ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರಿ ಡುನಂಟ್ ಇವರ ಪುಣ್ಯ ತಿಥಿಯ ದಿನ ಕುಂದಾಪುರದಲ್ಲಿ ಆರೋಗ್ಯ ತಪಾಸಣೆ ಶಿಬಿರ

ಕುಂದಾಪುರ : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರಿ ಡುನಂಟ್ ಇವರ ಪುಣ್ಯ ತಿಥಿ ಯಾದ ಈ ದಿನ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದ ಎದುರು ಆರೋಗ್ಯ ತಪಾಸಣೆ ಶಿಭಿರ ವನ್ನು ಆಯೋಜಿಸಲಾಯಿತು ರೆಡ್ ಕ್ರಾಸ್ ಸಭಾಪತಿ ಶ್ರೀ ಜಯಕರ ಶೆಟ್ಟಿ ಯವರು ಕಾರ್ಯಕ್ರಮವನ್ನು ಉದ್ಗಾಟಿಸಿ ಪುಷ್ಪಾರ್ಚನೆ ಗೈದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ ಮತ್ತು ರೆಡ್ ಕ್ರಾಸಿನ ಸಿಭಂದಿಗಳು ಉಪಸ್ಥಿತರಿದ್ದರು. 167 ಜನರು ಇದರ ಪ್ರಯೋಜನ ಪಡೆದರು.

ಕೊಂಕಣಿ ರಂಗ್‌ಮಂಚ್ ಆನಿ ನಾಟಕಾಂಚೆರ್ ಪರಿಸಂವಾದ್, ಕೊಂಕಣಿ ಪುಸ್ತಕಾಂಚೆಂ ಉಗ್ತಾವಣ್ / ಕೊಂಕಣಿ ನಾಟಕಗಳ ಪರಿಸಂವಾದ ಮತ್ತು ಕೊಂಕಣಿ ಪುಸ್ತಕ ಉದ್ಘಾಟನಾ ಕಾರ್ಯಕ್ರಮ

29 ಅಕ್ತೋಬರ್ (ಮಂಗ್ಳುರ್): ಆಶಾವಾದಿ ಪ್ರಕಾಶನಾನ್ ಸಾಂ ಜುಜೆ ಸೆಮಿನರಿಚ್ಯಾ ಸಭಾಸಾಲಾಂತ್ ’ಕೊಂಕಣಿ ರಂಗ್‌ಮಂಚ್ ಆನಿ ನಾಟಕಾಂಚೆರ್’ ಮಾಂಡುನ್ ಹಾಡ್‌ಲ್ಲೆಂ ಆದೇಸಾಚೆಂ ಪರಿಸಂವಾದ್ ಕಾರ್ಯೆಂ 29 ಅಕ್ತೋಬರ್ ತಾರಿಕೆರ್ (ಆಯ್ತಾರಾ) ಸಕಾಳಿಂ 10 ಥಾವ್ನ್ 1 ಪರ್ಯಾಂತ್ ಚಲ್ಲೆಂ. ಆಶಾವಾದಿ ಪ್ರಕಾಶನಾನ್ ಮಾ ದೊ ರೊನಾಲ್ಡ್ ಸೆರಾವೊಚ್ಯಾ ’ದಾನಿಯೆಲ್ ಆನಿ ಎಸ್ತೆರ್ ರಾಣಿ’ ನಾಂವಾಚಿಂ ದೋನ್ ಲಿಪಿಂನಿ ಪರ್ಗಟ್ಲೆಲಿಂ ದೋನ್ ನಾಟಕಾಂಚಿಂ ಪುಸ್ತಕಾಂ ತಶೆಂಚ್ ಪಯ್ಣಾರಿ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲಾಚೆಂ ಉಗ್ತಾವಣ್ ಕಾರ್ಯೆಂ ಚಲವ್ನ್ ವ್ಹೆಲೆಂ.

ಸಕಾಳಿಂ ಧಾ ವೊರಾಂಚೆರ್ ದಿವೊ ಪೆಟವ್ನ್ ಮಾನೆಸ್ತಿಣ್ ಮೀನಾ ರೆಬಿಂಬಸಾಚ್ಯಾ(ಕೊಂಕಣಿ ಮೈನಾ) ಹಾತಿಂ ಕಾರ್ಯಾಚೆಂ ಉಗ್ತಾವಣ್ ಕೆಲೆಂ. ಮುಖೆಲ್ ಸಯ್ರೊ ಜಾವ್ನ್ ಸಾಹಿತ್ಯ್ ಅಕಾಡೆಮಿಚೊ ಸಂಚಾಲಕ್ ಮಾನೆಸ್ತ್ ಮೆಲ್ವಿನ್ ರೊಡ್ರಿಗಸ್, ತಶೆಂಚ್ ಸಯ್ರಿಂ ಜಾವ್ನ್ ಮಾನೆಸ್ತಿಣ್ ಮಾರಿಯೆಟ್ ರಾಸ್ಕಿನ್ಹಾ, ಮಾನೆಸ್ತಿಣ್ ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ ತಶೆಂಚ್ ನಾಟಕಾಂ ಬರವ್ಪಿ ಮಾ ದೊ ರೊನಾಲ್ಡ್ ಸೆರಾವೊ ವೆದಿಚೆರ್ ಆಸ್ಲಿಂ. ಸೂತ್ರ್ ಸಂಚಾಲನ್ ಕೆಲ್ಲ್ಯಾ ಮಾನೆಸ್ತ್ ಅರುಣ್ ಅಜೆಕಾರಾನ್ ಪರಿಸಂವಾದಾಚ್ಯಾ ಮಹತ್ವಾವಿಶಿಂ ಸಾಂಗುನ್, ವೆದಿಚೆರ್ ಆಸ್‌ಲ್ಲ್ಯಾ ಮಾನ್ ಮನ್ಶಾಂಚಿ ಒಳೊಕ್ ಕರ್ತಚ್, ಮಾ ದೊ ರೊನಾಲ್ಡ್ ಸೆರಾವೊನ್ ಯೆವ್ಕಾರಾಚೆಂ ಉಲವ್ಪ್ ಕರ್ತಚ್ ಬಾಯ್ ನಿಯೊನಾ ಡಿಸೋಜಾನ್ ಸರ್ವ್ ಮಾನ್ ಸಯ್ರ್ಯಾಂಕ್ ಕೊಂಕಣಿ ಪುಸ್ತಕಾಂ ದಿವುನ್ ಸ್ವಾಗತ್ ಕೆಲೊ. ಮಾರಿಯೆಟ್ ರಾಸ್ಕಿನ್ಹಾ ಆನಿ ಮೆಲ್ವಿನ್ ರೊಡ್ರಿಗಸಾನ್ ಅಪ್ಲ್ಯಾ ಉಲವ್ಪಾಂತ್ ಕೊಂಕಣಿ ನಾಟಕಾಂಚ್ಯಾ ಸುರ್ವಿಲ್ಯಾ ದಿಸಾಂಚಿ ಮೊಟ್ವಿ ಯಾದ್ ಕರುನ್ ಸುರ್ವಿಲ್ಯಾ ನಾಟಕಿಸ್ತಾಂನಿ ನಾಟಕ್ ಶೆತಾಕ್ ದಿಲ್ಲ್ಯಾ ಅಮೊಲಿಕ್ ದೇಣ್ಗೆಚಿ ಮಾಹೆತ್ ದಿಲಿ.

ಪರಿಸಂವಾದ್ ಕಾರ್ಯಾಚೆಂ ಸಂಚಾಲನ್ ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವನ್ ಚಯ್ಲೆಂ, ಮಾನೆಸ್ತ್ ಜೋನ್ ಎಮ್ ಪೆರ್ಮನ್ನೂರ್ ಹಾಣೆ ಕೊಂಕಣಿ ನಾಟಕಾಂಚ್ಯಾ ಶೆಂಬೊರ್ ಆನಿ ಧಾ ವರ್ಸಾಂಚ್ಯಾ ಇತಿಹಾಸಾಚೆರ್ ಘಾಲ್ಲಿ ಸುಕ್ಣ್ಯಾನದರ್ ಭೋವ್ ಅಪುರ್ಭಾಯೆನ್ ಸಾದರ್ ಕೆಲಿ, ಮಾನೆಸ್ತ್ ಅರುಣ್ ರೊಡ್ರಿಗಸಾನ್ ಕೊಂಕಣಿ ನಾಟಕಾಂನಿ ಜಾಲ್ಲ್ಯಾ ವೆಗ್-ವೆಗಳ್ಯಾ ರಿತಿಚ್ಯಾ ಪ್ರಯೋಗಾಂಚೆರ್ ಭೋವ್ ಅಪುರ್ಭಾಯೆಚಿ ಮಾಹೆತ್ ದಿಲಿ. ಮಾನೆಸ್ತ್ ರಿಚಾರ್ಡ್ ಮೋರಸಾನ್ ಗಲ್ಫಾಂತ್ ಕೊಂಕಣಿ ನಾಟಕಾಂ ವಿಶ್ಯಾಚೆರ್ ಅಪ್ಲೆಂ ಉಲವ್ಪ್ ಕರ್ತಚ್ ಮಾ ದೊ ರೊನಾಲ್ಡ್ ಸೆರಾವೊನ್ ಕೊಂಕಣಿ ಧಾರ್ಮಿಕ್ ನಾಟಕಾಂಚಿ ಗರ್ಜ್ ಮ್ಹಳ್ಳ್ಯಾ ವಿಶ್ಯಾಚೆರ್ ಅಪ್ಲೆಂ ಉಲವ್ಪ್ ಕೆಲೆಂ. ಕನ್ಸೆಪ್ಟಾ ಫೆರ್ನಾಂಡಿಸಾನ್ ಕಾಂಯ್ ಪನ್ನಾಸಾಂ ವಯ್ರ್ ವರ್ಸಾಂಚೊ ಇತಿಹಾಸ್ ಆಸ್ಚ್ಯಾ ರೇಡಿಯೊ ನಾಟಕಾಂಚ್ಯಾ ಇತಿಹಾಸಾವಿಶಿಂ ಉಲಯ್ಲಿ.

ಪುಸ್ತಕ್ ಉಗ್ತಾವಣ್ ಕಾರ್ಯಾಚೆಂ ಸೂತ್ರ್ ಸಂಚಾಲನ್ ಕೆಲ್ಲ್ಯಾ ಬಾಯ್ ಅನಿತಾ ಮಿನೇಜಸಾನ್ ಪುಸ್ತಕಾಂಚಿ ಮೊಟ್ವಿ ಝಳಕ್ ದಿವುನ್ ಮಾನ್ ಸಯ್ರ್ಯಾಂಕ್; ಮಾ ಬಾ ರುಪೇಶ್ ಮಾಡ್ತಾ, ದೊ ಪೂರ್ಣಾನಂದ ಚಾರಿ, ಮಾನೆಸ್ತ್ ಅವಿಲ್ ರಾಸ್ಕಿನ್ಹಾ, ಮಾನೆಸ್ತ್ ಹೇಮಾಚಾರ್ಯಾ ಆನಿ ಮಾ ದೊ ರೊನಾಲ್ಡ್ ಸೆರಾವೊ ಹಾಂಕಾಂ ವೆದಿಕ್ ಆಪವ್ನ್ ತಾಂಚಿ ಮೊಟ್ವಿ ಒಳೊಕ್ ಕರುನ್ ದಿಲಿ. ಮಾ ದೊ ರೊನಾಲ್ಡ್ ಸೆರಾವೊಚ್ಯಾ ದೋನ್ ನಾಟಕಾಂಚಿಂ ದೋನ್ ಲಿಪಿಂತ್ಲಿಂ ಪುಸ್ತಕಾಂ, ಆಶಾವಾದಿ ಪ್ರಕಾಶನಾಚಿಂ 53ವೆಂ (ಕನ್ನಡ್ ಲಿಪಿ) ತಶೆಂಚ್ 54ವೆಂ (ನಾಗರಿ ಲಿಪಿ) ’ದಾನಿಯೆಲ್ ಆನಿ ಎಸ್ತೆರ್ ರಾಣಿ’ ಪುಸ್ತಕಾಂಚಿ ಒಳೊಕ್ ಕರುನ್ ದಿಲ್ಲ್ಯಾ ಮಾ ಬಾ ರುಪೇಶ್ ಮಾಡ್ತಾನ್ ತಶೆಂಚ್ ದೊ ಪೂರ್ಣಾನಂದ ಚಾರಿನ್ ಉಗ್ತಾವಣ್ ಕೆಲಿಂ. ತ್ಯೇ ಉಪ್ರಾಂತ್ ಮಾನೆಸ್ತ್ ಲಾರೆನ್ಸ್ ವಿನೋದ್ ಬಾರ್ಬೋಜಾನ್ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲಾಚಿ ಒಳೊಕ್ ಕರುನ್ ಜಾತಚ್ ಮಾನೆಸ್ತ್ ಆವಿಲ್ ರಾಸ್ಕಿನ್ಹಾ, ಹೇಮಾಚಾರ್ಯಾ ಆನಿ ದೊ ಪೂರ್ಣಾನಂದ ಚಾರಿನ್ ಡಿಜಿಟಲ್ ಸಾಹಿತಿಕ್ ಜರ್ನಲಾಚೆಂ ಉಗ್ತಾವಣ್ ಕೆಲೆಂ.

ಮುಖೆಲ್ ಸಯ್ರ್ಯಾಂನಿ; ಆವಿಲ್ ರಾಸ್ಕಿನ್ಹಾ, ಹೇಮಾಚಾರ್ಯ, ದೊ ಪೂರ್ಣಾನಂದ ಚಾರಿ ಹಾಣಿಂ ಅಪ್ಲೆ ಸಂಧೇಶ್ ದಿತಚ್ ಹೇಮಾಚಾರ್ಯಾನ್ ಮಾನ್ ಪ್ರತಿ ದಿವುನ್ ಸಮೆಸ್ತಾಂಚೊ ಮಾನ್ ಕೆಲೊ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟಯ್ಲೆ. ಜೆಸ್ಸಿ ಲೋಬೊ ಅಜೆಕಾರ್ ಹಿಣೆಂ ಸಗ್ಳ್ಯಾ ಕಾರ್ಯಾಚೆಂ ಡಿಜಿಟಲ್ ಸೂತ್ರ್ ಸಂಚಾಲನ್ ಕೆಲೆಂ. ನಾಮ್ನೆಚೆ ಕೊಂಕಣಿ ಬರವ್ಪಿ, ನಾಟಕಿಸ್ತ್; ಎಡ್ಡಿ ಸಿಕೇರಾ, ರಿಚ್ಚಿ ಪಿರೇರ್, ಕ್ಲೀಟಾ ನೊರೊನ್ಹಾ, ಎಮ್. ಪ್ಯಾಟ್ರಿಕ್, ಶಾಲಿನಿ ವಾಳೆನ್ಸಿಯಾ, ಜ್ಯೂಲಿಯೆಟ್ ಮೊರಾಸ್, ಎಚ್. ಆರ್. ಆಳ್ವ, ಜೆಮ್ಮಾ ಪಡೀಲ್, ವಿಶ್ವಾಸ್ ರೆಬಿಂಬಸ್, ಡೇವಿಡ್ ಡಿಸೋಜ ವಾಮಂಜೂರ್, ಪಿಂಟೊ ವಾಮಂಜೂರ್, ಅಲೆಕ್ಸ್ ಮಿರಾಂದಾ, ಕ್ಯಾಥರೀನ್ ರೊಡ್ರಿಗಸ್ ಕಟ್ಪಾಡಿ, ಮಾ ಬಾ ಐವನ್ ಮಿಯಾರ್, ಮಾ ಬಾ ನವೀನ್, ಮಾಚ್ಚಾ ಮಿಲಾರ್, ಜೆ.ಎಫ್. ಡಿಸೋಜ್ ಅತ್ತಾವರ್ ಆನಿ ಹೆರಾಂ ಹ್ಯಾ ಕಾರ್ಯಾಂತ್ ಹಾಜರ್ ಆಸ್ಲಿಂ

