District Level Wrestling Tournament was organized by St Agnes PU College Managluru

Managluru: A District Level Wrestling Tournament was organized by St Agnes PU College in collaboration with the District Pre University Education Board in the college auditorium on 15 September 2023. The programme began with a soulful invocation to the divine, followed by the ceremonial lighting of the lamp.  C D Jayanna, Deputy Director, Pre-University Education was the eminent guest of honour, while Sri Harish Kumar, National Level Wrestler and Kabaddi player was the esteemed chief guest on the occasion.

The chief guest in his address spurred the contestants to give of their best and advocated commitment, dedication and fitness. Wrestling, he said is a dynamic sport that requires complex skills and understanding the finesse of the sport will give one a tactical edge over their opponent.

Wrestling is an ancient individual sport that tests the endurance, skill and strength of the two wrestlers who try to establish their supremacy over their rival. As a sport, wrestling is currently enjoying a huge wave of popularity as it endows young people with concentration, discipline, stamina and helps them achieve goals, equips them with the qualities necessary to face life head on and provides a wealth of opportunities to excel in life. The matches made for an amazing experience and the nail-biting finish kept the audience glued to their seats.

Mrs Shailaja, Kannada Lecturer compered the programme with flair, Mrs Jayashree, Physical Director welcomed the august gathering while Mrs Lavina Lobo, Dept. of Physics proposed the vote of thanks on the occasion.

Dr Sr Maria Roopa AC, Joint Secretary, St Agnes Group of Institutions, Principal SrNorineDSouza, Vice Principal Sr Janet Sequeira, Mrs Jayashree Physical Director, Faculty, PTA members and students were an integral part of the event. The other dignitaries present were Mr Arun Kumar, Sports Coordinator, DK, the Referees, Coaches, Volunteers and Physical Directors of other Pre-University Colleges in the District.

15 girls’ teams and 18 boys’ teams participated enthusiastically in the tournament and won prizes. In the girls’ category, St Agnes PU College bagged the Overall Championship, while SDM Ujire PU College secured the Runners-Up trophy. In the boys’ category St Aloysius PU College were the winners, while Yenepoya PU College secured the Runners-Up trophy.

ಬೆಂಗಳೂರು-ಮೈಸೂರು-ಮಂಗಳೂರು ರೈಲು ಸಂಚಾರ ಇಂದಿನಿಂದ ಮುರುಡೇಶ್ವರದ ವರೆಗೆ ವಿಸ್ತರಣೆ- ಕುಂದಾಪುರ ಭಾಗದವರಿಗೆ ಅನುಕೂಲ

ಕುಂದಾಪುರ: ಬೆಂಗಳೂರು ಮೈಸೂರು ರೈಲು ಮಂಗಳೂರಿನವರೆಗೆ ಮಾತ್ರ ಸಂಚರಿಸುತ್ತಿದ್ದ ರೈಲನ್ನು ಈಗ ಮುರುಡೇಶ್ವರದ ವರೆಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 16ರಿಂದ ಮುರುಡೇಶ್ವರದ ವರೆಗೆ  ರೈಲು ಸಂಚಾರ ಆರಂಭಗೊಳ್ಳಲಿದೆ.

ಬೆಂಗಳೂರಿನಿಂದ ಸೆಪ್ಟೆಂಬರ್ 16ರ ರಾತ್ರಿ ಹೊರಡಲಿದ್ದು ಮೈಸೂರು, ಸಪ್ಟಂಬರ್ 17ರಂದು ಬೆಳಿಗ್ಗೆ ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರ ತಲುಪಲಿದೆ.ಈ ಹಿಂದೆ ಈ ರೈಲು ಮಂಗಳೂರು ವರೆಗೆ ಮಾತ್ರ ಸಂಚರಿಸುತ್ತಿದ್ದು, ಈಗ ಸಂಚಾರವನ್ನು ವಿಸ್ತರಿಸಲಾಗಿದೆ ಇದರಿಂದ ಕುಂದಾಪುರ ಭಾಗದವರಿಗೆ ಹೆಚ್ಚು ಅನುಕೂಲವಾಗಲಿದೆಯೆಂದು ಅಭಿಪ್ರಾಯ ಪಡಲಾಗಿದೆ

ಈ ವಿಸ್ತರಣೆಗಾಗಿ  ಕರಾವಳಿ ಅದರಲ್ಲೂ ಕುಂದಾಪುರ ಭಾಗದ ರೈಲು ಪ್ರಯಾಣಿಕರ ಒತ್ತಾಯ ಜನಪ್ರತಿನಿಧಿಗಳ ಪ್ರಯತ್ನದಿಂದಾಗಿ ಈ ರೈಲು ಸಂಚಾರವನ್ನು ಮುರುಡೇಶ್ವರದವರೆಗೆ ವಿಸ್ತರಿಸಲಾಗಿದೆ. ಇದರಿಂದ ಮೈಸೂರು ಭಾಗದಿಂದ ಕರಾವಳಿಗೆ ಬರುವವರಿಗೆ ಕರಾವಳಿ ಭಾಗದಿಂದ ಮೈಸೂರು ಕಡೆಗೆ ತೆರಳುವವರಿಗೆ, ಅನುಕೂಲವಾಗಲಿದೆ.

ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ – ಅಂತರಾಷ್ಟ್ರೀಯ ಪ್ರಜಾಪ್ರಭುತ್ತ ದಿನಾಚರಣೆ ಅಂಗವಾಗಿ ಭಾರತದಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ

ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ 1864 ವಿದ್ಯಾರ್ಥಿಗಳು ಮತ್ತು ಉಪಪ್ರಾಂಶುಪಾಲರಾದ ಶ್ರೀ ಕಿರಣ ಹೆಗ್ಡೆ ಉಪನ್ಯಾಸಕರು, ಅಧ್ಯಾಪಕರು ಭಾಗವಹಿಸಿರುತ್ತಾರೆ. ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂವಿಧಾನದ ಪ್ರತಿಜ್ಞಾ ವಿಧಿಯನ್ನು, ಉಪನ್ಯಾಸಕರಾದ ಶ್ರೀ ಉದಯ ಕುಮಾರ ಶೆಟ್ಟ ಇವರು ನಿರ್ವಹಿಸಿದರು.

ಶ್ರೀನಿವಾಸಪುರ: ಬೆಸ್ಕಾಂ ಕಚೇರಿಯಲ್ಲಿ ಸೆ.16 ರಂದು ಮಧ್ಯಾಹ್ನ 3 ಗಂಟೆಗೆ ಬೆಸ್ಕಾಂ ವಿದ್ಯುತ್ ಗ್ರಾಹಕರ ಸಭೆ ಏರ್ಪಡಿಸಲಾಗಿದೆ

ಶ್ರೀನಿವಾಸಪುರ: ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸೆ.16 ರಂದು ಮಧ್ಯಾಹ್ನ 3 ಗಂಟೆಗೆ ಬೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಭೆ ಏರ್ಪಡಿಸಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ ತಿಳಿಸಿದ್ದಾರೆ.
ಸಭೆಯಲ್ಲಿ ಗ್ರಾಹಕರೊಂದಿಗೆ ಸಂವಾದ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು. ಗಣೇಶ ವಿಗ್ರಹ ಪ್ರತಿಷ್ಠಾಪನಾ ಸ್ಥಳಗಳಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
.

ಶ್ರೀನಿವಾಸಪುರ:ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಬೇಕು – ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್

