ಕುಂದಾಪುರ (ಜನವರಿ 12) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೇಟ್ ಮಂಗಳೂರಿನಲ್ಲಿ ಜನವರಿ 6 ಮತ್ತು 7ರಂದು ನಡೆದ 6ನೇ ಕುದುರೆಮುಖ್ ಟ್ರೋಫಿ, ಆಲ್ ಇಂಡಿಯಾ ಓಪನ್ ಫೈಡ್ ರೆಟೆಡ್ ರಾಪಿಡ್ ಚೆಸ್ ಟೂರ್ನಮೆಂಟ್ 2024ರ ಫೈನಲ್ ರಾಂಕಿಂಗ್ ಲಿಸ್ಟ್ ನ ಕೆಟಗರಿಯಲ್ಲಿ ಅತ್ಯುತ್ತಮ ಏಳು ಚೆಸ್ ಆಟಗಾರರಲ್ಲಿ ಒಬ್ಬನಾಗಿ, ಕರ್ನಾಟಕದ ಶ್ರೀನಿತ್ ಶೇಟ್ ಭಾಗವಹಿಸಿ, 9 ಸುತ್ತಿನಲ್ಲಿ 4 ಪಾಯಿಂಟ್ ಗಳಿಸಿ, ಮೂರನೇ ಸ್ಥಾನವನ್ನು ಪಡೆದಿರುತ್ತಾನೆ. ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು
Month: January 2024
ಮಂಗಳೂರು ಸೇಂಟ್ ಆಗ್ನೆಸ್ ಪಿಯು ಕಾಲೇಜ್ 2023-’24 ರ ಹೊರಹೋಗುವ ಬ್ಯಾಚ್ಗೆ ಬೀಳ್ಕೊಡುಗೆ ಕಾರ್ಯಕ್ರಮ/ St. Agnes PU College, Mangalore Farewell Program for Outgoing Batch 2023-’24
ಸೇಂಟ್ ಆಗ್ನೆಸ್ ಪಿಯು ಕಾಲೇಜ್ 2023-’24 ರ ಹೊರಹೋಗುವ ಬ್ಯಾಚ್ಗೆ ಬೀಳ್ಕೊಡುಗೆ ಕಾರ್ಯಕ್ರಮವು ನಿಜವಾಗಿಯೂ ಮೋಡಿಮಾಡುವ ಕಾರ್ಯಕ್ರಮವಾಗಿದ್ದು, ಸಭೆಯನ್ನು ಸ್ವಾಗತಿಸಿದ ಡೈನಾಮಿಕ್ ಎಂಸೆಸ್ ರೋಚೆಲ್ ಮತ್ತು ನಿಚೆಲ್ ಅವರು ನಿಷ್ಪಾಪವಾಗಿ ಆಯೋಜಿಸಿದ್ದಾರೆ. ಈವೆಂಟ್ ಭಾವಪೂರ್ಣವಾದ ಟಿಪ್ಪಣಿಯಲ್ಲಿ ಎಬ್ಬಿಸುವ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ನಂತರದ ಹೃತ್ಪೂರ್ವಕ ಕ್ಷಣಗಳಿಗೆ ಧ್ವನಿಯನ್ನು ಹೊಂದಿಸುತ್ತದೆ. ಇದರ ನಂತರ ನಿಮ್ಮ ಕನಸುಗಳನ್ನು ನಂಬಿ ಮತ್ತು ಅದಕ್ಕಾಗಿ ಶ್ರಮಿಸುವ ಸ್ಕಿಟ್ ನಡೆಯಿತು.
ಸನೋವರ್ ಮತ್ತು ಪ್ರಾಪ್ತಿ ಅವರು ಆಕರ್ಷಕ ಆಟಗಳ ಮೂಲಕ ಕೂಟಕ್ಕೆ ಶಕ್ತಿ ತುಂಬಿದರು, ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿಸಿದರು. ಮನಮೋಹಕ ನೃತ್ಯ ಪ್ರದರ್ಶನವು ನಿಜವಾಗಿಯೂ ಪ್ರಭಾವಶಾಲಿಯಾಗಿತ್ತು ಮತ್ತು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಪ್ರಾಂಶುಪಾಲರ ಅನುರಣನ ಸಂದೇಶವು ಭಾವನೆಗಳನ್ನು ಕೆರಳಿಸಿತು, ಸಂದರ್ಭದ ಮಹತ್ವವನ್ನು ಒತ್ತಿಹೇಳಿತು. ಅವರು ಬದಲಾವಣೆಯನ್ನು ಸ್ವೀಕರಿಸಲು ಮತ್ತು ಕ್ಯಾಂಪಸ್ನಲ್ಲಿ ಕಳೆದ ಸಮಯದ ನೆನಪುಗಳನ್ನು ಪಾಲಿಸಲು ಹೇಳಿದರು. ಅವರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ ಎಂದು ಅವರು ಶುಭ ಹಾರೈಸಿದರು. ಅವರು ವಿರಾಮಗೊಳಿಸಲು, ಪ್ರತಿಬಿಂಬಿಸಲು ಮತ್ತು ದೈವಿಕ ಸಹಾಯವನ್ನು ಪಡೆಯಲು ಅವರನ್ನು ಉತ್ತೇಜಿಸಿದರು.
