ಉಡುಪಿ : ನಿರಂತರ್ ಉದ್ಯಾವರ ನೇತೃತ್ವದಲ್ಲಿ 6ನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವವು ಇದೇ ಫೆಬ್ರವರಿ ಒಂದರಿಂದ ನಾಲ್ಕನೇ ತಾರೀಖಿನವರೆಗೆ ಸಂಜೆ ಗಂಟೆ 6:30ಕ್ಕೆ ಸರಿಯಾಗಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ (ಚರ್ಚ್ ವಠಾರ) ನಡೆಯಲಿದೆ. ಫೆಬ್ರವರಿ 1, ಗುರುವಾರದಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇವರಿಂದ ಕ್ಲಾನ್ವಿನ್ ಫೆರ್ನಾಂಡಿಸ್ ಇವರ ನಿರ್ದೇಶನದ ರಂಗಗೀತೆಗಳು ಮತ್ತು ‘ಹ್ಯಾಂಗ್ ಆನ್’ (ಕನ್ನಡ), ಫೆಬ್ರವರಿ 2 ಶುಕ್ರವಾರದಂದು ಪ್ರಶಸ್ತಿ ಪುರಸ್ಕೃತ ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ತುಳು ನಾಟಕ ‘ಮರಣಗೆಂದಿನಾಯೆ’, ಫೆಬ್ರವರಿ 3 ಶನಿವಾರದಂದು ಅಸ್ತಿತ್ವ ಮಂಗಳೂರು ತಂಡದಿಂದ ‘ಜುಗಾರಿ’ (ಕೊಂಕಣಿ), ಮತ್ತು ಫೆಬ್ರವರಿ 4, ಭಾನುವಾರದಂದು ಲೋಗೋಸ್ ಥಿಯೇಟರ್ ಗ್ರೂಪ್ ಮಂಗಳೂರು ಇವರಿಂದ ‘ದಾದ್ಲ್ಯಾo ಮಧೆo ತುo ಸದೆoವ್’ ಎನ್ನುವ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಉಚಿತ ಪ್ರವೇಶವಿರುವ ಈ ನಾಟಕೋತ್ಸವವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
Month: January 2024
ಕೋಲಾರ ಜಿಲ್ಲೆ ಅತಿ ಹೆಚ್ಚು ಮಾವಿನ ಕಾಯಿ ಬೆಳೆ ಹಾಗೂ ಟೊಮೋಟೋ ಮತ್ತು ತರಕಾರಿಗಳನ್ನು ಬೆಳೆಸುತ್ತದೆ ಹೆಚ್ಚು ರೈಲ್ಗಳನ್ನು ಸಂಚರಿಸುವಂತೆ ಮಾಡಬೇಕಾಗುತ್ತದೆ :ನೀಲಟೂರು ಚಿನ್ನಪ್ಪರೆಡ್ಡಿ
ಶ್ರೀನಿವಾಸಪುರ : ಕರ್ನಾಟಕ ರಾಜ್ಯದಲ್ಲಿ ಕೋಲಾರ ಜಿಲ್ಲೆ ಅತಿ ಹೆಚ್ಚು ಮಾವಿನ ಕಾಯಿ ಬೆಳೆ ಹಾಗೂ ಟೊಮೋಟೋ ಮತ್ತು ತರಕಾರಿಗಳನ್ನು ಬೆಳೆಯುವ ಪ್ರದೇಶವಾಗಿದೆ ಈ ಪ್ರದೇಶದಲ್ಲಿ ಅತಿ ಹೆಚ್ಚು ರೈಲ್ಗಳನ್ನು ಸಂಚರಿಸುವಂತೆ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಮಾವು ಬೆಳಗಾರರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಹೇಳಿದರು.
