ಭಗಿನಿ ಮೇರಿ ಅನಿಸೆಟಾ ಎಸಿ (86) ಮಂಗಳೂರಿನಲ್ಲಿ ನಿಧನರಾದರು / Sr. Mary Aniceta AC (86) passed away in Mangalore

ಭಗಿನಿ ಮೇರಿ ಅನಿಸೆಟಾ ಎಸಿ (85), ಶುಕ್ರವಾರ, ಅಕ್ಟೋಬರ್ 20, 2023 ರಂದು ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಅನನ್ಸಿಯೇಷನ್ ಕಾನ್ವೆಂಟ್‌ನಲ್ಲಿ ನಿಧನರಾದರು. ಅವರು ಬೆಳ್ಳೂರು ಮೂಲದವರಾಗಿದ್ದು, ಅವರ ಮೂಲ ಹೆಸರು ಬೆನಿಟಾ ಸೆಲೆಸ್ತಿನಾ ರೊಡ್ರಿಗಸ್ ಆಗಿದ್ದು, ಅವರು ದಿವಂಗತ ಸಂತಾನ್ ರೋಡ್ರಿಗಸ್ ಮತ್ತು ದಿವಂಗತ ಮೊರ್ನೆಲ್ ಪಿರೇರಾ ಅವರ ಪುತ್ರಿಯಾಗಿದ್ದರು.

   ಅವರ ಪಾರ್ಥಿವ ಶರೀರವನ್ನು ಅಕ್ಟೋಬರ್ 22 ರಂದು ಭಾನುವಾರ ಮಧ್ಯಾಹ್ನ 1.00 ಗಂಟೆಯಿಂದ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಅನನ್ಸಿಯೇಶನ್ ಕಾನ್ವೆಂಟ್ ಚಾಪೆಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು. ನಂತರ ಲೇಡಿಹಿಲ್ ಕಾನ್ವೆಂಟ್ ಸ್ಮಶಾನದಲ್ಲಿ ಅಂತ್ಯಕ್ರಿಯೆಯು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ.

ಅವರು ಕರ್ನಾಟಕ ಪ್ರಾಂತ್ಯದ ಅಪೋಸ್ತಲಿಕ್ ಕಾರ್ಮೆಲ್ ಸಭೆಗೆ ಸೇರಿದರು ಮತ್ತು ಹಲವಾರು ಶಾಲೆಗಳಲ್ಲಿ ಶಿಕ್ಷಕಿಯಾಗಿ ಮತ್ತು ಮುಖ್ಯೋಪಾಧ್ಯರಾಗಿ ಸೇವೆ ಸಲ್ಲಿಸಿದ್ದರು  ಪ್ರಾಥಮಿಕ ಹಂತದಲ್ಲಿ ಬಡ ಮಕ್ಕಳಿಗೆ ವಿಶೇಷವಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕುಂದಾಪುರದ ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿರುವಾಗ, ಅವರಿಗೆ ಸರಕಾರಿ ಶಿಕ್ಷಕಿಯರ ಉದ್ಯೋಗ ಸಿಗುವ ಮೊದಲೇ ಸಂತ ಮೇರಿ ಪ್ರಾಥಮಿಕ ಕನ್ನಡ ಮಾದ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಆರಂಭಿಸಿದ್ದರು.ಅವರು ತಮ್ಮ ಸಮರ್ಪಿತ ಸೇವೆಗಳನ್ನು ಸಲ್ಲಿಸಿದ್ದು, ಅವರೊಬ್ಬ ಉತ್ತಮ ಶಿಕ್ಷಕಿಯಾಗಿದ್ದುದು ಅಲ್ಲದೆ ಒಳ್ಳೆಯ ಸಂಗೀತಗಾರಾಗಿದ್ದರು ವಿದ್ಯಾರ್ಥಿಗಳ ಮೇಲೆ ಅತೀವ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಅವರ ಬಾಳಿನ ಕೊನೆಯಲ್ಲಿ ಕೂಡ ವಿದ್ಯಾರ್ಥಿಗಳಿಗಾಗಿ ಕನವರಿಸಿಕೊಳ್ಳುತಿದ್ದರು ಎಂದು ಅವರ ಜೊತೆಯಲ್ಲಿದ್ದವರು ಹೇಳಿಕೊಳ್ಳುತ್ತಾರೆ.

    ಅವರು ಸಂತ ಜೋಸೆಫ್ ಹಿರಿಯ ಪ್ರಾರ್ಥಮಿಕ ಶಾಲೆ ಗಂಗೂಳ್ಳಿ; ಕಾರ್ಮೆಲ್ ಕಾನ್ವೆಂಟ್, ಹಳಿಯಾಳ; ಸ್ಟೆಲ್ಲಾ ಮಾರಿಸ್ ಕಾನ್ವೆಂಟ್, ಕೋಟೆಕಾರ್; ಸೇಂಟ್ ಆಗ್ನೆಸ್ ಕಾನ್ವೆಂಟ್, ಬೆಂದೋರ್; ಸೇಂಟ್ ಜೋಸೆಫ್ ಕಾನ್ವೆಂಟ್, ಮೈಸೂರು; ಶಾಂತಿ ನಿಲಯ, ನಂಜನಗೂಡು ಮತ್ತು ಅನನ್ಸಿಯೇಷನ್ ಕಾನ್ವೆಂಟ್, ಲೇಡಿಹಿಲ್, ಮಂಗಳೂರು. ಇಲ್ಲಿ ಸೇವೆ ನೀಡಿದ್ದಾರೆ.

  ಸಂಪರ್ಕಕ್ಕೆ : 0824-2456851, 94814 60926

ಶ್ರದ್ದಾಂಜಲಿ ಸಿಸ್ಟರ್ ಮೇರಿ ಅನಿಸೆಟಾ ಎಸಿ ಅವರು ಕುಂದಾಪುರ ಸಂತ ಮೇರಿ ಶಾಲೆಯಲ್ಲಿ ಕಲಿಸುತ್ತೀರುವಾಗ, ನಾನು, ಬರ್ನಾಡ್ ಡಿ’ಕೋಸ್ತಾ ಅವರ ಶಿಸ್ಯನಾಗಿದ್ದೆ. ಹಾಗೇ ನನ್ನ ಪತ್ನಿ ವಿನಯಾ ಡಿ’ಕೋಸ್ತಾ ಇವರಿಗೂ ಅವರು ಕಲಿಸಿದ್ದಾರೆ. ಉತ್ತಮ ಶಿಕ್ಷಕಿಯಾಗಿದ್ದ ಅವರಿಗೆ ಗೌರವಪೂರ್ವಕವಾಗಿ ನಮಿಸಿ, ಆವರ ಆತ್ಮಕ್ಕೆ ದೇವರು ಸದ್ಗತಿ ನೀಡಲೆಂದು ಪ್ರಾರ್ಥಿಸುತ್ತಾ, ಜನನುಡಿ.ಕಾಮ್ ಸಂಪಾದಕನಾದ ನಾನು ಸಿಸ್ಟರ್ ಮೇರಿ ಅನಿಸೆಟಾ ಅವರಿಗೆ ಪ್ರೀತಿಪೂರ್ವಕ ಶ್ರದ್ದಾಂಜಲಿಯನ್ನು ಅರ್ಪಿಸುತ್ತೇನೆ

Sr. Mary Aniceta AC (86) passed away in Mangalore

Sister Mary Aniceta AC (85), passed away on Friday, October 20, 2023 at Annunciation Convent, Ladyhill, Mangalore. She hails from Bellur and her original name is Benita Celestina Rodriguez, daughter of late Santhan Rodriguez and late Mornel Pereira.

His mortal remains will be laid for public viewing at Annunciation Convent Chapel, Ladyhill, Mangalore on Sunday, October 22 from 1.00 pm. Interment to follow at Ladyhill Convent Cemetery at 3.30pm.

She joined the Apostolic Carmel Congregation in Karnataka Province and served as a teacher and headmaster in several schools  specially serving poor children at the primary level. While she was in St. Joseph’s Convent, Kundapur, she started serving as a teacher in Saint Mary’s Primary Kannada Medium School before she got a job as a government teacher. Even at the last days of her life, she dreamed for students.

She served as a teacher at Saint Joseph’s higher Primary School, Ganguli; Carmel Convent, Haliyala; Stella Maris Convent, Kotekar; St Agnes Convent, Bendore; St. Joseph’s Convent, Mysore; Shanti Nilaya, Nanjangudu and Annunciation Convent, Ladyhill, Mangalore. Served here.

Tribute
I, Bernard D’Costa, was a student of Sister Mary Aniceta AC when she was teaching at Saint Mary’s School, Kundapur. He also taught my wife Vinaya D’Costa. I, the Editor of Jananudi.com, pay my loving tribute to Sister Mary Aniceta, bowing respectfully to her great teacher, and praying for God to rest her soul.

ಬಸ್ರೂರು ಮಾರ್ಗೊಳಿ ಶೇಖ್ ಉಮ್ಮರ್ ವಲಿಯಲ್ಲಾ ದರ್ಗಾ ಶರೀಫ್ ನಲ್ಲಿ ಉರೂಸ್

ಬಸ್ರೂರು: ಸ್ಥಳೀಯ ಮಾರ್ಗೊಳಿ ಶೇಖ್ ಉಮ್ಮರ್ ವಲಿಯಲ್ಲಾ ದರ್ಗಾ ಶರೀಫ್ ನಲ್ಲಿ ೩೪ ನೇ ಉರೂಸ್ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಜರುಗಿತು. ಮುಸ್ಮಿಂ ಬಾಂಧವರು ಮಾರ್ಗೊಳಿಯಿಂದ ಬಸ್ರೂರು ಪೇಟೆ ತನಕ ಮೆರವಣಿಗೆ ನೆಡೆಸಿದರು.

ಕೇಕ್ ನಲ್ಲಿ ಹೆಸರಿನ ಸ್ಪೆಲಿಂಗ್ ಮಿಸ್ಟೇಕ್ ಆಗಿದ್ದಕ್ಕೆ ಬೇಕರಿ ಸಿಬ್ಬಂದಿಗೆ ಚೂರಿಯಿಂದ ಇರಿತ

ಬೆಂಗಳೂರು:ಆರ್ಡರ್‌ ಕೊಟ್ಟ ಕೇಕ್ ನಲ್ಲಿ ಹೆಸರಿನ ಸ್ಪೆಲಿಂಗ್ ಮಿಸ್ಟೇಕ್ ಆಗಿದ್ದಕ್ಕೆ ಬೇಕರಿ ಸಿಬ್ಬಂದಿಗೆ ಚೂರಿಯಿಂದ ಇರಿದ ಬೆಂಗಳೂರು ನಗರದ ತಿರುಮನಹಳ್ಳಿಯ ಬೇಕರಿಯಲ್ಲಿ (ಅ.17) ರಂದು ಬೆಂಗಳೂರು ನಗರದ ತಿರುಮನಹಳ್ಳಿಯ ಬೇಕರಿಯಲ್ಲಿ ನಡೆದಿದೆ. ಚೂರಿಯಿಂದ ಇರಿದ ಆರೋಪಿ ಪರಾರಿಯಾಗಿದ್ದಾನೆ. ಚೂರಿಯಿಂದ ಇರಿತಕ್ಕೊಳಗಾದ ಬೇಕರಿ ಸಿಬ್ಬಂದಿಯ ಹೆಸರು ವಂಶಿ ಎಂದು ತಿಳಿದು ಬಂದಿದೆ. ವಂಶಿಯ ಎರಡು ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಗಾಯಾಳು ಬೇಕರಿ ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಬೇಕರಿಗೆ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕೇಕ್‌ ಆರ್ಡರ್‌ ಮಾಡಿದ್ದ. ಬಳಿಕ ಕೇಕ್‌ ಕೊಟ್ಟು ಹಣ ಕೇಳಿದಾಗ ಸ್ಟೆಲಿಂಗ್‌ ಸರಿಯಿಲ್ಲವೆಂದು ಎಂದು ಗಲಾಟೆ ಶುರು ಮಾಡಿ, ಕೊನೆಗೆ ಹಣ ಕೇಳುತ್ತಿಯಾ ಎಂದು ಚೂರಿಯಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕೃತ್ಯ ಎಸಗಿ ಪರಾರಿಯಾದ ಆರೋಪಿಗಾಗಿ ಶೋಧಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಅಪಾಯಕಾರಿ ಸುಡುಮದ್ದು ನಿಷೇಧ : ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ

ಉಡುಪಿ: ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಹೊರ ಸೂಸುವಸುಡುಮದ್ದುಗಳ (ಅಪಾಯಕಾರಿ ಸುಡುಮದ್ದು) ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ಉಡುಪಿ ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ’ ಎಂದು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ

ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಮುಂಬರುವ ದೀಪಾವಳಿ ಸಮಯದಲ್ಲಿ ಪ್ರತಿಯೊಬ್ಬರೂ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸುಡುಮದ್ದನ್ನು ಲೈಸನ್ಸ್‌ ಹೊಂದಿರುವ ಮರಾಟಗಾರರಿಂದಲೇ ಸುಡುಮದ್ದುಗಳನ್ನು ಖರೀದಿಸಬೇಕು, ಕಾನೂನು ಬಾಹಿರವಾದ ಸುಡುಮದ್ದುಗಳನ್ನು ಉಪಯೋಗಿಸಬಾರದು. ಮಕ್ಕಳು ಸುಡುಮದ್ದುಗಳನ್ನು ಬಳಸಲು ಅನುವು ಮಾಡಿಕೊಡದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.


ಅರಣ್ಯ ಇಲಾಖೆಯಿಂದ ಪಾತಪಲ್ಲಿ ಗ್ರಾಮದ ಸಮೀಪ ಅರಣ್ಯ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮಾವಿನ ಮರಗಳನ್ನು ಜೆಸಿಬಿಯಿಂದ ಉರುಳಿಸಿ ತೆರವು-ರೈತರ ಆಕ್ರೋಶ

ಶ್ರೀನಿವಾಸಪುರ: ತಾಲ್ಲೂಕಿನ ಪಾತಪಲ್ಲಿ ಗ್ರಾಮದ ಸಮೀಪ ಇಂದು ಬೆಳಿಗ್ಗೆ 4 ಗಂಟೆಗೆ ಜೆಸಿಬಿ ಯಂತ್ರಗಳೊಂದಿಗೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮಾವಿನ ಮರಗಳನ್ನು ಉರುಳಿಸಿ ತೆರವುಗೊಳಿಸಿದರು.
ತಾಲ್ಲೂಕಿನ ಪಾತಪಲ್ಲಿ, ಶೆಟ್ಟಿಹಳ್ಳಿ ಹಾಗೂ ಚೌಡನಹಳ್ಳಿ ಸುತ್ತಮುತ್ತ ನೂರು ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಯಿತು. ಉಪ ಅರಣ್ಯ ವ¯ಯಾಧಿಕಾರಿ ಕೆ.ಮಹೇಶ್, ಉಪ ಅರಣ್ಯಾಧಿಕಾರಿಗಳಾದ ಶ್ರೀನಾಥ್, ಶ್ರೀನಾಥ್, ಅನಿಲ್ ಕುಮಾರ್, ನವೀನ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ, ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದರು. ಆಗ ಒತ್ತುವರಿದಾರರು ಹಾಗೂ ರೈತರು, ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರೊಂದಿಗೆ ಕಾರ್ಯಾಚರಣೆ ಕ್ಷೇತ್ರಕ್ಕೆ ನುಗ್ಗಿಬಂದರು. ಅರಣ್ಯ ಸಿಬ್ಬಂದಿ ತಡೆಯುವ ಪ್ರಯತ್ನ ನಡೆಸಿತಾದರೂ, ರೈತರು ಒತ್ತುವರಿ ತೆರವುಗೊಳಿಸಲಾದ ಸ್ಥಳಕ್ಕೆ ಬಂದು ವೀಕ್ಷಿಸಿದರು. ಸಂಸದರು ಅರಣ್ಯ ಇಲಾಖೆ ನೀಡಿದ ಅರಣ್ಯ ಪ್ರದೇಶದ ನಕ್ಷೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ರಾಜ್ಯದ ರೈತರು ಬೋಗಸ್ ದಾಖಲೆ ಮಾಡಿಕೊಂಡಿಲ್ಲ. ಸರ್ಕಾರವೇ ಅವರಿಗೆ ಜಮೀನು ನೀಡಿದೆ. ಆದರೆ ಈಗ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಸರ್ಕಾರದ ರೈತ ವಿರೋಧಿ ನಿಲುವಿನ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಲಾಗದೆ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಮುಂದೆ ಸೂಕ್ತವಾದ ಸ್ಥಳದಲ್ಲಿ ಧರಣಿ ನಡೆಸಲಾಗುವುದು ಎಂದು ಹೇಳಿದರು.
ಸಮಸ್ಯೆ ತಿಳಿಸಲು ಜಿಲ್ಲಾಧಿಕಾರಿಗೆ ಫೋನ್ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಜನರ ಸಮಸ್ಯೆ ಆಲಿಸುವುದು ಹಾಗೂ ಅವರಿಗೆ ನ್ಯಾಯ ಒದಗಿಸುವುದು ಜನಪ್ರತಿನಿಧಿಯಾಗಿ ನನ್ನ ಹಕ್ಕು. ಆದರೂ ಅರಣ್ಯ ಇಲಾಖೆ ಸಿಬ್ಬಂದಿ ಮೇಲಾಧಿಕಾರಿಗಳಿಂದ ಶಹಬಾಷ್‍ಗಿರಿ ಪಡೆಯಲು ನನ್ನನ್ನು ಒತ್ತುವರಿ ತೆರವು ಕಾರ್ಯಾಚರಣೆ ಸ್ಥಳಕ್ಕೆ ಹೋಗದಂತೆ ತಡೆಯಲು ಪ್ರಯತ್ನಿಸಿದರು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮುಖಂಡರಾದ ರೋಣೂರು ಚಂದ್ರಶೇಖರ್, ವೆಂಕಟರೆಡ್ಡಿ, ಆಂಜನೇಯರೆಡ್ಡಿ ಇದ್ದರು.