ಕಿರಿಯರಿಗೆ ಲಾಠಿ ಮತ್ತು ಜವಾಬ್ದಾರಿಗಳನ್ನು ರವಾನಿಸುವುದನ್ನು ಸಂಕೇತಿಸುವ ಧ್ವಜವನ್ನು ವಿಧ್ಯುಕ್ತವಾಗಿ ಹಸ್ತಾಂತರಿಸುವುದು ಒಂದು ಕಟುವಾದ ಹೈಲೈಟ್ ಆಗಿತ್ತು. ಅದರ ನಂತರ, ಈಗ ನೆನಪುಗಳಾಗಿ ಮಾರ್ಪಟ್ಟಿರುವ ವಿಶೇಷ ಕ್ಷಣಗಳನ್ನು ರೋಮಾಂಚನಗೊಳಿಸುವ PPT ಪ್ರದರ್ಶಿಸಲಾಯಿತು. ಶರೋನ್ ಮತ್ತು ಅವರ ತಂಡವು ವಿದಾಯ ಗೀತೆಯೊಂದಿಗೆ ವೇದಿಕೆಯನ್ನು ಅಲಂಕರಿಸಿತು, ಅದು ನೆರೆದಿದ್ದ ಪ್ರತಿಯೊಬ್ಬರ ಹೃದಯದಲ್ಲಿ ಪ್ರತಿಧ್ವನಿಸಿತು, ವಿದಾಯಕ್ಕೆ ಸಂಗೀತದ ಸ್ಪರ್ಶವನ್ನು ಸೇರಿಸಿತು. ರೇಖಾ ನೃತ್ಯವು ತನ್ನ ಅಮಲೇರಿಸುವ ಚಲನೆಗಳೊಂದಿಗೆ ಸಂದರ್ಭಕ್ಕೆ ಸ್ವಲ್ಪ ನಾಟಕವನ್ನು ಸೇರಿಸಿತು ಮತ್ತು ಪ್ರೇಕ್ಷಕರನ್ನು ಜೀವಂತಗೊಳಿಸಿತು, ಅದರ ರಾಗಗಳಿಗೆ ಮಣಿಯಿತು.
ಸಂಪೂರ್ಣ ಅನುಭವವನ್ನು ಸಂಯೋಜಿಸಲು, ದಿವ್ಯಾ, ಜೇನ್ ಮತ್ತು ಅಭಿಯಾ ಅವರಿಂದ ಒಳನೋಟವುಳ್ಳ ಪ್ರತಿಕ್ರಿಯೆಯು ಹಂಚಿಕೊಂಡ ಪ್ರಯಾಣದ ಪ್ರತಿಫಲಿತ ದೃಷ್ಟಿಕೋನವನ್ನು ಒದಗಿಸಿದೆ.
ಬೀಳ್ಕೊಡುಗೆ ಕಾರ್ಯಕ್ರಮವು ಸ್ಮರಣೀಯ ಕ್ಷಣಗಳ ಸ್ಮೊರ್ಗಾಸ್ಬೋರ್ಡ್ ಅನ್ನು ರಚಿಸಿತು, ಅದು ಮುಂದಿನ ವರ್ಷಗಳಲ್ಲಿ ಹೊರಹೋಗುವ ವಿದ್ಯಾರ್ಥಿಗಳ ಹೃದಯದಲ್ಲಿ ಉಳಿಯುತ್ತದೆ.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ರೋಶೆಲ್ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸಿ. ನೋರಿನ್ ಡಿಸೋಜಾ, ಉಪ ಪ್ರಾಂಶುಪಾಲರಾದ ಸಿ. ಜಾನೆಟ್ ಸಿಕ್ವೇರಾ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
St. Agnes PU College, Mangalore Farewell Program for Outgoing Batch 2023-’24
Manglore St Agnes PU College The farewell program for the outgoing batch of 2023-’24 was a truly enchanting event, impeccably hosted by the dynamic emcees Rochelle & Nichelle who welcomed the gathering. The event commenced on a soulful note with an evocative prayer song, setting the tone for the heartfelt moments that followed. This was followed by a skit on believing in your dreams and working hard towards it.
Sanovar and Prapthi infused the gathering with energy through engaging games, creating an atmosphere of camaraderie. The captivating dance performance was truly impressive and kept the audience spellbound. The principal’s resonant message stirred emotions, underscoring the significance of the occasion. She told them to embrace change, and to cherish the memories of the time spent on the campus. She wished them well as they embarked on a new chapter in their lives. She also exhorted them to pause, to reflect and seek help from the divine.
A poignant highlight was the ceremonial handing over of the flag, symbolizing the passing of the baton and the responsibilities to the juniors. Thereafter, there was an enthralling PPT screening the special moments that have now become memories. Sharon and her group graced the stage with a farewell song that echoed in the hearts of everyone present, adding a musical touch to the farewell. The line dance added a bit of drama to the occasion with its intoxicating movements and made the audience come alive, grooving to its tunes.
To encapsulate the entire experience, insightful feedback from Divya, Jane, and Abhiya provided a reflective perspective on the shared journey.
The farewell programme crafted a smorgasbord of memorable moments that will linger in the hearts of the outgoing students for years to come.
Rochelle expressed gratitude to all those involved in the success of the program. The dignitaries present on the occasion were the Principal Sr Norine D’Souza, Vice Principal Sr Janet Sequiera, the faculty and students.
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಅವನಿ ಶೆಟ್ಟಿಗಾರ್ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಕುಂದಾಪುರ (ಜನವರಿ 12) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅವನಿ ಎ ಶೆಟ್ಟಿಗಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪ ನಿರ್ದೇಶಕರ ಕಚೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ವತಿಯಿಂದ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ 2023-24 ವೈಯಕ್ತಿಕ ವಿಭಾಗದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಅಶೋಕ್ ಜಿ ಶೆಟ್ಟಿಗಾರ್ ಮತ್ತು ಸರಿತಾ ದಂಪತಿಯ ಹೆಮ್ಮೆಯ ಪುತ್ರಿಯಾದ ಈಕೆಗೆ ಸಂಸ್ಥೆಯ ಚಿತ್ರಕಲಾ ಶಿಕ್ಷಕ ರಮೇಶ್ ಹಾಂಡ ತರಬೇತಿ ನೀಡಿದ್ದರು. ವಿಜೇತ ವಿದ್ಯಾರ್ಥಿನಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.
ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಎಚ್ಚರಿಕೆ ನೀಡಿದ್ದರೂ,ಪುನಃ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ ತಹಶೀಲ್ದಾರ್ ಜಿ.ಎನ್.ಸುದೀಂದ್ರ ವ್ಯಾಪಾರಿಗಳ ವಿರುದ್ಧ ಗರಂ
ಶ್ರೀನಿವಾಸಪುರ 1 : ನಿನ್ನೆಯಷ್ಟೆ (ಬುಧವಾರ) ಎಂಜಿರಸ್ತೆ ಬದಿಗಳಲ್ಲಿ ಅವರೇಕಾಯಿ ವ್ಯಾಪಾರ ವಹಿವಾಟು ಮಾಡದೆ, ಕೃಷಿ ಮಾರುಕಟ್ಟೆಯಲ್ಲಿ ಮಾಡುವಂತೆ ಎಚ್ಚರಿಕೆ ನೀಡಿದ್ದರೂ ಸಹ ಪುನಃ ಎಂಜಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ವ್ಯಾಪಾರಿಗಳ ವಿರುದ್ಧ ಗರಂ ಆಗಿ ರೇಗಾಡಿದರು.
ಪಟ್ಟಣದ ಎಂಜಿ ರಸ್ತೆಯಲ್ಲಿ ಗುರುವಾರ ಅವರೆಕಾಯಿ ವ್ಯಾಪಾರ ವಹಿವಾಟನ್ನು ಮಾಡುತ್ತಿದ್ದ ವ್ಯಾಪಾರಿಗಳಿಗೆ ಪುನಃ ಎಚ್ಚರಿಕೆ ಕೊಟ್ಟು ಮಾತನಾಡಿದರು.
ವ್ಯಾಪಾರಿಗಳು ಸಂಕ್ರಾತಿ ಹಬ್ಬದ ವರೆಗೂ ನಮಗೆ ಇಲ್ಲಿ ವ್ಯಾಪಾರ ವಹಿವಾಟು ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಆಗ ರಸ್ತೆಯಲ್ಲಿ ಲೈನ್ಒಳಗೆ ವ್ಯಾಪಾರ ವಹಿವಾಟು ಮಾಡಿಕೊಳ್ಳಿ ಎಂದು ಸೂಚಿಸಿದರು .
ಯಾವುದೇ ಕಾರಣಕ್ಕೂ ಲೈನ್ ಹೊರಗಡೆ ವ್ಯಾಪಾರ ವಹಿವಾಟು ಮಾಡುವಂತಿಲ್ಲ. ನೀವು ನನ್ನ ಸೂಚನೆಯನ್ನು ಮೀರಿದರೆ ನಾನು ಕಾನೂನು ರೀತ್ಯ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಎಚ್ಚರಿಸಿದರು. ವ್ಯಾಪಾರಿಯೊಬ್ಬರು ಎರಡು ದಿನಗಳ ಅವಕಾಶ ಕೇಳಿದಾಗ , ಇಲ್ಲ ಎರಡು ಗಂಟೆಗಳ ಕಾಲವೂ ಅವಕಾಶ ನೀಡುವುದಿಲ್ಲ ಎಂದರು. ನನ್ನ ಪ್ರಕಾರವಾಗಿ ನಡೆದುಕೊಂಡರೆ ಸರಿ ಇಲ್ಲವಾದರೇ ನಿಮ್ಮ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು. ನಾನೊಬ್ಬ ಸಾರ್ವಜನಿಕರ ಅಧಿಕಾರಿ ಸಾರ್ವಜನಿಕರಿಗೆ ಅನುಕೂಲ ಮಾಡುವುದೇ ನನ್ನ ಕರ್ತವ್ಯ ಎಂದರು.
ಸಾರ್ವಜನಿಕರೊಬ್ಬರ ದೂರಿನ್ವಯ ಸ್ಥಳಕ್ಕೆ ಬೇಟಿ ನೀಡಿರುವುದಾಗಿ ತಿಳಿಸಿದಾಗ ಅಲ್ಲಿಯೇ ಇದ್ದ ಸಾರ್ವಜನಿಕರೊಬ್ಬರು ತಹಶೀಲ್ದಾರ್ ರವರೊಂದಿಗೆ ಮಾತನಾಡುತ್ತಾ, ನಿನ್ನೆಯಷ್ಟೆ ಈ ಭಾಗದಲ್ಲಿ ಮಗುವಿಗೆ ಅಪಘಾತವಾಗಿದ್ದು, ಅವರಿಗೆ ಯಾರು ಆಗುತ್ತಾರೆ ಎಂದು ಪ್ರಶ್ನಿಸಿದರು ?
