ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಪಕ ವಿದ್ಯತ್ ನೀಡದೆ ಬೆಸ್ಕಾ ಅಧಿಕಾರಿಗಳ ರೈತ ವಿರೋದಿ ದೋರಣೆ ಖಂಡಿಸಿ ಮುತ್ತಿಗೆ ಹಾಕಲು-ರೈತ ಸಂಘ ತಿರ್ಮಾನ

ಶ್ರೀನಿವಾಸಪುರ, ಆ.20: ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಪಕ ವಿದ್ಯತ್ ನೀಡದೆ ಬೆಸ್ಕಾ ಅಧಿಕಾರಿಗಳ ರೈತ ವಿರೋದಿ ದೋರಣೆ ಖಂಡಿಸಿ ಗುಣಮಟ್ಟದ 10 ತಾಸು ವಿದ್ಯತ್‍ಗಾಗಿ ಆಗಸ್ಟ್ 23 ರ ಬುಧವಾರ ನಷ್ಟ ಬೆಳೆ ಸಮೇತ ಬೆಸ್ಕಾಂ ಇಲಾಖೆ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘಧ ಸಭೆಯಲ್ಲಿ ತಿರ್ಮಾನಿಸಲಾಯಿತು.
ಬರದಿಂದ ಬಸವಳಿದಿರುವ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 7 ತಾಸು ವಿದ್ಯುತ್ ಪೂರೈಕೆ ಮಾಡದೆ ರೈತರನ್ನು ಕಂಗೆಡಿಸುತ್ತಿರುವ ಲೋಡ್ ಶೆಡ್ಡಿಂಗ್ ಸೃಷ್ಠಿಸಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ದ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಎಕರೆ ತೋಟಕ್ಕೆ ನೀರು ಹಾಯಿಸಬೇಕಾದರೆ ದಿನದ 24 ಗಂಟೆ ಸಂಸಾರವನ್ನು ಬಿಟ್ಟು ಕೊಳವೆ ಪಂಪ್‍ಸೆಟ್‍ಗಳ ಬಳಿ ವಾಸ ಮಾಡಬೇಕಾದ ಪರಿಸ್ಥಿತಿಯನ್ನು ಬೆಸ್ಕಾಂ ಅದಿಕಾರಿಗಳು ಉಚಿತವಾಗಿ ನೀಡುವ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಪೂರ್ವಜರ ಕಾಲದ ಬುಡ್ಡಿ ದೀಪಗಳ ಕತ್ತಲ ಭಾಗ್ಯವನ್ನು ಕರುಣಿಸುವುದಕ್ಕೆ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ದನ್ಯವಾದ ತಿಳಿಸಿದರು.
ಸರ್ಕಾರ ಕೂಡಲೇ ಇಂತಹ ಅಧಿಕಾರಿಗಳನ್ನು ಗುರುತಿಸಿ ಚಿನ್ನದ ಪದಕ ನೀಡಿ ಸನ್ಮಾನಿಸುವ ಮುಖಾಂತರ ರೈತ ವಿರೋದಿ ದೋರಣೆ ಅನುಸರಿಸಿ ರೈತರ ಬೆಳೆ ನಾಶಕ್ಕೆ ಕಾರಣ ಆಗಿರುವ ಇವರನ್ನು ಪ್ರತಿ ರೈತ ಕುಟುಂಬಗಳ ಮನೆ ಮುಂದೆ ಪೋಟೋ ಅಳವಡಿಸಬೇಕೆಂದು ಸಭೆಯಲ್ಲಿ ಇಂಧನ ಸಚಿವರನ್ನು ಆಗ್ರಹಿಸಿದರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಬಹುತೇಕ ರೈತರು ತೋಟದ ಮನೆಗಳಲ್ಲಿ ವಾಸವಾಗಿರುವುದರಿಂದ ನಿರಂತರ ಜ್ಯೋತಿ ಆ ಮನೆಗಳಿಗೂ ವಿದ್ಯುತ್ ಕೋಡಬೇಕೆಂಬ ಬೇಡಿಕೆ ಇದೆ. ಆದರೆ ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡುವುದರಿಂದ ಕಾಡುಪ್ರಾಣಿಗಳ ಹಾವಳಿ ಜೊತೆಗೆ ಕಳ್ಳಕಾಕರ ಭಯದಲ್ಲಿ ರೈತರು ಜೀವನ ನಡೆಸುವ ಮಟ್ಟಕ್ಕೆ ಬೆಸ್ಕಾಂ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂದು ಕಿಡಿ ಕಾರಿದರು.
ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಗಳ ಕಾರ್ಯಕ್ರಮಗಳಿಗೆ ಕೈಗಾರಿಕಾ ಪ್ರದೇಶಗಳಿಗೆ ವಿದ್ಯುತ್ ನೀಡಲು ಲೋಡ್ ಶೆಡ್ಡಿಂಗ್ ಇಲ್ಲ, ಆದರೆ ರೈತರು ಬೆಳೆದ ಅನ್ನ ತಿಂದು ರೈತರ ಬೆಳೆಗಳಿಗೆ ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಅಧಿಕಾರಿಗಳ ತಾರತಮ್ಯವೇಕೆ ಎಂದು ಪ್ರಶ್ನೆ ಮಾಡುವ ಜೊತೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ವಿದ್ಯುತ್ ಇಲ್ಲದೆ ನಾಶ ಆದರೆ ಆಯಾ ವ್ಯಾಪ್ತಿಯ ಬೆಸ್ಕಾಂ ಅಧಿಕಾರಿಗಳ ಜನಪ್ರತಿನಿದಿಗಳ ಆಸ್ತಿ ಹರಾಜು ಹಾಕಿ ರೈತರಿಗೆ ಪರಿಹಾರ ನೀಡುವ ಕಾನೂನು ಜಾರಿ ಹಾಗೂ ಸಮರ್ಪಕ ವಿದ್ಯುತ್ ಗಾಗಿ ಆ.23 ರ ಬುಧವಾರದಂದ ಬೆಸ್ಕಾಂ ಇಲಾಖೆ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತೆಂದರು
ಹೋರಾಟದಲ್ಲಿ ಶೇಕ್‍ಶಪಿಹುಲ್ಲಾ, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಆಲವಟ್ಟಿ ಶಿವ, ವೆಂಕಟ್, ಸಹದೇವಣ್ಣ, ಶೆಕ್‍ಶಪಿವುಲ್ಲಾ , ಸಂತೋಷ್, ಸುಪ್ರೀಂ ಚಲ, ಕೇಶವ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಯಲ್ಲಪ್ಪ, ನರಸಿಂಹಯ್ಯ, ಪಾರಾಂಡಹಳ್ಳಿ ಮಂಜುನಾಥ್, ಹೆಬ್ಬಣಿ ಅನಂದ್‍ರೆಡ್ಡಿ, ಮಂಜುಳಾಮ್ಮ, ಶೈಲಜ, ರಾಧ, ಬೈರಮ್ಮ, ನಾಗರತ್ನ ಮುಂತಾದವರಿದ್ದರು.