ನಿವೃತ್ತ ಪೊಲೀಸ್ ಸಿಬ್ಬಂದಿಗೆ ನೌಕರರ ಭವನ ನಿರ್ಮಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಕೋಲಾರ 19 ಅಕ್ಟೋಬರ್: ಕರ್ನಾಟಕ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿಗೆ ನೌಕರರ ಭವನ ನಿರ್ಮಿಸುವಂತೆ ಮತ್ತು ಅನಾರೋಗ್ಯದ ವ್ಯೆದ್ಯಕೀಯ ವೆಚ್ಚದ ಬಿಲ್ಲುಗಳನ್ನು ಮರುಪಾವತಿ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರಿಗೆ ಕೋಲಾರ ಜಿಲ್ಲಾಧಿಕಾರಿಗಳ ಮುಖಾಂತರ ನಿವೃತ್ತ ಎ.ಎಸ್.ಐ.ಗಳಾದ ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ಮತ್ತು ಬೆಗ್ಲಿಹೊಸಹಳ್ಳಿ ಮುನಿಕೃಷ್ಣಯ್ಯ ರವರು ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವಂತಹ ಪೊಲೀಸ್ ಪೇದೆಗಳು, ಮುಖ್ಯಪೇದೆಗಳು, ಎ. ಎಸ್. ಐ, ಮತ್ತು ಪಿ. ಎಸ್. ಐ ಸಿಬ್ಬಂದಿ ವರ್ಗದವರುಗಳು ತಮ್ಮ ಜೀವದ ಹಂಗನ್ನು ತೊರೆದು, ರಾತ್ರಿ ಹಗಲೆನ್ನದೆ ದುಡಿದು, ಚಳಿ, ಮಳೆ, ಬಿಸಿಲು, ಗಾಳಿಗಳುನ್ನು ಲೆಕ್ಕಿಸದೆ ದುಡಿದು ನಿವೃತ್ತಿ ಹೊಂದುವ ಸಮಯಕ್ಕೆ ಬಹುತೇಕರು ವಿವಿಧ ರೋಗಗಳಿಂದ ಪೀಡಿತರಾಗಿರುತ್ತಾರೆ ಮತ್ತು ದೇಹವು ಅವಿರತ ನಿರಂತರ ಪರಿಶ್ರಮದ ಪರಿಣಾಮವಾಗಿ ಬಾಗಿ ಬೆಂಡಾಗಿರುತಾರೆ.
ನಿವೃತ್ತಿ ನಂತರದ ದಿನಗಳಲ್ಲಿ ತಾವುಗಳು ಅನುಭವಿಸುವಂತಹ ಕಷ್ಟ ಕಾರ್ಪಣ್ಯಗಳ ಕುರಿತು ತಮಗೆ ಸಿಗಬೇಕಾದಂತಹ ಇಲಾಖೆ ಸೌಲಭ್ಯಗಳು ಸಿಗದಂತಾದಾಗ ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿಯ ಕುರಿತು ಚಿಂತಿಸಿ ಒಗ್ಗಟಾಗಿ ಶ್ರಮಿಸಲು ಒಂದು ಕಡೆ ಸೇರಿ ಚರ್ಚಿಸಲು ಮತ್ತು ಕಾರ್ಯಪ್ರವೃತ್ತರಾಗಲು ಯಾವುದೇ ಖಾಯಂ ನೆಲೆ ಹಾಗು ಸ್ಥಳವಿಲ್ಲದೆ ಒದ್ದಾಡುವಂತಾಗಿದೆ. ಸಮಾಜಕ್ಕಾಗಿ, ಸಮಾಜದ ಜನರ ರಕ್ಷಣೆಗಾಗಿ, ಸಮಾಜದ ಸುರಕ್ಷಾತೆಗಾಗಿ, ಭಯರಹಿತ ವಾತಾವರಣದ ನಿರ್ಮಾಣಕ್ಕಾಗಿ ತಮ್ಮ ಜೀವಗಳನ್ನೇ ಮೂಡುಪಾಗಿಟ್ಟು ಶ್ರಮಿಸಿದಂತಹ ಈ ವರ್ಗಕ್ಕೆ ನಿವೃತ್ತಿ ನಂತರ ಯಾವುದೇ ಪೊಲೀಸ್ ಭವನ ಇಲ್ಲಿದಂತಾಗಿರುವುದು ದುರಂತದ ಸಂಗತಿಯಾಗಿದೆ. ಆದ್ದರಿಂದ ಈ ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೆ ಮಾನವೀಯತೆಯ ದೃಷ್ಟಿಯಿಂದ ಈ ಕೆಳಕಂಡಂತಹ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯದ ಸಮಸ್ತ ಪೊಲೀಸ್ ಇಲಾಖೆಯ ವಿವಿಧ ಹಂತಗಳ ಪೆÇಲೀಸ್ ಸಿಬ್ಬಂದಿಗಳ ಪರವಾಗಿ ಸಿದ್ಧರಾಮ್ಯನವರ ಅವಗಾಹನೆಗೆ ಮತ್ತು ಸೂಕ್ತ ಆದೇಶಕ್ಕಾಗಿ ಸಲ್ಲಿಸಿದ್ದಾರೆ.
ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಿವೃತ್ತಿ ಪೊಲೀಸ್ ಸಿಬ್ಬಂದಿಯ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡವನ್ನು ಪ್ರಾರಂಭಿಸಬೇಕು. ನಿವೃತ್ತಿ ಪೊಲೀಸ್ ಸಿಬ್ಬಂದಿಯ ವ್ಯೆದ್ಯಕೀಯ ವೆಚ್ಚದ ಸಂಪೂರ್ಣ ಹಣವನ್ನು ಇತರೆ ಕಾರ್ಯನಿರತ ಸಿಬ್ಬಂದಿಗೆ ಮರುಪಾವತಿಸುತ್ತಿರುವಂತೆ ಇವರಿಗೂ ಸಂಪೂರ್ಣ ಮರುಪಾವತಿಗೆ ಆದೇಶಿಸಬೇಕು. ನಿವೃತ್ತಿ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರ ಮಕ್ಕಳಿಗೆ ಪೊಲೀಸ್ ಇಲಾಖೆಯ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೇಮಕಾತಿಯಲ್ಲಿ ಶೇಕಡಾ 10%ರಸ್ಟು ಮೀಸಲಾತಿಯನ್ನು ಕಲ್ಪಿಸಬೇಕು. ನಿವೃತ್ತಿ ಪೊಲೀಸ್ ಸಿಬ್ಬಂದಿಯವರು ಪ್ರವಾಸ ಮಾಡುವಾಗ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣದರದಲ್ಲಿ ರಿಯಾಯಿತಿ ನೀಡಬೇಕು. ನಿವೃತ್ತಿ ನೌಕರರಿಗೆ ಆರೋಗ್ಯಭಾಗ್ಯ ಯೋಜನೆಯ ಅಡಿಯಲ್ಲಿ ಶಸ್ತ್ರ ಚಿಕಿತ್ಸೆಗೆ ನೀಡುವ ಮೊತ್ತವನ್ನು ರೂ 3.00ಲಕ್ಷಗಳಿಗೆ ನಿಗದಿಪಡಿಸಲಾಗಿದೆ. ಇದನ್ನು ರದ್ದುಗೊಳಿಸಿ ಸಂಪೂರ್ಣ ಶಸ್ತ್ರಚಿಕಿತ್ಸೆಗೆ ತಗಲುವ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣ ಭರಿಸುವಂತಾಗಬೇಕು. ನಿವೃತ್ತಿ ಪೊಲೀಸ್ ಸಿಬ್ಬಂದಿಯ ಕುಟುಂಬ ವರ್ಗದವರುಗಳು ವರ್ಷಕ್ಕೆ ಒoದುಭಾರಿ ಪ್ರವಾಸ ಹೋಗಿಬರಲು ಪ್ರವಾಸ ಭತ್ಯೆಯನ್ನು ನಿಗದಿಪಡಿಸಬೇಕು. ವರ್ಷಕ್ಕೆ ಎರಡು ಬಾರಿ ನಿವೃತ್ತ ನೌಕರರ ಮತ್ತು ಆತನ ಹೆಂಡತಿ ಅಥವಾ ಗಂಡನನ್ನು ಉಚಿತವಾಗಿ ವೈದ್ಯಕೀಯ ತಪಾಸಣೆಗೆ ಬಳಸಪಡಿಸುವ ಪದ್ದತಿಯನ್ನು ಜಾರಿಗೊಳಿಸಬೇಕು. ನಿವೃತ್ತ ಪೊಲೀಸ್ ಸಿಬ್ಬಂದಿಗೆ ಪ್ರತಿ ತಿಂಗಳು ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ಒದಗಿಸುವಂತಹ ಸರ್ಕಾರಿ ಪೊಲೀಸ್ ಕ್ಯಾಂಟೀನ್‍ಗಳನ್ನು ಮಿಲಿಟರಿ ಕ್ಯಾಂಟೀನ್‍ಗಳ ರೀತಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಿಸಬೇಕು.
ನಿವೃತ್ತ ನೌಕರರ ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ನೀಡುವಂತಹ ಸಹಾಯದನದ ಮೊತ್ತವನ್ನು ರೂ 20000/-ಗಳಿಗೆ ಹೆಚ್ಚಿಸಬೇಕು. ಸರ್ಕಾರದಿಂದ ಗೌರ ವಂದನೆಯನ್ನು ಸಲ್ಲಿಸುವಂತೆ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಸಿಬೇಕು. ಆರೋಗ್ಯಭಾಗ್ಯ ಯೋಜನೆಯ ವಾರ್ಷಿಕ ಕಂತನ್ನು ರೂ 1800 ರಿಂದ 2400 ಗಳಿಗೆ ಹೆಚ್ಚಿಸಲಾಗಿದ್ದು ಇದನ್ನು ಹಳೆಯ ದರವಾದ ರೂ 1800ಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ದೃಷ್ಟಿದೋಷ ಹೊಂದಿದ ನಿವೃತ್ತ ಪೊಲೀಸ್ ಸಿಬ್ಬಂದಿಗೆ ಪ್ರತಿ 5 ವರ್ಷಕೊಮ್ಮೆ ಕನ್ನಡಕಗಳನ್ನು ಒದಗಿಸಬೇಕು ಅಥವ ಅದರ ವೆಚ್ಚದ ಹಣವನ್ನು ನೀಡಬೇಕು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರವಾಸಿಮಂದಿರದ ರೀತಿಯಲ್ಲಿ ಪೆÇಲೀಸ್ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿ ಹಾಲಿ ಮತ್ತು ನಿವೃತ್ತ ನೌಕರರಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕು. ಪೊಲೀಸ್ ಇಲಾಖೆಯಿಂದ ನಿರ್ಮಾಣ ಮಾಡಿರುವಂತಹ ಸಮುದಾಯ ಭವನ ಅಥವ ಮದುವೆ ಮಂಟಪಗಳನ್ನು ನಿವೃತ್ತ ಪೊಲೀಸ್ ನೌಕರರಿಗೆ ಇತರೆ ಸಿಬ್ಬಂದಿಗೆ ನಿಗದಿಪಡಿಸಿದ ದರಕ್ಕಿಂತ ಕಡಿಮೆದರದಲ್ಲಿ ನೀಡುವಂತಾಗಬೇಕು ಈ ಎಲ್ಲಾ ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಗೌರವಪೂರಕವಾಗಿ ಮನವಿ ಮಾಡಿದ್ದಾರೆ.