ಬುಧವಾರ ಪ್ರಜಾವಾಣಿ ಪತ್ರಿಕೆಯೊಂದಿಗೆ ಮಾತನಾಡಿ ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಮಂಡಿಸುವ ರೈಲ್ವೆ ಬಜೆಟ್ನಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ ಮದನಪಲ್ಲಿ ಮುಖಾಂತರ ತಿರುಪತಿಗೆ ರೈಲು ಮಾರ್ಗವನ್ನು ಆಳವಡಿಸಿದರೆ ತುಂಬಾ ಪ್ರಯೋಜನಕಾರಿಯಾಗಲಿದೆ ಎಂದರು.
ನಮ್ಮ ಜಿಲ್ಲೆಯ ರೈತರಿಗೆ ತುಂಬಾ ಅನುಕೂಲವಾಗಿ ಇಲ್ಲಿ ಬೆಳೆದಂತಹ ಹಣ್ಣು ಮತ್ತು ತರಕಾರಿಗಳಿಗೆ ಅತಿ ಹೆಚ್ಚು ಬೆಲೆ ಬರುವ ಸಾಧ್ಯತೆ ಇರುತ್ತದೆ. ಇದನ್ನು ನಮ್ಮ ಜಿಲ್ಲೆಯ ಸಂಸದರು ಯಾವಾಗಲೂ ಹೇಳುತ್ತಿದ್ದರೂ ಕಾರ್ಯಗತಗೊಳ್ಳಲಿಲ್ಲ. ಹಾಗೂ ಶ್ರೀನಿವಾಸಪುರದಿಂದ ದೆಹಲಿಯವರಿಗೆ ಕಿಸಾನ್ ರೈಲು ಪ್ರಾರಂಭಗೊಳ್ಳಬೇಕು ಒಂದು ವರ್ಷ ಪ್ರಾಯೋಗಿಕವಾಗಿ ಕಿಸಾನ್ ರೈಲನ್ನು ಹೊರಡಿಸಿ ಈಗ ನಿಲ್ಲಿಸಲಾಗಿದೆ. ಅದು ಪುನರಾಂಭ ಆಗಬೇಕು.
ಏಕೆಂದರೆ ಶ್ರೀನಿವಾಸಪುರದಲ್ಲಿ ಪ್ರತಿವರ್ಷ ಸುಮಾರು ಐದರಿಂದ ಆರು ಲಕ್ಷ ಟನ್ಗಳಷ್ಟು ಮಾವಿನ ಕಾಯಿಯನ್ನು ಬೆಳೆಯುತ್ತಿದ್ದೇವೆ . ಈ ಒಂದು ದೃಷ್ಟಿಯಿಂದ ಕೇಂದ್ರ ಸರ್ಕಾರವು ರೈತರಿಗೆ ಬೆಂಬಲವಾಗಿ ನಿಂತು ಈ ಕಾರ್ಯವನ್ನು ಕೇಂದ್ರ ಸರ್ಕಾರ ಈ ಕೆಲಸ ಕೈಗೆತ್ತಿಕೊಂಡು ಕೂಡಲೇ ಆಗುವಂತೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರಿಕೆಯ ಮೂಲಕ ಮನವಿ ಮಾಡಿದರು.
ಫೆಬ್ರವರಿ 4 ರಂದು ಬೊಂದೆಲ್ ಶಾಲಾ ವಠಾರದಲ್ಲಿ 16 ನೇ ಸ್ಟ್ಯಾನ್ ನೈಟ್ ಸಂಗೀತ ರಸಮಂಜರಿ
ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಮಂಗಳೂರು ಮತ್ತು ಅಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಇವರ ಸಹಯೋಗದೊಂದಿಗೆ 16 ನೇ ಸ್ಟ್ಯಾನ್ ನೈಟ್ ಸಂಗೀತ ರಸಮಂಜರಿ ಫೆಬ್ರವರಿ 4 ರಂದು ಆದಿತ್ಯವಾರ ಸಂಜೆ 4 ಗಂಟೆಗೆ ಬೋಂದೆಲ್ ಆಂಗ್ಲ ಮಧ್ಯಮ ಶಾಲಾ ವಠಾರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತಗಾರರು, ನೃತ್ಯಗಾರರು, ಹಾಸ್ಯಗಾರರು ಪ್ರದರ್ಶನ ನೀಡಲಿರುವರು. ಈ ಕಾರ್ಯಕ್ರಮವು ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ಉಚಿತ ಪ್ರವೇಶದೊಂದಿಗೆ ಏರ್ಪಡಿಸಲಾಗಿದೆ.