ಕೃಷಿ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ನೀಡಲಿದ್ದು, ಅಲ್ಲಿ ನಿಮ್ಮ ವ್ಯಾಪಾರ ವಹಿವಾಟು ಮಾಡಿಕೊಳ್ಳಿ ಎಂದು ಸೂಚಿಸಿದರು.
ಆರ್ಐ ಮುನಿರೆಡ್ಡಿ, ಎಎಸ್ಐಗಳಾದ ನಂಜುಂಡಪ್ಪ, ರವೀಂದ್ರನಾಥ್, ಸಿಬ್ಬಂದಿಗಳಾದ ಆನಂದ್, ಸಂಪತ್ತು, ಶ್ರೀನಾಥ್ ಇದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಜೂಡಿತ್ ಮೆಂಡೊನ್ಸಾ ತಲ್ಲೂರು,ಇವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ
ಕರ್ನಾಟಕ ಸರ್ಕಾರದ ಆದೇಶದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಶ್ರೀಮತಿ ಜೂಡಿತ್ ಮೆಂಡೊನ್ಸಾ ತಲ್ಲೂರು
ಇವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಕರ್ನಾಟಕ ಸರಕಾರ ನೇಮಿಸಿದೆ.
ಸಿಂಡಿಕೇಟ್ ಮಂಡಳಿಯು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯಾಗಿದ್ದು ಆರ್ಥಿಕ ಶೈಕ್ಷಣಿಕ ಹಾಗೂ ಇತರೆ ಅಗತ್ಯ ನೀತಿ ಕಾಯಿದೆಗಳನ್ನು ಅನುಷ್ಠಾನಗೊಳಿಸುವ ಮಂಡಳಿಯಾಗಿರುತ್ತದೆ. ಇದರ ಅವಧಿ ಮೂರು ವರ್ಷಗಳಾಗಿದ್ದು ಮಂಡಳಿಯಲ್ಲಿ 6 ಸರಕಾರದಿಂದ ನಾಮ ನಿರ್ದೇಶನಗೊಂಡ ಸದಸ್ಯರಿರುತ್ತಾರೆ. 2 ಸಾಮಾನ್ಯ 1 ಮಹಿಳೆ 1 ಪರಿಶಿಷ್ಟ ಜಾತಿ 1 ಹಿಂದುಳಿದ ವರ್ಗದ ಮತ್ತು 1 ಅಲ್ಪಸಂಖ್ಯಾತ ಸದಸ್ಯರಾಗಿದ್ದಾರೆ. ಉಡುಪಿ ಜಿಲ್ಲೆಗೆ ಒಬ್ಬರೇ ಸದಸ್ಯೆ ಶ್ರೀಮತಿ ಜೂಡಿತ್ ಮೆಂಡೊನ್ಸ ಮಹಿಳಾ ಮೀಸಲಾತಿಯಲ್ಲಿ ಆಯ್ಕೆ ಮಾಡಲಾಗಿದೆ.
ಕುಂದಾಪುರ ತಾಲೂಕಿನ ಉಪವಿಭಾಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಮಾತೃತ್ವ ಅಭಿಯಾನ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ
ಕುಂದಾಪುರ: ದಿ. 11-01-2024 ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪವಿಭಾಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಮಾತೃತ್ವ ಅಭಿಯಾನ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡುವದರ ಮೂಲಕವಾಗಿ HIV, Syphilis, Hepatitis B ಕುರಿತು ಜಾಗೃತಿ ಮೂಡಿಸಿ ಗರ್ಭಿಣಿಯರಿಗೆ ಎಲ್ಲ ರೀತಿಯ ಆರೋಗ್ಯ ತಪಾಸಣೆ & ಪರೀಕ್ಷೆಗಳನ್ನು ಮಾಡಲಾಯಿತು. ಈ ಆಸ್ಪತ್ರೆಯ ಮುಖ್ಯ ಆಡಳಿತ ಶಸ್ತ್ರ ಚಿಕಿತ್ಸಕರಾದ ಡಾ. ರಾಬರ್ಟ್ ರೆಬೆಲ್ಲೋ, ತಾಲೂಕು ಆರೋಗ್ಯಾಧಿಕಾರಿಯವರಾದ ಡಾ. ಪ್ರೇಮಾನಂದ್, ಆಸ್ಪತ್ರೆಯ (ಪ್ರಭಾರ)ಶುಶ್ರುಷ ಅಧಿಕ್ಷಕರಾದ ಶ್ರೀಮತಿ ಅನ್ನಪೂರ್ಣ ಟಿ.ಆರ್ ಮತ್ತು ಆಸ್ಪತ್ರೆಯ ಇತರೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಜರಾಗಿದ್ದರು. ಶ್ರೀಮತಿ ನಳಿನಾಕ್ಷಿ ಐಸಿಟಿಸಿ ಆಪ್ತಸಮಾಲೋಚಕರು ಮತ್ತು ಶ್ರೀಮತಿ ಪ್ರತಿಮಾ ಐಸಿಟಿಸಿ ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಆಸ್ಪತ್ರೆ ಎಲ್ಲಾ ಸಿಬ್ಬಂದಿಯವರು ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ 45 ಗರ್ಭಿಣಿಯರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
ಕಣ್ಣಿನ ಆರೋಗ್ಯವನ್ನು ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು : ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು
ಶ್ರೀನಿವಾಸಪುರ : ನಮ್ಮ ದೇಹದ ಪಂಚೇಂದ್ರಿಯಗಳಲ್ಲಿ ಕಣ್ಣುಗಳು ಒಂದು ಅಂಗವಾಗಿದ್ದು, ಕಣ್ಣಿನ ಆರೋಗ್ಯವನ್ನು ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಹೇಳಿದರು.
