ಶ್ರೀನಿವಾಸಪುರ 1 : ಕೊಲೆಯ ಹಿಂದೆ ಒಂದು ಸಂಚು ಇದ್ದು, ಕೊಲೆಯನ್ನು ಏಕೆ ಮಾಡಿದರು, ಯಾರು ಮಾಡಿಸಿದರು ಎಂಬುದನ್ನ ಆರೋಪಿಗಳಿಂದ ನಿಜವಾದ ಸತ್ಯವನ್ನು ಬಹಿರಂಗಗೊಳಿಸಬೇಕಿದೆ ಎಂದು ದಿವಗಂತ ಎಂ.ಶ್ರೀನಿವಾಸನ್ ಧರ್ಮಪತ್ನಿ ಡಾ|| ಚಂದ್ರಕಳಾಶ್ರೀನಿವಾಸನ್ ಒತ್ತಾಯಿಸಿದರು.
ಪಟ್ಟಣದ ಮಾಜಿ ಜಿಲ್ಲಾಪಂಚಾಯಿತಿ ಅಧ್ಯಕ್ಷ ದಿ||ಎಂ.ಶ್ರೀನಿವಾಸನ್ ರವರ ಮನೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಂ.ಶ್ರೀನಿವಾಸನ್ ಅವರಿಲ್ಲದ ತಬ್ಬಲಿತನವು ನಮ್ಮ ಕುಟುಂಬ ವರ್ಗವನ್ನು ಎಷ್ಟು ಕಾಡುತ್ತಿದೆಯೋ ಅಷ್ಟೇ ತಬ್ಬಲಿತನವನ್ನು ನಮ್ಮ ಬಂಧು-ಬಳಗ ಹಾಗು ಸಮಸ್ತ ಸಾರ್ವಜನಕರ ಬಂಧುಗಳೂ ಅನುಭವಿಸುತ್ತಿದೆ. ಇಂತಹ ದೈರ್ಯಶಾಲಿ ಜನನಾಯಕನನ್ನು ನಮಗಾರಿಗೂ ಮರೆಯಲು ಸಾಧ್ಯವಾಗುತ್ತಿಲ್ಲ ಎಂದರು. ನನಗೆ, ನನ್ನ ಕುಟುಂಬಕ್ಕೆ ಆಗಿರುವ ಅನ್ಯಾಯವು ಯಾರಿಗೂ ಆಗಬಾರದು ಎಂದು ದುಃಖತಪ್ತರಾದರು.
ನಮ್ಮ ಕುಟುಂದ ಹಿತ ಚಿಂತಕರೆಲ್ಲರೂ ಸೇರಿ ದಿನಾಂಕ 13-1-2024 ರ ಶನಿವಾರ ದಂದು ಬೆಳಗ್ಗೆ 11 ಗಂಟೆಗೆ ತಹಶೀಲ್ದಾರ್ ಕಛೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಸಾಮೂಹಿಕ ಶ್ರದ್ಧಾಂಜಲಿಯನ್ನು ನಡೆಸಲಾಗುತ್ತಿದ್ದು, ಶ್ರೀನಿವಾಸನ್ ಅಭಿಮಾನಿಗಳು ಹಾಗು ಸಾರ್ವಜನಿಕರು ಸಾಮೂಹಿಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕೊಲೆ ಆರೋಪಿಗಳಿಂದ ಸುಳ್ಳು ಮಾಹಿತಿ : ಪವನ್ ಕಲ್ಯಾಣ್ ಎಂಬ ಯುವಕನ ಪ್ರೇಮವಿಚಾರದಲ್ಲಿ ಕೌನ್ಸಿಲರ್ ಎಂ.ಶ್ರೀನಿವಾಸನ್ ಮಧ್ಯಪ್ರವೇಶಿಸಿ ತೊಂದರೆ ಮಾಡಿ ಪವನ್ಕಲ್ಯಾಣ್ ಸಾವಿಗೆ ಕಾರಣರಾಗಿದ್ದರೆ ಎನ್ನುವ ವಿಚಾರಕ್ಕೆ ಸಂಬಂಸಿದಂತೆ ಪವನ್ ಕೊಲೆಗೆ ಸೇಡು ತೀರಿಸುವ ನೆಪದಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ.
ಆದರೆ ಪವನ್ ಕಲ್ಯಾನ್ ಸಾವಿಗೆ ನಮ್ಮ ಯಜಮಾನರಾದ ಎಂ.ಶ್ರೀನಿವಾಸನ್ ರವರಿಗೆ ಯಾವುದೇ ಸಂಬಂದವಿಲ್ಲ ಎಂಬುದು ತಿಳಿಸುತ್ತಾ, ಪವನ್ಕಲ್ಯಾಣ್ 28.09.2022 ರಿಂದ 19.10.2022 ರವರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಟಿಬಿ ಮತ್ತು ಶುಗುರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂಬುದನ್ನ ಆರ್ಟಿಐ ಅರ್ಜಿ ಸಲ್ಲಿಸಿ ಆರ್ಟಿಐ ಮುಖಾಂತರ ಪವನ್ಕಲ್ಯಾಣ್ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದೆ ಎಂದು ಮಾಹಿತಿ ನೀಡುತ್ತಾ, ಆರೋಪಿಗಳು ಸುಳ್ಳು ಕಾರಣ ಹೇಳಿ ನಿಜವಾದ ಕಾರಣವನ್ನು ಬಚ್ಚಿಇಡುತ್ತಿದ್ದಾರೆ ಎಂದು ಹೇಳುತ್ತಾ ಕೊಲೆಗೆ ನಿಜವಾದ ಕಾರಣವನ್ನು ಆರೋಪಿಗಳಿಂದ ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
ಜನವರಿ 13 ರಂದು ನಡೆಯುವ ಸಾಮೂಹಿಕ ಶ್ರದಾಂಜಲಿ ಸಭೆಗೆ ವಿವಿಧ ಮಠಗಳ ಸ್ವಾಮಿಗಳು ಹಾಗು ವಿಶೇಷ ಆಹ್ವಾನಿತರಾಗಿ ಪ್ರಗತಿಪರ ಹೋರಾಟಗಾರ ಅಹಿಂಸಾ ಚೇತನ್ ಮತ್ತು ಸಾರ್ವಜನಿಕ ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಆರ್ಪಿಐ ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ವೆಂಕಟಸ್ವಾಮಿ ಮಾತನಾಡಿ ದಿ|| ಎಂ.ಶ್ರೀನಿವಾಸನ್ ಕೊಲೆ ಎ1 ಆರೋಪಿ ವ್ಯಯಕ್ತಿಕ ವಿಚಾರಕ್ಕೆ ಕೊಲೆ ನಡೆಸಲಾಗಿದೆ ಎಂದು ಆರೋಪಿಗಳು ಬಿಂಬಿಸುತ್ತಿದ್ದಾರೆ. ಆದರೆ ಕೊಲೆಗೆ ಸಂಚಿನ ಹಿಂದೆ ಯಾರೋ ಇದ್ದಾರೆ ಎಂಬುದನ್ನು ಆರೋಪಿಗಳು ಇದುವರೆಗೂ ಹೇಳಿಕೆಯನ್ನು ನೀಡುತ್ತಿಲ್ಲ ಆದ್ದರಿಂದ ಆರೋಪಿಗಳನ್ನು ಮಂಪರು ಪರೀಕ್ಷೆ ಒಳಪಡಿಸುವಂತೆ ಪೊಲೀಸ್ ಇಲಾಖೆ ಒತ್ತಾಯಪಡಿಸದರು. ಇದುವರೆಗೂ ಕ್ರಮಕೈಗೊಂಡಿಲ್ಲ.
