ನಿಫಾ ವೈರಸ್ ಸೋಂಕು ರಾಜ್ಯಕ್ಕೆ ಹರಡದಂತೆ ಕಟ್ಟೆಚ್ಚರ ಮುಂಜಾಗೃತಾ ಕ್ರಮ ವಹಿಸಲಾಗಿದೆ-ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: “ಕೇರಳದಲ್ಲಿ ಕಾಣಿಸಿರುವ ನಿಫಾ ವೈರಸ್ ಸೋಂಕು ರಾಜ್ಯಕ್ಕೆ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಲ್ಲಿ ಯಾರಿಗೂ ಸೋಂಕು ತಟ್ಟಬಾರದು. ಆ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ” ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೇರಳದ ಗಡಿಗೆ ತಾಗಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಭೆಯನ್ನು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ನಿಫಾದ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಕೇರಳಕ್ಕೆ ಸಮೀಪದಲ್ಲಿರುವ ನಾಲ್ಕು ಜಿಲ್ಲೆಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ನಡೆಯುತ್ತಿದೆ.

ದ.ಕ ಜಿಲ್ಲೆಯ 12 ಚೆಕ್‌ಪೋಸ್ಟ್‌ಗಳಲ್ಲಿ 2184, ಮೈಸೂರಿನ 4 ಚೆಕ್ ಪೋಸ್ಟ್‌ಗಳಲ್ಲಿ 6,500, ಕೊಡಗು 4 ಚೆಕ್‌ಪೋಸ್ಟ್‌ ಗಳಲ್ಲಿ 1,132 ಮತ್ತು ಚಾಮರಾಜನಗರದ 2 ಚೆಕ್‌ಪೋಸ್ಟ್‌ಗಳಲ್ಲ್ 1,600 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಆರೋಗ್ಯ ಇಲಾಖೆಯು ಅಗತ್ಯದ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಸೋಂಕು ಪತ್ತೆಯಾದರೆ ಕ್ವಾರಂಟೈನ್, ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್‌ಗಳು , ಮಾಸ್ಕ್ ಮತ್ತಿತರ ವ್ಯವಸ್ಥೆಗೆ ಅಗತ್ಯದ ತಯಾರಿ ಕೈಗೊಳ್ಳಲಾಗಿದೆ.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಆನಂದ್, ಆರೋಗ್ಯ, ಇಲಾಖೆಯ ಜಂಟಿ ನಿರ್ದೇಶಕಿ ಡಾ. ತ್ರಿವೇಣಿ, ವಿಭಾಗೀಯ ಸಹ ನಿರ್ದೇಶಕಿ ಡಾ. ರಾಜೇಶ್ವರಿ ದೇವಿ ಮೊದಲಾದವರು ಉಪಸ್ಥಿತರಿದ್ದರು.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ನೀಡುತ್ತಿರುವ ಹಣ ಕಟ್ಟ ಕಡೆಯ ವ್ಯಕ್ತಿಗೂ ತಲುಪಲಿ : ಸಚಿವ ಕೆ.ಹೆಚ್. ಮುನಿಯಪ್ಪ 

ಕೋಲಾರ : ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಹಣ ಅಂತ್ಯೋದಯ ಕಾರ್ಡ್ ದಾರರು ಹಾಗೂ ಬಿಪಿಎಲ್ ಕಾರ್ಡ್ ದಾರ ಫಲಾನುಭವಿಗಳ ಬ್ಯಾಂಕ್ ಖಾತೆಯ ಕಟ್ಟ ಕಡೆಯ ವ್ಯಕ್ತಿಗೂ ತಲುಪಲಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಸೂಚಿಸಿದರು. 

ಇಂದು ಮುಳಬಾಗಿಲು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಹಣ ನೀಡಲಾಗುತ್ತಿದ್ದು , ಎಲ್ಲಾ ಬಡವರು , ಮಾಧ್ಯಮ ವರ್ಗದವರು , ಕುಟುಂಬಗಳ ಖಾತೆಗೆ ಹಣ ತಲುಪಬೇಕು.

ಇನ್ನೂ ಖಾತೆಗೆ ಹಣ ಹೋಗದೆ ಇರುವಂತಹ ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸಿ ತಿಂಗಳ ಅಂತ್ಯದೊಳಗೆ ವರದಿಯನ್ನು ಸಲ್ಲಿಸಬೇಕೆಂದು ಆಹಾರ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಎಲ್ಲಾ ಅಕ್ಕಿ ಉಗ್ರಾಣಗಳಿಗೂ ತಿಂಗಳಿಗೆ ಎರಡು ಬಾರಿ ಭೇಟಿ ನೀಡಿ , ಅಕ್ಕಿ ಏನಾದರೂ ಉಳಿಕೆ ಇದೆಯೇ ಹಾಗೂ ಅಕ್ಕಿ ಗುಣ ಮಟ್ಟವನ್ನು ಸೂಕ್ತವಾಗಿ ಪರಿಶೀಲಿಸಬೇಕು ಎಂದು ಹೇಳಿದರು. 

ಇನ್ನು ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿದ್ದು , ಯಾರಾದರೂ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿಯನ್ನು ತಿಳಿದುಕೊಂಡರು. ಆಹಾರ ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಯೊಬ್ಬರು ಮಾತನಾಡಿ ಜಿಲ್ಲೆಯಲ್ಲಿ ಬಹುತೇಕ ಜನರು ಅಕ್ಕಿಯೇ ಬೇಕು ಹಣ ಬೇಡ ಎಂದು ಹೇಳುತ್ತಿದ್ದಾರೆ ಎಂದು ಸಚಿವರಿಗೆ ಮನವಿ ಮಾಡಿದರು. 

ತೂಕ ಮತ್ತು ಕಾನೂನು ಮಾಪನ ಇಲಾಖೆ ಸಂಬಂಧಪಟ್ಟ ಅಧಿಕಾರಿ ಜೊತೆ ಮಾತನಾಡಿ ಜಿಲ್ಲೆಯಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಹಾಗೂ ಗ್ರಾಹಕ ಕೇಂದ್ರಗಳಲ್ಲಿ ಸರಿಯಾದ ರೀತಿ ತೂಕ ಅಳತೆ ಮಾಡುತ್ತಿದ್ದಾರೆಯೇ ಎಂಬುದನ್ನು ಮಾಹಿತಿ ಪಡೆದು ಶೀಘ್ರವಾಗಿ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು. 

