ವಿದ್ಯಾರ್ಥಿಗಳು ಒಳ್ಳೇಯ ಪೌಷ್ಟಿಕ ಆಹಾರ ಪಡೆದು ಯೋಗಬ್ಯಾಸ ಮಾಡಿ ಆರೋಗ್ಯವಂತ ಜೀವನ ನಡೆಸಿ – ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ 1 : ವಿದ್ಯಾರ್ಥಿಗಳು ಪ್ರತಿ ದಿನ ಒಳ್ಳೇಯ ಪೌಷ್ಟಿಕ ಆಹಾರವನ್ನು ಪಡೆದು ಯೋಗಬ್ಯಾಸವನ್ನು ಮಡುತ್ತಾ , ಆರೋಗ್ಯವಂತ ಜೀವನವನ್ನು ನಡೆಸುವಂತೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.
ತಾಲೂಕಿನ ಲಕ್ಷ್ಮೀಪುರ ಪ್ರೌಡಶಾಲೆಯಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮದಲ್ಲಿ ಮೊಟ್ಟೆ ವಿತರಣಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕಡುಬಡತನದಿಂದ ಇರುವ ವಿದ್ಯಾಥಿಗಳು ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಆ ವಿದ್ಯಾಥಿಗಳ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ್ದು, ಆಹಾರಕ್ಕಾಗಿಯೂ ಪರದಾಡುತ್ತಿದ್ದು ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ಕಳವಳ ಪಡೆದರು.
ಇಒ ಕೃಷ್ಣಪ್ಪ ಮಾತನಾಡಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮುಂದಾಗಿದ್ದು, ವಾರದಲ್ಲಿ 3 ದಿನ ಮಕ್ಕಳಿಗೆ ಮೊಟ್ಟೆ / ಬಾಳೆಹಣ್ಣು, ಚುಕ್ಕಿ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಭಳಕೆ ಮಾಡಿಕೊಂಡು ಓದಿನೊಂದಿಗೆ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವಂತೆ ತಿಳಿಸಿದರು.
ಬಿಇಒ ಭಾಗ್ಯಲಕ್ಷ್ಮಿ ಮಾತನಾಡುತ್ತಾ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಾಕವಾದ ಶಿಕ್ಷಣವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಓದಿನೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
ಮುಖಂಡರಾದ ಜಗದೀಶ್‍ಕುಮಾರ್, ತೂಪಲ್ಲಿ ಮಧುಸೂದನರೆಡ್ಡಿ, ಇಸ್ಮಾಯಿಲ್, ಉಪ್ಪರಹಳ್ಳಿ ಬಾರ್ ನಾರಾಯಣಸ್ವಾಮಿ, ಎಸ್‍ಡಿಎಂಸಿ ಸದಸ್ಯರು, ಕೊಂಡಸಂದ್ರ ಗಂಗರಾಜಣ್ಣ, ನಂಬುವಾರಿಪಲ್ಲಿ ಶಂಕರರೆಡ್ಡಿ, ಗ್ರಾ.ಪಂ ಸದಸ್ಯ ಪ್ರೇಮ, ಬಿಆರ್‍ಸಿ ಕೆ.ಸಿ.ವಸಂತ, ಅಕ್ಷರ ದಾಸೋಹ ನಿರ್ದೇಶಕಿ ಸುಲೋಚನ, ಪಿಡಿಒ ಗೌಸ್‍ಸಾಬ್, ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸಲು, ಎಸ್‍ಡಿಎಂಸಿ ಅಧ್ಯಕ್ಷ ಜಾಖೀರ್ ಹುಸೇನ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಾಲಾಚಾರಿ ಇದ್ದರು.

ಮಣಿಪುರದಲ್ಲಿ ಪುನಹ ಭುಗಿಲೆದ್ದ ಹಿಂಸಾಚಾರ ಮೂವರ ಹತ್ಯೆ/Violence broke out again in Manipur killing three

(ಚಿತ್ರ ಸಾಂದರ್ಭಿಕ)

ಆ. 18:  ಇಂದು ಬೆಳ್ಳಂಬೆಳಗ್ಗೆ ಶಸ್ತ್ರಸಜ್ಜಿತ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಮಣಿಪುರದಲ್ಲಿ ನಡೆದಿದೆ. ಮಣಿಪುರ ಈಗಲೂ ಬೂದಿ ಮುಚ್ಚದ ಕೆಂಡದಂತಿದ್ದು, ಇಂದು ಮತ್ತೆ ಹಿಂಸಾಚಾರ ಭುಗಿಲೆದ್ದಿದೆಯೆಂದು ವಾರ್ತಾ ಸಂಸ್ಥೆಗಳು ವರದಿ ಮಾಡಿವೆ