ಶ್ರದ್ಧಾಂಜಲಿ ಸಭೆಯನ್ನು ಶಾಂತಿಯುತವಾಗಿ ನಡೆಸಬೇಕು. ಶ್ರೀನಿವಾಸನ್ ಕುಟುಂಬಕ್ಕೆ ಸಾಂತ್ವನವನ್ನು ನಾವೆಲ್ಲರೂ ಹೇಳಿಬೇಕಿದೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಪುರಸಭೆ ಸದಸ್ಯರಾದ ಭಾಸ್ಕರ್, ತಜಮುಲ್, ಮುಖಂಡರಾದ ಬಂಗವಾದಿ ನಾಗರಾಜ್, ಕೆ.ಕೆ.ಮಂಜುನಾಥ್, ಹೊಗಳಗೆರೆ ಆಂಜಿ, ರಾಮಾಂಜಮ್ಮ, ಉಪ್ಪರಪಲ್ಲಿ ತಿಮ್ಮಯ್ಯ, ಚಿಂತಾಮಣಿ ಈಶ್ವರ್, ಚಲ್ದಿಗಾನಹಳ್ಳಿ ಈರಪ್ಪ, ಚಿಕ್ಕಬಳ್ಳಾಪುರ ವೆಂಕಟರಮಣಪ್ಪ, ಶಂಕರ್, ವರ್ತನಹಳ್ಳಿ ವೆಂಕಟೇಶ್, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ವಾಸು, ತಾ.ಪಂ. ಮಾಜಿಸದಸ್ಯ ಆರ್.ಜಿ.ನರಸಿಂಹಯ್ಯ, ಪುರಸಭೆ ಮಾಜಿ ಸದಸ್ಯ ಶಂಕರ್ , ಹೆಬ್ಬಟ ಗ್ರಾ.ಪಂ. ಸದಸ್ಯ ಆನಂದ್ಕುಮಾರ್ ಇದ್ದರು.
Month: January 2024
ಶ್ರೀನಿವಾಸಪುರ:ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಕೈಜೋಡಿಸಿ, ಸಲಹೆ, ಸಹಕಾರ ನೀಡಬೇಕು-ಗ್ರಾ.ಪಂ .ಅಧ್ಯಕ್ಷ ಸಿ.ಎಸ್.ಶ್ರೀನಿವಾಸ್ ಮನವಿ
ಶ್ರೀನಿವಾಸಪುರ : ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಕೈಜೋಡಿಸಿ, ಸಲಹೆ, ಸಹಕಾರ ನೀಡಬೇಕು ಎಂದು ಗ್ರಾ.ಪಂ .ಅಧ್ಯಕ್ಷ ಸಿ.ಎಸ್.ಶ್ರೀನಿವಾಸ್ ಸದಸ್ಯರನ್ನ ಮನವಿ ಮಾಡಿದರು.
ತಾಲೂಕಿನ ಕಸಬಾ ಹೋಬಳಿಯ ಚಲ್ದಿಗಾನಹಳ್ಳಿ ಗ್ರಾಮದಲ್ಲಿನ ಗ್ರಾಮಪಂಚಾಯಿತಿ ಕಛೇರಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರಿಗೂ ಸಮಪಾಲುನೊಂದಿಗೆ ಅನುದಾನಗಳನ್ನು ಹಂಚಿಕೆ ಮಾಡಲಾಗುವುದು. ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು, ಬೀದಿ ದೀಪಗಳು, ಚರಂಡಿಗಳ ನಿರ್ಮಾಣ, ಸ್ವಚ್ಚತೆ, ವಸತಿಯೋಜನೆಗಳಿಗೆ ಸಂಬಂದಿಸಿದಂತೆ ಗ್ರಾಮಪಂಚಾಯಿತಿಗೆ ಬರುವ ಅನುದಾನಗಳನ್ನು ಪಂಚಾಯಿತಿ ಅಭಿವೃದ್ಧಿಗಾಗಿ ಬಳಸಲು ಸಲಹೆ ನೀಡಿದರಲ್ಲದೆ, ಪಂಚಾಯಿತಿ ಅಭಿವೃದ್ಧಿಯಾಗಲು ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಬ್ಬಟ ಹಾಗು ಶಿವಪುರ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿ ಇದೆ. ಗ್ರಾಮಪಂಚಾಯಿತಿ ವ್ಯಾಪ್ತಿಯ 205 , 206 ರಲ್ಲಿ ಗ್ರಾಮಪಂಚಾಯಿತಿ ನೂತನ ಕಟ್ಟಡವನ್ನು ನಿರ್ಮಿಸಲು ಹಾಗು ಪಂಚಾಯಿತಿಗೆ ಸಂಬಂದಿಸಿದಂತೆ ವಾರದ ಸಂತೆಯನ್ನು ಶಿವಪುರ ಕ್ರಾಸ್ನ ಸರ್ವೆ ನಂಬರ್ 198 ರಲ್ಲಿ ಮಾಡಲು ಸರ್ವಸದಸ್ಯರು ಒಪ್ಪಿಗೆ ನೀಡಿದರು. ಮುಂದಿನ ಸಾಮಾನ್ಯ ಸಭೆಯಲ್ಲಿ ವಾರದ ಸಂತೆ ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದರು.
