ಶ್ರೀನಿವಾಸಪುರ: ದೇಶದ ಎಲ್ಲಾ ಬಡವರಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ಮತ್ತು ಯುವ ಸಮುದಾಯದವರಿಗೆ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಅನುಕೂಲಗಳನ್ನು ಅವಕಾಶಗಳನ್ನು ತಲುಪಿಸುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದ ಸಂಸದ ಎಸ್. ಮುನಿಸ್ವಾಮಿ.
ತಾಲ್ಲೂಕಿನ ದಳಸನೂರು, ಮಾಸ್ತೇನಹಳ್ಳಿ ಪಂಚಾಯಿತಿಗಳಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಅಂಚೆ ಇಲಾಖೆ ಗ್ರಾಮೀಣ ಬ್ಯಾಂಕ್ ಹಾಗು ವಿವಿಧÀ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುನಿಸ್ವಾಮಿ ಕೇಂದ್ರ ಸರ್ಕಾರ ಗ್ರಾಮೀಣ ಜನತೆ ಅಭಿವೃದ್ದಿ ಹೊಂದಬೇಕು ಎಂಬ ಉದ್ದೇಶದಿಂದ ನರೇಂದ್ರ ಮೋದಿ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ರೈತರ ಎಲ್ಲಾ ಸಮುದಾಯದವರ ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ಯೋಜನೆ, ಕೋವಿಡ್ ಲಸಿಕೆ, ಪಡಿತರ ಆಹಾರದಾನ್ಯ, ಉಜ್ವಲಯೋಜನೆ, ಫಸಲ್ ಬೀಮಾಯೋಜನೆ, ವಿಶ್ವಕರ್ಮ, ಇನ್ನೂ ಹಲವು ಯೋಜನೆಗಳು ಸೇರಿದಂತೆ 10 ವರ್ಷಗಳಲ್ಲಿ ಮೋದಿಯವರು ಜಾರಿಗೆ ತಂದ ಕಾರ್ಯಕ್ರಮಗಳಾಗಿದೆ ಎಂದರು.
ಕೇಂದ್ರ ಸರ್ಕಾರ ಜಾರಿಮಾಡಿರುವ ಯೋಜನೆಗಳು ದೇಶದ ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನೂ ಒಳಗೊಳ್ಳುವ ಯೋಜನೆಗಳಾಗಿದ್ದು, ಎಲ್ಲರಿಗೂ ತಲುಪಿಸುವ ಮೂಲಕ ಅವರಲ್ಲಿ ಆರ್ಥಿಕ ಬಲ ತುಂಬಲಿದೆ, ಮೋದಿ ಗ್ಯಾರಂಟಿ ಹೆಸರಿನಲ್ಲಿ ವಿಕಸಿತ ಬಾರತ ಸಂಕಲ್ಪಯಾತ್ರೆ ಆರಂಭವಾಗಿದ್ದು ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ, ಈವರೆಗೂ ಕೇಂದ್ರದ ಯೋಜನೆಗಳು ತಲುಪದೇ ಇರುವವರಿಗೆ ತಲುಪಿಸುವುದೇ ನಮ್ಮ ಉದ್ದೇಶ,
ಕೋಲಾರ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಎಂದೂ ಕಾಣದಂತಹ ಅಭಿವೃದ್ದಿ ಕಾರ್ಯಕ್ರಮಗಳು ನನ್ನ ಅವದಿಯಲ್ಲಿ ಆಗಿದೆ ಎಂದ ಮುನಿಸ್ವಾಮಿ.
ಈ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ನಾನು ಸಂಸದನಾಗಿ ಆಯ್ಕೆ ಆದಮೇಲೆ ಸಾವಿರಾರು ಕೋಟಿ ರೂಗಳ ಅನುದಾನಗಳನ್ನು ತಂದು ಅಭಿವೃದ್ದಿ ಪಡಿಸಿದ್ದೇನೆ 176 ಕಿ.ಮೀಟರ್ ಗ್ರಾಮೀಣ ರಸ್ತೆಗಳು, 2 ಲಕ್ಷ ಶೌಚಾಲಯಗಳು, 15 ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅನುದಾನ, ಚನೈ ಕಾರಿಡಾರ್ ಯೋಜನೆಗೆ 380 ಕೋಟಿ ಜಲಜೀವನ್ ಮಿಷನ್ ಯೋಜನೆಗೆ 1880 ಕೋಟಿ, ಅಮೃತ್ ಸರೋವರ ಯೋಜನೆ ಅಡಿಯಲ್ಲಿ ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ 1 ಕೋಟಿ 80 ಲಕ್ಷ, ಶ್ರೀನಿವಾಸಪುರ ಪಟ್ಟಣ ಸುತ್ತಾ ರಿಂಗ್ ರಸ್ಥೆಗೆ 10 ಕೋಟಿ ಹೀಗೆ ಹತ್ತು ಹಲವು ಯೋಜನೆಗಳು ತರುವ ಮುಖಾಂತರ ಈ ಜಿಲ್ಲೆಗಾಗಿ ಶ್ರಮಿಸಿದ್ದೇನೆ ಮತ್ತಷ್ಟು ಅಭಿವೃದ್ದಿಯಾಗಲು ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.
ಇದೇ ಕಾರ್ಯಕ್ರಮದಲ್ಲಿ ವಿವಿದ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಸಂಪೂರ್ಣವಾಗಿ ಜನರಿಗೆ ತಿಳಿಸಿದರು.
ಈ ಸಮಯದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಡಾ|| ವೇಣುಗೋಪಾಲ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುದೀರ್, ಐ.ಎ.ಎಸ್ ಅಧಿಕಾರಿ ಸಮೀರ್ ಶುಕ್ಲ, ಗ್ರಾಮ ಪಂಚಾಯಿತಿ ಅದ್ಯಕ್ಷ ಶ್ರೀನಿವಾಸ, ಉಪಾದ್ಯಕ್ಷ ಉಮಾದೇವಿ, ಪಿಡಿಓ ಸಿ.ಎಲ್ ಚಿನ್ನಪ್ಪ, ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಾಮಚಂದ್ರ, ಮುಖಂಡರಾದ ರೋಣೂರು ಚಂದ್ರ ಶೇಖರ್, ವಕೀಲ ಬಂಗವಾದಿ ನಾಗರಾಜ್, ಪಾಳ್ಯ ಗೋಪಾಲರೆಡ್ಡಿ, ಮಾಸ್ತೇನ ಹಳ್ಳಿ ರಾಜಣ್ಣ, ಕಾಡುದೇವಂಡಹಳ್ಳಿ ನಾಗೇಶ್, ಬಿಸನಹಳ್ಳಿ ಬೈಚೇಗೌಡ, ಲP್ಪ್ಷ್ಮಣ್ಗೌಡ, ಅಪ್ಪಿ ನಾರಾಯಣಸ್ವಾಮಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕ ಜಿ.ವೆಂಕಟೇಶ್, ಪಿ. ರಾಮಚಂದ್ರ ಇನ್ನೂ ಹಲವರು ಉಪಸ್ಥಿತರಿದ್ದರು.
ಸುದ್ದಿ- 2
ಶ್ರೀನಿವಾಸಪುರ: ಗ್ರಾಮ ಸಭೆಗಳಿಂದ ಜನರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಹೊದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲರೆಡ್ಡಿ ತಿಳಿಸಿದರು.
ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯಿತಿಯ ಅವರಣದಲ್ಲಿ ನಡೆದ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಗಳ ಅಭಿವೃದ್ದಿಯನ್ನು ಪಕ್ಷಾತೀತವಾಗಿ ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಗ್ರಾಮ ಸಭೆಯಲ್ಲಿ ವಿವಿದ ಸಮಸ್ಯಗಳು ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗ್ರಾಮಗಳ ಶ್ರಯಾಭಿವೃದ್ದಿಗಾಗಿ ಅಗತ್ಯವಿರುವ ಕಾರ್ಯಗಳು ಕುರಿತು ಚೆರ್ಚಿಸಲಾಯಿತು. ನರೇಗಾ ಕ್ರಿಯಾಯೋಜನೆ, ಸಮಗ್ರ ಸಹಭಾಗಿತ್ವ 2024-25ನೇ ಸಾಲಿನ ಕ್ರಿಯಾಯೋಜನೆ, ವಸತಿ ಯೋಜನೆ, ಸ್ವಚ್ಚಭಾರತ್ ಮಿಷನ್, ನರೇಗಾ ಯೋಜನೆಗಳು ಸೇರಿದಂತೆ ಇತರೆ ವಿಷಯಗಳು ಕುರಿತು ಚೆರ್ಚಿಸಲಾಯಿತು.
ನೋಡಲ್ ಅಧಿಕಾರಿ ಹಾಗೂ ಸಿಡಿಪಿಓ ಇಲಾಖೆಯ ನವೀನ್ ಮಾತನಾಡಿ ಗ್ರಾಮಾಂತರ ಜನರು ನರೇಗಾ ಯೋಜನೆಯಡಿಯಲ್ಲಿ ಉದ್ಯೋಗವನ್ನು ಪಡೆದು ನಗರಗಳಿಗೆ ವಲಸೆ ಹೋಗುವದನ್ನು ತಪ್ಪಿಸಬಹುದು. ಉದ್ಯೋಗ ಖಾತರಿ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವ ಮಹತ್ವದ ಯೋಜನೆಯಾಗಿದೆ. ಗ್ರಾಮಾಂತರ ಜನತೆ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡುತ್ತಾ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಯಾರಿಗೆ ಹಣ ಬಂದಿಲ್ಲವೋ ಅಂತಹವರು ನಮ್ಮ ಇಲಾಖೆಗೆ ಬಂದು ಸಂಪರ್ಕಿಸಿ, ತಮ್ಮ ಖಾತೆ ಇರುವ ಬ್ಯಾಂಕ್ ಗಳಲ್ಲಿ ಕೆ.ವೈ.ಸಿ ಯನ್ನು ಕಡ್ಡಾಯವಾಗಿ ಮಾಡಿಸಿ ಎಂದರು.
ಪಿಡಿಓ ಕೆ.ಪಿ. ಶ್ರೀನಿವಾಸರೆಡ್ಡಿ ಮಾತನಾಡಿ ಹಳ್ಳಿಗಳ ಅಭಿವೃದ್ದಿಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದರ ಅಡಿಯಲ್ಲಿ ಬೀದಿ ದೀಪಗಳು, ಶೌಚಾಲಯ, ಪೌಷ್ಠಿಕ ಕೈತೋಟ, ಸ್ಮಶಾನಾಭಿವೃದ್ದಿ, ಕೆರೆಕುಂಟೆ ಅಭಿವೃದ್ದಿ, ಕುರಿಶೆಡ್, ಧನದ ಶೆಡ್, ನೀರಿನ ತೊಟ್ಟಿ, ನಮ್ಮ ಹೊಲ ನಮ್ಮದಾರಿ ಮುಂತಾದ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು ಮುಖ್ಯವಾಗಿ ಬೂದಿನೀರು ಹಿಂಗುವ ಗುಂಡಿಯನ್ನು ಮಾಡುವ ಯೋಜನೆ ಜಾರಿಯಲ್ಲಿದ್ದು ಇದಕ್ಕೆ 1.20 ಸಾವಿರ ಅನುದಾನವನ್ನು ಒದಗಿಸಲಾಗುವುದು ಯಾರಾದರೂ ಮಾಡಬೇಕಾದಲ್ಲಿ ಪಟ್ಟಿಯಲ್ಲಿ ಸೇರಿಸಿ ಹಾಗು ಬಿಟ್ಟಿರುವ ಕಾಮಗಾರಿಗಳನ್ನು ಎರಡು ದಿನಗಳ ಒಳಗೆ ಸೇರಿಸಿ ಎಂದರು.
ರೋಣೂರು ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ರಘುಮಾತನಾಡಿ ರೈತರಿಗೆ ಅಟಲ್ ಭೂ ಯೋಜನೆ ಅಡಿಯಲ್ಲಿ ಹನಿ ನೀರಾವರಿ ಪದ್ದತಿಗೆ ಸಹಾಯಧನ ನೀಡಲಾಗುವುದು ಹಾಗೆಯೇ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ವರ್ಷಕ್ಕೆ 6 ಸಾವಿರ ರೂಗಳು ರೈತರಿಗೆ ಬರಲಿದೆ ಹಾಗೆಯೇ ಕಡ್ಡಾಯವಾಗಿ ಇಕೆವೈಸಿ ಯನ್ನು ಮಾಡಿಸಬೇಕು, ಕೃಷಿ ಇಲಾಖೆಯಿಂದ ಸಿಗುವ ಇನ್ನೂ ಅನೇಕ ಸೌಲಬ್ಯಗಳಬಗ್ಗೆ ಸಂಪೂರ್ಣವಾಗಿ ತಿಳಿಸಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ಶೋಭಮ್ಮ, ಸದಸ್ಯರಾದ ದೇವಲಪಲ್ಲಿ ಶ್ರೀನಿವಾಸ್, ಅಶೋಕ್, ಆಂಜಮ್ಮ, ಗೋಪಾಲಪುರ ಕಳಾವತಿ, ದಾಸರತಿಮ್ಮನಹಳ್ಳಿ ಆಂಜನೇಯರೆಡ್ಡಿ, ಮುನಿಶಾಮಿ, ಕೃಷ್ಣೇಗೌಡ, ಮುಖಂಡರಾದ ಇಮರಕುಂಟೆ ಮಂಜುನಾಥ್ ರೆಡ್ಡಿ, ಕರ ವಸೂಲಿಗಾರ ಅಶೋಕ್, ಗ್ರಂಥಾಲಯ ಮೇಲ್ವಿಚಾರಕ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತಿರಿದ್ದರು.
Year: 2023
ಕ್ರೀಡೆಗಳು ದೈಹಿಕ, ಮಾನಸಿಕ ಸದೃಢದ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ: ಸಿಎಂಆರ್ ಶ್ರೀನಾಥ್
ಕೋಲಾರ,ಡಿ.18: ಮಕ್ಕಳು ಕ್ರಿಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಸೇವಾದಳ ಜಿಲ್ಲಾ ಗೌರವ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು
ನಗರದ ಪೆÇಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ 19 ನೇ ಅಂತರ ಜಿಲ್ಲಾ ರಾಷ್ಟ್ರೀಯ ಕ್ರೀಡಾಕೂಟದ ಜಿಲ್ಲಾ ತಂಡದ ಆಯ್ಕೆಯ ಕ್ರೀಡಾಕೂಟದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಆದರೆ ನಿಮ್ಮಲ್ಲಿ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಕ್ರಿ?ಡೆಯ ಮಹತ್ವವನ್ನು ತಿಳಿದುಕೊಂಡು ಪ್ರತಿಯೊಬ್ಬರೂ ಭಾಗವಹಿಸಿ ಜಿಲ್ಲೆಯ ಕೀರ್ತಿ ಪತಾಕೆಯ ಜೊತೆಗೆ ಘನತೆ ಗೌರವವನ್ನು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಪಾಡುವಂತೆ ಆಗಬೇಕು ಶಿಕ್ಷಣದಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಕ್ರೀಡಾಪಟುಗಳನ್ನು ಗುರುತಿಸಬೇಕು ಕ್ರೀಡೆಯನ್ನು ಪೆÇೀತ್ಸಾಹಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಸಮಿತಿ ಸದಸ್ಯರಿಗೆ ಸ್ವಂತ ಕೆಲಸಗಳು ಇದ್ದರೂ ಸಹ ಇವತ್ತು ನಿಮ್ಮಗಳಿಗಾಗಿ ಕಾರ್ಯಕ್ರಮಗಳು ಹಾಗೂ ಕ್ರಿ?ಡಾ ಚಟುವಟಿಕೆಗಳಿಗೆ ಉತ್ತೆ?ಜನ ನೀಡುತ್ತಿದ್ದಾರೆ ಅವರ ಆಶಯಗಳನ್ನು ಕ್ರೀಡೆಯಲ್ಲಿ ತೋರಿಸಬೇಕು ನೀವು ಎಲ್ಲರೂ ಉತ್ತಮ ಆಟವನ್ನು ಪ್ರದರ್ಶಿಸಬೇಕು ಇಂದಿನ ಆಧುನಿಕ ಯುಗದಲ್ಲಿ ಕ್ರಿ?ಡೆಗಳನ್ನು ಮರೆತು ಮೊಬೆ?ಲ್ ಗೇಮ್ಗಳಿಗೆ ಸೀಮಿತವಾಗಿದ್ದೆ?ವೆ. ಕ್ರಿ?ಡೆಗಳು ಹಾಗೂ ಪಠ್ಯೆ?ತರ ಚಟುವಟಿಕೆಗಳು ನಮ್ಮ ಮಾನಸಿಕ ವಿಕಾಸಕ್ಕೆ ಸಹಕಾರಿಯಾಗುತ್ತವೆ ಎಂಬುದನ್ನು ಯಾರು ಮರೆಯಬಾರದು ಎಂದರು
ಈ ಸಂದರ್ಭದಲ್ಲಿ ಕೋಲಾರ ನಗರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸದಾನಂದ ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಆಯ್ಕೆಯಾಗಲು ಸಾಧ್ಯವಿಲ್ಲ ಸೋಲು ಗೆಲುವು ಸಹಜ ಅದನ್ನು ಸಮಾನವಾಗಿ ಸ್ವೀಕರಿಸಬೇಕು ಸೋಲು ಮುಂದಿನ ಗೆಲುವಿನ ಮೆಟ್ಟಿಲು ರೀತಿಯಲ್ಲಿ ಅವಲೋಕನ ಮಾಡಿಕೊಂಡು ಹಿಂಜರಿತವಿಲ್ಲದೇ ಭಾಗವಹಿಸಬೇಕು ಅವಕಾಶಗಳು ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಕ್ರೀಡೆಗೆ ಪೆÇೀತ್ಸಾಹ ಕಡಿಮೆ ಇದ್ದರೂ ಪ್ರತಿಭೆಗಳಿಗೆ ಕೊರತೆಯಿಲ್ಲ ಪ್ರತಿಭೆಗಳಿಗೆ ನಮ್ಮ ಪೆÇೀತ್ಸಾಹ ಯಾವತ್ತೂ ಕಡಿಮೆಯಾಗಲ್ಲ ಮಕ್ಕಳು ಕ್ರೀಡೆಯಲ್ಲಿ ಹೆಚ್ಚಿನ ರೀತಿಯಲ್ಲಿ ಮಾರ್ಗದರ್ಶನ ಪಡೆದು ಹೆಚ್ಚು ಪದಕಗಳನ್ನು ಗೆದ್ದು ಬನ್ನಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ರಾಜವೇಲು, ಜಿಲ್ಲಾ ಅಧ್ಯಕ್ಷ ಎನ್.ಮುನಿಯಪ್ಪ, ಕಾರ್ಯದರ್ಶಿ ಕೆ.ಆರ್ ರಾಘವೇಂದ್ರ, ಮಾಜಿ ಯೋಧರ ಸಂಘದ ಅಧ್ಯಕ್ಷ ಜಗನ್ನಾಥ್, ಬಲಿಜ ಸಂಘದ ಅಶೋಕ್ ಸೇರಿದಂತೆ ಮುಂತಾದವರು ಇದ್ದರು, ಕಳೆದ ಭಾಗವಹಿಸಿ ಪದಕ ಗೆದ್ದ ಕ್ರೀಡಾಪಟುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿವೇಕ್ ಇನ್ಪೋಟೆಕ್ ಸಂಸ್ಥೆಯ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ ಪೂರ್ವಕ ಸನ್ಮಾನ – ನಿರಂತರ ಪರಿಶ್ರಮದಿಂದ ಯಶಸ್ಸು ಕಟ್ಟಿಟ್ಟ ಬುತ್ತಿ: ಚೇತನ್ಕುಮಾರ್
ಕೋಲಾರ:-ಶಿಸ್ತು, ಸಂಯಮ ಮತ್ತು ನಿರಂತರ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಿದರೆ ಯಶಸ್ವಿಯು ಕಟ್ಟಿಟ್ಟ ಬುತ್ತಿಯಾಗಲಿದೆಎಂದುವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಬಿ.ವಿ.ಚೇತನ್ಕುಮಾರ್ಅವರು ತಿಳಿಸಿದರು.
ನಗರದ ವಿವೇಕ್ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಧಕರಿಗೆ ಸನ್ಮಾನ ಮತ್ತುಒಂದು ದಿನದಉಚಿತಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದುಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇಇದೆ. ಶಿಕ್ಷಣ ಕ್ಷೇತ್ರದಲ್ಲಿ ಈ ಸ್ಪರ್ಧಾತ್ಮಕತೆ ಶರವೇಗದಲ್ಲಿ ಸಾಗುತ್ತಿದೆ. ಶಿಕ್ಷಣ ಮುಗಿಸಿ ನಂತರ ಸರ್ಕಾರಿಉದ್ಯೋಗ ಪಡೆಯಲು ಇಚ್ಚಿಸುವ ಆಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡುಅದರಲ್ಲಿ ಯಶಸ್ವಿಯಾಗುವುದು ಮುಖ್ಯವಾಗಿದೆಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ನಿಮ್ಮಗುರಿಯನ್ನುತಲುಪಲು ಸಹಕಾರ ನೀಡುವಗುರುಗಳಿಗೆ ನೀವು ವಿಧೇಯರಾಗಿರಬೇಕು. ಇದರೊಂದಿಗೆ ನಿಮ್ಮತಂದೆ-ತಾಯಿ ಹಾಗೂ ಹಿರಿಯರಿಗೆಗೌರವ ನೀಡಬೇಕು. ವಿದ್ಯೆಗೆ ವಿನಯವೇ ಭೂಷಣಎಂಬುವುದನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿವೇಕ್ಇನ್ಫೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್ಕುಮಾರ್ ಮಾತನಾಡಿ, ಸರ್ಕಾರಿ ಹುದ್ದೆಗಳನ್ನು ಪಡೆಯಬೇಕೆಂಬ ಆಸಕ್ತಿ ಇರುವವರು ಸಮಯ ವ್ಯರ್ಥ ಮಾಡಿದೆ ಇಂದಿನಿಂದಲೇತಯಾರಿ ನಡೆಸಲು ಪ್ರಾರಂಭಿಸುವುದು ಸೂಕ್ತ.ಈ ತಯಾರಿಗೆಅವಶ್ಯಕವಾದತರಬೇತಿ, ಮಾದರಿ ಪರೀಕ್ಷೆಗಳನ್ನು ಸಂಸ್ಥೆಯಲ್ಲಿ ನೀಡಲಾಗುತ್ತಿದ್ದುಇದನ್ನುಎಲ್ಲಾ ಸ್ಪರ್ಧಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಿ.ಜಿ.ಮುರಳಿ ಮಾತನಾಡಿ, ಸ್ಪರ್ಧಾತ್ಮಕಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವವರು ನಿತ್ಯವೂ ದಿನಪತ್ರಿಕೆಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಇದರೊಂದಿಗೆ ಮೊಬೈಲ್ ಬಳಕೆ ಕಡಿಮೆ ಮಾಡಿಓದುವಕಡೆಗೆ ಹೆಚ್ಚು ಸಮಯವನ್ನು ನೀಡಬೇಕುಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಎಸ್.ಆರ್.ರಾಖೇಶ್ಮಾತನಾಡಿ, ಸ್ಪರ್ಧಾರ್ಥಿಗಳು ಸಕಾರಾತ್ಮಕ ಮನೋಭಾವನೆಯೊಂದಿಗೆ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ನಕಾರಾತ್ಮಕ ವಿಷಯಗಳನ್ನು ತುಂಬುವವರಿಂದದೂರಇರಬೇಕು. ಇದನ್ನುಅರಿತುಕೊಂಡು ಸೂಕ್ತ ಮಾರ್ಗದರ್ಶನ ಪಡೆದು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉನ್ನತ ಹುದ್ದೆಗಳನ್ನು ಪಡೆಯುವಂತಾಗಬೇಕುಎಂದು ತಿಳಿಸಿದರು.
ಸಂಸ್ಥೆಯಲ್ಲಿ ಈಗಾಗಲೇ ಸುಮಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸಂಸ್ಥೆಯಲ್ಲಿಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಕೆಲವರುಕೆ.ಎ.ಎಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿಯಾಗಿಉತ್ತಮ ಫಲಿತಾಂಶ ನೀಡುವ ಮೂಲಕ ವಿವೇಕ್ಇನ್ಫೋಟೆಕ್ಸಂಸ್ಥೆಯುರಾಜ್ಯದಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆಎಂದರು.
ಇದೇ ಸಂದರ್ಭದಲ್ಲಿಎಫ್.ಡಿ.ಎಹುದ್ದೆಗೆಆಯ್ಕೆಯಾದಎಸ್.ಕೆ.ಮುನಿರಾಜು ಹಾಗೂ ಅಗ್ನಿವೀರ್ಹುದ್ದೆಗೆಆಯ್ಕೆಯಾದಜಿ.ಬಿ.ಸಂತೋಷ್ಕುಮಾರ್ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿಸಂಪನ್ಮೂಲ ವ್ಯಕ್ತಿಗಳಾದಎನ್.ಕೆ.ನಾಗೇಶ್, ಅಂಬರೀಶ್,ಸ್ಫರ್ಧಾರ್ಥಿಗಳಾದ ಕೆ.ಆರ್.ವೇಣುಗೋಪಾಲ, ಪ್ರಜ್ವಲ್, ನಾಗೇಶ್, ನವೀನ್ಕುಮಾರ್, ಸಂದೇಶ್ಕುಮಾರ್, ಸತೀಶ್, ಮುರಳಿ ಮೋಹನ್, ನಾಗಾರ್ಜುನ, ಮುಕ್ತಾನಂದ, ಸುಧಾಕರ್, ಸುಮಿತ್, ಪ್ರಶಾಂತ್, ಭಾವನ, ಭಾನುಶ್ರೀ ಸೇರಿದಂತೆಇತರರುಉಪಸ್ಥಿತರಿದ್ದರು.
Senior sisters day : Golden Threads of Gratitude – Celebrating Lifelong Service
The longer I live, the more beautiful life becomes’says Frank Lloyd Wright.Amidst the embrace of a resplendent day, imbued with vitality and zeal, the senior sisters crossed the threshold of Bethany Provincialate, Vamanjoor, marking a singular juncture to extend heartfelt appreciation and gratitude for their invaluable and unwavering commitment to both the Congregation and society. The ceremonial proceedings unfolded at the auspicious hour of 10:00 am, with SrRoshel invoking divine blessings upon allthe participants. A group of 35 elderly sisters, each exceeding the octogenarian milestone, gathered from diverse communities within the Mangalore Province. SrCiciliaMendonca, the Provincial Superior, extended a warm welcome, applauding and expressing gratitude for their enduring presence and dedicated service. She urged them to orient their lives around the person of Jesus. The celebration continued as DrJudy Pinto imparted a session brimming with insights, infusing vitality by dispensing wise advice for graceful aging. Lively participation characterized the subsequent games arranged by Sr Lilly Pereira. Provincial Superior lauded the winners and bestowed upon them tokens of appreciation extending gratitude to all for contributing to the day’s importance. Sr Emerita and Sr Lucian conveyed vote of thanks on behalf of the elderly sisters. SrShubha compered the entire programme. A fellowship meal was served fostering moments of relaxation and joy as the senior sisters day crystallized into a golden opportunity of preciousmoments.
ಸಂತ ಜೋಸೆಫ್ ಹಿರಿಯ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆಗಳ ವಾರ್ಷಿಕೋತ್ಸವ
ಕುಂದಾಪುರ, ಡಿ20: ಆಪೊಸ್ತಲಿಕ್ ಕಾರ್ಮೆಲ್ ಎಜುಕೇಶನ್ ಸೊಸೈಟಿ ಮಂಗಳೂರು ಇವರ ಕುಂದಾಪುರದ ಸಂತ ಜೋಸೆಫ್ ಕನ್ನಡ ಮಾದ್ಯಮ ವಿದ್ಯಾಸಂಸ್ಥೆಗಳಾದ ಹಿರಿಯ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆಗಳ ವಾರ್ಷಿಕೋತ್ಸವವು ಡಿ.19 ರಂದು ಶಾಲಾ ಮೈದಾನದಲ್ಲಿ ಜರಗಿತು.
ಕಾರ್ಯಕ್ರಮಕ್ಕೆ ಕುಂದಾಪುರ ಸಂತ ಜೋಸೆಫ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಭಗಿನಿ ಸುಪ್ರಿಯಾ ಅಧ್ಯಕ್ಷತೆ ವಹಿಸಿ “ನಾವು ಮಾಡುವ ಕೆಲಸ ಪರರಿಗೆ ಸಂತೋಷ ನೀಡಬೇಕು, ನಾವು ಪರರಿಗೆ ಮಾಡುವ ಒಳ್ಳೆತನವೇ ಶಿಕ್ಷಣ. ನಾವು ಪರೋಪಕಾರಿ ಜೀವನ ನೆಡಸಬೇಕು. ನಾವೆಲ್ಲ ದೇವರ ಮಕ್ಕಳೆಂದು ಜೀವಿಸಿದರೆ ಸಮಾಜದಲ್ಲಿ ಶಾಂತಿ ಸಮಾಧಾನ ನೆಲಸುವುದು” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.
ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “93 ವರ್ಷಗಳ ಹಿಂದೆ ಕುಂದಾಪುರದ ಧರ್ಮಗುರುಗಳ ಇಚ್ಚೆಯಂತೆ, ಇಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಬಾಷ ದೊರಕದ ಕಾರಣ ಇಲ್ಲಿ ಕಾರ್ಮೆಲ್ ಭಗಿನಿಯರು ಶಾಲೆ ಆರಂಭಿಸಿದರು ಅದರಂತೆ ಇಲ್ಲಿನ ಹೆಣ್ಣುಮಕ್ಕಳಿಗೆ ವಿದ್ಯಾ ದಾನ ಮಾಡುತ್ತಾ ಬಂದಿರುವ ಕಾರ್ಮೆಲ್ ಭಗಿನಿಯರಿಗೆ ಅಭಿನಂದಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶಿರ್ವಚನ ಮಾಡಿದರು.
ಮುಖ್ಯ ಅತಿಥಿಗಳಾದ ಡಾ|ಸಂದೀಪ್ ಶೆಟ್ಟಿ “ನಮ್ಮ ಊರಿನ ಮಾತೆಯರಿಗೆ ಶಿಕ್ಷಣ ನೀಡಿದಕ್ಕಾಗಿ ನಾವು ಇಂದು ಉನ್ನತ ಸ್ಥಾನ, ಪದವಿಗಳನ್ನು ಪಡೆಯುವಂತಾಗಿದೆ. ನಮ್ಮ ಮಕ್ಕಳು ಕನಸು ಕಾಣಬೇಕು, ಬೇರೆ ಬೇರೆ ರೀತಿಯ ಕನಸಗಳನ್ನು ಕಾಣಬೇಕು. ಹೆತ್ತವರು ಮಕ್ಕಳ ಕನಸನ್ನು ಅರಿತುಕೊಳ್ಳಬೇಕು’ ತಿಳಿಸಿದರು. ವಡೇರೋಬಳಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಸುನೀತಾ ಬಾಂಜ್ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡುತ್ತಾ ಕಾರ್ಮೆಲ್ ಸಂಸ್ಥೆಯ ಶಾಲೆಗಳ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಇನ್ನೂರ್ವ ಅತಿಥಿ ರೋಟೆರಿಯನ್ ರಾಜು ಪೂಜಾರಿ ಮಾತನಾಡಿದರು.
ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಶಾಲೆಗಳ ವರದಿಯನ್ನು ಪ್ರೊಜೆಕ್ಟರ್ ಮೂಲಕ ಪ್ರಸ್ತೂತ ಪಡಿಸಲಾಯಿತು. ಪ್ರಾರ್ಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಭಗಿನಿ ಪ್ರೇಮಿಕಾ ಸ್ವಾಗತಿಸಿದರು, ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಭಗಿನಿ ಐವಿ ದಾನಿಗಳನ್ನು ಪರಿಚಯಿಸಿದರು. ದಾನಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿಸಿದರು. ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ ನಿರೂಪಿಸಿ, ಶಿಕ್ಷಕ ಅಶೋಕ್ ದೇವಾಡಿಗ ವಂದಿಸಿದರು.
ನವೀಕರಿಸಿದ ಆಡಿಟೋರಿಯಂನ ಆಶೀರ್ವಾದ ಮತ್ತು ಉದ್ಘಾಟನೆ ಮತ್ತು 2023 ರ ಸ್ಪಾರ್ಕ್ಲಿಂಗ್ ಕ್ರಿಸ್ಮಸ್ / BLESSINGS AND INAUGURAITON OF RENOVATED AUDITORIUM AND SPARKLING CHRISTMAS CELEBRATION 2023
ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ನ ಮ್ಯಾನೇಜ್ಮೆಂಟ್, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಇದು ನಿಜಕ್ಕೂ ವಿಶೇಷ ಮುಂಜಾನೆಯಾಗಿತ್ತು. ಈ ಸಂದರ್ಭದಲ್ಲಿ ನಾವು ಕಾಲೇಜಿನ ಸಾಮರಸ್ಯದ ಮಿಶ್ರಣವನ್ನು ವೀಕ್ಷಿಸಿದಾಗ ನಮ್ಮಲ್ಲಿ ಉತ್ಸಾಹವನ್ನು ಸೆಳೆಯಿತು. ಇದು 2023 ರ ಡಿಸೆಂಬರ್ 18 ರ ಸೋಮವಾರದ ಮುಂಜಾನೆ, ಅತಿಥಿಗಳು, ಹಿತೈಷಿಗಳು ಮತ್ತು ಸಿಬ್ಬಂದಿ ಎಲ್ಲರೂ ನವೀಕೃತ ಎಸಿ ಸಭಾಂಗಣದ ಉದ್ಘಾಟನೆ ಮತ್ತು ಆಶೀರ್ವಾದ ಮತ್ತು ಸ್ಪಾರ್ಕ್ಲಿಂಗ್ ಕ್ರಿಸ್ಮಸ್ ಆಚರಣೆ 2023 ರ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಸೇರಿದ್ದರು.ಈ ನವೀಕರಿಸಿದ ಸುಂದರವಾದ ಎಸಿ ಸಭಾಂಗಣದ ನಿರ್ಮಾಣದ ಉದ್ದಕ್ಕೂ ನಮ್ಮೊಂದಿಗಿದ್ದಕ್ಕಾಗಿ ದೇವರಿಗೆ ಧನ್ಯವಾದ ಹೇಳುವ ಸಮಯ Rt. ರೆ. ಹೇಮಚಂದ್ರ ಕುಮಾರ್, ಬಿಷಪ್ ಸಿಎಸ್ಐ ಕರ್ನಾಟಕ ಸದರ್ನ್ ಡಯಾಸಿಸ್ ಪ್ರಾರ್ಥನಾ ಸೇವೆಯ ಮೂಲಕ ಆಶೀರ್ವಾದ ಸಮಾರಂಭವನ್ನು ಮುನ್ನಡೆಸಿದರು.ಸಮಾರಂಭವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಪ್ರಾರ್ಥನಾ ಗೀತೆಯೊಂದಿಗೆ ಕ್ರಿಸ್ಮಸ್ ಆಚರಣೆ ಆರಂಭವಾಯಿತು. ಸ್ವಾಗತದ ಮಾತುಗಳು ಯಾವಾಗಲೂ ಕೂಟವನ್ನು ಮನೆಯಲ್ಲಿ ಅನುಭವಿಸುವಂತೆ ಮಾಡುತ್ತದೆ, ಶ್ರೀ ಆರ್.ಎಸ್. ಶೆಟ್ಟಿಯಾನ್, ಅಧ್ಯಕ್ಷರು ಸ್ವಾಗತಿಸಿ, ಪ್ರೀತಿಯ ಸಂಕೇತವಾಗಿ Rt. ರೆ. ಹೇಮಚಂದ್ರಕುಮಾರ್, ಬಿಷಪ್ ಅವರನ್ನು ಸನ್ಮಾನಿಸಲಾಯಿತು. ಕ್ರಿಸ್ಮಸ್ ಹಬ್ಬದ ಸಂತೋಷವನ್ನು ನಿರ್ಗತಿಕ ಜನರೊಂದಿಗೆ ಹಂಚಿಕೊಳ್ಳಲು ಬಿಷಪ್ ಅವರು ಕ್ರಿಸ್ಮಸ್ ಸಂದೇಶವನ್ನು ನೀಡಿದರು. ಎಸ್ಎನ್ಎ ಸಲಹೆಗಾರರಾದ ಶ್ರೀಮತಿ ವಿಯೋಲಾ ಡಿಸೋಜಾ ಅವರು ವಿವಿಧ ಸ್ಪರ್ಧೆಗಳಿಗೆ ಬಹುಮಾನಗಳನ್ನು ಘೋಷಿಸಿದರು. ಅದ್ಭುತವಾದ ಕ್ರಿಸ್ಮಸ್ ಕ್ಯಾರೋಲ್ಗಳು ಮತ್ತು ನೃತ್ಯ ಸಂಯೋಜನೆಯೊಂದಿಗೆ ವಿವಿಧ ಕ್ರಿಸ್ಮಸ್ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡರು.ಧನ್ಯವಾದವನ್ನು ಅಥೆನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ನ ಪ್ರಿನ್ಸಿಪಾಲ್ದೀಪಾ ಪೀಟರ್ ಪ್ರಸ್ತಾವಿಸಿದರು. ಕಾರ್ಯಕ್ರಮವನ್ನು ಕುಮಾರಿ ಏಂಜೆಲಾ ಟಾಮಿ ಮತ್ತು ಕುಮಾರಿ ಅಲೀನಾ ಬಿನು ನಿರ್ವಹಿಸಿದರು.
