Rosa Mystica PU College, Kinnikambla. “Mystica’s Got Talents” / ರೋಸಾ ಮಿಸ್ಟಿಕಾ ಪಿಯು ಕಾಲೇಜು, ಕಿನ್ನಿಕಂಬಳ. “ಮಿಸ್ಟಿಕಾಸ್ ಗಾಟ್ ಟ್ಯಾಲೆಂಟ್ಸ್”

Report by  Mrs Supriya J Lopis.

“All of us not have equal talent. But , all of us have an equal opportunity to develop our talents”.  APJ Abdul Kalam.

26 August 2023 : To unravel the hidden talents of our young blooming students, we at Rosa Mystica P.U.College Kinnikambla organized Talents fest to showcase their hidden talents in the college auditorium from 9:00 am to 4 pm.

The Joyful event started by invoking God’s blessings through a prayer song. Rev Sr Gracy Monica, the correspondent of the College wished well for the program.  The Chief Guest, Mr. Aravind Vivek, Director of A V Studios and a good singer, musician, anchor and  a recipient of various awards. Rev. Fr. Rudolph Ravi Dsa, the  Parish Priest  inaugurated the event.

Sr.Sadhana B.S, the Principal of  the College welcomed the gathering. 

Rev  Fr.Rudolf Ravi Dsa in his inaugural  address called the students to open up their talents and participate wholeheartedly for the total development and growth.

The Chief Guest Mr. Aravind Vivek stimulated the students from his  personal life experience.  He highlighted the importance of leadership qualities and called  the students to be a leader not the followers. Mr Arvind was honoured for his numerous achievements.

Talents day consisted of 19 events in which around 150 students  actively participated. The  Competitions viz.,  Drawing, solo and group singing, cooking without fire, face painting, nail art, mehendi, rangoli, essay writing, Elocution, quiz, flower arrangement,  solo and group dance, fancy dress, mime, Madact, Pick and act etc.,  Judges for the competition  were Viran Cletan Veiges, a English Lecturer, Manuel Tellis,  a musician.   The program was compered  Mr Avil Renil D’Silva and v proposed vote of thanks by Mrs Deepa Anchan.

ರೋಸಾ ಮಿಸ್ಟಿಕಾ ಪಿಯು ಕಾಲೇಜು, ಕಿನ್ನಿಕಂಬಳ. “ಮಿಸ್ಟಿಕಾಸ್ ಗಾಟ್ ಟ್ಯಾಲೆಂಟ್ಸ್”


“ನಮ್ಮೆಲ್ಲರಿಗೂ ಸಮಾನ ಪ್ರತಿಭೆ ಇಲ್ಲ. ಆದರೆ, ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶವಿದೆ”. ಎಪಿಜೆ ಅಬ್ದುಲ್ ಕಲಾಂ
26 ಆಗಸ್ಟ್ 2023 : ನಮ್ಮ ಯುವ ಅರಳುತ್ತಿರುವ ವಿದ್ಯಾರ್ಥಿಗಳ ಗುಪ್ತ ಪ್ರತಿಭೆಯನ್ನು ಬಿಚ್ಚಿಡಲು, ನಾವು ರೋಸಾ ಮಿಸ್ಟಿಕಾ ಪಿಯು ಕಾಲೇಜು ಕಿನ್ನಿಕಂಬಳದಲ್ಲಿ ಅವರ ಗುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಟ್ಯಾಲೆಂಟ್ಸ್ ಫೆಸ್ಟ್ ಅನ್ನು ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 9:00 ರಿಂದ ಸಂಜೆ 4 ರವರೆಗೆ ಆಯೋಜಿಸಿದ್ದೇವೆ.
ಪ್ರಾರ್ಥನಾ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಕೋರುವ ಮೂಲಕ ಸಂತೋಷದಾಯಕ ಕಾರ್ಯಕ್ರಮವು ಪ್ರಾರಂಭವಾಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಕರೆಸ್ಪಾಂಡೆಂಟ್ ವಂದನೀಯ ಗ್ರೇಸಿ ಮೋನಿಕಾ ಶುಭ ಹಾರೈಸಿದರು. ಮುಖ್ಯ ಅತಿಥಿ, ಶ್ರೀ ಅರವಿಂದ್ ವಿವೇಕ್, ನಿರ್ದೇಶಕರು, ಎ ವಿ ಸ್ಟುಡಿಯೋಸ್ ಮತ್ತು ಉತ್ತಮ ಗಾಯಕ, ಸಂಗೀತಗಾರ, ನಿರೂಪಕ ಮತ್ತು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ರೆ.ಫಾ. ಪಂ.ಅಧ್ಯಕ್ಷ ರುಡಾಲ್ಫ್ ರವಿ ದಾಸ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಸಾಧನಾ ಬಿ.ಎಸ್ ಸ್ವಾಗತಿಸಿದರು.
ರೆ.ಫಾ.ರುಡಾಲ್ಫ್ ರವಿ ಡಿಸಾ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೆರೆಯಲು ಮತ್ತು ಸಂಪೂರ್ಣ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಪೂರ್ಣ ಹೃದಯದಿಂದ ಭಾಗವಹಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿ ಶ್ರೀ ಅರವಿಂದ ವಿವೇಕ್ ಅವರು ತಮ್ಮ ವೈಯಕ್ತಿಕ ಜೀವನದ ಅನುಭವದಿಂದ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. ನಾಯಕತ್ವದ ಗುಣಗಳ ಮಹತ್ವವನ್ನು ತಿಳಿಸಿದ ಅವರು ವಿದ್ಯಾರ್ಥಿಗಳನ್ನು ಹಿಂಬಾಲಕರಲ್ಲ ನಾಯಕರಾಗಿ ಎಂದು ಕರೆ ನೀಡಿದರು. ಶ್ರೀ ಅರವಿಂದ್ ಅವರ ಹಲವಾರು ಸಾಧನೆಗಳಿಗಾಗಿ ಸನ್ಮಾನಿಸಲಾಯಿತು.

