ಶ್ರೀನಿವಾಸಪುರ : ಕೋಲಾರದ ಬಿಜಿಎಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಶುಕ್ರವಾರ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳು ಚದುರಂಗ ಸ್ಪರ್ಧೆಯಲ್ಲಿ ಶ್ರೀನಿವಾಸಪುರ ಗಂಗೋತ್ರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಹಿಮಾಮಲ್ಯ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಲಿ ಕಾರ್ಯದರ್ಶಿ ಅಮರನಾಥ್ ವಿದ್ಯಾರ್ಥಿಯನ್ನು ಅಭಿನಂದಿಸಿದರು.
Year: 2023
ಭಂಡಾರಕಾರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಿಂದ ಹಲವು ವಿದ್ಯಾರ್ಥಿಗಳಿಗೆ ಅವಮಾನ : ಕುಂದಾಪುರ NSUI ಖಂಡನೆ
ಕುಂದಾಪುರದ ಭಂಡಾರಕಾರ್ಸ್ ಕಾಲೇಜೊಂದರ ಉಪನ್ಯಾಸಕಿ ಹಲವು ವಿದ್ಯಾರ್ಥಿಗಳಿಗೆ ಅವಾಚ್ಯವಾಗಿ ನಿಂದಿಸಿ, ಬೈದು ಅವಮಾನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ NSUI (National students union of India) ಘಟಕ ಕಾಲೇಜಿನ ಪ್ರಾಂಶುಪಾಲರನ್ನು ಭೇಟಿಯಾಗಿ ಘಟನೆಯನ್ನು ಖಂಡಿಸಿದ್ದಲ್ಲದೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಉಪನ್ಯಾಸಕರುಗಳ ಅನಾವಶ್ಯಕ ದರ್ಪ, ದೌರ್ಜನ್ಯಗಳ ವಿರುದ್ಧ ಬ್ರಹತ್ ಪ್ರತಿಭಟನೆ ಸಂಘಟಿಸಬೇಕಾದೀತು. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಪ್ರಾಂಶುಪಾಲರಲ್ಲಿ ಮನವಿ ಮಾಡಲಾಯಿತು. NSUI ಮುಖಂಡರುಗಳ ಖಂಡನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಾಂಶುಪಾಲರು ಇನ್ನು ಮುಂದೆ ಇಂತಹ ಘಟನೆಗಳು ತಮ್ಮ ಕಾಲೇಜಿನಲ್ಲಿ ಮರುಕಳಿಸದಂತೆ ಮುತುವರ್ಜಿ ವಹಿಸುವುದಾಗಿ ಭರವಸೆ ನೀಡಿದರು. ಸಂತ್ರಸ್ತ ವಿದ್ಯಾರ್ಥಿಯ ಪರವಾಗಿ ಕುಂದಾಪುರ NSUI ದನಿ ಎತ್ತಿದ್ದು ಕಾಲೇಜು ವಿದ್ಯಾರ್ಥಿ ವಲಯಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.
ಅಭಿನಂದನೆಗಳು ಕುಂದಾಪುರ NSUI .
ಈ ಸಂದರ್ಭದಲ್ಲಿ NSUI ಘಟಕದ ಜಿಲ್ಲಾಧ್ಯಕ್ಷರಾದ ಸೌರಬ್ ಬಳ್ಳಾಲ್ , ಕುಂದಾಪುರ NSUI ಘಟಕದ ಅಧ್ಯಕ್ಷ ಯುವ ನಾಯಕ ಸುಜನ್ ಶೆಟ್ಟಿ ಕುಂದಾಪುರ , ಶರತ್ ಕುಂದರ್ , ಸ್ವಸ್ತಿಕ್ ಶೆಟ್ಟಿ, ಪ್ರವೀಣ್ ಪೂಜಾರಿ , ಸ್ವರೂಪ್ ಭಟ್ , ಧನುಷ್ ಶೆಟ್ಟಿ ಸಲ್ವಾಡಿ , ಸಂಜಯ್, ಚಂದ್ರಕಾಂತ್ , ಸುಕೇಶ್ ರವರು ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಕಾಲೇಜ್ : ಸೇನೆ ಸೇರುವ ಪ್ರೇರಣಾ ಶಿಬಿರ
ಕುಂದಾಪುರ : ನವೆಂಬರ್ 8 ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಇವರ ಆಶ್ರಯದಲ್ಲಿ 2ಂ ಅಔಙ ಬಟಾಲಿಯನ್ ಇವರಿಂದ ವಿದ್ಯಾರ್ಥಿಗಳನ್ನು ಸೈನ್ಯ ಹಾಗೂ ರಕ್ಷಣಾಪಡೆಗಳಿಗೆ ಸೇರಲು ಉತ್ತೇಜಿಸುವ ಪ್ರೇರಣಾ ಕಾರ್ಯಾಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎನ್ ಎಸ್.