಿ ಅಲ್ಲಿಯು ಆತನ ಬಳಿ ಬಹುತೇಕ ಮಾಹಿತಿ, ವಿಚಾರಣೆ ನಡೆಸಿ ಆತನನ್ನು ಶಾಸಕರ ಮನೆಗೆ ಬಂದು ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಇನ್ನೂ ಆಪ್ತ ಕಾರ್ಯದರ್ಶಿ ಗುರುವಗೊಲ್ಲಹಳ್ಳಿ ಮಂಜುನಾಥನನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಶಾಸಕರ ಮನೆಯ ಮುಂದಿನ ಅವರ ಎಲ್ಲಾ ಕಾರುಗಳನ್ನು, ಮನೆಯ ಎಲ್ಲಾ ಕೊಠಡಿಗಳನ್ನು ಇಡಿ ಅಧಿಕಾರಿಗಳ ತಂಡವು ತಪಾಸಣೆ ನಡೆಸಿತು. ಮುಂಜಾನೆ ಒಂದೇ ಕಾಲದಲ್ಲಿ ತಾಲ್ಲೂಕಿನಲ್ಲಿ ಸುಮಾರು 8ಕ್ಕೂ ಹೆಚ್ಚು ಕಡೆ 40 ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಈ ದಾಳಿಯನ್ನು ನಡೆಸಿದ್ದಾರೆ.
ಈ ಮಧ್ಯೆ ಶಾಸಕರ ಮನೆಯ ಮುಂದೆ ಮುಂಜಾನೆಯಿಂದಲೇ ಅವರ ಬೆಂಬಲಿಗರು ಜಮಾವಣೆಯಾಗಿದ್ದರಿಂದ ಅಲ್ಲಿ ಪೋಲಿಸ್ ಬಂದೋಬಸ್ತ್ ನೀಡಲಾಗಿತ್ತು. ಇನ್ನೂ ಶಾಸಕರ ಮನೆಗೆ ಮಿಲಿಟರಿ ಭದ್ರತೆಯನ್ನು ಒದಗಿಸಲಾಗಿತ್ತು. ಯಾವುದೇ ಕಾರಣಕ್ಕೂ ಸ್ಥಳೀಯ ಪೋಲಿಸ್ ಅಧಿಕಾರಿಗಳನ್ನು ಯಾರನ್ನು ಮನೆಯೊಳಗೆ ಪ್ರವೇಶಿಸಂತೆ ಇಡಿ ಅಧಿಕಾರಿಗಳು ನಿಗಾವಹಿಸಿದ್ದರು.
ಮುಖಂಡ ಹಾಗೂ ಶಾಸಕರ ಕಛೇರಿ ತಪಾಸಣೆ : ಮಾಲೂರು ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿರುವ ಶಾಸಕರ ಕಾರ್ಯಾಲಯವನ್ನು ಹಾಗೂ ಅಲ್ಲಿನ ಶಿಬಿರ ಕಛೇರಿಯನ್ನು ನಂತರ ಮುಖಂಡ ಅಬ್ಬೇನಹಳ್ಳಿ ಗೋಪಾಲ್ರವರ ಮನೆಯಲ್ಲೂ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಇತ್ತೀಚೆಗಷ್ಟೆ ಕೋಲಾರದ ಕೋಚಿಮುಲ್ನಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಸದ್ದು ಮಾಡಿತ್ತು. ಹಾಗೂ ಕೋಲಾರ ಜಿಲ್ಲೆಯಲ್ಲಿ ಶಾಸಕ ಕೆ.ವೈ.ನಂಜೇಗೌಡರು 2ನೇ ಬಾರಿಗೆ ಶಾಸಕರಾದ ಮೇಲೆ ತಮ್ಮ ವ್ಯಕ್ತಿತ್ವ ಮತ್ತು ಸ್ಥಾನವು ಹೆಚ್ಚಾಗಿತ್ತು. ಇದನ್ನು ಸಹಿಸದ ವಿರೋಧ ಪಕ್ಷಗಳು ಇವರ ಮೇಲೆ ಇಡಿ ದಾಳಿ ಮಾಡಿಸಿದ್ದಾರೆಂದು ಕೆಲವು ಕಾಂಗ್ರೇಸ್ ಮುಖಂಡರುಗಳು ಆರೋಪ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಆತಂಕ : ಕಳೆದ 2 ಬಾರಿಯಿಂದ ಮಾಲೂರು ತಾಲ್ಲೂಕಿನಲ್ಲಿ ಶಾಸಕರಾಗಿ ಕೆ.ವೈ.ನಂಜೇಗೌಡರು ಆಯ್ಕೆಯಾಗಿದ್ದು ಕಾಂಗ್ರೇಸ್ ಹೈಕಮಾಂಡ್ನಲ್ಲು ಇವರಿಗೆ ಹೆಚ್ಚು ಗೌರವವಿದ್ದು ತಾಲ್ಲೂಕಿನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದರು. ಸೋಮವಾರ ಮುಂಜಾನೆ ಇಡಿ ದಾಳಿ ತಿಳಿದ ತಕ್ಷಣ ತಾಲ್ಲೂಕಿನ ಬಹುತೇಕ ಜನರಲ್ಲಿ ಆತಂಕ ಮನೆ ಮಾಡಿತ್ತು ಅದರಲ್ಲೂ ಕಾಂಗ್ರೇಸ್ ಪಾಳಯದಲ್ಲಿ ದಿಗ್ಭ್ರಮೆ ಮೂಡಿಸಿತ್ತು. ಈ ಹಿನ್ನಲೆಯಲ್ಲಿ ಶಾಸಕರ ಸ್ವಗ್ರಾಮ ಕೊಮ್ಮನಹಳ್ಳಿಗೆ ಅವರ ಅಭಿಮಾನಿಗಳ ದಂಡೆ ಇಡೀ ದಿನ ಅವರ ಮನೆ ಮುಂದೆ ಅವರಿಗಾಗಿ ಕಾದು ಕುಳಿತಿತ್ತು.