ಪ್ರತಿಭಾ ದಿನಾಚರಣೆಯು 19 ಕಾರ್ಯಕ್ರಮಗಳನ್ನು ಒಳಗೊಂಡಿತ್ತು, ಇದರಲ್ಲಿ ಸುಮಾರು 150 ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು. ಚಿತ್ರಕಲೆ, ಏಕವ್ಯಕ್ತಿ ಮತ್ತು ಸಮೂಹ ಗಾಯನ, ಬೆಂಕಿಯಿಲ್ಲದ ಅಡುಗೆ, ಮುಖವರ್ಣಿಕೆ, ನೇಲ್ ಆರ್ಟ್, ಮೆಹೆಂದಿ, ರಂಗೋಲಿ, ಪ್ರಬಂಧ ಬರವಣಿಗೆ, ಭಾಷಣ, ರಸಪ್ರಶ್ನೆ, ಹೂವಿನ ಜೋಡಣೆ, ಏಕವ್ಯಕ್ತಿ ಮತ್ತು ಗುಂಪು ನೃತ್ಯ, ಫ್ಯಾನ್ಸಿ ಡ್ರೆಸ್, ಮೈಮ್, ಮ್ಯಾಡಾಕ್ಟ್, ಪಿಕ್ ಮತ್ತು ಸ್ಪರ್ಧೆಗಳು ಆಕ್ಟ್ ಇತ್ಯಾದಿ., ಸ್ಪರ್ಧೆಯ ತೀರ್ಪುಗಾರರಾದ ವಿರಾನ್ ಕ್ಲೆಟನ್ ವೆಗೆಸ್, ಇಂಗ್ಲಿಷ್ ಉಪನ್ಯಾಸಕರು, ಮ್ಯಾನುಯೆಲ್ ಟೆಲ್ಲಿಸ್, ಸಂಗೀತಗಾರ. ಕಾರ್ಯಕ್ರಮವನ್ನು ಶ್ರೀ ಅವಿಲ್ ರೆನಿಲ್ ಡಿಸಿಲ್ವಾ ನಿರೂಪಿಸಿದರು ಮತ್ತು ಶ್ರೀಮತಿ ದೀಪಾ ಅಂಚನ್ ಧನ್ಯವಾದವನ್ನು ಪ್ರಸ್ತಾಪಿಸಿದರು.

ಆಗಸ್ಟ್ 30ರಂದು ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ “ಎತ್ತರ” ಕಾದಂಬರಿಗೆ ಪ್ರದಾನ ಮತ್ತು ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ (ತಳಿಕಂಡಿ) ಬಿಡುಗಡೆ

ಕುಂದಾಪುರ: ಆಗಸ್ಟ್ 30ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ತಳಿಕಂಡಿ (ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ) ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲೇಖಕ ಇಂದ್ರ ಕುಮಾರ್ ಹೆಚ್.ಬಿ ಅವರ “ಎತ್ತರ” ಕಾದಂಬರಿಗೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಐ.ಎ.ಎಸ್. ಇವರು ತಳಿಕಂಡಿ (ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ) ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
ಡಾ. ಹೆಚ್.ಶಾಂತಾರಾಮ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯ ಕೆ.ಶಾಂತಾರಾಮ್ ಪ್ರಭು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಚಾಲನ ಕಾರ್ಯಕ್ರಮಕ್ಕೆ ಆಹ್ವಾನ – ಬ್ಲಾಕ್ ಕಾಂಗ್ರೆಸ್ ಕುಂದಾಪುರ-ಕುಂದಾಪುರದಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮ ಆಯೋಜಿಸಿದ ಸ್ಥಳ ಮತ್ತು ವಿವರಗಳಿಗೆ ತಪ್ಪದೆ ಓದಿ -ನಿಮ್ಮ ಮೊಬಾಯ್ಲ್ ಫೋನುಗಳನ್ನು ತನ್ನಿ

ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲ ರೂ. 2000/- ಗಳನ್ನು ನೀಡುವ ಗ್ರಹಲಕ್ಷ್ಮಿ ಯೋಜನೆಯನ್ನು ಕರ್ನಾಟಕದ ಸರ್ಕಾರ ಜಾರಿಗೆ ತಂದಿದೆ. ಈಗಾಗಲೇ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ದಿನಾಂಕ: 30-08-2023 ರಂದು ಮೈಸೂರಿನಲ್ಲಿ ಗ್ರಹಲಕ್ಷ್ಮೀ ಯೋಜನೆಯನ್ನು ಮಾನ್ಯ ಮುಖ್ಯ ಮಂತ್ರಿಗಳು ಲೋಕಾರ್ಪಣೆ ಗೊಳಿಸಲಿದ್ದು, ಸದರಿ ಕಾರ್ಯಕ್ರಮಕ್ಕೆ ಎಲ್ಲಾ ಫಲಾನುಭೂಮಿಗಳು, ಸಾರ್ವಜನಿಕರು ,ಭಾಗಿಯಾಗಲು ಬ್ಲಾಕ್ ಕಾಂಗ್ರೆಸ್ ಕುಂದಾಪುರ ವ್ಯಾಪ್ತಿಯ ವಾರ್ಡ್ ಹಂತದಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಟಿ.ವಿ/ ಎಲ್.ಇ.ಡಿ ಪರದೇ ವ್ಯವಸ್ಥಗೊಳಿಸಲಾಗುತ್ತದೆ. ಸದರಿ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಫಲಾನುಭೂಮಿಗಳು, ಚುನಾಯಿತ ಜನಪ್ರತಿನಿಧಿಗಳು ಹಾಜರಾಗಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ.

ಅರ್ಹ ಫಲಾನುಭವಿಗಳು ಕಾರ್ಯಕ್ರಮಕ್ಕೆ ಬರುವಾಗ ನಿಮ್ಮ ಮೊಬಾಯ್ಲ್ ಫೋನುಗಳನ್ನು ತನ್ನಿ

ಫಲಾನುಭೂಮಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಸಂದೇಶ ಬರುವುದರಿಂದ ನೋಂದಾಯಿತ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಯೊಂದಿಗೆ ಜೋಡಣ ಮಾಡಿಕೊಂಡಿರುವ ಮೊಬೈಲ್ ಫೋನ್ಗಳೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಬೇಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಕಾರ್ಯಕ್ರಮ ಆಯೋಜಿಸಿದ ಸ್ಥಳದ ವಿವರ.