ಪಿಡಿಒ ಕೆ.ಜಗದೀಶ್ಕುಮಾರ್ ಮಾತನಾಡಿದರು. ಗ್ರಾ.ಪಂ.ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ಆನಂದ್ಕುಮಾರ್, ಗಿರಿಯಪ್ಪ, ವೆಂಕಟರೆಡ್ಡಿ, ಗ್ರಾ.ಪಂ ಕಾರ್ಯದರ್ಶಿ ಶಿವಣ್ಣ, ಎಫ್ಡಿಎ ನಾರಾಯಣಸ್ವಾಮಿ ಇದ್ದರು.
ಶ್ರೀನಿವಾಸಪುರ ಪುರಸಭೆ ಕಛೇರಿ ಪಕ್ಕದ ಮಾರುಕಟ್ಟೆ ಸಂಕೀರ್ಣದಲ್ಲಿ ಮಂಗಳವಾರ ಇವಿಯಂ ಜಾಗೃತಿ ತರಬೇತಿ ಕಾರ್ಯಕ್ರಮ ನಡೆಯಿತು
ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಛೇರಿ ಪಕ್ಕದ ಮಾರುಕಟ್ಟೆ ಸಂಕೀರ್ಣದಲ್ಲಿ ಮಂಗಳವಾರ ಇವಿಯಂ ಜಾಗೃತಿ ತರಬೇತಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಅಂಗಡಿ ವ್ಯಾಪಾರಿಗಳು ವಿವಿಪ್ಯಾಟ್ ನಲ್ಲಿ ತಾವು ದಾಖಲಿಸಿದ ಮತಗಳ ಬಗ್ಗೆ ಖಾತ್ರಿ ಪಡೆದರು. ಮತ್ತು ಇವಿಯಂ ಮತದಾನದ ಬಗ್ಗೆ ವಿಶ್ವಾಸವ್ಯಕ್ತಪಡಿಸಿದರು.
ತರಬೇತಿಯನ್ನು ಸೆಕ್ಟರ್ ಅಧಿಕಾರಿ ಜಿ.ಕೆ. ನಾರಾಯಣಸ್ವಾಮಿ ನಡೆಸಿಕೊಟ್ಟರು. ಮಾಸ್ಟರ್ ಟ್ರೈನರ್ ವಿ.ತಿಪ್ಪಣ್ಣ, ಪುರಸಭೆ ಮುಖ್ಯಾಧಿಕಾರಿ ವೈ,ಎನ್.ಸತ್ಯನಾರಾಯಣ್, ವ್ಯವಸ್ಥಾಪಕ ನವೀನ್ಚಂದ್ರ, ಪುರಸಭೆ ಹಿರಿಯ ಸದಸ್ಯ ಬಿ.ವೆಂಕಟರೆಡ್ಡಿ, ಕಛೇರಿ ಸಿಬ್ಬಂದಿ ಎನ್.ಶಂಕರ್, ನಾಗೇಶ್ ಇದ್ದರು
ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ
ಕೋಲಾರ ಜ.09 ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಮಂಗಳವಾರ ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರವನ್ನು ವಜಾ ಗೊಳಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಅರುಣ್ ಪ್ರಕಾಶ್, ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 6 ತಿಂಗಳಿನಿಂದ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಕಿರುಕುಳ, ಸುಳ್ಳು ಮೊಕದ್ದಮೆ,ಜೈಲ್ ವಾಸ ನಿರಂತರವಾಗಿ ನಡೆಯುತ್ತಿದ್ದು,ಪೆÇಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕೀಯ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರದಲ್ಲಿ ಗೋರಕ್ಷಕರಿಗೆ 48 ದಿನ ಜೈಲುವಾಸ, ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಿಗೆ ಪ್ರಮೋದ್ ಮುತಾಲಿಕ್ ಅವರಿಗೆ ಪ್ರವೇಶ ನಿಬರ್ಂಧ, ಗ್ಯಾನೇಂದ್ರ ಜೈನ ಬಂಧನ, ಮಂಗಳೂರಿನ ಹಿಂದೂ ಕಾರ್ಯಕರ್ತರಿಗೆ ಗಡಿಪಾರು ಆದೇಶ,ಬೆಂಗಳೂರಿನಲ್ಲಿ ಹಿಂದೂ ಹೋರಾಟಗಾರರ ಬಂಧನ ಗುಂಡಾ ಆಕ್ಟ್ ಮೊಕದ್ದೊಮ್ಮೆ, ಕಲ್ಬುರ್ಗಿ ಹಿಂದೂ ಕಾರ್ಯಕರ್ತರಿಗೆ ರೌಡಿ ಶೀಟ್ ,ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್
ಹಬ್ಬದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಮಾಯಕ ಹಿಂದೂಗಳ ಬಂಧನ,ಗಂಗಾವತಿಯಲ್ಲಿ ಗಣವತಿ ವಿಸರ್ಜನೆ ಸಂದರ್ಭದಲ್ಲಿ ಮಸೀದೆಗೆ ಆರತಿ ಮಾಡಿದ್ರು ಅಂತ ಕೇಸ್.ಚಿಕ್ಕಮಗಳೂರಿನಲ್ಲಿ 14 ಹಿಂದೂ ಕಾರ್ಯಕರ್ತರ 7 ವರ್ಷ ಹಳೆಯ ಕೇಸ್ ಮತ್ತೆ ಪ್ರಾರಂಭ.ಹೀಗೆ ಇನ್ನೂ ಹಲವಾರು ಅಹಿತಕರ ಹಿಂದೂ ವಿರೋಧಿ ದುರ್ಘಟನೆಗಳು ನಡೆಯುತ್ತಲೇ ಇದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ಓಲೈಸಲು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ನಿಜಕ್ಕೂ ಖಂಡನೀಯ ಕೂಡಲೇ ಮಾನ್ಯ ರಾಜ್ಯಪಾಲರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಗೊಳಿಸಿ ಹಿಂದೂಗಳ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ಶ್ರೀ ರಾಮ ಸೇನೆ ಕೋಲಾರ ವಿಭಾಗಿಯ ಅಧ್ಯಕ್ಷರ ರಮೇಶ್ ರಾಜ್ ಅರಸ್,ಯೋಗ ರವಿ, ಶಂಕರ್, ನವೀನ್, ನಾಗೇಂದ್ರ ಶ್ರೀಕಾಂತ್, ಸುಭಾμï, ಕಾರ್ತಿಕ್, ವಿನೋದ್ ಮುಂತಾದವರು ಭಾಗವಹಿಸಿದ್ದರು.
