ಶ್ರೀನಿವಾಸಪುರ: ಪಟ್ಟಣದ ಮಾರುತಿ ಸಭಾ ಭವನದಲ್ಲಿ ನ.17 ರಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಮಟ್ಟದ ಜನತಾ ದರ್ಶನ ಸಕರ್ಾರದ ಮಹತ್ವಪೂರ್ಣ ಕಾರ್ಯಕ್ರಮವಾಗಿದ್ದು, ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆ ಕಲ್ಪಿಸುತ್ತದೆ ಎಂದು ಹೇಳಿದರು.
ತಾಲ್ಲೂಕಿನ ಎಲ್ಲ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು. ತಮ್ಮ ಇಲಾಖೆಗಳಿಂದ ಫಲಾನುಭವಿಗಳಿಗೆ ದೊರೆಯುವ ಅನುಕೂಲಗಳ ಮಾಹಿತಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕಾರ್ಯಕ್ರಮಕ್ಕೆ ಗೈರು ಹಾಜರಾಗಬಾರದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಭಾಗ್ಯಲಕ್ಷ್ಮಿ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿದರ್ೇಶಕ ಎಂ.ಶ್ರೀನಿವಾಸನ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ನಾರಾಯಣಸ್ವಾಮಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್ ಕುಮಾರ್ ಇದ್ದರು.
Month: November 2023
ಶ್ರೀನಿವಾಸಪುರ ಕರ್ನಾಟಕ ಜನಪರ ವೇದಿಕೆಯಿಂದ ಪಟ್ಟಣದಲ್ಲಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ತಹಶೀಲ್ದಾರ್ ಶರೀನ್ತಾಜ್ ರವರಿಗೆ ಮನವಿ
ಶ್ರೀನಿವಾಸಪುರ 2 : ಪಟ್ಟಣ ತಹಶೀಲ್ದಾರ್ ಕಛೇರಿಯ ಮುಂಭಾಗ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪಟ್ಟಣದಲ್ಲಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡಿಸಿ ತಹಶೀಲ್ದಾರ್ ಶರೀನ್ತಾಜ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಯುವ ಘಟಕದ ಅಧ್ಯಕ್ಷ ಸುಬ್ರಮಣಿ, ಮಾತನಾಡಿ ಪೋಸ್ಟ್ ಆಫೀಸ್ ಕಛೇರಿ ಮುಂಭಾಗದ ರಸ್ತೆ ಹಾಗು ಪಟ್ಟಣದ ಕೆಲ ರಸ್ತೆಗಳು ಎರಡು ಮೂರು ವರ್ಷಗಳಿಂದಲೂ ತುಂಬಾ ಹದಗೆಟ್ಟಿದ್ದು, ಅನೇಕ ಬಾರಿ ಸಂಬಂದ ಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ರೀತಿಯಾದ ಉಪಯೋಗವಾಗಿಲ್ಲ ಎಂದು ಆರೋಪಿಸುತ್ತಾ,
ಈ ರಸ್ತೆಯಲ್ಲಿ ಪ್ರತಿ ದಿನ ಶಾಲಾ ಮಕ್ಕಳು, ಆಸ್ಪತ್ರೆಗೆ ಹೋಗಿ ಬರುವ ರೋಗಿಗಳು ಹಾಗೂ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರು ಓಡಾಡುತ್ತಾರೆ . ಈ ರಸ್ತೆಯಲ್ಲಿ ಬಿದ್ದು ಅವಘಡಗಳು ನಡೆದಿರುವ ಅನೇಕ ಘಟನೆಗಳು ಇದ್ದು, ಈ ತರಹದ ಅವಘಡಗಳು ನಡೆಯುತ್ತಿದ್ದರು ಸಂಬಂದ ಪಟ್ಟ ಇಲಾಖೆ ಮಾತ್ರ ಕಣ್ಣು ಮಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.
ಮುಂದಿನ ದಿನಗಳ ಪಟ್ಟಣದಲ್ಲಿ ಹಾಳಾಗಿರುವ ರಸ್ತೆಗಳನ್ನು ಸಂಬಂದಪಟ್ಟ ಇಲಾಖೆಗೆ ಸರಿಪಡಿಸುವಂತೆ ತಹಶೀಲ್ದಾರ್ರವರು ಸೂಚನೆ ನೀಡಿ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಸಲು ಸೂಚಿಸುವಂತೆ ಮನವಿ ಮಾಡಿದರು. ಇಲ್ಲಾವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ವೇದಿಕೆವತಿಯಿಂದ ಹೋರಾಟ ನಡೆಸುವುದಾಗಿ ತಿಳಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಶ್ರೀನಾಥ್ , ಗೌರವಾಧ್ಯಕ್ಷ ರಾಮಾಂಜಿ, ಜಿಲ್ಲಾ ಕಾರ್ಯದರ್ಶಿ ಸುನಿಲ್ಕುಮಾರ್, ಜಿಲ್ಲಾಧ್ಯಕ್ಷ ನರಸಿಂಹರಾಜು, ಸದಸ್ಯರಾದ ಸಂತೋಷ್, ಮಹೇಶ್, ಮಂಜುನಾಥ್, ಧನಂಜಯ್, ಆದರ್ಶ, ಸುಜಿತ್ ಇದ್ದರು.
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ವಾರ್ಷಿಕೋತ್ಸವ / Moodlekatte College of Nursing, College Day
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕುಂದಾಪುರ, ಇಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಡಾ. ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯ ಅಧಿಕಾರಿ, ಉಡುಪಿ, ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
“ವಿದ್ಯಾರ್ಥಿಗಳು ಹೂವಿನ ಮೊಗ್ಗಿನ ತರಹ. ಮೊಗ್ಗು ಅರಳಿ ಹೂವಾಗುವ ಹಾಗೆ, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿ ಸೂಪ್ತವಾಗಿರುವ ಪ್ರತಿಭೆಯನ್ನು ಹೊರತರಬೇಕು” ಎಂದು ಡಾ. ನಾಗಭೂಷಣ ಉಡುಪರವರು ಹೇಳಿದರು.
ಪ್ರಾಂಶುಪಾಲರಾದ ಪ್ರೊ| ಜೆನ್ನಿಫರ್ ಫ್ರೀಡಾ ಮೆನೇಜಸ್ ರವರು ಶೈಕ್ಷಣಿಕ ವರದಿಯನ್ನು ಮಂಡಿಸಿದರು.
ವೇದಿಕೆಯಲ್ಲಿ ಸಹ ಪ್ರಾಧ್ಯಾಪಕಿ ವೆಲ್ಮಿರಾ ಅವಿಟಾ ಡಯಾಸ್, ಉಪನ್ಯಾಸಕಿ ಅಕ್ಷತಾ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೆಲ್ಮೇರಾ ರವರು ಸ್ವಾಗತಿಸಿದರು. ಉಪನ್ಯಾಸಕಿ ರಕ್ಷಿತಾರವರು ವಿಜೇತರ ಪಟ್ಟಿಯನ್ನು ವಾಚಿಸಿದರು. ಉಪನ್ಯಾಸಕಿ ಶ್ರೀಮತಿ ದಿವ್ಯಾ ಮರಿಯಾ ದಾಂತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಕೀರ್ತನಾ ರವರು ವಂದಿಸಿದರು. ವಿದ್ಯಾರ್ಥಿಗಳು ಅತ್ಯುತ್ತಮ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದರು. ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
Moodlekatte College of Nursing, College Day
College Day was held at Moodlekatte College of Nursing, Kundapura. Dr. Nagabhushana Udupa H, District Health Officer, Udupi, inaugurated the program by lighting the lamp. Speaking on the occasion,Dr.Nagabhushana opined that “Students are like flower buds, just like a bud blossoms into a flower, students should bring out their latent talent and Shine”. Principal Prof. Jennifer Frieda Menezes presented the academic report. Associate Professor Velmira Avita Dias, Lecturer Akshatha were present on the stage. Mrs. Velmira welcomed the gathering, Lecturer Rakshitha read out the list of winners. Lecturer Mrs. Divya Maria Danti was the MC. Lecturer Keerthana proposed the vote of thanks. After the stage program Students presented an excellent cultural program. Faculty, students and parents were present for the program.
ನವೆಂಬರ್ 18 ರಂದು ಮಣಿಪಾಲದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ “ಸಂಸ್ಕಾರ ‘ ಚಿತ್ರಕಲಾ ಪ್ರದರ್ಶನ
ನಮ್ಮ ಹಿರಿಯರು ಆಚಾರ, ವಿಚಾರದಂತಹ “ಸಂಸ್ಕಾರ”ವು ಅನಾದಿ ಕಾಲದಿಂದಲೂ ಆಳವಾದ ಪದ್ಧತಿ ಮತ್ತು ಪರಂಪರೆಯ ಮೂಲಕ ಎತ್ತಿಹಿಡಿದವರು. ಇಂತಹ ಅಗಾಧವಾದ ಪರಂಪರೆಯ ಕಟ್ಟುಪಾಡು ಸಂಭ್ರಮಗಳು ಕಡಿಮೆ ಆಗುತ್ತಿರುವ ಇಂದಿನ ದಿನಗಳಲ್ಲಿ ್ಲ ಕಲಾತ್ಮಕತೆಯ ರೂಪದಲ್ಲಿ ನಮ್ಮ ವಿದ್ಯಾರ್ಥಿಯರಿಂದ ಅನುಭವ, ಕೃತಿ ಮತ್ತು ಪ್ರದರ್ಶನದ ಮೂಲಕ ಶ್ರೀಮಂತಗೊಳಿವ ಪ್ರಯತ್ನ.
ಪ್ರತಿ ವರ್ಷವು ನಮ್ಮ ತ್ರಿವರ್ಣ ಕಲಾ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯ ಅವಕಾಶವನ್ನು ಕಲ್ಪಿಸಿ, ಅವರ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸವುದರೊಂದಿಗೆ, ತಮ್ಮ ಅನುಭವ ಮತ್ತು ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವಲ್ಲಿ ಸತತ ಕಿರುಪ್ರಯತ್ನ ನಡೆಯುತ್ತಾ ಬಂದಿದೆ. ಈ ಭಾರಿ ನನ್ನ 39 ವಿದ್ಯಾರ್ಥಿಗಳಿಂದ 39 ಕಲಾಕೃತಿಯಲ್ಲಿ ಅಕ್ರಾಲಿಕ್. ಜಲವರ್ಣ. ಪೋಸ್ಟರ್ ಪೆನ್ಸಿಲ್, ಚಾರ್ಕೋಲ್, ಬಣ್ಣದ ಮೂಲಕ ರಚಿತಗೊಂಡ ಕಲಾಕೃತಿಯಾಗಿರುತ್ತದೆ.
ಭಾಗವಹಿಸುವ ವಿದ್ಯಾರ್ಥಿ ಕಲಾವಿದರು:-
ಮಣಿಪಾಲ, ಕುಂದಾಪುರ ಮತ್ತು ಆನ್ಲೈನ್ ತ್ರಿವರ್ಣ ಕಲಾ ತರಗತಿಯ 18 ವಷರ್óದೊಳಗಿನ (ಕಿರಿಯರ ವಿಭಾಗ) ಕಲಾವಿದ್ಯಾರ್ಥಿಯರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗುವ ಈ ಕಲಾಪ್ರದರ್ಶನದಲ್ಲಿ ಅದ್ವಿತ್ ಕುಮಾರ್ ಆರ್., ಅವನಿ ಎಂ. ಮೆಸ್ತಾ, ಅಮೂಲ್ಯ ಶೇಟ್, ಅಶುತೋಷ್ ಎಂ. ನಾಯಕ್, ಆಶ್ವಿನ್ ಜಿ. ರಾವ್, ಅನ್ವಿತಾ, ದೇವಾಂಗಣ ಎನ್. ಆರ್, ದಿಯಾ ಶೆಟ್ಟಿ, ಧ್ರುವ್ ಗುರುಪ್ರಸಾದ್ ಕಲ್ತೂರ್, ಜ್ಞಾನ ಡಿ., ಕೃತಿ ದೇವಾಡಿಗ, ಕಾರ್ತಿಕ್ ಕೊತ್ವಾಲ್, ಮೀತ್ ಖಾರ್ವಿ, ಮೆಹಕ್ ಎಂ, ಮುನಝÐ ಝೊಹ್ರ, ನಿಶಾ ನಾಯಕ್, ಪ್ರಗ್ನ್ಯಾ ಆರ್.ಕೆ, ರಚನಾ ಎಂ, ರಾಘವ್ ಕೃಷ್ಣ ಭಟ್, ರೋಶ್ನೀ ಆರ್. ಎಸ್, ಸಾತ್ವಿಕ್ ಕೆ. ಆರ್, ಸಾನ್ವಿ ಪಾಲನ್, ಸಂಸ್ಕøತಿ ಹೆಚ್. ಎ. ಸಂಜನಾ ಎಸ್. ಸಾಮಂತ್, ಸಾರ್ಥಕ್ ಎಸ್, ಸಾತ್ವಿಕ್ ಎಸ್, ಶರಣ್ ಆರ್. ಕುಮಾರ್, ಶಶಾಂಕ್ ನಾಯ್ಕ್, ಶ್ರೀ ಹರ್ಷಿಣಿ ಎಸ್, ಸ್ರಿಜಿತ್, ಸ್ಮøತಿ ತುಂಗಾ ಪಿ., ಸುದಿಕ್ಷಾ ಪಿ. ಶೇರೆಗಾರ್, ಸುನಿಧಿ ಹೆಬ್ಬಾರ್, ತನ್ಮಯ್ ಪಡ್ತಿ, ತೇಜಸ್, ಉಜ್ವಲಾ ಶೇಟ್, ವಿಸ್ಮಯ್ ಪಿ. ಪೂಜಾರಿ, ವೈಣವಿ ಆರ್.ಪದ್ಮಶಾಲಿ, ಯಶ್ಮಿತಾ ಜಿ. ಒಟ್ಟು 39 ಕಲಾ ವಿದ್ಯಾರ್ಥಿ ತಮ್ಮ ತಮ್ಮ ಮನೆ ಸಂಪ್ರದಾಯದಂತೆ ತನ್ನ ಕಲ್ಪನೆ ಮತ್ತು ಅನುಭವಗಳನ್ನು ಸಂಯೋಜಿಸಿ ಹೊಸ ಆಯಾಮವನ್ನು ನೀಡುವಲ್ಲಿ ಪ್ರಯತಿಸಿದವರು.
ರಚಿಸಿದ ಕಲಾಕೃತಿಗಳು:-
18×18 ಇಂಚಿನ ಅಕ್ರಾಲಿಕ್ ಕ್ಯಾನ್ವಾಸ್ ಪೈಂಟಿಂಗ್ಸ್ ಮತು ್ತಶೇಡಿಂಗ್ಸ್ ಒಟ್ಟು 39 ಕಲಾಕೃತಿಗಳ ಅನಾವರಣದಲ್ಲಿ ನೇಮ, ದೇವ ದರ್ಶನ, ಹೂ ಕಟ್ಟು, ಅಕ್ಷರಾಭ್ಯಾಸ, ಸಮುದ್ರ ಪೂಜೆ, ಗೃಹ ಪ್ರವೇಶ, ವಿಶು ಹಬ್ಬ, ನಾಟ್ಯ. ಯೋಗ, ಗೋ ಪೂಜಾ, ಬಳೆಧಾರಣೆ, ಪಶು ಪಾಲನೆ, ನಾಮಕರಣ, ದೀಪಾರ್ಚಣೆ, ಪ್ರಾರ್ಥನೆ, ಕುಂಕುಮಧಾರಣೆ, ರಕ್ಷಾ ಬಂಧನ, ನಾಗ ಮಂಡಲ, ವೃಕ್ಷ ಪ್ರದಕ್ಷಿಣೆ, ಸಂಕ್ರಾತಿ, ಎಲೆ ಭೋಜನ, ರಂಗೋಲಿ, ಭೂಮಿ ಪೋಜಾ, ಪಾದ ಸ್ಪರ್ಶ, ಚೌತಿ, ನವರಾತ್ರಿ, ತೋರಣ, ತುಳಸಿ ಪೂಜೆ, ಪೊಂಗಾಲ್, ಮಂಗಳಾರತಿ, ಸ್ತೋತ್ರ ಪಠಣ, ದೀಪಾವಳಿ, ಪಾದ ಫೂಜೆ, ಶಂಖ ನಾದ, ಜನಿವಾರ ಧಾರಣೆ, ದೇವ ನಮಸ್ಕಾರ, ಪ್ರದಕ್ಷಿಣೆ, ಸಂಧ್ಯಾ ದೀಪ, ಪುಷ್ಪ ಸಮರ್ಪಣೆ ಎಂಬ ಕಲಾಕೃತಿಗಳು ರಚಿಸಲ್ಪಟ್ಟಿವೆ.
ಕಲಾಪ್ರದರ್ಶನದ ವಿಶೇಷತೆಗಳು:-
ತ್ರಿವರ್ಣ ಕಲಾ ಕೇಂದ್ರ ಮಣಿಪಾಲ, ಕುಂದಾಪುರ, ಮತ್ತು ಆನ್ಲೈನ್ ತರಗತಿಯಲ್ಲಿ ವಿದ್ಯಾಭ್ಯಾಸಗೈಯುವ 10 ರಿಂದ 18 ವರುಷದವರ ಆಯ್ದ 39 ವಿದ್ಯಾರ್ಥಿಯರ 39 ಕಲಾಕೃತಿಗಳು.
ಕಲಾವಿದ, ಮಾರ್ಗದರ್ಶಕ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ತ್ರಿವರ್ಣ ಕಲಾ ಕೇಂದ್ರದ ವಿದ್ಯಾರ್ಥಿಯರ 25ನೇ ಕಲಾಪ್ರದರ್ಶನ.
ತನ್ನ ಮನೆಯ ಸಂಪ್ರದಾಯ, ಸಂಸ್ಕøತಿಯಡಿಯಲ್ಲಿ ಆಚರಿಸಲ್ಪಡುವ ಪದ್ದತಿಯ ಸ್ವರೂಪವನ್ನು ಕಲಾಕೃತಿಯ ಮೂಲಕ ಅಭಿವ್ಯಕ್ತ.
ಸಂಸ್ಕಾರದ ವಿವಿಧ ಮಜಲುಗಳನ್ನು ಪರಿಚಯಿಸುವುದರೊಂದಿಗೆ, ಪರಿಣಾಮಕಾರಿ ಮತ್ತು ಧನಾತ್ಮಕ ಸಂದೇಶವನ್ನು ಸಮಾಜಕ್ಕೆ ಸಾರುವ ಪ್ರಯತ್ನ.
ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಅತ್ತುತ್ತಮ ಕಲಾಕೃತಿಯನ್ನು ಆಯ್ಕೆ ಮಾಡಿ ಬಹುಮಾನ ಗೆಲ್ಲಿಸುವ ಅವಕಾಶ.
ವಿದ್ಯಾರ್ಥಿಯರಿಗೆ ಅತ್ಯುತ್ತಮ ಕಲಾಕೃತಿ ಪ್ರಶಸ್ತಿ, ಮತ್ತು ಅತ್ತುತ್ತಮ ಸಾರ್ವಜನಿಕರ ಆಯ್ಕೆಯ ಪ್ರಶಸ್ತಿ.
ಉದ್ಘಾಟನಾ ಸಮಾರಂಭ:-
ದಿನಾಂಕ 18.11.2023 ಶನಿವಾರ ಬೆಳಿಗ್ಗೆ 9.45ಕ್ಕೆ ಮಣಿಪಾಲದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಆತ್ರಾಡಿಯ ನಿವೃತ್ತ ಪ್ರಾಂಶುಪಾಲರು ಮತ್ತು ಕನ್ನಡ ಉಪನ್ಯಾಸಕರಾದ ಡಾ. ಪಾದೆಕಲ್ಲು ವಿಷ್ಣು ಭಟ್ ಉದ್ಘಾಟಿಸಲಿದ್ದಾರೆ. ಅತಿಥಿ ಅಭ್ಯಾಗತರಾಗಿ ಬಾರ್ಕೂರಿನ ವಿದ್ವಾನ್ ಮತ್ತು ಧಾರ್ಮಿಕ ಚಿಂತಕರಾದ ಎನ್. ಆರ್. ದಾಮೋದರ ಶರ್ಮಾ, ಕವಿ ಮತ್ತು ರಂಗಭೂಮಿ ಕಲಾವಿದೆ ಶ್ರೀಮತಿ ಪೂರ್ಣಿಮ ಸುರೇಶ್, ಹಿರಿಯಡ್ಕ, ಹಾಗೂ ಶ್ರೀಮತಿ ಅಮಿತಾಂಜಲಿ ಕಿರಣ್ ಉಪಸ್ಥಿತಲಿರುವರು.
ದಿನಾಂಕ 18.11.2023 ಶನಿವಾರದಿಂದ 20.11.2023ನೇ ಸೋಮವಾರದವರೆಗೆ ಬೆಳಿಗ್ಗೆ 10.00ರಿಂದ ಸಂಜೆ 7.30ರ ತನಕ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಿಲಾಗಿದೆ. ಧನ್ಯವಾದಗಳೊಂದಿಗೆ, ಹರೀಶ್ ಸಾಗಾ ಕಲಾವಿದ ಮತ್ತು ಮಾರ್ಗದರ್ಶಕ ತ್ರಿವರ್ಣ ಕಲಾ ಕೇಂದ್ರ
ಕಾರ್ಕಳ : ಅತ್ತೂರು ಬಾಸಿಲಿಕ ವಠಾರದಲ್ಲಿ ಹಣತೆ ಬೆಳಗಿಸಿದ ಕ್ರೈಸ್ತ ಬಾಂಧವರು
ಕಾರ್ಕಳ : ಅತ್ತೂರಿನ ಪ್ರತಿಷ್ಠಿತ ಸಂತ ಲಾರೆನ್ಸರ ಬಾಸಿಲಿಕದ ಆವರಣ ಮತ್ತು ಮುಂಭಾಗದಲ್ಲಿ ಐಸಿವೈಎಂ ಯುವಕರು ಹಣತೆ ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಿಂದೂ-ಮುಸ್ಲಿಂ- ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕ್ಯಾಂಡಲ್ ಹೊತ್ತಿಸಿ ಹರಕೆ ಹಾಕುವುದು ಇಲ್ಲಿ ಮಾಮೂಲು. ಆದರೆ ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಐಸಿವೈಎಂ ಯುವ ಸಂಘಟನೆಯ ಸದಸ್ಯರು ಮತ್ತು ಕ್ರೈಸ್ತ ಬಾಂಧವರು ಹಣತೆ ಹಚ್ಚುವ ಮೂಲಕ ದೀಪಾವಳಿ ಹಬ್ಬದ ಸೌಹಾರ್ದತೆಯ ಮಹತ್ವವನ್ನು ಸಮಾಜಕ್ಕೆ ಸಾರಿದರು.
ಅತ್ತೂರು ಬಾಸಿಲಿಕಾದ ನಿರ್ದೇಶಕರಾದ ವo. ಫಾ. ಆಲ್ಬನ್ ಡಿಸೋಜ ಮತ್ತು ವo. ಫಾ. ಲ್ಯಾರಿ ಇವರ ಮಾರ್ಗದರ್ಶನದಲ್ಲಿ ಐಸಿವೈಎಂ ಸದಸ್ಯರು ದೇವಾಲಯದ ಮುಂಭಾಗದಲ್ಲಿ ಮತ್ತು ಆವರಣದಲ್ಲಿ ಹಣತೆ ಹಚ್ಚಿ, ಸರ್ವಧರ್ಮದ ಅನ್ಯೋನತೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಿಸರ ಸ್ನೇಹಿ ಸುಡುಮದ್ದು ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಐಸಿವೈಎಂ ಸಚೇತಕ ರೋಷನ್, ಅಧ್ಯಕ್ಷ ಆರೋನ್ ಮತ್ತು ಯುವ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಜನತಾ ಅವಿಷ್ಕಾರ್ 2k23 ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಸಂತ ಮೇರಿಸ್ ಪ್ರೌಢ ಶಾಲೆಗೆ ದ್ವೀತಿಯ ಸ್ಥಾನ
ಕುಂದಾಪುರ, ನ.15: ದಿನಾಂಕ 8-11-23 ರಂದು ಜನತಾ ಕಾಲೇಜು ಹೆಮ್ಮಾಡಿ ಇವರು ಆಯೋಜಿಸಿದ ತಾಲ್ಲೂಲು ಮಟ್ಟದ ಜನತಾ ಅವಿಷ್ಕಾರ್ 2ಕೆ23 ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಕುಂದಾಪುರದ ಸಂತ ಮೇರಿಸ್ ಪ್ರೌಢ ಶಾಲೆಯ 5 ವಿದ್ಯಾರ್ಥಿನ್ನೋಳಗೊಂಡ ತಂಡಕ್ಕೆ ದ್ವೀತಿಯ ಸ್ಥಾನವ ಪಡೆಯಿತು. ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿಯಾದ, ಸ್ಮಿತಾ ಡಿಸೋಜಾ ಮಾರ್ಗದರ್ಶನ ನೀಡಿದ್ದರು. ಶಾಲಾ ಜಂಟಿ ಕಾರ್ಯದರ್ಶಿ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ, ಶಾಲಾ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಹಾಗೂ ಇತರ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
191 ಕೋಟಿ ಮೌಲ್ಯದ ನಾಣ್ಯ ಬಿಡುಗಡೆ !!! ರಾಣಿ ಎರಡನೇ ಎಲಿಜಬೆತ್ ಅವರ ಮೊದಲ ವರ್ಷದ ಜಯಂತಿಗಾಗಿ
ರಾಣಿ ಎರಡನೇ ಎಲಿಜಬೆತ್ ಅವರ ಮೊದಲ ವರ್ಷದ ಜಯಂತಿಯ ಅಂಗವಾಗಿ ಲಕ್ಸುರಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ ಮೂಲದ ಸಂಜೀವ್ ಮೆಹ್ರಾ ಅವರು 191 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರ ಖಚಿತ ನಾಣ್ಯವನ್ನು ಬಿಡುಗಡೆ ಮಾಡಿದರು.
ಇದರಲ್ಲಿ ವಿಶೇಷವಾಗಿ ಆಯ್ದ ಹಾಗೂ ಬೆಲೆ ಬಾಳುವ 6,426 ವಜ್ರಗಳಿವೆ ಮತ್ತು 24 ಕ್ಯಾರೆಟ್ ಚಿನ್ನದ 11 ನಾಣ್ಯಗಳಿವೆ. ಭಾರತ, ಸಿಂಗಪುರ, ಜರ್ಮನಿ, ಬ್ರಿಟನ್ ಮತ್ತು ಶ್ರೀಲಂಕಾ ದೇಶದ ಕುಶಲಕರ್ಮಿಗಳು ಈ ನಾಣ್ಯವನ್ನು ಸಿದ್ದಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಲಿಂಡರ್ ಸ್ಪೋಟ : ಮನೆ ಛಿದ್ರ ಛಿದ್ರ, ಮೂವರಿಗೆ ಸುಟ್ಟ ಗಾಯ
ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ
ಘಟನೆ ಮುನ್ಸಿಪಾಲ್ ಕಾಲೇಜಿನ ಮುಂಭಾಗದ ಫರ್ಜಾನಾ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕೆಯಾದ ಫರ್ಜಾನಾ ಕೆಲಸಕ್ಕೆ ತೆರಳಿದ್ದ ವೇಳೆ ಅವರ ಮಗ ರಫೀಕ್ (4) ಹಾಗೂ ಮಗಳು ಹರ್ಷಿಯಾ ಭಾನು (10) ಮನೆಯಲ್ಲಿದ್ದರು. ಈ ವೇಳೆ ಮನೆಯಿಂದ ಗ್ಯಾಸ್
ವಾಸನೆ ಬರುತ್ತಿದೆ ಎಂದು ಪಕ್ಕದ ಮನೆಯ ಹೇಮಾವತಿ (8) ಎಂಬಾಕೆ ಬಂದಿದ್ದಾಳೆ ಇದೇ ವೇಳೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರ್ ಸ್ಫೋಟ ಗೊಂಡಿದೆ.
ಘಟನೆಯಲ್ಲಿ ಮೂವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರಿಗೂ 35 ರಿಂದ 40% ಸುಟ್ಟ ಗಾಯಗಳಾಗಿದ್ದು ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಪಾತ್ರೆ ಹಾಗೂ ಸಾಮಾನುಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿವೆ. ಮನೆಯ ಮೇಲಿನ ತಗಡಿನ ಕೀಟ್ಗಳು ಹಾರಿ ಹೋಗಿವೆ. ಹಿಂಬದಿಯ ಮನೆಯ ಎರಡು ಬೈಕ್ಗಳು ಹಾನಿಗೊಳಗಾಗಿವೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ನಂಜುಂಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ಅವಘಡ : ಥಾಣೆ ಹೌಸಿಂಗ್ ಸೊಸೈಟಿಯಲ್ಲಿ ನಿಲ್ಲಿಸಿದ್ದ 16 ವಾಹನಗಳಿಗೆ ಬೆಂಕಿ
ಚಿತ್ರ ಸಾಂದರ್ಭಿಕ
ಥಾಣೆ : ಮಹಾರಾಷ್ಟ್ರದ ಥಾಣೆ ನಗರದಲ್ಲಿ ಬುಧವಾರ ಮುಂಜಾನೆ ವಸತಿ ಸಂಕೀರ್ಣದ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಮೂರು ಕಾರುಗಳು ಸೇರಿದಂತೆ ಒಟ್ಟು 16 ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಪಂಚಪಖಾಡಿಯಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ಮಧ್ಯರಾತ್ರಿಯ ನಂತರ ನಡೆದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಥಾಣೆ ನಾಗರಿಕ ಸಂಸ್ಥೆಯ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ನ ಪ್ರಧಾನ ಕಚೇರಿಗೆ ಸಮೀಪದಲ್ಲಿರುವ ಕಟ್ಟಡದ ಎರಡು ಅಂತಸ್ತಿನ ಪಾರ್ಕಿಂಗ್ನ ಪಿ1 ಮಟ್ಟದಲ್ಲಿ ಮಧ್ಯರಾತ್ರಿ 12.45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು. ಸ್ಥಳಕ್ಕೆ ಅಗ್ನಿಶಾಮಕ ವಾಹನ ಕಳುಹಿಸಲಾಗಿದ್ದು, ಮಧ್ಯರಾತ್ರಿ 1.30ರ ವೇಳೆಗೆ ಅದನ್ನು ನಂದಿಸಲಾಗಿದೆ ಎಂದು ಅವರು ಹೇಳಿದರು.
ಬೆಂಕಿಯಿಂದ 13 ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಅವುಗಳಲ್ಲಿ 11 ಮತ್ತು ನಾಲ್ಕು ನಾಲ್ಕು ಚಕ್ರಗಳು ಸುಟ್ಟು ಭಸ್ಮವಾಗಿವೆ ಎಂದು ಅವರು ಹೇಳಿದರು. ಬೆಂಕಿಯ ಕಾರಣವನ್ನು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ, ನೌಪಾಡಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.