ಕಥೊಲಿಕ್ ಸ್ತ್ರೀ ಸಂಘಟನೇಯಿಂದ ಫಾ|ಸ್ಟ್ಯಾನಿ ತಾವ್ರೊ ಇವರ ಹುಟ್ಟು ಹಬ್ಬ ಆಚರಣೆ-ಚಾರ್ಟೆಟ್ ಅಕೌಂಟೆಡ್ ವಿನಾರ್ಡ್ ರವರಿಗೆ ಸನ್ಮಾನ


ಕುಂದಾಪುರ, ಆ.13: ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ 75 ನೇ ಹುಟ್ಟು ಹಬ್ಬ ಸನಿಹದಲ್ಲಿರುವಾಗ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಮತ್ತು ಸ್ತ್ರೀ ಸ್ವಸಹಾಯ ಸಂಘಗಳಿಂದ ಚರ್ಚ್ ಸಭಾಭವನದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಲಾಯಿತು.
ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಫಾ||ಸ್ಟ್ಯಾನಿ ತಾವ್ರೊ ಅವರಿಗೆ ಶುಭ ಕೋರುತ್ತಾ ‘ನಮಗೆ ಧರ್ಮಗುರುಗಳಿಗೆ ಯಾಜಕೀ ದೀಕ್ಷೆ ಪಡೆದದ್ದು ಅದು ಶಾಸ್ವತವಾಗಿರುತ್ತೆ, ಆದರೆ ಚರ್ಚಗಳಲ್ಲಿ ಅಧಿಕ್ರತ ಸೇವೆ ಮಾಡಲಿಕ್ಕೆ ಆಗುವುದಿಲ್ಲ. ವಯಸ್ಸಿನ ದೆಸೆಯಿಂದ ನಿವ್ರತ್ತಿ ದೊರಕುತ್ತದೆ. ಆದರೆ ನಮ್ಮ ಧರ್ಮಗುರುಗಳು ವಯಸ್ಸಾದರೂ, ಅವರಲ್ಲಿ ಯುವಕರಂತೆ ಉತ್ಸಾಹ ಇದೆ, ಎಷ್ಟೊಂದು ಚರ್ಚಗಳಲ್ಲಿ ಧರ್ಮಗುರುಗಳಾಗಿ, ಹಲವಾರು ವಲಯ ಪ್ರಧಾನರಾಗಿ, ಧರ್ಮಪ್ರಾಂತ್ಯದ ಸಲಹೆಗಾರರಾಗಿ ಸೇವೆ ನೀಡಿದ ಅವರಲ್ಲಿ ಅನುಭವದ ಭಂಡಾರವೇ ಇದೆ” ಎಂದು ತಿಳಿಸಿದರು.

