ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆ

ಕುಂದಾಪುರ: ಅ. ೨:ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಹಿರಿಯ ಮುಖಂಡರಾದ ಶೇಖರ ಚಾತ್ರಬೆಟ್ಟು ” ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಗಾಂಧೀಜಿಯವರ ಅಹಿಂಸಾ ಮಾರ್ಗವು ಮಹತ್ತರ ಪಾತ್ರ ವಹಿಸಿತ್ತು.ಮಹಾನ್ ನಾಯಕರೆಲ್ಲ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಅನುಸರಿಸಿಕೊಂಡಿದ್ದಾರೆ. ನಾವೆಲ್ಲರೂ ಗಾಂಧಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಸಿ ಹೋಗಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ನ್ಯಾಯವಾದಿಗಳಾದ ಸಚ್ಚಿದಾನಂದ ಎಂ. ಎಲ್ ಗಾಂಧೀಜಿಯವರ ತತ್ವ, ಆದರ್ಶದ ಕುರಿತು ಮಾತನಾಡಿದರು.

ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್, ಅಭಿಜಿತ್ ಪೂಜಾರಿ ,ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ, ಕೇಶವ್ ಭಟ್,ಸುನಿಲ್ ಪೂಜಾರಿ, ಜೋಸೆಫ್ ರೆಬೆಲ್ಲೊ, ಸುಶಾಂತ್, ಎಡಾಲ್ಫ್ ಡಿಕೋಸ್ತಾ, ಫ್ರಾನ್ಸಿಸ್ ಮಚಾದೊ, ಜ್ಯೋತಿ ಡಿ ನಾಯ್ಕ್, ದಿನೇಶ, ಪ್ರೀತಮ್ ಕರ್ವಾಲ್ಲೊ, ಕೆ. ಶಿವಕುಮಾರ್, ಶಶಿರಾಜ್ ಪೂಜಾರಿ, ಕೆ. ಪಿ. ಅರುಣ್, ಮೇಬಲ್ ಡಿಸೋಜ, ಸಂತೋಷ್, ಸದಾನಂದ ಖಾರ್ವಿ ಉಪಸ್ಥಿತರಿದ್ದರು. ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ ಸ್ವಾಗತಿಸಿ ಅಶೋಕ ಸುವರ್ಣ ವಂದಿಸಿದರು.ಕಾರ್ಯದರ್ಶಿ ಆಶಾ ಕರ್ವಾಲ್ಲೊ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿ ಜಯಂತಿ


ಕುಂದಾಪುರ, ಅ.2: “ನಾವು ಗಾಂಧಿಜಿಯ ಚಿಂತನೆ ತತ್ವಗಳನ್ನು ಕೇವಲ ನೆನಪು ಮಾಡಿಕೊಳ್ಳುತ್ತೇವೆ. ಆದರೆ ಅವುಗಳನ್ನು ಪಾಲಿಸಿಸುವುದಿಲ್ಲಾ, ಗಾಂಧಿಜಿ ಶಾಂತಿ ಪ್ರಿಯರು, ಹಾಗೇ ಆದರೆ ಅವರೊಂದು ಶಕ್ತಿ. ನಾವು ಅವರ ಮತ್ತೊಂದು ಮುಖವನ್ನು ಕಾಣಬೇಕು. ಹೊರ ದೇಶದಲ್ಲಿ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಗಳನ್ನು ಸ್ಥಾಪಿಸುತ್ತಾರೆ, ಆದರೆ ಜಗತ್ತಿನಲ್ಲಿ ಗಾಂಧಿಜಿಯನ್ನು ಆದರ್ಶವನ್ನಾಗಿಟ್ಟುಕೊಂಡು ಸಾಕಾಸ್ಟು ನಾಯಕರು ಜಗತ್ಪ್ರಸಿದ್ದಾರಾಗಿದ್ದಾರೆ. ಆದರೆ ಭಾರತದಲ್ಲಿ ಕೆಲವರು ಗಾಂಧಿಜಿಯವರ ಬಗ್ಗೆ ಕೊಂಕು ಮಾತುಗಳನ್ನು ಆಡುತ್ತಾರೆ, ಎಂದು ನ್ಯಾಯ್ವಾದಿ ಸಚ್ಚಿದಾಂದ ಎಮ್.ಎಲ್.ಅವರು ಹೇಳಿದರು. ಅವರು ಸಂತ ಜೋಸೆಫ್ ಕಾನ್ವೆಂಟಿನಲ್ಲಿ ಹೋಲಿ ರೋಸರಿ ಚರ್ಚಿನ ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿ ಜಯಂತಿಯ ಆಚರಣೆ ಕಾರ್ಯಕ್ರಮದ ವೇಳೆ ಹೇಳಿದರು.
ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಮಾತನಾಡಿ ‘ಗಾಂಧಿಜೀಯವರು ನಿಜವಾಗಿಯೂ ಮಹಾತ್ಮರು, ಸುಮಾರು 300 ವರ್ಷಗಳಿಂದ ಗುಲಾಮಗಿರಿಯಲ್ಲಿದ್ದ ಭಾರತವನ್ನು ಯಾರಿಂದಲೂ ಬಿಡುಗಡೆ ಮಾಡಲು ಸಾಧ್ಯವಿಲ್ಲದಾಗ ಅವರು ಶಾಂತಿ, ಸತ್ಯಮಾರ್ಗದಿಂದ ನಮಗೆ ಸ್ವಾತಂತ್ರ ತಂದುಕೊಟ್ಟಿದ್ದಾರೆ, ಅದರ ಫಲ ನಾವು ಇಂದು ಉಣ್ಣುತ್ತಾ ಇದ್ದೆವೆ, ಯೇಸುವಿನ ತತ್ವಮಾರ್ಗಗಳನ್ನು ಸರಿಯಾಗಿ ಪಾಲಿಸಿದವರು ಗಾಂಧೀಜಿ ಆಗಿದ್ದಾರೆ. ಅವರನ್ನು ನಮ್ಮ ಕ್ರೈಸ್ತರ ಲೆಕ್ಕಾಚಾರದಲ್ಲಿ ಸಂತರೆಂದು ಕರೆಯಬಹುದೆಂದು’ ಅವರು ತಿಳಿಸಿದರು.
ಗಾಂಧಿಜೀಯ ಬಗ್ಗೆ ಪ್ರಶ್ನೆಗಳನ್ನು ಕೇಳಿ, ಸರಿ ಉತ್ತರ ಕೊಟ್ಟವರಿಗೆ ಪುಸ್ತಕಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಮೆಲ್ ಸಭೆಯ ಕರ್ನಾಟಕ ಪ್ರಾಂತೀಯ ಮುಖ್ಯಸ್ಥೆ ವಂದನೀಯ ಭಗಿನಿ ಶಮಿತ, ಕುಂದಪುರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಕುಂದಾಪುರ ಘಟಕದ ನಿರ್ಗಮನ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಪದಾಧಿಕಾರಿಗಳಾದ ಪ್ರೇಮಾ ಡಿಕುನ್ಹಾ, ಎಲ್ಡ್ರಿನ್ ಡಿಸೋಜಾ, ಅತಿಥಿ ಭಗಿನಿಯರು ಮತ್ತು ಇತರರು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಆಶಾ ಕರ್ವಾಲ್ಲೊ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗಳನ್ನು ಅರ್ಪಿಸಿದರು.

