ತುಳಸಿ ವಿದ್ಯಾ ಮಂದಿರ ಶಾಲೆಯಲ್ಲಿ ಮುದ್ದು ರಾಧೆ -ಮುದ್ದು ಕೃಷ್ಣ ಸ್ಪರ್ಧೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಾವ್ರಾಡಿ ಗ್ರಾಮದ ತುಳಸಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ, ಹಳ್ನಾಡಿನಲ್ಲಿ ಜೇಸಿಐ ಶಂಕರನಾರಾಯಣ ಮತ್ತು ಗೆಳೆಯರ ಬಳಗ ಶಂಕರನಾರಾಯಣ ಇವರ ಸಹಯೋಗದಲ್ಲಿ ಇಂದು ಮುದ್ದು ರಾಧೆ- ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು.
ವೇದಮೂರ್ತಿ ಶ್ರೀ ಶ್ರೀನಿವಾಸ ಅಡಿಗ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
0 -4, 4 -7, ಹಾಗೂ 7 -10 ವರ್ಷದ ಒಳಗಿನ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 100 ಕ್ಕೂ ಅಧಿಕ ಮುದ್ದು ರಾಧೆ – ಮುದ್ದು ಕೃಷ್ಣ ವೇಷ ಧರಿಸಿದ ಚಿಕ್ಕ ಮಕ್ಕಳು ಪಾಲಕರೊಂದಿಗೆ ಆಗಮಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಆಕರ್ಷಕ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

4 ವರ್ಷದೊಳಗಿನ ವಿಭಾಗದಲ್ಲಿ ಪ್ರಣಮ್ಯ B, ಸಿಂಚಿತಾ ಪ್ರಥಮ, ವೇದಾರ್ಥ,ನಿಕ್ಷೀತಾ ದ್ವಿತೀಯ ಹಾಗೂ 4 ರಿಂದ 7 ವರ್ಷದೊಳಗಿನ ವಿಭಾಗದಲ್ಲಿ ಆಯುಷ್,ಧ್ವನಿ K ಪ್ರಥಮ, ಆರಾದ್ಯ,ನಿಯಾನ್ಶ್ ದ್ವಿತೀಯ ಮತ್ತು 7 ರಿಂದ 10 ವರ್ಷದೊಳಗಿನ ವಿಭಾಗದಲ್ಲಿ ಆರ್ಯನ್, ಮಹಾಲಸಾ.B.ಭಟ್ ಪ್ರಥಮ,ಸಿಂಚರ, ಕವನ ದ್ವಿತೀಯ ಬಹುಮಾನವನ್ನು ಪಡೆದು ಮಿಂಚಿದರು.
ತೀರ್ಪುಗಾರರಾಗಿ ಹಳ್ನಾಡಿನ ನಿವೃತ್ತ ಶಿಕ್ಷಕರಾದ ವಿಶ್ವನಾಥ್ ಶೆಟ್ಟಿ, ಕಲಾವಿದೆಯಾದ ಶ್ರೀಮತಿ ಸುಪ್ರೀತಾ ಪುರಾಣಿಕ್, ಹಾಗೂ ಶಾಂತಿಧಾಮ ಗುರುಕುಲದ ಶಿಕ್ಷಕಿಯಾದ ಶ್ರೀಮತಿ ನಾಗರತ್ನ ಉಡುಪ ರವರು ಆಗಮಿಸಿದ್ದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀನಿವಾಸ ಅಡಿಗರು, ತುಳಸಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀಯುತ ಕೃಷ್ಣರಾಯ ಶ್ಯಾನುಬಾಗ್, ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ರೇಷ್ಮ ಪ್ರದೀಪ್ ರವರು ಉಪಸ್ಥಿತರಿದ್ದರು. ತುಳಸಿ ಶಾಲೆಯ ಶಿಕ್ಷಕರಾದ ಹರ್ಷ ಕೋಟೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು.ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೃಷ್ಣರಾಯ ಶ್ಯಾನುಬಾಗ್ ರವರು ವಂದಿಸಿದರು.
ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕ, ಶಿಕ್ಷಕೇತರರು ಸಂಯೋಜನೆ ಮಾಡಿ ಸಹಕರಿಸಿದರು