ಇತ್ತೀಚೆಗೆ ಚಾರ್ಟೆಟ್ ಅಕೌಂಟೆಡ್ ಪದವಿಯನ್ನು ಗಳಿಸಿದ ಸ್ತ್ರೀ ಸಂಘಟನೇಯ ಮಾಜಿ ಅಧ್ಯಕ್ಷೆ ವಿನಯಾ ಡಿಕೋಸ್ತಾ, ಕುಂದಾಪುರ ಕಥೊಲಿಕ್ ಸಭೆಯ ಮಾಜಿ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಇವರ ಪುತ್ರ ಪ್ರತಿಭಾನ್ವಿತ ವಿನಾರ್ಡ್ ಡಿಕೋಸ್ತಾ ಇವರಿಗೆ ಸ್ತ್ರೀ ಸಂಘಟನೇಯ ಪರವಾಗಿ ಫಾ|ಸ್ಟ್ಯಾನಿ, ಫಾ|ಅಶ್ವಿನ್ ಮತ್ತು ಇತರರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ವಿನಾರ್ಡ್ “ನನ್ನ ಕಲಿಕೆಯ ಸಂದರ್ಭದಲ್ಲಿ ನಿಮ್ಮಲ್ಲಿ ಹಲವರು ಪೆÇ್ರೀತ್ಸಾಹ ಉತೇಜನ ನೀಡಿದ್ದಿರಿ, ಇವತ್ತು ನನ್ನ ಗುರಿ ಸಾಧಿಸಿದಕ್ಕೆ ನನಗೆ ಸನ್ಮಾನ ಮಾಡಿದ್ದಕ್ಕೆ ಎಲ್ಲರಿಗೂ ಕ್ರತÅಜ್ಞತೆ ಸಲ್ಲಿಸಿದರು.
ಹುಟ್ಟು ಹಬ್ಬ ಆಚರಿಸಿ ಶುಭ ಹಾರೈಸಿದಕ್ಕೆ ಫಾ|ಸ್ಟ್ಯಾನಿ ತಾವ್ರೊ ‘ನಿಮ್ಮೆಲ್ಲರ ಪ್ರೀತಿ ನನಗೆ ಅತೀವ ಸಂತೋಷ ತಂದಿದೆ, ಪ್ರಾಯ ಆಗಿದೆಯೆಂದು ವ್ಯಥೆ ಸಲ್ಲದು, ನಾವು ಪ್ರಾಯವನ್ನು ಚಿಂತಿಸುವುದಲ್ಲ, ನಮಗೆ ಶಕ್ತಿ ಇರುವವರೆಗೆ ನಾವು ಕಾರ್ಯ ಪ್ರವತ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ಸ್ತ್ರೀ ಸಂಘಟನೆ ನಮ್ಮ ಚರ್ಚಿಗಾಗಿ ಉತ್ತಮ ಸೇವೆ ನೀಡುತ್ತಾ ಇದೆ’ ಎಂದು ಶ್ಲಾಘಿಸಿದರು. ಸ್ತ್ರೀ ಸಂಘಟನೇಯ ಸಚೇತಕಿ ಸಿಸ್ಟರ್ ಆಶಾ ,
ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಉಪಸ್ತಿತರಿದ್ದರು.
ಸ್ತ್ರೀ ಸಂಘಟನೇಯ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ್ ಸ್ವಾಗತಿಸಿದರು. ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಶುಭ ಹಾರೈಸಿ ಧನ್ಯವಾದಗಳನ್ನು ಸಮರ್ಪಿಸಿದರು. ಶಾಂತಿರಾಣಿ ಬರೆಟ್ಟೊ ನಿರೂಪಿಸಿದರು.

ಜನರು ಜನಪರವಲ್ಲದ ಸರ್ಕಾರದ ವಿರುದ್ಧ ದನಿಯೆತ್ತಬೇಕು : ಪಿ.ಆರ್.ಸೂರ್ಯನಾರಾಯಣ

ಶ್ರೀನಿವಾಸಪುರ: ಜನರು ಜನಪರವಲ್ಲದ ಸರ್ಕಾರದ ವಿರುದ್ಧ ದನಿಯೆತ್ತಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಪ್ರಚಾರಾಂದೊನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿದೆ. ರೈತರು, ಕಾರ್ಮಿಕರು ಹಾಗೂ ಕೂಲಿಕಾರರ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದರು.
ದೇಶದ ಸ್ವಾಂತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಪ್ರಜೆಗಳು ಎಚ್ಚೆತ್ತುಕೊಳ್ಳಬೇಕು. ದೇಶ ಕ್ಷೇಮಕ್ಕಾಗಿ ಒಗ್ಗೂಡಬೇಕು. ಸಂವಿಧಾನ ರಕ್ಷಣೆಯಿಂದ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸಕ್ಕೆ ಭದ್ರತೆ ನೀಡಿ, ಅವರ ಮೂಲಭೂತ ಹಕ್ಕುಗಳ ರಕ್ಷಣೆ ಮಾಡಬೇಕು. ಪಿಂಚಣಿ ಸೌಲಭ್ಯ ಕಲ್ಪಿಸಲು ಕಾರ್ಮಿಕ ನೀತಿಯನ್ನು ಗಟ್ಟಿಗೊಳಿಸಬೇಕು. ಆದರೆ ಇರುವ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ತಂದು, ಇಡೀ ಕಾರ್ಮಿಕ ವರ್ಗವನ್ನು ಕಾನೂನುಬದ್ಧ ಗುಲಾಮರನ್ನಾಗಿಸಲು ಹೊರಟಿದೆ ಎಂದು ಹೇಳಿದರು.
ಆಹಾರ, ಆರೋಗ್ಯ, ಶಿಕ್ಷಣದ ಭಾಗವಾಗಿ ಬಂದಿರುವ ಅಂಗನವಾಡಿ, ಬಿಸಿಯೂಟ, ಆಶಾ, ಪೋಷಣ್ ಅಭಿಯಾನ ಹಾಗೂ ಸಂಜೀವಿನಿ ಯೋಜನೆಯಡಿ ದೇಶದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮಂದಿ ದುಡಿಯುತ್ತಿದ್ದಾರೆ. ಆದರೆ ಅವರು ಶಾಸನಾತ್ಮಕವಾಗಿ ಸೌಲಭ್ಯ ವಂಚಿತರಾಗಿದ್ದಾರೆ ಎಂದು ಹೇಳಿದರು.

ಕುಂದಾಪುರ ಕಥೊಲಿಕ್ ಸಭಾದಿಂದ – ಸ್ವಾತಂತ್ರ್ಯೊತ್ಸವದ ಪ್ರಯುಕ್ತ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆ


ಕುಂದಾಪುರ,ಆ.13 : ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆಗಳು (ಆ.12 ರಂದು) ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು, ಘಟಕದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ ”ಸ್ವಾತಂತ್ರ್ಯದ ಪ್ರಯುಕ್ತ ಎರ್ಪಡಿಸಿದ ಈ ದೇಶ ಭಕ್ತಿ ಗೀತೆ ಮತ್ತು ನ್ರತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಉತ್ಸಾಹ, ಸ್ಪೂರ್ತಿ ನೋಡಿ ತುಂಬಾ ಖುಷಿಯನ್ನು ನೀಡಿದೆ, ನೀವು ನಮ್ಮ ಭಾರತದ ಮುಂದಿನ ಪ್ರಜೆಗಳು, ನಿಮ್ಮಲ್ಲಿರುವ ದೇಶಪ್ರೇಮ ಮತ್ತಷ್ಟು ಬೆಳೆಯಲಿ” ಎಂದು ವೀಜೆತರಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಮುಖ್ಯ ಅತಿಥಿಯಾಗಿ ಕುಂದಾಪುರ ವಲಯದ ಡಿವೈಎಸ್ಪಿ ಬೆಳ್ಳಿಯಪ್ಪ ಆಗಮಿಸಿ ಬಹುಮಾನಗಳನ್ನು ವಿತರಿಸುತ್ತಾ “ದೇಶದ ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತ ನಡೆದಂತಹ ಈ ಸ್ಪರ್ಧೆ ನಿಜಕ್ಕೂ ದೇಶ ಪ್ರೇಮದ ಉತ್ಸಾಹ ಕಂಡು ಈ ಕಾರ್ಯಕ್ರಮ ಇನ್ನಷ್ಟು ನೋಡಬೇಕಿನ್ನಿಸಿತು. ಮಕ್ಕಳಲ್ಲಿ ಇಂತಹ ದೇಶಭಕ್ತಿ ಇರಲೇಬೇಕು. ಈ ದೇಶ ಭಕ್ತಿ ಬೆಳೆಸಿಕೊಂಡು ಮುಂದೆ ನೀವು ಭಾರತ ದೇಶದ ಉತ್ತಮ ಪ್ರಜೆಗಳಾಬೇಕು’ ಎಂದು ಕಿವಿ ಮಾತು ಹೇಳಿದರು. ಮತ್ತೋರ್ವ ಅಥಿತಿ ದಾನಿ ಸೈಂಟ್ ಅಂಟೋನಿ ಕನ್ಸಟ್ರಕ್ಷನ್ ಕಂಪೆನಿಯ ಮೆನೇಜಿಂಗ್ ಡೈರೆಕ್ಟರಲ್ಲಿ ಒಬ್ಬರಾದ ಕಿರಣ್ ಡಿಕೋಸ್ತಾ ಬಹುಮಾನಗಳನ್ನು ವಿತರಿಸಿದರು. ಕಥೊಲಿಕ್ ಸಭಾ ಕುಂದಾಪುರದ ವಲಯ ಸಮಿತಿಯ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ , ಕುಂದಾಪುರ ಘಟಕದ ಕಾರ್ಯದರ್ಶಿ ವಾಲ್ಟರ್ ಡಿಸೋಜಾ, ನಿರ್ಗಮನ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಮೊದಲಾದ ಘಟಕದ ಪದಾಧಿಕಾರಿಗಳು ಉಪಸ್ಥಿರಿದ್ದರು.
ತೀರ್ಪುಗಾರಾಗಿ ಅಶೋಕ್ ಸಾರಂಗ್, ಮುಕಾಂಬಿಕಾ ಉಡುಪ ಮತ್ತು ಪ್ರಶ್ನಾ ಹೆಗ್ಡೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಥೊಲಿಕ್ ಸಭಾದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು, ಆಶಾ ಕರ್ವಾಲ್ಲೊ ವಿಜೇತರ ಹೆಸರನ್ನು ವಾಚಿಸಿದರು ವಿನಯಾ ಡಿಕೋಸ್ತಾ, ಜೂಲಿಯೆಟ್ ಪಾಯ್ಸ್ ಸ್ಪರ್ಧೆ ನೆಡೆಸುವಲ್ಲಿ ಸಹಕರಿಸಿದರು. ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಡೆಸಿಕೊಟ್ಟು ವಂದಿಸಿದರು.
ವಿಜೇತ ಶಾಲ ತಂಡಗಳು
ಸಮೂಹ ಗೀತೆ ವಿಭಾಗದಲ್ಲಿ: ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಪ್ರಥಮ, ಹೋಲಿ ರೋಜರಿ ಆಂಗ್ಲಾ ಮಾದ್ಯಮ ಶಾಲೆ, ಕುಂದಾಪುರ ದ್ವೀತಿಯ, ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಶಾಲೆ, ಕುಂದಾಪುರ. ತ್ರತೀಯ ಸ್ಥಾನ ಪಡೆಯಿತು.
ಸಮೂಹ ನ್ರತ್ಯ ವಿಭಾಗದಲ್ಲಿ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ, ಪ್ರಥಮ ಸ್ಥಾನ, ಪಿ.ವಿ.ಎಸ್. ಸರೋಜಿನಿ ಎಮ್.ಕುಶೆ ಸರಕಾರಿ ಪ್ರೌಢ ಶಾಲೆ, ದ್ವೀತಿಯ ಸ್ಥಾನ ಕುಂದಾಪುರ. ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ತ್ರತೀಯ ಸ್ಥಾನ ಪಡೆಯಿತು.

ಹೋಲಿ ರೋಜರಿ ಶಾಲೆಯಲ್ಲಿ ಸ್ವಾತಂತ್ರ್ಯ ಆಚರಣ ಸಂಭ್ರಮ – ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ/Independence celebration at Holy Rosary School felicitated students who achieved


ಕುಂದಾಪುರ, ಆ.13: ಸ್ಥಳೀಯ ಹೋಲಿ ರೋಜರಿ ಶಾಲೆಯಲ್ಲಿ 76ನೇ ಸ್ವಾತಂತ್ರೊತ್ಸವ ಸಂಭ್ರಮಾಚರಣೆ ಆ.12 ರಂದು ನಡೆಯಿತು. ಈ ಸಂದರ್ಭದಲ್ಲಿ ಶಿಕ್ಷಣದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಹಾಗೂ ಸ್ವಾತಂತ್ರ್ಯ ಆಚರಣೆಯ ಪ್ರಯುಕ್ತ ವಿದ್ಯಾರ್ಥಿಗಳು ದೇಶ ಭಕ್ತಿಯ ನ್ರತ್ಯ ಗಾಯನಗಳ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿಗಳಾದ ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊರವರು ವಹಿಸಿದ್ದು “ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳು ದೇಶವನ್ನು ಪ್ರೀತಿಸಬೇಕು ಒಗ್ಗಟ್ಟಿನಲ್ಲಿ ದೇಶದ ಐಕ್ಯತೆಯು ಅಡಗಿದೆ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು”
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 2022-23 ರಲ್ಲಿ ನಡೆದ ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತಿರ್ಣರಾದ ಶಾಲೆಯ ಹಮ್ಮೆಯ ಹಳೆ ವಿದ್ಯಾರ್ಥಿ ವಿನಾರ್ಡ್ ಡಿ ಕೋಸ್ತಾರವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿಸಿದ ವಿನಾರ್ಡ್ ಡಿ’ಕೋಸ್ತಾರವರು ಸ್ವಾತಂತ್ರ ಭಾರತದಲ್ಲಿ ವಿದ್ಯಾರ್ಥಿಗಳ ಕರ್ತವ್ಯದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನ ಹಾಗೂ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ನಿರ್ಮಿಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಮೌಲ್ಯ ಭರಿತ ಶಿಶಿಕ್ಷಣದ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿ, ಸಮಾಜದಲ್ಲಿ ವಿದ್ಯಾರ್ಥಿಗಳ ಉನ್ನತ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ’ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿಸಿದ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ಅಶ್ವಿನ್ ಆರಾನ್ನಾ ಮೊದಲ ರೂಪಣಾತ್ಮಕ ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪ್ರಸ್ತುತ ವರ್ಷದಲ್ಲಿ ಕನ್ನಡ ಮಾಧ್ಯಮ ಶಾಲೆಯಿಂದ ನಮ್ಮ ಆಂಗ್ಲ ಮಾಧ್ಯಮ ಶಾಲೆಗೆ ದಾಖಲಾಗಿ ಎಲ್ಲಾ ವಿಷಯಗಳಲ್ಲಿ ಪೂರ್ಣ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಿದರು.
ಶಾಲಾ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ ಉಪಸ್ಥಿತರಿದ್ದು, ವಿದ್ಯಾರ್ಥಿನಿ ವಿನಿಷಾ ಡಿಸೋಜಾ ಸ್ವಾಗತಿಸಿದರು, ವಿದ್ಯಾರ್ಥಿನಿ ಸಿಯೋನಾ ಡಿ’ಸೋಜಾ ವಂದಿಸಿದರು. ವಿದ್ಯಾರ್ಥಿಗಳಾದ ಸಿದ್ದಾರ್ಥ್ ಹಾಗೂ ಸಾವ್ಯ ಎಮಿಲಿಯಾನ್ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.

Independence celebration at Holy Rosary School felicitated students who achieved


Kundapur, August 13: The 76th Independence Day celebrations were held at the local Holy Rosary School on August 12. On this occasion, to honor the students who have achieved in education and to celebrate independence, the students organized a program of patriotic dance songs. The program was presided over by School Joint Secretaries and Holy Rosary Church Principal Reverend Stani Tavro who “appreciated the program of the students and gave the message to the students that the unity of the country lies in the unity that the children should love the country”.
Vinard D Costa, an alumnus of the school who passed the Indian Chartered Accountant Examination 2022-23, who was the chief guest, was felicitated by the institute. Vinard D’Costar, who received the award, informed the students about the duty of students in independent India, said that Holy Rosary English Medium School builds a solid foundation for student life and the future and develops leadership qualities in students along with valuable education, enabling them to shape the future of students in the society. On the same occasion, assistant priest of Holy Rosary Church Ashwin Aranna, who arrived as a guest, honored the students who got full marks in the first formative examination and the students who got full marks in all subjects from Kannada medium school and got full marks in all subjects from Kannada medium school in the current year and students who achieved in the field of sports.
School Headmistress Sister Teresa Shanti was present, student Vinisha D’Souza welcomed, student Seona D’Souza gave vote of thanks. Students Siddharth and Savya Emilian Martis presented the program.

ಭಂಡಾರ್ಕಾರ್ಸ್ ವಿದ್ಯಾರ್ಥಿ ಭರತ್ ಬಾಬು ದೇವಾಡಿಗ : ಎನ್.ಸಿ.ಸಿ ವಿಶೇಷ ಪ್ರವೇಶದಲ್ಲಿ ಅಖಿಲ ಭಾರತ ರೇಂಕಿಗನಲ್ಲಿ 15ನೇ ರೇಂಕ್

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಎನ್.ಸಿ.ಸಿ ಆರ್ಮಿ ಕೆಡೆಟ್ ಜೆ.ಒ.ಯು (ವಿದ್ಯಾರ್ಥಿ) ಭರತ್ ಬಾಬು ದೇವಾಡಿಗ ಅವರು ಎನ್.ಸಿ.ಸಿ ವಿಶೇಷ ಪ್ರವೇಶದಲ್ಲಿ ಅಖಿಲ ಭಾರತ ರೇಂಕಿಗನಲ್ಲಿ ನಲ್ಲಿ 15ನೇ ರೇಂಕ್ ಗಳಿಸಿದ್ದಾರೆ. ಇವರು ಕೇಂದ್ರದ ಸಿಬ್ಬಂದಿ ಆಯ್ಕೆ ಮಂಡಳಿ ( ಎಸ್.ಎಸ್.ಸಿ)ಯ 21ಎಸ್.ಎಸ್.ಬಿ ಭೂಪಾಲ್ ನಿಂದ ಇವರನ್ನು ಶಿಫಾರಸು ಮಾಡಲಾಗಿದೆ. ಇವರು ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಿ.ಶುಭಕರಾಚಾರಿ, ಭೋದಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನಂದಿಸಿದ್ದಾರೆ’ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Students of St. Agnes High School were taken on a field trip as part of a service learning project / ಸೇಂಟ್ ಆಗ್ನೆಸ್ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಸೇವಾ ಕಲಿಕೆಯ ಯೋಜನೆಯ ಭಾಗವಾಗಿ ಕ್ಷೇತ್ರ ಪ್ರವಾಸಕ್ಕೆ ಕರೆದೊಯ್ಯಲಾಯಿತು

On 9th August 2023, the students of class 10 of St. Agnes High School were taken to the field trip as a part of service learning project. The students visited the agricultural field of Mr.Walter Saldanha at Merlapadav. It provided an exposure to the natural setting of the village.
Mr.Walter Saldanha an experienced as well as progressive farmer, demonstrated the rain and kitchen grey water harvesting. and the rice mill for stoneless rice. The old farm equipments, handheld implements and traditional wooden kitchen accessories were a delight to watch. The students raised questions like fertilizers used, benefits of farming and even the problems faced by the farmers. Mr.Walter Saldanha cleared all their doubts patiently. He even explained planting techniques, crop rotation and the importance of soil fertility for successful farming.
The students observed different vegetables grown in the farm. They enthusiastically transplanted paddy in the field which was an unforgettable experience. The field trip provided the students with valuable practical knowledge and deeper understanding of paddy cultivation.
The visit brought home the message of love and hospitality experienced in the rural household. Teachers Dimple Quadros, Preethi Vas, Tr.Suneetha M. took initiative to arrange the field trip.

ಸೇಂಟ್ ಆಗ್ನೆಸ್ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳನ್ನು ಸೇವಾ ಕಲಿಕೆಯ ಯೋಜನೆಯ ಭಾಗವಾಗಿ ಕ್ಷೇತ್ರ ಪ್ರವಾಸಕ್ಕೆ ಕರೆದೊಯ್ಯಲಾಯಿತು

9ನೇ ಆಗಸ್ಟ್ 2023 ರಂದು, ಸೇಂಟ್ ಆಗ್ನೆಸ್ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳನ್ನು ಸೇವಾ ಕಲಿಕೆಯ ಯೋಜನೆಯ ಭಾಗವಾಗಿ ಕ್ಷೇತ್ರ ಪ್ರವಾಸಕ್ಕೆ ಕರೆದೊಯ್ಯಲಾಯಿತು. ವಿದ್ಯಾರ್ಥಿಗಳು ಮೇರ್ಲಪದವು ಶ್ರೀ ವಾಲ್ಟರ್ ಸಲ್ಡಾನ್ಹಾ ಅವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಇದು ಹಳ್ಳಿಯ ನೈಸರ್ಗಿಕ ಸನ್ನಿವೇಶಕ್ಕೆ ತೆರೆದುಕೊಂಡಿತು. ಶ್ರೀ.ವಾಲ್ಟರ್ ಸಲ್ಡಾನ್ಹಾ ಅನುಭವಿ ಹಾಗೂ ಪ್ರಗತಿಪರ ರೈತ, ಮಳೆ ಮತ್ತು ಅಡಿಗೆ ಬೂದು ನೀರು ಕೊಯ್ಲು ಪ್ರಾತ್ಯಕ್ಷಿಕೆ ನೀಡಿದರು. ಮತ್ತು ಕಲ್ಲಿಲ್ಲದ ಅಕ್ಕಿಗಾಗಿ ಅಕ್ಕಿ ಗಿರಣಿ. ಹಳೆಯ ಕೃಷಿ ಉಪಕರಣಗಳು, ಕೈಯಲ್ಲಿ ಹಿಡಿಯುವ ಉಪಕರಣಗಳು ಮತ್ತು ಸಾಂಪ್ರದಾಯಿಕ ಮರದ ಅಡಿಗೆ ಪರಿಕರಗಳು ವೀಕ್ಷಿಸಲು ಆನಂದದಾಯಕವಾಗಿದ್ದವು. ವಿದ್ಯಾರ್ಥಿಗಳು ಬಳಸಿದ ರಸಗೊಬ್ಬರಗಳು, ಕೃಷಿ ಪ್ರಯೋಜನಗಳು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳಂತಹ ಪ್ರಶ್ನೆಗಳನ್ನು ಎತ್ತಿದರು. ಶ್ರೀ ವಾಲ್ಟರ್ ಸಲ್ಡಾನ್ಹ ಅವರು ತಮ್ಮ ಎಲ್ಲಾ ಸಂದೇಹಗಳನ್ನು ತಾಳ್ಮೆಯಿಂದ ಪರಿಹರಿಸಿದರು. ಅವರು ನೆಟ್ಟ ತಂತ್ರಗಳು, ಬೆಳೆ ಸರದಿ ಮತ್ತು ಯಶಸ್ವಿ ಕೃಷಿಗಾಗಿ ಮಣ್ಣಿನ ಫಲವತ್ತತೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಜಮೀನಿನಲ್ಲಿ ಬೆಳೆದ ವಿವಿಧ ತರಕಾರಿಗಳನ್ನು ವೀಕ್ಷಿಸಿದರು. ಅವರು ಉತ್ಸಾಹದಿಂದ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ್ದು ಮರೆಯಲಾಗದ ಅನುಭವ. ಕ್ಷೇತ್ರ ಪ್ರವಾಸವು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಪ್ರಾಯೋಗಿಕ ಜ್ಞಾನವನ್ನು ಮತ್ತು ಭತ್ತದ ಕೃಷಿಯ ಆಳವಾದ ತಿಳುವಳಿಕೆಯನ್ನು ನೀಡಿತು. ಈ ಭೇಟಿಯು ಗ್ರಾಮೀಣ ಮನೆಗಳಲ್ಲಿ ಅನುಭವಿಸುವ ಪ್ರೀತಿ ಮತ್ತು ಆತಿಥ್ಯದ ಸಂದೇಶವನ್ನು ಮನೆಗೆ ತಂದಿತು. ಶಿಕ್ಷಕರಾದ ಡಿಂಪಲ್ ಕ್ವಾಡ್ರೋಸ್, ಪ್ರೀತಿ ವಾಸ್, ಟ್ರ.ಸುನೀತಾ ಎಂ. ಕ್ಷೇತ್ರ ಪ್ರವಾಸದ ವ್ಯವಸ್ಥೆ ಮಾಡಲು ಮುಂದಾದರು.

ಎಲ್‍ಐಸಿ ಪ್ರತಿನಿಧಿಗಳು ಚುರುಕಾಗಿ ಕಾರ್ಯನಿರ್ವಹಿಸಿ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು :ಎಸ್.ವಿ.ಪ್ರಸಾದ್

ಶ್ರೀನಿವಾಸಪುರ: ಎಲ್‍ಐಸಿ ಪ್ರತಿನಿಧಿಗಳು ಚುರುಕಾಗಿ ಕಾರ್ಯನಿರ್ವಹಿಸಿ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು ಎಂದು ಎಲ್‍ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಎಲ್‍ಐಸಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಎಲ್‍ಐಸಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್‍ಐಸಿ ಒಂದು ಸಮಾಜ ಮುಖಿ ಸಂಸ್ಥೆಯಾಗಿದ್ದು, ಜನಪರ ಕಾಳಜಿ ಹೊಂದಿದೆ. ಜನರ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇಶದ ಆರ್ಥಿಕಾಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಹೇಳಿದರು.
ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಪಾಲಿಸಿ ಪಡೆಯಬೇಕು. ಸಮಾಜದ ಎಲ್ಲ ವರ್ಗದ ಜನರೂ ಸಹ ಜೀವ ವಿಮೆ ಮಾಡಿಸಲು ನೆರವಾಗಬೇಕು. ಎಲ್‍ಐಸಿ ಪಾಲಿಸಿ ಪಡೆದ ಕುಟುಂಬ ಸಂಭವನೀಯ ದುರ್ಘಟನೆಗಳಿಂದ ಉಂಟಾಗುವ ಕಷ್ಟ ನಷ್ಟದ ನಿವಾರಣೆಗೆ ಸಹಾಯಕವಾಗುವುದು ಎಂಬ ವಿಷಯವನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ತಾಲ್ಲೂಕು ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್.ಕುಲಕರ್ಣಿ ಹಾಗೂ ಎಲ್‍ಐಸಿ ಪ್ರತಿನಿಧಿಗಳು ಇದ್ದರು.

