ಶ್ರೀನಿವಾಸಪುರ: ಸಾಲ ಪಡೆದಿರುವ ಫಲಾನುಭವಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಎಂದು ಕಸಬಾ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ವಿ.ಅಯ್ಯಪ್ಪ ಹೇಳಿದರು.
ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರಿಗೆ ಪಕ್ಷಾತೀತವಾಗಿ ಸಾಲ ವಿತರಣೆ ಮಾಡಲಾಗಿದೆ. ಮರುಪಾವತಿ ಪ್ರಮಾಣ ತೃಪ್ತಿಕರವಾಗಿದ್ದರೂ, ಇನ್ನಷ್ಟು ಪ್ರಾಮಾಣಿಕವಾಗಿ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಬೇಕು. ಸಂಘದ ಕಟ್ಟಡ ಬಾಡಿಗೆಯಿಂದ ಮಾಸಿಕ ರೂ.75 ಸಾವಿರ ಆದಾಯ ಬರುತ್ತದೆ ಎಂದು ಹೇಳಿದರು.
ಸಭೆ ರೂ.17.80 ಲಕ್ಷ ವಾರ್ಷಿಕ ಬಜೆಟ್‍ಗೆ ಅನುಮೋದನೆ ನೀಡಿತು.
ನಿರ್ದೇಶಕರಾದ ಶಾಂತಮ್ಮ, ವೆಂಕಟರೆಡ್ಡಿ, ಎಂ.ಬೈರೆಡ್ಡಿ, ಮುನಿಯಪ್ಪ, ಶಬ್ಬೀರ್ ಅಹ್ಮದ್ ಪಾಷ, ಸೀತಾರಾಮರೆಡ್ಡಿ, ನಾಗರಾಜು, ಗುರಪ್ಪ, ನಂಜುಂಡಪ್ಪ, ಸಿ.ಎನ್.ಶಿವಾರೆಡ್ಡಿ, ಎಂ.ದೇವಿಕಾ, ಸಿ.ಎನ್.ವಿನೋದ್ ಇದ್ದರು.
Year: 2023
ಉದ್ಯಮಿಯನ್ನು ವಂಚಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚೈತ್ರಾಳಿಂದ ಕೋಟಿ ಕೋಟಿ ಹಣ ಆಸ್ತಿ ಜಪ್ತಿ
ಕುಂದಾಪುರ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ಉದ್ಯಮಿಯನ್ನು ವಂಚಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಹಿಂದೂಪರ ಸಂಘಟನೆಯ ಚೈತ್ರಾ ಕುಂದಾಪುರ ಕೋಟಿ ಕೋಟಿ ಆಸ್ತಿಯ ಒಡತಿ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.ಚೈತ್ರಾ ಕುಂದಾಪುರ ಮನೆಯಲ್ಲಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.ಚೈತ್ರಾ ಕುಂದಾಪುರ ಮನೆಯಲ್ಲಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ. ಎಲ್ಲಾ ಸೇರಿಸಿ ಸುಮಾರು 4 ಕೋಟಿ ರೂ. ನಗದು ಪತ್ತೆಯಾಗಿದ್ದು, ಚೈತ್ರಾ ಕುಂದಾಪುರ ಖಜಾನೆ ಕಂಡು ಸಿಸಿಬಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಇನ್ನು ಬಾಗಲಕೋಟೆಯಲ್ಲಿ ಚೈತ್ರಾ ಅವರ ಕಾರು ಪತ್ತೆಯಾಗಿದ್ದು, ಪೊಲೀಸರು ಈ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಖರೀದಿಸಿದ್ದ ಕಿಯಾ ಕೇರೆನ್ಸ್ ಕಾರು, ಮನೆ,ಸೈಟು ಹಾಗೂ ಎರಡು ಕೋಟಿ ರೂಪಾಯಿ ಎಫ್.ಡಿ ಹಣದನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.ಸೊಲ್ಲಾಪುರದ ಬಾರ್ ಅ್ಯಂಡ್ ರೆಸ್ಟೊರೆಂಟ್ ಮುಂದೆ ನಿಲ್ಲಿಸಿದ್ದ ಚೈತ್ರಾ ಅವರ ಕಾರನ್ನು ಅವರ ಸ್ನೇಹಿತ ಎಂದು ಹೇಳಲಾಗುವ ಕಿರಣ್ ಎನ್ನುವವರು ಸೆಪ್ಟೆಂಬರ್ 9 ರಂದು ಮುಧೋಳಕ್ಕೆ ತಂದಿದ್ದರು. ಕಿರಣ್ ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರು ತಂದು ತನ್ನ ಡ್ರೈವಿಂಗ್ ಸ್ಕೂಲ್‌ನಲ್ಲಿಟ್ಟುಕೊಂಡಿದ್ದರು. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸ್ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್ ಪಶಕ್ಕೆ ಪಡೆದು ಕಾರು ಜಕ್ತಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಚೈತ್ರಾ ಕುಂದಾಪುರ ಅವರಿಗೆ ಸೇರಿದ್ದ 3 ಕೋಟಿ ರೂ. ಮೌಲ್ಯದ ಸ್ವತ್ತನ್ನು ಸಹ ಪೊಲೀಸರು ಜಶ್ತಿ ಮಾಡಿದ್ದಾರೆ. ಚೈತ್ರಾ ಮತ್ತು ಶ್ರೀಕಾಂತ್ ಹೆಸರಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದ 1.8 ಕೋಟಿ ರೂ. ಹಣವನ್ನು ಜಫ್ತಿ ಮಾಡಿಕೊಳ್ಳಲಾಗಿದೆ. ಸ್ಥಳೀಯ ಸೊಸೈಟಿಯಲ್ಲಿದ್ದ 40 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಂಚನೆಯ ಹಣದಲ್ಲಿ ಖರೀದಿ ಮಾಡಿದ್ದ 65 ಲಕ್ಷ ರೂ. ಮೊತ್ತದ
ಚಿನ್ನಾಭರಣವನ್ನೂ ಪಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಡಿ ಕಿನಾರ ಕಡಲ ತೀರದಲ್ಲಿ ಮರಳು ಶಿಲ್ಪ “ವರ್ಣ ವಿನಾಯಕ ” ಮೋದಕ ಪ್ರಿಯ ಸೊಂಡಿಲ ಬಾಲ ಗಣಪ
ಮರಳು ಶಿಲ್ಪ:- ಪ್ರಥಮ ಪೂಜಿತ, ಜ್ಞಾನ ಮತ್ತು ಬುದ್ದಿಯ ಅಧಿಪತಿ, ಗಣಗಳ ಒಡೆಯನಾದ ಗಣೇಶನ ಹಬ್ಬದ ಆಚರಣೆ ದೇಶಾದ್ಯಂತ ತಯಾರಿಯಲ್ಲಿರುವ ಈ ಸುಸಂದರ್ಭದಲ್ಲಿ ಕಲಾಕೃತಿಯ ಮೂಲಕ 15 ವಿದ್ಯಾರ್ಥಿಯರ ಕೈಯಲ್ಲಿ ಮೂಡಲಿರುವ ಗಣೇಶ ಮೂಡಿ ಬಂದನು.
*ಕಲಾಕೃತಿಯ ವಿಶೇಷತೆ*
ಮೋದಕ ಪ್ರಿಯ ಸೊಂಡಿಲ ಬಾಲ ಗಣಪ ಪ್ರಕೃತಿ ಮಡಿಲಲ್ಲಿ -ಬುದ್ದಿಯ ಪ್ರತೀಕವಾಗಿ ಮೂಷಿಕ ವಾಹನವನ್ನು ವಿಶ್ವ ಪರ್ಯಾಟನೆಯ ಸಂಕೇತವಾಗಿ ಶಿವಲಿಂಗದೊಂದಿಗೆ ಬಣ್ಣದ ಮೂಲಕ ಕಂಗೊಳಿಸುವ “ವರ್ಣ ವಿನಾಯಕ ” ಎಂಬ ಶೀರ್ಷಿಕೆಯಡಿಯಲ್ಲಿ ಕಲಾವಿದ ಮತ್ತು ತ್ರಿವರ್ಣ ಕಲಾಕೇಂದ್ರದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ರಚಿಸಲಾಯಿತು.
ಭಾಗವಹಿಸಿದ ವಿದ್ಯಾರ್ಥಿಗಳು
ಅದ್ವಿತ್ ಕುಮಾರ್, ಸಮೃದ್ಧಿ, ಕಾರ್ತಿಕ್ ಕೊತ್ವಲ್, ಯಶಸ್ ಕೆ. ಹೆಚ್., ಕೃತಿ ಕೆ.ದೇವಾಡಿಗ, ಸಮರ್ಥ್, ತನ್ಮಯ್ ಪಡ್ತೀ, ನಿಯತಿ ಎನ್. ಪೈ, ನಿಧಿ ವಿಜಯ್, ರಿತೇಶ್ ಪ್ರಭು, ನಿಶ್ಚಿತ ವಿ. ಹೆಚ್, ಸಾತ್ವಿಕ್ ಶೆಣೈ, ಪ್ರಣೀತ್ ಪಿ. ಶೆಟ್ಟಿ, ಯಶ್ಮಿತಾ ಜಿ.ರವರು 4 ಅಡಿ ಎತ್ತರ ಮತ್ತು 9 ಅಡಿ ಅಗಲಗಳುಳ್ಳ ಬಣ್ಣದ ಕಲಾಕೃತಿಯನ್ನು ರಚಿಸಿದರು.
ಶಿಕ್ಷಕಿ ಶ್ರೀಮತಿ ಚೇತನಾ ಜಿ. ಸಂತೋಷ್ ಹಾಲಾಡಿ ಸಹಕರಿಸಿದರು.
ಭಾರತ ಏಷ್ಯಾ ಕಪ್ 2023 ರ ಛಾಂಪಿಯನ್ – ಶ್ರೀಲಂಕಾ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ಶ್ರೀಲಂಕಾ ಅಲ್ಪ ಮೊತ್ತಕ್ಕೆ ಔಟ್
ಕೊಲಂಬೊ: ಏಷ್ಯಾ ರಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ. ದಾಖಲೆಯ 8ನೇ ಬಾರಿ ಭಾರತ ತಂಡ ಏಷ್ಯಾ ಕಪ್ ಛಾಂಪಿಯನ್ ಆಗಿ ಹೊರಹೊಮ್ಮಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ
ಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಲಂಕಾ ಕೇವಲ 15.2 ಓವರ್‌ಗಳಲ್ಲಿ 50 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ದಾಖಲೆಯ ಕಡಿಮೆ ಕೊತ್ತಕ್ಕೆ ಕುಸಿಯಿತು.
ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಸಿರಾಜ್ ಏಳು ಓವರ್‌ಗಳಲ್ಲಿ 21 ರನ್ ತೆತ್ತು ಆರು ವಿಕೆಟ್ ಉಡಾಯಿಸಿದರು. ಒಂದೇ ಓವರ್‌ನಲ್ಲಿ ಮೇಡನ್ ಸಹಿತ ನಾಲ್ಕುವಿಕೆಟ್ ಶಬಳಿಸಿದ್ದು ವಿಶೇಷವಾಗಿತ್ತು.
ಹಾರ್ದಿಕ್ ಪಾಂಡ್ಯ ಮೂರು ಹಾಗೂ ಜಸ್‌ಪ್ರೀತ್ ಬೂಮ್ರಾ ಒಂದು ವಿಕೆಟ್ ಉಡಾಯಿಸಿದರು, ಬಳಿಕ ಈ ಗುರಿ ಬೆನ್ನಟ್ಟಿದ ಭಾರತ 6.1 ಓಪರ್‌ಗಳಲ್ಲಿ ಗೆಲುವಿನ ದಡ ಸೇರಿತು. ಭಾರತ ನೋ ಲಾಸ್ ಜಯ ಗಳಿಸಿತು. ಶುಭಮನ್ ಗಿಲ್ 27 ಹಾಗೂ ಇಶಾನ್ ಕಿಶನ್ 23 ರನ್ ಗಳಿಸಿದರು.
ಶ್ರೀನಿವಾಸಪುರ ಪುರಸಭಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷರವರು ಹಲವಾರು ಕಾಮಗಾರಿಗಳ ಖುದ್ದು ಪರಿಶೀಲನೆ ನಡೆಸಿದರು
ಶ್ರೀನಿವಾಸಪುರ : ಪುರಸಭಾ ವ್ಯಾಪ್ತಿಯ ಇಂದಿರಾ ನಗರ, ಮಾರುತಿ ನಗರ, ಡಾ. ಜಾಕೀರ್ ಹುಸೇನ್ ಮೊಹಲ್ಲಾ, ವೆಂಕಟೇಶ್ವರ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಅಕ್ರಂಪಾಷ ರವರು ಇಂದು ಭೇಟಿ ನೀಡಿ ಸ್ವಚ್ಛತೆ, ಬೀದಿ ದೀಪಗಳ CCMS Lights ನಿರ್ವಹಣೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ವಹಿಸಿರುವ ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿ ಸೇರಿದಂತೆ Dry Weste Management ನಿರ್ವಹಣೆ ಘಟಕಗಳನ್ನು ಖುದ್ದಾಗಿ ಪರಿಶೀಲಿಸಿದರು. ನಂತರ ಪುರಸಭಾ ಕಚೇರಿಗೆ ಭೇಟಿ ನೀಡಿದ ಮಾನ್ಯ ಜಿಲ್ಲಾಧಿಕಾರಿಗಳು ಕೆ.ಎಂ.ಎಫ್-24 ಡಾಟಾ ಎಂಟ್ರಿ ಮತ್ತು ವಿವಿಧ ಲಾಗಿನ್ ಗಳಲ್ಲಿ ಸ್ವತಃ ತಾವೇ ಕರವಸೂಲಿಗರರ ಜೊತೆ ಆಸ್ತಿ ಕಣಜ ತಂತ್ರಾಂಶದಲ್ಲಿ ದತ್ತಾಂಶ ಪರಿಶೀಲನೆ ಮಾಡಿದ ಅವರು ಕೆಎಂಎಫ್-24 ವಹಿಯಲ್ಲಿ ನಿರ್ವಹಿಸಿರುವ ವಿವರ ಸೇರಿದಂತೆ ಪುರಸಭಾ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ, ಖಾಲಿ ಇರುವ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ, ಆಸ್ತಿ ತೆರಿಗೆ, ನೀರಿನ ತೆರಿಗೆ ಹಾಗೂ ಎಲ್ಲಾ ಸೆಸ್ಗಳ ವಿವರಗಳ ಮಾಹಿತಿ ಪಡೆದುಕೊಂಡರು. ಮಾನ್ಯ ಯೋಜನಾ ನಿದೇಶಕರ ಕಛೇರಿಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಚಲಪತಿ, ಪುರಸಭಾ ಮುಖ್ಯಾಧಿಕಾರಿ ಶ್ರೀ ವೈ. ಎನ್. ಸತ್ಯನಾರಾಯಣ, ಕಂದಾಯಧಿಕಾರಿ ಶ್ರೀ ವಿ. ನಾಗರಾಜು, ಕಿರಿಯ ಅಭಿಯಂತರಾದ ಶ್ರೀ ವಿ. ಶ್ರೀನಿವಾಸಪ್ಪ, ಹಿ.ಆ.ನಿ ಶ್ರೀ ಕೆ. ಜಿ. ರಮೇಶ್ ನೋಡಲ್ ಅಧಿಕಾರಿ ಶ್ರೀ ಚೌಡೇಗೌಡ ಹಾಗೂ ಪುರಸಭಾ ಸಿಬ್ಬಂಧಿ ಈ ಸಂದರ್ಭದಲ್ಲಿ ಹಾಜರಿದ್ದರು.
ದಿಂಬಾಲ ಗ್ರಾಮದ ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್‍ನ ಅಂಗನವಾಡಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಕಾರ್ಯಕ್ರಮ
ಶ್ರೀನಿವಾಸಪುರ: ತಾಲೂಕಿನ ರೋಣೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವತಿಯಿಂದ ಶನಿವಾರ ದಿಂಬಾಲ ಗ್ರಾಮದ ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್‍ನ ಅಂಗನವಾಡಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ರೋಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಉಮಾಭಾರತಿ, ಬಿಎಇಒ ಆಂಜಲಮ್ಮ, ಎಚ್‍ಐಒ ವಿಜಯಲಕ್ಷ್ಮಿ, ಸಿಎಚ್‍ಒ ಮೀನಾಕ್ಷಿ, ಪಿಎಚ್‍ಸಿಒ ಜಿ.ಸಿ.ಶ್ಯಾಮಲ, ಗ್ರಾ.ಪಂ ಸದಸ್ಯ ವೆಂಕಟರಮಣಾರೆಡ್ಡಿ ಇದ್ದರು.
ಸಂತ ಮದರ್ ತೆರೇಸಾ ಸ್ಮಾರಕ ದಿನದ ಅಂಗವಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣದ ಅಂಗವಾಗಿ
ಮಂಗಳೂರು: ಮದರ್ ತೆರೆಸಾ ಅವರ 26ನೇ ವರ್ಷಾಚರಣೆ ಅಂಗವಾಗಿ ಮಾನವೀಯತೆಯ ಪ್ರತಿರೂಪವಾದ ಸಂತ ಮದರ್ ತೆರೇಸಾ ಅವರ 26ನೇ ವಾರ್ಷಿಕೋತ್ಸವದ ಅಂಗವಾಗಿ ‘ಎಲ್ಲೆಡೆ ಶಾಂತಿ ಪಸರಿಸಲಿ’ ಎಂಬ ಘೋಷ ವಾಕ್ಯದೊಂದಿಗೆ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಸೆ.21ರಂದು ಬೆಳಗ್ಗೆ 10 ಗಂಟೆಗೆ ನಗರದ ಕುದ್ಮುಲರಂಗರಾವ್ ಪುರಸಭಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ‘ವೈವಿಧ್ಯಮಯ ಭಾರತದಲ್ಲಿ ಪ್ರೀತಿಯ ಕೋಶಗಳು’ ಥೀಮ್.
ವಿಚಾರ ಸಂಕಿರಣವನ್ನು ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟೂರು ಉದ್ಘಾಟಿಸಲಿದ್ದು, ಖ್ಯಾತ ಸಾಹಿತಿ, ಸಾಹಿತಿ ಡಾ.ಕೆ.ಶೆರಿಫಾರ್ ವಿಷಯ ಮಂಡಿಸಲಿದ್ದು, ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್ ನೆರವೇರಿಸಲಿದ್ದಾರೆ. ನಗರಸಭೆ, ಪ್ರತಿಕ್ರಿಯೆ ನೀಡಲಿದೆ. ಸಭೆಯ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕೂ ಮುನ್ನ 9.30ಕ್ಕೆ ಏಕತಾರ್ ಗಾಯಕಿ ನಾದ ಮಣಿನಾಲ್ಕೂರುಬಾಳಗ ಹಾಗೂ ಜನಪ್ರೀತಿಬಾಳಗದವರಿಂದ ಪ್ರೇಮ ನೀರಾವರಿ ಎಂಬ ಸೌಹಾರ್ದ ಗಾಯನ ಕಾರ್ಯಕ್ರಮ ನಡೆಯಲಿದೆ.
