ಶ್ರೀನಿವಾಸಪುರ: ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಜೊತೆಗ ದಾನಿಗಳು ನೀಡುವ ಶೈಕ್ಷಣಿಕ ನೆರವು ಪಡೆದು ಶೈಕ್ಷಣಿಕ ಅಭಿವೃದ್ಧಿ ಸಾಧಿಸಬೇಕು ಎಂದು ಚಿಕ್ಕಹಸಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್.ಮುನಿರಾಜು ಹೇಳಿದರು.
ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಥ್ಯಾಂಕ್ಸ್ ಟು ಧಮೇರ್ಶ್ ಕಾರ್ಯಕ್ರಮದಲ್ಲಿ, ಶಾಲಾ ವಿದ್ಯಾರ್ಥಿಗಳಿಗೆ ದಾನಿ ಧರ್ಮೇಶ್ ನೀಡಿದ ಲೇಖನ ಸಾಮಗ್ರಿ, ಕುಡಿಯುವ ನೀರಿನ ಬಾಟೆಲ್ ಮತ್ತಿತರ ವಸ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಆರ್.ಧರ್ಮೇಶ್ ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ರೂ.10 ಸಾವಿರ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮೇಜ ಸೇವಾ ಕಾರ್ಯಗಳಿಗೆ ಮೀಸಲಿಟ್ಟು ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆ ಮಕ್ಕಳು ಧರ್ಮೇಶ್ ಅವರ ಶೈಕ್ಷಣಿಕ ನೆರವು ಪಡೆದಿದ್ದಾರೆ. ಪರಿಸರ ರಕ್ಷಣೆ, ಮಾನವೀಯ ನೆರವು ನೀಡುವುದರಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ. ಸರಳ ವ್ಯಕ್ತಿತ್ವದ ಶಿಕ್ಷಕ ಎಸ್.ಆರ್.ಧರ್ಮೇಶ್ ಮಕ್ಕಳಲ್ಲಿ ದೇವರನ್ನು ಕಾಣುತ್ತಾರೆ. ಅಂಥ ಕೊಡಗೈ ದಾನಿಗಳ ಸಂಖ್ಯೆ ಹೆಚ್ಚಬೇಕು. ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿ ನಿಲ್ಲುವಂಥ ವ್ಯಕ್ತಿಗಳು, ಮಕ್ಕಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ ಎಂದು ಹೇಳಿದರು.
ಶಿಕ್ಷಕ ಆರ್.ಹರಿನಾಥ್ ಮಾತನಾಡಿ, ಸರಳ ಜೀವನ ನಡೆಸುವ ದಾನಿ ಧರ್ಮೇಶ್ ಅವರು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಅಶಕ್ತರ ಸೇವೆಯಲ್ಲಿ ತೃಪ್ತಿ ಕಂಡುಕೊಂಡಿದ್ದಾರೆ. ಅವರ ಸೇವೆ ಇನ್ನಷ್ಟು ಜನರಿಗೆ ಸಿಗುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಲೇಖನ ಸಾಮಗ್ರಿ ನೀಡುವುದರ ಜೊತೆಗೆ, ಶಾಲೆ ಬಳಕೆಗೆ ಮೈಕ್ ಸೆಟ್ ನೀಡಲಾಯಿತು.
ಎಸ್‍ಡಿಎಂಸಿ ಅಧ್ಯಕ್ಷೆ ಸವಿತ, ಉಮಾದೇವಿ, ಪೂರ್ಣಿಮಾ ರಾಣಿ, ಯಶೋಧಮ್ಮ, ಪ್ರಿಯಾಂಕ ಇದ್ದರು.
