ಬೆಂಗಳೂರು: ರಾಜ್ಯದ ರಾಜಧಾನಿಯ ಹಲವು ಶಾಲೆಗಳಿಗೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಪೋಷಕರು ಹಾಗೂ ವಿದ್ಯಾರ್ಥಿ ಗಳಲ್ಲಿ ಆತಂಕ ಸೃಷ್ಟಿಸಿದೆ. ಈ ನಡುವೆ ಶಾಲೆಗಳಿಗೆ ಬೆದರಿಕೆ ಹಾಕುವ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಎಚ್ಚರಿಸಿದ್ದಾರೆ.
ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಪೋಷಕರು ಶಾಲೆಯತ್ತ ಧಾವಿಸುತ್ತಿದ್ದು, ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. 15 ಶಾಲೆಗಳ ಪೈಕಿ 13 ಶಾಲೆಗಳಿಂದ ಮಕ್ಕಳನ್ನು ತೆರವು ಮಾಡಿಸಲಾಗಿದೆ.
ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಶುಕ್ರವಾರ ಅನಾಮಧೇಯ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಉದ್ದೇಶಿತ ಶಾಲೆಗಳಲ್ಲಿ ಒಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದ ಎದುರುಗಡೆ ಇದೆ. ಸಿಲಿಕಾನ್ ಸಿಟಿಯ ಬಸವೇಶ್ವರ ನಗರದ ನೇಪೆಲ್ ಮತ್ತು ವಿದ್ಯಾಶಿಲ್ಪಾ ಸೇರಿದಂತೆ 7 ಶಾಲೆಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಲಾಗಿದೆ. ಸ್ವಲ್ಪ ಸಮಯದ ನಂತರ, ಇನ್ನೂ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಇಮೇಲ್ ಮೂಲಕ ಇದೇ ರೀತಿಯ ಬೆದರಿಕೆ ಹಾಕಲಾಗಿದೆ.
ಹುಸಿ ಬಾಂಬ್ ಬೆದರಿಕೆಯಾಗಿದ್ದರೂ ಬೆಂಗಳೂರು ಪೊಲೀಸರು ಸುರಕ್ಷತಾ ಕ್ರಮವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶಾಲೆಗಳಿಂದ ತೆರವುಗೊಳಿಸಿದ್ದಾರೆ. ಪೊಲೀಸರು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಶಾಲಾ ಆವರಣಗಳಲ್ಲಿ ಸಂಪೂರ್ಣ ಶೋಧ ನಡೆಸುತ್ತಿದ್ದಾರೆ. ಯಾವುದೇ ಶಾಲೆಗಳಲ್ಲಿ ಬಾಂಬ್ಗಳ ಪತ್ತೆಯಾಗಿರುವ ಕುರಿತು ವರದಿಯಾಗಿಲ್ಲ
Year: 2023
ಗಡಿ ಭಾಗದಲ್ಲಿ ಕನ್ನಡ ಆಡು ಭಾಷೆಯಾಗಿ ರಾರಾಜಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಗಡಿ ಭಾಗದಲ್ಲಿ ಕನ್ನಡ ಆಡು ಭಾಷೆಯಾಗಿ ರಾರಾಜಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಜನ ಜಾಗೃತಿ ವೇದಿಕೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಗಡಿ ಭಾಗದಲ್ಲಿ ಕನ್ನಡ ಜನರ ಹೃದಯದ ಭಾಷೆಯಾಗಿದೆ ಎಂದು ಹೇಳಿದರು.
ಈಗ ಗಡಿ ಭಾಗದಲ್ಲಿ ಕನ್ನಡ ಭಾಷಾ ಬಳಕೆ ಸುಧಾರಿಸಿದೆ. ಹೆಚ್ಚಿನ ಸಂಖ್ಯೆಯ ಪೋಷಕರು ತಮ್ಮ ಮಕ್ಕಳನ್ನು ಕನ್ನಡದಲ್ಲಿ ಮಾನಾಡುತ್ತಿದ್ದಾರೆ. ಹಾಗಾಗಿ ಕನ್ನಡ ಹೆಚ್ಚು ಪ್ರಿಯವಾಗುತ್ತಿದೆ. ಹಿರಿಯ ತಲೆಮಾರಿನ ಜನರು ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ಮುಖಂಡರಾದ ಕಾರ್ ಬಾಬು, ಪೂಲ ಶಿವಾರೆಡ್ಡಿ, ಹಳೆಪೇಟೆ ಮಂಜುನಾಥರೆಡ್ಡಿ, ಸಿ.ಮುನಿಯಪ್ಪ, ರಂಗಪ್ಪ, ರಘು, ಸಿ.ರವಿ
ಕನಕದಾಸರು ರಚಿಸಲ್ಪಟ್ಟ ಕೀರ್ತನೆಗಳಲ್ಲಿ ಸರ್ವಕಾಲಿಕ ಮಾನವೀಯ ಮೌಲ್ಯ ಅಡಗಿದೆ : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಕನಕದಾಸರು ಮಾನವೀಯ ನೆಲೆಯಲ್ಲಿ ರಚಿಸಲ್ಪಟ್ಟ ಕೀರ್ತನೆಗಳಲ್ಲಿ ಸರ್ವಕಾಲಿಕ ಮಾನವೀಯ ಮೌಲ್ಯ ಅಡಗಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಕನಕದಾಸರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸರ್ವ ಜನಾಂಗದ ಒಳಿತನ್ನೇ ಬಯಸಿದ ಕನಕದಾಸರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ಕ್ಷೇತ್ರದಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಮನೆ ಅಗತ್ಯ ಇರುವ ಕುಟುಂಬಗಳನ್ನು ಪಕ್ಷಾತೀತವಾಗಿ ಗುರ್ತಿಸಿ ಪಟ್ಟಿ ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ತಾಲ್ಲೂಕಿನ ಮದನಪಲ್ಲಿ ಹಾಗೂ ಮುಳಬಾಗಿಲು ರಸ್ತೆ ಪಕ್ಕದಲ್ಲಿ 3 ಸಾವಿರ ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಕ್ಷೇತ್ರ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕೈಗಾರಿಕೆ ಸ್ಥಾಪನೆಯಿಂದ ಯುವಕರಿಗೆ ಕೆಲಸ ಸಿಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಕನಕದಾಸರು 16ನೇ ಶತಮಾನದಲ್ಲಿ ಸಮಾಜದ ಡೊಂಕು ತಿದ್ದಲು ಪ್ರಯತ್ನಿಸಿದ ಮಹಾನ್ ಸಂತ. ಅವರ ಸಾಮಾಜಿಕ ಕಳಕಳಿ ಅನನ್ಯ ಹಾಗೂ ಅನುಕರಣೀಯ. ವಿದ್ಯಾರ್ಥಿಗಳು ಕನಕದಾಸರ ಜೀವನ ಚರಿತ್ರೆ ಓದಬೇಕು. ಅವರ ಸಾಹಿತ್ಯ ಕೃತಿಗಳ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಭೈರವೇಶ್ವರ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ಕನಕದಾಸರ ಸಮರ್ಪಣಾಭಾವ, ತ್ಯಾಗ, ನಿಸ್ವಾರ್ಥ ಸೇವೆ ಹಾಗೂ ವಿಶಿಷ್ಟವಾದ ಆಧ್ಯಾತ್ಮಿಕ ಚಿಂತನೆ ಕಾಲಾತೀತವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ ಕನಕದಾಸರ ಜೀವನ ಸಾಧನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ್ದ ಕುರುಬ ಸಮುದಾಯದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮುಖಂಡರಾದ ಮೂರ್ತಿ, ಚನ್ನಪ್ಪ, ಪಾತಪಲ್ಲಿ ಚೌಡರೆಡ್ಡಿ, ಎನ್.ಶ್ರೀಧರ್, ವಿವಿಧ ಇಲಾಖೆಗಳ ಮುಖ್ಯಸ್ಥರಾದ ಕೆ.ಸಿ.ಮಂಜುನಾಥ್, ಕೃಷ್ಣಪ್ಪ, ಎ.ಬೈರಾರೆಡ್ಡಿ, ಶ್ರೀನಿವಾಸ್, ನವೀನ್ ಕುಮಾರ್, ಕುಮುದ, ರಾಮತೀರ್ಥ ಇದ್ದರು.
ಮೆರವಣಿಗೆ: ಪಟ್ಟಣದ ಎಂಜಿ ರಸ್ತೆಯಲ್ಲಿ, ತಾಲ್ಲೂಕಿನ ವಿವಿಧೆಡೆಗಳಿಂದ ಕನಕದಾಸರ ಭಾವಚಿತ್ರದೊಂದಿಗೆ ತರಲಾಗಿದ್ದ ಪಲ್ಲಕಿಗಳ ಮೆರವಣಿಗೆ ಏರ್ಪಡಿಸಲಾಗಿತ್ತು.
ಕಿಡ್ನಿ ಸಮಸ್ಯೆಯ ವಿದ್ಯಾರ್ಥಿನಿಗೆ ಭಾ.ರೆಡ್ ಕ್ರಾಸ್ ಸಮಿತಿಯ ಸದಸ್ಯರು ಮತ್ತು ಇತರರಿಂದ ರೂ. 61ಸಾವಿರ ಧನಸಹಾಯ
ಬಳ್ಕೂರಿನ ರಿಕ್ಷಾ ಚಾಲಕನ ಮಗಳು ಅಕ್ಷತಾ, ಪಿ. ಯು.ಸಿ. ವಿದ್ಯಾರ್ಥಿನಿ ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದು. ಔಷಧ ಮತ್ತು ಡೈಲೆಸಿಸ್ ಬಗ್ಗೆ ತುಂಬಾ ಖರ್ಚು ಆಗುತ್ತಿದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಇತರ ಕೆಲವು ಸದಸ್ಯರು ಕೊಡಮಾಡಿದ ರೂಪಾಯಿ 61,000/- ವನ್ನು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ರೋಗಿಯ ತಂದೆಗೆ ಹಸ್ಥಾತರಿಸಿದರು. ಅಲ್ಲದೇ ದೇಣಿಗೆ ನೀಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.
ಕುಂದಾಪುರ ಹೆಮ್ಮಾಡಿಯಲ್ಲಿ ಬೈಕ್-ಕಾರು ಅಪಘಾತ – ಸವಾರ ಮೃತ್ಯು
ಕುಂದಾಪುರ: ಕುಂದಾಪುರ ಸಂಚಾರ ಠಾಣಾ ವ್ಯಾಪ್ತಿಯ ಹೆಮ್ಮಾಡಿ ಹಾಲು ಡೈರಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಅಫಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನೆಡೆದಿದೆ. ಬೈಕ್ ಸವಾರ ಹಕ್ಲಾಡಿ ಸಮೀಪದ ತೊಪ್ಲು ನಿವಾಸಿ ಮಹಾಬಲ ಪೂಜಾರಿ (48) ಗುರುತಿಸಲಾಗಿದೆ. ಮೃತರು ಖಾಸಗಿ ಬಸ್ಸು ಚಾಲಕರಾಗಿದ್ದು, ಕೊನೆಯ ಟ್ರಿಪ್ ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಅವಘಡ ನೆಡೆದಿದೆ.
ಸ್ಥಳಕ್ಕೆ ಸಂಚಾರ ಠಾಣಾ ಪೊಲೀಸ್ ಭೇಟಿ ನೀಡಿದ್ದಾರೆ.
400 ಗಂಟೆಗಳ ಕಾಲ ಸುರಂಗದಲ್ಲಿ ಉಳಿದುಕೊಂಡು ಮಗ ಪಾರದರೂ, ತಂದೆ ಮಾತ್ರ ಆತನನ್ನು ಜೀವಂತ ನೋಡಲಾಗಲಿಲ್ಲಾ
ಜಾರ್ಖಂಡ್ನ ಪೂರ್ವ ಸಿಂಗ್ಭೂಮ್ ಜಿಲ್ಲೆಯ ಭಕ್ತು ಮುರ್ಮು ಅವರು ಸಿಲ್ಕ್ಯಾರಾ ಸುರಂಗದೊಳಗೆ 400 ಗಂಟೆಗಳ ಕಾಲ ಉಳಿದುಕೊಂಡಿದ್ದ 41 ಮಂದಿ ಕಾರ್ಮಿಕರಲ್ಲಿ ಒಬ್ಬರು.
ನವೆಂಬರ್ 28 ರಂದು, ಅವರು ಅಂತಿಮವಾಗಿ ಸುರಂಗದಿಂದ ಹೊರಬಂದಾಗ, ಅವರ ಕುಟುಂಬವು ಇತರರಂತೆ ಸಂತೋಷ ಆಚರಿಸಲು ಸಾಧ್ಯವಾಗಲಿಲ್ಲ. ಕಾರಣ ಭಕ್ತುವಿನ ತಂದೆ, 70 ವರ್ಷ ವಯಸ್ಸಿನ ಬರ್ಸಾ ಮುರ್ಮು, ನವೆಂಬರ್ 29 ರಂದು ಬೆಳಿಗ್ಗೆ ತನ್ನ ಮಗನನ್ನು ರಕ್ಷಿಸುವ ಕೆಲವೇ ಗಂಟೆಗಳ ಮೊದಲು ಕಾಯುತ್ತಾ ಸಾವನ್ನಪ್ಪಿದರು. ಮಗ ಹೊರಗೆ ಬಂದ ಸುದ್ದಿಯೂ ಅವರು ಕೇಳಲು ಜೀವಂತವಾಗಿರಲಿಲ್ಲಾ.
ಮುರ್ಮು ಅವರ ಹಿರಿಯ ಮಗ ಚೆನ್ನೈನಲ್ಲಿ ವಾಸವಾಗಿರುವುದರಿಂದ ಕೊನೆಯುಸಿರೆಳೆದಾಗ ಮುರ್ಮು ಅವರ ಮೂವರು ಪುತ್ರರು ಅವರೊಂದಿಗೆ ಇರಲು ಸಾಧ್ಯವಾಗಲಿಲ್ಲ, ಎರಡನೇ ಮಗ ಹತ್ತಿರದ ಹಳ್ಳಿಗೆ ಕೆಲಸ ಹುಡುಕಲು ಹೋಗಿದ್ದ ಮತ್ತು ಮೂರನೆಯವನು ಸುರಂಗದೊಳಗೆ ಸಿಕ್ಕಿಬಿದ್ದನು.
ಕುಂದಾಪುರ ಎo ಐ ಟಿ ಕೆ ಯಲ್ಲಿ “ನವಮಿತ್” ಉದ್ಘಾಟನೆ
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರಸ್ತುತ ವರ್ಷದ ಸಾಂಸ್ಕೃತಿಕ ತಂಡಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಪ್ರತಿವರ್ಷವೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿಧ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶವನ್ನು ಒದಗಿಸಲಾಗುತ್ತಿದ್ದು ಈ ವರ್ಷ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಎಲ್ಲ ವಿಧ್ಯಾರ್ಥಿಗಳನ್ನು ಹತ್ತು ತಂಡಗಳಾಗಿ ವಿಂಗಡಿಸಿ ಮುಂದಿನ ಎಲ್ಲ ಸ್ಪರ್ದೆಗಳನ್ನು ತಂಡದ ಮಧ್ಯೆ ನಡೆಸಲಾಗುತ್ತದೆ.
ಈ ಮೂಲಕ ವಿಧ್ಯಾರ್ಥಿಗಳ ಕ್ರಿಯಾಶೀಲತೆ ಹಾಗೂ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ ಸಿಕ್ಕಂತಾಗುತ್ತದೆ. ಮೊದಲ ಸ್ಪರ್ದೆಯಾಗಿ ಫ಼್ಯಾಶನ್ ಶೋ ನಡೆಸಿದ್ದು ವಿಧ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ ಸಾಂಸ್ಕೃತಿಕ ಸಂಯೋಜಕಿ ಪ್ರೊ.ಸೂಕ್ಷ್ಮ ಅಡಿಗ, ವಿವಿಧ ತಂಡಗಳ ವಿದ್ಯಾರ್ಥಿ ಮುಖಂಡರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಲ್ಐಸಿ ಜೀವನ ಉತ್ಸವ ಪಾಲಿಸಿ, ಪಾಲಿಸಿದಾರರಿಗೆ ವರದಾನವಾಗಿದೆ : ಎಲ್ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್
ಶ್ರೀನಿವಾಸಪುರ: ಎಲ್ಐಸಿ ಜೀವನ ಉತ್ಸವ ಪಾಲಿಸಿ, ಪಾಲಿಸಿದಾರರಿಗೆ ವರದಾನವಾಗಿದೆ ಎಂದು ಎಲ್ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಎಲ್ಐಸಿ ಜೀವನ ಉತ್ಸವ ಪಾಲಸಿ ಸೇವೆ ಉದ್ಘಾಟಿಸಿ ಮಾತನಾಡಿದ ಅವರು, ಪಾಲಿಸಿ ಮುಗಿದ ಬಳಿಕವೂ ಪಾಲಿಸಿದಾರರಿಗೆ ಜೀವನಪರ್ಯಂತ ಪಾಲಿಸಿಯ ಶೇ.10 ರಷ್ಟು ಹಣ ನೀಡುವುದು ಈ ಪಾಲಿಸಿ ವಿಶೇಷ ಎಂದು ಹೇಳಿದರು.
ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಜೀವನ ಉತ್ಸವ ಪಾಲಿಸಿ ಪ್ರಚಾರ ಮಾಡಬೇಕು. ಈ ಪಾಲಿಸಿಯಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನವಾಗುವುದರಿಂದ ಹೆಚ್ಚು ಪಾಲಿಸಿ ಮಾಡಿಸಬೇಕು. ಸೇವಾ ಮನೋಭಾವದಿಂದ ಈ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸಮಾಜಕ್ಕೆ ಆರ್ಥಿಕ ದೃಢತೆ ನೀಡುವಲ್ಲಿ ಎಲ್ಐಸಿ ಮುಂಚೂಣಿಯಲ್ಲಿದೆ. ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪಾರದರ್ಶಕವಾಗಿ ಕಾರ್ಯನಿರ್ವಹಣೆ ಮಾಡುವುದರ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಆದ್ದರಿಂದ ಜನರ ಮನವೊಲಿಸಿ ಈ ವಿಶೇಷ ಪಾಲಿಸಿ ಮಾಡಿಸಬೇಕು ಎಂದು ಹೇಳೀದರು.
ಎಲ್ಐಸಿ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ ಆರ್.ಕುಲಕರ್ಣಿ, ಬಾಲಚಂದ್ರ, ಶ್ರೀನಿವಾಸ್, ಲಿಖಿತ್ ಕುಮಾರ್, ಪ್ರತಿನಿಧಿಗಳಾದ ಪ್ರಮೀಳ, ಪೆದ್ದನ್ನ, ಶ್ರೀನಿವಾಸ್, ಎಸ್.ಲಕ್ಷ್ಮಣಬಾಬು ಇದ್ದರು.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ: ಲಂಚ ಸ್ವೀಕರಿಸಿದ ಅರಣ್ಯ ಇಲಾಖೆ ಸಿಬಂದಿಯ ಬಂಧನ
ಕುಂದಾಪುರ: ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಬುಧವಾರ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಬಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಚೇರಿಯಲ್ಲಿ ಲಿಪಿಕ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜು ಪೂಜಾರಿ ಎಂಬವರು ನಾಗರಿಕರೊಬ್ಬರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ.
ವಾಹನವೊಂದು ಅರಣ್ಯ ಇಲಾಖೆಯಿಂದ ಮುಟ್ಟುಗೋಲಾಗಿದ್ದು ಅದನ್ನು ಬಿಡಿಸುವ ಸಂಬಂಧ ಕಡತವನ್ನು ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಲು ಮಂಜು ಪೂಜಾರಿ ಲಂಚದ ಬೇಡಿಕೆಯಿಟ್ಟಿದ್ದರು. ಮಾತುಕತೆ ಪ್ರಕಾರ ಕಚೇರಿ ವೇಳೆಯಲ್ಲಿ ಲಂಚ ಪಡೆಯುತ್ತಿದ್ದಾಗಲೇ ದಾಳಿ ನಡೆದಿದೆ. ನಗದು ಸಹಿತ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.