ಸಾಹಿತಿ, ನಾಟಕಗಾರ, ಯಕ್ಷಗಾನ ಪ್ರಸಂಗಕರ್ತ, ಕವಿ, ವಾಚಕಾಭಿನಯ, ಪರಿಣತ, ವಾಗ್ಮಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರನ್ನು “ಕುಂದಪ್ರಭ” ಸಂಸ್ಥೆಯ ಕೋ.ಮ.ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ 07-01-2024 ರಂದು ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯಲಿದೆ.
ಹಿರಿಯ ಪತ್ರಕರ್ತ ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿ ಇದಾಗಿದೆ.
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಬಿಎಸ್ಎನ್ಎಲ್ ಉದ್ಯೋಗಿ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಯಕ್ಷಗಾನ, ನಾಟಕ, ಸಾಹಿತ್ಯ, ಸಂಗೀತ, ನೃತ್ಯದಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ. ಡಾ| ಎಸ್. ಎಲ್. ಭೈರಪ್ಪನವರ “ಮಂದ್ರ” ಕಾದಂಬರಿ ನಾಟಕಕ್ಕೆ ರೂಪಾಂತರಗೊಳಿಸಿದವರು. ಈ ನಾಟಕ ಬಹಳ ಪ್ರಸಿದ್ಧವಾಯಿತು. ಹಲವಾರು ಶ್ರೇಷ್ಠ ಕೃತಿಗಳನ್ನು ಕನ್ನಡ ರೂಪ, ನಾಟಕ ರೂಪಕ್ಕಿಳಿಸಿದವರು.
ಇವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗ ಪ್ರಶಸ್ತಿ, ನೂಪುರ ಭ್ರಮರಿ ಸಂಸ್ಥೆಯ ವಿಮರ್ಶಾ ವಾಙ್ಮಯಿ ಪ್ರಶಸ್ತಿ, ಬೆಂಗಳೂರು ಗಾಯನ ಸಮಾಜದ “ಶ್ರೀ ಕಲಾ ಜ್ಯೋತಿ” ಪ್ರಶಸ್ತಿ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ ಇವರ ಕವನ ಸಂಕಲನ “ಋತುಪರ್ಣ”ಕ್ಕೆ ಪ್ರಶಸ್ತಿ ನೀಡಿದೆ. ಇತ್ತೀಚೆಗೆ ಇವರ ಕೃತಿ “ಅಪ್ಪಯ್ಯನ ಆಸ್ತಿಕತೆ” 680 ಪುಟಗಳ ಕಾದಂಬರಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದ್ದು, ಕುಂದಾಪ್ರ ಕನ್ನಡ ನೆಲದ ಈ ಸತ್ಯಕತೆ ಬಹಳ ಮೆಚ್ಚುಗೆ ಪಡೆದಿದೆ.
Year: 2023
ವಾಮಂಜೂರಿನ ಬೆಥನಿ ಪ್ರಾಂತೀಯ ಕಟ್ಟಡದ ಉದ್ಘಾಟನೆ ಮತ್ತು ಸಂಭ್ರಮಾಚರಣೆ/ Inauguration and Celebration of Bethany Provincialate Building, Vamanjoor
ಮಂಗಳೂರು: ಡಿಸೆಂಬರ್ 3, 2023 ರಂದು ವಾಮಂಜೂರಿನ ಬೆಥನಿ ಭಗಿನಿಯರ ಪ್ರಾಂತೀಯ ಕಟ್ಟಡದ ಉದ್ಘಾಟನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 3:30 ಕ್ಕೆ, ಯೂಕರಿಸ್ಟಿಕ್ ಸೆಲೆಬ್ರೇಶನ್, ಆರ್ಟಿ ರೆವ್ ಡಾ ಪೀಟರ್ ಪೌಲ್ ಸಲ್ಡಾನ್ಹಾ ಅವರು ನಿರ್ವಹಿಸಿದರು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅವರು ಮಹತ್ವದ ಸಂದರ್ಭದಲ್ಲಿ ಶುಭ ಕೋರಿದರು. ಅವರ ಧರ್ಮೋಪದೇಶದಲ್ಲಿ, ಅವರು ಮೆಸ್ಸೀಯನ ಜಾಗರೂಕ ನಿರೀಕ್ಷೆಯನ್ನು ಒತ್ತಿಹೇಳುತ್ತಾ, ,ಕ್ರಿಸ್ಮಸ್ ಋತು ಆಗಮನವನ್ನು ಘೋಷಿಸಿದರು . ಕಾರ್ಯಕ್ರಮಕ್ಕೆ ೧೨ ಜನ ಧರ್ಮಗುರುಗಳು ಭಾಗವಹಿಸಿದ್ದರು.
ಈವೆಂಟ್ನ ಪರಾಕಾಷ್ಠೆ ಎಂದರೆ ರೆವ ಸೀನಿಯರ್ ಅವರಿಂದ ವಾಸ್ತುಶಿಲ್ಪದ ಅದ್ಭುತ ಉದ್ಘಾಟನೆ ರೋಸ್ ಸೆಲೀನ್, ಬೆಥನಿಯ ಲಿಟಲ್ ಫ್ಲವರ್ ಸಿಸ್ಟರ್ಸ್ ಆಫ್ ಸುಪೀರಿಯರ್ ಜನರಲ್, ಮಂಗಳೂರು. ಫಲಕದ ಅನಾವರಣವನ್ನು ಸಿಸ್ಟರ್ ಸಿಸಿಲಿಯಾ ಮೆಂಡೋನ್ಸಾ ಅವರು ಆಕರ್ಷಕವಾಗಿ ನೆರವೇರಿಸಿದರು. ಬೆಥನಿ ಪ್ರಾಂತ್ಯದ ಪ್ರಾಂತೀಯ ಸುಪೀರಿಯರ್, ವಾಮಂಜೂರು, ಅಡಿಯಲ್ಲಿ ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ ಅವರ ಹಿತಚಿಂತಕ ಆಶೀರ್ವಾದ. Sಡಿ ರಾಯ್ಲಿನ್ ಮತ್ತು Sಡಿ ಶುಭಾ ನಿರರ್ಗಳವಾಗಿ ಆಶೀರ್ವಾದ ಸಮಾರಂಭವನ್ನು ಸಮತೋಲನ ಮತ್ತು