ಕೋಲಾರ ಅಕ್ಟೋಬರ್ 7 : ಪ್ರಜಾ ಸೇವಾ ಸಮಿತಿ ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಕ್ಷೇಮಾಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ ರವರ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಕೋಲಾರ ತಾಲೂಕು ಪಂಚಾಯಿತಿ ಕಾರ್ಯನಿವಾರಣಾಧಿಕಾರಿಗಳಾದ ಮುನಿಯಪ್ಪ ರವರ ಮುಖಾಂತರ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರಿಗೆ ಅಕ್ಷರ ದಾಸೋಹ ನೌಕರರ ಬೇಡಿಕೆಗಳ ಮನವಿ ಪತ್ರವನ್ನು ರವಾನೆ ಮಾಡಲಾಯಿತು
ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ ಮಾತನಾಡಿ ಕಾಂಗ್ರೆಸ್ ವರಿಷ್ಠರಾದ ಪ್ರಿಯಾಂಕಾ ಗಾಂಧಿ ರವರು ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಅಕ್ಷರ ದಾಸೋಹ ನೌಕರರಿಗೆ 6000 ವೇತನವನ್ನು ಹೆಚ್ಚಳ ಮಾಡಲಾಗುವುದೆಂದು ಘೋಷಣೆ ಮಾಡಿದ್ದರು. ಈಗ ಅವರದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಈಗ ಬಿಸಿಊಟ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಯಿತು.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಯುಕೆಜಿಯನ್ನ ಪ್ರಾರಂಭ ಮಾಡಲು ಸರ್ಕಾರ ಕ್ರಮ ವಹಿಸಬೇಕು ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುವ ಕಾನೂನನ್ನು ಸರ್ಕಾರ ರೂಪಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸಗಳಲ್ಲಿ ಮೊದಲ ಆಧ್ಯತೆ ನೀಡಬೇಕು. ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಸಿಜಿ ಬಿಲ್‍ನ್ನು ಸಹಿಯನ್ನು ಮಾಡುವುದನ್ನು ಹಿಂಪಡೆದು ಈ ಹಿಂದೆ ಇದ್ದ ರೀತಿ ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಶಾಲೆಯ ಮುಖ್ಯ ಅಡಿಗೆಯವರಿಗೆ ಸಿಜಿ ಬಿಲ್ಲಿನ ಸಹಿ ಮಾಡುವ ಅಧಿಕಾರವನ್ನು ನೀಡಬೇಕು. ಅಕ್ಷರ ದಾಸೋಹ ನೌಕರರು ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಮತ್ತು ಕುಕ್ಕರ್ ಇಂದ ಏನಾದರೂ ಅನಾಹುತ ಸಂಭವಿಸಿದಲ್ಲಿ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ವಹಿಸಿಕೊಂಡು ಹೆಣ್ಣು ಮಕ್ಕಳು ಪರವಾಗಿ ನಿಲ್ಲಬೇಕು. ಬಿಸಿಯೂಟ ನೌಕರರಿಗೆ ಕೆಲವು ಕಡೆ ಎಸ್‍ಡಿಎಂಸಿ ಮತ್ತು ಕೆಲವು ಶಾಲಾ ಶಿಕ್ಷಕರುಗಳ ಕಡೆಯಿಂದ ತೊಂದರೆ ಆಗುತ್ತಿದ್ದು, ಅದನ್ನ ಸರಿಪಡಿಸಲು ಜಿಲ್ಲಾ ಮಟ್ಟದ ವಿಶೇಷ ತಂಡವನ್ನು ರಚನೆ ಮಾಡಬೇಕು ಎಂಬ ಒತ್ತಾಯಗಳನ್ನ ಸಲ್ಲಿಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿವಾರಣಅಧಿಕಾರಿ ಮುನಿಯಪ್ಪ ಅಕ್ಷರ್ ದಾಸೋಹ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುಬ್ರಮಣಿ ಮನವಿ ಪತ್ರವನ್ನು ಸ್ವೀಕರಿಸಿದರು ಹಾಗೂ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿವಾರಣಾಧಿಕಾರಿಗಳಾದ ಮುನಿಯಪ್ಪ ರವರು ಬಿಸಿಯೂಟ ನೌಕರರಿಗೆ ಸರಕಾರದಿಂದ ಬರುವ ಯೋಜನೆಗಳನ್ನು ಸಕಾಲಕ್ಕೆ ಅಡುಗೆಯವರಿಗೆ ತಲುಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಶಾಲೆಗಳಲ್ಲಿ ಏನಾದರೂ ಅಡುಗೆ ನೌಕರರಿಗೆ ಸಮಸ್ಯೆಯಾದಲ್ಲಿ ತಕ್ಷಣ ತಮ್ಮ ಗಮನಕ್ಕೆ ತರಲು ಅಡುಗೆ ನೌಕರರಿಗೆ ತಿಳಿಸಿದರು. ತಾಲೂಕು ಪಂಚಾಯಿತಿ ಹಂತದಲ್ಲಿ ಆಗಬೇಕಾದ ಕೆಲಸಗಳನ್ನ ಅಡುಗೆ ನೌಕರರಿಗೆ ಮಾಡಿಕೊಡುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಕಲ್ವಮಂಜಲಿ ರಾಮುಶಿವಣ್ಣ ಕೋಲಾರ, ಜಿ ನಾರಾಯಣಸ್ವಾಮಿ, ಮಮತಾ, ಚಲ್ದಿಗಾನಹಳ್ಳಿ ಮಂಜುಳಮ್ಮ, ವಕ್ಕಲೇರಿ ನಾಗವೇಣಮ್ಮ, ಸುಗುಟೂರು ಶೋಭಾ, ಆರತಿ, ಗಿರಿಜಾ, ಅಂಜನಮ್ಮ, ಮಂಜುಳಾ, ಲಕ್ಷ್ಮಮ್ಮ, ರತ್ನಮ್ಮ, ಸುನಂದಮ್ಮ, ನಾರಾಯಣಮ್ಮ, ಮೀನಾಕ್ಷಿ, ಗೌರಮ್ಮ, ಶೈಲಮ್ಮ, ಅಂಬಿಕಾ, ಮುನಿರತ್ನಮ್ಮ, ಶೋಭಾ, ಅಖಿಲ, ಮಂಜುಳಮ್ಮ, ಸಾವಿತ್ರಮ್ಮ, ಕೋಕಿಲಮ್ಮ, ಆಶಾ, ಜಯಂತಿ, ಪಲ್ಲವಿ, ವರಲಕ್ಷ್ಮಿ, ಗೌರಮ್ಮ, ಶೈಲಮ್ಮ, ಮುನಿರತ್ನ, ಅನಿತಾ, ರಾಧಮ್ಮ, ಮುನಿಯಮ್ಮ, ಪ್ರಮೀಳಮ್ಮ, ಕನ್ಯಮ್ಮ, ಜರೀನಾ ಆಯುμï ಜಬೀನ ಫಾರಸ ಬೇಗಂ, ಕೀರ್ತಿ, ಗಿರಿಜಮ್ಮ, ಮಾಲಾಶ್ರೀ ಇನ್ನು ಮುಂತಾದ ನೌಕರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
Year: 2023
ಭಂಡಾರ್ಕಾರ್ಸ್ ಪದವಿ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ “ಆರಂಭ”
‘ಕುಂದಾಪುರ: ಅಕ್ಟೋಬರ್ 7ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ “ಆರಂಭ ” ಎಂಬ 2023-24 ನೇ ಸಾಲಿನ ಕಾರ್ಯಾಚಟುವಟಿಕೆಗಳನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.
ಸಂಪನ್ಮೂಲ ವ್ಯಕ್ತಿ ಆಗಿ ಆಗಮಿಸಿದ ಮೋಹನ್ ರಾವ್ “ಕೃತಕ ಬುದ್ಧಿಮತ್ತೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಬಗ್ಗೆ ನೀಡಿದರು.
ಚೆಂಡೆ ವಾದನ, ಬಲೂನ್ ಹಾರಾಟ ಬ್ಯಾನರ್ ಪ್ರದರ್ಶನ ಮತ್ತು ಹೂವು ಬಣ್ಣಗಳ ಚದಉರಇಸಉವಇಕಎಯ ಮೂಲಕ ವಿನೂತನ ರೀತಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಿ.ವಿಜಯ ಕುಮಾರ್ ಕೆ.ಎಂ. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಹಾಗೂ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಅರ್ಚನಾ ಅರವಿಂದ್ ಕುಮಾರ್ , ವಿಭಾಗದ ಉಪನ್ಯಾಸಕರಾದ ಪ್ರಶಾಂತ ಹೆಗ್ಡೆ, ಅಂಜನ್ ಕುಮಾರ್, ಅಶ್ವಿನಿ ಉಪಸ್ಥಿತರಿದ್ದರು .
