ಕೋಲಾರ : ರಜಾ ದಿನದಂದು ಫೀಲ್ಡಿಗಿಳಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಬಂಗಾರಪೇಟೆ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಯುವ ಮತದಾರರ ನೊಂದಣಿ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ್ದರು.
Year: 2023
ಲೀನಾ ಸಿಕ್ವೇರಾ ಯಾನೆ ಖ್ಯಾತ ನಟಿ ಲೀಲಾವತಿ ಇಹ ಲೋಕಕ್ಕೆ ಪಯಣ
ಬೆಂಗಳೂರು: ಲೀನಾ ಸಿಕ್ವೇರಾ ಯಾನೆ ಖ್ಯಾತ ನಟಿ ಲೀಲಾವತಿ ಬಾರದ ಲೋಕಕ್ಕೆ ತೆರಳಿರುವ ಕನ್ನಡದ ಕಲಾವತಿಗೆ ರಾಜಕೀಯ ಗಣ್ಯರು, ಸಿನಿಮಾ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಮರೆಯಾದ ಚಂದನವನದ ಹಿರಿಯ ನಟಿಗೆ ಅಭಿಮಾನಿಗಳು ಕಣ್ಣೀರ ವಿದಾಯ ಹೇಳಿದ್ದಾರೆ. ಅಗಲಿದ ರಂಗನಾಯಕಿಗೆ ಅಂತಿಮ ನಮನದ ಬಳಿಕ ಇಂದು ಅಂತ್ಯಸಂಸ್ಕಾರ ನೆರವೇರಲಿದೆ.ನೀಜ ಅಂದರೆ ಲಿಲಾವತಿ ಕ್ರೈಸ್ತ ಧರ್ಮದಲ್ಲಿ ಹುಟ್ಟಿದ್ದು ಅವರ ನೀಜ ಹೆಸರು ಲೀನಾ ಸಿಕ್ವೇರಾ.
ವಯೋಸಹಜ ಕಾಯಿಲೆಯಿಂದ ಲೀಲಾವತಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಆರೋಗ್ಯದಲ್ಲಿ ಪದೇ ಪದೆ ಸಮಸ್ಯೆ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಲೀಲಾವತಿಯನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಏನೋ ಕಾಣಿಸಿತ್ತು. ನಿನ್ನೆ ಮಧ್ಯಾಹ್ನ ದಿಢೀರ್ ಬಿಪಿ ಲೋ ಆಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದಾರೆ.
1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನನ ಲೀಲಾವತಿ ಅವರ ಮೂಲ ಹೆಸರು ಲೀನಾ ಸಿಕ್ವೇರಾ 6ನೇ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡ ಅವರು ದೊಡ್ಡಪ್ಪನ ಮಗಳು ಅಂಜಲಿ ಸಿಕ್ವೇರಾರವರ ಅವರನ್ನು ನೋಡಿಕೊಳ್ಳುತಿದ್ದರು. ಅವರು ಮೊದಲು ಬೆಳ್ತಂಗಡಿ ಚರ್ಚಿಗೆ ಹೋಗುತಿದ್ದರು, ಬಳಿಕ ಇಂದಬೆಟ್ಟು ಚರ್ಚ್ ಸ್ಥಾಪನೆ ಆಗಿದ್ದರಿಂದ ಅಲ್ಲಿಗೆ ಹೋಗುತಿದ್ದರು. ಚಿಕ್ಕ ವಯಸ್ಸಿನಲ್ಲೆ ನ್ರತ್ಯ ನಾಟಕಗಳಲ್ಲಿ ಆಸಕ್ತಿಯಿದ್ದವಳನ್ನು ಒರ್ವ ಮುಸ್ಲಿಮರು ಅವರನ್ನು ಮಂಗಳೂರಿಗೆ ಕಳುಹಿಸಿದರು. ನಂತರ ನಾಟಕ ರಂಗಭೂಮಿಯಿಂದ ಸಿನಿಮಾದ ಅವಕಾಶ ಸಿಕ್ಕಿ ಸಿನಿಮಾ ರಂಗಕ್ಕೆ ತೆರಳಿದರು. ಅದ ನಂತರ ಸಿನಿಅಮಾಕ್ಕಾಗಿ ಲೀನಾ ಮದ್ರಾಸಲ್ಲೆ ಉಳಿದರು.ಲೀನಾ ಇದ್ದದ್ದು ಲಿಲಾವತಿಯಾದರು.
ನಂತರ ಬಹುಭಾಷ ನಟಿಯಾಗಿ ಸುಮಾರು ೬೫೦ ಸಿನಿಮಾಗಳಲ್ಲಿ ಲೀಲಾವತಿ ನಟಿಸಿದರು, ಕನ್ನಡದ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯ ಮೈಸೂರಿನ ರಂಗಭೂಮಿಯಲ್ಲಿ ವೃತ್ತಿಜೀವನ ಆರಂಭ 1949ರಲ್ಲಿ ‘ನಾಗಕನ್ನಿಕ’ ಚಿತ್ರದಲ್ಲಿ ಮೊದಲ ಸಲ ನಟಿಸಿದರು. ಅವರ ಸಾಧನೆಗಾಗಿ 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್
ಮಗಳು, ಸಖಿ, ನಾಯಕಿ, ಅಮ್ಮ, ಸಹೋದರಿ ಆಗಿ ನಟನೆ ಗೆಜ್ಜೆ ಪೂಜೆ, ಮಹಾತ್ಯಾಗ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ ಸಾರ್ವ ಭೌಮ ರಾಜಕುಮಾರ್ ನಾಯಕಿಯಾಗಿ ತುಂಬ ಹೆಸರು ಗಳಿಸಿದ್ದರು.
ಅಮ್ಮನೇ ಸರ್ವಸ್ವ ಆಗಿಸಿಕೊಂಡಿದ್ದ ವಿನೋದ್ ರಾಜ್, ತಾಯಿ ಇನ್ನಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಕುಸಿದು ಬಿದ್ರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿನೋದ್ ರಾಜ್, ಇಂತಹ ತಾಯಿ ಮತ್ತೆ ಸಿಗೋಕೆ ಸಾಧ್ಯ ಇಲ್ಲ ಅಂತ ಕಣ್ಣೀರಿಟ್ಟಿದ್ದಾರೆ.
ಶಿವಮೊಗ್ಗ ಧರ್ಮಪ್ರಾಂತ್ಯದಲ್ಲಿ ಮೇರಿ ಮದರ್ ಆಫ್ ಗಾಡ್, ನೂತನ ಚರ್ಚ್ ಉದ್ಘಾಟನೆ/Mary Mother of God, New Church inaugurated in the Diocese of Shimoga
ಚಿತ್ರದುರ್ಗ, ಡಿಸೆಂಬರ್ 6, 2023: ಶಿವಮೊಗ್ಗ ಧರ್ಮಪ್ರಾಂತ್ಯವು ಇಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಅಶೋಕ ಸಿದ್ಧಾಪುರದಲ್ಲಿ ಹೊಸ ಚರ್ಚ್ ಮತ್ತು ಪೀಠಾಧಿಪತಿಯೊಂದಿಗೆ ಆಶೀರ್ವದಿಸಲ್ಪಟ್ಟಿತು.
ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಡಾ. ಫ್ರಾನ್ಸಿಸ್ ಸೆರಾವೊ ಎಸ್ಜೆ ಅವರನ್ನು ಬೆಳಗ್ಗೆ 10 ಗಂಟೆಗೆ ಧರ್ಮಸಭೆಯವರು ಬರಮಾಡಿಕೊಂಡರು. ನಂತರ ಜನರು ತಮ್ಮ ಗ್ರಾಮಕ್ಕೆ ಬಿಷಪ್ ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದರು.
ಬೆಳಗ್ಗೆ 10:30ಕ್ಕೆ ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು ನೂತನವಾಗಿ ನಿರ್ಮಿಸಿದ ಮಠಾಧೀಶರ ಬಳಿ ಪ್ರಾರ್ಥನೆ ನಡೆಸಿದರು. ಬೆಂಗಳೂರಿನ ಆರ್ಚ್ಡಯಸಿಸ್ನ ವಿಜಿ ಮೊನ್ಸಿಂಜರ್ ಜಯನಾಥನ್ ರಿಬ್ಬನ್ ಕತ್ತರಿಸುವ ಮೂಲಕ ಮನೆಯನ್ನು ಉದ್ಘಾಟಿಸಿದರು. ನಂತರ ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ ನೂತನ ಮನೆಗೆ ಆಶೀರ್ವಚನ ನೀಡಿದರು. ಧರ್ಮಗುರುಗಳು, ಧರ್ಮಸ್ಥರು ಹಾಗೂ ಹೋಲಿ ಫ್ಯಾಮಿಲಿ ಡೀನರಿಯ ಅಪಾರ ಸಂಖ್ಯೆಯ ಭಕ್ತರು ಹಾಗೂ ಧರ್ಮಸ್ಥರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಬೆಳಗ್ಗೆ 10.45ಕ್ಕೆ ನೂತನ ಚರ್ಚ್ನ ಉದ್ಘಾಟನೆ ಮತ್ತು ಆಶೀರ್ವಚನ ನಡೆಯಿತು. ಎಲ್ಲರೂ ಚರ್ಚ್ ಪ್ರವೇಶದ್ವಾರದಲ್ಲಿ ಜಮಾಯಿಸಿದರು. ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು ಆರಂಭಿಕ ಪ್ರಾರ್ಥನೆಗೆ ಚಾಲನೆ ನೀಡಿದರು. ನಂತರ ಚರ್ಚ್ನ ದಾನಿಗಳಾದ ಮುಂಬೈನ ಶ್ರೀ ಜಾನ್ ಜೋಸೆಫ್ ಮತ್ತು ಶ್ರೀಮತಿ ಜಾಯ್ಸ್ ಜೋಸೆಫ್ ರಿಬ್ಬನ್ ಕತ್ತರಿಸುವ ಮೂಲಕ ಚರ್ಚ್ ಅನ್ನು ತೆರೆದರು.
ಬಿಷಪ್ ಜೊತೆಯಲ್ಲಿ, ಪುರೋಹಿತರು ಮತ್ತು ಧಾರ್ಮಿಕ ನಿಷ್ಠಾವಂತರು ಹೊಸ ಚರ್ಚ್ ಅನ್ನು ಪ್ರವೇಶಿಸಿದರು. ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ.ಪವಿತ್ರ ಬಲಿಪೂಜೆಗೆ ಚಾಲನೆ ನೀಡಿದರು. ಪವಿತ್ರ ಯೂಕರಿಸ್ಟ್ ಸಮಯದಲ್ಲಿ ಅವರು ದೇವರ ವಾಕ್ಯವನ್ನು ಸ್ವೀಕರಿಸುವ ಮೂಲಕ ಕ್ರಾಸ್ ಮತ್ತು ಲೆಕ್ಟರ್ ಸ್ಟ್ಯಾಂಡ್ ಅನ್ನು ಆಶೀರ್ವದಿಸಿದರು. ಅವರ ಧರ್ಮೋಪದೇಶದಲ್ಲಿ ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್ಜೆ ಅವರು ಚರ್ಚ್ನಂತಹ ಪವಿತ್ರ ಸ್ಥಳದಲ್ಲಿ ದೇವರಿಗೆ ಆರಾಧನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ಯಾವುದೇ ರಚನೆಗಿಂತ ಹೃದಯವು ಹೆಚ್ಚು ಮುಖ್ಯವಾಗಿದೆ ಎಂದು ಹೇಳಿದರು. ಜಾನ್ ಅಧ್ಯಾಯ 4 ರಲ್ಲಿ ಲಾರ್ಡ್ ಉಲ್ಲೇಖಿಸಿರುವಂತೆ ನಾವು ಆತ್ಮ ಮತ್ತು ಸತ್ಯದಲ್ಲಿ ಪೂಜಿಸಬೇಕು, ಸಮರಿಟನ್ ಮಹಿಳೆಗೆ. ರಚನೆಯು ಸರ್ವಶಕ್ತ ದೇವರ ಉಪಸ್ಥಿತಿಯನ್ನು ನೆನಪಿಸುತ್ತದೆ ಮತ್ತು ಅವನು ತನ್ನ ಮಗ ಯೇಸು ಕ್ರಿಸ್ತನ ಮೂಲಕ ನಮಗೆ ತಂದ ಮೋಕ್ಷವನ್ನು ನೆನಪಿಸುತ್ತದೆ.
ಧರ್ಮೋಪದೇಶದ ನಂತರ ಅವರು ನೈವೇದ್ಯವನ್ನು ಎಣ್ಣೆಯಿಂದ ಅಭಿಷೇಕಿಸಿದರು ಮತ್ತು ಬಲಿಯನ್ನು ಅರ್ಪಿಸಿದರು. ಕಮ್ಯುನಿಯನ್ ಬಿಷಪ್ ಅವರು ಗುಡಾರವನ್ನು ಆಶೀರ್ವದಿಸಿದ ನಂತರ ಮತ್ತು ಮಿಷನ್ ಸೆಂಟರ್ ನಿರ್ದೇಶಕ ಫಾದರ್ ಸ್ಟ್ಯಾನಿ ಡಿ’ಕುನ್ಹಾ ಅವರು ಕೀಲಿಯನ್ನು ಹಸ್ತಾಂತರಿಸಿದರು.