ಶ್ರೀ ಮಹಾಲಿಂಗೇಶ್ವರ ದೇವಾಲಯದ ಸನ್ನಿಧಿಯಲ್ಲಿ ಇರುಮುಡಿ, ಅಯ್ಯಪ್ಪ ದೇವರ ಮಹಾಪೂಜೆ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಲಿರುವುದು
ನಂದಳಿಕೆಃಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸನ್ನಿಧಿಯಲ್ಲಿ ನಂದಳಿಕೆ ಚಾವಡಿ ಅರಮನೆ ಸುಂದರರಾಮ ಹೆಗ್ಡೆ ಯವರ ಶುಭ ಆಶೀರ್ವಾದದೊಂದಿಗೆ ಬೆಲ್ಮಣ್ಣು ಪುರುಷೋತ್ತಮ ಸ್ವಾಮಿಯವರ ನೇತೃತ್ವದಲ್ಲಿ ಬರುವ ದಿನಾಂಕ ಜನವರಿ 13ರ ಶನಿವಾರದಂದು ಬೆಳಿಗ್ಗೆ 5:30 ರಿಂದ ಇರುಮುಡಿ . ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಯ್ಯಪ್ಪ ದೇವರ ಮಹಾಪೂಜೆ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಲಿರುವುದು.ಈ ದೇವತಾ ಕಾರ್ಯದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿಸುವ ಅಯ್ಯಪ್ಪ ಭಕ್ತವೃಂದ ನಂದಳಿಕೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ:ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ ಮೂರು ದಿನ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್ಎನ್ಡಿಎಂಸಿ) ಸಹ ಮಳೆಯ ಎಚ್ಚರಿಕೆ ನೀಡಿದ್ದು, ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶವು ಹವಾಮಾನ ಪರಿಸ್ಥಿತಿಗಳಿಗೆ ಕಾರಣವಾಗಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಿಗೆ ‘ಯೆಲ್ಲೋ’ ಅಲರ್ಟ್ ಘೋಷಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ವಾಯುಭಾರ ಕುಸಿತ ದಿಂದಾಗಿ ಪೂರ್ವಕ್ಕೆ ಮೋಡ ಚಲನೆಯಾಗುತ್ತಿದೆ. ಇದರ ಪರಿಣಾಮ ದಕ್ಷಿಣ ಒಳನಾಡು, ಕರಾವಳಿ ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ವಾರಾಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ತಿಳಿಸಿದೆ.
ಮಂಗಳೂರು ಧರ್ಮಕ್ಷೇತ್ರ:ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯೊಂದಿಗೆ ‘ಪ್ರಾರ್ಥನೆಯ ವರ್ಷ’ ಪ್ರಾರಂಭ/ “Thousands Join Mangalore Diocese in Solemn Eucharistic Procession for ‘Year of Prayer'”
ವರದಿ: ವಂದನೀಯ ಅನಿಲ್ ಐವನ್ ಫೆನಾರ್ಂಡಿಸ್ ಚಿತ್ರಗಳು: ಸ್ಟಾನ್ಲಿ ಬಂಟ್ವಾಳ್ ಹಾಗೂ ಜೋನ್ಡಿಸೋಜಾ
ಮಂಗಳೂರು, ಜನವರಿ 07: ಮಂಗಳೂರುಧರ್ಮಕ್ಷೇತ್ರದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಜನವರಿ 7ರ ಭಾನುವಾರದಂದು ನಗರದ ಮಿಲಾಗ್ರಿಸ್ ಚರ್ಚ್ನಿಂದ ರೊಸಾರಿಯೊ ಕೆಥೆಡ್ರಲ್ ಚರ್ಚ್ವರೆಗೆ ನಡೆಯಿತು. ಸಾವಿರಾರು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಕ್ರಿಸ್ತ ಜಯಂತಿ-2025ರ ಜುಬಿಲಿ ಪ್ರಯುಕ್ತ ಜಗದ್ಗುರು ಪೆÇೀಪ್ ಫ್ರಾನ್ಸಿಸ್ ಅವರು ‘2024′ ಅನ್ನು ‘ಪ್ರಾರ್ಥನೆಯ ವರ್ಷ’ ಎಂದು ಘೋಷಿಸಿರುವುದರಿಂದ “ಪ್ರಾರ್ಥನೆ ಮೂಲಕ ದೇವರೊಡನೆ ಮತ್ತು ಪರರೊಡನೆ ಸಂಬಂಧ ಬೆಳೆಸೋಣ” ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಮೆರವಣಿಗೆಗೂ ಮುನ್ನ ಮಿಲಾಗ್ರಿಸ್ ಚರ್ಚ್ನಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಾಮೂಹಿಕವಾಗಿ ಬಲಿಪೂಜೆಯನ್ನು ಸಲ್ಲಿಸಿದರು. ಯೇಸುವಿನ ದೈವದರ್ಶನ ಮಹೋತ್ಸವದಂದು ಏರ್ಪಡಿಸಿದ ಈ ಮೆರವಣಿಗೆಯು ಯೇಸು ಕ್ರಿಸ್ತರು ತಮ್ಮನ್ನು ಹುಡುಕಿ ಬಂದ ಜ್ಯೋತಿಷ್ಯರಿಗೆ ತಮ್ಮ ಮೊದಲ ದೈವ ದರ್ಶನ ನೀಡಿದ ಘಟನೆಯನ್ನು ಸ್ಮರಿಸುತ್ತದೆ. ಈ ಹಬ್ಬವನ್ನು‘ಎಪಿಫನಿ’, ‘ಥಿಯೋಫನಿ’ ಅಥವಾ ‘ತ್ರಿ ಕಿಂಗ್ಸ್ ಡೇ’ ಎಂದೂ ಕರೆಯುತ್ತಾರೆ.