ಬಜ್ಜೋಡಿ ಇನ್ಫ್ಯಾಂಟ್ ಮೇರಿ ಚರ್ಚಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ / Honoring the Meritorious Students Infant Mary Parish, Bajjodi

Service Commission and Education Commission of Infant Mary Parish, Bajjodi jointly organized a Felicitation Programme for Meritorious as well as passed out S.S.L.C and P.U.C Students of the 2022 – ’23 batch on 20th August, Sunday.

The programme began at 7.45 am with a prayer song by the Ayog members. Mr. Grippen D’Souza welcomed the Chief Guest and the gathering.

The Chief Guest Rev. Fr. Dominic Vas in his message spoke on the importance of good Education and explained why and how one must focus on a higher goal and take the right direction for a good future. S.S.L.C and P.U.C. Students with distinction were felicitated with a Memento and Cash Prize and all successful students were felicitated with a Memento each.

Fr. Rayan Pinto, Deacon Br. Siltan Noronha, PPC Vice President Mr. Prakash Saldanha, Secretary Mrs. Elizabeth Pereira, Co – Ordinator of all Commissions Mr. Ronald Goveas, Co – ordinator of Education Commission Mrs. Renita d DSouza, Secretary of the Commission Mrs. Shanthi Fernandes, Co – ordinators and members of all Commissions, Ward Gurkars and Parishioners were present for the Programme and congratulated the students and their parents. Mr. John Pais proposed the Vote of Thanks. The Programme was compered by Mrs. Renita D’Souza.