ಕಥೊಲಿಕ್ ಸಭಾ ಪಡುಕೋಣೆ ಘಟಕದ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಕುಂದಾಪುರ, ಆ.28: ಕಥೊಲಿಕ್ ಸಭಾ ಪಡುಕೋಣೆ ಘಟಕದ ವತಿಯಿಂದ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರವು 27 ರಂದು ಆದಿತ್ಯವಾರ ಪಡುಕೋಣೆ ಚರ್ಚ್ ಹಾಲಿನಲ್ಲಿ ನೆರವೇರಿತು       

   ಶಿಬಿರವನ್ನು  ಪಡುಕೋಣೆ ಚರ್ಚಿನ ಚರ್ಚಿನ  ಧರ್ಮಗುರುಗಳಾದ ವಂ| ಫ್ರಾನ್ಸಿಸ್ ಕರ್ನೆಲಿಯೋ  ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚಿಕ್ಕಮರಿ ಮತ್ತು ಮುಖ್ಯ ಅತಿಥಿಯಾಗಿ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕರಾದ ಜೈಕರ್ ಶೆಟ್ಟಿ ಅವರು ಭಾಗವಹಿಸಿದ್ದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೋಲಿಕ್ ಸಭಾ  ಅಧ್ಯಕ್ಷರಾದ ವಿನಯ್ ಡಿ ಅಲ್ಮೇಡ  ಅವರು ವಹಿಸಿ ಸ್ವಾಗತ ಕೋರಿದರು. ರಕ್ತದಾನ ಶಿಬಿರಕ್ಕೆ  ಸಂಘಟನೆಗಳಾದ ಡಿ ವೈ ಎಫ್ ಐ ದಲಿತ ಸಂಘರ್ಷ ಸಮಿತಿ, ಚರ್ಚಿನ ಆರೋಗ್ಯ ಆಯೋಗ, ಸ್ತ್ರೀ ಸಂಘಟನೆ, ಐಸಿಐಎಂ,ಪಡುಕೋಣೆ ಸ್ಪೋರ್ಟ್ಸ್ ಅಂಡ್ ಎಜುಕೇಶನ್ ಟ್ರಸ್ಟ್,  ಪಯಣ ಗ್ರೂಪ್,  94- 95 ಬ್ಯಾಚ್ ಸ್ಟೂಡೆಂಟ್ಸ್ ವಿಷನ್ ಪಾಲ್ ಸಂಘಟನೆಯವರು ಜೊತೆ ನೀಡಿದ್ದರು.

   ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಕೆನಡಿ ಪಿರೇರಾ  ಕಾರ್ಯದರ್ಶಿಯಾದ ಅಲೆಕ್ಸ್ ಆಂಟನಿ ಡಿಸೋಜಾ ಆಯೋಗ ಸಂಯೋಜಕರಾದ ವಿನ್ಸೆಂಟ್ ಡಿಸೋಜಾ ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ 96 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

    ಕಾರ್ಯಕ್ರಮವನ್ನು ಶಾಂತಿ ಅಲ್ಮೇಡಾ ನಿರ್ವಹಿಸಿದರು ವಿನ್ಸೆಂಟ್ ಡಿಸೋಜಾ ರವರು ಧನ್ಯವಾದ ಸಲ್ಲಿಸಿದರು.

ಯುವಕ ಸಮಾಜ, ಕುಂದಾಪುರ ಇದರ ವತಿಯಿಂದ ಜಿ.ಎಸ್.ಬಿ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಯುವಕ ಸಮಾಜ, ಕುಂದಾಪುರ ಇದರ ವತಿಯಿಂದ ತಾಲೂಕಿನೊಳಗಿನ ಕಾಲೇಜುಗಳಲ್ಲಿ, ಪದವಿ ಪೂರ್ವ, ಪದವಿ ಹಾಗೂ ತಾಂತ್ರಿಕ ಶಿಕ್ಷಣ ತರಗತಿಗಳಲ್ಲಿ ಕಲಿಯುತ್ತಿರುವ ಜಿ.ಎಸ್.ಬಿ. ಸಮಾಜದ ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಫಾರ್ಮ್‍ನ್ನು ಈ ಕೆಳಗಿನ ವಿಳಾಸದಲ್ಲಿ ಪಡೆಯಬಹುದು ಅಥವಾ ಸ್ವಂತ ವಿಳಾಸ ಬರೆದ ಹಾಗೂ ಸಾಕಷ್ಟು ಅಂಚೆ ಚೀಟಿ ಹಚ್ಚಿದ ಲಕೋಟೆಯನ್ನು ಲಗತ್ತಿಸಿ ಅರ್ಜಿ ಫಾರ್ಮ್‍ಗಳಿಗಾಗಿ ಬರೆದುಕೊಳ್ಳಬೇಕಾಗಿ ಪ್ರಕಟಿಸಲಾಗಿದೆ.
ಭರ್ತಿ ಮಾಡಿದ ಅರ್ಜಿ ತಲುಪಲು ಕೊನೆಯ ದಿನಾಂಕ 12-09-2023 ಆಗಿರುತ್ತದೆ.
ವಿಳಾಸ : ಕೆ. ದಿವಾಕರ ಭಟ್, ಮಥುರಾ ಇಲೆಕ್ಟ್ರಾನಿಕ್ಸ್, ರಥಬೀದಿ, ಕುಂದಾಪುರ-576201. ಈ ವಿಳಾಸದಲ್ಲಿ ಅರ್ಜಿ ಫಾರ್ಮ್‍ನ್ನು ಪಡೆಯಬಹುದು.

ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಕುಂದಾಪುರದಲ್ಲಿ ಬೃಹತ್‌ ಪ್ರತಿಭಟನೆ

ಕುಂದಾಪುರ: ಅಮಾನುಷವಾಗಿ ಹತ್ಯೆಯಾದ ನಮ್ಮೆಲ್ಲರ ಮನೆ ಮಗಳಾದ ಸೌಜನ್ಯ ಅವರಿಗೆ ನ್ಯಾಯ ಒದಗಿಸಬೇಕು ಎನ್ನುವ ಉದ್ದೇಶಕ್ಕಾಗಿ ಆರಂಭಿಸಲಾದ ಜನಶಕ್ತಿಯ ಹೋರಾಟ, ನಾಡಿನಾದ್ಯಂತ ವಿಸ್ತರಣೆಯಾಗಲಿದೆ. ಈ ಅನ್ಯಾಯದ. ವಿರುದ್ಧ: ನಾವು: ಮಾತನಾಡಿದರೆ ನಮ್ಮಮೇಲೆ ಪ್ರಕರಣ ದಾಖಲಾಗುತ್ತದೆ. ಹೀಗಾಗಿ ಜನ ಸಮೂಹವೇ ಈ ಕುರಿತು ಮಾತನಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ. ಹೇಳಿದ್ದಾರೆ.

