ಕುಂದಾಪುರ,ನ.27: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಕುಂದಾಪುರದ “ಪವಿತ್ರ ರೋಜರಿ ಮಾತಾ” ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತತ್ವ ಬಾಂಧವ್ಯ ದಿನವನ್ನು “ಪ್ರಭು ಯೇಸುವಿನ ದಯೆ ನಮಗೆಲ್ಲರಿಗೂ ಪ್ರೇರಣೆ” ಎಂಬ ಧ್ಯೇಯದೊಂದಿಗೆ, ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.26 ರಂದು ನೆಡೆಯಿತು.
ಪವಿತ್ರ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳೆಗಿಸಿದ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಬಣ್ಣ ಬಣ್ಣದ ಕೊಡೆಗಳ ಜೊತೆ, ಗಾಯನ ಮಂಡಳಿಯೊಡನೆ ವಿದ್ಯುತ್ ದೀಪಗಳ ಅಲಕ್ರಂತದೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದ ಜೊತೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.
ನಂತರ ಸಂತ ಮೇರಿಸ್ ವಿಧ್ಯಾ ಸಂಸ್ಥೆಯ ಮೈದಾನದಲ್ಲಿ ಪರಮಪ್ರಸಾದದ ಆರಾಧನೆ ಕನ್ನಡದಲ್ಲಿ ನೆಡೆಯಿತು. ಈ ಧಾರ್ಮಿಕ ವಿಧಿಯನ್ನು ಕಂಡ್ಲೂರು ಚರ್ಚಿನ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ ನಡೆಸಿಕೊಟ್ಟು “ಇವತ್ತಿನ ದೇವರ ವಾಕ್ಯದಲ್ಲಿ ಹೀಗೆ ಹೇಳಿದೆ. ಹಸಿದವನಿಗೆ ಉಣ್ಣಲು ಕೊಟ್ಟರೆ, ನಿರ್ಗತಿಕನಿಗೆ ಆಶ್ರಯ ನೀಡಿದರೆ, ಬಟ್ಟೆ ಇಲ್ಲದವನಿಗೆ ಬಟ್ಟೆ ನೀಡಿದರೆ, ಬಾಯಾರಿದವರಿಗೆ ಕುಡಿಯಲು ಕೊಟ್ಟರೆ, ಇದನ್ನು ನನಗೆ, ಅಂದರೆ ದೇವರಿಗೆನೇ ಮಾಡಿದ ಹಾಗೆ. ಅದರ ಪ್ರತಿಫಲ ನಿಮಗೆ ಸ್ವರ್ಗರಾಜ್ಯದಲ್ಲಿ ಯೆಚೆಥ್ಥವಾಗಿ ಸಿಗುವುದೆಂದು” ಹೇಳಿದ್ದಾರೆ. ಹಾಗೇ ನಾವು ಸತ್ಯದಲ್ಲಿ ಬದುಕಬೇಕು, ಜೀವನವಿಡಿ ಸತ್ಯದ ಜೀವನ ನಡೆಸಬೇಕು, ಸತ್ಯತೇಯ ಜೀವನ ಅಂದರೆ ಸ್ವರ್ಗಿಯ ಸೌಭಾಗ್ಯ, ಸತ್ಯವನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ವಾತವರಣ ಉಂಟಾಗುತ್ತದೆ. ಸತ್ಯವನ್ನು ಆಯ್ಕೆ ಮಾಡಿಕೊಂಡವರಿಗೆ, ನೋವು ಕಶ್ಟದ ಜೀವನ ಅದು ಒಂದು ರೀತಿಯ ದೇವರ ಆಳವಾದ ಅನುಭವದ ಸಂಭ್ರಮ. ಸತ್ಯ ನುಡಿವರಿಗೆ ಭಯವೇ ಇರುವುದಿಲ್ಲ. ಸುಳ್ಳು ಇದ್ದ ಕಡೆ ಜಗಳ, ಮೋಸ, ವಂಚನೆ ಕೊಲೆ ಹಿಂಸಾಚಾರ, ಯುದ್ದಗಳು ನಡೆಯುತ್ತವೆ, ಇವುಗಳಿಗೆಲ್ಲ ಸೋಲು ಉಂಟಾಗುತ್ತದೆ. ಸತ್ಯದಲ್ಲಿ ನಡೆಯುವರಿಗೆ ಸ್ವರ್ಗಿಯ ಜೀವನ ಲಭಿಸುವುದು. ಯೇಸು ಸ್ವಾಮಿ ಹೇಳಿದ್ದಾರೆ ಸತ್ಯಕ್ಕೆ ಸಾವಿಲ್ಲ, ನಾನೇ ಸತ್ಯ ನನ್ನನ್ನು ಹಿಂಬಾಲಿಸಿರಿ ಎಂದು, ನಾವು ಅದರಂತೆ ನಡೆಯೋಣ”ಎಂದು ಸಂದೇಶ ನೀಡಿದ ಅವರು ಪರಮ ಪ್ರಸಾದದ ಮೂಲಕ ಆಶಿರ್ವಾದವನ್ನು ನೀಡಿದರು.
ಈ ಧಾರ್ಮಿಕ ವಿಧಿಯು ಕುಂದಾಪುರ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವ|ಸ್ಟ್ಯಾನಿ ತಾವ್ರೊ ಮಾರ್ಗದರ್ಶನದಲ್ಲಿ ನಡೆದಿದ್ದು ಅವರು ಎಲ್ಲರನ್ನು ವಂದಿಸಿದರು. ಕಾರ್ಯಕ್ರಮಗಳ ಸಹ ಉಸ್ತುವಾರಿಯನ್ನು ವಹಿಸಿಕೊಂಡ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಇವರ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸಿ ಶುಭಾಶಯ ಕೋರಲಾಯ್ತು. ವೇದಿಕೆ ಕಾರ್ಯಕ್ರಮದ ಮಹತ್ವವನ್ನು ಭಗಿನಿ ಪ್ರೇಮಿಕಾ ತಿಳಿಸಿದರು.ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಅಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ವಾಳೆಯ ಗುರಿಕಾರರು ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡರು.
Month: November 2023
ಕುಂದಾಪುರದಲ್ಲಿ ‘ಕ್ರಿಸ್ತ ಜಯಂತಿ ಜುಬಿಲಿ 2025’ರ ಸಿದ್ಧತೆಗೆ ವಿಧ್ಯುಕ್ತ ಚಾಲನೆ
ಕುಂದಾಪುರ,ನ.27: ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥವಾಗಿ ಕ್ರಿಸ್ತ ಜಯಂತಿ ಜುಬಿಲಿ 2025 ಸಂಭ್ರಮಾಚರಣೆಯ ಪೂರ್ವ ಸಿದ್ದತೆಗಳಿಗೆ ಚಾಲನೆ ನಡೆಯುತ್ತಿದ್ದು ಉಡುಪಿ ಕಥೊಲಿಕ ಧರ್ಮಕ್ಷೇತ್ರದಲ್ಲಿಯೂ ಎರಡು ವರ್ಷಗಳ ಪೂರ್ವ ತಯಾರಿಗಳಿಗಾಗಿ ಕುಂದಾಪುರದ ರೋಜರಿ ಮಾತಾ ಚರ್ಚಿನಲ್ಲಿ ಭರವಸೆಯ ಯಾತ್ರಿಕರು ಎಂಬ ಧ್ಯೇಯ ವಾಕ್ಯವನ್ನು ಒಳಗೊಂಡ ಲಾಂಛನ ನವೆಂಬರ್ 26 ರಂದು ಅನಾವರಣದೊಂದಿಗೆ ಚರ್ಚಿನ ಪ್ರಧಾದ ಧರ್ಮಗುರ್ ಅ|ವಂ|ಸ್ಟಾನಿ ತಾವ್ರೊ, ಮುಖ್ಯ ಅತಿಥಿಗಳಾದ ಕಂಡ್ಲೂರು ಚರ್ಚಿನ ಧರ್ಮಗುರು ವಂ| ಕೆನ್ಯೂಟ್ ಬಾರ್ಬೊಜಾ ವಿದ್ಯುಕ್ತವಾಗಿ ಚಾಲನೆ ನೀಡಿದರು
ಜಗದ್ಗುರು ಪೋಪ್ ಫ್ರಾನ್ಸಿಸ್ ರವರು ಕಲಿಕಾ ವರ್ಷದಲ್ಲಿ ಎರಡನೇ ವ್ಯಾಟಿಕನ್ ಕೌನ್ಸಿಲ್ನ ನಾಲ್ಕು ಸಂವಿಧಾನಗಳ ಅಧ್ಯಯನವನ್ನು ನಡೆಸಲುನಿರ್ದೇಶಿಸಿದ್ದಾರೆ. ಈ ಸಂವಿಧಾನಗಳ ಆಧ್ಯಯನದಿಂದ ನಮ್ಮ ವಿಶ್ವಾಸವನ್ನು ಆಳವಾಗಿ ಆರಿಯಲು ಮತ್ತು ಪ್ರಾರ್ಥನಾ ಸ್ಪೂರ್ತಿಯಿಂದ ಈ ಜಯಂತಿಯನ್ನು ಆಚರಿಸಲು ನಮಗೆ ಕರೆನೀಡಿದ್ದಾರೆ. ಈ ನಿಟ್ಟಿನಲ್ಲಿ ಧರ್ಮಪ್ರಾಂತ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಅಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ವಾಳೆಯ ಗುರಿಕಾರರು ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.
ಶ್ರೀನಿವಾಸಪುರದ ಸ. ಬಾ. ಪ. ಪೂ. ಕಾಲೇಜು ಸುಗ್ಗಿ ಸಂಭ್ರಮ, ಕಾಲೇಜು ಸಂತೆ:ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು – ಆರ್.ಚೌಡರೆಡ್ಡಿ
ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದದ ಸುಗ್ಗಿ ಸಂಭ್ರಮ ಹಾಗೂ ಕಾಲೇಜು ಸಂತೆ ಕಾರ್ಯಕ್ರಮವನ್ನು ಸಾಹಿತಿ ಆರ್.ಚೌಡರೆಡ್ಡಿ ಉದ್ಘಾಟಿಸಿದರು.
ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು
ಶ್ರೀನಿವಾಸಪುರ: ಸುಗ್ಗಿ ಮತ್ತು ಸಂತೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಹಾಸುಹೊಕ್ಕಾಗಿವೆ. ಸುಗ್ಗಿಯ ಹಿಗ್ಗಿನಲ್ಲಿ ಸಂತೆ ಮಾಡುವುದು ಸಂಭ್ರಮದ ಸಂಕೇತವಾಗಿದೆ ಎಂದು ಸಾಹಿತಿ ಆರ್.ಚೌಡರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸುಗ್ಗಿ ಸಂಭ್ರಮ ಹಾಗೂ ಕಾಲೇಜು ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂತೆ ಸರ್ವ ಜನಾಂಗದ ಭಾವ ಬೆಸೆವ ಕೇಂದ್ರವಾಗಿದೆ ಎಂದು ಹೇಳಿದರು.
ಗ್ರಾಮೀಣ ಜನರ ಆರ್ಥಿಕ ಚಟುವಟಿಕೆ ಗರಿಗೆದರಲು ಸಂತೆ ಪೂರಕವಾಗಿದೆ. ಬದಲಾದ ಪರಿಸ್ಥಿತಿಯಲ್ಲೂ ಸಂತೆಯ ಮಹತ್ವ ಕಡಿಮೆಯಾಗಿಲ್ಲ. ಸಂತೆಯಲ್ಲಿ ಖರೀದಿಸುವುದು ಗ್ರಾಹಕರಿಗೆ ಒಂದು ಪರಂಪರೆಯಾಗಿ ಮುಂದುವರೆದಿದೆ. ವಿದ್ಯಾರ್ಥಿನಿಯರು ಓದಿನೊಂದಿಗೆ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು. ಅದಕ್ಕೆ ಸಮೀಪದ ಸಂತೆ ಉತ್ತಮ ಅವಕಾಶ ಕಲ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸುಗ್ಗಿ ಹಾಗೂ ಸಂತೆಗೆ ಸಂಬAಧಿಸಿದAತೆ ಜಾನಪದ ಹಾಗೂ ಸಾಹಿತ್ಯದಲ್ಲಿ ಉಲ್ಲೇಖವಿದೆ. ಕತೆ, ಕವಿತೆ, ಒಗಟು, ಗಾದೆ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಸಂತೆಯ ಮಹತ್ವ ಬಿಂಬಿತವಾಗಿದೆ. ಆರ್ಥಿಕ ಚಟುವಟಿಕೆಗೆ ಸಂಬAಧಿಸಿದAತೆ ಪ್ರಾಥಮಿಕ ಜ್ಞಾನ ಲಭ್ಯವಾಗುವುದು ಸಂತೆಯಲ್ಲಿ ಮಾತ್ರ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್ ಮಾತನಾಡಿ, ಸಂತೆ ಭಾರತೀಯ ಆರ್ಥಿಕತೆಯ ಮೂಲ ದ್ರವ್ಯ. ಸುಗ್ಗಿ ಹಾಗೂ ಸಂತೆಗೆ ಹಿಂದಿನಿAದಲೂ ಅವಿನಾಭಾವ ಸಂಬAಧವಿದೆ. ಕೊಡು ಕೊಳ್ಳುವ ವ್ಯವಹಾರದಲ್ಲಿ ಬುದ್ಧಿವಂತಿಕೆ ಕೆಲಸ ಮಾಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರತ್ನಾಕರಂ ಮಾಧವಿ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿನಿಯರು ಗಳಿಸುವ ಮಾರ್ಗ ಕಂಡುಕೊಳ್ಳಬೇಕು. ಅದಕ್ಕೆ ಅಗತ್ಯವಾದ ವ್ಯಾವಹಾರಿಕ ಜ್ಞಾನ ಪಡೆಯಬೇಕು. ಪ್ರಾಥಮಿಕ ಆರ್ಥಿಕ ಜ್ಞಾನ ಪಡೆಯಲು ಸಂತೆ ಸಹಕಾರಿ. ಸಂತೆಯಲ್ಲಿ ಸುತ್ತಾಡಿ ಖರೀದಿ ಮಾಡಬೇಕು. ಮಾರುವುದಿದ್ದರೆ ಗ್ರಾಹಕರ ವಿಶ್ವಾಸ ಗಳಿಸಿ ಮಾರಾಟ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ ಮಾತನಾಡಿ, ಸುಗ್ಗಿ ಹಾಗೂ ಸಂತೆಗೆ ಅವಿನಾಭಾವ ಸಂಬAಧವಿದೆ. ಸಮೃದ್ಧ ಸುಗ್ಗಿ ಸಂತೆ ವ್ಯವಹಾರ ಹೆಚ್ಚಳಕ್ಕೆ ಕಾರಣವಾಗುತ್ತದೆ. ರೈತ ಬೆಳೆದ ಬೆಳೆ ಹಲವು ಅಡ್ಡಿ ಆತಂಕದ ನಡುವೆ ಕೈ ಸೇರಿದಾಗ, ಗ್ರಾಹಕರಿಗೆ ಹೊರೆಯಾಗದ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಾಹಿತಿ ಎನ್.ಶಂಕರೇಗೌಡ ಮಾತನಾಡಿ, ವಿದ್ಯಾರ್ಥಿನಿಯರು ಕಾಲೇಜು ಸಂತೆಯಲ್ಲಿ ಬಗೆಬಗೆಯ ತಿಂಡಿ ತಿನಿಸು ಪ್ರದರ್ಶಿಸಿದ್ದಾರೆ. ವಿವಿಧ ವಸ್ತುಗಳ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಹಕರನ್ನು ಸೆಳೆಯಲು ತಮ್ಮದೇ ಆದ ತಂತ್ರ ಅನುಸರಿಸುತ್ತಿದ್ದಾರೆ. ನಿಜಕ್ಕೂ ಕಾಲೇಜು ಪರಿಸರ ವಿನೂತನವಾಗಿ ಕಂಡುಬರುತ್ತಿದೆ. ಸಂತೋಷದ ವಾತಾವರಣದಲ್ಲಿ ಆರ್ಥಿಕ ಚಟುವಟಿಕೆ ನಡೆಯುತ್ತಿದೆ. ವ್ಯಾಪಾರಿ ಕೇಂದ್ರಗಳಲ್ಲಿ ಇಂಥ ಪರಿಸರದ ಅಗತ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿನಿಯರು ಕಾಲೇಜು ಸಂತೆಯಲ್ಲಿ ಯಾವುದೇ ಭೇದ ಭಾವ ಇಲ್ಲದೆ ತಿಂಡಿ ತಿನಿಸು ಮಾರಿ ಸಂಭ್ರಮಿಸಿದರು. ವಿವಿಧ ಉಪಯುಕ್ತ ವಸ್ತುಗಳನ್ನು ಪ್ರದರ್ಶಿಸಿ ಗ್ರಾಹಕರನ್ನು ಸೆಳೆದರು. ಸಂತೆ ಬಳಿಕ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಉಪನ್ಯಾಸಕಾರಾದ ಎನ್.ವಾಸು, ಮಂಜುನಾಥರೆಡ್ಡಿ, ವೇಣುಗೋಪಾಲ್, ಗೋಪಿನಾಥ್, ಜಿ.ಕೆ.ನಾರಾಯಣಸ್ವಾಮಿ, ಶಿವಾರೆಡ್ಡಿ, ಗಿರೀಶ್, ಉಪನ್ಯಾಸಕಿಯರಾದ ಲತಾ, ಬಿ.ಎನ್.ವೀಣಾ, ಸಿಆರ್ಪಿ ಚಂದ್ರಪ್ಪ, ಉಪಸ್ಥಿತರಿದ್ದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಅಸಂಪ್ಷನ್ ಶಾಲೆಗಳ 2023 ರ ವಾರ್ಷಿಕ ದಿನ / Assumption Schools Annual Day 2023, Hiriyur, Chitradurga District
ಚಿತ್ರದುರ್ಗ, ಹಿರಿಯೂರು, ನವೆಂಬರ್ 26, 2023: ಹಿರಿಯೂರಿನ ಅಸಂಪ್ಷನ್ ಶಾಲೆಗಳು, ಚಿತ್ರದುರ್ಗ ಜಿಲ್ಲೆ, ಶಿವಮೊಗ್ಗ ಧರ್ಮಪ್ರಾಂತ್ಯವು ತನ್ನ ವಾರ್ಷಿಕ ದಿನ 2023 ಅನ್ನು ನವೆಂಬರ್ 25 ರಂದು ಸಂಜೆ 5 ರಿಂದ 9:30 ರವರೆಗೆ ಆಚರಿಸಿತು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಬೆಂಗಳೂರು ಆರ್ಚ್ ಡಯಾಸಿಸ್ ನ ವಿಕಾರ್ ಜನರಲ್ ಮಾನ್ಸಿಂಜರ್ ಸಿ ಫ್ರಾನ್ಸಿಸ್ ವಹಿಸಿದ್ದರು. ಮೌಂಟ್ ಕಾರ್ಮೆಲ್ ಎಜುಕೇಶನ್ ಸೊಸೈಟಿ(ಆರ್) ಕಾರ್ಯದರ್ಶಿ ರೆ.ಫಾ.ವೀರೇಶ್ ಮೊರಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯೂರಿನ ಪುರಸಭಾ ಸದಸ್ಯೆ ಶ್ರೀಮತಿ ಮಗ್ದಲಾ ಮರಿಯಾ, ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಾಗೇಂದ್ರ ನಾಯಕ್, ಹಿರಿಯೂರಿನ ಪತ್ರಕರ್ತರ ಸಂಘದ ಅಧ್ಯಕ್ಷೆ ಆಲೂರು ಹನುಮಂತರಾಯಪ್ಪ, ಸುಪೀರಿಯರ್ ಚರ್ಚ್ ಕಾನ್ವೆಂಟ್ ನ ಶ್ರೀ.ಎಲ್ಸಮ್ಮ ಹಾಗೂ ಸುಪೀರಿಯರ್ ಚರ್ಚ್ ಕಾನ್ವೆಂಟ್ ನ ಮೇಟಿ ಮ್ಯಾಥ್ಯೂ. ವೇದಾವತಿನಗರ ಕಾನ್ವೆಂಟ್ ಅತಿಥಿಗಳಾಗಿದ್ದರು.
ವ್ಯವಸ್ಥಾಪಕ ಮತ್ತು ವರದಿಗಾರ ಫ್ರಾಂಕ್ಲಿನ್ ಡಿಸೋಜ ಗಣ್ಯರನ್ನು ಸ್ವಾಗತಿಸಿದರು. Msgr C Francis ಅವರು ಗಿಡಕ್ಕೆ ನೀರುಣಿಸುವ ಮೂಲಕ ವಾರ್ಷಿಕ ದಿನಾಚರಣೆಯನ್ನು ಉದ್ಘಾಟಿಸಿದರು. ಕನ್ನಡ ಪ್ರಾಥಮಿಕ ಅನುದಾನಿತ ಶಾಲೆಯ ಎಚ್ಎಂ ವೆರೋನಿಕಾ ವರದಿ ವಾಚಿಸಿದರು.
ತಮ್ಮ ಸಂದೇಶದಲ್ಲಿ ಫಾದರ್ ವೀರೇಶ್ ಮೊರಾಸ್ ಅವರು ಅಸಂಪ್ಷನ್ ಶಾಲೆಯ ಸಿಬ್ಬಂದಿಯ ಬದ್ಧತೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು. ತಮ್ಮ ಪರಿಶ್ರಮದಿಂದ ಡೈಮಂಡ್ ಫ್ಯಾಕ್ಟರಿಯ ಮಾಲೀಕನಾದ ರೈತನ ಕಥೆ ಹೇಳಿದರು. ಶಿಕ್ಷಣದಲ್ಲಿ ಪರಿಶ್ರಮ ಬಹಳ ಮುಖ್ಯ. ನಮ್ಮ ವಿದ್ಯಾರ್ಥಿಗಳನ್ನು ಜೀವನ ಮೌಲ್ಯಗಳಲ್ಲಿ ರೂಪಿಸಲು ನಮ್ಮ ಶಾಲೆಗಳು ಬದ್ಧವಾಗಿವೆ ಎಂದು ಹೇಳಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ Msgr C. ಫ್ರಾನ್ಸಿಸ್ ಶಿಕ್ಷಣದ ಧ್ಯೇಯ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ವಿವರಿಸಿದರು. ಮೌಲ್ಯಾಧಾರಿತ ಶಿಕ್ಷಣಕ್ಕೆ ನಮ್ಮ ಸಂಸ್ಥೆಗಳು ಬದ್ಧವಾಗಿವೆ ಎಂದರು. ನಿರ್ವಹಣೆಯ ಪಾತ್ರ, ಶಿಕ್ಷಕರ ಪಾತ್ರ ಮತ್ತು ಪೋಷಕರು ಮತ್ತು ವಿದ್ಯಾರ್ಥಿಗಳ ಪಾತ್ರವನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ಫ್ರಾಂಕ್ಲಿನ್ ಡಿಸೋಜ ಮತ್ತು ಅಸಂಪ್ಷನ್ ಇಂಗ್ಲಿಷ್ ಹೈಸ್ಕೂಲ್ ಎಚ್ ಎಂ ಫಾದರ್ ಅಲ್ಫೋನ್ಸ್ ನೆಲ್ಸನ್ ಡಿಸೋಜ ಇಬ್ಬರನ್ನೂ ಸನ್ಮಾನಿಸಿದರು.
ಹಿರಿಯೂರಿನ ಅಸಂಪ್ಷನ್ ಕನ್ನಡ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ, ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶ್ರೀ ನಾಗೇಂದ್ರ ನಾಯಕ್ ಮಾತನಾಡಿ ಅಸಂಪ್ಷನ್ ಶಾಲೆಯು ಸಮಾಜದಲ್ಲಿ ನಾಯಕನಾಗಿ ರೂಪುಗೊಂಡಿತು.
ಎಲ್ಲಾ ಗಣ್ಯರನ್ನು Msgr C Francis, Fr ವೀರೇಶ್ ಮೊರಾಸ್ ಮತ್ತು Fr ಫ್ರಾಂಕ್ಲಿನ್ ಡಿ’ಸೋಜಾ ಅವರು ಸನ್ಮಾನಿಸಿದರು.
ಹಿರಿಯೂರು ತಾಲೂಕು ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸರ್ ದಯಾನಂದ ಅವರನ್ನು ಶಾಲೆ ಗೌರವಿಸಿತು.
ಫ್ರಾಂಕ್ಲಿನ್ ಡಿ’ಸೋಜಾ, ವ್ಯವಸ್ಥಾಪಕರು ಅವರ ಸಮರ್ಪಿತ ಸೇವೆಗಾಗಿ HM ಗಳಿಂದ ಸನ್ಮಾನಿಸಲಾಯಿತು.
ವ್ಯವಸ್ಥಾಪಕರು ಮತ್ತು ವರದಿಗಾರರಾದ ಫ್ರಾಂಕ್ಲಿನ್ ಡಿಸೋಜ ಅವರು ಅಭಿನಂದಿಸಿದರು ಮತ್ತು ಥಾ ಕೆಡ್ HM ಗಳು; ಫಾದರ್ ನೆಲ್ಸನ್ ಡಿಸೋಜಾ, ಶ್ರೀ ಹೆನ್ರಿ ಕ್ರಾಸ್ತಾ, ಸೀನಿಯರ್ ವೆರೋನಿಕಾ, ಸೀನಿಯರ್ ಮಾರ್ಥಾ ಮತ್ತು ಅವರ ಸಿಬ್ಬಂದಿ ವಾರ್ಷಿಕ ದಿನಾಚರಣೆಯನ್ನು ಆಯೋಜಿಸಿದ್ದಾರೆ. ಎಲ್ಲಾ ಎಚ್ಎಂಗಳ ಪರವಾಗಿ ಫಾದರ್ ನೆಲ್ಸನ್ ಡಿಸೋಜಾ ಮತ್ತು ಸೀನಿಯರ್ ಮಾರ್ತಾ ಅವರನ್ನು ಅತಿಥಿಗಳು ಸನ್ಮಾನಿಸಿದರು.
ಎಇಎಚ್ಎಸ್ನ ಸರ್ ಮೈಲುಸ್ವಾಮಿ ಮತ್ತು ಶ್ರೀಮತಿ ಅನಿತಾ ಎಕೆಎಚ್ಎಸ್ ಕಾರ್ಯಕ್ರಮ ನಿರೂಪಿಸಿದರು. ಎಇಎಚ್ಪಿಎಸ್ನ ಸರ್ ಜನಾರ್ಧನ್ ಗಣ್ಯರಿಗೆ ಧನ್ಯವಾದ ಅರ್ಪಿಸಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾದವು. ಈ ಕಾರ್ಯಕ್ರಮಗಳು “ಮೌಲ್ಯಗಳ ಜೀವನವು ಮೌಲ್ಯಯುತವಾದ ಜೀವನ” ಎಂಬ ವಿಷಯದ ಮೇಲೆ ಆಧಾರಿತವಾಗಿದೆ. ರಾತ್ರಿ 9:30ಕ್ಕೆ ಕಾರ್ಯಕ್ರಮಗಳು ಮುಕ್ತಾಯಗೊಂಡವು.
Assumption Schools Annual Day 2023, Hiriyur, Chitradurga District
Chitradurga, Hiriyur, November 26, 2023: Assumption Schools of Hiriyur, Chitradurga District, Diocese of Shimoga celebrated its Annual Day 2023 on November 25th evening 5pm to 9:30pm.
Monsignor C Francis, Vicar General of Archdiocese of Bangalore was the president of the program. Rev. Fr Veeresh Moras, Secretary of Mount Carmel Education Society(R) was the guest speaker. Mrs. Magdala Maria, Councillor, Muncipality member of Hiriyur, Mr. Nagendra Nayak, Zilla panchayath Ex member, Chitradurga, Mr. Aluru Hanumantharayappa, president Journalist association of Hiriyur, Sr. Elsamma, Superior Church Convent and Sr. Metty Matthew, Superior of Vedavatinagar Convent were the guests.
Manager and Corresspondent Fr Franklin D’Souza welcomed the dignitaries. Msgr C Francis inaugurated the Annual Day by watering a plant. Sr. Veronica, HM of Kannada Primary aided School read the report.
In his message Fr Veeresh Moras appreciated the commitment and dedication of Assumption School staff. He told a story of a farmer who became a owner Daimond factory by his perseverance. In education perseverance is very important. He said our Schools are committed to form our students in values of life.
In his presidential address Msgr C. Francis explained the mission of education and its impact on the society. He said our institutions are committed for value based education. He explained with examples the role of management, the role of the teachers and the role of Parents and Students.
Fr Franklin D’Souza and Assumption English High School HM Fr Alphonse Nelson D’Souza honoured both of them.
Mr. Nagendra Nayak, Zilla panchayath Ex member of Chitradurga an old student of Assumption Kannada High School, Hiriyur spoke how Assumption School formed him to be a leader in the society.
All the dignitaries were honoured by Msgr C Francis, Fr Veeresh Moras and Fr Franklin D’Souza.
School honoured Sir Dayanand for receiving best teacher award at Hiriyur Taluk level.
Fr Franklin D’Souza, the Manager was honoured by the HMs for his dedicated services.
Manager and Corresspondent Fr Franklin D’Souza congratulated and tha ked HMs; Fr Nelson D’Souza, Mr. Henry Crasta, Sr. Veronica, Sr. Martha and their staff for organising the Annual Day celebrations. On behalf of all HMs Fr Nelson D’Souza and Sr. Martha were felicitated by the guests.
Sir Myluswamy from AEHS and Ms. Anitha AKHS compered the program. Sir Janardhan from AEHPS thanked the dignitaries.
Then the cultural programmes by students began. These programmes were based on the theme “A life of values is a life of worth living”. Programmes concluded at 9:30pm.
ಎಸ್ ಡಿಎ ಮಹಿಳಾ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಹಾಸನ: ಎಸ್ ಡಿಎ ಮಹಿಳಾ ಅಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ರಕ್ಷಣಾಪುರಂನಲ್ಲಿ ನಡೆದಿದೆ..
31 ವರ್ಷದ ಸುಚಿತ್ರಾ ಮೃತ ಮಹಿಳೆ ಅಧಿಕಾರಿ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮ್ ಒನ್ ಕೇಂದ್ರದಲ್ಲಿ ಎಸ್ ಡಿಎ ಅಧಿಕಾರಿಯಾಗಿ
ಕಾರ್ಯನಿರ್ವಹಿಸುತ್ತಿದ್ದರು.
ಸುಚಿತ್ರಾ ಅವರ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪತಿಯ ಹುದ್ದೆಯನ್ನು ಪತ್ನಿಗೆ ನೀಡಲಾಗಿತ್ತು. ಆದರೆ ಈಗ ಏಕಾಏಕಿ
ರಕ್ಷಣಾಪುರಂ ಬಡಾವಣೆಯ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಎಸ್ ಡಿಎ ಅಧಿಕಾರಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Annual day 2023 Symphony of Diversity Theme: Harmony St. Joseph’s school Bangluru/ ಬೆಂಗಳೂರು: ಸೇಂಟ್ ಜೋಸೆಫ್ಸ್ ಸಿಬಿಎಸ್ಇ “ಶಾಲಾ ವಾರ್ಷಿಕೋತ್ಸವ-ಸಾಮರಸ್ಯ ಬೆಳಕಿನ ಅನಾವರಣ”
Bangluru: “A fine work of art – music, dance, painting, story – has the power to silence the chatter in the mind
and lift us to another place” – Robert McKee.
This truly sums up the profound experience felt by one and all present at The Annual Day – A Symphony of Diversity which was the extravaganza organized by St Joseph’s School on 25th November 2023 at the school grounds. The theme for the evening was HARMONY – the mingling of creativity, rhythm and melody that brought to life a harmonious medley of talents from the amazing children. The Annual Day has always been a much-anticipated event which showcases the budding talents of the students of the school through dance and drama.
The evening began solemnly with the invocation dance followed by the lighting of the lamp which set the stage for the amazing evening ahead. The Annual Report gave the gathering an explicit overview of the past year’s events conducted by the school. Ms Nirmala Briggs extended a warm and eloquent welcome to the Chief Guest and all the dignitaries present on the dais. The welcome address was followed by the releasing of the newsletter “Josephite Chronicles”. A book authored by the honourable Chief Guest, “Fillipisms-3333 Maxims” was released on this occasion.
Ms. Poornima gave an inspiring introduction to the Chief Guest Dr. Prateep V Philip, IPS, Former Director General of Police, CB-CID, Tamil Nadu, whose exemplary career and accolades left everyone in awe of him. The event was presided by Rector Rev Fr Joseph D’Souza, Principal Rev Fr Rohan D’Almeida, Vice Principal Sr Sheena, Rev Fr Cyril Menezes SJ, Director, SJIC PUC, Mr Vinod Amritraj Principal SJIC PUC, Rev Fr John Baptist SJ, Director and Principal of St Joseph’s Community College, Sr Jane Benita, Headmistress of SJIPS, Rev Fr John Lang SJ, Finance Officer, Rev Fr Felix Anand SJ, Director, Inigo Sadan, teacher coordinators and representatives of the Alumni Association and PTA.
The Chief Guest, Dr. Prateep V Philip, an eminent alumnus of our Jesuit Institution addressed the gathering and left a strong impact with his words filled with unshakeable faith in God as he motivated the children to excel in life, have deep faith in God and always keep trying to improve oneself. His motivational address set the tempo for the energetic evening that followed.
Our beloved Rector, Rev Fr Joseph D’Silva in his address, quoting from Shakespeare, spoke of the 450-year legacy of Jesuit Institutions and the guiding principle behind the motto of the institution. His words invoked deep pride and respect for the Jesuit traditions.
Kahlil Gibran has beautifully said “Music is the language of the spirit. It opens the secret of life bringing peace, abolishing strife.”
Principal Rev Fr Rohan D’Almeida along with the Chief Guest and the dignitaries inaugurated the cultural event. The cultural extravanganza began with an invocation dance – a fusion of various classical dance forms in India.
In a world characterized by diversity, cultural events serve as a bridge between people of different backgrounds and traditions. St Joseph’s School proudly boasts of an amalgamation of people from various regions, cultures and walks of life. The performances of the evening resonated with the evening’s theme “Harmony – a symphony of diversity” which showcased the traditions and art forms that have been passed down through generations, ensuring that these precious elements of our collective identity continue to thrive.
The tableau brought to life the theme of the evening Harmony – a harmonious existence not only with fellow beings but with all creatures on the earth. The mime enactment kept the audience enthralled with their animated performance. The grand finale was mesmerizing and kept the audience on their feet with their amazing performance and displays.
In contrast to the discord around the world, the dances and plays of the day touched the hearts of all the guests gathered in the evening.
The vote of thanks was rendered by student representative Rayden.
As the evening drew to an end, a sense of nostalgia filled the air as the guests and students left with a heart filled with gratitude for the exhilarating evening. The event served as a reminder that our differences are not barriers but rather threads that weave together the rich tapestry of human experience.
The feedback shared by the parents of our students are as follows:
The kids performed gracefully and confidently. The whole experience was overwhelming. Big screens helped us to see the performance to max possibility. Your vision and directions, hard work of teachers and the dedication of children performing were superb. We wish the very best to the school management, the Teachers, PTA, Parent Volunteers and all the children who together delivered an outstanding experience last evening. The Theme- Harmony and Symphony of Diversity was depicted in each and every performance. Thank you once again for this wonderful performanc
Best Regard Parents of Lavith 7A and Rachit 2D.
Congratulations! The Annual Day was fantastic. I have not seen any Annual Day as lovely as this. You are a visionary.
The annual day program was excellent. The whole event was very well organized, and the cultural program was very good. Hats off to the Annual Day committee for their selfless efforts. Great job!!!
Annual Day program was well organized Father, enjoyed every moment. The theme on Harmony and Diversity was an excellent choice and every performance was stressing the importance of the same
ಬೆಂಗಳೂರು: ಸೇಂಟ್ ಜೋಸೆಫ್ಸ್ ಸಿಬಿಎಸ್ಇ “ಶಾಲಾ ವಾರ್ಷಿಕೋತ್ಸವ-ಸಾಮರಸ್ಯ ಬೆಳಕಿನ ಅನಾವರಣ”
ನಗರದ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ಸಿಬಿಎಸ್ಇ ಶಾಲೆಯು ದಿನಾಂಕ ೨೫.೧೧.೨೦೨೩
ರಂದು ” ಸಾಮಾರಸ್ಯ” ಎಂಬ ಶೀರ್ಷಿಕೆಯಡಿಯಲ್ಲಿಶಾಲಾ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿತ್ತು. ಶಾಲಾ ಗೀತೆಯ
ಮೂಲಕ ಶಿಕ್ಷಣ ಸಂಸ್ಥೆಗೆ ಗೌರವವನ್ನು ಸಲ್ಲಿಸಲಾಯಿತು. ಕಾರ್ಯ ಕ್ರಮವು ಪ್ರಾರ್ಥನ ನೃತ್ಯದೊ ಂದಿಗೆ
ಪ್ರಾರಂಭಗೊಂಡಿತು. ಸರ್ವರನ್ನು ಕಾರ್ಯಕ್ರಮಕ್ಕೆ ತುಂಬು ಹೃದಯದಿಂದ ಸ್ವಾಗತಿಸಲಾಯಿತು. ಸಂಪೂರ್ಣ ಶಾಲಾ
ವಾರ್ಷಿಕ ವರದಿಯನ್ನು ವೀಡಿಯೋ ಮೂಲಕ ಸೊ ಗಸಾಗಿ ಬಿತ್ತರಿಸಲಾಯಿತು ಇದೇ ಸಂದರ್ಭದಲ್ಲಿಶಾಲಾ ವಾರ್ತಾ
ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ, ಸಿ ಬಿ ಮತ್ತುಸಿಐಡಿಯ ಮಾಜಿ
ಪೊಲೀಸ್ ಮಹಾ ನಿರ್ದೇಶಕರಾದ ಮಾನ್ಯ ಡಾ. ಪ್ರದೀಪ್ ವಿ ಪಿಲಿಫ್ಸ್ ಐಪಿಎಸ್ ರವರು ಕಾರ್ಯಕ್ರಮವನ್ನು
ಉದ್ಛಾಟನೆ ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ವೇದಿಕೆಯಲ್ಲಿನೆರೆದಿದ್ದಸರ್ವರು ಇದರಲ್ಲಿ
ಭಾಗಿಯಾದರು ಹಾಗೂ ರೆವರೆಂಟ್ ಫಾದರ್ ಜೋಸೆಫ್ಸ್ ಡಿಸೋ ಜ್ ರವರು ಡಾ. ಪ್ರದೀಪ್ ವಿ ಪಿಲಿಫ್ಸ್ ರವರು
ಬರೆದಂತಹ ಪುಸ್ತಕವನ್ನು ಬಿಡುಗಡೆ ಮಾಡಿದರು. ಪ್ರಾಂಶುಪಾಲರಾದ ರೆವರೆಂಟ್ ಫಾದರ್ ರೋ ಹನ್ ಡಿ
ಅಲ್ಮೇಡರವರು ಶಾಲೆಯ ಪರವಾಗಿ ಅವರನ್ನು ಸಕಲ ಗೌರದೊ ಂದಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಡಾ.
ಪ್ರದೀಪ್ ವಿ ಪಿಲಿಫ್ಸ್ ರವರು ಮಾತನಾಡುತ್ತಾ ಭಗವಂತನು ಈ ಭೂಮಿಯಲ್ಲಿ ಸೃಷ್ಠಿಸಿರಿರುವ ಪ್ರತಿಯೊಬ್ಬ
ಮನುಷ್ಯನಲ್ಲೂ ವಿಶಿಷ್ಟವಾದ ಗುಣಗಳನ್ನು ನೀಡಿದ್ದಾನೆ ನಾವು ಅದನ್ನು ಬಳಸಿಕೊಂಡು, ಸಮಾಜಕ್ಕೆ ಉತ್ತಮ
ಮೌಲ್ಯಗಳನ್ನು ನೀಡಬೇಕು . ಅಂಥ ಮೌಲ್ಯವನ್ನು ಸೇಂಟ್ ಜೋಸೆಫ್ಸ್ ಶಿಕ್ಷಣ ಸಂಸ್ಥೆನೀಡುತ್ತಾಬಂದಿದೆ, ನಂಬಿಕೆ
ಮತ್ತು ಶ್ರಮ ಎಂಬ ಸಂಸ್ಥೆಯ ಮೋಟೊವನ್ನು ಅವರು ಹೊ ಗಳುವುದರೊ ಂದಿಗೆ ಸೇವೆಯ ವೈಖರಿಯನ್ನು
ಪ್ರಶಂಶಿಸಿದರು. ವಿದ್ಯಾರ್ಥಿಗಳು ಸದಾ ದೇವರಿಗೆ ಮತ್ತುತಂದೆ ತಾಯಿಯರಿಗೆ ದೀನ ಮನಸ್ಸುಳ್ಳವರಾಗಿ , ಸದಾ
ಸಾಧನೆ ಹಾದಿಯಲ್ಲಿ ಹೆಜ್ಜೆ ಇಡಬೇಕು. ಪ್ರತಿಭೆ , ಸಾಮರ್ಥ್ಯವೆಂಬುದು ಮಕ್ಕಳಲ್ಲಿ ಸ್ವಾಭಾವಿಕವಾಗಿದ್ದು ಅದನ್ನು
ಬೆಳೆಸುವಂತಹ ಜವಬ್ದಾರಿ ಶಿಕ್ಷಣದಾಗಿರುತ್ತದೆ. ದೇಶದ ಭವಿಷ್ಯ ಇಂದಿನ ವಿದ್ಯಾರ್ಥಿಗಳು ಎಂದು ಅವರು ಹೇಳಿದರು
ಗೌರವಾನ್ವಿತ ಅಥಿತಿಗಳಾಗಿ ಆಗಮಿಸಿದ್ದಸೇಂಟ್ ಜೋಸೆಫ್ಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ರೆವರೆಂಟ್ ಫಾದರ್
ಜೋಸೆಫ್ಸ್ ಡಿಸೋ ಜ್ ರವರು ಮಾತನಾಡಿ ಜೆಸ್ವಿಟ್ ನ ೪೫೦ ವರ್ಷದ ಸಾಂಪ್ರಾದಾಯಿಕ ಶಿಕ್ಷಣ ಸೇವೆಯ ಬಗ್ಗೆ
ತಿಳಿಸುತ್ತಾ, ಸಮಾಜದ ಸೇವೆಗೆ ಪುರುಷ ಮತ್ತುಮಹಿಳೆಯರನ್ನು ಸಜ್ಜುಗೊ ಳಿಸುವುದೇ ಜೆಸ್ವಿಟ್ ನ ಧ್ಯೇಯ ಅದಕ್ಕೆ
ಉತ್ತಮ ಉದಾಹರಣೆಯೆಂದರೆ ಇಂದು ನಮ್ಮ ನಡುವೆ ಡಾ. ಪ್ರದೀಪ್ ವಿ ಪಿಲಿಫ್ಸ್ ಅವರು ನಮ್ಮ ಶಿಕ್ಷಣ ಸಂಸ್ಥೆಯ
ಹಳೆಯ ವಿದ್ಯಾರ್ಥಿಯಾಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿರುವುದೇ ಸಾಕ್ಷಿ, ಇದು ಬಲು
ಸಂತಸದ ವಿಷಯ ಎಂದು ಹೇಳಿದರು .ವಿದ್ಯಾರ್ಥಿಗಳು ಸಾಮರಸ್ಯ ಸಾರುವ ಸಂದೇಶವನ್ನು ವಿವಿಧ ಸಾಂಸ್ಕೃತಿಕ
ನೃತ್ಯಗಳ ಮೂಲಕ ಮನಮುಟ್ಟುವಂತೆ ಬಣ್ಣಬಣ್ಣದ ವಿನ್ಯಾಸದ ಉಡುಪುಗಳನ್ನು ತೊ ಟ್ಟು ಸಂಗೀತಕ್ಕೆ ಹೆಜ್ಜೆಹಾಕಿ
ಸಂಭ್ರಮಿಸಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಭಾವೈಕ್ಯತೆಯ ಕುರಿತು ಸಾಮಾಜಿಕ ನಾಟಕ, ಸಂಸ್ಖೃತಿಯನ್ನು
ಬಿಂಬಿಸುವ ಭರತನಾಟ್ಯ, ಕತಕ್ ನೃತ್ಯ, ವಂತೇ ಮಾತರಂ ಎಂದು ಸಾರುವ ಸಾಕ್ಷ್ಯ
ಚಿತ್ರ, ಕಲೆಯನ್ನು ಚಿತ್ರಿರಿಸುವ
ಚಿತ್ರಕಲೆ, ಪ್ರೇರಣೆಯನ್ನು ನೀಡುವ ಅಣುಕು ನಾಟಕ ಮತ್ತುಷೇಕ್ಸ್ ಪಿಯರ್ ಚಿತ್ರನಾಟಕ ನೆರೆದಿದ್ದವರನ್ನು ಮಂತ್ರ
ಮುಗ್ಧರನ್ನಾಗಿಸಿತ್ತು, ಭೂಮಿಯ ಪ್ರತಿಯೊಂದು ಜೀವಿಯ ಮೂಲ ಮಂತ್ರ ಶಾಂತಿ, ಸಹಬಾಳ್ವೆ, ಸೌಹಾರ್ದತೆ,
ಹಾಗೂ ಐಕ್ಯತೆಯಾಗಿರಬೇಕು, ಸೃಷ್ಟಿಯಲ್ಲಿನ ಬ್ರಹ್ಮಾಂಡವನ್ನು ಪೂಜಿಸುತ್ತಾ ಉಳಿಸುವಂತಹ ಕರ್ತವ್ಯ
ಮಾನವನದಾಗಬೇಕು. ಜಗತ್ತಿನಲ್ಲಿ ವಿಶ್ವಮಾನವಿಯತೆ ಬೆಳಕು ಬೆಳಗುತ್ತಿರಬೇಕು ಎಂಬ “ವಿಶ್ವ ಮಾನವ”
ಸಂದೇಶವನ್ನು ಶಾಲಾ ವಾರ್ಷಿಕೋತ್ಸವವು ಸಾರಿತು. ನಾವೆಲ್ಲರೂ ಒಂದೇ ಎಂಬ ಘೋಷಣೆಯೊಂದಿಗೆ
ಕಾರ್ಯಕ್ರಮವು ಕೊನೆಗೊ ಂಡಿತು. ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ
ರೆವರೆಂಟ್ ಫಾದರ್ ಜೋಸೆಫ್ಸ್ ಡಿಸೋ ಜ್ ಶಾಲಾ ಪ್ರಾಂಶುಪಾಲರಾದ ರೆವರೆಂಟ್ ಫಾದರ್ ರೋ ಹನ್ ಡಿ ಅಲ್ಮೇಡ,
ಶಿಕ್ಷಣ ಸಂಸ್ಥೆಯ ಖಜಾಂಜಿಯಾದ ರೆವರೆಂಟ್ ಫಾದರ್ ಜಾನ್ ಲ್ಯಾಂಗ್, ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ,
ಸೇಂಟ್ ಜೋಸೆಫ್ಸ್ ಪದವಿಪೂರ್ವ ಕಾಲೇಜಿನ ನಿರ್ದೇಶಕರು ಮತ್ತುಪ್ರೌಢ ಶಾಲೆಯ ಪ್ರಾಂಶುಪಾಲರಾದ ರೆವರೆಂಟ್
ಫಾದರ್ ಸಿರಿಲ್ ಮೆನೆಜ್ಸ್, ಇನಿಗೋ ಸದನದ ನಿರ್ದೇಶಕರಾದ ರೆವರೆಂಟ್ ಫಾದರ್ ಫೆಲಿಕ್ಸ್ ಆನಂದ್ ಸೇಂಟ್
ಜೋಸೆಫ್ಸ್ ಕಮ್ಯೂನಿಟಿ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಟ್ ಫಾದರ್ ಜಾನ್ ಬ್ಯಾಟೀಸ್, ಸೇಂಟ್ ಜೋಸೆಫ್ಸ್
ಪ್ರೈಮರಿ ಶಾಲೆಯ ಉಪ ಪ್ರಾಂಶುಪಾಲರಾದ ಸಿಸ್ಟರ್ ಜೇನ್ ಬೆನಿಟ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ
ಬಾಬು ಸಿ ಜೋಸೆಫ್, ಪೋಷಕ ಸಭೆಯ ಸದ್ಯಸ್ಯರಾದ ಕಮಲ್, ಸ್ಕೇಪ್ ನ , ಕಾರ್ಯನಿರ್ವಾಕರಾದ ಜೋಸೆಫ್ಸ್
ಸ್ಟಾಲಿ, ಬ್ರದರ್ ಇವೆನ್, ಜಾನ್ ಬೆನೆಟಿಕ್, ಮತ್ತುಶಾಲಾ ಸಂಯೋಜಕರು ಉಪಸ್ಥಿತರಿದ್ದರು. ಶಿಕ್ಷಕರು, ಪೋಷಕರು
ಮತ್ತುವಿದ್ಯಾರ್ಥಿಗಳು ಮರೆಯಲಾದ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.
ಬರೇ ಎರಡು ವರ್ಷದಲ್ಲಿ 900 ಭ್ರೂಣಗಳ ಹತ್ಯೆ – ವೈದ್ಯರು ಸೇರಿದಂತೆ 9 ಆರೋಪಿಗಳ ಬಂಧನ-ಆಯುರ್ವೇದ ಫೈಲ್ಸ್ ಡೇ ಕೇರ್ ಸೆಂಟರ್ ಸೀಜ್
ಬೆಂಗಳೂರು,ನ.25:ಭ್ರೂಣ ಪತ್ತೆ ಪ್ರಕರಣದ ತನಿಖೆ ವೇಳೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಭ್ರೂಣಗಳನ್ನು ಪತ್ತೆ ಮಾಡಿ ಅಬಾರ್ಷನ್ ಮಾಡಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 900 ಭ್ರೂಣ ಹತ್ಯೆ ಮಾಡಿರೋದು ತಿಳಿದು ಬಂದಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು. ನಾಲ್ವರು ಗರ್ಭಿಣಿಯರನ್ನು ಸ್ಕ್ಯಾನ್ ಮಾಡಿಸುತ್ತಿದ್ದರು.ಇದು ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕ್ಯಾನ್ ಮಾಡಿಸುತ್ತಿದ್ದಾಗ ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್ ಹೆಸರಿನವರನ್ನು ಬಂಧಿಸಲಾಗಿತ್ತು.
ಆರೋಪಿಗಳ ತನಿಖೆ ಬೆನ್ನಲ್ಲೇ ಭ್ರೂಣ ಹತ್ಯೆ ಮಾಡುತ್ತಿದ್ದ ವೈದ್ಯರೂ ಸಹ ಬಂಧಿತರಾಗಿದ್ದರು.. ಚೆನ್ನೈ ಮೂಲದ ಡಾ.ತುಳಸಿರಾಮ್, ಡಾ.ಚಂದನ್ ಬಲ್ಲಾಳ್ ಹಾಗೂ ಪತ್ನಿ ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ರೀಜ್ಮಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ನನ್ನು ಬಂಧಿಸಲಾಗಿತ್ತು. ಒಟ್ಟು ಒಂಬತ್ತು ಮಂದಿ ಸೇರಿ ವ್ಯವಸ್ಥಿತವಾಗಿ ಭ್ರೂಣ ಹತ್ಯೆ ಮಾಡುವ ಕೃತ್ಯ ಎಸೆಗುತ್ತಿದ್ದರು. ಆರೋಪಿಗಳು ತಿಂಗಳಲ್ಲಿ 20 ರಿಂದ 25 ಭ್ರೂಣ ಹತ್ಯೆ ಮಾಡುತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕೃತ್ಯ ಎಸಗುತ್ತಿರೋದು ಬೆಳಕಿಗೆ ಬಂದಿದ್ದು,.ಮೈಸೂರಿನ ಉದಯಗಿರಿಯಲ್ಲಿನ ಮಾತಾ ಆಸ್ಪತ್ರೆ ಮತ್ತು ರಾಜ್ ಕುಮಾರ್ ರಸ್ತೆಯ ಆಯುರ್ವೇದ ಫೈಲ್ಸ್ ಡೇ ಕೇರ್ ಸೆಂಟರ್ ಅನ್ನು ಇದೇ ವೇಳೆ ಪೊಲೀಸರು ಸೀಜ್ ಮಾಡಿದ್ದರೆ. ಆಯುರ್ವೇದ ಡೇ ಕೇರ್ ಸೆಂಟರ್ನಲ್ಲಿಯೇ ಭ್ರೂಣ ಹತ್ಯೆ ನಡೆಯುತಿತ್ತು ಅನ್ನೋದು ತನಿಖೆಯಿಂದ ಬಯಲಾಗಿದೆ.
ಬೆಂಗಳೂರಿನಲ್ಲಿ ಕರಾವಳಿಯ ಶ್ರೀಮಂತ ಕ್ರೀಡೆ ಕಂಬಳ : ಅಶ್ವಿನಿ ಪುನೀತ್ ರಾಜ್ಕುಮಾರ್ ಇವರಿಂದ ಚಾಲನೆ
ಬೆಂಗಳೂರು, ನ.೨೫: ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನವೆಂಬರ್ 25 ರಂದು ಹಾಗೂ 26 ರಂದು ಕರಾವಳಿ ಶ್ರೀಮಂತ ಕ್ರೀಡೆ ಕಂಬಳ ಆಯೋಜಿಸಲಾಗಿದ್ದು, ʼಬೆಂಗಳೂರು ಕಂಬಳʼಕ್ಕೆ ಮೊದಲ ಕೆರೆ ಉದ್ಘಾಟನೆ ನಡೆದಿದೆ. ಇಂದು ಈ ಸಮಾರಂಭದಲ್ಲಿ ಪಾಲುಗೊಂಡ ಅಶ್ವಿನಿ ಪುನೀತ್ ರಾಜ್ಕುಮಾರ್ ವಿಶೇಷ ದೀಪ ಬೆಳಗಿಸಿ, ಗಂಗಾರಾತಿ ಮಾಡುವುದರ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ರೈ ಹಾಗೂ ಬೆಂಗಳೂರು ಕಂಬಳ ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಕಂಬಳಕ್ಕೆ ಜನ ಸ್ತೋಮ ಸೇರಿಕೊಂಡಿದೆ.
ಇದಕ್ಕೂ ಮೊದಲು ರಾಜ ಮಹರಾಜ ಹೆಸರಿನ ಕಂಬಳ ಕೆರೆಗೆ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೈವ, ದೇವರ ಪ್ರಸಾದ ಕಂಬಳ ಕೆರೆಯ ನೀರಿಗೆ ಅರ್ಪಣೆ ಮಾಡಿ, ಯಾವುದೇ ಅಡ್ಡಿ- ಆತಂಕ ಎದುರಾಗದಂತೆ ಪ್ರಾರ್ಥನೆ ಸಲ್ಲಿಸಿ, ದೀಪ ಬೆಳಗಿಸಿ ಕಾಯಿ ಒಡೆದರು. ಈ ಸಂದರ್ಭ ಮಾಜಿ ಮುಖ್ಯಮಂತ್ರಿ. ಬಿಎಸ್ ಯಡಿಯೂರಪ್ಪ, ಸಂಸದ ಸದಾನಂದ ಗೌಡ, ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಬೆಂಗಳೂರು ಕಂಬಳ ಸಮಿತಿ. ಅಧ್ಯಕ್ಷ ಅಶೋಕ್ ಕುಮಾರ್. ರೈ ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಗೊಂಡ ಮಹತ್ವದ ಓಟದ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಭಾಗಿಯಾಗಲಿದ್ದಾರೆ.
ಈ ಕರಾವಳಿ ಕಂಬಳ ಉತ್ಸವಕ್ಕೆ ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ನಟ ದರ್ಶನ್, ಕಾಂತಾರ ಹೀರೋ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಉಪೇಂದ್ರ, ಶಿವಣ್ಣ, ಆಶಿಶ್ ಬಲ್ಲಾಳ್, ವಿವೇಕ್ ಒಬೆರಾಯ್, ರಾಜ್ ಬಿ ಶೆಟ್ಟಿ, ಮೇಘಾ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗುತ್ತಿದ್ದು, ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕರಾವಳಿಯ ಸಮಸ್ತ ಸಮುದಾಯದವರು ಒಂದೆಡೆ ಒಗ್ಗಟ್ಟಾಗಿ ಸೇರುವ ಮೂಲಕ ರಾಜ್ಯದಲ್ಲಿ ನೂತನ ಪರಂಪರೆ ಆರಂಭವಾಗಲಿದೆ ಎಂದು ಹೇಳಬಹುದು.
ಇಂದಿನ ಬೆಂಗಳೂರು ಕಂಬಳದಲ್ಲಿ ಕರಾವಳಿಯ ವಿವಿಧ ಭಾಷೆ-ಜಾತಿಗಳ 50ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದು, ಈಗಾಗಲೇ ೧೮೦ ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ನಡೆಯಲಿದೆ ಎಂದು ಬೆಂಗಳೂರಿನ ಕಂಬಳ ತಂಡ ತಿಳಿಸಿದೆ.
ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ! ನಾಲ್ಕೂ ಗಂಡು ಮಕ್ಕಳು!!
ಬಿಹಾರ: ಗರ್ಭಿಣಿಯೊಬ್ಬರು ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಜಿಲ್ಲೆಯ ನೈನಿಜೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಜೋಟ್ಯಿ ನೈನಿಜೋರ್ ಗ್ರಾಮದ ಭರತ್ ಯಾದವ್ ಅವರ ಪತ್ನಿ ಜ್ಞಾನತಿ ದೇವಿ (32) ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರ ಇಡೀ ಕುಟುಂಬವು ಅತ್ಯಂತ ಸಂತೋಷದಿಂದ ನವಜಾತ ಶಿಶುಗಳ ಆರೈಕೆಗಾಗಿ ಒಟ್ಟಿಗೆ ಕೂಡಿದ್ದಾರೆ.
ಈ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ ನಾಲ್ಕು ಶಿಶುಗಳು ಜನಿಸಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ. ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳು ಜನಿಸಿರುವ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜ್ಞಾನಿ ದೇವಿಗೆ ಶಸ್ತ್ರಚಿಕಿತ್ಸೆ ನಡೆಸಿದ ಸ್ತ್ರೀರೋಗ ತಜ್ಞ ಡಾ.ಗುಂಜನ್ ಸಿಂಗ್ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮೊದಮೊದಲು ಜ್ಞಾನತಿದೇವಿಯ. ಹೊಟ್ಟೆಯಲ್ಲಿ ನಾಲ್ವರು ಮಕ್ಕಳಿರುವುದು ನಮಗೆ ಗೊತ್ತಿರಲಿಲ್ಲ. ನಂತರ ಮಹಿಳೆ ಹೊಟ್ಟೆಯಲ್ಲಿ ಒಂದಲ್ಲ ನಾಲ್ಕು ಮಕ್ಕಳನ್ನು ಹೊತ್ತಿರುವುದು ಪತ್ತೆಯಾಗಿದೆ. ಮೇಲಾಗಿ
ನಾಲ್ವರು ಹುಡುಗರಿರುವುದು ಗೊತ್ತಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ನಾಲ್ಕು ಶಿಶುಗಳು ಮತ್ತು ತಾಯಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು” ಡಾ.ಗುಂಜನ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.