ಶಿಕ್ಷಣ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ , ಕುಡಿಯುವ ನೀರು , ಶೌಚಾಲಯ , ಆಟದ ಮೈದಾನ ಹಾಗೂ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿದೆಯೇ ಎಂಬುದನ್ನು ಅದರ ಬಗ್ಗೆ ವಿವರಗಳನ್ನು ಪಡೆದುಕೊಂಡರು. ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಯೊಬ್ಬರು ಮಾತನಾಡಿ , ಜಿಲ್ಲೆಯಲ್ಲಿ ಕೆಲವು ಕಡೆ ಶಿಕ್ಷಕರ ಸಮಸ್ಯೆ ಇದೆ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ನರಸಾಪುರ , ಮಾಲೂರು , ವೇಮಗಲ್ , ಕೈಗಾರಿಕೆಗಳು ಹೆಚ್ಚು ಇರುವುದರಿಂದ ಸಿಎಸ್‌ಆರ್ ಅನುದಾನದಲ್ಲಿ ಹೆಚ್ಚು ಶಿಕ್ಷಣ ಇಲಾಖೆಯನ್ನು ಅಭಿವೃದ್ಧಿಪಡಿಸುವಲ್ಲಿ ಮುಂದಿನ ದಿನಗಳಲ್ಲಿ ಸಭೆಯನ್ನು ನಡೆಸಿ , ಸಿಎಸ್‌ಆರ್ ಅನುದಾನವನ್ನು ಶಿಕ್ಷಣಕ್ಕಾಗಿ ಹೊತ್ತು ನೀಡಬೇಕು ಹೇಳುತ್ತಾರೆ. ಮುಳಬಾಗಿಲು ತಾಲ್ಲೂಕಿನ ಇಒ ಸರ್ವೇಶ್ ಅವರು ಮಾತನಾಡಿ , ತಾಲೂಕಿನಲ್ಲಿ ಬಹುತೇಕ ಕಾಮಗಾರಿಗಳು ನರೇಗಾ ಯೋಜನೆ ಅಡಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳಿದರು. 

ಸಭೆಗೆ ಮುನ್ನ ಕುರುಡುಮಲೆ ಗಣಪತಿ ದೇವಸ್ಥಾನಕ್ಕೆ ಆಹಾರ ಸಚಿವ ಕೆ ಹೆಚ್. ಮುನಿಯಪ್ಪ ಭೇಟಿ ಮುಳಬಾಗಿಲು ಸೆಪ್ಟೆಂಬರ್ 19 ಸುಪ್ರಸಿದ್ಧವಾಗಿರುವ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಎಂದಿನಂತೆ ಪ್ರತಿ ವರ್ಷ ಗಣಪತಿ ಹಬ್ಬದಲ್ಲಿ ಗಣಪತಿ ಉತ್ಸವಗಳು ಹಾಗೂ ರಥೋತ್ಸವಗಳು ಜರುಗುತ್ತಿದ್ದು , ಭಕ್ತರ ಜೊತೆಗೆ ಮಾನ್ಯ ಆಹಾರ 

 ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್ . ಮುನಿಯಪ್ಪ ದಂಪತಿ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

ಸಚಿವರು ಪೂಜೆಯನ್ನು ಸಲ್ಲಿಸಿ ನಾಡಿನ ಜನತೆಗೆ ಉತ್ತಮವಾದ ಮಳೆಯಾಗಿ ನಾಡಿನ ಸುಭೀಕ್ಷವಾಗಿರಬೇಕೆಂದು ಹಾಗೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ಮುಳಬಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹಜರತ್ ಹಾಗೂ ಸೈಯದನ ಬಾಬಾ ಹೈದರ್ – ಇ – ಖಲಂದರ್ ಪುಸೇನಿ ಸೆಹೆರ್ ವರ್ದಿ ದರ್ಗಾ ಮಹಲ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. 

ಮುಳಬಾಗಿಲು ಶಾಸಕರಾದ ಸಮೃದ್ಧಿ ಮಂಜುನಾಥ , ರಾಮಪ್ರಸಾದ್ , ಊರಬಾಗಿಲು ಶ್ರೀನಿವಾಸ , ರಾಮಪ್ರಸಾದ್ , ರಾಮಲಿಂಗಾರೆಡ್ಡಿ , ಕೋಲಾರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ದಂಡಾಧಿಕಾರಿಗಳಾದ ರೇಖಾ , ಸಚಿವರ ಆಪ್ತ ಕಾರ್ಯದರ್ಶಿಗಳಾದ ಡಾ || ಎಚ್ ನಟರಾಜ್ , ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜನತಾ ದರ್ಶನ ಜಾರಿ ಕುರಿತು ಪೂರ್ವಭಾವಿ ಸಭೆ : ಜಿಲ್ಲಾಧಿಕಾರಿ ಅಕ್ರಂ ಪಾಷ 

ಕೋಲಾರ : ಸಾರ್ವಜನಿಕರ ಅಹವಾಲುಗಳನ್ನು ಮುಖ್ಯಮಂತ್ರಿಗಳಿಗೆ ನೇರವಾಗಿ ನೀಡುವ ಜನತಾ ದರ್ಶನದ ಮುಂದುವರೆದ ಭಾಗವಾಗಿ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಿದೆ . 

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರದಲ್ಲಿ  ಜಿಲ್ಲಾ ಉಸ್ತುವಾರಿ ಸಚಿವರು , ಕಾರ್ಯದರ್ಶಿಗಳು , ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ಅಂತೆಯೇ ತಾಲ್ಲೂಕು ಮಟ್ಟದಲ್ಲಿ ಶಾಸಕರು , ತಹಶೀಲ್ದಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ.

ಜಿಲ್ಲಾ ಮಟ್ಟದಲ್ಲಿ ಪ್ರತಿ ಮಾಹೆ ಒಂದರಂತೆ ಹಾಗೂ ಪ್ರತಿ 15 ದಿನಗಳಿಗೊಮ್ಮೆ ಆಯ್ದ ಒಂದು ತಾಲ್ಲೂಕಾ ಕೇಂದ್ರದಲ್ಲಿ ಜನತಾ ದರ್ಶನ ಏರ್ಪಡಿಸಲು ಸಿದ್ಧತೆ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು. 

ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ , ಜನತಾ ದರ್ಶನ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ,  ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಈ ಹಿಂದೆ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದ್ದು , ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕುಂದು ಕೊರತೆಗಳು ಹಾಗೂ ಅಹವಾಲುಗಳನ್ನು ಪತ್ರಮುಖೇನ  ಮುಖ್ಯಮಂತ್ರಿಗಳಿಗೆ ನೀಡುತ್ತಿದ್ದರು. 

ಪ್ರಸ್ತುತ ಈ ವಿನೂತನ ಕಾರ್ಯಕ್ರಮದಿಂದ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಕೊಡ ಬೇಕಾಗಿರುವ ಅಹವಾಲುಗಳನ್ನು ಸ್ಥಳೀಯವಾಗಿಯೇ ಸಂಬಂಧಿತ ಶಾಸಕರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಬಹುದಾಗಿದೆ. 

ಇದರಿಂದ ಸಾರ್ವಜನಿಕರು  ಮುಖ್ಯಮಂತ್ರಿಗಳಿಗೆ ಅಹವಾಲುಗಳನ್ನು ನೀಡಲು ಭೇಟಿ ಮಾಡುವುದನ್ನು ತಪ್ಪಿಸಬಹುದಾಗಿದೆ ಹಾಗೂ ತಮ್ಮ ಸಮಸ್ಯೆಗಳನ್ನು ಹಾಗೂ ಕುಂದು ಕೊರತೆಗಳನ್ನು ಸ್ಥಳೀಯವಾಗಿ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ಉದ್ದೇಶದಿಂದ ಕೋಲಾರ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಸೆ .25 ರಂದು ನಗರದ ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ . ಈ ಕಾರ್ಯಕ್ರಮದ ನಂತರ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲೆಯ ಯಾವುದಾದರೊಂದು ತಾಲ್ಲೂಕು ಕೇಂದ್ರದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು . 