ಯು.ಸಂಗೀತ ಶೆಣೈ ಅವರಿಗೆ “ಯಂಗ್ ಸೈಂಟಿಸ್ಟ್ ಅವಾರ್ಡ್”
ಮಣಿಪಾಲ ಮಾಹೆಯ ಲೈಫ್ ಸಾಯನ್ಸ್ ನಲ್ಲಿ ಒರಲ್ ಕ್ಯಾನ್ಸರ್ ಬಗ್ಗೆ ಪಿ ಎಚ್ ಡಿ ಮಾಡುತ್ತಿರುವ ಕುಂಭಾಸಿಯ ಯು.ಸಂಗೀತಾ ಶೆಣೈ ಯವರಿಗೆ ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ “ಯಂಗ್ ಸಾಯನ್ಟಿಸ್ಟ್ ಅವಾರ್ಡ್” ಪ್ರದಾನ ಮಾಡಲಾಗಿದೆ.
ಇಂಡಿಯನ್ ಸೊಸೈಟಿ ಆಫ್ ಹ್ಯೂಮನ್ ಜೆನೆಟಿಕ್ಸ್ ಹಾಗೂ ಗುಜರಾತ್ ಬಯೊ ಟೆಕ್ನಾಲಜಿ ರಿಸರ್ಚ್ ಸೆಂಟರ್ ಏರ್ಪಡಿಸಿದ ವಾರ್ಷಿಕ ಸಮ್ಮೇಳನ ದಲ್ಲಿ ಯು.ಸಂಗೀತಾ ಶೆಣೈ ತಮ್ಮ ಸಂಶೋಧನಾ ವಿಚಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಂಡಿಸಿದ್ದರು.
ಇವಳು ಹಿರಿಯ ಪತ್ರಕರ್ತ ಯು.ಎಸ್ ಶೆಣೈ ,ಶ್ರೀಮತಿ ಸಾಧನಾ ಶೆಣೈ ದಂಪತಿಯ ಪುತ್ರಿ ಯಾಗಿದ್ದು ಸಿಎಸ್ ಐ ಆರ್ ಪುರಸ್ಕ್ರತ ಸಂಶೋಧಕಿಯಾಗಿದ್ದಾರೆ.
ಕುಂದಾಪುರ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಹೃದಯಾಘಾದಿಂದ ಸಾವು
ಉಡುಪಿಯಿಂದ ದಾವಣಗೆರೆಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಂದ್ರು (24) ಅವರು ಜನ್ಸಾಲೆ ಬಳಿ ಬಂದಾಗ ಅವರಿಗೆ ಜೋರಾಗಿ ನಡುಕ ಪ್ರಾರಂಭಗೊಂಡಿತು ನಂತರ ಸಿದ್ದಾಪುರದಲ್ಲಿ ಬಸ್ಸನ್ನು ನಿಲ್ಲಿಸಿದ ಚಾಲಕ 108ಕ್ಕೆ ವಾಹನದ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಲ್ಲಿ ಪರೀಕ್ಷಿಸಿದ ವೈದ್ಯರು ಯುವಕ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ನಿರ್ವಾಹಕ ಪರಪ್ಪ ಅವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶ್ರೀನಿವಾಸಪುರ:ಪಟ್ಟಣ ಅಭಿವೃದ್ಧಿಗಾಗಿ ಬಂದಂತಹ ಅನುದಾನಗಳು ಸದ್ಭಳಕೆ ಮಾಡಿಕೊಳ್ಳವ ವ್ಯವಸ್ಥೆಯನ್ನು ಅಧಿಕಾರಿಗಳು ಹಮ್ಮಿಕೊಳ್ಳಬೇಕು- ಯೋಜನಾ ನಿರ್ದೇಶಕಿ ಎಸ್.ಅಂಬಿಕಾ