Karnataka Service of Communion meeting held at Jnananilya, Belthangady / ಕರ್ನಾಟಕ ಸಂವಹನ ಸೇವೆಯ ಸಭೆ ಬೆಳ್ತಂಗಡಿಯ “ಜ್ಞಾನನಿಲಯ”ದಲ್ಲಿ ನಡೆಯಿತು

October 19, 2023: Karnataka Service of Communion, held their meeting at Diocesan Pastoral Centre “Jnananilaya”, Diocese of Belthangady on 17th and 18th October, 2023.

On 17th program began at 9am with Rosary led by Fr Franklin D’Souza. welcome by KRSC Coordinator Bro. Cherian Ramapuram. Episcopal Advisor of KRSC Most Rev. Lawrence Mukkuzhy – Bishop of Diocese of Belthangady, Spiritual Director of KRSC Rev. Fr Franklin D’Souza, KRSC Secretary Bro. Thomas Chinnappa, Bro. Joseph Varghese, Bro. Elias Coelho, Bro. Anthony Raj, Bro. Ajay and Bro. Abhishek were present for the meeting.

At 9:15pm Bro. Elias Coelho led the Praise and Worship. Then Bishop Lawrence led half day with prayer experience. All the members shared their experiences. At 12pm Rev. Fr Franklin D’Souza celebrated the Holy Eucharist and preached a homily on “formation of one’s conscience”.

At 3pm team gathered for the meeting. Bro. Joseph Varghese led the Praise and Worship. KRSC Secretary Bro. Thomas Chinnappa read minutes of the previous meeting. Then there was discussion on the minutes and agenda.

At 7pm Bishop Lawrence Mukkuzhy led the adoration.

On 18th day began with 6am with Morning Prayer. At 6:30am Bishop Lawrence Mukkuzhy celebrated Holy Qurabana and preached a homily on “Importance and richness of Holy Eucharist”. He said that we need to draw strength from the Eucharist and courageously witness Jesus through our love and service.

At 9am Bro. Cherian Ramapuram led the Praise and Worship. Then the Agenda of the meeting continued from 9:30am to 11am. At 11:30am to 1pm meeting continued.

During the lunch time KRSC members and Pastoral Centre priests wished Fr Franklin D’Souza for his Golden birthday.

Meeting commenced after lunch at 2pm. Fr Franklin D’Souza led thd Praise and Worship. Then Bro. Cherian Ramapuram, KRSC Coordinator presented the accounts. After the Agenda. Episcopal Advisor Bishop Lawrence Mukkuzhy gave the guidelines and his inputs on coming days activities.

Bro. Cherian Ramapuram thanked Bishop, Fr Franklin D’Souza and all the members.

Two days meeting concluded with Adoration at 3:15pm led by Fr Franklin D’Souza. At 3:45pm Bishop Lawrence Mukkuzhy blessed the KRSC members individually and commenced them yo the mission of the Lord.

ಕರ್ನಾಟಕ ಸಂವಹನ ಸೇವೆಯ ಸಭೆ ಬೆಳ್ತಂಗಡಿಯ “ಜ್ಞಾನನಿಲಯ”ದಲ್ಲಿ ನಡೆಯಿತು

ಅಕ್ಟೋಬರ್ 19, 2023: ಕರ್ನಾಟಕ ಸರ್ವೀಸ್ ಆಫ್ ಕಮ್ಯುನಿಯನ್, 2023 ರ ಅಕ್ಟೋಬರ್ 17 ಮತ್ತು 18 ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಪ್ರಾಂತ್ಯದ ಪಾಲನಾ ಕೇಂದ್ರ “ಜ್ಞಾನನಿಲಯ”ದಲ್ಲಿ ತಮ್ಮ ಸಭೆಯನ್ನು ನಡೆಸಿತು.

17 ರಂದು ಬೆಳಿಗ್ಗೆ 9 ಗಂಟೆಗೆ ರೆ.ಫಾ. ಫ್ರಾಂಕ್ಲಿನ್ ಡಿಸೋಜ ನೇತೃತ್ವದಲ್ಲಿ ರೋಸರಿ ಕಾರ್ಯಕ್ರಮವು ಪ್ರಾರಂಭವಾಯಿತು. ಸ್ವಾಗತ KRSC ಸಂಯೋಜಕ ಬ್ರೋ. ಚೆರಿಯನ್ ರಾಮಪುರಂ. ಕೆಆರ್‌ಎಸ್‌ಸಿಯ ಎಪಿಸ್ಕೋಪಲ್ ಸಲಹೆಗಾರ ಮೋಸ್ಟ್ ರೆವ್ ಲಾರೆನ್ಸ್ ಮುಕ್ಕುಜಿ – ಬೆಳ್ತಂಗಡಿ ಡಯಾಸಿಸ್‌ನ ಬಿಷಪ್, ಕೆಆರ್‌ಎಸ್‌ಸಿಯ ಆಧ್ಯಾತ್ಮಿಕ ನಿರ್ದೇಶಕ ರೆ.ಫಾ. ಫ್ರಾಂಕ್ಲಿನ್ ಡಿಸೋಜ, ಕೆಆರ್‌ಎಸ್‌ಸಿ ಕಾರ್ಯದರ್ಶಿ ಬ್ರೋ. ಥಾಮಸ್ ಚಿನ್ನಪ್ಪ, ಬ್ರೋ. ಜೋಸೆಫ್ ವರ್ಗೀಸ್, ಬ್ರೋ. ಎಲಿಯಾಸ್ ಕೊಯೆಲ್ಹೋ, ಬ್ರೋ. ಆಂಟನಿ ರಾಜ್, ಬ್ರೋ. ಅಜಯ್ ಮತ್ತು ಬ್ರೋ. ಅಭಿಷೇಕ್ ಸಭೆಯಲ್ಲಿ ಉಪಸ್ಥಿತರಿದ್ದರು.

ರಾತ್ರಿ 9:15ಕ್ಕೆ ಬ್ರೋ. ಎಲಿಯಾಸ್ ಕೊಯೆಲ್ಹೋ ಶ್ಲಾಘನೆ ಮತ್ತು ಆರಾಧನೆಯನ್ನು ಮುನ್ನಡೆಸಿದರು. ನಂತರ ಬಿಷಪ್ ಲಾರೆನ್ಸ್ ಪ್ರಾರ್ಥನಾ ಅನುಭವದೊಂದಿಗೆ ಅರ್ಧ ದಿನವನ್ನು ಮುನ್ನಡೆಸಿದರು. ಎಲ್ಲ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಧ್ಯಾಹ್ನ 12 ಗಂಟೆಗೆ ಧರ್ಮಗುರು ಫ್ರಾಂಕ್ಲಿನ್ ಡಿಸೋಜ ಅವರು ಪವಿತ್ರ ಯೂಕರಿಸ್ಟ್ ಅನ್ನು ಆಚರಿಸಿದರು ಮತ್ತು “ಒಬ್ಬರ ಆತ್ಮಸಾಕ್ಷಿಯ ರಚನೆ” ಕುರಿತು ಪ್ರವಚನ ನೀಡಿದರು.

ಮಧ್ಯಾಹ್ನ 3 ಗಂಟೆಗೆ ತಂಡ ಸಭೆಗೆ ಜಮಾಯಿಸಿತು. ಬ್ರೋ. ಜೋಸೆಫ್ ವರ್ಗೀಸ್ ಶ್ಲಾಘನೆ ಮತ್ತು ಪೂಜೆಯ ನೇತೃತ್ವ ವಹಿಸಿದ್ದರು. KRSC ಕಾರ್ಯದರ್ಶಿ ಬ್ರೋ. ಥಾಮಸ್ ಚಿನ್ನಪ್ಪ ಅವರು ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು. ನಂತರ ನಡಾವಳಿ ಮತ್ತು ಅಜೆಂಡಾ ಕುರಿತು ಚರ್ಚೆ ನಡೆಯಿತು.

ಸಂಜೆ 7 ಗಂಟೆಗೆ ಬಿಷಪ್ ಲಾರೆನ್ಸ್ ಮುಕ್ಕುಜಿ ಆರಾಧನೆಗೆ ಚಾಲನೆ ನೀಡಿದರು.

18 ನೇ ದಿನ ಬೆಳಿಗ್ಗೆ 6 ಗಂಟೆಗೆ ಬೆಳಗಿನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಬೆಳಿಗ್ಗೆ 6:30 ಗಂಟೆಗೆ ಬಿಷಪ್ ಲಾರೆನ್ಸ್ ಮುಕ್ಕುಜಿಯವರು ಪವಿತ್ರ ಕುರಾಬಾನವನ್ನು ಆಚರಿಸಿದರು ಮತ್ತು “ಪವಿತ್ರ ಯೂಕರಿಸ್ಟ್‌ನ ಮಹತ್ವ ಮತ್ತು ಶ್ರೀಮಂತಿಕೆ” ಕುರಿತು ಪ್ರವಚನವನ್ನು ಬೋಧಿಸಿದರು. ನಾವು ಯೂಕರಿಸ್ಟ್‌ನಿಂದ ಶಕ್ತಿಯನ್ನು ಪಡೆದುಕೊಳ್ಳಬೇಕು ಮತ್ತು ನಮ್ಮ ಪ್ರೀತಿ ಮತ್ತು ಸೇವೆಯ ಮೂಲಕ ಯೇಸುವನ್ನು ಧೈರ್ಯದಿಂದ ನೋಡಬೇಕಾಗಿದೆ ಎಂದು ಅವರು ಹೇಳಿದರು.

ಬೆಳಿಗ್ಗೆ 9 ಗಂಟೆಗೆ ಬ್ರೋ. ಚೆರಿಯನ್ ರಾಮಪುರಂ ಸ್ತುತಿ ಮತ್ತು ಪೂಜೆಯ ನೇತೃತ್ವ ವಹಿಸಿದ್ದರು. ನಂತರ ಸಭೆಯ ಅಜೆಂಡಾ ಬೆಳಿಗ್ಗೆ 9:30 ರಿಂದ 11 ರವರೆಗೆ ಮುಂದುವರೆಯಿತು. ಬೆಳಗ್ಗೆ 11.30ರಿಂದ ಮಧ್ಯಾಹ್ನ 1ರವರೆಗೆ ಸಭೆ ಮುಂದುವರಿಯಿತು.

ಊಟದ ಸಮಯದಲ್ಲಿ ಕೆಆರ್‌ಎಸ್‌ಸಿ ಸದಸ್ಯರು ಮತ್ತು ಪಾಲನಾ ಕೇಂದ್ರದ ಧರ್ಮಗುರುಗಳು ಫ್ರಾಂಕ್ಲಿನ್ ಡಿಸೋಜ ಅವರ ಸುವರ್ಣ ಜನ್ಮದಿನದ ಶುಭಾಶಯಗಳನ್ನು ಕೋರಿದರು.

ಮಧ್ಯಾಹ್ನ 2 ಗಂಟೆಗೆ ಊಟದ ನಂತರ ಸಭೆ ಆರಂಭವಾಯಿತು. ಫ್ರಾಂಕ್ಲಿನ್ ಡಿಸೋಜಾ ನೇತೃತ್ವದ ಶ್ಲಾಘನೆ ಮತ್ತು ಆರಾಧನೆ ನಡೆಯಿತು. ನಂತರ ಬ್ರೋ. ಕೆಆರ್‌ಎಸ್‌ಸಿ ಸಂಯೋಜಕ ಚೆರಿಯನ್ ರಾಮಪುರಂ ಲೆಕ್ಕಪತ್ರ ಮಂಡಿಸಿದರು. ಕಾರ್ಯಸೂಚಿಯ ನಂತರ. ಎಪಿಸ್ಕೋಪಲ್ ಸಲಹೆಗಾರ ಬಿಷಪ್ ಲಾರೆನ್ಸ್ ಮುಕ್ಕುಜಿ ಅವರು ಮುಂದಿನ ದಿನಗಳ ಚಟುವಟಿಕೆಗಳ ಕುರಿತು ಮಾರ್ಗಸೂಚಿಗಳು ಮತ್ತು ಅವರ ಒಳಹರಿವುಗಳನ್ನು ನೀಡಿದರು.

ಬ್ರೋ. ಚೆರಿಯನ್ ರಾಮಪುರಂ ಬಿಷಪ್ ಫ್ರಾಂಕ್ಲಿನ್ ಡಿಸೋಜ ಮತ್ತು ಎಲ್ಲಾ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.

ಫ್ರಾಂಕ್ಲಿನ್ ಡಿಸೋಜಾ ನೇತೃತ್ವದಲ್ಲಿ ಎರಡು ದಿನಗಳ ಸಭೆಯು ಮಧ್ಯಾಹ್ನ 3:15 ಕ್ಕೆ ಆರಾಧನೆಯೊಂದಿಗೆ ಮುಕ್ತಾಯವಾಯಿತು. ಮಧ್ಯಾಹ್ನ 3:45 ಕ್ಕೆ ಬಿಷಪ್ ಲಾರೆನ್ಸ್ ಮುಕ್ಕುಜಿ ಅವರು ಕೆಆರ್‌ಎಸ್‌ಸಿ ಸದಸ್ಯರನ್ನು ಪ್ರತ್ಯೇಕವಾಗಿ ಆಶೀರ್ವದಿಸಿದರು ಮತ್ತು ಭಗವಂತನ ಧ್ಯೇಯವನ್ನು ಪ್ರಾರಂಭಿಸಿದರು.

ಫುಟ್ ಪಾತಿಗೆ ಕಾರು ನುಗ್ಗಿಸಿ ಯುವತಿಯ ಸಾವಿಗೆ ಕಾರಣನಾದ ಕಮಲೇಶನ ಬಂಧನ

ಮಂಗಳೂರು: ನಿನ್ನೆ (18 ರಂದು) ಸಂಜೆ ನಾಲ್ಕಕ್ಕೆ  ನಗರದ ಲೇಡಿಹಿಲ್ ಬಳಿ ಫುಟ್ ಪಾತಿಗೆ ಕಾರು ನುಗ್ಗಿಸಿ ಯುವತಿಯ ಸಾವಿಗೆ ಕಾರಣನಾಗಿ ಕಾರಿನೊಂದಿಗೆ ಪರಾರಿಯಾದ ಚಾಲಕನು ಕಾರು ನಿಲ್ಲಿಸದೆ ಕಾರಿನೊಂದಿಗೆ ಪರಾರಿಯಾಗಿದ್ದ ಕಮಲೇಶ್ ಬಲದೇವ್ ಹೊಂಡಾ ಶೋ ರೂಮ್ ಬಳಿ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದ. ಮನೆಯಲ್ಲಿ ವಿಷಯವೆಲ್ಲ ಹೇಳಿದ ಬಳಿಕ ತಂದೆ ಎಚ್.ಎಂ. ಬಲದೇವ್ ಜತೆ ಬಂದು ಪಶ್ಚಿಮ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ ಈಗ ಈತನನ್ನು ಬಂಧಿಸಲಾಗಿದೆ, ಈತನನ್ನು ಕಮಲೇಶ್ ಬಲದೇವ್ ಎಂದು ಗುರುತಿಸಲಾಗಿದೆ.

ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ದಿಂದ ಕಾರು ಚಾಲನೆ ಮಾಡಿದ ಕಮಲೇಶ್ ಬಲದೇವ್ ಕುದ್ರೋಳಿ ದೇಗುಲಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದ ಯುವತಿ ಹಾಗೂ ಮಕ್ಕಳಿದ್ದ ಗುಂಪಿಗೆ ಕಾರು ನುಗ್ಗಿಸಿದ್ದ. ಇದರ ಪರಿಣಾಮ ಸುರತ್ಕಲ್ ಸಮೀಪದ ಕಾನ ಬಾಳದ ನಿವಾಸಿ ಗಂಗಾಧರ ಅವರ ಪುತ್ರಿ 23ರ ಹರೆಯದ ರೂಪಶ್ರೀ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪ್ರಾಪ್ತ ಬಾಲಕಿಯರು ಸೇರಿದಂತೆ ಇನ್ನೊರ್ವ ಯುವತಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿದ್ದ ಕಮಲೇಶ್ ಬಲದೇವ್ ಹೊಂಡಾ ಶೋ ರೂಮ್ ಬಳಿ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದ. ಮನೆಯಲ್ಲಿ ವಿಷಯವೆಲ್ಲ ಹೇಳಿದ ಬಳಿಕ ತಂದೆ ಎಚ್.ಎಂ. ಬಲದೇವ್ ಜತೆ ಬಂದು ಪಶ್ಚಿಮ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಅಪಘಾತದಲ್ಲಿ ಸುರತ್ಕಲ್‌ನ ರೂಪಶ್ರೀ (23) ಸ್ಥಳದಲ್ಲೇ ಕೂನಯುಸಿರಳದಿದ್ದರು ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರೂಪಶ್ರೀ ಜತೆಯಿದ್ದ ಸ್ವಾತಿ (26), ಹಿತ್ನವಿ (16), ಕೃತಿಕಾ(16) ಮತ್ತು ಯತಿಕಾ(12)ಗೆ ಗಂಭೀರ ಗಾಯಗಳಾಗಿವೆ.ಈ ಐವರೂ ಯುವತಿಯರು ಲೇಡಿಹಿಲ್‌ನಿಂದ ಮಣ್ಣಗುಡ್ಡ ಜಂಕ್ಷನ್‌ ಕಡೆಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಪಘಾತದ ಭೀಕರ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದನ್ನ ನೋಡಿ ಎಲ್ಲರು ಮರುಗುವಂತೆ ಮಾಡಿದೆ. ಹುಂಡೈ ಇಯಾನ್‌ ಕಂಪೆನಿಯ (ka 19 Md 5676) ನೋಂದಣಿ ಹೊಂದಿದ್ದ ಕಾರು ಇದಾಗಿದ್ದು, ಕಾರನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆರೋಪಿ ಕಾರಿನ ಚಾಲಕ ರಿಯಲ್‌ ಎಸ್ಟೇಟ್‌ ಏಜೆಂಟ್‌ ಎಂದು ತಿಳಿದುಬಂದಿದೆ.

ಅಪಘಾತಕ್ಕೆ ಕಾರಣವಾದ ಕಾರು

ರೈತರು ತಂತ್ರಜ್ಞಾನ ಬಳಸಿ ಕೃಷಿ ಮಾಡಿದರೆ ನಷ್ಟವಾಗುವುದನ್ನ ತಪ್ಪಸಿ ಲಾಭಾದಾಯಕ ಕೃಷಿ ಮಾಡಬಹುದು:ಕೆ.ಸಿ.ಮಂಜುನಾಥ್

ಶ್ರೀನಿವಾಸಪುರ 1 : ರೈತರು ತಂತ್ರಜ್ಞಾನ ಬಳಸಿ ಕೃಷಿ ಮಾಡಿದರೆ ನಷ್ಟವಾಗುವುದನ್ನ ತಪ್ಪಸಿ ಲಾಭಾದಾಯಕ ಕೃಷಿ ಮಾಡಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ದೊಡ್ಡಬಂದಾರ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷವಾಗಿ ರೈತರು ನೈಸರ್ಗಿಕ ಸಂಪನ್ಮೂಲಗಳನ್ನು ಬಳಕೆ ಮಾಡಿದರೆ ಕೃಷಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು ಇದರೊಂದಿಗೆ ಮುಂದಿನ ಪೀಳಿಗೆಗೆ ಕೃಷಿ ವರ್ಗಾಯಿಸಬೇಕಾದರೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಬಹಳ ಮುಖ್ಯವಾಗಿದೆ . ಹಾಗು ಕೃಷಿ ಯಂತ್ರೋಪಕರಣಗಳಿಗೆ ಸರ್ಕಾರದಿಂದ ಸಿಗುವ ಅನುದಾನದ ಬಗ್ಗೆ, ಜಲಾನಯನ ಕಾರ್ಯಕ್ರಮದ ಬಗ್ಗೆ, ಕಿಸಾನ್ ಯೋಜನೆಯ ಬಗ್ಗೆ ಹಾಗೂ ಸರ್ಕಾರದ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ರವಣಾರೆಡ್ಡಿ, ಮುಖಂಡರಾದ ಮುನಿಯಪ್ಪ, ರವಣಪ್ಪ, ಜಯರಾಮರೆಡ್ಡಿ, ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪ, ಕೃಷಿ ಮೇಲ್ವಿಚಾರಕ ರಮೇಶ್, ವಲಯ ಮೇಲ್ವಿಚಾರಕ ಡಿ.ಕೆ.ವೆಂಕಟೇಶ್, ಒಕ್ಕೂಟದ ಅಧ್ಯಕ್ಷೆ ವನಜಾಕ್ಷಿ , ನೆಲವಂಕಿ ವಲಯ ಸೇವಾಪ್ರತಿನಿದಿಗಳು, ಪ್ರಗತಿಪರ ರೈತರು, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು ಇದ್ದರು.
18, ಎಸ್‍ವಿಪುರ್ 1 : ದೊಡ್ಡಬಂದಾರ್ಲಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಕೆ.ಸಿ.ಮಂಜುನಾಥ್ ಮಾತನಾಡಿದರು.
ಪೋಟು : ದೊಡ್ಡಬಂದಾರ್ಲಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಗಾಟಿಸಿದರು
.