ಪಟ್ಟಣದ ನ್ಯಾಯಾಲಯ ಸಭಾಂಗಣದ ಕಛೇರಿಯಲ್ಲಿ ಮಂಗಳವಾರ ಕಾನೂನು ಸೇವ ಪ್ರಾಧಿಕಾರ ಸಹಯೋಗದೊಂದಿಗೆ ಶ್ರೀನಿವಾಸಪುರ ರೋಟರಿ ಕ್ಲಬ್ವತಿಯಿಂದ ನಡೆದ ಕೋಲಾರದ ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ನಡೆದ ಉಚಿತ ಕಣ್ಣಿನ ತಪಾಸಣ ಶಿಬಿರ ಹಾಗು ಯುವದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ನಡೆದ ದಾರಿಯು ಒಳ್ಳೇಯ ದಾರಿಯಾಗಿದ್ದು, ಇಂದಿನ ಪೀಳಿಗೆಯು ಸ್ವಾಮಿ ವಿವೇಕಾನಂದರರ ಆಶಯಗಳನ್ನು ಯುವಕರು ತಮ್ಮ ಜೀವನಕ್ಕೆ ಆಳಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಜಯರಾಮೇಗೌಡ ಮಾತನಾಡಿ ಸ್ವಾಮಿವಿವೇಕಾನಂದರು ನಮ್ಮ ದೇಶದ ಸಂಸ್ಕøತಿಯನ್ನು ವಿದೇಶಗಳಲ್ಲಿ ನಮ್ಮ ದೇಶದ ಸಂಸ್ಕøತಿ ಆಚಾರ ವಿಚಾರಗಳನ್ನು ಎತ್ತಿ ಹಾಡಿಹೊಗಳಿದ್ದಾರೆ. ಅವರಲ್ಲಿದ್ದ ದೇಶದ ಪ್ರೇಮನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಹೆಚ್.ಆರ್.ಸಚಿನ್ , ಸರ್ಕಾರ ಅಭಿಯೋಜಕ ಮುಕುಂದ, ಕಾರ್ಯದರ್ಶಿ ಪಿ.ಸಿ.ನಾರಾಯಣಸ್ವಾಮಿ, ವಕೀಲರಾದ ಶ್ರೀನಿವಾಸಗೌಡ, ರಾಧಕೃಷ್ಣ, ವಿನಯ್ಕುಮಾರ್, ಸೌಭಾಗ್ಯ, ವೆಂಕಟರಮಣಪ್ಪ, ನಾರಾಯಣಸ್ವಾಮಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವೆಂಕಟೇಶ್, ರೋಟರಿ ಅಧ್ಯಕ್ಷ ಮಂಜುನಾಥರೆಡ್ಡಿ, ಕಾರ್ಯದರ್ಶಿ ಶಿವಮೂರ್ತಿ, ಪತ್ರಿಕಾ ಕಾರ್ಯದರ್ಶಿ ಕೃಷ್ಣಮೂರ್ತಿ , ವಾಸನ್ ಕಣ್ಣಿನ ಆಸ್ಪತ್ರೆ ಮಾರುಕಟ್ಟೆ ವ್ಯವಸ್ಥಾಪಕ ಚರಣ್ಕುಮಾರ್ ಇದ್ದರು.
10, ಎಸ್ವಿಪುರ್ : ಪಟ್ಟಣದ ನ್ಯಾಯಾಲಯ ಸಭಾಂಗಣದ ಕಛೇರಿಯಲ್ಲಿ ಕಾನೂನು ಸೇವ ಸಮಿತಿವತಿ ಸಹಯೋಗದಿಂದ ಶ್ರೀನಿವಾಸಪುರ ರೋಟರಿ ಕ್ಲಬ್ವತಿಯಿಂದ ನಡೆದ ಕೋಲಾರದ ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ನಡೆದ ಉಚಿತ ಕಣ್ಣಿನ ತಪಾಸಣ ಶಿಬಿರಕ್ಕೆ ಬಿ.ಕೆ.ಮನು ಚಾಲನೆ ನೀಡಿ ಮಾತನಾಡಿದರು.