ಜನತಾ ದರ್ಶನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಇ – ಆಫೀಸ್ ತಂತ್ರಾಂಶವನ್ನು ಅನುಷ್ಠಾನ ಮಾಡಬೇಕಾಗಿರುತ್ತದೆ. ಇದರಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಇರುತ್ತದೆ.

ಇ – ಆಫೀಸ್ ಅನುಷ್ಠಾನ ಮಾಡಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಇಲಾಖೆಗಳು ಸಿದ್ಧಪಡಿಸಿಕೊಳ್ಳಬೇಕು ಜಿಲ್ಲಾಡಳಿತದ ವತಿಯಿಂದ ಇ – ಆಫೀಸ್ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುವುದು. ತರಬೇತಿ ಅಗತ್ಯವಿರುವ ಸಿಬ್ಬಂದಿಯವರು ಕಾರ್ಯಗಾರದ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು. 

ಜನತಾ ದರ್ಶನ ಕಾರ್ಯಕ್ರಮದಂದು ಅಯಾ ಇಲಾಖೆಗಳು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಹವಾಲುಗಳ ಸ್ವೀಕೃತಿ ಹಾಗೂ ವಿಲೇವಾರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಅಯಾ ಇಲಾಖೆಗಳ ಕೌಂಟರ್ ಗಳಲ್ಲಿ ಇಲಾಖೆಯ ವೆಬ್ ಸೈಟ್ , ಹೆಲ್ತ್‌ಲೈನ್ ಅಥವಾ ಕಂಟ್ರೋಲ್ ರೂಂಗಳ ಹಾಗೂ ಅಯಾ ಇಲಾಖೆಗಳ ಯೋಜನೆಗಳ ಬಗ್ಗೆ ವಿವರಗಳನ್ನು ಮುದ್ರಿಸಿ ಹಾಕಿರಬೇಕು. ಸಕಾಲ ತಂತ್ರಾಂಶವನ್ನು ಈ ಯೋಜನೆಗಾಗಿ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಅಥವಾ ಅಂತಹ ಯಾವುದೇ ಆನ್ ಲೈನ್ ಸೇವೆಗಳಿದ್ದಲ್ಲಿ , ಅವುಗಳನ್ನು ಈ ಯೋಜನೆಗೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಪದ್ಮ ಬಸವಂತಪ್ಪ ರವರು ಮಾತನಾಡಿ , ಜಿಲ್ಲೆಯಲ್ಲಿ ಪ್ರತಿ 2 ನೇ ಶನಿವಾರದಂದು ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಸಭೆಗಳನ್ನು ಏರ್ಪಡಿಸಲಾಗುತ್ತಿದ್ದು , ಈ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ತಿಳಿಸಿದರು.

ಇದರಿಂದ ಗ್ರಾಮಗಳ ಮಟ್ಟದಲ್ಲಿ ಕುಂದು ಕೊರತೆಗಳನ್ನು ಸ್ಥಳೀಯವಾಗಿ ಬಗೆಹರಿಸಲು ಮತ್ತು ಜನತಾ ದರ್ಶದಲ್ಲಿ ಅಹವಾಲುಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಅದೇ ರೀತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಕೆಡಿಪಿ ಸಭೆಗಳಿಗೂ ಸಹ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಾಗುವಂತೆ ಸೂಚಿಸಿದರು. ಸಾರ್ವಜನಿಕ ಕುಂದು ಕೊರತೆಗಳನ್ನು ಐ.ಪಿ.ಜಿ.ಆರ್.ಎಸ್ ಮೂಲಕ ನೋಂದಾಯಿಸಿ ಆನ್ ಲೈನ್ ಮೂಲಕ ಶೀಘ್ರವಾಗಿ ಪರಿಹರಿಸುವಂತೆ ಸೂಚಿಸಿದರು.

ಸಭೆಯಲ್ಲಿ ಕೆ.ಜಿ.ಎಫ್ ವರಿಷ್ಠಾಧಿಕಾರಿಗಳಾದ ಶಾಂತರಾಜು , ಹೆಚ್ಚುವರಿ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಾದ ಬಾಸ್ಕರ್ , ಎಲ್ಲಾ ತಾಲ್ಲೂಕಿನ ತಹಶಿಲ್ದಾರರ ಗಳು , ಕೃಷಿ ಜಂಟಿ ನಿರ್ದೇಶಕರಾದ ರೂಪದೇವಿ , ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್.ಎಂ , ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ || ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು .

55 ವರ್ಷ ಪ್ರಾಯದಲ್ಲಿ ಬೈಕ್ ಮೂಲಕ ವಿಶ್ವದ ಅತಿ ಎತ್ತರದ ಮೋಟಾರು ಪಾಸ್ ತಲುಪಿದ ವಿಲ್ಮಾ ಕುಂದಾಪುರ – ಇಂತಹ ಸಾಧನೆ ಮಾಡಿದ ಭಾರತೀಯ ಮೊದಲ ಮಹಿಳೆ / Vilma Kundapura reached the world’s highest motorable pass by bike at the age of 55 – the first Indian woman to achieve such a feat

ಕುಂದಾಪುರ, ಸೆ.21: ಬೆಂಗಳೂರಿನಿಂದ ತಾಯಿ ಮಗಳ ಜೋಡಿ ಮೂಲತಹ ಕುಂದಾಪುರವರಾದ ೫೫ ವರ್ಷ ಪ್ರಾಯದ ವಿಲ್ಮಾ ಕರ್ವಾಲೋ ಬೈಕ್ ಮೂಲಕ ವಿಶ್ವದ ಅತಿ ಎತ್ತರದ ಮೋಟಾರಬಲ್ ಪಾಸ್ ತಲುಪಿ ವಿಸೇಷವಾದ ಸಾಧನೆ ಮಾಡಿ  ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ   ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕಾರ್ಪೊರೇಟ್ ತರಬೇತುದಾರರಾದ 2022 ಆಕೆಯ ಪ್ರಯಾಣದ ನಂತರ ಎರಡನೇ ಅತಿ ಎತ್ತರದ ಮೋಟಾರು ರಸ್ತೆ – ಖರ್ದುಂಗ್ಲಾ ಪಾಸ್ ಆಗಿದ್ದು, ಕಳೆದ ವರ್ಷದ ಸಾಧನೆಯನ್ನು ಮಾಡಿದ ನಂತರ ಅವಳು ಸ್ವಲ್ಪ ಹೆಚ್ಚು ದೃಢ ನಿಶ್ಚಯದಿಂದ ತಲುಪಬಹುದು ಎಂದು ಅರಿತುಕೊಂಡಳು.

ಉಮ್ಲಿಂಗ್ ಲಾ, ವಿಶ್ವದ ಅತಿ ಎತ್ತರದ ಮೋಟಾರು ಪಾಸ್.

