ಶ್ರೀನಿವಾಸಪುರ; ನ.22: ಕಂದಾಯ ಅಧಿಕಾರಿಗಳು ಅರಣ್ಯ ಅಧಿಕಾರಿಗಳಿಗೆ ಸಹಕರಿಸಿ ಸ್ಥಗಿತವಾಗಿರುವ ಅರಣ್ಯ ಭೂ ಒತ್ತುವರಿ ತೆರವು ಮುಂದುವರೆಸುವ ಜೊತೆಗೆ ಕೆರೆ, ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ವಿಶೇಷ ತಂಡ ರಚಿಸುವಂತೆ ರೈತಸಂಘದಿಂದ ನೂತನ ತಾಲೂಕು ದಂಡಾಧಿಕಾರಿಗಳಾದ ಸುಧೀಂದ್ರ ಅವರಿಗೆ ಗಿಡ ನೀಡುವ ಮೂಲಕ ಸ್ವಾಗತಿಸಿ, ಮನವಿ ನೀಡಿ ಒತ್ತಾಯಿಸಲಾಯಿತು.
ಅರಣ್ಯ ಭೂಮಿ ಕೆರೆ ರಾಜಕಾಲುವೆಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕಂದಾಯ ಹಾಗೂ ಸರ್ವೇ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ತಹಸೀಲ್ದಾರ್ ಅವರನ್ನು ಒತ್ತಾಯ ಮಾಡಿದರು.
3700 ಎಕರೆ ಅರಣ್ಯ ಭೂಮಿಗೆ ಲಕ್ಷಲಕ್ಷ ಲಂಚ ಪಡೆದು ಕಂದಾಯ ಹಾಗೂ ಸರ್ವೇ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಅರಣ್ಯಭೂಮಿಯನ್ನು ಬಲಾಢ್ಯರಿಗೆ ಅಕ್ರಮ ದರಖಾಸ್ತು ಕಮಿಟಿ ಮೂಲಕ ನಕಲಿ ಸಾಗುವಳಿಯನ್ನು ನೀಡುವ ಮುಖಾಂತರ ಸರ್ಕಾರಿ ಅರಣ್ಯ ಭೂಮಿಯನ್ನು ಕಬಳಿಸಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾವಿರಾರು ಕೋಟಿ ಸಾಲವನ್ನು ಪಡೆದಿರುವ ಶ್ರೀಮಂತ ಭೂಗಳ್ಳರಿಗೆ ಸಿಂಹಸ್ವಪ್ನವಾಗಿರುವ ಅರಣ್ಯ ಅಧಿಕಾರಿಗಳಿಗೆ ಕಂದಾಯ ಅಧಿಕಾರಿಗಳು ಸಹಕರಿಸಿ ಉಳಿಕೆಯಿರುವ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ನಿಯತ್ತಾಗಿ ಕಾಂಗ್ರೆಸ್ ನಲ್ಲಿದ್ದು, ಬಿಜೆಪಿ ಸಂಸದರಾದ ಎಸ್.ಮುನಿಸ್ವಾಮಿ ಅವರಿಗೆ ಬಹಿರಂಗ ಪ್ರಚಾರ ಮಾಡುವ ಮುಖಾಂತರ ತನ್ನ ನಿಯತ್ತು ತೋರಿಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ 200 ಎಕರೆ ಅರಣ್ಯ ಭೂಮಿ ಒತ್ತುವರಿ ಉಳಿಸಲು ಸಂಸದರು ಅರಣ್ಯ ಅಧಿಕಾರಿಗಳ ಮೇಲೆ ತಮ್ಮ ಪ್ರತಾಪವನ್ನು ತೋರಿಸುತ್ತಿದ್ದಾರೆಂದು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜವಾಬ್ದಾರಿ ಸ್ಥಾನದಲ್ಲಿದ್ದು ಅರಣ್ಯ ಭೂಮಿಯನ್ನು ಉಳಿಸಬೇಕಾದಂತಹ ಸಂಸದರೇ ಶ್ರೀಮಂತ ಅರಣ್ಯ ಭೂಗಳ್ಳರ ಪರ ನಿಲ್ಲುತ್ತಿರುವುದು ಯಾವ ನ್ಯಾಯ. ಒಂದು ಕಡೆ ಅರಣ್ಯ ಒತ್ತುವರಿ ಮತ್ತೊಂದು ಕಡೆ ಕೆರೆ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಸಂಸದರು ಏಕೆ ಯೋಚನೆ ಮಾಡುತ್ತಿಲ್ಲವೆಂದು ಪ್ರಶ್ನೆ ಮಾಡಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಮುಂಗಾರುಮಳೆ ಆರ್ಭಟ ಶುರುವಾದರೆ ತಾಲೂಕಿನಾದ್ಯಂತ ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹರಿಯಲು ರಾಜಕಾಲುವೆಗಳಿಲ್ಲದೆ ನೇರವಾಗಿ ಬಡವರ ಮನೆಗಳು ಹಾಗೂ ರೈತರ ಹೊಲಗದ್ದೆಗಳಿಗೆ ನುಗ್ಗಿ ಕೆರೆ ಕುಂಟೆಗಳಾಗಿ ಮಾರ್ಪಟ್ಟು 10 ನಿಮಿಷಗಳಲ್ಲಿ ಬಡವರ ಬದುಕನ್ನು ಕಸಿಯುತ್ತಿದ್ದರೂ ತಾಲೂಕು ಆಡಳಿತ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆಗಳ ತೆರವು ಕಾರ್ಯಾಚರಣೆ ಸಮಸ್ಯೆಯಾದಾಗ ಮಾತ್ರ ಜ್ಞಾಪಕಕ್ಕೆ ಬಂದು ಮತ್ತೆ ಗಜಿನಿ ಸಿನಿಮಾದ ನಟನೆಯಂತೆ ಅಧಿಕಾರಿಗಳು ಮರೆಯುತ್ತಾರೆಂದು ವ್ಯಂಗ್ಯವಾಡಿದರು.
ಸ್ಥಗಿತಗೊಂಡಿರುವ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಅರಣ್ಯ ಅಧಿಕಾರಿಗಳಿಗೆ ಕಂದಾಯ ಅಧಿಕಾರಿಗಳು ಸಹಕರಿಸಿ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ, ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ನೂತನ ತಹಸೀಲ್ದಾರ್ ಸುಧೀಂದ್ರ ಅವರು, ಮೊದಲು ಹದಗೆಟ್ಟಿರುವ ತಾಲೂಕು ಆಡಳಿತವನ್ನು ಸರಿಪಡಿಸಿ ಜನಸಾಮಾನ್ಯರ ಸೇವೆ ಮೊದಲ ಆದ್ಯತೆಯಾಗಬೇಕು. ಅರಣ್ಯ ಭೂಮಿ ಒತ್ತುವರಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೆರವುಗೊಳಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆಲವಾಟಿ ಶಿವು, ದೇವಂಡಹಳ್ಳಿ ರಾಜೇಂದ್ರ, ಸಹದೇವಣ್ಣ, ಶಿವಾರೆಡ್ಡಿ, ಗಿರೀಶ್ ಮುಂತಾದವರಿದ್ದರು.
Month: November 2023
ಕುರಿ ಮಾಂಸ ತಿಂದಿದ್ದರಿಂದ ಭಾರತ ವಿಶ್ವಕಪ್ ಸೋತಿತು ಎಂದು ತಮ್ಮನ ಕೊಲೆ !!
ಅಮರಾವತಿ: ನೀವು ಕುರಿ ಮಾಂಸ ತಿಂದಿದ್ದರಿಂದ ಭಾರತ ವಿಶ್ವಕಪ್ ಸೋತಿತು ಎಂದು ಹಿರಿಯ ಮಗ ಕುಡಿದ ಅಮಲಿನಲ್ಲಿ ತಮ್ಮನ ಮೇಲೆ ರಾಡ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಮಹಾರಾಷ್ಟ್ರ ಅಮರಾವತಿಯಲ್ಲಿ ನಡೆಸಿದಿದೆ.ಈ ವೇಳೆ ಆರೋಪಿ ಹೆಸರು ಪ್ರವೀಣ ರಮೇಶ ಇಂಗೋಳೆ (ವಯಸ್ಸು 32, ರೆ. ಅಂಜನಗಾಂವ್ ಬ್ಯಾರಿ) ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.
ಮೃತನನ್ನು ಅಂಕಿತ್ ರಮೇಶ ಇಂಗೋಲೆ (ವಯಸ್ಸು 28) ಎಂದು ಗುರುತಿಸಲಾಗಿದ್ದು, ಗಾಯಗೊಂಡ ತಂದೆಯ ಹೆಸರು ರಮೇಶ್ ಗೋವಿಂದ್ ಇಂಗೋಳೆ ಎಂದು ಗುರುತಿಸಲಾಗಿದೆ.
ರವಿವಾರ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದ ದಿನ ರಮೇಶ್ ಮತ್ತು ಅವರ ಕಿರಿಯ ಮಗ ಅಂಕಿತ್ನ ಜೊತೆ ಚಿಕ್ಕಪ್ಪನ ಮನೆಗೆ ಹೋಗಿದ್ದರು. ಅಲ್ಲಿ ಮಟನ್ ಊಟ ಮಾಡಲಾಗಿತ್ತು. ಊಟ ಮುಗಿಸಿ ಇಬ್ಬರೂ ಮನೆ ತಲುಪಿದ್ದು ಮಧ್ಯಾಹ್ನ 2 ಗಂಟೆಗೆ. ಪ್ರವೀಣ್ ಗಾಗಿಯೂ ಬಾಕ್ಸನಲ್ಲಿ ಮಟನ್ ತಂದಿದ್ದರು. ಆ ವೇಳೆ ಪ್ರವೀಣ್ ಕುಡಿದ ಅಮಲಿನಲ್ಲಿ ಭಾರತ-ಆಸ್ಟ್ರೇಲಿಯಾ ೫೦-೫೦ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದ.
ಏತನ್ಮಧ್ಯೆ, ಆಸ್ಟ್ರೇಲಿಯಾ ಸಂಜೆ ಬ್ಯಾಟಿಂಗ್ ಆರಂಭಿಸಿದ ನಂತರ ಕ್ರಿಕೆಟ್ನಲ್ಲಿ ಭಾರತದ ಪ್ರದರ್ಶನ ಕುಸಿಯುತ್ತಲೇ ಇದ್ದುದರಿಂದ ಅಸಮಾಧಾನಗೊಂಡ ನೀವು ಮಟನ್ ತಿಂದಿದಕ್ಕೆ ಭಾರತ ಸೋಲುತ್ತದೆ ಎಂದು ಪ್ರವೀಣ್ ಇಬ್ಬರನ್ನೂ ನಿಂದಿಸುವುದನ್ನು ಮುಂದುವರೆಸಿದ. ರಾತ್ರಿ 9 ಗಂಟೆಯ ಸುಮಾರಿಗೆ ಭಾರತ ಪಂದ್ಯ ಸೋತ ನಂತರ ಪ್ರವೀಣ್ ಇನ್ನಷ್ಟು ಕೋಪಗೊಂಡು “ನೀವು ಮಟನ್ ತಿಂದಿದ್ದರಿಂದ ಭಾರತ ಪಂದ್ಯ ಸೋತಿತು” ಎಂದು ಇಬ್ಬರನ್ನೂ ನಿಂದಿಸಲು ಆರಂಭಿಸಿದರು. ಇದರಿಂದ ಕೋಪಗೊಂಡ ತಂದೆ ಪ್ರವೀಣ್ ಮೇಲೆ ಮೊಬೈಲ್ ಎಸೆದಿದ್ದಾನೆ. ಕೋಪದಿಂದ ಪ್ರವೀಣ್ ತನ್ನ ತಂದೆಯ ಕಾಲುಗಳನ್ನು ಹೊಡೆದಿದ್ದಾನೆ. ಇದನ್ನು ಅಂಕಿತ್ ತಡೆಯಲು ಹೋದಾಗ ಪ್ರವೀಣ್ ಕಬ್ಬಿಣದ ರಾಡ್ ನಿಂದ ಅಂಕಿತ್ ತಲೆಗೆ ನಾಲ್ಕೈದು ಬಾರಿ ಹೊಡೆದಿದ್ದಾನೆ. ಅಂಕಿತ್ ರಕ್ಷಣೆಗಾಗಿ ಮನೆಯಿಂದ ಹೊರಗೆ ಓಡಲು ಯತ್ನಿಸಿದಾಗ ಎಡವಿ ಕೆಳಗೆ ಬಿದ್ದಿದ್ದಾನೆ.
ಗ್ರಾಮಸ್ಥರು ರಮೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಆತ ಮ್ರತಪಟ್ಟಿದ್ದಾನೆ, ಈ ಬಗ್ಗೆ ಬದನೇರಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ, ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ ರಮೇಶ ಇಂಗೋಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರವೀಣ್ ವಿರುದ್ಧ ಕೊಲೆ ಹಾಗೂ ಹಲ್ಲೆ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಠಾಣೆದಾರ ನಿತಿನ್ ಮಗರ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದು ತಂದೆಯ ಹತ್ಯೆ ಮಾಡಲು ಒಂದು ನೇಪ ಮಾತ್ರ ಕೂಡ ಆಗಿರಬಹುದೆಂದು, ಸಂಶಯ ವ್ಯಕ್ತವಾಗಿದೆ. ಒಟ್ಟಾರೆಯಾಗಿ ಈ ಅಟನ್ವ್ ಸ್ಥಳೀಯರನ್ನು ಬೆಚ್ಚಿ ಬೀಳಿಸುವಂತ್ತೆ ಮಾಡಿದೆ.
ಕುಂದಾಪುರ ನವಜಾತ ಶಿಶು ಸಾವಿನ ಪ್ರಕರಣ: ಜಿಲ್ಲಾಧಿಕಾರಿ ನ್ಯಾಯದ ಭರವಸೆ:ಧರಣಿಗೆ ತಾತ್ಕಾಲಿಕವಾಗಿ ತೇರೆ
ಕುಂದಾಪುರ: ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ನವಜಾತ ಶಿಶು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ನಿರಂತರ ಪ್ರತಿಭಟನೆ ಮಂಗಳವಾರ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ವೈದ್ಯರ ನಿರ್ಲಕ್ಷದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ ಪೋಷಕರು ಹಾಗೂ ಗ್ರಾಮಸ್ಥರು, ಸೋಮವಾರ ಸಂಜೆ ಆಸ್ಪತ್ರೆ ಎದುರು ಜಮಾಯಿಸಿ ತಮ್ಮ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಡಿಎಚ್ಓ, ಡಿಸಿ ಬಾರದೇ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. . ಉಪವಿಭಾಗಾಧಿಕಾರಿ, ಡಿಎಚ್ಓ ಹಾಗೂ ತಹಸೀಲ್ದಾರ್ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಅಹೋರಾತ್ರಿ ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರ ಜೊತೆ ಬೈಂದೂರಿನ ಶಾಸಕ ಗುರುರಾಜ್ ಗಂಟಿಹೊಳೆ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮಂಗಳವಾರ ಬೆಳಿಗ್ಗೆ ಆಸ್ಪತ್ರೆ ಎದುರು ಜಮಾಯಿಸತೊಡಗಿದ ಪ್ರತಿಭಟನಾಕಾರರು ವೈದ್ಯರ ಅಮಾನತಿಗೆ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಪ್ರತಿಭಟನಾನಿರತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಶೀಘ್ರವೇ ತಂಡ ರಚಿಸಿ ವಾರದೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.
