ಕುಂದಾಪುರದಲ್ಲಿ ಐ ಸಿ ವೈ ಎಮ್ ಉಡುಪಿ ಧರ್ಮಪ್ರಾಂತ್ಯ ಮಟ್ಟದ “ಯುವ ಸ್ಪೋರ್ಟ್ಸ್ ಫಿಯೇಸ್ತಾ – 2023”

ಕುಂದಾಪುರ, ನ.5: ಭಾರತೀಯ ಕಥೋಲಿಕ್ ಯುವ ಸಂಚಲನ ಕುಂದಾಪುರ ವಲಯದ ವತಿಯಿಂದ ಆಯೋಜಿಸಲಾದ “ಯುವ ಸ್ಪೋರ್ಟ್ಸ್ ಫಿಯೇಸ್ತಾ – 2023 ಇದರ ಉದ್ಘಾಟನೆಯು ಕುಂದಾಪುರದ ಗಾಂಧಿ ಮೈದಾನದಲ್ಲಿ 05-11-2023 ಭಾನುವಾರ ಬೆಳಿಗ್ಗೆ 9.30 ಘಂಟೆಗೆ ವಿಜೃಂಭಣೆಯಿಂದ ನೆರವೇರಿತು.


ಈ ಕ್ರೀಡೊತ್ಸವದಲ್ಲಿ ಕುಂದಾಪುರ, ಕಾರ್ಕಳ, ಉಡುಪಿ, ಕಲ್ಯಾಣಪುರ ಹಾಗೂ ಶಿರ್ವ ವಲಯದ ಭಾರತೀಯ ಕಥೋಲಿಕ್ ಯುವ ಸಂಚಲನದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಎಲ್ಲಾ ವಲಯದ ಸ್ಪರ್ಧಾಳುಗಳಿಂದ ಆಕರ್ಷಕ ಪಥಸಂಚಲನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾದ್ಯವ್ರಂ ದದೊಂದಿಗೆ ಎನ್. ಸಿ. ಸಿ ಕೆಡೆಟ್ ರೊನ್ಸನ್ ಡಿಸೋಜರವರ ಮುಂದಾಳುತ್ವದಲ್ಲಿ ನಡೆಯಿತು.

ಪ್ರಥಮವಾಗಿ ಎಲ್ಲಾ ವಲಯದ ಸ್ಪರ್ಧಾಳುಗಳಿಂದ ಆಕರ್ಷಕ ಪಥಸಂಚಲನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾದ್ಯವ್ರಂದದೊಂದಿಗೆ ಎನ್. ಸಿ. ಸಿ ಕೆಡೆಟ್ ರೊನ್ಸನ್ ಡಿಸೋಜರವರ ಮುಂದಾಳುತ್ವದಲ್ಲಿ ನಡೆಯಿತು.

ಅತಿಥಿಗಳಾದ ಉಡುಪಿ ಧರ್ಮಪ್ರಾಂತ್ಯದ ಭಾರತೀಯ ಕಥೋಲಿಕ್ ಯುವ ಸಂಚಲನದ ನಿರ್ದೇಶಕರಾದ ರೆ|ಫಾ| ಸ್ಟೀವನ್ ಫೇರ್ನಾಂಡಿಸ್, ಭಾರತೀಯ ಕಥೋಲಿಕ್ ಯುವ ಸಂಚಲನದ ಉಡುಪಿ ವಲಯದ ಸಂಚಾಲಕರಾದ ರೆ|ಫಾ| ರೊನ್ಸನ್ ಡಿಸೋಜ ಹಾಗೂ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ಭಾರತೀಯ ಕಥೋಲಿಕ್ ಯುವ ಸಂಚಲನದ ಕುಂದಾಪುರ ವಲಯದ ಸಂಚಾಲಕರಾದ ರೆ|ಫಾ| ಅಶ್ವಿನ್ ಆರಾನ್ನಾ ಧ್ವಜಾರೋಹಣ ನೆರವೇರಿಸಿ, ಸ್ಪರ್ಧಾಳುಗಳಿಂದ ಗೌರವ ವಂದನೆ ಸ್ವೀಕರಿಸಿದರು.

ರೆ|ಫಾ| ಸ್ಟೀವನ್ ಫೇರ್ನಾಂಡಿಸ್ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡೊತ್ಸವಕ್ಕೆ ಚಾಲನೆ ನೀಡಿದರು. ರೆ|ಫಾ| ಅಶ್ವಿನ್ ಆರಾನ್ನ ತ್ರಿವರ್ಣ ಧ್ವಜದ ಬಣ್ಣಗಳ ಬೇಲೂನುಗಳನ್ನು ಹಾರಿಬಿಡುವ ಮೂಲಕ ಕ್ರೀಡೊತ್ಸವಕ್ಕೆ ಚಾಲನೆ ನೀಡಿ, ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು.

ಸೈಂಟ್ ಮೇರಿಸ್ ಪ್ರೌಢಶಾಲೆಯ ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ, ಸೈಂಟ್ ಮೇರಿಸ್ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಹಾಗೂ ಕುಂದಾಪುರ ವಲಯದ ಭಾರತೀಯ ಕಥೋಲಿಕ್ ಯುವ ಸಂಚಲನದ ಸಚೇತಕಿ ಶಾಂತಿ ಬರೆಟ್ಟೊ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ರತ್ನಾಕರ್ ಶೆಟ್ಟಿ ಹಾಗೂ ಇತರ ಸ್ಥಳೀಯ ಶಾಲೆಗಳ ದೈಹಿಕ ಶಿಕ್ಷಕರು ಉಪಸ್ಥಿತರಿದ್ದು, ವಿವಿಧ ಸ್ಪರ್ಧೆಗಳನ್ನು ನಡೆಸಲು ಸಹಕರಿಸಿದರು. ಕುಂದಾಪುರ ವಲಯದ ಭಾರತೀಯ ಕಥೋಲಿಕ್ ಯುವ ಸಂಚಲನದ, ಅಧ್ಯಕ್ಷ ನಿತಿನ್ ಬರೆಟ್ಟೊ, ಸಚೇತಕ ಜೇಸನ್ ಪಾಯ್ಸ್ ಮತ್ತು ಎಲ್ಲಾ ವಲಯದ ಅಧ್ಯಕ್ಷರು, ಅನಿಷಾ ಮೆಂಡೊನ್ಸಾ ಸ್ವಾಗತಿಸಿದರು. ಮೆಲ್ವಿನ್ ರೊಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಕುಂದಾಪುರ ಸ.ಪ.ಪೂ.ಕಾಲೇಜಿಗೆ ಭಾ.ರೆಡ್ ಕ್ರಾಸ್ ಕುಂದಾಪುರ ಘಟಕದಿಂದ 78 ಸಾವಿರ ರೂಪಾಯಿ ಬೆಲೆ ಬಾಳುವ ವಾಷ್ ಬೇಸನ್ ಕೊಡುಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಈ ದಿನ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಕ್ಕೆ 78 ಸಾವಿರ ರೂಪಾಯಿ ಬೆಲೆ ಬಾಳುವ ಹದಿನೆಂಟು ನಳ್ಳಿಯ ಕೈ ತೊಳೆಯುವ ವಾಷ್ ಬೇಸನ್ ನೀಡಿದರು. ಇದರ ಉದ್ಘಾಟನೆ ಯನ್ನು ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಯವರು ನಡೆಸಿ ಕೊಟ್ಟರು. ಜೂನಿಯರ್ ಕಾಲೇಜ್ ವತಿಯಿಂದ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಡಾ. ಸೋನಿ, ಸದಾನಂದ ಶೆಟ್ಟಿ ಮತ್ತು ಅಬ್ದುಲ್ ಬಶೀರ್ ಅಲ್ಲದೇ ಕಾಲೇಜಿನ ಬೋದಕ ಬೋದಕೇತರ ಸಿಭಂದಿಗಳು ಉಪಸ್ಥಿತರಿದ್ದರು