ಶ್ರೀನಿವಾಸಪುರ: ಪದ್ಮಾ ಬಸವಂತಪ್ಪ, ಐ.ಎ.ಎಸ್ ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳೊಂದಿಗೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಮುದುವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅನಿರೀಕ್ಷಿತ ಭೇಟಿ ನೀಡಿ ಶಾಲಾ ಕಟ್ಟಡದ ಸುಸ್ಥಿತಿ ಪರಿಶೀಲಿಸಿ, ಶಿಕ್ಷಕರು ಹಾಗೂ ಮಕ್ಕಳೊಂದಿಗೆ ವಿದ್ಯಾಭ್ಯಾಸ ಹಾಗೂ ಚಟುವಟಿಕೆಗಳ ಕುರಿತು ಚರ್ಚಿಸಿದರು.
Month: November 2023
ಕಂದಾಯ ಇಲಾಖೆ ಜಮೀನು ಸರ್ವೆ ಮಾಡಿ , ಜಮೀನು ವಿವಾದ ಪರಿಹರಿಸಿ ಫಲಾನುಭವಿಗಳಿಗೆ ಖಾತೆ ಮಾಡಿ ಕೊಡಬೇಕು ಜನತಾ ದರ್ಶನ ಕಾರ್ಯಕ್ರಮದಲ್ಲಿ-ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಕಂದಾಯ ಇಲಾಖೆ ಜಮೀನು ಸರ್ವೆ ಕಾರ್ಯ ಕೈಗೊಂಡು, ಜಮೀನು ವಿವಾದ ಪರಿಹರಿಸಬೇಕು. ಸಾಗುವಳಿ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಖಾತೆ ಮಾಡಿಕೊಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಂದಾಯ ಅದಾಲತ್ ನಡೆಸಬೇಕು. ಪುರಸಭೆ ವ್ಯಾಪ್ತಿಯಲ್ಲಿ ಖಾತಾ ಅದಾಲತ್ ನಡೆಸಿ ಅರ್ಹ ಫಲಾನುಭವಿಗಳಿಗೆ ಖಾತೆ ಮಾಡಿಕೊಡಬೇಕು ಎಂದು ಹೇಳಿದರು.
ಜಲ ಜೀವನ ಮಿಷನ್ ಯೋಜನೆಯಡಿ ರೂ.350 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡಲಾಗುವುದು. ರೂ.40 ಕೋಟಿ ವೆಚ್ಚದಲ್ಲಿ ಶ್ರೀನಿವಾಸಪುರ – ಕೋಲಾರ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ರೂ.20 ಕೋಟಿ ವೆಚ್ಚಮಾಡಲಾಗುವುದು. 2000 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಕ್ಷೇತ್ರ ಸ್ಥಾಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವಜನಿಕರು ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಂದಾಯ ಇಲಾಖೆ ಕಾರ್ಯ ಚಟುವಟಿಕೆ ಚುರುಕುಗೊಳಿಸಲಾಗಿದೆ. 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ತಿಂಗಳಲ್ಲಿ ಎರಡು ಸಲ ಜನಸಂಪರ್ಕ ಸಭೆ ನಡೆಸಲಾಗುವುದು. ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಬೇಕು. ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಪೌತಿ ಖಾತೆ ಮಾಡಿಕೊಡಲು ಸೂಚಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸಂತಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆ ಪಾಲನೆಗೆ ಆದ್ಯತೆ ನೀಡಬೇಕು. ಬರ ಪರಿಸ್ಥಿತಿ ಇರುವುದರಿಂದ ಅರ್ಹ ಫಲಾನುಭವಿಗಳು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಯದ್ಯೋಗ ಖಾತ್ರಿ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ಇಲಾಖೆಗಳಲ್ಲಿ ದೊರೆಯು ಸೌಲಭ್ಯಗಳ ಮಾಹಿತಿ ನೀಡಿದರು. ಸೌಲಭ್ಯಗಳ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 102 ಅರ್ಜಿ ಸ್ವೀಕರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕಲ್, ಉಪ ವಿಭಾಗಾಧಿಕಾರಿ ಎಚ್.ಎಸ್.ವೆಂಕಟಲಕ್ಷ್ಮಿ, ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಭಾಗ್ಯಲಕ್ಷ್ಮಿ, ಉಪ ತಹಶೀಲ್ದಾರ್ ಕೆ.ಎನ್.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ, ಕೃಷಿ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಎ.ಬೈರಾರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಯಾನಂದ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ನಾರಾಯಣಸ್ವಾಮಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಷರೀಫ್, ಬಿ.ಎಸ್.ರೋಹಿತ್ ಗುರುರಾಜರಾವ್, ಹರಿ. ರೋಹಿತ್ ಇದ್ದರು.
ನ.17 ರಂದು ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ – ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಪಟ್ಟಣದ ಮಾರುತಿ ಸಭಾ ಭವನದಲ್ಲಿ ನ.17 ರಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಮಟ್ಟದ ಜನತಾ ದರ್ಶನ ಸಕರ್ಾರದ ಮಹತ್ವಪೂರ್ಣ ಕಾರ್ಯಕ್ರಮವಾಗಿದ್ದು, ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆ ಕಲ್ಪಿಸುತ್ತದೆ ಎಂದು ಹೇಳಿದರು.
ತಾಲ್ಲೂಕಿನ ಎಲ್ಲ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು. ತಮ್ಮ ಇಲಾಖೆಗಳಿಂದ ಫಲಾನುಭವಿಗಳಿಗೆ ದೊರೆಯುವ ಅನುಕೂಲಗಳ ಮಾಹಿತಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕಾರ್ಯಕ್ರಮಕ್ಕೆ ಗೈರು ಹಾಜರಾಗಬಾರದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಭಾಗ್ಯಲಕ್ಷ್ಮಿ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿದರ್ೇಶಕ ಎಂ.ಶ್ರೀನಿವಾಸನ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ನಾರಾಯಣಸ್ವಾಮಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್ ಕುಮಾರ್ ಇದ್ದರು.
ನ. 30 ರಂದು ಅದ್ದೂರಿಯಾಗಿ ಕನಕ ಜಯಂತಿ ಆಚರಣೆ – ಜಿಲ್ಲಾಧಿಕಾರಿ ಅಕ್ರಂ ಪಾಷ
ಕೋಲಾರ : ಜಿಲ್ಲಾಡಳಿತದ ವತಿಯಿಂದ ನವೆಂಬರ್ 30 ರಂದು ಕನಕದಾಸರ ಜಯಂತಿ ಕಾರ್ಯಕ್ರಮವನ್ನು ನಗರದ ಚನ್ನಯ್ಯ ರಂಗಮಂದಿರದ ಆವರಣದಲ್ಲಿ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಾಸ ಶ್ರೇಷ್ಠ ಕನಕದಾಸ ಜಯಂತಿ ಅಂಗವಾಗಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಮುದಾಯದ ಮುಖಂಡರ ಸಲಹೆಗಳನ್ನು ಆಲಿಸಿ ಅವರು ಮಾತನಾಡಿದರು. ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನೂ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಅನುಸರಿಸಿಕೊಂಡು.
ಅರ್ಥಪೂರ್ಣವಾಗಿ ಜಿಲ್ಲೆಯಲ್ಲಿ ಆಚರಿಸಬೇಕಿದೆ. ಕಾರ್ಯಕ್ರಮದ ದಿನದಂದು ನಗರದ ಕನಕ ಮಂದಿರದ ಮುಂಭಾಗದಿಂದ ಬೆಳಿಗ್ಗೆ 10:30 ಗಂಟೆಗೆ ಮೆರವಣಿಗೆಗೆ ಚಾಲನೆ ನೀಡಲು ನಿರ್ಣಯ ಕೈಗೊಳ್ಳಲಾಯಿತು. ನಂತರ ವೇದಿಕೆ ಕಾರ್ಯಕ್ರಮ ನಡೆಯುವ ಚನ್ನಯ್ಯ ರಂಗಮಂದಿರದವರೆಗೆ ಕಲಾತಂಡಗಳು ಹಾಗೂ ಸ್ಥಬ್ದಚಿತ್ರಗಳ ಪಲ್ಲಕ್ಕಿಗಳೊಂದಿಗೆ ಮೆರವಣಿಗೆ ಜರುಗಲಿದೆ.
ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಿ, ಸಮಿತಿ ಮುಖ್ಯಸ್ಥರಿಗೆ ಕಾರ್ಯಭಾರ ಹಂಚಿಕೆ ಮಾಡಿದರು. ಜೊತೆಗೆ ಜಯಂತಿ ಆಚರಣೆಯ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ ಯಶಸ್ವಿಯಾಗಿಸಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಜಿಲ್ಲೆಯಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ಕನಕ ಭವನದಲ್ಲಿ ಸಮುದಾಯದ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವುದು. 3.00 ಕೋಟಿಗಳ ವೆಚ್ಚದಲ್ಲಿ ಕನಕ ಭವನ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವೇದಿಕೆ ಕಾರ್ಯಕ್ರಮದಲ್ಲಿ ದಾಸ ಶ್ರೇಷ್ಠ ಕನಕದಾಸರ ವಿಚಾರದಾರೆಗಳ ಕುರಿತು ಉಪನ್ಯಾಸ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮುದಾಯದಲ್ಲಿ ಸಾಧನೆ ಗೈದ ಸಮುದಾಯದ ಸಾಧಕರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ಸಮುದಾಯದ ಮುಖಂಡರುಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಹೋಲಿ ರೋಸರಿ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕ ಕ್ರಿಡೋತ್ಸವ : ಜ್ಞಾನಕ್ಕೆ ಶಾಲೆ, ಆರೋಗ್ಯಕ್ಕೆ ಕ್ರೀಡಾ ಮೈದಾನ ಅಗತ್ಯ:ರವೀಂದ್ರ ನಾಯ್ಕ್
ಕುಂದಾಪುರ, ನ.17: ಹೋಲಿ ರೋಸರಿ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕ ಕ್ರಿಡೋತ್ಸವವು ನವೆಂಬರ್ 17 ರಂದು ಗಾಂಧಿ ಮೈದಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ್ಘ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರು ಸ್ಪರ್ಧಾಳುಗಳಿಂದ ಪಥಸಂಚಲನದ ಗೌರವನ್ನು ಸ್ವೀಕರಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ “ಜೀವನದಲ್ಲಿ ಶಿಕ್ಷಣ ಹೇಗೆ ಮುಖ್ಯವೊ, ಕ್ರೀಡೆಯು ಮುಖ್ಯ, ಎಲ್ಲಾ ಮಕ್ಕಳಿಗೆ ಕ್ರೀಡೆ ಅಂದರೆ ಬಹಳ ಇಷ್ಟ, ಇದನ್ನು ಜೀವನವಿಡಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಲಭ್ಯವಾಗುತ್ತೆ’ ಎಂದು ತಿಳಿಸಿದರು.
ಅತಿಥಿಗಳಾದ ಕ್ಷೇತ್ರ ಶಿಕ್ಷಣ. ಕಚೇರಿ ತಾಲೂಕು ದೈಹಿಕ ಶಿಕ್ಷಣ ಇಲಾಖೆಯ ಅಧಿಕಾರಿ ರವೀಂದ್ರ ನಾಯ್ಕ್ ಧ್ವಜ ರೋಹಣ ಮಾಡಿ “ಜ್ಞಾನಕ್ಕೆ ಶಾಲೆ ಮುಖ್ಯವಾದರೆ, ಆರೋಗ್ಯಕ್ಕೆ ಕ್ರೀಡಾ ಮೈದಾನ ಅಗತ್ಯ” ಎಂದು ತಿಳಿಸಿ “ನಿಮ್ಮ ಶಾಲೆಯ ಕ್ರೀಡೋತ್ಸವವು ಜಿಲ್ಲಾ ಮಟ್ಟದ ಕ್ರೀಡೋತ್ಸವದಂತೆ ಹಮ್ಮಿಕೊಂಡಿದ್ದಿರಿ, ಕ್ರೀಡಾ ತಂಡಗಳ ಪಥಸಂಚಲವಾಗಿದ್ದು ಉತ್ತಮವಾಗಿದು ನೋಡುಗರಿಗೆ ಸಂತೋಷ ತಂದಿದೆ, ವಿದ್ಯಾರ್ಥಿಗಳದೆ ಬ್ಯಾಂಡು ಪಥಸಂಚಲನಕ್ಕೆ ಮೀರುಗು ನೀಡಿತು” ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಇನ್ನೋರ್ವ ಅತಿಥಿ ಯುವ ಕ್ರೀಡಾ ಸಬಲೀಕರಣ ಅಧಿಕಾರಿ ಕುಸುಮಾಕರ ಶೆಟ್ಟಿ ಬೆಲುನಗಳನ್ನು ಹಾರಿಸಿಬಿಟ್ಟು “ಕ್ರೀಡೆ ಮನುಷ್ಯನಿಗೆ ಅಗತ್ಯವಾಗಿ ಬೇಕಿದೆ, ನಮ್ಮ ಆರೋಗ್ಯ ಮತ್ತು ನಮ್ಮ ದೇಹವನ್ನು ಗಟ್ಟಿಮ್ಮುಟ್ಟಾಗಿ ಇಡಲು’ ಅಗತ್ಯ ಎಂದು ತಿಳಿಸಿದರು. ಗೌರವ ಅತಿಥಿ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಪಾರಿವಾಳವನ್ನು ಹಾರಿಬಿಟ್ಟು ಕ್ರಿಡೋತ್ಸಕ್ಕೆ ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ಅತಿಥಿಗಳನ್ನು ಗೌರವಿಸಿದರು. ಶಾಲಾ ಕ್ರೀಡಾಳುಗಳಿಗೆ ಪ್ರಮಾಣ ವಚನ ಭೋದಿಸಿದರು.