ಬಜ್ಜೋಡಿ ಇನ್ಫ್ಯಾಂಟ್ ಮೇರಿ ಚರ್ಚಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಶಿಶು ಮೇರಿ ಪ್ಯಾರಿಷ್ನ ಸೇವಾ ಆಯೋಗ ಮತ್ತು ಶಿಕ್ಷಣ ಆಯೋಗ, ಬಜ್ಜೋಡಿ ಇವರ ಸಂಯುಕ್ತ ಆಶ್ರಯದಲ್ಲಿ 2022 – ’23ನೇ ಬ್ಯಾಚ್ನ ಎಸ್. ಎಸ್. ಎಲ್. ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಗಸ್ಟ್ 20ರಂದು ಹಮ್ಮಿಕೊಳ್ಳಲಾಗಿದೆ, ಭಾನುವಾರ.

ಬೆಳಿಗ್ಗೆ 7.45ಕ್ಕೆ ಅಯೋಗ ಸದಸ್ಯರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜನಾಬ್ ಗ್ರಿಪ್ಪನ್ ಡಿಸೋಜ ಸ್ವಾಗತಿಸಿ, ವಂದಿಸಿದರು.

ಮುಖ್ಯ ಅತಿಥಿಗಳಾಗಿ ಧರ್ಮಗುರು ಫಾ. ಡೊಮಿನಿಕ್ ವಾಸ್ ಅವರು ತಮ್ಮ ಸಂದೇಶದಲ್ಲಿ ಉತ್ತಮ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು ಮತ್ತು ಉನ್ನತ ಗುರಿಯ ಮೇಲೆ ಏಕೆ ಮತ್ತು ಹೇಗೆ ಗಮನಹರಿಸಬೇಕು ಮತ್ತು ಉತ್ತಮ ಭವಿಷ್ಯಕ್ಕಾಗಿ ಸರಿಯಾದ ಮಾರ್ಗವನ್ನು ತೆಗೆದುಕೊಳ್ಳಬೇಕು ಎಂದು ವಿವರಿಸಿದರು. ಎಸ್. ಎಸ್. ಎಲ್. ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಫಾ. ರಾಯನ್ ಪಿಂಟೋ, ಡೀಕನ್ ಬ್ರ. ಸಿಲ್ಟಾನ್ ನೊರೊನ್ಹಾ, ಪಂ. ಉಪಾಧ್ಯಕ್ಷ ಪ್ರಕಾಶ ಸಲ್ದಾನ, ಕಾರ್ಯದರ್ಶಿ ಶ್ರೀಮತಿ ಎಲಿಜಬೆತ್ ಪಿರೇರಾ, ಎಲ್ಲಾ ಆಯೋಗಗಳ ಸಹ-ಆರ್ಡಿನೇಟರ್ ಶ್ರೀ ರೊನಾಲ್ಡ್ ಗೋವಾಸ್, ಆಯೋಗದ ಕಾರ್ಯದರ್ಶಿ ಶ್ರೀಮತಿ ಶಾಂತಿ ಫೆರ್ನಾಂಡಿಸ್, ಸಹ ಸಂಯೋಜಕರು ಮತ್ತು ಎಲ್ಲಾ ಆಯೋಗಗಳ ಸದಸ್ಯರು, ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶ್ರೀ ಜಾನ್ ಪಾಯ್ಸ್ ವಂದನಾರ್ಪಣೆಯನ್ನು ಪ್ರಸ್ತಾಪಿಸಿದರು. ಶಿಕ್ಷಣ ಆಯೋಗದ ಸಹ – ಆರ್ಡಿನೇಟರ್ ಶ್ರೀಮತಿ ರೆನಿಟಾ ಡಿಸೋಜ ಶ್ರೀಮತಿ ರೆನಿತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಕ್ರೈಸ್ತ ಶಿಕ್ಷಣ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಫಾ|ಸ್ಟ್ಯಾನಿ ತಾವ್ರೊರವರ ಅಮ್ರತ ಮಹೋತ್ಸವ ಆಚರಣೆ