ಸಚಿವ ಎನ್ . ಎಸ್ ಭೋಸರಾಜು ಹುಯ್ಯಾರು ಪ್ರತಾಪಚಂದ್ರ ಶೆಟ್ಟಿಯವರ ನಿವಾಸಕ್ಕೆ ಬೇಟಿ

ಕುಂದಾಪುರ : ಶ್ರೀ. ಎನ್ . ಎಸ್. ಭೋಸರಾಜು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿಯವರ ಹುಯ್ಯಾರು ನಿವಾಸಕ್ಕೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ವಿಚಾರ ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು .

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀ ಮಂಜುನಾಥ ಭಂಡಾರಿ , ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ , ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ. ಕಿಶನ್ ಹೆಗ್ಡೆ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ , ಕಾಂಗ್ರೆಸ್ ಮುಖಂಡರಾದ ಎಂ. ದಿನೇಶ ಹೆಗ್ಡೆ , ಮುನಿಯಾಲು ಉದಯ ಕುಮಾರ ಶೆಟ್ಟಿ , ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ ಶೆಟ್ಟಿ ಚೋರಾಡಿ , ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪ ಸ್ಥಿತರಿದ್ದರು.

 Monthi Fest celebration at Alangar

Parish priest fr Walter D’Souza blessed New paddy corns. After the procession Solemn Mass was celebrated. Fr Arun Lobo director of counselling centre Mangalore Diocese was the main celebrant. He preached a beautiful sermon on the theme evils that threaten our families. During Mass Biblothon Bible marathon was launched as per the direction of Bible commission. Donors were honoured with a candle. Gurkars distributed blessed corns to the heads of the family. Parish as a family consumed payasam mixed with Novem. Payasam, cake and sugarcane was distributed to all gathered.

Nativity of Blessed Virgin Mary at Hiriyur, Diocese of Shimoga

Chitradurga, Hiriyur, September 8,2023: Our Lady of Assumption Church, Hiriyur, Chitradurga District, Diocese of Shimoga celebrated Nativity of Blessed Virgin Mary feast.

Novena began on August 30th at 5:45pm with Rosary, Holy Eucharist and floral homage for Mother Mary till August 7th.

Parish Priest Fr Franklin D’Souza and Assistant Parish Priest Fr Alphonse Nelson D’Souza led the Holy Eucharist and Novena every day. 

On September 8th, 6:15am was the rosary, then at 6:30am Fr Alphonse Nelson D’Souza celebrated festal Holy Eucharist and preached a homily on “Nativity of Mother Mary”. 

Floral Homage was done end of the Holy Eucharist and special prayers were held.

On behalf of Parish Priest, Fr Nelson D’Souza wished Parish community a very happy feast. 

After the Holy Eucharist Most of the parishioners take pilgrimage to Our Lady of Health, Minor Basilica, Harihara.

ಕುಂದಾಪುರದಲ್ಲಿ ಸಂಭ್ರಮದ ಮೊಂತಿ ಫೆಸ್ತ್; ನಾಡಿನ ಭಾಶೆಗೆ, ನೆಲ, ಜಲಕ್ಕೆ ಗೌರವ ಕೊಟ್ಟು ಈ ಹಬ್ಬ ಆಚರಿಸೋಣ- ಫಾ|ಸಿರಿಲ್ ಲೋಬೊ


ಕುಂದಾಪುರ,ಸೆ.8: ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು “ಮೊಂತಿ ಫೆಸ್ತ್” ಬಹಳ ಶ್ರದಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು ಮೊದಲಿಗೆ ಮೇರಿ ಮಾತೆಯ ಗ್ರೊಟ್ಟೊ ಎದುರುಗಡೆ ಹೊಸ ಬೆಳೆ ಭತ್ತದ ತೇನೆಗಳನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಆಶಿರ್ವದಿಸುವ ಮೂಲಕ ಚಾಲನೆಯನ್ನು ನೀಡಿದರು. ನಂತರ ಅಲಂಕ್ರತ ಬಾಲ ಮೇರಿ ಮಾತೆಯ ಪುಥ್ಥಳಿಗೆ ಚಿಕ್ಕ ಮಕ್ಕಳು ಪುಷ್ಪಗಳನ್ನು ಆರ್ಚನೆ ಮಾಡುತ್ತಾ, ಬ್ಯಾಂಡು ವಾದ್ಯದೊಂದಿಗೆ ಭಕ್ತಿ ಗಾಯನನ ಮೂಲಕ ಮೆರವಣಿಗೆ ಮೂಲಕ ಇಗರ್ಜಿಗೆ ಬಂದು ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು.
ದಿವ್ಯ ಬಲಿದಾನ ಅರ್ಪಿಸಿದ ಉಡುಪಿ ಧರ್ಮಪ್ರಾಂತ್ಯದ ದಿವ್ಯ ಜ್ಯೋತಿಯ ನಿರ್ದೇಶಕರರಾದ ವಂ|ಧರ್ಮಗುರು ಸಿರಿಲ್ ಲೋಬೊ ‘ಮೇರಿ ಮಾತೆಯ ಜೀವನವೊಂದು, ಸುಂದರ ವರ” ಇವ್ ಪ್ರಥಮ ಜಗತ್ತಿನ ಪ್ರಥಮ ಸ್ತ್ರೀಯಾದರೆ, ಅವಳು ದೇವರ ಕ್ರಪೆಯನ್ನು ಹೊಗಲಾಡಿಸಿಕೊಂಡಳು, ಮೇರಿ ಮಾತೆಯು ನಮಗೆ ರಕ್ಷಕನಾದ ಯೇಸುವಿನ ತಾಯಿಯಾಗಲು ಒಪ್ಪಿ ನಮಗೆ ಪುನರ್ಜೀವನ ನೀಡಿದ ಮಹಾತಾಯಿದಳು, ಮೇರಿ ದೇವ ಪುತ್ರನನ್ನು ಹಡೆದು, ಸ್ವರ್ಗವನ್ನೆ ದರೆಗೆ ಇಳಿಸಿದ ಪಾವನೆ. ತಾನು ಗರ್ಭಿಣಿಯಾಗುವೇನೆಂದು ತಿಳಿದ ಪ್ರಥಮ ಸ್ತ್ರೀ, ನಾನು ಗಂಡು ಮಗನಿಗೆ ತಾಯಿಯಾಗುವೆಂದು ತಿಳಿದ ತಾಯಿ, ಈಗೆ ಹಲವು ವಿಷಯಗಳಲ್ಲಿ ಮೇರಿ ಮಾತೆ ಪ್ರಥಮ ಸ್ತ್ರೀ. ಮೇರಿ ಮಾತೆ ಏನೆಂದು ತಿಳಿದುಕೊಳ್ಳಬೇಕಿದ್ದರೆ, ನಾವು ಯೇಸುನ್ನು ಹೆಚ್ಚು ಅರಿಯಬೇಕು. ಪ್ರತಿಯೊಬ್ಬ ಹೆಣ್ಣು ಮೇರಿ ಮಾತೆಯಂತೆ ಸಚ್ಚಾರಿತ್ರದ ಹೆಣ್ಣಾಗಬೆಕು. ಮೇರಿ ಮಾತೆ ಗೋದಲಿಯಿಂದ ಹಿಡಿದು, ಕಾಲ್ವಾರಿ ಪರ್ವತದ ಶಿಲುಭೆಯ ತನಕ ಯೇಸುವಿಗೆ ಜೊತೆ ನೀಡಿದಳು. ನಾವು ಈ ಮಹಾ ಮಾತೆಯ ಜನ್ಮ ದಿನಕ್ಕೆ ಹೊಸ ಬೆಳೆಯನ್ನು ದೇವರಿಗೆ ಕ್ರತ್ಞತಾ ಪುರ್ವಕವಾಗಿ ಸಮರ್ಪಿಸಿ ತೇನೆಹಬ್ಬವನ್ನು ಆಚರಿಸುತ್ತೇವೆ, ನಾವು ಈ ಹಬ್ಬವನ್ನು, ನಮ್ಮ ನಾಡಿನ ಭಾಶೆಗೆ, ನಮ್ಮ ಭೂಮಿಗೆ ನಮ್ಮ ಜಲ ನದಿಗಳಿಗೆ ಗೌರವ ಕೊಟ್ಟು ಈ ಹಬ್ಬ ಆಚರಿಸೋಣ. ಮೇರಿ ಮಾತೆ ಅಥವ ಸಂತರುಗಳ ಕೇವಲ ನಾವು ಮೂರ್ತಿ ಪೂಜೆ ಮಾಡುವುದು ಬೇಡ, ಅವರಿಗೆ ಗೌರವ ನೀಡಿ ಬೇಡಿರಿ, ಅವರು ನಮ್ಮ ನಿವೇದನೆ ಯೇಸು ಸ್ವಾಮಿಯಿಯ ಮೂಲಕ ಬಗೆಹರಿಸುತ್ತಾರೆ ಎಂಬುದು ಅರಿಯೋಣ. ಈ ಹಬ್ಬ ಹೆಣ್ಣುಮಕ್ಕಳ ಹಬ್ಬವೆಂದೂ ಆಚರಿಸುತ್ತಾರೆ ಕಾರಣ ಮೇರಿ ಮಾತೆ ಪಾಪ ಕಳಂಕರ
ಹಿತಳು, ಮೇರಿ ಮಾತೆ ಎಲ್ಲರಿಗೂ ಆದರ್ಶೆ, ಅವಳ ಆದರ್ಶವನ್ನು ನಮ್ಮ ಹೆಣ್ಣು ಮಕ್ಕಳು ಪಾಲಿಸಬೇಕು” ಎಂದು ಅವರು ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಹಬ್ಬದ ಶುಭಾಶಯಗಳನ್ನು ಕೋರಿ ವಂದನಾರ್ಪಣೆ ಮಾಡಿದರು. ಎಲ್ಲಾ ಕುಟುಂಬದವರಿಗೆ ತೆನೆಗಳನ್ನು ಹಂಚಲಾಯಿತು. ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು. ಹಬ್ಬದಲ್ಲಿ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಇದ್ದರು.

ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸಿ , ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ವ್ಯಕ್ತಿಗಳನ್ನು ಪ್ರೇರೇಪಿಸಿ – ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್

ಶ್ರೀನಿವಾಸಪುರ 1 : ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸಿ , ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ವ್ಯಕ್ತಿಗಳನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಹೇಳಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಗುರುವಾರ ಕಛೇರಿ ಸಭಾಂಗಣದಲ್ಲಿ ತ್ರೈಮಾಸಿಕ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಮನೆಗಳಲ್ಲಿ , ಕಛೇರಿಗಳಲ್ಲಿ ಹಸಿಗೊಬ್ಬರ, ಒಣಗೊಬ್ಬರಗಳನ್ನು ಬೇರ್ಪಡಿಸುವ ವಿಧಾನಗಳ ಬಗ್ಗೆ ವಿವರಿಸಿದರು. ಸ್ವಚ್ಚ ಭಾರತ್ ಮಿಷನ್ ಅಭಿಯಾನದ ಅಡಿಯಲ್ಲಿ ಆರ್‍ಆರ್‍ಆರ್ ಕಾರ್ಯಕ್ರಮವನ್ನು ಎಲ್ಲಾ ಸರ್ಕಾರಿ ಕಛೇರಿಗಳು, ಸಂಸ್ಥೆಗಳು, ನಿಗಮ ಮಂಡಳಿಗಳು, ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಅನುಷ್ಠಾನ ಮಾಡುವ ಕುರಿತು ಮಾತನಾಡಿದರು.
ಕಛೇರಿ ವ್ಯವಸ್ಥಾಪಕ ನವೀನ್‍ಚಂದ್ರ, ಪುರಸಭಾ ಹಿರಿಯ ಸದಸ್ಯ ಬಿ.ವಿ.ವೆಂಕಟರೆಡ್ಡಿ, ಸ್ವಚ್ಚಭಾರತ್ ರಾಯಬಾರಿ ಮಾಯಾ ಬಾಲಚಂದ್ರ, ಎಸ್‍ಬಿಐ ಬ್ಯಾಂಕ್‍ನ ವ್ಯವಸ್ಥಾಪಕಿ ಉಮಾ, ಬಿಸಿಎಂ ಅಧಿಕಾರಿ ನರಸಿಂಹಮೂರ್ತಿ, ಸಿಡಿಪಿಓ ಕಛೇರಿ ಸಿಬ್ಬಂದಿಗಳಾದ ನವೀನ್, ಬೈರೆಡ್ಡಿ, ತ್ಯಾಗರಾಜ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಬೈರೇಗೌಡ, ಹಿರಿಯ ಆರೋಗ್ಯ ಸಹಾಯಕ ನಿರೀಕ್ಷಕರಾದ ಕೆ.ಜಿ.ರಮೇಶ್, ಕಂದಾ
ಯ ನಿರೀಕ್ಷಕ ಎನ್.ಶಂಕರ್, ಸಿಬ್ಬಂದಿಗಳಾದ ಸಂತೋಷ್, ಸುರೇಶ್, ಎಸ್ ಸಿಸಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನೇತಾಜಿ ಚಾರಿಟೇಬಲ್ ಟ್ರಸ್ಟ್: ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣ ರವರ ಜಯಂತಿ

ಶ್ರೀನಿವಾಸಪುರ : ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣ ರವರ ಜಯಂತಿಯ ನೆನಪಿನಲ್ಲಿ ನೇತಾಜಿ ಚಾರಿಟೇಬಲ್ ಟ್ರಸ್ಟ್ ಶ್ರೀನಿವಾಸಪುರ ರವರಿಂದ ಪಟ್ಟಣದ ಕರ್ನಾಟಕ ಮಾದರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಬೈರೆಗೌಡ ಶಿಕ್ಷಕ ವೃತ್ತಿಯಲ್ಲಿ ಉನ್ನತ ಹೆಸರನ್ನು ಪಡೆದು ಭಾರತರತ್ನ ಪುರಸಕೃತರಾದ ರಾಧಾಕೃಷ್ಣ ರವರ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಿನ ದಿನಗಳಲ್ಲಿ ಪ್ರತಿಭೆಗಳುಳ್ಳವರು ಸನ್ಮಾಗಳನ್ನು ಪಡೆಯಬೇಕಿದ್ದರೆ ಸರ್ಕಾರದ ಮಟ್ಟದಲ್ಲಿ ಅರ್ಜಿ ಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿ, ವಿಶೇಷವಾದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ನೇತಾಜಿ ಚಾರಿಟೇಬಲ್ ಟ್ರಸ್ಟ್ ನವರು ಗುರುತಿಸಿ ಸನ್ಮಾನಿಸಿ ಗೌರವವಿಸುತ್ತಿರುವುದು ಬಹಳ ಅರ್ಥಗರ್ಭಿತವಾಗಿದೆ.
ಇಂತಹ ಟ್ರಸ್ಟಿಗಳಿಂದ ಇನ್ನಷ್ಟು ಸೇವೆ ಮಾಡಲು ಇಚ್ಛೆಸುವ ಹಲವಾರಿಗೆ ಪ್ರೇರೇಪವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಶಿಕ್ಷಕರಾದ ಬೈರಾರೆಡ್ಡಿ, ಎಂ. ಬೈರೇಗೌಡ, ಅರುಣ್ ಕುಮಾರ್, ಕಲಾಶಂಕರ್, ಶಿಕ್ಷಕಣ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಶಿಕ್ಷಕರು, ನೇತಾಜಿ ಟ್ರಸ್ಟ್ ನ ಅಧ್ಯಕ್ಷರಾದ ನಾಗೇಂದ್ರರಾವ್, ಡಾ. ವೆಂಕಟಾಚಲ, ಕೋಟೇಶ್, ಕೃಷ್ಣಾರೆಡ್ಡಿ ಸುಶುಭಾಶ್, ಸುನಿಲ್, ಗಂಗಾಧರ್ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಇದ್ದರು.