ಶ್ರೀನಿವಾಸಪುರ: ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಬೇಕು ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬ್ಯಾಂಕ್ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್ ರೈತರು ಮತ್ತಿತರ ಫಲಾನುಭವಿಗಳಿಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಬ್ಯಾಂಕ್ ಸಾಲ ನೀಡುವುದಿಲ್ಲ ಎಂದು ಹೇಳಿದರು.
ಮುಖ್ಯವಾಗಿ ರೈತ ಸಮುದಾಯದ ಹಿತ ಕಾಯಲು ಬ್ಯಾಂಕ್ ಸ್ಥಾಪಿಸಲಾಗಿದೆ. ಆದರೆ ಸಾಲಗಾರರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾಲ ಮರುಪಾವತಿ ಆಗುತ್ತಿಲ್ಲ. ಹಾಗಾಗಿ ಹೊಸ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿ ಬದಲಾಗಬೇಕಾದರೆ, ಸಾಲ ವಸೂಲಾತಿ ಪ್ರಮಾಣ ಹೆಚ್ಚಬೇಕು. ಬ್ಯಾಂಕ್ ನಿರ್ದೇಶಕರು ಸಾಲಗಾರರ ಮನೆಗಳಿಗೆ ಹೋಗಿ, ಸಾಲಗಾರರ ಮನವೊಲಿಸಿ ಸಾಲ ಮರುಪಾವತಿ ಮಾಡುವಂತೆ ಮನವೊಲಿಸಬೇಕು ಎಂದು ಹೇಳಿದರು.
ಸಧ್ಯಕ್ಕೆ ರೂ.8.88 ಕೋಟಿ ಸಾಲ ವಸೂಲಾಗಬೇಕಾಗಿದೆ. ಸಾಲ ಮರುಪಾವತಿಯಾದರೆ 256 ಸಾಲಗಾರರಿಗೆ ರೂ.1.95 ಕೋಟಿ ಬಡ್ಡಿ ಮನ್ನಾ ಮಾಡಲಾಗುವುದು. ಸಾಲಗಾರರು ತಮ್ಮ ಹಾಗೂ ಬ್ಯಾಂಕ್ ಅಭಿವೃದ್ಧಿ ದೃಷ್ಟಿಯಿಂದ ಸಾಲ ಮರುಪಾವತಿ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ರೂ.57.45 ಲಕ್ಷ ಬ್ಯಾಕ್ ನಿರ್ವಹಣಾ ಬಜೆಟ್‍ಗೆ ಅನುಮೋದನೆ ನೀಡಲಾಯಿತು. ಬ್ಯಾಂಕ್‍ಗೆ ಹೊಸ ಕಂಪ್ಯೂಟರ್ ಖರೀದಿಸಲು ಹಾಗೂ ಹಳೆ ಜೀಪ್ ಹರಾಜುಹಾಕಲು ನಿರ್ಧರಿಸಲಾಯಿತು.
ಬ್ಯಾಂಕ್ ಉಪಾಧ್ಯಕ್ಷ ಕೆ.ಬಿ.ಸುಬ್ಬಾರೆಡ್ಡಿ, ನಿದೇಶಕರಾದ ಎಲ್.ಗೋಪಾಲಕೃಷ್ಣ, ಎಂ.ಎನ್.ರಾಮಚಂದ್ರಾರೆಡ್ಡಿ, ಎಸ್.ಜಿ.ಜಗದೀಶ್ ಕುಮಾರ್, ಟಿ.ಎನ್.ಕೃಷ್ಣಾರೆಡ್ಡಿ, ವ್ಯವಸ್ಥಾಪಕ ಸಿ.ಎನ್.ಕೃಷ್ಣನ್, ಲೆಕ್ಕಾಧಿಕಾರಿ ಬಿ.ಶ್ರೀನಿವಾಸ್, ಮಂಜುನಾಥಾಚಾರ್, ಕೆ.ಬಿ.ನರೇಶ್, ಆರ್.ಎನ್.ರವೀಂದ್ರ, ಕೆ.ಎನ್.ಸತೀಶ್, ಜಿ.ಎನ್.ಗೋವಿಂದರೆಡ್ಡಿ, ಶಶಿಕುಮಾರ್, ಸೀತಾರಾಮರೆಡ್ಡಿ, ಮಂಜುನಾಥರೆಡ್ಡಿ, ಎನ್.ತಿಮ್ಮಯ್ಯ ಇದ್ದರು.

ಶ್ರೀನಿವಾಸಪುರ: ಪ್ರತಿಯೊಬರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕು – ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಪ್ರತಿಯೊಬರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಮಾರಂಭದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಮಾದರಿ ಸರ್ಕಾರ ಜನಪ್ರಿಯವಾಗಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ನಡೆಸುವ ಸರ್ಕಾರವನ್ನು ಪ್ರಜಾಪ್ರಭುತ್ವ ಸರ್ಕಾರ ಎಂದು ಕರೆಯುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಇಲ್ಲಿ ತಮ್ಮ ಪ್ರತಿನಿಧಿಗಳನ್ನು ಚುನಾವಣೆ ಮೂಲಕ ಆಯ್ಕೆಮಾಡುವ ಅವಕಾಶ ಪ್ರಜೆಗಳಿಗಿದೆ. ಇನ್ನಾವ ವ್ಯವಸ್ಥೆಯಲ್ಲೂ ಅಂಥ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ಹಿರಿದು. ವಿವಿಧತೆಯಲ್ಲಿ ಏಕತೆ ಸಾಧಿಸಲು ಸಂವಿಧಾನ ನೆರವಾಗುತ್ತದೆ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಸರ್ವ ಸಮ್ಮತವಾದ ಸಂವಿಧಾನ ನೀಡುವುದರ ಮೂಲಕ ಬಾಬಾ ಸಾಹೇಬರು ವಿಶ್ವಮಾನ್ಯರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಓದಲಾಯಿತು. ಸಂವಿಧಾನ ಪಾಲಿಸುವ ಪ್ರತಿಜ್ಞಾ ವಿಧಿ ಕೈಗೊಳ್ಳಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್.ಶಿವಕುಮಾರಿ, ಉಪ ತಹಶೀಲ್ದಾರ್ ಕೆ.ಎಲ್.ಜಯರಾಮ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಬಿಸಿಎಂ ಅಧಿಕಾರಿ ಎನ್.ನರಸಿಂಹಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್, ವ್ಯವಸಾಯ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಅಭಿಷೇಕ್, ಮುಖಂಡರಾದ ರಾಮಚಂದ್ರ, ನರಸಿಂಹ, ನಾರಾಯಣಸ್ವಾಮಿ, ಶ್ರೀನಿವಾಸ್, ಪಿ.ವಾಸು, ಮುಳಬಾಗಿಲಪ್ಪ, ಗೋಪಾಲ್ ಇದ್ದರು.

ಉದ್ಯಮಿಗೆ 5 ಕೋಟಿ ರೂ. ವಂಚನೆ ಎಸಗಿದ ಚೈತ್ರಾ ಕುಂದಾಪುರ ವಿಚಾರಣೆ ವೇಳೆ ಕುಸಿದು ಬಿದ್ದುದು ಕೂಡ ವಂಚನೆಯ ನಾಟಕವೇ ?

ಬೆಂಗಳೂರು: ಉದ್ಯಮಿಗೆ 5 ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ, ವಿಚಾರಣ ಸಮಯದಲ್ಲಿ ಕುಸಿದು ಬಿದ್ದುದರಿಂದ ಇವಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದು, 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ. ವಿಚಾರಣೆ ವೇಳೆ ಮೂರ್ಛೆ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾಳೆ.

ಆದರೆ ಇತ್ತೀಚೆಗಿನ ವರದಿ ಬಂದಂತೆ, ಆಸ್ಪತೆಯಲ್ಲಿ ಚೈತ್ರಗೆ ತಪಾಸಣೆ ನೆಡೆದಾಗ, ಮೂರ್ಛೆ ರೋಗದ ಲಕ್ಷಣಗಳು ಕಾಣಲಿಲ್ಲ ಎಂದು ವೈದ್ಯಕೀಯ ವರದಿ ತಿಳಿಸಿದೆ. ಅಂದ ಹಾಗೇ ನಿನ್ನೆ ಚೈತ್ರ ಬಟ್ಟೆ ತೊಳೆಯುವ ಸಾಬುನನನ್ನು ತರಿಸಿದ್ದಳೆಂದು ತಿಳಿದುಬಂದಿದೆ. ಹಾಗಾಗಿ ವಂಚಕಿ ಚೈತ್ರ ಕುಸಿದು ಬಿದ್ದದು ಕೂಡ ವಂಚಿಸಲು ರೂಪಿಸಿದ ನಾಟಕವೆಂಬತ್ತೆ ಅನುಮಾನ ವ್ಯಕ್ತವಾಗುತ್ತದೆ.

ಮಣಿಪುರ ನಾಲ್ಕು ತಿಂಗಳ ಹಿಂಸಾಚಾರದಲ್ಲಿ 175 ಮಂದಿ ಸಾವು 1,100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ

ಮಣಿಪುರದಲ್ಲಿ ಮೇ ತಿಂಗಳ ಆರಂಭದಿಂದ ತತ್ತರಿಸಿರುವ ಜನಾಂಗೀಯ ಕಲಹದಲ್ಲಿ 175 ಮಂದಿ ಸಾವನ್ನಪ್ಪಿದ್ದು, 1,108 ಮಂದಿ ಗಾಯಗೊಂಡಿದ್ದು, 32 ಮಂದಿ ನಾಪತ್ತೆಯಾಗಿದ್ದಾರೆ ಎಂದು IGP (ಕಾರ್ಯಾಚರಣೆ) I K Muivah ತಿಳಿಸಿದ್ದಾರೆಂದು ಪಿಟಿಐ ಮೂಲಗಳಿಂದ ತಿಳಿದು ಬಂದಿದೆ.

ಈ ತನಕ ಒಟ್ಟಾರೆಯಾಗಿ, 4,786 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು 386 ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಜಿಪಿ (ಕಾರ್ಯಾಚರಣೆ) ಐ ಕೆ ಮುಯಿವಾ, “ಮಣಿಪುರದ ಈ ಸವಾಲಿನ ಸಮಯದಲ್ಲಿ, ಪೊಲೀಸರು, ಕೇಂದ್ರ ಪಡೆಗಳು ಮತ್ತು ನಾಗರಿಕ ಆಡಳಿತವು ಸಹಜ ಸ್ಥಿತಿಗೆ ಮರಳಲು ಹಗಲಿರುಳು ಪ್ರಯತ್ನಿಸುತ್ತಿದೆ ಎಂದು ನಾವು ಸಾರ್ವಜನಿಕರಿಗೆ ಭರವಸೆ ನೀಡಬಹುದು” ಎಂದು ಹೇಳಿದರು.

ಹಿಂಸಾಚಾರದ ಸಂದರ್ಭದಲ್ಲಿ ಗಲಭೆಕೋರರು ಪೊಲೀಸರ ದೊಡ್ಡ ಸಂಖ್ಯೆಯ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದುಹೋದ ಶಸ್ತ್ರಾಸ್ತ್ರಗಳಲ್ಲಿ 1,359 ಬಂದೂಕುಗಳು ಮತ್ತು 15,050 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಯಿವಾ ಗುರುವಾರ ಹೇಳಿದ್ದಾರೆ.

5,172 ಅಗ್ನಿಸ್ಪರ್ಶ ಪ್ರಕರಣಗಳು ವರದಿಯಾಗಿವೆ, 386 ಧಾರ್ಮಿಕ ರಚನೆಗಳು – 254 ಚರ್ಚ್‌ಗಳು ಮತ್ತು 132 ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಮುಯಿವಾ ಹೇಳಿದರು.

ಬಿಷ್ಣುಪುರ ಜಿಲ್ಲೆಯ ಫೌಗಕ್‌ಚಾವೊ ಇಖೈಯಿಂದ ಚುರಚಂದಪುರ ಜಿಲ್ಲೆಯ ಕಾಂಗ್‌ವೈವರೆಗಿನ ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಐಜಿಪಿ (ಆಡಳಿತ) ಕೆ ಜಯಂತ ಮಾತನಾಡಿ, ಮೃತಪಟ್ಟ 175 ಜನರ ಪೈಕಿ ಒಂಬತ್ತು ಮಂದಿ ಇನ್ನೂ ಪತ್ತೆಯಾಗಿಲ್ಲ.

“ಎಪ್ಪತ್ತೊಂಬತ್ತು ದೇಹಗಳು ಹಕ್ಕು ಪಡೆಯದಿದ್ದರೂ 96 ಹಕ್ಕುಗಳಿಲ್ಲದೆ ಉಳಿದಿವೆ. RIMS ಮತ್ತು JNIMS (ಇಂಫಾಲ್‌ನ ಆಸ್ಪತ್ರೆಗಳು), ಕ್ರಮವಾಗಿ 28 ಮತ್ತು 26 ದೇಹಗಳನ್ನು ಇರಿಸಲಾಗಿದೆ, ಆದರೆ 42 ಚುರಾಚಂದ್‌ಪುರ ಆಸ್ಪತ್ರೆಯಲ್ಲಿವೆ” ಎಂದು ಅವರು ಮಾಹಿತಿ ನೀಡಿದರು.

9,332 ಪ್ರಕರಣಗಳು ದಾಖಲಾಗಿದ್ದು, 325 ಜನರನ್ನು ಬಂಧಿಸಲಾಗಿದೆ ಎಂದು ಜಯಂತ ತಿಳಿಸಿದರು.

ಏತನ್ಮಧ್ಯೆ, NH-32 ಮತ್ತು NH-2 ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು IGP (ವಲಯ-3) ನಿಶಿತ್ ಉಜ್ವಲ್ ಹೇಳಿದ್ದಾರೆ.

ಮೇ 3 ರಂದು ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು, ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಲಾಗಿತ್ತು.

ಮಣಿಪುರದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ, ಆದರೆ ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟಿದ್ದಾರೆ ಮತ್ತು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ತಿರುಪತಿ ಯಾತ್ರೆ ಮುಗಿಸಿ ಹಿಂದಿರುಗುವ ವೇಳೆ ರಸ್ತೆ ಅಪಘಾತ ಸಂಭವಿಸಿ ಕರ್ನಾಟಕದ ಐವರ ಸಾವು

ಆಂಧ್ರಪ್ರದೇಶ: ತಿರುಪತಿ ಯಾತ್ರೆ ಮುಗಿಸಿ ಹಿಂದಿರುಗುವ ವೇಳೆ ರಸ್ತೆ ಅಪಘಾತ ಸಂಭವಿಸಿ ಕರ್ನಾಟಕದ ಐವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ. ಮಠಂಪಲ್ಲಿಯಲ್ಲಿ ನಡೆದಿದೆ. ಅಪಘಾತಕೊಳ್ಳಗಾದವರನ್ನು ಬೆಳಗಾವಿ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ
ಮಠಂಪಲ್ಲಿ ಗ್ರಾಮದ ಬಳಿ ತಮ್ಮ ಕ್ರೂಸರ್‌ ವಾಹನ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 12 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.