ಖರೀದಿಸುವ ವಸ್ತುವಿನ ಮೇಲೆ ಗುಣಮಟ್ಟ ಕುರಿತು ಪ್ರಮಾಣೀಕರಿಸಿದ ಮುದ್ರೆ ಇರುವುದನ್ನು ಖಾತ್ರಿಪಡಿಸಿಕೊಂಡು ವಸ್ತು ಖರೀದಿಸಬೇಕು

ಶ್ರೀನಿವಾಸಪುರ:ಖರೀದಿಸುವ ವಸ್ತುವಿನ ಮೇಲೆ ಗುಣಮಟ್ಟ ಕುರಿತು ಪ್ರಮಾಣೀಕರಿಸಿದ ಮುದ್ರೆ ಇರುವುದನ್ನು ಖಾತ್ರಿಪಡಿಸಿಕೊಂಡು ವಸ್ತು ಖರೀದಿಸಬೇಕು ಎಂದು ಬೆಂಗಳೂರಿನ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಸಂಸ್ಥೆ ಅಧಿಕಾರಿ ಹೇಳಿದರು.
ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದಲ್ಲಿ ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಂದ ಏರ್ಪಡಿಸಲಾಗಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗವಹಿಸಿರುವ ವಿದ್ಯಾರ್ಥಿನಿಯರಿಂದ ಗುರುವಾರ ಏರ್ಪಡಿಸಿದ್ದ ವಸ್ತುಗಳ ಗುಣಮಟ್ಟ ಕುರಿತ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾವಂತ ಸಮುದಾಯ ಗ್ರಾಮೀಣ ಪ್ರದೇಶದ ನಾಗರಿಕರಲ್ಲಿ ವಸ್ತು ಖರೀದಿಸುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಬೇಕು. ಇಲ್ಲವಾದರೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಖರೀದಿಸಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿ ಮನೆ ಮನೆಗೆ ಕರಪತ್ರ ವಿತರಿಸಿದರು. ಬೀದಿ ನಾಟಕ, ಹಾಡು ಹಾಗೂ ಅಭಿನಯದ ಮೂಲಕ ಬಿಐಎಸ್ ಬಗ್ಗೆ ಅರಿವು ಮೂಡಿಸಿದರು.
ಎನ್‍ಎಸ್‍ಎಸ್ ಶಿಬಿರದ ಕಾರ್ಯನಿರ್ವಹಣಾಧಿಕಾರಿ ಎನ್.ಗೋಪಾಲನ್, ಉಪ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಮಂಜುಳ, ಬಿಐಎಸ್ ಸಂಸ್ಥೆ ಅಧಿಕಾರಿ ರೀತು, ಬಿಐಎಸ್ ಮೆಂಟರ್ ಕೆ.ಎನ್.ವೇಣುಗೋಪಾಲ್, ಜಿ.ಕೆ.ನಾರಾಯಣಸ್ವಾಮಿ, ಆರ್.ರವಿಕುಮಾರ್, ಡಿ.ಎನ್.ವಿನಯ್ ಕುಮಾರ್, ಆರ್.ರವಿಕುಮಾರ್, ಎನ್.ಶಂಕರೇಗೌಡ, ಜಿ.ಮಾಧವಿ, ಲತಾ ಇದ್ದರು.

ಕೈ ಚೀಲಕ್ಕೆ 20 ರೂ. ಶುಲ್ಕವಿಧಿಸಿದ ಪ್ರತಿಷ್ಠಿತ ಕಂಪೆನಿಯ ಮಾಲ್ ಗೆ 3 ಸಾವಿರ ದಂಡ

ಬೆಂಗಳೂರು: ಕೈ ಚೀಲಕ್ಕೆ 20 ರೂ. ಶುಲ್ಕ ವಿಧಿಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಐಕಿಯಾ ಮಾಲ್ ಗೆ ಗ್ರಾಹಕ ನ್ಯಾಯಾಲಯ 3 ಸಾವಿರ ದಂಡ ವಿಧಿಸಿದೆ.

ಬೆಂಗಳೂರಿನ ಜೋಗುಪಾಳ್ಯ ನಿವಾಸಿಯಾಗಿರುವ ಸಂಗೀತಾ ಬೋಹ್ರಾ ಎಂಬ ಮಹಿಳೆ ಕಳೆದ ವರ್ಷ ಅಕ್ಟೋಬರ್ 6 ರಂದು ನಾಗಸಂದ್ರದಲ್ಲಿರುವ ಐಕಿಯಾ ಮಳಿಗೆಗೆ ಭೇಟಿ ನೀಡಿದ್ದರು. ಶಾಪಿಂಗ್ ಮುಗಿದ ನಂತರ ಬಿಲ್ ಮಾಡಿಸುವಾಗ ಅವರಿಗೆ ಕ್ಯಾರಿ ಬ್ಯಾಗ್ ಒಂದಕ್ಕೆ ಅವರು ಖರೀದಿಸಿದ ಸಾಮಾಗ್ರಿ ತುಂಬಿಸಿ ನೀಡಿ, ಕ್ಯಾರಿ ಬ್ಯಾಗಿಗೆ  ಸಿಬ್ಬಂದಿ 20 ರೂಪಾಯಿ ಚಾರ್ಜ್ ಮಾಡಿದ್ದಾರೆ. ತಾನು ಖರೀದಿಸಿದ ವಸ್ತುಗಳನ್ನು ತುಂಬಿಸಿಕೊಂಡು ಹೋಗಲು ಕಂಪನಿ ಅದೇ ಕಂಪೆನಿಯ  ಲೋಗೊ ಇರುವ ಕ್ಯಾರಿ ಬ್ಯಾಗ್ ನೀಡಿ ಅದಕ್ಕೆ ಇಪ್ಪತ್ತು ರೂಪಾಯಿ ವಸೂಲಿ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸಿದ್ದರು. ಆದರೆ, ಇದು ಕಂಪನಿ ರೂಲ್ಸ್ ಎಂದು ಸಿಬ್ಬಂದಿ ಇದನ್ನು ಸರಿ ಎಂದು ವಾದಿಸಿ ಶುಲ್ಕ ಪಡೆದಿದ್ದರು.


ನಂತರ ಮಹಿಳೆ ಮಾರ್ಚ್ ನಲ್ಲಿ ಶಾಂತಿನಗರದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಬಳಿಕ ಐಕಿಯಾ ಕಂಪನಿಯ ಭಾರತೀಯ ಘಟಕಕ್ಕೆ ಕಾನೂನು ನೋಟಿಸ್ ಕಳುಹಿಸಿದ್ದರು. ಈ ಸಂಬಂಧ ಅ. 4 ರಂದು ಗ್ರಾಹಕ ನ್ಯಾಯಾಲಯ ವಿಚಾರಣೆ ನಡೆಸಿ, ಕಂಪನಿಯ ಗ್ರಾಹಕ ಸೇವೆಯಲ್ಲಿನ ಲೋಪಗಳ ಬಗ್ಗೆ ಆಕ್ಷೇಪ ವ್ಯಕಪಡಿಸಿ ಗ್ರಾಹಕ ನ್ಯಾಯಾಲಯ 3 ಸಾವಿರ ದಂಡ ವಿಧಿಸಿದೆ.

ಉತ್ತರಾಖಂಡದ ಕಾಳಿ ನದಿಗೆ ಉರುಳಿದ ಕಾರು: 6 ಮಂದಿ ಸಾವು

ಡೆಹ್ರಾಡೂನ್: ಆದಿ ಕೈಲಾಸನ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ಕಾರೊಂದು ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ, ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಲಖನ್ಪುರ ಕಾಳಿ ನದಿಗೆ ಬಿದ್ದು ಆರು ಮಂದಿ ದುರ್ಮರಣ ಹೊಂದಿದ್ದಾರೆ.