ವಿದ್ಯಾರ್ಥಿ ಗಳಾದ ಚೈತ್ರ, ಅಲೀಫಾ ಕಾರ್ಯಕ್ರಮ ನಿರೂಪಿಸಿದರು.
ಹೈದರ್ ಆಲಿ ಮೊಹಲ್ಲ ಹಾಗೂ ಜಾಕಿರ್ ಹುಸೆನ್ ಮೊಹಲ್ಲಾ ಉರ್ದು ಶಾಲೆಗಳಿಗೆ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಸರ್ಕಾರಿ ಉರ್ದು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು-ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಸರ್ಕಾರಿ ಉರ್ದು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ಪಟ್ಟಣದಲ್ಲಿ ಸೋರುತ್ತಿರುವ ಉರ್ದು ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಚಿಂತಾಮಣಿ ರಸ್ತೆ ಸಮೀಪದ ಸರ್ಕಾರಿ ಉರ್ದು ಶಾಲೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಏರ್ಪಡಿಸಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಭಾವಿ ಪ್ರಜೆಗಳನ್ನು ರೂಪಿಸುವ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಳಕೆಗೆ ಯೋಗ್ಯವಲ್ಲದ ಹಾಗೂ ಮಳೆ ಸುರಿದಾಗ ಸೋರುವ ಶಾಲಾ ಕಟ್ಟಗಳಲ್ಲಿ ಮಕ್ಕಳನ್ನು ಕೂರಿಸಿ ನಿರ್ಭೀತಿಯಿಂದ ಪಾಠ ಮಾಡಲು ಸಾಧ್ಯವಿಲ್ಲ. ಅಪಾಯದ ಅಂಜಿನಲ್ಲಿರುವ ಶಾಲಾ ಕಟ್ಟಗಳು, ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕ್ಷೇಮಕರವಲ್ಲ ಎಂದು ಹೇಳಿದರು.
ಪುರಸಭೆ ಅನುದಾನದಲ್ಲಿ ಶಾಲಾ ಕಟ್ಟಡ ದುರಸ್ತಿ ಮಾಡಿಸುವಂತೆ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಅವರಿಗೆ ಸೂಚಿಸಿದರು. ಸಂಬಂಧಪಟ್ಟ ಎಂಜಿನಿಯರ್ ಶಾಲೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಶೀಘ್ರವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕಟ್ಟಡ ಸಜ್ಜುಗೊಳಿಸಬೇಕು ಎಂದು ಹೇಳಿದರು.
ತಾಲ್ಲೂಕು ಜಿಲ್ಲೆಯಲ್ಲಿಯೇ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಶಿಕ್ಷಕ ಸಮುದಾಯ ಅದನ್ನು ಕಾಯ್ದುಕೊಳ್ಳಬೇಕು. ಕಲಿಕೆಗೆ ಪೂರಕವಾದ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ, ಶಿಕ್ಷಣ ಸಂಯೋಜಕ ಅಮರನಾಥ್, ಸಿಆರ್‍ಪಿ ಆರೀಫ್ ಪಾಷ, ಸಾದಿಕ್ ಪಾಷ ಇದ್ದರು.
ಭಂಡಾರ್ಕಾರ್ಸ್ ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ
ಕುಂದಾಪುರ: ಅಕ್ಟೋಬರ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲದ ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಿರಿಜಾ ಅತ್ತೀಗೇರಿ ಡಿಸೈನ್ ಥಿಂಕಿಂಗ್ ಮತ್ತು ಐಡಿಯೇಟ್ ಎಂಬ ವಿಷಯದ ಕುರಿತು ಮಾತನಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಮಣಿಪಾಲದ ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸುಚೇತಾ ವಿ.ಕೋಟೇಕಾರ್ ಅವರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಉಪಯೋಗವನ್ನು ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮಾತನಾಡಿ ನೀವು ಉದ್ಯೋಗದಾತರಾಗಿ ಬೆಳೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಐಕ್ಯೂಎಸಿ ಸಂಯೋಜಕರಾದ ಡಾ.ವಿಜಯ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಂಯೋಜಕರಾದ ಡಾ.ಲಲಿತಾದೇವಿ ಸ್ವಾಗತಿಸಿದರು.