ಜಿ ಕಮಾಂಡೋ ಆಗಿ ಕಾರ್ಯಕ್ರಮ ನಿರ್ವಹಿಸುತ್ತಿರುವ ನಾಯಕ್ ಮಂಜುನಾಥ್ ಅವರು ಮಾತನಾಡಿ “ಮೊದಲು ನಮ್ಮ ಊರಿನವರಿಗೆ ಸೈನ್ಯ ಸೇರುವ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ ಆದರೆ ಈ ವಾಗ ಎಲ್ಲರಿಗೂ ಮಾಹಿತಿ ನೀಡುವಂತ ಕಾರ್ಯ ನಡೆಯುತ್ತಾ ಇದೆ. ನಾನು ಸೈನ್ಯಕ್ಕೆ ಸೇರಲು 10ನೇ ತರಗತಿಯ ನಂತರವೇ ಪ್ರಯತ್ನ ಪಟ್ಟೆ ಆದರೆ ಕಾರ್ಗಿಲ್ ನ ಭಯ ಇದ್ದುದರಿಂದ ಮನೆಯವರು ಒಪ್ಪಿಗೆ ನೀಡದ ಕಾರಣ ಅಲ್ಲಿಗೆ ಬಿಡಬೇಕಾಯಿತು ಆದರೆ ಅದಾದ 2-3 ವರ್ಷಗಳಲ್ಲಿ ಪುನಃ ಪ್ರಯತ್ನಿಸಿ ಸೈನ್ಯಕ್ಕೆ ಸೇರಿದೆ “ಎಂದು ಮತ್ತು ತಮ್ಮ ಅಭ್ಯಾಸ ಕಲಾವಧಿಯ ಅನುಭವಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ಪ್ರೆರೇಪಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಗಳು ಹಾಗೂ ಕಾಲೇಜಿನ ಆರ್ಮಿ ವಿಂಗ್ ನಲ್ಲಿ ಕೆಡೆಟ್ ಆಗಿ ಪ್ರಸ್ತುತ ಸಮಯದಲ್ಲಿ ಭಾರತೀಯ ವಾಯುಪಡೆಯಲ್ಲಿ ಕಾರ್ಯಕ್ರಮ ನಿರ್ವಹಿಸುತ್ತಿರುವ ಐಂಅ ವೇದಾಂತ್, ಎಲ್.ಎ.ಸಿ.ಶಿಶಿರ್ ಸುವರ್ಣ ಅವರು ಕೂಡ ವಿದ್ಯಾರ್ಥಿಗಳನ್ನು ಪ್ರೆರೇಪಿಸಿದರು
ಈ ಸಂದರ್ಭದಲ್ಲಿ ಪ್ರಾಂಶುಪಾಲಾರದ ಡಾ|ಶುಭಕರಾಚಾರಿ, ಕ್ಯಾಪ್ಟನ್ ಅಂಜನ್ ಕುಮಾರ್ ಎ.ಎಲ್. ಬಿ.ಹೆಚ್.ಎಂ. ಮಹೇಂದ್ ನಿಂಬು ಮತ್ತು ಹವಾಲ್ದಾರ್ ಪೌದು ಅವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಎಲ್.ಸಿ.ಪಿ.ಎಲ್ ವೈಷ್ಣವಿ ಪೈ ಆಟಕೆರೆ ಸ್ವಾಗತಿಸಿದರು. ಸಿ.ಕ್ಯೂ.ಎಮ್.ಎಸ್. ಅನುಷಾ ವಂದಿಸಿದರು. ಜೆ.ಯು.ಒ. ಶ್ರೇಯಾ S ಅವರು ಕಾರ್ಯಕ್ರಮದ ನಿರ್ವಹಿಸಿದರು.
ಹಲವಾರು ವರ್ಷಗಳ ಕುಡಿಯುವ ನೀರಿನ ಬವಣೆಗೆ ಶಾಶ್ವತ ಪರಿಹಾರ – ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ಯರಗೊಳ್ ಯೋಜನೆಗೆ ಚಾಲನೆ
ಕೋಲಾರ : ಹಲವಾರು ವರ್ಷಗಳಿಂದ ಕೋಲಾರ ಜಿಲ್ಲೆಯ ಜನತೆಗೆ ಕುಡಿಯುವ ನೀರನ್ನು ಪೂರೈಸುವ ಮಹತ್ವದ ಯೋಜನೆಯಾದ ಯರಗೊಳ್ ಯೋಜನೆಗೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಚಾಲನೆ ನೀಡಿದರು.
ನಂತರ ಸಭಿಕರನ್ನುದ್ದೇಶಿ ಮಾತನಾಡಿದ ಅವರು ಕೆ ಸಿ ವ್ಯಾಲಿ, ಹೆಚ್ ಎನ್ ವ್ಯಾಲಿ,ಎತ್ತಿನ ಹೊಳೆ ಸೇರಿದಂತೆ ರಾಜ್ಯದ ಎಲ್ಲ ಕುಡಿಯುವ ನೀರಿನ ಯೋಜನೆಗಳನ್ನು ಈ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.ಮುಂದಿನ ದಿನಗಳಲ್ಲಿ ಯರಗೊಳ್ ಜಲಾಶಯದ ಕುಡಿಯುವ ನೀರನ್ನು ಕೆ. ಜಿ. ಎಫ್ ತಾಲ್ಲೂಕಿಗೂ ವಿಸ್ತರಣೆ ಮಾಡಲು ಚಿಂತಿಸಲಾಗುತ್ತಿದೆ. ಜಿಲ್ಲೆಯ ಅಪೂರ್ವ ರಮ್ಯ ಸ್ಥಳಗಳಲ್ಲಿ ಇದೂ ಸೇರಲಿದೆ.ಎತ್ತಿನಹೊಳೆ ಕುಡಿಯುವ ನೀರು ಬಂದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬಹುದಾಗಿದೆ ಎಂದು ತಿಳಿಸುತ್ತಾ ಬೆಮೆಲ್ ನಿಂದ ವಾಪಸ್ ಪಡೆಯಲಾದ 914 ಎಕರೆ ಭೂಮಿಯಲ್ಲಿ ಅತ್ಯಾಧುನಿಕ ಟೌನ್ ಶಿಪ್ ನಿರ್ಮಾಣ ಮಾಡಲಾಗುವುದು,ಕೋಲಾರ ಜಿಲ್ಲೆಯಲ್ಲಿ 50 ಎಕರೆಗಳ ಜಾಗದಲ್ಲಿ ಕೋಮುಲ್ ಮೆಗಾ ಗೋಲ್ಡನ್ ಡೈರಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಇತರೆ ಎಲ್ಲ ಇಲಾಖೆಗಳ ಒಟ್ಟು 2197.72 ಕೋಟಿಗಳ ಮೊತ್ತದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗಿದೆ ಈ ಮೂಲಕ ಜಿಲ್ಲೆಗೆ ಅತೀ ಹೆಚ್ಚು ಅನುದಾನ ಒದಗಿಸಿದ ಸರ್ಕಾರ ಈ ಸರ್ಕಾರವಾಗಿದೆ ಎಂದು ನುಡಿದರು ಇದಕ್ಕೂ ಮುನ್ನ ತುಂಬಿದ ಯರಗೋಳ್ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಬಿ. ಎಸ್ ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಬಾಗಿನ ಅರ್ಪಿಸಿದರು.