ಕುಂದಾಪುರ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ಶನಿವಾರ ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ನಡೆದ ಬೃಹತ್‌ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಸನಾತನ ಹಿ೦ದೂ ಧರ್ಮದ ಮಗಳಿಗಾದ ಅನ್ಯಾಯದ ವಿರುದ್ಧ ಸಮಸ್ತ ಸಮಾಜ ಒಂದಾಗಿ ನಿಲ್ಲಬೇಕಾಗಿದೆ. ಸೌಜನ್ಯ ಹತ್ಯೆಯನ್ನು ಮಾಡಿದ ಪಾಪಿಗಳನ್ನು ಕಾನೂನಿನ ಚೌಕಟ್ಟಿನ ಒಳಗೆ ಕಳುಹಿಸಲಾಗದ ಅಸಮರ್ಥರು ನಾವಾಗಬಾರದು ಎನ್ನುವ ಉದ್ದೇಶದಿಂದ ನ್ಯಾಯಕ್ಕಾಗಿ ಜನತಾ ದೇಗುಲದಲ್ಲಿ ನ್ಯಾಯದ ಬಾಗಿಲು ತಟ್ಟುತ್ತಿದ್ದೇವೆ. ನಾಡಿನ ಜನರೇ ಆಕೆಯನ್ನು ಕೊ೦ದವರು ಯಾರು ಎನ್ನುವುದನ್ನು ತೀರ್ಮಾನ ಮಾಡಲಿ ಎಂದು ಅವರು ಹೇಳಿದರು.

ಯಾವುದೇ ಕಾನೂನಿನ ಮನೆಬಾಗಿಲನ್ನು ತಟ್ಟುವುದಿಲ್ಲ. ಜನಸಮೂಹದ ಮನೆಬಾಗಿಲನ್ನು ತಟ್ಟುತ್ತಿದ್ದೇವೆ. ಜನಗಳ ಮುಂದೆ ಹೋಗಿ ಸತ್ಯವನ್ನು ಹೇಳುತ್ತೇವೆ. ಸೌಜನ್ಯಳನ್ನು ಕೊಂದವರು ಯಾರು ಎಂದು ಜನಗಳೇ ಇಂದು ತೀರ್ಮಾನ ಮಾಡಬೇಕು. ಅಧರ್ಮ ಮಾಡುವ ಯಾವ ಪಾಪಿಯೂ ಈ ಮಣ್ಣಲ್ಲಿ ಬದುಕಬಾರದು. ಸನಾತನ ಹಿಂದೂ ಧರ್ಮದ ತಳಪಾಯ ಇಂದು ಅತ್ಯಾಚಾರದ ಕೂಪಕ್ಕೆ ಬಲಿಯಾಗುತ್ತಿದೆ. ಇದರ ವಿರುದ್ದ ಇಡೀ ಹಿಂದೂ ಸಮಾಜ ಎದ್ದು ಉತ್ತರಿಸಬೇಕು. ಜನಗಳ ತೀರ್ಮಾನದ ಮುಂದೆ ಯಾವುದು ಕೂಡ ನಿಲ್ಲುವುದಿಲ್ಲ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

   ಹನ್ನೊಂದು ವರ್ಷದ ಹಿಂದೆ ನಮ್ಮ ವಿರುದ್ದ ಪ್ರತಿಭಟನೆಗಳಾದ ಅತೀ ಹೆಚ್ಚು ಜನರು ಆಗಮಿಸಿದ್ದು ಕುಂದಾಪುರದವರು. ಹನ್ನೊಂದು ವರ್ಷಗಳ ಬಳಿಕ ನ್ಯಾಯದೇವತೆ ಅಣ್ಣಪ್ಪ, ಮಂಜುನಾಥ ಸ್ವಾಮಿ ನಿಮ್ಮೆಲ್ಲರ ಕಣ್ಣು ತೆರೆಸಿದ್ದಾರೆ. ಸತ್ಯದ ಸ್ವರೂಪವನ್ನು ಇಲ್ಲಿ ಕಾಣುತ್ತಿದ್ದೇನೆ. ಸೌಜನ್ಯ ಪರ ಪ್ರತಿಭಟನೆಗಳು ತೀವ್ರಗೊಂಡ ಬಳಿಕ ಗ್ರಾಮ-ಗ್ರಾಮಗಳ ದೇವಸ್ಥಾನಗಳಿಗೆ ಹಣ ಕೊಟ್ಟು ದೇವಸ್ಥಾನದ ಮಂಡಳಿಯನ್ನು ಖರೀದಿ ಮಾಡುತ್ತಿರುವುದು ಆರಂಭವಾಗಿದೆ. ಭಕ್ತಿಯ ಶಿಖರ ಧರ್ಮಸ್ಥಳದ ವಿರುದ್ದ ನಾವು ಸುಳ್ಳು ಹೇಳಿದ್ದರೆ ಇಷ್ಟೊತ್ತಿಗಾಗಲೇ ಸತ್ತು ಮಣ್ಣಾಗುತ್ತಿದ್ದೆವು ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

   ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ನನ್ನನ್ನು ಧರ್ಮಸ್ಥಳಕ್ಕೆ ಬರಲು ಬಿಡುವುದಿಲ್ಲ ಎಂದು ಅಲ್ಲಿನ ಮಹಿಳೆಯರು ಹೇಳಿಕೆ ನೀಡಿದ್ದನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಧರ್ಮಸ್ಥಳ ಮಾತ್ರವಲ್ಲ, ಮಗಳಿಗೆ ನ್ಯಾಯ ಕೊಡಿಸಲು ಯಾರು ಪ್ರತಿಭಟನೆಗೆ ಕರೆಯುತ್ತಾರೋ ಅಲ್ಲಿಗೆ ಹೋಗಿಯೇ ಹೋಗುತ್ತೇನೆ. ಧರ್ಮಸ್ಥಳದಲ್ಲಿ ಮಗಳ ಸಾವಿನ ಕುರಿತಾದ ನ್ಯಾಯಕ್ಕಾಗಿ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸುವೆ. ಅತ್ಯಾಚಾರದ ಹಿಂದೆ ಯಾರಿದ್ದಾರೋ ಎಲ್ಲರಿಗೂ ಶಿಕ್ಷೆ ಕೊಡಿ ಎಂದು ಅಣ್ಣಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸಿ ಬರುವೆ. ಮಗಳ ಸಾವಿನ ಬಳಿಕ ಬದುಕುವ ವಿಶ್ವಾಸವನ್ನೇ ಕಳೆದುಕೊಂಡಿದ್ದೆವು. ಮಹೇಶಣ್ಣನ ಸತತ ಹೋರಾಟಗಳಿಂದ ನ್ಯಾಯ ಸಿಗುವ ನಂಬಿಕೆ ಇದೆ. ಇದೇ ಅಚಲವಾದ ನಂಬಿಕೆಯಿಂದ ಇಂದು ನಾವೆಲ್ಲಾ ಮನೆ-ಮಂದಿ ಬದುಕಿದ್ದೇವೆ. ನನ್ನ ಮಗಳಿಗಾದ ಅನ್ಯಾಯ ಯಾರ ಮನೆ ಮಗಳಿಗೂ ಆಗಬಾರದು. ಕೊನೆತನಕ ನೀವೆಲ್ಲರೂ ನಮ್ಮ ಜೊತೆಗಿರಿ ಎಂದು ಸೆರಗೊಡ್ಡಿ ಕಣ್ಣೀರಿಟ್ಟು ಬೇಡಿಕೊಂಡರು.

ಸೌಜನ್ಯ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಲಾಯಿತು. ಹೋರಾಟದ ಪ್ರಮುಖ ಸುಧೀರ್ ಮಲ್ಯಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಾಪ ಶೆಟ್ಟಿ ಉಳ್ತೂರು ನಿರೂಪಿಸಿದರು.

ಕುಂದಾಪುರದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯೊಂದಕ್ಕೆ ಸಾರ್ವಜನಿಕರು ಸಾಕ್ಷಿಯಾದರು. ತಾ.ಪಂ ಮುಂಭಾಗದ ಟ್ಯಾಕ್ಸಿ ನಿಲ್ದಾಣ, ಶಾಸ್ತ್ರೀವೃತ್ತದ ಆಟೋ ರಿಕ್ಷಾ ನಿಲ್ದಾಣವನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಿ ಪ್ರತಿಭಟನೆಗೆ ಸ್ಥಳವಕಾಶ ಮಾಡಿಕೊಡಲಾಯಿತು. ನಗರಕ್ಕೆ ಪ್ರವೇಶ ಕಲ್ಪಿಸುವ ಸರ್ವೀಸ್ ರಸ್ತೆಯ ಒಂದು ಪಾರ್ಶ್ವಕ್ಕೆ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಪೊಲೀಸರು ಸೂಕ್ತ ವ್ಯವಸ್ಥೆ ಕಲ್ಪಿಸಿದರು. ಪ್ರತಿಭಟನೆಗೆ ಬಂದ ಜನರ ಬೈಕ್, ಕಾರು ಹಾಗೂ ಇತರ ವಾಹನಗಳ ಪಾರ್ಕಿಂಗ್ ಆರ್.ಎನ್ ಶೆಟ್ಟಿ ಸಭಾಂಗಣದ ಪಾರ್ಕಿಂಗ್‍ನಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು. ಕುಂದಾಪುರ-ಬೈಂದೂರಿನ ಮೂಲೆಮೂಲೆಗಳಿಂದಲೂ ಕಿತ್ತೆದ್ದು ಬಂದ ಜನಸಮೂಹಕ್ಕೆ ಸ್ಥಳಾವಕಾಶ ಸಾಲದೆ ಶಾಸ್ತ್ರೀವೃತ್ತದ ಅಕ್ಕ-ಪಕ್ಕದ ಮಹಡಿಗಳ ಮೇಲೆ, ಫ್ಲೈಓವರ್ ಮೇಲೆ ನಿಂತು ವೀಕ್ಷಿಸಿದ ದೃಶ್ಯಗಳು ಕಂಡುಬಂದವು. ಜನಾಗ್ರಹ ಸಭೆ ಆರಂಭಕ್ಕೂ ಮುನ್ನ ನೆಹರೂ ಮೈದಾನದಿಂದ ಆರಂಭಗೊಂಡ ಬೃಹತ್ ಪಾದಯಾತ್ರೆ ನಗರದ ಮಾಸ್ತಿಕಟ್ಟೆ ಜಂಕ್ಷನ್ ಸುತ್ತುವರಿದು ಬಳಿಕ ಶಾಸ್ತ್ರೀ ವೃತ್ತದಲ್ಲಿ ಸಮಾಪ್ತಿಗೊಂಡಿತು.

ಕುಂದಾಪುರದ ಡಿವೈಎಸ್ಪಿ ಬೆಳ್ಳಿಯಪ್ಪ, ಪ್ರೊಬೇಶನರಿ ಡಿವೈಎಸ್ಪಿ ರವಿ, ಉಡುಪಿ ನಗರ ಸಿಪಿಐ ಮಂಜಪ್ಪ, ಬ್ರಹ್ಮಾವರ ಸಿಪಿಐ ದಿವಾಕರ್, ಬೈಂದೂರು ಸಿಪಿಐ ಸವಿತ್ರ ತೇಜ್, ನಗರ ಠಾಣೆಯ ನಿರೀಕ್ಷಕ ನಂದಕುಮಾರ್, ನಗರ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ, ನಗರ ಅಪರಾಧ ವಿಭಾಗದ ಪಿಎಸ್‍ಐ ಪ್ರಸಾದ್, ವಿವಿಧ ಠಾಣೆಯ ಠಾಣಾಧಿಕಾರಿಗಳು ಹಾಜರಿದ್ದರು.

ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೊರ್ ಡ್ರೈವರ್ ಅಸೋಸಿಯೇಷನ್ (ರಿ) ವಾರ್ಷಿಕ ಮಹಾಸಭೆ

ಕುಂದಾಪುರ: ಅಭಿವೃದ್ಧಿ ಪಥದಲ್ಲಿರುವ ಕುಂದಾಪುರದ ಪರಿಸರಕ್ಕೆ ಆಟೋ ರಿಕ್ಷಾ, ಟ್ಯಾಕ್ಸಿ ,ಸೇವೆಯ ಕೊಡುಗೆ ಅಪಾರ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ತಿಳಿಸಿದರು.ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 42ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸಂಘಟಿತರಾಗಿ ಸವಾಲುಗಳನ್ನು ಎದುರಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಹೊಸ ಸದಸ್ಯರ ನೋಂದಣಿಗೆ ಸಹಕರಿಸ ಬೇಕು ಎಂದು ಹೇಳಿದರು ಮತ್ತು ವಾರ್ಷಿಕ ವರದಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಚಂದ್ರಶೇಖರ್ ಶೇರಿಗಾರ (ಅಣ್ಣಪ್ಪಣ್ಣ) ಮತ್ತು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಅವರನ್ನ ಸನ್ಮಾನಿಸಿ , ಗೌರವಿಸಲಾಯಿತು.

ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮಾಣಿ ಉದಯವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಸದಸ್ಯರಾದ ಚಂದ್ರ ಆಚಾರಿ ಮತ್ತು ಅಬ್ಬು ಸಾಲ್ಯಾರವರಿಗೆ ಆರ್ಥಿಕ ಸಹಾಯವನ್ನು ಮಾಡಲಾಯಿತು.

ಸಭೆಯಲ್ಲಿ ಗೌರವ ಅಧ್ಯಕ್ಷರಾದ ಭಾಸ್ಕರ ಪೂಜಾರಿ ವಕ್ವಾಡಿ, ಉಪಾಧ್ಯಕ್ಷರಾದ ಶಂಕರ್ ಕುಂದರ್, ಮಹಾಬಲ, ಶೇಖರ್ ಪೂಜಾರಿ, ಜೇಮ್ಸ್ ರೆಬೆರೋ ಭಾಸ್ಕರ್ ಶೇರಿಗಾರ ,ವಿ ಎನ್.ಗುಂಡು ಪಾರಿಜಾತ ,ಜೊತೆ ಕಾರ್ಯದರ್ಶಿ ಅಸ್ಲಾಂ, ಆಲ್ಫೋನ್ಸ್ ಕ್ರಾಸ್ತ, ವಿಜಯ ಪೂಜಾರಿ ,ಸಲಹೆಗಾರರಾದ ಗೋಪಾಲ ಪೂಜಾರಿ, ಜಯರಾಮ ಶೆಟ್ಟಿ ಕಾಳಾವರ ಅಣ್ಣಪ್ಪ ಶೇರಿಗಾರ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಮಹಾಸಭೆಗೆ ಸದಸ್ಯರಾದ ಸದಾನಂದ ಶೇರಿಗಾರ್ ಸ್ವಾಗತಿಸಿ ಜನಾರ್ದನ್ ಖಾರ್ವಿಯವರು ವಂದಿಸಿದರು.

