“ಯುವ ಜನರು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಶಿಕ್ಷಣದೊಂದಿಗೆ ಪ್ರಕೃತಿಯ ನಡುವೆ ಸಾಹಸ ಮಾಡುವ ಶ್ರಮದಿಂದ ಆತ್ಮವಿಶ್ವಾಸವೂ ಬೆಳೆಯುತ್ತದೆ, ಆರೋಗ್ಯವೂ ವೃದ್ಧಿಯಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಗೈಡ್, ಎನ್.ಸಿ.ಸಿ., ಎನ್.ಎಸ್.ಎಸ್. ವಿಭಾಗಗಳಲ್ಲಿ ಸೇರಿಕೊಂಡ ವಿದ್ಯಾರ್ಥಿಗಳಲ್ಲಿ ಮಾನಸಿಕವಾಗಿ ಸವಾಲುಗಳನ್ನು ಎದುರಿಸುವ ಧೈರ್ಯ ಹೆಚ್ಚಿರುತ್ತದೆ. ತರಬೇತಿ ಪಡೆದರೆ ಇತರರೂ ಕ್ರಿಯಾಶೀಲರಾಗಬಹುದು. ಭಾರತ ದೇಶದ ಪ್ರಕೃತಿ ಜಲ ಕ್ರೀಡೆ, ಪರ್ವತಾರೋಹಣ ಸಾಹಸ ಕ್ರೀಡೆಗೆ ಅತ್ಯುತ್ತಮವಾಗಿದೆ. ನಮ್ಮ ಕುಂದಾಪುರ ತಾಲೂಕಿನಲ್ಲೂ ಅಪೂರ್ವ ಸಂಪನ್ಮೂಲವಿದೆ. ಈಗಾಗಲೇ ಹಲವು ಯುವಕರು ನಡೆಸುವ ಪ್ರಯತ್ನಗಳಿಗೆ ಪ್ರೋತ್ಸಾಹ ದೊರಕಬೇಕು” ಎಂದು ಸಾಹಸ ಕ್ರೀಡಾ ತಜ್ಞ ತರಬೇತುದಾರ ಹರಿಪ್ರಸಾದ ಶೆಟ್ಟಿ ಹೇಳಿದರು.
ಕುಂದಾಪುರದ ಹೋಟೆಲ್ ಶಿವಪ್ರಸಾದ್ ಗ್ರ್ಯಾಂಡ್ನಲ್ಲಿ ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಿ ಕುಂದಾಪುರ ಸನ್ರೈಸ್ ಜಂಟಿಯಾಗಿ ಏರ್ಪಡಿಸಿದ “ಎಡ್ವೆಂಚರ್ ಸ್ಪೋಟ್ರ್ಸ್ ಇನ್ ಇಂಡಿಯಾ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿಮಾಲಯದ ಪರ್ವತಾರೋಹಣ ಸಾಹಸ, ನದಿ, ಸಮುದ್ರದಲ್ಲಿ ವೈವಿಧ್ಯಮಯ ಕ್ರೀಡೆಗಳ ಬಗ್ಗೆ ಅವರು ಅನುಭವ ವಿವರಿಸಿದರು.
ಕುಂದಾಪುರದ “ಔಟ್ ಟು ನೇಚರ್” ಸ್ಥಾಪಕರಾದ ರಾಕೇಶ ಸೋನ್ಸ್ ಕುಂದಾಪುರದ ಪಂಚಗಂಗಾವಳಿಯಿಂದ ಸಮುದ್ರದ ನೀರಿನಲ್ಲಿ ಪ್ರವಾಸ ಕ್ರೀಡೆಯ ಅನುಭವ ಪಡೆಯಲು ಇರುವ ಅವಕಾಶ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ ವಹಿಸಿದ್ದರು. ರೋಟರಿ ಕುಂದಾಪುರ ಸನ್ರೈಸ್ ಅಧ್ಯಕ್ಷ ನಾಗರಾಜ ನಾಯ್ಕ ಅಭಿನಂದನಾ ಮಾತುಗಳನ್ನಾಡಿದರು.
ಸಾಧಕ ಹರಿಪ್ರಸಾದ್ ಶೆಟ್ಟಿಯವರನ್ನು ಮಾಜಿ ಅಧ್ಯಕ್ಷರಾದ ಕೆ. ಸೀತಾರಾಮ ನಕ್ಕತ್ತಾಯ, ಯು.ಎಸ್.ಶೆಣೈ, ಡಾ| ಉತ್ತಮ್ ಕುಮಾರ್ ಶೆಟ್ಟಿ, ಅಬ್ಬು ಸಾಹೇಬ್ ಸನ್ಮಾನಿಸಿ ಗೌರವಿಸಿದರು. ಸಚಿನ್ ನಕ್ಕತ್ತಾಯ ಅಭಿನಂದನಾ ಪತ್ರ ವಾಚಿಸಿದರು.
ರೋಟರಿ ದಕ್ಷಿಣದ ಕಾರ್ಯದರ್ಶಿ ರೋ. ರಮಾನಂದ ಕಾರಂತ ಅತಿಥಿಗಳನ್ನು ಪರಿಚಯಿಸಿದರು.
ನಿಕಟಪೂರ್ವ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಕಾರ್ಯಕ್ರಮದ ಮಹತ್ವ ವಿವರಿಸಿದರು.
ರೋಟರಿ ಕುಂದಾಪುರ ಸನ್ರೈಸ್ ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ವಂದಿಸಿದರು.
Year: 2023
ಎ.ಜೆ.ಲೇಡಿಸ್ ಹಾಸ್ಟೇಲ್ ಮಹಡಿಯಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿನಿಯ ಆತ್ಮಹತ್ಯೆ
ಮಂಗಳೂರು: ಸ್ಥಳೀಯ ಎ.ಜೆ. ಲೇಡಿಸ್ ಕಾಲೇಜು್ ಹಾಸ್ಟೆಲಿನ ಆರನೇ ಮಹಡಿಯಿಂದ ಜಿಗಿದು. ವೈದ್ಯಕೀಯ. ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಪ್ರಕೃತಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.
ನಗರದ ಎ.ಜೆ. ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡುತ್ತಿರುವ ಪ್ರಕೃತಿ ಶೆಟ್ಟಿ ಇಂದು ಮುಂಜಾನೆ ಎ.ಜೆ. ಲೇಡಿಸ್ ಹಾಸ್ಟೆಲ್ನ.
ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ
ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ನೇಜಾರು ಕೊಲೆ ಪ್ರಕರಣ: ಅಂತ್ಯಕ್ರಿಯೆ ಕೋಡಿಬೆಂಗ್ರೆ ಜಾಮಿಯಾ ಮಸೀದಿ ದಫನ ಭೂಮಿಯಲ್ಲಿ ನೆರವೇರಿತು- ಮುಗಿಲು ಮುಟ್ಟಿದ ಆಕ್ರಂದನ
ಚಿತ್ರಗಳು ಎರವಲು
ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಭೀಕರ ಕೊಲೆ ಪ್ರಕರಣದ ಮ್ರತರ ಅಂತಿಮ ಸಂಸ್ಕಾರ ಇಂದು ಕೋಡಿಬೆಂಗ್ರೆ ಜಾಮೀಯಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.ಇದಕ್ಕೂ ಮೊದಲು ಮ್ರತ ದೇಹಗಳ ಪೋಸ್ಟ್ ಮಾರ್ಟಮ್ ನೆಡೆಸಿ ಮ್ರತ ದೇಹಗಳನ್ನು ಸಂಬಂಧ ಪಟ್ಟವರಿಗೆ ಹಸ್ತಾಂತರಿಸಲಾಯಿತು.
ಮ್ರತ ಶರೀರಗಳನ್ನು ನೇಜಾರಿನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು, ದರ್ಶನ ಪಡೆದ ನಂತರ ನಾಲ್ಕು ಮೃತದೇಹವನ್ನು ಕೋಡಿಬೆಂಗ್ರೆ ಮಸೀದಿಗೆ ಸಾಗಿಸಿ ಜನಾಝ ನಮಾಝ್ ನಿರ್ವಹಿಸಲಾಯಿತು. ನಮಾಝಿನಲ್ಲಿ ಸಾವಿರಾರು ಜನ ಪಾಲ್ಗೊಂಡರು. ನಂತರ ಸಮೀಪದ ದಫನ ಭೂಮಿಯಲ್ಲಿ ನಾಲ್ವರನ್ನು ದಫನ ಮಾಡಲಾಯಿತು. ಈ ಸಂದರ್ಭದಲ್ಲಿ ಪತಿ, ಮಗ ಮತ್ತು ಸಂಬಂಧಿಕರ ಮತ್ತು ಹಾಜರಿದ್ದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು. ಉಡುಪಿ ಡಿವೈಎಸ್ಪಿ ದಿನಕರ ಮತ್ತು ಕಾರ್ಕಳದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸ್ಥಳದಲ್ಲಿ ಉಪಸ್ಥಿತರಿದ್ದರು.
ಕುಟುಂಬದ ಚಿತ್ರ (ಎರವಲು)
ಮದರ್ ತೆರೇಸಾ ವಿಚಾರ ವೇದಿಕೆಯಿಂದ `ದೀಪಾವಳಿ ಸಂಭ್ರಮ’ಎಲ್ಲರೂ ಕೂಡಿ ದೀಪಾವಳಿ ಆಚರಿಸೋಣ : ಮುಲೈ ಮುಹಿಲನ್
ಗುರುಪುರ : ದೀಪಗಳ ಹಬ್ಬ ದೀಪಾವಳಿಯಲ್ಲಿ ಎರಡು ಅರ್ಥ ಕಾಣುತ್ತೇವೆ. ತನ್ನನ್ನು ಉರಿಸಿಕೊಂಡು ಬೇರೆಯವರಿಗೆ ಬೆಳಕು ಕೊಡುವುದು ಒಂದು ಅರ್ಥವಾದರೆ, ಒಂದು ದೀಪದಿಂದ ನೂರಾರು-ಸಾವಿರಾರು ದೀಪಗಳು ಬೆಳಗುತ್ತದೆ ಎಂಬುದು ಇನ್ನೊಂದು ಅರ್ಥ. ಬೆಳಕು ಜ್ಞಾನದ ಸಂಕೇತವೂ ಹೌದು. ಎಲ್ಲರೂ ಕೂಡಿಕೊಂಡು ಈ ಬೆಳಕಿನ ಹಬ್ಬ ಆಚರಿಸಬೇಕು. ಆಗಲೇ ದೀಪಾವಳಿ ಅರ್ಥಪೂರ್ಣವಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಹೇಳಿದರು.
ಮಂಗಳೂರಿನ ಸಂತ ಮದರ್ ತೆರೇಸಾ ವಿಚಾರ ವೇದಿಕೆಯು ವಾಮಂಜೂರು ಮಂಗಳಜ್ಯೋತಿ ಜಂಕ್ಷನ್ನಲ್ಲಿ ನ. 12ರಂದು ಆಯೋಜಿಸಿದ ದೀಪಾವಳಿ ಸಂಭ್ರಮ-2023' ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಪ್ರಗತಿಪರ ಅಧ್ಯಾಪಕರ ವೇದಿಕೆಯ ಅಧ್ಯಕ್ಷ ಡಾ. ವಸಂತ್ ಕುಮಾರ್ ಮಾತನಾಡಿ, ಬೆಳಕು ಎಲ್ಲರಿಗೂ ಬೇಕು. ಹಾಗಾಗಿ ಬೆಳಕಿನ ಹಬ್ಬಕ್ಕೆ ಜಾತಿ-ಧರ್ಮ ಎಂಬುದಿಲ್ಲ. ದಾರಿ ತಪ್ಪುತ್ತಿರುವ ಯುವಕರಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಸಮಾಜದ ನಿರ್ಮಿಸಬೇಕು. ಸಮಾಜ ಎಂಬ ಮೂರಕ್ಷರದಲ್ಲಿ
ಸಂಬ೦ಧಗಳು ಮಾನವನಲ್ಲಿ ಜನಿಸಬೇಕು ಎಂಬ ಅರ್ಥ ಅಡಗಿದೆ. ಅದೇ ಸಮಾಜ ಭಾವನೆ. ಸಂಸ್ಕಾರ ಎಂದರೆ ಬರೇ ದೇವಸ್ಥಾನ ಕಟ್ಟುವುದು ಮೂರ್ತಿ ಕೆತ್ತುವುದಲ್ಲ. ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಎಂದರು.
ಮ೦ಗಳೂರಿನ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಸುದೀಪ್ ಪೌಲ್ ಮಾತನಾಡಿ, ಭಾರತದ ಇತಿಹಾಸ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಕಂಡಿದೆ. ಆಗ ಎಲ್ಲರೂ ಪ್ರೀತಿ, ಸಾಮರಸ್ಯ, ಭಾವೈಕ್ಯತೆಯಿಂದ ಜೀವಿಸುತ್ತಿದ್ದೆವು. ಆದರೆ ಈಗ ಎಲ್ಲವೂ ಬದಲಾಗಿದೆ. ದೀಪಾವಳಿ ಎಲ್ಲ ಧರ್ಮದ ಗಡಿ ಮೀರಿ ಆಚರಿಸುವ ಹಬ್ಬವಾಗಲಿ ಎಂದು ಶುಭ ಹಾರೈಸಿದರು.
ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಅಧ್ಯಕ್ಷತೆ ವಹಿಸಿದ್ದರು. ಕು. ಲತೀಕ್ಷಾ ಸ್ವಾಗತ ನೃತ್ಯ ಮಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿದರು. ಕಾರ್ಪೊರೇಟರ್ ಅಬ್ದುಲ್ ಲತೀಫ್, ಮಂಗಳಜ್ಯೋತಿಯ ಕೊರಗಜ್ಜ ಸೇವಾ ಟ್ರಸ್ಟ್ನ ಅಧ್ಯಕ್ಷ ಲಕ್ಷ್ಮಣ್ ವಾಮಂಜೂರು, ಮಂಗಳೂರು ಬೆಥನಿ ಸಿಸ್ಟರ್ ಪ್ರೊವಿನ್ಸಿಯಲ್ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸಾ, ಮಂಜುಳಾ ನಾಯಕ್(ಜಂಟಿ ಕಾರ್ಯದರ್ಶಿ), ಡಾಲ್ಫಿ ಡಿ’ಸೋಜ(ಕೋಶಾಧಿಕಾರಿ) ಹಾಗೂ ಇತರ ಹಿರಿಯ ಗಣ್ಯರು, ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮನೋಜ್ ಕುಮಾರ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಮತ್ತು ಬಳಗದವರು ಸೌಹಾರ್ದ ನೃತ್ಯ ಪ್ರದರ್ಶಿಸಿದರು.
ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಗಳಿಗೆ ಬೆಂಕಿ – ಸುಮಾರು 5 ಕೋಟಿ ನಶ್ಟ
ಕುಂದಾಪುರ, ನ.13: ಕುಂದಾಪುರ ಸಮೀಪದ ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಗಳಿಗೆ ಬೆಂಕಿ ತಗಲಿದ ಘಟನೆ ನ.13 ರಂದು ಸೋಮವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಂಟು ಮೀನುಗಾರಿಕಾ ದೋಣಿಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಗೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಪಟಾಕಿ ಸಿಡಿತದಿಂದ ಬೆಂಕಿ ಉಂಟಾಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಒಂದು ದೋಣಿಯಿಂದ ಪ್ರಾರಂಭವಾದ ಬೆಂಕಿಯು ಸ್ವಲ್ಪ ಸಮಯದ ನಂತರ ಹತ್ತಿರದಲ್ಲಿ ಲಂಗರು ಹಾಕಲಾಗಿದ್ದ ಇತರ ಮೀನುಗಾರಿಕಾ ದೋಣಿಗಳಿಗೆ ಹರಡಿತು.ಕುಂದಾಪುರ ಮತ್ತು ಬೈಂದೂರಿನಿಂದ ಆಗಮಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಕರಾವಳಿ ಕಾವಲು ಸಿಬ್ಬಂದಿ ಮತ್ತು ಪೊಲೀಸರು ಸಹ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಗ್ನಿ ಅವಘಡದಿಂದ 5 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ತಲ್ಲೂರು ಸಂತ ಫ್ರಾನ್ಸಿಸ್ ಆಸೀಸಿ ಚರ್ಚ್ ಕ್ರೈಸ್ತರಿಂದ ದೀಪಾವಳಿ ಆಚರಣೆ
ಕುಂದಾಪುರ, ನ.13: ತಲ್ಲೂರು ಸಂತ ಫ್ರಾನ್ಸಿಸ್ ಆಸೀಸಿ ಚರ್ಚ್ ವಠಾರದಲ್ಲಿ, ಚರ್ಚ್ ವತಿಯಿಂದ ಕ್ರೈಸ್ತರು ದೀಪಾವಳಿ ಆಚರಣೆಯನ್ನು ನ.12 ರಂದು ಭಾನುವಾರ ಸಂಜೆಯ ವೇಳೆ ಸಂಭ್ರಮದ ದೀಪಾವಳಿ ಆಚರಣೆಯನ್ನು ಆಚರಿಸಿದರಈ ದೀಪಾವಳಿಯ ಕಾರ್ಯಕ್ರಮಕ್ಕೆ, ತಲ್ಲೂರು ಗ್ರಾ.ಪಂಚಾಯಿತಿಯ ಅಧ್ಯಕ್ಷರಾದ ಗಿರೀಶ್ ನಾಯ್ಕ್, ಉಪಾಧ್ಯಕ್ಷೆಯಾದ ಚಂದ್ರಮತಿ ಹೆಗಡೆ, ಹೆಮ್ಮಾಡಿ ಗ್ರಾಮ ಪಂಚಾತಿಯಿಯ ಅಧ್ಯಕ್ಷೆಯಾದ ನೇತ್ರಾವತಿ, ಕಟ್ಬೆಲ್ತೂರು ಗ್ರಾ. ಪಂಚಾಯಿತಿಯ ಉಪಾಧ್ಯಕ್ಷರಾದ ರಾಮ ಶೆಟ್ಟಿ ಇವರುಗಳಿಗೆ, ತಲ್ಲೂರು, ಹೆಮ್ಮಾಡಿ ಮತ್ತು ಕಟ್ ಬೆಲ್ತೂರ್ ಈ 3 ಪಂಚಾಯ್ತಿಯ ಹಿಂದುಗಳ ಪರವಾಗಿ ಅಹ್ವಾನಿಸಿದ್ದು, ಇವರು ಕಾರ್ಯಕ್ರಮದ ಮುಖ್ಯ ಆಕರ್ಶಣೆಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ತಲ್ಲೂರು ಗ್ರಾ.ಪಂಚಾಯಿತಿಯ ಅಧ್ಯಕ್ಷರಾದ ಗಿರೀಶ್ ನಾಯ್ಕ್ ಮಾತನಾಡಿ, ನಮ್ಮಲ್ಲಿ ಕ್ರೈಸ್ತ ಹಿಂದುಗಳ ಸಂಬಂಧ ಉತ್ತಮವಾಗಿದೆ, ನಾವು ಅನ್ಯೋನತೆಯಿಂದ ಇದ್ದವೆ, ಕ್ರೈಸ್ತ ಬಾಂಧವರು ದೀಪಾವಳಿಯನ್ನು ನಮ್ಮ ಜೊತೆ ಆಚರಿಸುವುದಕ್ಕೆ ಬಹಳ ಸಂತೋಷವಾಗುತ್ತದೆ, ಇಲ್ಲಿ ತೆರಾಲಿ ನಡೆಯುತ್ತೀರುವಾಗ ಕ್ರೈಸ್ತರ ಸಂಖ್ಯೆಕಿಂತ ಹಿಂದುಗಳ ಬಾಂಧವರೆ ಭಾಗವಹಿಸುವುದು ಹೆಚ್ಚು, ಇದು ನಮ್ಮಲ್ಲಿನ ಸಾಮರಸ್ಯಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ದೀಪಾವಳಿ ಬೆಳಕಿನ ಹಬ್ಬವಾಗಿದೆ” ಎಂದು ಅದರ ಮಹತ್ವವನ್ನು ತಿಳಿಸಿ ಎಲ್ಲರಿಗೂ ದೀಪಾವಳಿಯ ಶುಭಾಷಯವನ್ನು ಕೋರಿದರು.
ಸಂತ ಫ್ರಾನ್ಸಿಸ್ ಆಸೀಸಿ ಚರ್ಚಿನ ಧರ್ಮಗುರು ವಂ| ಎಡ್ವಿನ್ ಡಿಸೋಜಾ “ದೀಪಾವಳಿ ಹಿಂದೂಗಳ ಮಾತ್ರ ಹಬ್ಬವಲ್ಲಾ, ದೀಪಾವಳಿ ಎಲ್ಲರ ಹಬ್ಬ. ಇದು ಬೆಳಕಿನ ಹಬ್ಬ, ಅಂದರೆ ಕತ್ತಲೆಯಿಂದ ಬೆಳಕಿಗೆ ಬರುವುದು, ಪ್ರಾಣಿ ಪಕ್ಷಿ ಮರ ಗೀಡ ಎಲ್ಲವೂ ಸ್ಪಷ್ಟವಾಗಿ ಗೋಚರಿಸಿದರೆ ಕತ್ತಲೆ ಸರಿದು ಬೆಳಕಾಯಿತು ಎಂದು ಅಭಿಪ್ರಾಯ. ಆದರೆ, ಮನುಷ್ಯನ ಹ್ರದಯದಲ್ಲಿ ಬೆಳಕು ಎರ್ಪಟ್ಟಲ್ಲಿ ಅದೇ ನಿಜವಾದ ಬೆಳಕು, ನಾವು ಪ್ರತಿಯೊಬ್ಬರು ಹ್ರದಯದಲ್ಲಿರು ಕತ್ತಲೆಯನ್ನು ದೂರ ಮಾಡಿ, ನಾವೆಲ್ಲರೂ ಪ್ರೀತಿ ಬಾಂಧವ್ಯದಿಂದ ಸಹೋದರಂತೆ ಬಾಳುವ” ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಅತಿಥಿಗಳು, ಪಂಚಾಯತ್ ಸದಸ್ಯರು, ಅಹ್ವಾನಿತರು, ಚರ್ಚಿನ ಹಣಕಾಸಿನ ಸಮಿತಿ ಸದಸ್ಯರು, ಪಾಲನ ಮಂಡಳಿಯ ಸದಸ್ಯರು ಲೋಹದಾಕ್ರತಿಯ ವ್ರಕ್ಷದ ಎಲೆಗಳ ಮೇಲೆ ಹಲವಾರು ದೀಪಗಳನ್ನು ಬೆಳಗಿಸಿದರು. ಪಾಲನಮಂಡಳಿ ಕಾರ್ಯದರ್ಶಿ ರೀನಾ ಮೆಂಡೋನ್ಸಾ, 20 ಆಯೋಗಳ ಸಂಯೋಜಕ ರೋನಿ ಲೂಯಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷ ಕೆಲ್ವಿನ್ ಮೆಂಡೋನ್ಸಾ ಸ್ವಾಗತಿಸಿದರು. ಪ್ರೆಸಿಲ್ಲಾ ಮಿನೇಜೆಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯ ವಾರ್ಷಿಕ ಕ್ರೀಡೋತ್ಸವ
ಕುಂದಾಪುರ, ದಿ 10-11-2023 ರಂದು ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಶಾಲಾ ಕ್ರೀಡಾಂಗಣದಲ್ಲಿ ಜರುಗಿತು.
ವಾದ್ಯ ವೃಂದದೊಂದಿಗೆ ಪಥಸಂಚಲನ ನಡೆಯಿತು. ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅಧ್ಯಕ್ಷರಾದ ರೋ, ಜಗನ್ನಾಥ್ ಮೊಗೇರ ಇವರು ಕ್ರೀಡೋತ್ಸವ ಉದ್ಘಾಟಿಸಿ ಹಾಗೂ ಜ್ಯೋತಿಯನ್ನು ಬೆಳಗಿಸಿ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡಾಳುಗಳು ಶಾಲಾ ಮಟ್ಟದಿಂದ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ತಿಳಿದರು. ಮುಖ್ಯ ಅತಿಥಿಗಳಾದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಪ್ರೇಮಿಕ ಇವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಶಿಸ್ತು ಬೆಳೆಯಲು ಕ್ರೀಡೋತ್ಸವ ಸಹಾಯಮಾಡುತ್ತದೆ ಎಂದರು. ಅಧ್ಯಕ್ಷರಾದ ಶಾಲಾ ಜಂಟಿ ಕಾರ್ಯದರ್ಶಿಗಳಾದ ಭಗಿನಿ ಸುಪ್ರಿಯ ಇವರು ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಕ್ರೀಡೆಯಿಂದಾಗಿ ವಿದ್ಯಾರ್ಥಿಗಳು ಹೆಚ್ಚಿನ ಶಕ್ತಿಯನ್ನು ಹೊಂದುತ್ತಾರೆ ಹಾಗೂ ಆರೋಗ್ಯಕರವಾಗಿರುತ್ತಾರೆ ಎಂದರು. ಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಐವಿ ಇವರು ಸ್ವಾಗತಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ರವಿ ಪೂಜಾರಿ ಇವರು ಶುಭ ಹಾರೈಸಿದರು. ದೈಹಿಕ ಶಿಕ್ಷಕರಾದ ಮೈಕಲ್ ಇವರು ನಿರೂಪಿಸಿದರು. ಶಿಕ್ಷಕ ಶಿಕ್ಷಕೇತರ ವೃಂದದವರು ಸಹಕರಿಸಿದರು.
ಯುವ ಪ್ರತಿಭೆಗಳಿಗೆ ಟಿ.ಸಿ.ಎ ವಿಪುಲ ಅವಕಾಶ ಸೃಷ್ಟಿಸಲಿದೆ-ಗೌತಮ್ ಶೆಟ್ಟಿ
ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ಶಾಲಾ-ಕಾಲೇಜು ಮಟ್ಟದ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾಟ ನಡೆಯಿತು.
ಟಿ.ಸಿ.ಎ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ ಫಲಿತಾಂಶ
ಜಿ.ಪಿ.ಟಿ ಮಣಿಪಾಲ ಪ್ರಥಮ
ಎಮ್.ಎಸ್.ಆರ್.ಎಸ್ ಶಿರ್ವ-ದ್ವಿತೀಯ
ನವೆಂಬರ್ 6 ರಿಂದ 10 ರ ವರೆಗೆ ಸತತ 5 ದಿನಗಳ ಕಾಲ ನಡೆದ ಈ ಪಂದ್ಯಾಟದಲ್ಲಿ 64 ಹೈಸ್ಕೂಲ್ ಮತ್ತು ಕಾಲೇಜು ತಂಡಗಳು ಭಾಗವಹಿಸಿದ್ದರು.ಅಂತಿಮವಾಗಿ ಫೈನಲ್ ನಲ್ಲಿ ಜಿ.ಪಿ.ಟಿ ಮಣಿಪಾಲ-ಎಮ್.ಎಸ್.ಆರ್.ಎಸ್ ಶಿರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಲಕ್ಷ್ಮೀ ಸೋಮ ಬಂಗೇರ ಕಾಲೇಜು ಪಡುಕರೆ ಮತ್ತು ಎಸ್.ಕೆ.ವಿ.ಎಮ್. ಎಸ್ ಕೋಟೇಶ್ವರ ತೃತೀಯ ಸ್ಥಾನ ಪಡೆದರು. ಫೈನಲ್ ಪಂದ್ಯಶ್ರೇಷ್ಟ ಹರ್ಷಿತ್,ಬೆಸ್ಟ್ ಬ್ಯಾಟರ್ ಅಕ್ಷಯ್,ಬೆಸ್ಟ್ ಬೌಲರ್ ಮಹೇಶ್,ಸರಣಿ ಶ್ರೇಷ್ಠ ಪ್ರಶಸ್ತಿ ಪ್ರೀತೇಶ್ ಜಿ.ಪಿ.ಟಿ ಮಣಿಪಾಲ ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ “ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಅಂತರಾಷ್ಟ್ರೀಯ ಆಟಗಾರರು ಕೂಟ ಟೆನಿಸ್ಬಾಲ್ ಕ್ರಿಕೆಟ್ ನಿಂದಲೇ ಕ್ರಿಕೆಟ್ ಜೀವನ ಪ್ರಾರಂಭಿಸಿದ್ದಾರೆ. ಅಳಿವಿನಂಚಿನಲ್ಲಿರುವ ಈ ಟೆನಿಸ್ಬಾಲ್ ಕ್ರಿಕೆಟ್ ಉಳಿಸಬೇಕಾದರೆ ಯುವಕರು ಈಗಿನಿಂದಲೇ ಜಾಗೃತರಾಗಬೇಕಿದೆ.
ಆದ್ದರಿಂದ ಟಿ.ಸಿ.ಎ ಉಡುಪಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಶಾಲಾ-ಕಾಲೇಜು ಮಟ್ಟದ ಪಂದ್ಯಾಟ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ಟಿ.ಸಿ.ಎ ಉಡುಪಿ ಪ್ರತಿಭಾವಂತ ಆಟಗಾರರಿಗೆ ಭವಿಷ್ಯದಲ್ಲಿ ಶಿಕ್ಷಣ,ಉದ್ಯೋಗ,ಕ್ರೀಡಾ ಜೀವನ ಕಟ್ಟಿಕೊಡಲು ಸಹಕಾರ ನೀಡಲಿದ್ದೇವೆ ಎಂದರು.”
ಈ ಸಂದರ್ಭ 2023 ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ರಿಕೆಟ್ ಪಟು ಪೃಥ್ವಿರಾಜ್ ಶೆಟ್ಟಿ ಹುಂಚನಿ,14 ರ ವಯೋಮಾನದ ಬಾಲಕಿಯರ ಕ್ರಿಕೆಟ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಚಿತಾ ಹತ್ವಾರ್ ಮತ್ತು ಪ್ರಾಚಿ,17 ಮತ್ತು 14 ರ ವಯೋಮಾನ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚಾರಿತ್ರ್ಯ ಮತ್ತು ತ್ರಿಶಾ.ಐ.ನಾಯಕ್ ಸನ್ಮಾನಿಸಲಾಯಿತು.
ಶಾಲಾ-ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ ಪರಿಕಲ್ಪನೆಯನ್ನು ಕಂಡು ಯಶಸ್ವಿಯಾಗಿ ನಿರ್ವಹಿಸಿದ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ ಇವರನ್ನು ಟಿ.ಸಿ.ಎ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಯುವ ಜನ ಸಬಲೀಕರಣ ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ, ಟಿ.ಸಿ.ಎ ಉಡುಪಿ ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,ರಮೇಶ್ ಶೇರಿಗಾರ್,ಜಗದೀಶ್ ಕಾಮತ್ ಕಟಪಾಡಿ,ಸದಾನಂದ ಶಿರ್ವ,ಯಾದವ್ ನಾಯ್ಕ್ ಕೆಮ್ಮಣ್ಣು,ಅಮರನಾಥ್ ಭಟ್,ಶರತ್ ಶೆಟ್ಟಿ ಪಡುಬಿದ್ರಿ,ಆಸಿಫ್ ಕೆಮ್ಮಣ್ಣು,ನಿತ್ಯಾನಂದ ಮುನ್ನ,ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಬೈಲೂರು,ದಿನೇಶ್ ಗಾಣಿಗ ಬೈಂದೂರು,ನಾರಾಯಣ ಶೆಟ್ಟಿ ಮಾರ್ಕೋಡು,ಮನೋಜ್ ನಾಯರ್,ಕೆ.ಪಿ.ಸತೀಶ್,ಪ್ರವೀಣ್ ಪಿತ್ರೋಡಿ,ಕೋಟ ರಾಮಕೃಷ್ಣ ಆಚಾರ್,ಚೇತನ್ ಕುಮಾರ್ ದೇವಾಡಿಗ,ಅಶೋಕ್ ಹೆಗ್ಡೆ,ಸುಕೇಶ್ ಶೆಟ್ಟಿ,ನಾಗೇಶ್ ನಾವಡ,ಭಾಸ್ಕರ್ ಆಚಾರ್,ಮನೋಜ್,ಉಮೇಶ್ ಕುಂದಾಪುರ,ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು:ಡಾ. ಕೆ.ಎನ್.ವೇಣುಗೋಪಾಲ್
ಶ್ರೀನಿವಾಸಪುರ: ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು. ಪೋಷಕರು ಮನೆಗಳಲ್ಲಿ ಕನ್ನಡ ಮಾತನಾಡಲು ಅಗತ್ಯವಾದ ಪ್ರೋತ್ಸಾಹ ನೀಡಬೇಕು ಎಂದು ವಿಐಪಿ ಶಾಲಾಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ಹೊರವಲಯದ ಯಚ್ಚನಹಳ್ಳಿ ಸಮೀಪದ ವಿಷನ್ ಇಂಡಿಯಾ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಡಿ ಭಾಗದ ಜನರಲ್ಲಿ ಕನ್ನಡ ಪ್ರೇಮಕ್ಕೆ ಕೊರತೆಯಿಲ್ಲ. ಆದರೆ ಕನ್ನಡ ಮಾತನಾಡಲು ಮಡಿವಂತಿಕೆ ತೋರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕನ್ನಡ ಕರ್ನಾಟಕದ ಹೆಮ್ಮೆ. ಕನ್ನಡಿಗರ ಹೃದಯ ಸಿಂಹಾಸನದ ಮೇಲೆ ಕನ್ನಡ ರಾರಾಜಿಸಬೇಕು. ಸಮೃದ್ಧ ಸಾಹಿತ್ಯಕ್ಕೆ ಕನ್ನಡ ಭಾಷೆ ಹೆಸರಾಗಿದೆ. ದೇಶದಲ್ಲಿ 8 ಜ್ಞಾನಪೀಠ ಪ್ರಶಸ್ತಿ ಪಡೆಯುವುದರ ಮೂಲಕ, ದೇಶ ಭಾಷೆಗಳಲ್ಲಿ ಮಕುಟ ಮಣಿಯಂತೆ ಕಂಗೊಳಿಸುತ್ತಿದೆ. ಅಂಥ ಪರಂಪರೆಗೆ ಸೇರಿದವರೆಂದು ಹೇಳಿಕೊಳ್ಳಲು ಹೆಮ್ಮೆಪಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನಾಡು ನುಡಿಗೆ ಸಂಬಂಧಿಸಿದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕನ್ನಡ ಗೀತೆಗಳ ಗಾಯನ, ವೇಷ ಭೂಷಣ ಗಮನ ಸೆಳೆಯಿತು. ಪೋಷಕರಿಗೆ ಕನ್ನಡ ಭಾಷಾ ಜ್ಞಾನ ಕುರಿತು ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿಐಪಿ ಶಾಲೆ ಕಾರ್ಯದರ್ಶಿ ಡಾ. ಎಂ.ಎಸ್.ಕವಿತಾ, ಪ್ರಾಂಶುಪಾಲೆ ಮಂಜೀತ್ ಕೌರ್, ಶಿಕ್ಷಕಿಯರಾದ ಶ್ವೇತ, ಸುಮತಿ, ಸಮೀನಾ, ಸಿರೀಶ, ಯಶೋಧ, ಮಜತ್, ಲಿಲ್ಲಿ, ಸುನಿತಾ ಇದ್ದರು.