ಮಣಿಪುರದಲ್ಲಿ ಮತ್ತೊಮ್ಮೆ ಗುಂಡಿನ ದಾಳಿ: ಶುಂಠಿ ಕೊಯ್ಲು ಮಾಡಲು ಹೋದ ನಾಲ್ವರು ನಾಪತ್ತೆ
ಇಂಫಾಲ : ಮಣಿಪುರದಲ್ಲಿ ಮತ್ತೊಮ್ಮೆ ಹಿಂಸೆಚಾರ ಭುಗಿಲೆದ್ದಿದ್ದು, ಜನರು ಭಯಭೀತಗೊಂಡಿದ್ದಾರೆ. ಬಿಷ್ಟುಪುರ ಜಿಲ್ಲೆಯ ಕುಂಬಿ ಮತ್ತು ತೌಬಲ್ ಜಿಲ್ಲೆಯ ವಾಂಗೂ ನಡುವೆ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿ ನಡೆದ ಪ್ರದೇಶದ ಬಳಿ ಶುಂಠಿ ಕೊಯ್ಲು ಮಾಡಲು ಹೋದ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ನಾಪತ್ತೆಯಾದವರನ್ನು ಓಯಿನಮ್ ರೊಮೆನ್ ಮೈತೆ (45), ಅಹಾಂತೇಮ್ ದಾರಾ ಮೈತೆ (56), ತೌಡಮ್ ಇಬೊಮ್ಮಾ ಮೈತೆ (53) ಮತ್ತು ತೌದಮ್ ಆನಂದ್ಮೈತೆ (27) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಗೂ ಮೊದಲು ಮಾರ್ಟರ್ ಫೈರಿಂಗ್ ನಡೆದಿದ್ದು, ಘಟನೆ ಕುರಿತು ಕುಂಬಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.ನಾಪತ್ತೆಯಾದ ನಾಲ್ವರು ಬಂಡುಕೋರರ ವಶದಲ್ಲಿರುವ ಸಾಧ್ಯತೆ ಇದ್ದು, ಶೋಧ ಕಾರ್ಯಾಚರಣೆಗಾಗಿ ಕೇಂದ್ರ ಸರ್ಕಾರದ ಸಹಾಯವನ್ನು ಕೋರಲಾಗಿದೆ ಎನ್ನಲಾಗಿದೆ.
ಶಸ್ತ್ರ ಚಿಕಿತ್ಸೆ ವಿಧಾನಗಳಲ್ಲಿ ರೊಬೋಟಿಕ್ ತಂತ್ರಜ್ಞಾನದಿಂದ ಯಶಸ್ವಿಯ ಬದಲಾವಣೆ – ಡಾ.ಎಸ್.ವಿದ್ಯಾಧರ
ಕೋಲಾರ,ಜ.10: ಇಂದಿನ ಅಧುನಿಕತೆಯ ಸಂಶೋಧನೆಗಳಲ್ಲಿ ಎಷ್ಟೇ ಅವಿಷ್ಕಾರಗಳು ಕಂಡು ಬಂದರೂ ಸಹ ಟೆಕ್ನಲಾಜಿಗಳು ಬದಲಾಗದು. ಇಂದು ರೊಬೊಟಿಕ್ಸ್ ತಂತ್ರಜ್ಞಾನ ಮತ್ತು ಕೃತಕ ಬುದ್ದಿವಂತಿಕೆ ಪರಿಚಯದೊಂದಿಗೆ ಶಸ್ತ್ರ ಚಿಕಿತ್ಸೆ ವಿಧಾನವು ಬದಲಾಗುತ್ತಿದೆ ಇದರಿಂದ ರೋಗಿಗಳಿಗೆ ಮತ್ತು ಶಸ್ತ್ರ ಚಿಕಿತ್ಸಕರಿಗೆ ಹೆಚ್ಚಿನ ಅನುವುಂಟಾಗುತ್ತಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಸ್ಪೈನ್ ಸರ್ಜರಿ ಮತ್ತು ಕನ್ಸಲ್ಟೆಂಟ್-ರೋಬೋಟಿಕ್ ಸ್ಪೈನ್ ಸರ್ಜರಿ ವಿಭಾಗದ ಅಧ್ಯಕ್ಷರು ಹಾಗೂ ಎಚ್.ಓ.ಡಿ. ಡಾ. ಎಸ್. ವಿದ್ಯಾಧರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಣಿಪಾಲ್ ಆಸ್ಪತ್ರೆಯ ವಿವಿಧ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ನಿಖರತೆ, ಸುಧಾರಿತ, ದಕ್ಷತೆ ಮತ್ತು ಕನಿಷ್ಠ ಹಾನಿಯೊಂದಿಗೆ ಕ್ಲಿಷ್ಟಕರ ಶಸ್ತ್ರ ಚಿಕತ್ಸೆಗಳನ್ನು ನಿರ್ವಹಿಸಲು ಶಸ್ತ್ರ ಚಿಕಿತ್ಸಕರಿಗೆ ಪ್ರಯೋಜವಾಗುವ ಎಐ ಮತ್ತು ರೊಬೋಟಿಕ್ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಭಾರತದಲ್ಲಿ ರೊಬೊಟಿಕ್ ಮಾರ್ಗದರ್ಶನದ ಶಸ್ತ್ರ ಚಿಕಿತ್ಸೆಗಳು ಶೇ 99.99 ರಷ್ಟು ಯಶಸ್ವಿಯಾಗಿರುವುದು. ಹಿಂದಿನ ಸಂಪ್ರಾದಾಯಿಕ ವಿಧಾನಗಳಿಗೆ ಹೋಲಿಸಿದರೆ ಅಪಾಯದ ಪ್ರಮಾಣವು ಕಡಿಮೆ, ಶಸ್ತ್ರ ಚಿಕಿತ್ಸೆ ಸಮಯವು ಕಡಿಮೆ ಹಾಗೂ ನಿಖರತೆ ಇದೆ ಸುದೀರ್ಘ ಕಾಲಾವಧಿಯವರೆಗೆ ಸಮಸ್ಯೆ ಕಂಡು ಬರುವುದಿಲ್ಲ, ಯಾವೂದೇ ಅನಾಹುತಗಳಿಗೆ ಅವಕಾಶ ಇಲ್ಲದಂತೆ ಅವಶ್ಯಕತೆ ತಕ್ಕಷ್ಟು ಮಾತ್ರ ಕಾರ್ಯ ನಿರ್ವಹಿಸಲು ರೊಬೊಟಿಕ್ ಅನುವು ಮಾಡಿ ಕೊಡಲಾಗುವುದು ಎಂದರು.
ಪ್ರಶ್ನೆಯೊಂದಕ್ಕೆ ವೈದ್ಯರುಗಳಿಗೆ ಯಾವೂದೇ ಸಂಶಕ್ಕೆ ಅವಕಾಶ ಇಲ್ಲದಂತೆ ಮಾರ್ಗದರ್ಶನವನ್ನು ರೊಬೊಟಿಕ್ ನೀಡುತ್ತದೆ. ಸ್ಕ್ರೋ ಅಳವಡಿಸುವಿಕೆ, ಹೆಚ್ಚು ರಕ್ತಸ್ರಾವವಾಗದಂತೆ, ಹೆಚ್ಚು ನೋವಿಲ್ಲದಂತೆ, ಕಡಿಮೆ ಅವಧಿಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ದೋಷ ಮುಕ್ತವಾಗಿ ಪೂರ್ಣಗೊಳಿಸಲು ಸಲಹೆಗಳನ್ನು ಪಡೆಯಬಹುದಾಗಿದೆ. ಇದರ ವೆಚ್ಚ ಸಾಮಾನ್ಯವಾಗಿ 50 ಸಾವಿರ ರೂಗಳಿಂದ 1.5 ಲಕ್ಷದವರೆಗೆ ಇರುತ್ತದೆ ಎಂದು ತಿಳಿಸಿದರು.
ರೊಬೊಟಿಕ್ ಮಾರ್ಗದರ್ಶನ ಬಳಕೆಯ ಮೂಲಕ ಸ್ಕೋಲಿಯೋಸಿಸ್ ಕರೆಕ್ಷನ್ಗಳು ಬೆನ್ನಮೊಳೆಯ ಪ್ಲಾಸ್ಟಿಗಳು, ಕೈಪೋಪ್ಲಾಸ್ಟಿಗಳು, ಸರ್ವಿಕಲ್ ಕಾರ್ಪೆಕ್ಟೊಮಿಗಳು ಮತ್ತು ಸರ್ವಿಕಲ್ ಪೆಡಿಕ್ಯೊಲ್ ಸ್ಕ್ರೋ ಫಿಕ್ಸೆಷನ್ಗಳ ತರಹದ ವಿವಿಧ ಸಂದರ್ಭಗಳಲ್ಲಿ ನಾವು ರೊಬೊಟಿಕ್ ನೆರವಿನಿಂದ ನಿಖರತೆಯನ್ನು ಸಾಧಿಸಿ ಸುರಕ್ಷತೆಯನ್ನು ಪಡೆದಿರುವುದಾಗಿ ವಿವರಿಸಿದರು.
ಆರ್ಥೋಪೆಡಿಕ್ಸ್ ಮತ್ತು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜರಿ ವಿಭಾಗದ ಹಿರಿಯ ತಜ್ಞ ಡಾ. ಸುನಿಲ್ ಜಿ.ಕಿಣಿ ಮಾತನಾಡಿ, ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ಗಳ ಆರೈಕೆ ರೋಗಿಗಳಿಗೆ ಹಲವಾರ ಪ್ರಯೋಜನಗಳಿವೆ ಶಸ್ತ್ರ ಚಿಕಿತ್ಸೆ ನಂತರ ನೋವು ಗುಣಮುಖವಾಗಲಿದೆ. ತೊಡಕು ಅಪಾಯಗಳು ಕಡಿಮೆಯಾಗಿ ರೋಗಿಗಳು ದೀರ್ಘವದಿಯವರೆಗೆ ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದಾಗಿದೆ ರೋಗಿಯು ಚೇತರಿಸಿಕೊಳ್ಳಲು ಅನುವುಂಟಾಗುವುದು ಎಂದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿರುವ ಮೈಕೋ ರೋಬೋಟ್ ಹೊಂದಿದ್ದು ಇದರಿಂದ ಮೊಣಕಾಲು ಮತ್ತು ಸೊಂಟದ ಬದಲಿಗಳನ್ನು ಅತ್ಯಂತ ನಿಖರತೆಯೊಂದಿಗೆ ನಿರ್ವಹಿಸಲು ನೆರವುಂಟಾಗುವುದು ಎಂದರು.
ರೋಬೋಟಿಕ್ ವ್ಯವಸ್ಥೆಯಿಂದ ರೋಗಿಗಳಿಗೆ ನೈಸರ್ಗಿಕ ಜಾಯಿಂಟ್ ಚಲನೆಯನ್ನು ಪರಿಗಣಿಸುತ್ತದೆ ಮತ್ತು ಅಸ್ಥಿರಜ್ಮುಗಳು ಮತ್ತು ಮೃದು ಅಂಗಾಂಶಗಳ ಮೇಲಿನ ಒತ್ತಡಗಳನ್ನು ಕಡಿಮೆ ಮಾಡುತ್ತದೆ ಶಸ್ತ್ರ ಚಿಕಿತ್ಸೆಯ ಸಂದರ್ಭಗಳಲ್ಲಿ ರೋಗಿಗಳಿಗೆ ಅನುವುಂಟಾಗುವಂತ ಮಾರ್ಗದರ್ಶನಗಳಿಗೆ ಆದ್ಯತೆ ನೀಡುತ್ತದೆ ಎಂದು ಹೇಳಿದರು.
ಸರ್ಜಿಕಲ್ ಆಂಕೋಲಾಜಿ ಮತ್ತು ರೋಬೋಟಿಕ್ ಸರ್ಜರಿ ಕನ್ಸಲ್ವೆಂಟ್ ಡಾ. ಹೇಮಂತ್ ಜಿ.ಎನ್ ಮಾತನಾಡಿ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯಲ್ಲಿ ರೊಬೋಟಿಕ್ ಬಹುಪಾತ್ರದ ನೆರವನ್ನು ಪಡೆಯಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ರೊಬೋಟಿಕ್ ಸಹಾಯದಿಂದ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯು ಗಮನಾರ್ಹ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಹಿಂದೆ ಕ್ಯಾನ್ಸರ್ ಶಸ್ತ್ರಚಿಕ್ಸಿತ್ಸೆಯು ದೊಡ್ಡ ಗಾಯದ ಗುರುತುಗಳು, ದೀರ್ಘಕಾಲದ ಆಸ್ಪತ್ರೆಯಲ್ಲಿ ಚಿಕ್ಸಿತ್ಸೆ ಪಡೆಯ ಬೇಕಾಗಿತ್ತು, ರೋಗಿಗಳಲ್ಲಿ ಚೇತರಿಕೆಯು ಅಪರೂಪವಾಗಿದ್ದು ಭಯವುಂಟು ಮಾಡುವ ದಿನಗಳಾಗಿತ್ತು, ಅದರೆ ಇವುಗಳನ್ನು ರೋಬೋಟಿಕ್ ಮಾರ್ಗದರ್ಶನದಲ್ಲಿ ವಿವಿಧ ಕ್ಲಿನಿಕಲ್ ಪ್ರಯೋಗಳ ಮೂಲಕ ಸಂಪ್ರಾದಯಿಕ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಿಂತ ಸುಧಾರಿತ,ಗುಣಮಟ್ಟದ, ತೃಪ್ತಿಕರವಾದ ಶಸ್ತ್ರಚಿಕಿತ್ಸೆಯನ್ನು ರೊಬೋಟಿಕ್ ನೆರವಿನಿಂದ ಪಡೆಯ ಬಹುದಾಗಿದೆ ಎಂದು ಹೇಳಿದರು.
ಕ್ಯಾನ್ಸರ್ನಲ್ಲಿ ಹಲವಾರು ವಿಧಗಳಿವೆ, 3ನೇ ಹಂತದವರೆಗೆ ಚಿಕಿತ್ಸೆಯನ್ನು ರೊಬೋಟಿಕ್ ನೆರವಿನಿಂದ ನೀಡಲು ಸಾಧ್ಯ, ಹೃದಯ ಶಸ್ತ್ರ ಚಿಕಿತ್ಸೆಗಳಲ್ಲೂ ಇತ್ತೀಚೆಗೆ ರೋಬೋಟಿಕ್ ನೆರವು ಪಡೆಯಲಾಗುತ್ತಿದೆ. ಹೊಟ್ಟೆ, ಕತ್ತು ಮುಂತಾದ ಶಸ್ತ್ರ ಚಿಕಿತ್ಸೆಗಳಲ್ಲಿ ರೊಬೋಟಿಕ್ ಪಾತ್ರವನ್ನು ಪ್ರಧಾನವನ್ನಾಗಿಸಿ ಕೊಂಡಲ್ಲಿ ಯಾವೂದೇ ಸಮಸ್ಯೆಗಳಿದ್ದರೂ ಬಗೆಹರಿಸಬಹುದಾದ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪ್ರಶ್ನೆಯೊಂದಕ್ಕೆ ನಿಸ್ಸಂದೇಹವಾಗಿ ಹೇಳುವುದಾದರೆ ಕೃತಕ ಬುದ್ದಿಮತ್ತೆಯ ಕ್ಷೇತ್ರದಲ್ಲಿ ತ್ವರಿತ ಪ್ರಗತಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ವರ್ಧಿತ ಬೆಳವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸಾ ಪರಿಸ್ಥಿತಿಗಳನ್ನು ನಿರ್ವಹಿಸಲು ರೋಬೋಟಿಕ್ ಶಸ್ತ್ರಚಿಕಿತ್ಸೆಯು ಪ್ರಾಥಮಿಕ ಅಧ್ಯತೆಯಾಗಲಿದೆ ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಪ್ರಾತ್ಯಕ್ಷತೆಯೊಂದಿಗೆ ರೋಬೋಟಿಕ್ ತಂತ್ರಜ್ಞಾನದ ವಿಧಾನಗಳನ್ನು ಪ್ರದರ್ಶಿಸಲಾಯಿತು.