ಶ್ರಿ ಕ್ಷೇತ್ರ ಧರ್ಮಾಧಿಕಾರಿಗಳ ತೇಜೋವಧೆ ಮಾಡಿದವರ ಮೇಲೆ ಕ್ರಮಕೈಗೊಳ್ಳಲು ಆಗ್ರಹ


ದಿನಾಂಕ 25.08.2023 ರಂದು ಕುಂದಾಪುರ ತಾಲೂಕಿನ ಶಾಸ್ತ್ರಿ ವೃತ್ತದಲ್ಲಿ ನಡೆದ ಸೌಜನ್ಯ ಪ್ರಕರಣದ
ಮರು ತನಿಖೆಗಾಗಿ ನಡೆದ ಜನಾಗ್ರಹ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ವ್ಯಯುಕ್ತಿಕ ತೇಜೋವಧೆ ಮಾಡಿರುವುದು ತೀರಾ ಖಂಡನೀಯವಾಗಿದೆ. ಶ್ರೀ ಮಹೇಶ್ ಶೆಟ್ಟಿ ತಿಮರೋಡಿಯವರು ಬಹಿರಂಗ ಸಭೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಅಸತ್ಯ ಮತ್ತು ದ್ವೇಷದ ಬೀಜ ಬಿತ್ತಿರುವುದು, ತಾವು ಹೇಳಿದ ಕಟ್ಟುಕತೆಯನ್ನೇ ಹಳ್ಳಿ ಹಳ್ಳಿಗಳಲ್ಲಿ ಅಪಪ್ರಚಾರ ಮಾಡುವಂತೆ ಜನರಿಗೆ ಸಾರ್ವಜನಿಕ ಕರೆ ಕೊಟ್ಟಿರುವುದು ಸಮಾಜದ ಶಾಂತಿ ಮತ್ತು ವ್ಯವಸ್ಥೆಯನ್ನು ಹಾಳುಮಾಡುವ ಕೃತ್ಯವಾಗಿದೆ ಹಾಗೂ ಆಧಾರರಹಿತವಾಗಿ ವ್ಯಯುಕ್ತಿಕ ನಿಂದನೆ, ಧಾರ್ಮಿಕ ನಿಂದನೆ ಕಾನೂನಾತ್ಮಕವಾಗಿ ಅಪರಾಧವಾಗಿದೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಈ ಸಭೆಯಲ್ಲಿ ಶ್ರೀ ವೀರೇಂದ್ರ ಹೆಗ್ಗಡೆರವರು ಹಾಗೂ ಧರ್ಮಸ್ಥಳದ ಬಗ್ಗೆ ಯಾವುದೇ ಅವಮಾನಕರ ಮತ್ತು ತೇಜೋವಧೆ ಮಾತುಗಳನ್ನಾಡದಂತೆ ನಿಬರ್ಂಧಿಸಬೇಕೆಂದು ಉಡುಪಿ ಜಿಲ್ಲಾ ಸುಪರಿಟೆಂಡೆಂಟ್ ಆಫ್ ಫೋಲಿಸ್ ಇವರಿಗೆ ಕುಂದಾಪುರ ಡಿ ವೈ ಎಸ್ ಪಿ ಬೆಳ್ಳಿಯಪ್ಪ ಮೂಲಕ ಮನವಿ ನೀಡಿದಾಗಲು ಸದ್ರಿ ಸಭೆಯಲ್ಲಿ ಪ್ರಚೋಧನಕಾರಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಲು ಪೋಲಿಸ್ ಇಲಾಖೆ ಅವಕಾಶ ನೀಡಿರುವುದನ್ನು ತೀವೃವಾಗಿ ಖಂಡಿಸುತ್ತೇವೆ. ಯಾವುದೇ ರೀತಿಯಲ್ಲಿ ಕ್ಷೇತ್ರದ ವಿರುದ್ಧ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡದಂತೆ ಕರ್ನಾಟಕ ಘನ ನ್ಯಾಯಾಲಯವು ನೀಡಿರುವ ಪ್ರತಿಬಂಧಕಾಜ್ಞೆಯನ್ನು ನೀಡಲಾಗಿದ್ದರೂ ಸಹ ಅದೇ ಪ್ರವೃತ್ತಿಯನ್ನು ಮುಂದುವರೆಸಿರುವ ಇವರು ನ್ಯಾಯಾಲಯದ ನಿಂದನೆ ಮಾಡಿರುತ್ತಾರೆ.
ಆದರೂ ಶ್ರೀಮತಿ ಕುಸುಮಾವತಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಪ್ರಚೋದನಕಾರಿ ಮಾತುಗಳನ್ನಾಡಲು ಅವಕಾಶ ಮಾಡಿಕೊಟ್ಟಿರುವುದು ಕಾನೂನು ಬಾಹಿರವಾಗಿದೆ. ಬಹಿರಂಗ ಸಭೆಯಲ್ಲಿ ಮಾತನಾಡಿದವರನ್ನು ಬಂಧಿಸಿ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ಕಾನೂನು ಕ್ರಮ ಕೈಗೊಳ್ಳದೆ ಇದ್ದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರ ಕಾನೂನು ಬಾಹಿರ ಕೃತ್ಯಕ್ಕೆ ಉಗ್ರ ಪ್ರತಿಭಟನೆ ಮಾಡುವ ಹಕ್ಕು ಶ್ರೀ ಕ್ಷೇತ್ರದ ಅಭಿಮಾನಿಗಳಾದ ನಮಗಿರುತ್ತದೆ.
ಶ್ರಿ ಕ್ಷೇತ್ರ ಧರ್ಮಸ್ಥಳ ಆಶ್ರಯದಲ್ಲಿ ನಡೆಯುವ ಹತ್ತಾರು ಯೋಜನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಮಂದಿಗೆ ಈ ವಿದ್ಯಮಾನ ನೋವನ್ನುಂಟುಮಾಡಿದೆ ಹಾಗೂ ವಿಶ್ವದಾದ್ಯಂತ ಇರುವ ಕೋಟ್ಯಾಂತರ ಭಕ್ತರು ಸೌಜನ್ಯ ಪ್ರಕರಣದ ಹೆಸರಲ್ಲಿ ಹೋರಾಟಗಾರರೆಂಬುವವರು ಮಾಡಿದ ಆಪಾದನೆಗಳನ್ನು ತಪ್ಪು ತಿಳಿಯುವ ಸಂಭವವಿರುತ್ತದೆ.
ಈ ಕಾರಣಕ್ಕಾಗಿ ಸೌಜನ್ಯ ಪ್ರಕರಣದ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳು ಹಾಗೂ ಅವರ ಕುಟುಂಬದ ವಿರುದ್ಧ ನೀಡಿದ ಹೇಳಿಕೆಗಳೆಲ್ಲಾ ದ್ವೇóಷದ ಹೇಳಿಕೆಗಳೆಂದು ಈ ಮೂಲಕ ತಿಳಿಯಪಡಿಸುತ್ತೇವೆ.
ಸನಾತನ ಧರ್ಮದ ಹೆಸರಿನಲ್ಲಿ ತಪ್ಪು ಮಾಹಿತಿ ನೀಡುತ್ತಾ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಆಶಯಗಳು ಧರ್ಮ ಶ್ರದ್ಧೆಯ ವಿರುದ್ಧವಾಗೇ ಇವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ವಿನಂತಿಸುತ್ತೇವೆ. ಕುಸುಮಾವತಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿರವರ ಹೇಳಿಕೆಗಳು ಎಲ್ಲವೂ ಪೂರ್ವಾಗ್ರಹ ಪೀಡಿತ, ಕಪೋಲ ಕಲ್ಪಿತ ಮತ್ತು ದ್ವೇಷದ ಹೇಳಿಕೆಗಳಾಗಿವೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ಕ್ಷೇತ್ರದ ಅಭಿಮಾನಿಗಳ ಪರವಾಗಿ ಅಪ್ಪಣ್ಣ ಹೆಗ್ಗಡೆ -ಮಾಜಿ ಶಾಸಕರು, ಜಿಲ್ಲಾ ಜನ ಜಾಗೃತಿ ವೇದಿಕೆಯ ಪರವಾಗಿ ರಟ್ಟಾಡಿ ನವೀನ್‍ಚಂದ್ರ ಶೆಟ್ಟಿ, ಪ್ರಗತಿ ಬಂಧು- ಸ್ವ ಸಹಾಯ ಸಂಘಗಳ ಒಕ್ಕೂಟದ ಪರವಾಗಿ ಗೀತಾಂಬ, ಚಂದ್ರಾವತಿ ಮತ್ತು ಪ್ರದೀಪ್ ಮಡಿವಾಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು, ಕುಂದಾಪುರ ಇವರು ಪೋಲೀಸ್ ಇಲಾಖೆಗೆ ದೂರು ನೀಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕರ್ನಾಟಕ ಗಾಂಧಿ ಹೆಸರಿನಿಂದ ಖ್ಯಾತಿ ಪಡೆದಿರುವ ನಾ.ಸು.ಹರ್ಡೀಕರ್ ಅವರ 48 ನೇ ಪುಣ್ಯಸ್ಮರಣೆ