ಮಣಿಪುರದ ಉಖ್ರುಲ್ ಜಿಲ್ಲೆಯ ತೊವೈ ಕುಕಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಯ ನಂತರ ಗ್ರಾಮಸ್ಥರು ಮೂರು ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಮೃತರನ್ನು ಜಮ್‌ಖೋಗಿನ್ ಹಕಿಪ್ (26), ತಂಗ್‌ಖೋಕೈ ಹಕಿಪ್ (35) ಮತ್ತು ಹೊಲೆನ್ಸನ್ ಬೈಟ್ (24) ಎಂದು ಗುರುತಿಸಲಾಗಿದೆ. ಈ ಘಟನೆಯು ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಸಮಸ್ಯೆಗೆ ಸಂಬಂಧಿಸಿದ್ದು, ಕೆಲವು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗ್ರಾಮಕ್ಕೆ ಪ್ರವೇಶಿಸಿ, ಗ್ರಾಮದ ಕಾವಲು ಕಾಯುತ್ತಿದ್ದ ಈ ಮೂವರಿಗೆ ಗುಂಡು ಹಾರಿಸಿದ್ದಾರೆಂದು ತಿಳಿದು ಬಂದಿದೆ

ಮೇ 3ರಿಂದ ಮಣಿಪುರದಲ್ಲಿ ಘರ್ಷಣೆಗಳು ನಡೆಯುತ್ತಲೇ ಇವೆ. ಇದುವರೆಗೂ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಾಗಿ ಅಂದಾಜಿಸಲಾಗಿದ್ದು. ಹಿಂಸಾಚಾರ ಘಟನೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಣಿಪುರ ರಾಜ್ಯದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ಸಹಜ ಸ್ಥಿತಿಗೆ ಮರಳಲು ಸ್ಥಳೀಯ ಪೊಲೀಸರೊಂದಿಗೆ 40,000 ಕೇಂದ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತದೆ.

Violence broke out again in Manipur killing three


Ag.18: An incident took place in Manipur in which three people were killed in a firing attack by armed assailants in the wee hours of today. News agencies report that Manipur is still like an open pit and violence has broken out again today.

The firing took place in Towai Kuki village of Manipur’s Ukhrul district in the early hours of Friday. Villagers found three dead bodies after the attack. The deceased have been identified as Jamkhogin Hakip (26), Thangkhokai Hakip (35) and Hollenson Bait (24). This incident is related to the ongoing ethnic issue in the state and it is learned that some armed miscreants entered the village and shot the three men who were guarding the village.

Clashes have been going on in Manipur since May 3. It is estimated that more than 120 people have died so far. More than 3,000 people were injured in the incidents of violence. It is said that 40,000 central security personnel along with local police have been deployed to control the violence and restore normalcy in the state of Manipur.

ಮುತ್ತಕಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಂ.ವಿ.ಶ್ರೀನಾಥ್, ಉಪಾಧ್ಯಕ್ಷೆಯಾಗಿ ರಾಮಕ್ಕ ಅವಿರೋಧ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮ ಪಂಚಾಯಿತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಂ.ವಿ.ಶ್ರೀನಾಥ್, ಉಪಾಧ್ಯಕ್ಷೆಯಾಗಿ ರಾಮಕ್ಕ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದ ಕೃಷ್ಣಮ್ಮ ತಮ್ಮ ನಾಮಪತ್ರ ಹಿಂಪಡೆದ ಪರಿಣಾಮವಾಗಿ ಎಂ.ವಿ.ಶ್ರೀನಾಥ್ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದರಾದರೂ, ಕೃಷ್ಣಮ್ಮ ಅವರ ನಾಮಪತ್ರ ತಿರಸ್ಕøತವಾಯಿತು. ನಜಿಮುನ್ನೀಸಾ ಅವರು ತಮ್ಮ ನಾಮಪತ್ರ ಹಿಂಪಡೆದರು. ಹಾಗಾಗಿ ರಾಮಕ್ಕ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿ ಗಣೇಶ್, ಪಿಡಿಒ ಮಂಜುನಾಥಸ್ವಾಮಿ ಚುನಾವಣಾ ಕಾರ್ಯ ನಿರ್ವಹಿಸಿದರು. ಎ.ನಾಗೇಶ್ ಬಾಬು, ಕಾರಂಗಿ ರಮೇಶ್, ಹರೀಶ್, ಆಂಜಿ, ನಾಗರಾಜ್, ಎಂ.ಕೆ.ನಾರಾಯಣಸ್ವಾಮಿ, ಶ್ರೀನಿವಾಸ್, ರಮೇಶ್ ಇದ್ದರು.
ಚುನಾಣೆ ನಂತರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಜೇತ ಅಭ್ಯರ್ಥಿಗಳೊಂದಿಗೆ ವಿಜಯೋತ್ಸವ ಆಚರಿಸಿದರು.