Month: October 2023
ಶ್ರೀನಿವಾಸಪುರ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ರೂ.350 ಕೋಟಿ ವೆಚ್ಚದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುವುದು:ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ರೂ.350 ಕೋಟಿ ವೆಚ್ಚದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ರೋಣೂರು ಹಾಗೂ ಕೊಳತೂರು ಗ್ರಾಮದಲ್ಲಿ ಶನಿವಾರ ಜಲ್ ಜೀವನ್ ಮಿಷನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೋಣೂರಿಗೆ ರೂ. 5.50 ಕೋಟಿ ಹಾಗೂ ಕೊಳತೂರಿಗೆ ರೂ.1 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ಮೂಲಕ ನೀರು ಪೂರೈಸಲಾಗುವುದು. ಮೂರು ತಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಗ್ರಾಮ ಹಾಗೂ ಪಟ್ಟಣ ಪ್ರದೇಶದ ನಾಗರಿಕರಿಗೆ ಕುಡಿಯುವ ನೀರು ಪೂರೈಸುವುದು ಮೊದಲ ಆದ್ಯತೆಯಾಗಿದೆ. ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಲ್ ಜೀವನ್ ಮಿಷನ್ ಯೋಜನೆ ಜಾರಿಗೆ ಬಂದ ಮೇಲೆ ಗ್ರಾಮೀಣ ಮಹಿಳೆಯರಿಗೆ ದೂರ ಪ್ರದೇಶದಿಂದ ನೀರು ಹೊರುವುದು ತಪ್ಪುತ್ತದೆ. ಮನೆ ಬಾಗಿಲಿಗೇ ನೀರು ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿ ಗುಣಮಟ್ಟ ಸರಿ ಇರುವಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನಾಗರಿಕರು ಕಾಮಗಾರಿ ಕೈಗೊಳ್ಳಲು ಸಹಕರಿಸಬೇಕು. ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೆಹರ್ ತಾಜ್, ಮಣಿ, ಎಸ್.ಎಂ.ಶ್ರೀನಿವಾಸ್, ನಾರಾಯಣಗೌಡ, ಚಂದ್ರಪ್ಪ, ಆಂಜಿ, ಜಯರಾಮ್, ಜಯರಾಮೇಗೌಡ, ನಂಜುಂಡಗೌಡ ಇದ್ದರು.
ರೇಷ್ಮೆ ಕೃಷಿಯಲ್ಲಿ ರೈತರು ವೈಜ್ಞಾನಿಕ ಪದ್ಧತಿ ಅನುಸರಿಸಬೇಕು: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ರೇಷ್ಮೆ ಕೃಷಿಯಲ್ಲಿ ರೈತರು ವೈಜ್ಞಾನಿಕ ಪದ್ಧತಿ ಅನುಸರಿಸಬೇಕು. ಅಧಿಕ ಬೇಡಿಕೆ ತಳಿ ಬೆಳೆಯಲು ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ರೇಷ್ಮೆ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ರೇಷ್ಮೆ ಇಲಾಖೆ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ರೂ.60 ಲಕ್ಷ ವೆಚ್ಚದಲ್ಲಿ ತಾಲ್ಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ತಾಂತ್ರಿಕ ಸೇವಾ ಕೇಂದ್ರ, ರೇಷ್ಮೆ ಗೂಡು ಮಾರುಕಟ್ಟೆ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.
ರೇಷ್ಮೆ ಗೂಡು ಬೆಲೆಯಲ್ಲಿ ಏರುಪೇರು ಸಾಮಾನ್ಯ. ಬೆಳೆಗಾರರು ತಾಳ್ಮೆಯಿಂದ ಬೆಳೆ ನಿರ್ವಹಣೆ ಮಾಡಬೇಕು. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಂಡು ಮಲಬರಿ ಬುಡ ತೆಗೆಯುವ ಕೆಲಸಕ್ಕೆ ಕೈ ಹಾಕಬಾರದು. ಈ ಹಿಂದೆ ಹೀಗೆಯೇ ಮಾಡಿ, ಗೂಡಿಗೆ ಲಾಭದಾಯಕ ಬೆಲೆ ಬಂದಾಗ ಬೆಳೆಗಾರರು ಪರಿತಪಿಸಬೇಕಾಯಿತು. ಈ ಪರಿಸ್ಥಿತಿ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಅಧಿಕಾರಿಗಳು ಗೂಡಿನ ಮಾರುಕಟ್ಟೆಯಲ್ಲಿ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು. ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ತಂದಲ್ಲಿ ಸಮಸ್ಯೆ ಪರಿಹರಿಸಲಾಗುವುದು. ಅಧಿಕಾರಿಗಳು ರೇಷ್ಮೆ ಬೆಳೆ ವಿಸ್ತರಣೆಗೆ ಪ್ರಯತ್ನಿಸಬೇಕು. ಟೊಮೆಟೊ ಬೆಳೆದು ಅದೃಷ್ಟ ಪರೀಕ್ಷೆ ಮಾಡುವ ರೈತರು ರೇಷ್ಮೆ ಕೃಷಿಯನ್ನು ಕೈಗೊಳ್ಳಬೇಕು. ಬದಲಾದ ಪರಿಸ್ಥಿತಿಯಲ್ಲಿ ಯಾವುದೇ ಒಂದು ಬೆಳೆಯನ್ನು ಆಶ್ರಯಿಸುವುದು ಅಪಾಯಕಾರಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥರೆಡ್ಡಿ, ಪ್ರಸನ್ನ, ಮಂಜುನಾಥರೆಡ್ಡಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಸ್.ಎಂ.ಶ್ರೀನಿವಾಸ್, ಅಧಿಕಾರಿ ಎಂ.ನಾಗರಾಜು, ಸಹಾಯಕ ನಿರ್ದೇಶಕ ವಿ.ಕೃಷ್ಣಪ್ಪ, ಚೌಡರೆಡ್ಡಿ ಇದ್ದರು.
ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಲ ಜೀವನ್ ಯೋಜನೆಗೆ ಇದುವರೆಗೂ 350 ಕೋಟಿ ಅನುದಾನ ಬಿಡುಗಡೆಯಾಗಿದೆ:ಜಿ.ಕೆ.ವೆಂಕಟಶಿವಾರೆಡ್ಡಿ
ಕ್ಷೇತ್ರಕ್ಕೆ ಸಂಬಂಧಿಸಿದಂತೆ (ಜೆಜೆಎಂ)ಜಲ ಜೀವನ್ ಯೋಜನೆಗೆ ಇದುವರೆಗೂ 350 ಕೋಟಿ ಅನುದಾನ ಬಿಡುಗಡೆಯಾಗಿದೆ. ಕ್ಷೇತ್ರದಲ್ಲಿ ಯೋಜನೆಯು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಮಾರ್ಚ್ ಒಳಗಾಗಿ ಪೂರ್ಣಗೊಳಿಸಲು ಇಂಜನೀಯರ್‍ರವರಿಗೆ ಸೂಚನೆ ನೀಡಿದ್ದೇನೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಕೊಳತೂರು ಗ್ರಾ.ಪಂ. ವ್ಯಾಪ್ತಿಯ ವೆಂಕಟೇಶ ನಗರ ಗ್ರಾಮದಲ್ಲಿ ಶನಿವಾರ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೊಳತೂರು ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ಅಂದಾಜು ಒಟ್ಟು 6.5 ಕೋಟಿ ವೆಚ್ಚದಲ್ಲಿನ ಜಲಜೀವನ್ ಮಿಷನ್ ಕಾಮಗಾರಿ ಹಮ್ಮಿಕೊಂಡಿದ್ದು , ಕೊಳತೂರು ಗ್ರಾಮಕ್ಕೆ 1 ಕೋಟಿ ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ನಡೆಯಲಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾಹಿತಿ ನೀಡಿದರು.
ಇದೇ ಸಮಯದಲ್ಲಿ ಶೆಟ್ಟಿಹಳ್ಳಿ, ಉಪ್ಪುಕಂಟೆ, ರಮೇಶ್‍ನಗರ , ಆಚಂಪಲ್ಲಿ, ಹರಳಕುಂಟೆ, ಸೀತರೆಡ್ಡಪಲ್ಲಿ ಗ್ರಾಮದಲ್ಲಿಯೂ ಜಲಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ನಾಗಮಣಿ ಮುಖಂಡರಾದ ಮಣಿ, ಆಂಜಿ, ಜಯರಾಮ್, ನಾರಾಯಣಗೌಡ, ನಂಜುಂಡಗೌಡ, ಚಂಗಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನೀಯರ್ ಎಇಇ ನಾರಾಯಣಸ್ವಾಮಿ, ಪಿಡಿಒ ಮೆಹರ್‍ತಾಜ್, ನರೇಗಾ ಇಂಜಿನೀಯರ್ ರುದ್ರಪ್ಪ ಇದ್ದರು.
ಬರದ ನಡುವೆ ಪಶು ಆಹಾರ ಏರಿಕೆ ಮಾಡಿ ರೈತರ ಹಣದಲ್ಲಿ ವಿದೇಶಿ ಯುರೋಪ್ ಪ್ರವಾಸ ಹೊರಟಿರುವ ಒಕ್ಕೂಟದ ವ್ಯವಸ್ಥಾಪಕರಿಗೆ ಸೆಗಣಿಯೊಂದಿಗೆ ದಿಕ್ಕಾರ
ಕೋಲಾರ, ಅ-21, ಬರದ ನಡುವೆ ಪಶು ಆಹಾರ ಏರಿಕೆ ಮಾಡಿ ರೈತರ ಹಣದಲ್ಲಿ ವಿದೇಶಿ ಯುರೋಪ್ ಪ್ರವಾಸ ಹೊರಟಿರುವ ಒಕ್ಕೂಟದ ವ್ಯವಸ್ಥಾಪಕರು ಹಾಗೂ ನಿರ್ದೇಶಕರುಗಳ ವಿರುದ್ಧ ರೈತ ಸಂಘದಿಂದ ಗಾಂಧಿ ಪ್ರತಿಮೆ ಮುಂದೆ ಸಗಣಿ ಸಮೇತ ಹೋರಾಟ ಮಾಡಿ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳವಂತೆ ತಹಶೀಲ್ದಾರ್ ಮುಖಾಂತರ ಸಹಕಾರ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿ ಭೂಮಿಗೆ ಹಾಕಿರುವ ಭಿತ್ತನೆ ಬೀಜ ಮೊಳಕೆ ಒಡೆಯದೆ ಭೂಮಿಯಲ್ಲಿಯೇ ಒಣಗಿರುವ ಜೊತೆಗೆ ಬೆಳೆದ ಬೆಳೆಗಳಿಗೆ ರೋಗ ಬಾದೆಯಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿಲ್ಲದೆ ರಸ್ತೆಗಳಲ್ಲಿ ಸುರಿಯುತ್ತಿರುವುದು ಒಕ್ಕೂಟದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದರೂ ಸಹ ಪಶು ಆಹಾರದ ಬೆಲೆ ಏರಿಕೆ ಮಾಡಿ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ಒಕ್ಕೂಟದ ವಿರುದ್ಧ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳನಿಗೌಡ ಆಕ್ರೋಷ ವ್ಯಕ್ತಪಡಿಸಿದರು.
ಬರ ಆವರಿಸಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಸುಗಳಿಗೆ ಮೇವು, ನೀರು ಸಿಗದೆ ಹೊರ ರಾಜ್ಯಗಳಿಂದ ದುಬಾರಿ ಬೆಲೆಗೆ ಮೇವು ಖರೀದಿ ಮಾಡಲಾಗದ ಪರಿಸ್ಥಿತಿಯಲ್ಲಿರುವ ರೈತರು ಜಾನುವಾರುಗಳನ್ನು ಸಂತೆಗಳಲ್ಲಿ ಕಟುಕರ ಕೈಗೆ ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದರು ಒಕ್ಕೂಡ ಇಂತಹ ಬೀಕರ ಸಮಸ್ಯೆಯಲ್ಲಿಯೂ ಪಶು ಆಹಾರದ ಬೆಲೆಯನ್ನು ಏರಿಕೆ ಮಾಡಿ ಹೈನೋದ್ಯಮಕ್ಕೆ ಕಡೆ ಮೊಳೆ ಒಡೆಯುತ್ತಿದ್ದಾರೆಂದು ಆರೋಪ ಮಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಸರ್ಕಾರದ 40% ಕಮೀಷನ್ ಹಾವಳಿಗೆ ಉದಾಹರಣೆಯಂತೆ ಒಕ್ಕೂಟ ಟೆಟ್ರಾ ಪ್ಯಾಕ್ ವಿಭಾಗಕ್ಕೆ ಅವಶ್ಯಕತೆ ಇರುವ ಯಂತ್ರೋಪಕರಣವನ್ನು 24 ಕೋಟಿ ಯಂತ್ರವನ್ನು 26 ಕೋಟಿಗೆ ಹೆಚ್ಚುವರಿ 2 ಕೋಟಿ ಹೆಚ್ಚಳ ಮಾಡಿ ಕಂಪನಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಬರದ ಪರಿಸ್ಥಿತಿಯಲ್ಲಿಯೂ ವ್ಯವಸ್ಥಾಪಕರು ಹಾಗೂ ನಿರ್ದೇಶಕರು ಕುಟುಂಬ ಸಮೇತ ಯುರೋಪ್ ವಿದೇಶಿ ಪ್ರವಾಸ ಅವಶ್ಯಕತೆ ಇದೆಯೇ? ಎಂದು ಅಧ್ಯಕ್ಷರನ್ನು ಪ್ರಶ್ನೆ ಮಾಡಿದರು.