ಜನಪರ ಹೋರಾಟಗಳೊಂದಿಗೆ ಹಾಸು ಹೊಕ್ಕಾದ ಕೋಲಾರದ ಪತ್ರಿಕೆಗಳು: ವಿಶ್ವಕುಂದಾಪುರ
ಉಡುಪಿ ಜಿಲ್ಲಾ ಬರಹಗಾರರ ಕೋಶ' ಬಿಡುಗಡೆಕಾರ್ಯಕ್ರಮದಲ್ಲಿಉಪನ್ಯಾಸ ಕೋಲಾರ: ಜಗತ್ತಿಗೆ ಅಪಾರ ಪ್ರಮಾಣದಲ್ಲಿ ಚಿನ್ನ ಕೊಟ್ಟ; ನಾಡಿಗೆ ಹಾಲು, ತರಕಾರಿ, ಟೊಮಾಟೋ, ಮಾವು ಕೊಡುತ್ತಿರುವ ಅವಿಭಜಿತ ಕೋಲಾರ ಜಿಲ್ಲೆಯ ಶ್ರಮಜೀವಿಗಳ ಹೋರಾಟಗಳೊಂದಿಗೆ ಜಿಲ್ಲಾ ಪತ್ರಿಕೆಗಳು ಹಾಸುಹೊಕ್ಕಾಗಿವೆ. ಪತ್ರಿಕೆಗಳ ಜೊತೆ ಚಳವಳಿಗಳು ಬೆಳೆದಿವೆ, ಆಂದೋಲನಗಳ ಜೊತೆ ಪತ್ರಿಕೆಗಳು ಬೆಳೆದಿವೆ ಎನ್ನುವಷ್ಟರ ಮಟ್ಟಿಗೆ ಅವು ಒಂದಕ್ಕೊಂದು ಬೆಸೆದುಕೊಂಡಿವೆಎಂದು ಹಿರಿಯ ಪತ್ರಕರ್ತ, ಲೇಖಕ ವಿಶ್ವಕುಂದಾಪುರಅಭಿಪ್ರಾಯ ಪಟ್ಟಿದ್ದಾರೆ. ಭಾಷಾ ಅಸ್ಮಿತೆಯ ಹೋರಾಟಕ್ಕೂ ಭಾಷಾ ಸೌಹಾರ್ದತೆಗೂ ಬಯಲುಸೀಮೆಯ ಈ ನೆಲ ಉದಾಹರಣೆಯಾಗಿದೆಎಂದುಉಡುಪಿಯಎಂಜಿಎಂಕಾಲೇಜಿನಅಮೃತ ಮಹೋತ್ಸವದ ಸುಸಂದರ್ಭದಲ್ಲಿಕಾಲೇಜಿನರವೀಂದ್ರ ಭವನದಲ್ಲಿಜನವರಿ 7ರಂದು ಭಾನುವಾರ ನಡೆದ ಡಾ. ಅನಿಲ್ ಕುಮಾರ್ ಶೆಟ್ಟಿ ಸಂಪಾದಕತ್ವದ
ಉಡುಪಿ ಜಿಲ್ಲಾ ಬರಹಗಾರರ ಕೋಶ’ ಕೃತಿ ಬಿಡುಗಡೆ ಸಮಾರಂಭದಲ್ಲಿಗಡಿನಾಡು-ಹೊರನಾಡು ಪತ್ರಿಕೆಗಳು ಕುರಿತ ವಿಚಾರಗೋಷ್ಠಿಯಲ್ಲಿಉಪನ್ಯಾಸ ನೀಡಿದ ವಿಶ್ವಕುಂದಾಪುರ ಹೇಳಿದರು. ನೀಲಿ ಮತ್ತು ಕೆಂಪು ಚಳವಳಿಗಳ ದಟ್ಟಇತಿಹಾಸ ಹೊಂದಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೊನ್ನುಡಿ, ಸಂಚಿಕೆ ಮುಂತಾದಜಿಲ್ಲಾ ಪತ್ರಿಕೆಗಳು ಹೋರಾಟಗಳಲ್ಲಿ ವಹಿಸಿದ ಪಾತ್ರ ಮಹತ್ವದ್ದಾಗಿದೆ. ಕೋಲಾರ ಪತ್ರಿಕೆಯಂಥ ಜಿಲ್ಲಾ ಪತ್ರಿಕೆ ಸುವರ್ಣ ಮಹೋತ್ಸವ ಸಂದರ್ಭದಲ್ಲಿರುವುದುಗಮನಾರ್ಹವಾಗಿದೆಎಂದರು. ನೀರಿನಕೊರತೆಅನುಭವಿಸುತ್ತಿರುವಉಭಯ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿಗಾಗಿಜನಸಮುದಾಯ ನಡೆಸಿದ ದೀರ್ಘ ಹೋರಾಟಗಳಿಗೆ ಪತ್ರಿಕೆಗಳೂ ತಮ್ಮಕೊಡುಗೆ ಸಲ್ಲಿಸಿವೆ ಎಂದು ಹೇಳಿದರು. ಶ್ರಮಜೀವಿಗಳ ಸಂಕಟಕ್ಕೆದನಿಯಾಗಿ, ಜನಪರ ಚಳವಳಿಗಳ ಮಾರ್ದನಿಯಾಗಿ ಪತ್ರಿಕೆಗಳು ಕಾರ್ಯನಿರ್ವಹಿಸಿವೆ ಎಂದರು.
ಬಹುತ್ವದ ಮೇಲೆ ದಾಳಿ ನಡೆಯುತ್ತಿರುವಕಾಲಘಟ್ಟದಲ್ಲಿ ಭಾಷಾ ಹಾಗೂ ಸಾಂಸ್ಕøತಿಕ ವೈವಿಧ್ಯತೆಯನ್ನುಕಾಪಾಡುವಲ್ಲಿ ಪತ್ರಿಕೆಗಳ ಸಹಿತ ಮಾಧ್ಯಮದ ಪಾತ್ರ ಮಹತ್ವದ್ದುಎಂದರು. ಪ್ರಸ್ತುತ ಮಾಧ್ಯಮಕ್ಷೇತ್ರವು ವಾರೆನ್ ಬಫೆಟ್ನಿಂದ ಹಿಡಿದುಗೌತಮ್ಅದಾನಿ ವರೆಗೆಕಾರ್ಪೊರೇಟ್ಜಗತ್ತಿನ ಹಿಡತಕ್ಕೆ ಸಿಲುಕಿ ಪತ್ರಕರ್ತರು ಉಸಿರುಗಟ್ಟಿಸುವ ವಾತಾವರಣದಲ್ಲಿಕಾರ್ಯನಿರ್ವಹಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆಎಂದುಆತಂಕ ವ್ಯಕ್ತಪಡಿಸಿದರು.
ಪತ್ರಿಕಾ ವೃತ್ತಿ ಮತ್ತು ಸಾಹಿತ್ಯಕ್ಷೇತ್ರದಅನನ್ಯ ಸಾಧಕ ಡಿ.ವಿ. ಗುಂಡಪ್ಪ (ಡಿವಿಜಿ) ಕೋಲಾರಜಿಲ್ಲೆಯವರೆನ್ನುವುದು ಹೆಮ್ಮೆಯ ಸಂಗತಿಎಂದರು. ಜಿಲ್ಲೆಯಲ್ಲಿಎರಡುಡಜನ್ನಷ್ಟು ಸ್ಥಳೀಯ ಪತ್ರಿಕೆಗಳಿರುವುದು ಕರ್ನಾಟಕರಾಜ್ಯದಲ್ಲೇಅಪರೂಪದದಾಖಲೆಎಂದು ವಿಶ್ವಕುಂದಾಪುರ ಹೇಳಿದರು.
ತಮಿಳು ನಾಡು ಮತ್ತುಆಂಧ್ರ ಪ್ರದೇಶ ರಾಜ್ಯಗಳ ಗಡಿಗಳನ್ನು ಹಂಚಿಕೊಂಡಿರುವಜಿಲ್ಲೆಯಲ್ಲಿ ತಮಿಳು ಮತ್ತುತೆಲುಗು ಪತ್ರಿಕೆಗಳೂ ಪ್ರಸಾರದಲ್ಲಿವೆ. ಅಲ್ಪಸಂಖ್ಯಾತ ಸಮುದಾಯದವರ ನಡುವೆಉರ್ದು ಪತ್ರಿಕೆಗಳ ಪ್ರಸಾರವೂಇದೆ. ಇವೆಲ್ಲವೂಜಿಲ್ಲೆಯಲ್ಲಿನ ಭಾಷಾ ಸೌಹಾರ್ದತೆ ಹಾಗೂ ಅದನ್ನು ಪೋಷಿಸುವಲ್ಲಿ ಮಾಧ್ಯಮದ ಪಾತ್ರವನ್ನುತೋರಿಸುತ್ತವೆಎಂದುಅಭಿಪ್ರಾಯಪಟ್ಟರು.
ಮುದ್ದಣನ ಕಾಲದಿಂದ…
ಮುದ್ದಣನ ಕಾಲದಿಂದ (1870) ಹಿಡಿದು 2020ರವರೆಗಿನ ಒಂದುವರೆ ಶತಮಾನದಅವಧಿಯಉಡುಪಿ ಜಿಲ್ಲಾ ಬರಹಗಾರರ ಮಾಹಿತಿಯನ್ನು ಕೋಶ ಒಳಗೊಂಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಡಾ. ಸುಬ್ಬಣ್ಣರೈಕೃತಿ ಬಿಡುಗಡೆ ಮಾಡಿದರು. ಎಂಜಿಎಂಕಾಲೇಜ್ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣಕಾರಂತ, ವಿದ್ವಾಂಸರಾದಡಾ. ಪಾದೇಕಲ್ಲು ವಿಷ್ಣು ಭಟ್, ಬ್ಯಾಂಕ್ಆಫ್ ಬರೋಡಾಅಧಿಕಾರಿರವೀಂದ್ರರೈ, ಪ್ರಕಾಶಕರಾದ ಬೆಂಗಳೂರಿನ ಬಾಲಾಜಿ ಪಬ್ಲಿಷರ್ಸ್ನಉದಯ್ ಶೆಟ್ಟಿ ಮೊದಲಾದವರು ಮಾತನಾಡಿದರು. ಡಾ. ವರದರಾಜಚಂದ್ರಗಿರಿಅಧ್ಯಕ್ಷತೆ ವಹಿಸಿದ್ದರು. ಕೋಶದ ಸಂಪಾದಕಡಾ. ಅನಿಲ್ ಕುಮಾರ್ ಶೆಟ್ಟಿ-ಪತ್ನಿ ಮಲ್ಲಿಕಾದಂಪತಿಯನ್ನು ಸನ್ಮಾನಿಸಲಾಯಿತು.
ಹೆತ್ತ ತಾಯಿಯೆ 4 ವರ್ಷದ ಮಗನನ್ನು ಹತ್ಯೆ ಮಾಡಿ ಸೂಟ್ಕೇಸ್ನಲ್ಲಿ ಸಾಗಿಸಿದಳು- ಕೊಲೆಗಾರ್ತಿ ತಾಯಿಗೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್
ಬೆಂಗಳೂರು: ಹೆತ್ತ ತಾಯಿಯೆ ನಾಲ್ಕು ವರ್ಷದ ಮಗನನ್ನು ಕೊಂದು ಸೂಟ್ಕೇಸ್ನಲ್ಲಿ ಸಾಗಿಸಿರುವ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಭಯಾನಕ ಕೃತ್ಯಕ್ಕೆ ಕಾರಣವಾದ ಸ್ಟಾರ್ಟ್ ಅಪ್ ಫೌಂಡರ್ ಮತ್ತು ಸಿಇಒ ಸೂಚನಾ ಸೇಠ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಿಇಒ ಸೂಚನಾ ಸೇಠ್ ಗೋವಾಕ್ಕೆ ತೆರಳಿದ್ದರು. ಉತ್ತರ ಗೋವಾದ ಕಂಡೋಲಿಮಾ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಮಗನ ಹತ್ಯೆ ಮಾಡಿದ್ದಾರೆ. ಬಳಿಕ ಬಾಡಿಗೆ ಕಾರಿನಲ್ಲಿ ಮಗನ ಶವ ಇಟ್ಟುಕೊಂಡು ಚಿತ್ರದುರ್ಗದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಮಹಿಳೆ ತಂಗಿದ್ದ ಸರ್ವೀಸ್ ಅಪಾರ್ಟ್ಮೆಂಟ್ ಕ್ಲೀನಿಂಗ್ಗೆ ಸಿಬ್ಬಂದಿ ಹೋದಾಗ ರಕ್ತದ ಕಲೆ ಪತ್ತೆಯಾಗಿದೆ. ಸರ್ವೀಸ್ ಅಪಾರ್ಟ್ಮೆಂಟ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಮಗನ ಜೊತೆ ಬಂದಿದ್ದ ಮಹಿಳೆ ವಾಪಸ್ ಹೋಗುವಾಗ ಮಗ ಇಲ್ಲದೇ ಖಾಲಿ ಮಾಡಿದ್ದು ಬೆಳಕಿಗೆ ಬಂದಿದೆ. ತಕ್ಷಣವೇ ಗೋವಾ ಪೊಲೀಸ್ ಇನ್ಸ್ಪೆಕ್ಟರ್, ಸೂಚನಾ ಸೇಠ್ ಸಂಪರ್ಕಿಸಿ ಮಾತನಾಡಿದ್ದಾರೆ. ಆಗ ಆಕೆ ನನ್ನ ಮಗ ಸ್ನೇಹಿತರ ಮನೆಯಲ್ಲಿ ಇದ್ದಾನೆ ಎಂದು ತಿಳಿಸಿದ್ದಾರೆ. ಆ ಸ್ನೇಹಿತನ ಮನೆ ವಿಳಾಸ ಕೇಳಿದಾಗ ನಕಲಿಯಾಗಿದ್ದು ಕಂಡು ಬಂದಿದೆ.