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಆವರು ತಮ್ಮ ಧರ್ಮೋಪದೇಶದಲ್ಲಿ“ದೇವರನ್ನು ಮೊದಲು ಪವಿತ್ರ ಗ್ರಂಥಗಳಲ್ಲಿ ಕಂಡುಕೋಳ್ಳೋಣ, ನಂತರ ನಮ್ಮ ಹಾಗೂ ಪರಸ್ಪರರ ಹೃದಯಗಳಲ್ಲಿ ಆತನ ಸಾಮಿಪ್ಯವನ್ನು ಗುರುತಿಸೋಣ. ಪವಿತ್ರಗ್ರಂಥ ಬೈಬಲ್ ನಮ್ಮ ಕೈಯಲ್ಲಿರುವ ನಕ್ಷತ್ರ. ಆ ನಕ್ಷತ್ರವನ್ನು ನಮ್ಮದಾಗಿಸಿ ನಿತ್ಯ ಧ್ಯಾನಿಸಿದ್ದಲ್ಲಿ ಯೇಸುವಲ್ಲಿ ಸೇರುವ ದಾರಿಯು ಗೋಚರಿಸುವುದು. ದೇವರ ವಾಕ್ಯ ನಮ್ಮ ದಾರಿಗೆ ದೀಪವೂ, ಆ ದೀಪದ ಬೆಳಕಿನಲ್ಲಿ ಸದಾ ನಡೆದು ಯೇಸುವನ್ನು ಮಹಿಮೆಪಡಿಸೊಣ”, ಎಂದುಬೋಧಿಸಿದರು.
ಪೂಜಾಂತ್ಯಕ್ಕೆ ಆರಂಭಗೊಂಡ ಮೆರವಣಿಗೆಯ ಜೊತೆ, ಪವಿತ್ರ ಪ್ರಸಾದವನ್ನು ಹೊತ್ತೊಯ್ದ ಅಲಂಕೃತ ವಾಹನವು ಮಿಲಾಗ್ರಿಸ್ ಚರ್ಚ್ನಿಂದ ಪ್ರಾರಂಭವಾಗಿನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಹಂಪನಕಟ್ಟೆ, ಕ್ಲಾಕ್ ಟವರ್ ಸರ್ಕಲ್, ಎ.ಬಿ ಶೆಟ್ಟಿ ಸರ್ಕಲ್ ಮತ್ತು ನೆಹರು ವೃತ್ತದ ಮೂಲಕ ಸಾಗಿತು.
ಮೆರವಣಿಯಲ್ಲಿ ಪಾಲ್ಗೊಂಡ ಸಾವಿರಾರುಭಕ್ತಾದಿಗಳು ನಗರದ ರಸ್ತೆಗಳಲ್ಲಿ ದೇವರನ್ನು ಮಹಿಮೆಪಡಿಸುತ್ತಾ, ಆರಾಧಿಸುತ್ತಾ, ಬ್ಯಾಂಡ್-ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ, ಜನಸಾಮನ್ಯರಿಗೆ ಅಡಚಣೆಯನ್ನುಂಟು ಮಾಡದೆ ಎರಡು ಸಾಲುಗಳಲ್ಲಿ ಸಾಗಿತು.
ಬಿಷಪ್ ನೇತೃತ್ವದಮೆರವಣಿಗೆಯು ರೊಸಾರಿಯೊ ಕೆಥೆಡ್ರಲ್ ಚರ್ಚ್ ಆವರಣದÀಲ್ಲಿ ಆರಾಧನೆಯೊಂದಿಗೆ ಸಮಾಪನಗೊಂಡಿತು.
ರೊಸಾರಿಯೋ ಕೆಥೆಡ್ರಲ್ ಚರ್ಚ್ ಮೈದಾನದಲ್ಲಿ ಕಾಸರಗೋಡಿನ ವರ್ಕಾಡಿ ಚರ್ಚ್ನ ಧರ್ಮಗುರುಗಳಾದವಂದನೀಯ ಬಾಸಿಲ್ ವಾಸ್ ಪ್ರವಚನ ಬೋಧಿಸಿದರು. ಅವರು ‘ಪ್ರಾರ್ಥನೆಯ’ ಬಗ್ಗೆ ಒಳನೋಟಗಳನ್ನು ನೀಡುತ್ತಾ ದೈವಿಕ ಮತ್ತು ಮಾನವೀಯ ಸಂಬಂಧವನ್ನು ಬೆಳೆಸುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದರು.
“ನಾವು ಡಿಜಿಟಲ್ ಕ್ಷೇತ್ರಕ್ಕೆ ಗಮನಾರ್ಹ ಸಮಯವನ್ನು ವಿನಿಯೋಗಿಸುವ ಈ ಕಾಲಘಟ್ಟದಲ್ಲಿ,‘ಪ್ರಾರ್ಥನೆಗೆ ಸಮಯವಿಲ್ಲ’ ಎಂದು ಹೇಳುವುದರಲ್ಲ್ಲಿ ಆರ್ಥವಿಲ್ಲ. ಈ ಆಧುನಿಕ ಸಂವಹನ ತಂತ್ರಜ್ಞಾನವÀನ್ನು ಕೇವಲ ಮಾನವ ಸಂಬಂಧಗಳನ್ನು ಬೆಳೆಸುವಲ್ಲಿ ಮಾತ್ರ ಉಪಯೋಗಿಸದೆ, ಪರರಿಗೋಸ್ಕರ ಪ್ರಾರ್ಥಿಸುವ ಮೂಲಕ ದೈವರೋಂದಿಗೆ ಸಂಬಂಧ ಉಂಟುಮಾಡುವಲ್ಲಿ ಸಹಕಾರಿಯಾಗಬೇಕು”ಎಂದು ಒತ್ತಿ ಹೇಳಿದರು.“ಇಂದಿನ ಡಿಜಿಟಲ್ ಯುಗ ನಾವು ಆನ್ಲೈನ್ನಲ್ಲಿ ತೊಡಗಿಸಿಕೊಳ್ಳುವ ಪ್ರತಿ ಬಾರಿಯೂ, ತೀವ್ರ ಅಗತ್ಯವಿರುವವರಿಗೆ ವಿಡಿಯೋ ಕರೆ ಮಾಡಿ ಪ್ರಾರ್ಥನೆಗಳನ್ನು ವಿಸ್ತರಿಸಲು ಮತ್ತು ಆಧ್ಯಾತ್ಮಿಕ ಸಂಪರ್ಕಕ್ಕಾಗಿ ಹಲವಾರು ಮಾರ್ಗಗಳನ್ನು ನೀಡುತ್ತದೆ.”
ಫಾದರ್ ಬಾಜಿಲ್ ವಾಸ್ ಪ್ರಾರ್ಥನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, “ನಮ್ಮ ಪ್ರಾರ್ಥಿಸುವ ಕೈಗಳು,ಕೆಳಕ್ಕೆ ಬಿದ್ದವರನ್ನು ಮೇಲಕ್ಕೆತ್ತಲು, ಸಂಕಷ್ಟದಲ್ಲಿರುವವರಿಗೆ ಸಾಂತ್ವನ ನೀಡಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ವಿಸ್ತರಿಸದಿದ್ದರೆ, ಆಂತಹ ಪ್ರಾರ್ಥನೆ ಫಲಹೀನವಾದುದು ಮತ್ತು ಅದು ನಮ್ಮಲ್ಲಿ ದೈವಿಕ ಮತ್ತು ಮಾನವ ಸಂಬಂಧಗಳನ್ನು ಒಗ್ಗೂಡಿಸುವಲ್ಲಿ ವಿಫಲಗೋಳಿಸುವುದು” ಎಂದು ಬೋಧಿಸಿದರು.
ರೊಸಾರಿಯೊದಲ್ಲಿ ನಡೆದ ಆರಾಧನೆ ವಿಧಿಯನ್ನು ಕುಲುಶೇಖರ ಚರ್ಚ್ನ ಧರ್ಮಗುರುಗಳಾದ ವಂದನೀಯ ಕ್ಲಿಫರ್ಡ್ ಫೆನಾರ್ಂಡಿಸ್ ಮತ್ತುಲೂಡ್ರ್ಸ್ ಸೆಂಟ್ರಲ್ ಸ್ಕೂಲ್ನ ಪ್ರಾಂಶುಪಾಲರಾದವಂದನೀಯ ರಾಬರ್ಟ್ ಡಿಸೋಜಾರವರು ಭಕ್ತಿಯುತವಾಗಿ ನಡೆಸಿದರು.
ಕೊನೆಯಲ್ಲಿ ಧರ್ಮಪ್ರಾಂತ್ಯದ “ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ”ದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮೆರವಣಿಗೆಯ ಯಶಸ್ಸಿಗೆ ಕಾರಣಾರಾದ ಎಲ್ಲರನ್ನು ಸ್ಮರಿಸಿದರು ಹಾಗೂ ಸಾಕ್ಷಿಯಾದ ಎಲ್ಲಾ ವಿಶ್ವಾಸಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
“Thousands Join Mangalore Diocese in Solemn Eucharistic Procession for ‘Year of Prayer'”
Report by Fr Anil Ivan Fernandes, CCC Pics by Stanly Bantwal & John Dsouza
MANGALURU, JANUARY 7, 2024: The Catholic Diocese of Mangalore hosted a soul-stirring
Eucharistic procession on Sunday, January 7, 2024, from Milagres Church to Rosario
Cathedral. Enthusiastic participation was seen from thousands of Catholics across different
parishes within the Mangalore Diocese, exhibiting profound devotion and discipline.
Aligned with Pope Francis’s designation of ‘2024’ as the ‘Year of Prayer’ in anticipation of
Jubilee 2025, the procession resonated with the theme “Prayer Unites us with God and with our
Brothers and Sisters.”
The event commenced with a solemn mass celebrating the ‘Epiphany of Lord Jesus,’ presided
over by Most Rev. Dr. Peter Paul Saldanha, Bishop of Mangalore, at Milagres Church. The
Eucharistic procession coincided with the solemnity of the Epiphany, also recognized as the
Feast of the Epiphany, Theophany, or Three Kings’ Day, commemorating the first revelation of
Jesus Christ to the Gentiles symbolized by the Magi, emphasizing his divine manifestation.
In his homily during the mass, Bishop Saldanha stressed the significance of seeking God first in
the Holy Scriptures and then within one another’s hearts. “The Word of God in our hands acts
as our guiding star directing us to Jesus. When we immerse ourselves in reading and reflecting
on the Gospel, our hearts ignite with its message, making us aware of Jesus’s presence in our
lives,” he emphasized.
The adorned vehicle carried the Holy Eucharist through city thoroughfares, commencing from
Milagres Church and passing through Hampankattta, Clock Tower Circle, A.B Shetty Circle, and
Nehru Circle, culminating at Rosario Cathedral. The participants, accompanied by musical bands
and choir groups, displayed reverence and orderliness, ensuring minimal disruption to the
general public. They filled the atmosphere with hymns of praise and congregated at Rosario
Cathedral Grounds to worship the Eucharist and contemplate the Word of God.
Rev. Fr Basil Vas, Parish Priest of Vorkady Church, Kasaragod, delivered insights on prayer,
emphasizing its role in fostering relationships with both the divine and humanity. He stressed,
“We can’t excuse a lack of time for prayer when we devote significant hours to the digital
realm. These modern tools should not just facilitate human interactions but also act as
bridges, connecting us with the divine through prayers for others.” He further highlighted,
“Each time we engage online, it’s an opportunity to extend prayers to those in dire need. The
digital landscape offers a multitude of ways for spiritual connectivity.” Fr Vas emphasized the
importance of action in prayer, stating, “If our prayers don’t extend to lifting the fallen,
comforting the distressed, and aiding those in need, they remain fruitless in uniting us with
the divine and humanity.”
The ceremony at Rosario was animated by Rev. Fr Clifford Fernandes, Parish Priest of Cordel
Church, and Rev. Fr. Robert Dsouza, Principal of Lourdes Central School and coordinated by
Mangala Jyothi Liturgical Centre. At the end, prizes were awarded to winners of the contest
organized as part of the Diocese’s “Anti-Drug Awareness Campaign.” Bishop Saldanha extended
gratitude to all participants, acknowledging their contribution to the success of the procession.
ಮಾದಕ ವ್ಯಸನದ ಜಾಗೃತಿ ಕಾರ್ಯಕ್ರಮದಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಲು ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ : ನ್ಯಾಯಾಧೀಶೆ ಶೃತಿಶ್ರೀ ಎಸ್
ಕುಂದಾಪುರ: ಮಾದಕ ವ್ಯಸನದ ಜಾಗೃತಿ ಕಾರ್ಯಕ್ರಮದಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಲು ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ. ಮಾದಕ ವಸ್ತುವಂತ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕೆಂದು ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರು ಹಾಗೂ ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಶೃತಿಶ್ರೀ ಎಸ್. ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್ ಕುಂದಾಪುರ ಉಪವಿಭಾಗದ ವತಿಯಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿಗಾಗಿ ‘ಸೇ ನೋ ಟು ಡ್ರಗ್ಸ್’ ಧ್ಯೇಯ ವಾಕ್ಯದಡಿ ರವಿವಾರ ಬೆಳಿಗ್ಗೆ ನಡೆದ ‘ವಾಕ್ ಆಂಡ್ ರನ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ಮಾತನಾಡಿ, ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜನತೆ ಜಾಗೃತರಾಗಬೇಕು ಎಂದರು. ಕುಂದಾಪುರ ಆರ್.ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ ಮಾತನಾಡಿ, ಜೀವ ತೆಗೆಯುವ ಮಾದಕ ವಸ್ತುಗಳಿಂದ ಎಲ್ಲರೂ ದೂರವಿರಬೇಕು. ಆನ್ಲೈನ್ ಮೂಲಕ ಇಂತಹ ವಸ್ತುಗಳನ್ನು ಖರೀದಿಸುವ ಬಗ್ಗೆ ಇಲಾಖೆ ಕ್ರಮವಹಿಸಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಸಾಧ್ಯ ಎಂದರು.
ಕುಂದಾಪುರ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ, ಕುಂದಾಪುರ ನಗರ ಠಾಣೆ ಇನ್ಸ್ಪೆಕ್ಟರ್ ನಂದಕುಮಾರ್, ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕ ಜಯರಾಮ ಡಿ. ಗೌಡ, ಕುಂದಾಪುರ ಉಪವಿಭಾಗದ ವಿವಿಧ ಠಾಣೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀನಿವಾಸಪುರ: ಕಂದಾಯ ಇಲಾಖೆ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಎಂಜಿ ರಸ್ತೆಯಲ್ಲಿ ಅವರೆ ಕಾಯಿ ವಹಿವಾಟು ನಡೆಸದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ
ಶ್ರೀನಿವಾಸಪುರ: ಕಂದಾಯ ಇಲಾಖೆ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಎಂಜಿ ರಸ್ತೆಯಲ್ಲಿ ಅವರೆ ಕಾಯಿ ವಹಿವಾಟು ನಡೆಸದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಎಂಜಿ ರಸ್ತೆಯಲ್ಲಿ ನಡೆಯುತ್ತಿದ್ದ ಅವರೆಕಾಯಿ ವಹಿವಾಟು ನಿಲ್ಲಿಸಲು ಹೋದ ಪೊಲೀಸ್ ಸಿಬ್ಬಂದಿ ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ರಸ್ತೆಯ ಎರಡೂ ಕಡೆ ದೊಡ್ಡ ಮಟ್ಟದಲ್ಲಿ ಬೆಳಿಗ್ಗೆಯಿಂದ ರಾತ್ರಿ ವರೆಗೆ ಅವರೆಕಾಯಿ ವಹಿವಾಟು ನಡೆಸುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವುದಾಗಿ ತಿಳಿಸಿ ವ್ಯಾಪಾರಿಗಳ ಮನವೊಲಿಸಲಾಯಿತು.
ಪುರಸಭೆ ಕಚೇರಿ ಸಭಾಂಗಣದಲ್ಲಿ ವ್ಯಾಪಾರಿಗಳ ಸಭೆ ನಡೆಸಲಾಯಿತು. ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಪಟ್ಟಣದ ನಾಗರಿಕೆ ಹಿತದೃಷ್ಟಿಯಿಂದ ಹಾಗೂ ಸುಗಮ ಸಂಚಾರಕ್ಕಾಗಿ ಮಂಡಿ ಮಾಲೀಕರು ಅವರೆ ಕಾಯಿ ವಹಿವಾಟನ್ನು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಬೇಕು ಎಂದು ಹೇಳಿದರು. ಮಾರುಕಟ್ಟೆ ನಿಯಮ ಪಾಲಿಸುವಂತೆ ಸೂಚಿಸಿದರು.
ವ್ಯಾಪಾರಿಗಳು ಜ.6 ರಿಂದ ಅವರೆಕಾಯಿ ವಹಿವಾಟು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಲು ಸಮ್ಮತಿಸಿದರು. ಅವರೆಕಾಯಿ ವಹಿವಾಟು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ರಾಜ್ಯ ರೈತ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದ್ದರು. ವಹಿವಾಟು ಸ್ಥಳಾಂತರ ತಡವಾದರೆ ತಾಲ್ಲೂಕಿನ ಶಾಸಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಮನೆಗಳ ಮುಂದೆ ಪ್ರತಿಭಟನೆ ನಡೆಸುವ ಬೆದರಕೆ ಹಾಕಿದ್ದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಎಪಿಎಂಸಿ ಕಾರ್ಯದರ್ಶಿ ಉಮಾ, ಪುರಸಭೆ ಅಧಿಕಾರಿಗಳಾದ ಕೆ.ಜಿ.ರಮೇಶ್, ವಿ.ನಾಗರಾಜ್, ಎನ್.ಶಂಕರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಜಯರಾಂ, ರಮಾದೇವಿ, ಎಂ.ಡಿ.ನಾರಾಯಣಪ್ಪ ಇದ್ದರು.
“ವಿದ್ಯಾಜ್ಯೋತಿಯನ್ನು ಬೆಳಗಿದ ವಿದ್ಯಾರಂಗ” -ಸೂರ್ಯಕಾಂತ ಖಾರ್ವಿ
ಕುಂದಾಪುರ : ” ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮಾತ್ರ ಸೀಮಿತ ಎಂಬಂತೆ ಬದುಕನ್ನು ಕಟ್ಟಿ ಕೊಳ್ಳುತ್ತಿದ್ದ ಕ್ಲಿಷ್ಟಕರ ಕಾಲದಲ್ಲಿ ಸಮಾನ ಮನಸ್ಕರ ಮಿಲನದಿಂದ ಸಮಾಜದಲ್ಲಿ ವಿದ್ಯಾಜ್ಯೋತಿಯನ್ನು ಬೆಳಗಿದ ಶ್ರೇಯಸ್ಸು ವಿದ್ಯಾರಂಗ ಮಿತ್ರ ಮಂಡಳಿಗೆ ಸಲ್ಲುತ್ತದೆ ಎಂದು ಬೈಂದೂರು ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಸೂರ್ಯ ಕಾಂತ ಖಾರ್ವಿ ಹೇಳಿದರು ಅವರು ಕುಂದಾಪುರ ಖಾರ್ವಿ ಕೇರಿಯ ವಿದ್ಯಾರಂಗ ಹಾಗೂ ವಿದ್ಯಾನಿಧಿ ಯೋಜನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾ ಶಂಸನೆ ನುಡಿಗಳನ್ನಾಡಿದರು.