ಪ್ರೀತಿ ಮತ್ತು ಸೇವೆಯ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಹೃದಯಗಳನ್ನು ಗೆದ್ದ ವಿಶ್ವದ ಮಹಾತಾಯಿ ಸಂತ ಮದರ್ ತೆರೇಸಾ ಅವರ ಚಿಂತನೆ ಮತ್ತು ಆದರ್ಶಗಳನ್ನು ಸಾಗಿಸುವ ಸಲುವಾಗಿ 2017 ರಲ್ಲಿ ಜನಿಸಿದ ಸಂತ ಮದರ್ ತೆರೇಸಾ ವೇದಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಎಲ್ಲಾ ಧರ್ಮದ ಜನರ ವಿಶ್ವಾಸ ಗಳಿಸಿದೆ. ಸೆಮಿನಾರ್‌ಗಳು, ಸಂವಾದಗಳು, ಸೌಹಾರ್ದ ಪ್ರೇಮ ಹಬ್ಬಗಳು. ಇದು ಮಾನವೀಯ ಹೃದಯಗಳೊಂದಿಗೆ ಜಾತ್ಯತೀತ ಮತ್ತು ಸೌಹಾರ್ದ ಕೂಟವಾಗಿ ಹೊರಹೊಮ್ಮಿದೆ. ನಗರದ ಖ್ಯಾತ ಚಿಂತಕರು, ಪ್ರಾಧ್ಯಾಪಕರು, ಸಾಹಿತಿಗಳು, ಪತ್ರಕರ್ತರು, ಪ್ರಗತಿಪರ ಚಿಂತಕರು, ಉದ್ಯಮಿಗಳು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ದಲಿತ, ಆದಿವಾಸಿ, ಮಧ್ಯಮ ವರ್ಗದ ಕಾರ್ಮಿಕ ಸಂಘಟನೆಗಳ ಮುಖಂಡರು ಸೇರಿದಂತೆ ಎಲ್ಲ ಧರ್ಮಗಳ 130 ಗಣ್ಯರು ಈ ವೇದಿಕೆಯಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಚಟುವಟಿಕೆಗಳನ್ನು ಇನ್ನಷ್ಟು ಶ್ರದ್ಧೆಯಿಂದ ನಡೆಸುವ ಮೂಲಕ ಮಂಗಳೂರಿನ ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸುವುದು ಸಂತ ಮದರ್ ತೆರೇಸಾ ವೇದಿಕೆಯ ಮುಖ್ಯ ಉದ್ದೇಶವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು: ರಾಯ್ ಕ್ಯಾಸ್ಟಲಿನೋ, ಅಧ್ಯಕ್ಷರು, ಸುನಿಲ್ ಕುಮಾರ್ ಬಜಾಲ್ ಪ್ರಧಾನ ಕಾರ್ಯದರ್ಶಿ ಸಂತ ಮದರ್ ತೆರೇಸಾ ವೇದಿಕೆ, ಮಂಗಳೂರು, ಮಂಜುಳಾ ನಾಯ್ಕ್ (ಜಂಟಿ ಕಾರ್ಯದರ್ಶಿ, ಸಂತ ಮದರ್ ತೆರೇಸಾ.
YENEPOYA (deemed to be a university) confers the Ph.D. of Mrs. Shycil Mathew.
Mangalore: Mrs.MATHEW defends her PhD thesis on Tuesday, September 12th, 2023.Mrs. Shycil Matthew, Associate Professor, Father Muller College of Nursing, Dept. of Community Health Nursing, defends her PhD thesis on “Parent-Involved Multi-Component Intervention Programme on Lifestyle Practices and Body Mass Index of Overweight and Obese Adolescents.” The thesis is related to the improvement of lifestyle practices and the reduction of overweight and obesity among growing youth. Adolescent obesity cannot be prevented without parental help. In her study, she included parents, physical educators of the school, and health professionals to see the impact. Her motto is to reduce the health burden due to NCDs (Non-Communicable Diseases). Her research depicts that involving parents and physical educators for a better outcome with continuous reinforcement is a way to prevent overweight and obesity because behavioural changes can only be achieved through intermittent motivation and supervision, indirectly preventing adult-onset chronic illness. Mrs. Mathew was supervised by Dr. Prakash R. M. Saldanha, Vice Principal/Professor, Department of Paediatrics, Yenepoya Medical College, YU, and Dr. Jenifer D’Souza, Professor/HOD of the Department of Community Health Nursing, Laxmi Memorial College of Nursing. AJ Medical College. She served as a faculty member at the City College of Nursing and Yenepoya Nursing College for more than five years each. She completed her graduation and post-graduation in community health nursing from the City College of Nursing, Mangalore, under RGUHS. She is the wife of Mr. Mathew Subin and the mother of David MathaiSubin.
ಬೆಥನಿ ಎಜುಕೇಶನಲ್ ಸೊಸೈಟಿಯಎಜುಕೇಶನಲ್ ಸೊಸೈಟಿ (ರಿ) ಮಂಗಳೂರು ಅಮೃತ ಮಹೋತ್ಸವ
“ಸರ್ವರಿಗೂ; ವಿಶೇಷವಾಗಿ ಹಿಂದುಳಿದವರುಮತ್ತುಹೆಣ್ಣುಮಕ್ಕಳಿಗೆಪರಿಪೂರ್ಣಜೀವನಕ್ಕಾಗಿ ಪರಿವರ್ತನೀಯ ಶಿಕ್ಷಣ” ನೀಡುವ ಪಥದಲ್ಲಿ ಬೆಥನಿ ಎಜುಕೇಶನಲ್ ಸೊಸೈಟಿ (ರಿ) ಮಂಗಳೂರು
ಮಂಗಳೂರು : ಬೆಥನಿಎಜುಕೇಷನಲ್‍ಸೊಸೈಟಿ(ರಿ) (BES)ಪರಿವರ್ತನೀಯಶಿಕ್ಷಣದಲ್ಲಿದಾರಿದೀಪವಾಗಿದ್ದು,ತನ್ನ ಮಹತ್ವದ ಮೈಲುಗಲ್ಲೊಂದನ್ನುತಲುಪಿದೆ.ತನ್ನಅಮೃತ ಮಹೋತ್ಸವದ ಸಮಾರೋಪಆಚರಣೆಯನ್ನು2023ರ ಸೆಪ್ಟೆಂಬರ್18ರಂದು ಸೋಮವಾರದಂದುಆಚರಿಸಿಕೊಳ್ಳಲು ಸಜ್ಜಾಗಿದೆ. ಬೆಥನಿ ಎಜ್ಯುಕೇಷನಲ್ ಸೊಸೈಟಿಯನ್ನು4ನೇ ಸೆಪ್ಟೆಂಬರ್1948ರಂದು ಬೆಥನಿ ಸಂಸ್ಥಾಪಕರಾದದೇವರ ಸೇವಕ ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‍ರವರಆಶ್ರಯದಡಿ ಮದರ್ ಪೇತ್ರಾಅವರನ್ನು ಮೊದಲ ಅಧ್ಯಕ್ಷರನ್ನಾಗಿಸಿ ನೋಂದಾಯಿಸಲಾಯಿತು. ಸೊಸೈಟಿಗಳ ನೋಂದಣಿಕಾಯಿದೆ, 1860ರ ಅಡಿಯಲ್ಲಿ‘ಬೆಥನಿಎಜುಕೇಷನಲ್‍ಸೊಸೈಟಿ(ರಿ) ಮಂಗಳೂರುಎಂದು ನಾಮಕರಣ ಮಾಡಲಾಯಿತು. ದಾರ್ಶನಿಕ ನಾಯಕ ಮತ್ತುದೇವರ ಸೇವಕ ರೇಮಂಡ್ ಫ್ರಾನ್ಸಿಸ್‍ಕ್ಯಾಮಿಲಸ್ ಮಸ್ಕರೇನ್ಹಸ್‍ಅವರಆಶ್ರಯದಲ್ಲಿ, ಅದರ ಮೊದಲ ಅಧ್ಯಕ್ಷರಾದ ಮದರ್‍ಪೇತ್ರಾಬಿಎಸ್‍ಅವರ ಮಾರ್ಗದರ್ಶನ ಹಾಗೂ ಮೊದಲ ಕೌನ್ಸಿಲ್‍ಆಫ್ ಮ್ಯಾನೇಜ್‍ಮೆಂಟ್‍ನೊಂದಿಗೆ, ಬಿಇಎಸ್ ಶಿಕ್ಷಣ ಸಂಸ್ಥೆಯುಸಾಮಾಜಿಕ ಪ್ರಗತಿಯನ್ನುರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ
ಸವಾಲಿನ ಸಮಯದಲ್ಲಿಮೂಡಿದ ಭರವಸೆಯಬೆಳಕು:1921ರಲ್ಲಿ, ದೇವರ ಸೇವಕರೆಂದುಗುರುತಿಸಲ್ಪಟ್ಟಿರುವ, ಬೆಥನಿ ಕನ್ಯಾಮಠದ ಮತ್ತು ಬೆಥನಿ ಎಜುಕೇಷನಲ್‍ಸೊಸೈಟಿಯಸ್ಥಾಪಕ ಆರ್.ಎಫ್.ಸಿ.ಮಸ್ಕರೇನ್ಹಸ್‍ಅವರು ಆ ಕಾಲದಪರಿಸ್ಥಿತಿಯನ್ನುಸೂಕ್ಷ್ಮವಾಗಿ ಅವಲೋಕಿಸಿದಾಗಕಂಡುಬಂದಬಡತನ, ಅನಕ್ಷರತೆ, ಅಜ್ಞಾನ, ಲಿಂಗಅಸಮಾನತೆಮತ್ತುಗ್ರಾಮೀಣಬಡಜನರಪರಿಪೂರ್ಣವ್ಯಕ್ತಿತ್ವದವಿಕಾಸತೆಗೆಇರುವ ಅವಕಾಶಗಳಕೊರತೆಅವರ ಮನಸ್ಸನ್ನು ಬಡಿದೆಬ್ಬಿಸಿತು.ಈ ಸಂದರ್ಭದಲ್ಲಿತಮ್ಮ ಬದುಕನ್ನು ಮಾನವೀಯ ಸೇವೆಯ ಮೂಲಕ ದೇವರಿಗೆ ಸಮರ್ಪಿಸಲು ಬದ್ಧರಾದ ನಾಲ್ವರುಉದಾತ್ತ ಮತ್ತುದಿಟ್ಟ ಮಹಿಳಾ ಶಿಕ್ಷಕಿಯರಾದಭಗಿನಿಮಾರ್ಥಾಬಿಎಸ್, ಭಗಿನಿಕ್ಲೇರಾಬಿಎಸ್, ಭಗಿನಿಲೂಡ್ರ್ಸ್‍ಬಿಎಸ್‍ಮತ್ತುಭಗಿನಿಗಟ್ರ್ರೂಡ್ ಬಿಎಸ್‍ಅವರು ಸಂಸ್ಥಾಪಕರಗುರಿ, ಧ್ಯೇಯ ಮತ್ತುದೃಷ್ಟಿಕೋನಕ್ಕೆ ಸ್ಪಂದಿಸಿಅದನ್ನು ಪರಿಪೂರ್ಣಗೊಳಿಸಲು ಮುಂದಾದರು. ಈ ನಾಲ್ವರುಶಿಕ್ಷಕಿಯರು ಬೆಥನಿ ಕನ್ಯಾಮಠ ಮತ್ತು ಬೆಥನಿ ಎಜುಕೇಷನಲ್‍ಸೊಸೈಟಿಯಸ್ಥಾಪಕಸದಸ್ಯರಾದರು. ಸಮಾಜದಸಮಗ್ರಅಭಿವೃದ್ಧಿಯಾಗಬೇಕಾದರೆಹೆಣ್ಣುಮಕ್ಕಳುಮತ್ತುಮಹಿಳೆಯರನ್ನು ಸಬಲೀಕರಣಗೊಳಿಸಬೇಕು. ಅದರಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ ಎಂಬ ಸತ್ಯವನ್ನುಅವರುಅರ್ಥಮಾಡಿಕೊಂಡರು.
ಪರಿವರ್ತನಾತ್ಮಕ ಶಿಕ್ಷಣದ ಗುರಿ: ಬೆಥನಿಎಜುಕೇಷನಲ್‍ಸೊಸೈಟಿಯಮೂಲ ಉದ್ದೇಶವುಪರಿವರ್ತನಾತ್ಮಕ ಶಿಕ್ಷಣವನ್ನು ನೀಡುವುದಾಗಿದೆ. “ಎಲ್ಲರಿಗೂ; ಅದರಲ್ಲೂ ವಿಶೇಷವಾಗಿ ಹಿಂದುಳಿದವರುಮತ್ತುಹೆಣ್ಣುಮಕ್ಕಳಿಗೆಪರಿಪೂಣ9ಜೀವನಕ್ಕಾಗಿ ಪರಿವರ್ತನಾತ್ಮಕ ಶಿಕ್ಷಣ” ಎಂಬದೃಢವಾದಸಿದ್ಧಾಂತವುಅದರ ಬೆಳವಣಿಗೆಯ ಹಿಂದಿನ ಪ್ರೇರಕ ಶಕ್ತಿಯಾಗಿದೆ.
ಅಮೃತ ಮಹೋತ್ಸವಆಚರಣೆ: ಮಂಗಳೂರಿನ ಬೆಂದೂರ್‍ನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಚರ್ಚ್‍ನಲ್ಲಿ ಮಧ್ಯಾಹ್ನ3:30ಕ್ಕೆ ಧರ್ಮಪ್ರಾಂತ್ಯದಧರ್ಮಾಧ್ಯಕ್ಷರಾದಅತೀ ವಂದನೀಯಪೀಟರ್ ಪೌಲ್ ಸಲ್ಡಾನ್ಹಾಅವರಅಧ್ಯಕ್ಷತೆಯಲ್ಲಿ ಬಿಇಎಸ್‍ನಅಮೃತ ಮಹೋತ್ಸವಆಚರಣೆಯ ಸಮಾರೋಪಸಮಾರಂಭವುಕೃತಜ್ಞತಾ ಬಲಿಪೂಜೆಯೊಂದಿಗೆ ಆರಂಭಗೊಳ್ಳಲಿದೆ. ಇತರಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಧಾರ್ಮಿಕಭಗಿನಿಯರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೆÇೀಷಕರು ಮತ್ತು ಹಿತೈಷಿಗಳು ಸೇರಿದಂತೆಗಣ್ಯ ಅತಿಥಿಗಳು ಈ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಂಗಳೂರಿನ ಬೆಂದೂರಿನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂಜುಬಿಲಿ ಸಭಾಂಗಣದಲ್ಲಿ ಸಂಜೆ5:30ಕ್ಕೆ ನಿಗದಿಯಾಗಿರುವ ಸಾಂಸ್ಕøತಿಕಕಾರ್ಯಕ್ರಮದಲ್ಲಿ ಬೆಂಗಳೂರು ಮಹಾಧರ್ಮಪ್ರಾಂತ್ಯದಮಹಾಧರ್ಮಾಧ್ಯಕ್ಷರಾದಅತಿವಂದನೀಯಡಾ|ಪೀಟರ್‍ಮಚಾದೋಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕವಿಧಾನಸಭೆಯ ಸಭಾಧ್ಯಕ್ಷರಾದಶ್ರೀಯು.ಟಿ.ಖಾದರ್, ಮಂಗಳೂರುನಗರ,ದಕ್ಷಿಣ ವಿಧಾನಸಭಾಕ್ಷೇತ್ರದಶಾಸಕರಾದಶ್ರೀವೇದವ್ಯಾಸಕಾಮತ್‍ಮತ್ತುದಕ್ಷಿಣಕನ್ನಡಸಾವ9ಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕರಾದಶ್ರೀದಯಾನಂದಆರ್ ನಾಯ್ಕ್‍ರವರು ಉಪಸ್ಥಿತರಿರುವರು.
ವಿವಿಧಬಿಇಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಅಮೃತ ಮಹೋತ್ಸವದಲ್ಲಿ ಬಿಇಎಸ್ ಧ್ಯೇಯೋದ್ದೇಶಗಳಾದನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಶಾಂತಿಮತ್ತುಸೌಹಾರ್ದತೆ, ಪರಿಸರದಕಾಳಜಿಮತ್ತುಉತ್ಕೃಷ್ಟತೆಹಾಗೂ ಸ್ವಾವಲಂಬನೆಗಾಗಿ ಶಿಕ್ಷಣದಬದ್ಧತೆಯವಿಷಯಗಳ ಬಗ್ಗೆ ಒತ್ತು ನೀಡುವ ವಿವಿಧ ಕಾಯ9ಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಸಹಭಾಗಿಗಳನ್ನು ಗೌರವಿಸುವುದು: ಕಳೆದ ಏಳೂವರೆ ದಶಕಗಳಲ್ಲಿ ಬಿಇಎಸ್‍ನಸವ9 ಕಾಯ9ಗಳಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲಾ ಸಹಯೋಗಿಗಳಿಗೆ ಕೃತಜ್ಞತೆಯನ್ನುವ್ಯಕ್ತಪಡಿಸಲು ಈ ಆಚರಣೆಯುಒಂದು ಸುಸಂದಭ9ವಾಗಿದೆ.
ನಾಯಕತ್ವ ಮತ್ತು ಮೌಲ್ಯಗಳು: ಬೆಥನಿ ಎಜುಕೇಷನಲ್‍ಸೊಸೈಟಿಯ ಆಡಳಿತವುಬೆಥನಿ ಸಭೆಯಮಹಾಮಾತೆಅವರನಾಯಕತ್ವ ಮತ್ತುಅಧ್ಯಕ್ಷತೆಯಲ್ಲಿಹಾಗೂ ಬೆಥನಿ ಸಭೆಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ನಡೆಯುತ್ತಿದೆ.ಪ್ರಸ್ತುತ, ಭಗಿನಿರೋಸ್‍ಸೆಲಿನ್‍ಬಿಎಸ್‍ಅವರುಬಿಇಎಸ್‍ಅಧ್ಯಕ್ಷರಾಗಿ, ಭಗಿನಿಶಾಂತಿಪ್ರಿಯಾಬಿಎಸ್‍ಉಪಾಧ್ಯಕ್ಷರಾಗಿಮತ್ತುಭಗಿನಿಸಂಧ್ಯಾಬಿಎಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಥನಿ ಎಜುಕೇಷನಲ್‍ಸೊಸೈಟಿಯ ಆಡಳಿತ ಮಂಡಳಿಯು ಜನರಲ್ ಕೌನ್ಸಿಲರ್‍ಗಳುಸೇರಿದಂತೆಒಟ್ಟು10 ಸದಸ್ಯರನ್ನು ಒಳಗೊಂಡಿದೆ.
ಭಾರತದಾದ್ಯಂತಧನಾತ್ಮಕ ಪ್ರಭಾವ:ಬೆಥನಿ ಎಜುಕೇಷನಲ್‍ಸೊಸೈಟಿಯುತನ್ನ ಹೆಜ್ಜೆಗುರುತನ್ನು ಭಾರತದಾದ್ಯಂತ ವಿಸ್ತರಿಸಿದೆ. ಪರಿವರ್ತನೀಯ ಶಿಕ್ಷಣವನ್ನು ಪಸರಿಸುವುದು ಮತ್ತು ಬೆಥನಿ ಎಜುಕೇಶನಲ್ ಸೊಸೈಟಿಯ ಮೂಲ ಮೌಲ್ಯಗಳಾದ ದೈವಾನುಭವ;ಅನುಕಂಪದಿಂದಕೂಡಿದ ಪ್ರೀತಿಎಲ್ಲರಿಗಾಗಿ ವಿಶೇಷವಾಗಿ ದೀನದಲಿತರಿಗಾಗಿ; ಸಂಘಟನೆ ಸಹಭಾಗಿತ್ವ ಮತ್ತು ಸಂಘಸ್ಫೂರ್ತಿ; ಪ್ರತಿಯೊಬ್ಬರ ಸಾಮಥ್ರ್ಯಗಳನ್ನು ಉತ್ಕೃಷ್ಟಗೊಳಿಸಿಮಾನವೀಯಸಮಾಜವನ್ನುನಿರ್ಮಿಸುವುದು;ಸತ್ಯ, ಪ್ರೀತಿ, ನ್ಯಾಯ ಮತ್ತು ಶಾಂತಿ; ಸರಳ ಜೀವನ ಮತ್ತುದುಡಿಮೆಯಘನತೆ;ಜೀವ, ನಿಸರ್ಗ, ಸಂಸ್ಕೃತಿ ಮತ್ತು ಧರ್ಮಗಳ ಬಗ್ಗೆ ಗೌರವಹಾಗೂರಾಷ್ಟ್ರಪ್ರೇಮ ಇವೆಲ್ಲವುಗಳನ್ನು ವಿದ್ಯಾರ್ಥಿಗಳಲ್ಲಿಮೂಡಿಸುವುದುಇದರಪ್ರಮುಖಆದ್ಯತೆಯಾಗಿದೆ.
ಬೆಥನಿ ಎಜುಕೇಷನಲ್‍ಸೊಸೈಟಿಯಿಂದ ನಡೆಸಲ್ಪಡುವ ಪ್ರೌಢಶಾಲಾ ವಿದ್ಯಾಥಿ9ಗಳಿಗೆ ಸಂಸ್ಥೆಯಿಂದರಚಿಸಲ್ಪಟ್ಟ ಬೆಥನಿ ಚಾಂಪಿಯನ್ಸ್ ಎಂಬ ಸಂಘದ ಮೂಲಕ ನಾಗರಿಕ ಮತ್ತುರಾಜಕೀಯ ನಾಯಕತ್ವದ ಸಾಧಕರಾಗಿ ಹಾಗೂ ಸಾಮಾಜಿಕ ಪ್ರಗತಿಯೊಂದಿಗೆಯುವಜನರಿಗೆ ಮಾರ್ಗದರ್ಶಕರಾಗಿ ಹೊರಹೊಮ್ಮಿಸಲುಪ್ರಯತ್ನಿಸಲಾಗುತ್ತಿದೆ.
ಸಂಸ್ಥೆಯ ಬೆಳವಣಿಗೆ: ಪ್ರಸ್ತುತ, ಬೆಥನಿ ಎಜುಕೇಷನಲ್‍ಸೊಸೈಟಿಯುಪ್ರಾಥಮಿಕ, ಮಾಧ್ಯಮಿಕ, ಪದವಿ ಪೂವ9 ಕಾಲೇಜುಗಳು ಮತ್ತುಎರಡು ಪದವಿ ಕಾಲೇಜುಗಳನ್ನು ಒಳಗೊಂಡು ಒಟ್ಟು135 ಸಂಸ್ಥೆಗಳನ್ನು ನಿರ್ವಹಿಸುತ್ತಿದೆ. ಇದು33ವಿದ್ಯಾಥಿ9 ನಿಲಯಗಳು ಮತ್ತು ಹಲವಾರುಅನೌಪಚಾರಿಕ ಶಿಕ್ಷಣ ಕೇಂದ್ರಗಳು, ಶಿಕ್ಷಕರ ತರಬೇತಿಕಾಲೇಜು ಮತ್ತುಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿಪರ ಶಿಕ್ಷಣ ಕೇಂದ್ರಗಳನ್ನು ಒಳಗೊಂಡಿದೆ. ಈ ಸಂಸ್ಥೆಗಳು ಭಾರತದ26 ರಾಜ್ಯಗಳು ಮತ್ತು53 ಧರ್ಮಪ್ರಾಂತ್ಯಗಳಲ್ಲಿ ಹರಡಿಕೊಂಡಿವೆ. ವೈವಿಧ್ಯಮಯ ಶೈಕ್ಷಣಿಕ ಕೊಡುಗೆಗಳ ಮೂಲಕ 82,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ನೀಡುತ್ತಾಉಜ್ವಲ ಭವಿಷ್ಯವನ್ನುರೂಪಿಸಲುಈ ಸಂಸ್ಥೆಯುಸಮರ್ಪಿತವಾಗಿದೆ.
ಈ ಸಂಸ್ಥೆಯ ಮೂಲ ಶಕ್ತಿಯು ಸಹಭಾಗಿತ್ವ ಎಂಬ ತತ್ವದಲ್ಲಿಅಡಗಿದೆ. ನಮ್ಮ ಹೆಚ್ಚಿನ ಸಂಖ್ಯೆಯ ಬೆಥನಿ ಸಹೋದರಿಯರುಧಮ9ಪ್ರಾಂತ್ಯದ ಇತರ ಆಡಳಿತ ಮಂಡಳಿಗಳೊಂದಿಗೆ ಜೊತೆಗೂಡಿ65 ಶಾಲೆಗಳು ಮತ್ತುಅನೇಕ ವಿದ್ಯಾಥಿ9 ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿಮೌಲ್ಯಾಧಾರಿತ ಮತ್ತುಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾಜಿಕ ವಿಮೋಚನೆಯಗುರಿ: ಬೆಥನಿ ಭಗಿನಿಯರು ಬೆಥನಿ ಸಾಮಾಜಿಕ ಸೇವಾ ಕೇಂದ್ರಗಳ ಮೂಲಕ ಮಹಿಳೆಯರು, ಯುವಕರು, ಮಕ್ಕಳು, ವಲಸಿಗರು ಮತ್ತು ಸಮಾಜದ ಕೆಳಸ್ತರದಲ್ಲಿರುವವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬಂದಿರುತ್ತಾರೆ. ಅವರ ಸಾಮಾಜಿಕ ವಿಮೋಚನೆಯಧ್ಯೇಯವುಉನ್ನತಆದ್ಯತೆಯಾಗಿ, ಹಲವಾರು ಯೋಜನೆಗಳ ಮೂಲಕ ಸ್ವಾವಲಂಬನೆ, ಕೌಶಲ್ಯಆಧಾರಿತ ಶಿಕ್ಷಣ ಮತ್ತುಆರ್ಥಿಕ ಸದೃಢತೆ ಹಾಗೂ ಸುಸ್ಥಿರ ಜೀವನೋಪಾಯವನ್ನುಉತ್ತೇಜಿಸುತ್ತಿದೆ.
ರಾಷ್ಟ್ರೀಯಮತ್ತುಅಂತಾರಾಷ್ಟ್ರೀಯ ಮಟ್ಟದಲ್ಲಿಮಹಿಳೆಯರ ಸಶಕ್ತೀಕರಣಕ್ಕೆಯತ್ನ: ಭಾರತದಾದ್ಯಂತ56 ಸಾಮಾಜಿಕ ಸೇವಾ ಕೇಂದ್ರಗಳೊಂದಿಗೆ, ಬೆಥನಿ ಸಭೆಯು26 ರಾಜ್ಯಗಳ 937 ಪಟ್ಟಣ ಮತ್ತುಹಲವಾರುಗ್ರಾಮ ಪಂಚಾಯತ್‍ಗಳ ವ್ಯಾಪ್ತಿಗೆ ಸೇರಿದ4,20,000ಮಹಿಳೆಯರು, ಯುವಕರು ಮತ್ತು ಮಕ್ಕಳ ಜೀವನವನ್ನು ಸಬಲೀಕರಣಗೊಳಿಸಲು ಹೆಜ್ಜೆಇಟ್ಟಿದೆ. ಅಚಲವಾದ ಬದ್ಧತೆಯೊಂದಿಗೆ ಮಹಿಳೆಯರ ಸಬಲೀಕರಣದಲ್ಲಿ1921ರಿಂದಸಂಸ್ಥೆಯು ಮುಂಚೂಣಿಯಲ್ಲಿದೆ. ಬೆಥನಿ ಸಭೆಯ ಸಹೋದರಿಯರು ವಾಯುವ್ಯಆಫ್ರಿಕಾ,ತಾಂಜಾನಿಯಾ ಮತ್ತು ನೇಪಾಳದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ವೈದ್ಯಕೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅಮೃತ ಮಹೋತ್ಸವದ ಅಂಗವಾಗಿ 75 ಹೆಣ್ಣುಮಕ್ಕಳಿಗೆ ತಮ್ಮಜೀವನವನ್ನುರೂಪಿಸುವಂತಹ ವೃತ್ತಿಪರ ಶಿಕ್ಷಣ ಪಡೆಯಲು ಸಹಾಯಧನ ನೀಡಿ ಸಹಕರಿಸುವವಿಶಿಷ್ಟ ಯೋಜನೆಯನ್ನು ಕೈಗೊಳ್ಳಲಾಗಿದೆ. ಮಾತ್ರವಲ್ಲದೆ ಪ್ರತೀವಷ9 1000ಬಡಮಕ್ಕಳಿಗೆ ವಿದ್ಯಾಥಿ9ವೇತನ ನೀಡುವುದರ ಮೂಲಕ ಅವರ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದೆ.
ಬೆಥನಿ ಎಜುಕೇಷನಲ್‍ಸೊಸೈಟಿ(ರಿ) ಮಂಗಳೂರುತನ್ನಅಮೃತಮಹೋತ್ಸವದಸಂಭ್ರಮಾಚರಣೆಯ ಸುಸಂದಭ9ದಲ್ಲಿ, ತನ್ನ ಪರಿವರ್ತನಾತ್ಮಕ ಶಿಕ್ಷಣದ ಪರಂಪರೆಯನ್ನು ಮತ್ತು ಸಾಮಾಜಿಕ ಸಾಮರಸ್ಯ, ಶಾಂತಿ ಮತ್ತುಏಕೀಕೃತ ಮಾನವ ಸಮುದಾಯದಉತ್ತೇಜನಕ್ಕೆ ಮತ್ತು ಲಕ್ಷಾಂತರ ಮಕ್ಕಳ ಮೂಲಭೂತಗುಣಮಟ್ಟದ ಶಿಕ್ಷಣಕ್ಕೆ ಅದರಲ್ಲೂ ವಿಶೇಷವಾಗಿ ಮಾನವಹಕ್ಕುಗಳಿಂದವಂಚಿತವಾಗಿರುವಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣದ ಬದ್ಧತೆಗಾಗಿ ಭಗವಂತನಕೃಪೆಯನ್ನುಕೋರುತ್ತಾ,ಈ ಸಂಸ್ಥೆಯು ವಿಶ್ವದಾದ್ಯಂತ ಪಸರಿಸಿ ಶಿಕ್ಷಣ ಮತ್ತು ಸಮಾಜ ಸೇವೆಯ ಕೈಂಕಯ9ವನ್ನು ಮಾಡುತ್ತಾ ಸಮಾಜದಜನರಿಗೆ ಭರವಸೆಯ ಬೆಳಕಾಗಲಿ ಎಂಬುವುದೇ ನಮ್ಮೆಲ್ಲರ ಸದಾಶಯ.
ಸಿಸ್ಟರ್ ರೋಜ್ ಸೆಲಿನ್ ಬಿಎಸ್ -ಅಧ್ಯಕ್ಷೆ , ಸಿಸ್ಟರ್ ಶಾಂತಿ ಪ್ರಿಯ ಬಿಎಸ್- ಸಿಸ್ಟರ್ ಸಂಧ್ಯಾ ಬಿಎಸ್- ಕಾರ್ಯದರ್ಶಿ