BLESSINGS AND INAUGURAITON OF RENOVATED AUDITORIUM AND SPARKLING CHRISTMAS CELEBRATION 2023
It was indeed a special morning for all of us the management, staff and students of Athena Institute of Health Sciences, as occasion draw enthusiasm in us, as we witnessed a harmonious blending of the College. It is the morning of Monday December 18th 2023 where guests, well-wishers and staff had all gathered to take part in the celebration of inauguration and blessings of renovated AC auditorium and Sparkling Christmas celebration 2023.
It is the time to thank God for being with us throughout the construction of this renovated beautiful AC auditorium were Rt. Rev. Hemachandra Kumar, Bishop CSI Karnataka Southern Diocese lead the ceremony of blessings through prayer service.
The dignitaries inaugurated the ceremony by lighting the ceremonial lamp.
The Christmas celebration began with the prayer song. words of welcome always make the gathering feel at home, Mr. R.S. Shettian, Chairman welcomed the gathering and as a token of love Rt. Rev. Hemachandra Kumar, Bishop was honored. A Christmas message was given by the Bishop to share the joy of Christmas with needy people. Mrs. Viola DSouza, SNA advisor announced prizes for various competitions. Students engaged themselves in various Christmas programmes with wonderful Christmas carols and choreography.
The vote of thanks was proposed by Sr. Deepa Peter, Principal Athena Institute of Health Sciences. The programme was compared by Ms. Angela Tomy & Ms. Aleena Binu.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಆಶ್ರಯದಲ್ಲಿ “”ಸಂಶೋಧನಾ ವಿಧಾನಗಳು” ಕುರಿತು ಕಾರ್ಯಗಾರ
ಕುಂದಾಪುರ: ಡಿಸೆಂಬರ್ 15ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಆಶ್ರಯದಲ್ಲಿ “ಸಂಶೋಧನಾ ವಿಧಾನಗಳು” ಕುರಿತು ಕಾರ್ಯಗಾರ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಉಡುಪಿಯ ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಉಮೇಶ್ ಮಯ್ಯ ಮಾತನಾಡಿ ಜೀವನದಲ್ಲಿ ಅಸಾಧ್ಯ ಎನ್ನುವುದು ಯಾವುದು ಇಲ್ಲ. ನಮ್ಮಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಿ ಮುನ್ನುಗ್ಗಬೇಕು. ಇದರೊಂದಿಗೆ ಮಹತ್ವಾಕಾಂಕ್ಷೆ, ಸಕಾರಾತ್ಮಕ ವರ್ತನೆ ಮತ್ತು ಉತ್ತಮ ಸಂಘಟನಾತ್ಮಕತೆಯನ್ನು ಅಳವಡಿಸಿಕೊಳ್ಳಿ. ಜೊತೆಗೆ ಯಾವುದೇ ಸಾಧನೆಯ ಹಾದಿಯಲ್ಲಿ ಮತ್ತು ಮಾಡುವ ಕೆಲಸದಲ್ಲಿ ಬದ್ಧತೆ, ಸ್ಥಿರತೆ ಮತ್ತು ಉತ್ತಮ ಸಂವಹನ ಕಲೆಯನ್ನು ರೂಢಿಸಿಕೊಳ್ಳಬೇಕು. ಸಂಶೋಧನೆ ಎಂದರೆ ಇರುವ ವಿಷಯದ ಕುರಿತು ಆಳವಾದ ಮತ್ತು ಗಾಢ ಅಧ್ಯಯನ. ಸಂಶೋಧನೆ ಮಾಡುವಾಗ ಹಲವಾರು ವಿಷಯಗಳ ಬಗ್ಗೆ ಅರಿವು ಇರಬೇಕು. ಅದಕ್ಕೆ ಬೇಕಾದ ತಯಾರಿ, ಜ್ಞಾನ ಸಂಪಾದನೆ ಅದಕ್ಕೆ ಪೂರಕವಾಗಿ ಸಂವೇದನಾ ಶೀಲ ಆಲೋಚನೆಗಳು ಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ನಿಶಾ.ಎಂ ವಹಿಸಿದ್ದರು.ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕರಾದ ಡಾ.ಯಶವಂತಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ವಿದ್ಯಾರ್ಥಿನಿ ಸಂಹಿತಾ ಅತಿಥಿಗಳನ್ನು ಪರಿಚಯಿಸಿದರು.
ಕಥೋಲಿಕ್ ಸಭಾ ವಲಯ ಸಮಿತಿ,ಶೆವೊಟ್ ಪ್ರತಿಷ್ಠಾನ್ ಇವರಿಂದ ಸೌಹಾರ್ದ ಕ್ರಿಸ್ಮಸ್ ಸಂಭ್ರಮ: “ಕೇವಲ ಕ್ರೈಸ್ತರು ಮಾತ್ರವಲ್ಲದೆ ಇತರ ಧರ್ಮದವರೂ ಆಯೋಜಿಸುವಂತಾಗಬೇಕು”- ಸುಜೇಂದ್ರ ಹಂದೆ/A cordial Christmas celebration by Catholic Sabha Zonal Committee, Shevot Pratisthan: “Not only Christians but also other religions should be organised” – Sujendra Hande
ಕುಂದಾಪುರ: ಕಥೋಲಿಕ್ ಸಭಾ ಉಡುಪಿ ಪ್ರದೇಶ (ರಿ.), ಕಥೋಲಿಕ್ ಸಭಾ ವಲಯ ಸಮಿತಿ – ಶೆವೊಟ್ ಪ್ರತಿಷ್ಠಾನ್ (ರಿ.) ಕುಂದಾಪುರ, ಹೋಲಿ ರೋಜರಿ ಚರ್ಚ್ ಕುಂದಾಪುರ ಘಟಕದ ವತಿಯಿಂದ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ದಿನಾಂಕ 17/12/2023 ಭಾನುವಾರ ಸಂಜೆ ಸೌಹಾರ್ದ ಕ್ರಿಸ್ಮಸ್ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಅತೀ|ವಂ|ಫಾ|ಸ್ಟ್ಯಾನಿ ತಾವ್ರೊ ಹಾಗೂ ವೇದಿಕೆಯ ಮೇಲೆ ಉಪಸ್ಥಿತರಿದ್ದ ಸರ್ವ ಗಣ್ಯರು ಹಣತೆಯನ್ನು ಬೆಳಗುವುದರ ಮುಖಾಂತರ ಈ ಸೌಹಾರ್ದ ಕ್ರಿಸ್ಮಸ್ ಸಂಭ್ರಮದ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅತೀ|ವಂ|ಫಾ|ಸ್ಟ್ಯಾನಿ ತಾವ್ರೊರವರು, ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತರು ಜನಿಸಿದರು, ಅದುವೆ ಕ್ರಿಸ್ಮಸ್ ಸಂಭ್ರಮ. ಇದನ್ನು ಇತರರೊಂದಿಗೆ ಹಂಚಿಕೊಳ್ಳುವುದು ವಾಡಿಕೆ, ಈ ಆಚರಣೆಯು ಶಾಂತಿ, ಸಮಾಧಾನ, ಹಾಗೂ ಸೌಹಾರ್ದತೆಯನ್ನು ಸಾರುತ್ತದೆ. ಯೇಸು ಕ್ರಿಸ್ತರ ಸಂದೇಶ ಒಂದು ಪ್ರೀತಿ ಹಾಗೂ ಸಮಾಧಾನದ ಸಂದೇಶ. ಎಲ್ಲರೂ ಪ್ರೀತಿಯಿಂದ ಬಾಳಬೇಕು ನಮ್ಮ ವೈರಿಗಳನ್ನು ಕೂಡಾ ಪ್ರೀತಿಸಬೇಕು, ಸಮಾಜದ ಜನರ ನೋವು ನಲಿವುಗಳಿಗೆ ಸ್ಪಂದಿಸಬೇಕು ಅದುವೇ ನಿಜವಾದ ಕ್ರಿಸ್ಮಸ್ ಆಚರಣೆ’ ಎಂದರು.
ಕುಂದಾಪುರ ಘಟಕದ ಸದಸ್ಯರು ಪ್ರಾರ್ಥನಾ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿಗಳು ಸ್ವಾಗತ ನೃತ್ಯದೊಂದಿಗೆ ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿ.ಲೀಲಾವತಿ ಕರ್ಕಡ ಮುಖ್ಯೋಪಾಧ್ಯಾಯಿನಿ ಚೈತನ್ಯ ಸ್ಪೆಷಲ್ ಸ್ಕೂಲ್ ಹಾಗೂ ಕಲ್ಪನಾ ಪ್ರಭಾಕರ ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಇವರನ್ನು, ಅವರು ಸಮಾಜಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.ಶೆವೊಟ್ ಪ್ರತಿಷ್ಠಾನ್ ಅಧ್ಯಕ್ಷ ಶ್ರೀ ವಿನೋದ್ ಕ್ರಾಸ್ಟೊ ಮತ್ತು ಮಾಜಿ ವಲಯ ಕಥೊಲಿಕ್ ಸಭಾ ಅಧ್ಯಕ್ಷ ಶ್ರೀ ರೋಶನ್ ಬಾರೆಟ್ಟೊ ಸನ್ಮಾನಿತರನ್ನು ಪರಿಚಯಿಸಿದರು
ಕಾರ್ಯಕ್ರಮದ ಸಂಚಾಲಕರಾದ ಶ್ರೀ. ಜೊನ್ಸನ್ ಅಲ್ಮೇಡಾರವರು ಶ್ರೀ. ಸುಜೇಂದ್ರ ಹಂದೆಯವರ ವ್ಯಕ್ತಿ ಪರಿಚಯ ಮಾಡಿ, ಅವರು ಬರೆದ ಕೃತಿಗಳು, ಗಳಿಸಿದ ಪ್ರಶಸ್ತಿಗಳು ಹಾಗೂ ಮಾಡಿದ ಸಾಧನೆಗಳ ವಿವರ ನೀಡಿ, ಅವರಿಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಬೇಗನೆ ಸಿಗುವಂತಾ ಗಲಿ ಎಂದು ಹಾರೈಸಿದರು.
ಶ್ರೀ. ಸುಜೇಂದ್ರ ಹಂದೆಯವರು “ಡಿ. ವಿ. ಜಿ ಯವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಸುಶ್ರಾವ್ಯವಾಗಿ ಹಾಡುವುದರೊಂದಿಗೆ ಮಾತು ಆರಂಭಿಸಿ, ಇಂತಹ ಸೌಹಾರ್ದ ಕಾರ್ಯಕ್ರಮಗಳನ್ನು ಕೇವಲ ಕ್ರೈಸ್ತರು ಮಾತ್ರವಲ್ಲದೆ ಇತರ ಧರ್ಮದವರೂ ಆಯೋಜಿಸುವಂತಾಗಬೇಕು.ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಮೂಲಕ ನಮ್ಮ ಸಮಾಜಕ್ಕೆ ಕ್ರೈಸ್ತರ ಕೊಡುಗೆ ಆಪಾರ, ನಮ್ಮ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ ಕೀರ್ತಿ ಕ್ರೈಸ್ತರಿಗೆ ಸಲ್ಲುತ್ತದೆ ಎಂದು ಕಿಟೆಲ್ರವರು ಕನ್ನಡ ಭಾಷೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ತಮ್ಮ ಅದ್ಭುತವಾದ ವಾಕ್ಚಾತುರ್ಯದಿಂದ ನೆರೆದ ಮಕ್ಕಳಿಗೆ ನೀತಿ ಕತೆಗಳನ್ನು ಹೇಳಿ, ಯೇಸು ಕ್ರಿಸ್ತರು ಈ ಭೂಮಿಯ ಮೇಲೆ ಜನಿಸಿ ನಮಗೆ ನೀಡಿದಂತಹ ಪ್ರೀತಿಯ ಹಾಗೂ ಸೌಹಾರ್ದತೆಯ ಸಂದೇಶ ಮನಗಳಿಗೆ ಮುಟ್ಟುವಂತಾಗಬೇಕು ಎಂದು ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ. ವಿಲ್ಸನ್ ಅಲ್ಮೇಡಾ ಕಥೋಲಿಕ್ ಸಭಾ ಕುಂದಾಪುರ ವಲಯದ ಎಲ್ಲಾ ಘಟಕಗಳಿಂದ ನೀಡುತ್ತಿರುವ ವಿವಿಧ ಸೇವೆಗಳನ್ನು ವ್ಯಾಖ್ಯಾನಿಸಿ,ಕಥೋಲಿಕ್ ಸಭಾ ಇಂದು ಒಂದು ಬಲಿಷ್ಟ ಸಂಘಟನೆಯಾಗಿ ಬೆಳೆದು ನಿಂತಿದೆ ಎಂದರು. ಕಥೋಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷರಾದ ಶ್ರೀಮತಿ ಶೈಲಾ ಅಲ್ಮೇಡಾ ಸ್ವಾಗತಿಸಿದರು, ವಲಯ ಸಮಿತಿಯ ಕಾರ್ಯದರ್ಶಿ ಶ್ರೀ. ಗ್ರೇವಿನ್ ಪಸನ್ನ ಧನ್ಯವಾದ ಸಮರ್ಪಿಸಿದರು ಮತ್ತು ಡಾ|ಸೋನಿ ಡಿಕೋಸ್ಟಾ ಸಭಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಲಯ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಶಾಂತಿ ಪಿರೇರಾ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಪಿಯೂಸ್ ನಗರ, ಕುಂದಾಪುರ, ತಲ್ಲೂರು ಹಾಗೂ ಬೈಂದೂರು ಘಟಕಗಳ ವತಿಯಿಂದ ವಿವಿಧ ನೃತ್ಯ, ನಾಟಕ ಹಾಗೂ ಸಾಂಸ್ಕ್ರತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕ್ರಿಸ್ಮಸ್ ಕೇಕ್ ಲಕ್ಕಿ ಡ್ರಾ ನಡೆಸಿ ಬಹುಮಾನ ವಿಜೇತರಿಗೆ ಕೇಕ್ ಗಳನ್ನು ವಿತರಿಸಲಾಯಿತು. ಶ್ರೀಮತಿ ಪ್ರೇಮ ಡಿಕುನ್ಹ ಸಾಂಸ್ಕ್ರತಿಕ ಕಾರ್ಯಕ್ರಮದ ನಿರೂಪಿಸಿದರು.
A cordial Christmas celebration by Catholic Sabha Zonal Committee, Shevot Pratisthan: “Not only Christians but also other religions should be organised” – Sujendra Hande
Kundapur: Catholic Sabha Udupi Pradesh (R.), Catholic Sabha Zonal Committee – Shevot Pratishthan (R.) Kundapur, Holy Rosary Church Kundapur unit organized a cordial Christmas celebration on 17/12/2023 Sunday evening at St. Mary’s Vidya Institution grounds.
His Excellency Stani Tavro and all the dignitaries present on the stage inaugurated this cordial Christmas celebration by lighting the lamp. Speaking at the opening of the program, Ati|Vam|Fa|Stani Tavro said that Jesus Christ was born two thousand years ago, and that was Christmas celebration. It is customary to share it with others, a practice that conveys peace, tranquility, and harmony. The message of Jesus Christ is a message of love and peace. Everyone should live with love, we should also love our enemies, we should respond to the pains of the people of the society, that is the real Christmas celebration’, he said.
The program started with the members of the Kundapur unit singing a prayer song. The students of St. Mary’s School welcomed the server with a welcome dance. On this occasion, B. Lilavati Karkada Headmistress Chaitanya Special School and Kalpana Prabhakar Asha Worker, Primary Health Center Gangolli were felicitated in recognition of their considerable service rendered to the society.Shevot Pratishthan President Mr. Vinod Krasto and former Zonal Catholic Sabha President Mr. Roshan Barretto introduced the honorees.
The organizer of the program Mr. Mr. Johnson Almeida. He introduced the person of Sujendra Hande, gave the details of his works, awards and achievements and wished him to get state and national awards soon.
Mr. Sujendra Hande started his speech by singing the lines of Mankuthimma by D.V.G melodiously, such friendly programs should be organized not only by Christians but also by other religions. Christian’s contribution to our society through educational institutes and hospitals, Christians are credited with saving and developing our Kannada language. In his Christmas message, he remembered the gift he gave.He told righteous stories to the children gathered with his wonderful eloquence and told us in his Christmas message that the message of love and friendship given to us by Jesus Christ should be born on this earth.
Speaking on this occasion Mr. Explaining the various services offered by all units of the Catholic Sabha Kundapur zone, Wilson Almeida said that the Catholic Sabha has grown into a strong organization today. Ms. Shaila Almeida, President of Catholic Sabha Kundapur Unit welcomed, Secretary of Zonal Committee Mr. Grevin gave the vote of thanks and Dr. Sonny DeCosta moderated the program. Mrs. Shanti Perera, Immediate Past President of the Zonal Committee was present on this occasion.
After the sabha program, various dance, drama and cultural entertainment programs were organized by Piyush Nagar, Kundapur, Tallur and Byndur units. On this occasion, a Christmas cake lucky draw was conducted and cakes were distributed to the prize winners. Mrs. Prema Dikunha narrated the cultural program.
ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ, ನರ್ಸರಿ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಶಾಲಾ ವಾರ್ಷಿಕ ದಿನ
ಮಂಗಳೂರು, ಡಿಸೆಂಬರ್ 15, ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ, ನರ್ಸರಿ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಶಾಲಾ ವಾರ್ಷಿಕ ದಿನವನ್ನು “EMPYREAN” ಎಂಬ ವಿಷಯದಡಿಯಲ್ಲಿ ಆಚರಿಸಲಾಯಿತು.
ಶಾಲಾ ಮಕ್ಕಳಿಂದ ಚೆಂಡೆ ಲಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪುತ್ತೂರಿನ ಸೇಂಟ್ ಫಿಲೋಮಿನಾ ಹಾಸ್ಟೆಲ್ನ ವಾರ್ಡನ್ ಫಾದರ್ ರೂಪೇಶ್ ರವೀನ್ ತೌರೋ ಮತ್ತು ಬೋಂದೇಲ್ ಚರ್ಚ್ನ ಮಾಜಿ ಸಹಾಯಕ ಪ್ಯಾರಿಷ್ ಪಾದ್ರಿಗಳು ಮುಖ್ಯ ಅತಿಥಿಯಾಗಿದ್ದರು. ವಿವಿಧ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಉತ್ತಮ ಪಾಲನೆಗಾಗಿ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ವಂದನೀಯ ಫಾ.ಆಂಡ್ರ್ಯೂ ಲಿಯೋ ಡಿಸೋಜ ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡಿ ಸಮಾಜದಲ್ಲಿ ಅನಿಷ್ಟ ಸಂಯೋಜಕ ಸಮಾಜಗಳ ಬಗ್ಗೆ ಎಚ್ಚರಿಕೆ ನೀಡಿ ಅವರಿಂದ ಮಕ್ಕಳನ್ನು ಸಂರಕ್ಷಿಸಬೇಕು. ಗೌರವ ಅತಿಥಿಗಳಾಗಿ ಪ್ಯಾರಿಸ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷರಾದ ವಂದನೀಯ ಫಾದರ್ ಲ್ಯಾನ್ಸಿ ಡಿಸೋಜ, ಪಿಟಿಎ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ರಮ್ಯಾ ಶೆಟ್ಟಿ, ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೆಲೆನ್ ಫೆರ್ನಾಂಡಿಸ್, ಪ್ರಾಂಶುಪಾಲರಾದ ವಂದನೀಯ ಫಾದರ್ ಪೀಟರ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. ಶಾಲೆಯವರು ವೇದಿಕೆಯಲ್ಲಿದ್ದರು.
St. Lawrence English Medium School, Nursery and lower Primary School Annual Day
Mangalore, December 15 St Lawrence English Medium School Bondel Mangalore, evening of December 15, 2023, celebrated Nursery and lower primary section school Annual Day under the theme, “EMPYREAN”.
The event began with the rhythms of Chende by the school children. Rev. Fr Rupesh Raveen Tauro the Warden of St Philomena Hostel puttur and former Assistant parish priest of Bondel church was the chief guest. After felicitation, the winners of various competitions he addressed the gathering and enumerated the tips for better parenting. Rev. Fr Andrew leo D’Souza the President of the program addressed the parents and warned them about the evil synthes society and to safeguard asked children from them. The Guests of honour Rev Fr Lancy D’Souza, Vice President of Paris pastoral parishad Mr John Dsilva, Vice President of PTA executive committee Mrs Ramya Shetty, head mistress of Saint Lawrence higher primary school Bondel Mrs Helen Fernandes, Rev Fr Peter Gonsalves the Principal of the school were on the dais.