ಸಮಾರಂಭ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ದಾಮೋದರ ಖಾರ್ವಿಯವರು ಸ್ವಾಗತಿಸಿದರು
ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಜಯಾನಂದ ಖಾರ್ವಿ, ಶ್ರೀಯುತ ಪ್ರಸಾದ ಪ್ರಭು, ಉದ್ಯಮಿಗಳು,ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು,ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಮ್ಮ ರವಿಯವರು ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ವೋತಮುಖ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕುಮಾರಿ ಸೌಮ್ಯ ಎಸ್.ಖಾರ್ವಿ ಸ್ಕಾಲರ್ ಶಿಪ್ ಪಡೆಯುವ ವಿದ್ಯಾರ್ಥಿ -ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾನಿಧಿ ಯೋಜನೆಯ ಅಧ್ಯಕ್ಷ ರಾದ ದಿನಕರ ಖಾರ್ವಿ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಪಿಯುಸಿಯಲ್ಲಿ ರಾಜ್ಯಕ್ಕೆ,6ನೇ (rank)ಸ್ಥಾನಿಯಾಗಿದ್ದ ಕುಮಾರಿ ಐಶ್ವರ್ಯ ಖಾರ್ವಿಯವರನ್ನು ಸನ್ಮಾನಿಸಲಾಯಿತು. 116 ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ 2,25,000 (ಎರಡು ಲಕ್ಷದ ಇಪ್ಪತ್ತೈದು ಸಾವಿರ) ವಿದ್ಯಾರ್ಥಿ ವೇತನ ವಿತರಿಸಲಾಯಿತು. ಫಲಾನುಭವಿಗಳ ಪಟ್ಟಿಯನ್ನು ನಾಮದೇವ ಖಾರ್ವಿ, ಲಕ್ಷ್ಮೀ ಚಂದ್ರಕಾಂತ,ಮೋಹನ ಖಾರ್ವಿ, ಗಣಪತಿ ಖಾರ್ವಿ, ದಯಾನಂದ ಖಾರ್ವಿ ಓದಿದರು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಜನಪದ ಕಲಾತಂಡದ ಮುಖ್ಯಸ್ಥರಾದ ಶ್ರೀ ಮುಕುಂದ ಖಾರ್ವಿ ಪ್ರಾರ್ಥಿಸಿದರು. ನಾಮದೇವ ಖಾರ್ವಿ ಮತ್ತು ಮುಕುಂದ ಖಾರ್ವಿ ಸಂಸ್ಥೆಯ ಉದಯಗೀತೆ” ವಿದ್ಯಾರಂಗ ಉದಯತರಂಗ” ಹಾಡಿದರು. ಸಂಸ್ಥೆಯ ವಾರ್ಷಿಕ ವರದಿಯನ್ನು ಸಂದೀಪ್ ಎಸ್. ಖಾರ್ವಿ ವಾಚಿಸಿದರು.ಚಂದ್ರಶೇಖರ ಖಾರ್ವಿ ನಿರೂಪಿಸಿ, ಸತೀಶ್ ಎಸ್ ಖಾರ್ವಿ ವಂದಿಸಿದರು
ಚಾಲಕ ನಿರ್ವಾಹಕರು ಉತ್ತಮ ಆರೋಗ್ಯ ಹೊಂದಿರಬೇಕೆಂಬ ದೃಷ್ಟಿಯಿಂದ ಆರೋಗ್ಯತಪಾಸಣಾ ಶಿಭಿರ
ಶ್ರೀನಿವಾಸಪುರ: ರಾಜ್ಯಾದ್ಯಂತ ಮೂಲೆ ಮೂಲೆಗೂ ರಾಜ್ಯರಸ್ತೆ ಸಾರಿಗೆ ಸಂಸ್ಥೆಯು ಸೇವೆ ಸಲ್ಲಿಸುತ್ತಿದ್ದು, ಈ ಸೇವೆ ಸಲ್ಲಿಸುತ್ತಿರುವ ಚಾಲಕರು, ನಿರ್ವಾಹಕರುಉತ್ತಮಆರೋಗ್ಯ ಹೊಂದಿರಬೇಕೆಂಬ ದೃಷ್ಟಿಯಿಂದ ಈ ಆರೋಗ್ಯತಪಾಸಣಾ ಶಿಭಿರವನ್ನು ಏರ್ಪಡಿಸಿದ್ದು, ಇದರಉಪಯೋಗವನ್ನುಪಡೆದುಕೊಳ್ಳಬೇಕೆಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್ನಅಧ್ಯಕ್ಷರಾದಎಸ್.ಎನ್. ಮಂಜುನಾಥರೆಡ್ಡಿ ತಿಳಿಸಿದರು.
ಪಟ್ಟಣದಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯಡಿಪೆÇೀದಲ್ಲಿಕಾರ್ಯ ನಿರ್ವಹಿಸುತ್ತಿರುವ ನಿರ್ವಾಹಕರು, ಚಾಲಕರು, ಮತ್ತು ಸಿಬ್ಬಂಧಿಗೆ ರೋಟರಿ ಶ್ರೀನಿವಾಸಪುರ ಸೆಂಟ್ರಲ್, ಪವನ್ಆಸ್ಪತ್ರೆ ಶ್ರೀನಿವಾಸಪುರ ಹಾಗೂ ವಾಸನ್ ಐ ಕೇರ್, ಕೋಲಾರಇವರ ಸಂಯುಕ್ತಆಶ್ರಯದಲ್ಲಿಉಚಿತಆರೋಗ್ಯತಪಾಸಣಾ ಶಿಭಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದಎಸ್.ಎನ್. ಮಂಜುನಾಥರೆಡ್ಡಿ, ಸಾರಿಗೆ ಸಂಸ್ಥೆಯಲ್ಲಿಕಾರ್ಯ ನಿರ್ವಹಿಸುತ್ತಿರುವ ನಿರ್ವಾಹಕರು ಹಾಗೂ ಚಾಲಕರುರಾಜ್ಯಾಧ್ಯಂತ ಸಾವಿರಾರು ಪ್ರಯಾಣಿಕರನ್ನುಒಂದುಕಡೆಯಿಂದ ಮತ್ತೊಂದುಕಡೆಗೆ ಸುರಕ್ಷಿತವಾಗಿಕರೆದೊಯುತ್ತಿರುವುದು ಶ್ಲಾಘನೀಯವಾಗಿದೆ, ಹಾಗೆಯೇ ಈ ಕಾರ್ಯ ನಿರ್ವಹಿಸುತ್ತಿರುವಚಾಲಕರು ನಿರ್ವಾಹಕರುಆರೋಗ್ಯದಿಂದಿರಬೇಕೆಂಬ ಉದ್ದೇಶದಿಂದಇವರಿಗೆಕಣ್ಣುದೃಷ್ಟಿತಪಾಸಣೆ ಮಾಡಿಅವಶ್ಯಕತೆಇರುವಂತಹವರಿಗೆಕನ್ನಡಕವನ್ನು ಸಹ ಉಚಿತವಾಗಿ ವಾಸನ್ ಐ ಕೇರ್ಕೋಲಾರಇವರ ವತಿಯಿಂದ ನೀಡಲಾಗುವುದು, ಹಾಗೆಯೆ ಸಾಮಾನ್ಯತಪಾಸಣೆಯನ್ನು ಮಾಡಲಾಗುವುದುಎಂದು ತಿಳಿಸಿದರು.
ಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕದ ವ್ಯವಸ್ಥಾಪಕರಾದವೆಂಕಟೇಶ್ ಮಾತನಾಡಿ, ರೋಟರಿ ಸಂಸ್ಥೆಯಿಂದ ನಮ್ಮಘಟಕದ ಚಾಲಕ, ನಿರ್ವಾಹಕ ಮತ್ತು ಸಿಬ್ಬಂದಿ ವರ್ಗದವರಿಗೆಉಚಿತಆರೋಗ್ಯತಪಾಸಣಾ ಶಿಭಿರವನ್ನು ಹಮ್ಮಿಕೊಂಡಿರುವುದುತುಂಬಾಉಪಯುಕ್ತವಾದಂತಹಕಾರ್ಯಕ್ರಮವಾಗಿದ್ದು, ನಮ್ಮ ಸಿಬ್ಬಂಧಿಯು ಆರೋಗ್ಯದತಪಾಸಣೆಗಾಗಿ ಹೊರಗಡೆ ಹೋದಾಗ ಸಾವಿರಾರು ರೂಗಳು ಖರ್ಚಾಗುವುದರಿಂದಇಂತಹಉಚಿತಆರೋಗ್ಯ ಶಿಭಿರವನ್ನು ಏರ್ಪಡಿಸಿರುವುದು ಶ್ಲಾಘನೀಯವೆಂದರು.
ವಾಸನ್ ಐ ಕೇರ್ನಡಾ: ಚರಣ್ ಮಾತನಾಡಿ, ನಾವು ರೋಟರಿ ಸಂಸ್ಥೆಯಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಬಳಿ ಮಾತನಾಡಿ, ಶ್ರೀನಿವಾಸಪುರದಲ್ಲಿಉಚಿತವಾಗಿ ಐ ಚೆಕ್ಅಪ್ಕ್ಯಾಂಪನ್ನು ಮಾಡಲುತಯಾರಿದ್ದೇವೆಎಂದತಕ್ಷಣಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕದ ಸಿಬ್ಬಂದಿಗೆ ಆರೋಗ್ಯತಪಾಸಣೆ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ, ಹಾಗೆಯೆತಾಲ್ಲೂಕಿನಯಾವುದೇ ಸಂಘ ಸಂಸ್ಥೆಯ ಮುಖಾಂತರಉಚಿತವಾಗಿಆರೋಗ್ಯ ಶಿಭಿರವನ್ನು ಮಾಡಲು ಸಿದ್ದರಿದ್ದೇವೆ, ಮುಂದಿನ ವಾರ ಪಟ್ಟಣದನ್ಯಾಯಾಲಯದ ವಕೀಲರ ಸಂಘದಎಲ್ಲಾ ಸದಸ್ಯರಿಗೆ ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಿಬ್ಬಂದಿಗೆ ಉಚಿತವಾಗಿಆರೋಗ್ಯ ಶಿಭಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಕಾರ್ಯದರ್ಶಿ ಎಸ್. ಶಿವಮೂರ್ತಿ ಮಾತನಾಡಿದರು. ಘಟಕದ ಸುಮಾರು260 ಸಿಬ್ಬಂಧಿಯವರು ಉಚಿತಆರೋಗ್ಯತಪಾಸಣೆಗೆ ಒಳಪಟ್ಟಿದ್ದರು.
ಈ ಸಂದರ್ಭದಲ್ಲಿರೋಟರಿ ಶ್ರೀನಿವಾಪುರ ಸೆಂಟ್ರಲ್ನನಿರ್ದೇಶಕರಾದ ಹೆಚ್.ಎನ್. ನಾಗೇಶ್,ಎನ್. ಕೃಷ್ಣಮೂರ್ತಿ, ಸುರೇಶ್, ಸ್ಥಳೀಯ ಘಟಕದಟಿ.ಎ.ರಾಮಚಂದ್ರ, ಮಣಿ, ಸಿಬ್ಬಂಧಿ ವಾಣಿ, ಮಾದೇಶ್, ಪವನ್ಆಸ್ಪತ್ರೆಯ ಸಿಬ್ಬಂಧಿಯಾದ ಭಾರತಿ, ಕೆ. ಶಿವರಾಜ್, ಮತ್ತುಘಟಕದ ಸಿಬ್ಬಂಧಿ ಹಾಜರಿದ್ದರು.