ಉಮ್ಲಿಂಗ್ ಲಾ ಪಾಸ್ ಲೇಹ್ ನಗರದಿಂದ ಸುಮಾರು 350 ಕಿಮೀ ದೂರದಲ್ಲಿದೆ ಮತ್ತು ಇದು ಇಂಡೋ ಚೀನಾ ಗಡಿಯ ಸಮೀಪದಲ್ಲಿದೆ.ಈ ಪ್ರಸಿದ್ಧ ಪಾಸ್ ಸಮುದ್ರ ಮಟ್ಟದಿಂದ 19024 ಅಡಿ ಎತ್ತರದಲ್ಲಿದೆ, ಇದು ಅತ್ಯುನ್ನತ ಮೋಟಾರು ಸಾಮರ್ಥ್ಯದ ಪಾಸ್ ಆಗಿದೆ ಜಗತ್ತಿನಲ್ಲಿ. ಇದನ್ನು ಬಾರ್ಡರ್ ರೋಡ್ ಆರ್ಗನೈಸೇಶನ್ (BRO) ಯೋಜನೆಯ HIMANK ನ ಭಾಗವಾಗಿ ನಿರ್ಮಿಸಲಾಗಿದೆ. 2017 ರ ವೇಳೆಗೆ ಕಾಮಗಾರಿ ಪೂರ್ಣಗೊಂಡಿದ್ದರೂ, 2021 ರ ಅಂತ್ಯದ ವೇಳೆಗೆ ಮಾತ್ರ ಸಾರ್ವಜನಿಕರಿಗೆ ತೆರೆಯಲಾಯಿತು. ಲಡಾಖ್‌ನಲ್ಲಿರುವ ಭೂಪ್ರದೇಶವು ಸವಾರರಿಗೆ ಸಾಕಷ್ಟು ಕಠಿಣವಾಗಿದೆ, ಆದರೆ ಹಳ್ಳಿಯಿಂದ ಹಾನ್ಲೆಗೆ ಪ್ರಯಾಣಉಮ್ಲಿಂಗ್ ಲಾ ಆಫ್ ರೋಡಿಂಗ್ ವಿಭಾಗಗಳು, ಮರಳು ದಿಬ್ಬಗಳು ಮತ್ತು ಮರಳಿನ ಪರ್ವತ ರಸ್ತೆಗಳಿಂದ ನಿರೂಪಿಸಲ್ಪಟ್ಟಿದೆ, ಇದು ಎಲ್ಲಾ ಸವಾರರಿಗೆ ಅತ್ಯಂತ ಸವಾಲಿನದಾಗಿದೆ.

[ಹನ್ಲೆ ಭಾರತದ ಅತಿ ಎತ್ತರದ ಗ್ರಾಮ, ಅಲ್ಲಿ ನಾವು ಭಾರತೀಯ ಖಗೋಳ ವೀಕ್ಷಣಾಲಯವನ್ನು ಕಾಣುತ್ತೇವೆ]

ವಿಲ್ಮಾ ತನ್ನ ಮಗಳು ಚೆರಿಶ್ ಜೊತೆಗೆ ಕೇರಳದ 3 ಸವಾರರ ತಂಡ ಮತ್ತು ಪ್ರಯಾಣವನ್ನು ಪ್ರಾರಂಭಿಸಿದರು ಲೇಹ್‌ನ ಬೆಂಬಲ ತಂಡ. ಎಲ್ಲಾ 5 ಸವಾರರು ಭೂಪ್ರದೇಶಕ್ಕೆ ಆದ್ಯತೆಯ ಬೈಕು RE ಹಿಮಾಲಯನ್‌ನಲ್ಲಿ ಸವಾರಿ ಮಾಡಿದರು. ಈ ಪಾಸ್ ಲೇಹ್ ನಗರದಿಂದ ದೂರ ಇರುವುದರಿಂದ, ರಸ್ತೆಗಳು ಇನ್ನೂ ಅಭಿವೃದ್ಧಿ ಹಂತದಲ್ಲಿದೆ, ಇದರಿಂದಾಗಿ ಕಡಿಮೆಯಾಗಿದೆ ಸವಾರರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಒಟ್ಟಾರೆಯಾಗಿ, ಲೇಹ್ ಟು ಲೇಹ್ ಪ್ರವಾಸವು 5 ದಿನಗಳ ಕಾಲ ನಡೆಯಿತು ಮತ್ತು ಒಟ್ಟು ಅಂದಾಜು 900 ಕಿ.ಮೀ. ವಿಲ್ಮಾ, ಪ್ರವಾಸದ ಉದ್ದಕ್ಕೂ ತನ್ನ ಮಗಳನ್ನು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಿದ್ದಕ್ಕಾಗಿ ಮಗಳನ್ನು ಧನ್ಯವಾದಗಳನ್ನು ನೀಡುತ್ತಾಳೆ, ಇಲ್ಲದಿದ್ದರೆ 55 ವರ್ಷದ ಮಹಿಳೆಗೆ ಅಸಾಧ್ಯವಾದ ಸಾಧನೆಯಾಗಿರುತಿತ್ತು ಎಂದು ತಿಳಿಸುತ್ತಾಳೆ.

“ನಾವು ಅನೇಕ ಸವಾಲುಗಳನ್ನು ಎದುರಿಸಿದ್ದೇವೆ” ಎಂದು ವಿಲ್ಮಾ ಹೇಳುತ್ತಾರೆ, “ಮೂಳೆ ಕಚ್ಚುವ ಚಳಿ, ಕಡಿಮೆ ಆಮ್ಲಜನಕದ ಮಟ್ಟಗಳು, ಜಾರು ರಸ್ತೆಗಳು ಉತ್ತಮ ಜಲ್ಲಿಕಲ್ಲು, ಆಫ್ ರೋಡಿಂಗ್ ವಿಭಾಗಗಳು, ಶೀತಲಮಯ ನೀರಿನ ದಾಟುವಿಕೆಗಳು ಮತ್ತು ಮರಳು ದಿಬ್ಬಗಳು ಸವಾಲಾಗಿದ್ದವು. ಆದರೆ ನಮ್ಮ ಧ್ರಡತೆ ಎಲ್ಲಾ ಸವಾಲುಗಳನ್ನು, ಮೆಟ್ಟಿ, ಪ್ರಪಂಚದ ಅಗ್ರಸ್ಥಾನವನ್ನು ತಲುಪಿ ಜಯ ಸಾಧಿಸಿದೇವು ಇದೊಂದ ವಿಶೇಷವಾದ ಸಾಧನೆಯಾಗಿದೆ. ನಾವು 11ನೇ ಸೆಪ್ಟೆಂಬರ್ 2023 ರಂದು ಉಮ್ಲಿಂಗ್ಲಾ ಪಾಸ್‌ನ ಮೇಲ್ಭಾಗವನ್ನು ತಲುಪಿದ್ದಾಗಿದೆ ಎಂದು ತಮ್ಮ ಬರಹದ ಮೂಲಕವೇ ವಿಲ್ಮಾ ಹೇಳುತ್ತಾಳೆ

ಅದು ತೃಪ್ತಿಕರ ಮತ್ತು ವಿವರಿಸಲಾಗದ ಕ್ಷಣವಾಗಿದ್ದು, ಇದು ನನ್ನ ಬಹಳ ದಿನದ ಕನಸಾಗಿತ್ತು ಎಂದು ಆನಂದದಿಂದ ವಿಲ್ಮಾ ಹೇಳಿಕೊಳ್ಳುತ್ತಾಳೆ.

