ಶ್ರೀನಿವಾಸಪುರ ; ಭಾನುವಾರ ಸುದ್ದಿವಾಹಿನಿಯೊಂದರಲ್ಲಿ ಸುಣ್ಣಕಲ್ ಗ್ರಾಮದ ಬಳಿ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನವು ಅನ್ಯಕೋಮಿನವರು ದ್ವಂಸಗೊಳಿಸಲಾಗಿದೆ ಎಂದು ಸುದ್ದಿ ಬಿತ್ತರವಾಗುತ್ತಲೇ ಸೋಮವಾರ ಬೆಳಗ್ಗೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸ್ಥಳಕ್ಕೆ ಬೇಟಿ ಸ್ಥಳ ಪರಿಶೀಲಿಸಿ, ಗ್ರಾಮಸ್ಥರೊಂದಗೆ ದೇವಾಲಯದ ಹಿನ್ನೆಲೆಯ ಬಗ್ಗೆ ಹಾಗೂ ಸರ್ಕಾರದ ಜಮೀನಿನ ಬಗ್ಗೆ ಮಾಹಿತಿ ಪಡೆದರು . ಗ್ರಾಮಸ್ಥರು ಪಾಲೆಗಾರರರು ನಿರ್ಮಿಸಿರುವ ದೇವಸ್ಥಾನ ಹಾಗು ಕೋಟೆಯ ಇದಾಗಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಸಂಬಂದಿಸಿದ ಜಮೀನು ಅಕ್ರಮವಾಗಿ ಉಳಿಮೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ರವರು ಗ್ರಾಮಸ್ಥರೊಂದಿಗೆ ಮಾತನಾಡಿ, ಇದಕ್ಕೆ ಸಂಬಂದಿಸಿದ ಜಮೀನನ್ನು ಅತಿ ಶೀಘ್ರವಾಗಿ ಸರ್ವೆ ಮಾಡಿಸುವುದಾಗಿ ಭರವಸೆ ನೀಡಿದರು.
Day: January 29, 2024
ಬೆಳ್ತಂಗಡಿ : ಪಟಾಕಿ ಸುಡುಮದ್ದು ತಯಾರಿ ಸಂದರ್ಭದಲ್ಲಿ ಸ್ಫೋಟ: ಮೂವರ ದಾರುಣ ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪ ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಡುಮದ್ದು ತಯಾರಿಕಾ ಘಟಕದಲ್ಲಿ ಭಾನುವಾರ ನಡೆದ ಸ್ಫೋಟದಲ್ಲಿ ಮೂವರು ಸಾವನಪ್ಪಿದ ದಾರುಣ ಘಟನೆ ನಡೆದಿದೆ. ಸಾವನ್ನಪ್ಪಿದವರ ದೇಹಗಳು ಛಿದ್ರಗೊಂಡಿವೆ, ಸಾವನ್ನಪ್ಪಿದವರು ತ್ರಿಶೂರಿನ ವರ್ಗೀಸ್, ಹಾಸನದ ಚೇತನ್, ಕೇರಳದ ಸ್ವಾಮಿ ಎಂದು ತಿಳಿದು ಬಂದಿದೆ.
ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ತ್ಯಾರು ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಸಮೀಪ ಸುಡುಮದ್ದು ತಯಾರಿಕಾ ಘಟಕದಲ್ಲಿ ಸಂಜೆ 5 ಗಂಟೆಗೆ ಸ್ಫೋಟ ಸಂಭವಿಸಿದೆ.
ಪಟಾಕಿ ತಯಾರಿಸುತ್ತಿದ್ದ ಘಟಕ ಕುಚ್ಚೋಡಿ ಸಮೀಪದ ನಿವಾಸಿ ಬಶೀರ್ ಎಂಬವರ ಜಮೀನಿನಲ್ಲಿ ಪಟಾಕಿ ತಯಾರಿಸುತ್ತಿದ್ದರು. ಇಲ್ಲಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ತ್ರಿಶೂರಿನ ವರ್ಗೀಸ್, ಹಾಸನದ ಚೇತನ್, ಕೇರಳದ ಸ್ವಾಮಿ ಮೃತಪಟ್ಟಿದ್ದಾರೆ.ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಕೇರಳ ಕೆಲಸ ನಿರ್ವಹಿಸುತ್ತಿದ್ದರು.
ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ಓರ್ವನ ಮೃತದೇಹ ದೊರೆತಿದ್ದು, ಇನ್ನಿಬ್ಬರ ದೇಹ ಸ್ಫೋಟದ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಛಿದ್ರವಾಗಿ ಬಿದ್ದಿದೆ. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ತಕ್ಷಣ ಬೆಂಕಿ ನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರೂ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರು ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಗೆ 50 ರ ಸಂಭ್ರಮ ” ‘ಗೋಲ್ಡನ್ ಜೂಬಿಲಿ ಯೂನಿಟಿ ರನ್’ ಅಪೂರ್ವ ಕಾರ್ಯಕ್ರಮ /Celebrating 50 years of St. Joseph’s Education Institute, Bengaluru “Golden Jubilee Unity Run” is a unique event
ಬೆಂಗಳೂರು, ಜ.29: ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೈಂಟ್ ಜೋಸೆಫ್ಸ್ ಇಂಡಿಯನ್ ವಿದ್ಯಾ ಸಂಸ್ಥೆಯು, ಹೊಸ ವಿಭಿನ್ನ ಆಲೋಚನೆಯೊಂದಿಗೆ ತನ್ನ ವಿದ್ಯಾರ್ಥಿಗಳೊಂದಿಗೆ ಕ್ರಿಯಾತ್ಮಕವಾಗಿ ತನ್ನ ಸುವರ್ಣ ಮಹೋತ್ಸವವನ್ನು ಶಾಲಾ ಆವರಣದಲ್ಲಿ ಜನವರಿ 28, 2024 ರಂದು ‘ಗೋಲ್ಡನ್ ಜೂಬಿಲಿ ಯೂನಿಟಿ ರನ್’ ಎಂಬ ಈವೆಂಟ್ನ್ನು ಆಯೋಜಿಸುವ ಮೂಲಕ ಆಚರಿಸಿತು. ದೃಷ್ಠಿಹೀನ ಮತ್ತು ಬಡ ಮಕ್ಕಳಿಗೆ ಶಿಕ್ಷಣದ ಸೌಲಭ್ಯಗಳನ್ನು ನೀಡುವ ಉದ್ದೇಶವನ್ನು ಶಿಕ್ಷಣ ಸಂಸ್ಥೆ ಹೊಂದಿದ್ದು, ಸಾಮಾಜಿಕ ಹಿತಾಸಕ್ತಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ಮಾನವೀಯತೆಯ ಸಂದೇಶವನ್ಬು ಸಾರಿತು. ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ಅಥಿತಿಗಳನ್ನಾಗಿ ಕರ್ನಾಟಕದ ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಡಿ ಕೆ ಶಿವಕುಮಾರ್, ಶಾಂತಿ ನಗರದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎನ್ ಎ ಹ್ಯಾರಿಸ್, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಕ್ರೀಸ್ ಗ್ರೂಪ್ ನ ಚೇರ್ಮನ್ ಆದ ರಾಬರ್ಟ್ ಕ್ರಿಸ್ಟೋಫರ್, ಕರ್ನಾಟಕ ಪ್ರಾವಿನ್ಸಿಲ್ ನ ಫಾದರ್ ಜೆಸ್ಸಿ ಡಿಮೆಲೋ ಸೇಂಟ್ ಜೋಸೆಫ್ಸ್ ಇಂಡಿಯನ್ ಶಾಲೆಯ ಹಾಲಿ ಪ್ರಾಂಶುಪಾಲರಾದ ಸುನಿತ್ ಪ್ರಭು, ಹೈಯರ್ ಕಂಪನಿಯ ಮಾರ್ಕೆಟಿಂಗ್ ಹೆಡ್ ಆದ ಸುರೇಶ, ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತರಾದ ಸತೀಶ್ ಐಪಿಎಸ್ , ಚಿತ್ರರಂಗದ ನಿರ್ಮಾಪಕ ಮತ್ತು ನಿರ್ದೇಶಕ ರಾದ ಓಂ ಸಾಯಿ ಪ್ರಕಾಶ ಇವರನ್ನು ಆಹ್ವಾನಿಸಲಾಗಿತು. ಸೇಂಟ್ ಜೋಸೆಫ್ ಇಂಡಿಯನ್ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಫಾದರ್ ಜೋಸೆಫ್ ಡಿಸೋಜ್ , ಖಜಾಂಚಿ ಯಾದ ಫಾದರ್ ಜಾನ್ ಲ್ಯಾಗ್, ಬಾಬು ಜೋಸೆಫ್ ಉಪಸ್ಥಿತರಿದ್ದರು. ಖ್ಯಾತ ಹಿನ್ನಲೆ ಗಾಯಕಿಯಾದ ಸಂಗೀತ ರವೀಂದ್ರನಾಥ ರವರ ಸಂಗೀತ ಗಾಯನ ಓಟಗಾರರಿಗೆ ಹೊಸ ಹುರುಪು ತುಂಬಿತು. ಕಾರ್ಯ ಕ್ರಮ ಕುರಿತು ಮಾತನಾಡಿದ ಸೇಂಟ್ ಜೋಸೆಫ್ ಸಿಬಿಎಸ್ ಇ ಶಾಲೆಯ ಪ್ರಾಂಶುಪಾಲರಾದ ಫಾದರ್ ರೋಹನ್ ಡಿ ಅಲ್ಮೇಡಾ ಅವರು ಮಾತನಾಡಿ ಸಂಸ್ಥೆಯ ೫೦ ವರ್ಷದ ಸವಿನೆನಪಿನ ಆಚರಣೆ ಗಾಗಿ ಇದನ್ನು ಆಯೋಜಿಸಿದ್ದು, ಭಾರತ ದೇಶವು ವೈವಿಧ್ಯಮಯದಿಂದ ಕೂಡಿದ್ದು ನಾವು ಭಾವೈಕ್ಯ ತೆಯನ್ನು “ಯೂನಿಟಿ ರನ್ ” ಎಂಬುದರ ಮೂಲಕ ನಡೆಸುತ್ತಿದ್ದೇವೆ ‘ ಎಂದು ಹೇಳಿದರು.
ಈ ಓಟದ ಸ್ಪರ್ಧೆಯು 10 ಕಿ.ಮೀ, 5 ಕಿ.ಮೀ, 3 ಕಿ.ಮೀ. ಓಟವನ್ನು ಒಳಗೊಂಡಿತು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಇದರಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Celebrating 50 years of St. Joseph’s Education Institute, Bengaluru “Golden Jubilee Unity Run” is a unique event
The “Golden Jubilee Unity Run”, an exciting event that united people from different backgrounds, age groups, and abilities, showcasing the diversity and inclusivity that St. Joseph’s Indian Institutions stand for. In addition to this the run aimed to provide educational facilities to the blind and poor children, keeping in view the social interest and spreading the message of humanity.
The event was graced by MLA Mr. NA Harris, Shanthinagar Constituency, Health Minister, Mr.Dinesh Gundurao, Chairman of CREES Group, Mr. Robert Christopher, Rev. Father Jossie De’Mello, Assistant to the Provincial of Karnataka Province, Rev. Fr. Sunith Prabhu Former Principal of SJIHS, Mr.Suresh, Marketing Head of Haier Company, Satish IPS, Additional Commissioner, Bengaluru West Division, Om Sai Prakash, Film Producer and Director. Rev. Father Joseph D’Souza, Head of St. Joseph’s Indian School, Rev. Father John Lang, Treasurer, Mr. Babu Joseph along with a Renowned playback singer Sangeetha Ravindranath’swhose musicalrendition gave new vigor to the runners. Speaking about the program, Father Rohan D’Almeida, Principal of St. Joseph’s CBSE School, said that it was organized to commemorate the 50th anniversary of the institution in the current campus and India being a diverse country we are running this campaign through a ‘Unity Run’.