ಇದಾದ ಮೇಲೆ ಗೋವಾ ಪೊಲೀಸರು ಮತ್ತೆ ಸೂಚನಾ ಸೇಠ್ ಪ್ರಯಾಣಿಸುತ್ತಿದ್ದ ಕಾರಿನ ಚಾಲಕನ ಜೊತೆ ಮಾತನಾಡಿದ್ದಾರೆ. ಕಾರು ಚಾಲಕನಿಗೆ ಪೊಲೀಸರು ನೀನು ಹತ್ತಿರದ ಪೊಲೀಸ್ ಠಾಣೆಗೆ ಹೋಗು ಎಂದಿದ್ದಾರೆ. ಪೊಲೀಸರು ಸೂಚನೆ ಅಂತೆ ಟ್ಯಾಕ್ಸಿ ಚಾಲಕ ಚಿತ್ರದುರ್ಗದ ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಆಗ ಕಾರಿನಲ್ಲಿಟ್ಟಿದ್ದ ಸೂಟ್ಕೇಸ್ನಲ್ಲಿ ಮಗನ ಶವ ಇರೋದು ಬೆಳಕಿಗೆ ಬಂದಿದೆ.
ತಾಯಿಯೇ 4 ವರ್ಷದ ಮಗನನ್ನು ಹತ್ಯೆ ಮಾಡಿದ್ದು ಏಕೆ ಎಂಬ ಕಾರಣ ಇನ್ನೂ ನಿಗೂಢವಾಗಿದೆ. ಹೆತ್ತ ತಾಯಿಯಿಂದಲೇ ಈ ರೀತಿ ಮಗನ ಹತ್ಯೆ ಆಗಿರೋದು ನಿಜಕ್ಕೂ ಆಘಾತಕಾರಿಯಾಗಿದೆ. ಆರೋಪಿ ಸೂಚನಾ ಸೇಠ್ ಸದ್ಯ ಚಿತ್ರದುರ್ಗದ ಐಮಂಗಲ ಪೊಲೀಸ್ ವಶದಲ್ಲಿದ್ದಾರೆ. ಗೋವಾ ಪೊಲೀಸರು ಇಂದು ಐಮಂಗಲಕ್ಕೆ ಬಂದು ಸೂಚನಾ ಸೇಠ್ ಅವರನ್ನು ಕರೆದೊಯ್ಯಲಿದ್ದಾರೆ. ತಾಯಿಯ ವಿಚಾರಣೆ ಬಳಿಕ ಹತ್ಯೆಯ ಅಸಲಿ ಕಾರಣ ಬಹಿರಂಗವಾಗಲಿದೆ.
ಬೆಂಗಳೂರಲ್ಲಿದ್ದ ಸೂಚನಾ ಸೇಠ್ ಅವರು ದಿ ಮೈಂಡ್ ಫುಲ್ AI ಲ್ಯಾಬ್ ಕಂಪನಿಯ ಸಿಇಒ ಆಗಿದ್ದಾರೆ. ಇವರ ಲಿಂಕ್ಡನ್ ಪ್ರೊಫೈಲ್ನಲ್ಲಿ AI ಎಥಿಕ್ಸ್ ಎಕ್ಸ್ಫರ್ಟ್ ಎಂದು ಉಲ್ಲೇಖವಾಗಿದೆ. ಅಮೆರಿಕಾದ ನ್ಯೂಯಾರ್ಕ್ನಲ್ಲಿ ಕೆಲಸ ಮಾಡಿ ಬಂದಿರುವ ಸೂಚನಾ ಸೇಠ್, AI ಎಥಿಕ್ಸ್ ಲಿಸ್ಟ್ ನಲ್ಲಿ ನೂರು ಮಂದಿ ಬ್ರಿಲಿಯೆಂಟ್ ಮಹಿಳೆಯರಲ್ಲಿ ಒಬ್ಬರು ಎಂದು ಬರೆಯಲಾಗಿದೆ.
ಇದೀಗ ಕೊಲೆಗಾರ್ತಿ ತಾಯಿಗೆ ಸುಚನಾಳನ್ನು ಗೋವಾ ಕೋರ್ಟ್ 6 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಗೋವಾದ ಮಾಪುಸಾ ಕೋರ್ಟ್ ಗೆ ಹಂತಕಿ ಸುಚನಾಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ಸಹಕಾರಿಗಳ ಸ್ವಾರ್ಥಕ್ಕೆ ಟಿಎಪಿಸಿಎಂಎಸ್ ಚುನಾವಣೆ ಕಾಂಗ್ರೆಸ್ ಪಕ್ಷದ ಕುತಂತ್ರ ಕೆಲಸಕ್ಕೆ ರೈತ ಮತದಾರರ ತಕ್ಕ ಪಾಠ ಮೈತ್ರಿ ಪಕ್ಷದ ಒಗ್ಗಟ್ಟಿನ ಹೋರಾಟಕ್ಕೆ ಮೊದಲ ಗೆಲುವು: ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್
ಕೋಲಾರ,ಜ,.08: ತಾಲೂಕಿನ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸ್ವಯಂ ಘೋಷಿತ ಹಿರಿಯ ಸಹಕಾರಿಗಳಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ರೈತ ಸಮುದಾಯವು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂಆರ್ ಶ್ರೀನಾಥ್ ತಿಳಿಸಿದರು.
ಭಾನುವಾರ ನಡೆದ ಟಿಎಪಿಸಿಎಂಎಸ್ ಚುನಾವಣೆಯ ಫಲಿತಾಂಶವನ್ನು ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ರೈತರ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದ್ದ ಟಿಎಪಿಸಿಎಂಎಸ್ ಸಹಕಾರಿಗಳು ತಮ್ಮ ಸ್ವಾರ್ಥಕ್ಕೆ ಬಳಕೆಯಾಗಿದ್ದೇ ಹೆಚ್ಚು ಇಂತಹ ಸಂದರ್ಭದಲ್ಲಿ ಜಿಲ್ಲೆಯ ಸಹಕಾರಿಗಳ ಮಾರ್ಗದರ್ಶನದಲ್ಲಿ ಈ ಚುನಾವಣೆಯನ್ನು ಎದುರಿಸಲಾಗಿತ್ತು.
ತಾಲೂಕಿನ ಟಿಎಪಿಸಿಎಂಎಸ್ ಸಹಕಾರಿ ಸಂಸ್ಥೆಯಲ್ಲಿ ಸುಮಾರು 1980 ರಲ್ಲಿ ನಡೆದ ಚುನಾವಣೆಯೇ ಕೊನೆಯಾಗಿತ್ತು ಅಂದಿನಿಂದಲೂ ಅವಿರೋಧವಾಗಿ ಆಯ್ಕೆಯಾಗಿ ಬರಲಾಗಿತ್ತು. ಭಾನುವಾರ ನಡೆದ ಚುನಾವಣೆಯಲ್ಲಿ ಕೂಡ ಅವಿರೋಧವಾಗಲು ಮೂರು ಪಕ್ಷಗಳ ನೇತೃತ್ವದಲ್ಲಿ ಒಂದು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿತ್ತು. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸಹಕಾರಿ ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕೆ ಮುಖಂಡರುಗಳನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದರು.
ಹಿರಿಯ ಮಾರ್ಗದಲ್ಲಿ ಮೂರು ಪಕ್ಷಗಳ ಮುಖಂಡರು ಒಮ್ಮತಕ್ಕೆ ಬಂದು ಸೀಟು ಹಂಚಿಕೆಯನ್ನು ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ಹಿರಿಯ ಸಹಕಾರಿಗಳು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದಕ್ಕೆ ಮುಂದಾಗಿದ್ದು ಅಲ್ಲದೆ ನಮ್ಮೊಂದಿಗೆ ಚರ್ಚೆಗಳ ನಡೆಸುತ್ತಿರುವಾಗಲೇ ಮತ್ತೊಂದು ಕಡೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು.
ಕಾಂಗ್ರೆಸ್ ಪಕ್ಷದ ಹಿರಿಯ ಸಹಕಾರಿಗಳ ಕುತಂತ್ರದ ಕೆಲಸವನ್ನು ಗಮನಿಸಿದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಎಚ್ಚೆತ್ತುಕೊಂಡು ಟಿಎಪಿಸಿಎಂಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡು ಎಲ್ಲಾ ಒಗ್ಗಟ್ಟಾಗಿ ಹೋರಾಡಿದ ಪರಿಣಾಮವಾಗಿ ನಾವು 8 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಮುಖಂಡರಿಗೆ ಮುಖಭಂಗವಾಗುವಂತೆ ಮಾಡಿದ್ದೇವೆ ಎಂದು ಹೇಳಿದರು.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಮುಖಂಡರಿಗೆ ಶಕ್ತಿ ಬಂದಿದ್ದು, ಮುಂದೆ ನಡೆಯುವ ಎಲ್ಲಾ ಚುನಾವಣೆಯನ್ನು ಮೈತ್ರಿ ಮೂಲಕ ಎದುರಿಸುತ್ತೇವೆ. ಈ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಮೇಲೆ ನಂಬಿಕೆ ಇಟ್ಟು ಅಭೂತಪೂರ್ವ ಗೆಲುವು ತಂದು ಕೊಟ್ಟ ಎಲ್ಲಾ ಮತದಾರರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದ್ದಾರೆ.
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ
ಕುಂದಾಪುರ: ಖ್ಯಾತ ವಿದ್ವಾಂಸ, ರಂಗ ನಿರ್ದೇಶಕ, ಸಾಹಿತಿ, ವಾಚಿಕಾಭಿನಯಪಟು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ “ಕುಂದಪ್ರಭ” ಸಂಸ್ಥೆಯ ಆಶ್ರಯದಲ್ಲಿ ನೀಡಲಾಗುವ ಕೋ. ಮ. ಕಾರಂತ ಪ್ರಶಸ್ತಿಯನ್ನು ಆದಿತ್ಯವಾರ ಜ.7 ರಂದು ಪ್ರದಾನ ಮಾಡಲಾಯಿತು.ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ಸಮಾರಂಭವನ್ನು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಮೊಕ್ತೇಸರರೂ, ಪ. ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಆದ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಉದ್ಘಾಟಿಸಿದರು.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು. “ಯಾವುದೇ ಕ್ಷೇತ್ರದಲ್ಲಾಗಲಿ ಅರ್ಹರಿಗೆ ಅವಕಾಶ, ಗೌರವ ಲಭಿಸಿದರೆ ಸಂತೋಷವಾಗುತ್ತದೆ. ಪ್ರಶಸ್ತಿಗಾಗಿ ಲಾಬಿ ಮಾಡುವವರು, ಅರ್ಹತೆ ಇಲ್ಲದಿದ್ದರೂ ಪ್ರಶಸ್ತಿ ಸ್ವೀಕರಿಸುವವರನ್ನು ನಾವು ಕಾಣುತ್ತಿದ್ದೇವೆ. ಹಲವರು ಅರ್ಹತೆ ಇದ್ದರೂ ಪ್ರಶಸ್ತಿ ಗೌರವಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಆದರೆ ಪ್ರಶಸ್ತಿಯೇ ಅವರನ್ನು ಹುಡುಕಿಕೊಂಡು ಬಂದಾಗ ಸಂತೋಷ ಪಡುತ್ತಾರೆ. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಪ್ರಶಸ್ತಿಗಾಗಿ ಸಾಧನೆ ಮಾಡಿದವರಲ್ಲ. ಕೋ. ಮ. ಕಾರಂತ ಪ್ರಶಸ್ತಿಗೆ ಇಂತಹ ಸಾಧಕರನ್ನು ಹುಡುಕಿ ಆಯ್ಕೆ ಮಾಡಿರುವುದು ಸಂತೋಷ ಉಂಟು ಮಾಡಿತು.” ಎಂದು ಅಭಿನಂದಿಸಿದರು.