ಪ್ರವಾಸಕ್ಕೆ ಉಪಯೋಗಿಸುವ ಹಣವನ್ನು ಮೇವಿಗಾಗಿ ಪ್ರತಿ ಡೈರಿಗಳ ಮುಖಾಂತರ ರೈತರಿಗೆ ಬೋನಸ್ ರೂಪದಲ್ಲಿ ನೀಡಿದ್ದರೆ ಕಷ್ಟದಲ್ಲಿರುವ ರೈತರ ಸಮಸ್ಯೆಗೆ ಉಪಯೋಗವಾಗುತ್ತಿಲ್ಲವೇ? ಒಂದು ಕಡೆ ಒಕ್ಕೂಟದ ನಷ್ಟ, ಮತ್ತೊಂದು ಕಡೆ ಸಾರ್ವಜನಿಕ ರೈತರ ಹಣದಲ್ಲಿ ವ್ಯವಸ್ಥಾಪಕರು, ನಿರ್ದೇಶಕರು ಮೋಜು ಮಸ್ತಿಗಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಿರುವುದು ರೈತ ವಿರೋದಿ ದೋರಣೆಯಲ್ಲವೇ? ಎಂದು ಒಕ್ಕೂಟದ ವಿರುದ್ಧ ಕಿಡಿಕಾರಿದರು.
ಕೂಡಲೇ ವಿದೇಶಿ ಪ್ರವಾಸವನ್ನು ರದ್ದುಮಾಡಬೇಕು ಹಾಗೂ ಟೆಟ್ರಾ ಪ್ಯಾಕ್ ವಿಭಾಗದ ಯಂತ್ರೋಪಕರಣ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಬೇಕು ಪ್ರವಾಸಿ ಹಣವನ್ನು ರೈತರಿಗೆ ಮೇವಿಗಾಗಿ ಮೀಸಲಿಡಬೇಕು ಇಲ್ಲವಾದಲ್ಲಿ ಜಾನುವಾರುಗಳ ಸಮೇತ ಒಕ್ಕೂಟದ ಅಧ್ಯಕ್ಷರ ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಸಹಕಾರ ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದರು.
ಭೂ ಆಕ್ರಮಣ ವಿವಾದ ಮುಖ್ಯಮಂತ್ರಿ, ಗೃಹಮಂತ್ರಿಗೆ ಮನವಿ- ಹಳ್ಳಿಯ ಜಾಗದ ವಿವಾದವೊಂದು ವಿಧಾನಸೌಧದ ಮೆಟ್ಟಿಲೇರಿದ ಅಪರೂಪದ ಪ್ರಕರಣ
ಕುಂದಾಪುರ: ಕಳೆದ ಹಲವು ವರ್ಷಗಳಿಂದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನ್ಯಾಯಾಲಯ ಮೆಟ್ಟಿಲೇರಿದ ಬೇಳೂರು ಗ್ರಾಮದ ಸರ್ವೇ ನಂಬ್ರ 211/10ರ ಕೃಷಿ ಭೂಮಿ ವಿವಾದ ಈಗ ಮುಖ್ಯಮಂತ್ರಿ, ಗೃಹಮಂತ್ರಿಗಳ ತನಕ ಹೋಗಿದೆ.
ನಿವೃತ್ತ ಮುಖ್ಯೋಪಾಧ್ಯಾಯ ಬೇಳೂರಿನ ಆನಂದ ಶೆಟ್ಟಿ, ಬೇಳೂರು ಗ್ರಾಮದ ಸರ್ವೇ ನಂಬ್ರ 211/10ರ 57 ಸೆಂಟ್ಸ್ ಜಾಗ ತನ್ನದೆಂದು ಶಿಕ್ಷಕ ಶಶಿಧರ ಶೆಟ್ಟಿ, ರಜನಿ ಎಸ್. ಶೆಟ್ಟಿ ದಂಪತಿ ಅಕ್ರಮವಾಗಿ ವಶಪಡಿಸಿಕೊಂಡು ಕೃಷಿ ಮಾಡುತ್ತಿರುವುದಲ್ಲದೇ ತಮಗೆ ಜೀವ ಬೆದರಿಕೆ ಉಂಟು ಮಾಡುತ್ತಿದ್ದಾರೆಂದು ಹಲವು ವರ್ಷಗಳಿಂದ ದೂರು ನೀಡುತ್ತಾ ಬಂದಿದ್ದು, ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ನ್ಯಾಯಾಲಯ ನನ್ನ ಪರವಾಗಿ ನೀಡಿದ ಆದೇಶಕ್ಕೂ ಜಗ್ಗದೇ ಆರೋಪಿಗಳು ಕಾನೂನು ಬಾಹಿರ ಕೃತ್ಯ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹಮಂತ್ರಿ ಡಾ| ಪರಮೇಶ್ವರ ಅವರಿಗೆ ದೂರು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳು ಉಡುಪಿ ಜಿಲ್ಲೆಗೆ ಬಂದಾಗ 6-9-2023ರಂದು ಆನಂದ ಶೆಟ್ಟಿಯವರು ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಕಛೇರಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಅನಂತರ ಆನಂದ ಶೆಟ್ಟಿಯವರು 17-10-2023ರಂದು ಕೋಟ ಠಾಣೆಯಲ್ಲೂ ದೂರು ದಾಖಲಿಸಿದ್ದರು. ಆಮೇಲೆ 20-10-2023ರಂದು ಗೃಹ ಸಚಿವರಿಗೂ ದೂರು ಸಲ್ಲಿಸಿ, 90ರ ಹರೆಯದ ನಾನು ಹೋರಾಟ ಮಾಡಿ ಮಾನಸಿಕವಾಗಿ ನೊಂದಿದ್ದು, ದೈಹಿಕವಾಗಿ ಕುಗ್ಗಿದ್ದೇನೆ. ದಯವಿಟ್ಟು ಶೀಘ್ರ ಕ್ರಮಕೈಗೊಳ್ಳಿ ಎಂದು ವಿನಂತಿಸಿದ್ದಾರೆ. ಹಳ್ಳಿಯ ಜಾಗದ ವಿವಾದವೊಂದು ವಿಧಾನಸೌಧದ ಮೆಟ್ಟಿಲೇರಿದ ಅಪರೂಪದ ಪ್ರಕರಣ ಇದಾಗಿದೆ.
ಕುದ್ರೋಳಿ ಕ್ಷೇತ್ರಕ್ಕೆ ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ ಸೌಹಾರ್ದ ಭೇಟಿ / Goodwill visit to Kudroli Kshetra from Saint Mother Teresa Forum
ಜಗತ್ಪ್ರಸಿದ್ಧ ಮಂಗಳೂರು ದಸರಾ ನಡೆಯುವ ಸೌಹಾರ್ದ ತಾಣ ಕುದ್ರೋಳಿ ಕ್ಷೇತ್ರಕ್ಕೆ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವೇದಿಕೆಯ ಇತರ ಸದಸ್ಯರೊಂದಿಗೆ ಸೌಹಾರ್ದ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪೂಜೆ ಪುರಸ್ಕಾರ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ವಿಶ್ವ ಮಾನವ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶ್ರೀ ಗೋಕರ್ಣಾನಾಥ ಕ್ಷೇತ್ರವು ಸರ್ವ ಧರ್ಮದ ಜನತೆಯ ಪ್ರೀತಿ ವಿಶ್ವಾಸಗಳಿಸುವ ಮೂಲಕ ಸೌಹಾರ್ದತೆಯ ತಾಣವಾಗಿ ಜಗತ್ಪಸಿದ್ದಗೊಂಡಿದೆ. ಮಾತ್ರವಲ್ಲದೆ ನಾಡ ಹಬ್ಬವಾದ ದಸರಾದ ಇಲ್ಲಿನ ವೈಭವವು ಎಲ್ಲರ ಕಣ್ಮಣ ಸೆಳೆಯುತ್ತಿದೆ. ಮಂಗಳೂರು ದಸರಾ ಇಂದು ಜಾಗತಿಕ ಮನ್ನಣೆ ಪಡೆದಿದ್ದು, ಇಲ್ಲಿನ ದಸರಾ ಸಂಭ್ರಮದಲ್ಲಿ ದೇಶ ವಿದೇಶಗಳಿಂದ ಜನತೆ ಭಾಗವಹಿಸುವ ಮೂಲಕ ಕೂಡಿ ಬಾಳುವ ಸಂಸ್ಕ್ರತಿಯ ಪ್ರತೀಕವಾಗಿದೆ ಎಂದು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಈ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ರವಿಶಂಕರ್ ಮಿಜಾರ್,ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಮುಖರಾದ ಸುನಿಲ್ ಕುಮಾರ್ ಬಜಾಲ್, ಮಂಜುಳಾ ನಾಯಕ್,ಅಶ್ರಫ್ ಕೆ, ಡೋಲ್ಫಿ ಡಿಸೋಜ,ಮಹೇಶ್ ನಾಯಕ್, ಮರ್ಲಿನ್ ರೇಗೋ, ಫ್ಲೇವಿ ಕ್ರಾಸ್ತಾ,ಡಯಾನ ಡಿಸೋಜ,ಫ್ಲೋರಿನ್ ಡಿಸೋಜ, ಸಂಜನಾ ಛಲವಾದಿ,ಸಮರ್ಥ್ ಭಟ್,ಸ್ಟಾನಿ ಡಿಕುನ್ನಾ ಬಂಟ್ವಾಳ,ಸಿಲ್ವಿಯಾ ಸಿಕ್ವೇರಾ ಮುಂತಾದವರು ಉಪಸ್ಥಿತರಿದ್ದರು
Goodwill visit to Kudroli Kshetra from Saint Mother Teresa Forum
President and Members of the St. Mother Terasa Vichara Vedike, an organization working towards communal harmony of coastal Karnataka led by its President, former President of karnataka konkani Sahitya Academy Mr Roy castelino visited kudroli temple Mangalore on occasion of Dasara Celebrations and greeted members of the temple committee.
Madhava suvarna, Secretary Temple Committee and member Ravishankar mijar welcomed them.
Sunil Kumar Bajal, Manjula Nayak ,K. Ashraf, Dolphy Dsouza, Mahesh Nayak, Merlyn Rego, Falvy crasta, Samarth Bhat, Diana DSouza, Sanjana Chalavadi, Sylvia Sequeira, Florine DSouza, Stanley D’Cunha and others were present on the occasion.
Mother Teresa Vichara Vedike has planned various activities to build and promote social harmony through interfaith and Inter religious communication and dialogue.
This visit was very important to establish cordial relations with the community and society on a whole.
ಐ. ಎಂ. ಜೆ. ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಮೂಡ್ಲಕಟ್ಟೆಯಲ್ಲಿ ನವರಾತ್ರಿ ಆಚರಣೆ
“ಐ. ಎಂಮ್. ಜೆ ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಮೂಡ್ಲಕಟ್ಟೆಯಲ್ಲಿ ನವರಾತ್ರಿ ಆಚರಣೆಯ ಶುಕ್ರವಾರ ಶಾರದಾ ಮತ್ತು ಆಯುಧ ಪೂಜೆಯನ್ನು ಭಕ್ತಿ ಮತ್ತು ಶ್ರದ್ದೆ ಇಂದ ಆಚರಿಸಲಾಯಿತು. ಐ. ಎಂಮ್. ಜೆ ಸಮೂಹ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಿದ್ದಾರ್ಥ್ ಜೆ ಶೆಟ್ಟಿ ಅವರು ಪೂಜಾ ವಿಧಿ ವಿದಾನವನ್ನು ನೆರವೇರಿಸಿದರು. ಇದೆ ಸಂದರ್ಭದಲ್ಲಿ ಐ. ಎಂಮ್. ಜೆ ವಿದ್ಯಾಸಂಸ್ಥೆಗೆ ಒಳಪಡುವ ಎಲ್ಲಾ ವಿಭಾಗದಲ್ಲೂ ಪ್ರತ್ಯೇಕವಾಗಿ ಪೂಜಾ ಕಾರ್ಯಗಳು ಜರುಗಿದವು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಉಪಾಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಬಾಗಿಯಾದರು. ನೆರದಿದ್ದ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.