ಖ್ಯಾತ ನಟಿ ಮಾಜಿ ಸಂಸದೆ ಜಯಪ್ರದಾರಿಗೆ ನ್ಯಾಯಾಲಯದಿಂದ 6 ತಿಂಗಳ ಜೈಲು ಶಿಕ್ಷೆ

ಚೆನೈ; ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಜಯಪ್ರದಾ ನಡೆಸುತ್ತಿದ್ದ ಚಿತ್ರಮಂದಿರದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರಿಗೆ ಇಎಸ್‌ಐ ಹಣ ಪಾವತಿಸಿಲ್ಲ ವೆಂಬ ಪ್ರಕರಣಾಕ್ಕಾಗಿ ನ್ಯಾಯಲಯ ಈ ಶಿಕ್ಷೆಯನ್ನು ಅವರಿಗೆ ವಿಧಿಸಿದೆ. ಕಾರ್ಮಿಕರು ಇಎಸ್‌ಐ ಹಣ ಪಾವತಿಸಿಲ್ಲವೆಂದು ತಮಿಳ್ನಾಡು ರಾಜ್ಯ ವಿಮಾ ನಿಗಮಕ್ಕೆ ದೂರು.
ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಚೆನ್ನೈ ಎಗ್ಟೋರ್‌ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಕಾರ್ಮಿಕರಿಗೆ ನೀಡಬೇಕಾದ ಮೊತ್ತವನ್ನು ನೀಡುವುದಾಗಿ ಜಯಪ್ರದಾ ತಿಳಿಸಿದ್ದರೂ, ಕಾರ್ಮಿಕ ಸರ್ಕಾರಿ ವಿಮಾ ನಿಗಮದ ಪಕೀಲರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ
ಶಿಕ್ಷೆ ವಿಧಿಸಲಾಗಿದೆ.

ಸೈಂಟ್ ಆಗ್ನೆಸ್ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿನ ಮಾದಕ ದ್ರವ್ಯ ಸೇವನೆ ಸಮಸ್ಯೆ ಎದುರಿಸಲು ಶಿಕ್ಷಕರಿಗೆ ತರಬೇತಿ

ಮಂಗಳೂರು,: ಮಾದಕ ದ್ರವ್ಯ ಸೇವನೆಯು ಇಂದು ಯುವಜನರಲ್ಲಿ ಹೆಚ್ಚುತ್ತಿರುವ ಸನಸ್ಯೆಯಾಗಿದ್ದು. ಯುವಕರಲ್ಲಿ ಮಾದಕ ದ್ರವ್ಯ ಸೇವನೆಯು ಗಂಭೀರ ಸಮಸ್ಯೆಯಾಗಿ ಅನೇಕರ ಜೀವನವನ್ನು ಹಾಳುಮಾಡಿದೆ. ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆಯನ್ನು ಎದುರಿಸಲು ಶಿಕ್ಷಕರಲ್ಲಿ ಜಾಗೃತಿ ಮೂಡಿಸಲು, ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ಕಾರ್ಯಕ್ರಮ ಸೈಂಟ್ ಆಗ್ನೆಸ್ ಪ.ಪೂ.ಕಾಲೇಜಿನಲ್ಲಿ ನಡೆಯಿತು.
ಲಿಂಕ್ ಆಂಟಿ ಅಡಿಕ್ಷನ್ ಸೆಂಟರ್‌ನ ಆಡಳಿತಾಧಿಕಾರಿ ಶ್ರೀಮತಿ ಲಿಡಿಯಾ ಲೋಬೋ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ’ಅವರು ಆಲ್ಕೋಹಾಲ್, ಸಿಗರೇಟ್, ನೈಸರ್ಗಿಕ ಮತ್ತು ಸಂಶ್ಲೇಷಿತ ಮಾದಕ ವ್ಯಸನದ ಬಗ್ಗೆ ಮತ್ತು ವಿವಿಧ ನಿದರ್ಶನಗಳ ಮೂಲಕ ವ್ಯಕ್ತಿಗಳು ಮತ್ತು ಕುಟುಂಬಗಳ ಆರೋಗ್ಯ ಮತ್ತು ಜೀವನದ ಮೇಲೆ ಅವುಗಳ ದುಷ್ಪರಿಣಾಮಗಳ ಬಗ್ಗೆ’ ಮಾತನಾಡಿದರು. ವ್ಯಸನಮುಕ್ತ ಕೇಂದ್ರದಲ್ಲಿ ವ್ಯಸನಿಗಳ ಚಿಕಿತ್ಸೆಯಲ್ಲಿ ಅನುಸರಿಸುತ್ತಿರುವ ದಿನಚರಿಯನ್ನೂ ಅವರು ವಿವರಿಸಿದರು. ಹಿಂದಿ ವಿಭಾಗದ ಎಚ್‌ಒಡಿ ಡಾ.ಪಿ.ವಿ.ಶೋಭಾ ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು, ಪ್ರಾಂಶುಪಾಲೆ ಸಿಸ್ಟರ್ ನೊರಿನ್ ಡಿಸೋಜ ಪುಷ್ಪನಮನ ಸಲ್ಲಿಸಿದರು. ವಾಣಿಜ್ಯ ವಿಭಾಗದ ಶ್ರೀಮತಿ ಲೊವಿನಾ ಅರಾನ್ಹಾ ವಂದಿಸಿದರು.