Engineers Day was celebrated at MIT Kundapura. Tribute was paid to Bharat Rathna Sir M. Visvesvaraya by garlanding the statue by the Chief Guest Dr. Mohit Tihiliani, Prof.NITK Surathkal and the other Dignitories. Principal Dr. Abdul Kareem, Vice Principal Prof. Melwin D’ Souza, Director B.B Dr. Ramakrishna Hegde, HOD Civil Dept. Prof Prashanth Hegde, HOD AI&ML Prof.Varun Kumar HOD CSE Prof. Muralidhar B K invited dignitories , Staff and Students were present on the occasion. The programme was organised by the Dept. of Civil Engineering. MIT Kundapura.
Year: 2023
ಮೂಡ್ಲಕಟ್ಟೆ ಎಮ್ ಐ ಟಿ: ಫ಼್ಯಾಷನ್ ಶೋ ವಿಜೇತರಾದ ವಿಧ್ಯಾರ್ಥಿಗಳು
ಜೆಸಿಐ ಕುಂದಾಪುರ ಸಿಟಿ ಆತಿತ್ಯ ದಲ್ಲಿ ಜರುಗಿದ ಜೇಸಿ ಸಪ್ತಾಹ ದ ಅಂಗ ವಾಗಿ ಮಿಸ್ಟರ್ ಕುಂದಾಪುರ ಮಿಸಸ್ ಕುಂದಾಪುರ ಸ್ಪರ್ಧೆ ಯಲ್ಲಿ ಮೂಡ್ಳಕಟ್ಟೆಯ ಎಮ್ ಐ ಟಿ ಕಾಲೇಜ್ ಗೆ ಪ್ರಶಸ್ತಿ ಲಭಿಸಿದೆ. ಕಾಲೇಜಿನ ಹಳೆ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವುದಲ್ಲದೆ ಮಿಸ್ ಕುಂದಾಪುರ ಆಗಿ ಆಯ್ಕೆಯಾಗಿರುತ್ತಾರೆ. ಪ್ರಥಮ ವರ್ಷದ ವಿಧ್ಯಾರ್ಥಿನಿಯರಾದ ಮಿಸ್ ಕುಂದಾಪುರ ಶಶಿಕಲ ರನ್ನರ್ ಪಸ್ಟ್ ಹಾಗೂ ಮಿಸ್ ಕುಂದಾಪುರ ಶ್ರೇಯ ಉಪಾಧ್ಯಾಯ ರನ್ನರ್ ಸೆಕೆಂಡ್ ಹಾಗೂ ಹುಡುಗರ ವಿಭಾಗದಲ್ಲಿ ಎಮ್ ಬಿ ಎ ವಿಧ್ಯಾರ್ಥಿ ಮಿಸ್ಟರ್ ಕುಂದಾಪುರ ಮುಲ್ಲ ಸಮೀರ್ ರನ್ನರ್ ಪಸ್ಟ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಧ್ಯಾರ್ಥಿ ಮಿಸ್ಟರ್ ಕುಂದಾಪುರ ಅರ್ಜುನ್ ರಾಜ್ ರನ್ನರ್ ಸೆಕೆಂಡ್ ಆಗಿ ವಿಜೇತರಾಗಿದ್ದಾರೆ. ಅಲ್ಲದೇ ಕಾಲೇಜಿನ ಸಾಂಸ್ಕೃತಿಕ ತಂಡದಿಂದ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ಡಾ ಸೋನಿ ಸ್ಥಾಪಕ ಅಧ್ಯಕ್ಷ ರಾದ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ ಸಪ್ತಾಹ ದ ಸಭಾಪತಿ ರಾಘವೇಂದ್ರ ಕುಲಾಲ್ ಎಮ್ ಐ ಟಿ ಕಾಲೇಜಿನ ಸಾಂಸ್ಕೃತಿಕ ಕ್ಲಬ್ ಸಂಯೋಜಕರಾದ ಪ್ರೊಫೆಸರ್ ಹರೀಶ್ ಕಾಂಚನ್ ಪ್ರೊಫೆಸರ್ ಸೂಕ್ಷ್ಮ ಎಸ್ ಅಡಿಗ, ಪ್ರೊಫ಼ೆಸರ್ ವೆಂಕಟೇಶ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್: ಭಾಷೆಯು ದೇಶದ ಐಕ್ಯತೆ ಮತ್ತು ಮಾನವನ ಸಾಮಾಜಿಕ ಜೀವನದ ಮಹತ್ವದ ಸಂವಹನದ ಮಾಧ್ಯಮ – ಡಾ. ಮಂಜುನಾಥ ಉಡುಪ
ಕುಂದಾಪುರ: ಭಾಷೆಯು ದೇಶದ ಐಕ್ಯತೆ ಮತ್ತು ಮಾನವನ ಸಾಮಾಜಿಕ ಜೀವನದ ಮಹತ್ವದ ಸಂವಹನದ ಮಾಧ್ಯಮ ಎಂದು ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಅವರು ಹೇಳಿದರು. ಸೆಪ್ಟೆಂಬರ್ 14ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗ ಆಯೋಜಿಸಿದ್ದ “ಹಿಂದಿ ದಿವಸ್ – ಜ್ಯೋತ್ಸ್ನಾ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯತೆಯನ್ನು ಬಿಂಬಿಸುವ ಹಿಂದಿ ಭಾಷೆಯು ಅನೇಕ ಭಾಷೆಗಳ ಪದಗಳನ್ನು ತನ್ನೊಳಗೆ ಸೇರಿಸಿಕೊಂಡು ದೇಶವನ್ನು ಒಗ್ಗೂಡಿಸುವ ಹಾದಿಯಲ್ಲಿದೆ. ದೇಶದ ಮತ್ತು ಜಾಗತಿಕವಾಗಿ ಅತಿ ಹೆಚ್ಚು ಜನರು ಸಂವಾದ ನಡೆಸುವ ಭಾಷೆ ಹಿಂದಿ. ಜನರ ಬದುಕಿನಲ್ಲಿ ಭಾಷಾ ಬೇಧದ ಯಾವ ಮಡಿವಂತಿಕೆಯೂ ಅನ್ವಯವಾಗುವುದಿಲ್ಲ. ಹಿಂದಿ ಭಾಷೆಯು ಭಾರತದ ಗರಿಮೆಯ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರನ್ನು ಹಿಂದಿ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯ್ ಕುಮಾರ್ ಉಪಸ್ಥಿತರಿದ್ದರು
“ಹಿಂದಿ ದಿವಸ್ – ಜ್ಯೋತ್ಸ್ನಾ” ದ ಅಂಗವಾಗಿ ಕಬೀರ್ ಭಜನ್, ಹನುಮಾನ್ ಚಾಲೀಸ್ ಕಂಠಪಾಠ, ಹಿಂದಿ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ.ಪ್ರಫುಲ್ಲಾ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿಯರಾದ ಅಶ್ವಿನಿ ಪಿ. ವಂದಿಸಿದರು. ಶ್ರೀನಿಧಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ತೃತೀಯ ಬಿ.ಎಸ್.ಸಿ ವಿದ್ಯಾರ್ಥಿ ಶ್ರೀಕೃಷ್ಣ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಹಿಂದಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಹಣಕ್ಕಾಗಿ ಕೊಲೆ ಶವವನ್ನು ಗೋಣಿ ಚೀಲದಲ್ಲಿ ಹಾಕಿ ಎಸೆದು ಅರಣ್ಯದಲ್ಲಿ ಹೋಗಿದ್ದ ಖದೀಮರ ಬಂಧನ
ಕಾರವಾರ: ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅರಣ್ಯದಲ್ಲಿ ಎಸೆದು ಹೋಗಿದ್ದ ಮೂವರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹಣಕ್ಕಾಗಿ ಕೊಲೆಗೈದು ಬಳಿಕ ಕೊರ್ಲಕಟ್ಟಾ – ವಡ್ಡಿನಕೊಪ್ಪ ರಸ್ತೆಯ ಅರಣ್ಯದಲ್ಲಿ ಶವವನ್ನು ಎಸೆದು ಹೋಗಿದ್ದರು.
ಬಂಧಿತ ಆರೋಪಿಗಳನ್ನು ಹಾನಗಲ್‍ನ ಗೆಜ್ಜೆಹಳ್ಳಿಯ ಕಿರಣ್ ಸುರಳೇಶ್ವರ (23), ನಿರಂಜನ ಗೋವಿಂದಪ್ಪ ತಳವಾರ (19) ಹಾಗೂ ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ (19) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಆರೋಪಿಗಳು ಅದೇ ಗ್ರಾಮದ ಅಶೋಕ್ ಉಪ್ಪಾರ್ (55) ಎಂಬಾತನನ್ನು ಮೂರು ದಿನಗಳ ಹಿಂದೆ ಕೊಲೆ ಮಾಡಿದ್ದರು. ಬಳಿಕ ಗುರುತು ಸಿಗದಂತೆ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಆರೋಪಿಗಳಿಂದ ಸ್ವಿಪ್ಟ್, ಕ್ರೇಟಾ ಕಾರ್ ಹಾಗೂ ಒಂದು ಬೈಕ್‍ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರಸಿ ಡಿಎಸ್‍ಪಿ ಕೆ.ಎಲ್.ಗಣೇಶ ಮಾರ್ಗದರ್ಶನದಲ್ಲಿ ಸಿ.ಪಿ.ಐ ರಾಮಚಂದ್ರ ನಾಯಕ್, ಬನವಾಸಿ ಠಾಣೆ ಪಿ.ಎಸ್.ಐ ಚಂದ್ರಕಲಾ ಪತ್ತಾರ, ಸುನೀಲ್ ಕುಮಾರ್ ಬಿ.ವೈ ಇವರು ಬಂಧನದ ಕಾರ್ಯಾಚರಣೆ ಭಾಗವಹಿಸಿದ್ದರು.
9 Flowers for Mother Mary and 9 Gifts for Needy/ ತಾಯಿ ಮೇರಿಗಾಗಿ 9 ಹೂವುಗಳು ಮತ್ತು ಅಗತ್ಯವಿರುವವರಿಗೆ 9 ಉಡುಗೊರೆಗಳು
St Joseph Church, Jeppu prides itself in actively involving children in various social service activities. These initiatives aim at instilling in them the value of service, compassion, and empathy towards those in need.
The parish council led by Fr Maxim D’Souza, encouraged the children to play a significant role in this initiative named “9 flowers for Mother along with 9 gifts for my Needy neighbour” which included spreading awareness, collecting and sorting essential items. It was heartening to see their enthusiasm and commitment to find ways to make a difference in others’ lives.
It was inspiring to see how enthusiastically they participated and how much they learned from these experiences. All the collected essential items were donated by the Children to St Joseph’s PrashanthNivas, Jeppu and Mother Theresa Convent, Falnir, Mangalore, for the poor and needy people. The church hopes to continue organizing similar social service activities to encourage the children to grow into compassionate and socially responsible individuals
The Novena of the Nativity feast of Our Lady was a time of deep spiritual reflection, prayer, and celebration with special prayers dedicated to Our Lady daily for 9 evenings at the church, and the whole community was encouraged to attend and participate. The daily Masses had specific intentions for the Nativity of Our Lady, and the homilies focused on the significance of this feast. During novena days snacks were served, which were sponsored by various donors.
On the feast day, we organized a Marian procession around the church premises. The statue of Our Lady was beautifully decorated with flowers, and the procession was accompanied by hymns and prayers. It was a solemn and joyful event, and many parishioners actively participated in the procession. After the Mass, sugarcane (Sponsored by Mr Louis Santos, Jeppu), with sumptuous breakfast was served to the devotees.
ತಾಯಿ ಮೇರಿಗಾಗಿ 9 ಹೂವುಗಳು ಮತ್ತು ಅಗತ್ಯವಿರುವವರಿಗೆ 9 ಉಡುಗೊರೆಗಳು
ಸೇಂಟ್ ಜೋಸೆಫ್ ಚರ್ಚ್, ಜೆಪ್ಪು ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಲ್ಲಿ ಹೆಮ್ಮೆಪಡುತ್ತದೆ. ಈ ಉಪಕ್ರಮಗಳು ಅವರಲ್ಲಿ ಸೇವೆಯ ಮೌಲ್ಯ, ಸಹಾನುಭೂತಿ ಮತ್ತು ಅಗತ್ಯವಿರುವವರ ಬಗ್ಗೆ ಸಹಾನುಭೂತಿ ಮೂಡಿಸುವ ಗುರಿಯನ್ನು ಹೊಂದಿವೆ.
ಫಾದರ್ ಮ್ಯಾಕ್ಸಿಂ ಡಿಸೋಜಾ ನೇತೃತ್ವದ ಪ್ಯಾರಿಷ್ ಕೌನ್ಸಿಲ್, “ತಾಯಿಗಾಗಿ 9 ಹೂವುಗಳು ಜೊತೆಗೆ ನನ್ನ ಅಗತ್ಯವಿರುವ ನೆರೆಹೊರೆಯವರಿಗೆ 9 ಉಡುಗೊರೆಗಳು” ಎಂಬ ಈ ಉಪಕ್ರಮದಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಮಕ್ಕಳನ್ನು ಪ್ರೋತ್ಸಾಹಿಸಲಾಯಿತು, ಇದರಲ್ಲಿ ಜಾಗೃತಿ ಮೂಡಿಸುವುದು, ಅಗತ್ಯ ವಸ್ತುಗಳನ್ನು ಸಂಗ್ರಹಿಸುವುದು ಮತ್ತು ವಿಂಗಡಿಸುವುದು ಸೇರಿದೆ. ಇತರರ ಜೀವನದಲ್ಲಿ ಬದಲಾವಣೆಯನ್ನು ಮಾಡುವ ಮಾರ್ಗಗಳನ್ನು ಹುಡುಕುವ ಅವರ ಉತ್ಸಾಹ ಮತ್ತು ಬದ್ಧತೆಯನ್ನು ನೋಡಿದಾಗ ಇದು ಹೃದಯವಂತವಾಗಿತ್ತು.
ಅವರು ಎಷ್ಟು ಉತ್ಸಾಹದಿಂದ ಭಾಗವಹಿಸಿದರು ಮತ್ತು ಈ ಅನುಭವಗಳಿಂದ ಅವರು ಎಷ್ಟು ಕಲಿತರು ಎಂಬುದನ್ನು ನೋಡಲು ಇದು ಸ್ಫೂರ್ತಿದಾಯಕವಾಗಿತ್ತು. ಸಂಗ್ರಹಿಸಿದ ಎಲ್ಲಾ ಅಗತ್ಯ ವಸ್ತುಗಳನ್ನು ಮಕ್ಕಳಿಂದ ಸೇಂಟ್ ಜೋಸೆಫ್ ಪ್ರಶಾಂತ್ ನಿವಾಸ, ಜೆಪ್ಪು ಮತ್ತು ಮದರ್ ಥೆರೇಸಾ ಕಾನ್ವೆಂಟ್, ಫಳ್ನೀರ್, ಮಂಗಳೂರು, ಬಡವರು ಮತ್ತು ನಿರ್ಗತಿಕರಿಗೆ ನೀಡಲಾಯಿತು. ಮಕ್ಕಳನ್ನು ಸಹಾನುಭೂತಿ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯಲು ಪ್ರೋತ್ಸಾಹಿಸಲು ಇದೇ ರೀತಿಯ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಆಯೋಜಿಸುವುದನ್ನು ಚರ್ಚ್ ಮುಂದುವರಿಸಲು ಆಶಿಸುತ್ತಿದೆ.
ಅವರ್ ಲೇಡಿ ನೇಟಿವಿಟಿ ಹಬ್ಬದ ನೊವೆನಾ ಆಳವಾದ ಆಧ್ಯಾತ್ಮಿಕ ಪ್ರತಿಬಿಂಬ, ಪ್ರಾರ್ಥನೆ ಮತ್ತು ಆಚರಣೆಯ ಸಮಯವಾಗಿದ್ದು, ಚರ್ಚ್‌ನಲ್ಲಿ ಪ್ರತಿದಿನ 9 ಸಂಜೆ ಅವರ್ ಲೇಡಿಗೆ ವಿಶೇಷ ಪ್ರಾರ್ಥನೆಗಳನ್ನು ಅರ್ಪಿಸಲಾಯಿತು ಮತ್ತು ಇಡೀ ಸಮುದಾಯಕ್ಕೆ ಹಾಜರಾಗಲು ಮತ್ತು ಭಾಗವಹಿಸಲು ಪ್ರೋತ್ಸಾಹಿಸಲಾಯಿತು. ದೈನಂದಿನ ಜನಸ್ತೋಮಗಳು ನೇಟಿವಿಟಿ ಆಫ್ ಅವರ್ ಲೇಡಿಗೆ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿದ್ದವು ಮತ್ತು ಈ ಹಬ್ಬದ ಮಹತ್ವವನ್ನು ಹೋಮಿಲಿಗಳು ಕೇಂದ್ರೀಕರಿಸಿದವು. ನವೀನ ದಿನಗಳಲ್ಲಿ ವಿವಿಧ ದಾನಿಗಳ ಪ್ರಾಯೋಜಕತ್ವದಲ್ಲಿ ತಿಂಡಿಗಳನ್ನು ನೀಡಲಾಯಿತು.