ಕುಂದಾಪುರ: ಕಾರಿನಲ್ಲಿ ಬಂದು ಚೂರಿ ಇರಿದು ಪರಾರಿಘಾಯಗೊಂಡ ಬನ್ಸ್ ರಾಘು ಮ್ರತ್ಯು

ಕುಂದಾಪುರ: ಕುಂದಾಪುರದ ಚಿಕ್ಕನಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ‌ ಕಾರಿನಲ್ಲಿ ಬಂದ  ಅಪರಿಚಿತನೊರ್ವ ಚೂರಿ ಇರಿದು ಪರಾರಿಯಾದ ಘಟನೆ ರವಿವಾರ ಸಂಜೆ ೭ ಗಂಟೆಯ ಹಾಗೆ ನಡೆದಿದೆ. ಕುಂದಾಪುರ ಮೂಲದ ರಾಘವೇಂದ್ರ (42) ಎಂಬವರು ಚೂರಿ ಇರಿತಕ್ಕೊಳಗಾದವರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮ್ರತ್ಯುವಶವಾಗಿದ್ದಾರೆ.

   ನಿನ್ನೆ ಚೂರಿ ಇರಿತಕ್ಕೊಳಾದ ಅವರನ್ನು  ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿಸಲಾಗಿತ್ತು. ರಾಘವೇಂದ್ರ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಇನ್ನೊಂದು ಕಾರಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿ ರಾಘವೇಂದ್ರ ಅವರ ಕಾರನ್ನು ಅಡ್ಡಗಟ್ಟಿ, ತೊಡೆಗೆ ಚೂರಿ ಇರಿದು, ಕಾರಿನಲ್ಲಿ ಪರಾರಿಯಾಗಿದ್ದನು

   ಹಣಕಾಸು ಅಥವಾ ಇನ್ನು ಯಾವುದೋ ವೈಯಕ್ತಿಕ ಹಳೇ ದ್ವೇಷಕ್ಕೆ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಅನುಮಾನಿಸಲಾಗಿದೆ.ಘಟನೆ ನಿಖರವಾಗಿ ಯಾವ ಕಾರಣಕ್ಕಾಗಿ ನಡೆದಿದೆ ಈ ಕ್ರತ್ಯ ನಡೆದಿದೆ  ಎಂಬದು ಮುಂದಿನ ತನಿಖೆಯಿಂದಷ್ಟೆ ತಿಳಿದುಬರಬೇಕಿದ್ದು. ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ವೃತ್ತ ನಿರೀಕ್ಷಕ ನಂದ ಕುಮಾರ್, ಕುಂದಾಪುರ ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪೂಜ್ಯ ಮಾತೆ ವೆರೋನಿಕಾ ಅವರಿಗೆ ರಕ್ತದಾನ ಅಭಿಯಾನದ ಮೂಲಕ ಶ್ರದ್ಧಾಂಜಲಿ ಸಲ್ಲಿಕೆ

ಮಂಗಳೂರು : ಅಕ್ಟೋಬರ್ 1, 2023 ರಂದು, ಅಪೋಸ್ಟೋಲಿಕ್ ಕಾರ್ಮೆಲ್‌ನ ಸಂಸ್ಥಾಪಕರಾದ ವಂದನೀಯ ಮದರ್ ವೆರೋನಿಕಾ ಅವರ ದ್ವಿಶತಮಾನೋತ್ಸವದ ಜನ್ಮದಿನದ ಆಚರಣೆಯು ಕರ್ನಾಟಕದಾದ್ಯಂತ ಅದರ ಅನೇಕ ರಿಮೋಟ್‌ಗಳೊಂದಿಗೆ ಪ್ರಾರಂಭವಾಯಿತು. ಕಾನ್ವೆಂಟ್‌ಗಳು ಮತ್ತು ಸಂಸ್ಥೆಗಳು ಸಮಾಜಕ್ಕೆ ಪಾವಿತ್ರ್ಯತೆ, ಪವಿತ್ರತೆ ಮತ್ತು ಸೇವೆಯನ್ನು ತೆರೆದಿಡುವ ಕಾರ್ಯವನ್ನು ಪ್ರಾರಂಭಿಸಿದವು. ಆಕೆಯ ನೆನಪಿಗಾಗಿ ವಿವಿಧ ಯೋಜಿತ ಕಾರ್ಯಕ್ರಮಗಳ ಮೂಲಕ ಅಪೋಸ್ಟೋಲಿಕ್ ಕಾರ್ಮೆಲ್ ಸಹೋದರಿಯರ ಹೃದಯಗಳು ಸಂತೋಷದಿಂದ ಹೊರಹೊಮ್ಮಿದವು.
ರಕ್ತವು ಜೀವನ – ಅದನ್ನು ರವಾನಿಸಿ. ಪೂಜ್ಯ ತಾಯಿ ವೆರೋನಿಕಾ ತನ್ನ ಸಮರ್ಪಿತ ಜೀವನ ಮತ್ತು ಸೇವೆಯ ಮೂಲಕ ಅನೇಕರಿಗೆ ಜೀವನವನ್ನು ನೀಡಿದರು. ಆಕೆಯ 200 ನೇ ಹುಟ್ಟುಹಬ್ಬದ ನೆನಪಿಗಾಗಿ, ಕರ್ನಾಟಕದಾದ್ಯಂತ 10 ವಿವಿಧ ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ.
ಸೇಂಟ್ ಆನ್ಸ್ ಕ್ಯಾಂಪಸ್, ಅಪೋಸ್ಟೋಲಿಕ್ ಕಾರ್ಮೆಲ್‌ನ ಕ್ರೇಡಲ್ ಹೌಸ್, ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರ, ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇದರ ಸಹಯೋಗದೊಂದಿಗೆ ಸೇಂಟ್ ಆನ್ಸ್ ಬಿಎಡ್ ಕಾಲೇಜು ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಎ.ಸಿ ಕರ್ನಾಟಕ ಪ್ರಾಂತ್ಯದ ಪ್ರಾಂತೀಯ ಸುಪೀರಿಯರ್ ಸಿಸ್ಟರ್ ಮರಿಯಾ ಶಮಿತಾ ಎ.ಸಿ, ಕಾರ್ಪೋರೇಟರ್ ಶ್ರೀ ಲತೀಫ್, ಪೋರ್ಟ್ ವಾರ್ಡ್, ಮಂಗಳೂರು, ಡಾ ಚಂದ್ರಪ್ರಭಾ ಉಪ ವೈದ್ಯಾಧಿಕಾರಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶ್ರೀಮತಿ ರೇಷ್ಮಾ ರೋಡ್ರಿಗಸ್ ಅವರು ಗೌರವ ಅತಿಥಿಗಳಾಗಿದ್ದರು. ವೆನ್ಲಾಕ್ ಆಸ್ಪತ್ರೆಯ ಹಿರಿಯ ಸಲಹೆಗಾರರು ಮತ್ತು IHBT ವಿಭಾಗದ ಮುಖ್ಯಸ್ಥರಾದ ಶ್ರೀ ಶರತ್ ಕುಮಾರ್ ಅವರು ದಿನದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಒಟ್ಟು 55 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಸೇಂಟ್ ಆಗ್ನೆಸ್ ಕಾನ್ವೆಂಟ್ ಮತ್ತು ಯೇಸು ಪ್ರೇಮ್ ನಿಕೇತನ್ ಮತ್ತು ಅವರ ಸಂಸ್ಥೆಗಳ ಸಹೋದರಿಯರು ಫಾದರ್ ಮುಲ್ಲರ್ಸ್ ಆಸ್ಪತ್ರೆ ಮತ್ತು ಕೆಎಂಸಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಆಸ್ಪತ್ರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಎನ್‌ಐಟಿಟಿಇ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್, ಮೂಳೆ ಶಸ್ತ್ರಚಿಕಿತ್ಸಕ ಡಾ ಶಾಂತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಡಯಾಸ್‌ನಲ್ಲಿ ಅವರೊಂದಿಗೆ ಸೇರಿದ ಶ್ರೀ ನವೀನ್ ಡಿ ಸೋಜಾ, ಗೌರವ ಅತಿಥಿ, ಕಾರ್ಪೊರೇಟರ್ ಮತ್ತು ವಿರೋಧ ಪಕ್ಷದ ನಾಯಕ, ಮಂಗಳೂರು ಮಹಾನಗರ ಪಾಲಿಕೆ; ಡಾ.ದಿನೇಶ್, ವೈದ್ಯಾಧಿಕಾರಿ, ಕೆ.ಎಂ.ಸಿ. ಆಸ್ಪತ್ರೆ; ಡಾ.ಕಿರಣ, ಬ್ಲಡ್ ಬ್ಯಾಂಕ್ ಅಧಿಕಾರಿ, ಫಾದರ್ ಮುಲ್ಲರ್ಸ್ ಆಸ್ಪತ್ರೆ; Sr ಡಾ ಮರಿಯಾ ರೂಪ A.C., ಜಂಟಿ ಕಾರ್ಯದರ್ಶಿ, ಸೇಂಟ್ ಆಗ್ನೆಸ್ ಸಂಸ್ಥೆಗಳು; ಸೀನಿಯರ್ ಲಿನೆಟ್ ಮರಿಯಾ, ಸುಪೀರಿಯರ್, ಯೇಸು ಪ್ರೇಮ್ ನಿಕೇತನ್, ಮತ್ತು Ms ಪ್ರಜ್ವಲ್ ರಾವ್, ಸ್ಟಾಫ್ ಕೋ-ಆರ್ಡಿನೇಟರ್. ಈ ಸಂದರ್ಭದಲ್ಲಿ ಒಟ್ಟು 100 ಯೂನಿಟ್ ರಕ್ತ ಸಂಗ್ರಹಿಸಲಾಯಿತು

ಮಂಗಳೂರಿನ ಫಳ್ನೀರ್‌ನ ಸೇಂಟ್ ಮೇರಿಸ್ ಕಾನ್ವೆಂಟ್‌ನ ಸಹೋದರಿಯರು ಕೆಎಂಸಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಆಸ್ಪತ್ರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡದ ವಕ್ಫ್ ಮಂಡಳಿಯ ಉಪಾಧ್ಯಕ್ಷ ಡಾ.ಅರ್ಕುಳ ಕೋಟೆ ಜಮಾಲ್ ಆಗಮಿಸಿದ್ದರು. ವೇದಿಕೆಯಲ್ಲಿದ್ದ ಇತರ ಗಣ್ಯರು ಡಾ.ವಿಶಾಲ್, ಡಾ.ಧನ್ಯ, ರೋಗ ತಜ್ಞರು, ದಾದಿಯರು ಮತ್ತು ಕೆಎಂಸಿಯ ಪ್ಯಾರಾಮೆಡಿಕಲ್ ಸಿಬ್ಬಂದಿ. ಆಸ್ಪತ್ರೆ. 64 ಯೂನಿಟ್ ರಕ್ತ ಪಡೆದು ಸಂತಸ ವ್ಯಕ್ತಪಡಿಸಿದರು.
ಯೆನೆಪೊಯ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಲೇಡಿ ಹಿಲ್ ಸೊಸೈಟಿ ಮತ್ತು ಅದರ ಸಂಸ್ಥೆಗಳ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ದಿನದ ಮುಖ್ಯ ಅತಿಥಿಯಾಗಿದ್ದ ಡಾ. ಜೋಸ್ಟೋಲ್ ಪಿಂಟೋ, ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಹೃದ್ರೋಗ ವಿಭಾಗದ ಸಹ ಪ್ರಾಧ್ಯಾಪಕ ಫಾ. ಮುಲ್ಲರ್ ವೈದ್ಯಕೀಯ ಕಾಲೇಜು, ಮಂಗಳೂರು. ಇತರರು ಉಪಸ್ಥಿತರಿದ್ದರು. ಜಾನ್ಸನ್ ಪಿರೇರಾ, ಸಹಾಯಕ. ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌ನ ಪ್ಯಾರಿಷ್ ಪ್ರೀಸ್ಟ್; ಶ್ರೀ ಪ್ರಸನ್ನ ಮಲ್ಯ, ರೋಟರಿ ಕ್ಲಬ್, ಮಂಗಳೂರು ಉತ್ತರ; ಶ್ರೀಮತಿ ಉಷಾ ಪ್ರಭಾಕರ್, ಅಧ್ಯಕ್ಷರು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಕಾವೇರಿ; ಶ್ರೀಮತಿ ಶಾಂತಾ ಆರ್ ಶೆಟ್ಟಿ, ರಝಿಯಾ ಬಾನು ಬ್ಲಡ್ ಬ್ಯಾಂಕ್ ಅಧೀಕ್ಷಕಿ, ಯೆನೆಪೋಯ ಆಸ್ಪತ್ರೆ, ದೇರಳಕಟ್ಟೆ. 70 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಕಾರ್ಮೆಲ್ ಕಾನ್ವೆಂಟ್, ಮೊಡಂಕಾಪ್ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಫಾ. ಮುಲ್ಲರ್ಸ್ ಮೆಡಿಕಲ್ ಕಾಲೇಜು, ಮಂಗಳೂರು, ಕ್ರಿಸ್ಟೋಫರ್ ಅಸೋಸಿಯೇಷನ್, ಆರೋಗ್ಯ ಆಯೋಗ, ಮಹಿಳಾ ಸಂಘ, ಇನ್ಫೆಂಟ್ ಜೀಸಸ್ ಚರ್ಚ್ ಮೊಡಂಕಾಪ್ನ ಐ.ಸಿ.ವೈ.ಎಂ. ರೆ.ಫಾ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ವಲೇರಿಯನ್ ಡಿಸೋಜ ಭಾಗವಹಿಸಿದ್ದರು. ಫಾದರ್ ನ ಡಾ.ಚಾರು. ಮುಲ್ಲರ್ಸ್ ಮೆಡಿಕಲ್ ಕಾಲೇಜು, ಮಂಗಳೂರು, ಪ್ಯಾರಿಷ್ ಕೌನ್ಸಿಲ್‌ನ ಉಪಾಧ್ಯಕ್ಷ ಶ್ರೀ ಸುನೀಲ್ ವೇಗಸ್, ಕಾರ್ಯದರ್ಶಿ ಶ್ರೀ ಮನೋಹರ್, ಶ್ರೀ ಐವನ್ ಡಿಸೋಜ ಕ್ರಿಸ್ಟೋಫರ್ ಅಸೋಸಿಯೇಶನ್ ಅಧ್ಯಕ್ಷ ಶ್ರೀ ಐವನ್ ಡಿಸೋಜ, ಆರೋಗ್ಯ ಆಯೋಗದ ಅಧ್ಯಕ್ಷ ಶ್ರೀ ಅಲೋಶಿಯಸ್, ಐಸಿವೈಎಂ ಅಧ್ಯಕ್ಷೆ ಶ್ರೀಮತಿ ಪ್ರೀಮಾ, ಕಾರ್ಮೆಲ್ ಸಂಸ್ಥೆಗಳ ಮೇಲಧಿಕಾರಿ ಹಾಗೂ ಜಂಟಿ ಕಾರ್ಯದರ್ಶಿ ರೋಸಿಲ್ಡೆ ಕಾರ್ಯಕ್ರಮಕ್ಕೆ ಗಣ್ಯರು. ಒಟ್ಟು 50 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಉಡುಪಿಯ ಸಿಸಿಲಿ ಕಾನ್ವೆಂಟ್‌ನಲ್ಲಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು, ಉಡುಪಿ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸೇಂಟ್ ಸಿಸಿಲಿ ಸಂಸ್ಥೆಗಳ ಸ್ಥಳೀಯ ವ್ಯವಸ್ಥಾಪಕಿ ಶ್ರೀ ಥೆರೇಸ್ ಜ್ಯೋತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ವಕ್ತಾರರು ಹಾಗೂ ಉಡುಪಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ವೆರೋನಿಕಾ ಕರ್ನೆಲಿಯೋ, ಗೌರವ ಅತಿಥಿಗಳಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀಣಾ ಕುಮಾರಿ ಆಗಮಿಸಿದ್ದರು. ಶ್ರೀ ಚೇತನಾ ಸುಪೀರಿಯರ್, ಸಂತ ಮರಿಯಾ ಗೊರೆಟ್ಟಿ ಕೆಮ್ಮನು ಉಪಸ್ಥಿತರಿದ್ದರು. 104 ಯೂನಿಟ್ ರಕ್ತ ಪಡೆದು ಸಂತಸ ವ್ಯಕ್ತಪಡಿಸಿದರು.
ಮೈಸೂರಿನ ನಂಜನಗೂಡಿನ ಶಾಂತಿ ನಿಲಯದ ಸಹೋದರಿಯರು ಮೈಸೂರಿನ ಸೇಂಟ್ ಜೋಸೆಫ್ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ನಂಜನಗೂಡು ಶಾಸಕರಾದ ಶ್ರೀ ದರ್ಶನ್ ದ್ರುವನಾರಾಯಣ್ ಉದ್ಘಾಟಿಸಿದರು. ಇತರ ಗಣ್ಯರಾದ ಶ್ರೀ ಕಳಲೆ ಎನ್.ಕೇಶವ ಮೂರ್ತಿ, ಮಾಜಿ ಶಾಸಕರು, ನಂಜನಗೂಡು; ಶ್ರೀ ಮೊಹಮ್ಮದ್ ಇಬ್ರಾಹಿಂ, ನಿರ್ದೇಶಕರು, ಬ್ಲಡ್ ಬ್ಯಾಂಕ್, ಸೇಂಟ್ ಜೋಸೆಫ್ ಆಸ್ಪತ್ರೆ, ಬನ್ನಿಮಂಟಪ, ಮೈಸೂರು; ರೆ.ಫಾ. ಅಂತಪ್ಪ, ಪ್ಯಾರಿಷ್ ಅರ್ಚಕ, ಇನ್ಫೆಂಟ್ ಜೀಸಸ್ ಚರ್ಚ್, ನಂಜನಗೂಡು. ಸಂಗ್ರಹಿಸಿದ ರಕ್ತವು 120 ಯುನಿಟ್ ಆಗಿತ್ತು. ಈ ಮೇರಿ ಇಮ್ಯಾಕ್ಯುಲೇಟ್, ಬೆಂಗಳೂರು ಇವರು ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು
.

ಬೀಜಾಡಿ: ಬೃಹತ್ ಸ್ವಚ್ಚತಾ ಹೀ ಸೇವಾ ಆಂದೋಲನ

ಬೀಜಾಡಿ: ಸ್ವಚ್ಚತೆಯ ಅರಿವು ಎಲ್ಲರಲ್ಲೂ ಮೂಡಿದಾಗ ಸ್ವಚ್ಚ ಸುಂದರ ನೈರ್ಮಲ್ಯ ಗ್ರಾಮ ನಿರ್ಮಾಣ ಸಾಧ್ಯ ಎಂದು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಪೂಜಾರಿ ಹೇಳಿದರು.
ಅವರು ಭಾನುವಾರ ಸ್ವಚ್ಛತಾ ಹಿ ಸೇವಾ ಆಂದೋಲದ ಅಂಗವಾಗಿ ಬೀಜಾಡಿ ಗ್ರಾಮ ಪಂಚಾಯಿತಿ, ಬೀಜಾಡಿ ಗೋಪಾಡಿ ಮಿತ್ರ ಸಂಗಮ, ಟಿಪ್ ಸೆಶನ್ ಚಾರಿಟೇಬಲ್ ಟ್ರಸ್ಟ್, ಸಂಜೀವಿನಿ ಸ್ವಸಹಾಯ ಸಂಘ, ಎಸ್‍ಎಲ್‍ಎಂಆರ್ ಘಟಕದ ಆಶ್ರಯದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಂತರ ಕೋಟೇಶ್ವರದ ಮಾಲ್ ಸಮೀಪದಿಂದ ಸರ್ವಿಸ್ ರಸ್ತೆ ಮೂಲಕ ಕೋಟೇಶ್ವರ ಗ್ರಾಮ ಪಂಚಾಯಿತಿ ವರೆಗೆ ಮಾನವ ಸರಪಳಿ ನಡೆಸಿ ಜಾಗೃತಿ ಮೂಡಿಸಲಾಯಿತು. ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಜಿನಾ ಜೂಲಿ, ಸದಸ್ಯರಾದ ಬಿ.ವಾದಿರಾಜ್ ಹೆಬ್ಬಾರ್, ಶೇಖರ ಛಾತ್ರಬೆಟ್ಟು, ಸುಮತಿ ನಾಗರಾಜ್,ಚಂದ್ರ ಬಿ.ಎನ್, ವಿಶ್ವನಾಥ ಮೊಗವೀರ, ಅನಿಲ್ ಛಾತ್ರಬೆಟ್ಟು, ಪೂರ್ಣಿಮಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗಣೇಶ್, ಸಿಬ್ಬಂದಿ ನಾರಾಯಣ, ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ಸಂಜೀವಿನಿ ಸ್ವಸಹಾಯ ಸಂಘದ ಗೀತಾ ಮೊದಲಾದವರು

ಬ್ರಹ್ಮಾವರದಲ್ಲಿ ರೋಜರಿ ಸೊಸೈಟಿಯ 10 ನೇ ಶಾಖೆ ಉದ್ಘಾಟನೆ : ಬಡವ ಮಧ್ಯಮ ವರ್ಗದವರೂ ಪ್ರಗತಿ ಕಾಣಬೇಕನ್ನುವುದೇ ಈ ಸೊಸೈಟಿಯ ವೈಶಿಷ್ಠತೆ – ಶ್ರೇಷ್ಟ ಧರ್ಮಗುರು ಮೊನ್ಸಿಂಜೆರ್ ಅ|ವಂ|ಫರ್ಡಿನಾಂಡ್