ಕ್ರೀಡೋತ್ಸವನ್ನು ಸಂಘಟಿಸಿದ ಶಾಲಾ ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ, ಸಂತ ಮೇರಿ ಶಿಕ್ಷಣ ಸಂಸ್ಥೆಯ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕ್ರೀಡೋತ್ಸವಕ್ಕೆ ಸಹಕರಿಸಲು ಆಗಮಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಬೀಜಾಡಿ, ಶಾಂತಿ ರಾಣಿ ಬರೆಟ್ಟೊ, ಪ್ರಣಯ್ ಕುಮಾರ್, ಅರುಣ್ ಕುಮಾರ್ ಮತ್ತು ದೀಕ್ಷಿತ್ ಮೇಸ್ತ ಉಪಸ್ಥಿತರಿದ್ದರು. ಶಿಕ್ಷಕಿ ರಂಜಿತಾ ಸ್ವಾಗತಿಸಿದರು. ಶಿಕ್ಷಕಿ ಭಗಿನಿ ಸುನೀತಾ ವಂದಿಸಿದರು, ಶಿಕ್ಷಕಿ ನಿಖಿತಾ ನಿರೂಪಿಸಿದರು.
ರಾಜ್ಯ ಮಟ್ಟದ ಅಭಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಕುಂದಾಪುರ ಅಭಾಕಸ್ ಘಟಕಕ್ಕೆಗೆ ಹಲವಾರು ಬಹುಮಾನಗಳು
ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 18ನೇ ರಾಜ್ಯ ಮಟ್ಟದ ಅಭಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯು ಹಾಸನದಲ್ಲಿ ನಡೆಯಿತು . ರಾಜ್ಯ ವಿವಿಧ ಪ್ರದೇಶದಿಂದ ಸುಮಾರು 1600 ವಿದ್ಯಾರ್ಥಿಗಳು ವಗವಿಹಿಸದ್ದರು. ಇದರಲ್ಲಿ ಕುಂದಾಪುರ ಸೆಂಟರ್ ನ 67 ವಿದ್ಯಾರ್ಥಿಗಳಲ್ಲಿ 6 ಪ್ರಥಮ ಬಹುಮಾನ, 16 ದ್ವಿತೀಯ ಬಹುಮಾನ ಮತ್ತು 18 ತೃತಿಯ ಬಹುಮಾನ ವಿವಿಧ ವಿಭಾಗದಲ್ಲಿ ಪಡಿದ್ದಾರೆ. ಇವರಿಗೆ ಐಡಿಯಲ್ ಪ್ಲೇ ಅಭಾಕಸ್ ಕುಂದಾಪುರ ಸೆಂಟರ್ ನ ಬೋಧಕರಾದ ಮಹಾಲಕ್ಷ್ಮಿ, ದೀಪ, ಸುಜಾತಾ, ಸುನಿತಾ ಮತ್ತು ಸುಪ್ರಿತಾ ತರಭೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ನಿರ್ದೇಶಕರಾದ ಅಶೋಕ್ ಕಾಂಚನ ತಿಳಿಸರುತ್ತಾರೆ.
ಹಾಗೆ ಇದೆ ಸಂಸ್ಥೆಯ ಶಿಕ್ಷಕಿ ಸುಪ್ರಿತಾ ಮೊಗವೀರ ಅವರು ರಾಷ್ಟ್ರೀಯ ಮಟ್ಟದ ಶಿಕ್ಷಕರ ಅಭಾಕಸ್ ಕಾಂಪಿಟಿಷನ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ನಾಯಿ ಕಡಿದು ಮೃತಪಟ್ಟರೇ 5 ಲಕ್ಷ ರೂ, ಗಾಯಗೊಂಡರೆ 5 ಸಾವಿರ ರೂ. ಪರಿಹಾರ ನೀಡಬೇಕು- ಸರಕಾರಕ್ಕೆ ಉಚ್ಚ ನ್ಯಾಯಾಲಯದಿಂದ ಸೂಚನೆ
ಬೆಂಗಳೂರು : ನಾಯಿ ಕಡಿತದಿಂದ ಮೃತಪಟ್ಟರೇ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ನಾಯಿ ಕಡಿತದಿಂದ ಗಾಯಗೊಂಡವರಿಗೆ 5 ಸಾವಿರ ರೂ. ಮತ್ತು ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.ವಕೀಲ ರಮೇಶ್ ಎಲ್ ನಾಯಕ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆ ನಡೆಸಬೇಕು. 4 ವಾರದಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.ಬೀದಿ ನಾಯಿಗಳಿಗೆ ಆಹಾರ ನೀಡಲು ಮಾರ್ಗಸೂಚಿ ಪ್ರಕಟಿಸಲಾಗಿದೆ.
ಜನಸಾಮಾನ್ಯರಿಗೆ ಇದರ ತಿಳಿವಳಿಕೆ ನೀಡಲು ಕ್ರಮ ಕೈಗೊಳ್ಳಬೇಕು. ವಾರ್ತಾ, ಪ್ರಚಾರ ಇಲಾಖೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಹೇಳಿದೆ.
ಮಣಿಪುರ : ಜನಾಂಗೀಯ ಹಿಂಸಾಚಾರ ಕೇಂದ್ರ ಸರಾಕಾರದ ನಿರ್ಲಕ್ಷ್ಯದ ಆರೋಪ ಮಣಿಪುರದ 3 ಜಿಲ್ಲೆಗಳಲ್ಲಿ ‘ಸ್ವಯಂ ಆಡಳಿತ’ ಘೋಷಿಸಿದ ಬುಡಕಟ್ಟು ಸಮುದಾಯ
ಜನಾಂಗೀಯ ಹಿಂಸಾಚಾರ ಕೇಂದ್ರ ಸರಾಕಾರದ ದಿವ್ಯ ನಿರ್ಲಕ್ಷ್ಯದ ಪರಿಣಾಮ ಮಣಿಪುರದ 3 ಜಿಲ್ಲೆಗಳಲ್ಲಿ ‘ಸ್ವಯಂ ಆಡಳಿತ’ ಘೋಷಿಸಿದ ಬುಡಕಟ್ಟು ಸಮುದಾಯ
ಮಣಿಪುರದ ಕುಕಿ-ಜೋ ಸಮುದಾಯದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) 3 ಜಿಲ್ಲೆಗಳಲ್ಲಿ, ಸಮುದಾಯದ ಸದಸ್ಯರು ಸ್ವಯಂ ಆಡಳಿತವನ್ನು ಹೊಂದಿರಲಿದ್ದಾರೆ ಎಂದು ಘೋಷಿಸಿದ್ದಾರೆ.
ಐಟಿಎಲ್ಎಫ್ ಪ್ರಧಾನ ಕಾರ್ಯದರ್ಶಿ ಮುವಾನ್ ಟಾಂಬಿಂಗ್ ಅವರು ತೆಂಗ್ನೌಪಾಲ್, ಕಾಂಗ್ಪೊಕ್ಪಿ ಮತ್ತು ಚುರಾಚಂದ್ಪುರ ಜಿಲ್ಲೆಗಳಲ್ಲಿ ಕುಕಿ-ಜೋ ಜನರು ಸ್ವಯಂ ಆಡಳಿತದ ವ್ಯಾಪ್ತಿಗೆ ಬರುತ್ತಾರೆ ಮತ್ತು ಸಮುದಾಯವು ಮೈತೈ ಮಣಿಪುರ ಸರ್ಕಾರದಿಂದ ಯಾವುದೇ ನಿರೀಕ್ಷೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರವು ನಮ್ಮನ್ನು ಗುರುತಿಸದಿದ್ದರೂ ನಾವು ಹೆದರುವುದಿಲ್ಲ. ಕಳೆದ ಒಂದು ತಿಂಗಳಿನಿಂದ ಈ ಕುರಿತು ಚರ್ಚೆ ನಡೆಯುತ್ತಿದೆ. ಕೇಂದ್ರ ಸರಕಾರದ ತಾರತಮ್ಯವು ಸಮುದಾಯ ಸ್ವಯಂ ಆಡಳಿತವನ್ನು ಘೋಷಿಸಲು ಕಾರಣವಾಯಿತು ಎಂದು ಹೇಳಿದರು.
ಐಟಿಎಲ್ಎಫ್ ತನ್ನ ಬೇಡಿಕೆಗಳನ್ನು 2 ವಾರಗಳಲ್ಲಿ ಈಡೇರಿಸದಿದ್ದರೆ, ಕೇಂದ್ರ ಸರ್ಕಾರ ಗುರುತಿಸಲಿ ಅಥವಾ ಗುರುತಿಸದಿರಲಿ ಸ್ವಯಂ ಸರ್ಕಾರವನ್ನು ಸ್ಥಾಪಿಸುವುದಾಗಿ ಗಡುವು ನೀಡಿತ್ತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು.
ಮೇ 3ರಂದು ಹಿಂಸಾಚಾರದ ಬಳಿಕ ಈಶಾನ್ಯ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಮತ್ತು ಸ್ಥಳಾಂತರಗೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ಎನ್.ಬಿರೇನ್ ಸಿಂಗ್ ನೇತೃತ್ವದ ಮೈತೈ ಬಹುಮತದ ಸರ್ಕಾರವು ತಮ್ಮ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಕುಕಿ ಸಮುದಾಯದ ಶಾಸಕರುಗಳು ಹೇಳಿದ್ದರು.
ಐಟಿಎಲ್ಎಫ್ನ ಮುವಾನ್ ಟಾಂಬಿಂಗ್ ಮಾತನಾಡಿ, ಸಮುದಾಯವು ಪ್ರತ್ಯೇಕ ಮುಖ್ಯಮಂತ್ರಿಯನ್ನು ಹೊಂದಿರುತ್ತದೆ. ಇಂಫಾಲ್ನಿಂದ ಅನಿವಾರ್ಯವಾಗಿ ಹೊರಗೆ ತೆರಳಿ ಈಗ ಮರಳಲು ಸಾಧ್ಯವಾಗದೆ ಇರುವ ಸಮುದಾಯದ ಅಧಿಕಾರಿಗಳಿಗೆ ಹೊಣೆಗಾರಿಕೆಗಳನ್ನು ವಹಿಸಲಾಗುವುದು. ಇಂಫಾಲ್ನಲ್ಲಿ ಮೈತೈ ಸಮುದಾಯಕ್ಕೆ ಬಹುಮತವಿದೆ. ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಕಿ-ಝೋ ಜನರನ್ನು ಹೊರಗಿನವರು ಎಂದು ಉಲ್ಲೇಖಿಸಿದ್ದಾರೆ ಎಂದು ಟಾಂಬಿಂಗ್ ಆರೋಪಿಸಿದ್ದಾರೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವು ಭುಗಿಲೆದ್ದ ಮೇ 3ರಿಂದಲೂ ಐಟಿಎಲ್ಎಫ್ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಜೊತೆ ಹಲವಾರು ಸುತ್ತುಗಳ ಮಾತುಕತೆ ನಡೆಸಿದೆಯಾದರೂ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ ಎಂದು ಹೇಳಿದ್ದಾರೆ.
ಆರ್.ಟಿ.ಓ ಕಛೇರಿ ಮುಂದೆ ಖಾಲಿ ಹುದ್ದೆಗಳ ಭರ್ತಿಗೆ ಭ್ರಷ್ಠಾಚಾರದ ಕಡಿವಾಣಕ್ಕೆ ಕೋಳಿಗಳ ಸಮೇತ ರೈತ ಸಂಘದ ಹೋರಾಟ !!
ಕೋಲಾರ, ನ-15, ಆರ್.ಟಿ.ಓ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಖಾಯಂ ಆರ್.ಟಿ.ಓ ನೇಮಕ ಮಾಡಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಠಾಚಾರವನ್ನು ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಿ ಜನಪರ ಇಲಾಖೆಯಾಗಿ ಮಾರ್ಪಾಡು ಮಾಡಬೇಕೆಂದು ರೈತ ಸಂಘದಿಂದ ಆರ್.ಟಿ.ಓ ಕಛೇರಿ ಮುಂದ ಕೋಳಿಗಳ ಸಮೇತ ಹೋರಾಟ ಮಾಡಿ ಆರ್.ಟಿ.ಓ ಅಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ತೇಲಗಿ ಛಾಪಾಕಾಗದ ಹಗರಣದಂತೆ ಆರ್.ಟಿ.ಓ ಕಛೇರಿಯಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಭ್ರಷ್ಠಾಚಾರ ಲಂಚ ನೀಡಿದರೆ ಮಾತ್ರ ಡಿ.ಎಲ್. ಆರ್.ಸಿ. ಅರ್ಜಿ ವಿಲೇವಾರಿ ಇಲ್ಲವಾದರೆ ಟೇಬಲ್ ಮೇಲೆಯೇ ಕಡತ ಲಂಚ ನೀಡುವವರೆಗು ಕಡತಗಳು ಟೇಬಲ್ ಮೇಲೆ ದೂಳು ಹಿಡಿಯತ್ತಿವೆಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಚೇರಿಯ ಅವ್ಯವಸ್ಥೇಯ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಕಂದಾಯ ಮಂತ್ರಿಗಳ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬೋನೋಪೈಡ್ ಆಧರಿಸಿ ಟ್ರಾಕ್ಟರ್ಗಳ ನೊಂದಣಿ ಹಾಗೂ ಗುಜರಿ ಗಾಡಿಗಳಿಗೆ ಸ್ಥಳೀಯ ವಿಳಾಸವನ್ನು ಸೃಷ್ಟಿ ಮಾಡಿ ಸರ್ಕಾರಕ್ಕೆ ಕೋಟಿ ಕೋಟಿ ತೆರಿಗೆ ವಂಚನೆ ಮಾಡಿ ನೊಂದಣಿ ಮಾಡಿರುವ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಆರ್.ಟಿ.ಓ ರವರನ್ನು ಅಮಾನತ್ತು ಮಾಡಿ, ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಮತ್ತೆ ಇಲಾಖೆಯಲ್ಲಿ ಆರ್.ಟಿ.ಓ ಆಗಿ ಪ್ರಭಾರ ವಹಿಸಿಕೊಂಡಿರುವ ನಯಾಜ್ಪಾಷ ರವರು ಎಲ್ಲಾ ಅಧಿಕಾರಿಗಳ ಸಭೆ ಕರೆದು ಸರ್ಕಾರ ನಿಗಧಿ ಮಾಡಿರುವ ದರಕ್ಕಿಂತ ಹೆಚ್ಚಾಗಿ ಹಣ ನೀಡಿದರೆ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡದೆ ಕೆಲಸ ಮಾಡಿಕೊಡುವ ಆದೇಶ ಮಾಡಿರುವುದು ಇಲಾಖೆಯಲ್ಲಿ ಮತ್ತೆ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆಂದು ಆರೋಪ ಮಾಡಿದರು.
ಸರ್ಕಾರ ನಿಯಮದ ಪ್ರಕಾರ ಒಬ್ಬ ಹೆಚ್.ಕ್ಯೂ.ಎ.ಗೆ ಮೂರು ಕಛೇರಿಯ ಅದಿಕಾರ ನಿಡುವ ನಿಯಮ ವಿದೆಯೇ ಕೆ.ಜಿ.ಎಫ್ ಆರ್.ಟಿ.ಓ, ನಂಗಲಿ ಚೆಕ್ಪೋಸ್ಟ್ ಎ.ಆರ್.ಟಿ.ಓ , ಕೋಲಾರ ಆರ್.ಟಿ.ಒ ಆಗಿ ಪ್ರಭಾರರಾಗಿ ನೇಮಕ ಮಾಡಿರುವ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲವೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕೋಲಾರ ಆರ್.ಟಿ.ಓ, ಕಛೇರಿಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಖಾಯಂ ಆರ್.ಟಿ.ಓ ರವರನ್ನು ನೇಮಕ ಮಾಡಲೇಬೇಕು ಒತ್ತಾಯಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಾತನಾಡಿ ಈಗ ಪ್ರಭಾರರಾಗಿರುವ ಆರ್.ಟಿ.ಓ ಇಲಾಖೆಯಲ್ಲಿ ಟ್ರಾನ್ಸ್ಫರ್ ಆಫ್ ಒನರ್ಶೀಪ್ಗೆ (ಟಿ.ಓ) 200 ಲಂಚ ಇದ್ದು, ಈಗ 500 ರೂಗಳಾಗಿವೆ. ಡ್ಯೂಪ್ಲಿಕೇಟ್ ಆಸ್ತಿಗೆ 500 ಈಗ 1500 ಆಗಿದೆ. ಬೇರೆ ರಾಜ್ಯದ ವಾಹನಗಳ ನೊಂದಣಿಗೆ ರೂ/ 500 /- 1500/-, ಆರ್.ಸಿ.ಕಾರ್ಡ್ ಪ್ರಿಂಟ್ ಕೊಡಲು 100, ಹೆಚ್ಚಿಗೆ ನೀಡಿದರೆ ಒಂದೇ ದಿನದಲ್ಲಿ ಕಾರ್ಡ್ ನೀಡುತ್ತೇವೆಂದು ಅಧಿಕಾರಿಗಳಿಗೆ ಸೂಚಿಸಿರುವುದು ಯಾವ ನ್ಯಾಯ. ಇದು ಕೆ.ಜಿ.ಎಫ್ ಆರ್.ಟಿ.ಓ ಅಲ್ಲ ಕೋಲಾರ ನೀವು ಪ್ರತಿಯೊಂದಕ್ಕೂ ಹಣ ನೀಡಲೇ ಬೇಕು. ಇಲ್ಲವಾದರೆ ಯಾವುದೇ ಕಡತ ಟೇಬಲ್ನಿಂದ ಮುಂದೆ ಕದಲುವುದಿಲ್ಲವೆಂದು ಹೇಳಿಕೆ ನೀಡಿರವುದು ಯಾವ ನ್ಯಾಯ. ಜೊತೆಗೆ ಇಲಾಖೆಯಲ್ಲಿರುವ ಸಿ.ಸಿ. ಕ್ಯಾಮರ ಆರ್.ಟಿ.ಓ, ಖುರ್ಚಿ, ಕೆಳಗಡೆ ಇಟ್ಟುಕೊಂಡು ಬೇಕಾದಾಗ ಆಫ್ ಆನ್ ಮಾಡುತ್ತಿರುವುದು ಇಲಾಖೆಯಲ್ಲಿನ ಭ್ರಷ್ಟಾಚಾರತೆಗೆ ಉದಾರಣೆಯಾಗಿದೆಂದು ಆಕ್ರೋಷ ವ್ಯಕ್ತಪಡಿಸಿದರು.
ಒಂದು ಕಡೆ ಲಂಚ ಮತ್ತೊಂದ ಕಡೆ ಒಂದೇ ನಂಬರ್ನಲ್ಲಿ ಸಂಚಾರ ಮಾಡುತ್ತಿರುವ ಖಾಸಗಿ ಬಸ್ಸುಗಳ ಮಾಲೀಕರ ಜೊತೆ ಒಳ ಒಪ್ಪಂದ ಹಾಗೂ ಬಾರ ಮಿತಿ ಟಿಪ್ಪರ್ಗಳ ಓಡಾಟಕ್ಕೆ ಕಡಿವಾಣ ಹಾಕದೆ ತಮ್ಮ ಪ್ರತಾಪವನ್ನು ಚಿಕ್ಕಾಪುಟ್ಟ ತರಕಾರಿ ಸಾಗಾಣಿಕೆ ಮಾಡುವ ರೈತರ ಮೇಲೆ ತೋರಿಸುವ ಅಧಿಕಾರಿಗಳೇ ತಮ್ಮ ಪ್ರತಾಪವನ್ನು ನಕಲಿ ಬಸ್ಸುಗಳು ಹಾಗೂ ಟಿಪ್ಪರ್ಗಳ ಮೇಲೆ ತೋರಿಸಿ ಎಂದರು.
ಒಂದು ವಾರದಲ್ಲಿ ಆರ್.ಟಿ.ಓ ಕಛೇರಿಯಲ್ಲಿನ ಏಜೆಂಟರು ಹಾಗೂ ಲಂಚಕ್ಕೆ ಕಡಿವಾಣ ಹಾಕದೆ ಇದ್ದರೆ, ಸಾರಿಗೆ ಮಂತ್ರಿ ಮನೆ ಮುಂದೆ ಕುರಿಗಳ ಸಮೇತ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆರ್.ಟಿ.ಓ ಅಧಿಕಾರಿಗಳಾ ದೇವರಾಜ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಜೊತೆಗೆ ಏಜೆಂಟರ ಹಾವಳಿ ಇದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ ಜಿ ಮಂಗಸಂದ್ರ ತಿಮ್ಮಣ್ಣ, ನರಸಿಂಹಯ್ಯ, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಗಿರೀಶ್, ಮೂರಾಂಡಹಳ್ಳಿ ಶಿವಾರೆಡ್ಡಿ, ಚಂದ್ರಪ್ಪ, ಹೆಬ್ಬಣಿ ಆನಂದರೆಡ್ಡಿ, ಶೈಲಜ, ನಾಗರತ್ನ, ಚೌಡಮ್ಮ, ಮುಂತಾದವರು ಇದ್ದರು.