ಪವಿತ್ರ ಯೂಕರಿಸ್ಟ್ ಬಿಷಪ್ ಅವರು ಮುಖ್ಯ ದಾನಿಗಳಾದ ಮೊನ್ಸಿಂಜರ್ ಮತ್ತು ಮಿಷನ್ ಸೆಂಟರ್ ನಿರ್ದೇಶಕರನ್ನು ಸನ್ಮಾನಿಸಿದರು. ಬಿಷಪ್ ಅವರು ಶಿವಮೊಗ್ಗ ಧರ್ಮಪ್ರಾಂತ್ಯದ ಮೇಲಿನ ದೇವರ ಪ್ರೀತಿಗೆ ಧನ್ಯವಾದ ಅರ್ಪಿಸಿದರು. ಯೋಜನೆಯನ್ನು ಪೂರ್ಣಗೊಳಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಮಿಷನ್ ಸೆಂಟರ್ ನಿರ್ದೇಶಕ ಫಾದರ್ ಸ್ಟ್ಯಾನಿ ಡಿ’ಕುನ್ಹಾ ಗಣ್ಯರನ್ನು ಮತ್ತು ಸಭೆಯನ್ನು ಸ್ವಾಗತಿಸಿದರು. ಯೋಜನೆ ಪೂರ್ಣಗೊಳಿಸಲು ಸಹಕರಿಸಿದ ಎಲ್ಲ ಪ್ರಮುಖರನ್ನು ಸನ್ಮಾನಿಸಿದರು
ಕಾನ್ವೆಂಟ್ನ ಮೇಲ್ವಿಚಾರಕಿ ಶೀಲಾ ಮಿರಾಂದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮಕ್ಕೆ ಫಾದರ್ ಲಾರೆನ್ಸ್ ಡಿಸೋಜ ಹಾಗೂ ಕಾರ್ಯಕ್ರಮಕ್ಕೆ ಫಾದರ್ ಸಂತೋಷ್ ಪಿರೇರಾ ಮುಖ್ಯಾಧಿಕಾರಿಯಾಗಿದ್ದರು. ಎಲ್ಲರಿಗೂ ಊಟ ಬಡಿಸಲಾಯಿತು
ಶಿವಮೊಗ್ಗ ಡಯಾಸಿಸ್ ಮೂರು ನಾಗರಿಕ ಜಿಲ್ಲೆಗಳನ್ನು ಒಳಗೊಂಡಿದೆ, ಅವುಗಳೆಂದರೆ; ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ. ಇದು 19000 ಕ್ಯಾಥೋಲಿಕರನ್ನು ಒಳಗೊಂಡಿದೆ. ಡಯಾಸಿಸ್ ತನ್ನ ಕುರುಬ ಸಚಿವಾಲಯ, ಶಿಕ್ಷಣ ಸಚಿವಾಲಯ, ಆರೋಗ್ಯ ಸಚಿವಾಲಯ ಮತ್ತು ಸಾಮಾಜಿಕ ಕಾರ್ಯ ಸಚಿವಾಲಯದ ಮೂಲಕ ಬಡವರು, ಅಂಚಿನಲ್ಲಿರುವವರು ಮತ್ತು ದೀನದಲಿತರನ್ನು ತಲುಪುತ್ತದೆ. ಸಮರ್ಪಿತ ಪಾದ್ರಿಗಳು ಮತ್ತು ಧಾರ್ಮಿಕರು ಬಿಷಪ್ರ ಜೊತೆಗೂಡಿ ಡಯಾಸಿಸ್ನಲ್ಲಿ ನಿರ್ಗತಿಕರನ್ನು ಮೇಲಕ್ಕೆತ್ತಲು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Mary Mother of God, New Church inaugurated in the Diocese of Shimoga
Chitradurga, December 6, 2023: Diocese of Shimoga was blessed today with New Church and presbytery at Ashoka Siddhapura, Molakalmuru Taluku, Chitradurga District.
His Excellency Most Rev. Dr. Francis Serrao Sj, Bishop of Diocese of Shimoga was received by the parishioners at 10am. Then the people welcomed Bishop to their village with traditional way.
At 10:30am Bishop Francis Serrao SJ led the prayer near the newly built presbytery. Monsignor Jayanathan, VG of Archdiocese of Bangalore opened the house by cutting the ribbon. Then Bishop Francis Serrao SJ blessed the new house. Priests, Religious and big number of faithful of Holy Family Deanery as well as parishioners witnessed the event.
At 10:45am Inauguration and blessing of the new Church was held. Everyone gathered at the entrance of the Church. Bishop Francis Serrao SJ initiated the opening prayer. Then donors of the Church Mr. John Joseph and Mrs. Joyce Joseph from Mumbai opened the church by cutting the ribbon.
Together with Bishop, priests and religious faithful entered the new Church. Bishop Francis Serrao SJ led the Holy Eucharist. During the Holy Eucharist he blessed the Cross and Lector stand by receiving the Word of God. In his homily Bishop Francis Serrao SJ stressed the importance of Worship unto God in the Holy Place like Church and he said that much more than any structure heart is more important. We have to worship in the Spirit and Truth as mentioned by the Lord in the John Chapter 4, to samaritan woman. Structure reminds the Presence of Almighty God and the salvation he brought to us through his son Jesus Christ.
After the homily he anointed the Altar with oil and offered the sacrifice. After the Communion Bishop blesses the tabernacle and handed over the key as the Mission Centre Director Fr Stany D’Cunha.
After the Holy Eucharist Bishop felicitated the main donors, Monsignor and Mission Centre Director. Bishop thanked God for his merciful love upon the Diocese of Shimoga. He thanked everyone who contributed to complete the project.
Mission Centre Director Fr Stany D’Cunha welcomed the dignitaries and the gathering. He also felicitated all the important people who helped in completing the project
Sr. Sheela Miranda, Superior of the Convent thanked all.
Fr Lawrence D’Souza was the MC for the liturgy and Fr Santhosh Pereira was the Mc for the program. Food was served for all
Shimoga Diocese comprises of three civil districts, namely; Shivamogga, Davanagere and Chitradurga. It consists of 19000 catholics. Diocese reaching out to the poor, marginalized and downtrodden through its Pastoral ministry, education ministry, health ministry and social Work ministry. Dedicated Priests and religious together with Bishop serving selflessly to uplift the needy in the Diocese.
ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷೀಕೋತ್ಸವ – ಚಂದ್ರಯಾನ ಪ್ರೋಜೆಕ್ಟ್ 3 ರ ಮೆನೇಜರ್ ಯುವ ವಿಜ್ಞಾನಿ ಆಕಾಶ ಶೆಟ್ಟಿ ಇವರಿಂದ ಬಾಹ್ಯಯಾನ ಯೋಜನೆಗಳ ವಿವರಣೆ
ಕುಂದಾಪುರ,ಡಿ.9: ಪ್ರತಿಷ್ಟಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷೀಕೋತ್ಸವವು ಬಹಳ ವಿಜ್ರಂಭಣೆಯಿಂದ ಡಿ.8 ರಂದು ಶಾಲಾ ಮೈದಾನದಲ್ಲಿ ನಡೆಯಿತು. ಶಾಲಾ ವರದಿಯನ್ನು ಪವರ್ ಪಾಂಯ್ಟ್ ಮೂಲಕ ಪ್ರಸ್ತೂತ ಪಡಿಸಲಾಯಿತು.
ಈ ವಾರ್ಷೀಕೋತ್ಸವಕ್ಕೆ ಚಂದ್ರಯಾನ ಪ್ರೋಜೆಕ್ಟ್ 3 ರ ಮೆನೇಜರ್ ಕುಂದಾಪುರ ಮೂಲದ ಯುವ ವಿಜ್ಞಾನಿ ಆಕಾಶ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಪವರ್ ಪಾಂಯ್ಟ್ ಮೂಲಕ ಚಂದ್ರಯಾನಗಳ 1, 2, 3 ರ ಯೋಜನೆಗಳ ಕಾರ್ಯರೂಪವನ್ನು ವಿವರಣೆ ನೀಡಿದರು. ಚಂದ್ರಯಾನ ಕ್ಷೇತ್ರದಲ್ಲಿ ನಾವು ಅನೇಕ ಸಾಧನೆಗಳನ್ನು ಮಾಡಿದ್ದೇವೆ, ಚಂದ್ರಯಾನದಲ್ಲಿ ಪ್ರಪಂಚದ ಇತರ ದೇಶಗಳಿಂದ ಮುಂದಿದ್ದೇವೆ. ಪ್ರಪಂಚದಲ್ಲಿ 5 ದೇಶಗಳು ಮಾತ್ರ ಬಾಹ್ಯ್ಯಾಕಾಶದಲ್ಲಿ ಅನ್ವೇಷಣೆ ಮಾಡುವ ಸಾಮ್ರಥ್ಯವನ್ನು ಹೊಂದಿವೆ, ಅದರಲ್ಲಿ ಭಾರತ ಒಂದು, ಮಂಗಳ ಗ್ರಹಕ್ಕೆ ಕಕ್ಷೆಗಾಮಿ ಕಳುಹಿಸಿದ 7 ದೇಶಗಳ ಪಯ್ಕಿ ಭಾರತ ಒಂದಾಗಿದೆ ಅಷ್ಟು ಮಾತ್ರವಲ್ಲ ನಾವು ಮಂಗಳ ಗ್ರಹಕ್ಕೆ ಕಕ್ಷೆಗಾಮಿಯನ್ನು ಕಳುಹಿಸಲು ಮೊದಲ ಪ್ರಯತ್ನದಲ್ಲೆ ಸಫಲವಾಗಿದ್ದೇವೆ, ಚಂದ್ರ ಗ್ರಹದ ಮೇಲೆ ಗಗನ ನೌಕೆಯನ್ನು ಇಳಿಸಿದ ನಾಲ್ಕು ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ಪ್ರಥಮವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನ ನೌಕೆ ಇಳಿಸಿದ ಕೀರ್ತಿ ಭಾರತದದ್ದಾಗಿದೆ, ಪ್ರಬಲವಾದ ಟೆಲಿಸ್ಕೋಪ್ ಇರುವ ಎಂಟು ದೇಶಗಳ ಪಯ್ಕಿ ಭಾರತ ದೇಶ ನಮ್ಮದಾಗಿದೆ, ಭಾರತವು ಗಗೋಲ ಯಾನಕ್ಕಾಗಿ ಕೋಟಿ ಕೋಟಿ ರೂಪಾಯಿಗಳನ್ನು ವ್ಯವಯಿಸುತ್ತದೆ, ಕಾರಣ ಇದರಿಂದ ನಾನಾ ತರಹದ ಅನ್ಚೇಷಣೆಗಳಿಂದ ಲೋಕಕ್ಕೆ ಉಪಕಾರವಾಗುತ್ತದೆ, ವಿದ್ಯಾರ್ಥಿಗಳು ಹೈಸ್ಕೂಲುಗಳಿಂದಲೇ ಭಾಹ್ಯಕಾಶ ಇಂಜಿನಿಯರಗಳಾಗಲು ಮನಸ್ಸು ಮಾಡಬೇಕು, ಒಂದು ಅನ್ವೇಷಣೆ ಸಫಲವಾಗಲು ಅನೇಕ ವರ್ಷಗಳು ತಗಲುತ್ತವೆ, ಭಾರತಕ್ಕೆ ಗಗೋಲ ಅನ್ವೇಷಣೆಗಾಗಿ ಬಹಳಷ್ಟು ವಿಜ್ಹಾನಿಗಳ ಅಗತ್ಯವಿದೆ” ಎಂದು ಭಾಹ್ಯಕಾಶ ವಿಜ್ಹಾನಿಗಳಾಗಲು ಹುರಿದುಂಬಿಸಿದರು.
(ಆಕಾಶ ಶೆಟ್ಟಿಯವರು ಮೂಲತಹ ಕುಂದಾಪುರದವರಾಗಿದ್ದು, ತಾಯಿ ಮನೆ ಗುಜ್ಜಾಡಿ ಮಂಕಿ, ತಂದೆ ಮನೆ ಕೆರಾಡಿ ಚಪ್ಪರಮಕ್ಕಿಯವರು, ಅವರು ಬೆಂಗಳೂರಿನಲ್ಲಿ ವಾಸವಿದ್ದು, ಮಾವಳ್ಳಿ, ಹೋಲಿ ರೋಜರಿ ಚರ್ಚಿನ ಶಿಕ್ಷಕರಾದ ರತ್ನಾಕರ ಶೆಟ್ಟಿಯವ ದೊಡ್ಡಪ್ಪನ ಮಗನಾಗಿದ್ದು, ಆಕಾಶ ಶೆಟ್ಟಿ, ಮುರ್ಡೇಶ್ವರದ ನಾಡವರಕೇರಿ ಮಾವಳ್ಳಿ ಮುರ್ಡೇಶ್ವರದ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ)
ಇನ್ನೋರ್ವ ಅತಿಥಿ ಶಾಲಾ ಹಳೆ ವಿದ್ಯಾರ್ಥಿನಿ ಹೋಮಿಯೊ ಪತಿ ವೈದ್ಯಕೀಯದಲ್ಲಿ ರೇಂಕ್ ಪಡೆದ ಡಾ. ಅಸ್ಮಿತಾ ಕೋತ್ “ಈ ಶಾಲೆಯಲ್ಲಿ ತನಗೆ ದೊರಕಿದ ಮಾರ್ಗದರ್ಶನ ನನ್ನನ್ನು ನನ್ನ ಗುರಿ ಮುಟ್ಟಲು ಕಾರಣವಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಇಂತಹ ಶಾಲೆಯಲ್ಲಿ ವಿಧ್ಯೆ ಕಲಿಯಲು ಅವಕಾಶ ಸಿಕ್ಕಿದು ನಿಮ್ಮ ಭಾಗ್ಯ ಎಂದು ತಿಳಿಸುತ್ತಾ, ವಿದ್ಯಾರ್ಥಿಗಳು ಆಟ ಮತ್ತು ಪಾಠದಲ್ಲಿ ಸಮಾನ ರೀತಿಯಲ್ಲಿ ಪರಿಶ್ರಮ ಪಡೆಯಿರಿ” ಎಂದು ತಿಳಿಸಿದರು.
ವಡೇರಹೋಬಳಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಸುನೀತಾ ಬಾಂಜ್ ಮಾತನಾಡಿ “ವಿದ್ಯಾರ್ಥಿಗಳ ಜೀವನದಲ್ಲಿ ಮೊಬಾಯ್ಲ್ ಬಹಳ ಪಾತ್ರವಹಿಸುತ್ತದೆ. ಅದನ್ನು ಒಳ್ಳೆದಕ್ಕೆ ಮಾತ್ರ ಬಳಸಬೇಕು. ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪೂರಕವಾಗಿರಬೇಕು, ಅಂದ ಮಾತ್ರಕ್ಕೆ ವಿದ್ಯಾಥಿಗಳಿಗೆ ಬೇಕಾದದ್ದನೆಲ್ಲ ಪೂರಯಿಸುವುದಲ್ಲಾ, ಅಗತ್ಯಕ್ಕೆ ತಕ್ಕಂತೆ ಮಾತ್ರ ಇರಬೇಕು. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ನಿಗಾ ವಹಿಸಬೇಕು, ಎನ್ನುತ್ತಾ ಮುಂದೆ ಈ ಶಾಲೆಯ ಕೀರ್ತಿ ಭಾನೆತ್ತರಕ್ಕೆ ಹಾರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಬಹಳ ಕಡಿಮೆ ಅವಧಿಯಲ್ಲಿ ಬಹಳ ಹೆಚ್ಚು ಕೀರ್ತಿ ಪಡೆದ ಶಾಲೆ ಇದು. ಕಳೆದ 6 ವರ್ಷಗಳಿಂದ ಸತತವಾಗಿ ಶೇಕಡ 100 ಫಲಿತಾಂಶ ಪಡೆಯುತ್ತಾ ಬಂದಿದೆ. ಇದರಿಂದಾಗಿ ಹೆತ್ತವರಿಗೆ ಮತ್ತು ಶಾಲೆಗೂ ಸಂತೋಷ, ನಮ್ಮಲ್ಲಿ ವಿದ್ಯಾರ್ಥಿಗಳ ಅಭಿವ್ರದಿಗಾಗಿ ಸುಸಜ್ಜಿತ ಕಂಪ್ಯೂಟರ್ ಗಳಿವೆ, ಉತ್ತಮ ಗುಣಮಟ್ಟದ ವಿಜ್ಞಾನದ ಪ್ರಯೋಗಾಲಯವಿದೆ, ಉತ್ತಮ ಲೈಬ್ರೆರಿ ಇದೆ. ಪಾಠದ ಜೊತೆಗೆ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ ಭಾರತದ ಉತ್ತಮ ನಾಗರಿಕರಾಗಲು ಸದಾ ಶ್ರಮ ಪಡುವ ಶಾಲೆ ಇದು” ಎನ್ನುತ್ತಾ ವಾರ್ಷಿಕೋತ್ಸವಕ್ಕೆ ಶುಭಾಶಯಗಳನ್ನು ಕೋರಿದರು.
ವಿಜ್ಞಾನಿ ಆಕಾಶ ಶೆಟ್ಟಿ, ಡಾ.ಅಸ್ಮಿತಾ ಕೋತ್ ಮತ್ತು ಸುಧೀರ್ಘ ಸೇವೆ ಸಲ್ಲಿಸಿ ನಿವøತ್ತಿಯ ಅಂಚಿನಲ್ಲಿರುವ ಸಂತಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ, ಸಂತ ಮೇರಿಸ್ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ಇವರನ್ನು ಸನ್ಮಾನಿಸಲಾಯಿತು.
ಆಟ ಪಾಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು. ಸಭಾ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಭಗಿನಿ ಸುನೀತಾ, ನೀತಾ ಮೆಂಡೊನ್ಸಾ, ಶಿಕ್ಷಕಿಯರಾದ ನೀತಾ ಮೆಂಡೊನ್ಸಾ, ಪ್ರೀತಿ ಅಂದ್ರಾದೆ,ಮಮತಾ, ರಮ್ಯಾ ಖಾರ್ವಿ, ನಿಖಿತಾ, ರಂಜಿತಾ, ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ನಡೆಸಿಕೊಟ್ಟರು. ಹಲವಾರು ವಿಭಿನ್ನ ರೀತಿಯ ನಾಟ್ಯ, ಕುಣಿತ, ಯಕ್ಷಗಾನ, ಕಂಸಾಳೆ, ಗಾರಭ, ಮಣಿಪುರ ನ್ರತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಾದ ಮಹ್ಮದ್, ಬ್ರಜೇಶ್, ವಿಘ್ನೇಶ್, ಪರ್ಲ್ ಮತ್ತು ರೀಶಿಕಾ ನಿರೂಪಿಸಿದರು.
ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಶಾಲಾ ನಾಯಕಿ ರೀಶಿಕಾ ಜಾಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ವಂದಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್- ಸ. ಪ್ರೌ. ಶಾಲೆಗೆ ಇಂಗ್ಲೀಷ್ ನಿಘಂಟುಗಳ ವಿತರಣೆ-ರೋಟರಿಯು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತದೆ: ಎಸ್.ಎನ್. ಮಂಜುನಾಥರೆಡ್ಡಿ
ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್ವತಿಯಿಂದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಇಂಗ್ಲೀಷ್ ನಿಘಂಟುಗಳ ವಿತರಣೆ ಮಾಡಿ,ರೋಟರಿ ಸಂಸ್ಥೆಯು ಸೇವಾ ಮನೋಭಾವನೆಯನ್ನು ಹೊಂದಿದ್ದು, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಅಧ್ಯಕ್ಷರಾದ ಎಸ್.ಎನ್. ಮಂಜುನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ಗಡಿಭಾಗದ ಮುದಿಮೊಡಗು ಸರ್ಕಾರಿ ಪ್ರೌಢ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ರೋಟರಿ ಶ್ರೀನಿವಾಸಪುರ ಸೆಂಟ್ರಲ್ವತಿಯಿಂದ ಇಂಗ್ಲೀಷ್ ನಿಘಂಟುಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ ಎಸ್.ಎನ್. ಮಂಜುನಾಥರೆಡ್ಡಿ, ಗಡಿಭಾಗದಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಆಂಗ್ಲಭಾಷೆಯು ಕಷ್ಟಕರವಾಗಿದ್ದು, ಈ ನಿಘಂಟಿನಿಂದ ಆಂಗ್ಲ ಪದಗಳನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಅರ್ಥಮಾಡಿಕೊಂಡು ಉನ್ನತ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಳ್ಳಬೇಕು ಎನ್ನುತ್ತಾ, ರೋಟರಿಯು ಸೇವಾ ಮನೋಬಾವದಿಂದ ಎಲ್ಲಾ ಸದಸ್ಯರು ಪರಸ್ಪರ ಸಹಕಾರದಿಂದ ಸಮಾಜದ ಒಳಿತಿಗಾಗಿ ಅನೇಕ ಜನಪರ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ ಎಂದು ತಿಳಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಕಾರ್ಯದರ್ಶಿ ಎಸ್. ಶಿವಮೂರ್ತಿ ಮಾತನಾಡಿದರು.ಈ ಸಂದರ್ಭದಲ್ಲಿ ನಿರ್ದೇಶಕ ಜಗದೀಶರೆಡ್ಡಿ, ಮುಖ್ಯ ಶಿಕ್ಷಕ ಸತ್ಯನಾರಾಯಣರೆಡ್ಡಿ, ಸಹ ಶಿಕ್ಷಕ ಶಶಿಧರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಭಂಡಾರ್ಕಾರ್ಸ್:ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಸುಧಾರಿತ ಸಮಾಜ ನಮ್ಮ ಮೊದಲ ಆದ್ಯತೆ ಮತ್ತು ಉದ್ದೇಶವಾಗಿರಬೇಕು-ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿ
ಕುಂದಾಪುರ: ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಸುಧಾರಿತ ಸಮಾಜ ನಮ್ಮ ಮೊದಲ ಆದ್ಯತೆ ಮತ್ತು ಉದ್ದೇಶವಾಗಿರಬೇಕು ಎಂದು ಮೈಸೂರು ಮರ್ಕಂಟೈಲ್ ಕಂಪೆನಿ ಲಿಮಿಟೆಡ್ ಇದರ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಡಿಸೆಂಬರ್ 8ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 23ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ “ಡಾಕ್ಟರ್ ಆಫ್ ಸೈನ್ಸ್” ಗೌರವಕ್ಕೆ ಭಾಜನರಾದ ಸಾಧಕ, ದಾನಿ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸನ್ಮಾನ ಸಮಾರಂಭ ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ, ಬೆಂಗಳೂರು ವತಿಯಿಂದ 2023-24ನೇ ಸಾಲಿನ ಆಯ್ದ 200 ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತಕ್ಕೆ ಭವಿಷ್ಯವಿದೆ. ಭಾರತದ ಶೇಕಡಾ 60ರಷ್ಟು ಭಾಗ ಭೂಮಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದೆ. ನೀವು ಖರ್ಚು ಮಾಡಿದ ಹಣ ಸಮಾಜಕ್ಕಾಗಿ ಅದರ ಅಭಿವೃದ್ಧಿಗೆ ಹೋಗುತ್ತದೆ. ಪ್ರತಿಯೊಬ್ಬರೂ ಅವರವರ ಕುರಿತು ಅರಿವು ಇರಬೇಕು. ನಮಗಾಗಿ ನಮ್ಮ ನಾಳೆಗಳ ಭವಿಷ್ಯಕ್ಕಾಗಿ ಹಣ ಬೇಕು. ಆದರೆ ಸ್ವಂತಿಕೆಗಾಗಿ ಮಾತ್ರ ನಮ್ಮ ದುಡಿಮೆ ಮುಖ್ಯವಾಗಬಾರದು. ನಮ್ಮ ದುಡಿಮೆಯ ಹಣ ಸಮಾಜಕ್ಕಾಗಿ ಮೀಸಲಿಡಬೇಕು. ಅಂತೆಯೇ ನನಗೆ ಆಲೋಚನಾ ಶಕ್ತಿ ಮತ್ತು ಕ್ರಮವನ್ನು ಕಲಿಸಿದೆ ಈ ವಿದ್ಯಾಸಂಸ್ಥೆಯ ಸನ್ಮಾನ ಮತ್ತು ನನ್ನ ಊರ ಸನ್ಮಾನ ನನಗೆ ತುಂಬಾ ಅಪ್ಯಾಯಮಾನವಾಗಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ಸಹಾಯ ಮಾಡುವುದು ಅತ್ಯಂತ ಒಳ್ಳೆಯ ಕೊಡುಗೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಮಾಡುವಂತಹ ಸೇವೆ ಸಮಾಜದ ಅಭಿವೃದ್ಧಿಗೆ ನೆರವಾಗುತ್ತದೆ. ಜೀವನ ಮತ್ತು ಮರಣದ ನಡುವಿನ ಈ ಜೀವನದಲ್ಲಿ ದೇಶಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಅಧ್ಯಕ್ಷರಾದ ಡಾ.ಹೆಚ್ ಎಸ್. ಬಲ್ಲಾಳ್ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ ಡಾ.ಹೆಚ್.ಎಸ್.ಶೆಟ್ಟಿಯವರ ಬದುಕೆ ಒಂದು ಆದರ್ಶ. ಸಮಾಜದ ಅಭಿವೃದ್ಧಿಗೆ ನೆರವಾಗವ ಅವರ ಚಿಂತನೆ ಸ್ಪೂರ್ತಿದಾಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಇದರ ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಕಾಲೇಜಿನ ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು, ಕೆ.ದೇವದಾಸ್ ಕಾಮತ್, ರಾಜೇಂದ್ರ ತೋಳಾರ್, ಪ್ರಕಾಶ್ ಸೋನ್ಸ್, ಸದಾನಂದ ಚಾತ್ರ, ಯು.ಎಸ್.ಶೆಣೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗಂಗೊಳ್ಳಿ ಇಗರ್ಜಿಯ ವಾರ್ಷಿಕ ಮಹಾ ಉತ್ಸವ – ನಾವು ಯೇಸುಕ್ರಿಸ್ತರ ಭರವಶೆಯ ಮಾರ್ಗದಲ್ಲಿ ನಡೆಯೋಣ: ಫಾ|ಚಾರ್ಲ್ಸ್ ಮಿನೆಜೆಸ್
ಕುಂದಾಪುರ,ಡಿ.8: 397 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆಯ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ಡಿ.6 ರಂದು ‘ಮೇರಿ ಮಾತೆಯಂತೆ ಯೇಸು ಕ್ರಿಸ್ತರಲ್ಲಿ ನೂತನ ವಿಶ್ವಾಸದಿಂದ ಜೀವಿಸೋಣ’ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಉಡುಪಿ ವಲಯದ ಪ್ರಧಾನ ಧರ್ಮಗುರು ಅ|ವಂ|ಚಾರ್ಲ್ಸ್ ಮಿನೇಜೆಸ್ “ನಾವು ನವ ಭರವಶೆಯಿಂದ ಮೇರಿ ಮಾತೆಯಂತೆ ಯೇಸುವಿನಲ್ಲಿ ಭರವಶೆ ಇಟ್ಟು ಜೀವಿಸಬೇಕು. ನಾವು ಪಾಪದಿಂದ ಜೀವಿಸುತ್ತಾ ಇದ್ದೆವೆ, ಯೇಸು ಕ್ರಿಸ್ತರು ಶಿಲುಭೆ ಹೊತ್ತುಅ ನಡೆಯುವಾಗ ಬಿದ್ದಿದ್ದರು, ಆದರೆ ಅವರೆದ್ದು ನಡೆದರು, ಅದುವೇ ನಮಗೆ ಮಾರ್ಗದರ್ಶನ, ನಾವೂ ಪಾಪದಿಂದಲೇ ಬಿದ್ದಿರಬಾರದು, ನಾವು ಪಾಪದಿಂದ ಮೇಲೆಳಬೆಕು, ಚಿನ್ನ ಎಲ್ಲರಿಗೂ ಪ್ರಿಯ, ಆದರೆ ಚಿನ್ನದಿಂದ ನಗ ನಾಣ್ಯಗಳನ್ನು ಮಾಡಬೇಕಾದರೆ, ಚಿನ್ನವನ್ನು ಬೆಂಕಿಗೆ ಹಾಕಿ, ಪುಟವೀಡಬೇಕು, ಅದನ್ನು ತಿದ್ದಿ ಗುದ್ದಿ ರೂಪ ಕೊಡಬೇಕು ಆಗ ಮಾತ್ರ ಚಿನ್ನಕ್ಕೆ ಸುಂದ ರೂಪ ಬಂದು ಧರಿಸಬಹುದಾಗುತ್ತದೆ, ಹಾಗೇ ನಮಗೆ ಸ್ವರ್ಗ ಸೀಗಬೇಕಿದ್ದರೆ ಜೀವನದಲ್ಲಿ ಸತ್ಯ ನೀತಿ ಸನ್ಮಾರ್ಗದಲ್ಲಿ ನಡೆಯಬೇಕು, ಸನ್ಮಾರ್ಗದಲ್ಲಿ ನಡೆಯುವುದು ಸುಲಭದ ಮಾರ್ಗವಲ್ಲ. ಅಲ್ಲಿ ಕಶ್ಟನಶ್ಟಗಳು ಸಿಗುತ್ತವೆ. ಈ ಕಶ್ಟ ನಶ್ಟಗಳನ್ನು ಎದುರಿಸಲು ನಾವು ಯೇಸುಕ್ರಿಸ್ತ ಭರವಶೆಯ ಮಾರ್ಗದಲ್ಲಿ ನಡೆಬೇಕು” ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿ ಪೂಜೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯದ ನುಡಿಗಳನ್ನಾಡಿದರು. ಗಂಗೊಳ್ಳಿಯ ಧರ್ಮಗುರು ವಂ| ರೋಶನ್ ಥಾಮಸ್ ಡಿಸೋಜಾ ವಂದಿಸಿದರು. ಕುಂದಾಪುರ ವಲಯದ ಧರ್ಮಕೇಂದ್ರದ ಅನೇಕ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಹಾಗೂ ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ವಾರ್ಷಿಕ ಮಹಾ ಹಬ್ಬದ ಪೋಷಕರಾದ ಪ್ರಕೃತಿ ಮತ್ತು ಅಲ್ಟನ್ ರೆಬೇರೊ, ಹಾಗೂ ಕುಟುಂಬಸ್ಥರಾದ, ಸುನೀತಾ ಉಪೇಂದ್ರ, ಅಲನ್ಸ್ಟೈನ್ ರೆಬೇರೊ, ಪ್ರಜ್ವಲ್, ಜಾಕ್ಲೀನ್, ತಿಮೊತಿ ರೊಡ್ರಿಗಸ್, ಗಂಗೊಳ್ಳಿ ಕಾನ್ವೆಂಟಿನ ಧರ್ಮಭಗಿನಿಯರು, ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು. ಪಾಲನ ಮಂಡಳಿ ಉಪಾಧ್ಯಕ್ಷ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ, ಗ್ಲೋರಿಯಾ ಡಿಸೋಜಾ , ಆಯೋಗಗಳ ಸಂಯೋಜಕಿ ರೆನಿಟಾ ಬಾರ್ಬೆಸ್, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಬಹು ಸಂಖ್ಯೆಯ ಭಕ್ತಾಧಿಗಳು ರೋಜರಿ ಮಾತೆಯ ವಾರ್ಷಿಕ ಜಾತ್ರೆಯ ಪವಿತ್ರ ಬಲಿದಾನದಲ್ಲಿ ಭಾಗಿಯಾದರು.
ಉಡುಪಿಯ ಜಿಲ್ಲಾಸ್ಪತ್ರೆಯ ವೈದ್ಯೆ ಚಿಕಿತ್ಸೆ ನೀಡುತ್ತಿರುವಾಗಲೇ ಹೃದಯಾಘಾತದಿಂದ ನಿಧನ
ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ವೈದ್ಯರೊರ್ವರು ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ.ಮೃತರನ್ನು ಡಾ. ಶಶಿಕಲಾ ಎಂದು ಗುರುತಿಸಲಾಗಿದೆ.
ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಸಿನ್ ವಿಭಾಗದ ವೈದ್ಯರಾಗಿರುವ ಡಾ. ಶಶಿಕಲಾ ಅವರು ರೋಗಿಗೆ ಚಿಕಿತ್ಸೆ ನೀಡುತ್ತೀರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ, ಕೂಡಲೇ ಡಾ. ಶಶಿಕಲಾ ಅವರನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದರು. ಆದರೆ, ಅಷ್ಟರಲ್ಲಿ ಶಶಿಕಲಾ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಶಶಿಕಲಾ ಅವರು 2022ರ ಫೆಬ್ರವರಿಯಲ್ಲಿ ವಯೋನಿವೃತ್ತಿ ಹೊಂದಿದ್ದರು. ಆದರೆ, ವೈದ್ಯರಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಹೊರಗುತ್ತಿಗೆಯಲ್ಲಿ ಮುಂದುವರಿಸಲಾಗಿತ್ತು. ಅವರು ಹೊರರೋಗಿಗಳ ವಿಭಾಗದಲ್ಲಿ ಪ್ರಮುಖವಾಗಿ ರೋಗಿಗಳನ್ನು ನೋಡುತ್ತಿದ್ದರು ಎನ್ನಲಾಗಿದೆ.
ಸಂತ ಮೇರಿಸ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕೋತ್ಸವ
ಕುಂದಾಪುರ, ಡಿ.8: ಸ್ಥಳೀಯ ಹೆಸರುವಾಸಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಂತ ಮೇರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಡಿ.7 ರಂದು ಶಾಲಾ ಮೈದಾನದಲ್ಲಿ ವಿಜ್ರಂಬಣೆಯಿಂದ ನಡೆಯಿತು. ಶಾಲ ವರದಿಯನ್ನು ಡಿಜೀಟಲ್ ಪರದೆಯ ಮೂಲಕ ಪ್ರಸ್ತೂತ ಪಡಿಸಲಾಯಿತು.
ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಹಳೆ ವಿದ್ಯಾರ್ಥಿ, ಕುಂದಾಪುರ ತಾಲೂಕಿನ ಆರೋಗ್ಯಾಧಿಕಾರಿಯಾದ ಡಾ.ಕೆ.ಪ್ರೇಮಾನಂದ ಅಗಮಿಸಿ “ಪ್ರಾರ್ಥಮಿಕ, ಪ್ರೌಢಶಾಲೆಗಳಲ್ಲಿ ಕಲಿಯುತ್ತೀರು ಸಮಯದ ಕ್ಷಣಗಳು ಮರೆಯಾಲರದಂತವು, ನಮಗೆ ಕಲಿಸಿದ ಪಾಠಗಳು ನೆನಪಿನಲ್ಲಿರುವುದು ಕಷ್ಟವಾದರೂ, ಬಾಲ್ಯದ ಆ ಕ್ಷಣಗಳು, ಪ್ರವಾಸ, ಸಾಂಸ್ಕ್ರತಿಕ ಕಾರ್ಯಕ್ರಮ, ಚಟುವಟಿಕೆ ಸ್ಮರಣೀಯವಾಗಿರುತ್ತೀವೆ. ಶಾಲೆಯಲ್ಲಿ ನೀಡುವ ಮಾರ್ಗದರ್ಶನ ಆವಾಗ ಅರ್ಥವಾಗದಿದ್ದರೂ, ಜೀವನದಲ್ಲಿ ಕ್ರಮೇಣ ಅವು ನಮಗೆ ಉಪಯುಕ್ತವಾಗುತ್ತವೆ. ನನಗೆ ಮತ್ತು ನನ್ನ ಒಡಹುಟ್ಟಿದವರಿಗೆಲ್ಲರಿಗೂ ವಿಧ್ಯೆ ಬುದ್ದಿ ನೀಡಿದ ಈ ಶಾಲೆ ಹೆಸರುವಾಸಿ ಶಾಲೆ. ನನ್ನ ಜೀವನದಲ್ಲಿ ಶಿಸ್ತು, ನೀತಿ, ನಿಯಮ ಕಲಿತ್ತದದ್ದು ಇದೇ ಶಾಲೆ” ಎಂದು ಅವರು ತಮಗೆ ಶಿಕ್ಷಣ ನೀಡಿದ ಶಾಲೆಯ ಶಿಕ್ಷಕರನ್ನು ನೆನೆಸಿಕೊಳ್ಳುತ್ತಾ “ಕನ್ನಡ ಶಾಲೆಯೆಂದು ಕೀಳಾಗಿ ಕಾಣುವ ಅಗತ್ಯವಿಲ್ಲಾ, ಕನ್ನಡ ಮಾದ್ಯಮದಲ್ಲಿ ಕಲಿತವರಿಗೆ ಇಂಜಿನಿಯರಿಂಗ್, ವೈದ್ಯ ಪದವಿಯ ಸೆರ್ಪಡೆಗೆ ಹೆಚ್ಚಿನ ಅನುಕೂಲವಿದೆಯೆಂದು ಅವರು ತಿಳಿಸಿದರು.
ಇನ್ನೊರ್ವ ಅತಿಥಿ ಶಾಲಾ ಹಳೆವಿದ್ಯಾರ್ಥಿನಿ, ಎಚ್.ಎಂ.ಎಂ. ಮತ್ತು ವಿ.ಕೆ.ಆರ್. ಅಂಗ್ಲಾ ಮಾದ್ಯವi ಶಾಲೆಯ ಪ್ರಾಂಶುಪಾಲರಾದ ಡಾ|ಚಿಂತನಾ ರಾಜೇಶ್ “ಎಲ್ಲರ ಜೀವನದಲ್ಲಿ ನಾವು ಕಲಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದಿನಗಳು ಅತ್ಯಂತ ಪ್ರಮುಖವಾಗಿರುತ್ತದೆ. ನನಗೆ ಬದ್ದತೆ, ನೀತಿ ಕಲಿಸಿಕೊಟ್ಟ ಶಾಲೆಯಿದು, ಸುಮರು 40-45 ವರ್ಷಗಳಿಂದ ಈ ಶಾಲೆಗಳು ನಿರಂತರ ತಮ್ಮ ಗುಣಮಟ್ಟವನ್ನು ಕಾಯ್ದಿರಿಸಿಕೊಂಡಿದೆ ಎಂದು ಹೇಳಲು ಸಂತೋಷವಾಗುತ್ತದೆ. ಶಿಕ್ಷಕರು ಹೇಳಿಕೊಡುವ ನೀತಿ, ಬುದ್ದಿ ಮಾತು ನಾವು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ನಮ್ಮ ಮಕ್ಕಳು ಒಳ್ಳೆಯವರಾಗಲು ತಾಯಂದಿರು ಕಾರಣವಾಗಬೇಕು, ಆದರಿಂದ ನಾವು ಉತ್ತಮ ತಾಯಂದಿರಾಗಬೇಕು” ಎಂದು ಅವರು ತಿಳಿಸಿದರು. ಮತ್ತೊರ್ವ ಅತಿಥಿ ಶಾಲಾ ಹಳೆ ವಿದ್ಯಾರ್ಥಿನಿ ಹಿಮಾಲಯನ್ ಬೈಕ್ ರೈಡರ್ ಸಾಧಕಿ, ಕಾಪೆರ್Çರೇಟರ್ ಟೈನರ್, ರಾಜ್ಯ ಮಟ್ಟದ ವಾಲಿಬಾಲ್ ಪಟು, ಸಾಹಸಿ ವಿಲ್ಮಾ ಕ್ರಾಸ್ಟೊ ಮಾತನಾಡಿ “ನಾನು ಈ ಶಾಲೆಯ ಹಳೆ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆಯನ್ನಿಸುತ್ತದೆ, ನಾನು ಶಾಲಾ ಜೀವನದಲ್ಲಿ ಎಂದು ವೇದಿಕೆ ಹತ್ತಲಿಲ್ಲಾ, , ಅಂದರೆ ನಾವು ಇಂದು ಏನು ಮಾಡಲೂ ಸಾಧ್ಯವಾಗದಿದ್ದರೂ, ಮುಂದಿನ ದಿನಗಳಲ್ಲಿ ಸಾಧಕಾರಾಗಬಹುದು, ಇದಕ್ಕೆ ನಮಗೆ ಸಣ್ಣವರಿರುವಾಗ ಶಾಲೆಯಲ್ಲಿ ಕಲಿಸಿದ ಶಿಕ್ಷಣ, ರೀತಿ ನೀತಿ ಶಿಕ್ಷಕರ ಉತ್ತೇಜನ ಕಾರಣವಾಗುತ್ತೆ’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಜಂಟಿ ಕಾರ್ಯದರ್ಶಿ, ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಹಾಗೂ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಕನ್ನಡ ಮಾದ್ಯಮ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುತ್ತೀದೆ, ಇಂದಿನ ದಿವಸಗಳಲ್ಲಿ ಕನ್ನಡ ಅನುದಾನಿತ ಶಾಲೆಗಳಿಗೆ ಕಶ್ಟದ ಸಮಯ, ನಮಗೆ ನಮ್ಮ ಶಾಲೆಯ ಮುದ್ದು ಮಕ್ಕಳೇ ಆಸ್ತಿ, ಶಾಲೆಯ ಹಳೆ ವಿದ್ಯಾರ್ಥಿಗಳೆ ಸಂಪತ್ತು, ನಮ್ಮ ಶಾಲೆ ಗುಣ ಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ನಡತೆ, ಒಳ್ಳೆಯ ಸಂಸ್ಕಾರ, ಕಲಿಸಿಕೊಡುತ್ತೇವೆ, ಇಲ್ಲಿ ಕಲಿತರೆ ಮಕ್ಕಳು ಭಾರತದ ಮುಂದಿನ ಉತ್ತಮ ಪ್ರಜೆಳಾಗುವ ಭರವಶೆ ನಮ್ಮದಾಗಿದೆಯೆಂದು” ಸಂದೇಶ ನೀಡಿದರು.
ವಿಲ್ಮಾ ಕ್ರಾಸ್ಟೊ ಮತ್ತು ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ಇವರುಗಳನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಟ ಪಾಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮ ಶಿಕ್ಷಕಿ ಜ್ಯೋತಿ ಡಿಸಿಲ್ವಾ ಮತ್ತು ಸುಶೀಲಾ ಖಾರ್ವಿ ನಡೆಸಿಕೊಟ್ಟರು. ತರಗತಿ ಒಂದರಿಂದ ಹತ್ತನೇ ತರಗತಿಯ ವರೆಗಿನ ಮಕ್ಕಳು ನ್ರತ್ಯ, ಕುಣಿತ, ನಾಟಕ ಹೀಗೆ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದರು. ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಫಾ|ಸ್ಟ್ಯಾನಿ ತಾವ್ರೊ, ಪುರಸಭಾ ಸದಸ್ಯ ಪ್ರಭಾಕರ, ಅಶೋಕ್ ನಾೈಕ್ ಸಮನ್ವಯ ಅಧಿಕಾರಿ ಕುಂದಾಪುರ, ಸುನೀತಾ ಬಾಂಜ್, ಸಮೂಹ ಸಂಪನ್ಮೂಲ ವ್ಯಕ್ತಿ ವಡೇರಹೋಬಳಿ ಕ್ಲಸ್ಟರ್, ಹಳೆ ವಿದ್ಯಾರ್ಥಿ ಪ್ರವೀಣ್ ಕುಮಾರ್ ಟಿ. ಇವರು ಭಾಗವಹಿಸಿದ್ದರು. ಸಂಜೆಯ ಕಾರ್ಯಕ್ರಮದಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಾಲಾ ಮುಖಂಡರಾದ ಮನ್ವಿತಾ ಬಿ. ಮತ್ತು ವೈಷ್ಣವಿ ಉಪಸ್ಥಿತರಿದ್ದರು.
ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸಿದರು, ಸಂತ ಮೇರಿಸ್ ಹಿ. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ಮತ್ತು ಶಿಕ್ಷಕಿ ಸ್ಮಿತಾ ಡಿಸೋಜಾ ನಿರೂಪಿಸಿದರು.