ಮಗುವಿನ ತಂದೆ ಶ್ರೀನಿವಾಸ್ ಮಾತನಾಡಿ, ನವೆಂಬರ್ 16 ರಂದು ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದಿದ್ದೇವೆ. ಪರೀಕ್ಷಿಸಿದ ವೈದ್ಯರು ಸಮಸ್ಯೆ ಇಲ್ಲ ಎಂದು ವಾಪಾಸ್ ಕಳುಹಿಸಿದ್ದರು. ಮಾರನೆ ದಿನ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಬಂದು ದಾಖಲಾದೆವು. ಸಮಸ್ಯೆಯ ಬಗ್ಗೆ ಏನೂ ಹೇಳಿಲ್ಲ. ಸ್ಕ್ಯಾನಿಂಗ್ ಮಾಡಿ ಎಂದರೂ ಈಗ ಬೇಡ ಎಂದರು. ಎರಡು ದಿನ ಅದೇ ನೋವಿನಲ್ಲಿ ಒಡ್ಡಾಡಿದರೂ ಏನೂ ಚಿಕಿತ್ಸೆ ನೀಡಿಲ್ಲ. ನವೆಂಬರ್ 20 ರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೆರಿಗೆ ಮಾಡಿ ಕರುಳ ಬಳ್ಳಿ ಸುತ್ತಿಕೊಂಡಿದ್ದರಿಂದ ಮಗು ಸತ್ತಿದೆ ಎಂದು ಹೇಳಿದ್ದಾರೆ. ಮದುವೆಯಾಗಿ ನಾಲ್ಕು ವರ್ಷದ ಬಳಿಕ ನಮಗೆ ಮೊದಲ ಮಗು ಹುಟ್ಟುವ ಸಂತಸದಲ್ಲಿದ್ದೆವು. ನೂರಾರು ಆಸೆಗಳನ್ನು ಇಟ್ಟುಕೊಂಡಿದ್ದೇವೆ. ಆದರೆ ವೈದ್ಯರ ನಿರ್ಲಕ್ಷದಿಂದ ಎಲ್ಲಾ ಆಸೆಗಳು ನುಚ್ಚುನೂರಾಗಿದೆ ಎಂದು ನೋವು ಹೇಳಿಕೊಂಡರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಯಶವಂತ ಗಂಗೊಳ್ಳಿ, ಕರುಳಬಳ್ಳಿ ಸುತ್ತಿಕೊಂಡು ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಅನೇಕ ಪ್ರಕರಣಗಳಾದಾಗ ಅವರನ್ನು ಬೆದರಿಸಿ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಹಿಂದೆಯೂ ಈ ರೀತಿಯ ಪ್ರಕರಣಗಳು ನಡೆದಾಗ ನ್ಯಾಯ ಸಿಕ್ಕಿಲ್ಲ. ಜಿಲ್ಲಾಧಿಕಾರಿ, ಎಸ್ಪಿ, ಡಿಎಚ್ಓ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ. ಮಾತು ನೆಡೆಸಿಕೊಳ್ಳಲಿಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಒಂದು ವರ್ಷದಲ್ಲಿ ಹೀಗೆಯೇ ಬೆಳಕಿಗೆ ಬಾರದ ಸಾಕಷ್ಟು ಪ್ರಕರಣಗಳಿವೆ. ಅವೆಲ್ಲವನ್ನೂ ತನಿಖೆ ನಡೆಸಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಗು ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ ಇದ್ದರೆ ತಂಡ ರಚಿಸಿಕೊಂಡು ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಸ್ತ್ರೀತಜ್ನರ ಸಂಖ್ಯೆ ಕೊರತೆ ಇದೆ. ಯಾವುದೇ ಒಬ್ಬ ವೈದ್ಯರ ಮೇಲೆ ಕ್ರಮಕೈಗೊಳ್ಳಬೇಕಾದರೆ ನಿಯಮಾನುಸಾರ ಕ್ರಮಕೈಗೊಳ್ಳಬೇಕು. ತನಿಖೆ ನಡೆಸಿ ಸರ್ಕಾರದ ಗಮನಕ್ಕೆ ತರುತ್ತೇವೆ. ತಾತ್ಕಾಲಿಕವಾಗಿ ವೈದ್ಯರನ್ನು ಬೇರೆಡೆಗೆ ವರ್ಗಾಯಿಸುತ್ತೇವೆ. ಇಲ್ಲಿ ಬೇರೆ ವೈದ್ಯ ನೇಮಕ ಮಾಡುತ್ತೇವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ತಾಯಿ, ಶಿಶುವಿನ ಮರಣ ಸಂಖ್ಯೆ ಕಡಿಮೆ ಇದೆ. ಆಗಬಾರದ ಘಟನೆ ಆಗಿ ಹೋಗಿದೆ. ನಿಯಮಾನುಸಾರ ಕ್ರಮ ಜರಗಿಸುತ್ತೇವೆ ಎಂದರು.
ಜಿಲ್ಲಾ ವರಿಷ್ಠಾಧಿಕಾರಿ ಡಾ. ಅರುಣ್ ಪ್ರತಿಕ್ರಿಯಿಸಿ, ಸಂತ್ರಸ್ತರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಯಮನ್ವಯವಾಗಿ ದೂರನ್ನು ವೈದ್ಯಕೀಯ ಮಂಡಳಿಗೆ ವರ್ಗಾಯಿಸಿ ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ. ರಾಜೇಶ್ವರಿ, ಜಿ.ಪಂ ಸಿಇಓ ಪ್ರಸನ್ನ ಕುಮಾರ್, ತಹಸೀಲ್ದಾರ್ ಶೋಭಾ ಲಕ್ಷ್ಮೀ ಎಚ್.ಎಸ್, ಟಿಎಚ್ಒ ಪ್ರೇಮಾನಂದ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ರಾಬರ್ಟ್ ರೊಬೆಲ್ಲೋ, ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ನಗರ ಠಾಣಾ ನಿರೀಕ್ಷಕ ನಂದ ಕುಮಾರ್ ಇದ್ದರು.
ಈ ಸಂದರ್ಭದಲ್ಲಿ , ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರಾದ ಬಸವ ಖಾರ್ವಿ, ನಿರ್ಮಲಾ ಪೂಜಾರಿ, ತಾ.ಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಭಾಗದ ಪ್ರಮುಖರಾದ ಯಶವಂತ್ ಗಂಗೊಳ್ಳಿ, ವಾಸುದೇವ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಸದಾಶಿವ ಕಂಚುಗೋಡು, ಗೋಪಾಲ ಖಾರ್ವಿ ದಾವನಮನೆ, ದಿನೇಶ್ ಖಾರ್ವಿ, ರಾಘವೇಂದ್ರ ಗಾಣಿಗ, ಚಂದ್ರ ಖಾರ್ವಿ ಲೈಟ್ ಹೌಸ್, ಸೂರಜ್ ಖಾರ್ವಿ, ರಾಜು ಖಾರ್ವಿ ಮ್ಯಾಂಗನೀಸ್ ರಸ್ತೆ, ಕುಂದಾಪುರ ಪುರಸಭಾ ಸದಸ್ಯರಾದ ಸಂದೀಪ ಖಾರ್ವಿ, ಚಂದ್ರಶೇಖರ ಖಾರ್ವಿ, ಸಂತೋಷ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಪ್ರಭಾಕರ ವಿ, ಪ್ರಮುಖರಾದ ಶಂಕರ್ ಅಂಕದಕಟ್ಟೆ, ರಾಜೇಶ್ ಕಾವೇರಿ, ಗಿರೀಶ್ ಕುಂದಾಪುರ, ಜಯಾನಂದ ಖಾರ್ವಿ, ಕೇಶವ ಭಟ್, ಪ್ರಕಾಶ್ ಖಾರ್ವಿ, ರತ್ನಾಕರ ಶೇರುಗಾರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀನಿವಾಸಪುರದಲ್ಲಿ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಬೇಕು-ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಪಟ್ಟಣದಲ್ಲಿ ನ.30 ರಂದು ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಬೇಕು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನಕ ಜಯಂತಿ ಆಚಣೆ ಬಗ್ಗೆ ಚರ್ಚಿಸಲು ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಅಧಿಕಾರಿಗಳ ಗೈರುಹಾಜರಿ ಸಹಿಸಲಾಗದು. ಅಂದು ನಾನೇ ಅಧಿಕಾರಿಗಳ ಹಾಜರಾತಿ ಪಡೆಯುತ್ತೇನೆ ಎಂದು ಎಚ್ಚರಿಸಿದರು.
ಈ ಬಾರಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕನಕ ಜಯಂತಿ ಆಚರಿಸಲಾಗುವುದು. ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಿಂದಲೂ ಕನಕದಾಸರ ಭಾವಚಿತ್ರ ಒಳಗೊಂಡ ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಬೇಕು. ಈ ವಿಷಯದಲ್ಲಿ ಪಿಡಿಒಗಳು ಹೆಚ್ಚು ಆಸಕ್ತಿ ವಹಿಸಬೇಕು. ಮೆರವಣಿಗೆಯಲ್ಲಿ ಕಲಾ ತಂಡಗಳು ಭಾಗವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಕನಕದಾಸರ ಮೇರು ವ್ಯಕ್ತಿತ್ವಕ್ಕೆ ತಕ್ಕಂತೆ ಜಯಂತಿ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ತಲಾ ಐವರು ಕುರುಬ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವೇದಿಕೆ ಮೇಲೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು. ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ಡಾ. ಮಂಜುನಾಥರೆಡ್ಡಿ, ಡಾ. ವಿಶ್ವನಾಥ್, ವೈ.ಎನ್.ಸತ್ಯನಾರಾಯಣ, ಬಿ.ವಿ.ಮುನಿರೆಡ್ಡಿ, ಎ.ಬೈರಾರೆಡ್ಡಿ, ಕೃಷ್ಣಪ್ಪ, ಕೆ.ಸಿ.ಮಂಜುನಾಥ್, ರಾಮತೀರ್ಥ, ಎಸ್.ರಮಾದೇವಿ, ಎಸ್.ಕುಮುದವಲ್ಲಿ, ಮಂಜುನಾಥ್, ಕೆ.ಜಿ.ರಮೇಶ್, ನರಸಿಂಹಮೂರ್ತಿ, ನವೀನ್, ಕೆ.ಆರ್.ಮಂಜುನಾಥ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ, ಮಂಜುನಾಥ್ ಇದ್ದರು.
ಎಂಐಟಿಕೆಯಲ್ಲಿ ಸಿ-ಡಾಕ್ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮ/ An awareness program on C-DAC projects was held at MITK
ಕುಂದಾಪುರ: ಎಂಐಟಿಕೆಯಲ್ಲಿ ಸಿ-ಡಾಕ್ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಸಿ-ಡಿಎಸಿ ನಿರ್ದೇಶಕ ಡಾ.ಮಹಮ್ಮದ್ ಮಿಸ್ಬಾಹುದ್ದೀನ್ ಇದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕಾರ್ಯಕ್ರಮದಲ್ಲಿ ಸಿ-ಡಿಎಸಿ ಬೆಂಗಳೂರಿನ ಸುಧಾರಿತ ಕಂಪ್ಯೂಟಿಂಗ್ ತರಬೇತಿ ಶಾಲೆಯ ನಿಯೋಜನಾ ಅಧಿಕಾರಿ ಶ್ರೀಮತಿ ಇಂದ್ರಾಣಿ ಹಂದೆ ಪಿ ಎಸ್ ಉಪಸ್ಥಿತರಿದ್ದರು. ಸಿ-ಡಾಕ್ ಮತ್ತು ಸಂಸ್ಥೆಯ ಅತ್ಯಾಧುನಿಕ ಯೋಜನೆಗಳು ಮತ್ತು ಉನ್ನತ ಕೌಶಲ್ಯದ ಅವಕಾಶಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರಿಸಿದರು ಸಿ-ಡಾಕ್ ನ ತಾಂತ್ರಿಕ ವಿಚಾರ ಸಂಕಿರಣ ಐ ಟಿ ಮತ್ತು ಎಲೆಕ್ಟ್ರಾನಿಕ್ಸ್ ಆರ್ & ಡಿನಲ್ಲಿ ತನ್ನ ಪ್ರಮುಖ ಪಾತ್ರವನ್ನು ವಿವರಿಸಿತು, ಮತ್ತು ಉನ್ನತ ಕೌಶಲ್ಯದ ಅವಕಾಶಗಳ ಒಳನೋಟಗಳನ್ನು ವಿವರಿಸಿತು. ವಿದ್ಯಾರ್ಥಿಗಳು. ಈ ಕಾರ್ಯಕ್ರಮವು ಭವಿಷ್ಯದ ಸಹಯೋಗಗಳಿಗೆ ಮಾರ್ಗಗಳನ್ನು ತೆರೆಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಕಾಲೇಜಿನಾ ಟಿಪಿಐಆರ್ ಡೀನ್ ಪ್ರೊ.ಅಮೃತಮಲಾ, ಪ್ಲೇಸ್ಮೆಂಟ್ ಅಧಿಕಾರಿ ಪ್ರೊ.ಅಕ್ಷತಾ ನಾಯಕ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
An awareness program on C-DAC projects was held at MITK
Kundapur: An awareness program on C-DAC projects was held at MITK. Dr. Mohammed Misbahuddin Director C-DAC was the resource person for the same. Mrs.Indrani Hande P S , placement officer for advanced Computing Training School at C-DAC Bangalore was also present for the program. The resource person explained regarding the projects which are being carried out by the C-DAC and the organization’s cutting-edge projects and upskilling opportunities.C-DAC’s technical session showcased its premier role in IT and Electronics R&D, while insights into upskilling opportunities resonated with the students. The interactive session not only enhanced awareness but also opened avenues for potential collaborations.
Principal Dr. Abdul Kareem , Vice Principal Prof. Melwin D’Souza were present on the occasion. Dean TPCR Prof. Amruthmala, Placement officer Prof. Akshatha Nayak Co-ordinated this event.
St Agnes PU College Champions: Scripting History / ಸೇಂಟ್ ಆಗ್ನೆಸ್ ಪಿಯು ಕಾಲೇಜ್ ಚಾಂಪಿಯನ್ಸ್: ಚರಿತ್ರೆ ಬರೆಯಲಾಯಿತು
Mangluru: In the dynamic world of sports, our athletes have showcased exceptional competence and determination in various disciplines, with notable achievements in Table Tennis, Throw ball, Basketball, Volleyball, Football, Wrestling, Karate, Floor ball and more.
(PHOTO 1) At the State Level Free Style Wrestling Tournament held at Karwar, Anusha and AnanyaAshokan garnered the third prize in the 53kg weight category and in the 76kg weight category, Noha clinched the first place and has been selected for the National Level. These girls have proved their mettle and ensured that they are a force to reckon with.
(PHOTO 2)In the State Level Belt Wrestling Tournament held at Bangalore, Anusha has emerged as winner having secured the prestigious first place in the 45kg weight category. Additionally, she has qualified for the National Level. Deeksha’s stellar performance earned her the ‘numerouno’ place and she too has been selected for the National Level. Prajna got second place, while Archi clinched the third prize. Their dedication to the sport is very praiseworthy and the win displays their skill and tenacity.
(PHOTO 3) In the Taluk Level Throwball Tournament organized by St Aloysius P U College, the college team secured the Second Place, andAnusha secured the ‘Best Receiver’ award. Anusha, Kripa and Brinita have been duly selected for the District Level.
(PHOTO 4) In the District Level Table Tennis Tournament organized by Govindadasa P U College, the District Team emerged victorious. Our students NahlaFathima and Prapthi were a part of the team and NahlaFathimahas been selected for the State Level. In the Taluk Level Table Tennis Tournament organized by Govindadasa P U College, our college team secured the second place. NahlaFathima and Prapthiwere selected for the District Level.
(PHOTO 5)In the Dasara Cup Table Tennis Tournament conducted by DYES, Mysore, NahlaFathima secured the Second Place in Table Tennis doubles and Third Place in the Team Event. She also won the First Place in Team and Doubles and Third Place in singles in the Mysore Dasara Cup conducted by Karnataka Olympic Association. The girls have demonstrated a commendable competitive spirit and their achievements are a source of inspiration to other aspiring table tennis enthusiasts.
(PHOTO 6)In the District Level Throwball Tournament, the team bagged the First Place and Kripa has been selected for the State Level.
(PHOTO 7) In the AlosiadThrowball and Volleyball Match organized by St Aloysius College, Autonomous, our college Team secured the Second Place. Anusha was the recipient of the ‘Best Receiver’ award in Throwball and Huligemma was awarded the ‘Best All Rounder’ in Volleyball.
(PHOTO 8) In the Taluk Level Volleyball Tournament organized by Sri Ramakrishna P U College, our Volleyball Team bagged the Second Place. Huligemma secured the ‘best All Rounder’ award. Huligemma, Tanvi and Vaishnavi have been selected for the District Level.
(PHOTO 9) In the District Level Volleyball Tournament, the District Team garnered the First Place and Huligemma is selected for the State Level.
(PHOTO 10) In the District Level Football Tournament, Rimin and Saanvi are selected for the State Level.
(PHOTO 11) Our college had the proud privilege of hosting the District Level Wrestling Tournament in which our college won the ‘Winners Trophy’. In Free Style Wrestling Ananya, Noha, Anusha, Deeksha, Prerana garnered the First Place and have been selected for the State Level.
(PHOTO 12) In the State Level Free Style Wrestling Tournament organised by Halyal PU College, Karwar, Noha garnered the First Place and is selected for the National Level. Anusha and Ananya bagged the Third place. In Belt Wrestling Anusha, Deeksha, Ananya, Archi and Prajna bagged the First Place and are selected for the State Level.
(PHOTO 13) In the District Level Floorball selection match held at Yedapadavu PU College our student Moksha has qualified for the State Level.
(PHOTO 14) The students have played exceptionally well and made a significant impact and displayed their finesse and solidified their presence in this field by securing coveted positions.
In the District Level Karate Tournament organised by Department of School Education, Pre- University, Dakshina Kannada held at S.D.P.T PU College, Kateel. Shrika clinched the Gold Medal in the Kumite Category.
(PHOTO 15) Shrika’s relentless dedication and disciplined training has reaped dividends and is an indication of her indomitable spirit. In the Taluk Level Athletic Meet organized by Sharada PU College, Prapthi won the Second Place in Shot put and is selected for the District Level. Sanovar garnered the Second Place in Discus Throw and is selected for the District Level. She also won the Third Place in Shot put. Risha secured the Second Place in 1500 meters race and is selected for the District Level.
(PHOTO 16) The scintillating accomplishments of our sports achievers are an evidence of their fierce commitment to the sport. In the District Level Basketball Tournament organized by Canara PU College, our team won the Runners’ Up Trophy.Prival, Zaha and Thanglalkim’srelentless dedication and discipline has resulted in their selection for the State Level Tournament.
The achievements of our students underscores the commitment of St Agnes PU College to foster a healthy and well-rounded sporting environment. The success of our rising sports stars not only give us a feeling of pride, but also serves as an inspiration for our students. As we celebrate these triumphs, we look forward to continued success in the field of sports.
The scintillating accomplishments of our sports achieve
ಸೇಂಟ್ ಆಗ್ನೆಸ್ ಪಿಯು ಕಾಲೇಜ್ ಚಾಂಪಿಯನ್ಸ್: ಚರಿತ್ರೆ ಬರೆಯಲಾಯಿತು
ಕ್ರೀಡೆಯ ಕ್ರಿಯಾತ್ಮಕ ಜಗತ್ತಿನಲ್ಲಿ, ಟೇಬಲ್ ಟೆನ್ನಿಸ್, ಥ್ರೋ ಬಾಲ್, ಬಾಸ್ಕೆಟ್ಬಾಲ್, ವಾಲಿಬಾಲ್, ಫುಟ್ಬಾಲ್, ಕುಸ್ತಿ, ಕರಾಟೆ, ಫ್ಲೋರ್ ಬಾಲ್ ಮತ್ತು ಹೆಚ್ಚಿನವುಗಳಲ್ಲಿ ಗಮನಾರ್ಹ ಸಾಧನೆಗಳೊಂದಿಗೆ ನಮ್ಮ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಅಸಾಧಾರಣ ಸಾಮರ್ಥ್ಯ ಮತ್ತು ನಿರ್ಣಯವನ್ನು ಪ್ರದರ್ಶಿಸಿ ಸೇಂಟ್ ಆಗ್ನೆಸ್ ಪಿಯು ಕಾಲೇಜ್ ವಿದ್ಯಾರ್ಥಿಗಳು ಚರಿತ್ರೆ ಬರೆದಿದ್ದಾರೆ
ಕಾರವಾರದಲ್ಲಿ ನಡೆದ ರಾಜ್ಯ ಮಟ್ಟದ ಉಚಿತ ಶೈಲಿಯ ಕುಸ್ತಿ ಪಂದ್ಯಾವಳಿಯಲ್ಲಿ ಅನುಷಾ ಮತ್ತು ಅನನ್ಯಾ ಅಶೋಕನ್ 53 ಕೆಜಿ ತೂಕ ವಿಭಾಗದಲ್ಲಿ ತೃತೀಯ ಮತ್ತು 76 ಕೆಜಿ ತೂಕ ವಿಭಾಗದಲ್ಲಿ ನೋಹಾ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಹುಡುಗಿಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ಅವರು ಲೆಕ್ಕ ಹಾಕಲು ಶಕ್ತಿಯಾಗಿದ್ದಾರೆ ಎಂದು ಖಚಿತಪಡಿಸಿಕೊಂಡಿದ್ದಾರೆ.
(ಫೋಟೋ 1)
ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾವಳಿಯಲ್ಲಿ ಅನುಷಾ 45 ಕೆಜಿ ತೂಕ ವಿಭಾಗದಲ್ಲಿ ಪ್ರತಿಷ್ಠಿತ ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ. ಹೆಚ್ಚುವರಿಯಾಗಿ, ಅವರು ರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ದೀಕ್ಷಾ ಅವರ ಅದ್ಬುತ ಅಭಿನಯವು ಆಕೆಗೆ ‘ನ್ಯೂಮೆರೌನೋ’ ಸ್ಥಾನವನ್ನು ತಂದುಕೊಟ್ಟಿತು ಮತ್ತು ಆಕೆ ಕೂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಜ್ಞಾ ದ್ವಿತೀಯ ಸ್ಥಾನ ಪಡೆದರೆ, ಅರ್ಚಿ ತೃತೀಯ ಬಹುಮಾನ ಪಡೆದರು. ಕ್ರೀಡೆಗೆ ಅವರ ಸಮರ್ಪಣೆ ಬಹಳ ಶ್ಲಾಘನೀಯವಾಗಿದೆ ಮತ್ತು ಗೆಲುವು ಅವರ ಕೌಶಲ್ಯ ಮತ್ತು ದೃಢತೆಯನ್ನು ತೋರಿಸುತ್ತದೆ.
(ಫೋಟೋ 2)
ಸೈಂಟ್ ಅಲೋಶಿಯಸ್ ಪಿಯು ಕಾಲೇಜು ಆಯೋಜಿಸಿದ್ದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದರೆ, ಅನುಷಾ ‘ಬೆಸ್ಟ್ ರಿಸೀವರ್’ ಪ್ರಶಸ್ತಿ ಪಡೆದರು. ಅನುಷಾ, ಕೃಪಾ ಮತ್ತು ಬ್ರಿನಿತಾ ಜಿಲ್ಲಾ ಮಟ್ಟಕ್ಕೆ ಸರಿಯಾಗಿ ಆಯ್ಕೆಯಾಗಿದ್ದಾರೆ.
(ಫೋಟೋ 3)
ಗೋವಿಂದದಾಸ ಪಿಯು ಕಾಲೇಜು ಆಯೋಜಿಸಿದ್ದ ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಜಿಲ್ಲಾ ತಂಡ ಜಯಗಳಿಸಿದೆ. ನಮ್ಮ ವಿದ್ಯಾರ್ಥಿಗಳಾದ ನಹ್ಲಾಫಾತಿಮಾ ಮತ್ತು ಪ್ರಾಪ್ತಿ ತಂಡದ ಭಾಗವಾಗಿದ್ದರು ಮತ್ತು ನಹ್ಲಾಫಾತಿಮಹಾಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
(ಫೋಟೋ 4)
ಗೋವಿಂದದಾಸ ಪಿ ಯು ಕಾಲೇಜು ಆಯೋಜಿಸಿದ್ದ ತಾಲೂಕು ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ನಮ್ಮ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು. ನಹ್ಲಾಫಾತಿಮಾ ಮತ್ತು ಪ್ರಾಪ್ತಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೈಸೂರಿನ ಡಿವೈಇಎಸ್ ನಡೆಸಿದ ದಸರಾ ಕಪ್ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ನಹ್ಲಾಫಾತಿಮಾ ಅವರು ಟೇಬಲ್ ಟೆನಿಸ್ ಡಬಲ್ಸ್ ನಲ್ಲಿ ದ್ವಿತೀಯ ಹಾಗೂ ಟೀಮ್ ಈವೆಂಟ್ ನಲ್ಲಿ ತೃತೀಯ ಸ್ಥಾನ ಪಡೆದರು. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ನಡೆಸಿದ ಮೈಸೂರು ದಸರಾ ಕಪ್ನಲ್ಲಿ ತಂಡ ಮತ್ತು ಡಬಲ್ಸ್ನಲ್ಲಿ ಪ್ರಥಮ ಸ್ಥಾನ ಮತ್ತು ಸಿಂಗಲ್ಸ್ನಲ್ಲಿ ತೃತೀಯ ಸ್ಥಾನವನ್ನೂ ಗಳಿಸಿದ್ದಾರೆ.
(ಫೋಟೋ 5)
ಹುಡುಗಿಯರು ಶ್ಲಾಘನೀಯ ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸಿದ್ದಾರೆ ಮತ್ತು ಅವರ ಸಾಧನೆಗಳು ಇತರ ಮಹತ್ವಾಕಾಂಕ್ಷೆಯ ಟೇಬಲ್ ಟೆನ್ನಿಸ್ ಉತ್ಸಾಹಿಗಳಿಗೆ ಸ್ಫೂರ್ತಿಯ ಮೂಲವಾಗಿದೆ.
ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ತಂಡ ಪ್ರಥಮ ಸ್ಥಾನ ಪಡೆದು ಕೃಪಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
(ಫೋಟೋ 6)
ಸ್ವಾಯತ್ತ ಸೈಂಟ್ ಅಲೋಶಿಯಸ್ ಕಾಲೇಜು ಆಯೋಜಿಸಿದ್ದ ಅಲೋಸಿಯಾಡ್ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯದಲ್ಲಿ ನಮ್ಮ ಕಾಲೇಜು ತಂಡ ದ್ವಿತೀಯ ಸ್ಥಾನ ಗಳಿಸಿತು. ಅನುಷಾ ಥ್ರೋಬಾಲ್ನಲ್ಲಿ ‘ಬೆಸ್ಟ್ ರಿಸೀವರ್’ ಮತ್ತು ವಾಲಿಬಾಲ್ನಲ್ಲಿ ಹುಲಿಗೆಮ್ಮ ‘ಅತ್ಯುತ್ತಮ ಆಲ್ರೌಂಡರ್’ ಪ್ರಶಸ್ತಿಗೆ ಭಾಜನರಾದರು.
(ಫೋಟೋ 7)
ಶ್ರೀ ರಾಮಕೃಷ್ಣ ಪಿ ಯು ಕಾಲೇಜು ವತಿಯಿಂದ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನಮ್ಮ ವಾಲಿಬಾಲ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಹುಲಿಗೆಮ್ಮ ಅವರು ‘ಅತ್ಯುತ್ತಮ ಆಲ್ರೌಂಡರ್’ ಪ್ರಶಸ್ತಿ ಪಡೆದರು. ಹುಲಿಗೆಮ್ಮ, ತನ್ವಿ ಮತ್ತು ವೈಷ್ಣವಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
(ಫೋಟೋ 8)
ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಿಲ್ಲಾ ತಂಡ ಪ್ರಥಮ ಸ್ಥಾನ ಪಡೆದು ಹುಲಿಗೆಮ್ಮ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
(ಫೋಟೋ 9)
ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಿಮಿನ್ ಮತ್ತು ಸಾನ್ವಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
(ಫೋಟೋ 10)
ನಮ್ಮ ಕಾಲೇಜು ‘ವಿನ್ನರ್ಸ್ ಟ್ರೋಫಿ’ ಗೆದ್ದುಕೊಂಡ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ಹೆಮ್ಮೆಯ ಭಾಗ್ಯ ನಮ್ಮ ಕಾಲೇಜಿಗಿತ್ತು. ಫ್ರೀ ಸ್ಟೈಲ್ ಕುಸ್ತಿಯಲ್ಲಿ ಅನನ್ಯ, ನೋಹಾ, ಅನುಷಾ, ದೀಕ್ಷಾ, ಪ್ರೇರಣಾ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
(ಫೋಟೋ 11)
ಕಾರವಾರದ ಹಲ್ಯಾಳ್ ಪಿಯು ಕಾಲೇಜು ಆಯೋಜಿಸಿದ್ದ ರಾಜ್ಯ ಮಟ್ಟದ ಉಚಿತ ಶೈಲಿಯ ಕುಸ್ತಿ ಪಂದ್ಯಾವಳಿಯಲ್ಲಿ ನೋಹಾ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅನುಷಾ ಮತ್ತು ಅನನ್ಯಾ ತೃತೀಯ ಸ್ಥಾನ ಪಡೆದರು. ಬೆಲ್ಟ್ ಕುಸ್ತಿಯಲ್ಲಿ ಅನುಷಾ, ದೀಕ್ಷಾ, ಅನನ್ಯ, ಅರ್ಚಿ ಮತ್ತು ಪ್ರಜ್ಞಾ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
(ಫೋಟೋ 12)
ಯಡಪದವು ಪಿಯು ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಫ್ಲೋರ್ಬಾಲ್ ಆಯ್ಕೆ ಪಂದ್ಯದಲ್ಲಿ ನಮ್ಮ ವಿದ್ಯಾರ್ಥಿನಿ ಮೋಕ್ಷ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾಳೆ.
(ಫೋಟೋ 13)
ವಿದ್ಯಾರ್ಥಿಗಳು ಅಸಾಧಾರಣವಾಗಿ ಆಡಿದರು ಮತ್ತು ಗಮನಾರ್ಹ ಪ್ರಭಾವ ಬೀರಿದ್ದಾರೆ ಮತ್ತು ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದಾರೆ ಮತ್ತು ಅಸ್ಕರ್ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿದ್ದಾರೆ.
ಕಟೀಲಿನ ಎಸ್ಡಿಪಿಟಿ ಪಿಯು ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಪೂರ್ವ ವಿಶ್ವವಿದ್ಯಾನಿಲಯ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ. ಕುಮಿತೆ ವಿಭಾಗದಲ್ಲಿ ಶ್ರೀಕಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
(ಫೋಟೋ 14)
ಶ್ರೀಕಾ ಅವರ ಅವಿರತ ಸಮರ್ಪಣೆ ಮತ್ತು ಶಿಸ್ತಿನ ತರಬೇತಿ ಲಾಭಾಂಶವನ್ನು ಕೊಯ್ಲು ಮಾಡಿದೆ ಮತ್ತು ಅವರ ಅದಮ್ಯ ಮನೋಭಾವದ ಸೂಚನೆಯಾಗಿದೆ.
ಶಾರದ ಪಿಯು ಕಾಲೇಜು ಆಯೋಜಿಸಿದ್ದ ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರಾಪ್ತಿ ಶಾಟ್ಪುಟ್ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸನೋವರ್ ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಟ್ಪುಟ್ನಲ್ಲಿ ತೃತೀಯ ಸ್ಥಾನವನ್ನೂ ಗಳಿಸಿದ್ದಾಳೆ. ರಿಶಾ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
(ಫೋಟೋ 15)
ನಮ್ಮ ಕ್ರೀಡೆಗಳ ಅದ್ಭುತ ಸಾಧನೆಗಳು ಸಾಧಿಸುತ್ತವೆ
ನೇಜಾರು ಕೊಲೆ ಪ್ರಕರಣ; ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ನಿಯೋಗದಿಂದ ಸಂತ್ರಸ್ತರ ಮನೆಗೆ ಭೇಟಿ, ಸಾಂತ್ವಾನ
ಉಡುಪಿ: ಇತ್ತೀಚೆಗೆ ನೇಜಾರಿನಲ್ಲಿ ನಡೆದ ತಾಯಿ ಮಕ್ಕಳ ಕೊಲೆ ನಡೆದ ಮನೆಗೆ ಉಡುಪಿ ಕಥೊಲಿಕ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರ ಪ್ರತಿನಿಧಿಗಳು ಮತ್ತು ಸಮನ್ವಯ ಸೌಹಾರ್ದ ಸಮಿತಿ ತೊಟ್ಟಾಂ ಇದರ ಪದಾಧಿಕಾರಿಗಳು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರು ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಘಟನೆಯ ಕುರಿತು ಧರ್ಮಾಧ್ಯಕ್ಷರು ಅತೀವ ಆಘಾತ ಮತ್ತು ನೋವನ್ನು ವ್ಯಕ್ತಪಡಿಸಿದ್ದು, ಇಂತಹ ಘಟನೆ ಬುದ್ದಿವಂತರ ಜಿಲ್ಲೆಯಾದ ಉಡುಪಿಯಲ್ಲಿ ನಡೆದಿರುವುದು ಆಘಾತಕಾರಿಯಾಗಿದ್ದು ನೂರ್ ಮೊಹ್ಮದ್ ಮತ್ತು ಅವರ ಪುತ್ರ ಹಾಗೂ ಇಡೀ ಕುಟುಂಬದ ನೋವಿನಲ್ಲಿ ಕ್ರೈಸ್ತ ಸಮುದಾಯ ಭಾಗಿಯಾಗಿದೆ. ಘಟನೆಗೆ ಕಾರಣನಾದ ಆರೋಪಿಯನ್ನು ಕೂಡಲೇ ಬಂಧಿಸಿರುವ ಜಿಲ್ಲೆಯ ಪೊಲೀಸರ ಕಾರ್ಯ ಶ್ಲಾಘನೀಯವಾಗಿದ್ದು. ನೂರ್ ಮಹಮ್ಮದ್ ಮತ್ತವರ ಕುಟುಂಬಕ್ಕೆ ಸಾಂತ್ವಾನವನ್ನು ಹೇಳಿದರು.
ಈ ವೇಳೆ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ಸಮನ್ವಯ ಸೌಹಾರ್ದ ಸಮಿತಿ ತೊಟ್ಟಂ ಇದರ ಸಂಚಾಲಕರಾದ ಆಗ್ನೆಲ್ ಫೆರ್ನಾಂಡಿಸ್, ಸದಸ್ಯರಾದ ಸುನಿಲ್ ಫೆರ್ನಾಂಡಿಸ್, ಲೆಸ್ಲಿ ಆರೋಝಾ, ಬ್ಲೆಸಿಲ್ಲಾ ಕ್ರಾಸ್ತಾ, ಪ್ರಸಾದ್, ಪ್ರಭಾಕರ್ ಕಾಂಗ್ರೆಸ್ ಮುಖಂಡ ಎಮ್ ಎ ಗಫೂರ್ ಹಾಗೂ ಇತರರು ಉಪಸ್ಥೀತರಿದ್ದರು.
ಜಲಜೀವನ್ ಮಿಷನ್ ಯೋಜನೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಮಹತ್ತರ ಕಾರ್ಯಕ್ರಮ,ಆದರೆ ಗುತ್ತಿಗೆದಾರರ ನಿಧಾನಗತಿಗೆ ಆಕ್ರೋಶ
ಶ್ರೀನಿವಾಸಪುರ: ಗ್ರಾಮೀಣ ಜನರ ಮನೆಮನೆಗೂ ನೀರು ಕೊಡುವಂತ ಜಲಜೀವನ್ ಮಿಷನ್ ಯೋಜನೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಮಹತ್ತರ ಕಾರ್ಯಕ್ರಮ,ಆದರೆ ಕೆಲವೊಂದು ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣ ಆಗದೆ ಗ್ರಾಮಗಳಲ್ಲಿ ಜನತೆ ಇಲ್ಲದ ತೊಂದರೆ ಅನುಭವಿಸುತ್ತಿದ್ದಾರೆ ಈ ಬಗ್ಗೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ನಿಧಾನಗತಿಗೆ ಆಕ್ರೋಶ ವ್ಯಕ್ತಪಡಿಸಿತ್ತಾರೆ.
ಭಾರತ ಸರ್ಕಾರ ಹಾಗು ರಾಜ್ಯ ಸರ್ಕಾರದ ಸಹಬಾಗಿತ್ವದಲ್ಲಿ ಅನುಷ್ಟಾನವಾಗುತ್ತಿರುವ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ-ಮನೆಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುವಂತ ಅದ್ಭುತವಾದ ಕಾರ್ಯಕ್ರಮವಾಗಿದೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತಗೆದುಕೊಂಡು ನಿಲಿ ನಕ್ಷೆ ತಯಾರಿಸಿ ಜನರ ಒಪ್ಪಿಗೆ ಮೇರೆಗೆ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿದೆ ಆದೆರೆ ಇದ್ಯಾವುದನ್ನು ಪರಿಗಣಿಸದ ಗುತ್ತಿಗೆ ದಾರರು ತಮ್ಮ ಇಷ್ಟಾನುಸಾರ ಕಾಮಗಾರಿ ಮಾಡುತ್ತ ರಸ್ತೆಗಳನ್ನು ಆಗೆದು ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣವಾಗಿಲ್ಲ ಇದರ ಪರಿಣಾಮ ಗ್ರಾಮದ ಜನತೆ ಒಡಾಡಲು ಸಮರ್ಪಕವಾದ ರಸ್ತೆ ಇಲ್ಲದೆ ಇಕ್ಕಟ್ಟಿನಲ್ಲಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಶುರುವಾಗಿ 7-8 ತಿಂಗಳಾಗಿದೆ ಇದುವರಿಗೂ ಕಾಮಗಾರಿ ಪೂರ್ಣಗೊಂಡಿಲ್ಲ ಗ್ರಾಮದ ಸಿಮೆಂಟ್ ರಸ್ತೆಗಳನ್ನು ಎಲ್ಲಂದರಲ್ಲಿ ಅಗೆದು ಹಾಕಿದ್ದಾರೆ,ಅಗೆದಿರುವ ರಸ್ತೆಯಲ್ಲಿ ಜನ ಜಾನುವಾರುಗಳ ಓಡಾಟಕ್ಕೆ ತೊಂದರೆ ಆಗಿದೆ.ಇದು ಅಧಿಕಾರಿಗಳ ನಿರ್ಲಕ್ಷ್ಯ ಧೊರಣೆಗೂ ಕಾರಣ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಗ್ರಾಮಗಳಲ್ಲಿ ರಸ್ತೆಗಳನ್ನು ಅಗೆದು ಹಾಕಿರುವ ಹಿನ್ನಲೆಯಲ್ಲಿ ಜನತೆ ಹಾಗು ಜಾನುವಾರುಗಳು ರಸ್ತೆ ಅಗೆತದಿಂದ ಆಗಿರುವ ಹಳ್ಳದಲ್ಲಿ ಬಿದ್ದು ಗಾಯಗೊಂಡಿವೆ.
ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಹೋಗಿ ಸಮಸ್ಯೆ ಹೇಳಿದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇರುವುದಿಲ್ಲ ಕಚೇರಿಯಲ್ಲಿ ಇರುವರು ಅಧಿಕಾರಿ ಬಂದ ನಂತರ ಬಂದು ಸಮಸ್ಯೆ ಹೇಳಿ ಎನ್ನುತ್ತಾರೆ ಸಮಸ್ಯೆ ಬಗ್ಗೆ ಜನತೆ ಪಂಚಾಯಿತಿ ಅಧಿಕಾರಿಗೆ ಮೊಬೈಲ್ ಮೂಲಕ ಹೇಳಲು ಹೋದರೆ ನಾನು ಹೊರಗಡೆ ಬೇರೆ ಕೆಲಸದಲ್ಲಿ ಇಋವಾಗ ಎರಡನೇ ಶನಿವಾರ ಅಥಾವ ಹಬ್ಬ ಹರಿದಿನದ ಸರ್ಕಾರಿ ರಜೆಯಲ್ಲಿ ಇರುವಾಗ ಸಮಸ್ಯೆ ಕೇಳಲು ಆಗುವುದಿಲ್ಲ ಎಂದು ಕರೆಯನ್ನು ಕಟ್ ಮಾಡುತ್ತಾರೆ ಎಂಬುದು ಸಾರ್ವಜನಿಕ ಆರೋಪ.
ಹಾಗಾದರೆ ಗ್ರಾಮಗಳಲ್ಲಿನ ಪರಿಸ್ಥಿತಿಗೆ ಸ್ಪಂದಿಸುವರು ಯಾರು ಎತ್ತ ಸಾಗುತ್ತಿದೆ ಶ್ರೀನಿವಾಸಪುರ ತಾಲೂಕು ಆಡಳಿತದ ಕಾರ್ಯ ವೈಖರಿ ಎಂಬುದು ಜನತೆಯ ಪ್ರಶ್ನೆ.
ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಇಂಟಕ್) ಉಡುಪಿ ಜಿಲ್ಲೆ ಇದರ ಪದಗ್ರಹಣ ಸಮಾರಂಭ
ಉಡುಪಿ ಜಿಲ್ಲಾ ಇಂಟೆಕ್ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ INTUC ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಮಲ್ಲಿ ಅವರ ಉಪಸ್ಥಿತಿಯಲ್ಲಿ ನಡೆಯಿತು ಪದಗ್ರಹಣವನ್ನು ನೆರವೇರಿಸಿದ ರಾಕೇಶ್ ಮಲ್ಲಿ ಅವರು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಎಲ್ಲಾ ಬೂತು ಗಳಲ್ಲಿಯೂ ಸಮಿತಿಗಳನ್ನು ರಚಿಸಿ ಸಂಘಟನೆಯನ್ನು ಬಲಾಢ್ಯಗೊಳಿಸಬೇಕು ಇದರಿಂದ ಜಿಲ್ಲೆಯ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಅನುಕೂಲವಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡುತ್ತಾ ಜಿಲ್ಲಾ ಇಂಟಕ್ ಸಮಿತಿಯ ರಚನೆಯೊಂದಿಗೆ ಸಂಘಟನೆಯು ಮುಂದಿನ ದಿನಗಳಲ್ಲಿ ಬಲಾಡ್ಯಗೊಂಡು ಕಾರ್ಮಿಕರ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸುವಂತಾಗಲಿ ಎಂದು ಹಾರೈಸಿದರು. ಜಿಲ್ಲಾ ಇಂಟಕ್ ಘಟಕದ ಅಧ್ಯಕ್ಷರಾದ ಕಿರಣ್ ಹೆಗ್ಡೆ ಅವರು ಮಾತನಾಡುತ್ತಾ ಈಗಾಗಲೇ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ 10 ಬ್ಲಾಕ್ ಗಳಿಂದಲೂ ಸಮಿತಿಗಳನ್ನು ರಚಿಸಲಾಗಿದೆ ಕಾರ್ಮಿಕರನ್ನು ಒಗ್ಗೂಡಿಸಿಕೊಂಡು ಅವರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಂಘಟನೆ ತೊಡಗಿಸಿಕೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ˌಪಕ್ಷದ ಮುಖಂಡರಾದ ಸುಧಿರ್ ಕುಮಾರ್ ಮುರೋಳಿ ˌ ಪ್ರಸಾದ್ ರಾಜ್ ಕಾಂಚನ್ ನೀರೇ ಕೃಷ್ಣಶೆಟ್ಟಿ ˌ ಬ್ಲಾಕ್ ಅಧ್ಯಕ್ಷರುಗಳಾದ ನವೀನ್ ಶೆಟ್ಟಿ ˌಸತೀಶ್ ಸರ್ವೇಗಾರ್ ˌಚಂದ್ರ ಪೂಜಾರಿ ಕೋಟˌ ಚಂದ್ರ ಅಮೀನ್ ಕುಂದಾಪುರ ˌ ಸುಜಿತ್ ಜಾನ್ˌ ವಾಸುದೇವ ಪೈ ˌ ದಿವಾಕರ್ ನಿಟ್ಟೆ ˌ ಸುಮನ್ ಬೋಳಾರ್ ˌ ಉಮೇಶ್ ಕಾಂಚನ್’ ರಾಘವೇಂದ್ರ ಕೊಟ್ಟಾರಿ ˌಗುರು ˌರೋಷನ್ ಶೆಟ್ಟಿ ಉಪಸ್ಥಿತರಿದ್ದರು ˌ ರಫೀಕ್ ಅಹ್ಮದ್ ಸ್ವಾಗತಿಸಿ ಶ್ರೀಮತಿ ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು