ಕುಂದಾಪುರ, ನ.15: ದಿನಾಂಕ 8-11-23 ರಂದು ಜನತಾ ಕಾಲೇಜು ಹೆಮ್ಮಾಡಿ ಇವರು ಆಯೋಜಿಸಿದ ತಾಲ್ಲೂಲು ಮಟ್ಟದ ಜನತಾ ಅವಿಷ್ಕಾರ್ 2ಕೆ23 ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಕುಂದಾಪುರದ ಸಂತ ಮೇರಿಸ್ ಪ್ರೌಢ ಶಾಲೆಯ 5 ವಿದ್ಯಾರ್ಥಿನ್ನೋಳಗೊಂಡ ತಂಡಕ್ಕೆ ದ್ವೀತಿಯ ಸ್ಥಾನವ ಪಡೆಯಿತು. ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿಯಾದ, ಸ್ಮಿತಾ ಡಿಸೋಜಾ ಮಾರ್ಗದರ್ಶನ ನೀಡಿದ್ದರು. ಶಾಲಾ ಜಂಟಿ ಕಾರ್ಯದರ್ಶಿ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ, ಶಾಲಾ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಹಾಗೂ ಇತರ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
Year: 2023
191 ಕೋಟಿ ಮೌಲ್ಯದ ನಾಣ್ಯ ಬಿಡುಗಡೆ !!! ರಾಣಿ ಎರಡನೇ ಎಲಿಜಬೆತ್ ಅವರ ಮೊದಲ ವರ್ಷದ ಜಯಂತಿಗಾಗಿ
ರಾಣಿ ಎರಡನೇ ಎಲಿಜಬೆತ್ ಅವರ ಮೊದಲ ವರ್ಷದ ಜಯಂತಿಯ ಅಂಗವಾಗಿ ಲಕ್ಸುರಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ ಮೂಲದ ಸಂಜೀವ್ ಮೆಹ್ರಾ ಅವರು 191 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರ ಖಚಿತ ನಾಣ್ಯವನ್ನು ಬಿಡುಗಡೆ ಮಾಡಿದರು.
ಇದರಲ್ಲಿ ವಿಶೇಷವಾಗಿ ಆಯ್ದ ಹಾಗೂ ಬೆಲೆ ಬಾಳುವ 6,426 ವಜ್ರಗಳಿವೆ ಮತ್ತು 24 ಕ್ಯಾರೆಟ್ ಚಿನ್ನದ 11 ನಾಣ್ಯಗಳಿವೆ. ಭಾರತ, ಸಿಂಗಪುರ, ಜರ್ಮನಿ, ಬ್ರಿಟನ್ ಮತ್ತು ಶ್ರೀಲಂಕಾ ದೇಶದ ಕುಶಲಕರ್ಮಿಗಳು ಈ ನಾಣ್ಯವನ್ನು ಸಿದ್ದಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಲಿಂಡರ್ ಸ್ಪೋಟ : ಮನೆ ಛಿದ್ರ ಛಿದ್ರ, ಮೂವರಿಗೆ ಸುಟ್ಟ ಗಾಯ
ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ
ಘಟನೆ ಮುನ್ಸಿಪಾಲ್ ಕಾಲೇಜಿನ ಮುಂಭಾಗದ ಫರ್ಜಾನಾ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕೆಯಾದ ಫರ್ಜಾನಾ ಕೆಲಸಕ್ಕೆ ತೆರಳಿದ್ದ ವೇಳೆ ಅವರ ಮಗ ರಫೀಕ್ (4) ಹಾಗೂ ಮಗಳು ಹರ್ಷಿಯಾ ಭಾನು (10) ಮನೆಯಲ್ಲಿದ್ದರು. ಈ ವೇಳೆ ಮನೆಯಿಂದ ಗ್ಯಾಸ್
ವಾಸನೆ ಬರುತ್ತಿದೆ ಎಂದು ಪಕ್ಕದ ಮನೆಯ ಹೇಮಾವತಿ (8) ಎಂಬಾಕೆ ಬಂದಿದ್ದಾಳೆ ಇದೇ ವೇಳೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರ್ ಸ್ಫೋಟ ಗೊಂಡಿದೆ.
ಘಟನೆಯಲ್ಲಿ ಮೂವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರಿಗೂ 35 ರಿಂದ 40% ಸುಟ್ಟ ಗಾಯಗಳಾಗಿದ್ದು ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಪಾತ್ರೆ ಹಾಗೂ ಸಾಮಾನುಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿವೆ. ಮನೆಯ ಮೇಲಿನ ತಗಡಿನ ಕೀಟ್ಗಳು ಹಾರಿ ಹೋಗಿವೆ. ಹಿಂಬದಿಯ ಮನೆಯ ಎರಡು ಬೈಕ್ಗಳು ಹಾನಿಗೊಳಗಾಗಿವೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ನಂಜುಂಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ಅವಘಡ : ಥಾಣೆ ಹೌಸಿಂಗ್ ಸೊಸೈಟಿಯಲ್ಲಿ ನಿಲ್ಲಿಸಿದ್ದ 16 ವಾಹನಗಳಿಗೆ ಬೆಂಕಿ
ಚಿತ್ರ ಸಾಂದರ್ಭಿಕ
ಥಾಣೆ : ಮಹಾರಾಷ್ಟ್ರದ ಥಾಣೆ ನಗರದಲ್ಲಿ ಬುಧವಾರ ಮುಂಜಾನೆ ವಸತಿ ಸಂಕೀರ್ಣದ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಮೂರು ಕಾರುಗಳು ಸೇರಿದಂತೆ ಒಟ್ಟು 16 ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಪಂಚಪಖಾಡಿಯಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ಮಧ್ಯರಾತ್ರಿಯ ನಂತರ ನಡೆದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಥಾಣೆ ನಾಗರಿಕ ಸಂಸ್ಥೆಯ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ನ ಪ್ರಧಾನ ಕಚೇರಿಗೆ ಸಮೀಪದಲ್ಲಿರುವ ಕಟ್ಟಡದ ಎರಡು ಅಂತಸ್ತಿನ ಪಾರ್ಕಿಂಗ್ನ ಪಿ1 ಮಟ್ಟದಲ್ಲಿ ಮಧ್ಯರಾತ್ರಿ 12.45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು. ಸ್ಥಳಕ್ಕೆ ಅಗ್ನಿಶಾಮಕ ವಾಹನ ಕಳುಹಿಸಲಾಗಿದ್ದು, ಮಧ್ಯರಾತ್ರಿ 1.30ರ ವೇಳೆಗೆ ಅದನ್ನು ನಂದಿಸಲಾಗಿದೆ ಎಂದು ಅವರು ಹೇಳಿದರು.
ಬೆಂಕಿಯಿಂದ 13 ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಅವುಗಳಲ್ಲಿ 11 ಮತ್ತು ನಾಲ್ಕು ನಾಲ್ಕು ಚಕ್ರಗಳು ಸುಟ್ಟು ಭಸ್ಮವಾಗಿವೆ ಎಂದು ಅವರು ಹೇಳಿದರು. ಬೆಂಕಿಯ ಕಾರಣವನ್ನು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ, ನೌಪಾಡಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ನೆಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಯ ಬಂಧನ
ಉಡುಪಿ: ಉಡುಪಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಉಡುಪಿ ಪೊಲೀಸರು ಬೆಳಗಾವಿ ಪೊಲೀಸರ ಸಹಕಾರದಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿದ ಉಡುಪಿ ಪೊಲೀಸರು ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬಂಧಿಸಿದ್ದಾರೆ. ಈತ ಮಂಗಳೂರು ಏರ್ ಏರ್ಪೋರ್ಟ್ ಸೆಕ್ಯೂರಿಟಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಿಆರ್ ಪಿಎಫ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದಾನೆ ಎನ್ನಲಾಗಿದೆ. ಕುಡಚಿಯಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿ ಅವಿತುಕೊಂಡಿದ್ದು, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ನವೆಂಬರ್ 12ರಂದು ನೇಜಾರಿನ ತೃಪ್ತಿ ಲೇಔಟ್ ನಲ್ಲಿರುವ ಮನೆಗೆ ಬಂದು ತಾಯಿ ಮತ್ತು ಮೂವರು ಮಕ್ಕಳನ್ನು ಕೊಲೆ
ಮಾಡಿದ್ದ.
ನೆಜಾರು ತೃಪ್ತಿ ಲೇಔಟಿನ ಒಂದೇ ಕುಟುಂಬದ ನಾಲ್ವರ ಕೊಲೆ ಆರೋಪಿಯ ಸುಳಿವು
ಉಡುಪಿ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ನೆಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಉಡುಪಿ ಡಿವೈಎಸ್ಪಿ ದಿನಕರ್ ಪಿ. ನೇತೃತ್ವದ ತಂಡ ಕೇರಳದ ಕೊಟ್ಟಾಯಂನಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ಇದೆಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಸೇಜಾರು ತೃಪ್ತಿ ಲೇಔಟ್ನಲ್ಲಿ ರವಿವಾರ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಿಸಿಟಿವಿ ಜಾಡು ಹಿಡಿದು ತನಿಖೆಯನ್ನು ಚುರುಕುಗೊಳಿಸಿದ್ದರು.
ಕೊಲೆಗೈದ ಬಳಿಕ ಹಂತಕ ಸಾಗಿರುವ ವಿವಿಧ ಪ್ರದೇಶಗಳ ಸಿಸಿಟಿವಿ ಫುಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಸಂತೆಕಟ್ಟೆಯಿಂದ ಉಡುಪಿ ಕರಾವಳಿ ಬೈಪಾಸ್, ಅಲ್ಲಿಂದ ಅಂಬಲಪಾಡಿ, ಕಿನ್ನಿಮುಲ್ಕಿ, ಬಲಾಯಿಪಾದೆ ಹಾಗೂ ಉದ್ಯಾವರ, ಅಲ್ಲಿಂದ ಕಟಪಾಡಿವರೆಗೆ ಸಾಗಿರುವ ಸಿಸಿಟಿವಿ ಪುಟೇಜ್ಗಳ ಜಾಡು ಹಿಡಿದ ಪೊಲೀಸರ ತಂಡವು ಕಾಸರಗೋಡು, ಕೇರಳ ಕಡೆ ತೆರಳಿ ವ್ಯಾಪಕ ಶೋಧ ನಡೆಸಿವೆ.
ಹತ್ಯಾ ಆರೋಪಿ ಕೊಲೆಗೈದ ಬಳಿಕ ಬೇರೆ ಬೇರೆ ಬೈಕಿನಲ್ಲಿ ಪ್ರಯಾಣಿಸಿರುವುದು ಸಿಟಿಟಿವಿ ದೃಶ್ಯಾವಳಿಯ ಪತ್ತೆ ಹಚ್ಚಿದ ಪೊಲೀಸರ ತಂಡವು ಮಂಗಳೂರು, ತಲಪಾಡಿ, ಕಾಸರಗೋಡು, ಕೇರಳ ರಾಜ್ಯಕ್ಕೆ ಹೋಗಿ ವ್ಯಾಪಕ ಶೋಧ ನಡೆಸಿದ್ದು ಕೊಟ್ಟಾಯಂನಲ್ಲಿ ಇರುವ ಮಾಹಿತಿ ಲಭ್ಯವಾಗಿದ್ದು, ಆತನ ಬಂಧಿಸಲು ಪೊಲೀಸರ ತಂಡ ಬಲೆ ಬೀಸಿದೆ ಎಂದು ತಿಳಿದು ಬಂದಿದೆ.
ಸಂತೆಕಟ್ಟೆಯಿಂದ ಉಡುಪಿ ಕರಾವಳಿ ಬೈಪಾಸ್ನ ವರೆಗೆ ರಿಕ್ಷಾದಿಂದ ಬಂದು ಇಳಿದ ಹಂತಕ, ಅಲ್ಲೇ ಸಮೀಪದ ಜೆಪಿ ಲೈಟ್ನ ಹಿಂಬದಿಗೆ ತೆರಳಿ ಕೂಡಲೇ ವಾಪಾಸ್ಸು ಬಂದಿದ್ದಾನೆ. ಬಳಿಕ ಅಲ್ಲಿಂದ ಮತ್ತೊಂದು ಬೈಕಿನ ಸಹಾಯದಿಂದ ಕಿನ್ನಿಮೂಲ್ಕಿ ತನಕ ಸಾಗಿ ಅಲ್ಲಿಂದ ಮಂಗಳೂರು ಬಸ್ ಮೂಲಕ ಕೇರಳ ಹೋಗಿರುವ ಸಾಧ್ಯತೆ ಬಲವಾಗಿದೆ.
ನ.17 ರಂದು ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಪಟ್ಟಣದ ಮಾರುತಿ ಸಭಾ ಭವನದಲ್ಲಿ ನ.17 ರಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಮಟ್ಟದ ಜನತಾ ದರ್ಶನ ಸಕರ್ಾರದ ಮಹತ್ವಪೂರ್ಣ ಕಾರ್ಯಕ್ರಮವಾಗಿದ್ದು, ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆ ಕಲ್ಪಿಸುತ್ತದೆ ಎಂದು ಹೇಳಿದರು.
ತಾಲ್ಲೂಕಿನ ಎಲ್ಲ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು. ತಮ್ಮ ಇಲಾಖೆಗಳಿಂದ ಫಲಾನುಭವಿಗಳಿಗೆ ದೊರೆಯುವ ಅನುಕೂಲಗಳ ಮಾಹಿತಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕಾರ್ಯಕ್ರಮಕ್ಕೆ ಗೈರು ಹಾಜರಾಗಬಾರದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಭಾಗ್ಯಲಕ್ಷ್ಮಿ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿದರ್ೇಶಕ ಎಂ.ಶ್ರೀನಿವಾಸನ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ನಾರಾಯಣಸ್ವಾಮಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್ ಕುಮಾರ್ ಇದ್ದರು.
ನವೆಂಬರ್ 19 ರಂದು ಕುಂದಾಪುರ ಪೇಟೆ ವೆಂಕಟರಮಣ ದೇವಸ್ಥಾನದಲ್ಲಿ “ವಿಶ್ವರೂಪ ದರ್ಶನ”
ಕುಂದಾಪುರ ಪೇಟೆ ವೆಂಕಟರಮಣ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಪ್ರತಿ ವರ್ಷ ನಡೆಯುವ “ವಿಶ್ವರೂಪ ದರ್ಶನ” ಕಾರ್ಯಕ್ರಮ ನವೆಂಬರ್ 19 ರಂದು ಪ್ರಾತ:ಕಾಲ ನಡೆಯಲಿದೆ.
ದೇವಾಲಯವನ್ನು ಸಂಪೂರ್ಣವಾಗಿ ರಂಗೋಲಿ ನಂದಾ ದೀಪಗಳಿಂದ ಸಿಂಗರಿಸಿ ಪೂಜೆ ನಡೆಸಲಾಗುತ್ತದೆ. ನಂದಾ ದೀಪಾಲಂಕಾರದ ವೈಭವ ಕಣ್ತುಂಬಿಕೊಳ್ಳಲು ನೂರಾರು ಮಂದಿ ಭಕ್ತಾಧಿಗಳು ಮುಂಜಾನೆ 5 ಗಂಟೆಗೆ ಆಗಮಿಸುತ್ತಾರೆ. ಭಕ್ತಾಭಿಮಾನಿಗಳು ಕುಟುಂಬ ಸಮೇತ ಆಗಮಿಸಿ, “ವಿಶ್ವರೂಪ ದರ್ಶನ”ದಲ್ಲಿ ಪಾಲ್ಗೊಳ್ಳಬೇಕೆಂದು ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ಆಹ್ವಾನಿಸಿದ್ದಾರೆ.
ಕುಂದಾಪುರ ಪಂಚಗಂಗಾ ತೀರದಲ್ಲಿ ಸಂಗೀತ ಲಹರಿ
ಕುಂದಾಪುರದ ವಿಠಲವಾಡಿಯ “ಡೌನ್ ಟೌನ್” ನ ಪಂಚಗಂಗಾವಳಿ ತೀರದಲ್ಲಿ ದೀಪಾವಳಿಯ ದಿನ ಭಾನುವಾರ ಮುಂಜಾನೆ ಶಾಸ್ತ್ರೀಯ ಭಾವ ಸಂಗೀತ ಲಹರಿ ಕಾರ್ಯಕ್ರಮ ಸಂಗೀತ ಪ್ರಿಯರಿಗೆ ಆನಂದ ಉಂಟು ಮಾಡಿತು. ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಹಾಗೂ ಗೋರಕ್ಷಾ ಗೋಕುಲಧಾಮ ಟ್ರಸ್ಟ್ ಕೋಟೇಶ್ವರದ ಜಂಟಿ ಆಶ್ರಯದಲ್ಲಿ ಡೌನ್ ಟೌನ್ ನದಿ ತೀರದಲ್ಲಿ ಅಭಿವೃದ್ಧಿ ಪಡಿಸಿದ ಹಸಿರು ಉದ್ಯಾನವನದಲ್ಲಿ, ಖ್ಯಾತ ಸಂಗೀತಗಾರ ಸಿದ್ಧಾರ್ಥ ಬೆಳ್ಮಣ್ಣು ಶುಶ್ರಾವ್ಯವಾಗಿ ಹಾಡಿದರು. ಈ ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್ ಉಡುಪಿ, ತಬಲಾದಲ್ಲಿ ಕೆ. ವಿಘ್ನೇಶ್ ಕಾಮತ್ ಕೋಟೇಶ್ವರ ಉತ್ತಮ ಸಹಕಾರ ನೀಡಿದರು.
ಕು. ಮೇಘನಾ ಭಟ್ ತಾನ್ಪುರದಲ್ಲಿ, ಕೌಸ್ತುಭ್ ಕಾಮತ್ ತಾಳದಲ್ಲಿ ಸಹಕರಿಸಿದರು.
ಕಲಾವಿದರನ್ನು ಸಂಗೀತ ಭಾರತಿ ಟ್ರಸ್ಟ್ನ ಅಧ್ಯಕ್ಷ ಕೆ. ಶ್ರೀಧರ್ ಕಾಮತ್, ವಿಶ್ವಸ್ಥರಾದ ಎ.ಎಸ್.ಎನ್.ಹೆಬ್ಬಾರ್, ಡಾ| ಎಚ್.ಆರ್. ಹೆಬ್ಬಾರ್ ಹಾಗೂ ಗೋರಕ್ಷಾ ಗೋಕುಲಧಾಮ ಟ್ರಸ್ಟ್ನ ಕೆ. ಸುರೇಶ ಕಾಮತ್, ಶ್ರೀಮತಿ ಭಾಗ್ಯ ಎಸ್. ಕಾಮತ್ ಹಾಗೂ ವಿಶ್ವನಾಥ ಭಟ್ ಉಡುಪಿ ಗೌರವಿಸಿದರು.
ಕೆ. ಸುರೇಶ್ ಕಾಮತ್ ಸ್ವಾಗತಿಸಿ, ಕಲಾವಿದರನ್ನು ಪರಿಚಯಿಸಿದರು.
ಸಂಗೀತ ಭಾರತಿ ಟ್ರಸ್ಟ್ನ ವಿಶ್ವಸ್ಥರಾದ ಕೆ. ಪ್ರಭಾಕರ ಪ್ರಭು, ಕೆ. ಸೀತಾರಾಮ ನಕ್ಕತ್ತಾಯ, ಕಾರ್ಯದರ್ಶಿ ಕೆ. ನಾರಾಯಣ ಉಪಸ್ಥಿತರಿದ್ದರು.
ಬಸ್ರೂರಿನ ಕಲಾವಿದ ಪೂರ್ಣಚಂದ್ರ ಅವರು ತಾವು ಬಿಡಿಸಿದ ಸಿದ್ಧಾರ್ಥ ಬೆಳ್ಮಣ್ಣು ಅವರ ಚುಕ್ಕಿ ಚಿತ್ರ ಅರ್ಪಿಸಿದರು.
“ಶಾಸ್ತ್ರೀಯ ಸಂಗೀತಕ್ಕೆ ಸಂಘಟಕರು, ಶ್ರೋತವರ್ಗ ನೀಡುತ್ತಿರುವ ಪ್ರೋತ್ಸಾಹ ಅಭಿನಂದನೀಯ. ಸುಂದರ ಪರಿಸರದಲ್ಲಿ ಹಾಡಲು ಅವಕಾಶ ನೀಡಿರುವುದಕ್ಕೆ ಖುಷಿಯಾಗಿದೆ” ಎಂದು ಸಿದ್ಧಾರ್ಥ ಬೆಳ್ಮಣ್ಣು ಹೇಳಿದರು.
ಯು.ಎಸ್.ಶೆಣೈ ಕಾರ್ಯಕ್ರಮ ನಿರೂಪಿಸಿದರು.