ಶ್ರೀನಿವಾಸಪುರ : ಪಟ್ಟಣ ಅಭಿವೃದ್ಧಿಗಾಗಿ ಸರ್ಕಾರವತಿಯಿಂದ ಅನೇಕ ಅನುದಾನಗಳು ಬರುತ್ತವೆ ಅವುಗಳನ್ನು ಸದ್ಭಳಕೆ ಮಾಡಿಕೊಳ್ಳವ ವ್ಯವಸ್ಥೆಯನ್ನು ಅಧಿಕಾರಿಗಳು ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಸ್.ಅಂಬಿಕಾ ಸೂಚಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಸಂಬಂದಿಸಿದಂತೆ ಪ್ರಗತಿ ಪರಿಶೀಲಾನ ಸಭೆ ನಡೆಸಿದರು.
ಪಟ್ಟಣಕ್ಕೆ ಸಂಬಂದಿಸಿದಂತೆ ಕುಡಿಯುವ ನೀರು, ಸ್ವಚ್ಚತೆ, ನೈರ್ಮಲ್ಯ ಕಾಪಾಡುವುದು, ಬೀದಿ ದೀಪಗಳು, ರಸ್ತೆ ಹಾಗೂ ಇತರೆ ಮೂಲ ಭೂತ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿ ಮಾಹಿತಿ ಪಡೆದು ಪಟ್ಟಣ ಅಭಿವೃದ್ಧಿಗಾಗಿ ಇನ್ನು ಬೇಕಾಗಿರುವ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕಛೇರಿ ವ್ಯವಸ್ಥಾಪಕ ಜಿ.ನವೀನ್ ಚಂದ್ರ, ಪರಿಸರ ಅಭಿಯಂತರ ಕೆ.ಎಸ್.ಲಕ್ಷ್ಮೀಶ್, ಕಿರಿಯ ಅಭಿಯಂತರ ವಿ.ಶ್ರೀನಿವಾಸಪ್ಪ, ಕಂದಾಯ ಅಧಿಕಾರಿ ವಿ.ನಾಗರಾಜ್, ಜಿಲ್ಲಾ ನಗರಾಭಿವೃದ್ಧಿ ಕೋಶದ ನೋಡಲ್ ಅಧಿಕಾರಿ ಚೌಡೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಇದ್ದರು.
ಶ್ರೀನಿವಾಸಪುರ : ಸರ್ಕಾರದಿಂದ ಬಂದತಹ ಅನುದಾನಗಳನ ಬಳಕೆ ಹಾಗು ಬಾಕಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಡಾ.ಎನ್.ಭಾಸ್ಕರ್
ಶ್ರೀನಿವಾಸಪುರ : ಸರ್ಕಾರದಿಂದ ಬಂದತಹ ಅನುದಾನಗಳನ್ನು ಯಾವ ಯಾವ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಹಾಗು ಬಾಕಿ ಇರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇರುವ ವ್ಯವಸ್ಥೆಯನ್ನು ಮಾಡುವಂತೆ ಅಧಿಕಾರಿಗಳಿಗೆ ತಾಲೂಕಿನ ನೋಡಲ್ ಅಧಿಕಾರಿಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಜಿ.ಪಂ. ಉಪಕಾರ್ಯದರ್ಶಿ ಡಾ.ಎನ್.ಭಾಸ್ಕರ್ ಸೂಚಿಸಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎಸ್.ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿದ್ದರು.