ಕೋಲಾರ:- ಕರ್ನಾಟಕ ಗಾಂಧಿ ಹೆಸರಿನಿಂದ ಖ್ಯಾತಿ ಪಡೆದಿರುವ ನಾ.ಸು.ಹರ್ಡೀಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶಿಸ್ತು, ಧೈರ್ಯ ಹಾಗೂ ತ್ಯಾಗ ಮನೋಭಾವನೆಯನ್ನು ಹಿಂದೂಸ್ತಾನಿ ಸೇವಾದಳದ ಮೂಲಕ ಪರಿಚಯಿಸಿ ಸ್ವಾತಂತ್ರ್ಯ ಸಂಗ್ರಾಮವನ್ನು ಚುರುಕುಗೊಳಿಸಿದ ಮಹನೀಯರಲ್ಲಿ ಪ್ರಮುಖರೆಂದು ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಾ.ಸು.ಹರ್ಡೀಕರ್ ಅವರ 48 ನೇ ಪುಣ್ಯ ಸ್ಮರಣೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ಬಾಲ್ಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡರೂ, ಸ್ವಾತಂತ್ರ್ಯ ಸಂಗ್ರಾಮದತ್ತ ಆಕರ್ಷಿತರಾದರು, ಬಾಲಗಂಗಾಧರ ತಿಲಕ್‍ರ ಕೇಸರಿ ಪತ್ರಿಕೆಯ ಲೇಖನಗಳನ್ನು ಕನ್ನಡದಲ್ಲಿ ಅನುವಾದಿಸಿ ಕನ್ನಡಿಗರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸುತ್ತಿದ್ದರು. ವಿದೇಶದಲ್ಲಿ ವ್ಯಾಸಂಗ ಮಾಡಿ, ವೈದ್ಯರಾಗಿ ರೋಗಿಗಳ ಸೇವೆ ಮಾಡುತ್ತಲೇ ಮಹಾತ್ಮಗಾಂೀಜಿಯತ್ತ ಆಕರ್ಷಿತರಾದರು.
ರಾಷ್ಟ್ರಧ್ವಜ ಸಂಹಿತೆ ರೂಪಿಸುವುದರ ಜೊತೆಗೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಿಸ್ತು ಮೂಡಿಸುವ ಸಲುವಾಗಿಯೇ ಹಿಂದೂಸ್ತಾನಿ ಸೇವಾದಳವನ್ನು ನೂರು ವರ್ಷಗಳ ಹಿಂದೆ ಆರಂಭಿಸಿದ್ದರು. ಸ್ವಾತಂತ್ರ್ಯ ನಂತರ ಭಾರತ ಸೇವಾದಳ ರಾಜಕೀಯ ರಹಿತ ಸಂಘಟನೆಯಾಗಿ ಸೇವೆ ಮಾಡಲು ಯೋಜಿಸಿದರೆಂದರು. ಇಂತ ಸೇವಾದಳ ಚಟುವಟಿಕೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಾ.ಸು.ಹರ್ಡೀಕರ್ ಸ್ಥಾಪಿತ ಸೇವಾದಳ ಚಟುವಟಿಕೆಗಳು ನಡೆಯುವಂತಾಗಬೇಕೆಂದರು.
ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಸೇವಾದಳ ಚಟುವಟಿಕೆಗಳು ಹಾಗೂ ನಾ.ಸು.ಹರ್ಡೀಕರ್ ವ್ಯಕ್ತಿ ಚಿತ್ರಣವು ಪಠ್ಯಪುಸ್ತಕಗಳಲ್ಲಿ ಸೇರಿಸುವಂತಾಗಬೇಕೆಂದರು.
ಶ್ರೀನಿವಾಸಪುರ ಅಧ್ಯಕ್ಷ ಬಂಗವಾದಿ ನಾಗರಾಜ್ ಮಾತನಾಡಿ, ಸೇವಾದಳದ ಸೇವೆಗಾಗಿ ಬದುಕು ಧ್ಯೇಯವನ್ನು ಶಾಲಾ ಮಕ್ಕಳಿಗೆ ಬದುಕಾಗಿಸಬೇಕೆಂದರು.
ಕೋಲಾರ ಅಧ್ಯಕ್ಷ ಶ್ರೀರಾಮ್ ಮಾತನಾಡಿ, ರಾಷ್ಟ್ರಗೀತೆ, ರಾಷ್ಟ್ರಧ್ವಜ ಮಾಹಿತಿ ತರಬೇತಿ, ನಾಯಕತ್ವ ಶಿಬಿರಗಳ ಮೂಲಕ ಸೇವಾದಳ ಚಟುವಟಿಕೆಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆಯೆಂದರು.
ಬಂಗಾರಪೇಟೆ ಜಿಲ್ಲಾ ಪ್ರತಿನಿಧಿ ಚಿನ್ನಿ ವೆಂಕಟೇಶ್ ಮಾತನಾಡಿ, ಶೀಘ್ರವೇ ಬಂಗಾರಪೇಟೆ ತಾಲೂಕಿನಲಿ ಸೇವಾದಳ ಶಿಕ್ಷಕರ ಮಿಲಾಪ್ ಶಿಬಿರವನ್ನು ಆಯೋಜಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಸೇವಾದಳ ಪದಾಧಿಕಾರಿಗಳಾದ ಕೆ.ಜಯದೇವ್, ಚಾನ್‍ಪಾಷಾ, ಫಲ್ಗುಣ, ರಾಜೇಶ್‍ಸಿಂಗ್ ಇತರರು ಭಾಗವಹಿಸಿದ್ದರು.
ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರೂಪಿಸಿದರು. ಸರ್ವಧರ್ಮ ಪ್ರಾರ್ಥನೆ, ರಾಷ್ಟ್ರಗೀತೆಗಾಯನ ನೆರವೇರಿತು.
ಉತ್ತಮ ಶಿಕ್ಷಕರ ಆಯ್ಕೆ
ಭಾರತಸೇವಾದಳ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ನೀಡುವ ಸೇವಾದಳ ಉತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಶ್ರೀನಿವಾಸಪುರದ ಶಿಕ್ಷಕ ಅಶೋಕ್‍ರನ್ನು ಆಯ್ಕೆ ಮಾಡಲಾಯಿತು.
ಕೋಲಾರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಶೋಕ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.