ಅನುಗ್ರಹದಿಂದ ಮಾರ್ಗದರ್ಶನ ಮಾಡಿದರು, ಆಧ್ಯಾತ್ಮಿಕವಾಗಿ ರಚಿಸಿದರು ಸಮೃದ್ಧ ವಾತಾವರಣ. ಈ ದೈವಿಕ ಪವಿತ್ರೀಕರಣದ ನಂತರ, ಭಾಗವಹಿಸುವವರಿಗೆ ಚಿಕಿತ್ಸೆ ನೀಡಲಾಯಿತು ಉಪಹಾರಗಳೊಂದಿಗೆ ಸಹಭಾಗಿತ್ವದ ಸಂತೋಷಕರ ಅಧಿವೇಶನ. ಸಂಜೆ 6:00 ಗಂಟೆಗೆ ಶ್ರೀ ರೋಸ್ ಅವರ ಉಪಸ್ಥಿತಿಯಿಂದ ಅಭಿನಂದನಾ ಕಾರ್ಯಕ್ರಮವು ಪ್ರಾರಂಭವಾಯಿತು. ಸೆಲಿನ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಪರಂಪರೆಯನ್ನು ಎತ್ತಿಹಿಡಿಯುವಂತೆ ಸದಸ್ಯರನ್ನು ಒತ್ತಾಯಿಸಿದರು ಒsgಡಿ ಖಈಅ ಮಸ್ಕರೇನ್ಹಸ್, ದೂರದೃಷ್ಟಿಯ ಸಂಸ್ಥಾಪಕ. ಅವರ ಅವಿರತ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿರುವ ನುರಿತ ವೃತ್ತಿಪರರು – ಇಂಜಿನಿಯರ್ಗಳಿಂದ
ಇಂಟೀರಿಯರ್ ಡಿಸೈನರ್ಗಳು – ಈ ಮಹತ್ವದ ಸಂದರ್ಭದಲ್ಲಿ ಎಲ್ಲರೂ ಒಪ್ಪಿಕೊಂಡಿದ್ದಾರೆ ಮತ್ತು ಗೌರವಿಸಲಾಗಿದೆ. ಫಾ ಜೇಮ್ಸ್ ಡಿಸೋಜಾ, ವಾಮಂಜೂರಿನ ಸೇಂಟ್ ಜೋಸೆಫ್ ದ ವರ್ಕರ್ ಚರ್ಚ್ನ ಧರ್ಮಗುರುಗಳಾದ ಡಾ ಫಾದರ್ ಕೆನೆತ್ ಕ್ರಾಸ್ಟಾ, ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ನಿರ್ದೇಶಕ ವಾಮಂಜೂರು, ಕುರುಬ ಧ್ಯೇಯದಲ್ಲಿ ತಮ್ಮ ಸಮರ್ಪಿತ ಸೇವೆಗಾಗಿ ಸಹೋದರಿಯರನ್ನು ಶ್ಲಾಘಿಸಿದರು ಚರ್ಚ್ ಮತ್ತು ಅವರ ಆತಿಥ್ಯವನ್ನು ಒಪ್ಪಿಕೊಂಡರು. ಸೀನಿಯರ್ ಫ್ಲಾವಿಯಾ ವಿಲ್ಮಾ, ಪ್ರಾಂತ್ಯ ಪ್ರೊಕ್ಯೂರೇಟರ್, ಶ್ರೀ ಸಿಸಿಲಿಯಾ ಮೆಂಡೋನ್ಕಾ, ಪ್ರಾಂತೀಯ ಸುಪೀರಿಯರ್ ಮತ್ತು ಶ್ರೀ ರೋಸ್ ಸೆಲಿನ್ಇ ದರ ಯೋಜನೆ ಮತ್ತು ಕಾರ್ಯಗತಗೊಳಿಸಲು ಅವರ ಅಚಲ ಬದ್ಧತೆಯನ್ನು ಶ್ಲಾಘಿಸಿದರು ವಾಸ್ತುಶಿಲ್ಪದ ಮೇರುಕೃತಿ. ಸನ್ಮಾನ ಕಾರ್ಯಕ್ರಮವನ್ನು Sr ರೋಶೆಲ್ ಮತ್ತು Sr ಲಿಲ್ಲಿ ಪೆರೇರಾ ಅವರು ಕೌಶಲ್ಯದಿಂದ ನಿರ್ವಹಿಸಿದರು, ಘಟನೆಗಳ ತಡೆರಹಿತ ಹರಿವನ್ನು ವಿವರಿಸಲಾಗಿದೆ. ರೋಸಾ ಮಿಸ್ಟಿಕಾ ನೊವಿಟಿಯೇಟ್ನಿಂದ ನವಶಿಷ್ಯರು
ಸ್ವಾಗತ ನೃತ್ಯದೊಂದಿಗೆ ಸಭಿಕರನ್ನು ಆಕರ್ಷಿಸಿತು, ಸಂಜೆಯನ್ನು ಸಂತೋಷದಿಂದ ತುಂಬಿತು. ಸಿಸ್ಟರ್ ಲೋಲಿತಾ ಪೆರೇರಾ ಮತ್ತು ಸಹೋದರಿಯರ ನೇತೃತ್ವದಲ್ಲಿ ಪ್ರಾರ್ಥನೆ ಗೀತೆಯು ಆಧ್ಯಾತ್ಮಿಕ ಆಯಾಮವನ್ನು ಸೇರಿಸಿತು. ಪರಾಕಾಷ್ಠೆಯ ಕ್ಷಣಗಳು ಸಿಸ್ಟರ್ ಅನ್ನಾ ಮರಿಯಾ ಅವರು ನೀಡಿದ ಹೃತ್ಪೂರ್ವಕ ಧನ್ಯವಾದಗಳನ್ನು ನೀಡಿದರು. ಸಿಸ್ಟರ್ ಶಾಂತಿ ಫ್ಲಾವಿಯಾ ಅವರು ಸಂಪೂರ್ಣ ಕಾರ್ಯಕ್ರಮವನ್ನು ಸಮರ್ಥವಾಗಿ ಸಂಯೋಜಿಸಿದರು. ಸಂಜೆ ಕಾರ್ಯಕ್ರಮವು ಸಂಜೆ 7:30 ಕ್ಕೆ ಮುಕ್ತಾಯಗೊಂಡಿತು, ನಂತರ ರುಚಿಕರವಾದ ಸಹಭಾಗಿತ್ವದ ಊಟ ಈ ಗಮನಾರ್ಹವಾಗಿತ್ತು.
Inauguration and Celebration of Bethany Provincialate Building, Vamanjoor
On the auspicious eve of December 3rd, 2023, the unveiling ceremony of the new
Provincialate Building at Vamanjoor resonated with divine significance. Commencing
at 3:30 pm, the Eucharistic Celebration, officiated by Rt Rev Dr Peter Paul Saldanha,
Bishop of Mangalore Diocese, set the tone for a momentous occasion. In his homily,
he emphasized the vigilant anticipation of the Messiah, heralding the advent of the
Christmas season. It was concelebrated by 12 priests.
The pinnacle of the event was the inauguration of the architectural marvel by Rev Sr
Rose Celine, the Superior General of the Sisters of the Little Flower of Bethany,
Mangalore. The unveiling of the plaque was gracefully accomplished by Sr Cicilia
Mendonca, the Provincial Superior of Bethany Provincialate, Vamanjoor, under the
benevolent blessings of Bishop Peter Paul Saldanha. Sr Royline and Sr Shubha
eloquently guided the Blessing Ceremony with poise and grace, creating a spiritually
enriching atmosphere. Following this divine consecration, participants were treated to
a delightful session of fellowship with refreshments.
At 6:00 pm, the felicitation program commenced, graced by the presence of Sr Rose
Celine, who, in her presidential address, urged the members to uphold the legacy of
Msgr RFC Mascarenhas, the visionary Founder. She applauded the relentless efforts of
the skilled professionals involved in the construction process – from Engineers to
interior designers – all acknowledged and honored during this momentous occasion. Fr
James DSouza, the parish priest of St Joseph the Worker Church in Vamanjoor, and
Father Kenneth Crasta, Assistant Director of St Joseph Engineering College in
Vamanjoor, commended the sisters for their dedicated service in the pastoral mission
of the Church and acknowledged their hospitality. Sr Flavia Wilma, the Province
Procurator, Sr Cicilia Mendonca, the Provincial Superior, and Sr Rose Celine were
lauded for their unwavering commitment to the planning and execution of this
architectural masterpiece.
The felicitation program, skillfully compered by Sr Roshel and Sr Lilly Pereira,
enumerated a seamless flow of events. Novices from Rosa Mystica Novitiate
captivated the audience with a welcome dance, infusing the evening with joy. The
prayer song, led by Sr Lolita Pereira and her sisters, added a spiritual dimension to the
gathering.
The culminating moments included a heartfelt vote of thanks delivered by Sr Anna
Maria, while Sr Shanthi Flavia adeptly compered the entire program. The evening
programme concluded at 7:30 pm, followed by a delicious fellowship meal that
provided a fitting close to this remarkable celebration.
ಉದ್ಯಾವರ : ಭಾತೃತ್ವ ಮತ್ತು ಐಕ್ಯತೆಯ ಭಾನುವಾರ ಆಚರಣೆ
ಉದ್ಯಾವರ: 150ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಾರ್ಷಿಕ ಮಹೋತ್ಸವವು ಡಿಸೆಂಬರ್ ಐದು ಮತ್ತು ಆರರಂದು ವಿಜೃಂಭಣೆಯಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಿನ್ನೆ ಡಿ. 3 ರoದು ಭಾತೃತ್ವ ಮತ್ತು ಐಕ್ಯತೆಯ ಭಾನುವಾರವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಧಾನ ಬಲಿ ಪೂಜೆಯ ನೇತೃತ್ವ ವಹಿಸಿದ್ದ ಜೆಪ್ಪು ಸೆಮಿನರಿಯ ಪ್ರಾಧ್ಯಾಪಕರಾದ ವo. ಫಾ. ಡಾ. ರಾಜೇಶ್ ರೊಜಾರಿಯೋ ಪವಿತ್ರ ಬಲಿ ಪೂಜೆಯನ್ನು ನೆರವೇರಿಸಿ, ಭಕ್ತರಿಗೆ ‘ಪರಮ ಪ್ರಸಾದದಲ್ಲಿ ನಮ್ಮ ಹೃದಯಗಳನ್ನು ಪ್ರಜ್ವಲಿಸಿ, ಸಮಾಜದಲ್ಲಿ ಕ್ರಿಸ್ತನ ಪ್ರತಿರೂಪಗಳಾಗಿ ಬಾಳೋಣ’ ಎಂಬ ಸಂದೇಶವನ್ನು ನೀಡಿದರು. ಈ ಸಂದೇಶದಲ್ಲಿ ‘ಕ್ರಿಸ್ತರು ಮನುಷ್ಯ ಜನ್ಮ ತಾಳಿ ಭೂಲೋಕಕ್ಕೆ ಬಂದು ಮನುಷ್ಯತ್ವ ಕಾಪಾಡಿಕೊಂಡು ದೇವರ ಪ್ರತಿಬಿಂಬವಾಗಿ ಜೀವಿಸಿದರು. ಅವರಂತೆಯೇ ನಾವು ಕೂಡ ದೇವರ ಪ್ರತಿಬಿಂಬವಾಗಿ ಬಾಳಿ ತೋರಿಸಬೇಕು. ಇದೇ ನಾವು ಕ್ರಿಸ್ತನಿಗೆ ಕೊಡುವ ಅತ್ಯುನ್ನತ ಕೊಡುಗೆ’ ಎಂದರು.
ಪವಿತ್ರ ಬಲಿಪೂಜೆಯ ಬಳಿಕ ಪರಮ ಪ್ರಸಾದದ ಆರಾಧನೆಯನ್ನು ಪ್ರಧಾನ ಧರ್ಮ ಗುರುಗಳು ನೆರವೇರಿಸಿದರು. ವಿಶೇಷ ಅಲಂಕೃತ ವಾಹನದಲ್ಲಿ ಪರಮ ಪ್ರಸಾದದ ಭವ್ಯ ಮತ್ತು ಭಕ್ತಿಪೂರ್ವಕ ಮೆರವಣಿಗೆ ನಡೆಯಿತು.
‘ಪರಮ ಪ್ರಸಾದದಲ್ಲಿ ನಮ್ಮ ಹೃದಯಗಳನ್ನು ಪ್ರಜ್ವಲಿಸಿ, ಸಮಾಜದಲ್ಲಿ ಕ್ರಿಸ್ತನ ಪ್ರತಿರೂಪಗಳಾಗಿ ಬಾಳೋಣ’ ಎಂಬ ಸಂದೇಶದೊಂದಿಗೆ ನಡೆದ ದಿವ್ಯ ಬಲಿ ಪೂಜೆಯಲ್ಲಿ ದೇವಾಲಯದ ಪ್ರಧಾನ ಧರ್ಮಗುರುಗಳಾದ ವo. ಫಾ. ಸ್ಟ್ಯಾನಿ ಬಿ ಲೋಬೊ ಮತ್ತು ಸಹಾಯಕ ಧರ್ಮ ಗುರುಗಳಾದ ವo. ಲಿಯೋ ಪ್ರವೀಣ್ ಡಿಸೋಜ, ಧರ್ಮಭಗಿನಿಯರು ಮತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸಿದ್ದರು.
ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಸಂಸ್ಥಾಪಕರ ದಿನಾಚರಣೆ ಸಮಾರಂಭವು ಡಿಸೆಂಬರ್ 5ರಂದು ನಡೆಯಲಿದೆ
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಸಂಸ್ಥಾಪಕರ ದಿನಾಚರಣೆ ಸಮಾರಂಭವು ಡಿಸೆಂಬರ್ 5ರಂದು ನಡೆಯಲಿದೆ. ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಟ್ರಸ್ಟ್ ಇದರ ಅಧ್ಯಕ್ಷರಾದ ಶಾಂತಾರಾಮ್ ಭಂಡಾರ್ಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಿಂಗಾಪುರದ ಜಾನಕಿ ಶ್ರೀಕಾಂತ್ ಅವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯಲ್ಲಿ ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯಲ್ಲಿ ಭಾತೃತ್ವದ ಭಾನುವಾರ- ಪರಮ ಪ್ರಸಾದದ ಆರಾಧನೆ ಮತ್ತು ಮೆರವಣಿಗೆ
ಗಂಗೊಳ್ಳಿ, ಡಿ.4: ಉಡುಪಿ ಧರ್ಮಪ್ರಾಂತ್ಯದ ಪುರಾತನ ಚರ್ಚಗಳೊಂದಾದ ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ವಾರ್ಷಿಕ ಹಬ್ಬದ ಪ್ರಯುಕ್ತ ಗಂಗೊಳ್ಳಿಯಲ್ಲಿ ಭಾತೃತ್ವದ ಭಾನುವಾರ – ಪರಮ ಪ್ರಸಾದದ ಆರಾಧನೆ ಮತ್ತು ಮೆರವಣಿಗೆ ಪರಮ ಪ್ರಸಾದದ ಆರಾಧನೆ ಡಿಸೆಂಬರ್ 3 ರಂದು ವಿಜ್ರಂಭಣೆಯಿಂದ ನಡೆಯಿತು.
ಪರಮಪ್ರಸಾದವನ್ನು ಚರ್ಚ್ ರಸ್ತೆಯಲ್ಲಿ ಬ್ಯಾಂಡು ವಾದ್ಯಾ, ದೀಪಲಂಕ್ರತದೊಂದಿಗೆ ಮೆರವಣಿಗೆ ಮಾಡಲಾಯಿತು. ಭಾತೃತ್ವದ ಭಾನುವಾರವದ ಬಲಿದಾನವನ್ನು ಅರ್ಪಿಸಿ, ಪರಮ ಪ್ರಸಾದದ ಆರಾಧನೆಯ ಆರಾಧನೆಯ ಪ್ರಾರ್ಥನಾ ವಿಧಿಯನ್ನು ಉಡುಪಿಯ ಧರ್ಮಗುರು ವಂ|ರೋಯ್ ಲೋಬೊ ನಡೆಸಿಕೊಟ್ಟು “ಪರಮ ಪ್ರಸಾದವು, ಒಗ್ಗಟ್ಟಿನ ಸಂಕೇತವಾಗಿದೆ, ಯೇಸು ಕ್ರಿಸ್ತರು ಈ ಸಂಸ್ಕಾರವನ್ನು ಸ್ಥಾಪಿಸಿದ್ದರು., ಅಂದಿನಿಂದ ಇಂದಿನವರೆಗೆ ಪವಿತ್ರ ಸಭೆಯು ನಿರಂತರವಾಗಿ ಅದನ್ನು ಸಂಭ್ರಮಿಸುತ್ತಾ ಬಂದಿದೆ. ಎರಡನೆ, ಈ ಸಂಸ್ಕಾರ ಕ್ರೈಸ್ತರ ಜೀವನದ ಅಡಿಪಾಯ ಮತ್ತು ಶಿಖರವಾಗಿದೆ ಎಂದು ಎರಡನೇ ವೆಟಿಕನ್ ಸಭೆ ನಮಗೆ ತಿಳಿಸುತ್ತದೆ, ನಾವು ಇಂದು ಒಟ್ಟಾಗಿ ಸೇರಿದ್ದೆವೆಯಾದರೆ ಅದಕ್ಕೆ ಕಾರಣ ಪರಮಪ್ರಸಾದದ ಸಂಸ್ಕಾರ, ನಾವು ಪ್ರೀತಿಯಿಂದ ಮತ್ತು ಕ್ಷಮೆಯ ಮೂಲಕ ಜೀವಿಸುತ್ತಿದ್ದರೆ ಅದಕ್ಕೆ ಕಾರಣ ಇದೇ ಪರಮಪ್ರಸಾದದ ಸಂಸ್ಕಾರ ಕಾರಣ, ಎಲ್ಲಿ ಒಳ್ಳೆದು ಮಾಡುತಾರೋ ಅಲ್ಲಿ ಒಗ್ಗಟು ಇರುತ್ತದೆ, ಸಮೂದಾಯಕ್ಕೆ ಯಾರೊಬ್ಬರು ಕೆಟ್ಟದು ಮಾಡಿದಲ್ಲಿ, ವಿನಾಶಕಾರಿ ಆಕ್ರಮಣ, ಬಾಂಬ್ ಸ್ಫೋಟ ಇಂತಹುದೆಲ್ಲಾ ಮಾಡಿ ಜೀವ ಹಾನಿ ಆದಾವಾಗ, ಮಡಿದವರಿಗೆ, ಸ್ವರ್ಗ ಲಭಿಸುತ್ತದೆ, ಅವರಿಗೋಸ್ಕರ ಎಲ್ಲರೂ ಪ್ರಾರ್ಥಿಸುತ್ತಾರೆ ಮಾತ್ರವಲ್ಲ ಒಗ್ಗಟ್ಟಿಲ್ಲದೆ ಚದುರಿ ಹೋದವರೆಲ್ಲಾ ಪುನರ್ ಸಂಘಟೀರಾಗುತ್ತಾರೆ, ಅಂದರೆ ಕೆಟ್ಟದು ಮಾಡಿದ್ದರ ಪರಿಣಾಮ ಒಳ್ಳೆದು ಕೂಡ ಆಗುತ್ತದೆ, ಆದರಿಂದ ನಮ್ಮ ಸಮೂದಾಯದಲ್ಲಿ ಒಳ್ಳೆಯವರು ಇದ್ದಾರೆ ಕೆಟ್ಟವರು ಇದ್ದಾರೆ, ಆದರೆ ಕೆಟ್ಟವರನ್ನು ಕ್ಷಮಿಸಿ ಪ್ರೀತಿಯಿಂದ ಜೀವಿಸೋಣ’ ಎಂದು ಸಂದೇಶ ನೀಡಿದರು.
ಚರ್ಚಿನ ಧರ್ಮಗುರು ವಂ|ತೋಮಸ್ ರೋಶನ್ ಡಿಸೋಜಾ, ಪ್ರಾರ್ಥನಾ ವಿಧಿಯಲ್ಲಿ ಭಾಗಿಯಾಗಿ ಧನ್ಯವಾದಗಳನ್ನು ಅರ್ಪಿಸಿದರು. ದೇವರ ವಾಕ್ಯದ ಸಂಭ್ರಮ ಪರಮ ಪ್ರಸಾದದ ಆರಾಧನೆಯ ಫೊಷಕತ್ವವನ್ನು ವಹಿಸಿಕೊಂಡ ಪ್ರಕೃತಿ ಮತ್ತು ಅಲ್ಟನ್ ರೆಬೇರೊ, ಹಾಗೂ ಕುಟುಂಬಸ್ಥರಾದ, ಸುನೀತಾ ಉಪೇಂದ್ರ, ಅಲನ್ಸ್ಟೈನ್ ರೆಬೇರೊ, ಪ್ರಜ್ವಲ್, ಜಾಕ್ಲೀನ್, ತಿಮೊತಿ ರೊಡ್ರಿಗಸ್, ಧರ್ಮಭಗಿನಿಯರು, ಚರ್ಚಿನ ಉಪಾಧ್ಯಕ್ಷ ಅಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯಾ ಡಿಸೋಜಾ, 20 ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಮಂಗ್ಳುರಾಂತ್ ಫಿರ್ಗಜ್ ಪತ್ರಾಂಚೆ ಸಂಪಾದಕ್ ಆನಿ ಲೇಖಕಾಂಚೊ ಸಮ್ಮೇಳ್
ಮಂಗ್ಳುರ್ : “ಸಾಹಿತ್ಯಾಚ್ಯಾ ವಾಡಾವಳಿಕ್ ಯುವಜಣ್ ಆನಿ ಭುರ್ಗ್ಯಾಂ ಥಂಯ್ ವಾಚ್ಪಾಚಿ ಆನಿ ಬರವ್ಪಾಚಿ ವೋಡ್ ಚಡಂವ್ಚಿ ಗರ್ಜ್. ಆನಿ ಹ್ಯೆ ದಿಶೆನ್ ತರ್ಬೆತಿ ದಿಂವ್ಚೊ ಆನಿ ಘೆಂವ್ಚೊ ಬರೊ ವಾವ್ರ್ ಬರ್ಯಾ ಮನಾನ್ ಜಾಯ್ಜಯ್”.
ಮಂಗ್ಳುರ್ ದಿಯೆಸೆಜಿಚೊ ವಿಗಾರ್ ಜೆರಾಲ್ ಮೊನ್ಸಿಂಞೊರ್ ಬೊ.ಮಾ. ಮೆಕ್ಸಿಂ ನೊರೋನ್ಹಾ ಹಾಣಿಂ ಡಿಸೆಂಬರಾಚ್ಯಾ 3 ತಾರಿಕೆರ್, ಮಂಗ್ಳುರ್ ಭಿಸ್ಪಾಚ್ಯಾ ನಿವಾಸಾಚ್ಯಾ ಸಭಾಸಲಾಂತ್, ಕೊಂಕಣಿ ಲೇಖಕ್ ಸಂಘ್ ಕರ್ನಾಟಕ ಆನಿ ರಾಕ್ಣೊ ಹಪ್ತ್ಯಾಳೆಂ ಹಾಂಚ್ಯಾ ಜೋಡ್ ಆಶ್ರಯಾಖಾಲ್ ಚಲ್ಲ್ಲ್ಯಾ ” ಫಿರ್ಗಜ್ ಪತ್ರಾಂಚೆ ಸಂಪಾದಕ್ ಆನಿ ಲೇಖಕಾಂಚೊ ಸಮ್ಮೇಳ್” ಹಾಚೆಂ ದಿವೊ ಪೆಟವ್ನ್ ಉದ್ಘಾಟನ್ ಕರ್ನ್ ಸಂದೇಶ್ ದಿಲೊ.
ರಾಕ್ಣೊ ಸಂಪಾದಕ್ ಮಾ.ಬಾ. ರುಪೇಶ್ ಮಾಡ್ತಾ, ಕೆ.ಎಲ್.ಎಸ್. ಸಂಚಾಲಕ್ ಮಾನೆಸ್ತ್ ರಿಚರ್ಡ್ ಮೋರಾಸ್, ಸ್ತ್ರೀ ಸಾಹಿತಿ ಪ್ರತಿನಿಧಿ ಜಾವ್ನ್ ಮಾನೆಸ್ತಿನ್ ಶಾಲಿನಿ ವಾಲೆನ್ಸಿಯ ವೆದಿರ್ ಹಾಜರ್ ಆಸ್ಲ್ಲಿಂ.
ಸಮ್ಮೇಳಾಚೊ ವಾಂಟೊ ಜಾವ್ನ್ ಕೊಂಕ್ಣೆಚೆ ನಾಮ್ಣೆಚೆ ಬರವ್ಪಿ ಆನಿ ಸಂಪಾದಕ್ ಜಾವ್ನ್ ಅನುಭವ್ ಆಸ್ಲ್ಲೆ ಡೊ| ಜೆರಿ ನಿಡ್ಡೋಡಿ, ಡೊ|ಎಡ್ವರ್ಡ್ ನಜ್ರೆತ್, ಮಾನೆಸ್ತ್ ಡೊಲ್ಫಿ ಕಾಸ್ಸಿಯಾ ಆನಿ ಮಾನೆಸ್ತ್ ಮಚ್ಚಾ ಮಿಲಾರ್ ಹಾಣಿಂ ಫಿರ್ಗಜ್ ಪತ್ರಾಚ್ಯಾ ಸಂಪಾದಕಾಚಿ ಜವಾಬ್ದಾರಿ, ಲೇಖನಾಂ ಬರಂವ್ಚ್ಯಾಕ್ ತಯಾರಾಯ್, ಪತ್ರಾಕ್ ವರ್ದಿ/ಖಬರ್ ಬರಂವ್ಚಿ ಹ್ಯಾ ವಿಷಯಾಂಚೆರ್ ವಿಚಾರ್ ಮಂಡನ್ ಕೆಲೆ. ಮಾ.ಬಾ. ರುಪೇಶ್ ಮಾಡ್ತಾ ಸಭಾ ಚಲಯ್ಣಾರ್ ಜಾವ್ನ್ ಆಸ್ಲ್ಲೆ. ತ್ಯಾ ನಂತರ್ ಭಾಸಾಭಾಸ್ ಚಲ್ಲಿ. ಕೊಂಕಣಿ ಲೇಖಕ್ ಸಂಘ್ ಕರ್ನಾಟಕ ಹಾಚೆ ಸಾಂದೆ, ವಿವಿಧ್ ಫಿರ್ಗಜ್ ಪತ್ರಾಂಚೆ ಸಂಪಾದಕ್, ಬರವ್ಪಿ ಹಾಜರ್ ಆಸ್ಲ್ಲೆ.
ಪ್ರಾರ್ಥನಾ ಸವೆಂ ಸಮ್ಮೇಳ್ ಸುರ್ವಾತ್ಲೊ. ಮಾನೆಸ್ತ್ ರಿಚರ್ಡ್ ಮೋರಾಸಾನ್ ಪ್ರಾಸ್ತಾವಿಕ್ ಉಲವ್ಪ್ ಚಲಯ್ಲೆಂ. ಮಾನೆಸ್ತಿಣ್ ಐರಿನ್ ರೆಬೆಲ್ಲೊನ್ ಸ್ವಾಗತ್ ಕರ್ನ್,ಮಾನೆಸ್ತಿಣ್ ಪ್ರೀತ ಮಿರಾಂದನ್ ಧನ್ಯವಾದ್ ಪಾಠಯ್ಲೆ. ಲವಿ ಗಂಜಿಮಠನ್ ಕಾರ್ಯಕ್ರಮ್ ನಿರೂಪಣ್ ಕೆಲೆಂ. ಸುಂಕಾಣ್ ಸಮಿತಿಕ್ ನವ್ಯಾನ್ ವಿಂಚೊನ್ ಆಯಿಲ್ಲ್ಯಾ ಮಾನೆಸ್ತ್ ಹೆನ್ರಿ ಮಸ್ಕರೇನಸಾನ್ ಸರ್ವ್ ಸಹಕಾರ್ ದಿಲೊ.
ಸಿದ್ದರಾಮಯ್ಯನವರು 6ನೇ ಗ್ಯಾರಂಟಿ ಜಾರಿಗಾಗಿ ಪಿಎಸ್ಎಸ್ ಅಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ ಒತ್ತಾಯ
ಕೋಲಾರ / ಡಿಸೆಂಬರ್ (ಹಿ.ಸ) : ಸರ್ಕಾರಿ ಶಾಲೆಗಳಲ್ಲಿ ಬಿಸಿಯುಟ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ಕಾಂಗ್ರೆಸ್ ವರಿಷ್ಠರಾದ ಪ್ರಿಯಾಂಕಗಾಂಧಿ ರವರು ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿರುವಂತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಆರು ಸಾವಿರ ವೇತನವನ್ನು ಹೆಚ್ಚಳ ಮಾಡುವುದಾಗಿ ಎಂದು ಘೋಷಣೆ ಮಾಡಿದರು.
ಸರ್ಕಾರ ಬಂದು ಆರು ತಿಂಗಳಾಗಿದೆ ಇದುವರೆಗೂ ಬಿಸಿಯೂಟ ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದಿರುವುದು ಬಹಳಷ್ಟು ನೋವಿನ ಸಂಗತಿಯಾಗಿದೆ ಆದ್ದರಿಂದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಸಕರಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಬಿಸಿಯೂಟ ನೌಕರರ ವೇತನ ಮತ್ತು ಇತರೆ ವಿಚಾರಗಳನ್ನು ಪ್ರಶ್ನಿಸಬೇಕೆಂದು ಒತ್ತಾಯಿಸಿ ಪ್ರಜಾ ಸೇವಾ ಸಮಿತಿ ಸಂಯೋಜಿತ ಅಕ್ಷರ ದಾಸೋಹ ಕ್ಷಮಾಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ ನೇತೃತ್ವದಲ್ಲಿ ಇಂದು ನಗರದ ಶಾಸಕರ ಕಚೇರಿಯಲ್ಲಿ ಕೋಲಾರ ಶಾಸಕರಾದ ಕೊತ್ತೂರು ಜಿ ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಂಎಲ್ ಅನಿಲ್ ಕುಮಾರ್ ಅವರಿಗೆ ಮುಳಬಾಗಿಲು ಶಾಸಕರಾದ ಸಮೃದ್ಧಿ ಮಂಜುನಾಥ್ ಮಾಲೂರು ಶಾಸಕರಾದ ಕೆ.ವೈ. ನಂಜೇಗೌಡ ರವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ, ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜ್ಯೋತಿ, ಕೋಲಾರ ಮಮತಾ, ಮುಳಬಾಗಿಲು ಅಮ್ಮಯಮ್ಮ, ಅಮರಾವತಮ್ಮ, ವನಿತ, ಮುನಿರತ್ನ, ಸುಗಟೂರು ಶೋಬಮ್ಮ, ರಾಧಮ್ಮ, ನಾಗಮ್ಮ, ಪದ್ಮಮ್ಮ, ಸುಮಾ, ರತ್ನಮ್ಮ, ಟೇಕಲ್ ರಾಧಮ್ಮ, ನರಸಾಪುರ ಆರತಿ, ಜಯಂತಿ, ಆಶಾ, ಮಂಜುಳಾ, ವರಲಕ್ಷ್ಮಿ, ಅನುಷ , ಸಾವಿತ್ರಮ್ಮ, ಆಂಜನಮ್ಮ, ವನಜಾಕ್ಷಮ್ಮ, ಸುಶೀಲಮ್ಮ, ಅಮರಾವತಿ, ದುರ್ಗಮ್ಮ ಮಂಜಮ್ಮ ಗಾಯತ್ರಿ ಸರೋಜಮ್ಮ ಗಿರಿಜಾ ಶಾಂತಮ್ಮ ಚೈತ್ರ ಇನ್ನು ಮುಂತಾದವರು ಹಾಜರಿದ್ದರು.
‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ : ಪೊಲೀಸರು – ಪತ್ರಕರ್ತರದು ಥ್ಯಾಂಕ್ಸ್ ಲೆಸ್ ಸೇವೆ – ಎಎಸ್ಪಿ ಸಿದ್ಧಲಿಂಗಪ್ಪ
ಕುಂದಾಪುರ, ಡಿ. 3: ಪೊಲೀಸರು ಹಾಗೂ ಪತ್ರಕರ್ತರು ದಿನದ 24 ಗಂಟೆಯೂ ಚಲನಶೀಲರಾಗಿರುತ್ತಾರೆ. ಆದರೂ ಇಬ್ಬರದು ಒಂದು ರೀತಿಯ ಥ್ಯಾಂಕ್ಸ್ ಲೆಸ್ ಜಾಬ್. ಆದರೆ ಸಮುದಾಯದ ಹಿತದೃಷ್ಟಿಯಿಂದ ಇಬ್ಬರದು ಉತ್ತಮ ಕಾರ್ಯ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಈ ಇಬ್ಬರದೂ ದೊಡ್ಡ ಪರಿಶ್ರಮವಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ಧಲಿಂಗಪ್ಪ ಹೇಳಿದರು.
ಅವರು ಶನಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕನ್ನಡ ಶಾಲೆಗಳ ಉಳಿವಿಗಾಗಿ ಮತ್ತು ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡಿದರು. (ಡಿ.2)
ಸರಕಾರಿ ಶಾಲಾ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ. ಕನ್ನಡ ಭಾಷೆ ಅದರಲ್ಲೂ ಕುಂದಾಪ್ರ ಕನ್ನಡ ವಿಶಿಷ್ಟ ಭಾಷೆ. ಬೇರೆ ಬೇರೆ ಕಡೆಗಳಲ್ಲಿ ಇಂತಹ ವಿಭಿನ್ನವಾದ ಭಾಷೆಗಳಿವೆ. ಗ್ರಾಮ್ಯ ಮಟ್ಟದಲ್ಲಿ ಕನ್ನಡ ಇಂದಿಗೂ ತನ್ನ ಛಾಪನ್ನು ಕಳೆದುಕೊಂಡಿಲ್ಲ. ಅದಕ್ಕೆ ಕುಂದಾಪ್ರ ಕನ್ನಡವೇ ಸಾಕ್ಷಿ. ಕನ್ನಡ ಮಾತನಾಡುವುದರಿಂದ ಭಾವನೆ ಅರಿಯಲು ಸಾಧ್ಯ. ಪೊಲೀಸ್ ಅಽಕಾರಿಗಳು ಸಹ ಬೇರೆ ಜಿಲ್ಲೆಗಳಿಂದ ಬಂದವರು ಸಹ ಕನ್ನಡ ಕಲಿತು ಜನರೊಂದಿಗೆ ವ್ಯವಹರಿಸುತ್ತಾರೆ ಎಂದವರು ಹೇಳಿದರು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಕನ್ನಡವನ್ನು ನಾವು ಹೆಚ್ಚೆಚ್ಚು ಮಾತನಾಡುವುದರಿಂದ ಮಾತ್ರ ಉಳಿಸಲು ಸಾಧ್ಯ. ಸರಕಾರಿ ಶಾಲೆಗಳು ಹಾಗೂ ಮಾತೃಭಾಷೆ ಉಳಿಸುವ ನಿಟ್ಟಿನಲ್ಲಿ ಹಾಗೂ ಸಮಾಜದ ಸದಾ ಕಾಳಜಿ ವಹಿಸುವ ಪೊಲೀಸರ ಬಗೆಗಿನ ವಿಷಯವನ್ನು ಆಯ್ದುಕೊಂಡಿರುವ ಪತ್ರಕರ್ತರ ಸಂಘದ ಆಯ್ಕೆ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸ್ಪರ್ಧೆಯ ಮೂಲಕ ಪೊಲೀಸರ ಬಗ್ಗೆ ಮಕ್ಕಳಿಗೆ ತಿಳಿಯುವ ಅವಕಾಶ ಒದಗಿಸಿಕೊಟ್ಟಿದ್ದಾರೆ. ಮಕ್ಕಳಲ್ಲಿ ವಿಭಿನ್ನವಾಗಿ ಯೋಚಿಸುವ, ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವ ಪ್ರಯತ್ನ ಮಾಡಿದ ಕುಂದಾಪುರ ತಾಲೂಕು ಪತ್ರಕರ್ತರ ಸಂಘಕ್ಕೆ ಅಭಿನಂದನೆಗಳು ಎಂದು ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಹೇಳಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಪ್ರ. ಕಾರ್ಯದರ್ಶಿ ನಝೀರ್ ಪೊಲ್ಯ, ರಜತ ಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್ ಷರೀಫ್ ಮಾತನಾಡಿದರು.
ತೀರ್ಪುಗಾರರಾದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಕುಮಾರ್ ಶೆಟ್ಟಿ ಕೋವಾಡಿ, ಲೇಖಕಿ ಪೂರ್ಣಿಮಾ ಕಮಲಶಿಲೆ ಹಾಗೂ ಹೆಸ್ಕತ್ತೂರು ಸರಕಾರಿ ಹಿ.ಪ್ರಾ. ಶಾಲಾ ಶಿಕ್ಷಕ ಅಶೋಕ ತೆಕ್ಕಟ್ಟೆ ಅನುಭವ ಹಂಚಿಕೊಂಡರು. ಬಹುಮಾನ ವಿಜೇತರಾದ ಪ್ರಗತಿ ಆರ್. ಅಮಿನ್, ಪ್ರತೀಕ್ಷಾ, ಹರ್ಷಿಣಿ ಅನಿಸಿಕೆ ವ್ಯಕ್ತಪಡಿಸಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಲೋಕೇಶ್ ಆಚಾರ್ ತೆಕ್ಕಟ್ಟೆ ಉಪಸ್ಥಿತರಿದ್ದರು.
ಸಂಘದ ಪ್ರಶಾಂತ್ ಪಾದೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಣೇಶ ಬೀಜಾಡಿ ವಂದಿಸಿದರು. ಪತ್ರಕರ್ತರಾದ ಶ್ರೀಕಾಂತ್ ಹೆಮ್ಮಾಡಿ ಬಹುಮಾನಿತರ ಪಟ್ಟಿ ವಾಚಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿಜೇತರು
ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಪ್ರಗತಿ ಆರ್. ಅಮಿನ್ ಪ್ರಥಮ, ಬಸ್ರೂರು ಸರಕಾರಿ ಪ್ರೌಢಶಾಲೆಯ ಪ್ರತೀಕ್ಷಾ ದ್ವಿತೀಯ ಹಾಗೂ ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಹರ್ಷಿಣಿ ತೃತೀಯ ಬಹುಮಾನ ಪಡೆದಿದ್ದಾರೆ. ಕಾಳಾವರ ಸರಕಾರಿ ಪ್ರೌಢಶಾಲೆಯ ರಾಧಿಕಾ, ದೀಕ್ಷಾ, ಸಾಹಿತ್ಯ, ಆರ್ಡಿ- ಅಲ್ಬಾಡಿ ಸರಕಾರಿ ಪ್ರೌಢಶಾಲೆಯ ಶ್ರಾವ್ಯ, ಶಂಕರನಾರಾಯಣ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಅನನ್ಯ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಸ್ಪಂದನಾ ಉಳ್ಳೂರು, ಶ್ರೀಶಾಂತ್, ವಕ್ವಾಡಿ ಸರಕಾರಿ ಪ್ರೌಢಶಾಲೆಯ ಸೃಷ್ಟಿ, ಬಸ್ರೂರು ಸರಕಾರಿ ಪ್ರೌಢಶಾಲೆಯ ನವ್ಯಾ, ಕೋಟೇಶ್ವರ ಕೆಪಿಎಸ್ನ ಶ್ರೀಲಕ್ಷ್ಮಿ, ಕೆದೂರು ಸರಕಾರಿ ಪ್ರೌಢಶಾಲೆಯ ಅನುಶ್ರೀ, ಗಂಗೊಳ್ಳಿ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆಯ ಶ್ರಾವ್ಯ, ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಅರ್ಚನಾ ಸಮಾಧಾನಕರ ಬಹುಮಾನ ಗಳಿಸಿದ್ದಾರೆ.
ರೋಜರಿ ಕಿಂಡರ್ ಗಾರ್ಟನ್ ಶಾಲಾ ವಾರ್ಷೀಕೋತ್ಸವ – ಚಿಣ್ಣರ ರಂಗು ರಂಗಿನ ನಲಿದಾಟ
ಕುಂದಾಪುರ, ಡಿ.3: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಸರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 2 ರಂದು ರಂಗು ರಂಗಾಗಿ ನೆಡಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ರೋಸರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಸ್ಟ್ಯಾನಿ ತಾವ್ರೊ “ಚಿಕ್ಕ ಮಕ್ಕಳು ಶಾಲೆಯಲ್ಲಿ ಮತು ಮನೆಗಳಲ್ಲಿ ಕೇಂದ್ರ ವ್ಯಕ್ತಿಗಳಾಗಿರುತ್ತಾರೆ, ಮಕ್ಕಳು ಶಾಲೆಯಲ್ಲಿ ಇರದಿದ್ದರೆ ಶಾಲೆ ಬರಿದಾಗಿ ಕಾಣುತ್ತದೆ, ಮಕ್ಕಳು ಮನೆಯಲ್ಲಿ ಇಲ್ಲದಿದ್ದರೆ ಮನೆ ಬರಿದಾಗಿ ಕಾಣುತ್ತೆ. ಹೆತ್ತವರಿಗೆ, ಶಿಕ್ಷಕರಿಗೆ ಮಕ್ಕಳೇ ಸರ್ವಸ್ವ, ಮನೆಗಳಲ್ಲಿ ಚಿಕ್ಕ ಮಕ್ಕಳು ಇಲ್ಲದಿದ್ದರೆ, ಅಜ್ಜ ಅಜ್ಜಿಯಂದರಿಗೆ ಹುಮ್ಮಸ್ಸಿರುವುದಿಲ್ಲಾ, ಅವರ ಹುಮ್ಮಸೇ ಚಿಕ್ಕ ಮಕ್ಕಳು, ಹೆತ್ತವರಿಗೂ ಕೂಡ ಹಾಗೇ ಅವರ ಮಕ್ಕಳ ಮೇಲೆ ಅಪಾರವಾದ ಪ್ರೀತಿ ಎಲ್ಲಾ ತಂದೆತಾಯಂದಿರು ಮಕ್ಕಳಿಗಾಗಿ ಎಂತಹಾ ತ್ಯಾಗಕ್ಕೂ ಸಿದ್ದರಿದ್ದಾರೆ. ಇಲ್ಲಿ ನಮ್ಮ ಕಿಂಟರ್ ಗಾರ್ಟನ್ಶಾಲೆಯಲ್ಲಿ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಕೂಡ ನಿಮ್ಮ ಮಕ್ಕಳಿಗೆ ಅಷ್ಟೆ ಕಾಳಜಿ,ಪ್ರೀತಿ, ಮಮತೆ ತೋರಿಸುತ್ತಾರೆ, ದೇಶದ ಉತ್ತಮ ನಾಗರಿಕನಾಗಲು ಅವರಿಗೆ ಚಿಕ್ಕಂದಿನಿಂದಲೇ ಆಟ ಪಾಠಗಳ ಜೊತೆ ಸಂಸ್ಕಾರವನ್ನು ಕಲಿಸುತ್ತಾರೆ” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ವಕೀಲೆ, ರೋಜರಿ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಮಾತನಾಡಿ “ನಮ್ಮ ಮಕ್ಕಳೇ ನಮಗೆಲ್ಲಾ ಹೀರೊ ಮತ್ತು ಹೀರೊಯಿನ್ಸ್, ನಾವು ನಮ್ಮ ಮಕ್ಕಳನ್ನು ಪ್ರಮಾಣಿಕವಾಗಿ ಪ್ರೀತಿಸಬೇಕು, ಅವರಿಗೆ ಕಲಿಕೆಯಲ್ಲಿ ಹೆಚ್ಚು ಅಂಕ ತರಬೇಕೆಂದು ಓತ್ತಡ ಹಾಕಬಾರದು, ಅವರಿಗೆ ಉತ್ತಮ ಪುಸ್ತಕಗಳನ್ನು ಒದಲು ಪ್ರೇರೆಪಿಸಿ, ಮೊಬೈಲ್ ಮತ್ತು ಮಾಧ್ಯಮದಿಂದ ದೂರವಿಡಿ, ಮನೆಯಲ್ಲಿ ಉತ್ತಮ ಶಾಂತಾ ವಾತವರಣ ಇಡಿ, ಉತ್ತಮ ಗುಣ ನಡೆತೆಗಳನ್ನು ಕಲಿಸಿ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ಮಾಡಲು ಶ್ರಮಿಸಬೇಕೆಂದು’ ಎಂದು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಕುಂದಾಪುರ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಸಂತ ಮೇರಿಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೊ, ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಡಿಸೋಜಾ ಉಪಸ್ಥಿತರಿದ್ದು, ಅವರು ನಾನ ವಿಭಾಗದಲ್ಲಿ ವಿಜೇತರಾದ ಚಿಣ್ಣರಿಗೆ ಬಹುಮಾನಗಳನ್ನು ವಿತರಿಸಿದರು.
ವಾರ್ಷೀಕೋತ್ಸವದಲ್ಲಿ ಚಿಣ್ಣರು ಕೂಡ ನಾವು ದೂಡ್ಡ ಮಕ್ಕಳಿಕಿಂತ್ತ ಎನೂ ಕಡಿಮೆಯಿಲ್ಲ ಎಂಬಂತ್ತೆ, ನಿರೂಪಿಸಿ ಕುಣಿದು, ಕುಪ್ಪಳಿಸಿದವು, ಮಾತ್ರವಲ್ಲದೆ ಡಜನ್ ಕಟ್ಟಲೆ ಮುದ್ದು ಮಕ್ಕಳು ಕರಾವಳಿಯ ಗಂಡು ಕಲೆ ಯಕ್ಷಗಾನದ ವೇಷ ತೊಟ್ಟು ತಾಳಕ್ಕೆ ತಕ್ಕಂತೆ ಕುಣಿದವು ಮಾತ್ರವಲ್ಲ ಚಿಣ್ಣರೇ ಸ್ವಾಗತ ಮತ್ತು ಧನ್ಯವಾದಗಳನ್ನು ಅರ್ಪಿಸಿದರು.
ಕಿಂಡರ್ ಗಾರ್ಟನ್ ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಾ ಲುವೀಸ್ ಶಾಲಾ ವರದಿಯನ್ನು ವಾಚಿಸಿದರು. ಶಿಕ್ಷಕಿ ವೀಣಾ ವಿಜೇತರ ಮಕ್ಕಳ ಹೆಸರನ್ನು ವಾಚಿಸಿದರು. ಶಿಕ್ಷಕಿ ರಿಚೇಲ್ ಡಿಸಿಲ್ವಾ ಮುಖ್ಯ ನಿರೂಪಣಾಗಾರರಾಗಿ ಕ್ರಾರ್ಯಕ್ರಮವನ್ನು ನಡೆಸಿಕೊಟ್ಟರು.