ಸಮಾರಂಭದಲ್ಲಿ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ನಾಗರಾಭಿವವೃದ್ಧಿ ಹಾಗೂ ನಗರ ಯೋಜನೆ ಸಚಿವರಾದ ಬಿ. ಎಸ್. ಸುರೇಶ್, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಎಂ ಸಿ. ಸುಧಾಕರ್, ಸಮಾಜಕಲ್ಯಾಣ ಸಚಿವರಾದ ಹೆಚ್ ಸಿ ಮಹದೇವಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಹೆಚ್ ಮುನಿಯಪ್ಪ, ಇಂಧನ ಸಚಿವರಾದ ಕೆ. ಜೆ ಜಾರ್ಜ್, ಕೋಲಾರ ಸಂಸದ ಎಸ್ ಮುನಿಸ್ವಾಮಿ, ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ವಿಧಾನಸಭಾ ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಕೆ ಎಂ, ಕೆ ಜಿ ಎಫ್ ತಾಲ್ಲೂಕು ವಿಧಾನಸಭಾ ಶಾಸಕರಾದ ಡಾ. ರೂಪಕಲಾ ಶಶಿಧರ್,ಮಾಲೂರು ತಾಲ್ಲೂಕು ವಿಧಾನಸಭಾ ಶಾಸಕ ಕೆ. ವೈ ನಂಜೇಗೌಡ, ಕೋಲಾರ ತಾಲ್ಲೂಕು ವಿಧಾನಸಭಾ ಶಾಸಕ ಡಾ. ಕೊತ್ತೂರು ಜಿ ಮಂಜುನಾಥ್, ಮುಳಬಾಗಲು ತಾಲ್ಲೂಕು ವಿಧಾನಸಭಾ ಶಾಸಕ ಸಮೃದ್ಧಿ ಮಂಜುನಾಥ್, ಶ್ರೀನಿವಾಸಪುರ ತಾಲ್ಲೂಕು ವಿಧಾನಸಭಾ ಶಾಸಕ ಜಿ.ಕೆ ವೆಂಕಟಾಶಿವಾರೆಡ್ಡಿ ವಿಧಾನ ಪರಿಷತ್ ಶಾಸಕರಾದ ಇಂಚರ ಗೋವಿಂದರಾಜು , ಎಂ ಎಲ್ ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನಕಲಿ ಬಿತ್ತನೆ ಬೀಜದಿಂದ ಲಕ್ಷ ಪರಿಹಾರ – ನೀಡಿ ನಕಲಿ ಬಿತ್ತನೆ ಬೀಜ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಲು ಸಿ.ಎಮ್ ಗೆ ಮನವಿ
ಕೋಲಾರ-ನ-11, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನಕಲಿ ಬಿತ್ತನೆ ಬೀಜದಿಂದ ನಷ್ಟವಾಗಿರುವ ಟೆಮೋಟೋ ಆಲೂಗಡ್ಡೆಗೆ 2 ಲಕ್ಷ ಪರಿಹಾರ ನೀಡಿ ನಕಲಿ ಬಿತ್ತನೆ ಬೀಜ ನಿಯಂತ್ರಣಕ್ಕೆ ಕಾನೂನು ರಚನೆ ಮಾಡುವಂತೆ ಹಾಗೂ ಕೆ.ಸಿ.ವ್ಯಾಲಿ 3ನೇ ಹಂತದ ಶುದ್ದೀಕರಣಕ್ಕಾಗಿ ರೈತ ಸಂಘದಿಂದ ಯರಗೋಳ್ ಉದ್ಗಾಟನಗೆ ಆಗಮಿಸಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರಿಗೆ ನಷ್ಟ ಆಲೂಗಡ್ಡೆ ಬೆಳೆ ಸಮೇತ ಮನವರಿಕೆ ಮಾಡಿ ಮನವಿ ನೀಡಿ ಒತ್ತಾಯಿಸಲಾಯಿತು.
ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರ ರಕ್ಷಣೆಗಾಗಿ ಸರ್ಕಾರ ಪ್ರತಿ ಪಂಚಾಯ್ತಿಗೊಂದು ಘೋಶಾಲೆ ತೆರೆದು ಜಾನುವಾರುಗಳ ರಕ್ಷಣೆ ಮಾಡುವ ಜೊತೆಗೆ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳ ವ್ಯವಸ್ಥಾಪಕರಿಗೆ ರೈತರಿಂದ ಬಲವಂತದ ಸಾಲ ಹಾಗೂ ನೋಟೀಸ್ ನೀಡದಂತೆ ಆದೇಶ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾನ್ಯ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದರು.
5-6 ವರ್ಷಗಳಿಂದ ಜಿಲ್ಲಾದ್ಯಂತ ಟೆಮೋಟೋ, ಆಲೂಗಡ್ಡೆ, ಕ್ಯಾಪ್ಸಿಕಂ ಬೆಳೆಗಳಿಗೆ ಬಾದಿಸುತ್ತಿರುವ ಅಂಗಮಾರಿ, ಊಜಿ, ನುಸಿರೋಗ, ಲಕ್ಷಾಂತರ ರೂಪಾಯಿ ಔಷದಿ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬಾರದೆ ಹಾಕಿ ಬಂಡವಾಳ ಕೈಗೆ ಸಿಗದೆ ಸಂಕಷ್ಟದಲ್ಲಿರುವ ರೈತರಿಗೆ ಕಾಡುತ್ತಿರುವ ಪ್ರಶ್ನೆ ಎಂದರೆ ಜಿಲ್ಲೆಯ ರೈತರಿಗೆ ಕೆ.ಸಿ.ವ್ಯಾಲಿ ವರದಾನವೋ? ಶಾಪವೋ ತಿಳಿಯದಂತಾಗಿದೆ ಎಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಕೆ.ಸಿ.ವ್ಯಾಲಿ ನೀರನ್ನು 3ನೇ ಹಂತದ ಶುದ್ದೀಕರಣ ಮಾಡಿ, ರೈತರಲ್ಲಿರುವ ಸಂಶಯವನ್ನು ದೂರ ಮಾಡಬೇಕೆಂದು ಒತ್ತಾಯ ಮಾಡಿದರು.
ಒಂದು ಕಡೆ ಟೆಮೋಟೋಗೆ ಬಿಂಗಿರೋಗ ಮತ್ತೊಂದಡೆ ಆಲೂಗಡ್ಡೆ ಬಿತ್ತನೆ ಮಾಡಿ 2 ತಿಂಗಳು ಕಳೆದರೂ ಕನಿಷ್ಟ ಗೋಳಿಗಾತ್ರದ ಗಡ್ಡೆಯೂ ಸಹ ಬಿಡದೆ ಸಂಪೂರ್ಣವಾಗಿ ಸುಮಾರು 50 ಸಾವಿರ ಎಕರೆ ಆಲೂಗಡ್ಡೆ ಬೆಳೆ ನಾಶವಾಗಿ ಸಂಬಂಧಪಟ್ಟ ತೋಟಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ವಿಜ್ಞಾನಿಗಳನ್ನು ಕರೆಯಿಸಿ ಪರಿಶೀಲನೆ ಮಾಡಿ ಕಡೆಗೆ ಅಜ್ಞಾನಿಗಳಂತೆ ಅನಕ್ಷರಸ್ಥ ರೈತರದೇ ತಪ್ಪು ಎಂದು ವರದಿ ನೀಡಿ ನಕಲಿ ಬಿತ್ತನೆ ಬೀಜ ವಿತರಣೆ ಮಾಡಿದೆ, ಆಲೂಗಡ್ಡೆ ಮಾಲೀಕರನ್ನು ರಕ್ಷಣೆ ಮಾಡಿದ್ದಾರೆಂದು ದೂರು ನೀಡುವ ಜೊತೆಗೆ ಮಾನ್ಯರು ಜಿಲ್ಲಾಧಿಕಾರಿಗಳಿಂದ ನಷ್ಟ ಬೆಳೆ ವರದಿಯನ್ನು ತರಿಸಿಕೊಂಡು ಪ್ರತಿ ಎಕರೆಗೆ ಕನಿಷ್ಠ 2 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಹೋಬಳಿ ಅಧ್ಯಕ್ಷ ಕಾಮಸಮುದ್ರ ಮುನಿಕೃಷ್ಣ ಮಾತನಾಡಿ ಗಡಿಭಾಗದ ರೈತರ ಜೀವ ಹಾಗೂ ಬೆಳೆಯನ್ನು ಹತ್ತಾರು ವರ್ಷಗಳಿಂದ ನಾಶ ಮಾಡುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ನೊಂದ ರೈತರು ಜಾತಕ ಪಕ್ಷಿಗಳಂತೆ ಸರ್ಕಾರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳನ್ನು ಎದುರು ನೋಡುತ್ತಿದ್ದರೂ, ಯಾವುದೇ ಪರಿಹಾರ ಸಿಗುತ್ತಿಲ್ಲ. ಜೊತೆಗೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಡಾನೆಗಳು ಬಂದು ಬೆಳೆ ಅಥವಾ ರೈತರ ಜೀವವನ್ನು ತೆಗೆದಾಗ ಮಾತ್ರ ಸ್ಥಳೀಯ ಶಾಸಕರು ನೆಪಮಾತ್ರಕ್ಕೆ ಮೃತಪಟ್ಟ ರೈತ ಕುಟುಂಬದ ಸದಸ್ಯರಿಗೆ ಮೊಸಳೆ ಕಣ್ಣೀರು ಹಾಕಿ ನಾಪತ್ತೆಯಾದರೆ ಮತ್ತೆ ಸಮಸ್ಯೆಯಾದಾಗ ಕಾಣಿಸಿಕೊಳ್ಳುತ್ತಿದ್ದಾರೆಂದು ದೂರು ನೀಡಿದರು.
ಒಂದು ಕಡೆ ಕಾಡಾನೆಗಳ ಹಾವಳಿ ಮತ್ತೊಂದು ಕಡೆ ಗಡಿಭಾಗಗಳಲ್ಲಿ ಹದಗೆಟ್ಟ ರಸ್ತೆಗಳಿಲ್ಲದೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಪ್ರತಿಯೊಂದು ಸಮಸ್ಯೆಗೂ ನಗರದ ಹೃದಯ ಭಾಗಕ್ಕೆ ಹತ್ತಾರು ಕಿಲೋಮಿಟರ್ ಕಾಡುಗಳಲ್ಲಿ ಕಾಡಾನೆಗಳ ಭಯದಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದೆ. ಮತ್ತು ಕಾಡಾನೆಗಳ ಹಾವಳಿಯಿಂದ ಬೆಳೆ ರಕ್ಷಣೆ ಮಾಡಲು ಸರ್ಕಾರ ಶಾಶ್ವತ ಪರಿಹಾರ ನೀಡಬೇಕಾದರೆ ಬನ್ನೇರುಘಟ್ಟ ಮಾದರಿಯಲ್ಲಿ ಆನೆ ಕಾರಿಡಾರ್ ಅಭಿವೃದ್ದಿ ಪಡಿಸಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಮುಖ್ಯ ಮಂತ್ರಿಗಳು ನಿಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ, ಕದರಿನತ್ತ ಗೋವಿಂದಪ್ಪ, ಬೀಮಗಾನಹಳ್ಳಿ ಮುನಿರಾಜು, ವಿಶ್ವ, ಅಪ್ಪೋಜಿರಾವ್, ಗಿರೀಶ್, ಮಂಗಸಂದ್ರ ತಿಮ್ಮಣ್ಣ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮುಂತಾದವರು ಇದ್ದರು.
ರೌಡಿಗಳ ಹಾವಳಿ ಹೆಚ್ಚಾಗುತ್ತಿದೆ-ಕೋಲಾರ ರೈತ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ
ಕೋಲಾರ ನವೆಂಬರ್ 11 : ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಯರಗೋಳ್ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಿದರು.
ಶನಿವಾರ ಕೋಲಾರ ಜಿಲ್ಲೆಗೆ ಆಗಮಿಸಿದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕಲ್ವಮಂಜಲಿ ರಾಮುಶಿವಣ್ಣ ಜಿಲ್ಲೆಯಲ್ಲಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು ಕೊಲೆ ದರೋಡೆ ಮಟ್ಕಾ ಜೂಜು ಇನ್ನು ಸುಮಾರು ಕಾನೂನುಬಾಹಿರ ಚಟುವಟಿಕೆಗಳು ಜಿಲ್ಲೆಯಲ್ಲಿ ತಾಂಡವಾಡುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಂಪೂರ್ಣ ಅಧಿಕಾರವನ್ನು ಪೊಲೀಸರಿಗೆ ನೀಡಬೇಕೆಂದು ಒತ್ತಾಯಿಸಲಾಯಿತು.
ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತ ವಿರೋಧಿ ಕಾಯ್ದೆಗಳಾದ ಎಪಿಎಂಸಿ ಕಾಯ್ದೆ, ಭೂಸ್ವಾಜಿನ ಕಾಯ್ದೆ ಕೆಪಿಟಿಸಿಎಲ್ ಕಾಯ್ದೆಯನ್ನು ವಾಪಸ್ ಪಡೆಯಲು ಹಾಗೂ ರೈತರ ಕೃಷಿ ಪಂಪ್ ಸೆಟ್ಗಳಿಗೆ ಮೀಟರ್ ಅಳವಡಿಸಬಾರದೆಂದು ಒತ್ತಾಯಿಸಲಾಯಿತು.
ಕೆ ಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಿಕೊಡಿ ಎಂದು ಮನವಿ ಸಲ್ಲಿಸಿಲಾಯಿತು.
ಈ ಸಂದರ್ಭದಲ್ಲಿ ರೈತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ನಾರಾಯಣಸ್ವಾಮಿ, ಮಾಲೂರು ತಾಲ್ಲೂಕು ಅಧ್ಯಕ್ಷ ತಿಪ್ಪಸಂದ್ರ ಹರೀಶ್ಗೌಡ, ಕಾಡುಕಚ್ಚನಹಳ್ಳಿ ವಿಶ್ವನಾಥ್ಗೌಡ, ಮುಳಬಾಗಿಲು ತಾಲೂಕು ಅಧ್ಯಕ್ಷ ಜಗನ್ನಾಥ್ ರೆಡ್ಡಿ, ಕೋಲಾರ ತಾಲೂಕು ಅಧ್ಯಕ್ಷ ಇನ್ನು ಮುಂತಾದವರು ಇದ್ದರು.
ಅತಿಸಾರ ಭೇದಿ ತಡೆಗಟ್ಟಿ ಮಕ್ಕಳನ್ನು ರಕ್ಷಿಸಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಿ ಇ ಓ ಸೂಚನೆ
ಕೋಲಾರ: ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಉಂಟಾಗುವ ಅನಾಹುತ ತಪ್ಪಿಸಲು, ಆಶಾ ಕಾರ್ಯಕರ್ತೆಯರು ಐದು ವರ್ಷದೊಳಗಿನ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಓಆರ್ಎಸ್ ನೀಡಿ ಮಕ್ಕಳಿಗೆ 14 ದಿನಗಳವರೆಗೆ ಜಿಂಕ್ ದ್ರಾವಣ ಕೊಟ್ಟು ಸೂಕ್ತ ಆಹಾರ ಪದಾರ್ಥಗಳನ್ನು ಶಿಶುವಿಗೆ ನೀಡುವ ಕುರಿತು ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಪದ್ಮ ಬಸವಂತಪ್ಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ (IDCF) 2023 ರ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಡುಗೆಯವರಿಗೆ ಅಂಗನವಾಡಿಯಲ್ಲಿ ಅಂಗನವಾಡಿ ಸಹಾಯಕಿಯರಿಗೆ ಹಾಗೂ ಮಕ್ಕಳಿಗೆ ವೈಜ್ಞಾನಿಕವಾಗಿ ಕೈತೊಳೆಯುವ ಬಗ್ಗೆ ಹಾಗೂ ಶೌಚಾಲಯ ಬಳಸುವ ಬಗ್ಗೆ ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಂಗನವಾಡಿ ಶಿಕ್ಷಕಿಯರು ಮಾರ್ಗದರ್ಶನ ಹಾಗೂ ತರಬೇತಿ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ORS ಬಳಸುವುದು ಹಾಗೂ ಅದರ ಪ್ರಯೋಜನದ ಬಗ್ಗೆ ಮಕ್ಕಳಿಗೆ ವಿಡಿಯೋ ಪ್ರದರ್ಶನ ನೀಡಿ ಅರಿವು ಮೂಡಿಸಿ ಎಂದು ಸೂಚನೆ ನೀಡಿದರು.
ತೀವ್ರತರ ಅತಿಸಾರ ನಿಯಂತ್ರಣ ಬಗ್ಗೆ ಶಾಲಾ ಕಾಲೇಜು ಮಕ್ಕಳಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿ ಎಂದು ಹೇಳಿದರು.
ಶಾಲಾ ಕಾಲೇಜು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಥಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
RCH ಅಧಿಕಾರಿ ವಿಜಯಕುಮಾರಿ ಮಾತನಾಡಿ ಒ.ಆರ್.ಎಸ್. ದ್ರಾವಣ ಬಳುಸುವ ವಿಧಾನದ ಕುರಿತು ಸಭೆಗೆ ತಿಳಿಸಿದರು. ಒ.ಆರ್.ಎಸ್. ದ್ರಾವಣ ತಯಾರಿ ಮೊದಲು ಕೈಗಳನ್ನು ಚೆನ್ನಾಗಿ ತೊಳೆದು ಶುದ್ಧ ಪಾತ್ರೆಯಲ್ಲಿ 1 ಲೀ. ಶುದ್ಧ ಕುಡಿಯುವ ನೀರನ್ನು (ಕುದಿಸಿ ಆರಿಸಿದ ನೀರು) ತೆಗೆದು ಕೊಂಡು ಒಂದು ಒ.ಆರ್.ಎಸ್ ಪ್ಯಾಕೆಟ್ನ ಎಲ್ಲ ಮಿಶ್ರಣವನ್ನು ಆ ನೀರಿನಲ್ಲಿ ಬೆರೆಸಿ ನೀರನ್ನು ಸ್ವಚ್ಛ ಚಮಚದಿಂದ ಕಲಕಿ ಪಾತ್ರೆಯನ್ನು ಮುಚ್ಚಿಡಿ. ಈ ರೀತಿ ತಯಾರಿಸಿದ ಒ.ಆರ್. ಎಸ್. ದ್ರಾವಣವನ್ನು ಮಕ್ಕಳಿಗೆ ಪದೇ ಪದೆ ನೀಡಿ. – 2 ತಿಂಗಳವರೆಗೆ – 5 ಚಮಚ ದ್ರಾವಣ. 2 ತಿಂಗಳಿಂದ – 2 ವರ್ಷಗಳವರೆಗೆ – 1/4 – 1/2 ಕಪ್ ದ್ರಾವಣ 2 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ -1/2 – 1 ಕಪ್. ಮಗುವು ತಿಳಿಯಾದ, ಸಾಕಷ್ಟು ಪ್ರಮಾಣದಲ್ಲಿ ಮೂತ್ರ ಮಾಡುವವರೆಗೂ ಒ.ಆರ್. ಎಸ್ ದ್ರಾವಣ ನೀಡಿ. ಹೆಚ್ಚು ಕುಡಿಯುವ ಮಗುವಿಗೆ ಹೆಚ್ಚು ಕುಡಿಸಬೇಕು.
ನೀರಿನ ಮಾಲಿನ್ಯವನ್ನು ತಡೆಗಟ್ಟುವ ವಿಧಾನಗಳು ತಿಳಿಸಿದರು
ನೀರನ್ನು ಯಾವಾಗಲೂ ಕುದಿಸಿ ಆರಿಸಿ ಕುಡಿಯುವುದು.
ಕುಡಿಯುವ ನೀರಿನ ಮೂಲದಿಂದ ಕನಿಷ್ಠ 60 ಅಡಿ ಅಂತರದಲ್ಲಿ ಯಾವುದೇ ತ್ಯಾಜ್ಯ ನೀರು, ತ್ಯಾಜ್ಯ ವಸ್ತು, ಲ್ಯಾಟ್ರಿನ್ ಪಿಟ್ ಇರದಂತೆ ಮಾಡಿಕೊಳ್ಳುವುದು.
ಸಾರ್ವಜನಿಕರು ಕುಡಿಯುವ ನೀರಿನ ಮೂಲಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸಿ ಕ್ಲೋರಿನ್/ ಬ್ಲೀಚಿಂಗ್ ಪೌಡರ್ ಹಾಕುವುದು ಬೇಕು ಎಂದು ಹೇಳಿದರು.
ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ: ಜಗದೀಶ್,DDPI ಕೃಷ್ಣ ಮೂರ್ತಿ,ಡಾ: ವಿಜಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ನಾರಾಯಣಸ್ವಾಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಳೆ ಕೊರತೆ ಸಂಕಷ್ಟದ ಸಂದರ್ಭದಲ್ಲಿ ಕೃಷಿಕರ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು: ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಮಳೆ ಕೊರತೆಯಿಂದ ಉಂಟಾಗಿರುವ ಸಂಕಷ್ಟದ ಸಂದರ್ಭದಲ್ಲಿ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿ ಕೃಷಿ ಹಾಗೂ ಹೈನುಗಾರಿಕೆ ಮೇಲೆ ದುಷ್ಪರಿಣಾಮ ಉಂಟುಮಾಡಿದೆ ಎಂದು ಹೇಳಿದರು.
ಸಧ್ಯದ ಪರಿಸ್ಥಿತಿಯಲ್ಲಿ ಜಾನುವಾರು ಮೇವಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಜಾನುವಾರು ಮೇವು ಬೆಳೆಯಲು ಈಗಾಗಲೆ ಪಶುಪಾಲನಾ ಇಲಾಖೆಯಿಂದ ರೈತರಿಗೆ ಮೇವಿನ ಬೀಜ ವಿತರಿಸಲಾಗಿದೆ. ಆದರೆ ಮಳೆ ಕೊರತೆ ಪರಿಣಾಮವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಆದ್ದರಿಂದ ಈಗ ಮತ್ತೆ ಮೇವಿನ ಬೀಜ ವಿತರಣೆ ಮಾಡಬೇಕಾಗಿದೆ. ಹಿಂಗಾರು ಮಳೆಯಾದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜನತಾ ದರ್ಶನ: ಪಟ್ಟಣದ ಮಾರುತಿ ಸಭಾ ಭವನದಲ್ಲಿ ನ.17 ರಂದು ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಬಹುವುದು. ಆಯಾ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಿರುವುದರಿಂದ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ಆದ್ದರಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಪಟ್ಟಣದ ಪ್ರವೇಶಿಸುವ ರಸ್ತೆಯಲ್ಲಿ ಸ್ವಾಗತ ಫಲಕ ಅಳವಡಿಸಬೇಕು ಹಾಗೂ ತಳಿರು ತೋರಣ ಕಟ್ಟಿ ಬರಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ತಹಶೀಲ್ದಾರ್ ಶಿರಿನ್ ತಾಜ್, ಉಪ ತಹಶೀಲ್ದಾರ್, ಜಯರಾಮ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ವಿನೋದ್, ಹರಿ, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರಾದ ಕೆ.ಸಿ.ಮಂಜುನಾಥ್, ಕೃಷ್ಣಪ್ಪ, ಎ.ಬೈರಾರೆಡ್ಡಿ, ಡಾ. ಮಂಜುನಾಥರೆಡ್ಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣಸ್ವಾಮಿ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಯಾನಂದ್, ಬೆಸ್ಕಾಂ ಸಹಾಯಕ ಎಂಜಿನಿಯರ್ ನಂಜುಂಡೇಶ್ವರ ಮತ್ತಿತರರು ಇದ್ದರು.
ಯುವ ಜನತೆಗೆ ನಶೆ ಏರುವ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಮೆಡಿಕಲ್ ಸ್ಟೋರ್ ಮಾಲೀಕರ ವಿರುದ್ದ ಗೂಂಡಾ ಕಾಯ್ದೆ ಕೇಸ್ ದಾಖಲಿಸಿ-ರೈತ ಸಂಘ
ಕೋಲಾರ, ನ.10: ಯುವ ಜನತೆಗೆ ನಶೆ ಏರುವ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಭವಿಷ್ಯದ ಜೊತೆ ಚೆಲ್ಲಾಟ ಆಡುವ ಮೆಡಿಕಲ್ ಸ್ಟೋರ್ ಮಾಲೀಕರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸ್ ದಾಖಲಿಸಿ ನಾಪತ್ತೆ ಆಗಿರುವ ಡ್ರಗ್ಸ್ ನಿಯಂತ್ರಣಾಧಿಕಾರಿಗಳನ್ನು ಹುಡುಕಿ ಕೊಡಬೇಕಬೇಕೆಂದು ರೈತ ಸಂಘದಿಂದ ಮಾದಕ ವಸ್ತು ನಿಯಂತ್ರಣಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
9 ತಿಂಗಳು ಹೊಟ್ಟೆಯಲ್ಲಿ ಜೋಪಾನ ಮಾಡಿ ನೋವು ತಡೆದುಕೊಂಡು ಜನ್ಮ ಕೊಟ್ಟ ತಾಯಿ ತನ್ನ ಮಗು ಸಮಾಜಕ್ಕೆ ಉತ್ತಮ ಪ್ರಜೆ ಆಗಲಿ ಎಂಬ ಆಸೆ ಹೊತ್ತಿರುವ ಪೋಷಕರ ಆಸೆಗೆ ತಣ್ಣೀರು ಎರೆಸಿ ಸಮಾಜಕ್ಕೆ ಘಾತಕರಾಗುತ್ತಿರು ಆದಿಹರಿಯದ ಯುವ ಪ್ರತಿಭೆಗಳ ಭವಿಷ್ಯವನ್ನು ನಾಶ ಮಾಡುತ್ತಿರುವ ಮಾದಕ ವಸ್ತು ಮಾರಾಟ ಮಾಡುವವರ ವಿರುದ್ದ ಗೂಂಡಾ ಕಾಯ್ದೆ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕೆಂದು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ಆರೋಗ್ಯವೇ ಭಾಗ್ಯ ಎಂದು ಆನಾರೋಗ್ಯವೇ ಭಾಗ್ಯವಾಗಿದೆ ಈಗಾಗಲೆ ಆಧುನಿಕತೆ ಮುಂದುವರೆದಂತೆ ಪ್ರತಿಯೊಂದಕ್ಕೂ ಮಾತ್ರೆಯಿಲ್ಲದೆ ಮಾನವನ ಬದುಕಿಲ್ಲ ಅಷ್ಟರ ಮಟ್ಟಿಗೆ ಮನುಷ್ಯನ ಜೀವನ ಮಾತ್ರೆಗಳ ಲೋಕವಾಗಿದೆ. ಮತ್ತೊಂದೆಡೆ ಅಡ್ಡದಾರಿಯಲ್ಲಿ ಹಣ ಮಾಡಿ ಶ್ರೀಮಂತರಾಗುವ ಕೆಲವು ಮೆಡಿಕಲ್ ಸ್ಟೋರ್ ಮಾಲೀಕರ ಕಾನೂನು ಬಾಹಿರ ನಶೆ ಬರುವ ಮಾತ್ರೆ ಇಂಜೆಕ್ಷನ್ ಗಳನ್ನು ಆಕ್ರಮವಾಗಿ ದಾಸ್ತಾನು ಮಾಡಿಕೊಂಡು ಬದುಕಿ ಬಾಳಿ ಭವಿಷ್ಯ ರೂಪಿಸಿಕೊಳ್ಳಬೇಕಾದ ಶಾಲಾ ಕಾಲೇಜು ಮಕ್ಕಳಿಗೆ ಮಾರಾಟ ಮಾಡುವ ಮುಖಾಂತರ ಅವರ ಭವಿಷ್ಯವನ್ನು ಕಸಿದು ಸಮಾಜದಲ್ಲಿ ಘಾತಕ ,ರೌಡಿಗಳಾಗುವ ಮಟ್ಟಕ್ಕೆ ಹಾಳು ಮಾಡುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಾಪತ್ತೆ ಆಗಿರುವುದು ದುರಾದೃಷ್ಠಕರ ಎಂದು ವಿಷಾದ ವ್ಯಕ್ತಪಡಿಸಿದರು.
ಮೆಡಿಕಲ್ ಸ್ಟೋರ್ ಪ್ರಾರಂಭ ಮಾಡಬೇಕಾದರೆ ಕಡ್ಡಾಯವಾಗಿ ಅದಕ್ಕೆ ಸಂಬಂಧಪಟ್ಟಂತೆ ಬಿ.ಪಾಮ್ ಶಿಕ್ಷಣವನ್ನು ಪಡೆದು ಆನಂತರ ಮೆಡಿಕಲ್ ಸ್ಟೋರ್ ತೆರೆದು ವೈದ್ಯರ ಸಲಹೆ ಮೇರೆಗೆ ಆ ಕಾಯಿಲೆಗೆ ಸಂಬಂದಪಟ್ಟ ಮಾತ್ರೆಗಳನ್ನು ನೀಡುವ ನಿಯಮವಿದೆ. ಆದರೆ ಕೋಲಾರ ಜಿಲ್ಲಾದ್ಯಂತ ಸಾವಿರಾರು ಮೆಡಿಕಲ್ ಸ್ಟೋರ್ಗಳು ಗಲ್ಲಿಗೊಂದಂತೆ ಯಾರದೋ ಪರವಾನಗೆ ಲೀಸ್ಗೆ ಪಡೆದು ಪಾರ್ಮಸಿ ಗಂದ ಗಾಳಿ ಗೊತ್ತಿಲ್ಲದ ವ್ಯಕ್ತಿಗಳು ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಸಿದರು. ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಯಾವುದೇ ಮೆಡಿಕಲ್ ಸ್ಟೋರ್ನಲ್ಲಿ ಮಾರಾಟ ಮಾಡುವ ಪ್ರತಿಯೊಂದು ಮಾತ್ರೆ , ಸಿರಪ್ ಗಳ ಮಾಹಿತಿ ಪ್ರತಿ ತಿಂಗಳು ಸಂಬಂದಪಟ್ಟ ಅಧಿಕಾರಿಗಳು ತಪಾಸಣೆ ಮಾಡಿ ಯಾವ ಕಂಪನಿಯಿಂದ ಉತ್ಪಾದನೆ ಆಗುತ್ತದೆ ಅದರ ಅವದಿ ಎಷ್ಟು ದಿನ ಪ್ರತಿಯೊಂದನ್ನು ಪರಿಶೀಲನೆ ಮಾಡುವ ಜೊತೆಗೆ ಕಡ್ಡಾಯವಾಗಿ ನಾಮಪಲಕ ಲಭ್ಯವಿರುವ ಔಷಧಿಗಳ ಬೆಲೆ ಅಂಗಡಿ ಮುಂದೆ ಅಳವಡಿಸಬೇಕಾದ ನಿಯಮವನ್ನು ಮಾಲೀಕರು ಮರೆತಿರುವ ಜೊತೆಗೆ ಕೆಲವು ಔಷದಿ ಮಳಿಗೆಗಳಲ್ಲಿ ಅವದಿ ಮಿರಿದ ಮಾತ್ರೆಗಳ ದಿನಾಂಕವನ್ನು ಅಳಸಿ ಅವರೇ ಹೊಸ ದಿನಾಂಕವನ್ನು ತಿದ್ದುವ ದಂದೆ ಸಹ ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಯುವ ಆದಿ ಹರಿಯದ ಶಾಲಾ ಕಾಲೇಜು ಮಕ್ಕಳಿಗೆ ನಶೆ ಏರುವ ಮಾದಕ ಮಾತ್ರೆ, ಸಿರಂಜ್ಗಳನ್ನು ಮಾರಾಟ ಮಾಡುವ ದೊಡ್ಡ ಮೆಡಿಕಲ್ ಮಾಪೀಯ ದಂದೆ ಕೋಲಾರ ಜಿಲ್ಲೆಯ ಗಡಿಭಾಗಗಳಲ್ಲಿ ನಿರಂತರವಾಗಿ ನಡೆಯುವ ಜೊತೆಗೆ ಹೊರ ರಾಜ್ಯದಿಂದ ಸರಬರಾಜಾಗುವ ಆಪೀಮು, ಗಾಂಜಾ ಮಾತ್ರೆಗಳನ್ನಾಗಿ ಪರಿವರ್ತಿಸಿ ಅಡ್ಡದಾರಿಯಲ್ಲಿ ಹಣ ಮಾಡುವ ದಂದೆಯಲ್ಲಿ ತೊಡಗಿರುವ ಸಂಶಯ ವ್ಯಕ್ತವಾಗುತ್ತಿದೆ. ಅವರಿಗೆ ಹಣ ಬೇಕು ಯುವ ಜನತೆಗೆ ನಶೆ ಬೇಕು ಜನ್ಮ ಕೊಟ್ಟ ತಂದೆ ತಾಯಿಗೆ ಮಕ್ಕಳ ಭವಿಷ್ಯದ ಚಿಂತೆಯಾಗಿ ಸಮಾಜಕ್ಕೆ ಮಾರಕವಾಗುವ ವ್ಯಕ್ತಿಗಳಾಗಿ ಮೆಡಿಕಲ್ ಮಾಪೀಯಾವೇ ಸೃಷ್ಠಿಯಾಗುತ್ತಿದೆ ಎಂದು ಕಿಡಿ ಕಾರಿದರು.
ನಿಮ್ಮ ಮಕ್ಕಳಂತೆ ಬಡವರ ಮಕ್ಕಳು ಉತ್ತಮ ಪ್ರಜೆಗಳಾಗಬೇಕಾದರೆ ಮೊದಲು ಅಧಿಕಾರಿಗಳು ಮೆಡಿಕಲ್ ಮಾಪೀಯದಿಂದ ಪಡೆಯುತ್ತಿರುವ ಲಂಚವನ್ನು ತಿರಸ್ಕಾರ ಮಾಡಿ ಮಾನವೀಯತೆಯಿಂದ ಯುವ ಜನತೆಗೆ ನಶೆ ಏರುವ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಭವಿಷ್ಯದ ಜೊತೆ ಚೆಲ್ಲಾಟ ಆಡುವ ಮೆಡಿಕಲ್ ಸ್ಟೋರ್ ಮಾಲೀಕರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸ್ ದಾಖಲಿಸಿ ನಾಪತ್ತೆ ಆಗಿರುವ ಡ್ರಗ್ಸ್ ನಿಯಂತ್ರಣಾಧಿಕಾರಿಗಳನ್ನು ಹುಡುಕಿ ಕೊಡಬೇಕಬೇಕೆಂದು ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾದಕ ನಿಯಂತ್ರಣಾಧಿಕಾರಿಗಳು ನಶೆ ಏರುವ ಔಷಧಿ ಮಾರಾಟ ಮಾಡುವ ಮೆಡಿಕಲ್ ಮಳಿಗೆ ಹಾಗೂ ಅವರಿಗೆ ಸರಬರಾಜು ಮಾಡುವ ದಂದೆ ಕೋರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಜೊತೆಗೆ ಸ್ಥಳಿಯರು ಇಂತº ನಶೆ ಮಾರುವ ಅಂಗಡಿಗಳ ಮಾಹಿತಿ ನೀಡಿದರೆ ಹೆಚ್ಚು ಸಹಕಾರ ಆಗುತ್ತದೆಂದು ಸಲಹೆ ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ವಕ್ಕಲೇರಿ ಹನುಮಯ್ಯ, ಮಗಸಂದ್ರ ತಿಮ್ಮಣ್ಣ, ವಿನಿತ್. ಚಂದ್ರಪ್ಪ, ಯಾರಂಘಟ್ಟ ಗೀರೀಶ್, ಅಪ್ಪೋಜಿರಾವ್, ಶೈಲಜ, ರಾಧಮ್ಮ, ನಾಗರತ್ನ, ಮಂಜುಳಾ ಚೌಡಮ್ಮ ಮುಂತಾದವರಿದ್ದರು.