ಬ್ರಹ್ಮಾವರ, ಅ.2: “ಕುಂದಾಪುರದಲ್ಲಿನ ಕೆಲವು ಹಿರಿಯರು ಸಮಾಜದ ಒಳಿತಿಗಾಗಿ ಚಿಂತನೆ ಮಾಡಿ ಒಂದು ಸಣ್ಣ ಕೋ.ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಿದರು. ಅದು ರೋಜರಿ ಮಾತೆಯ ಹೆಸರಿನಲ್ಲಿ, ಅದೀಗ ಇತ್ತೀಚಿನ ದಿನಗಳಲ್ಲಿ ಬಹಳ ಪ್ರಗತಿ ಸಾಧಿಸಿ ಉತ್ತಮ ಸಾಧನೆ ಮಾಡಿ 10 ನೇ ಶಾಖೆ ಶುಭಾರಂಬಗೊಂಡಿದೆ, ಉಡುಪಿ ಮಣಿಪಾಲ ಬೆಳೆಯುತ್ತಿದೆ, ಇದೀಗ ಬ್ರಹ್ಮಾವರ ಬೆಳೆಯುಬೇಕು, ರೋಜರಿ ಸೊಸೈಟಿಯ ಅಗತ್ಯವಿದೆ, ಈ ಸೊಸೈಟಿ ಎಲ್ಲಾ ಸಮಾಜಕ್ಕೆ ತಮ್ಮ ಉತ್ತಮ ಸೇವೆ ನೀಡುವುದರಲ್ಲಿ ಖ್ಯಾತಿ ಗಳಿಸಿದೆ. ಇತ್ತೀಚೆಗೆ ಕೋಟಿ ಕೋಟಿ ಲಾಭ ಗಳಿಸಿದ ಸಂಸ್ಥೆ ಆದರೂ ಇವರ ವೈಶಿಷ್ಠತೆ ಎನೆಂದರೇ ಬಡ ಮತ್ತು ಸಾಮಾನ್ಯ ಜನರ ಪ್ರಗತಿ ಹೊಂದಬೇಕೆನ್ನುವುದೇ ಇವರ ಚಿಂತನೆ ಎಂದು ಶ್ಲಾಘಿಸಿ ಇವರ ಉದ್ದೇಶ ಫಲ ನೀಡಲಿ’ ಎಂದರು.
ಅವರು ಬ್ರಹ್ಮಾವರದ ಬಸ್ಸು ನಿಲ್ದಾಣದ ಸಮೀಪದಲ್ಲಿರು ಶ್ರೀ ರಾಮ್ ಆರ್ಕೆಡ್ ಕಾಂಪ್ಲೆಕ್ಸನಲ್ಲಿ ರೋಜರಿ ಕ್ರೆಡಿಟ್ ಕೋ-ಆಪರೆಟೀವ್ ಸೊಸೈಟಿ ಲಿ.ಕುಂದಾಪುರದ 10 ನೇ ಶಾಖೆಯ ಅ.1ರಂದು ಉದ್ಘಾಟನೆ ಮಾಡಿ ಹಾರೈಸಿದರು. ನೂತನ ಸಂಸ್ಥೆಯ ಕಚೇರಿಯನ್ನು ಆಶಿರ್ವದಿಸುವ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟ ಬ್ರಹ್ಮಾವರ ಜೆ.ಎಮ್.ಜೆ ಚರ್ಚಿನ ಧರ್ಮಗುರು ವಂ|ಜೋನ್ ಫೆರ್ನಾಂಡಿಸ್ “ಅಕ್ಟೋಬರ್ ತಿಂಗಳು ರೋಜರಿ ಮಾತೆಗೆ ಸಮರ್ಪಿಸಿದ್ದ ತಿಂಗಳು, ಮೊದಲ ದಿವಸವೇ ರೋಜರಿ ಸೊಸೈಟಿಯ ಶಾಖೆ ಇಲ್ಲಿ ಉದ್ಘಾಟನೆ ಗೊಂಡಿದೆ, ಈ ಸೊಸೈಟಿಯ ಅಧ್ಯಕ್ಷರು, ನಿರ್ದೇಶಕರು ಮತ್ತು ಆಡಳಿತ ಮಂಡಳಿಯಿ ಶ್ರಮದಿಂದ ಈ ಸೊಸೈಟಿ ಏಳಿಗೆ ಪಡೆದಿದೆ. ಈ ಸೊಸೈಟಿಯಿಂದ ಇಲ್ಲಿನ ಜನರಿಗೆ ಒಳಿತಾಗಲಿ” ಎಂದು ಶುಭ ಹಾರೈಸಿದರು.
ಭದ್ರತಾ ಕೊಠಡಿ ಉದ್ಘಾಟಿಸಿದ ಕುಂದಾಪುರ ವಲಯ ಪ್ರಧಾನ, ಹಾಗೂ ಸೊಸೈಟಿ ಮಾರ್ಗದರ್ಶಕ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ‘ಸಮಾಜದಲ್ಲಿ ಎರಡು ವರ್ಗದ ಜನರಿದ್ದಾರೆ, ಒಂದು ಶ್ರೀಮಂತ ವರ್ಗ, ಮತ್ತೊಂದು ಬಡವರ ವರ್ಗ, ಶ್ರೀಮಂತರು ಈ ಸೊಸೈಟಿಯಲ್ಲಿ ಹಣ ಠೇವಣಿ ಇರಿಸುವುದು, ಬಡವರು ಬಡ್ಡಿಗೆ ಸಾಲ ತೆಗೆದುಕೊಂಡು, ಶ್ರಮಪಟ್ಟು ಪ್ರಗತಿಹೊಂದಿ ಹಣ ವಾಪಾಸು ನೀಡುವುದು ಆವಾಗ ನಿಮ್ಮ ಉದ್ದೇಶ ಮತ್ತು ಸೊಸೈಟಿಯ ಉದ್ದೇಶವು ಈಡೇರುತ್ತದೆ ಎಂದು’ ಶುಭ ನುಡಿಗಳನ್ನಾಡಿದರು. ಸೊಸೈಟಿಯ ಹಿರಿಯ ನಿರ್ದೇಶಕ ಫಿಲಿಪ್ ಡಿಕೋಸ್ತಾ ‘ಗಣಕಯಂತ್ರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಜೋನ್ಸನ್ ಡಿ ಆಲ್ಮೇಡಾ ವಹಿಸಿ ‘ಕಥೊಲಿಕ್ ಸಭಾ ಸಂಘಟನೇಯ ಮೂಲಕ ನಮ್ಮ ಹಿರಿಯರು, ಬಹಳ ದೂರ ದ್ರಷ್ಟಿ ಇಟ್ಟುಕೊಂಡು ಸೊಸೈಟಿಯ ಸಣ್ಣ ಬೀಜವನ್ನು ಬಿತ್ತಿದ್ದರು, ಅದೀಗ ಅದು ಹೆಮ್ಮರವಾಗಿ ಬೆಳೆಯುತ್ತೀದೆ. ಇದು ಬೆಳೆಯಬೇಕಾದರೆ ನಿರಂತರವಾಗಿ ಶ್ರಮಿಸುತ್ತೀರುವ ನಿರ್ದೇಶಕರು, ಹಾಗೇ ಸೇವೆ ಸಲ್ಲಿಸುತ್ತೀರುವ ಕಾರ್ಯ ನಿರ್ವಹಣ ಅಧಿಕಾರಿಗಳು, ಸಿಬಂಧಿ ವರ್ಗ. ಹಾಗೇ ನಮ್ಮ ಸದಸ್ಯರು ಮತ್ತು ಗ್ರಾಹಕರು ಕೂಡ ಕಾರಣರಾಗಿದ್ದಾರೆ. ಬ್ರಹ್ಮಾವರದಲ್ಲಿ ಹಲವಾರು ಕೋ.ಆಪರೇಟಿವ್ ಸೊಸೈಟಿಗಳು ಇದ್ದು, ನಾವು ಇಲ್ಲಿ ಪ್ರತಿಸ್ಪರ್ಧೆ ಮಾಡುತ್ತಿಲ್ಲ. ನಮ್ಮ ಸೊಸೈಟಿ ಉತ್ತಮ ಸೇವೆ ನೀಡುವುದೇ ನಮ್ಮ ಗುರಿ ಎನ್ನುತ್ತಾ ನಾವು ನಮ್ಮ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಿಬಂದಿ ವರ್ಗದವರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಸಾಲದ ಯೋಜನೆ, ಹೀಗೆ ಇತರೆ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಇದೆ ಎಂದು ತಿಳಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಕಿರಣ್ ಲೋಬೊ, ವಿಠಲ್ ಮೆಡಿಕಲ್ ಸೆಂಟರ್ ಮಾಲಕ ಕಾವ್ರಾಡಿ ಸೀತಾರಾಮ್ ಶೆಟ್ಟಿ ಇದ್ದು, ಸೊಸೈಟಿಯ ನಿರ್ದೇಶಕರಾದ ಡಯಾನ ಡಿಆಲ್ಮೇಡಾ, ಶಾಂತಿ ಆರ್ ಕರ್ವಾಲ್ಲೊ, ವಿಲ್ಫ್ರೆ ಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ತಿಯೋದೋರ್ ಒಲಿವೇರಾ ಉಪಸ್ಥಿತರಿದ್ದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿ ಆಲ್ಮೇಡಾ ವಂದಿಸಿದರು. ಸೊಸೈಟಿಯ ನಿರ್ದೇಶಕ ಬ್ರಹ್ಮಾವರ ಶಾಖೆಯ ಸಭಾಪತಿ ಡೆರಿಕ್ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರ : ಶಿಕ್ಷಣ ಕ್ರಾಂತಿಯ ಮಾತೆ ವಂದನೀಯ ಮದರ್ ವೆರೊನೀಕಾರ ದ್ವೀ ಶತಾಬ್ದಿ ಜನ್ಮ ದಿನಾಚರಣೆ


