ಶ್ರೀನಿವಾಸಪುರ : ಆದಿ ಕವಿಯಂದೇ ಖ್ಯಾತರಾದ ಮಹರ್ಷಿ ವಾಲ್ಮೀಕಿ ರಾಮಾಯಣ ಕಾವ್ಯದ ಮೂಲಕ ಮನಕುಲಕ್ಕೆ ಬದುಕಿನ ಸಂದೇಶವನ್ನು ಸಾರಿದ ಸರ್ವತೋಮುಖ ಚಿಂತಕ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಬುಧವಾರ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜೋತ್ಸವ ಆಚರಣೆಗಾಗಿ ನಡೆದ ಪೂರ್ವ ಬಾವಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲಾ ಪಂಚಾಯಿತಿ ಕೇಂದ್ರಗಳಿಂದ ವಾಲ್ಮೀಕಿ ಸ್ತಬ್ದ ಚಿತ್ರವನ್ನು ಹೊತ್ತು ತಾಲೂಕಿನ ಕೇಂದ್ರಕ್ಕೆ ಬರವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿ, ಮುಂದಿನ ತಿಂಗಳು ನವಂಬರ್ ೧ ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಬೇಕಾದ ವ್ಯವಸ್ಥೆ ಮಾಡುವಂತೆಯೂ ತಹಶೀಲ್ದಾರ್ ಶರೀನ್‌ತಾಜ್ ರವರಿಗೆ ಸೂಚನೆ ನೀಡಿದರು. ಹಾಗು ಎಲ್ಲಾ ಇಲಾಖೆಗಳ ಕಛೇರಿಗಳಲ್ಲಿ ವಾಲ್ಮೀಕಿ ಜಯಂತಿ ಹಾಗು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಶರೀನ್‌ತಾಜ್, ಉಪ ತಹಶೀಲ್ದಾರ್ ಕೆ. ಎಲ್ .ಜಯರಾಮ್ ,ಶಿಸ್ತೇದಾರ್ ಬಲರಾಮಚಂದ್ರಗೌಡ ,ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್ ಆರ್‌ಐ ಮುನಿರೆಡ್ಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ ವಾಲ್ಮೀಕಿ ಸಮುದಾಯದ ಮುಖಂಡರಾದ ಗೌನಿಪಲ್ಲಿ ರಾಮಮೋಹನ್, ಯಮ್ಮನೂರು ನಾಗರಾಜ್, ಗುಮ್ಮರೆಡ್ಡಿ ಪುರ. ಹರೀಶ್ ನಾಯಕ್ ಹೊಗಳಗರೆ ಆಂಜಿ, ಕರ‍್ನಹಳ್ಳಿ ಆಂಜಿ, ಪಾತಬಲ್ಲಪಲ್ಲಿ ಅಪ್ಪಯ್ಯ ಇದ್ದರು.
Year: 2023
ವಾಲ್ಮೀಕಿ ಸಮುದಾಯವನ್ನು ಕಡೆಗಣಿಸಿದರೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಯ ಎಚ್ಚರಿಕೆ
ಕೋಲಾರ,ಅ.25: ಕೋಲಾರ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಿರ್ಮಿಸುತ್ತಿರುವ ವಾಲ್ಮೀಕಿ ಭವನದ ಒತ್ತುವರಿಯನ್ನು ತೆರವುಗೊಳಿಸಿ ಮತ್ತು ವಾಲ್ಮೀಕಿ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಹಾಗೂ ಭವನದಲ್ಲಿ ಕಾರ್ಯಕ್ರಮ ಮಾಡಲು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮುದಾಯದ ಮನವಿಯನ್ನು ಕಡೆಗಣಿಸಿದಲ್ಲಿ ಭವನದ ಮುಂದೆ ಕಪ್ಪು ಪಟ್ಟಿ ಧರಿಸಿ ಜಿಲ್ಲಾಡಳಿತದ ವಿರುದ್ದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಲ್ಲೇಖ;- 1. ಸರ್ಕಾರದ ಪತ್ರ ಸಂಖ್ಯೆ ಪವಕನಿ; ಸಂವಿ.ಸಿ.ಆರ್-57/2013-14 ದಿನಾಂಕ 21-1023 2. ಪತ್ರದ ಸಂಖ್ಯೆ ಸಕಿಇ/1/ಎಸ್ ಎ ಡಿ/2023 ದಿನಾಂಕ 20-10-23 3. ಕರ್ನಾಟಕ ರಾಜ್ಯ ವಾಲ್ಮೀಕಿ ಅಂಬೇಡ್ಕರ್ ಪ್ರಜಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷರ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ ಅರ್ಜಿ. 4. ಘನ ಪ್ರಧಾನ ಸಿವಿಲ್ ನ್ಯಾಯಾಲಯದ ಪ್ರಕರಣ ಸಂಖ್ಯೆ ಒಎಸ್. 31/2019ರ ಆರ್ಡರ್ ಶೀಟ್ ನಕಲು ಮತ್ತು ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಲಯದ ಪ್ರಕರಣ ಎಮ್ ಎ-
16/2020 ರ ಆದೇಶ ದಿನಾಂಕ 11-12-2020 ಆಗಿರುತ್ತದೆ.
ಕೋಲಾರದ ಘನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣದ ಸಂಖ್ಯೆ ಒಎಸ್- 31/2019 ದಾವೆಯು ಇತ್ಯರ್ಥಕ್ಕೆ ಬಾಕಿ ಇದ್ದು ಸದರಿ ದಾವೆಯಲ್ಲಿ ದಾವಾ ಸ್ವತ್ತಿಗೆ ಸಂಬಂಧಿಸದಂತೆ ಯಥಾಸ್ಥಿತಿ ಕಾಪಾಡುವಂತೆ ಆದೇಶವಿರುತ್ತದೆ ಹಾಗೂ ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ರವರ ಉಲ್ಲೇಖ ಒಂದರಂತೆ ಗುತ್ತಿಗೆದಾರರಿಗೆ ಇದುವರೆವಿಗೂ ಒಟ್ಟಾರೆ ರೂ 121.50 ಲಕ್ಷಗಳಿಗೆ ಹಣ ಬಳಕೆ ಪ್ರಮಾಣ ಪತ್ರ, ಛಾಯಾ ಚಿತ್ರ ಮತ್ತು ಮೂರನೆಯ ವ್ಯಕ್ತಿಯ ತಪಾಸಣಾ ವರದಿ ಸಲ್ಲಿಸಿರುವುದಿಲ್ಲ. ಹಾಗೂ ಕಾಮಗಾರಿ ಪೂರ್ಣಗೊಳ್ಳುವ ವರೆಗೂ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದ ಉದ್ಘಾಟನೆಯಾಗಲಿ ಅಥವಾ ಆ ಕಟ್ಟಡದಲ್ಲಿ ಕಾರ್ಯಕ್ರಮ ಮಾಡಬಾರದೆಂದು ತಮಗೆ ಮತ್ತು ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೋಲಾರ ರವರಿಗೆ ನಿರ್ದೇಶನವನ್ನು ಮಾಡಿರುತ್ತಾರೆ.
ಆದ್ದರಿಂದ ದಯಾಮಯರಾದ ತಾವಂದರು ದಿನಾಂಕ 28-10-2023ರ ವಾಲ್ಮೀಕಿ ಜಯಂತಿಯಂದು ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಕೇಂದ್ರದ ವಾಲ್ಮೀಕಿ ಭವನದಲ್ಲಿ ಉದ್ಘಾಟನೆ ಅಥವಾ ಕಾರ್ಯಕ್ರಮ ಮಾಡಬಾರದು, ಉದ್ಘಾಟನೆಯು ಸಮುದಾಯದ ಪೂಜ್ಯ ವಾಲ್ಮೀಕಿ ಗುರುಪೀಠದ ಶ್ರೀಗಳು ಹಾಗೂ ಸಮುದಾಯದ ಹಾಲಿ ಮತ್ತು ಮಾಜಿ ಸಚಿವರ ಸ್ಮಮುಖದಲ್ಲಿ ನೆರವೇರಬೇಕೆಂಬುದು ಸಮುದಾಯದ ಬೇಡಿಕೆಯಾಗಿರುತ್ತದೆ.
ಒಂದು ವೇಳೆ ಮೇಲ್ಕಂಡ ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿ ಒತ್ತಡಗಳಿಗೆ ಮಣಿದು ವಾಲ್ಮೀಕಿ ನಾಯಕ ಜನಾಂಗದ ಹಿತಾಸಕ್ತಿಗೆ ವಿರುದ್ಧವಾಗಿ ಉದ್ಘಾಟನೆ ಮಾಡಲು ಮುಂದಾದಲ್ಲಿ ನಾವುಗಳು ವಾಲ್ಮೀಕಿ ನಾಯಕ ಜನಾಂಗದ ಬಹುಸಂಖ್ಯಾತರ ಪರವಾಗಿ ಕಪ್ಪು ಪಟ್ಟಿ ಪ್ರದರ್ಶಿಸಿ ಕಾರ್ಯಕ್ರಮವನ್ನು ಭಹಿಷ್ಕರಿಸಲು ಸರ್ವಾನುಮತದಿಂದ ತೀರ್ಮಾನಿಸಿದ್ದೇವೆಂದು ತಮಗೆ ತಿಳಿಸುತ್ತಾ ಆ ದಿನದ ಮುಂದಿನ ಪರಿಣಾಮಗಳಿಗೆ ಜಿಲ್ಲಾಡಳಿತವೇ ಜವಾಬ್ದಾರಿಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.
ನಿಯೋಗದಲ್ಲಿ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಮುಖಂಡರುಗಳಾದ ನರಸಿಂಹಯ್ಯ, ಎಂ.ಬಾಲಗೋವಿಂದ, ವಾಲ್ಮೀಕಿ ಮಾದೇಶ್, ವಕೀಲರಾದ ಸುಗಟೂರು ನಾಗರಾಜ್, ಕೆ.ಆನಂದಕುಮಾರ್, ರಮೇಶ್‍ನಾಯಕ್, ಕೋಟೆ ಮಧುಸೂದನ್, ಶ್ಯಾಮ್‍ನಾಯಕ್, ಐತರಾಸನಹಳ್ಳಿ ನರಸಿಂಹಪ್ಪ, ಮಂಗಸಂದ್ರ ತಿಮ್ಮಣ್ಣ, ಪ್ರಸನ್ನ, ಖಾದ್ರಿಪುರ ನವೀನ್, ಕುರಗಲ್ ಗಿರೀಶ್, ಬೆಳ್ಳೂರು ತಿರುಮಲೇಶ್, ಸುಗಟೂರು ವೇಣು, ಮೈಲಾಂಡಹಳ್ಳಿ ಚಿರಂಜೀವಿ, ಮೇಡಿಹಾಳ ಮುನಿರಾಜು, ಕುಡುವನಹಳ್ಳಿ ರಂಗನಾಥ್, ಸುರೇಶ್, ಅಮ್ಮೇರಹಳ್ಳಿ ಚಲಪತಿ, ಗಲ್‍ಪೇಟೆ ಲಕ್ಷ್ಮಣ್, ನರಸಾಪುರ ನಾಗರಾಜ್, ಗರುಡನಹಳ್ಳಿ ಬಾಬು, ಮಡೇರಹಳ್ಳಿ ಸೋಮು, ಕೆ.ಎಸ್.ಆರ್.ಟಿ.ಸಿ.ಮುನಿಯಪ್ಪ, ಮೇಡಿಹಾಳ ತಿರುಮಲೇಶ್, ಬೈರಂಡಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ನಾಗೇಶ್, ಗುಟ್ಟಹಳ್ಳಿ ಚಿದಾನಂದ್, ಬಾರಂಡಹಳ್ಳಿ ನಾರಾಯಣಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.
ದಸರಾ ನಾಡಿನ ಸಾಂಸ್ಕøತಿಕ ಪರಂಪರೆಯ ಸಂಕೇತ, ದಸರಾ ಸಂಭ್ರಮದಲ್ಲಿ ಸಮಾಜದ ಎಲ್ಲ ಸಮುದಾಯದ ಜನರೂ ಭಾಗವಹಿಸುವುದುವಿಶೇಷ:ತಹಶೀಲ್ದಾರ್ ಶಿರಿನ್ ತಾಜ್
ಶ್ರೀನಿವಾಸಪುರ: ದಸರಾ ನಾಡಿನ ಸಾಂಸ್ಕøತಿಕ ಪರಂಪರೆಯ ಸಂಕೇತ. ದಸರಾ ಸಂಭ್ರಮದಲ್ಲಿ ಸಮಾಜದ ಎಲ್ಲ ಸಮುದಾಯದ ಜನರೂ ಭಾಗವಹಿಸುವುದು ಒಂದು ವಿಶೇಷ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ವಿಜಯದಶಮಿ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಿಲ್ಲಿಗೆ ಬಾಣ ಹೂಡಿ ಬಿಟ್ಟ ಬಳಿಕ ಮಾತನಾಡಿದ ಅವರು, ಮಾನವ ಕುಲ ಒಂದೇ ಎಂದು ಸಾರುವುದು ನಿಜವಾದ ಧರ್ಮ. ಸಕಲ ಪ್ರಾಣಿಗಳಲ್ಲಿ ದಯೆ ತೋರುವುದು ಮಾನವ ಧರ್ಮ ಎಂದು ಹೇಳಿದರು.
ದುಷ್ಟ ಶಕ್ತಿ ಅಂತ್ಯ ಕಾಣುವುದು ವಿಜಯದಶಮಿ ಮಹತ್ವ. ಅದು ಪ್ರಾರಂಭದಲ್ಲಿ ಎಷ್ಟೇ ಮೆರೆದರೂ, ಕೊನೆಗೆ ಒಂದು ದಿನ ನಾಶವಾಗುತ್ತದೆ. ಅದರ ವಿವೇಚನಾರಹಿತ ಶಕ್ತಿಯೇ ಅದಕ್ಕೆ ಮುಳುವಾಗುತ್ತದೆ. ಇತಿಹಾಸ ಇದನ್ನು ಸಾರುತ್ತದೆ ಎಂದು ಹೇಳಿದರು.