ಪ್ರಶಸ್ತಿ ಸ್ವೀಕರಿಸಿದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ “ನಾನೇನು ಸಾಧಕನಲ್ಲ… ನಾನು ಸಾಹಿತ್ಯಿಕ, ಸಾಂಸ್ಕøತಿಕವಾಗಿ ಕಲಿತದ್ದೆಲ್ಲ ನನ್ನ ಕುಟುಂಬದ ಬಳುವಳಿ ಮತ್ತು ಕಲಿಯಬೇಕೆಂಬ ಆಸಕ್ತಿಯಿಂದ ಆದ ಸಾಧನೆಗಳು. ಹಿರಿಯ ಸಾಧಕರ ಹೆಜ್ಜೆಗಳನ್ನು ಗಮನಿಸಿ ನಾನು ಬೆಳೆದೆ. ಸಾಧನೆಗೆ ಏಕ ದಾರಿ ಎಂಬುವುದಿಲ್ಲ. ಬಂದ ಅವಕಾಶವನ್ನು ಸವಾಲಾಗಿ ಸ್ವೀಕರಿಸಿ ಶ್ರಮಿಸಿದರೆ ಸಾಧನೆಯ ಹಾದಿ ತೆರೆದುಕೊಳ್ಳುತ್ತದೆ. ಬನ್ನಂಜೆ ಗೋವಿಂದ ಆಚಾರ್ಯ, ಕೋ. ಮ. ಕಾರಂತರ ಬರಹಗಳನ್ನು ಉಡುಪಿಯಲ್ಲಿರುವಾಗ ನಾನು ಓದುತ್ತಿದ್ದೆ. ಜೀವನದಲ್ಲಿ ಕೆಲವು ಕಡೆ ನಿನ್ನಿಂದ ಸಾಧ್ಯವೇ ಎಂಬ ಸವಾಲು ಎದುರಾದಾಗ ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ನನ್ನನ್ನು ನನ್ನೂರ ಜನರಿಗೆ ಪರಿಚಯಿಸಿ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ ಮಾಡಿದ “ಕುಂದಪ್ರಭ ಬಳಗ”ಕ್ಕೆ ನಾನು ಆಭಾರಿ.” ಎಂದು ಅಭಿನಂದಿಸಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಕುಂದಾಪುರ ತಾಲೂಕಿನ ಗೃಹರಕ್ಷಕರನ್ನು ಗೌರವಿಸಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಹಿರಿಯ ಉದ್ಯಮಿ ದತ್ತಾನಂದ ಗಂಗೊಳ್ಳಿ ಶುಭ ಹಾರೈಸಿದರು. ಶ್ರೀಮತಿ ಲಕ್ಷ್ಮೀ ಶಂಕರನಾರಾಯಣ ಉಪಾಧ್ಯಾಯರನ್ನು ಗೌರವಿಸಲಾಯಿತು.
ಸಾಧಕರ ಕಥೆಗಳನ್ನು ಬರೆದ ಪದವಿ, ಪದವಿ ಪೂರ್ವ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಅಭಿನಂದನಾ ಪತ್ರ ವಿತರಿಸಲಾಯಿತು.
“ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಂಕಣಗಾರ ಕೋ. ಶಿವಾನಂದ ಕಾರಂತರು ಸಹೋದರ ಕೋ. ಮ. ಕಾರಂತರ ಕುರಿತು ಮಾತನಾಡಿದರು. ತೆಂಕನಿಡಿಯೂರು ಪ. ಪೂ. ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ನಿರೂಪಿಸಿದರು. ಕೋ. ರಮಾನಂದ ಕಾರಂತ, ಹಂದಕುಂದ ಸೋಮಶೇಖರ ಶೆಟ್ಟಿ, ಸುರೇಶ ಕೋಟೆಗಾರ್, ಯು. ಸಂಗೀತಾ ಶೆಣೈ, ಶ್ರೀನಿವಾಸ ಶೇಟ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ಹಾರ ಅರ್ಪಿಸಿ, ಗೌರವಿಸಿದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ “ಅಪ್ಪಯ್ಯನ ಆಸ್ತಿಕತೆ” ಕೃತಿಗೆ ಬಹಳ ಬೇಡಿಕೆ ಬಂತು.
ಲೇಖಕ ಪಿ. ಜಯವಂತ ಪೈ ವಂದಿಸಿದರು. ವೇಣುಗೋಪಾಲ ಭಟ್ ಕೋಟೇಶ್ವರ ಅವರ ತಂಡದಿಂದ ಲಘು ಸಂಗೀತ ಕಾರ್ಯಕ್ರಮ ಜರುಗಿತು.
ಫವತಿ ಖಾತೆ ಯಾರ ಹೆಸರಿಗೆ ಬದಲಾವಣೆಗೆ ಬೇಕಾದರೆ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಿ : ಉಪತಹಶೀಲ್ದಾರ್ ಎನ್. ವಿನೋದ್
ಶ್ರೀನಿವಾಸಪುರ : ಫವತಿ ಖಾತೆ ಬಾಕಿ ಇರುವ ಪ್ರಕರಣಗಳನ್ನು ಅರ್ಜಿದಾರರು ಅರ್ಜಿ ಸಲ್ಲಿಸಿ , ಫವತಿಯನ್ನ ಯಾರ ಹೆಸರಿಗೆ ಬದಲಾವಣೆ ಮಾಡಿಕೊಡಬೇಕು ಎನ್ನುವವರಿಗೆ ಬೇಕಾದ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸುವಂತೆ ಉಪತಹಶೀಲ್ದಾರ್ ಎನ್. ವಿನೋದ್ ತಿಳಿಸಿದರು.
ತಾಲೂಕಿನ ರೋಣೂರು ಹೋಬಳಿಗೆ ಸಂಬಂದಿಸಿದಂತೆ ನಾಡಕಛೇರಿಯಲ್ಲಿ ತಾಲೂಕು ಕಂದಾಯ ಇಲಾಖೆವತಿಯಿಂದ ಫವತಿವಾರಸ್ಸು ಖಾತೆ ಆಂದೋಲನಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಈ ಆಂದೋಲನವು ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಭಾಗದ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. 15 ದಿನಗಳ ವರೆಗೆ ಫವತಿಖಾತೆಯನ್ನು ಬದಲಾಯಿಸಿ ಕೊಡಲಾಗುವುದು. ಈ ಆಂದೋಲನವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಫವತಿವಾರಸ್ಸು ಖಾತೆ ಆಂದೋಲನಾ ಕಾರ್ಯಕ್ರಮದಲ್ಲಿ 5 ಅರ್ಜಿಗಳನ್ನು ಸ್ವೀಕರಿಸಲಾಯಿತು. ಗ್ರಾಮಲೆಕ್ಕಗಾರದ ಎನ್. ಮುರಳಿ, ಆದರ್ಶ ಹಾಗು ರೈತರು ಇದ್ದರು.