ರಾಷ್ಟೀಯ ಹಬ್ಬಗಳನ್ನ ಎಲ್ಲಾ ಇಲಾಖಾಧಿಕಾರಿಗಳು ಅದ್ದೂರಿಯಾಗಿ ನಡೆಸಲು ತಹಶೀಲ್ದಾರ್ ಶರೀನ್‍ತಾಜ್ ಇಲಾಖಾಧಿಕಾರಿಗಳಿಗೆ ಸೂಚನೆ
ಶ್ರೀನಿವಾಸಪುರ 2 : ರಾಷ್ಟೀಯ ಹಬ್ಬಗಳನ್ನ ಎಲ್ಲಾ ಇಲಾಖಾಧಿಕಾರಿಗಳು ಅದ್ದೂರಿಯಾಗಿ ನಡೆಸುವಂತೆ ತಹಶೀಲ್ದಾರ್ ಶರೀನ್‍ತಾಜ್ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಸಮಿತಿವತಿಯಿಂದ ವಾಲ್ಮೀಕಿ ಜಯಂತಿ, ಕನ್ನಡ ರಾಜ್ಯೋತ್ಸವ, ಕನಕ ಜಯಂತಿ, ಒನಿಕೆ ಓಬವ್ವ ಜಯಂತಿ, ಕಿತ್ತೂರುರಾಣಿ ಚನ್ನಮ್ಮ ಜಯಂತಿ ಅಂಗವಾಗಿ ನಡೆದ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದರು.
ವಾಲ್ಮೀಕಿ ಜಯಂತಿ ಅಂಗವಾಗಿ ಎಲ್ಲಾ ಗ್ರಾಮಪಂಚಾಯಿತಿಗಳಿಂದಲೂ ಸ್ತಬ್ದ ಚಿತ್ರಗಳನ್ನು ಮೆರವಣಿಗೆ ಮೂಲಕ ತಾಲೂಕು ಕೇಂದ್ರಕ್ಕೆ ತರುವಂತೆ ಸೂಚಿಸಲಾಯಿತು.
ಎಲ್ಲಾ ಇಲಾಖೆಗಳ ಕಛೇರಿಯ ಕಟ್ಟಡಗಳಿಗೆ ವಿದ್ಯುತ್‍ದೀಪಾ ಅಲಂಕಾರಗಳನ್ನು ಮಾಡಿ, ತಮ್ಮತಮ್ಮ ಕಛೇರಿಗಳಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ , ತಮ್ಮ ಇಲಾಖೆಗಳಿಗೆ ಸಂಬಂದಿಸಿದ ಸ್ತಬ್ದಚಿತ್ರಗಳನ್ನು ಮೆರವಣಿಗಾಗಿ ಸಿಂಗರಿಸುವಂತೆ ಸೂಚನೆ ನೀಡಿದರು.
ನವಂಬರ್ 1ರ ಕನ್ನಡರಾಜ್ಯೋತ್ಸವ ಕಾರ್ಯಕ್ರಮವು ಪಟ್ಟಣದ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದ್ದು, ಅಂದು ಕನ್ನಡ ದ್ವಜ, ರಾಷ್ಟ್ರದ್ವಜಾರೋಹಣ ನಡೆಸಲಾಗುವುದು, ಎಲ್ಲಾ ಇಲಾಖೆಗಳಿಗೆ ಸಂಬಂದಿಸಿದ ಸ್ತಬ್ದಚಿತ್ರಗಳ ಹಾಗು ಕಲಾತಂಡಗಳೊಂದಿಗೆ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಸಲಾಗುವುದು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗುವುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಇಒ ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ,ಎನ್.ಸತ್ಯನಾರಾಯಣ್, ಕೃಷಿ ಅಧಿಕಾರಿ ಕೆ.ಸಿ.ಮಂಜುನಾಥ್, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್, ಮುಖಂಡರಾದ ಹೊಗಳಗರೆ ಆಂಜನೇಯಪ್ಪ, ಗೌನಿಪಲ್ಲಿ ರಾಮಮೋಹನ್, ನರಸಿಂಹಪ್ಪ, ವ್ಯಾಪಲಪಲ್ಲಿ ನರೇಶ್, ಯಮ್ಮನೂರು ನಾಗರಾಜ್, ರಾಮಾಂಜನಮ್ಮ, ವೆಂಕಟೇಶ್, ಪೆದ್ದಪಲ್ಲಿ ಈರಪ್ಪ ಇದ್ದರು.