ಅಂಗವಿಕಲ್ಯ ಶಾಪ ಎಂದು ಭಾವಿಸದೆ ಸಮಾಜದಲ್ಲಿ ಗೌರವಹಿತ ಜೀವನ ನಡೆಸಲು ಮುಂದಾಗಿ:ಪುರಸಭೆ ವ್ಯವಸ್ಥಾಪಕ ಜಿ.ನವೀನ್ಚಂದ್ರ
ಶ್ರೀನಿವಾಸಪುರ 2 : ಅಂಗವಿಕಲ್ಯ ಶಾಪ ಎಂದು ಭಾವಿಸದೆ ಸಮಾಜದಲ್ಲಿ ಗೌರವಹಿತ ಜೀವನ ನಡೆಸಲು ಮುಂದಾಗಿ ಎಂದು ಪುರಸಭೆ ವ್ಯವಸ್ಥಾಪಕ ಜಿ.ನವೀನ್ಚಂದ್ರ ಹೇಳಿದರು.
ಪಟ್ಟಣದ ಪುರಸಭೆ ಕಛೇರಿ ಸಭಾಂಗಣದಲ್ಲ್ಲಿ ಮಂಗಳವಾರ ವಿಕಲಚೇತನರ ಸಮನ್ವಯ ವಿಶೇಷ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲರಿಗೂ ಅವರದ್ದೆ ಆದ ಸ್ಥಾನ ಮಾನ ಇದ್ದು, ಯಾವುದೇ ಹಿಂಜರಿಕೆ ಇಲ್ಲದೆ ಮುಂದೆ ಸಾಗುವ ಕಾರ್ಯ ಮಾಡಿ ಎಂದು ಸಲಹೆ ನೀಡಿದರು. ಸಮ ಸಮಾಜ ನಿರ್ಮಿಸುವಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನಗಳೂ ನಡೆದಿವೆ ಎನ್ನುತ್ತಾ, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವುದಾಗಿ ತಿಳಿಸಿದರು.
ಅಂಗವಿಲಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿ ವಿಕಲಚೇತನರ ಕುಂದುಕೊರತೆಗಳ ಬಗ್ಗೆ ಮಾಹಿತಿ ನೀಡಿದರು. ಪುರಸಭೆ ವತಿಯಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹಫಲಾನುಭವಿಗಳಿಗೆ ವಿತರಿಸುವಂತೆ ಮನವಿ ಮಾಡಿದರು.
ಕಂದಾಯ ಅಧಿಕಾರಿ ವಿ.ನಾಗರಾಜ್, ಪದಾಧಿಕಾರಿಗಳಾದ ಆನಂದ್, ರಾಮಚಂದ್ರಪ್ಪ ಇದ್ದರು.
ರಾಷ್ಟ್ರಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ ಕಾಂಪಿಟಿಷನ್: ಕುಂದಾಪುರ ಅಭಾಕಸ್ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಚಾಂಪಿಯನ್ : ಹಲವು ವಿದ್ಯಾರ್ಥಿಗಳಿಗೆ ಪದಕಗಳು/National Abacus and Mental Arithmetic Competition: Four Students of Kundapur Abacus Institute Champion: Medals to Many Students
ಕುಂದಾಪುರ: ಜ.31: ಐಡಿಯಲ್ ಪ್ಲೇ ಅಭಾಕಸ್ ಕಂಪನಿ ಯಿಂದ ನಡೆದ 19 ನೇ ರಾಷ್ಟ್ರ ಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ ಕಾಂಪಿಟಿಷನ್ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಇದೆ 28 ನೇ ತಾರೀಕು ನಡೆಯಿತು. ದೇಶದ ವಿವಿಧ ಭಾಗಗಳಿಂದ ಸುಮಾರು 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿಕ್ಕನಸಾಲು ರಸ್ತೆ, ಕೋಸ್ತಾ ಕಾಂಪ್ಲೆಕ್ಸನಲ್ಲಿ ತರಭೇತಿ ನೀಡುವ ಅಭಾಕಾಸ್ ಕುಂದಾಪುರ ವಿಭಾಗ ಸಂಸ್ಥೆಯಿಂದ ಸ್ಪರ್ದಿಸಿದ್ದ 59 ವಿದ್ಯಾರ್ಥಿಗಳಲ್ಲಿ,ನಾಲ್ವರು ವಿದ್ಯಾರ್ಥಿಗಳು ಚಾಂಪಿಯನ್: ಓಟ್ಟು 59 ಪದಕಗಳು ಬುಟ್ಟಿಗೆ ಹಾಕಿಕೊಂಡಿದ್ದಾರೆ
