ಶ್ರೀನಿವಾಸಪುರ: ಇಲ್ಲಿನ ತಾಲ್ಲೂಕು ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಭೇಟಿ ನೀಡಿ, ವಿವಿಧ ವಿಭಾಗಗಳ ಪ್ರಗತಿ ಪರಿಶೀಲಿಸಿದರು. ಕಚೇರಿ ಅವರಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯವಾಗಿ ಚುನಾವಣಾ ಫಾರಂ ಪ್ರೊಸೆಸಿಂಗ್ ಮತ್ತು ಫ್ರೂಟ್ಸ್ ಎಫ್ಐಡಿ ಪ್ರಗತಿ ಪರಿಶೀಲನೆ ನಡೆಸಿದರು.
ರೈತರಿಗೆ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡುವ ಉದ್ದೇಶದಿಂದ ಎಫ್ಐಡಿ ನೋಂದಣಿ ಕಾರ್ಯ ಚುರುಕುಗೊಳಿಸಬೇಕು. ಕಂದಾಯ ಇಲಾಖೆ ಸಿಬ್ಬಂದಿ, ಕೃಷಿ ಮತ್ತಿತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಫ್ರೂಟ್ಸ್ ಎಫ್ಐಡಿ ನೋಂದಣಿ ಗುರಿ ತಲುಪಬೇಕು. ಅದಕ್ಕೆ ಪೂರಕವಾಗಿ ಈ ಯೋಜನೆಯಿಂದ ಆಗುವ ಪ್ರಯೋಜನ ಕುರಿತು ರೈತರಿಗೆ ತಿಳಿಸಬೇಕು ಎಂದು ತಾಕೀತು ಮಾಡಿದರು.
ತಾಲ್ಲೂಕು ಕಚೇರಿ ಆವರಣಕ್ಕೆ ಸಿಮೆಂಟ್ ಹಾಸು ನಿರ್ಮಿಸುವ ಮತ್ತು ಕಚೇರಿ ಮುಂದೆ ರಸ್ತೆ ನಿರ್ಮಿಸುವ ಕಾಮಗಾರಿ ವೀಕ್ಷಿಸಿದರು ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲಿಸಿದರು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ತಾಲ್ಲೂಕಿನ ರೋಣೂರು ಹೋಬಳಿ ವ್ಯಾಪ್ತಿಯ ಕೊಟ್ರಗುಳಿ ಮತ್ತು ದೇವಲಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ಫಾರಂ ನಂಬರ್ 6,7,8 ಅರ್ಜಿಗಳು ಮತ್ತು ಎಫ್ಐಡಿ ನೋಂದಣಿ ಕುರಿತು ಪರಿಶೀಲಿಸಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮತ್ತು ತಾಲ್ಲೂಕು ಕಚೇರಿ ಸಿಬ್ಬಂದಿ ಇದ್ದರು.
Year: 2023
ಕುಸ್ತಿಗೆ ವಿದಾಯ ಹೇಳಿದ ಬೆನ್ನಲ್ಲೇ ಸಾಕ್ಷಿ ಮಲಿಕ್ ಅವರನ್ನು ಭೇಟಿಯಾದ ಪ್ರಿಯಾಂಕಾ ಗಾಂಧಿ ;ವಿದಾಯದಿಂದ ಹಿಂದೆ ಸರಿಯುವಂತೆ ಮನವಿ
ನವದೆಹಲಿ: ಕುಸ್ತಿಗೆ ವಿದಾಯ ಹೇಳಿದ ಬೆನ್ನಲ್ಲೇ ಸಾಕ್ಷಿ ಮಲಿಕ್ ಅವರನ್ನು ಭೇಟಿಯಾದ ಪ್ರಿಯಾಂಕಾ ಗಾಂಧಿಯ್ವವರು ವಿದಾಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಸ್ತಿಪಟುಗಳಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೆ ಭರವಸೆ ನೀಡಿದ್ದಾರೆ.
ಈ ಬಗ್ಗೆ ತಮ್ಮವಕ್ಸ್ನಲ್ಲಿ ಬರೆದುಕೊಂಡಿರುವ ಪ್ರಿಯಾಂಕಾ, ಕುಸ್ತಿಪಟು ಸಾಕ್ಷಿ ಮಲಿಕ್ ಅವರನ್ನು ಭೇಟಿ ಮಾಡಿದ್ದು ಪ್ರಸಕ್ತ ಬೆಳವಣಿಗೆಯಿಂದ
ಅವರು ತುಂಬಾ ನೊಂದುಕೊಂಡಿದ್ದಾರೆ. ನ್ಯಾಯ ಸಿಗುವವರೆಗೂ ಕುಸ್ತಿಗೆ ವಿದಾಯ ಹೇಳುವ ತಮ್ಮನಿರ್ಧಾರದಿಂದ ಹಿಂದೆ ಸರಿಯುವಂತೆ
ತಿಳಿಸಿದ್ದೇನೆ’ ಎಂದರು. ‘ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳು ಬಿಜೆಪಿ ಸಂಸದರೊಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು. ಭಾರತ ಕುಸ್ತಿ ಫೆಡರೇಷನ್ (ಡಬ್ಲುಎಫ್ಐ)ನ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ
ಸಂಜಯ್ ಕುಮಾರ್ ಸಿಂಗ್ ಅವರು ಆಯ್ಕೆಯಾಗಿದ್ದು ಇದನ್ನು ವಿರೋಧಿಸಿ ಕುಸ್ತಿಪಟು ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದ್ದರು. ‘ಬ್ರಿಜ್
ಭೂಷಣ್ ಅವರ ಆಪ್ತ ಡಬ್ಲುಎಫ್ಐ ಅಧ್ಯಕ್ಷರಾಗಿ ಆಯ್ಕೆ ಆಗಿರುವುದರಿಂದ, ನಾನು ಕುಸ್ತಿ ತ್ಯಜಿಸುತ್ತೇನೆ. ಇಂದಿನಿಂದ ನೀವು ಭವಿಷ್ಯದಲ್ಲಿ ನನ್ನನ್ನು
ಕುಸ್ತಿ ಕಣದಲ್ಲಿ ನೋಡುವುದಿಲ್ಲ ಎಂದು ಸಾಕ್ಷಿ ಮಲಿಕ್ ಹೇಳಿದ್ದರು.
ಶ್ರೀನಿವಾಸಪುರ:ವಿದ್ಯಾರ್ಥಿಗಳು ವಿದ್ಯುತ್ ಸುರಕ್ಷತೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು:ಪಿ.ರಾಮತೀರ್ಥ
ಶ್ರೀನಿವಾಸಪುರ: ವಿದ್ಯಾರ್ಥಿಗಳು ವಿದ್ಯುತ್ ಸುರಕ್ಷತೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಯಾವುದೇ ಸಂದರ್ಭದಲ್ಲಿ ವಿದ್ಯುತ್ ಕುರಿತು ನಿರ್ಲಕ್ಷ್ಯ ವಹಿಸಬಾರದು ಎಂದು ಬೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪಿ.ರಾಮತೀರ್ಥ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಸ್ಕಾಂ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ವಿದ್ಯುತ್ ಸುರಕ್ಷತೆ ಕುರಿತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳಿಗೆ ಜಾನುವಾರು ಕಟ್ಟದಂತೆ ತಿಳಿಸಬೇಕು. ಯಾವುದೇ ಕಾರಣದಿಂದ ವಿದ್ಯುತ್ ತಂತಿಗಳು ತುಂಡಾಗಿ ಕೆಳಗೆ ಬಿದ್ದಿದ್ದಲ್ಲಿ ಮುಟ್ಟಲು ಹೋಗಬಾರದು. ಆ ಕುರಿತು ಬೆಸ್ಕಾಂ ಸಿಬ್ಬಂದಿ ಗಮನಕ್ಕೆ ತರಬೇಕು ಎಂದು ಹೇಳಿದರು.
ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನ ಪಡೆಯುವುದು ಎರಡನೆಯದು. ಬಹುಮಾನ ಬರದ ವಿದ್ಯಾರ್ಥಿಗಳು ಬೇಸರ ಪಡದೆ, ಮುಂದೆ ಉತ್ತಮ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಎಂಜಿನಿಯರ್ಗಳಾದ ನಂಜುಂಡೇಶ್ವರ, ಸುದರ್ಶನ್, ಬಿಆರ್ಸಿ ಸಂಯೋಜಕಿ ಕೆ.ಸಿ.ವಸಂತ ಇದ್ದರು.
ಸಂದೇಶ ಫೌಂಡೇಶನ್ ನ ಕ್ರಿಸ್ಮಸ್ ಸಂದೇಶ : ಶಾಂತಿಗಾಗಿ ಕರೆಯೊಂದಿಗೆ ಕ್ರಿಸ್ಮಸ್ ಆಚರಣೆ
ಸಂತೋಷ ಮತ್ತು ಸದ್ಭಾವನೆಯ ಉತ್ಸಾಹದಲ್ಲಿ, ಸಂದೇಶ ಫೌಂಡೇಶನ್ ಸ್ನೇಹಿತರು ಮತ್ತು ಹಿತೈಷಿಗಳನ್ನು ಯೇಸುವಿನ ಜನನದ ಸಮಯದಲ್ಲಿ ಘೋಷಿಸಿದ ಸಮಯಾತೀತ ಸಂದೇಶವನ್ನು ಪ್ರತಿಬಿಂಬಿಸಲು ಆಹ್ವಾನಿಸುತ್ತದೆ – ಸದ್ಭಾವನೆಯಜನರಿಗೆ ಶಾಂತಿಯ ಘೋಷಣೆ.ಈ ಕ್ರಿಸ್ಮಸ್, ಪ್ರತಿ ವ್ಯಕ್ತಿಯೊಳಗೆ ನೆಲೆಸಿರುವ ಶಾಂತಿಗಾಗಿ ಆಳವಾದ ಮತ್ತು ಸಾರ್ವತ್ರಿಕ ಹಂಬಲವನ್ನು ಪ್ರತಿಷ್ಠಾನವು ಒತ್ತಿಹೇಳುತ್ತದೆ. ಮಾನವೀಯತೆಯ ಹೃದಯಭಾಗದಲ್ಲಿ ಆಂತರಿಕ ಸಾಮರಸ್ಯಕ್ಕಾಗಿ ಆಳವಾದ ಹಾತೊರೆಯುವಿಕೆ, ವಿಭಜನೆಗಳ ಸೇತುವೆಯ ಹಂಬಲ ಮತ್ತು ಕಲಹಗಳಿಂದ ಮುಕ್ತವಾದ ಜಗತ್ತಿನಲ್ಲಿ ಸಹಬಾಳ್ವೆಯ ಆಕಾಂಕ್ಷೆ ಇರುತ್ತದೆ.ಶಾಂತಿಗಾಗಿ ಈ ಹಂಚಿಕೆಯ ಬಯಕೆಯುಇಂದು ಸಮಾಜಗಳು ಎದುರಿಸುತ್ತಿರುವ ಅಸಂಖ್ಯಾತ ಸವಾಲುಗಳಿಗೆ ಪರಿಹಾರಗಳನ್ನು ತೆರೆಯುವ ಕೀಲಿಯಾಗಿ ಕಾರ್ಯ ನಿರ್ವಹಿಸುತ್ತದೆ. ಶಾಂತಿಯು ಹಂಚಿಕೆಯ ಆದ್ಯತೆಯಾದಾಗ, ಅದು ಸಮುದಾಯಗಳು, ಸಂಸ್ಕøತಿಗಳು ಮತ್ತು ರಾಷ್ಟ್ರಗಳನ್ನು ಒಗ್ಗೂಡಿಸುವ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ವಿಭಜನೆ, ತಾರತಮ್ಯ ಮತ್ತು ಘರ್ಷಣೆಯಿಂದ ಉಂಟಾದ ಗಾಯಗಳಿಗೆ ಚಿಕಿತ್ಸೆ ನೀಡುವ ಮುಲಾಮು ಆಗಿ ಕಾರ್ಯ ನಿರ್ವಹಿಸುತ್ತದೆ. ಶಾಂತಿಯ ಸಾರವನ್ನು ಅಳವಡಿಸಿ ಕೊಳ್ಳುವುದು ಸಮಾಜದ ಮುರಿತಗಳನ್ನು ಸರಿಪಡಿಸಲು ಮತ್ತು ತಿಳುವಳಿಕೆ, ಸಹಾನುಭೂತಿ ಮತ್ತು ಸಹಯೋಗವು ಅಭಿವೃದ್ಧಿ ಹೊಂದುವ ಪರಿಸರವನ್ನು ಬೆಳೆಸುವ ಪರಿವರ್ತಕ ಶಕ್ತಿಯನ್ನು ಹೊಂದಿದೆ.ಆಂತರಿಕ ಶಾಂತಿಗಾಗಿ ಅನ್ವೇಷಣೆಯ ಪರಸ್ಪರ ಸಂಬಂಧವನ್ನು ಗುರುತಿಸುವುದು ಮತ್ತು ಸಾಮಾಜಿಕ ಸಾಮರಸ್ಯದ ವಿಶಾಲ ಅನ್ವೇಷಣೆಯು ಸಮಗ್ರ ಪರಿಹಾರಗಳಿಗೆ ದಾರಿ ಮಾಡಿಕೊಡುತ್ತದೆ. ಸಾಮಾಜಿಕ ಅಸಮಾನತೆಗಳು, ಅಸಹಿಷ್ಣುತೆ ಮತ್ತು ಅನ್ಯಾಯದಂತಹ ಸಮಸ್ಯೆಗಳನ್ನು ಪರಿಹರಿಸುವುದ ುಎಲ್ಲಾ ಹಂತಗಳಲ್ಲಿ ಶಾಂತಿಯನ್ನು ಬೆಳೆಸುವ ಅಡಿಪಾಯದ ತತ್ವದಲ್ಲಿ ಬೇರೂರಿದಾಗ ಹೆಚ್ಚು ಸಾಧಿಸಬಹುದಾಗಿದೆ. ಕ್ರಿಸ್ಮಸ್ನ ಉತ್ಸಾಹವನ್ನು ಆಚರಿಸಲು ನಾವು ಒಟ್ಟುಗೂಡುತ್ತಿರುವಾಗ, ಸಂದೇಶ ಪ್ರತಿμÁ್ಠನವು ತಮ್ಮೊಳಗೆ ಶಾಂತಿಯನ್ನು ಘೋಷಿಸುವ ಅವರ ಬದ್ಧತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಶಾಂತಿಯು ಸರ್ವೋಚ್ಚವಾದ ಜಗತ್ತನ್ನು ನಿರ್ಮಿಸುವತ್ತ ಈ ಉದಾತ್ತ ಪ್ರಯತ್ನವನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತದೆ. ಈ ಋತುವಿನ ಮಾರ್ಗದರ್ಶಿ ಬೆಳಕು ನಮ್ಮ ಮಾರ್ಗವನ್ನು ಬೆಳಗಿಸಲಿ ಮತ್ತು ನಾವು ಹೋದಲ್ಲೆಲ್ಲಾ ಸೌಹಾರ್ದತೆ ಮತ್ತು ಸಹಾನುಭೂತಿಯನ್ನು ಹರಡುವ ಶಾಂತಿಯ ರಾಯಭಾರಿಗಳಾಗಿರಲು ನಮ್ಮನ್ನು ಪ್ರೇರೇಪಿಸಲಿ.
ನಿಮ್ಮೆಲ್ಲರಿಗೂ ಬೆಚ್ಚನೆಯ ಪ್ರೀತಿ ಹಾಗೂ ಸಂತೋಷ ತುಂಬಿರುವ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
ಶುಭಾಶಯಗಳೊಂದಿಗೆ,
ಡಾ. ಸುದೀಪ್ ಪೌಲ್, MSFS, ನಿರ್ದೇಶಕ, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ಅಂಡ್ಎಜುಕೇಶನ್
ಪತ್ರಿಕಾ ಪ್ರಕಟಣೆ
ಸಂದೇಶ ಫೌಂಡೇಶನ್ ಫಾರ್ ಕಲ್ಚರ್ಅಂಡ್ಎಜುಕೇಶನ್ಕರ್ನಾಟಕರಾಜ್ಯಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರುಅವರೊಂದಿಗೆ ತಿಳುವಳಿಕೆ ಒಪ್ಪಂದವನ್ನು ಮಾಡಿಕೊಂಡಿದೆ.
ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದೊಂದಿಗೆ ಸಹಯೋಗವನ್ನು ಘೋಷಿಸಲು ಸಂತೋಷವಾಗಿದೆ, ಇದು ಪ್ರಮಾಣಪತ್ರ ಮತ್ತು ಡಿಪೆÇ್ಲೀಮಾ ಕಾರ್ಯಕ್ರಮಗಳ ಶ್ರೇಣಿಯನ್ನು ಒದಗಿಸುವಗುರಿಯನ್ನು ಹೊಂದಿದೆ. ಜನವರಿಯಲ್ಲಿ ಪ್ರಾರಂಭವಾಗುವ ಪಾಲುದಾರಿಕೆಯು ಮುಂದಿನ ದಿನಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಪರಿಚಯಿಸಲು ನಿರೀಕ್ಷಿಸುತ್ತದೆ.
ಸಹಕಾರಿಕಾರ್ಯಕ್ರಮದ ಅವಲೋಕನ:
ಈ ಕೆಳಗಿನ ಪ್ರಮಾಣಪತ್ರ ಕೋರ್ಸುಗಳನ್ನು ನೀಡಲು ಉದ್ದೇಶಿಸಲಾಗಿದೆ:
•ಹಿಂದೂಸ್ತಾನಿಗಾಯನದಲ್ಲಿ ಸರ್ಟಿಫಿಕೇಟ್ಕೋರ್ಸ್
•ಕೀಬೋಡ್ರ್ನಲ್ಲಿಸರ್ಟಿಫಿಕೇಟ್ಕೋರ್ಸ್
•ಮಾಧ್ಯಮದಲ್ಲಿಸರ್ಟಿಫಿಕೇಟ್ಕೋರ್ಸ್
•ಪಾಶ್ಚಾತ್ಯನೃತ್ಯದಲ್ಲಿಸರ್ಟಿಫಿಕೇಟ್ಕೋರ್ಸ್
•ಭರತನಾಟ್ಯದಲ್ಲಿಸರ್ಟಿಫಿಕೇಟ್ಕೋರ್ಸ್
•ಭರತನಾಟ್ಯದಲ್ಲಿಡಿಪೆÇ್ಲಮಾ
ನಿಯಮಗಳು ಮತ್ತು ಷರತ್ತುಗಳು: ಈ ತಿಳುವಳಿಕೆ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಸಂದೇಶ ಫೌಂಡೇಶನ್ ಈ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಮಾನ್ಯತೆ ಅಡಿಯಲ್ಲಿ ನಡೆಸುತ್ತದೆ.ಮೈಸೂರಿನಲ್ಲಿರುವ ರಾಜ್ಯ ನಡೆಸುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ,ಇದು ಸಂಗೀತ, ಪ್ರದರ್ಶನ ಕಲೆಗಳು ಮತ್ತು ನೃತ್ಯದ ಕೋಸ್ರ್ಗಳನ್ನು ನೀಡಲು ಕರ್ನಾಟಕದಾದ್ಯಂತ ನ್ಯಾಯವ್ಯಾಪ್ತಿಯನ್ನು ಹೊಂದಿದೆ.
ಪ್ರಮುಖ ನಿಬಂಧನೆಗಳು: ವಿಶ್ವವಿದ್ಯಾನಿಲಯ ಮಾರ್ಗಸೂಚಿಗಳ ಅನುಸರಣೆ: ಕಾರ್ಯಕ್ರಮಗಳು ವಿಶ್ವವಿದ್ಯಾಲಯವು ನಿಗದಿಪಡಿಸಿದ ವೇಳಾಪಟ್ಟಿಗಳು ಮತ್ತು ಮಾರ್ಗಸೂಚಿಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರುತ್ತವೆ.
ಪ್ರವೇಶ ನಿರ್ವಹಣೆ: ಪ್ರವೇಶಗಳು ಅರ್ಹತಾ ಮಾನದಂಡಗಳಿಗೆ ಕಟ್ಟುನಿಟ್ಟಾದ ಅನುಸರಣೆಯೊಂದಿಗೆ ವಿಶ್ವವಿದ್ಯಾಲಯ-ಅನುಮೋದಿತ ಸೇವನೆಯ ಮಿತಿಯೊಳಗೆ ಇರುತ್ತದೆ.
ಅರ್ಹ ಅಧ್ಯಾಪಕರು: ಉನ್ನತ ಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ಅಧಿಕಾರಿಗಳು ನಿಗದಿಪಡಿಸಿದ ಮಾನದಂಡಗಳನ್ನು ನೇಮಕಾತಿಗಳು ಅನುಸರಿಸುತ್ತವೆ.
ಮ್ಯಾನೇಜಿಂಗ್ಕೌನ್ಸಿಲ್ನ ಸಂವಿಧಾನ: ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಹಣಕಾಸಿನ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ವ್ಯವಸ್ಥಾಪಕ ಮಂಡಳಿಯನ್ನು ಸ್ಥಾಪಿಸಲಾಗುತ್ತದೆ.
ಯಾರನ್ನೆಲ್ಲ ಆಡಳಿತ ಮಂಡಳಿಯು ಒಳಗೊಂಡಿರುತ್ತದೆ:ಅಧ್ಯಕ್ಷರು, ವಿಶ್ವವಿದ್ಯಾಲಯದ ಉಪಕುಲಪತಿಗಳು, ಸದಸ್ಯರು, ರಿಜಿಸ್ಟ್ರಾರ್, ರಿಜಿಸ್ಟ್ರಾರ್ (ಮೌಲ್ಯಮಾಪನ), ಸಿಂಡಿಕೇಟ್ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳು, ವೃತ್ತಿಪರ ಸಂಸ್ಥೆಗಳ ಪ್ರತಿನಿಧಿಗಳು, ಸಂಸ್ಥೆಯ ನಿರ್ದೇಶಕರು (ಸದಸ್ಯ ಕಾರ್ಯದರ್ಶಿ)
ಹಣಕಾಸಿನ ವ್ಯವಸ್ಥೆಗಳು: ಸಂಗ್ರಹಿಸಿದ ಎಲ್ಲಾ ಶುಲ್ಕಗಳು ವಿಶ್ವವಿದ್ಯಾನಿಲಯದಿಂದಗುರುತಿಸಲ್ಪಟ್ಟ ಸಂಸ್ಥೆಯ ಹೆಸರಿನಲ್ಲಿರುತ್ತವೆ. ಸಂಸ್ಥೆಯು ಪ್ರವೇಶದಅನುಮೋದನೆಗಾಗಿ ವಿಶ್ವವಿದ್ಯಾಲಯಕ್ಕೆ ನಿಗದಿತ ಮೊತ್ತವನ್ನುರವಾನೆ ಮಾಡುತ್ತದೆ. ವಿವಿಧ ಘಟಕಗಳಿಗೆ ಶುಲ್ಕಗಳ ಆವರ್ತಕ ಪರಿಷ್ಕರಣೆಗಳನ್ನು ಸಂಗ್ರಹಿಸಿ ವಿಶ್ವವಿದ್ಯಾಲಯಕ್ಕೆರವಾನೆ ಮಾಡಲಾಗುತ್ತದೆ.
ಮಾನ್ಯತೆಅವಧಿ:ಡಿಸೆಂಬರ್ 16, 2023 ರಿಂದ ಮೂರು ಶೈಕ್ಷಣಿಕ ವರ್ಷಗಳಿಗೆ ಮಾನ್ಯತೆ ನೀಡಲಾಗುತ್ತದೆ, ಸಂಭಾವ್ಯ ನಂತರದ ನವೀಕರಣಗಳೊಂದಿಗೆ.
ಮುಕ್ತಾಯ:ಯಾವುದೇ ಪಕ್ಷವು ನಿರ್ದಿಷ್ಟ ಸಂದರ್ಭಗಳಲ್ಲಿ ಒಪ್ಪಂದವನ್ನು ಮುಕ್ತಾಯಗೊಳಿಸಬಹುದು, ನಡೆಯುತ್ತಿರುವಕೋರ್ಸುಗಳಿಗೆ ಬಾಧ್ಯತೆಗಳನ್ನು ಮುಂದುವರಿಸಬಹುದು.
ಈ ಸಹಯೋಗವುಉತ್ತಮಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಮತ್ತು ಸಾಂಸ್ಕøತಿಕ ಮತ್ತುಕಲಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವಜಂಟಿ ಬದ್ಧತೆಯನ್ನು ಸೂಚಿಸುತ್ತದೆ.ಸಂದೇಶ ಫೌಂಡೇಶನ್ ಮತ್ತುಕರ್ನಾಟಕರಾಜ್ಯಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯವು ಯಶಸ್ವಿ ಪಾಲುದಾರಿಕೆ ಮತ್ತು ವಿದ್ಯಾರ್ಥಿಗಳು ಮತ್ತು ಸಮುದಾಯದ ಮೇಲೆ ಬೀರುವ ಸಕಾರಾತ್ಮಕ ಪರಿಣಾಮವನ್ನುಕುತೂಹಲದಿಂದ ನಿರೀಕ್ಷಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: ಡಾ. ಸುದೀಪ್ ಪೌಲ್, MSFS,, ನಿರ್ದೇಶಕರು, ಸಂದೇಶ ಫೌಂಡೇಶನ್, ಮೊಬೈಲ್: 9113646986
ಜೀವನ್ಧಾರಾ ಸಮಾಜ ಸೇವಾ ಪ್ರತಿಷ್ಠಾನ, ಕುಲಶೇಖರ ಇದರ ರಜತ ಮಹೋತ್ಸವ /Jeevandhara Samaj Seva Foundation, Kulasekhara’s Silver Jubilee
ದಿನಾಂಕ 22.12.2023 ಜೀವನ್ಧಾರಾ ಸಮಾಜ ಸೇವಾ ಪ್ರತಿಷ್ಠಾನ, ಕುಲಶೇಖರ ಮಂಗಳೂರು ಇದರ ರಜತ ಮಹೋತ್ಸವದ ಸಂಬ್ರಮವನ್ನು ಸೇಕ್ರೆಡ್ ಹಾರ್ಟ್ಸ್ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಸಲಾಯಿತು. ಅಧ್ಯಕ್ಷ ಸ್ಥಾನವನ್ನು ಬೆಥನಿ ಸಂಸ್ಥೆ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿಯಾದ ಭಗಿನಿ ಸಿಸಿಲಿಯಾ ಮೆಂಡೋನ್ಸಾರವರು ಅಲಂಕರಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜೀವನ್ ಧಾರಾ ಸಮಾಜ ಸೇವಾ ಸಂಸ್ಥೆಯು ಕೈಗೊಂಡ ಕೆಲಸ ಕಾರ್ಯಗಳನ್ನು ಶ್ಲಾಭಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೌಶಲ್ಯಾಭಿವೃದ್ಧಿ ವ್ಯವಸ್ಥಾಪಕರಾದ ಶ್ರೀಮತಿ ಐರಿನ್ ರೆಬೆಲ್ಲೊರವರು ಸರಕಾರದ ವತಿಯಿಂದ ಮಹಿಳೆಯರಿಗೆ ಸ್ವ -ಉದ್ಯೋಗ ಮಾಡಲು ಸಿಗುವ ವಿವಿಧ ಯೋಜನೆಗಳ ಬಗ್ಗೆ ವಿವರಣೆ ನೀಡಿದರು. ಅನುಪಮಾ ಮಹಿಳಾ ಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕಿಯರಾದ ಶ್ರೀಮತಿ ಶಹನಾeóï ಎಂ ಇವರು ಮಹಿಳೆಯರು ದಿಟ್ಟತನದಿಂದ ತಮ್ಮ ಜೀವನವನ್ನು ರೂಪಿಸಲು ಕರೆ ನೀಡಿದರು. ಸ್ಥಳೀಯ ಕಾಪೆರ್Çರೇಟರ್ ಆದ ಶ್ರೀ ಕಿಶೋರ್ ಕೊಟ್ಟಾರಿಯವರು ಜೀವನ್ಧಾರಾ ಸಮಾಜ ಸೇವಾ ಸಂಸ್ಥೆಯ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿ ತಮ್ಮ ಸಹಾಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಜೀವನ್ಧಾರಾ ಸಮಾಜ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಭಗಿನಿ ಅನ್ನ ಮರಿಯಾರವರು ಜೀವನ್ಧಾರಾ ಸಮಾಜ ಸೇವಾ ಸಂಸ್ಥೆಯು ಕೈಗೊಂಡ ಕೆಲಸ ಕಾರ್ಯಗಳ ಬಗ್ಗೆ ಸಂಕ್ಷಿಪ್ತ ವರದಿ ನೀಡಿದರು. ಸಂಸ್ಥೆಯಲ್ಲಿ ಬಹಳಷ್ಟು ಕಾಲ ಸೇವೆಗೈದ ಭಗಿನಿಯರನ್ನು ಸನ್ಮಾನಿಸಲಾಯಿತು. ಶಾಂತಿ ಸ್ವ-ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಆಲಿಸ್ ಲೋಬೊರವರು ಕಾರ್ಯಕ್ರಮವನ್ನು ನಿರೂಪಿಸಿದರು. ತದನಂತರ ಮಹಿಳೆಯರು ಹಾಗೂ ಸೇಕ್ರೆಡ್ ಹಾರ್ಟ್ಸ್ ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಭಗಿನಿ ರೀನಾ ಥೋರಸ್ರವರು ವಂದನಾರ್ಪಣೆಗೈದರು. ಸುಮಾರು 200 ಮಂದಿ ಮಹಿಳೆಯರು ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಹಬೋಜನದೊಂದಿಗೆ ಮಧ್ಯಾಹ್ನ 2.00 ಗಂಟೆಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು
Silver Jubilee Celebration of Jeevandhara Social Service trust, Kulshekar, Mangaluru
Dated 22.12.2023 Silver Jubilee Celebration of Jeevandhara Samaj Seva Foundation, Kulasekhara Mangalore was held at Sacred Hearts Primary School Auditorium at 10.30 am. Sister Cecilia Mendonsara, Regional Director of Bethany Institute Mangaluru Province, graced the chair and in her presidential speech praised the work done by Jeevan Dhara Social Service Organization. Mrs. Irene Rebello, Skill Development Manager of Dakshina Kannada district, who arrived as the chief guest, gave an explanation about the various schemes offered by the government to women for self-employment. Ms. Shahnaeóï M, Editor-in-Chief of Anupama Mahila Monthly called upon women to boldly shape their lives. Mr. Kishore Kottari, a local cooperator, expressed his appreciation for the work of Jeevandhara Samaj Seva Sansthan and promised his cooperation. Sister Anna Maria, Secretary of Jeevandhara Samaj Seva Foundation, gave a brief report about the work undertaken by Jeevandhara Samaj Seva Foundation. Sisters who have served the organization for a long time were felicitated. Ms. Alice Lobo, a member of Shanti Self Help Society, graced the program. Later entertainment was arranged by women and school children of Sacred Hearts. Bhagini Reena Thoras gave the eulogy. About 200 women and others participated in this program. The program was concluded at 2.00 PM with a Sahabhojana
ಅಮಾಸೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಶ್ರಮದಾನ ಹಾಗೂ ಯಂತ್ರದ ಮೂಲಕ ಸ್ವಚ್ಚತಾ ಕಾರ್ಯಕ್ರಮ
ಸರಕಾರಿ ಶಾಲೆಯ ಅಭಿವ್ರಧ್ಧಿ ಹಾಗೂ ಉಳುವಿಕೆಗಾಗಿ, ಜಿಲ್ಲಾ ಅಖಿಲ ಕರ್ನಾಟಕ ಜನಜಾಗ್ರತ ವೇದಿಕೆ ಉಡುಪಿ ಜಿಲ್ಲೆ ಹಾಗೂ ನವಜೀವನ ಸಮಿತಿ, ಅಮಾಸೆಬೈಲು ವಲಯ – ಹಾಲಾಡಿ ವಲಯ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಅಮಾಸೆಬೈಲು ವಲಯ-ಹಾಲಾಡಿ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವ್ರದ್ದಿ ಯೋಜನೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಅಮಾಸೆಬೈಲು ವಲಯ, ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಪೋಷಕರು -ಇವರ ಸಹಭಾಗಿತ್ವದೊಂದಿಗೆ ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ), ಗ್ರಾಮ ಪಂಚಾಯತ್ ಅಮಾಸೆಬೈಲು, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ (ರಿ), ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ (ರಿ), ಅಮಾಸೆಬೈಲು -ಇವರ ಆರ್ಥಿಕ ಸಹಕಾರದೊಂದಿಗೆ ಪರಮ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಪ್ರೌಢಶಾಲೆ, ಅಮಾಸೆಬೈಲು ದಿನಾಂಕ: 17/12/2023ನೇ ರವಿವಾರದಂದು ಶ್ರಮದಾನ ಹಾಗೂ ಯಂತ್ರದ ಮೂಲಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಅಮಾಸೆಬೈಲು ಸರಕಾರಿ ಪ್ರೌಢಶಾಲೆ ಶ್ರಮದಾನ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮೀಣಾಭಿವ್ರದ್ದಿ ಯೋಜನೆಯ ಯೋಜನಾಧಿಕಾರಿಯಾದ ನಾರಾಯಣ ಪಾಲನ್ ಉದ್ಘಾಟನೆ ಮಾಡಿ ಸರಕಾರಿ ಶಾಲೆಗಳ ಅಭಿವ್ರದ್ದಿಗಾಗಿ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರು ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕ, ಆಟದ ಮೈದಾನ ಸಮತಟ್ಟು, ಆವರಣ ಗೋಡೆ ರಚನೆ, ಪಿಠೋಪಕರಣಗಳ ಖರೀದಿ, ಹಾಗೂ ಹತ್ತು ಹಲವುÀ ಶಾಲೆಯ ಕೆಲಸಕ್ಕಾಗಿ ಸಹಾಯ ಧನ ಮಾಡಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣ ರಂಗದಲ್ಲಿ ಕ್ರಾಂತೀಕಾರರಾಗಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಟ್ಟಾಡಿ ಮಲ್ಲಿಕಾ ಕುಲಾಲ್ತಿ ವಹಿಸಿದರು. ಜಿಲ್ಲಾ ಜನಜಾಗ್ರತಿ ವೇದಿಕೆಯ ಅಧ್ಯಕ್ಷರಾದ ರಟ್ಟಾಡಿ ನವೀನಚಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಸರಕಾರಿ ಶಾಲೆಗಳನ್ನು ಉಳಿಸುವುದು, ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿದು ಬಂದು ತಾವು ಉತ್ತಮ ರೀತಿಯಲ್ಲಿ ಶಾಲೆಯ ಸ್ವಚ್ಚತೆ ಮಾಡಿದ ವಿಧ್ಯಾಭಿಮಾನಿಗಳಿಗೆ ಮನಃಪೂರ್ವಕ ವಂದನೆಗಳನ್ನು ಸಲ್ಲಿಸಿ ಇಂತ ಪುಣ್ಯಕಾರ್ಯದಲ್ಲಿ ಭಾಗವಹಿಸಿ, 42 ತೆಂಗಿನ ಮರಕ್ಕೆ ಬುಡ ಮಾಡಿ ಶಾಲೆಯ ಸ್ವಚ್ಚತೆ ಕೆಲಸವನ್ನು ಮಾಡಿದ ವಿಧ್ಯಾಭಿಮಾನಿಗಳಿಗೆ ಸರಕಾರಿ ಶಾಲೆಯ ಉಳಿವಿಕೆ ಹಾಗೂ ಅಭಿವ್ರಧ್ಧಿ ದ್ರಷ್ಠಿಯಿಂದ ತಮ್ಮಗೆ ಅಭಿನಂಧನೆಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಅಶೋಕ ಕುಮಾರ ಕೊಡ್ಗಿ ಅದ್ಯಕ್ಷರು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಎ. ಶಂಕರ್ ಐತಾಳ್ ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವ್ರದ್ಧಿ ಅದ್ಯಕ್ಷರು, ಸದಾನಂದ ಶೆಟ್ಟಿ ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ, ರವಿ ಪೂಜಾರಿ ಕಾರ್ಯದರ್ಶಿ ಸಾರ್ವಜನಿಕ ಶಾರದೋತ್ಸವ ಸಮಿತಿ ಅಮಾಸೆಬೈಲು, ಹಾಗೂ ಗ್ರಾಮಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ ರಟ್ಟಾಡಿ, ಕ್ರಷ್ಣ ಪೂಜಾರಿ ಅಮಾಸೆಬೈಲು, ಪುಷ್ಪ ಕಾಮತ್, ಗಣೇಶ್ ಶೆಟ್ಟಿ ಮಠದಜೆಡ್ಡು ಭಾಗವಹಿಸಿದರು. ಜಿಲ್ಲಾ ಜನಜಾಗ್ರತಾ ವೇದಿಕೆಯ ಸದಸ್ಯರಾದ ರಟ್ಟಾಡಿ ಸತ್ಯನಾರಾಯಣ ರಾವ್, ಬೋಜು ರಾಜ್ ಪೂಜಾರಿ ವಲಯ ಅದ್ಯಕ್ಷರು ಅಮಾಸೆಬೈಲು ವಲಯ, ಸದಾಶಿವ ಶೆಟ್ಟಿ ಜಡ್ಡಿನಗದ್ದೆ ಅಧ್ಯಕ್ಷರು ಶಾಲಾಭಿವ್ರಧ್ಧಿ ಸಮಿತಿ ಸರಕಾರಿ ಪ್ರೌಢಶಾಲೆ ಅಮಾಸೆಬೈಲು, ಹಾಗೂ ಗೋಪಾಲ ಕಾಂಚನ್ ಜನಜಾಗ್ರತಿ ವೇದಿಕೆ ಸದಸ್ಯರು ಸಿಧ್ಧಾಪುರ, ಹಾಗೂ ಶೌರ್ಯ ವಿಪತ್ ತಂಡದ ರತ್ನ ಹೆಂಗವಳಿ,್ಳ ಗೀತಾ ಆಚಾರ್ಯ ಸೇವಾ ಪ್ರತಿನಿಧಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಮಾಸೆಬೈಲು ವಲಯ, ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾನ್ಯ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಇವರು ಶ್ರಮದಾನ ಸ್ಥಳಕ್ಕೆ ಭೇಟಿ ನೀಡಿ ಆದ ಶ್ರಮದಾನ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರವೀಣ್ ಮೇಲ್ವಿಚಾರಕರು ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಇವರು ಸ್ವಾಗತಿಸಿದರು ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ತಿಮ್ಮಪ್ಪ ಅವರು ಶ್ರಮದಾನ ಕೆಲಸ ಮಾಡಿದವರ ಬಗ್ಗೆ ಶಾಲೆಯ ಪರವಾಗಿ ಅಭಿನಂದನೆ ಸಲ್ಲಿಸಿ ವಂದನಾರ್ಪಾಣೆ ಮಾಡಿದರು.
ಶ್ರೀನಿವಾಸಪುರ : ಪೊಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ
ಶ್ರೀನಿವಾಸಪುರ 1 : ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನವು ಅಮೂಲ್ಯವಾದದು . ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಯುವಕರು ಮಾದಕ ವ್ಯಸನಿಗಳು ಆಗುತ್ತಿದ್ದು, ಇದರಿಂದ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಇನ್ಸಪೆಕ್ಟರ್ ಎಂ.ಬಿ.ಗೊರವನಕೊಳ್ಳಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಟ್ಟಹವ್ಯಾಸಗಳಿಗೆ ಮಾರುಹೋಗುತ್ತಿರುವವರು ಎಚ್ಚರಿಕೆಯಿಂದ ಇರುಬೇಕು . ದುಶ್ಚಟಗಳಿಂದ ಆರೋಗ್ಯವು ಕೆಡುವುದಲ್ಲದೇ ಆರೋಗ್ಯವಂತ ಜೀವನವನ್ನೇ ಹಾಳು ಮಾಡಿಕೊಂಡತ್ತೆ. ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳುಮಾಡಿಕೊಂಡ ಮೇಲೆ ಸಮಾಜವು ನಿಮ್ಮನ್ನು ಗೌರವಿಸುವುದಿಲ್ಲ ಎಂದರು.
ನಿಮ್ಮ ಗ್ರಾಮ ಅಥವಾ ನಿಮ್ಮ ಗೊತ್ತಿದ್ದ ಯಾವದೇ ಒಂದು ಸ್ಥಳಗಳಲ್ಲಿ ಮರಾಟ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದ್ದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ ನಾವು ಕಾನೂನು ರೀತಿಯ ಕ್ರಮ ಜರುಗಿಸುತ್ತೇವೆ. ಯಾವುದೇ ಕಾರಣಕ್ಕೂ ನಿಮ್ಮ ಹೆಸರನ್ನು ಬಹಿರಂಗಪಡಿಸುವುದಿಲ್ಲ.
ವಿದ್ಯಾರ್ಥಿನೀಯರು ನಿಮಗೆ ಯಾವುದೇ ರೀತಿಯಾದ ಕಿರುಕುಳ ನೀಡುವುದಾಗಲಿ ಅಥವಾ ಹಿಂಬಾಲಿಸಿ ಹಿಂಸೆ ನೀಡಲು ಮುಂದಾದಂತಹ ಸಂದರ್ಭದಲ್ಲಿ ಕೂಡಲೇ ನಿಮ್ಮ ಪೋಷಕರಿಗೆ, ಅಥವಾ ಪೊಲೀಸ್ಠಾಣೆಗೆ ನೇರವಾಗಿ ದೂರು ನೀಡಬಹುದು . ನಿಮಗೆ ಯಾವುದೇ ಸಮಾಜಘಾತಕ ಮಾಹಿತಿಗಳು ಇದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಎಂದರು.
ವಿಶೇಷವಾಗಿ ಗಂಗೋತ್ರಿ ಕಾಲೇಜಿನಲ್ಲಿ ಮೊಬೈಲ್ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು, ಪಕ್ಕದ ಅಂಗಡಿಗಳಲ್ಲಿ ಮೊಬೈಲ್ಗಳನ್ನು ಕೊಡುತ್ತಿರುವುದು ಗಮನಕ್ಕೆ ಬಂದಿದೆ ಆ ಅಂಗಡಿಗಳ ಮೇಲೆ ದಾಳಿ ಮಾಡಿ ಮೊಬೈಲ್ಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರ ವಿರುದ್ಧವೂ ಸಹ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಮಯದಲ್ಲಿ ಪಟ್ಟಣದ ಪದವಿ ಕಾಲೇಜು, ಆದರ್ಶ ಪ್ರೌಡಶಾಲೆ, ಮ್ಯಾಂಗೋವ್ಯಾಲಿ ಶಾಲೆಗಳಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗಂಗೋತ್ರಿ ಕಾಲೇಜಿನ ಅಧ್ಯಕ್ಷ ಮುರಳಿನಾಥ್ ಮಾತನಾಡಿ ವಿದ್ಯಾರ್ಥಿ ಜೀವನವು ಅಮೂಲ್ಯವಾದದು ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಾಣಿಸರಾಗದೆ . ಆರೋಗ್ಯ ವಂತ ಜೀವನವನ್ನು ನಡೆಸುತ್ತಾ, ಜೀವನದ ಗುರಿಯನ್ನು ಸಾಧಿಸುವಂತೆ ಕರೆನೀಡಿದರು.
ಪಿಎಸ್ಐ ರಮಾದೇವಿ, ಎಎಸ್ಐ ನಂಜುಂಡಪ್ಪ, ಗಂಗೋತ್ರಿ ಕಾರ್ಯದರ್ಶಿ ಅಮರನಾಥ್, ಪ್ರಾಂಶುಪಾಲ ಎಲ್.ಸುಬ್ರಮಣಿ, ಉಪನ್ಯಾಸಕರಾದ ಸಿ.ಎಸ್.ಶ್ರೀವಿದ್ಯಾವೆಲ್ಲಾಲ್, ನರೇಶ್, ಶಿವಾರೆಡ್ಡಿ, ಮಂಜುಳ, ನಾಗೇಶ್, ಹಸೇನ್, ವಿಜಯ್ಪ್ರಭಂಜನ್, ನಂದೀಶ್, ರೂಪ, ಎಸ್.ಸಿ.ಬಾಲಕೃಷ್ಣ, ಅಶೋಕ್, ಮೋಹನ್, ನಂದೀಶ್, ಬೈರೆಡ್ಡಿ, ನಾಗರಾಜ್ ಇದ್ದರು.
ಮಂಗಳೂರು ಶಕ್ತಿನಗರದಲ್ಲಿ ಸೌಹಾರ್ದ ಕ್ರಿಸ್ಮಸ್ ಸಂಭ್ರಮ
ಸಂತ ಮದರ್ ತೆರೇಸಾ ವಿಚಾರ ವೇದಿಕೆ,ಮದರ್ ಆಫ್ ಗಾಡ್ ಚರ್ಚ್ ಮರಿಯಗಿರಿ,ಸಿಓಡಿಪಿ ಸಂಸ್ಥೆ ನಂತೂರು,ಜ್ಣಾನದೀಪ ಮಹಿಳಾ ಮಂಡಳಿ,ಜ್ಯೋತಿ ಸ್ತ್ರಿ ಶಕ್ತಿ ಸಂಘ,ದೀಪಾ ಫ್ರೆಂಡ್ಸ್ ಕ್ಲಬ್,ಶಕ್ತಿ ಫ್ರೆಂಡ್ಸ್ ಕ್ಲಬ್,ಪದವು ಫ್ರೆಂಡ್ಸ್ ಕ್ಲಬ್,ವಿದ್ಯಾದೀವಿಗೆ ಏಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ಸೌಹಾರ್ದ ಕ್ರಿಸ್ಮಸ್ ಸಂಭ್ರಮವನ್ನು ಶಕ್ತಿನಗರದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಮದರ್ ಆಫ್ ಗಾಡ್ ಚರ್ಚ್ ನ ಧರ್ಮಗುರುಗಳಾದ ವಂ.ಫಾ.ಜೆರಾಲ್ಡ್ ಡಿಸೋಜರವರು ಮಾತನಾಡುತ್ತಾ, ಇಡೀ ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಸಾರಿ ಶಾಂತಿದೂತರಾಗಿ ಮೆರೆದ ಯೇಸುಕ್ರಿಸ್ತರ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ.ಮನುಷ್ಯ ಸಂಬಂಧಗಳಿಗೆ ಬೆಲೆ ಇಲ್ಲದ ಈ ಕಾಲದಲ್ಲಿ ಮಾನವೀಯ ಮೌಲ್ಯಗಳು ಉತ್ತುಂಗಕ್ಕೇರಬೇಕಾದರೆ ಎಲ್ಲಾ ಧರ್ಮಗಳ ಹಬ್ಬಗಳನ್ನು ಸರ್ವ ಧರ್ಮದ ಜನತೆ ಒಂದಾಗಿ ಆಚರಿಸಿದರೆ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹಿರಿಯ ಚಿಂತಕರೂ,ನಿವ್ರತ್ತ ಪ್ರಾಂಶುಪಾಲರಾದ ಡಾ.ವಸಂತ ಕುಮಾರ್ ರವರು ಮಾತನಾಡುತ್ತಾ, ದ್ವೇಷ ತುಂಬಿದ ನಾಡಿನಲ್ಲಿ ಪ್ರೀತಿ ಹಂಚುವ ಕಾರ್ಯ ಭರದಿಂದ ಸಾಗಬೇಕಾಗಿದೆ.ಪ್ರತಿಯೊಬ್ಬರ ಬದುಕು ಹಸನಾಗಬೇಕಾದರೆ ಪ್ರೀತಿ ಶಾಂತಿ ನೆಲೆಗೊಂಡರೆ ಮಾತ್ರ ಸಾಧ್ಯ.ಈ ನಿಟ್ಟಿನಲ್ಲಿ ಹಮ್ಮಿಕೊಂಡ ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ ಹ್ರದಯ ಹ್ರದಯಗಳನ್ನು ಬೆಸೆಯುವಲ್ಲಿ ನಾಂದಿ ಹಾಡಲಿ ಎಂದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಮಾತನಾಡಿ, ಜಾತಿ ಧರ್ಮಗಳ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳುಗೆಡಹುವ ಸಮಾಜ ಘಾತುಕ ಶಕ್ತಿಗಳ ವಿರುದ್ದ ಮನಸು ಮನಸುಗಳ ಮಧ್ಯೆ ಸೇತುವೆ ನಿರ್ಮಾಣ ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರತಿಯೊಂದು ಧರ್ಮದ ಹಬ್ಬಗಳು ಆಯಾಯ ಧರ್ಮದ ಜನತೆಗೆ ಸೀಮಿತವಾಗದೆ ಸರ್ವ ಧರ್ಮದ ಜನತೆ ಒಗ್ಗೂಡಿ ಆಚರಿಸಿದಾಗ ಮಾತ್ರವೇ ಭವ್ಯ ಭಾರತದ ಪರಂಪರೆ ನೆಲೆಗೊಳ್ಳಲು ಸಾಧ್ಯ ಎಂದು ಹೇಳಿದರು.
ಸಿಓಡಿಪಿ ಸಂಸ್ಥೆಯ ಧರ್ಮಗುರುಗಳಾದ ಫಾ.ವಿನ್ಸೆಂಟ್ ಡಿಸೋಜ, ಸ್ಥಳೀಯ ಕಾರ್ಪೊರೇಟರ್ ಗಳಾದ ಕಿಶೋರ್ ಕೊಟ್ಟಾರಿ, ವನಿತಾ ಪ್ರಸಾದ್ ರವರು ಶುಭಕೋರಿ ಮಾತನಾಡಿದರು. ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಫಾ.ಸುದೀಪ್ ಪೌಲ್, ಫಾ.ಅನಿಲ್ ಐವನ್ ಫೆರ್ನಾಂಡೀಸ್,ಪ್ರಕಾಶ್ ಗಟ್ಟಿ,ದೇವಾನಂದ,ಮೇರಿ ಪಿಂಟೋ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಧೀರ್ಘ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿದಿರುವ ಪುಷ್ಪಾ ಬಿ ಶೆಟ್ಟಿ ಹಾಗೂ ನಾಲ್ಯಪದವು ಶಾಲೆಯ ಉನ್ನತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿರುವ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಮತಿ ದ್ರಾಕ್ಷಾಯಿಣಿ ವೀರೇಶ್ ಯವರನ್ನು ಸನ್ಮಾನಿಸಲಾಯಿತು.
ಯುವ ವಕೀಲರಾದ ಮನೋಜ್ ವಾಮಂಜೂರುರವರು ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು.ಪ್ರಾರಂಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ರೊನಾಲ್ಡ್ ಟೋನಿ ಪಿಂಟೋರವರು ಸ್ವಾಗತಿಸಿದರೆ,ಕೊನೆಯಲ್ಲಿ ಅಂಗನವಾಡಿ ಶಿಕ್ಷಕಿಯಾದ ಪುಷ್ಪಾ ಶೆಟ್ಟಿಯವರು ವಂದಿಸಿದರು. ರೊನಾಲ್ಡ್ ಟೋನಿ ಪಿಂಟೋ ಕಾರ್ಯಕ್ರಮದ ಸಂಯೋಜಕರು ಉಪಸ್ಥಿತರಿದ್ದರು.
ತೀರ್ಥ ಪ್ರಸಾದ ಸೇವನೆ: ಮಹಿಳೆಯೊಬ್ಬರ ಮಾತೇ ನಿಂತು ಹೋಯ್ತು
ಹುಬ್ಬಳ್ಳಿ: ಅಪರಿಚಿತನೊಬ್ಬ ದೇವರ ಹೆಸರೇಳಿಕೊಂಡು ಕೊಟ್ಟ ತೀರ್ಥ ಹಾಗೂ ಪ್ರಸಾದ ಸೇವಿಸಿದ ಮಹಿಳೆಯೊಬ್ಬರ ಮಾತೇ ನಿಂತುಹೋದ ಘಟನೆ ಕುಂದಗೋಳದ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಭಿಕ್ಷುಕನೊಬ್ಬ ಕೊಟ್ಟ ಭಸ್ಮ ಹಾಗೂ ಹಾಲನ್ನು ಸೇವಿಸಿದ ಗ್ರಾಮದ ಮಹಿಳೆ ಮೀನಾಕ್ಷಿ ಎಂಬುವರಿಗೆ ಮಾತು ನಿಂತುಹೋಗಿದೆ. ಮನೆ ಬಳಿ ಬಂದಿದ್ದ ಭಿಕ್ಷುಕನಿಗೆ ಮಹಿಳೆ 5 ರೂ. ನೀಡಿದ್ದಾರೆ. ಈ ವೇಳೆ ಆತ ಪ್ರಸಾದ ಹಾಗೂ ತೀರ್ಥ ಎಂದು ಭಸ್ಮ ಮತ್ತು ಹಾಲನ್ನು ನೀಡಿದ್ದಾನೆ. ಇದನ್ನು ಸೇವಿಸಿದ ಬಳಿಕ ಮಹಿಳೆಗೆ ಈ ಸಮಸ್ಯೆ ಉಂಟಾಗಿದೆ. ಮಹಿಳೆಯನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಬಳಿಕವೂ ಮಹಿಳೆಗೆ ಮಾತನಾಡಲು ಬರುತ್ತಿಲ್ಲ. ಗ್ರಾಮಸ್ಥರು. ಭಿಕ್ಷುಕನ ಹುಡುಕಾಟ ನಡೆಸಿದ್ದಾರೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.