Running events like this also foster a sense of camaraderie and teamwork. Participants can bond over their shared experience and form lasting connections. Moreover, it allows the institution to engage with the community and strengthen the relationships it has built over the years.
Overall, the “Golden Jubilee Unity Run” was an excellent way to celebrate St. Joseph’s Indian Institution’s 50-year journey in the current campus and create memorable experiences for all involved. It was an event that combined celebration, fitness, and community engagement in a unique and meaningful way.
ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ‘ಯುಕ್ತಿ’ ಉಡುಪ ಮತ್ತು ‘ಸುನಿಧಿ’ ಉಡುಪ ಅವರ ಭರತನಾಟ್ಯ ರಂಗಪ್ರವೇಶ
ಕುಂದಾಪುರ: ಜನವರಿ 27ರಂದು ಬಳ್ಕೂರು ಗ್ರಾಮದ ಬಳಿ.ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪ ಅವರ ಪುತ್ರಿಯರಾದ ಯುಕ್ತಿ ಉಡುಪ ಮತ್ತು ಸುನಿಧಿ ಉಡುಪ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮತ್ತು ಕರ್ನಾಟಕ ಕಲಾಶ್ರೀ ಗುರು ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಮಂಗಳೂರು ಇವರು ಉದ್ಘಾಟಿಸಿ ಶುಭಹಾರೈಸಿದರು.
ಇಬ್ಬರೂ ಕಲಾವಿದರ ಗುರು ನೃತ್ಯ ವಸಂತ ನಾಟ್ಯಾಲಯ (ರಿ) ಕುಂದಾಪುರದ ನಿರ್ದೇಶಕರಾದ ವಿದುಷಿ ಶ್ರೀಮತಿ ಪ್ರವಿತಾ ಅಶೋಕ್ ಅವರು ತಮ್ಮ ವಿದ್ಯಾರ್ಥಿನಿಯರಾದ ಯುಕ್ತಿ ಉಡುಪ ಮತ್ತು ಸುನಿಧಿ ಉಡುಪ ಅವರಿಗೆ ಗೆಜ್ಜೆಗಳನ್ನು ಕೊಡುವುದರ ಮೂಲಕ ರಂಗಪ್ರವೇಶವನ್ನು ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಬೆಂಗಳೂರಿನ ಸಂಸ್ಕೃತಿ – (ದೇವಾಲಯ ಕಲಾ) ಇದರ ಕಲಾ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ಗುರು ಶ್ರೀ ಸತ್ಯನಾರಾಯಣ ರಾಜು, ಮಂಗಳೂರಿನ ಸಂದೇಶ ಲಲಿತಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಮತ್ತು ಭರತನಾಟ್ಯ ವಿಭಾಗದ ಮುಖ್ಯಸ್ಥರಾದ ಗುರು ಶ್ರೀ ವಾಣಿ ರಾಜಗೋಪಾಲ್ ಮತ್ತು ಮಂಗಳೂರಿನ ಬಿಜೈ ಇಲ್ಲಿನ ನೃತ್ಯ ಕಲಾ ನಿಕೇತನದ ನಿರ್ದೇಶಕರಾದ ಗುರು ವಿದುಷಿ ಶೃದ್ಧಾ ನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನಂತರ ಪುಷ್ಪಾಂಜಲಿ ಭರತನಾಟ್ಯ ಕಾರ್ಯಕ್ರಮ ಮತ್ತು ದೇವರು ಪೂಜೆ ಕಾರ್ಯಕ್ರಮ ನಡೆಯಿತು.
ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.