ಜಾಕಿರ್ ಹುಸೇನ್ ಮೊಹಲ್ಲಾದ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸಮಾಜ ಸೇವಕ ನದೀಮ್ ಅಕ್ತರ್ , ಅಜ್ಮೀರ್ ದರ್ಗಾದ ಸೂಫಿ ಸಲ್ಮಾನ್ ಚಿಸ್ತಿ ಭೇಟಿ

ಶ್ರೀನಿವಾಸಪುರ : ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾದಲ್ಲಿರುವ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಇಂದು ಅಕ್ತಾರ್ ಟ್ರೇಡರ್ಸ್ ಮಾಲೀಕರು ಮತ್ತು ಸಮಾಜ ಸೇವಕ ನದೀಮ್ ಅಕ್ತರ್ , ಅಜ್ಮೀರ್ ದರ್ಗಾದ ಸೂಫಿ ಸಲ್ಮಾನ್ ಚಿಸ್ತಿ ಅವರೊಂದಿಗೆ ಶಾಲೆಗೆ ಭೇಟಿ ನೀಡಿದರು.
ಶಾಲೆಯ ಮಕ್ಕಳಿಗೆ ಚಾಕಲೇಟ್ ಗಳು ನೀಡಿ ಖುಷಿಪಟ್ಟರು ಮತ್ತು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.

ಸರ್ಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಜ್ಞಾನವನ್ನು ಬೆಳೆಸಿಕೊಳ್ಳಲು ನಾಲ್ಕು ಕಂಪ್ಯೂಟರ್ ಗಳನ್ನು ನೀಡುವ ಭರವಸೆ ನೀಡಿದರು. ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಆದ್ದರಿಂದ ಶಿಕ್ಷಕರು ತಮ್ಮ ಜ್ಞಾನ ಮತ್ತು ಶ್ರಮದಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಎಂದು ತಿಳಿಸಿದರು.

ಸಮಾಜದ ದಾನಿಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಆರ್ಥಿಕ ಸಹಾಯವನ್ನು ನೀಡಬೇಕು ಎಂದು ಸಲಹೆ ನೀಡಿದರು.

ಅಜ್ಮೀರ್ ದರ್ಗಾದ ಸೂಫಿ ಸಲ್ಮಾನ್ ಚಿಸ್ತಿ ಅವರು ಮಾತನಾಡುತ್ತಾ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉರ್ದು, ಕನ್ನಡ, ಇಂಗ್ಲೀಷ್ ಮತ್ತು ