ಟೆನಿಸ್ ಬಾಲ್ ಕ್ರಿಕೆಟ್ ಗೆ ಪುನರ್ಜನ್ಮ ನೀಡುವ ಟಿ‌‌‌.ಸಿ.ಎ ಉಡುಪಿ ಪ್ರಯತ್ನ ಶ್ಲಾಘನೀಯ-ಪ್ರಶಾಂತ್ ಕುಂದರ್

ಕುಂದಾಪುರ-ಇಲ್ಲಿನ ಗಾಂಧಿಮೈದಾನದಲ್ಲಿ ಟಿ.ಸಿ.ಎ ಉಡುಪಿ ಆಶ್ರಯದಲ್ಲಿ ಉಡುಪಿ-ದ.ಕ ಜಿಲ್ಲಾ ಶಾಲಾ ಕಾಲೇಜು ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ದೊರಕಿತು.

ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಪ್ರಶಾಂತ್ ಕುಂದರ್ “ಗಿಡ ಸುಂದರವಾಗಿ ಕಾಣಲು ಹೂವು ಎಷ್ಟು ಮುಖ್ಯವೋ ,ಪದಾರ್ಥಕ್ಕೆ ಉಪ್ಪು ಖಾರ ಎಷ್ಟು ಮುಖ್ಯವೋ ಅಂತೆಯೇ ಮನುಷ್ಯನ ಜೀವನದಲ್ಲಿ ಕ್ರೀಡೆಯೂ ಮುಖ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಟೆನಿಸ್ ಬಾಲ್ ಕ್ರಿಕೆಟ್ ಉಳಿಸುವ ಟಿ.ಸಿ.ಎ ಪ್ರಯತ್ನ ಶ್ಲಾಘನೀಯ” ಎಂದರು.

64 ವಿದ್ಯಾಸಂಸ್ಥೆಗಳು ಈ ಟೂರ್ನಮೆಂಟ್ ನ ಭಾಗವಾಗಲಿವೆ

ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಟಿ‌‌.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ “ಅಂತರಾಷ್ಟ್ರೀಯ ಆಟಗಾರರೂ ಕೂಡ ತಮ್ಮ ಕ್ರೀಡಾ ಜೀವನವನ್ನು ಟೆನಿಸ್ ಬಾಲ್ ಕ್ರಿಕೆಟ್ ನಿಂದಲೇ ಪ್ರಾರಂಭಿಸಿದ್ದು,ಲೆದರ್ ಬಾಲ್ ಕ್ರಿಕೆಟ್ ಕೆಲವೇ ಕೆಲವು ಅಕಾಡೆಮಿ ಹಾಗೂ ವಿದ್ಯಾಸಂಸ್ಥೆಗಳಿಗೆ ಸೀಮಿತವಾಗಿದೆ ಆದ್ದರಿಂದ ಉಡುಪಿ-ದ.ಕ ಜಿಲ್ಲಾ ವಿದ್ಯಾಸಂಸ್ಥೆಗಳಿಗೆ ಮುಕ್ತ ಆಹ್ವಾನ ನೀಡಿದ್ದು 64 ವಿದ್ಯಾಸಂಸ್ಥೆಗಳು ಈ ಟೂರ್ನಮೆಂಟ್ ನ ಭಾಗವಾಗಲಿವೆ.ಮುಂದಿನ ದಿನಗಳಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಪ್ರತಿಭೆಗಳಿಗೂ ಭವಿಷ್ಯದಲ್ಲಿ ಕ್ರೀಡಾಜೀವನಕ್ಕೆ ಸರ್ವ ಸಹಕಾರ ನೀಡಲಿದ್ದೇವೆ” ಎಂದರು.

ಈ ಸಂದರ್ಭ ವೇದಿಕೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ,ರೋಶನ್ ಕುಮಾರ್ ಶೆಟ್ಟಿ,ಉದ್ಯಮಿ
ಚಿತ್ತರಂಜನ್ ಹೆಗ್ಡೆ ಹರ್ಕೂರು,ರಮೇಶ್ ಶೆಟ್ಟಿ, ಕುಸುಮಾಕರ್ ಶೆಟ್ಟಿ, ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,ಯಾದವ್‌ ನಾಯಕ್ ಕೆಮ್ಮಣ್ಣು,ಸದಾನಂದ ಶಿರ್ವ, ನಾರಾಯಣ ಶೆಟ್ಟಿ ಮಾರ್ಕೋಡು,ಶಂಕರ್ ಅಂಕದಕಟ್ಟೆ,ಸುಧೀರ್.ಕೆ.ಎಸ್, ಚೇತನ್ ಕುಮಾರ್ ದೇವಾಡಿಗ,ಕೋಟ ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ,ಶಿವನಾರಾಯಣ ಐತಾಳ್ ಕೋಟ,ಟಿ‌.ಸಿ.ಎ ಪದಾಧಿಕಾರಿಗಳು ಮತ್ತು ಸದಸ್ಯರು,ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಐಸಿವೈಎಮ್ “ಯುವ ಸ್ಪೋರ್ಟ್ಸ್ ಫಿಯೇಸ್ಟಾ – 2023” ಸಮಾರೋಪ ಮತ್ತು ಟ್ರೋಫಿ ವಿತರಣೆ ಸಮಾರಂಭ

ಕುಂದಾಪುರ: ಭಾರತೀಯ ಕಥೋಲಿಕ್ ಯುವ ಸಂಚಲನ ಕುಂದಾಪುರ ವಲಯದ ವತಿಯಿಂದ ಆಯೋಜಿಸಲಾದ “ಯುವ ಸ್ಪೋರ್ಟ್ಸ್ ಫಿಯೇಸ್ಟಾ – 2023”  ನಡೆದ ಕ್ರೀಡೋತ್ಸವದ ಸಮಾರೋಪ ಮತ್ತು ಟ್ರೋಫಿ ವಿತರಣೆ ಸಮಾರಂಭವು ನವೆಂಬರ್ 05 ರಂದು ಸಂಜೆ ನಡೆಯಿತು.
ಈ ಕ್ರೀಡಾ ಫಿಯೆಸ್ಟಾ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಐದು ವಲಯಗಳಿಂದ ಸುಮಾರು 200 ಯುವ ಯುವತಿಯರು ಭಾಗವಹಿಸಿದ್ದು ಕ್ರೀಡೋತ್ಸವ ಬಹಳ ಯಶಸ್ವಿಯಾಗಿ ಮುಕ್ತಾಯವಾಯಿತು.
ಇದರ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರದ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ವಹಿಸಿದ್ದರು. ಉಡುಪಿ ಧರ್ಮಪ್ರಾಂತ್ಯದ
  ಉಡುಪಿ ಡಯಾಸಿಸ್ ಐ ಸಿ ವೈ ಎಮ್ ಸಂಘಟನೇಯ ನಿರ್ದೇಶಕರಾದ ಧರ್ಮಗುರು ವಂ| ಸ್ಟೀವನ್ ಫೆರ್ನಾಂಡಿಸ್, ಉಡುಪಿ ವಲಯ ಐ ಸಿ ವೈ ಎಮ್ ಸಂಘಟನೇಯ ನಿರ್ದೇಶಕರಾದ ಧರ್ಮಗುರು ವಂ| ರಾನ್ಸನ್ ಡಿಸೋಜ, ಕ್ರೀಡಕೂಟದ ಆತಿಥ್ಯ ವಹಿಸಿದ ಕುಂದಾಪುರ ವಲಯದ ನಿರ್ದೇಶಕರಾದ ಧರ್ಮಗುರು ವಂ| ಅಶ್ವಿನ್ ಅರನ್ನಾ, ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ಥಾಮಸ್ ರೋಶನ್ ಡಿಸೋಜ, ಪಡುಬಿದ್ರಿ ಅಬಕಾರಿ ಪೊಲೀಸ್ ನಿರೀಕ್ಷರಾದ ಮಿಲ್ಲರ್ ಡಿಸೋಜ,ಕುಂದಾಪುರ ಚರ್ಚಿನ ಪಾಲನಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ. ವಲಯ ಯುವ ಆಯೋಗದ ಸಂಚಾಲಕ ಓವಿನ್ ರೆಬೆಲ್ಲೊ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ಅಧ್ಯಕ್ಷ, ಕಾರ್ಯದರ್ಶಿ, ಧರ್ಮಪ್ರಾಂತ್ಯ ಪರಿಷತ್ತಿನ ಸದಸ್ಯರು,ವಲಯ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

ಕ್ರೀಡಾ ಕೂಟದಲ್ಲಿ ಒಟ್ಟಾರೆಯಾಗಿ ಕಲ್ಯಾಣಪುರ ವಲಯವು ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದು ಚಾಂಪಿಯನ್‌ಶಿಪ್ ಟ್ರೋಫಿ ಪಡೆಯಿತು ಶಿರ್ವ ವಲಯವು ರನ್ನರ್ಸ್ ಟ್ರೋಫಿ ಪಡೆಯಿತು

ಬೆಂಗಳೂರು ಹೋಲಿ ತ್ರಿನಿಟಿ ಚರ್ಚಿನಲ್ಲಿ ಕನ್ನಡ ರಾಜ್ಯೋತ್ಸವ- ಸ್ವಯಂ ಪ್ರೇರಿತ ರಕ್ತದಾನ/ Kannada Rajyotsava- Voluntary Blood Donation at Bengaluru Holy Trinity Church

ಬೆಂಗಳೂರು,ನ.6: ಬೆಂಗಳೂರಿನ ಸಹಕಾರ್ ನಗರದ ಹೋಲಿ ತ್ರಿನಿಟಿ ಚರ್ಚಿನಲ್ಲಿ ನ. 5 ರಂದು ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಮರುನಾಮಕರಣದ ಸುವರ್ಣ ಮಹೋತ್ಸವ ಉತ್ಸಾಹ ಸಂಭ್ರಮದಿಂದ ಆಚರಿಸಲಾಯಿತು ಜೊತೆಗೆ ರಾಜ್ಯೋತ್ಸವದ ಸ್ಥಳೀಯ ಲಯನ್ಸ್ ಕ್ಲಬ್ ನೇತ್ರತ್ವದಲ್ಲಿ, ಸ್ವಯಂ ರಕ್ತದಾನ ಶಿಬಿರ ನಡೆಯಿತು.
ಬೆಳಿಗೆನೇ ಬಲಿದಾನದ ಬಳಿಕ ಕನ್ನಡ ಧ್ವಜರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯಿತು. ಸೆಕ್ರೆಟ್ ಹಾರ್ಟ್ ಶಾಲೆಯ ಅಧ್ಯಾಪಕ ಧರ್ಮಗುರು ವಂ|ರಾಯಪ್ಪನವರು ಧ್ವಜರೋಹಣ ಗೈದು. ಕನ್ನಡ ಭಾಶೆಯ ಬಗ್ಗೆ ಸೂಕ್ತವಾದ ತಿಳುವಳಿಕೆ ನೀಡಿದರು. “ಕನ್ನಡ ಭಾಶೆ ಬಹಳ ಶ್ರೀಮಂತ ಭಾಶೆಯಾಗಿದ್ದು, ಇದಕ್ಕೆ ಎರಡುವರೆ ಸಾವಿರ ವರ್ಷಗಳ ಇತಿಹಾಸವಿದೆ. ದ್ರಾವಿಡ ಭಾಶೆಯಿಂದ ಬೇರೆಯಾಗಿ ಸ್ವತಂತ್ರ ಭಾಶೆಯಾಗಿ ದೇಶದ ಅಧಿಕ್ರತ ಭಾಶೆಯಾಗಿದೆ. ಕನ್ನಡ ಭಾಶೆಯಲಿ ಅಪಾರ ಸಾಹಿತ್ಯ ಸಂಕ್ರತಿಗಳು ಇವೆ. ಇಂದು ಇಂಗ್ಲಿಷ್ ಭಾಶೆಯ ಹಾವಳಿಯಲ್ಲಿ ಕನ್ನಡ ಭಾಶೆಗೆ ಹಿನ್ನೆಡೆಯಾಗುತ್ತದೆ, ಹೀಗಾಗಬಾರದು, ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಒಂದೇ ಭಾಶೆ ಇದ್ದರೆ, ಆದರೆ ಕರ್ನಾಟಕದಲ್ಲಿ ಹಲವಾರು ಭಾಶೆಗಳು ಚಾಲ್ತಿಯಲ್ಲಿವೆ ಆಶ್ರಯ ಪಡೆದುಕೊಂಡಿವೆ. ಕರ್ನಾಟಕ ಒಂದು ಮಿನಿ ಭಾರತದಂತೆ. ನಮ್ಮ ದೇಶದಲ್ಲಿ ಇತರ ಭಾಶೆಯವರು ಬೇರೆ ರಾಜ್ಯಕ್ಕೆ ಹೋಗಿ ಅಲ್ಲಿಯವರೇ ಆಗಿ ಅಲ್ಲಿಯ ಭಾಶೆಯನ್ನೇ ಬಳಸುತ್ತಾರೆ, ಹಾಗೇ ನಮ್ಮ ರಾಜ್ಯದಲ್ಲಿಯೂi ಇತರ ಭಾಶೆಗಳ ಜನರು ವಾಸಿಸುತ್ತಾರೆ, ಅವರೂ ಕೂಡ ಕನ್ನಡವನ್ನು ಬಳಸಬೇಕು” ಎಂದು ಸಂದೇಶ ನೀಡಿದರು.
ಹೋಲಿ ತ್ರಿನಿಟಿ ಚರ್ಚಿನ ಧರ್ಮಗುರು ವಂ|ವಿನ್ಸೆಂಟ್ ಕಿರಣ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಧ್ವಜಾರೋಹಣದ ನಂತರ ಕನ್ನಡದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಲಾಯಿತು.
ಕಾರ್ಯಕ್ರಮದ ಮಧ್ಯೆ ಚರ್ಚಿನ ಭಕ್ತಾಧಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ನೀಡಿದರು. ರಕ್ತದಾನ ಶಿಬಿರವು ಬೆಂಗಳೂರು ಸಂಜಯನಗರದ
ಲಯನ್ಸ್ ಕ್ಲಬ್ ಇವರಿಂದ ಆಯೋಜಿಸಲ್ಪಟ್ಟು, ವಸಂತನಗರದ ಲಯನ್ಸ್ ಬ್ಲಡ್ ಸೆಂಟರ್ ವಾಹನದಲ್ಲಿ ರಕ್ತ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಸ್ವಯಂಸೇವಕರು ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಿರು ಆಟಗಳು, ಸಾಂಸ್ಕ್ರತಿಕ ಪ್ರದರ್ಶನಗಳು ನೆಡದವು, ಬೆಳಿಗ್ಗೆ ಉಪಾಅಹಾರ ಮತ್ತು ಮಧ್ಯಾನ್ನ ಊಟದ ವ್ಯವಸ್ಥೆ ಸಂಘಟಕರು ಮಾಡಿದ್ದು, ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ನಡೆಯಿತು.

Kannada Rajyotsava- Voluntary Blood Donation at Bangalore Holy Trinity Church

Bangalore, No. 6: In the Holy Trinity Church of Sahakar Nagar, Bangalore, No. On 5th, Kannada Rajyotsava and Golden Jubilee of Karnataka renaming were celebrated with great enthusiasm and under the supervision of local Lions Club of Rajyotsava, self blood donation camp was held.
Kannada Rajyotsava was started by hoisting the Kannada flag in the morning after sacrifice. Reverend Vam Rayappa, teacher of Secret Heart School, hoisted the flag. Gave proper understanding about Kannada language. “Kannada is a very rich language with a history of two and a half thousand years. It is the official language of the country as an independent language apart from the Dravidian language. Kannada language has immense literary traditions. Today, Kannada language takes a backseat to English language, which should not be the case, if there is only one language in some states of India, but several languages are prevailing in Karnataka. Karnataka is like a mini India. In our country, people of other languages go to other states and use the language of that place, similarly, people of other languages live in our state, they should also use Kannada,” he said.
Reverend Vincent Kiran of Holy Trinity Church welcomed with introductory remarks. After hoisting the flag, holy sacrifice was offered in Kannada.
Devotees of the church voluntarily donated blood during the program. The Blood Donation Camp was organized by the Lions Club, Sanjaynagar, Bengaluru, and arrangements were made to receive blood at the Lions Blood Center vehicle, Vasantnagar. Volunteers of Lions Club were present on the occasion.
On the occasion of Kannada Rajyotsava, Kannada Rajyotsava was organized with short games, cultural performances, breakfast and mid-day meal arranged by the organizers.

ಪಾತಪಲ್ಲಿ ಗ್ರಾಮ, ಲಕ್ಷ್ಮೀಸಾಗರ ಕ್ರಾಸ್ ಬಳಿ ಬಿಜೆಪಿ ಪಕ್ಷದ ವತಿಯಿಂದ ಬರ ಅಧ್ಯಯನ ತಂಡದ ನೇತೃತ್ವದೊಂದಿಗೆ ವೀಕ್ಷಣೆ

ಶ್ರೀನಿವಾಸಪುರ 2 : ಭಾನುವಾರ ತಾಲೂಕಿನ ಪಾತಪಲ್ಲಿ ಗ್ರಾಮಕ್ಕೆ ಹಾಗೂ ಲಕ್ಷ್ಮೀಸಾಗರ ಕ್ರಾಸ್ ಬಳಿ ಬಿಜೆಪಿ ಪಕ್ಷದವತಿಯಿಂದ ಬರ ಅಧ್ಯಯನ ತಂಡದ ನೇತೃತ್ವದೊಂದಿಗೆ ವೀಕ್ಷಣೆ ಮಾಡಿ ಮಾತನಾಡಿದರು.
ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ ಅರಣ್ಯ ರಕ್ಷಾಣಾಧಿಕಾರಿಯನ್ನು ಅತಿ ಶೀಘ್ರವಾಗಿ ವಜಾ ಮಾಡುವಂತೆ ಆಗ್ರಹಿಸಿ, ಮಾನವೀಯತೆ ಇಲ್ಲದೆ, ಮರಗಳನ್ನು ಕಡಿದಿದ್ದು, ಮರಗಳನ್ನು ಕಡಿಯುವ ಅಧಿಕಾರಿ ಯಾರಿಗೂ ಇಲ್ಲ. ಮರಗಳನ್ನು ಕಡಿಯುವ ಅಧಿಕಾರ ಈ ಅರಣ್ಯ ಅಧಿಕಾರಿಗೆ ಯಾರು ಕೊಟ್ಟರು.
ಸರ್ಕಾರವೇ ಸ್ವಾತಂತ್ರ ಪೂರ್ವ, ಸ್ವತಂತ್ರ ನಂತರ ಭೂಮಿಯನ್ನು ಸಾಗವಳಿ ಮಾಡಿರುವುದಕ್ಕಾಗಿ ಕಂದಾಯ ಇಲಾಖೆಯು ದಾಖಲೆಗಳನ್ನು ಕೊಟ್ಟಿದೆ. ಗ್ರಾಂಟ್ ಸಹ ಕೊಟ್ಟಿದೆ. ಗ್ರಾಂಟ್ ಕೊಟ್ಟ ಮೇಲೆ ನನ್ನದು ಎನ್ನುವುದಕ್ಕೆ ಅಧಿಕಾರನೂ ಇಲ್ಲಾ, ಇನ್ನೂ ಮರ ಕಡಿಯುವ ಅಧಿಕಾರ ಇಲ್ಲವೇ ಇಲ್ಲಾ.
ರೈತರು ದಾಖಲೆಗಳನ್ನು ನನಗೆ ತೋರಿಸಿದ್ದಾರೆ. ಕಾನೂನು ರೀತ್ಯ ಬೇಕಾಗಿರುವ ಹೋರಾಟ ಮಾಡುತ್ತೇವೆ. ಪೊಲೀಸ್ ಇಲಾಖೆನೂ ತಪ್ಪು ಮಾಡಿದ್ದಾರೆ. ಯಾರೇ ದೂರುಕೊಟ್ಟರು ಕೇಸು ತೆಗೆದುಕೊಳ್ಳಬೇಕು. ಅರಣ್ಯ ಇಲಾಖೆಯು ಮರಗಳನ್ನ ಕಡಿದಿದೆ. ಅವರ ಮೇಲೆ ದೂರು ಕೊಟ್ಟರು ಪೊಲೀಸರು ತೆಗೆದುಕೊಳ್ಳಬೇಕು. ಪೊಲೀಸ್ ಇಲಾಖೆ ಕೇಸು ತೆಗೆದುಕೊಳ್ಳದೇ ತಪ್ಪು ಮಾಡಿದೆ ಎಂದರು.
ದಾಖಲೆಗಳನ್ನು ಇಟ್ಟುಕೊಂಡು ಪರಿಶೀಲನೆ ಮಾಡಿ ನಂತರ ಕ್ರಮಕೈಗೊಳ್ಳಬೇಕು. ಕೇಸು ತೆಗೆದುಕೊಳ್ಳದೇ ಪೊಲೀಸ್ ಇಲಾಖೆ ತಪ್ಪು ಮಾಡಿದೆ.
ಇದಕ್ಕೆ ಸಂಬಂದಿಸಿದಂತೆ ರೈತರೊಂದಿಗೆ ನಾವೆಲ್ಲರೂ ಇದ್ದು ಹೋರಾಟವನ್ನು ರೂಪಿಸುತ್ತೇವೆ. ಸರ್ಕಾರವು ಸಹಾನುಭೂತಿಯಿಂದ ರೈತರ ಬಳಿ ಇರುವ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಪಾತಪಲ್ಲಿ ಗ್ರಾಮದ ರೈತರ ಹೊಗಳಿಗೆ ಬೇಟಿ ನೀಡಿ ಹೊಲಗಳಲ್ಲಿನ ರಾಗಿ, ಅವರೆ, ತೊಗರಿ, ಬೆಳೆ ಹಾನಿಯಾಗಿರುವದನ್ನು ವಿಕ್ಷೀಸಿದರು. ಮಳೆ ಇಲ್ಲದೆ ಒಣಗಿ ಹೋಗಿರುವ ಬೆಳೆಯ ವೀಕ್ಷಣೆ ರೈತರೊಂದಿಗೆ ಮಾತುಕತೆ ನಡೆಸಿದರು.
ಸಂಸದ ಎಂ.ಮುನಿಸ್ವಾಮಿ , ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ, ಬಿಜಿಪಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್, ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಸೀಸಂದ್ರ ರಾಮಚಂದ್ರ, ರೋಣೂರು ಚಂದ್ರಶೇಖರ್, ರಾಮಾಂಜಿ ಇದ್ದರು.

ಕರ್ನಾಟಕ ಕೊಂಕಣಿ ಲೇಖಕ್ ಸಂಘಾ ಥಾವ್ನ್ ಎಡ್ವಿನ್ ಜೆ. ಎಫ್ ಡಿಸೋಜ ಹಾಂಕಾಂ ಶ್ರದ್ಧಾಂಜಲಿ

2023 ವ್ಯಾ ನವೆಂಬರಾಚ್ಯಾ 5 ತಾರಿಕೆರ್ ಆಯ್ತಾರಾ ಸಕಾಳಿಂ 10 ವೊರಾರ್, ಮಂಗ್ಳುರ್‌ಚ್ಯಾ ಡೊನ್ ಬೊಸ್ಕೊ ಮಿನಿ ಸಭಾಸಲಾಂತ್ ದೆವಾಧಿನ್ ಎಡ್ವಿನ್ ಜೆ. ಎಫ್. ಡಿಸೋಜ ಹಾಂಕಾಂ, ಆನಿ ದೆವಾಧಿನ್ ಜಾಲ್ಯಾ ಹೇರ್ ಕೊಂಕ್ಣಿ ಲೇಖಕಾಂಕ್, ಕರ್ನಾಟಕ ಕೊಂಕಣಿ ಲೇಖಕ್ ಸಂಘ್, ಕರ್ನಾಟಕ ಹಾಂಚೆಂ ತರ್ಫೆನ್ ಶ್ರದ್ಧಾಂಜಲಿ ಪಾಠಯ್ಲಿ. ಎಡ್ವಿನ್ ಜೆ. ಎಫ್. ಡಿಸೋಜ ತಶೆಂಚ್ ಆಯ್ಲೆವಾರ್ ದೆವಾಧಿನ್ ಜಾಲ್ಲ್ಯಾ ಶಾನ್ ಬೊಂದೆಲ್ ಆನಿ ಮೆಕ್ಸಿ ಕೆಲರಾಯ್ ಹಾಂಚೊ ಉಗ್ಡಾಸ್ ಕಾಡ್ನ್ ಮೌನ್ ಪ್ರಾರ್ಥನಾ ದ್ವಾರಿಂ ಮಾನಾನ್ ಗೌರವ್ ಅರ್ಪಿಲೊ ಆನಿ ತಾಂಚ್ಯಾ ಕುಟ್ಮಾಂಕ್ ಭುಜಾವಣ್ ಪಾಠಯ್ಲಿ. ಸುಂಕಾಣ್ ಸಮಿತಿಚೊ ಸಂಚಾಲಕ್ ಮಾನೆಸ್ತ್ ರಿಚಾರ್ಡ್ ಮೊರಾಸಾನ್ ಪ್ರಸ್ತಾವನ್ ದಿತಚ್, ಕೆ.ಎಲ್.ಎಸ್. ತರ್ಫೆನ್ ಡಾ. ಎಡ್ವರ್ಡ್ ನಜ್ರೆತ್ ಹಾಣಿಂ ಎಡ್ವಿನ್ ಜೆ. ಎಫ್ ಡಿಸೋಜಾಚ್ಯಾ ಕಥಾ ಆನಿ ಕಾದಂಬರಿಚೆರ್ ಉಲವ್ಪ್ ದಿಲೆಂ. ಮಾನೆಸ್ತ್ ಮಚ್ಚಾ ಮಿಲಾರ್ ಹಾಣಿಂ ಎಡ್ವಿನ್ ಜೆ. ಎಫ್ ಡಿಸೋಜಾಚ್ಯಾ ಸಾಹಿತ್ಯಾಭಾಯ್ಲ್ಯಾ ವಾವ್ರಾವಿಶಿಂ ಮಾಹೆತ್ ವಾಂಟುನ್ ಘೆತ್ಲಿ. ಮಾನೆಸ್ತ್ ಡೊಲ್ಫಿ ಕಾಸ್ಸಿಯಾನ್ ಸಾಹಿತಿಕ್ ವ್ಯಕ್ತಿತ್ವ್ ಜಾವ್ನ್ ದೆವಾಧಿನ್ ಎಡ್ವಿನಾಚಿ ವಳಕ್ ದಿಲಿ. ರಾಕ್ಣೊ ಸಂಪಾದಕ್ ಮಾ.ಬಾ. ರುಪೇಶ್ ಮಾಡ್ತಾ ಹಾಣಿಂ ದೆವಾಧಿನ್ ಎಡ್ವಿನಾಚ್ಯಾ ದುಖೇಸ್ತಾಂಕ್ ಭುಜ್ವಣ್ ಪಾಠವ್ನ್ ಮಾಗ್ಣೆಂ ಭೆಟಯ್ಲೆಂ.

ದೆವಾಧಿನ್ ಎಡ್ವಿನಾಚಿ ಪತಿಣ್ ಮಾನೆಸ್ತಿನ್ ಜೇನ್ ಡಿಸೋಜ, ಧುವ್ ರುತ್ , ಕುಟ್ಮಾದಾರಾಂ, ಕೊಂಕಣಿ ಸಾಹಿತಿ, ಎಡ್ವಿನಾಚೆ ಅಭಿಮಾನಿ ಸವೆಂ ಹಾಜರ್ ಆಸ್‌ಲ್ಲ್ಯಾ ಸರ್ವಾಂನಿ ದೆವಾಧಿನ್ ಎಡ್ವಿನಾಚ್ಯಾ ತಸ್ವೀರೆಕ್ ಫುಲಾಂ ಅರ್ಪುನ್ ಗೌರವ್ ಪಾಠಯ್ಲೊ.
ಮಾನೆಸ್ತ್ ಹೆನ್ರಿ ಮಸ್ಕರೇನಸಾನ್ ಕಾರ್ಯೆಂ ಚಲವ್ನ್ ವ್ಹೆಲೆಂ.

ಕುಂದಾಪುರದಲ್ಲಿ ಐ ಸಿ ವೈ ಎಮ್ ಉಡುಪಿ ಧರ್ಮಪ್ರಾಂತ್ಯ ಮಟ್ಟದ “ಯುವ ಸ್ಪೋರ್ಟ್ಸ್ ಫಿಯೇಸ್ತಾ – 2023”

ಕುಂದಾಪುರ, ನ.5: ಭಾರತೀಯ ಕಥೋಲಿಕ್ ಯುವ ಸಂಚಲನ ಕುಂದಾಪುರ ವಲಯದ ವತಿಯಿಂದ ಆಯೋಜಿಸಲಾದ “ಯುವ ಸ್ಪೋರ್ಟ್ಸ್ ಫಿಯೇಸ್ತಾ – 2023 ಇದರ ಉದ್ಘಾಟನೆಯು ಕುಂದಾಪುರದ ಗಾಂಧಿ ಮೈದಾನದಲ್ಲಿ 05-11-2023 ಭಾನುವಾರ ಬೆಳಿಗ್ಗೆ 9.30 ಘಂಟೆಗೆ ವಿಜೃಂಭಣೆಯಿಂದ ನೆರವೇರಿತು.


ಈ ಕ್ರೀಡೊತ್ಸವದಲ್ಲಿ ಕುಂದಾಪುರ, ಕಾರ್ಕಳ, ಉಡುಪಿ, ಕಲ್ಯಾಣಪುರ ಹಾಗೂ ಶಿರ್ವ ವಲಯದ ಭಾರತೀಯ ಕಥೋಲಿಕ್ ಯುವ ಸಂಚಲನದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಎಲ್ಲಾ ವಲಯದ ಸ್ಪರ್ಧಾಳುಗಳಿಂದ ಆಕರ್ಷಕ ಪಥಸಂಚಲನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾದ್ಯವ್ರಂ ದದೊಂದಿಗೆ ಎನ್. ಸಿ. ಸಿ ಕೆಡೆಟ್ ರೊನ್ಸನ್ ಡಿಸೋಜರವರ ಮುಂದಾಳುತ್ವದಲ್ಲಿ ನಡೆಯಿತು.

ಪ್ರಥಮವಾಗಿ ಎಲ್ಲಾ ವಲಯದ ಸ್ಪರ್ಧಾಳುಗಳಿಂದ ಆಕರ್ಷಕ ಪಥಸಂಚಲನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾದ್ಯವ್ರಂದದೊಂದಿಗೆ ಎನ್. ಸಿ. ಸಿ ಕೆಡೆಟ್ ರೊನ್ಸನ್ ಡಿಸೋಜರವರ ಮುಂದಾಳುತ್ವದಲ್ಲಿ ನಡೆಯಿತು.

ಅತಿಥಿಗಳಾದ ಉಡುಪಿ ಧರ್ಮಪ್ರಾಂತ್ಯದ ಭಾರತೀಯ ಕಥೋಲಿಕ್ ಯುವ ಸಂಚಲನದ ನಿರ್ದೇಶಕರಾದ ರೆ|ಫಾ| ಸ್ಟೀವನ್ ಫೇರ್ನಾಂಡಿಸ್, ಭಾರತೀಯ ಕಥೋಲಿಕ್ ಯುವ ಸಂಚಲನದ ಉಡುಪಿ ವಲಯದ ಸಂಚಾಲಕರಾದ ರೆ|ಫಾ| ರೊನ್ಸನ್ ಡಿಸೋಜ ಹಾಗೂ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ಭಾರತೀಯ ಕಥೋಲಿಕ್ ಯುವ ಸಂಚಲನದ ಕುಂದಾಪುರ ವಲಯದ ಸಂಚಾಲಕರಾದ ರೆ|ಫಾ| ಅಶ್ವಿನ್ ಆರಾನ್ನಾ ಧ್ವಜಾರೋಹಣ ನೆರವೇರಿಸಿ, ಸ್ಪರ್ಧಾಳುಗಳಿಂದ ಗೌರವ ವಂದನೆ ಸ್ವೀಕರಿಸಿದರು.

ರೆ|ಫಾ| ಸ್ಟೀವನ್ ಫೇರ್ನಾಂಡಿಸ್ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡೊತ್ಸವಕ್ಕೆ ಚಾಲನೆ ನೀಡಿದರು. ರೆ|ಫಾ| ಅಶ್ವಿನ್ ಆರಾನ್ನ ತ್ರಿವರ್ಣ ಧ್ವಜದ ಬಣ್ಣಗಳ ಬೇಲೂನುಗಳನ್ನು ಹಾರಿಬಿಡುವ ಮೂಲಕ ಕ್ರೀಡೊತ್ಸವಕ್ಕೆ ಚಾಲನೆ ನೀಡಿ, ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು.

ಸೈಂಟ್ ಮೇರಿಸ್ ಪ್ರೌಢಶಾಲೆಯ ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ, ಸೈಂಟ್ ಮೇರಿಸ್ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಹಾಗೂ ಕುಂದಾಪುರ ವಲಯದ ಭಾರತೀಯ ಕಥೋಲಿಕ್ ಯುವ ಸಂಚಲನದ ಸಚೇತಕಿ ಶಾಂತಿ ಬರೆಟ್ಟೊ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ರತ್ನಾಕರ್ ಶೆಟ್ಟಿ ಹಾಗೂ ಇತರ ಸ್ಥಳೀಯ ಶಾಲೆಗಳ ದೈಹಿಕ ಶಿಕ್ಷಕರು ಉಪಸ್ಥಿತರಿದ್ದು, ವಿವಿಧ ಸ್ಪರ್ಧೆಗಳನ್ನು ನಡೆಸಲು ಸಹಕರಿಸಿದರು. ಕುಂದಾಪುರ ವಲಯದ ಭಾರತೀಯ ಕಥೋಲಿಕ್ ಯುವ ಸಂಚಲನದ, ಅಧ್ಯಕ್ಷ ನಿತಿನ್ ಬರೆಟ್ಟೊ, ಸಚೇತಕ ಜೇಸನ್ ಪಾಯ್ಸ್ ಮತ್ತು ಎಲ್ಲಾ ವಲಯದ ಅಧ್ಯಕ್ಷರು, ಅನಿಷಾ ಮೆಂಡೊನ್ಸಾ ಸ್ವಾಗತಿಸಿದರು. ಮೆಲ್ವಿನ್ ರೊಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಕುಂದಾಪುರ ಸ.ಪ.ಪೂ.ಕಾಲೇಜಿಗೆ ಭಾ.ರೆಡ್ ಕ್ರಾಸ್ ಕುಂದಾಪುರ ಘಟಕದಿಂದ 78 ಸಾವಿರ ರೂಪಾಯಿ ಬೆಲೆ ಬಾಳುವ ವಾಷ್ ಬೇಸನ್ ಕೊಡುಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಈ ದಿನ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಕ್ಕೆ 78 ಸಾವಿರ ರೂಪಾಯಿ ಬೆಲೆ ಬಾಳುವ ಹದಿನೆಂಟು ನಳ್ಳಿಯ ಕೈ ತೊಳೆಯುವ ವಾಷ್ ಬೇಸನ್ ನೀಡಿದರು. ಇದರ ಉದ್ಘಾಟನೆ ಯನ್ನು ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಯವರು ನಡೆಸಿ ಕೊಟ್ಟರು. ಜೂನಿಯರ್ ಕಾಲೇಜ್ ವತಿಯಿಂದ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಡಾ. ಸೋನಿ, ಸದಾನಂದ ಶೆಟ್ಟಿ ಮತ್ತು ಅಬ್ದುಲ್ ಬಶೀರ್ ಅಲ್ಲದೇ ಕಾಲೇಜಿನ ಬೋದಕ ಬೋದಕೇತರ ಸಿಭಂದಿಗಳು ಉಪಸ್ಥಿತರಿದ್ದರು

ಶಾಲಾ ಕಾಲೇಜು ವಿದ್ಯಾರ್ಥಿಗಳ ಕ್ರಿಕೆಟ್ ಮುಖಾಮುಖಿಗೆ ಬೃಹತ್ ವೇದಿಕೆಯನ್ನು ಸಿದ್ಧಪಡಿಸುತ್ತಿರುವ ಟಿ.ಸಿ.ಎ ಉಡುಪಿ

ಉಡುಪಿ- ಶಾಲಾ,ಕಾಲೇಜು ವಿದ್ಯಾರ್ಥಿಗಳಿಗಾಗಿ ನವೆಂಬರ್ 06 ರಿಂದ ನವೆಂಬರ್ 12 ರ ವರೆಗೆ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ಉಡುಪಿ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸಜ್ಜಾಗುತ್ತಿದೆ.

ಪಂದ್ಯಾವಳಿಯು ನವೆಂಬರ್ 6 ರಿಂದ ಪ್ರಾರಂಭವಾಗಲಿದ್ದು,ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜಿನ ಒಟ್ಟು 64 ತಂಡಗಳು ನೋಂದಣಿ ಮಾಡಿಕೊಂಡಿದ್ದು,ಕುಂದಾಪುರ ಗಾಂಧಿ ಮೈದಾನದಲ್ಲಿ 700 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕ್ರಿಕೆಟ್‌ನಲ್ಲಿ ಸ್ಪರ್ಧಿಸುವುದನ್ನು ನೋಡಬಹುದಾಗಿದೆ.

“ಈ ಪಂದ್ಯಾವಳಿಯು ಶಾಲಾ- ಕಾಲೇಜು ಮಕ್ಕಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ವಿದ್ಯಾರ್ಥಿಗಳಲ್ಲಿ ದೈಹಿಕ ಕ್ಷಮತೆ ಮತ್ತು ಸಾಂಘಿಕ ಕೆಲಸವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ನವೆಂಬರ್ 6 ಬೆಳಿಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಎ.ಕಿರಣ್ ಕೊಡ್ಗಿ ಮತ್ತು ಜನತಾ ಫಿಶ್ ಮಿಲ್ ನ ಪ್ರವರ್ತಕರಾದ ಶ್ರೀ ಪ್ರಶಾಂತ್ ಕುಂದರ್ ಇವರು ಉದ್ಘಾಟಿಸಲಿದ್ದು,
ಟಿ‌.ಸಿ.ಎ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಭಾಗವಹಿಸಲಿದ್ದಾರೆ”ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ ಗೌತಮ್ ಶೆಟ್ಟಿ ತಿಳಿಸಿದ್ದಾರೆ.”

ಟಿ.ಸಿ.ಎ ಉಡುಪಿ ಸಂಸ್ಥೆ ಈ ಕ್ರಿಕೆಟ್ ಪಂದ್ಯಾಟವನ್ನು ಕುಂದಾಪುರದ ಗಾಂಧಿ ಮೈದಾನದಲ್ಲಿ ಆಯೋಜಿಸುತ್ತಿದ್ದು,ಎರಡು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ. ಒಂದರಿಂದ 10ನೇ ತರಗತಿಯ ಮಕ್ಕಳಿಗೆ ಶಾಲಾ ಮಟ್ಟದಲ್ಲಿ ಹಾಗೂ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ಮಟ್ಟದಲ್ಲಿ ಹೀಗೆ ಎರಡು ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ.

ಪಂದ್ಯಾವಳಿಯ ನೇರ ಪ್ರಸಾರ Sportskannadatv ಯುಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.

ಪಟ್ಟಣದ ತಾಲ್ಲೂಕು ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಭೇಟಿ:ಸಿಬ್ಬಂದಿ ಕಾರ್ಯನಿರ್ವಹಣೆ ಪರಿಶೀಲಿಸಿಲನೆ

ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಭೇಟಿ ನೀಡಿ ಸಿಬ್ಬಂದಿ ಕಾರ್ಯನಿರ್ವಹಣೆ ಪರಿಶೀಲಿಸಿದರು.
ಕಚೇರಿಯ ಬೇರೆ ಬೇರೆ ವಿಭಾಗಗಳಿಗೆ ಭೇಟಿ ನೀಡಿ, ಆಯಾ ವಿಭಾಗದಲ್ಲಿ ಆಗಿರುವ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲಿಸಿದರು. ಸಿಬ್ಬಂದಿಗೆ ಅಗತ್ಯವಾದ ಸಲಹೆ ಸೂಚನೆ ನೀಡಿದರು.
ಸಿಬ್ಬಂದಿಯೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನ ನೀಡಬೇಕು. ಕಚೇರಿಗೆ ಬರುವ ಅರ್ಜಿಗಳ ವಿಲೇವಾರಿ ನಿಗದಿತ ಕಾಲಮಿತಿಯೊಳಗೆ ನಡೆಯಬೇಕು. ರೈತರು ಮತ್ತು ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕು. ಸಮಸ್ಯೆ ಜಟಿಲವಾಗಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ವಿನೋದ್, ಶಂಕರರೆಡ್ಡಿ, ಹರಿ, ವಿಶ್ವನಾಥ್ ಇದ್ದರು.
ನಾಡಕಚೇರಿಗೆ ಭೇಟಿ: ಜಿಲ್ಲಾಧಿಕಾರಿ ಅಕ್ರಂ ಪಾಷ ತಾಲ್ಲೂಕಿನ ಗೌನಿಪಲ್ಲಿಯ ನಾಡಕಚೇರಿಗೆ ಭೇಟಿ ನೀಡಿ ಕಚೇರಿ ಕಾರ್ಯನಿರ್ವಹಣೆ ಪರಿಶೀಲಿಸಿದರು. ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹೊರ ಭಾಗದಲ್ಲಿ ನಾಡ ಕಚೇರಿ ಕಟ್ಟಡ ನಿರ್ಮಿಸಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಸಾರ್ವಜನಿಕರು ದೂರಿದರು.