ಹಬ್ಬದ ದಿನದಂದು ನಾವು ಚರ್ಚ್ ಆವರಣದ ಸುತ್ತಲೂ ಮರಿಯನ್ ಮೆರವಣಿಗೆಯನ್ನು ಆಯೋಜಿಸಿದ್ದೇವೆ. ಅವರ್ ಲೇಡಿ ಪ್ರತಿಮೆಯನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು ಮತ್ತು ಮೆರವಣಿಗೆಯು ಸ್ತೋತ್ರಗಳು ಮತ್ತು ಪ್ರಾರ್ಥನೆಗಳೊಂದಿಗೆ ನಡೆಯಿತು. ಇದು ಗಂಭೀರ ಮತ್ತು ಸಂತೋಷದಾಯಕ ಘಟನೆಯಾಗಿದ್ದು, ಅನೇಕ ಪ್ಯಾರಿಷಿಯನ್ನರು ಮೆರವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮಾಸಾಚರಣೆಯ ನಂತರ, ಕಬ್ಬು (ಶ್ರೀ ಲೂಯಿಸ್ ಸ್ಯಾಂಟೋಸ್, ಜೆಪ್ಪು ಪ್ರಾಯೋಜಕರು) ಭಕ್ತರಿಗೆ ರುಚಿಕರವಾದ ಉಪಹಾರವನ್ನು ನೀಡಲಾಯಿತು.
ಯಾವುದೇ ಒಂದು ಸರ್ಕಾರ ರೈತರ ಹಿತವನ್ನು ಕಾಪಾಡಬೇಕು-ಬಿಜೆಪಿ ರಾಜ್ಯಾಧ್ಯಕ್ಷ ನಲೀನ್ ಕುಮಾರ್ ಕಟೀಲ್
ಶ್ರೀನಿವಾಸಪುರ : ಯಾವುದೇ ಒಂದು ಸರ್ಕಾರ ರೈತರ ಹಿತವನ್ನು ಕಾಪಾಡಬೇಕು, ಯಾವುದೇ ಸರ್ಕಾರವಾಗಲಿ ರೈತರೊಂದಿಗೆ ಮಾತುಕತೆ ನಡೆಸಬೇಕು. ಇದನ್ನು ಬಿಟ್ಟು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಲೀನ್ ಕುಮಾರ್ ಕಟೀಲ್ ಪ್ರಶ್ನಿಸದರು?
ರೈತರು ಬೆಳೆದ ಬೆಳೆಗಳ ಫಸಲು ಕೀಳುವುದಕ್ಕೆ ಅವಕಾಶ ನೀಡದೆ, ರೈತರೊಂದಿಗೆ ಮಾತುಕತೆ ನೀಡದೆ ರಾತ್ರೋರಾತ್ರಿ ನೂರಾರು ಜೆಸಿಬಿ ಮುಖಾಂತರ ಬಂದು ಬೆಳೆಗಳನ್ನು ನಾಶ ಪಡಿಸುವುದು ಅವಶ್ಯಕತೆ ಆದರೂ ಏನು ಎಂದು
ತಾಲೂಕಿನ ಕೇತುಗಾನಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆಯ ನಾಶಪಡಿಸಲಾದ ರೈತರ ತೋಟಗಳಿಗೆ ಭಾನುವಾರ ಬೇಟಿ ನೀಡಿ ಮಾತನಾಡಿದರು.
ಈ ನಿಟ್ಟಿನಲ್ಲಿ ಸರ್ಕಾರವು ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು . ರೈತರ ಪರವಾಗಿ ನಾವಿದ್ದೇವೆ ರೈತರ ಹಾಗು ಸಂಸದರ ಮೇಲೆ ಕೇಸು ದಾಖಲಿಸಿರುವುದನ್ನ ಹಿಂಪಡಯಬೇಕು. ರೈತ ವಿರೋಧಿ ನೀತಿಗಳನ್ನು ಹಿಂಪಡಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು ಪಡೆದು ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಂಸದ ಮುನಿಸ್ವಾಮಿ ಮಾತನಾಡಿ ಕಂದಾಯ ಇಲಾಖೆ ನೀಡಿರುವ ಆರ್‍ಟಿಸಿ ಹಾಗು ಇತರೆ ದಾಖಲೆಗಳನ್ನ ದರಖಾಸ್ತು ಮುಖಾಂತರ ಸಾಗುವಳಿ ಚೀಟಿ
ಈ ಭಾಗದ ರೈತರಿಗೆ ತಂದೆ, ತಾತ, ಮುತ್ತಾನ ಕಾಲದಿಂದಲೂ ಸರ್ಕಾರವು ನೀಡಿರುವ ಭೂಮಿಯಲ್ಲಿ ಉಳಿಮೆ ಮಾಡಿ ವ್ಯವಸಾಯ ಮಾಡುತ್ತಿದ್ದು,
ದೇಶದ ಅನ್ನದಾತರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತೀರುವುದು ಖಂಡನೀಯ. ಈ ರೀತಿಯಾಗಿ ಅನ್ನದಾತರ ಮೇಲೆ ದಬ್ಬಾಳಿಕೆ ನಡೆಸಿದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಆಗ್ರಹಿಸಿದರು.
ಅನ್ನದಾತರು ಉಗ್ರಗಾಮಿಗಳು ಅಲ್ಲ. ಅನ್ನದಾತರು ಭೂಗಳ್ಳರು ಅಲ್ಲ. ಯಾರು 20, 30, 40 ಎಕರೆಗಳಷ್ಟು ಭೂಮಿಯಲ್ಲಿ ಉಳಿಮೆ ಮಾಡುತ್ತಿಲ್ಲ. ಯಾರು 20, 30, 40 ಎಕರೆಗಳಲ್ಲಿ ಒತ್ತುವರಿ ಮಾಡಿಕೊಂಡಿರುವವರ ಭೂಮಿಯನ್ನು ಒತ್ತುವರಿ ತೆರವುಗೊಳಿಸಿ ಎಂದು ಆಗ್ರಹಿಸಿದರು.
1 ಎಕರೆ , ಅರ್ಧ ಕುಂಟೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವವರ ದೌರ್ಜನ್ಯ ಮಾಡುವುದು ಸರಿಯಲ್ಲ. ರೈತ ಆತ್ಮಹತ್ಯೆ ಸಂದರ್ಭಗಳನ್ನು ಸರ್ಕಾರದ ರೈತರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕು ಅದನ್ನ ಬಿಟ್ಟು ರೈತರ ಮೇಲೆ ದಬ್ಭಾಳಿಕೆ ಮಾಡುತ್ತಿರುವುದು ಎಷ್ಟ ಸಮಂಜಸ ಎಂದು ಪ್ರಶ್ನಿಸಿದರು.
ನಾವು ನೀವು ತಿನ್ನುವುದು ಅನ್ನವನ್ನೇ ಅನ್ನವನ್ನು ಉತ್ಪಾದಿಸುವ ಅನ್ನದಾತರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ಈ ರೀತಿ ಮಾಡಿದರೆ ಮುಂದಿನ ದಿನಳಲ್ಲಿ ನಾವು , ನೀವು ತಿನ್ನುವುದು ಅನ್ನವನ್ನ ಅಲ್ಲ ಮಣ್ಣು ತಿನ್ನುತ್ತೇವೆ ಎಂದರು. ರೈತರಿಗೆ ನ್ಯಾಯ ದೊರಕಿಸುವ ನಿಟ್ಟನಲ್ಲಿ ರೈತರ ಪರವಾಗಿ ಜೈಲು ವಾಸ ಅನುಭವಿಸಲು, ರೈತರಿಗಾಗಿ ಪ್ರಾಣತ್ಯಾಗ ಮಾಡಲು ನಾವು ಸಿದ್ದರಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ರೈತರ ಪರವಾಗಿ ಬಿಜೆಪಿ ಪಕ್ಷದವತಿಯಿಂದ ಕಾನೂನು ರೀತ್ಯ ಹೋರಾಟಕ್ಕೆ ರೂಪರೇಷಗಳನ್ನು ಹಮ್ಮಿಕೊಂಡು ಹೋರಾಟ ಮಾಡಲಾಗುವುದು ಎಂದರು.
ಸಂಸದ ಮುನಿಸ್ವಾಮಿ, ಎಂಎಲ್‍ಸಿ ರವಿಕುಮಾರ್ , ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ಹಾಗೂ ರೈತ ಮುಖಂಡರು ಇದ್ದರು.
ಶ್ರೀನಿವಾಸಪುರ : ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನದವೂ ದೇಶಸೇವೆ : ಗುಂಜೂರು ಶ್ರೀನಿವಾಸರೆಡ್ಡಿ
ಶ್ರೀನಿವಾಸಪುರ : ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ವನ್ನು ಮಾಡುವುದರ ಮೂಲಕ ದೇಶ ಸೇವೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಹೇಳಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನರೇಂದ್ರ ಮೋದಿ ಜನ್ಮದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿ ಮಾತನಾಡಿದರು.
ಯುವಕರು ರಕ್ತದಾನವನ್ನು ಇನ್ನೂಬ್ಬರ ಜೀವವನ್ನು ಉಳಿಸಿ ನಿಟ್ಟಿನಲ್ಲಿ ರಕ್ತದಾನ ಮಾಡಿದ್ದಾರೆ. ದೇಶದ ಒಳಿತಿಗಾಗಿ ಒಂದು ದಿನವೂ ವಿಶ್ರಾಂತಿ ಪಡೆಯದೆ, ದೇಶದ ಏಳಿಗೆಗಾಗಿ ಹಗಲಿರಲು ದುಡಿಯವ ಮಹಾಚೇತನ ನರೇಂದ್ರಮೋದಿ ರವರ ಆರೋಗ್ಯವಾಗಲಿ ಇರಲಿ ಎನ್ನುವ ದೃಷ್ಟಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್‍ನ್ನು ಹಂಚಿದರು. ಮುಖಂಡ ರಾಜಶೇಖರರೆಡ್ಡಿ , ಬಂಗವಾದಿ ನಾಗರಾಜ್, ಪುರಸಭೆ ಮಾಜಿ ಸದಸ್ಯ ರಾಮಾಂಜಿ, ರಮೇಶ್, ಷೇಕ್‍ಷಫೀವುಲ್ಲಾ , ಮಂಜುನಾಥರೆಡ್ಡಿ , ಟಿ.ಎನ್.ನಾರಾಯಣಸ್ವಾಮಿ ಇದ್ದರು.
ಶ್ರೀನಿವಾಸಪುರ ಜಿಲ್ಲಾಧಿಕಾರಿ ಅಕ್ರಮಪಾಷ ಇವರಿಂದ ಪುರಸಭೆ ಕಛೇರಿಯ ಕಡತಗಳ ಪರಿಶೀಲನೆ
ಶ್ರೀನಿವಾಸಪುರ 3 : ಪಟ್ಟನದ ಪುರಸಭೆ ಕಛೇರಿಗೆ ಭಾನುವಾರ ಪುರಸಭೆಯ ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಅಕ್ರಮಪಾಷ ಮಾತನಾಡಿದರು.
ಪುರಸಭಾ ವ್ಯಾಪ್ತಿಯ ಇಂದಿರಾ ನಗರ , ಮಾರತಿ ನಗರ, ಡಾ. ಜಾಕೀರ್ ಹುಸೇನ್ ಮೊಹಲ್ಲಾ , ವೆಂಕಟೇಶ್ವರ ಬಡವಾಣೆ ಸೇರಿದಂತೆ ವಿವಿಧ ಬಡವಾಣೆಗಳಿಗೆ ಬೇಟಿ ನೀಡಿ ಸ್ವಚ್ಚತೆ, ಬೀದಿ ದೀಪಗಳ ಸಿಸಿಎಂಎಸ್ ಲೈಟ್ಸ್ ನಿರ್ವಹಣೆ ಹಾಗೂ ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ವಹಿಸಿರುವ ಸಿಸಿ ರಸ್ತೆ , ಮತ್ತು ಚರಂಡಿ ಕಾಮಗಾರಿ ಸೇರಿದಂತೆ ಡ್ರೈವೇಸ್ಟ್ ಮ್ಯಾನೇಜ್‍ಮೆಂಟ್ ನಿರ್ವಹಣೆ ಘಟಕಗಳನ್ನು ಖುದ್ಧಾಗಿ ಪರಿಶೀಲಿಸಿದರು.
ನಂತರ ಪುರಸಭಾ ಕಛೇರಿಗೆ ಬೇಟಿ ನೀಡಿ ಕೆಎಂಎಫ್ -24 ಡಾಟಾ ಎಂಟ್ರಿ ಮತ್ತು ವಿವಿಧ ಲಾಗಿನ್‍ಗಳಲ್ಲಿ ಸ್ವತಃ ತಾವೇ ಕರವಸೂಲಿಗಾರರ ಜೊತೆ ಆಸ್ತಿ ಕಣಜ ತಂತ್ರಾಂಶದಲ್ಲಿ ದತ್ತಾಂಶ ಪರಿಶೀಲನೆ ಮಾಡಿದ ಅವರು ಕೆಎಂಎಫ್ -24 ವಹಿಯಲ್ಲಿ ನಿರ್ವಹಿಸಿರುವ ವಿವರ ಸೇರಿದಂತೆ ಪುರಸಭಾ ವಾಣಿಜ್ಯ ಮಳಿಗೆಗೆಳ ಬಾಡಿಗೆ ವಸೂಲಾತಿ ಖಾಲಿ ಇರುವ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ, ಆಸ್ತಿ ತೆರಿಗೆ ಹಾಗೂ ಎಲ್ಲಾ ವಿವರಗಳ ಮಾಹಿತಿ ಪಡೆದುಕೊಂಡರು.
ಯೋಜನಾ ನಿರ್ದೇಶಕರ ಕಛೇರಿಯ ಕಾರ್ಯಪಾಲಕ ಆಭಿಯಂತರರಾದ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರ ಚಲಪತಿ, ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ , ಕಂದಾಯ ಅಧಿಕಾರಿ ವಿ.ನಾಗರಾಜ್, ಕಿರಿಯ ಅಭಯಂತರ ವಿ.ಶ್ರೀನಿವಾಸಪ್ಪ, ಹಿರಿಯ ಆರೋಗ್ಯ ಅಧಿಕಾರಿ ಕೆ.ಜಿ.ರಮೇಶ್, ನೋಡಲ್ ಅಧಿಕಾರಿ ಚೌಡೇಗೌಡ , ಸಿಬ್ಬಂದಿಗಳಾದ ಸಂತೋಷ್, ಸುರೇಶ್, ಶ್ರೀನಾಥ್ ಇದ್ದರು.
ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದ ವತಿಯಿಂದ ವಿಶ್ವಕರ್ಮ ದಿನಾಚರಣೆ
ಶ್ರೀನಿವಾಸಪುರ : ಪಟ್ಟಣದ ಎಂಜಿ ರಸ್ತೆ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದವತಿಯಿಂದ ಭಾನುವಾರ ವಿಶ್ವಕರ್ಮ ದಿನಾಚರಣೆ ಆಯೋಜಿಸಲಾಗಿತ್ತು.
ತಾಲೂಕು ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಕೆ.ಮೋಹನಾಚಾರಿ, ವಕೀಲ ಸದಾಶಿವಾಚಾರಿ, ಮುಖಂಡರಾದ ರವಿಚಂದ್ರಚಾರಿ, ರಾಮಚಂದ್ರಾಚಾರಿ, ರತ್ನಚಾರಿ, ಕೃಷ್ಣಮೂರ್ತಿ, ಉಪ್ಪಕುಂಟೆ ಶಿಲ್ಪಿ ಮಂಜುನಾಥಚಾರಿ , ನಂದೀಶ್, ಸೋಮಶೇಖರ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷ ರಾಧಮ್ಮ, ಸದಸ್ಯೆ ಅನ್ನಪೂರ್ಣಮ್ಮ ಅರ್ಚಕರಾದ ಮಂಜುನಾಥ್, ರಮೇಶ್ ಇದ್ದರು.