ಬಿ.ಬಿ.ಎ ವಿದ್ಯಾರ್ಥಿನಿಯರಾದ ಆಯೇಷಾ ಮುಸ್ಕಾನ್ ಫಿರ್ಜಾದೆ ಕಾರ್ಯಕ್ರಮ ನಿರೂಪಿಸಿದರು.ಸಾಹಿತಿ ಮತ್ತು ಶ್ರಾವ್ಯ ಪರಿಚಯಿಸಿದರು.ಲೇಖನಾ ವಂದಿಸಿದರು.
ಲಿಪಿ ಅಕಾಡೆಮಿಯಿಂದ ಉಡುಪಿಯ ಸಂತೆಕಟ್ಟೆಯಲ್ಲಿ ಉದ್ಯೋಗ ಮೇಳ
ದಿನಾಂಕ 09-10-2023ರ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಲಿಪಿ ಅಕಾಡೆಮಿ, ನವಮಿ ಬೇಕರಿ ಬಿಲ್ಡಿಂಗ್, 3ನೇ ಮಹಡಿ, ಸಂತೆಕಟ್ಟೆ, ಉಡುಪಿಯಲ್ಲಿ ಆಯೋಜಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಐಟಿಐ ವಿದ್ಯಾರ್ಹತೆಯೊಂದಿಗೆ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ಮಾಹಿತಿಯನ್ನು ಲಿಪಿ ಅಕಾಡೆಮಿ, ನವಮಿ ಬೇಕರಿ ಬಿಲ್ಡಿಂಗ್, 3ನೇ ಮಹಡಿ, ಸಂತೆಕಟ್ಟೆ, ಉಡುಪಿಯಲ್ಲಿ ನಡೆಯಲಿದ್ದು, ಆಕಾಂಕ್ಷಿಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 8147534324 ಸಂಪರ್ಕಿಸಬಹುದು.
ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜೂನಿಯರ್ ರೆಡ್ ಕ್ರಾಸ್ ಉದ್ಘಾಟನೆ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ದಲ್ಲಿ ಅಕ್ಟೋಬರ್ 6 ರಂದು ಜೂನಿಯರ್ ರೆಡ್ ಕ್ರಾಸ್ ಉದ್ಘಾಟಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭ ವಾಯಿತು. ಇದರ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ಚಂದ್ರಶೇಖರ ಶೆಟ್ಟಿ ವಹಿಸಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ರೆಡ್ ಕ್ರಾಸ್ ನ ಧ್ಯೇಯ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು. ಜೂನಿಯರ್ ರೆಡ್ ಕ್ರಾಸ್ ಸಂಯೋಜಕ ರಾದ ದಿನಕರ್ ಅರ್ ಶೆಟ್ಟಿ ಇವರು ಮಕ್ಕಳಿಗೆ ಪ್ರತಿಜ್ಞಾವಿದಿ ಬೋದಿಸಿದರು. ಜೂನಿಯರ್ ರೆಡ್ ಕ್ರಾಸ್ನ ನೂತನ ಅದ್ಯಕ್ಷ ಮನ್ವಿತ್ ಗೆ ಸಭಾಪತಿ ಯವರು ಪಿನ್ ತೊಡಿಸಿದರು. ಅದ್ಯಕ್ಷರ ಭಾಷಣ ಮತ್ತು ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು. ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಜೂನಿಯರ್ ರೆಡ್ ಕ್ರಾಸ್ ಮಾರ್ಗದರ್ಶಿ ಅಧ್ಯಾಪಕರಾದ ಶ್ರೀಕಾಂತ್ ರಾವ್ ಕಾರ್ಯಕ್ರಮ ನಿರೂಪಿಸಿ ವಂಧಿಸಿದರು.
ಆಲಿಸ್ ಡಿಸೋಜ ಡಿ ಎಂ ಅವರಿಗೆ ಡಾ. ಆಫ್ ಫಿಲಾಸಫಿ ಪದವಿ
ಬೆಳಗಾಂ : ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ ಬೆಳಗಾಂ, ಇಲ್ಲಿನ ಭಗಿನಿ ಆಲಿಸ್ ಡಿಸೋಜ ಡಿ ಎಂ (SR. SADHANA BS) ಇವರು ಸಂಶೋಧನಾ ವಿದ್ಯಾರ್ಥಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧ “Contribution of Konkani Phonemes towards the expression of emotions ” ಪರೀಕ್ಷಕರು ಮೌಲ್ಯಮಾಪನ ಮಾಡಿ ಸಲ್ಲಿಸಿದ ಶಿಫಾರಸು ವರದಿಯನ್ನು ಆಧರಿಸಿದ ವಿಶ್ವವಿದ್ಯಾಲಯದ ವಿದ್ಯಾ ವಿಧಾನ ಮಂಡಳಿ ಮತ್ತು ಕಾರ್ಯಕಾರಿ ಪರಿಷತ್ತಿನ ಅನುಮೋದನೆಗೆ ಒಳಪಟ್ಟು ಮಾನ್ಯ ಕುಲಪತಿಗಳ ಆದೇಶದಂತೆ ಆಲಿಸ್ ಡಿಸೋಜ ಡಿಎಂ, ಡಾ. ಆಫ್ ಫಿಲಾಸಫಿ ಪದವಿಗೆ 14.09.2023 ಅರ್ಹರಾಗಿದ್ದಾರೆ. ಇವರಿಗೆ ಸಂತ ಜೋಸೆಫ್ಸ್ ಇಂಜಿನಿಯರಿಂಗ್ ಕಾಲೇಜಿನ ಡಾಕ್ಟರ್ ರಿಯೋ ಡಿಸೋಜಾ, ಮಾರ್ಗದರ್ಶಕರಾಗಿದ್ದರು
ಚಿನ್ಮಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಚನ ಅವರಿಗೆ, ಮಹಾತ್ಮ ಗಾಂಧಿಜಿಯವರ ಕುರಿತು ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಕೋಲಾರ : ತಾಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿ.ಎಂ.ರಚನ ಅವರಿಗೆ, ಮಹಾತ್ಮ ಗಾಂಧಿಜಿಯವರ ಕುರಿತು ಜಿಲ್ಲಾಮಟ್ಟದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರಕಿದೆ.
ಮಹಾತ್ಮ ಗಾಂಧಿಜಿಯವರ ೧೫೪ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲಾಮಟ್ಟದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ/ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ “ಭಾಪೂಜಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯ ಅಂಗವಾಗಿ ತಾಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹಾಗೂ ಚೌಡದೇನಹಳ್ಳಿಯ ವಾಸಿ ಸಿ.ಎಂ.ರಚನ ಬರೆದಿದ್ದ ಪ್ರಬಂಧಕ್ಕೆ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿತ್ತು.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾರತ್ ಸೇವಾದಳ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ, ಅ. ೨ ರಂದು ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿಪತ್ರದೊಂದಿಗೆ ನಗದು ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂಪಾಷ, ನಿವೃತ್ತ ಐ.ಎ.ಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಭಾರತ್ ಸೇವಾದಳದ ಜಿಲ್ಲಾ
ಅಧ್ಯಕ್ಷ ಕೆ.ಎಸ್. ಗಣೇಶ್, ಸಮಾಜ ಸೇವಕ ಸಿ.ಎಂ.ಆರ್.ಶ್ರೀನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಹಣಾಧಿಕಾರಿ ಪದ್ಮ ಬಸವಂತಪ್ಪ, ಹೆಚ್ಚುವರಿ ರಕ್ಷಣಾಧಿಕಾರಿ ಬಿ.ವಿ.ಭಾಸ್ಕರ್, ಅರಣ್ಯ ಅಧಿಕಾರಿ ಏಡುಕೊಂಡಲು, ತಹಸೀಲ್ದಾರ್ ಹರ್ಷವರ್ಧನ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ.ಚೇತನ್‌ಕುಮಾರ್, ಸಹಾಯಕರಾದ ಕೌಸಲ್ಯ ಮತ್ತಿತರರು ಇದ್ದರು.