ಕುಂದಾಪುರ, ಆ.20: ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊರವರ ಜನ್ಮ ದಿನವಾದ ಆಗೋಸ್ತ್ 20 ರಂದು ಭಾನುವಾರ ಎರಡನೇ ಬಲಿದಾನದ ಬಳಿಕ ಕ್ರೈಸ್ತ ಶಿಕ್ಷಣ ಶಿಕ್ಷಕರು ಮತ್ತು ವಿದ್ಯಾರ್ಥಿಗಳು 75 ನೇ ಜನ್ಮದಿನವನ್ನು ಪ್ರೀತಿ ಆಧಾರದಿಂದ ಆಚರಿಸಲಾಯಿತು.
ಕ್ರೈಸ್ತ ಶಿಕ್ಷಣ ಶಿಕ್ಷಕರ ಪರವಾಗಿ ವೀಣಾ ಡಿಸೋಜಾ, ಧರ್ಮಭಗಿನಿಯವರ ಪರವಾಗಿ ಭಗಿನಿ ತೆರೆಜಾ ಶಾಂತಿ, ವಿದ್ಯಾರ್ಥಿಗಳ ಪರವಾಗಿ ವಿಯೋಲಾ ಬರೆಟ್ಟು ಹೂ ಗುಚ್ಚ ನೀಡಿ ಶುಭಕೋರಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ಕ್ರೈಸ್ತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆತ್ತವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಪ್ರೀತಿ ಕ್ರಾಸ್ತಾ ನೆಡೆಸಿಕೊಟ್ಟರು.

ಸಂತ ಆಗ್ನೇಸ್ ಕಾಲೇಜಿನಲ್ಲಿ ಕೊಂಕಣಿ ಮಾನ್ಯತಾ ದಿನ ಆಚರಣೆ

ಮಂಗಳೂರು : ಸಂತ ಆಗ್ನೇಸ್ ಕಾಲೇಜಿನಲ್ಲಿ ಅಗಸ್ಟ್ 18 ರಂದು ‘ಕೊಂಕಣಿ ಮಾನ್ಯತಾ ದಿನ’ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಕ್ಣೊಂ ಕೊಂಕಣಿ ಪತ್ರದ ಸಂಪಾದಕರಾದ ವಂ. ಫಾ. ರೂಪೇಶ್ ಮಾಡ್ತಾ, ಕೊಂಕಣಿ ಭಾಷೆಯನ್ನು ಪ್ರೀತಿಸಿ ಮನೆ ಮನಗಳಲ್ಲಿ ಮಾತನಾಡಲು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅ ತಿಥಿಯಾಗಿ ಆಗಮಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ರೋಯ್ ಕ್ಯಾಸ್ತಲಿನೋ ಕೊಂಕಣಿ ಭಾಷೆ ವಿವಿಧ ಹಂತಗಳಲ್ಲಿ ನಡೆದು ಬಂದ ರೀತಿಯನ್ನು ವಿವರಿಸಿ, ಮಾತೃ ಭಾಷೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೊಂಕಣಿ ಸಂಘದ “ಅಂಕರ್” ವಾರ್ಷಿಕ ಅಂಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಭಗಿನಿ ಡಾ. ವೆನಿಸ್ಸಾ ಎ.ಸಿ ಮಾತನಾಡಿ, ಕೊಂಕಣಿ ಸಂಘದಿಂದ ಆಯೋಜಿಸಿದ ವಿವಿದ ಕಾರ್ಯಗಳಿಗೆ ಅಭಿನಂದಿಸಿದರು ಹಾಗೂ ಕೊಂಕಣಿ ಭಾಷೆಯ ಮೇಲೆ ಇಟ್ಟ ಆಭಿಮಾನಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕೊಂಕಣಿ ಸಂಘದ ಸದಸ್ಯರಿಂದ ಕೊಂಕಣಿ ಸಂಸ್ಕೃತಿಯ ಗುಮ್ಟಾಂ ಗಾಯನ ನಡೆಯಿತು. ಸಂಯೋಜಕರಾದ ಎಲ್ಸನ್ ಹಿರ್ಗಾನ ಸ್ವಾಗತಿಸಿ, ಕಾರ್ಯದರ್ಶಿ ಗ್ಲೆನಿಟಾ ಡೇಸಾ ವಂದಿಸಿದರು, ಭಗಿನಿ ವೆಲೆಂಟಿನಾ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರ ರೋಜರಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗೆ 2022-23ನೇ ಸಾಲಿನ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಪ್ರಶಸ್ತಿ