ಪದಕಗಳ ವಿವರ
4 ಚಾಂಪಿಯನ್
12 ಪ್ರಥಮ ಸ್ಥಾನ
21 ದ್ವಿತೀಯ
11 ತ್ರಿತಿಯ
7 ಚತುರ್ಥಿಯ
4 ಪಂಚಮ ಸ್ಥಾನ ಪಡೆದುಕೊಂಡಿದೆ
ಅರಟೆ ಶ್ರೀಮತಿ ರೇಷ್ಮಾ ಮತ್ತು ರಾಜೇಶ್ ಅವರ ಪುತ್ರ ಲಕ್ಷ ರಾಜೇಶ್, ಪಡುಕೋಣೆ ಸಂದೀಪ್ ಲೆವಿಸ್ ಮತ್ತು ಫಿಲೋಮ್ ರೇಷ್ಮಾ ಅವರ ಪುತ್ರಿ ರೇಹನ್ನ ಸಾಲೋಮೀ, ಕೊಡ್ಲಾಡಿ ಶ್ರೀಮತಿ ವಾರಿಜಕ್ಷಿ ಅವರ ಪುತ್ರ ಸ್ಕಂದ ಸ್ ಶೆಟ್ಟಿ ಮತ್ತು ಕೊಡ್ಲಾಡಿ ಪ್ರಮೀಳಾ ಮತ್ತು ನಾರಾಯಣ ಅವರ ಪುತ್ರಿ ನಮನ ಏನ್ ಇವರು 5 ನಿಮಿಷದಲ್ಲಿ 100 ಕ್ಕೆ 100 ಲೆಕ್ಕ ಮಾಡೋದರೊಂದಿಗೆ ಚಾಂಪಿಯನ್ ಆಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕುಂದಾಪುರ ಸೆಂಟರ್ ನ ಮುಖ್ಯಸ್ಥರಾದ ಪ್ರಸನ್ನ ಕೆ. ಬಿ ಹಾಗೂ ಬೋಧಕರಾದ ಮಹಾಲಕ್ಷ್ಮೀ ಮತ್ತು ದೀಪ ಇವರಿಂದ ತರಭೇತಿ ನೀಡಿರುತ್ತಾರೆ.
National Abacus and Mental Arithmetic Competition: Four Students of Kundapur Abacus Institute Champion: Medals to Many Students
Kundapur: Jan 31: The 19th National Level Abacus and Mental Arithmetic Competition organized by Ideal Play Abacus Company was held on 28th at Coimbatore, Tamil Nadu. About 2200 students from different parts of the country participated. Out of 59 students who competed from Abhakas Kundapur Division Training Institute at Chikkanasalu Road, Kosta Complex, four students emerged champions: bagged 59 medals.
Details of medals
4 champions
12 first place
21 second position
11 position of trinity
7 fourth position
4 got the fifth position
Laksh Rajesh, son of Arate Mrs. Reshma and Rajesh, Rehanna Salome, daughter of Padukone Sandeep Lewis and Philome Reshma, Skanda S Shetty, son of Kodladi Mrs. Warijakshi and Namana Aen, daughter of Kodladi Pramila and Narayan, who counted 100 out of 100 in 5 minutes, became the state champions. have brought
Head of Kundapura Center Prasanna K. B and tutored by teachers Mahalakshmi and Deepa.