ಶ್ರೀನಿವಾಸಪುರ 2 : ತಹಶೀಲ್ದಾರ್ ಕಛೇರಿ ಆವರಣದಲ್ಲಿ ಹೆಚ್ಚಿನ ಸಾರ್ವಜನಿಕರು ಓಡಾಡುತ್ತಿದ್ದನ್ನು ಗಮನಿಸಿ, ಕಛೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲು ಇನ್ನು ಎರಡು ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲು ತಹಶೀಲ್ದಾರ್ ರವರಿಗೆ ಸೂಚಿಸಿ, ಸಾರ್ವಜನಿಕರ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ಅವರ ಸಮಸ್ಯೆಗಳನ್ನು ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಆಕ್ರಂಪಾಷ ತಿಳಿಸಿದರು.
ಪಟ್ಟಣದ ಪಶುಪಾಲನ ಕಛೇರಿ ಹಾಗು ತಹಶೀಲ್ದಾರ್ ಕಛೇರಿಗೆ ಹಾಗು ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ಶುಕ್ರವಾರ ಬೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಇದೇ ಸಮಯದಲ್ಲಿ ತಹಶೀಲ್ದಾರ್ ಕಛೇರಿ ಆವರಣದಲ್ಲಿ ದ್ವಿಚಕ್ರವಾಹನಗಳು ಹಾಗೂ ಕಾರುಗಳನ್ನು ಶಿಸ್ತಿನಲ್ಲಿ ನಿಲ್ಲಿಸದೆ ಅಡ್ಡದಡ್ಡಿಯಾಗಿ ನಿಲ್ಲಿಸಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾ, ಸಾಮಾನ್ಯವಾಗಿ ನಾನು ಯಾವತ್ತು ಕಛೇರಿಗೆ ಬಂದ ವೇಳೆ ನನ್ನ ಕಾರನ್ನು ತಿರಿಗಿಸಿಕೊಳ್ಳಲು ಹಾಗು ತಹಶೀಲ್ದಾರ್ ರವರ ಕಾರನ್ನ ತಿರಿಗಿಸಿಕೊಳ್ಳಲು ಹರಸಾಹಸ ಮಾಡಬೇಕಾಗುತ್ತದೆ ಎನ್ನುತ್ತಾ,
ದ್ವಿಚಕ್ರವಾಹನಗಳನ್ನು ಸರದಿ ಸಾಲಿನಲ್ಲಿ ನಿಲ್ಲಿಸುಲು , ಅಧಿಕಾರಿಗಳ ಕಾರುಗಳನ್ನು ಹೊರತು ಪಡಿಸಿ ಬೇರೆ ಕಾರುಗಳನ್ನು ಇಲ್ಲಿ ನಿಲ್ಲಿಸದಂತೆ ಹೋಮ್ಗಾರ್ಡ್ನ್ನು ನೇಮಿಸುವಂತೆ ಪೊಲೀಸ್ ಅಧಿಕಾರಿಗೆ ಸೂಚಿಸಿದರು.
ಇದೇ ಸಮಯದಲ್ಲಿ ಪಶು ಪಾಲನ ಇಲಾಖೆ ಕಛೇರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಪಶುಪಾಲನ ಅಧಿಕಾರಿ ಕಛೇರಿಗೆ ಹೋಗಿ ಬರಲು ದಾರಿಯಲ್ಲದ ಕಾರಣ , ಸಾರ್ವಜನಿಕ ಶೌಚಾಲಯವು ಅಡ್ಡವಿರುವುದರಿಂದ ಶೌಚಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ ಪಶುಪಾಲನ ಅಧಿಕಾರಿ . ಪಶುಪಾಲಾನ ಇಲಾಖೆಗೆ ಹೋಗಿಬರಲು ಅನುಕೂಲವಾಗುವಂತೆ ಶೌಚಾಲಯವನ್ನು ಬೇರೆಡೆಗೆ ಸ್ಥಳಾಂತರಿಸಲು , ಶೌಚಾಲಯವು ಶಿಥಿಲಾವಸ್ಥೆಯಲ್ಲಿ ಇದ್ದು, ಬೇರೆಡೆಗೆ ಸ್ಥಳಾಂತರಿಸಲು ತಹಶೀಲ್ದಾರ್ ರವರಿಗೆ ಸೂಚನೆ ನೀಡಿದರು.
