ಕ್ರಿಸ್ತರಾಜರ ಮಹೋತ್ಸವ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

ಉಡುಪಿ ಧರ್ಮಪ್ರಾಂತ್ಯದಲ್ಲಿ ‘ಕ್ರಿಸ್ತ ಜಯಂತಿ ಜುಬಿಲಿ 2025’ರ ಸಿದ್ಧತೆಗೆ ವಿಧ್ಯುಕ್ತ ಚಾಲನೆ

ಬ್ರಾಹ್ಮಣ ಸಮುದಾಯ ಶಿಕ್ಷಣದ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು : ರಾಜ್ಯ ಯಾಜ್ಞವಲ್ಕ್ಯ ಸೇವಾ ದತ್ತಿ ಉಪಾಧ್ಯಕ್ಷ ವೈ.ವಿ.ಗೋಪಾಲಕೃಷ್ಣ

ಶ್ರೀನಿವಾಸಪುರ: ಬ್ರಾಹ್ಮಣ ಸಮುದಾಯ ಶಿಕ್ಷಣದ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು ಎಂದು ರಾಜ್ಯ ಯಾಜ್ಞವಲ್ಕ್ಯ ಸೇವಾ ದತ್ತಿ ಉಪಾಧ್ಯಕ್ಷ ವೈ.ವಿ.ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಜಗದ್ಗುರು ಶ್ರೀ ಭಾರತಿ ತೀರ್ಥ ಸಭಾ ಭವನದಲ್ಲಿ ತಾಲ್ಲೂಕು ಯಾಜ್ಞವಲ್ಕ್ಯ ಸೇವಾ ದತ್ತಿಯಿಂದ ಭಾನುವಾರ ಏರ್ಪಡಿಸಿದ್ದ ಯೋಗೀಶ್ವರ ಯಾಜ್ಞವಲ್ಕ್ಯ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಬ್ರಾಹ್ಮಣ ಸಮುದಾಯ ತಮ್ಮೊಳಗೆ ಇರಬಹುದಾದ ಸಣ್ಣಪುಟ್ಟ ಭಿನ್ನಾಭಿಪ್ರಾಹ ಬದಿಗೊತ್ತಿ ಒಗ್ಗೂಡಬೇಕು. ಸಮಾಜದ ಎಲ್ಲ ರಂಗಗಳಲ್ಲೂ ಮುಂದೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಸಾಂಸ್ಕøತಿಕ ಪರಂಪರೆಗೆ ಬೆಲೆ ನೀಡಬೇಕು. ಮಾನವೀಯ ನೆಲೆಯಲ್ಲಿ ಬದುಕು ಸಾಗಿಸಬೇಕು ಎಂದು ಹೇಳಿದರು.
ತಾಲ್ಲೂಕು ಯಾಜ್ಞವಲ್ಕ್ಯ ಸೇವಾ ದತ್ತಿ ಅಧ್ಯಕ್ಷ ಗೋಪಿನಾಥರಾವ್ ಮಾತನಾಡಿ, ಬ್ರಾಹ್ಮಣ ಸಮುದಾಯ ಯಾಜ್ಞವಲ್ಕ್ಯ ಮಹರ್ಷಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ನಡೆ, ನುಡಿ, ಆಚಾರ, ವಿಚಾರ ದಲ್ಲಿ ಎಚ್ಚರ ವಹಿಸಬೇಕು. ಸ್ವಂತಿಕೆ ಉಳಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ.ದಿವಾಕರ್ ಮಾತನಾಡಿ, ಬ್ರಾಹ್ಮಣ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸನಾತನ ಸಂಸ್ಕøತಿ ಬಗ್ಗೆ ಅಭಿಮಾನ ತಳೆಯಬೇಕು. ವೈದಿಕ ಆಚರಣೆಗಳಿಗೆ ಒತ್ತುನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಸಮುದಾಯದ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು.
ಸಮುದಾಯದ ಮುಖಂಡರಾದ ಜಿ.ಆರ್.ವಲ್ಲಬಣ್ಣ, ಶ್ರೀಧರ್, ಎಚ್.ಆರ್.ವೆಂಕಟೇಶ್, ರಮೇಶ್ ಬಾಬು, ಎಸ್.ಎನ್.ಗೋಪಾಲ್, ಕೆ.ಎಸ್.ರಾಘವೇಂದ್ರ, ಎಚ್.ಎಸ್.ಸುನಿಲ್, ಎಸ್.ಸುಬ್ರಮಣಿ, ಎಚ್.ಆರ್.ರಾಘವೇಂದ್ರ, ವೆಂಕಟೇಶಬಾಬು, ವೆಂಕಟಕೌಶಿಕ್, ಎಸ್.ಪಿ.ಕೃಷ್ಣಮೂರ್ತಿ, ಪಿ.ಎಸ್.ವೆಂಕಟರಾಘವೇಂದ್ರ ಇದ್ದರು.
ಮೆರವಣಿಗೆ: ಪಟ್ಟಣದಲ್ಲಿ ಯಾಜ್ಞವಲ್ಕ್ಯ ಮಹರ್ಷಿ ಭಾವಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು.

ವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ : ಜೆಎಂಎಫ್‍ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು

ಕುಂದಾಪುರ ತೆರಾಲಿ ಪೂರ್ವಭಾವಿ ಭ್ರಾತತ್ವ ಬಾಂಧವ್ಯ ದಿನ – ಪರಮ ಪ್ರಸಾದದ ಭವ್ಯ ಮೆರವಣಿಗೆ ಆರಾಧನೆ – ಕ್ರಿಸ್ತರಾಜನ ಹಬ್ಬ

ಕುಂದಾಪುರದಲ್ಲಿ ‘ಕ್ರಿಸ್ತ ಜಯಂತಿ ಜುಬಿಲಿ 2025’ರ ಸಿದ್ಧತೆಗೆ ವಿಧ್ಯುಕ್ತ ಚಾಲನೆ

ಶ್ರೀನಿವಾಸಪುರದ ಸ. ಬಾ. ಪ. ಪೂ. ಕಾಲೇಜು ಸುಗ್ಗಿ ಸಂಭ್ರಮ, ಕಾಲೇಜು ಸಂತೆ:ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು – ಆರ್.ಚೌಡರೆಡ್ಡಿ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಅಸಂಪ್ಷನ್ ಶಾಲೆಗಳ 2023 ರ ವಾರ್ಷಿಕ ದಿನ / Assumption Schools Annual Day 2023, Hiriyur, Chitradurga District

ಎಸ್‌ ಡಿಎ ಮಹಿಳಾ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