ಕುಂದಾಪುರ: ಕುಂದಾಪುರದ ರೋಜರಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗೆ 2022-23ನೇ ಸಾಲಿನ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಪ್ರಶಸ್ತಿ ಲಭಿಸಿದೆ. ಸಂಘವು ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ವಿಶಿಷ್ಠ ಸಾಧನೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಆ.19 ರಂದು ಮಂಗಳೂರಿನಲ್ಲಿ ಜಿಲ್ಲಾ ಬ್ಯಾಂಕಿನ ಉತ್ಕೃಷ್ಠ ಸಹಕಾರಿ ಸೌಧದಲ್ಲಿ ಜರಗಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪಾರ್ಷಿಕ ಮಹಾಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಮ್‌. ಎನ್‌. ರಾಜೇಂದ್ರ ಕುಮಾರ್‌ ಪ್ರಶಸ್ತಿಯನ್ನು
ಪ್ರದಾನ ಮಾಡಿದರು
.

`ರೋಜರಿ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾದ ಜೋನ್ಸನ್ ಡಿಆಲ್ಮೇಡಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಬಲ್‌ ಡಿಆಲ್ಮೇಡಾ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ ಕುಮಾರ್‌ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್‌, ನಿರ್ದೇಶಕರಾದ ಎಸ್‌.ರಾಜು ಪೂಜಾರಿ, ಎಂ. ಮಹೇಶ ಹೆಗ್ಡೆ, ಬಿ.ನಿರಂಜನ್‌, ಟಿ.ಜಿ.ರಾಜಾರಾಮ
ಭಟ್‌, ಎಂ.ವಾದಿರಾಜ ಶೆಚ್ಚಿ, ಐಕಳಬಾವ ದೇವಿಪ್ರಸಾದ್‌ ಶಟ್ಟಿ ಬೆಳಪು, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರಿಶ್ಚಂದ್ರ ಎಂ, ಜೈರಾಜ್‌ ಬಿ. ರೈ, ಬಿ.ಅಶೋಕ್‌ ಕುಮಾರ್‌ ಶಟ್ಟಿ, ರಾಜೇಶ್‌ ರಾವ್‌, ಸದಾಶಿವ ಉಳ್ಳಾಲ್‌ ಮತ್ತೀತರರು ಉಪಸ್ಥಿತರಿದ್ದರು.

ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಕೋಮಾದಲ್ಲಿರುವ ಗಣೇಶ ನಾವುಡರಿಗೆ ರೂ. ಹದಿನೈದು ಸಾವಿರ ದೇಣಿಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಈ ದಿನ ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿರುವ ಗಣೇಶ ನಾವುಡ ಇವರ ಚಿಕಿತ್ಸೆ ಗಾಗಿ ರೂಪಾಯಿ ಹದಿನೈದು ಸಾವಿರ ವನ್ನು ನೀಡಲಾಯಿತು. ಕೇಟರಿಂಗ ಉದ್ಯೋಗದಲ್ಲಿರುವ ಇವರಿಗೆ ಕಾಲೇಜು ವ್ಯಾಸಂಗ ಮಾಡುತ್ತಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಇವರು ರೋಗಿಯ ಪುತ್ರಿಗೆ ಚೆಕ್ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ ಮತ್ತು ಸತ್ಯನಾರಾಯಣ ಪುರಾಣಿಕ್ ಉಪಸ್ಥಿತರಿದ್ದರು.