      ವಿಲ್ಮಾ ಕುಂದಾಪುರದ ರಾಜಕೀಯ ಮುತ್ಸದಿ, ಕುಂದಾಪುರದ ಪುರಸಭೆಯ ಮಾಜಿ ಅಧ್ಯಕ್ಷ ದಿ. ಎಡ್ವಿನ್ ಕ್ರಾಸ್ಟೊ ಮತ್ತು , ಕುಂದಾಪುರದ ಪುರಸಭೆಯ ಮಾಜಿ ಉಪಾಧ್ಯಕ್ಷೆ ಲಿಯೋನಿಲ್ಲಾ ಕ್ರಾಸ್ಟೊ ಇವರ ಮಗಳು, ಇವಳಿಗೆ ಮೊದಲಿನಿಂದಲೂ ಆಟ ಕ್ರೀಡೆಗಳಲ್ಲಿ ಆಸಕ್ತಿಯಿದ್ದು, ಲೆಸ್ಲಿ ಕರ್ವಾಲ್ಲೊರ ಜೊತೆ ವಿವಾಹವಾಗಿ ಬೆಂಗಳೂರಿನಲ್ಲಿ ನೆಲಸುತ್ತಾರೆ.

ಇದು ತೃಪ್ತಿಕರ ಮತ್ತು ವಿವರಿಸಲಾಗದ ಕ್ಷಣವಾಗಿದ್ದು, ಇದು ನನ್ನ ಬಹಳ ದಿನದ ಕನಸಾಗಿತ್ತು ಎಂದು ಆನಂದದಿಂದ ವಿಲ್ಮಾ ಹೇಳಿಕೊಳ್ಳುತ್ತಾಳೆ. ವಿಲ್ಮಾ ೫೫ ವರ್ಷದ ಪ್ರಾಯದಲ್ಲಿ ಇಂತಹ ಅಪರೂಪದ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಗಿರುವು ವಿಶೇಶವಾಗಿದೆ

A 55-year-old woman from Kundapur, Wilma, has achieved the distinction of reaching the world’s highest motorable pass by bike

55 year old woman reaches the highest motorable Pass in the world by bike or Mother daughter duo from Bangalore to reach the highest motorable Pass in the world by bike

Vilma Carvalho, a Corporate Trainer from Kundapura, currently living in Bangalore, made the news in 2022 after her journey to second highest motorable road – Khardungla Pass. After accomplishing last year’s feat she realized that with a little more determination she can reach.

 Umling La, the world’s highest motorable Pass.

Umling La Pass is located around 350 Km from Leh city and it is situated close to Indo China border. This famous Pass is located at 19024 feet above the sea level, making it the highest motor able pass in the world. It was constructed as part of Project HIMANK by the Border Road Organization (BRO). Though, the work was completed by 2017, it opened for public only towards the end of 2021. The terrain in Ladakh is quite tough for riders as it is, however the journey from the village Hanle to Umling La is characterized with off roading sections, sand dunes and sandy mountain roads making it extremely challenging for all riders.

[Hanle is the highest village in India]

where we find Indian Astronomical Observatory] Vilma embarked on the journey along with her daughter Cherish, a team of 3 riders from Kerala and the support team from Leh. All 5 riders rode RE Himalayans, a preferred bike for the terrain. As this pass is situated away from Leh city, the roads are still under development leading to fewer riders venturing this route. Altogether, the Leh to Leh tour lasted for 5 days and was total of approximate of 900 Kms. Vilma, gives credit to her daughter for supporting and encouraging her throughout the tour, an otherwise impossible feat for a woman of 55. “We faced many challenges” says Vilma, “like bone biting cold, low oxygen levels, slippery roads due to fine gravel, off roading sections, chilled water crossings and sand dunes. But the feeling of overcoming all the challenges and reaching what felt like the top of the world is an accomplishment that is satisfying and unexplainable” We reached on top of the Umlingla Pass on 11th Septemter 2023

It was a satisfying and indescribable moment, a dream of mine for a long time,” says Wilma happily.

       Vilma is a political leader of Kundapur, the former president of Kundapur municipality. Daughter of Edwin Crasto and Leonilla Crasto, former vice president of Kundapur Municipality, she had an early interest in sports and settled in Bangalore after marrying Leslie Carvalho.

It was a satisfying and indescribable moment, a dream of mine for a long time,” says Wilma happily. Wilma is the first Indian woman to achieve such a rare feat at the age of 55

ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ.) ಮಹಾಸಭೆ ಶೇ.20% ಡಿವಿಡೆಂಡ್ ಘೋಷಣೆ


ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ: 17-09-2023 ರಂದು ಮಂಗಳೂರಿನ ಸೆಬಾಸ್ಟಿಯನ್ ಕಮ್ಯೂನಿಟಿ ಹಾಲ್, ಬೆಂದೂರ್ ಇಲ್ಲಿ ಜರುಗಿತು. ಕು. ಶೃತಿ, ಕು.ಸ್ವಾತಿ ಹಾಗೂ ಶ್ರೀಮತಿ ಸೌಮ್ಯ ಪ್ರಾರ್ಥಿಸಿದರು. ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್.ಕೆ ಸದಸ್ಯರನ್ನು ಸ್ವಾಗತಿಸಿದರು. 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಹಾಗೂ ಲೆಕ್ಕಪತ್ರ ಹಾಗೂ ಬಜೆಟನ್ನು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪದ್ಮನಾಭ.ಎಂ ಮಂಡಿಸಿದರು, ನೋಟಿಸನ್ನು ನಿರ್ದೇಶಕರಾದ ಶ್ರೀ ಅಶೋಕ್.ಜಿ, ಲಾಭ ವಿಂಗಡಣೆಯನ್ನು ಶ್ರೀ ಭಾಸ್ಕರ್.ಕೆ.ಅಡ್ವಕೇಟ್, ಹಿಂದಿನ ಮಹಾಸಭೆಯ ನಿರ್ಣಯವನ್ನು ಶ್ರೀ ದಿವಾಕರ ಶಂಭೂರು 2023-24 ರ ಕಾರ್ಯ ಚಟುವಟಿಕೆಯನ್ನು ಶ್ರೀ ಹರೀಶ್.ಪಿ.ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ದಾಖಲಿಸಲ್ಪಟ್ಟವು. ಸೊಸೈಟಿಯ ಬೈಲಾಕ್ಕೆ ಸಂಬಂಧಪಟ್ಟಂತೆ ತಿದ್ದುಪಡಿಯ ವಿವರವನ್ನು ನಿರ್ದೇಶಕರಾರ ಶ್ರೀ ಕುಮಾರ್ ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ಅಂಗೀಕರಿಸಲಾಯಿತು. ತಿದ್ದುಪಡಿಯ ಪ್ರಕಾರ ಹಾಲಿ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ದ.ಕ ಹಾಗೂ ಉಡುಪಿ ಜಿಲ್ಲೆಯ ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ ವ್ಯಾಪ್ತಿಗೆ ವಿಸ್ತರಿಸಿ ಅನುಮೋದನೆಗೆ ಸರ್ಕಾರವನ್ನು ಕೋರಲು ತೀರ್ಮಾನಿಸಲಾಯಿತು. ಸೊಸೈಟಿಯು ಪ್ರತಿ ವರ್ಷ ಲಾಭಗಳಿಕೆ, ಸರ್ಕಾರದ ಆಡಿಟ್ ವರ್ಗಿಕರಣದಲ್ಲಿ “ಎ” ವರ್ಗ ಸತತ ಪಡೆದ ಸಾಧನೆ ಮಾಡಿರುವುದರ ಜೊತೆಗೆ ಕಳೆದ 3 ವರ್ಷಗಳಿಂದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುವುದಲ್ಲದೆ ಮಂಗಳೂರು, ಉಡುಪಿ, ಸುರತ್ಕಲ್, ಬಂಟ್ವಾಳ ಇಲ್ಲಿನ ಎಲ್ಲಾ ಶಾಖೆಗಳು ಲಾಭ ಗಳಿಸಿರುವುದರೊಂದಿಗೆ ಎಲ್ಲಾ ಶಾಖೆಗಳು ಕಂಪ್ಯೂಟರೀಕೃತ ಲೆಕ್ಕಪತ್ರ ಅಳವಡಿಸಲಾಗಿರುತ್ತದೆ. ಸೊಸೈಟಿಯ ಅಭಿವೃದ್ಧಿ ಹಾಗೆಯೇ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುದನ್ನು ಹಾಗೂ ಸೊಸೈಟಿಯ ಉತ್ತಮ ಅಭಿವೃದ್ಧಿಯ ಬಗ್ಗೆ ಮಹಾಸಭೆಯಲ್ಲಿ ಸದಸ್ಯರು ಪ್ರಶಂಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅಧಿಕ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡಿ ಗೌರವಿಸಲಾಯಿತು. ಲಾಭವನ್ನು ವಿಂಗಡಿಸಿ ಶೇ 20% ಡಿವಿಡೆಂಡ್ ಘೋಷಿಸಲಾಯಿತು. ಸಭೆಯಲ್ಲಿ ನಿರ್ದೇಶಕರಾದ ಶ್ರೀ ರಘುವೀರ ಭಂಡಾರಿ, ಶ್ರೀ ಭಾಸ್ಕರ ಭಂಡಾರಿ ಸುರತ್ಕಲ್, ಶ್ರೀ ಸುಂದರ ಭಂಡಾರಿ ರಾಯಿ, ಶ್ರೀ ರಾಜಾ ಬಂಟ್ವಾಳ, ಶ್ರೀ ರವೀಂದ್ರನಾಥ್ ಉಳ್ಳಾಲ, ಶ್ರೀ ಬಿ.ಎಸ್.ಭಂಡಾರಿ ಶ್ರೀ ಶೇಖರ್.ಎಚ್. ಉಪಸ್ಥಿತರಿದ್ದರು, ಶ್ರೀ ಶಶಿಧರ್ ಕಾರ್ಕಳ ನಿರ್ದೇಶಕರು ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷರಾದ ಶ್ರೀ ರಾಮ ಭಂಡಾರಿ.ಎಚ್ ವಂದಿಸಿದರು.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 16 ಪೊಲೀಸ್ ಸಹಾಯಕ ಉಪನಿರೀಕ್ಷಕರಿಗೆ ಪೊಲೀಸ್ ಉಪನಿರೀಕ್ಷಕರಾಗಿ ಮುಂಭಡ್ತಿ

ಮಂಗಳೂರು :16 ಎಎಸ್‌ಐಗಳಿಗೆ ಪಿಎಸ್‌ಐಗಳಾಗಿ ಭಡ್ತಿ: ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ
ಮಂಗಳೂರು, ಸೆ.19: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 16 ಪೊಲೀಸ್ ಸಹಾಯಕ ಉಪನಿರೀಕ್ಷಕರಿಗೆ ಪೊಲೀಸ್ ಉಪನಿರೀಕ್ಷಕರಾಗಿ ಮುಂಭಡ್ತಿ ನೀಡಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಪಿಎಸ್‌ಐ ಭಡ್ತಿಯಾಗಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ನವೀನ್ ಮೂಡುಬಿದಿರೆಗೆ, ಕಂಕನಾಡಿ ನಗರ ಠಾಣೆಯ ಜನಾರ್ದನ ನಾಯ್ಕ ಸುರತ್ಕಲ್ ಪೊಲೀಸ್ ಠಾಣೆಗೆ , ಸಿಎಸ್ಪಿಯ ಆನಂದ ಬಿ. ಉತ್ತರ ಸಂಚಾರ ಠಾಣೆಗೆ, ಗ್ರಾಮಾಂತರ ಠಾಣೆಯ ವಿನೋದ್ ಕೊಣಾಜೆ ಠಾಣೆಗೆ, ಪಣಂಬೂರು ಠಾಣೆಯ ಈಶ್ವರ ಸ್ವಾಮಿ ಕದ್ರಿ ಸಂಚಾರ ಠಾಣೆಗೆ, ಕದ್ರಿ ಠಾಣೆಯ ಶಾಂತಪ್ಪ ಜಿ. ಕಂಕನಾಡಿ ನಗರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಕೃಷ್ಣಪ್ಪ ಮೂಡುಬಿದಿರೆ ಠಾಣೆಗೆ, ಉತ್ತರ ಠಾಣೆಯ ಶಿವಪ್ಪ ಗೌಡ ಅದೇ ಠಾಣೆಗೆ ನಿಯೋಜನೆಗೊಂಡಿದ್ದಾರೆ.
ಉರ್ವ ಠಾಣೆಯ ಉಲ್ಲಾಸ್ ಪಾಂಡುರಂಗ ಬರ್ಕೆ ಠಾಣೆಗೆ, ಉತ್ತರ ಠಾಣೆಯ ಓಂ ದಾಸ್ ಸೆನ್ ಠಾಣೆಗೆ, ಐಎಸ್ಡಿಯ ರವಳೇಂದ್ರ ಗ್ರಾಮಾಂತರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಶಶಿಧರ ಶೆಟ್ಟಿ ಸುರತ್ಕಲ್ ಠಾಣೆಗೆ, ಉಳ್ಳಾಲ ಠಾಣೆಯ ಪ್ರಾಣೇಶ್ ಕುಮಾರ್ ಬಿ. ಅದೇ ಠಾಣೆಗೆ, ಸೆನ್ ಠಾಣೆಯ ಮೋಹನ್ ಅದೇ ಠಾಣೆಗೆ, ಸಿಸಿಬಿಯ ಹರೀಶ್ ಪದವಿನಂಗಡಿ ಸಿಎಸ್ಬಿಗೆ, ದಕ್ಷಿಣ ಠಾಣೆಯ ಪುರಂದರ ಬಿ.ಪಿ. ಸಿಸಿಆರ್ಬಿಗೆ ಪಿಎಸ್‌ಐ ಹುದ್ದೆಗೆ ನೇಮಕ ಮಾಡಿ ವರ್ಗಾಯಿಸಲಾಗಿದೆ.
ಈ ಹಿಂದಿನ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹಾಗೂ ಕುಲದೀಪ್ ಕುಮಾರ್ ಜೈನ್ ಅವರು ಹಲವು ವರ್ಷ ಗಳಿಂದ ಬಾಕಿ ಉಳಿದಿದ್ದ ಎಎಸ್‌ಐಗಳಿಗೆ ಭಡ್ತಿ ನೀಡಲು ಪ್ರಯತ್ನಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿ ರಲಿಲ್ಲ. ನೂತನ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಅಧಿಕಾರ ಸ್ವೀಕರಿಸಿ 9 ದಿನಗಳಲ್ಲಿ ಮುಂಭಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ.

ವ್ಯಸನ ಮುಕ್ತ ಸಮಾಜ – ನಶೆ ಮುಕ್ತ ಮಂಗಳೂರಿಗಾಗಿ “ವ್ಯಸನ ಜಾಗೃತಿ ನಡಿಗೆ”

ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಪೀಟರ್ ಪೌಲ್ ಸಲ್ಡಾನ್ಹಾ ಇವರ ಕನಸಿನ ವ್ಯಸನ ಮುಕ್ತ ಸಮಾಜ “ANTI DRUG MONTH (September 1-30)” ” ಹಾಗೂ ಮಂಗಳೂರು ಕಮಿಷನರ್ ಇವರ “ನಶೆ ಮುಕ್ತ ಮಂಗಳೂರು” ಧ್ಯೇಯದೊಂದಿಗೆ ಪಾದುವಾ ನಂತೂರು ಮಹಾವಿದ್ಯಾಲಯದಿಂದ ಬೆಂದುರ್ ಚರ್ಚ್/ಸಂತ ಆಗ್ನೇಸ್ ಕಾಲೇಜ್‍ನವರೆಗೆ “ವ್ಯಸನ ಜಾಗೃತಿ ನಡಿಗೆ” ಕಾಲ್ನಾಡಿಗೆ ಸಂಘಟಿಸುವ ಮುಖ್ಯಸ್ಥರು ಮತ್ತು ಸಂಸ್ಥೆಗಳು
ಬೆಂದುರ್ ಚರ್ಚ್, ವಂದನೀಯ ವಿನ್ಸೆಂಟ್ ಮೊಂತೇರೊ, ಸಿಒಡಿಪಿ/ಬಾಂಧವ್ಯ, ವಂದನೀಯ ವಿನ್ಸೆಂಟ್ ಡಿ ಸೋಜ, ಪಾದುವಾ ಮಹಾವಿದ್ಯಾಲಯ ಯುವರೆಡ್ ಕ್ರೋಸ್, ವಂದನೀಯ ಅರುಣ್ ವಿಲ್ಸನ್ ಲೋಬೊ ವೈಟ್‍ಡಾವ್ಸ್, ಶ್ರೀಮತಿ ಕೊರಿನ್ ರಸ್ಕೀನಾ ಸಹಜೀವನ ಒಕ್ಕೂಟ, ಶ್ರೀ ಕಾಸ್ಮೀರ್ ಡಿ ಸೋಜ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ (ರಿ), ಶ್ರೀ ಓಲ್ವಿನ್ ಡಿ ಸೋಜ ಸಂತ ಆಗ್ನೇಸ್ ಕೊಲೆಜ್ ಮಂಗಳೂರು, ಸಿ| ವೆನಿಸ್ಸಾ ಇವರುಗಳ ನೇತೃತ್ವದಲ್ಲಿ ಮಂಗಳೂರು ನಗರದ ಪ್ರಜೆಗಳಿಗೆ ಯುವಕ ಯುವತಿಯರಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಕನಸಿನೊಂದಿಗೆ, “ವ್ಯಸನ ಜಾಗೃತಿ ನಡಿಗೆ” ಇದೇ ಸೆಪ್ಟೆಂಬರ್ ತಿಂಗಳ 25 ತಾರೀಕು ಸೋಮವಾರ ಅಪರಾಹ್ನ 3.00 ಘಂಟೆಯಿಂದ 4.30 ಘಂಟೆ ಸಂತ ಸೆಬೆಸ್ಟಿಯನ್/ಸಂತ ಆಗ್ನೇಸ್ ಕೊಲೆಜ್ ಆವಾರದಲ್ಲಿ ಸಂಪನ್ನಗೊಳ್ಳುವುದು.
ಆರಕ್ಷಕ ಉನ್ನತಾಧಿಕಾರಿಗಳು, ವೈದ್ಯರಿಂದ ಬೆಂದುರ್ ಚರ್ಚ್ ಆವಾರದಲ್ಲಿ ಮಾದಕ ಜೌಷಧಿಗಳ ಮತ್ತು ಮನೋಪರಿಣಾಮಕ ವಸ್ತುಗಳ ಅಧಿನಿಯಮ, 1985 ಕಾಯ್ದೆಯ ವಿವರಣೆ ಹಾಗೂ ಮಾದಕ ವಸ್ತುಗಳನ್ನು ಉಪಯೋಗಿಸುವವರಲ್ಲಿ ಉಂಟಾಗುವ ವೈದ್ಯಕೀಯ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮಾಹಿತಿ ನೀಡಲಾಗುವುದು.
ಈ ಕಾಲ್ನಡಿಗೆಯಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ಮುಖ್ಯಸ್ಥರು, ಸುಮಾರು 400 ಸಿಬ್ಬಂದಿಯವರು/ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಮತ್ತು ಯುವಕ ಯುವತಿಯಿಂದ, ಸಮಾಜ ಸೇವಕರಿಂದ ವ್ಯಸನ ಮುಕ್ತ ಉದ್ಘೋಷಗಳು, ಘೋಷಣೆಗಳಿಂದ ಜಾಗೃತಿಯನ್ನು ಮೂಡಿಸಲಾಗುವುದು.

ಎಂಐಟಿ ಕುಂದಾಪುರದ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24

ಎಂಐಟಿ ಕುಂದಾಪುರದ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24ರ ಅಂಗವಾಗಿ ಕರ್ನಾಟಕ ನ್ಯಾಯಾಂಗ ಮತ್ತು ಪೊಲೀಸ್ ಅಕಾಡೆಮಿಯ ಸೈಬರ್ ಕಾನೂನು ಮತ್ತು ಭದ್ರತಾ ತಜ್ಞ ಡಾ.ಅನಂತ್ ಪ್ರಭು ಜಿ ಅವರಿಂದ *360 ಡಿಗ್ರಿ ಇಂಜಿನಿಯರ್* ವಿಷಯದ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅನಂತ ಪ್ರಭು ಅವರು ಸಂಭಾವ್ಯ ಇಂಜಿನಿಯರ್‌ಗಳಾಗಲು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕಾದ 20 ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿದರು. ಮೌಲ್ಯವರ್ಧನೆ ಪಡೆಯಲು ಮತ್ತು ಎಂಜಿನಿಯರಿಂಗ್‌ನಲ್ಲಿ ಉತ್ತಮ ಒಟ್ಟು ಸಿಜಿಪಿಎ ಸಾಧಿಸಲು ಅವರು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು. ಬಿಎಸ್‌ಎಚ್ ವಿಭಾಗದ ಪ್ರೊ.ಚೈತ್ರಾ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮವನ್ನು ಎಂಐಟಿ ಕುಂದಾಪುರದ. ಬಿಎಸ್‌ಎಚ್ ವಿಭಾಗವು ಆಯೋಜಿಸಿತ್ತು.

The closing ceremony of the Platinum Jubilee of the Bethany Educational Society

Mangalore : The closing ceremony of the Platinum Jubilee of the Bethany Educational Society ® Mangalore was celebrated with great enthusiasm and exuberance18th Sept 2023 at Bethany Convent, Bendur, Mangalore

The culminating ceremony of the Bethany Educational Society’s Platinum Jubilee, orchestrated with grandeur, unfurled its splendour at Bethany Educational Society Mangalore on Monday 18  September 2023.

The Thanksgiving Mass  at 3.30pm at Sabastian Church Bendur, Mangalore, was presided by  Most Rev Dr Peter Machado, the Archbishop of Bangalore, and concelebrated by Most Rev Dr Peter Paul Saldanha, Bishop of  Mangalore Diocese, Most Rev Dr Gerald Issac Lobo, Bishop of Udupi, Most Rev Dr Ignatius D’Souza, Bishop of Bareilly, and Most Rev  Dr Ignatius Mascarenhas, Bishop of Simla-Chandigarh. Many priests of the Diocese, religious priests, alumni priests, religious, parents, staff, students and well-wishers of BES participated in the Eucharist.

In his eloquent homily, Bishop Peter Paul Saldanha,  illuminated the laudable accomplishments of the Bethany Educational Society in the noble pursuit of educating underprivileged children, especially the girl child. He expounded upon the profound role of an educator, guiding and transforming students into responsible and conscientious citizens. He also applauded the Bethany congregation for their collaborative spirit in the parishes of the Diocese of Mangalore for being agents of value-based education, social transformation through their teaching of catechism, pastoral services and social action.

Thereafter, floral tributes were paid to the Servant of God Raymond Francis Camillus Mascarenhas at his tomb by the Bishops, Sr Rose Celine the Superior General and the President of BES and the representatives among the staff and students.

Subsequently at 5.30pm, an august formal stage program unfolded within the hallowed St Sabastian Platinum Jubilee Hall, Bendur, Mangalore. Rev Sr Rose Celine BS the President of Bethany Educational Society presided over the function. Her presidential address reverberated with admiration for the monumental strides taken by the visionary Founder RFC Mascarenhas of Bethany, and the 4 founding members in their unwavering dedication to provide quality education, even in the remotest rural corners. She  emphasized on the contributions of BES  which has left its indelible mark on the diverse landscape of India spreading from the northern regions of Punjab and Haryana to the shores of Kanyakumari in the south, spanning from the north-eastern corners to the expansive west, transforming thousands of young hearts and minds through education. BES with its clear vision and a goal – ‘Transformative Education for Fullness of Life for all, especially the poor and girl children’, as in Gospel of John 10:10. Focusing on the three BES conventions, she said, ‘it has paved the way for a unique methodology, infusing the vision and core values into the very fabric of their educational pedagogy to promote multiple intelligences. The introduction of human rights and teaching of the Preamble of Indian Constitutions in all the BES schools has prepared a generation for peace, harmony and communal solidarity. A litany of gratitude was expressed to all the  past and present Council of Management for their yeoman services for BES

The chief guest of the function, Most Rev Dr Peter Machado, Archbishop of Bangalore, inaugurated the Platinum Jubilee Education Project. One of the special features of Platinum Jubilee was to support 75 young poor rural girls from different provinces all over India, Bethany Educational Society, with the support and contribution of their staff, benefactors, and well-wishers, has collected a fund from where each one of these deserving girls will be gifted with Rs 1,00,000/- to train themselves in vocational skills.  He congratulated the Bethany congregation and the BES for their collaborative ministries and specially implanting the love of the Gospel among the children in their educational ministries

Mrs Alka Bhutani, a proud Alumna of St Theresa’s Hr Secondary School Karnal- a unit of  Bethany Educational Society, represented all the alumni of BES on the stage. With the sentiments of gratitude, she said BES has transformed her life. The moral science classes became the marrow of her being, these classes have guided her moral and emotional GPS to face the challenges of life and separate the weeds from the wheats.  She highly appreciated the humanism that is inculcated in her to respect and cherish each other in the way each one is made celebrating one’s uniqueness and potentialities.

The Platinum Jubilee Souvenir  was  released by the Honourable Mr. U T Khader – Speaker of Karnataka Legislative Assembly.  Addressing the gathering he said“The Christian community has contributed a lot to the unity, fraternity and integral growth of the nation and the society. The education and noble values received in Catholic educational institutions have become a source of strength and instilled confidence in him. A proper education sets people up to grow personally, professionally, and socially. It can awaken joy, curiosity and a deep desire to solve problems and help others. Teaching a student can inspire them to pursue leadership roles and positively impact those around them. He congratulated  Sr Rose Celine and the BES for their enormous contribution in the field of education.

Speaking on the role of educators, Honorable Mr Vedavyas Kamath – Member of the Karnataka Legislative Assembly from Mangalore City, South Constituency said ‘Deep down, every good teacher knows the impact and importance of education. It is not just about learning reading, writing and arithmetic at school. Instead, it is about gaining the knowledge and the skills needed to become a better person and create a better society to live in.

The guests of honour on the stage included  Rev Fr Vincent Monteiro – Parish priest of Bendur, Most Rev Dr Ignatius Mascarenhas– Bishop of Shimla-Chandigarh, Most Rev Dr Ignatius D’Souza – Bishop of Bareilly, Sr Linette AC-Representing Asst Superior General Apostolic Carmel, Fr Melwyn Pinto SJ Rector St Aloysius College, Mangalore.

The priorities of BES Platinum Jubilee were depicted through a colorful programme by the students of BES schools. The four priorities of the Platinum Jubilee year viz ‘upholding justice, liberty, equality and fraternity, promotion of peace and harmony, caring for mother earth and education for excellence &self-reliance were showcased by the students. Certainly, it was feastfor the eyes and left a long-lasting impression on the gathering. 

Sr Sandhya BS the  Secretary of BES welcomed the gathering and acknowledged their association with Bethany and BES. Sr Philomen Saldanha BS the member of the Councilof Management proposed vote of thanks. Mrs  Jasmine Moreira St Theresa School Bendur and Mrs Reena Saldanha St Joseph School Kankanady compered the programme. With a fellowship meal the programme came to an end. Definitely, it was a memorable event to all. Virtual livestreaming of the event enabled thousands of students, alumni and BES associates to participate in the Platinum Jubilee.

Sr Mariola BS: Convenor , Media Committee, Platinum Jubilee BES