ಮಾರ್ಕೆಟ್ ಬಾಯ್ಸ್ ಕುಂದಾಪುರ – 77 ನೇ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ : ಮಾರ್ಕೆಟ್  ಬಾಯ್ಸ್ ಕುಂದಾಪುರ ಇವರ ಆಶ್ರಯದಲ್ಲಿ 77ನೇ ಸ್ವಾತಂತ್ರ ದಿನಾಚರಣೆಯನ್ನು ಫಿಶ್ ಮಾರ್ಕೆಟ್ ರಸ್ತೆ , ಕುಂದಾಪುರದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿ ಆಗಿ ಆಗಮಿಸಿದ ಸಿಟಿ ಜೆಸಿಐ ಕುಂದಾಪುರ ಇದರ ಅಧ್ಯಕ್ಷೆಯಾದ ಡಾಕ್ಟರ್ ಸೋನಿ ಡಿಕೋಸ್ತ ಧ್ವಜಾರೋಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನ ಮಡಿದ ವೀರ ಯೋಧರನ್ನು ಸ್ಮರಿಸಲಾಯಿತು. ಸ್ವತಂತ್ರ ಭಾರತದಲ್ಲಿ ಯುವಕರ ಜವಾಬ್ದಾರಿ ಕುರಿತು ಮಾತನಾಡಿದರು. ಸ್ವತಂತ್ರ ದಿನಾಚರಣೆಯನ್ನು ಅಚ್ಚು ಕಟ್ಟಾಗಿ ಆಚರಣೆ ಮಾಡುತ್ತಿರುವ ಮಾರ್ಕೆಟ್ ಬಾಯ್ಸ್ ನ ಸರ್ವ ಸದಸ್ಯರನ್ನು ಅಭಿನಂದಿಸಲಾಯಿತು.ಈ ಸಂದರ್ಭಲ್ಲಿ ಆಗಮಿಸಿದ ಎಲ್ಲ ಸಾರ್ವಜನಿಕರಿಗೆ ಸಿಹಿ ಹಂಚುದರ ಮೂಲಕ ಸಂಭ್ರಮಿಸಲಾಯಿತು ಮಾರ್ಕೆಟ್ ಬಾಯ್ಸ್ ಕಾರ್ಯದರ್ಶಿ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷರಾದ ನಟೇಶ್ ಮುಖ್ಯ ಅತಿಥಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಕೋಲಾರ ಜಿಲ್ಲೆ ಬರಪೀಡಿತ ಘೋಷಶಿ, ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಪಂಚಾಯ್ತಿಗೊಂದು ಗೋಶಾಲೆ ತೆರೆಯಬೇಕು- ರೈತಸಂಘ

