

ಶ್ರೀನಿವಾಸಪುರ ; ಸೋಮವಾರ 4.30 ಸಮಯದವರೆಗೂ ನಾಮಪತ್ರ ಹಿಂಪಡೆಯುವ ಕೊನೆ ದಿನವಾದ್ದರಿಂದ ಪ್ರಾಥಮಿಕ ,ಪ್ರೌಡಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಲಾಖೆ ಸಿಬ್ಬಂದಿಗಳು ಸ್ಪರ್ಧಿಯಲ್ಲಿ ಸ್ಪರ್ಧಿಸಲಿದ್ದು, 28 ರಂದು ಚುನಾವಣೆ ನಡೆಯಲಿದ್ದು, ಉಳಿದಂತೆ 21 ಇಲಾಖೆಗಳ 27 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸೋಮವಾರ ನೌಕರರ ಕಚೇರಿಯಲ್ಲಿ ಚುನಾವಣಾಧಿಕಾರಿ ಐಮಾರಡ್ಡಿ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸಂಘಕ್ಕೆ ಇದೇ ತಿಂಗಳು 28 ರಂದು 2024-29 ನೇ ಸಾಲಿಗೆ ನಡೆಯಲಿದ್ದು, ಅಂತಿಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ದೇಶಕರ ವಿವರ ಪ್ರಾಥಮಿಕ ಶಾಲಾ ಶಿಕ್ಷಣ ಎಲ್.ಆನಂದ್, ಆರ್.ಕಾಳಾಚಾರಿ, ಎಂ.ಬೈರೇಗೌಡ, ಎಂ.ಮೂರ್ತಿ, ಕೆ.ರಾಜಣ್ಣ, ಎನ್,ವೇಣುಗೋಪಾಲರೆಡ್ಡಿ, ಜಿ.ಎನ್.ಶ್ರೀನಿವಾಸ್ಯ್ಯ, ಶ್ವೇತ, ಎಂ.ಶಂಕರಪ್ಪ, ಪ್ರೌಡಶಾಲಾ ಶಿಕ್ಷಣ ಎಸ್.ಮುನಿವೆಂಕಟಪ್ಪ, ಎಂ.ಸಿ.ಲಕ್ಷ್ಮೀಪತಿ, ಬಿಇಒ ಕಚೇರಿ ಸಿಬ್ಬಂದಿ ವೈ.ವಿ.ಶ್ರೀನಿವಾಸ್, ಸೈಯದ್ ಜಬಾವುದ್ದೀನ್ ಅಂತಿಮವಾಗಿ ಚುನಾವಣಾ ಕಣದಲ್ಲಿ ಇದ್ದಾರೆ ಎಂದು ಚುನಾವಣಾಧಿಕಾರಿ ಐಮಾರಡ್ಡಿ ಮಾಹಿತಿ ನೀಡಿದರು. ಸಹಾಯಕ ಚುನಾವಣಾಧಿಕಾರಿ ವಿ.ತಿಪ್ಪಣ್ಣ ಇದ್ದರು.