ಹಾಗೂ ಪೊಲೀಸ್ ಠಾಣೆಗೆ ಬೇಟಿ ನೀಡಿ ವಿವಿಧ ಮಾಹಿತಿ ಪಡೆದರು. ಅಲ್ಲದೆ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ ಅಪಘಾತಕ್ಕೆ ಒಳಗಾದ ಹಾಗು ಇತರೆ ಪ್ರಕರಣಗಳಿಗೆ ಸಂಬಂದಿಸಿದ ವಾಹನಗಳನ್ನು ತೆರವುಗೊಳಿಸಿ, ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದರು. ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪಾರ್ಕ್ನಲ್ಲಿ ಸ್ವಚ್ಚತೆಯನ್ನು ಕಾಪಾಡುವಂತೆ ತಹಶೀಲ್ದಾರ್ ರವರಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ವೃತ್ತ ನಿರೀಕ್ಷಕ ಎಂ.ಬಿ.ಮೆಹಬೂಬ್ ಗೊರವನಕೊಳ್ಳ, ಪಶುಪಾಲನ ಸಹಾಯಕ ನಿರ್ದೇಶಕ ಮಂಜುನಾಥರಡ್ಡಿ , ಡಾ|| ವಿಶ್ವನಾಥ್ ಉಪತಹಶೀಲ್ದಾರ್ ಕೆ.ಎಲ್.ಜಯರಾಮ್, ಶಿರಸ್ತೇದಾರ್ ಬಲರಾಮಚಂದ್ರೆಗೌಡ, ಆರ್ಐ ಮುನಿರೆಡ್ಡಿ, ಪುರಸಭೆ ಇಂಜನೀಯರ್ ಶ್ರೀನಿವಾಸ್ ಇದ್ದರು.
1, ಎಸ್ವಿಪುರ್ 2 : ಪಶುಪಾಲನ ಕಛೇರಿ ಹಾಗು ತಹಶೀಲ್ದಾರ್ ಕಛೇರಿಗೆ ಹಾಗು ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿ ಜಿಲ್ಲಾಧಿಕಾರಿ ಅಕ್ರಂಪಾಷ ಮಾತನಾಡಿದರು.
Year: 2023
ಕನ್ನಡ ನೆಲ, ಜಲ, ಬಾಷೆ ಉಳಿಯ ಬೇಕಾದರೆ ಎಲ್ಲರೂ ಕೈಜೋಡಿಸಿ ಸೈನಿಕರಂತೆ ಶ್ರಮಿಸಬೇಕು: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ 1 : ನೆಲ, ಜಲ, ಬಾಷೆ ಉಳಿಯ ಬೇಕಾದರೆ ಎಲ್ಲರೂ ಕೈಜೋಡಿಸಬೇಕು ಹಾಗು ಕನ್ನಡ ಭಾಷೆಯನ್ನು ಉಳಿಸಲು ಸೈನಿಕರಂತೆ ಶ್ರಮಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಗುರುವಾರ ಚೈತನ್ಯ ಜನ ಜಾಗೃತಿ ವೇದಿಕೆವತಿಯಿಂದ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ರಾತ್ರಿ ರಸಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ .ಈ ಒಂದು ದೃಷ್ಟಿಯಲ್ಲಿ ಪಟ್ಟಣದ ಅಭಿವೃದ್ಧಿಗೆ 25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಗುವುದು. ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳಿಗೆ ಬೇಕಾದ ವ್ಯವಸ್ಥೆಗಳನ್ನು ಗ್ರಾಮಪಂಚಾಯಿತಿ ವತಿಯಿಂದ ಮಾಡಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದೇನೆ ಎಂದರು.
40 ಕೋಟಿ ವೆಚ್ಚದಲ್ಲಿ ಶ್ರೀನಿವಾಸಪುರ-ಕೋಲಾರ ರಸ್ತೆ ಅಗಲೀಕರಣದ ಮೂಲಕ ರಸ್ತೆ ಅಭಿವೃದ್ಧಿಪಡಿಸಲಾಗುವುದು. 4 ಸಾವಿರ ಎಕರೆಯಲ್ಲಿ ಕೈಗಾರಿಕಾ ಪ್ರಾಂಗಣವನ್ನು ಸ್ಥಾಪಿಸಿ , ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಲಾಗುದು ಎಂದು ಭರವಸೆ ನೀಡಿದರು. ಶ್ರೀನಿವಾಸಪುರದಲ್ಲಿ ಕೈಗಾರಿಕಾ ಪ್ರಾಂಗಣವನ್ನು ಸ್ಥಾಪಿಸಲು ಕೋಲಾರದಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಿ ಅನುಮೋದನೆಯನ್ನ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಒಟ್ಟಿನಲ್ಲಿ ಕ್ಷೇತ್ರವನ್ನ ಎಲ್ಲಾ ಕ್ಷೇತ್ರದಲ್ಲಿ ಸರ್ವತೋಮುಖ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಆರ್ಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವೆಂಕಟಸ್ವಾಮಿ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ರಾಜ್ಯದಲ್ಲಿ ಕನ್ನಡರಾಜ್ಯೋತ್ಸವ ಆಚರಣೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದರವರಲ್ಲಿ ಪ್ರಮುಖರು. ಪಾಪನಪಲ್ಲಿ ಗ್ರಾಮಕ್ಕೆ ಶ್ರೀನಿವಾಸಪುರ ಹೆಸರನ್ನು ನಾಮಕರಣ ಮಾಡಿ, ಕನ್ನಡಭಾಷಾಭಿಮಾನವನ್ನು ಮೆರೆದರು.
ಈ ಕಾರ್ಯಕ್ರಮ ಕನ್ನಡ ಭಾಷೆ ಉಳಿಯಲು ಸಾಕ್ಷಿಯಾಗಿದೆ ಎಂದರು. ಅಲ್ಲದೆ ಈ ಭಾಗದಲ್ಲಿ ಐಎಎಸ್ ಹಾಗು ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸರಿಗಮಪ ಕಲಾವಿದರಾದ ಮೆಹಬೂಬು ಸಾಬ್, ಜ್ಞಾನ ಗುರುರಾಜ್, ಖುಷಿಕ್ ರವರು ಹಾಡುಗಳನ್ನು ಹಾಡುವುದರ ಮೂಲಕ ಜನರನ್ನು ರಂಜಿಸಿದರು. ಸಾಯಿ ಮೆಲೊಡೀಸ್ ಮತ್ತು ಸಾಯಿ ಈವೆಂಟ್ ರವರು ರಸಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪೊಲೀಸ್ ವೃತ್ತ ನಿರೀಕ್ಷಕರಾದ ಜಯಾನಂದ್, ಮೆಹಬೂಬ್ ಗೊರವನಕೊಳ್ಳ, ತಾ.ಪಂ. ಮಾಜಿ ಸದಸ್ಯ ಹಳೇಪೇಟೆ ಮಂಜುನಾಥ್, ಚಲ್ದಿಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಜೆ.ತಿಮ್ಮಸಂದ್ರ ಗ್ರಾ.ಪಂ. ಉಪಾಧ್ಯಕ್ಷ ಶಂಕರರಡ್ಡಿ, ಮುಖಂಡರಾದ ಪೂಲ್ಶಿವಾರೆಡ್ಡಿ, ಮಧುಸೂದನ್ರಡ್ಡಿ, ಕಾರ್ಬಾಬು, ಸಿ.ಮುನಿಯಪ್ಪ, ಸಿ.ರವಿ , ಮನಿಗಾನಹಳ್ಳಿ ವೆಂಕಟೇಗೌಡ ಇದ್ದರು.
ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬಕ್ಕೆ ಪ್ರೀತಿ ಪೂರ್ವಕ ಆಮಂತ್ರಣ-ಪ್ರಕೃತಿ ಮತ್ತು ಅಲ್ಟನ್
ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವನ್ನು ಶ್ರೀಮತಿ ಪ್ರಕೃತಿ ಮತ್ತು ಶ್ರೀ ಅಲ್ಟನ್ ರೆಬೇರೊ ಹಾಗೂ ಅವರ ಕುಟುಂಬದವರ ಪೋಷಕತ್ವದಲ್ಲಿ ನಡೆಯಲಿದ್ದು, ಇವರುಗಳು ಪ್ರೀತಿಯಿಂದ ಎಲ್ಲರನ್ನು ಆಮಂತ್ರಿಸಿದ್ದಾರೆ.
ನೀವೆಲ್ಲರೂ ದಿನಾಂಕ 03.12.2023 ರಂದು ಸಂಜೆ ಗಂಟೆ 5.00 ಕ್ಕೆ ನಡೆಯಲಿರುವ ಭ್ರಾತೃತ್ವದ ಭಾನುವಾರ ದಿವ್ಯ ಬಲಿಪೂಜೆಗೆ, ದಿನಾಂಕ 05.12.2023 ರಂದು ಸಂಜೆ ಗಂಟೆ 6.30 ನದೆಯಲಿರುವ ಸಂಧ್ಯಾವಂದನಾ (ದೇವರ ವಾಕ್ಯದ ಪ್ರಾರ್ಥನಾ ಸಭೆಗೆ, ಹಾಗೇ ದಿನಾಂಕ 6.12.2023 ರಂದು ನಡೆಯಲಿರುವ ಬೆಳಿಗ್ಗೆ ಗಂಟೆ 10.00 ವಾರ್ಷಿಕ ಹಬ್ಬದ ಸಂಭ್ರಮದ ದಿವ್ಯಬಲಿ ಪೂಜೆಗೆ ಭಾಗಿಯಾಗಬೇಕೆಂದು ನಿಮ್ಮನ್ನು ಆಮಂತ್ರಿಸುತ್ತಿದ್ದೇವೆ. – ಶ್ರೀಮತಿ ಪ್ರಕ್ರತಿ ಮತ್ತು ಶ್ರೀ ಅಲ್ಟನ್ ರೆಬೇರೊ ಹಾಗೂ ಕುಟುಂಬ
ಪ್ರಯಾಣಿಕ ಹಿತದ್ರಷ್ಟಿಯಿಂದ ಇಂದಿನಿಂದ ಖಾಸಗಿ ಸಾರಿಗೆ (ಬಾಡಿಗೆ) ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ
ಖಾಸಗಿ ಬಾಡಿಗೆ ವಾಹನಗಳಲ್ಲಿ (ಖಾಸಗಿ ಸೇವೆಯ ವಾಹನಗಳಲ್ಲಿ) ಒಬ್ಬೊಬ್ಬರೇ ಪ್ರಯಾಣಿಸುವುದೆಂದರೆ ಇತ್ತೀಚಿನ ದಿನಗಳಲ್ಲಿ
ಭಯವಾಗಿದೆ. ಮಹಿಳೆ, ಮಕ್ಕಳು, ಗಂಡಸರೆನ್ನದೆ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ವೇಳೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಂತಹ ಪ್ರಕರಣಗಳು ಸಂಭವಿಸುತ್ತಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಕಡೆ ರಾತ್ರಿ ವೇಳೆ ಇಲ್ಲವೇ ಅಪರಿಚಿತ ಸ್ಥಳಕ್ಕೆ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆಯನ್ನು ಕಡ್ಡಾಯ ಮಾಡಿ ಆದೇಶಿಸಲಾಗಿದೆ.
ವಿಎಲ್ಟಿ ಹಾಗೂ ಪ್ಯಾನಿಕ್ ಬಟನ್ ಅನ್ನು ಎಲ್ಲ ರೀತಿಯ ಸಾರ್ವಜನಿಕ ಸೇವಾ ವಾಹನಗಳು ಅಳವಡಿಸಬೇಕು. ಎಲ್ಲೋ ಬೋರ್ಡ್ ಟ್ಯಾಕ್ಸಿಗಳು , ಕ್ಯಾಬ್ಗಳು, ಖಾಸಗಿ ಬಸ್ಗಳು ನ್ಯಾಷನಲ್ ಪರ್ಮಿಟ್ ಹೊಂದಿರುವ ಗೂಡ್ಸ್ ವಾಹನಗಳಿಗೆ ಈ ಆದೇಶ ಅನ್ವಯವಾಗಲಿದೆ. ಅಂತಿಮ ಗಡುವಿನೊಳಗೆ ಅಳವಡಿಸದಿದ್ದರೆ ದಂಡ ಹಾಕಲಾಗುತ್ತದೆ. ಅಳವಡಿಸಲಾದ ಮಾನಿಟರಿಂಗ್ ನಕ್ಷೆಯಲ್ಲಿ ವಾಹನದ ಲೊಕೇಷನ್ ಟ್ರ್ಯಾಕಿಂಗ್ ನಡೆಯುತ್ತದೆ. ಹೀಗಾಗಿ ಯಾವುದೇ ವಾಹನ ಎಲ್ಲಿಯೇ ಸಂಚರಿಸಿದರೂ ಇದರಿಂದ ಗೊತ್ತಾಗುತ್ತದೆ. ಇದು ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಅತಿ ವೇಗದ ಚಾಲನೆ ಮಾಡಿದಾಗ ಎಚ್ಚರಿಕೆಯನ್ನು ರವಾನೆ ಮಾಡುತ್ತದೆ.
ಮಂಗಳೂರು ಫಳ್ನೀರ್ ಸೇಂಟ್ ಮೇರಿಸ್ ಪಿಯು ಕಾಲೇಜಿನಲ್ಲಿ ಬಹುನಿರೀಕ್ಷಿತ ವಾರ್ಷಿಕ ಕ್ರೀಡಾ ದಿನ
ಸಾಮರ್ಥ್ಯವು ನೀವು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ನೀವು ಏನು ಮಾಡುತ್ತೀರಿ ಎಂಬುದನ್ನು ಪ್ರೇರಣೆ ನಿರ್ಧರಿಸುತ್ತದೆ.
ನೀವು ಅದನ್ನು ಎಷ್ಟು ಚೆನ್ನಾಗಿ ಮಾಡುತ್ತೀರಿ ಎಂಬುದನ್ನು ವರ್ತನೆ ನಿರ್ಧರಿಸುತ್ತದೆ.
ಮಂಗಳೂರಿನ ಫಳ್ನೀರ್ನಲ್ಲಿರುವ ಸೇಂಟ್ ಮೇರಿಸ್ ಪಿಯು ಕಾಲೇಜಿನಲ್ಲಿ ಬಹು ನಿರೀಕ್ಷಿತ ವಾರ್ಷಿಕ ಕ್ರೀಡಾ ದಿನವು ಪ್ರಚಂಡ ಉತ್ಸಾಹ ಮತ್ತು ಹುರುಪಿನಿಂದ ತೆರೆದುಕೊಂಡಿತು, ಉತ್ಸಾಹಭರಿತ ಸ್ಪರ್ಧೆಗಳು, ಹರ್ಷೋದ್ಗಾರಗಳು ಮತ್ತು ಅಸಾಧಾರಣ ಕ್ರೀಡಾ ಮನೋಭಾವದಿಂದ ತುಂಬಿದ ದಿನವನ್ನು 29 ನವೆಂಬರ್ 2023 ರಂದು ಗುರುತಿಸಲಾಯಿತು. ಮುಖ್ಯ ಅತಿಥಿಗಳ ಆಗಮನದೊಂದಿಗೆ ದಿನವು ಪ್ರಾರಂಭವಾಯಿತು. ವರ್ಣರಂಜಿತ ಸಮವಸ್ತ್ರಗಳನ್ನು ಧರಿಸಿದ I ಮತ್ತು II puc ನ ವಿದ್ಯಾರ್ಥಿಗಳಿಂದ ಮಾರ್ಚ್ ಪಾಸ್ಟ್ ನಂತರ ಭವ್ಯವಾದ ಶಾಲಾ ಬ್ಯಾಂಡ್. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಮನೋಹರ್ ಪ್ರಸಾದ್ (ಪಿಎಸ್ಐ) ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಹಾಯ ಮೇರಿ, ಶ್ರೀ ಮರಿಯಾ ಕೃಪಾ - ಸೇಂಟ್ ಮೇರಿಸ್ ಜಂಟಿ ಕಾರ್ಯದರ್ಶಿ, ಸಂಸ್ಥೆಯ ಇತರ ಮುಖ್ಯಸ್ಥರು, ಶ್ರೀ. ಸುರೇಶ್ ನಂದೊಟ್ಟು ರಾಜಕೀಯ ವಿಜ್ಞಾನ ಉಪನಾಸ್ಯಕ, ಮೊಡಂಕಾಪ್ನ ಕಾರ್ಮೆಲ್ ಪಿಯು ಕಾಲೇಜಿನ ದೈಹಿಕ ನಿರ್ದೇಶಕರು ಮತ್ತು ಶ್ರೀಮತಿ ವನಿತಾ-ಸೇಂಟ್ ಮೇರಿಸ್ ಪ್ರೌಢಶಾಲೆಯ ದೈಹಿಕ ನಿರ್ದೇಶಕರು ಮೆರವಣಿಗೆ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದ ನಿಮಿತ್ತ ಕಾಲೇಜಿನ ಧ್ವಜಾರೋಹಣ ನೆರವೇರಿಸಿ, ಬಲೂನ್ಗಳನ್ನು ಮುಖ್ಯ ಅತಿಥಿಗಳು ಗಾಳಿಗೆ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿನಿ ರಾಜೇಶ್ವರಿ ಮತ್ತು ತಂಡದವರು ಸರ್ವೇಶ್ವರನ ಆಶೀರ್ವಾದವನ್ನು ಕೋರಿದರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಕಾಲೇಜಿನ ಪ್ರಾಂಶುಪಾಲೆ ಶ್ರೀ ಸಹಾಯ ಮೇರಿ ಸ್ವಾಗತಿಸಿ ಪರಿಚಯಿಸಿದರು. ಕ್ರೀಡಾ ಸ್ಪೂರ್ತಿಯ ಉತ್ಸಾಹವನ್ನು ಬೆಳಗಿಸಲು, ಸಮಾರಂಭದ ಜ್ಯೋತಿಯನ್ನು ಶ್ರೀಮತಿ ರಿಫಾ ಕೆ.ಎಸ್ ಅವರು ಹೊತ್ತೊಯ್ದರು-ಕ್ರೀಡಾ ಕಾರ್ಯದರ್ಶಿಗಳಾದ ವಿದ್ಯಾರ್ಥಿ ಪ್ರತಿನಿಧಿಗಳು ನಂತರ ಮುಖ್ಯ ಅತಿಥಿಗಳಿಗೆ ಹಸ್ತಾಂತರಿಸಿದರು ನಂತರ ವಾರ್ಷಿಕ ಕ್ರೀಡಾಕೂಟವನ್ನು ಘೋಷಿಸಲಾಯಿತು. ಕ್ರೀಡಾ ಕಾರ್ಯದರ್ಶಿಗಳು ಅವರಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸುವ ಪ್ರತಿಜ್ಞಾವಿಧಿ ಬೋಧಿಸಿದರು. ಸೇಂಟ್ ಮೇರಿಸ್ ಪಿಯು ಕಾಲೇಜಿನ ಜಂಟಿ ಕಾರ್ಯದರ್ಶಿ ಶ್ರೀ ಮರಿಯಾ ಕೃಪಾ ಅವರು ಭಾಗವಹಿಸಿದವರಿಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಇತರ ಸಹಪಠ್ಯ ಚಟುವಟಿಕೆಗಳಲ್ಲಿ ಉತ್ಕೃಷ್ಟತೆಗಾಗಿ ವಿದ್ಯಾರ್ಥಿವೇತನ ಮತ್ತು ಮೆರಿಟ್ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದ ಸಚಿವ ಸಂಪುಟದ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನ ಕಾರ್ಯಕ್ರಮದ ನೇತೃತ್ವವನ್ನು ಶ್ರೀಮತಿ ತನುಜಾಕ್ಷಿ (ಅರ್ಥಶಾಸ್ತ್ರದ ಉಪನ್ಯಾಸಕಿ) ಮತ್ತು ಶ್ರೀಮತಿ ಸುಪ್ರಿಯಾ (ಭೌತಶಾಸ್ತ್ರದ ಉಪನ್ಯಾಸಕಿ) ವಹಿಸಿದ್ದರು.
ಮುಖ್ಯ ಅತಿಥಿಗಳು ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜೀವನದಲ್ಲಿ ಏನನ್ನಾದರೂ ಸಾಧಿಸಲು ಉನ್ನತ ಗುರಿ ಹೊಂದಬೇಕು ಎಂದು ತಿಳಿಸಿದರು. ನಂತರ ಮಾತನಾಡಿದ ಅವರು, ತಾವು ರಾಜ್ಯ ಮಟ್ಟದ ಕ್ರೀಡಾಪಟುವಾಗಿರುವುದರಿಂದ ಭಾರತೀಯ ಸೇನೆಗೆ ಸೇರುವ ಭಾಗ್ಯ ಲಭಿಸಿದೆ. ಕ್ರೀಡೆಯಲ್ಲಿನ ಹೆಚ್ಚಿನ ಉತ್ಸಾಹದಿಂದಾಗಿ ಅವರು ತಮ್ಮ ಕನಸನ್ನು ಸಾಧಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಸಮಯವನ್ನು ಕದಿಯುವುದರಿಂದ ಆನ್ಲೈನ್ ಗೇಮಿಂಗ್ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಡಿ ಎಂದು ಒತ್ತಾಯಿಸಿದ ಅವರು ವಿದ್ಯಾರ್ಥಿ ಜೀವನವು ನಿಮಗೆ ಹೇರಳವಾದ ಅವಕಾಶಗಳನ್ನು ಹೊಂದಿರುವ ಏಕೈಕ ಜೀವನ ಎಂದು ಒತ್ತಿ ಹೇಳಿದರು ಮತ್ತು ಆ ಅವಕಾಶಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಔಪಚಾರಿಕ ಕಾರ್ಯಕ್ರಮವು 11 A.M ಕ್ಕೆ ಕೊನೆಗೊಂಡಿತು ಮತ್ತು ವೈಯಕ್ತಿಕ ಟ್ರ್ಯಾಕ್ ಈವೆಂಟ್ 12.15 ಕ್ಕೆ ನಡೆಯಿತು. ರಿಲೇ, 100 ಎಂ ಓಟ, 200 ಎಂ ಓಟ, 200 ಎಂ ರಿಲೇ, ಲಾಂಗ್ ಜಂಪ್ಗಳಂತಹ ಈವೆಂಟ್ಗಳಲ್ಲಿ ಭಾಗವಹಿಸುವವರ ವೇಗ, ತಾಳ್ಮೆ ಮತ್ತು ಸಾಮರ್ಥ್ಯದ ಉಸಿರು ಪ್ರದರ್ಶನಗಳಿಗೆ ಟ್ರ್ಯಾಕ್ ಈವೆಂಟ್ ಸಾಕ್ಷಿಯಾಯಿತು. ಐ ಪಿಯು ವಿಭಾಗದ ವೈಯಕ್ತಿಕ ಚಾಂಪಿಯನ್ಶಿಪ್ ಅನ್ನು ಐ ಕಾಮ್ನ ಅನಿಶಾ ಫಾತಿಮಾ ಪಡೆದರೆ, ಒಟ್ಟಾರೆ ಚಾಂಪಿಯನ್ಶಿಪ್ನಲ್ಲಿ ಐಕಾಮ್ ಪ್ರಥಮ ಸ್ಥಾನ ಪಡೆದರು.ಮಾರ್ಚ್ ಪಾಸ್ಟ್ ಸ್ಪರ್ಧೆಯಲ್ಲಿ ಐ ಕಾಮ್ ಗ್ರೂಪ್ ಎ ವಿದ್ಯಾರ್ಥಿಗಳು ಗೆದ್ದರು, ರನ್ನರ್ಸ್ ಅಪ್ ಆಗಿದ್ದಾರೆ. II ವಾಣಿಜ್ಯ ವಿದ್ಯಾರ್ಥಿಗಳು. ಕ್ರೀಡಾ ದಿನದ ಅತ್ಯಂತ ಸ್ಪೂರ್ತಿದಾಯಕ ಅಂಶವೆಂದರೆ ಸಹ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಸದಸ್ಯರ ಅಚಲ ಬೆಂಬಲ ಮತ್ತು ಪ್ರೋತ್ಸಾಹ.
ಕಾರ್ಯಕ್ರಮವನ್ನು ಶ್ರೀಮತಿ ಸ್ಮಿತಾ ಕಾರಟ್ (ಜೀವಶಾಸ್ತ್ರ ಉಪನ್ಯಾಸಕರು) ಮತ್ತು ಶ್ರೀಮತಿ ಮಮತಾ (ಇಂಗ್ಲಿಷ್ ಉಪನ್ಯಾಸಕರು) ಮತ್ತು ಶ್ರೀಮತಿ ಶ್ಯಾಮಲಾ ರಾಜ್ (ಗಣಿತ ಉಪನ್ಯಾಸಕರು) ಧನ್ಯವಾದಗಳನ್ನು ಪ್ರಸ್ತಾಪಿಸಿದರು.
ಉದ್ದ ಕೂದಲು ಬೆಳೆಸಿ ಗಿನ್ನಿಸ್ ದಾಖಲೆ ತನ್ನದಾಗಿಸಿಕೊಂಡ ಭಾರತೀಯ ಮಹಿಳೆ
ವಿಶ್ವದ ಅತಿ ಉದ್ದ ಕೂದಲು ಎಂಬ ಗಿನ್ನಿಸ್ ದಾಖಲೆಯನ್ನು ಭಾರತೀಯ ಮಹಿಳೆಯೊಬ್ಬರು ಬರೆದಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ಅಂದಾಜು 7 ಅಡಿ 9 ಇಂಚು ಉದ್ದವಾಗಿದೆ. ಉತ್ತರ ಪ್ರದೇಶದ 46 ವರ್ಷದ ಸ್ಮಿತಾ ಶ್ರೀವಾಸ್ತವ ವಿಶ್ವ ದಾಖಲೆ ಬರೆಸಿದ್ದಾರೆ.
ಕುತೂಹಲ ಮತ್ತು ಪ್ರೀತಿಯಿಂದ ಕೂದಲನ್ನು ಬೆಳೆಸಲು ಪ್ರಾರಂಭಿಸಿದೆ ಎಂದು ಅವರು ಹೇಳುತ್ತಾರೆ, ಆದರೆ ಈಗ ಅದು ತನ್ನ ಜೀವನದ ಅದ್ಭುತ ಸಂಗತಿಯಾಗಿದೆ. ಉದ್ದ ಕೂದಲು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ವಿಶ್ವದಾಖಲೆ ಮಾಡಿದ ಖುಷಿಯಲ್ಲಿ ಪುರಾಣದಲ್ಲಿ ಉಲ್ಲೇಖಿಸಿರುವ ಎಲ್ಲ ದೇವತೆಗಳಿಗೂ ಉದ್ದ ಕೂದಲು ಇತ್ತು ಎಂದು ಸ್ಮಿತಾ ಹೇಳಿದ್ದಾರೆ.
1980ರ ದಶಕದಲ್ಲಿ ಹಿಂದಿ ಚಿತ್ರಗಳಲ್ಲಿನ ನಾಯಕಿಯರ ಉದ್ದನೆಯ ಕೂದಲಿನಿಂದ ಪ್ರೇರಿತರಾದ ಸ್ಮಿತಾ ತಮ್ಮ ಕೂದಲನ್ನು ಉದ್ದವಾಗಿ ಬೆಳೆಸಲು ಪ್ರಾರಂಭಿಸಿದರು.ಉದ್ದ ಕೂದಲಿನ ಮಹಿಳೆಯೆಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿದ್ದಾಳೆ. ಸ್ಮಿತಾಳ ಪ್ರಕಾರ, ಸಾಮಾನ್ಯವಾಗಿ ತನ್ನ ಕೂದಲನ್ನು ವಾರಕ್ಕೆ ಎರಡು ಬಾರಿ ಮಾತ್ರ ತೊಳೆಯುತ್ತಾರೆ, ಅವರು ತೊಳೆಯುವುದು, ಒಣಗಿಸುವುದು ಮತ್ತು ಸ್ಟೈಲಿಂಗ್ ಸೇರಿದಂತೆ ಕೂದಲಿನ ಆರೈಕೆಗಾಗಿ ಪ್ರತಿ ದಿನ 3 ಗಂಟೆಗಳವರೆಗೆ ಕಳೆಯುತ್ತೇನೆ ಎಂದು ತಿಳಿಸಿದ್ದಾಳೆ.
ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ ಸಂಘಟನೆಯಿಂದ ಅಲೆಕ್ಸ್ ಪಿಂಟೊ ಕುಟುಂಬಕ್ಕೆ ರೂ. 25000/ ಧನಸಹಾಯ
ದಿನಾಂಕ 30-11-2023 ರಂದು ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯ ವತಿಯಿಂದ ಮೂಡಬಿದ್ರೆಯ ಪಾಲಡ್ಕದಲ್ಲಿರುವ ಶ್ರೀ ಅಲೆಕ್ಸ್ ಪಿಂಟೊ ಇವರ ಬಡ ಕುಟುಂಬಕ್ಕೆ ಭೇಟಿ ನೀಡಿ ₹25000/- ಮೊತ್ತದ ಚೆಕ್ಕನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುನಿಲ್ ಮೊಂತೇರೊ, ಸಂಚಾಲಕ ಬಾಸಿಲ್ ರಾಡ್ರಿಗಸ್, ಸದಸ್ಯರಾದ ಜಾನ್ ಬ್ಯಾಪ್ತಿಸ್ಟ್ ಡಿಸೋಜ, ಮೆಲ್ವಿನ್ ಪಿರೇರಾ, ಆಲ್ವಿನ್ ಕೋಟ್ಯಾನ್, ಮೆಲ್ವಿನ್ ರಾಡ್ರಿಗಸ್, ಸುಧೀರ್ ಜಾನ್ ಪ್ರಸಾದ್ , ಸಚಿನ್ ಸಲ್ಡಾನ್ಹಾ ಉಪಸ್ಥಿತರಿದ್ದರು.
ನಿಂತಿದ್ದ ಟ್ರಕಿಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಸಾವು 7 ಜನರು ಗಂಭೀರ ಗಾಯ
ಒಡಿಶಾ: ನಿಂತಿದ್ದ ಟ್ರಕಿಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 7 ಜನರು ಗಂಭೀರ ಗಾಯಗೊಂಡಿರುವ ಭೀಕರ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯ NH-20 ಯಲ್ಲಿ ಸಂಭವಿಸಿದೆ ಇಂದು ಡಿ.1ರಂದು ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ಗಂಜಾಂನ ದಿಗಪಹಂಡಿ ನಿವಾಸಿಗಳು ಎಂದು ತಿಳಿದುಬಂದಿದೆ.
ಗಂಜಾಂ ಜಜಿಲ್ಲೆಯಿಂದ ಕಿಯೋಂಜಾರ್ ಜಿಲ್ಲೆಯ ಘಾಟ್ಗಾಂವ್ ಪ್ರದೇಶದ ಮಾ ತಾರಿಣಿ ದೇವಸ್ಥಾನಕ್ಕೆ ತೆರಳುತ್ತಿದ್ದ ವ್ಯಾನ್ನಲ್ಲಿ 20 ಜನರಿದ್ದು, ರಸ್ತೆ ಬದಿ ನಿಂತಿದ್ದ ಟ್ರಕ್ಗೆ ವ್ಯಾನ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಲಿಜೋಡಿ ಪೊಲೀಸರು ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಮಣಿಪುರ : ಪಿಎಸ್ಯು ಬ್ಯಾಂಕ್ನಿಂದ ಮುಖವಾಡ ಧರಿಸಿದ ದರೋಡೆಕೋರರಿಂದ 18 ಕೋಟಿ ರೂ.ಲೂಟಿ
ಇಂಫಾಲ : ಮಣಿಪುರದ ಉಖ್ರುಲ್ ಜಿಲ್ಲೆಯ ಸಾರ್ವಜನಿಕ ವಲಯದ ಬ್ಯಾಂಕ್ನ ಶಾಖೆಯೊಂದರಿಂದ ಮುಖಕ್ಕೆ ಮಾಸ್ಕ್ಗಳನ್ನು ಹಾಕಿಕೊಂಡಿದ್ದ ಶಸ್ತ್ರಸಜ್ಜಿತ ಡಕಾಯಿತರು 18.80 ಕೋಟಿ ರೂಪಾಯಿ ಹಣವನ್ನು ದೋಚಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯು ಕರೆನ್ಸಿ ಚೆಸ್ಟ್ ಆಗಿದೆ – ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕ್ಗಳು ಮತ್ತು ಎಟಿಎಂಗಳಿಗೆ ಮೀಸಲಾದ ಹಣವನ್ನು ಉಖ್ರುಲ್ ಜಿಲ್ಲೆಗೆ ಸಂಗ್ರಹಿಸುತ್ತದೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ದರೋಡೆಕೋರರು ರಾಜ್ಯ ರಾಜಧಾನಿ ಇಂಫಾಲ್ನಿಂದ ಸುಮಾರು 80 ಕಿಮೀ ದೂರದಲ್ಲಿರುವ ಉಖ್ರುಲ್ ಪಟ್ಟಣದ ಬ್ಯಾಂಕ್ಗೆ ಆಗಮಿಸಿ, ಭದ್ರತಾ ಸಿಬ್ಬಂದಿಯನ್ನು ಸದೆಬಡಿದು ಸಿಬ್ಬಂದಿಯನ್ನು ಬೆದರಿಸಿ ತಿಜೋರಿಯಿಂದ ಮೊತ್ತವನ್ನು ದೋಚಿದ್ದಾರೆ. ಮರೆಮಾಚುವ ಸಮವಸ್ತ್ರದಲ್ಲಿದ್ದ ದುಷ್ಕರ್ಮಿಗಳು, ಬ್ಯಾಂಕ್ನ ವಾಶ್ರೂಮ್ನೊಳಗೆ ನೌಕರರು ಮತ್ತು ಭದ್ರತಾ ಸಿಬ್ಬಂದಿಯನ್ನು ಬಂದಿಸಿ ಈ ಕ್ರತ್ಯವನ್ನು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಸಿಬ್ಬಂದಿಯೊಬ್ಬರು ಬಂದೂಕು ತೋರಿಸಿ ತಿಜೋರಿ ತೆರೆಯಲು ಯತ್ನಿಸಿದ್ದು, ಬಳಿಕ ದರೋಡೆಕೋರರು ಹಣವನ್ನು ದೋಚಿದ್ದಾರೆ. ಈ ಕುರಿತು ಉಖ್ರುಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ.