ಮನೆಗಳಲ್ಲಿ ಕಳ್ಳತನಕ್ಕೆ ಪೊಲೀಸಪ್ಪನೆ ಸಹಕಾರ ನೀಡುತಿದ್ದ ಇದೀಗ ಸಿಕ್ಕಿ ಬಿದ್ದು ಅಮಾನತು

ಬೆಂಗಳೂರು: ಖಾಲಿ ಇರುವ ಮನೆಗಳಲ್ಲಿ ಕಳ್ಳತನಕ್ಕಾಗಿ ಮನೆಗಳ ವಿವರ ನೀಡಿ ಸಹಕಾರ ನೀಡಿದ ಆರೋಪದಡಿ ಪೊಲೀಸ್ ಕಾನ್ಸ್ಟೇಬಲನ್ನು ಅಮಾನತುಗೊಳಿಸಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ  ನಡೆದಿದೆ. ಇದು ಬೇಲಿಯೆ ಹೋಲ ಮೆಯ್ದಂತೆ ಆಗಿದೆ.

ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ಯಲ್ಲಪ್ಪ ಎಂಬ ಕಾನ್ಸ್ಟೇಬಲ್ ಕಳ್ಳರ ಗ್ಯಾಂಗ್ ಜೊತೆ ಸೇರಿ ಕಳ್ಳತನಕ್ಕೆ ಸಾಥ್ ನೀಡುತಿದ್ದರು. ಕೆಲದಿನಗಳ ಹಿಂದೆ ಮನೆ ಕಳ್ಳತನ ಮಾಡಿದ ಪ್ರಕರಣವೊಂದರಲ್ಲಿ ಬನಶಂಕರಿ ಪೊಲೀಸರು ಕಳ್ಳರನ್ನು ಸೆರೆಹಿಡಿದು ವಿಚಾರಣೆ ನಡೆಸಿದಾಗ. ಈ ವೇಳೆ ಕಳ್ಳತನದಲ್ಲಿ ಅದೇ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಯಲ್ಲಪ್ಪನವರ ಪಾತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

ಕಳ್ಳತನ ಮಾಡುವುದು ಹೇಗೆ? ತಪ್ಪಿಸಿಕೊಳ್ಳುವುದು ಹೇಗೆ? ಎಲ್ಲಿ ಕಳ್ಳತನ ಮಾಡಬೇಕು ಖಾಲಿ ಇರುವ ಮನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಯಲ್ಲಪ್ಪ, ಕಳ್ಳತನ ಮಾಡಿದ ಹಣದಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು. ಈ ಆಧಾರದ ಮೇಲೆ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ಯಲ್ಲಪ್ಪನವರನ್ನು ವಿಚಾರಣೆ ನಡೆಸಿ ಅಮಾನತುಗೊಳಿಸಿದ್ದಾರೆ

ಬೆಂಗಳೂರಿಗೆ ವಸತಿ ಬೆಲೆ ಏರಿಕೆಯ ಜಾಗತಿಕ ಸೂಚ್ಯಂಕದಲ್ಲಿ 22 ನೇ ಸ್ಥಾನ, ಮುಂಬೈ 19 ನೇ ಸ್ಥಾನಕ್ಕೆ ನೆಗೆತ

ನವದೆಹಲಿ: ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ವಾಸದ ಮನೆಗಳಿಗೆ ಭಾರಿ ಬೇಡಿಕೆ ಇದ್ದು. ಈ ಕ್ಯಾಲೆಂಡರ್‌ ವರ್ಷದ ಎರಡನೇ ತ್ರೈಮಾಸಿದ ಏಪ್ರಿಲ್ ನಿಂದ ಜೂನ್ ವರೆಗಿನ ಅವಧಿಯಲ್ಲಿ ವಸತಿ ಬೆಲೆ ಏರಿಕೆಯ ಜಾಗತಿಕ (ಪ್ರಪಂಚದ) ಸೂಚ್ಯಂಕದಲ್ಲಿ ಮುಂಬೈ ಮತ್ತು ಬೆಂಗಳೂರು ಕ್ರಮವಾಗಿ 19 ಮತ್ತು 22 ನೇ ಸ್ಥಾನಕ್ಕೆ ನೆಗೆದಿವೆ

ನೈಟ್‌ ಫ್ರಾಂಕ್‌ ಎಂಬ ರಿಯಲ್‌ ಎಸ್ಟೇಟ್‌ ಕನ್ಸಲ್ಟೆನ್ಸಿ ಸಂಸ್ಥೆ ಪ್ರಕಟಿಸುವ ಗ್ಲೋಬಲ್‌ ರೆಸಿಡೆನ್ಷಿಯಲ್‌ ಸಿಟೀಸ್‌ ಇಂಡೆಕ್ಸ್‌ ನ ಕಳೆದ ಬಾರಿಯ ಸೂಚ್ಯಂಕ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿತ್ತು ಇದೀಗ ಬೆಂಗಳೂರು 22ನೇ ಸ್ಥಾನಕ್ಕೆ ಏರಿದೆ. ಮುಂಬೈ 95ನೇ ಸ್ಥಾನದಿಂದ 19ನೇ ಸ್ಥಾನಕ್ಕೆಜಿಗಿತ ಕಂಡಿದೆ. ಕೆಲವೇ ಕೆಲವು ವರ್ಷಗಳಲ್ಲಿ ಮುಂಬಯ್ ಕಿಂತಲೂ ಬೆಂಗಳೂರು ಹೆಚ್ಚು ಜಿಗಿತವಾಗುವ ಸಾಧ್ಯತೆಗಳು ಕಂಡು ಬರುತ್ತವೆ.

ಬೆಂಗಳೂರಿನಲ್ಲಿ ಕಳೆದ ಪರ್ಷದ ಏಪ್ರಿಲ್ ನಿಂದ ಜೂನ್ ವರೆಗಿನ್ ಕ್ವಾರ್ಟರ್ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಪಸತಿ ಬೆಲೆಗಳಲ್ಲಿ ಶೇ. 5.3ರಷ್ಟು ಏರಿಕೆ ಆಗಿದೆ. ಇನ್ನೂ ನವದೆಹಲಿಯಲ್ಲಿ ನಿವೇಶನಕ್ಕೆ ಶೇ. 4.5 ರಷ್ಟು ಬೆಲೆ ಏರಿಕೆಯಾಗಿದ್ದು ಜಾಗತಿಕ ಪಟ್ಟಿಯಲ್ಲಿ 25ನೇ ಸ್ಥಾನದಲ್ಲಿದೆ. ಚೆನ್ನೈನಲ್ಲಿ ಶೇ. 2.5ರಷ್ಟು ಬೆಲೆ ಏರಿಕೆಯಾಗಿದ್ದು, ಜಾಗತಿಕ ಪಟ್ಟಿಯಲ್ಲಿ 39ನೇ ಸ್ಥಾನದಲ್ಲಿದೆ. ಕೋಲ್ಕತಾದಲ್ಲಿ ಶೇ. 2.5ರಷ್ಟು ಬೆಲೆ ಏರಿಕೆಯಾಗಿದ್ದು ಜಾಗತಿಕ ಪಟ್ಟಿಯಲ್ಲಿ 40ನೇ ಸ್ಥಾನದಲ್ಲಿದೆ.

ಚಂಡಮಾರುತ ಸ್ರಷ್ಟಿ ಭೀತಿ: ಕರಾವಳಿ ತೀರದಲ್ಲಿ ಮಳೆಯಾಗುವ ಸಾಧ್ಯತೆ

ಉಡುಪಿ : ಲಕ್ಷದ್ವೀಪ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗಿರುವ ಪರಿಣಾಮ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯಿದ್ದು ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಿಂಚು,ಗುಡುಗು ಸಹಿತ ಮಳೆ ಆಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದಲ್ಲಿ ಭಾರೀ ಮಳೆಯಾಗುತಿದ್ದು, ಕರ್ನಾಟಕದ ಕರಾವಳಿಗೆ ಎಲ್ಲೋ ಅಲರ್ಟ್ ನೀಡಲಾಗಿದ್ದು, ಮಂಗಳವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಂಡಮಾರುತ ಸಾಧ್ಯತೆ ಹಿನ್ನೆಲೆಯಲ್ಲಿ ನವ ಮಂಗಳೂರು ಬಂದರಿಗೆ ಸಂಬಂಧಿಸಿದಂತೆ ಹಡಗುಗಳು, ಬಂದರು. ಬಳಕೆದಾರರು, ಸ್ಟೇಕ್ ಹೋಲ್ಡರ್‌ ಗಳು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಬಂದರಿನಿಂದ ತೆರಳುವ ಹಡಗುಗಳ ಚಂಡಮಾರುತ ಸಮೀಪಿಸುವ ಮುನ್ನವೇ ಮುನ್ನೆಚ್ಚರಿಕೆಯೊಂದಿಗೆ ತೆರಳ ಬೇಕು ಎಂದು ಬಂದರು ಆಡಳಿತ ಸೂಚನೆ ನೀಡಿದೆ. ಕರಾವಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮಂಗಳವಾರ ಚಂಡಮಾರುತ ಸಾಧ್ಯತೆ ಹಿನ್ನಲೆಯಲ್ಲಿ ನವ ಮಂಗಳೂರು ಬಂದರಿಗೆ ಸಂಬಂಧಿಸಿದಂತೆ ಹಡಗುಗಳು, ಬಂದರು ಬಳಕೆದಾರರು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಹಾಗೂ ನವಮಂಗಳೂರು ಬಂದರಿನಲ್ಲಿ ಎಲ್ಲಾ ರೀತಿಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗುವುದು ಬಂದರಿನಿಂದ ತೆರಳುವ ಹಡಗುಗಳ ಚಂಡಮಾರುತ ಸಮೀಪಿಸುವ ಮುನ್ನವೇ ಮುನ್ನೆಚ್ಚರಿಕೆಯೊಂದಿಗೆ ತೆರಳಬೇಕು ಎಂದು ಬಂದರು ಆಡಳಿತ ಸೂಚನೆ ನೀಡಿದೆ.

      ನಮ್ಮ ಕರಾವಳಿಯಲ್ಲಿ ಕೆಲವಡೆ ನಿನ್ನೆ ರಾತ್ರಿ ಗುಡುಗು ಮಿಂಚು ಬಡಿದು ಹಲವಡೆ ಮನೆಗಳಿಗೆ ಹಾನಿಯಾಗಿದೆ. ಕಾರ್ಕಳದ ಪಾಜಿನಾಡ್ಕದ ವಾಲೇರಿಯನ್ ಮಚಾದೊ ಅವರ ಮನೆ ಮತ್ತು ಪೆರ್ಡೂರು ಪಾಡಿಗಾರಿನ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.

    ಕುಂದಾಪುರ ಭಾಗದ ಸಿದ್ದಾಪುರದಲ್ಲೂ ಸಿಡಿಲು ಸಹಿತ ಮಳೆಯಾಗಿದೆ. ಕುಂದಾಪುರ ನಗರದಲ್ಲಿ ದಟ್ಟ ಮೋಡದ ವಾತವರಣ ಇದ್ದರೂ, ಸಣ್ಣ ಮಳೆಯಾಗಿದೆ.

ಹವಾಮಾನ ಇಲಾಖೆ ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಬೆಳ್ಳಿಹಬ್ಬ- ಭವ್ಯವಾದ ಉದ್ಘಾಟನಾ ಮತ್ತು ವಿಧ್ಯುಕ್ತ ಸಮಾರಂಭ / Father Muller Medical College Silver Jubilee- Grand Opening and Ceremonial Ceremony

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ 16 ಅಕ್ಟೋಬರ್ 2023 ರಂದು ಭವ್ಯವಾದ ಉದ್ಘಾಟನಾ ಮತ್ತು ವಿಧ್ಯುಕ್ತ ಸಮಾರಂಭದಲ್ಲಿ ಬೆಳ್ಳಿ ಮಹೋತ್ಸವದ ಗಂಟೆಗಳನ್ನು ಬಾರಿಸಿತು. ಈ ಮೂಲಕ ವೈದ್ಯಕೀಯ ಕಾಲೇಜಿನ ಪದವಿ ಪೂರ್ವ ಕಾರ್ಯಕ್ರಮ ಆರಂಭವಾಗಿ 25 ವರ್ಷ ಕಳೆದಿರುವುದು ಬೆಳಕಿಗೆ ಬಂದಿದೆ. ಅಪರೂಪದಲ್ಲಿ ಫಾದರ್ ಮುಲ್ಲರ್‌ನಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮದ ನಂತರ ಯುಜಿ ಕಾರ್ಯಕ್ರಮವು ಪ್ರಾರಂಭವಾಯಿತು. ಈ ದಿನ ಎಂಬಿಬಿಎಸ್ ವಿದ್ಯಾರ್ಥಿಗಳ ಬೆಳ್ಳಿಹಬ್ಬದ ಬ್ಯಾಚ್ ಮುಲೇರಿಯನ್ ಫೋಲ್ಡ್‌ಗೆ ದೀಕ್ಷೆ ನೀಡಲಾಯಿತು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕಾಲೇಜಿನವರು ದಿಟ್ಟ ಮತ್ತು ಸ್ಪೂರ್ತಿದಾಯಕ ಸ್ವಾಗತವನ್ನು ವ್ಯಕ್ತಪಡಿಸಿದರು. ಅವರು MBBS ಕಾರ್ಯಕ್ರಮದ ಮುಖ್ಯಾಂಶಗಳು ಮತ್ತು ಹೋರಾಟಗಳ ಕುರಿತು ವಿವರಿಸಿದರು, ಸಮಾಜದಲ್ಲಿ ಗುರುತಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದು ಅಪೇಕ್ಷಣೀಯ ಶೈಕ್ಷಣಿಕ ಹೂಡಿಕೆಯಾಗಿದೆ.

ಡೀನ್ ಎಫ್‌ಎಂಎಂಸಿ ಡಾ ಆಂಟೋನಿ ಸಿಲ್ವನ್ ಡಿಸೋಜಾ ಅವರು ವೈದ್ಯಕೀಯ ಕಾಲೇಜಿನ ಭವಿಷ್ಯದ ಪ್ರಯತ್ನಗಳು ಮತ್ತು ಮುಂದಿನ ಶತಮಾನಕ್ಕೆ ಐಕಾನ್ ಆಗಿರುವ ದೊಡ್ಡ, ಜೆನ್ ಆಲ್ಫಾ ಶಿಕ್ಷಣ ಮತ್ತು ಆಡಳಿತಾತ್ಮಕ ಬ್ಲಾಕ್‌ಗಾಗಿ ಮ್ಯಾನೇಜ್‌ಮೆಂಟ್, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ತಂದರು.

ಮುಖ್ಯ ಅತಿಥಿಗಳಾದ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಘನಾ ಪಿ ಕುಮಾರ್ ಅವರು ವೈದ್ಯರಿಗೆ ಮತ್ತು ಪೊಲೀಸರಿಗೆ ದಾಖಲೆಗಳ ಪ್ರಾಮುಖ್ಯತೆಯೊಂದಿಗೆ ತಮ್ಮ ನಿದರ್ಶನಗಳನ್ನು ವಿವರಿಸಿದರು. ಪ್ರಿಸ್ಕ್ರಿಪ್ಷನ್‌ಗಳು ಸ್ಫುಟವಾಗಿರಬೇಕು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಒಬ್ಬ ಸಾಮಾನ್ಯ ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದು ವೈದ್ಯರಿಗೆ ಸ್ವಾಭಾವಿಕವಾಗಿರಬೇಕು. ಔಷಧ ಮತ್ತು ಅದರ ಪ್ರಗತಿಗೆ ನಿರಂತರ ಅಪ್‌ಡೇಟ್ ಮತ್ತು ಅಪ್‌ಗ್ರೇಡ್ ಅಗತ್ಯವಿದೆ. ಫಾದರ್ ಮುಲ್ಲರ್ ಅವರ ಹಳೆಯ ವಿದ್ಯಾರ್ಥಿಯಾಗಿ ಅವರು ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ನಂತರ ಅವರು ನಾಗರಿಕ ಸೇವೆಗಳಿಗೆ ಸೇರಿದರು. ಹೀಗಾಗಿ ಹೊಸ ಯುಗ್ ವಿದ್ಯಾರ್ಥಿಗಳನ್ನು ದೊಡ್ಡ ಕನಸು ಕಾಣುವಂತೆ ಪ್ರೋತ್ಸಾಹಿಸಿದರು. ನಿಮ್ಮ ಹೆತ್ತವರ ಸಹಾಯದಿಂದ ದೊಡ್ಡ ಕನಸುಗಳನ್ನು ಕಾಣಿರಿ, ಅವರ ಕನಸುಗಳು ನಿಮ್ಮಲ್ಲಿ ನಿಜವಾಗುತ್ತವೆ.

ಡಾಕ್ಟರ್ ನಾಗೇಶ್ ಕೆಆರ್ (ಫೊರೆನ್ಸಿಕ್ ಮೆಡಿಸಿನ್) ಅವರು ವೈದ್ಯರಿಗೆ ಗೌರವ ಮತ್ತು ಗೌರವವನ್ನು ವಿದ್ಯಾರ್ಥಿಗಳ ಮೇಲೆ ಸ್ಥಾಪಿಸಿದರು. ವೈಟ್ ಕೋಟ್ ಸಮಾರಂಭವು ಔಷಧದ ಸ್ಟ್ರೀಮ್‌ಗೆ ಹೊಸದಾಗಿ ಸೇರ್ಪಡೆಗೊಂಡವರು ತಮ್ಮ ಸುತ್ತಲಿನ ಹೊದಿಕೆಯನ್ನು ಗೌರವಿಸುವ ಒಂದು ಭಾಗವಾಗಿದೆ, ಇದು ಶುದ್ಧತೆ ಮತ್ತು ಸ್ಪಷ್ಟತೆಯನ್ನು ಸಂಕೇತಿಸುತ್ತದೆ.

ಎಂಬಿಬಿಎಸ್ ಕಾರ್ಯಕ್ರಮದ 25 ವರ್ಷಗಳನ್ನು ಗುರುತಿಸಲು ಹಳೆಯ ವಿದ್ಯಾರ್ಥಿಗಳ ಬ್ಯಾಚ್ ಪ್ರತಿನಿಧಿಗಳು 25 ಮೇಣದಬತ್ತಿಗಳೊಂದಿಗೆ ಮರವನ್ನು ಬೆಳಗಿಸಿದರು, ಅಲ್ಲಿ ಎಲ್ಲಾ 25 ಬ್ಯಾಚ್ ಪ್ರತಿನಿಧಿಗಳು ತಮ್ಮ ಅಲ್ಮಾ ಮೇಟರ್‌ನಿಂದ ಕರೆಗೆ ಬಂದರು.
ಕಾಲೇಜಿನ ಏಕತೆ ಮತ್ತು ವೈವಿಧ್ಯತೆಯನ್ನು ಸಾರುವ 25 ವರ್ಷಗಳ ಎಂಬಿಬಿಎಸ್ ಥೀಮ್ ಸಾಂಗ್ ಅನ್ನು ಸಹ ಬಿಡುಗಡೆ ಮಾಡಲಾಯಿತು.

ಮಂಗಳೂರಿನ ಬಿಷಪ್ ಮತ್ತು ಎಫ್‌ಎಂಸಿಐ ಅಧ್ಯಕ್ಷ ಮೋಸ್ಟ್ ರೆ.ಡಾ.ಪೀಟರ್ ಪೌಲ್ ಸಲ್ಡಾನ್ಹಾ ಮಾತನಾಡಿ, ಇಡೀ ಫಾದರ್ ಮುಲ್ಲರ್ ದೈವಿಕ ಒಳ್ಳೆಯತನ ಮತ್ತು ನಮ್ರತೆಯನ್ನು ಪ್ರತಿಧ್ವನಿಸಿದರು, ಪ್ರವೇಶದ ಹಾದಿಯು ದೈವಿಕ ನೆಲೆಯಾದ ಪ್ರಾರ್ಥನಾ ಮಂದಿರಕ್ಕೆ ಕಾರಣವಾಗುತ್ತದೆ.
ಇಲ್ಲಿ ಕೆಲಸ ಮಾಡುವ ಎಲ್ಲಾ ಜನರ ಮೇಲೆ ದೈವಿಕ ಬೆಳಕಿನ ಉಪಸ್ಥಿತಿಯು ಹೊಳೆಯುತ್ತದೆ. ಅಧ್ಯಾಪಕರು, ಸಿಬ್ಬಂದಿ ಮತ್ತು ರೋಗಿಗಳು ಖಂಡಿತವಾಗಿಯೂ ಶಾಶ್ವತವಾದ ಪ್ರಭಾವವನ್ನು ರಚಿಸುತ್ತಾರೆ ಆದರೆ ಇಲ್ಲಿ ಶಾಶ್ವತವಾದ ಪ್ರಭಾವವನ್ನು ಬಿಡುವುದು ನಿಮ್ಮ ಜವಾಬ್ದಾರಿಯಾಗಿದೆ. 1880 ರಲ್ಲಿ ಪ್ರಾರಂಭವಾದ ಈ ಆಸ್ಪತ್ರೆಯು ಕಂಕನಾಡಿಗೆ ಸಮಾನಾರ್ಥಕವಾಗಿದೆ, ಇದು ಈ ಸಂಸ್ಥೆಗಳಿಂದಾಗಿ ಎತ್ತರಕ್ಕೆ ಏರಿತು. ಎಫ್‌ಎಂಸಿಐ ಬ್ಯಾನರ್‌ಗಳ ಅಡಿಯಲ್ಲಿ ಯಾವುದೇ ಕಾಲೇಜು ಯಾವುದಕ್ಕೂ ಕೊರತೆಯಿಲ್ಲ, ಹೆಚ್ಚಿನ ನೈತಿಕ ಮತ್ತು ನೈತಿಕ ಮಾನದಂಡಗಳನ್ನು ಹೊಂದಿಸಲಾಗಿದೆ.

ವೇದಿಕೆಯಲ್ಲಿ ಫಾದರ್ ಅಜಿತ್ ಬಿ ಮೆನೆಜಸ್ ಅವರು ಅತಿಥಿಗಳು ಮತ್ತು ಸದಸ್ಯರಿಗೆ 25 ವರ್ಷಗಳ ಸ್ಮರಣಿಕೆಯನ್ನು ನೀಡಿದರು ಮತ್ತು ಎಫ್‌ಎಂಎಂಸಿಯ ಯುಜಿ ಕಾರ್ಯಕ್ರಮದ ರಜತ ಮಹೋತ್ಸವದ ಆಚರಣೆಯ 25 ವರ್ಷಗಳ ಲೋಗೋವನ್ನು ನೆರವೇರಿಸಿದರು.

ಡಾ.ಗಣೇಶ್ ಎಂ.ಕೆ (ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್) ವಂದಿಸಿದರು. ಡಾ ಜಾಯ್ಲೀನ್ ಡಿ’ಅಲ್ಮೇಡಾ (OBGYN) ಕಾರ್ಯಕ್ರಮವನ್ನು ನಿರೂಪಿಸಿದರು. ಫಾದರ್ ಮುಲ್ಲರ್ ಸೆಂಟಿನರಿ ಸೊಸೈಟಿಯ ಸದಸ್ಯರು, ಸಲಹಾ ಮಂಡಳಿ, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷ ಆಹ್ವಾನಿತರು ಎಂಬಿಬಿಎಸ್ ವಿದ್ಯಾರ್ಥಿಗಳ ರಜತ ಮಹೋತ್ಸವ ಬ್ಯಾಚ್‌ನ ಹೊಸ ಸೇರ್ಪಡೆಗೊಂಡವರ ಪೋಷಕರು.

Father Muller Medical College Silver Jubilee- Grand Opening and Ceremonial Ceremony

The Father Muller Medical College rang it’s silver Jubilee bells on 16 October 2023 in a grand inaugural and ceremonial event. This brings to light the 25 years of commencement of the under graduate programme of the medical College. Though in a rarity the UG programme commenced after the Post Graduate programme at Father Muller. The day marked the intiation of the silver Jubilee batch of MBBS students into the mullerian fold too.
A bold and inspiring welcome was voiced by the Director of the Father Muller Charitable Institutions Rev. Fr Richard Aloysius College. He briefed on highlights and struggles of the MBBS programme coming to light, making it a desirable educational investment by students wanting toake a mark in the society.

Dean FMMC Dr Antony Sylvan D’Souza brought about the future endeavours of the medical College and the aspirations of the management, faculty and students for a bigger, gen alpha education cum administrative block that will be an icon for the next century to come.

The chief guest Ms Ghana P Kumar, Deputy Superintendent of Police, Puttur Sub division related her instances with the importance of documentation both for a doctor and same for a police. Prescriptions should be legible not decipherable and making a comman man a human should natural to a doctor. Medicine and it’s advances needs constant updating and upgrading. As a alumni from Father Muller she pursued post graduation in Pathology and thereafter she joined the Civil Services . She thus encouraged the new ug students to dream big. Dream big with the help of your parents whose dreams come to reality in you.

The honours and respect to the Doctors Apron was instituted by Dr Nagesh KR (forensic medicine) upon the students. The White Coat ceremony is a part where the new joinees into the medicine stream respects the drape around them which symbolises purity and clarity.

To mark the 25 years of the MBBS programme a tree was lite by the alumni batch representatives with 25 candles marking yet another fete where all 25 batch representatives came in on call from their Alma Mater.
The 25 years of MBBS theme song was also released which brings in the unity and diversity of the college.

Most Rev. Dr Peter Paul Saldanha, Bishop of Mangalore and President of FMCI in his address said that the whole Father Muller echoed the goodness and humility of the divine, the path of entrance leads to the chapel, the home of the Divine.
The presence of the Divine Light shines on all the people who work here. A lasting impression will surely be created by the faculty, staff and patients but its your responsibility to leave a lasting impression here. This hospital which began in 1880 is synonymous with Kankanady which got elevated because of this instutions. No one college under the FMCI banners lacks anything, high moral and ethical standards are set.

Fr Ajith B Menezes presented the guests and members on the dais the 25 year memento and officiated the 25 year logo of the Silver Jubilee celebration of the UG programme of FMMC.

Dr Ganesh MK (Surgical Gastroenterologist) presented the vote of thanks. Dr Joylene D’Almeida (OBGYN) compeered the event. Members of the Father Muller Centenary Society, advisory board, faculty and staff were part of the event. Special invitees were the parents of the new joinees of the Silver Jubilee batch of MBBS students.

ಕಥೊಲಿಕ್ ಸಭಾ -ಮಂಗಳೂರು ಸಿಟಿ ವಲಯದ ಬೆಳ್ಳಿ ಹಬ್ಬದ ಸಮಾರಂಭ ಕಾರ್ಯಕ್ರಮ/ Catholic Sabha Mangalore Pradesh(R)-City Deanery Silver Jubilee Celebration

ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ.) *ಸಿಟಿ ವಲಯ* ದ *ಬೆಳ್ಳಿ ಹಬ್ಬ* ದ ಸಮಾರಂಭ ಆದಿತ್ಯವಾರ ದಿನಾಂಕ 15.10.2023 ರಂದು ಸಂಜೆ 4:30 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಇವರ ಸಾರಥ್ಯದಲ್ಲಿ *ದಿವ್ಯ ಬಲಿ ಪೂಜೆ* ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದಲ್ಲಿ ನಡೆಯಿತು. 6:00 ಗಂಟೆಗೆ *ಸಭಾ ಕಾರ್ಯಕ್ರಮ* ವು ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಕಥೊಲಿಕ್ ಸಭಾ ಸಿಟಿ ವಲಯ ಅಧ್ಯಕ್ಷರಾದ ಶ್ರೀ ವಿಲ್ಫ್ರೆಡ್ ಆಲ್ವಾರಿಸ್, ಮುಖ್ಯ ಅತಿಥಿಗಳಾಗಿ ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್‌ನ ಧರ್ಮಗುರು ವಂ| ಫಾದರ್ ಜೇಮ್ಸ್ ಡಿಸೋಜ, ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜಾ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಆಂಜೆಲೋರ್‌ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಫಾದರ್ ವಿಲಿಯಂ ಮಿನೇಜಸ್, ಕೇಂದ್ರೀಯ ಸಮಿತಿಯ ಹಾಗೂ ಸಿಟಿ ವಲಯದ ಕಾರ್ಯದರ್ಶಿಯಾದ ಶ್ರೀಮತಿ ವಿಲ್ಮಾ ಮೊಂತೇರೊ,  ಅತಿಥಿಗಳಾಗಿ ಸಿಟಿ ವಲಯದ ಸ್ಥಾಪಕ ಅಧ್ಯಕ್ಷರಾದ ಶ್ರೀ ಮಾರ್ಟಿನ್ ಡಿಸೋಜಾ, ವಾಮಂಜೂರ್ ಚರ್ಚ್‌ನ ಉಪಾಧ್ಯಕ್ಷರಾದ ಶ್ರೀ ಚಾರ್ಲ್ಸ್ ಪಾಯ್ಸ್, ಕಥೊಲಿಕ್ ಸಭಾ, ವಾಮಂಜೂರ್ ಘಟಕದ ಅಧ್ಯಕ್ಷರಾದ ಶ್ರೀ ಪ್ಯಾಟ್ರಿಕ್ ಲೋಬೊ, ಬೆಳ್ಳಿ ಹಬ್ಬದ ಸಂಚಾಲಕರಾದ ಶ್ರೀ ಪ್ರಶಾಂತ್ ಸಲ್ಡಾನ್ಹಾ ಭಾಗವಹಿಸಿದ್ದರು.

25 ವರ್ಷಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಎಲ್ಲಾ ಸಿಟಿ ವಲಯದ ಅಧ್ಯಕ್ಷರು,ಕಾರ್ಯದರ್ಶಿ ಹಾಗೂ ಘಟಕದ ಅಧ್ಯಕ್ಷರನ್ನು ಸನ್ಮಾನಿಸಿ ಗೌರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಎಲ್ಲಾ ಘಟಕಗಳ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದ ಕೊನೆಯಲ್ಲಿ ಬೆಳ್ಳಿ ಹಬ್ಬದ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು.

Catholic Sabha Mangalore Pradesh(R)-City Deanery Silver Jubilee Celebration

Catholic Sabha, Mangalore Pradesh(R)- City Deanery, celebrated their Silver Jubilee on Sunday, October 15, 2023 at St. Joseph The Worker Church, Vamanjoor, Mangalore. Thanksgiving mass was celebrated at 4:30 pm with the main celebrant Bishop Emeritus of Mangalore Diocese, Aloysius Paul D’Souza, accompanied by Rev. Fr. James D’Souza, Rev. Fr. William Menezes ,Rev. Fr. Clifford Fernandes, Rev. Fr. Dominic Vas, Rev. Fr. Andrew Leo D’Souza, Rev. Fr. Melwyn Pinto, Rev. Fr. Andrew D’Souza Rev. Fr. Joseph Mascarenhas and Rev. Fr. Ivan D’Souza. Stage and cultural programme was held at 6:00 p.m. in Vamanjoor Church Sabha Bhavan.

Mr. Wilfred Alvares, Bondel, the President of Catholic Sabha, City Deanery, presided over the celebration with the Chief Guests Rev. Fr. James D’Souza, the Vicar Forane and Parish Priest of Vamanjoor Church, Mr. Alwyn D’Souza, Panir, President, Central Catholic Sabha, Mangalore, Rev. Fr. William Menezes, Parish Priest of Angelore Church and Spiritual Director of the City Deanery and Mrs. Vilma Monteiro, General Secretary, Central Catholic Sabha, Mangalore. They were accompanied by the Guests of Honor, including the Founder President, Mr. Martin R. D’Souza, Mr. Charles Pais, Vice President of the Parish Council, Vamanjoor Church, Mr Patrick Lobo, President of the local body and Mr. Prashanth Saldanha, convener of the programme.

All the presidents and secretaries and spiritual director who served Catholic Sabha, Mangalore – City Deanery, over the past 25 years were honored during the stage President Mr Wilfred Alvares welcomed the guest, Secretary Mrs Wilma Monteiro presented the 25 year report and convener Mr Prashanth Saldanha thanked the gathering.

Stage programme was followed by cultural programme performed by all the 10 units under the city deanery. The programme was concluded by a fellowship meal. Mr Victor Correa and Mr Sunil Pinto compèred the stage and cultural program. City varado catholic Sabha unit spiritual directors guest priest central council president, office bearers and large number of people were gathered and witnessed the celebration.

ಅಖಿಲ ಭಾರತ ರಜತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೆ ‘ವಿಶನ್ ಕೊಂಕಣಿ’ ಮೈಕಲ್ ಡಿ’ಸೊಜಾ ಸಾರಥ್ಯ / Michael D Souza of VISION KONKANI to lead Reception Committee All India Konkani Sammelan

ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಶ್ರೇಯೋಭಿವೃದ್ದಿಗಾಗಿ ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಅವಿರತ ಶ್ರಮಿಸುತ್ತಿರುವ ಅನಿವಾಸಿ ಉದ್ಯಮಿ ಮತ್ತು ಸಮಾಜ ಕಲ್ಯಾಣ ಕಾರ್ಯಕರ್ತ ಶ್ರೀ ಮೈಕಲ್ ಡಿಸೊಜಾ ಅವರು ನವೆಂಬರ್ 4 ಮತ್ತು 5 ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಆವರಣದಲ್ಲಿ ಬಸ್ತಿ ವಾಮನ ಶೆಣೈ ವೇದಿಕೆಯಲ್ಲಿ ನಡೆಯುವ 25 ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದಾರೆ.

ಪ್ರಸ್ತುತ ಅಬುದಾಬಿಯಲ್ಲಿ ನೆಲೆಸಿರುವ ಶ್ರೀ ಮೈಕಲ್ ಡಿಸೊಜಾ, ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ ಇವರ ಅಭಿಮಾನಿ ಹಾಗೂ ನಿಕಟವರ್ತಿ ಆಗಿದ್ದವರು. ದೇಶ – ವಿದೇಶಗಳಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಕಾರ್ಯಕ್ರಮಗಳಿಗೆ ನಿರಂತರ ಪೋಶಕರಾಗಿದ್ದ ಶ್ರೀ ಮೈಕಲ್ ಡಿಸೊಜಾ, ಕೊಂಕಣಿ ಲೇಖಕರಿಗೆ ಪುಸ್ತಕ ಪ್ರಕಟಿಸಲು 40 ಲಕ್ಷ ರುಪಾಯಿ ಅನುದಾನ, ಕೊಂಕಣಿ ಗೀತ ಸಾಹಿತ್ಯ, ಸಂಗೀತ ಸಂಯೋಜನೆ ಮತ್ತು ಪ್ರಸ್ತುತಿಗಾಗಿ ಸುಮಾರು 10 ಲಕ್ಷ ಹಾಗೂ ಕೊಂಕಣಿ ಸಿನೆಮಾಕ್ಕಾಗಿ 25 ಲಕ್ಷ ಅನುದಾನವನ್ನು ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಈಗಾಗಲೇ ಮುಡಿಪಾಗಿಟ್ಟಿದಾರೆ. ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗಾಗಿ 25 ಕೋಟಿ ರುಪಾಯಿ ಮೌಲ್ಯದ ’ಎಡುಕೇರ್’ ವಿದ್ಯಾರ್ಥಿನಿಧಿಯನ್ನು ಸ್ಥಾಪಿಸಿದ್ದು ಸಿ.ಒ.ಡಿ.ಪಿ. ಸಂಸ್ಥೆಯ ಮೂಲಕ ಈ ವರೆಗೆ ಸುಮಾರು 3,500 ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಪ್ರಯೋಜನ ಪಡೆದಿರುತ್ತಾರೆ.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ. ನಂದಗೋಪಾಲ ಶೆಣೈ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಗೋಕುಲದಾಸ ಪ್ರಭು ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿದ್ದು, ಕೊಂಕಣಿ ಕವಿ ಟೈಟಸ್ ನೊರೊನ್ಹಾ ಕಾರ್ಯದರ್ಶಿ ಮತ್ತು ಪತ್ರಕರ್ತ ಎಚ್. ಎಮ್. ಪೆರ್ನಾಲ್ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ನಲಂದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ, ಕವಿ ಮೆಲ್ವಿನ್ ರೊಡ್ರಿಗಸ್, ಅಖಿಲ ಭಾರತ ಕೊಂಕಣಿ ಪರಿಷದ್ ಇದರ ಕಾರ್ಯಧ್ಯಕ್ಷ ಚೇತನ್ ಆಚಾರ್ಯ ಮತ್ತು ಕೊಂಕಣಿ ಶಿಕ್ಷಣ ತಜ್ಞ ಡಾ| ಕಸ್ತೂರಿ ಮೋಹನ್ ಪೈ ಇವರ ಮಾರ್ಗದರ್ಶನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉಪಸಮಿತಿಗಳನ್ನು ರಚಿಸಲಾಗಿದ್ದು, ಆರ್ಥಿಕ ಸಮಿತಿಗೆ ಸ್ಟೀಫನ್ ಪಿಂಟೊ, ಬೆಂದೂರ್ ಮತ್ತು ಓಸ್ವಲ್ಡ್ ರೊಡ್ರಿಗಸ್, ಬಿಜೈ, ಊಟೋಪಚಾರ ಸಮಿತಿಗೆ ವಿಶ್ವ ಕೊಂಕಣಿ ಕೇಂದ್ರ, ವಸತಿ ಸಮಿತಿಗೆ ವಿನ್ಸೆಂಟ್ ಪಿಂಟೊ, ಫ್ಲೊಯ್ಡ್ ಕಿರಣ್ ಮತ್ತು ಜೆರಿ ಕೊನ್ಸೆಸೊ, ನೋಂದಣಿ ಮತ್ತು ಸ್ವಯಂ ಸೇವಕ ಸಮಿತಿಗೆ ಶ್ರೀಮತಿ ಸುಚಿತ್ರಾ ಶೆಣೈ ಮತ್ತು ಶ್ರೀಮತಿ ಫೆಲ್ಸಿ ಲೋಬೊ, ಕಾರ್ಯಕ್ರಮ ಸಮಿತಿಗೆ ಡಾ| ಹನುಮಂತ್ ಚೋಪ್ಡೆಕರ್ ಮತ್ತು ಡಾ| ಜಯಂತಿ ನಾಯ್ಕ್, ವೇದಿಕೆ ನಿರ್ವಹಣಾ ಸಮಿತಿಗೆ ಅನ್ವೇಷಾ ಸಿಂಘಬಾಳ್, ಮಾಧ್ಯಮ ಸಮಿತಿಗೆ ಸ್ಟ್ಯಾನಿ ಬೇಳಾ ಮತ್ತು ಪ್ರವೀಣ್ ತಾವ್ರೊ , ಮುದ್ರಣ – ಸ್ಮರಣ ಸಂಚಿಕೆ ಸಮಿತಿಗೆ ಟೈಟಸ್ ನೊರೊನ್ಹಾ – ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Michael D Souza of VISION KONKANI to lead Reception Committee All India Konkani Sammelan

Staunch Konkani Supporter and Promoter of ‘Vision Konkani’ Programme for the all-round development of Konkani language, literature and culture Sri Michael D Souza will be leading the Reception committee of 25th All India Konkani Sahitya Sammelan as the President. CA Nandagopal Shenoy , President of World Konkani Centre and Sahitya Akademi awardee Gokuldas Prabhu will be the Vice presidents. Konkani poet and thinker Titus Noronha will be the general secretary and journalist H. M. Pernal will be the working president of the reception committee.

25th All India Konkani Sahitya Sammelan will be held at Basti Vaman Shenoy Stage in the premises of World Konkani Centre on Nov 4 & 5. About 650 delegates from various parts of India expected to attend the Sammelan, which Mangalore is hosting for the first time in the 84 years history of All India Konkani Parishad, founded in 1939 by Late Madhav Manjunath Shanbaug of Kumta.

Abu Dhabi based NRI entrepreneur and philanthropist Michael D’Souza originally hails from Puttur and is a constant supporter for Konkani activities and programmes in India and abroad. With his signature programme ‘Vision Konkani’ he has empowered Konkani writers and Artists with Konkani Book Publication Grant to the tune of Rs.40 Lakhs, Konkani Music Grant to the tune of Rs.10 Lakh and Konkani Feature Film Grant to the tune of Rs. 25 Lakh. Publication of Konkani books, Production of Music Singles, and Feature film are under process under his visionary programme VISION KONKANI. He has established EDU CARE scholarship programme for konkani speaking students for higher education under the supervision of CODP, Dioceses of Mangalore. So far 3,500 students benefited from this scholarship programme.

Various sub Committees were formed in the recently held preliminary meeting under the guidance of Sahitya Akademi Executive Council Member and convenor of Konkani Advisory Board at Sahitya Akademi, Poet Melvyn Rodrigues, Chetan Acharya, Executive President of All India Konkani Parishad and Konkani educationist Dr Kasturi Mohan Pai at Nalanda English Medium School, V T Road. Mangalore.

Stephen Pinto, Bendur and Oswald Rodrigues, Bejai will be heading the Finance Committee, World Konkani Centre will be looking after Food and Venue, Smt Suchitra S Shenoy and Smt Felcy Lobo will be leading the Front Office and Volunteer Committee, Accommodation and transport will he managed by Vincent Pinto Anjelore, Floyd Kiran Moras, Nirkan and Gerald Concesso. Dr Hanumanth Chopdekar and Dr Jayanti Naik are in charge of the Programme Committee and Smt Anwesha Singbhal will be heading the stage committee. The Media promotion Committee will be handled by Stany Bela and Praveen Tauro. Titus Noronha will be in charge of the Printing and Souvenir committee.

ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್‌ ಮಾಡಿ ಕೊಪ್ಪಳದಲ್ಲಿ ಸಾಮೂಹಿಕವಾಗಿ ಅತ್ಯಾಚಾರ

ಕೊಪ್ಪಳ: ಬಳ್ಳಾರಿಯ ಕಾಲೇಜು ವಿದ್ಯಾರ್ಥಿನಿಯನ್ನು ಆಟೋದಲ್ಲಿ ಕಿಡ್ನಾಪ್‌ ಮಾಡಿ ಕೊಪ್ಪಳಕ್ಕೆ ಕರೆತಂದು ಬಿಯರ್‌ ಕುಡಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದೆ.

ಸಣಾಪುರ ಬಳಿಯ ಹೋಟೆಲೆನಲ್ಲಿ ಅತ್ಯಾಚಾರ ಎಸಗಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರ ಪತ್ತೆಗೆ ಜಾಲಾ ಬಿಸಲಾಗಿದೆ. ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದ ಯುವತಿ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದಳು. ಈ ವೇಳೆ ಅಣ್ಣ ಬಂದಿರುವುದಾಗಿ ಹೇಳಿದಾಗ ವಿದ್ಯಾರ್ಥಿನಿ ಕಾಲೇಜಿನಿಂದ ಹೊರಗಡೆ ಹೋಗಿದ್ದಾಳೆ. ಅವಾಗ ಆರೋಪಿಗಳು ವಿದ್ಯಾರ್ಥಿನಿಯನ್ನು ಆಟೋದಲ್ಲಿ ಕಿಡ್ನಾಪ್‌ ಮಾಡಿ ಕೊಪ್ಪಳ ಜಿಲ್ಲೆಯ ಸಣಾಪುರ ಬಳಿಯ ಅಂತರಾಳ ಕೆಫೆ ಹೋಟೆಲಿಗೆ ಕರೆದೊಯ್ದಿದ್ದಾರೆ. ಬಳಿಕ ಬಿಯರ್‌ ಕುಡಿಸಿ ಮತ್ತು ಬರಿಸಿ, ನಾಲ್ವರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧ ಸಂತ್ರಸ್ತ ಯುವತಿಯು ಬಳ್ಳಾರಿ ನಗರದ
ಕೌಲ್‌ ಬಜಾರ್ನ ನವೀನ್‌, ಸಾಕೀಬ್‌, ತನು ಸೇರಿದಂತೆ ನಾಲ್ವರ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಮಾಡುತಿದ್ದಾರೆ.

ದೆವ್ವ ಬಿಡಿಸುವುದಾಗಿ ನಂಬಿಸಿ ದುಷ್ಕರ್ಮಿ 18 ರ ಯುವತಿಯ ಮೇಲೆ ಅತ್ಯಾಚಾರ

ಉತ್ತರಪ್ರದೇಶ: ದೆವ್ವ ಬಿಡಿಸುವುದಾಗಿ ಹೇಳಿ ದುಷ್ಕರ್ಮಿಯೊಬ್ಬ ಯುಪತಿ(18) ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ. ಮಿರ್ಜಾಪುರದಿಂದ ಸೀತಾಮರ್ಹಿಗೆ ಬಂದಿದ್ದ ಕುಟುಂಬವೊಂದಕ್ಕೆ ಮೋತಿಲಾಲ್‌ (52) ಎಂಬಾತ ತನ್ನನ್ನು ತಾಂತ್ರಿಕ ಎಂದು ಷರಿಚಯಿಸಿಕೊಂಡಿದ್ದಾನೆ. ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ಭೂತೋಚ್ಚಾಟನೆಯ ಮೂಲಕ ಆಕೆಯ ದೇಹದಿಂದ ಪ್ರೇತವನ್ನು ಓಡಿಸಬಹುದೆಂದು ಯುವತಿಯ ಪೋಷಕರನ್ನು ನಂಬಿಸಿದ್ದಾನೆ. ಅವರಿಂದ 4,000 ರೂ. ಪಡೆದು ಮೋತಿಲಾಲ್‌ ಆಕೆಯನ್ನು ಬೈಕಿನಲ್ಲಿ ದರ್ವಸಿ ಗ್ರಾಮದ ದೇವಸ್ಥಾನದ ಹಿಂದಿನ ಕೋಣೆಗೆ ಕರೆದೊಯ್ದು ಅಲ್ಲಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮೂರು ಗಂಟೆಗಳ ಸಂತರ ಮೋತಿಲಾಲ್‌ ಯುವತಿಯನ್ನು ಬಿಟ್ಟು, ಮರುದಿನ ಮತ್ತೆ ತನ್ನನ್ನು ಭೇಟಿ ಮಾಡಲು ಹೇಳಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಸಂತ್ರಸ್ತೆ ತನ್ನ ಕುಟುಂಬಕ್ಕೆ ವಿಷಯ ತಿಳಿಸಿದ್ದು, ಆಕೆಯ ತಂದೆ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಮೋತಿಲಾಲ್‌ನನ್ನು ಬಂಧಿಸಲಾಗಿದೆ
.

ಕಾರು ಮತ್ತು ಟ್ರಕ್‌ ನಡುವೆ ಮುಖಾಮುಖಿ ಡಿಕ್ಕಿ ಮಕ್ಕಳು ಸೇರಿ ಎಂಟು ಮಂದಿ ಸಾವು

ಚೆನ್ನೈ: ಕಾರು ಮತ್ತು ಟ್ರಕ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿದಂತೆ ಓಟ್ಟು ಎಂಟು ಮಂದಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುವಣ್ಣಾಮಲೈ-ಬೆಂಗಳೂರು ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದವರು ತಮಿಳುನಾಡಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಬೆಂಗಳೂರಿಗೆ ಮರಳುತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಆರು ಜನ ಮೃತಪಟ್ಟಿದ್ದರೆ, ಇನ್ನಿಬ್ಬರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ ಅಪಘಾತದ ತೀವ್ರತೆಗೆ ಎರಡೂ ವಾಹನಗಳು ತೀವ್ರ ಹಾನಿಗೊಳಗಾಗಿವೆ. ಇದರಿಂದಾಗಿ ವಾಹನಗಳು.
ಮಿತಿಮೀರಿದ ವೇಗದಲ್ಲಿ ಅಪಘಾತಕ್ಕೊಳಗಾಗಿವೆ ಎನ್ನಲಾಗುತ್ತದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.