ಕೊಂಕಣಿ ನಾಟಕದ ಪರಿಸಂವಾದ ಮತ್ತು ಕೊಂಕಣಿ ಪುಸ್ತಕ ಉದ್ಘಾಟನಾ ಕಾರ್ಯಕ್ರಮ

ಮಂಗಳೂರು: ಆಶಾವಾದಿ ಪ್ರಕಾಶನ್ ಸಂಸ್ಥೆ ವತಿಯಿಂದ 29 ಅಕ್ತೋಬರ್ ರವಿವಾರದಂದು ಸೈಂಟ್‌ ಜೋಸೆಪ್ ಸೆಮಿನಾರ್ ಸಭಾಂಗಣಾದಲ್ಲಿ ’ಕೊಂಕಣಿ ರಂಗವೇದಿಕೆ ಮತ್ತು ನಾಟಕ’ದ ಪರಿಸಂವಾದ ಕಾರ್ಯಕ್ರಮ ಹಾಗೂ ಆಶಾವಾದಿ ಪ್ರಕಾಶನ್ ಸಂಸ್ಥೆಯಿಂದ ಎರಡು ಭಾಷೆಗಳಲ್ಲಿ ಪ್ರಸ್ತುತ ಪಡಿಸಿದ ಫಾದರ್ ರೊನಾಲ್ಡ್ ಸೆರಾವೊ‌ ಅವರ ’ದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕ ಮತ್ತು ಪ್ರಸಿದ್ಧ ಕೊಂಕಣಿ ಲೇಖಕರಾದ ವಲ್ಲಿ ಕ್ವಾಡ್ರಸ್‌ ಅಜೆಕಾರ್‌ ಅವರ ʼಪಯ್ಣಾರಿ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲ್‌ʼ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕೊಂಕಣಿ ಮೈನಾ ಬಿರುದಿನ ಮೀನಾ ರೆಬಿಂಬಸ್‌ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತ್ಯ ಅಕಾಡೆಮಿ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್, ಮಾರಿಯೆಟ್ ರಾಸ್ಕಿನ್ಹಾ, ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ ಹಾಗೂ ಫಾದರ್ ರೊನಾಲ್ಡ್ ಸೆರಾವೊ ಅವರು ವೇದಿಕೆಯಲ್ಲಿ ಉಪಸ್ಥಿತಿಯಿದ್ದರು.‌ ಈ ಕಾರ್ಯಕ್ರಮದ ನಿರೂಪಣೆಯನ್ನು ಅರುಣ್ ಡಿʼಸೋಜಾ ಅಜೆಕಾರ್ ಅವರು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಗು ನಿಯೊನಾ ಡಿಸೋಜಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಕೊಂಕಣಿ ಪುಸ್ತಕಗಳನ್ನು ನೀಡುವುದರ ಮೂಲಕ ಸ್ವಾಗತಿಸಿದರು.

ಪರಿಸಂವಾದ ಕಾರ್ಯಾಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೋನ್ ಎಮ್ ಪೆರ್ಮನ್ನೂರ್, ಅರುಣ್‌ ರಾಜ್ ರೊಡ್ರಿಗಸ್‌, ರಿಚಾರ್ಡ್ ಮೋರಸ್‌, ಫಾದರ್ ರೊನಾಲ್ಡ್ ಸೆರಾವೊ‌ ಅವರು ಅತ್ಯುತ್ತಮ ವಿಷಯಗಳನ್ನು ಪ್ರಸ್ತುತ ಪಡಿಸಿದರು. ಪರಿಸಂವಾದ ಕಾರ್ಯಾಕ್ರಮವನ್ನು ನಿರ್ವಹಿಸಿದ‌ ಕನ್ಸೆಪ್ಟಾ ಫೆರ್ನಾಂಡಿಸ್ ಅವರು ರೇಡಿಯೊ ನಾಟಕಾದ ಇತಿಹಾಸ ಇದರ ಬಗ್ಗೆ ವಿವರಿಸಿದರು.

ನಂತರ ನಡೆದ ಪುಸ್ತಕ ಉದ್ಘಾಟನೆ ಕಾರ್ಯಕ್ರಮದಲ್ಲಿ ʼರಾಕ್ಣೊʼ ಕೊಂಕಣಿ ವಾರ ಪತ್ರಿಕೆಯ ಸಂಪಾದಕರಾದ ಫಾದರ್ ರುಪೇಶ್ ಮಾಡ್ತಾ, ಪ್ರಸಿದ್ಧ ಲೇಖಕರು ಮತ್ತು ಕವಿಗಳಾದ ಡಾ| ಪೂರ್ಣಾನಂದ ಚಾರಿ, ಖ್ಯಾತ ಲೇಖಕ ಅವಿಲ್ ರಾಸ್ಕಿನ್ಹಾ, ಪ್ರಸಿದ್ಧ ಬರಹಗಾರರಾದ ಹೇಮಾಚಾರ್ಯಾ ಹಾಗೂ ಫಾದರ್ ರೊನಾಲ್ಡ್ ಸೆರಾವೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಶಾವಾದಿ ಪ್ರಕಾಶನ್ ಸಂಸ್ಥೆಯ 53ನೇ(ಕನ್ನಡ್ ಲಿಪಿ) ಹಾಗೂ 54ನೇ (ನಾಗರಿ ಲಿಪಿ) ʼದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕದ ಪರಿಚಯವನ್ನು ತಮ್ಮ ಅದ್ಭುತ ಮಾತುಗಳಲ್ಲಿ ಮಾಡಿಕೊಟ್ಟ ಫಾದರ್ ರೂಪೇಶ್ ಮಾಡ್ತಾ ಹಾಗೂ ಪ್ರಸಿದ್ಧ ಲೇಖಕರು ಮತ್ತು ಕವಿಗಳಾದ ಡಾ| ಪೂರ್ಣಾನಂದ ಚಾರಿ ಇವರು ʼದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕವನ್ನು ಉದ್ಘಾಟಿಸಿದರು. ಲಾರೆನ್ಸ್ ವಿನೋದ್ ಬಾರ್ಬೋಜ್‌ ಅವರು ಕೊಂಕಣಿ ಲೇಖಕರಾದ ವಲ್ಲಿ ಕ್ವಾಡ್ರಸ್‌ ಅಜೆಕಾರ್‌ ಇವರ ʼಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲ್‌ʼ ಬಗ್ಗೆ ತಮ್ಮ ಮಾತುಗಳಲ್ಲಿ ವರ್ಣಿಸಿದರು. ಇದರ ಉದ್ಘಾಟನೆಯನ್ನು ಲೇಖಕರಾದ ಆವಿಲ್ ರಾಸ್ಕಿನ್ಹಾ, ಬರಹಗಾರರಾದ ಹೇಮಾಚಾರ್ಯಾ ಹಾಗೂ ಡಾ| ಪೂರ್ಣಾನಂದ ಚಾರಿ ಅವರು ನಡೆಸಿದರು. ಅನಿತಾ ಮೀನೆಜಸ್‌ ಅಜೆಕಾರ್‌ ಅವರು ಪುಸ್ತಕ ಉದ್ಘಾಟನೆ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಕಾರ್ಯಕ್ರಮದ ಉಸ್ತುವಾರಿಯಾದ ವಲ್ಲಿ ಕ್ವಾಡ್ರಸ್‌ ಅಜೆಕಾರ್ ಅವರು ಧನ್ಯವಾದಗೈದು,‌ ಜೆಸ್ಸಿ ಲೋಬೊ ಅಜೆಕಾರ್ ಅವರು ಕಾರ್ಯಕ್ರಮದ ಡಿಜಿಟಲ್ ಸೂತ್ರ ಸಂಚಾಲನೆಗೈದರು. ಕಾರ್ಯಕ್ರಮದಲ್ಲಿ ಹೆಸರಾಂತ ಬರಹಗಾರರು ಹಾಗೂ ನಾಟಕ ಕಲಾವಿದರಾದ ಎಡ್ಡಿ ಸಿಕ್ವೇರಾ, ರಿಚ್ಚಿ ಪಿರೇರಾ, ಕ್ಲೀಟಾ ನೊರೊನ್ಹಾ, ಎಮ್. ಪ್ಯಾಟ್ರಿಕ್, ಶಾಲಿನಿ ವಾಲೆನ್ಸಿಯಾ, ಜ್ಯೂಲಿಯೆಟ್ ಮೊರಾಸ್, ಎಚ್.ಆರ್. ಆಳ್ವ, ಜೆಮ್ಮಾ ಪಡೀಲ್, ವಿಶ್ವಾಸ್ ರೆಬಿಂಬಸ್, ಡೇವಿಡ್ ಡಿಸೋಜ ವಾಮಂಜೂರ್, ಪಿಂಟೊ ವಾಮಂಜೂರ್, ಅಲೆಕ್ಸ್ ಮಿರಾಂದಾ, ಕ್ಯಾಥರೀನ್ ರೊಡ್ರಿಗಸ್ ಕಟ್ಪಾಡಿ, ಫಾದರ್ ಐವನ್ ಮಿಯಾರ್, ಫಾದರ್ ನವೀನ್, ಮಾಚ್ಚಾ ಮಿಲಾಗ್ರಿಸ್, ಜೆ.ಎಫ್. ಡಿಸೋಜ್ ಅತ್ತಾವರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಗಣಿಯಲ್ಲಿ ಭಾರಿ ಸ್ಫೋಟ 32 ಜನರ ಸಾವು,14 ಜನರ ನಾ ಪತ್ತೆ

ಕಜಕಿಸ್ತಾನದ ಉಕ್ಕಿನ ದೈತ್ಯ ಅರ್ಸೆಲರ್‌ ಮಿತ್ತಲ್‌ ಒಡೆತನದ ಗಣಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 32 ಕಾರ್ಮಿಕರು ಸಾವನ್ನಪ್ಪಿದ್ದು, 14 ಜನ ನಾಪತ್ತೆಯಾಗಿದ್ದಾರೆ.

ಮಿಥೇನ್‌ ಅನಿಲ ಸೋರಿಕೆಯಿಂದಾಗಿ ಕೊಸ್ಟೆಂಕೊ ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು, 252 ಜನರಲ್ಲಿ 206 ಜನರನ್ನು ಸ್ಥಳಾಂತರಿಸಲಾಗಿದೆ. 18 ಜನರಿಗೆ ವೈದ್ಯಕೀಯ ನೆರವು ಅಗತ್ಯವಿದೆ ಎಂದು ಕಂಪನಿ ತಿಳಿಸಿದೆ.

ಲಕ್ಸೆಂಬರ್ಗ್‌ ಮೂಲದ ಬಹುರಾಷ್ಟ್ರೀಯ ಅರ್ಸೆಲರ್‌ ಮಿತ್ತಲ್‌ ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ಕಂಪನಿಯಾಗಿದೆ. ಸುರಕ್ಷತಾ ನಿಯಮಗಳನ್ನು ಪಾಲಿಸದ ಕಂಪನಿ ವಿರುದ್ಧ ಸರ್ಕಾರ ಕ್ರಮ ವಹಿಸಿದ್ದು, ಕಂಪನಿಯನ್ನು ವಶಪಡಿಸಿಕೊಳ್ಳಲು ಆದೇಶಿಸಿದೆ.

ಕೊಲ್ಲೂರು-ತಾಯಿ ಆತ್ಮಹತ್ಯೆ ಮಾಡಿಕೊಂಡು ಸಾವು, ಶೋಕ ತಡೆಯಲಾರದೆ ಪುತ್ರ ಕೂಡ ಆತ್ಮಹತ್ಯೆ

ಕೊಲ್ಲೂರು: ತಾಯಿ ಮೃತಪಟ್ಟ ಶೋಕದಿಂದ ಪುತ್ರ ಮಾನಸಿಕವಾಗಿ ನೊಂದು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಪುತ್ರ ವಿಶ್ವನಾಥ (37) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ತಾಯಿ ಗಿರಿಜಮ್ಮ (63) ಅವರು ಅ. 26ರಂದು ಜೀವನದಲ್ಲಿ ಜುಗುಪ್ಸೆಗೊಂಡು ಕೀಟನಾಶಕ ಸೇವಿಸಿದ್ದರು. ಅಸ್ವಸ್ಥಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ಮಧ್ಯರಾರಿಯಲ್ಲಿ ಮೃತಪಟ್ಟಿದ್ದರು. ಮೃತರ ಅಂತ್ಯಸಂಸ್ಕಾರ ಮುಗಿಸಿದ ಬಳಿಕ ಮನೆಯಲ್ಲಿ ಪತಿ ಮತ್ತು ಪುತ್ರ ಮಲಗಿದ್ದರು. ಬೆಳಗ್ಗೆ ಪುತ್ರನ ಬಾಯಿಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿದ ಮನೆಯವರು ಸಂಶಯದಿಂದ ಆಸ್ಪತ್ರೆಗೆ ಕೊಂಡೊಯ್ದು ಪರೀಕ್ಷಿಸಿದಾಗ ವೈದ್ಯರು ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ ಆಫ್‌ ಬರೋಡಾದಿಂದ ಬಾಬ್‌ ಲೈಟ್‌ ಉಳಿತಾಯ ಖಾತೆಯ ಪರಿಚಯ “ಜೀವಮಾನ ಶೂನ್ಯ ಬ್ಯಾಲೆನ್ಸ್‌ ಉಳಿತಾಯ ಖಾತೆ”

ಅಕ್ಟೋಬರ್‌ 27, 2023: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್‌ ಆಫ್‌ ಬರೋಡಾ (ಬ್ಯಾಂಕ್‌) ತನ್ನ “ಬಾಬ್‌ ಕಿ ಸಂಗ್‌, ತ್ಯೋಹಾರ್‌ ಕಿ ಉಮಂಗ್‌” ಹಬ್ಬದ ಅಂಗವಾಗಿ ಬಾಬ್‌ ಲೈಟ್‌ ಉಳಿತಾಯ ಖಾತೆ – ಜೀವಮಾನ ಶೂನ್ಯ ಬ್ಯಾಲೆನ್ಸ್‌ ಉಳಿತಾಯ ಬ್ಯಾಂಕ್‌ ಖಾತೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಯಾವುದೇ ಕನಿಷ್ಟ ಬ್ಯಾಲೆನ್ಸ್‌ ಅಗತ್ಯವಿಲ್ಲದ ಬ್ಯಾಂಕಿಂಗ್‌ ಅನುಭವವನ್ನು
ನೀಡುತ್ತದೆ. ಇದಲ್ಲದೆ, ವಿವಿಧ ಗ್ರಾಹಕರ ವಿಭಾಗಗಳ ಅಗತ್ಯತೆಗಳನ್ನು ಪೂರೈಸಲು, ಖಾತೆಯಲ್ಲಿ ನಾಮಮಾತ್ರ ತ್ರೈಮಾಸಿಕ
ಸರಾಸರಿ ಬ್ಯಾಲೆನ್ಸನ್ನು ನಿರ್ವಹಿಸುವ ಮೂಲಕ ಬಾಬ್‌ ಲೈಟ್‌ ಖಾತೆಯು ಜೀವಮಾನದ ಉಚಿತ ರುಪೇ ಪ್ಲಾಟಿನಂ ಡೆಬಿಟ್‌ ಕಾರ್ಡ್‌ನೊಂದಿಗೆ ಬರುತ್ತದೆ ಮತ್ತು ಖಾತೆದಾರರು ಜೀವಮಾನದ ಉಚಿತ ಕ್ರೆಡಿಟ್‌ ಕಾರ್ಡ್‌ ಅನ್ನು ಸಹ ಪಡೆಯಬಹುದು.

ಬಾಬ್‌ ಲೈಟ್‌ ಉಳಿತಾಯ ಖಾತೆಯು ಹಬ್ಬದ ಹುತುವಿನಲ್ಲಿ ಕೊಡುಗೆಗಳೊಂದಿಗೆ ನೀಡಲಾಗುತ್ತಿದೆ. “ಬಾಬ್‌ ಕಿ ಸಂಗ್‌ ತ್ಯೋಹಾರ್‌ ಕಿ. ಉಮಂಗ್‌’ ಹಬ್ಬದ ಪ್ರಚಾರದ ಭಾಗವಾಗಿ, ಬ್ಯಾಂಕ್‌ ಆಫ್‌ ಬರೋಡಾ ಎಲೆಕ್ಟಾನಿಕ್ಸ್‌ ಕನ್ನೂಮುರ್‌ ಡ್ಯೂರಬಲ್ಸ್‌, ಪ್ರಯಾಣ. ಆಹಾರ, ಫ್ಕಾಷನ್‌, ಮನರಂಜನೆ, ಜೀವನ ಶೈಲಿ, ದಿನಸಿ ಮತ್ತು ಆರೋಗ್ಯದಂತಹ ವಿಭಾಗಗಳಲ್ಲಿ ಪ್ರಮುಖ ಗ್ರಾಹಕ ಬ್ರಾ ನಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು. ಬ್ಯಾಂಕ್‌ ಆಫ್‌ ಬರೋಡಾ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳಲ್ಲಿ ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ. ಹಬ್ಬದ ಪ್ರಚಾರವು 31ನೇ ಡಿಸೆಂಬರ್‌, 2023ರವರೆಗೆ ನಡೆಯಲಿದೆ ಮತ್ತು ಕಾರ್ಡ್‌ದಾರರು ರಿಲಯನ್ಸ್‌ ಡಿಜಿಟಲ್‌, ಕ್ರೋಮಾ, ಮೇಕ್‌ಮೈಟ್ರಿಪ್‌, ಅಮೇಜಾನ್‌, ಬುಕ್‌ಮೈಶೋ, ಮಿಂತ್ರ, ಸ್ತಿಗ್ಗಿ ರೋಮೆಟೊ ಮತ್ತು ಇತರ ಬ್ರಾಂಡ್‌ಗಳಿಂದ ಎಶೇಷ ಕೊಡುಗೆಗಳಲ್ಲಿ ಆನಂದಿಸಬಹುದು.

ಬ್ಯಾಂಕ್‌ ಆಫ್‌ ಬರೊಡಾದ ರಿಟೈಲ್‌ ಲಯಾಬಿಲಿಟೀಸ್‌ ಮತ್ತು ಎನ್‌ಆರ್‌ಐ ವ್ಯವಹಾರದ ಮುಖ್ಯ ಪ್ರಧಾನ ವ್ಯವಸ್ಥಾಪಕ ಶ್ರೀ ರವೀಂದ್ರ ಸಿಂಗ್‌ ನೇಗಿ ಇವರು 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಸೇರಿದಂತೆ ಯಾವುದೇ ನಿವಾಸಿ ಖಾತೆಯನ್ನು ತೆರೆಯಬಹುದು. ಹೊಸ ಪೀಳಿಗೆಗೆ ಔಪಚಾರಿಕ ಬ್ಯಾಂಕಿಂಗ್‌ ಪರಿಸರ ವ್ಯವಸ್ಥೆಗೆ ಬಾಬ್‌ ಲೈಟ್‌ ಬಾಗಿಲು. ತೆರೆಯುತ್ತದೆ ಮಹತ್ವಾಕಾಂಕ್ಷಿ ಭಾರತೀಯರ ಬ್ಯಾಂಕಿಂಗ್‌ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಯೋಹಾನನ ಸಾಕ್ಷಿಗಳ ಪ್ರಾರ್ಥನ ಸಮಾವೇಶದಲ್ಲಿ ಬಾಂಬ್ ಸ್ಪೋಟ – 2 ಸಾವು -ಇದು ಯೋಹಾನನ ಸಾಕ್ಷಿಗಳ ಪಂಗಡವನೇ ಮಾಡಿದ ಕ್ರತ್ಯವೆಂದು ಓರ್ವ ಶರಣು

ಕೇರಳ: ಎರ್ನಾಕುಲಂನಲ್ಲಿ ಯೋಹಾನ ಸಾಕ್ಷಿಗಳ ಪ್ರಾರ್ಥನ ಸಮಾವೇಶದಲ್ಲಿ ಬಾಂಬ್ ಸ್ಪೋಟಗೊಂಡು 2 ಸಾವು ಸಂಭವಿಸಿದ ಭಯಾನಕ ಘಟನೆ ನಡೆದಿದೆ. ಈ ಕ್ರತ್ಯಕ್ಕೆ ಭಯೋತ್ಪಾದಕರು ಎಂಬ ಸುಳಿವು ಎಂದು ಸುದ್ದಿ ಹರಡಿದ್ದಾರೂ, ಈಗ ಈ ಕ್ರತ್ಯವನ್ನು ತಾನೇ ಮಾಡಿದ್ದೆಂದು ಒರ್ವ ಪೊಲೀಸರಿಗೆ ಶರಣಾಗಿದ್ದಾನೆ.

ಡೊಮಿನಿಕ್ ಮಾರ್ಟಿನ್

ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯ ಪ್ರಾರ್ಥನಾ ಸಮಾವೇಶ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಬಾಂಬ್ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ಕುರಿತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಗಾಯಗೊಂಡವರಲ್ಲಿ ಕೆಲವರು ಚಿಂತಾಜನಕರಾಗಿದ್ದಾರೆ.

2,000 ಕ್ಕಿಂತಲೂ ಹೆಚ್ಚು ಜನರು ಜಮಾಯಿಸಿರುವ ‘ಯೆಹೋವನ ಸಾಕ್ಷಿ’ ಸಮಾವೇಶದ ಸಮಯದಲ್ಲಿ ಅನೇಕ ಸ್ಫೋಟಗಳು ಸಂಭವಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಶೇಷವಾಗಿ ಸರಣಿ ಸ್ಫೋಟ ಎಂದು ಸುದ್ದಿ ಮೂಲಗಳು ತಿಳಿಸಿವೆ. ಬಾಂಬ್ ಸ್ಕ್ವಾಡ್, ಫೋರೆನ್ಸಿಕ್ಸ್ ತಂಡ ಮತ್ತು ಎನ್ಐಎ ತಂಡವು ಸ್ಥಳಕ್ಕೆ ಧಾವಿಸಿದ್ದು, ಕಣ್ಣೂರು ರೈಲ್ವೆ ನಿಲ್ದಾಣದಿಂದ ಶಂಕಿತನನ್ನು ಬಂಧಿಸಲಾಗಿದೆ. “ಎಲ್ಲಾ ತನಿಖಾ ಸಂಸ್ಥೆಗಳು ಸ್ಥಳದಲ್ಲಿದ್ದು ತನಿಖೆ ನಡೆಯುತ್ತಿದೆ. ಇದು ಬಾಂಬ್ ಸ್ಫೋಟವೇ ಎಂಬುದನ್ನು ತನಿಖೆಯು ಬಹಿರಂಗಪಡಿಸುತ್ತದೆ … ಒಬ್ಬರು ಸತ್ತರು, 40 ಮಂದಿ ಗಾಯಗೊಂಡಿದ್ದಾರೆ, ನಾಲ್ವರು-ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬೇಬಿ ಪಿವಿ ತಿಳಿಸಿದ್ದಾರೆ.
ನಂತರ ಕೇರಳ ಡಿಜಿಪಿ ಅವರು ಸ್ಫೋಟಗಳಿಗೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸುವ ಬಗ್ಗೆ ಪ್ರಾಥಮಿಕ ತನಿಖಾ ಸುಳಿವುಗಳನ್ನು ಹೇಳಿದರೆ, ಅದನ್ನು ಸಂಗ್ರಹಿಸಲು “ಟಿಫಿನ್ ಬಾಕ್ಸ್” ಅನ್ನು ಬಳಸಲಾಗಿದೆ ಎಂದು ಶಂಕಿಸಲಾಗಿದೆ, ಬೆಂಕಿಯಿಡುವ ಸಾಧನದ ಬಳಕೆಯು ಸಹ ಈಗ ಹೊರಬರುತ್ತಿರುವ ಕೋನವಾಗಿದೆ.

ಯೆಹೋವನ ಸಾಕ್ಷಿಗಳು ಯಾರು

‘ಯೆಹೋವನ ಸಾಕ್ಷಿಗಳು’ ಏಸು ಕ್ರಿಸ್ತನು ಬರುವ ಮೊದಲು, ಅವನ ದಾರಿ ಸುಗಮಗೊಳಿಸಲು ಪಾಪಗಳನ್ನು ತೊರೆಯಿರಿ, ನ್ಯಾಯಮಾರ್ಗದಲ್ಲಿ ನೆಡೆಯಿರಿ ಎಂದು ಭೋದನೆ ಮಾಡುತಿದ್ದು, ಅವನೊರ್ವ ಶ್ರೇಷ್ಠ ಪ್ರೋಫೆತ್ ಎಂದು ಕ್ರೈಸ್ತರು ನಂಬುತ್ತಾರೆ, ಆದರೆ ಈ ಯೋವಾನನ ಸಾಕ್ಷಿಗಳ ಪಂಗಡ ಏಸುಕ್ರಿಸ್ತನು ದೇವನಲ್ಲಾ ಎಂದು ಸಾರಿ ಸಾರಿ ಹೇಳುತ್ತಾ, ಇತರರನ್ನು ತಮ್ಮಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ, ಈ ಭಿನಾಭಿಪ್ರಾಯಕ್ಕೆ ಅನ್ಯ ಕ್ರೈಸ್ತರು ಈ ಪಂಗಡಕ್ಕೆ ಕಡು ವಿರೋಧವಿದೆ. ಈಗಿನ ಸುದ್ದಿಯ ಪ್ರಕಾರ ಯೆಹೋವನ ಸಾಕ್ಷಿಯ ಪಂಗಡದವನೆ ಆದ ಯೆಹೋವಾನ ಸಾಕ್ಷಿಗಳ ಸಿದ್ದಾಂತಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಇದ್ದು ಇದನ್ನು ನಿರ್ಲಕ್ಷಿದಕ್ಕಾಗಿ ಈ ಕ್ರತ್ಯವನ್ನು ಮಾಡಿದ್ದೆನೆಂದು ಹೇಳಿಕೊಂಡಿದ್ದಾನೆ. ಇತನನ್ನು ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾಗಿದೆ.

ಯೆಹೋವನ ಸಾಕ್ಷಿ ಸಮಾವೇಶವು ವಾರ್ಷಿಕ ಕೂಟವಾಗಿದ್ದು, ಇದರಲ್ಲಿ “ಪ್ರಾದೇಶಿಕ ಸಮಾವೇಶಗಳು” ಎಂದು ಕರೆಯಲ್ಪಡುವ ದೊಡ್ಡ ಸಭೆಗಳು ಸಾಮಾನ್ಯವಾಗಿ ಮೂರು ದಿನಗಳ ಕಾಲ, ಶುಕ್ರವಾರದಿಂದ ಭಾನುವಾರದವರೆಗೆ ನಡೆಯುತ್ತವೆ. ಈ ಕೂಟವು ೩ ದಿನಗಳದಾಗಿದ್ದು, ಭಾನುವಾರ ಕೊನೆಯ ದಿನವಾಗಿತ್ತು.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಮಹಿಳೆಯಾಯರ ಬಗ್ಗೆ ಮಾಹಿತಿ ನೀಡಿದ ಕೇರಳ ಸಚಿವ ವಿಎನ್ ವಾಸವನ್, ಸ್ಫೋಟದಿಂದ ಉಂಟಾದ ಬೆಂಕಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಟರ್ ಮೆಡ್‌ಸಿಟಿ, ರಾಜಗಿರಿ ಮತ್ತು ಕೊಚ್ಚಿಯ ಸನ್‌ರೈಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕುಂದಾಪುರಾಂತ್ ವಾರಾಡ್ಯಾ ಮಟ್ಟಾರ್ ಸಾಂ.ಫ್ರಾನ್ಸಿಸ್ ಅಸಿಸ್ಸಿಚೆ ಫೆಸ್ತ್ ಆಚರಣ್


ಕುಂದಾಪುರ್, ಅ.28: ಕುಂದಾಪುರ್ ರೊಜಾರ್ ಮಾಯೆಚಾ ಫಿರ್ಗಜೆಂತ್ ಸಾಂ.ಫ್ರಾನ್ಸಿಸ್ ಅಸಿಸ್ಸಿಚೆ ಫೆಸ್ತ್ ಆಚರಣ್ ಭಕ್ತಿನ್ ಆನಿ ಗದ್ದಾಳಾಯೆನ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಘಟಕಾನ್ ಆಚರಣ್ ಕೆಲೆಂ. ಕುಂದಾಪುರ್ ವಾರಾಡ್ಯಾಚೊ ವಿಗಾರ್‍ವಾರ್ ಭೋ|ಮಾ|ಮಾ|ಬಾಪ್ ಸ್ಟ್ಯಾನಿ ತಾವ್ರೊ ಹಾಣಿ ಪವಿತ್ರ್ ಬಲಿದಾನ್ ಭೆಟಯ್ಲೆ. ಸಾಂ.ಫ್ರಾನ್ಸಿಸ್ ಅಸಿಸ್ಸಿ ಮೇಳಾಚೊ ಅತ್ಮಿಕ್ ನಿರ್ದೆಶಕ್ ಮಾ|ಬಾ|ಜೊಕೀಮ್ ಡಿಸೋಜಾ ಹಾಣಿ ದೆವಾಚೆ ಉತರ್ ಮೊಡ್ನ್ “ಸಾಂತ್ ಫ್ರಾನ್ಸಿಸ್ ಅಸಿಸ್ಸಿ, ಝುಜಾರಿ ತಾಕಾ ದೆವಾನ್ ಆಪ್ಲ್ಯಾ ಮಿಸಾವಾಂಕ್ ಆಪಯ್ಲೊ. ತೊ ಸಂಗೀತ್‍ಗಾರ್ ಜಾವ್ನಾಸೊನ್, ಲೊಕಾಮೊಗಾಳ್ ಜಾವ್ನಾಸ್ಲೊ, ತೊ ವರ್ತೊ ಭಿರ್ಮೊತಿಚೊ ಮನಿಸ್, ಚೊರಾಂಕ್ ಲುಟ್ಕಾರಾಂಚೆರ್‍ಯಿ ಭಿರ್ಮೊತ್ ಪಾವ್ಲೊ ಮನಿಸ್, ಮನ್ಶ್ಯಾಂಕ್ ಮಾತ್ರ್ ನ್ಹಯ್ ಮನ್ಜಾತ್, ಸುಕ್ಣಿ ಸೌವ್ಜಾಂಚೆರ್‍ಯಿ ಭಿರ್ಮೊತ್ ಪಾಂವ್ಚೊ ಅಪ್ರೂಪ್ ಸಾಂತ್, ಶಾಂತಿಚ್ಯಾ ದೂತಾ ಬರಿ’ ಮ್ಹಣ್ತಾಂ. “ಸಾಂತ್ ಫ್ರಾನ್ಸಿಸ್ ಅಸಿಸ್ಸಿ ವಿಶ್ಯಾಂತ್ ವಿವರ್ ತಾಣಿ ದಿವ್ನ್ ಸಂದೇಶ್ ದಿಲೊ.ಕುಂದಾಪುರ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿ ಆರಾನ್ನಾ ಹಾಣಿ ಸಹಬಲಿದಾನ್ ಭೆಟಯ್ಲೆ.
ಬಲಿದಾನ ವೇಳಾರ್ ನವ್ಯಾ ಸಾಂದ್ಯಾಕ್ ಮೆಳಾಂತ್ ಸಮರ್ಪಣ್ ಕರ್ನ್ ತಾಂಕಾ ಫಿಂತ್, ಪವಿತ್ರ್ ಪುಸ್ತಕ್ ಜಳ್ಚಿ ವಾತ್ ದಿಂವ್ನ್ ಸಂಸ್ಕಾರ್ಣಿ ಕೆಲಿ.
ಸಭಾ ಕಾರ್ಯಕ್ರಮಾಂತ್ ಬಂಧೆಂತ್ ಆಸ್ಲೊ ಪಾರ್ವೊ ಉಬಾವ್ನ್ ಸೈರ್ಯಾನಿ ಸಭಾ ಕಾರ್ಯಕ್ರಮ್ ಉದ್ಘಾಟನ್ ಕೆಲೆಂ. ಕುಂದಾಪುರ್ ಫಿರ್ಗಜ್ ಘಟಕಾಚಿ ಅಧ್ಯಕ್ಷಿಣ್ ಡಾ|ಸೋನಿ ಡಿಕೋಸ್ತಾನ್ ಸ್ವಾಗತ್ ಮಾಗ್ಲೊ. ವಾರಾಡ್ಯಾಚೊ ಅಧ್ಯಕ್ಷ್ ಬಾಸಿಲ್ ಡಿಸೋಜಾನ್ ಫುಲಾಂ ದೀಂವ್ ಸಾಂಗಾತ್ ದಿಲೊ. ಅತ್ಮಿಕ್ ನಿರ್ದೇಶಕ್ ಮಾ|ಬಾ|ಜೊಕೀಮ್ ಡಿಸೋಜಾ, ಕುಂದಾಪುರ್ ಕೊವೆಂತಾಚಿ ವ್ಹಡಿಲ್ನ್ ಭಯ್ಣ್ ಸುಪ್ರಿಯಾ, ಕುಂದಾಪುರ್ ಫಿರ್ಗಜೆಚಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊ ಹಾಣಿ ಸಂದೇಶ್ ದಿಲೊ. ಕುಂದಾಪುರ್ ವಾರಾಡ್ಯಾಚಾ 11 ಫಿರ್ಗಜ್ ಘಟಕಾನಿ ಹಾಂತುನ್ ವಾಂಟೊ ಘೆತ್ಲೊ.
ಕಾರ್ಯಕ್ರಮಾಚೊ ಅಧ್ಯಕ್ಷ್ ಕುಂದಾಪುರ್ ಫಿರ್ಗಜೆಚೊ ವಿಗಾರ್, ಕುಂದಾಪುರ್ ವಾರಾಡ್ಯಾಚೊ ವಿಗಾರ್‍ವಾರ್ “ಮ್ಹಾಕಾ ಭೋವ್ ಚಡ್ ಮೊಗಾಚ್ಯಾ ಸಾಂತಾ ಮಧ್ಲೊ ಏಕ್ಲೊ ಸಾಂತ್ ಸಾಂ. ಫ್ರಾನ್ಸಿಸ್ ಅಸಿಸ್ಸಿ, ಮೊಜಿ ಆವಯ್ ಸಾಂ. ಫ್ರಾನ್ಸಿಸ್ ಅಸಿಸ್ಸಿಚ್ಯಾ ಮೆಳಾಂತ್ ಸೆವಾ ದಿತೆಲಿ. ಸಾಂ.ಫ್ರಾನ್ಸಿಸ್ ಅಸಿಸ್ಸಿ ಪøಕ್ರತಿಚಾ ಮೊಗಾರ್ ಪಡ್ಲೊ ಸಾಂತ್, ಕುಂದಾಪುರ್ ಫಿರ್ಗಜೆಂ ಹೊ ಮೇಳ್ ಆರಂಭ್ ಜಾವ್ನ್ 95 ವರ್ಸಾಂ ಸಂಪ್ತಾತ್, ತುಮ್ಚೊ ಶತಮಾನೋತ್ಸವ್ ಬರ್ಯಾನ್ ಜಾಂವ್’ ಮ್ಹಣುನ್ ಉಲ್ಲಾಸ್ ಪಾಟಾಯೈಲೆ.
ಮನೋರಂಜನ್ ಜಾವ್ನ್ ಪ್ರಹಸನ್, ಗೀತ್ ಗಾಯಾನಾ ಫಿರ್ಗಜ್ವಾರ್ ಘಟಕಾನಿಂ ಪರ್ದರ್ಶನ್ ಕೆಲೆಂ. ಕುಂದಾಪುರ್ ಘಟಕಾಚಿ ಕಾರ್ಯದರ್ಶಿ ಮರಿಯಾ ಬಾರೆಟ್ಟೊನ್ ವರದಿ ವಾಚನ್ ಕೆಲಿ. ವಾರಾಡೊ ಕಾರ್ಯದರ್ಶಿ ಪ್ರಮೀಳಾ ಡೆಸಾನ್ ಧನ್ಯವಾದ್ ಪಾಟಯ್ಲೆ. ಡಯಾನಾ ಡಿಆಲ್ಮೇಡಾನ್ ಕಾರ್ಯೆ ಚಲವ್ನ್ ವೆಲೆಂ. ಜೆವ್ಣಾ ಸವೆಂ ಕಾರ್ಯೆ ಸಂಪ್ಲೆ.

ಶ್ರೀನಿವಾಸಪುರ-ವಾಲ್ಮೀಕಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆ ಬಾವಿ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು : ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ:ವಾಲ್ಮೀಕಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆ ಬಾವಿ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು, ವಾಲ್ಮೀಕಿ ಸಮುದಾಯದ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುವುದು. ಸರಾಮಾಯಣ ಮಹಾಕಾವ್ಯ ರಚಿಸುವುದರ ಮೂಲಕ ಮಾನವ ಕುಲಕ್ಕೆ ಆದರ್ಶ ಕಟ್ಟಿಕೊಟ್ಟ ಮಹರ್ಷಿ ವಾಲ್ಮೀಕಿ ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ವಾಲ್ಮೀಕಿ ಸಮುದಾಯ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳ ಜತೆಗೆ ಸರ್ಕಾರದಿಂದ ವಿಶೇಷ ಅನುದಾನ ತರಲಾಗುವುದು. ತಾಲ್ಲೂಕಿನಲ್ಲಿ ಕೈಗಾರಿಕಾ ಕ್ಷೇತ್ರ ಸ್ಥಾಪಿಸಿ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾಲಾತೀತವಾಗಿ ಸಮಾಜಕ್ಕೆ ದಾರಿದೀಪವಾಗಿದೆ. ಸಮಾಜ ಮಹಾಕಾವ್ಯದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು. ರಾಮಾಯಣ ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ಮಹರ್ಷಿ ವಾಲ್ಮೀಕಿ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾವ್ಯದೊಂದಿಗೆ, ರಚಿಸಿದ ಕವಿಯೂ ಉಳಿದುಕೊಂಡಿದ್ದಾರೆ ಎಂದು ಹೇಳಿದರು.
ಶಿಕ್ಷಕ ಚನ್ನರಾಯಪ್ಪ ವಾಲ್ಮೀಕಿ ಜೀವನ ಸಾಧನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಸಮುದಾಯದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಬಿಇಒ ಭಾಗ್ಯಲಕ್ಷ್ಮಿ, ಎಸ್.ರಾಜೇಶ್, ಜಯಾನಂದ್, ಮುಖಂಡರಾದ ರಾಮ್‍ಮೋಹನ್, ಕೊರ್ನಹಳ್ಳಿ ಆಂಜನಪ್ಪ, ನರಸಿಂಹಮೂರ್ತಿ, ಡಾ.ರಮಾನಂದ್, ಆರ್.ನಾರಾಯಣಸ್ವಾಮಿ, ಕೃಷ್ಣಪ್ಪ, ಮುನಿಸ್ವಾಮಿ ನಾಯಕ್, ನಿತಿನ್ ಕುಮಾರ್, ಹರೀಶ್ ನಾಯಕ್, ರಾಮಚಂದ್ರ, ವೆಂಕಟರವಣಪ್ಪ, ರಾಮಸುಬ್ಬು, ಆಂಜಪ್ಪ, ಬಾಬು ಇದ್ದರು.
ಮೆರವಣಿಗೆ: ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕುದುರೆ ಸಾರೋಟು ಗಮನ ಸೆಳೆಯಿತು. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ವಾಲ್ಮೀಕಿ ಭಾವ ಚಿತ್ರದೊಂದಿಗೆ ಬಂದಿದ್ದ ಹತ್ತಾರು ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಭಂಡಾರ್ಕಾರ್ಸ್: ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರದ ಲಾಂಛನ ಮತ್ತು ರಾಗ ಬಿಡುಗಡೆ


ಕುಂದಾಪುರ: ನಿಮ್ಮ ಒಳಗೊಂದು ಕಿಚ್ಚು ಹುಟ್ಟಬೇಕು. ನಮ್ಮವರೇ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹ ನೀಡಿದಾಗ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ. ಕುಂದಾಪುರ ಪರಿಸರ ಭಾಗದಲ್ಲಿ ಹಲವರು ಕಲೆಗಳಿವೆ ಅವುಗಳಿಗೆ ಇದರ ಉಪಯೋಗವಾಗಲಿ ಇವತ್ತಿನ ವರೆಗಿನ ಹಾದಿಯ ನನ್ನ ದುಡಿಮೆಯ 20ಶೇಕಡಾ ಮಾತ್ರ ನನಗಾಗಿ ಉಳಿದ 80ಶೇಕಡಾ ಸಮಾಜಕ್ಕಾಗಿ ಎಂಬ ಪಾಲಿಸಿ ಹಾಕಿಕೊಂಡು ಬರುತ್ತಿದ್ದೇನೆ. ರೇಡಿಯೋ ಎನ್ನುವುದು ಮೊಬೈಲ್ ಅಥವಾ ಉಳಿದ ಮಾಧ್ಯಮಗಳಿಗಿಂತ ಭಿನ್ನ. ಇದರ ಹಿಂದಿನ ಕೆಲಸಗಳು ಶ್ಲಾಘನೀಯ ಎಂದು ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರ ಇದರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ಜಾದೂಗಾರ ಹಾಗೂ ಸಾಹಿತಿಗಳಾದ ಶ್ರೀ ಓಂ ಗಣೇಶ್ ಅವರು ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರ ಇದರಬಿಡುಗಡೆಗೊಳಿಸಿ ರೇಡಿಯೋ ಒಂದು ಪ್ರಗತಿ ದತ್ತವಾದ ವಿಶಿಷ್ಟವಾದ ವರ ರೇಡಿಯೋ ಹೊರೆತು ಪ್ರಪಂಚ ಇಷ್ಟು ಮುಂದೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.
ಕ. ಸ. ಪ ಉಡುಪಿ ಜಿಲ್ಲೆ ಇದರ ಮಾಜಿ ಅಧ್ಯಕ್ಷರಾದ ಶ್ರೀ.ಎ.ಎಸ್.ಎನ್ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕುಂದಾಪುರ ಕನ್ನಡಕ್ಕೆ ಅದರದೇ ಅದ ವೈಶಿಷ್ಟ್ಯವಿದೆ ಎಂದು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ .ಶಾಂತರಾಮ್ ಪ್ರಭು ರೇಡಿಯೋ ಕುಂದಾಪುರದ ಉಪಯೋಗವನ್ನು ವಿದ್ಯಾರ್ಥಿಗಳು ಸಂಘ ಸಂಸ್ಥೆ ಸಾರ್ವಜನಿಕರೆಲ್ಲರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕುಂದಾಪುರದ ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸುವುದು ಹಾಗೂ ಕುಂದಾಪುರ ಕನ್ನಡ ಎಷ್ಟು ಪ್ರಸಿದ್ಧಿಯನ್ನು ಹೊಂದಿದೆ ಅಷ್ಟೇ ಪ್ರಸಿದ್ಧಿ ನಮ್ಮೂರಿನ ಜನತೆ ಹೊಂದಬೇಕು ಎಂದು ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಯು.ಎಸ್ ಶೆಣೈ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ರೇಡಿಯೋ ಕುಂದಾಪುರ. 89.6 ಈಒ ಇದರ ರಾಗ ಸಂಯೋಜನೆ ಮಾಡಿದ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಲಾಂಛನ ವಿನ್ಯಾಸ ಸ್ಪರ್ಧೆಯ ವಿಜೇತರಾದ ಕೇಶವ ಸಸಿಹಿತ್ಲು ಮತ್ತು ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭಂಡರ್ಕಾರ್ಸ್ ಕಲಾ ಮತ್ತು ವಿಜ್ಞಾನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ದೇವದಾಸ್ ಕಾಮತ್, ಸದಾನಂದ ಛಾತ್ರ, ಜಯಕರ ಶೆಟ್ಟಿ ಪ್ರಜ್ಞೇಶ್ ಪ್ರಭು, ಆಡಳಿತ ಮಂಡಳಿಯ ಸದಸ್ಯರಾದ ಅಭಿನಂದನ್ ಶೆಟ್ಟಿ , ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರದ ಡಾ. ಜಿ.ಎಂ ಗೊಂಡ, ಗಣ್ಯರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರ ಆಚಾರಿ ಅತಿಥಿಗಳನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಎಂ ಗೊಂಡ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸುಮಲತಾ ನಾಯ್ಕ್ ಅತಿಥಿಗಳ ಪರಿಚಯಿದರು, ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.