ನಾಡು ದಸರಾ ಸಡಗರದಲ್ಲಿ ಮೀಯುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟದ ಕಲ್ಪನೆ ಸಾಕಾರಗೊಂಡಿದೆ. ಇದು ಕನ್ನಡ ನಾಡಿನ ಹೆಮ್ಮೆ. ಮನುಷ್ಯ ಮಾನವೀಯ ಮೌಲ್ಯ ಬಿಡದೆ ನಡೆಯಬೇಕು. ಎಲ್ಲರೊಂದಿಗೆ ಬೆರೆತು ಬದುಕಬೇಕು. ದುಷ್ಟರಿಂದ ದೂರವಿರಬೇಕು ಎಂಬುದಕ್ಕೆ ಈ ಹಬ್ಬ ಸಾಕ್ಷಿಯಾಗಿದೆ ಎಂದು ಹೇಳಿದರು.
ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ಹರಿ, ಮುರಳಿ, ವಸುಂದರಾದೇವಿ, ಪ್ರಧಾನ ಅರ್ಚಕ ಸುಬ್ರಮಣಿ, ಗೋಪಿನಾಥರಾವ್ ಇದ್ದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮುಂಚೂಣಿಯಲ್ಲಿದ್ದರು:ತಹಶೀಲ್ದಾರ್ ಶಿರಿನ್ ತಾಜ್
ಶ್ರೀನಿವಾಸಪುರ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ ಹಿರಿದು. ಅಂಥ ಮಹಿಳೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮುಂಚೂಣಿಯಲ್ಲಿದ್ದರು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆ ಸಮಾರಂಭದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶ ಪ್ರೇಮ ಹಾಗೂ ಶೌರ್ಯ ಮಹಿಳಾ ಸಮುದಯಕ್ಕೆ ಮಾದರಿಯಾಗಿದೆ. ಹಾಗಾಗಿಯೇ ಅವರು ದೇಶದ ಜನರ ಮನದಲ್ಲಿ ಉಳಿದಿದ್ದಾರೆ. ಅವರ ಇತಿಹಾಸ ಯುವ ಸಮುದಾಯಕ್ಕೆ ಚೈತನ್ಯ ತುಂಬುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಓದಬೇಕು. ಅವರಿಂದ ಸ್ಫೂರ್ತಿ ಪಡೆದು ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಸಮಯ ಬಂದಾಗ ದೇಶದ ರಕ್ಷಣೆಗೆ ಮುಂದಾಗಬೇಕು. ದೇಶದ ಪ್ರಗತಿಯಿಂದ ಮಾತ್ರ ವೈಯಕ್ತಿಕ ಪ್ರಗತಿ ಸಾಧ್ಯ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗ್ರಾಮಲೆಕ್ಕಾದಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಶ್ರೀನಿವಾಸಪುರ: ಕೊಲೆಯಾದ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಅವರ ಪಾಥೀವ ಶರೀರದ ಮೆರವಣಿಗೆ
ಶ್ರೀನಿವಾಸಪುರ: ಕೊಲೆಯಾದ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಅವರ ಪಾಥೀವ ಶರೀರದ ಮೆರವಣಿಗೆ ಏರ್ಪಡಿಸಲಾಗಿತ್ತು.
ಮೆರವಣಿಗೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೃತ ಶ್ರೀನಿವಾಸ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದ್ದ ವಾಹನ, ಎಂಜಿ ರಸ್ತೆ ಹಾಗೂ ಮುಳಬಾಗಿಲು ರಸ್ತೆ ಮೂಲಕ ಮೃತರ ತೋಟಕ್ಕೆ ಸಾಗಿತು. ರಸ್ತೆ ಪಕ್ಕದ ಮೃತರ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಎಂ.ಶ್ರೀನಿವಾಸನ್ ಅವರ ಪತ್ನಿ ಡಾ. ಚಂದ್ರಕಳಾ, ಪುತ್ರ ಡಾ.ಕಿಷನ್, ಪುತ್ರಿ ಡಾ. ನಿಖಿತಾ, ಅಳಿಯ ಭಾಸ್ಕರ್ ಮತ್ತು ಸಂಬಂಧಿಕರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.
ಅಂತಿಮ ದರ್ಶನ: ಶ್ರೀನಿವಾಸಪುರದಲ್ಲಿ ಮೃತರ ಮನೆಗೆ ಭೇಟಿ ನೀಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಕೆ.ಆರ್.ರಮೇಶ್ ಕುಮಾರ್, ನಾಗೇಶ್, ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್.ಬಿ.ಮುನಿವೆಂಕಟಪ್ಪ, ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಕೆ.ಕೆ.ಮಂಜು, ರವಿ, ಎಸ್‍ಎಲ್‍ಎನ್ ಮಂಜುನಾಥ್, ಬಕ್ಷು ಸಾಬ್, ದಲಿತ ಮುಖಂಡರಾದ ಎನ್.ಮುನಿಸ್ವಾಮಿ, ಪಂಡಿತ್ ಮುನಿವೆಂಕಟಪ್ಪ ಮತ್ತಿತರರು ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ 14 ಕೋಟಿಗೂ ಮಿಕ್ಕಿವಂಚನೆ:ತನಿಖೆಗೆ ಆಡಿಷಲ್ ಸಿವಿಲ್ ನ್ಯಾಯಾಲಯ ಆದೇಶ
ಅವಿಭಜಿತ ದ.ಕ. ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ 14 ಕೋಟಿಗೂ ಮಿಕ್ಕಿ ಭಾರೀ ವಂಚನೆ ಮಾಡಿರುವ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನೆಡೆಸುವಂತೆ ಉಡುಪಿ ಜಿಲ್ಲಾ ರೈತ ಸಂಘ ಖಾಸಗಿ ದೂರನ್ನು ಆಡಿಷಲ್ ಸಿವಿಲ್ ಜಡ್ಜ್ ಉಡುಪಿಯಲ್ಲಿ ದಾಖಲು ಮಾಡಿದ್ದು, ಇದೀಗ ಈ ದೂರನ್ನು ವಿಚಾರಣೆ ನಡೆಸಿದ ನ್ಯಾಯಧೀಶರು ಬೃಹತ್ ವಂಚನೆ ಕುರಿತು ಸೂಕ್ತ ತನಿಖೆ ಮಾಡಿ 12/12/2023ರ ಒಳಗೆ ನ್ಯಾಯಾಲಯಕ್ಕೆ ವರದಿ ನೀಡಲು ಬ್ರಹ್ಮವಾರ ಪೊಲೀಸ್ ಠಾಣೆಗೆ ಆದೇಶ ಮಾಡಿದ್ದಾರೆ.
ಇತ್ತೀಚಿಗೆ ಬ್ರಹ್ಮಾವರದಲ್ಲಿ ಕಾಂಗ್ರೆಸ್ ನೇತ್ರತ್ವದಲ್ಲಿ ಮತ್ತು ರೈತ ಸಂಘಟನೆಯ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿತ್ತು.
ಕಾಂಗ್ರೆಸ್ ಮುಖಂಡ ಕರಾವಳಿ ಮಲೆನಾಡು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿ ತೀವ್ರವಾಗಿ ಖಂಡಿಸಿ ಮಾತಾನಾಡಿ ತನಿಖೆ ನಡೆಸಲು ಆಗ್ರಹಿಸಿದ್ದರು.
ಕುಂದಾಪುರ : ಹಿಂದೂಗಳ ನವರಾತ್ರಿ ಮೆರವಣಿಗೆ ಮುಸ್ಲ್ಮಿಮರ ದರ್ಗಾದ ಉರೂಸ್ ಕಾರ್ಯಕ್ರಮದಲ್ಲಿ ಭಾವೈಕ್ಯತೆ, ಸೌಹಾರ್ಧತೆಯ ಸಂಗಮವಾಯ್ತು
ಕುಂದಾಪುರ: ಕುಂದಾಪುರ ನಗರದಲ್ಲಿ ಸೋಮವಾರ ಸಂಜೆ ನಡೆದ ಮೂರು ಕಡೆಯ ನವರಾತ್ರಿ ಶಾರದೆ ವಿಸರ್ಜನಾ ಮೆರವಣಿಗೆ ಹಾಗೂ ದರ್ಗಾದ ಉರೂಸ್ ಕಾರ್ಯಕ್ರಮದ ವೇಳೆ ಹಿಂದೂ ಮುಸ್ಲೀಂ ಭಾವೈಕ್ಯತೆ, ಸೌಹಾರ್ಧತೆ, ಪರಸ್ಪರ ಸಹಕಾರ ಕಂಡುಬಂತು.
ಕುಂದಾಪುರದ ಶ್ರೀರಾಮಮಂದಿರ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ರಕ್ತೇಶ್ವರಿ ದೇವಸ್ಥಾನದ ನವರಾತ್ರಿಯ ಶಾರದಾ ದೇವಿ ವಿಸರ್ಜನಾ ಮೆರವಣಿಗೆ ಮತ್ತು ಕುಂದಾಪುರದ ಜೆ.ಎಮ್ ರಸ್ತೆಯ ಹಝ್ರತ್ ಸುಲ್ತಾನ್ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ ದರ್ಗಾದ ವಾರ್ಷಿಕ ಕುಂದಾಪುರ ಉರೂಸ್ ಮುಬಾರಕ್ ಕಾರ್ಯಕ್ರಮ ಸೋಮವಾರ ಸಂಜೆ ಏಕಕಾಲದಲ್ಲಿ ಜರುಗಬೇಕಿತ್ತು. ಪೊಲೀಸರು ಮೊದಲೇ ಎರಡು ಧರ್ಮದ ಮುಖಂಡರ ಬಳಿ ಸಮನ್ವಯತೆ ಸಾಧಿಸಿ ಮೂರು ಮೆರವಣಿಗೆ ಹಾಗೂ ಉರೂಸ್ ಕಾರ್ಯಕ್ರಮ ಸಂಭ್ರಮದಿಂದ ಜರುಗುವ ಸಲುವಾಗಿ ಸಮಯ ನಿಗದಿ ಮಾಡಿದ್ದರು. ಅದರಂತೆಯೇ ರಾಮ ಮಂದಿರ ಮತ್ತು ವೆಂಕಟರಮಣ ದೇವಸ್ಥಾನದ ಮೆರವಣಿಗೆ ಒಂದೂವರೆ ಗಂಟೆಗಳ ಅಂತರದಲ್ಲಿ ನಡೆದಿದ್ದು ಇದರ ನಡುವಿನ ಸಮಯದಲ್ಲಿ ಉರೂಸ್ ಮೆರವಣಿಗೆ ಸಾಗಿತು.
ಉರೂಸ್ ಹಿನ್ನೆಲೆ ದರ್ಗಾ ಸಮೀಪದಿಂದ ಫೆರ್ರಿ ರಸ್ತೆ ಪಾರ್ಕ್ ತನಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಾಮಮಂದಿರ, ವೆಂಕಟರಮಣ ದೇವಸ್ಥಾನದಲ್ಲಿನ ಶಾರದಾ ಮೂರ್ತಿ ಮೆರವಣಿಗೆ ಸಾಗುವಾಗ ಎತ್ತರದ ವಿದ್ಯುತ್ ದೀಪಾಲಂಕಾರ ಹಾಗೂ ಆರಂಭದಲ್ಲಿ ಹಾಕಿದ ಸ್ವಾಗತ ಕಮಾನು ತಡೆಯಾಗುವ ಹಂತದಲ್ಲಿದ್ದು ಕಮಾನಿನ ಮೇಲ್ಭಾಗವನ್ನು ಮುಸ್ಲೀಂ ಬಾಂಧವರು ತೆರವು ಮಾಡಿದರು. ವಿದ್ಯುತ್ ದೀಪಾಲಂಕಾರಕ್ಕೆ ತಗುಲದಂತೆ ಅಗತ್ಯಕ್ರಮಗಳನ್ನು ಮಾಡಿಕೊಟ್ಟು ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು. ಮೆರವಣಿಗೆಯಲ್ಲೂ ಕೂಡ ಆ ಭಾಗದಲ್ಲಿ ತೆರಳುವಾಗ ಜಾಗಟೆ, ಚಂಡೆ ಬಾರಿಸುವುದನ್ನು ನಿಲ್ಲಿಸಿ ಮುಸ್ಲೀಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿದರು. ಮೆರವಣಿಗೆ ಸಾಗುವಾಗ ದರ್ಗಾ ಬಳಿ ಜಮಾಯಿಸಿದ್ದ ಮುಸ್ಲೀಂ ಬಾಂಧವರು ಪರಸ್ಪರ ಹಬ್ಬಕ್ಕೆ ಶುಭಕೋರಿದರು.
ಮುಸ್ಲೀಂ ಸಮುದಾಯದ ಮುಖಂಡರಾದ ಅಬು ಮೊಹಮ್ಮದ್ ಕುಂದಾಪುರ, ರಫೀಕ್ ಅಹಮದ್ ಗಂಗೊಳ್ಳಿ, ಶ್ರೀ ರಾಮಮಂದಿರ ದೇವಸ್ಥಾನದ ದೇವಕಿ ಸಣ್ಣಯ್ಯ, ವೆಂಕಟರಮಣ ದೇವಸ್ಥಾನದ ತ್ರಿವಿಕ್ರಮ ಪೈ, ಕೇಶವ ಭಟ್, ರಕ್ತೇಶ್ವರಿ ದೇವಸ್ಥಾನದ ವಿಶ್ವನಾಥ ಶೆಟ್ಟಿ, ಶ್ರೀಧರ್ ಪೂಜಾರಿ ಮೊದಲಾದವರು ಇದ್ದರು.
ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಕುಂದಾಪುರ ಪೊಲೀಸ್ ನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ಕುಂದಾಪುರ ಉಪವಿಭಾಗದ ವಿವಿಧ ಪೊಲೀಸ್ ಠಾಣೆ ಉಪನಿರೀಕ್ಷಕರು, ಸಿಬ್ಬಂದಿಗಳು ಬಂದೋಬಸ್ತ್ ನೆರವೇರಿಸಿದರು. ಕೆ.ಎಸ್.ಆರ್.ಪಿ ಹಾಗೂ ಡಿ.ಎ.ಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಮಂಗಳೂರಿನ ಬಿಷಪ್ ದಸರಾ ಆಚರಣೆಯ ಸಂದರ್ಭದಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ / Bishop of Mangalore visits Kudroli temple during Dussehra Celebrations.
ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ 23-10-2023 ಸೋಮವಾರದಂದು ದಸರಾ ಹಬ್ಬದ ನಿಮಿತ್ತ ಮಂಗಳೂರಿನ ಬಿಷಪ್ ಮೋಸ್ಟ್ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸೌಹಾರ್ದ ಭೇಟಿ ನೀಡಿದರು.
ಕುದ್ರೋಳಿಗೋಕರ್ಣಂತೇಶ್ವರಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಅವರ ಆಹ್ವಾನದ ಮೇರೆಗೆ ಧಾರ್ಮಿಕ ಸೌಹಾರ್ದತೆಯ ಸಂಕೇತವಾಗಿ ಈ ಭೇಟಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿಷಪ್ ತಮ್ಮ ಸಂದೇಶದಲ್ಲಿ ಸಮಾಜದಲ್ಲಿ ಸಾಮರಸ್ಯದ ಅಗತ್ಯವನ್ನು ಎತ್ತಿ ತೋರಿಸಿದರು ಮತ್ತು ಕುದ್ರೋಳಿ ದೇವಸ್ಥಾನದ ಸಂಸ್ಥಾಪಕರಾದ ಶ್ರೀ ನಾರಾಯಣ ಗುರುಗಳ ಉಪದೇಶಗಳನ್ನು ಶ್ಲಾಘಿಸಿದರು.
ಮಂಗಳೂರು ದಸರಾ ಎಂದೂ ಕರೆಯಲ್ಪಡುವ ಕುದ್ರೋಳಿ ಹಬ್ಬವು ಈಗ ವಿಶ್ವಪ್ರಸಿದ್ಧವಾಗಿದೆ ಮತ್ತು ಹೆಸರಾಂತ ಮೈಸೂರು ದಸರಾ ನಂತರ ಎರಡನೆಯನಾಗಿದೆ.
ಮಂಗಳೂರು ದಸರಾ ಈಗ ಎಲ್ಲಾ ಧರ್ಮ ಮತ್ತು ಧರ್ಮದ ಜನರ ಹಬ್ಬವಾಗಿದೆ ಎಂದು ಬಿಷಪ್ ಒಪ್ಪಿಕೊಂಡರು. ಒಂದೇ ಜಾತಿ ಒಂದೇ ಧರ್ಮ ಒಂದೇ ದೇವರು ಎಂದು ನಂಬಿದ ಮಹಾನ್ ಋಷಿಗಳ ಬೋಧನೆಗಳ ಪ್ರಕಾರ, ದೇವಾಲಯವು ಈಗ ಏಕತೆ ಮತ್ತು ಕೋಮು ಸೌಹಾರ್ದತೆಯ ತಾಣವಾಗಿದೆ.
ಬಿಷಪ್ ರವರೊಂದಿಗೆ ಮಂಗಳೂರು ಧರ್ಮಪ್ರಾಂತ್ಯದ ಪಿಆರ್‌ಒ ರಾಯ್ ಕ್ಯಾಸ್ತಲಿನೋ ವಂ|ಧರ್ಮಗುರು ರೂಪೇಶ್ ಮಾಡ್ತಾ, ಕೆಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಡಿಸೋಜ, ಮಿಥುನ್ ಸಿಕ್ವೇರಾ, ಸುನೀಲ್ ಕುಮಾರ್ ಬಜಾಲ್, ಸ್ಟಾನ್ಲಿ ಡಿ’ಕುನ್ಹಾ ಬಂಟ್ವಾಳ್ ಮೊದಲಾದವರು ಉಪಸ್ಥಿತರಿದ್ದರು.
ಬಿಷಪ್ ಪೀಟರ್ ಪೌಲ್ ಸಲ್ಡಾನ್ಹಾ ಮತ್ತು ಕರ್ನಾಟಕ ವಿಧಾನಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್ ಅವರನ್ನು ದೇವಳದ ಅಧ್ಯಕ್ಷರಾದ ಶ್ರೀ ಸಾಯಿರಾಮ್ ಅವರು ಸ್ವಾಗತಿಸಿ ವಂದಿಸಿದರು. ಶ್ರೀಮಾಧವಸುವರ್ಣ, ಕಾರ್ಯದರ್ಶಿ; ಶ್ರೀಹರಿ ಕೃಷ್ಣ, ಬಂಟ್ವಾಳ; ಶ್ರೀಸೂರ್ಯಕಾಂತ್ ಜಯ ಸುವರ್ಣ ಮತ್ತು ಶ್ರೀಸಂತೋಷಪೂಜಾರಿ, ಟ್ರಸ್ಟಿಗಳು ಗೋಕರಣಂತೇಶ್ವರ ಕ್ಷೇತ್ರ ಉಪಸ್ಥಿತರಿದ್ದರು.
Bishop of Mangalore visits Kudroli temple during Dussehra Celebrations.
The Bishop of Mangalore Most Rev Dr Peter Paul Saldanha, made a cordial visit toKudroli temple, Mangalore, on the occasion of Dasara festival on Monday, 23-10-2023.
The visit was organised as a mark of gesture of religious harmony on a invite by PadmarajR , Treasurer, Kudroli Gokarnantheshwara kshetra.
In his message the Bishop highlighted the need of harmony in the society and appreciated the preachings of Shri Narayana Guru, the founder of Kudroli temple.
The Kudroli festival also known as the Mangaluru Dusshera is now world famous and is second only to the renowned Mysore Dusshera.
Bishop also acknowledged that Mangaluru Dusshera is now a festival of people of all faiths and religions True to the teachings of the great sage who believed in one caste one religion one God, the temple has now become a place of unity and communal harmony.
The Bishop was accompanied by Rev Fr. Rupesh Madtha, Roy Castelino PRO, Diocese of Mangalore, Alwyn Dsouza the President of Catholic Sabha, Mithun Sequeira, Sunil Kumar Bajal, Stanley D’Cunha Bantwal and others.
Bishop Peter Paul Saldanha, Shri U T Khader, Speaker, karnataka Legislative Assembly were welcomed and greeted by Shri Sairam, President; Shri Madhava Suvarna, Secretary; Shri Hari Krishna, Bantwal; Shri Suryakant Jaya Suvarna and Shri Santosh Poojary, Trustees Gokaranantheswara Kshetra, were present.
ಬಂಗಾಳ ಕೊಲ್ಲಿಯಲ್ಲಿ ಹಮೂನ್ ಚಂಡಮಾರುತ : ತೀವ್ರ ಸ್ವರೂಪ ತಾಳಿದೆ:ಮುಂದಿನ 6 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ
ಕೋಲ್ಕತ್ತ: ದೇಶದ ಪೂರ್ವ ಸಾಗರ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹಮೂನ್ ಚಂಡಮಾರುತ ತೀವ್ರ ಸ್ವರೂಪ ತಾಳಿದ್ದು, ಮುಂದಿನ 6 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಭಾರತೀಯ ಕರಾವಳಿ ಪ್ರದೇಶದಲ್ಲಿ ಪರಿಣಾಮ ಬೀರುವ ಸಾಧ್ಯತೆ ವಿರಳವಾಗಿದ್ದು, ಗಂಟೆಗೆ 21 ಕಿ.ಮೀ. ವೇಗ ಪಡೆದಿರುವ ಹಮೂನ್ ಚಂಡಮಾರುತ ಬಂಗಾಳಕೊಲ್ಲಿಯ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಈಶಾನ್ಯದತ್ತ ಚಲಿಸುವಾಗ ಕ್ರಮೇಣ ದುರ್ಬಗೊಳ್ಳಲಿದೆ. ಈ ವೇಳೆ ಗಂಟೆಗೆ 65ರಿಂದ 75 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಐಎಂಡಿ ಹೇಳಿದೆ. ಚಂಡಮಾರುತವು ಅಕ್ಟೋಬರ್ 25ರ ಸಂಜೆಯ ವೇಳೆಗೆ ಬಾಂಗ್ಲಾದೇಶದ ಕರಾವಳಿ ಖೇಪುಷಾರಾ ಪತ್ತು ಚಿತ್ತಗಾಂಗ್ ಪ್ರದೇಶವ ಪಡೆಯಲಿದೆಯೆಂದು ತಿಳಿದು ಬಂದಿದೆ. ಈ ಚಂಡಮಾರುತದ ದೆಸೆಯಿಂದ ಇದು ಭಾರಿ ಮಳೆ, ಗಾಳಿ ಮತ್ತು ಪ್ರತಿಕೂಲ ಹವಾಮಾನಕ್ಕೆ ಕಾರಣವಾಗಬಹುದೆಂದು ತಿಳಿಸಲಾಗಿದೆ. ಇರಾನ್ ದೇಶವು ಈ ಚಂಡಮಾರುತಕ್ಕೆ ಹಮೂನ್ ಎಂದು ಹೆಸರಿಟ್ಟಿದ್ದು ಇರಾನ್ ದೇಶ.