ಶಿಸ್ತು, ಸಮಯ ಪಾಲನೆ ಹಾಗೂ ಪರಿಶ್ರಮ ಇದ್ದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವುದು ಸುಲಭ : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಶಿಸ್ತು, ಸಮಯ ಪಾಲನೆ ಹಾಗೂ ಪರಿಶ್ರಮ ಇದ್ದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವುದು ಸುಲಭವಾಗುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿ, ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಸಹಕಾರ ನೀಡುತ್ತೇನೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಕಾಲೇಜು ಹಾಗೂ ಪೋಷಕರಿಗೆ ಒಳ್ಳೆ ಹೆಸರು ತರಬೇಕು. ಶಿಕ್ಷಣವೇ ಶಕ್ತಿ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸಣ್ಣೀರಯ್ಯ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಪುಷ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಉತ್ತಮ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಪಾರಿತೋಷಕ ಹಾಗೂ ಬಹುಮಾನ ನೀಡಲಾಯಿತು.
ಕಾಲೇಜು ಅಭಿವೃದ್ಧಿ ಸಮತಿ ಹಾಗೂ ಸಾಂಸ್ಕøತಿಕ ಮತ್ತು ಕ್ರೀಡಾ ಸಮಿತಿ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಸಂಚಾಲಕ ಫಾ|ಸ್ಟ್ಯಾನಿ ತಾವ್ರೊರವರ ಅಮೃತ ಮಹೋತ್ಸವ ಆಚರಣೆ


ಕುಂದಾಪುರ,20: ಸೈಂಟ್ ಮೇರಿಸ್ ಮತ್ತು ಹೋಲಿ ರೋಜರಿ ಸಮೂಹ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರ ಜನ್ಮ ದಿನದ 75 ವರ್ಷಗಳ ಅಮೃತ ಮಹೋತ್ಸವವನ್ನು ಆ.19 ರಂದು ಸಂಭ್ರಮದಿಂದ ಸೈಂಟ್ ಮೇರಿಸ್ ಸಭಾಂಗಣದಲ್ಲಿ ಆಚರಿಸಲಾಯಿತು. ಪುಜ್ಯನೀಯ ಸಂಚಾಲಕರು ಕೇಕ್ಅನ್ನು ಕತ್ತರಿಸಿ ಸಿಹಿಯನ್ನು ಹಂಚಿಕೊಂಡರು. ಪೂಜ್ಯರ ಬಗ್ಗೆ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ಅಶ್ವಿನ್ ಅರಾನ್ನಾರವರು “ಅವರು 75ರ ಬದಲಾಗಿ ಅವರಿಗೆ 25 ವರ್ಷದ ಯುವಕರನ್ನು ನಾಚಿಸುವ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಹಾಗೂ ಅವರನ್ನು ನೋಡುವಾಗ ಗಂಭೀರವಾದ ಮುಖಭಾವವಿದ್ದರೂ ಕೂಡ ಅವರು ಮೃದುವಾದ ಸ್ವಾಭಾವದವರು ಹಾಗೂ ಬೇರೆಯವರ ನೋವು ನಲಿವುಗಳ ಬಗ್ಗೆ ತಿಳಿದವರು ದೊಡ್ಡ ದೊಡ್ಡ ಅಧಿಕಾರ ಹೊಂದಿದರೂ ಕೂಡ ಅವರು ಅದನ್ನು ತೋರಿಸದೆ, ಸಂಬಂಧಗಳನ್ನು ಒಳ್ಳೆಯ ರೀತಿಯಲ್ಲಿ ಮುಂದುವರಿಸುವ ಇವರು ತುಂಬಾ ಸರಳ ವ್ಯಕ್ತಿಯಾಗಿದ್ದು, ನಾವು ಇವರನ್ನು ಆದರ್ಶವನ್ನಾಗಿಸಿಕೊಂಡು, ನಮ್ಮಲ್ಲಿ ಅವರ ಒಳ್ಳೆಯ ಗುಣವನ್ನು ಬೇಳಸಿಕೊಳ್ಳಬೇಕು’ ಎಂದು ಸಂದೇಶವನ್ನು ನೀಡಿದರು.

ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಕನ್ನಡ “ಉಪನ್ಯಾಸಕರಾದ ನಾಗರಾಜ್ ಶೆಟ್ಟಿಯವರು ಪೂಜ್ಯರು ಆಡುಮಟ್ಟದ ಸೊಪ್ಪಿಲ್ಲ ಹಾಗೆಯೇ ಅವರ ಅನುಭವವು ವಿಶಾಲವಗಿದೆ” ಎಂದು ತಿಳಿಸಿದರು. ಸಂಸ್ಥೆಯ ಎಲ್ಲಾ ಮುಖ್ಯ ಶಿಕ್ಷಕರು ಸಂಚಾಲಕರನ್ನು ಶಾಲು ಹೊದಿಸಿ, ಫಲ ಪುಷ್ಪ, ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯತು.ಪೂಜ್ಯರು ವಿದ್ಯಾ ಸಂಸ್ಥೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹೂಗುಚ್ಚವನ್ನು ನೀಡಿ ಅಭಿನಂದಿಸಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ಎಲ್ಲೆಡೆ ಸಾರಬೇಕು’ ಎಂದು ಶುಭ ಹರೈಸಿದರು. ಸೈಂಟ್ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಡೊರ ಸುವಾರಿಸ್ ಸ್ವಾಗತ ಕೋರಿದರು. ಹೋಲಿ ರೋಜರಿ ಶಾಲೆಯ ಶಿಕ್ಷಕ ಲೂವಿಸ್ ಪ್ರಶಾಂತ್ ರೆಬೇರೋ ಧನ್ಯವಾದ ಸಮರ್ಪಿಸಿದರು. ಸೈಂಟ್ ಮೇರಿಸ್ ಪ್ರೌಢ ಶಾಲೆಯ ಪದವೀಧರ ಸಹ ಶಿಕ್ಷಕ ಶ್ರೀಯುತ ಚಂದ್ರ ಶೇಖರ್ ಬಿಜಾಡಿ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಆ. 19: ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ

ಉಡುಪಿ, ಆ. 19: ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ ಆ.19ರಂದು ಮಧ್ಯಾಾಹ್ನ 3ಕ್ಕೆ ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಜರಗಲಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಲ. ಡಾ. ನೇರಿ ಕರ್ನೇಲಿಯೊ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಡುಪಿ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾಾರೆ. ಲಯನ್ಸ್ ಕ್ಲಬ್‌ನ ಪ್ರಮುಖರಾದ ರಾಮಕೃಷ್ಣ ಮೂರ್ತಿ, ಕೆ. ವಂಶಿಧರ್ ಬಾಬು, ಜಿ. ಶ್ರೀನಿವಾಸ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾಾರೆ. ಸಾಧಕರಿಗೆ ಸಮ್ಮಾಾನ, ವಿದ್ಯಾಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಲಯನ್ಸ್ ಜಿಲ್ಲೆ 317ಸಿ ವ್ಯಾಪ್ತಿಯಲ್ಲಿ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಕಂದಾಯ ಜಿಲ್ಲೆಗಳಲ್ಲಿ ಒಳಗೊಂಡು 3 ಸಾವಿರ ಸದಸ್ಯರು ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ ‘ಲೀವ್ ಟೂ ಲೀಡ್’ ಎಂಬ ಘೋಷಣೆಯೊಂದಿಗೆ ‘ಬೆಳಕು’ ಜಿಲ್ಲಾ ಕಾರ್ಯಕ್ರಮದಡಿಯಲ್ಲಿ ಹಲವಾರು ಸೇವಾ ಚಟುವಟಿಕೆಗಳ ಯೋಜನೆ ರೂಪಿಸಲಾಗಿದೆ. ಜಿಲ್ಲೆಗೆ ಈಗಾಗಲೆ ತುರ್ತು ನೆರೆ ಪರಿಹಾರ ನಿಧಿಯನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುವುದು. ಸೇವಾ ಮತ್ತು ಸಮಾಜಮುಖಿ ಚಟುವಟಿಕೆ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಲಯನ್ಸ್ ಸಂಪುಟ ಕಾರ್ಯದರ್ಶಿ ಲ. ರವಿರಾಜ ನಾಯಕ್, ಖಜಾಂಚಿ ಲ. ರೀಚರ್ಡ್ ಡಯಾಸ್, ಮಾರ್ಕೇಟಿಂಗ್ ಸಂವಹನ-ಮಾಹಿತಿ ಅಧಿಕಾರಿಗಳಾದ ಲ. ಸಿದ್ಧರಾಜು, ಡಾ ಜಗದೀಶ್ ಹೊಳ್ಳ, ಲ. ಜಾರ್ಜ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.