ಕುಂದಾಪುರ,ಅ,1: ಭಾರತದಲ್ಲಿ ಕಾರ್ಮೆಲ್ ಸಭೆಯ ಸ್ಥಾಪಕಿ ವಂದನೀಯ ಮದರ್ ವೆರೊನೀಕಾರ ಅ.1 ರಂದು ದ್ವೀ ಶತಾಬ್ದಿ ಜನ್ಮ ದಿನಾಚರಣೆಯನ್ನು ಸಂತ ಜೋಸೆಫ್ ಕಾನ್ವೆಂಟಿನ ಕಾರ್ಮೆಲ್ ಸಭೆಯ ಭಗಿನಿಯರು ಹೋಲಿ ರೋಜರಿ ಚರ್ಚಿನಲ್ಲಿ ಕ್ರತ್ಞತಾ ಪೂರ್ವಕ “ದೇವರೆ ನನ್ನ ಸರ್ವಸ್ವ” ಎಂಬ ಧ್ಯೇಯ ವಾಕ್ಯದೊಂದಿಗೆ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು.
ಸಂತ ಜೋಸೆಪರಿಗೆ ಸಮರ್ಪಿಸಲ್ಪಟ್ಟ ಕುಂದಾಪುರದ ಕಾರ್ಮೆಲ್ ಭಗಿನಿಯರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯ ಪ್ರಸ್ತಾವನೇಯ ಮೂಲಕ ಮದರ್ ವೆರೊನೀಕಾರ ಮಹತ್ವವನ್ನು ತಿಳಿಸಿದರು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನದ ನೇತ್ರತ್ವವನ್ನು ವಹಿಸಿ ಬಲಿದಾನ ಅರ್ಪಿಸಿ “ಕುಂದಾಪುರದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕದೆ ಇರುವ ಸಂಕಷ್ಟ ಕಾಲದಲ್ಲಿ ಕಾರ್ಮೆಲ್ ಸಭೆಯ ಭಗಿನಿಯರು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿಯೇ ಶಿಕ್ಷಣ ಸಂಸ್ಥೆ ಆರಂಭಿಸಿ, ಹೆಣ್ಣಿಗೆ ಶಿಕ್ಷಣ ನೀಡಿ ಪೂರ್ಣ ಕುಟುಂಬಕ್ಕೆ ಶಿಕ್ಷಣ ದೊರಕುವಂತೆ ಮಾಡಿದ್ದಾರೆ, ಇವರ ಸೇವೆ ಇಂದಿಗೂ ಅಮೂಲ್ಯವಾದುದೆಂದು” ಶುಭ ಕೋರಿದರು.
ಕಟ್ಕೆರೆ ಬಾಲಾ ಯೇಸುವಿನ ಕಾರ್ಮೆಲ್ ಆಶ್ರಮದ ಧರ್ಮಗುರು ವಂ|ಜೊಸ್ವಿ ಸಿದ್ದ ಕಟ್ಟೆ “ದೇವರ ವಾಕ್ಯವನ್ನು ಪಠಿಸಿ, ನಾವು ದೇವರ ವಾಕ್ಯವನ್ನು ಭಯದಿಂದ ಅಥವ ಒತ್ತಾಯದಿಂದ ಪಾಲಿಸುವುದಲ್ಲಾ, ಪ್ರೀತಿಯಿಂದ ಪಾಲಿಸಬೇಕು ಎಂದು ಹೇಳುತ್ತಾ, ಮದರ್ ವೆರೊನೀಕಾರ ಬಗ್ಗೆ ವಿವರಿಸಿ, ಅವರು ಆಂಗ್ಲಿಕನ್ ಕ್ರೈಸ್ತರಾಗಿದ್ದು, ಆಂಗ್ಲಿಕರ ಧರ್ಮ ಆಚರಣೆಯಲ್ಲಿ ಕೊರತೆ ಕಂಡು, ಅವರ ಸಹೋದರಿ ಜೊತೆ ಕಥೊಲಿಕ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು, ತಮ್ಮ ಜೀವನವನ್ನೇ ಯೇಸುವಿಗಾಗಿ ಮುಡುಪಿಟ್ಟು, ಪರಮ ಪ್ರಸಾದಕ್ಕೆ ಸಂಪೂರ್ಣ ಹ್ರದಯದಿಂದ ಪ್ರೀತಿಸಿ, ತಮ್ಮದೆ ಒಂದು ಧರ್ಮಸಭೆಯನ್ನು ಸ್ಥಾಪಿಸಿದರು. ಭಾರತದಲಿಯ್ಲೂ ತಮ್ಮ ಸಭೆ ಸ್ಥಾಪಿಸಿ ಭಗಿನಿಯರ ತರಬೇತಿ ಕೇಂದ್ರ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಶಿಕ್ಷಣ ದೊರಕುವಂತೆ ಮಾಡಿದ ಮಹಾ ಮಾತೆಯಾಗಿದ್ದಾರೆ’ ಎಂದು ತಿಳಿಸಿದರು. ಸಂತ ಜೋಸೆಫ್ ಕಾನ್ವೆಂಟಿಅನ್ ಕಾರ್ಮೆಲ್ ಸಭೆಯ ಭಗಿನಿಯರು ಮತ್ತು ಕಾರ್ಮೆಲ್ ಸಭೆಗೆ ಸಹಾಯ ಹಸ್ತ ನೀಡುವ ಬ್ಲೊಸಮ್ ಪಂಗಡದವರು ಬಲಿದಾನದ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಪಾಲನ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಹಾಜರಿದ್ದರು.