ಮುಳಬಾಗಿಲು-ಆ-18 ಕೋಲಾರ ಜಿಲ್ಲೆಯಲ್ಲಿ ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ಬರನಿರ್ವಹಣೆಗೆ ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಪ್ರತಿ ಪಂಚಾಯ್ತಿಗೊಂದು ಗೋಶಾಲೆ ತೆರೆಯಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿ ಆ-21 ರ ಸೋಮವಾರ ಜಾನುವಾರುಗಳ ಸಮೇತ ರಾಜ್ಯ ಹೆದ್ದಾರಿ ವಡ್ಡಹಳ್ಳಿ ಕ್ರಾಸ್ ಬಂದ್ ಮಾಡಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರು ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ ರಸಗೊಬ್ಬರಗಳು ಖರೀದಿ ಮಾಡಿ ಕಾತುರದಿಂದ ಕಾಯುತ್ತಿರುವ ರೈತರ ಮೇಲೆ ವರುಣನ ಕೋಪ ಹೆಚ್ಚಾಗಿದೆ. ಇತ್ತ ಬೆಳೆಯು ಇಲ್ಲ ಅತ್ತ ಮಳೆಯು ಇಲ್ಲದೆ ನೊಂದ 18 ರೈತರು ಹಾವೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ರಾಜ್ಯ ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಮುಂಗಾರು ಮಳೆ ಪ್ರಾರಂಭವಾಗಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗಕ್ಕೆ ಬರಸಿಡಲು ಬಡಿದಂತಾಗಿದೆ. ಬಿತ್ತನೆ ಮಾಡಿರುವ ರಾಗಿ, ನೆಲಗಡಲೆಗೆ ಮಳೆ ಇಲ್ಲದೆ ಶೇಕಡ 25 ರಷ್ಟು ನಷ್ಟವಾದರೆ ಇನ್ನು 75 ರಷ್ಟು ಬಿತ್ತನೆ ಮಾಡಲು ಮುಂದಾಗಿರುವ ರೈತರು ಆಕಾಶದತ್ತ ನೋಡುವಂತಾಗಿದೆ. ಆದರೂ ವರುಣನ ಕೃಪೆ ಜಿಲ್ಲೆಯ ಮೇಲೆ ಬೀಳದೆ ಕೆರೆ ಕುಂಟೆಗಳಲ್ಲಿ ನೀರು ಬತ್ತಿಹೋಗುತ್ತಿದ್ದು, ಮುಂದಿನ ಪರಿಸ್ಥಿತಿಯನ್ನು ಊಹೆ ಮಾಡಿಕೊಳ್ಳಲು ಸಾಧ್ಯವಾಗದ ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟಿದ್ದರೂ ಸರ್ಕಾರಗಳು ಜಿಲ್ಲೆಯಲ್ಲಿ ಕಾಡುತ್ತಿರುವ ಬರಗಾಲವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಪಲವಾಗಿದೆ ಎಂದು ಕಿಡಿಕಾರಿದರು.
ಪ್ರಕೃತಿ ವಿಕೋಪ ನಕಲಿ ಔಷಧಿ ಬಿತ್ತನೆ ಬೀಜದಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಬೆಳೆ ನಷ್ಟವಾಗಿ ಸಾಲದ ಸುಳಿಗೆ ಸಿಲುಕಿರುವ ರೈತನ ಹಣೆ ಬರಹದ ಜೊತೆ ಮುಂಗಾರು ಮಳೆ ಚಲ್ಲಾಟವಾಡುತ್ತಿದೆ. ಇತ್ತ ಬೆಳೆಯೂ ಇಲ್ಲ, ಅತ್ತ ಸಾಕುತ್ತಿರುವ ಜಾನುವಾರುಗಳಿಗೆ ಮೇವಿನ ಆಹಾಕಾರ ಉದ್ಭವಿಸುರುವುದರಿಂದ ಮುಂದಿನ ಜೀವನ ಹೇಗೆ ಎಂಬುದು ರೈತರ ಚಿಂತೆಯಾಗಿದೆ. ಜಿಲ್ಲೆಯಲ್ಲಿರುವ ಜನ ಪ್ರತಿನಿಧಿಗಳು ಜಿಲ್ಲೆಯ ವಾಸ್ತುವಾವಂಶ ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲವಾಗಿದ್ದಾರೆಂದು ಜನ ಪ್ರತಿನಿಧಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಮಳೆ ಕೊರತೆ ಪ್ರಮಾಣವನ್ನು ಮರುನಿಗದಿ ಮಾಡಿ ಶೇಕಡ 30 ಕ್ಕೆ ಇಳಿಸಬೇಕು. ಮೂರುವಾರ ಸತತ ಮಳೆಯಾಗಬಾರದು ಎನ್ನುವ ನಿಯಮವನ್ನು ಸಡಲಿಸಿ ಅದನ್ನು ಎರಡು ವಾರ ಎಂದು ಬದಲಿಸಬೇಕು. ಹಾಗೂ ಈಗ ಆಗಿರುವ ಬಿತ್ತನೆಯ ಪ್ರಮಾಣವನ್ನು ಮಾತ್ರ ಪರಿಗಣಿಸಿ ಬರ ಜಿಲ್ಲೆಯೆಂದು ಘೋಷಣೆ ಮಾಡುವಲ್ಲಿ ಸರ್ಕಾರ ಮುಂದಾಗಬೇಕೆಂದರು.
ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಡಿ ಕೇಂದ್ರ ಸರ್ಕಾರ ಕೂಡಲೇ ರಾಜ್ಯಕ್ಕೆ ಬರ ನಿರ್ವಹಣೆ ಘೋಷಣೆ ಮಾಡಲು ಮಾನದಂಡಗಳನ್ನು ಬಿಡುಗಡೆ ಮಾಡಿ ಕನಿಷ್ಠ ಒಂದು ಸಾವಿರ ಕೋಟಿ ಜಿಲ್ಲೆಯ ಬರ ನಿರ್ವಹಣೆಗೆ ಬಿಡುಗಡೆ ಮಾಡಬೇಕು. ಅದನ್ನು ಬಿಟ್ಟು ನಾವು ಶೇಕಡ 25 ರಷ್ಟು ಕೊಡುತ್ತೇವೆ ಜೊತೆಗೆ ಮುಂಗಾರು ಋತುವಿನಲ್ಲಿ ಶೇಕಡ 60 ರಷ್ಟು ಮಳೆ ಕೊರತೆ 59 ರಷ್ಟು ಬೆಳೆ ನಷ್ಟವಾಗಿರಬೇಕು. ಮತ್ತು ಮೂರು ವಾರ ಸತತವಾಗಿ ಮಳೆಯಾಗಿರಬಾರದು ಎಂದು ಷರತ್ತು ವಿಧಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ತೀವ್ರ ಬರಗಾಲ ಆವರಿಸಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಸ್ಥಗಿತವಾಗಿರುವುದರಿಂದ ಜಾನುವಾರುಗಳ ರಕ್ಷಣೆ ಸವಾಲಾಗಿದೆ. ಸರ್ಕಾರ ಮುನ್ನಚ್ಚರಿಕೆಯಾಗಿ ಪ್ರತಿ ಪಂಚಾಯಿಗೊಂದು ಘೋಶಾಲೆ ತೆರೆಯುವ ಮುಖಾಂತರ ಜಾನುವಾರುಗಳ ಮೇವು ಹಾಗೂ ನೀರನ್ನು ಒದಗಿಸುವ ಮುಖಾಂತರ ಮುಂಬರುವ ಬರಗಾಲವನ್ನು ಎದುರಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.
ಕೂಡೇ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ಬರ ನಿರ್ವಹಣೆಗೆ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ಪ್ರತಿ ಪಂಚಾಯ್ತಿಗೊಂದು ಘೋಶಾಲೆ ತೆರೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಆಗಸ್ಟ್-21 ರ ಸೋಮವಾರ ಜಾನುವಾರುಗಳು ಸಮೇತ ರಾಜ್ಯ ಹೆದ್ದಾರಿ ಬಂದ್ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‍ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಹೆಬ್ಬಣಿ ಆನಂದರೆಡ್ಡಿ, ವಿಜಯ್‍ಪಾಲ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ವಕ್ಕಲೇರಿ ಹನುಮಯ್ಯ, ಕೇಶವ, ಮಂಗಸಂದ್ರ ತಿಮ್ಮಣ್ಣ, ಕುವಣ್ಣ, ವಿಶ್ವ, ಮುನಿರಾಜು, ಮುನಿಕೃಷ್ಣ, ಕದರಿನತ್ತ ಅಪ್ಪೋಜಿರಾವ್, ರಾಮಸಾಗರ ವೇಣು, ಸುರೇಶ್‍ಬಾಬು, ಪಾರಂಡಹಳ್ಳಿ ಮಂಜುನಾಥ., ನಾಗಭೂಷಣ್, ತೆರ್ನಹಳ್ಳಿ ಆಂಜಿನಪ್ಪ, ಚಂದ್ರಪ್ಪ, ಯಾರಂಘಟ್ಟ ಗಿರೀಶ್, ನರಸಿಂಹಯ್ಯ, ನಾರಾಯಣಗೌಡ, ವೆಂಕಟೇಶಪ್ಪ, ಮುಂತಾದವರು ಇದ್ದರು.