ಆದಿ ಕೈಲಾಸನ ದರ್ಶನಕ್ಕೆ ತೆರಳಿದ್ದ 6 ಯಾತ್ರಿಕರ ಪೈಕಿ ಇಬ್ಬರು ಬೆಂಗಳೂರಿನವರಾಗಿದ್ದರೆ, ಇಬ್ಬರು ತೆಲಂಗಾಣದವರು ಮತ್ತು ಇಬ್ಬರು ಉತ್ತರಾಖಂಡದವರು ಎಂದು ತಿಳಿದು ಬಂದಿದೆ. ಘಟನೆಗೆ ಸ್ಪಂದಿಸಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.ಈ ಘಟನೆ ಸಂಜೆ ವೇಳೆ ಸಂಭವಿಸಿದ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸುತ್ತಾ, ಆದಷ್ಟು ಬೇಗ ಶೋಧ ಕಾರ್ಯ ಆರಂಭವಾಗಲಿದೆ ಎಂದು ಎಸ್ಪಿ ಹೇಳಿದ್ದಾರೆ.

ಆದಿ ಕವಿ ಮಹರ್ಷಿ ವಾಲ್ಮೀಕಿ ರಾಮಾಯಣ ಕಾವ್ಯದ ಮೂಲಕ ಮನಕುಲಕ್ಕೆ ಸಂದೇಶವನ್ನು ಸಾರಿದ ಸರ್ವತೋಮುಖ ಚಿಂತಕ : ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ : ಆದಿ ಕವಿಯಂದೇ ಖ್ಯಾತರಾದ ಮಹರ್ಷಿ ವಾಲ್ಮೀಕಿ ರಾಮಾಯಣ ಕಾವ್ಯದ ಮೂಲಕ ಮನಕುಲಕ್ಕೆ ಬದುಕಿನ ಸಂದೇಶವನ್ನು ಸಾರಿದ ಸರ್ವತೋಮುಖ ಚಿಂತಕ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಬುಧವಾರ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜೋತ್ಸವ ಆಚರಣೆಗಾಗಿ ನಡೆದ ಪೂರ್ವ ಬಾವಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲಾ ಪಂಚಾಯಿತಿ ಕೇಂದ್ರಗಳಿಂದ ವಾಲ್ಮೀಕಿ ಸ್ತಬ್ದ ಚಿತ್ರವನ್ನು ಹೊತ್ತು ತಾಲೂಕಿನ ಕೇಂದ್ರಕ್ಕೆ ಬರವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿ, ಮುಂದಿನ ತಿಂಗಳು ನವಂಬರ್ ೧ ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಬೇಕಾದ ವ್ಯವಸ್ಥೆ ಮಾಡುವಂತೆಯೂ ತಹಶೀಲ್ದಾರ್ ಶರೀನ್‌ತಾಜ್ ರವರಿಗೆ ಸೂಚನೆ ನೀಡಿದರು. ಹಾಗು ಎಲ್ಲಾ ಇಲಾಖೆಗಳ ಕಛೇರಿಗಳಲ್ಲಿ ವಾಲ್ಮೀಕಿ ಜಯಂತಿ ಹಾಗು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಶರೀನ್‌ತಾಜ್, ಉಪ ತಹಶೀಲ್ದಾರ್ ಕೆ. ಎಲ್ .ಜಯರಾಮ್ ,ಶಿಸ್ತೇದಾರ್ ಬಲರಾಮಚಂದ್ರಗೌಡ ,ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್ ಆರ್‌ಐ ಮುನಿರೆಡ್ಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ ವಾಲ್ಮೀಕಿ ಸಮುದಾಯದ ಮುಖಂಡರಾದ ಗೌನಿಪಲ್ಲಿ ರಾಮಮೋಹನ್, ಯಮ್ಮನೂರು ನಾಗರಾಜ್, ಗುಮ್ಮರೆಡ್ಡಿ ಪುರ. ಹರೀಶ್ ನಾಯಕ್ ಹೊಗಳಗರೆ ಆಂಜಿ, ಕರ‍್ನಹಳ್ಳಿ ಆಂಜಿ, ಪಾತಬಲ್ಲಪಲ್ಲಿ ಅಪ್ಪಯ್ಯ ಇದ್ದರು.

ವಾಲ್ಮೀಕಿ ಸಮುದಾಯವನ್ನು ಕಡೆಗಣಿಸಿದರೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಯ ಎಚ್ಚರಿಕೆ

ಕೋಲಾರ,ಅ.25: ಕೋಲಾರ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಿರ್ಮಿಸುತ್ತಿರುವ ವಾಲ್ಮೀಕಿ ಭವನದ ಒತ್ತುವರಿಯನ್ನು ತೆರವುಗೊಳಿಸಿ ಮತ್ತು ವಾಲ್ಮೀಕಿ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಹಾಗೂ ಭವನದಲ್ಲಿ ಕಾರ್ಯಕ್ರಮ ಮಾಡಲು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮುದಾಯದ ಮನವಿಯನ್ನು ಕಡೆಗಣಿಸಿದಲ್ಲಿ ಭವನದ ಮುಂದೆ ಕಪ್ಪು ಪಟ್ಟಿ ಧರಿಸಿ ಜಿಲ್ಲಾಡಳಿತದ ವಿರುದ್ದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಲ್ಲೇಖ;- 1. ಸರ್ಕಾರದ ಪತ್ರ ಸಂಖ್ಯೆ ಪವಕನಿ; ಸಂವಿ.ಸಿ.ಆರ್-57/2013-14 ದಿನಾಂಕ 21-1023 2. ಪತ್ರದ ಸಂಖ್ಯೆ ಸಕಿಇ/1/ಎಸ್ ಎ ಡಿ/2023 ದಿನಾಂಕ 20-10-23 3. ಕರ್ನಾಟಕ ರಾಜ್ಯ ವಾಲ್ಮೀಕಿ ಅಂಬೇಡ್ಕರ್ ಪ್ರಜಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷರ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ ಅರ್ಜಿ. 4. ಘನ ಪ್ರಧಾನ ಸಿವಿಲ್ ನ್ಯಾಯಾಲಯದ ಪ್ರಕರಣ ಸಂಖ್ಯೆ ಒಎಸ್. 31/2019ರ ಆರ್ಡರ್ ಶೀಟ್ ನಕಲು ಮತ್ತು ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಲಯದ ಪ್ರಕರಣ ಎಮ್ ಎ-
16/2020 ರ ಆದೇಶ ದಿನಾಂಕ 11-12-2020 ಆಗಿರುತ್ತದೆ.
ಕೋಲಾರದ ಘನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣದ ಸಂಖ್ಯೆ ಒಎಸ್- 31/2019 ದಾವೆಯು ಇತ್ಯರ್ಥಕ್ಕೆ ಬಾಕಿ ಇದ್ದು ಸದರಿ ದಾವೆಯಲ್ಲಿ ದಾವಾ ಸ್ವತ್ತಿಗೆ ಸಂಬಂಧಿಸದಂತೆ ಯಥಾಸ್ಥಿತಿ ಕಾಪಾಡುವಂತೆ ಆದೇಶವಿರುತ್ತದೆ ಹಾಗೂ ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ರವರ ಉಲ್ಲೇಖ ಒಂದರಂತೆ ಗುತ್ತಿಗೆದಾರರಿಗೆ ಇದುವರೆವಿಗೂ ಒಟ್ಟಾರೆ ರೂ 121.50 ಲಕ್ಷಗಳಿಗೆ ಹಣ ಬಳಕೆ ಪ್ರಮಾಣ ಪತ್ರ, ಛಾಯಾ ಚಿತ್ರ ಮತ್ತು ಮೂರನೆಯ ವ್ಯಕ್ತಿಯ ತಪಾಸಣಾ ವರದಿ ಸಲ್ಲಿಸಿರುವುದಿಲ್ಲ. ಹಾಗೂ ಕಾಮಗಾರಿ ಪೂರ್ಣಗೊಳ್ಳುವ ವರೆಗೂ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದ ಉದ್ಘಾಟನೆಯಾಗಲಿ ಅಥವಾ ಆ ಕಟ್ಟಡದಲ್ಲಿ ಕಾರ್ಯಕ್ರಮ ಮಾಡಬಾರದೆಂದು ತಮಗೆ ಮತ್ತು ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೋಲಾರ ರವರಿಗೆ ನಿರ್ದೇಶನವನ್ನು ಮಾಡಿರುತ್ತಾರೆ.
ಆದ್ದರಿಂದ ದಯಾಮಯರಾದ ತಾವಂದರು ದಿನಾಂಕ 28-10-2023ರ ವಾಲ್ಮೀಕಿ ಜಯಂತಿಯಂದು ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಕೇಂದ್ರದ ವಾಲ್ಮೀಕಿ ಭವನದಲ್ಲಿ ಉದ್ಘಾಟನೆ ಅಥವಾ ಕಾರ್ಯಕ್ರಮ ಮಾಡಬಾರದು, ಉದ್ಘಾಟನೆಯು ಸಮುದಾಯದ ಪೂಜ್ಯ ವಾಲ್ಮೀಕಿ ಗುರುಪೀಠದ ಶ್ರೀಗಳು ಹಾಗೂ ಸಮುದಾಯದ ಹಾಲಿ ಮತ್ತು ಮಾಜಿ ಸಚಿವರ ಸ್ಮಮುಖದಲ್ಲಿ ನೆರವೇರಬೇಕೆಂಬುದು ಸಮುದಾಯದ ಬೇಡಿಕೆಯಾಗಿರುತ್ತದೆ.
ಒಂದು ವೇಳೆ ಮೇಲ್ಕಂಡ ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿ ಒತ್ತಡಗಳಿಗೆ ಮಣಿದು ವಾಲ್ಮೀಕಿ ನಾಯಕ ಜನಾಂಗದ ಹಿತಾಸಕ್ತಿಗೆ ವಿರುದ್ಧವಾಗಿ ಉದ್ಘಾಟನೆ ಮಾಡಲು ಮುಂದಾದಲ್ಲಿ ನಾವುಗಳು ವಾಲ್ಮೀಕಿ ನಾಯಕ ಜನಾಂಗದ ಬಹುಸಂಖ್ಯಾತರ ಪರವಾಗಿ ಕಪ್ಪು ಪಟ್ಟಿ ಪ್ರದರ್ಶಿಸಿ ಕಾರ್ಯಕ್ರಮವನ್ನು ಭಹಿಷ್ಕರಿಸಲು ಸರ್ವಾನುಮತದಿಂದ ತೀರ್ಮಾನಿಸಿದ್ದೇವೆಂದು ತಮಗೆ ತಿಳಿಸುತ್ತಾ ಆ ದಿನದ ಮುಂದಿನ ಪರಿಣಾಮಗಳಿಗೆ ಜಿಲ್ಲಾಡಳಿತವೇ ಜವಾಬ್ದಾರಿಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.
ನಿಯೋಗದಲ್ಲಿ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಮುಖಂಡರುಗಳಾದ ನರಸಿಂಹಯ್ಯ, ಎಂ.ಬಾಲಗೋವಿಂದ, ವಾಲ್ಮೀಕಿ ಮಾದೇಶ್, ವಕೀಲರಾದ ಸುಗಟೂರು ನಾಗರಾಜ್, ಕೆ.ಆನಂದಕುಮಾರ್, ರಮೇಶ್‍ನಾಯಕ್, ಕೋಟೆ ಮಧುಸೂದನ್, ಶ್ಯಾಮ್‍ನಾಯಕ್, ಐತರಾಸನಹಳ್ಳಿ ನರಸಿಂಹಪ್ಪ, ಮಂಗಸಂದ್ರ ತಿಮ್ಮಣ್ಣ, ಪ್ರಸನ್ನ, ಖಾದ್ರಿಪುರ ನವೀನ್, ಕುರಗಲ್ ಗಿರೀಶ್, ಬೆಳ್ಳೂರು ತಿರುಮಲೇಶ್, ಸುಗಟೂರು ವೇಣು, ಮೈಲಾಂಡಹಳ್ಳಿ ಚಿರಂಜೀವಿ, ಮೇಡಿಹಾಳ ಮುನಿರಾಜು, ಕುಡುವನಹಳ್ಳಿ ರಂಗನಾಥ್, ಸುರೇಶ್, ಅಮ್ಮೇರಹಳ್ಳಿ ಚಲಪತಿ, ಗಲ್‍ಪೇಟೆ ಲಕ್ಷ್ಮಣ್, ನರಸಾಪುರ ನಾಗರಾಜ್, ಗರುಡನಹಳ್ಳಿ ಬಾಬು, ಮಡೇರಹಳ್ಳಿ ಸೋಮು, ಕೆ.ಎಸ್.ಆರ್.ಟಿ.ಸಿ.ಮುನಿಯಪ್ಪ, ಮೇಡಿಹಾಳ ತಿರುಮಲೇಶ್, ಬೈರಂಡಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ನಾಗೇಶ್, ಗುಟ್ಟಹಳ್ಳಿ ಚಿದಾನಂದ್, ಬಾರಂಡಹಳ್ಳಿ ನಾರಾಯಣಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

ದಸರಾ ನಾಡಿನ ಸಾಂಸ್ಕøತಿಕ ಪರಂಪರೆಯ ಸಂಕೇತ, ದಸರಾ ಸಂಭ್ರಮದಲ್ಲಿ ಸಮಾಜದ ಎಲ್ಲ ಸಮುದಾಯದ ಜನರೂ ಭಾಗವಹಿಸುವುದುವಿಶೇಷ:ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ದಸರಾ ನಾಡಿನ ಸಾಂಸ್ಕøತಿಕ ಪರಂಪರೆಯ ಸಂಕೇತ. ದಸರಾ ಸಂಭ್ರಮದಲ್ಲಿ ಸಮಾಜದ ಎಲ್ಲ ಸಮುದಾಯದ ಜನರೂ ಭಾಗವಹಿಸುವುದು ಒಂದು ವಿಶೇಷ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ವಿಜಯದಶಮಿ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಿಲ್ಲಿಗೆ ಬಾಣ ಹೂಡಿ ಬಿಟ್ಟ ಬಳಿಕ ಮಾತನಾಡಿದ ಅವರು, ಮಾನವ ಕುಲ ಒಂದೇ ಎಂದು ಸಾರುವುದು ನಿಜವಾದ ಧರ್ಮ. ಸಕಲ ಪ್ರಾಣಿಗಳಲ್ಲಿ ದಯೆ ತೋರುವುದು ಮಾನವ ಧರ್ಮ ಎಂದು ಹೇಳಿದರು.
ದುಷ್ಟ ಶಕ್ತಿ ಅಂತ್ಯ ಕಾಣುವುದು ವಿಜಯದಶಮಿ ಮಹತ್ವ. ಅದು ಪ್ರಾರಂಭದಲ್ಲಿ ಎಷ್ಟೇ ಮೆರೆದರೂ, ಕೊನೆಗೆ ಒಂದು ದಿನ ನಾಶವಾಗುತ್ತದೆ. ಅದರ ವಿವೇಚನಾರಹಿತ ಶಕ್ತಿಯೇ ಅದಕ್ಕೆ ಮುಳುವಾಗುತ್ತದೆ. ಇತಿಹಾಸ ಇದನ್ನು ಸಾರುತ್ತದೆ ಎಂದು ಹೇಳಿದರು.
ನಾಡು ದಸರಾ ಸಡಗರದಲ್ಲಿ ಮೀಯುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟದ ಕಲ್ಪನೆ ಸಾಕಾರಗೊಂಡಿದೆ. ಇದು ಕನ್ನಡ ನಾಡಿನ ಹೆಮ್ಮೆ. ಮನುಷ್ಯ ಮಾನವೀಯ ಮೌಲ್ಯ ಬಿಡದೆ ನಡೆಯಬೇಕು. ಎಲ್ಲರೊಂದಿಗೆ ಬೆರೆತು ಬದುಕಬೇಕು. ದುಷ್ಟರಿಂದ ದೂರವಿರಬೇಕು ಎಂಬುದಕ್ಕೆ ಈ ಹಬ್ಬ ಸಾಕ್ಷಿಯಾಗಿದೆ ಎಂದು ಹೇಳಿದರು.
ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ಹರಿ, ಮುರಳಿ, ವಸುಂದರಾದೇವಿ, ಪ್ರಧಾನ ಅರ್ಚಕ ಸುಬ್ರಮಣಿ, ಗೋಪಿನಾಥರಾವ್ ಇದ್ದರು.

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮುಂಚೂಣಿಯಲ್ಲಿದ್ದರು:ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ ಹಿರಿದು. ಅಂಥ ಮಹಿಳೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮುಂಚೂಣಿಯಲ್ಲಿದ್ದರು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆ ಸಮಾರಂಭದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶ ಪ್ರೇಮ ಹಾಗೂ ಶೌರ್ಯ ಮಹಿಳಾ ಸಮುದಯಕ್ಕೆ ಮಾದರಿಯಾಗಿದೆ. ಹಾಗಾಗಿಯೇ ಅವರು ದೇಶದ ಜನರ ಮನದಲ್ಲಿ ಉಳಿದಿದ್ದಾರೆ. ಅವರ ಇತಿಹಾಸ ಯುವ ಸಮುದಾಯಕ್ಕೆ ಚೈತನ್ಯ ತುಂಬುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಓದಬೇಕು. ಅವರಿಂದ ಸ್ಫೂರ್ತಿ ಪಡೆದು ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಸಮಯ ಬಂದಾಗ ದೇಶದ ರಕ್ಷಣೆಗೆ ಮುಂದಾಗಬೇಕು. ದೇಶದ ಪ್ರಗತಿಯಿಂದ ಮಾತ್ರ ವೈಯಕ್ತಿಕ ಪ್ರಗತಿ ಸಾಧ್ಯ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗ್ರಾಮಲೆಕ್ಕಾದಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಶ್ರೀನಿವಾಸಪುರ: ಕೊಲೆಯಾದ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಅವರ ಪಾಥೀವ ಶರೀರದ ಮೆರವಣಿಗೆ

ಶ್ರೀನಿವಾಸಪುರ: ಕೊಲೆಯಾದ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಅವರ ಪಾಥೀವ ಶರೀರದ ಮೆರವಣಿಗೆ ಏರ್ಪಡಿಸಲಾಗಿತ್ತು.


ಮೆರವಣಿಗೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೃತ ಶ್ರೀನಿವಾಸ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದ್ದ ವಾಹನ, ಎಂಜಿ ರಸ್ತೆ ಹಾಗೂ ಮುಳಬಾಗಿಲು ರಸ್ತೆ ಮೂಲಕ ಮೃತರ ತೋಟಕ್ಕೆ ಸಾಗಿತು. ರಸ್ತೆ ಪಕ್ಕದ ಮೃತರ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಎಂ.ಶ್ರೀನಿವಾಸನ್ ಅವರ ಪತ್ನಿ ಡಾ. ಚಂದ್ರಕಳಾ, ಪುತ್ರ ಡಾ.ಕಿಷನ್, ಪುತ್ರಿ ಡಾ. ನಿಖಿತಾ, ಅಳಿಯ ಭಾಸ್ಕರ್ ಮತ್ತು ಸಂಬಂಧಿಕರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.
ಅಂತಿಮ ದರ್ಶನ: ಶ್ರೀನಿವಾಸಪುರದಲ್ಲಿ ಮೃತರ ಮನೆಗೆ ಭೇಟಿ ನೀಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಕೆ.ಆರ್.ರಮೇಶ್ ಕುಮಾರ್, ನಾಗೇಶ್, ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್.ಬಿ.ಮುನಿವೆಂಕಟಪ್ಪ, ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಕೆ.ಕೆ.ಮಂಜು, ರವಿ, ಎಸ್‍ಎಲ್‍ಎನ್ ಮಂಜುನಾಥ್, ಬಕ್ಷು ಸಾಬ್, ದಲಿತ ಮುಖಂಡರಾದ ಎನ್.ಮುನಿಸ್ವಾಮಿ, ಪಂಡಿತ್ ಮುನಿವೆಂಕಟಪ್ಪ ಮತ್ತಿತರರು ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ 14 ಕೋಟಿಗೂ ಮಿಕ್ಕಿವಂಚನೆ:ತನಿಖೆಗೆ ಆಡಿಷಲ್ ಸಿವಿಲ್ ನ್ಯಾಯಾಲಯ ಆದೇಶ

ಅವಿಭಜಿತ ದ.ಕ. ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ 14 ಕೋಟಿಗೂ ಮಿಕ್ಕಿ ಭಾರೀ ವಂಚನೆ ಮಾಡಿರುವ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನೆಡೆಸುವಂತೆ ಉಡುಪಿ ಜಿಲ್ಲಾ ರೈತ ಸಂಘ ಖಾಸಗಿ ದೂರನ್ನು ಆಡಿಷಲ್ ಸಿವಿಲ್ ಜಡ್ಜ್ ಉಡುಪಿಯಲ್ಲಿ ದಾಖಲು ಮಾಡಿದ್ದು, ಇದೀಗ ಈ ದೂರನ್ನು ವಿಚಾರಣೆ ನಡೆಸಿದ ನ್ಯಾಯಧೀಶರು ಬೃಹತ್ ವಂಚನೆ ಕುರಿತು ಸೂಕ್ತ ತನಿಖೆ ಮಾಡಿ 12/12/2023ರ ಒಳಗೆ ನ್ಯಾಯಾಲಯಕ್ಕೆ ವರದಿ ನೀಡಲು ಬ್ರಹ್ಮವಾರ ಪೊಲೀಸ್ ಠಾಣೆಗೆ ಆದೇಶ ಮಾಡಿದ್ದಾರೆ.

ಇತ್ತೀಚಿಗೆ ಬ್ರಹ್ಮಾವರದಲ್ಲಿ ಕಾಂಗ್ರೆಸ್ ನೇತ್ರತ್ವದಲ್ಲಿ ಮತ್ತು ರೈತ ಸಂಘಟನೆಯ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿತ್ತು.
ಕಾಂಗ್ರೆಸ್ ಮುಖಂಡ ಕರಾವಳಿ ಮಲೆನಾಡು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿ ತೀವ್ರವಾಗಿ ಖಂಡಿಸಿ ಮಾತಾನಾಡಿ ತನಿಖೆ ನಡೆಸಲು ಆಗ್ರಹಿಸಿದ್ದರು.