ಶ್ರೀನಿವಾಸಪುರ:ಸರ್ಕಾರಿ ಬಾಲಕಿಯರ ಪ. ಪೂ. ಕಾಲೇಜಿನ ವಿದ್ಯಾಥಿನಿಯರಿಂದ ತ್ಯಾಜ್ಯ ಮುಕ್ತ ಭಾರತ – ಜಾಗೃತಿ ಜಾಥಾ

ಶ್ರೀನಿವಾಸಪುರ: ತ್ಯಾಜ್ಯ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು. ಸ್ವಚ್ಛ ಪರಿಸರ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕಾಲೇಜಿನ ಉಪ ಪ್ರಾಂಶುಪಾಲ ಶ್ರೀಧರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾಥಿನಿಯರಿಂದ ಶನಿವಾರ ಏರ್ಪಡಿಸಿದ್ದ ತ್ಯಾಜ್ಯ ಮುಕ್ತ ಭಾರತ ಕುರಿತು ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ತ್ಯಾಜ್ಯ ಮುಕ್ತ ಭಾರತ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ತ್ಯಾಜ್ಯ ಆರೋಗ್ಯ ಸಮಸ್ಯೆಗೆ ಮೂಲ ಕಾರಣವಾಗಿದೆ. ವಿವಿಧ ಮೂಲಗಳಿಂದ ಹೊರಬೀಳುವ ತ್ಯಾಜ್ಯ ಅಗಾಧ ಪ್ರಮಾಣದ್ದಾಗಿದ್ದು, ನಿರ್ವಹಣೆ ಕಷ್ಟದಾಯಕ. ಆದ್ದರಿಂದ ವಿದ್ಯಾವಂತ ಸಮುದಾಯ ತ್ಯಾಜ್ಯ ನಿರ್ವಹಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಅದರಲ್ಲೂ ಈ ವಿಷಯದಲ್ಲಿ ವಿದ್ಯಾರ್ಥಿನಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ. ಸಾರ್ವಜನಿಕರು ತ್ಯಾಜ್ಯ ವಸ್ತುಗಳ ನಿರ್ವಣೆ ಮಾಡುವಲ್ಲಿ ಅಗತ್ಯ ಎಚ್ಚರಿಕೆ ವಹಿಸುತ್ತಿಲ್ಲ. ಹಾಗಾಗಿ ಪರಿಸರ ತ್ಯಾಜ್ಯಮಯವಾಗಿದೆ. ಆದ್ದರಿಂದ ಪಟ್ಟಣದ ನಾಗರಿಕರು ತಮ್ಮ ನೆಗಳಲ್ಲಿ ಬೀಳುವ ತ್ಯಾಜ್ಯವನ್ನು ವಿಂಗಡಿಸಿ ಪೌರಕಾಮರ್ಿಕರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು ಎಂದು. ಹಾಗೆ ಮಾಡುವುದರಿಂದ ಪರಿಸರಕ್ಕೆ ಹೆಚ್ಚಿನ ಹಾನಿ ಉಂಟಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ, ಶಿಕ್ಷಕಿ ಶಾರದಮ್ಮ ಇದ್ದರು.

ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ವಿಶೇಷ ತಂಡ ರಚನೆಗೆ ಬೆಳೆಗಾರರಿಗೆ ಬೆಂಬಲ ಬೆಲೆಗೆ – ಕೃಷಿ ಸಚಿವ ಚೆಲುವರಾಯಸ್ವಾಮಿಗೆ ಮನವಿ

ಕೋಲಾರ; ಸೆ.30: ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡುವ ಜೊತೆಗೆ ಬೆಲೆ ಕುಸಿತದಿಂದ ಕಂಗಾಲಾಗಿರುವ ಹೂ, ಟೊಮೆಟೊ ಬೆಳೆಗಾರರ ರಕ್ಷಣೆಗೆ ಪ್ರತಿ ಕೆಜಿಗೆ 10 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಬೇಕು ಜೊತೆಗೆ ನರ್ಸರಿ ಕಾಯ್ದೆಯನ್ನು ಜಾರಿಗೆ ಮಾಡಬೇಕೆಂದು ಆಗ್ರಹಿಸಿ ರೈತಸಂಘದಿಂದ ನಷ್ಟ ಟೊಮೆಟೊ ಸಮೇತ ಕೃಷಿ ಸಚಿವ ಚೆಲುವರಾಯಸ್ವಾಮಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾದ್ಯಂತ ರೈತರ ನಿದ್ದೆಗೆಡಿಸುತ್ತಿರುವ ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣ ಮಾಡುವಲ್ಲಿ ತೋಟಗಾರಿಕೆ, ಕೃಷಿ ಅಧಿಕಾರಿಗಳು ವಿಫಲವಾಗಿ ನಕಲಿ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕೃಷಿ ಸಚಿವರಿಗೆ ದೂರು ನೀಡಿದರು.
ರಾಜ್ಯಾದ್ಯಂತ ರೈತರ ನಿದ್ದೆಗೆಡಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣ ಮಾಡಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡುವ ಜೊತೆಗೆ ರೈತರನ್ನು ವಂಚನೆ ಮಾಡುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಲು ಪ್ರಭಲ ಕಾನೂನು ಜಾರಿ ಮಾಡುವ ಮುಖಾಂತರ ರೈತರ ಶ್ರಮದ ಬೆವರ ಹನಿ ಕಸಿಯುವ ಕಂಪನಿಗಳ ವಿರುದ್ಧ ಸರ್ಕಾರ ಚಾಟಿ ಬೀಸುವ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾದ್ಯಂತ ಸತತವಾಗಿ 5 ವರ್ಷಗಳಿಂದ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ಹಾವಳಿ ಹೆಚ್ಚಾಗಿದ್ದರೂ ಸಂಬಂಧಪಟ್ಟ ಕೃಷಿ ತೋಟಗಾರಿಕೆ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ. ರೈತ ದೂರು ಕೊಟ್ಟರೆ ಮಾತ್ರ ನೆಪ ಮಾತ್ರಕ್ಕೆ ವಿಜ್ಞಾನಿಗಳನ್ನು ತರಿಸಿ ರೈತರ ಮೇಲೆ ಆರೋಪ ಮಾಡಿ ನಕಲಿ ಕಂಪನಿಗಳಿಗೆ ಗುಣಮಟ್ಟದ ಪ್ರಮಾಣ ಪತ್ರ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲೆಯ ರೈತರ ಪಾಲಿಗೆ ಕೆಸಿವ್ಯಾಲಿ ವರದಾನವೋ ಶಾಪವೋ ಗೊತ್ತಿಲ್ಲ. ಆದರೆ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಯುತ್ತಿರುವ ಟೊಮೇಟೊ ಕ್ಯಾಪ್ಸಿಕಂ ಬೆಳೆಗಳಿಗೆ ಬಾಧಿಸುತ್ತಿರುವ ಬಿಂಗಿರೋಗ, ರೋಸ್, ನುಸಿ, ಅಂಗಮಾರಿ ರೋಗಗಳಿಗೆ ಲಕ್ಷಾಂತರ ಔಷಧಿ ಖರೀದಿ ಮಾಡಿ ಸಿಂಪಡಣೆ ಮಾಡಿದರು ಕನಿಷ್ಠ ತೋಟದ ಮೇಲಿರುವ ಸೊಳ್ಳೆ ಸಹ ಸಾಯುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕಳಪೆಯಾಗಿದ್ದರೂ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ 3,800 ಹೊರರಾಜ್ಯದ ಔಷಧಿ ಕಂಪನಿಗಳು 1800 ಮಾರಾಟಗಾರರು 480 ಪ್ರಜ್ಞಾವಂತ ಯುವಕರು ವಿವಿಧ ರೋಗಗಳ ನಿಯಂತ್ರಣ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರೂ ಯಾವುದೇ ಔಷಧಿಯಿಂದ ರೋಗ ನಿಯಂತ್ರಣ ಬರುತ್ತಿಲ್ಲ. ಸಂಬಂಧಪಟ್ಟ ತೋಟಗಾರಿಕೆ, ಕೃಷಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಜಿಲ್ಲಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತಿರುವ ನೂರಾರು ನರ್ಸರಿಗಳು ರೈತರಿಗೆ ಬಿಲ್ ನೀಡದೆ ವಂಚನೆ ಮಾಡುತ್ತಿದ್ದಾರೆ. ತೋಟಗಾರಿಕೆ ಅಧಿಕಾರಿಗಳನ್ನು ಕೇಳಿದರೆ ನಮ್ಮ ಇಲಾಖೆಯಿಂದ ಪರವಾನಗಿ ಪಡೆದಿಲ್ಲವೆಂದು ಹಿಂಬದಿಯಿಂದ ಎಲ್ಲಾ ತರಹದ ಸರ್ಕಾರದ ಅನುದಾನಗಳನ್ನು ನರ್ಸರಿ ಮಾಲೀಕರಿಗೆ ನೀಡುತ್ತಿದ್ದಾರೆಂದು ಕಿಡಿಕಾರಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, 2 ತಿಂಗಳ ಹಿಂದೆ ಇಡೀ ದೇಶದಲ್ಲಿಯೇ ಬಾರೀ ಸದ್ದು ಮಾಡಿದ್ದ ಟೊಮೇಟೊ ಬೆಲೆ ಹಾಗೂ ಹೂ ಬೆಳೆಗಳು ಪಾತಾಳಕ್ಕೆ ಕುಸಿದಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ರೈತ ಬೆಲೆಯಿಲ್ಲದೆ ರಸ್ತೆಗಳಲ್ಲಿ ಸುರಿಯಬೇಕಾದ ಪರಿಸ್ಥಿತಿ ಇರುವುದರಿಂದ ಸರ್ಕಾರ ಜಿಲ್ಲಾಡಳಿತದಿಂದ ಬೆಳೆ ನಷ್ಟದ ವರದಿ ತರಿಸಿಕೊಂಡು ಕನಿಷ್ಠ ಪ್ರತಿ ಕೆಜಿ ಟೊಮೇಟೊ ಹಾಗೂ ಹೂವಿಗೆ 10ರೂ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ನರ್ಸರಿಗಳು ತೋಟಗಾರಿಕೆ ಹಿಡಿತದಲ್ಲೂ ಇಲ್ಲದೆ ಕೃಷಿ ಇಲಾಖೆಯ ಹಿಡಿತದಲ್ಲೂ ಇಲ್ಲದೆ ಇರುವುದರಿಂದ ಯಾರ ಹಿಡಿತಕ್ಕೂ ಸಿಗದೆ ರೈತರು ನಷ್ಟವಾದಾಗ ಯಾರನ್ನೂ ಕೇಳಬೇಕೆಂಬ ಪ್ರಶ್ನೇ ಮೂಡಿದೆ. ಕೂಡಲೇ ರಾಜ್ಯದಲ್ಲಿ ನರ್ಸರಿ ಕಾಯ್ದೆಯನ್ನು ಜಾರಿಗೆ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿರುವ ಕಾರಣ ಕೋಲಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ಬರ ನಿರ್ವಹಣೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ನೀರು, ಮೇವು ಸಮಸ್ಯೆಯಾಗದಂತೆ ಜಾಗೃತಿವಹಿಸಿ ಜಾನುವಾರುಗಳ ರಕ್ಷಣೆಗೆ ಪ್ರತಿ ಪಂಚಾಯಿತಿಗೊಂದು ಗೋಶಾಲೆ ತೆರೆಯಬೇಕು.
ಮಾನ್ಯರು ಈ ಮೇಲ್ಕಂಡ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ರೈತರ ಸಮಸ್ಯೆಗಳಿಗೆ ತೋಟಗಾರಿಕೆ ಕೃಷಿ ಅಧಿಕಾರಿಗಳು ಸ್ಪಂದಿಸಿ ನಕಲಿ ಬಿತ್ತನೆ ಬೀಜ ಕೀಟನಾಶಕಗಳ ಹಾವಳಿಯಿಂದ ತತ್ತರಿಸಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರು, ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕಾನೂನು ರಚನೆಗೆ ಚರ್ಚೆಯಾಗುತ್ತಿದೆ. ನರ್ಸರಿ ಕಾಯ್ದೆಯನ್ನು ಜಾರಿಗೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ.ಜೊತೆಗೆ ಬರ ನಿರ್ವಹಣೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಸಮಸ್ಯೆ ನಿಭಾಯಿಸಲು ಜಿಲ್ಲಾಧಿಕಾರಿಗೆ ಆದೇಶ ಮಾಡುವ ಜೊತೆಗೆ ಹೂವು ಮತ್ತು ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಫಾರೂಖ್ ಪಾಷ, ಬಂಗಾರಿ ಮಂಜು, ರಾಜೇಶ್, ವಿಜಯ್ ಪಾಲ್, ಭಾಸ್ಕರ್, ಸುನೀಲ್ ಕುಮಾರ್, ಮಂಗಸಂದ್ರ ನಾಗೇಶ್, ಪೆಮ್ಮದೊಡ್ಡಿ ಯಲ್ಲಣ್ಣ, ಹರೀಶ್, ತೆರ್ನಹಳ್ಳಿ ಆಂಜಿನಪ್ಪ, ವೆಂಕಟೇಶಪ್ಪ, ನರಸಿಂಹಯ್ಯ ಸುಪ್ರೀಂ ಚಲ, ಮೂರಾಂಡಹಳ್ಳಿ ಶಿವಾರೆಡ್ಡಿ, ಕದರಿನತ್ತ ಅಪ್ಪೋಜಿರಾವ್, ಕಿರಣ್, ನಾಗೇಶ್, ರಾಮಸಾಗರ ವೇಣು, ಸುರೇಶ್ ಬಾಬು, ಮುಂತಾದವರಿದ್ದರು.