ಕುಂದಾಪುರ: ಡಿಸೆಂಬರ್ 13ರಂದು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಸಂಸ್ಕೃತ ಸಂಘದ ಆಶ್ರಯದಲ್ಲಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಶ್ರೀ ಸುರಸರಸ್ವತಿ ಸಭಾ, ಶೃಂಗೇರಿ ಇವರು ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಪ್ರಥಮಾ, ದ್ವಿತೀಯಾ, ತೃತೀಯಾ, ತುರೀಯಾ ಹಾಗೂ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಬೆಳ್ಳಿ ಪದಕ ನೀಡಲಾಯಿತು. ಜೊತೆಗೆ ಜ್ಯೋತಿಷ್ಯ ಸರ್ಟಿಫಿಕೇಟ್ ಕೋರ್ಸನ್ನು ಪೂರೈಸಿದ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿಯವರು ” ಸಂಸ್ಕೃತ ದೇವ ಭಾಷೆಯಾಗಿದೆ, ಈ ಭಾಷೆ ತನ್ನದೇ ಆದ ಘನತೆ, ಗೌರವವನ್ನು ಹೊಂದಿದ್ದು ಎಲ್ಲಾ ಭಾಷೆಗಳ ಮಾತೃ ಭಾಷೆಯಾಗಿದೆ “ ಎಂದರು. ಹಾಗೂ ಇಂತಹ ಅರ್ಥಗರ್ಭಿತ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಬಂದಿರುವುದಕ್ಕಾಗಿ ಸಂಸ್ಕೃತ ವಿಭಾಗದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಪ್ರೊ. ಸತ್ಯನಾರಾಯಣ ಹತ್ವಾರ್, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯ್ ಕುಮಾರ್ ಕೆ. ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ. ಯಶವಂತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕಿ ಗಾಯತ್ರಿ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳ ಹೆಸರನ್ನು ಓದಿದರು. ಗಣಿತ ವಿಭಾಗದ ಮುಖ್ಯಸ್ಥೆ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿ ಶ್ರೀನಿಧಿ ಅಡಿಗ ಪ್ರಾರ್ಥನೆ ಮಾಡಿದರು. .
Month: December 2023
ಸುವರ್ಣ ಸೌಧದಲ್ಲಿ ಮಧ್ಯಪ್ರಿಯರ ಪ್ರತಿಭಟನೆ : ಬೇಡಿಕೆ ಕೇಳಿ ಸಚಿವ ಲಾಡ್ ಅಚ್ವರಿಗೊಳಗಾಗಿದ್ದಾರೆ/ Liquor lovers protest at Suvarna Soudha “Alcohol lovers not drunkards” many demands: Minister Lad surprise
ಬೆಳಗಾವಿ: ಒಂದೆಡೆ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೆ ಇನ್ನೊಂದೆಡೆ ಸುವರ್ಣಸೌಧದ ಬಳಿ ವಿವಿಧ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಮಧ್ಯಪ್ರಿಯರು ಕೂಡ ಪ್ರತಿಭಟನೆ ನಡೆಸಿದ್ದು ಹಲವು ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿದ್ದಾರೆ.ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟದ ಸಂಘದಿಂದ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸಲಾಗಿದ್ದು,ಈ ವೇಳೆ ಮದ್ಯಪ್ರಿಯರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಧ್ಯಪ್ರಿಯರ ಮನವಿ ಕೇಳಿ ಸಚಿವ ಸಂತೋಷ್ ಲಾಡ್ ಅವರು ಅಚ್ವರಿಗೊಳಗಾಗಿದ್ದಾರೆ. ಜೊತೆಗೆ ಮುಗುಳ್ನಗೆ ನಕ್ಕಿದ್ದಾರೆ
ಮಧ್ಯಪ್ರಿಯರು ಮುಂದಿಟ್ಟ ಬೇಡಿಕೆಗಳು ಜನರಿಗೆ ಹೌದನೇಸಿಸುತ್ತದೆ, ಹಾಗಾದರೆ ಅವರು ಸಚಿವರ ಮುಂದೆ ಬೇಡಿಕೆಗಳು ಯಾವುವು!? ಬೇಡಿಕೆಗಳು ಕೆಳಗಿನಂತಿವೆ
- ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು
- ಮದ್ಯ ಮಾರಾಟದಿಂದ ಬರುವ ಆದಾಯದ ಶೇಕಡ 10 ರಷ್ಟು ಮೀಸಲಿಡಬೇಕು
- ಲೀವರ್ ಸಮಸ್ಯೆಯಿಂದ ಬಳಲುವವರಿಗೆ ಚಿಕಿತ್ಸೆ ಕೊಡಿಸಬೇಕು
- ‘ಕುಡುಕ’ ಎಂಬ ಪದ ನಿಷೇಧಿಸಿ ಮದ್ಯ ಪ್ರಿಯರು ಎಂದು ಮಾಡಬೇಕು
- ಒಬ್ಬರಿಗೆ ಒಂದು ಕ್ವಾರ್ಟರ್ ನಿಗದಿ ಮಾಡಬೇಕು
- ಬಾರ್ಗಳಲ್ಲಿ ಸ್ವಚ್ಛತೆ ಕಾಪಾಡಬೇಕು
- ಬಾರ್ಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು
- ಮದ್ಯಪ್ರಿಯರ ಭವನ ಸ್ಥಾಪಿಸಬೇಕು
- ಡಿಸೆಂಬರ್ 31 ಮದ್ಯಾಪನ ಪ್ರಿಯರ ದಿನ ಎಂದು ಘೋಷಣೆ ಮಾಡಬೇಕು
- ಮದ್ಯ ಸೇವಿಸಿ ಮೃತಪಟ್ಟರೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು
- ಮದ್ಯಪಾನ ಪ್ರಿಯರ ಕುಟುಂಬದಲ್ಲಿ ವಿವಾಹವಾದರೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು
ಹೀಗೆ ವಿವಿಧ ಬೇಡಿಕೆಗಳನ್ನು ಮದ್ಯ ಪ್ರಿಯರು ಸಚಿವ ಸಂತೋಷ್ ಲಾಡ್ ಮುಂದಿಟ್ಟಿದ್ದಾರೆ. ಮದ್ಯಪ್ರಿಯರ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಸಂತೋಷ್ ಲಾಡ್ ಭರವಸೆ ನೀಡಿದ್ದಾರೆ.
Liquor lovers protest at Suvarna Soudha “Alcohol lovers not drunkards” many demands: Minister Lad surprise
Belgaum: On the one hand, the Legislature session is going on in Belagavi Suvarnasoudha, on the other hand, various organizations have protested near Suvarnasoudha demanding the fulfillment of various demands. In the meantime, Madhyapriyas have also protested and demanded to meet many demands. Karnataka Liquor Lovers’ Struggle Association has protested near Suvarnasoudha, and Labor Minister Santosh Lad, who visited the place of protest of alcoholics, was shocked to hear the plea of Madhyapriyas. He also smiled
The demands put forward by Alcohol lovers are acceptable to the people, so what are their demands before the Minister!? The demands are as follows.
- A welfare fund for alcoholics should be established
- 10 percent of the income from the sale of liquor should be earmarked
- People suffering from liver problems should be treated
- The word ‘drunkard’ should be banned and it should be called alcohol lovers
- One quarter should be allotted to one
- Bars should be kept clean
- Ambulance should be arranged near the bars
- A house for alcoholics should be established
- Dec 31 should be declared as Alcohol Lover’s Day
- A compensation of 10 lakh rupees should be announced in case of death due to alcohol consumption
- Two lakh rupees if married in a family of alcoholics. Encouragement should be given
ಪ್ರಯಾಣಿಕರ ಗಮನಕ್ಕೆ ಡಿ. 14ರಿಂದ 18 ರವರೆಗೆ 2 ಗಂಟೆಯಿಂದ ರಾತ್ರಿ 8ರ ಸಮಯದಲ್ಲಿ ಓಡಾಡುವ ಬೆಂಗಳೂರು-ಮಂಗಳೂರು ರೈಲು ಸೇರಿದಂತೆ ಕೆಲವು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದು
ಬೆಂಗಳೂರು: ಮಂಗಳೂರು- ಬೆಂಗಳೂರು ನಡುವೆ ಕಾರ್ಯಾಚರಿಸುತ್ತಿರುವ ರೈಲುಗಳ ಪೈಕಿ ಕೆಲವು ರೈಲುಗಳ ಸಂಚಾರವನ್ನು ಡಿಸೆಂಬರ್ 14 ರಿಂದ ಡಿಸೆಂಬರ್ 22 ರ ವರೆಗೆ ರದ್ದು ಪಡಿಸಲಾಗಿದೆ.
ಹಾಸನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಯಾರ್ಡ್ ಮರು ನಿರ್ಮಾಣಕ್ಕೆ ಅನುಕೂಲವಾಗುವಂತೆ ಡಿ. 14ರಿಂದ 18 ರವರೆಗೆ ಇಂಟರ್ ಲಾಕಿಂಗ್ ಹಾಗೂ ಡಿ. 19 ರಿಂದ 22 ರವರೆಗೆ ಪುನರ್ ನಿರ್ಮಾಣ ಕಾಮಗಾರಿಯನ್ನು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಂಡಿದ್ದು, ಹಾಗಾಗಿ ಈ ಸಮಯದಲ್ಲಿ ಓಡಾಡುವ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟನೆ ತಿಳಿಸಿದೆ. ಬೆಂಗಳೂರು-ಕಣ್ಣೂರು-ಬೆಂಗಳೂರು ಪಂಚಗಂಗಾ ಎಕ್ಸ್ ಪ್ರೆಸ್ ಮತ್ತು ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್ ಪ್ರೆಸ್ ರೈಲನ್ನು ಡಿ. 16 ರಿಂದ 20 ರ ವರೆಗೆ, ಯಶವಂತಪುರ- ಮಂಗಳೂರು ಜಂಕ್ಷನ್ ಗೋಮಟೇಶ್ವರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ಡಿ.14, 17, 19 ಮತ್ತು 21 ರಂದು ರದ್ದು ಪಡಿಸಲಾಗಿದೆ. ಹಾಗೆಯೇ ಯಶವಂತಪುರ-ಕಾರವಾರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ಡಿ.15, 18, 20 ಮತ್ತು 22 ರಂದು, ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ಡಿ.16 ರಂದು, ಮಂಗಳೂರು ಜಂಕ್ಷನ್- ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ಸ್ ರೈಲನ್ನು ಡಿ.17 ರಂದು ರದ್ದು ಮಾಡಲಾಗಿದೆ. ಈ ಅವಧಿಯಲ್ಲಿ ಬೆಂಗಳೂರು- ಮಂಗಳೂರು ಸಂಪರ್ಕಿಸುವ ಏಕೈಕ ರೈಲು ಸಂಖ್ಯೆ 16585/16586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್- ಬೆಂಗಳೂರು- ಮುರುಡೇಶ್ವರ ರೈಲು ಡಿ.14 ರಿಂದ 16 ರವರೆಗೆ ಯಶವಂತಪುರ ಬೈಪಾಸ್, ನೆಲಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಮೂಲಕ ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಮೂಲಕ ಚಲಿಸಲಿದೆ. ಡಿ.17 ರಿಂದ 22 ರವರೆಗೆ ಮೈಸೂರು ಮಾರ್ಗವನ್ನು ಹೊರತುಪಡಿಸಿ ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ ಮತ್ತು ಹಾಸನ ಮೂಲಕ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟನೆ ವಿವರಿಸಿದೆ.
ಎಸ್.ಡಿ.ಪಿ.ಐ ನಗರಸಭಾ ಸದಸ್ಯ ಸಮೀ ಉಲ್ಲಾ ವಿರುದ್ಧ ಕ್ರಮಕ್ಕೆ ಪೋಲಿಸ್ ದೂರು
ಕೋಲಾರ,ಡಿ.14: ಎಸ್.ಡಿ.ಪಿ.ಐ ನಗರಸಭಾ ಸದಸ್ಯ ಸಮೀ ಉಲ್ಲಾ ಉರುಫ್ ಬೋಟು ಅವರು ನನಗೆ ಪ್ರಾಣ ಬೆದರಿಕೆ ಹಾಕಿರುವುದರಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಸೈಯದ್ ಇಬ್ರಾಹಿಂ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಷಹೀನ್ ಷಾ ನಗರದ ನಿವಾಸಿಯಾದ ರುಕ್ಸಾರ್ ತಾಜ್ ಕೋಂ.ಮೆಹಬುಬ್ ಬೇಗ್ ರವರ ಮೇಲೆ ಎಸ್.ಡಿ.ಪಿ.ಐ ನಗರಸಭಾ ಸದಸ್ಯ ಸಮೀ ಉಲ್ಲಾ ಉರುಫ್ ಬೋಟು ಮತ್ತು ಇವರ ಕುಟುಂಬದವರು ಕ್ಷುಲ್ಲಕ ವಿಚಾರಕ್ಕೆ ಇವರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ರುಕ್ಸಾರ್ ತಾಜ್ ರವರು ತಮಗೆ ಆದ ದೌರ್ಜನ್ಯದ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ನೀಡಲು ಹಾಗು ಹಲ್ಲೆ ಮಾಡಿರುವುದನ್ನು ಯೂಟ್ಯೂಬ್ನಲ್ಲಿ ಅಪ್ ಲೋಡ್ ಮಾಡುವ ಬಗ್ಗೆ ಯಾರಾದರು ಪರಿಚಯ ಇರುವವರನ್ನು ತಿಳಿಸಿ ಎಂದು ನನಗೆ ಕೋರಿದ್ದು, ಅದರಂತೆ ಇವರಿಗೆ ಅನುಕೂಲವಾಗಲೆಂದು ನಾನು ಯೂಟ್ಯೂಬ್ ಅಪಲೋಡ್ ಮಾಡುವ ವ್ಯಕ್ತಿಯನ್ನು ರುಕ್ಸಾರ್ ತಾಜ್ ಅವರಿಗೆ ಪರಿಚಯಿಸಿಕೊಟ್ಟಿರುವೆ.
ನಂತರ ನಗರಸಭಾ ಸದಸ್ಯ ಸಮೀ ಉಲ್ಲಾ ಉರುಫ್ ಚೋಟು ರವರು ಮೇಲ್ಕಂಡವರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಯೂ ಟ್ಯೂಬ್ನಲ್ಲಿ ಅಪಲೋಡ್ ಆಗಿದ್ದು, ಇದರಿಂದ ಕೆರಳಿದ ಎಸ್.ಡಿ.ಪಿ.ಐ. ನಗರಸಭಾ ಸದಸ್ಯ ಸಮೀ ಉಲ್ಲಾ ಉರುಫ್ ಚೋಟುರವರು ನನ್ನ ಮನೆಯ ಬಳಿ ನನ್ನ ಮೇಲೆ ಹಲ್ಲೆ ನಡೆಸಲು ಬಂದಿದ್ದು, ನಾನು ಮನೆಯಲ್ಲಿ ಇಲ್ಲದೇ ಇದ್ದು, ಈ ವ್ಯಕ್ತಿಯು ನನ್ನ ಮೊಬೈಲ್ಗೆ ಬೇರೆ ಬೇರೆ ನಂಬರ್ಗಳಿಂದ ಕರೆ ಮಾಡಿ ನೀನು ನನ್ನ ಕೈಗೆ ಸಿಕ್ಕಿದ ಕೂಡಲೇ ನಿನ್ನನ್ನು ಮುಗಿಸಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ ಹಾಗೂ ನೀನು ಕೂಡಲೇ ರುಕ್ಸಾರ್ ತಾಜ್ ರವರು ಇವರ ವಿರುದ್ಧ ನೀಡಿರುವ ದೂರನ್ನು ವಾಪಸ್ಸು ತೆಗೆದುಕೊಳ್ಳುವಂತೆ ಮಾಡಬೇಕು ಇಲ್ಲವಾದಲ್ಲಿ ನೀನು ಈ ಏರಿಯಾದಲ್ಲಿ ಹೇಗೆ ಓಡಾಡುತ್ತೀಯ ನೋಡುತ್ತೇನೆ ಎಂದು ಪ್ರಾಣ ಬೆದರಿಕೆ ಒಡ್ಡಿರುತ್ತಾನೆ.
ಆದ ಕಾರಣ ತಾವುಗಳು ದಯಮಾಡಿ ಎಸ್.ಡಿ.ಪಿ.ಐ. ನಗರಸಭಾ ಸದಸ್ಯ ಸಮೀ ಉಲ್ಲಾ ಉರುಫ್ ಚೋಟು ಮತ್ತು ಇವರ ಕುಟುಂಬದವರು ಹಾಗೂ ಅಪ್ಸರ್ ಮೊಬೈಲ್ ನಂ 9738401678, 8553983724 ರವರನ್ನು ಠಾಣೆಗೆ ಕರೆಯಿಸಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನನಗೆ ಇವರಿಂದ ರಕ್ಷಣೆ ಕೊಡಿಸಿಕೊಡಬೇಕೆಂದು ಕೋರಿದ್ದಾರೆ.
ಶ್ರೀನಿವಾಸಪುರ:ವಿಧ್ಯಾರ್ಥಿಗಳಿಗೆ ವಿದ್ಯುತ್ ಸುರಕ್ಷತೆ ಕುರಿತು ಪ್ರಬಂಧ
ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಉಪ ವಿಭಾಗದಿಂದ ವಿಧ್ಯಾರ್ಥಿಗಳಿಗೆ ವಿದ್ಯುತ್ ಸುರಕ್ಷತೆ ಕುರಿತು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಬೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯುತ್ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ವಿದ್ಯುತ್ ಸುರಕ್ಷತೆ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿ ವಿಭಾಗದಲ್ಲೂ 3 ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿದ್ಯುತ್ ಅವಘಡ ತಪ್ಪಿಸಲು ಬೆಸ್ಕಾಂನೊಂದಿಗೆ ಸಹಕರಿಸಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲೇ ಆದರೂ ವಿದ್ಯುತ್ ತಂತಿಗಳು ಅಥವಾ ಕಂಬಗಳು ಅಪಾಯದ ಪರಿಸ್ಥಿತಿಯಲ್ಲಿ ಕಂಡುಬಂದರೆ ಪರಿಸ್ಥಿತಿಯಲ್ಲಿ ಕಂಡುಬಂದರೆ ವಿದ್ಯುತ್ ಇಲಾಖೆ ಗಮನಕ್ಕೆ ತರಬೇಕು. ತುಂಡಾಗಿ ನೆಲದ ಮೇಲೆ ವಿದ್ಯುತ್ ತಂತಿ ಬಿದ್ದಿದ್ದರೆ ಅದರಿಂದ ದೂರವಿದ್ದು, ಅದನ್ನು ಜನರು ತುಳಿಯದಂತೆ ಹೇಳಬೇಕು ಎಂದು ಹೇಳಿದರು.
ಜೆ ಇಇ ನಂಜುಂಡೇಶ್ವರ ಮಾತನಾಡಿ, ಈಗಾಗಲೆ ಚಿತ್ರಕಲಾ ಸ್ಪರ್ಧೆ ನಡೆಸಲಾಗಿದೆ. ಡಿ.22 ರಂದು ಮಧ್ಯಾಹ್ನ 12 ಗಂಟೆಗೆ ವಿದ್ಯುತ್ ಸುರಕ್ಷತೆ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಹೇಳಿದರು.
ಬಿಆರ್ಸಿ ವಸಂತ, ಉಪ ಪ್ರಾಂಶುಪಾಲ ಶ್ರೀಧರ್, ಬೆಸ್ಕಾಂ ಇನ್ಸ್ಪೆಕ್ಟರ್ ಸುದರ್ಶನ್, ಸಿಆರ್ಪಿ ನಟರಾಜ್, ಚನ್ನಪ್ಪ ಇದ್ದರು.
ಇಂದು ಮತ್ತು ನಾಳೆ ಆಗಸದಲ್ಲಿ ಉಲ್ಕೆಗಳ ವರ್ಷಧಾರೆ – ಆಕಾಶದಲ್ಲಿ ಖಗೋಳ ಕೌತುಕ
ಉಡುಪಿ, ಡಿ. 14 : ಇಂದು ಮತ್ತು ನಾಳೆ ಆಗಸದಲ್ಲಿ ಉಲ್ಕೆಗಳ ವರ್ಷಧಾರೆ ಡಿಸೆಂಬರ್ 14 ಮತ್ತು 15 ರಾತ್ರಿ ಸಂಭವಿಸುತ್ತೆ ಖಗೋಳ ಕೌತುಕ ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ ಅಪರೂದ ಉಲ್ಕಾಪಾತ ಮಿಥುನ ರಾಶಿಯಿಂದ ಚಿಮ್ಮುವ ಜೆಮಿನಿಡ್ ಉಲ್ಕಾಪಾತ ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸುತ್ತೆ ಆದರೆ ಎಲ್ಲವೂ ಚೆನ್ನಾಗಿರುವುದಿಲ್ಲ ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ ಆದರೆ ಇಂದು ಸುಮಾರು ಗಂಟೆಗೆ ನೂರಕ್ಕಿಂತಲೂ ಉಲ್ಕೆಗಳ ದರ್ಶನ ಬಣ್ಣ ಬಣ್ಣದ ಉಲ್ಕೆಗಳನ್ನು ನೋಡಿ ಆನಂದಿಸುವ ಅವಕಾಶ ಉಲ್ಕೆಗಳು ಹೆಚ್ಚಾಗಿ ಸೂರ್ಯನ ಸುತ್ತುವ ಧೂಮಕೇತುಗಳ ಧೂಳು ಆದರೆ ಇಂದಿನ ಜೆಮಿನಿಡ್ ಹಾಗಲ್ಲ, ದೀರ್ಘ ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುವ ಅಪರೂಪ ವಿದ್ಯಮಾನ 6 ಕಿಮೀ ಗಾತ್ರದ ಕಲ್ಲುಂಡೆಯ 3200 ಪೇಥಾನ್ ಆಸ್ಟೆರೈೂಯ್ಡ್ ನ ಧೂಳು. ಗುರುವಾರ ರಾತ್ರಿ ಸುಮಾರು 1 ಗಂಟೆಗೆ ಕಾಣಲವೆ ಉಲ್ಕೆಗಳು ನಡು ನೆತ್ತಿಗೆ ಬರುವ ಮಿಥುನ ರಾಶಿಯಿಂದ ಗಂಟೆಗೆ 120 ಉಲ್ಕೆಗಳು ಬೇರೆಲ್ಲಾ ಉಲ್ಕಾಪಾತಗಳಿಗಿಂತ ಇದು ವಿಭಿನ್ನ ಇಂದು ಎಲ್ಲಾ ಬಣ್ಣಗಳ ಉಲ್ಕೆಗಳನ್ನೂ ನೋಡಬಹುದು ಬಿಳಿ , ಕೆಂಪು , ಹಳದಿ , ಹಸಿರು ಹಾಗೂ ನೀಲಿ ಬಣ್ಣದ ಉಲ್ಕೆಗಳು ಭೂ ವಾತಾವರಣದಿಂದಾಗಿ ಸುಮಾರು 60 – 70 ಕಿಮಿ ಎತ್ತರದ ಆಕಾಶದಲ್ಲಿ ನಡೆಯುವ ವಿದ್ಯಮಾನ
ಈ ಧೂಳಿನ ಕಣಗಳು ಘರ್ಷಣೆಯಿಂದ ಉರಿದು ಹೋಗುತ್ತವೆ.
ಅನುದಾನ ವ್ಯರ್ಥವಾಗದಂತೆ ನಿಗದಿತ ಗುರಿಯನ್ನು ಸಾಧಿಸಿ – ಜಿಲ್ಲಾಧಿಕಾರಿ ಅಕ್ರಂ ಪಾಷ
ಕೋಲಾರ : ಇಲಾಖೆಗಳಿಗೆ ನಿಗಧಿಪಡಿಸಲಾಗಿರುವ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿಯಲ್ಲಿ ನೀಡಲಾಗಿರುವ ಗುರಿ ಸಾಧಿಸಿ ಆಯಾ ಸಮುಧಾಯದವರಿಗೆ ಲಭ್ಯವಾಗಬೇಕಾದ ಸೌಲಭ್ಯಗಳನ್ನು ತಲುಪಿಸುವುದು ಪ್ರತಿಯೊಬ್ಬ ಇಲಾಖೆಯ ಅಧಿಕಾರಿಗಳ ಜವಬ್ದಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಣದಲ್ಲಿ ನಿಗಧಿಪಡಿಸಲಾಗಿದ್ದ 2023-24ನೇ ಸಾಲಿನ ವಿವಿಧ ಇಲಾಖೆಗಳಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ 2023-ನವೆಂಬರ್ ಅಂತ್ಯಕ್ಕೆ ವೇಳೆಗೆ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಿಗಧಿಪಡಿಸಲಾಗಿರುವ ಯೋಜನೆಯಡಿ ಎಲ್ಲಾ ಇಲಾಖೆಗಳಲ್ಲಿ ಬರುವ ಸೌಲಭ್ಯಗಳನ್ನು ನಿಗಧಿತ ಸಮುಧಾಯಗಳಿಗೆ ತಲುಪುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಸರ್ಕಾರದ ನಿರೀಕ್ಷೆಗಳಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ತಮ್ಮ ಇಲಾಖೆಯ ಮುಖ್ಯಸ್ತರು ನಿಗಧಿಪಡಿಸಿರುವ ಗುರಿಯನ್ನು ಸಾಧಿಸಲು ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಪ್ರಸ್ತುತ 2023ನೇ ಸಾಲಿನ ನವೆಂಬರ್ ಅಂತ್ಯದ ವೇಳೆಗೆ ವಿವಿಧ ಇಲಾಖೆಗಳಿಂದ ನಿಗಧಿಪಡಿಸಿರುವ ಗುರಿಗಳಿಗೆ ವಿಶೇಷ ಘಟಕ ಯೋಜನೆಯಡಿ ಜಿಲ್ಲೆಗೆ ಒಟ್ಟು 16739.33 ಲಕ್ಷಗಳು ಹಂಚಿಕೆಯಾಗಿದ್ದು, ಒಟ್ಟು 811.89 ಲಕ್ಷಗಳು ಬಿಡುಗಡೆಯಾಗಿರುತ್ತದೆ.
ಗಿರಿಜನ ಉಪ ಯೋಜನೆಯಡಿಯಲ್ಲಿ ಒಟ್ಟು 5018.94 ಲಕ್ಷಗಳು ಹಂಚಿಕೆಯಾಗಿದ್ದು, ಒಟ್ಟು 1553.51 ಲಕ್ಷಗಳು ಬಿಡುಗಡೆಯಾಗಿರುತ್ತದೆ. ಈ ಪೈಕಿ 2023 ನವೆಂಬರ್ ಅಂತ್ಯದ ವೇಳೆಗೆ ವಿಶೇಷ ಘಟಕ ಯೋಜನೆಯಡಿ ಶೇ.71 ಹಾಗೂ ಗಿರಿಜನ ಉಪಯೋಜನೆಯಡಿ ಶೇ.68 ಮೊತ್ತದ ಅನುದಾನ ವೆಚ್ಚ ಮಾಡಲಾಗಿದೆ. ಪ್ರಸ್ತುತ 3ನೇ ತ್ರೈಮಾಸಿಕದ ಅನುದಾನದ ಬಿಡುಗಡೆಯಾಗಿದ್ದು, ಶೀಘ್ರವಾಗಿ ಶೇ.100 ರಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಮೂಲಕ ರಾಜ್ಯದ ಪ್ರಗತಿಯಲ್ಲಿ ಜಿಲ್ಲೆಯ ಸಾಧನೆಯು ಉನ್ನತ ಮಟ್ಟ ತಲುಪುವಂತೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್, ಕೃಷಿ ಜಂಟಿ ನಿರ್ದೇಶಕಿ ಸುಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಸೌಮ್ಯ ವರ್ಣಿಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ, ತೋಟಗಾರಿಕ ಉಪನಿರ್ದೇಶಕರಾದ ಕುಮಾರಸ್ವಾಮಿ, ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೋಲಾರ: ಜಿಲ್ಲಾಧಿಕಾರಿಗಳು ಕೋಲಾರ ನಗರದ ಶ್ರೀ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಕಾಮಗಾರಿ ಪ್ರಗತಿ ಪರಿಶೀಲನೆ
ಕೋಲಾರ: ಜಿಲ್ಲಾಧಿಕಾರಿಗಳು ಕೋಲಾರ ನಗರದ ಶ್ರೀ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕ್ರೀಡಾ ಇಲಾಖಾಧಿಕಾರಿಗಳಾದ ಗೀತಾ, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಮುನಿಯಪ್ಪ ಪ್ರದಾನ ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ,ಹಿರಿಯ ಕ್ರೀಡಾ ಪಟು ಹೆಚ್. ಜಗನ್ನಾಥನ್,ಕಾರ್ಯದರ್ಶಿ ರಾಜೇಶ್ ಬಾಬು,ಕೋಚ್ ಎಂ.ವೆಂಕಟೇಶ್ ಅವರು ಜಿಲ್ಲಾಧಿಕಾರಿಗಳಿಗೆ ಸ್ಟೇಡಿಯಂ ಬಗ್ಗೆ ಮಾಹಿತಿ ನೀಡಿ ಶೀಘ್ರವೇ ಕಾಮಗಾರಿಗಳನ್ನು ಪೂರ್ಣ ಗೊಳಿಸಿ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಇಲಾಖಾ ಮುಖ್ಯಸ್ತರು ನೀಡಿರುವ ಗುರಿಯನ್ನು ನಿಗಧಿತ ಅವಧಿಯೊಳಗೆ ಸಾಧಿಸಬೇಕು: ಜಿಲ್ಲಾಧಿಕಾರಿ ಅಕ್ರಂ ಪಾಷ
ಕೋಲಾರ: ಕಾರ್ಯ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಇಲಾಖಾ ಮುಖ್ಯಸ್ತರು ನೀಡಿರುವ ಗುರಿಯನ್ನು ನಿಗಧಿತ ಅವಧಿಯೊಳಗೆ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ನ್ಯಾಯಾಂಗ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಸರ್ಕಾರವು ವಿವಿಧ ಕಾರ್ಯಕ್ರಮಗಳಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೋಲಾರ ಜಿಲ್ಲೆಯಲ್ಲಿ ಒಟ್ಟು 229492 ಅಲ್ಪಸಂಖ್ಯಾತರಿದ್ದು, ಜನಗಣತಿಯ ಆಧಾರದ ಮೇಲೆ ಶೇ. 14.93 ರಷ್ಟು ವಾಸವಿರುತ್ತಾರೆ.
ಜಿಲ್ಲೆಯಲ್ಲಿ ಗಾಜಲದಿನ್ನೆ ಮತ್ತು ಬಾಲಸಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 2 ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಒಟ್ಟು 493 ವಿದ್ಯಾರ್ಥಿಗಳು, ಮೌಲನಾ ಅಜಾದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 582 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ. ಒಟ್ಟು ಜಿಲ್ಲೆಯಲ್ಲಿ 6 ಅಲ್ಪಸಂಖ್ಯಾತರ ಮೇಟ್ರಿಕ್ ನಂತರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಒಟ್ಟು 219 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ. ಅಲ್ಪಸಂಖ್ಯಾತರ ಮಾದರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 2 ವಸತಿ ಶಾಲೆಗಳು ಕೆ.ಜಿ.ಎಫ್, ಶ್ರೀನಿವಾಸಪುರ 1 ವಸತಿ ಶಾಲೆಯಲ್ಲಿ ಶೇ.100 ರಷ್ಟು ಮುಳಬಾಗಿಲು ಹಾಗೂ ಬಂಗಾರಪೇಟೆ ವಸತಿ ಶಾಲೆಗಳು 96.86 ಶೇ ಪಲಿತಾಂಶವನ್ನು ಪಡೆದಿರುತ್ತಾರೆ. ಈ ವಿಷಯವು ಜಿಲ್ಲೆಗೆ ಹೆಮ್ಮೆ ತರುವಂತ ವಿಷಯವಾಗಿದೆ. ಗ್ರಾಮೀಣ ಭಾಗದಲ್ಲಿ ವಸತಿ ನಿಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಹೆಚ್ಚು ಪಲಿತಾಂಶಗಳನ್ನು ಪಡೆಯುವಲ್ಲಿ ಶ್ರಮವಹಿಸಬೇಕು ಎಂದರು.
ಮೇಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿಗಳ ಕೆ.ಜಿ.ಎಫ್, ಶ್ರೀನಿವಾಸಪುರ, ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕುಗಳಲ್ಲಿ ಒಟ್ಟು 5 ವಿದ್ಯಾರ್ಥಿ ನಿಲಯಗಳು ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಅಗತ್ಯ ನಿವೇಶನ ನೀಡುವುದಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ ಹಾಗೂ ನಗರಸಭೆ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ, ರೇಷ್ಮೆ ಇಲಾಖೆ, ಪಶು ಪಾಲನ ಇಲಾಖೆ, ಮೀನುಗಾರಿಕೆ ಇಲಾಖೆ, ಎಲ್ಲಾ ತಾಲ್ಲೂಕು ಪಂಚಾಯಿತಿಗಳಲ್ಲಿ ಅಲ್ಪಸಂಖ್ಯಾತರ ಯೋಜನೆಯಡಿ ಬರುವ ಎಲ್ಲಾ ಇಲಾಖೆಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಿ ಆಯಾ ಇಲಾಖೆಗಳಿಗೆ ನಿಗಧಿಪಡಿಸಲಾಗಿರುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಗಮನಹರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಮುರಳಿ, ಕೃಷಿ ಜಂಟಿ ನಿರ್ದೇಶಕಿ ಸುಮ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್, ತೋಟಗಾರಿಕ ಉಪನಿರ್ದೇಶಕರಾದ ಕುಮಾರಸ್ವಾಮಿ, ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.