ಸ್ಮಾರ್ಟ್ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಪ್ರವರ್ತಕ ಆವಿಷ್ಕಾರಗಳ ಕುರಿತು ಎಂ.ಐ.ಟಿ.ಕೆ ನಲ್ಲಿ ವಿಶೇಷ ಸಂವಾದ

ಸ್ಮಾರ್ಟ್ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಪ್ರವರ್ತಕ ಆವಿಷ್ಕಾರಗಳು ವಿಷಯದ ಕುರಿತು ವಿಶೇಷ ಭಾಷಣವನ್ನು MITK ಮೂಡ್ಲಕಟ್ಟೆಯಲ್ಲಿ ಸಂಸ್ಥೆಯ ಇನ್ನೋವೇಶನ್ ಮತ್ತು ಡೆವಲಪ್‌ಮೆಂಟ್ ಸೆಲ್ ವತಿಯಿಂದ ಏರ್ಪಡಿಸಲಾಗಿತ್ತು. ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠದ ಡಾ.ರಮೇಶ ಶಿವಸಾಮಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಡಾ. ರಮೇಶ್ ಶಿವಸಾಮಿ ಅವರು ತಮ್ಮ ಭಾಷಣದಲ್ಲಿ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಸೇರಿದಂತೆ ದೇಶಗಳು ಮತ್ತು ವಿಶ್ವಸಂಸ್ಥೆಯ ದಶಕಗಳ ಕೆಲಸದ ಮೇಲೆ ನಿರ್ಮಿಸಲಾದ 17 ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಕುರಿತು ಮಾತನಾಡಿದರು. ಅವರು ಯಾವುದೇ ಒಂದು ಅಥವಾ ಹೆಚ್ಚಿನ Sಆಉ ಗಳಲ್ಲಿ ಕೆಲಸ ಮಾಡಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಅವರು ಭಾರತ ಮತ್ತು ವಿದೇಶಗಳಲ್ಲಿ (ಚಿಲಿ, ದಕ್ಷಿಣ ಅಮೇರಿಕಾ) ಸಂಶೋಧನೆಯಲ್ಲಿ ಪಡೆದ ತಮ್ಮ ಅಪಾರ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು ಮತ್ತು ಹಿಂದೂಳಿದ ಪ್ರದೇಶ ಮತ್ತು ವಿನಮ್ರ ಹಿನ್ನೆಲೆಯಿಂದಲೂ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತಮ್ಮದೇ ಉದಾಹರಣೆಯನ್ನು ಉಲ್ಲೇಖಿಸಿ ವಿವರಿಸಿದರು. ಸಂಯೋಜಿತ ವಸ್ತುಗಳು ಮತ್ತು ಸೂಪರ್ ಕಂಡಕ್ಟರ್‌ಗಳ ಕ್ಷೇತ್ರದಲ್ಲಿ ಸಂಶೋಧನೆಯ ವ್ಯಾಪ್ತಿಯ ಬಗ್ಗೆಯೂ ಅವರು ಹೇಳಿದರು. ಸಂಸ್ಥೆಯ ಆವಿಷ್ಕಾರ ಮತ್ತು ಅಭಿವೃದ್ಧಿ ಕೋಶದ ಮುಖ್ಯಸ್ಥರು ಡಾ.ತಿಲಗ್ ರಾಜ್ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಬ್ರಾಂಡ್ ಬಿಲ್ಡಿಂಗ್, ಐಎಂಜೆ ಸಂಸ್ಥೆಗಳ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಸಿಬ್ಬಂದಿ ವರ್ಗ ಹಾಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸ್ರೂರು ಸ್ಪೋರ್ಟ್ಸ್ ಕ್ಲಬ್ : ಹಗ್ಗ ಜಗ್ಗಾಟ ಸ್ಪರ್ಧೆ, ಸೈನಿಕರಿಗೆ ಸಮ್ಮಾನ, ಅಶಕ್ತರಿಗೆ ಸಹಾಯಧನ

ಬಸ್ರೂರು, ಆ.18: ಬಸ್ರೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬಸ್ರೂರು ಬಿ.ಎಂ. ಶಾಲೆಯಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು, ಇದೇ ಸಂದರ್ಭದಲ್ಲಿ ಹಾಲಿ ಮತ್ತು ನಿವೃತ್ತ  ಸೈನಿಕರಿಗೆ ಸಮ್ಮಾನ ಹಾಗೂ ಅಶಕ್ತರಿಗೆ, ರೋಗಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ನಡೆಯತು. ಜಿಲ್ಲಾ ಯುವಜನ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ   ರೋಶನ್‌ ಶೆಟ್ಟಿ, ರೇಷ್ಮೆ ಇಲಾಖೆಯ ಜಿ. ರಾಜೇಂದ್ರ ಶೆಟ್ಟಿಗಾರ್‌, ಉದ್ಯಮಿ ಹನೀಫ್ ಶೇಖ್ ಬಸ್ರೂರು, ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷ  ಬಿ. ಸತ್ಯನಾರಯಣ, ಉಪಾಧ್ಯಕ್ಷ ಶಾವೆಲ್ ಹಮೀದ್, ಕಾರ್ಯದರ್ಶಿ ವಿವೇಕಾನಂದ ಉಪಸ್ಥಿತರಿದ್ದರು. ರಮೇಶ್ ಗಾಣಿಗ ಪ್ರಸ್ತಾವನೆಗೈದರು, ಫ್ಲೈವನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಬಿ.ಕೆ ವಂದಿಸಿದರು.  

`ಕುಂದಾಪ್ರ ಕನ್ನಡ’ ನಿಘಂಟು ಸಂಪಾದಕ ಶ್ರೀ ಪಂಜು ಗಂಗೊಳ್ಳಿ ಅವರಿಗೆ ಜಿ.ವೆಂಕಟಸುಬ್ಬಯ್ಯ “ಭಾಷಾ ಸಮ್ಮಾನ್” ಪುರಸ್ಕಾರ

ನಿಘಂಟು ಬ್ರಹ್ಮ, ಭಾಷಾ ತಜ್ಞ ಕೀರ್ತಿಶೇಷ ಜಿ. ವೆಂಕಟಸುಬ್ಬಯ್ಯ ಅವರ ಸ್ಮರಣಾರ್ಥ, ಅವರ ಹೆಸರಿನಲ್ಲಿ ‘ಕಥೆಕೂಟ’ ಪ್ರಶಸ್ತಿಯೊಂದನ್ನು ಆರಂಭಿಸುತ್ತಿದೆ. ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ, ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಮತ್ತು ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸದಲ್ಲಿ ನಿರತರಾಗಿರುವ ಪ್ರತಿಭಾವಂತರಿಗೆ ಪ್ರತಿವರ್ಷ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ ನೀಡಿ ಗೌರವಿಸಲು ಕಥೆಕೂಟ ನಿರ್ಧರಿಸಿದೆ. ಈ ಪ್ರಶಸ್ತಿಯು ರೂ.10,000 ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.

2023ನೇ ಸಾಲಿನ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರವನ್ನು `ಕುಂದಾಪ್ರ ಕನ್ನಡ’ ನಿಘಂಟು ಸಂಪಾದಕ ಶ್ರೀ ಪಂಜು ಗಂಗೊಳ್ಳಿ ಅವರಿಗೆ ನೀಡಲು ಭಾಷಾ ಸಮ್ಮಾನ್ ಪುರಸ್ಕಾರ ಸಮಿತಿ ಸಂತೋಷಿಸುತ್ತದೆ. ಸುಮಾರು 20 ವರ್ಷಗಳ ಅವಿರತ ಶ್ರಮ, ಅಧ್ಯಯನ, ಸಂಶೋಧನೆ ಮತ್ತು ಸಂಘಟನೆಯಿಂದ ಸಿದ್ಧವಾಗಿರುವ ಕುಂದಾಪ್ರ ಕನ್ನಡ ನಿಘಂಟು, ಕನ್ನಡ ಭಾಷೆಗೆ ಅತ್ಯುತ್ತಮ ಕೊಡುಗೆ. ಲಂಕೇಶ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದ ಪಂಜು ಗಂಗೊಳ್ಳಿ ಪತ್ರಕರ್ತರು ಮತ್ತು ಲೇಖಕರು. ಸದ್ಯಕ್ಕೆ ಅವರು ಮುಂಬಯಿಯಲ್ಲಿ ವಾಸವಾಗಿದ್ದಾರೆ.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಗಿರೀಶ್ ರಾವ್ ಹತ್ವಾರ್ (ಜೋಗಿ), ಗೋಪಾಲಕೃಷ್ಣ ಕುಂಟಿನಿ, ಜಿ ವಿ. ಅರುಣ ಇದ್ದರು.

ಈ ಪ್ರಶಸ್ತಿ ಪ್ರದಾನ ಸಮಾರಂಭವು ಜಿ ವಿ ಅವರ 111ನೇ ಹುಟ್ಟುಹಬ್ಬವಾದ 23.08.2023ರಂದು ಸಂಜೆ 6 ಗಂಟೆಗೆ ಪ್ರೊ. ಜಿವಿ ಜನ್ಮಶತಾಬ್ದಿ ಕಲಾ ಭವನ, ಜಯರಾಮ ಸೇವಾ ಮಂಡಳಿ, 492 / ಎ, ಒಂದನೇ ಮುಖ್ಯರಸ್ತೆ, ಎಂಟನೇ ಬ್ಲಾಕ್, ಜಯನಗರ, ಬೆಂಗಳೂರು- 560070- ಇಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶಸೇವೆಗೆ ತೆರಳುತ್ತಿರುವ ತರಬೇತೆ ಪಡೆದ ಅಗ್ನಿವೀರರಿಗೆ ಬೀಳ್ಕೊಡುಗೆಜಿಲ್ಲೆಯಿಂದ ಹೆಚ್ಚು ಯುವಕರು ದೇಶಸೇವೆಗೆ ತೆರಳಬೇಕು- ಸಾಮಾ ಅನಿಲ್

ಕೋಲಾರ:- ಕೋಲಾರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಯುವಕರು ಸೇನೆಗೆ ಆಯ್ಕೆಯಾಗುವ ಮೂಲಕ ದೇಶ ಸೇವೆಗೆ ತೆರಳಬೇಕು ಎಂದು
ಕೋಲಾರ ಕ್ರೀಡಾ ಸಂಘದ ಅಧ್ಯಕ್ಷರೂ ಹಾಗೂ ದಿಶಾ ಸಮಿತಿ ಸದಸ್ಯರಾದ ಸಾಮಾ ಅನಿಲ್ ಕುಮಾರ್ ಕರೆ ನೀಡಿದರು.
ಕೋಲಾರ ಕ್ರೀಡಾಸಂಘದಿಂದ ತರಬೇತಿ ಪಡೆದು ಸೈನ್ಯಕ್ಕೆ ಆಯ್ಕೆಯಾದ ಅಗ್ನಿವೀರರಿಗೆ ಆತ್ಮೀಯವಾಗಿ ಸನ್ಮಾನಿಸಿ ಮಾತಾಡಿದ ಅವರು, ಬೇರೆ ಜಿಲ್ಲೆಗಳಂತೆ ಇಂದು ಕೋಲಾರ ಜಿಲ್ಲೆಯಿಂದ ಹೆಚ್ಚು ಯುವಕರು ಸೈನ್ಯಕ್ಕೆ ಸೇರುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ. ಈಗ ಆಯ್ಕೆಯಾದ ಅಗ್ನಿವೀರರು ಜಿಲ್ಲೆಯ ಯುವ ಸಮುದಾಯಕ್ಕೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಸಂಘದಿಂದ ಯುವಕರಿಗೆ ಸದಾ ಉಚಿತ ತರಬೇತಿ ಹಮ್ಮಿಕೊಳ್ಳಲಾಗುತ್ತದೆ. ಇವತ್ತಿನ ಈ ಸಾಧನೆಯ ಸಂಪೂರ್ಣ ಶ್ರೇಯಸ್ಸು ನಮ್ಮ ಹೆಮ್ಮೆಯ ತರಬೇತುದಾರರಾದ ಕೃಷ್ಣಮೂರ್ತಿ ಮತ್ತು ಸುರೇಶಬಾಬುರವರಿಗೆ ಸಲ್ಲಬೇಕು. ಹಾಗೆಯೇ ಈ ಸಂಘವನ್ನು ಕಟ್ಟಿ ಬೆಳೆಸಿ ಸದಾ ಸಂಘದ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವ ಪುರುಷೋತ್ತಮ್ ರವರಿಗೆ ನಾವೆಲ್ಲರೂ ಚಿರಋಣಿಗಳಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಆರು ತಿಂಗಳ ತರಬೇತಿ ಮುಗಿಸಿ ಸೇನೆಯ ವಿವಿಧ ವಿಭಾಗಗಳಿಗೆ ಆಯ್ಕೆಯಾಗಿ ಇದೇ ಮೊದಲ ಬಾರಿಗೆ ದೇಶಸೇವೆಗೆ ಹೊರಟ ಅಗ್ನಿವೀರರಾದ ಚರಣ್, ಅಜಯ್, ಪ್ರಮೋದ್ ಮತ್ತು ನಿತ್ಯಾನಂದ ರವರನ್ನು ಕೋಲಾರ ಜಾರಿ ವಿಭಾಗದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ದಯಾನಂದ್ ಸನ್ಮಾನಿಸಿ ಶುಭಹಾರೈಸಿದರು.
ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಮೈಸೂರಿನಲ್ಲಿ ನಡೆದ ಸೈನಿಕ ರ್ಯಾಲಿಯಲ್ಲಿ ಭಾಗವಹಿಸಿ ಆಯ್ಕೆಯಾದ ಯುವಕರಿಗೆ ಸನ್ಮಾನಿಸಿ ಶುಭಹಾರೈಸಿದರು.
ಮಾಜಿ ಸೈನಿಕರು, ಜಿ.ಪಂ. ಸಹಾಯಕ ಲೆಕ್ಕಾಧಿಕಾರಿಗಳು ಮತ್ತು ತರಬೇತುದಾರರಾದ ಕೃಷ್ನಮೂರ್ತಿ, ಸೇನೆಯಲ್ಲಿ ಯುವಕರು ಯಾವ ಯಾವ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಬಹುದು. ಅಲ್ಲಿ ಸಿಗುವ ತರಬೇತಿಗಳನ್ನು ಹೇಗೆ ಪಡೆಯಬೇಕು, ಕಂಪ್ಯೂಟರ್ ಕಲಿಕೆಯಿಂದ ಆಗಬಹುದಾದ ಪ್ರಯೋಜನಗಳ ಕುರಿತು ಭಾವಿ ಸೈನಿಕರಿಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಸೈನಿಕ ತರಬೇತಿಯಲ್ಲಿ ಭಾಗವಹಿಸಿ ಹಿಂದಿರುಗಿದ ಚರಣ್, ಅಜಯ್, ಪ್ರಮೋದ್ ಮತ್ತು ನಿತ್ಯಾನಂದರವರು ತರಬೇತಿಯನ್ನು ಹೇಗೆ ಎದುರಿಸಬೇಕು, ಅನುಸರಿಸಬೇಕಾದ ಶಿಸ್ತು ಮತ್ತಿತರ ವಿಷಯಗಳ ಬಗ್ಗೆ ಹೊಸದಾಗಿ ಆಯ್ಕಯಾದ ಯುವಕರಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಪುರುಷೋತ್ತಮ, ತರಬೇತುದಾರ ಸುರೇಶ್ ಬಾಬು (ಕಮಾಂಡೋ) ಖೋ-ಖೋ ತರಬೇತುದಾರ ರಾಧಣ್ಣ, ಬಾರ್ ವೇಣು, ವಾಕಿಂಗ್ ಕ್ಲಬ್‍ನ ಶಂಕರ್, ವೆಂಕಟರಮಣಪ್ಪ ಮತ್ತಿತರರು ಭಾಗವಹಿಸಿ ಶುಭ ಕೋರಿದರು. ಬಾರ್ ವೇಣುರವರು ಎಲ್ಲಾ ಅಗ್ನಿವೀರರಿಗೆ ಹೋಟೆಲ್ ಸಾಯಿಧಾಮದಲ್ಲಿ ಉಪಹಾರದ ವ್ಯವಸ್ಥೆ ಮಾಡಿದ್ದರು.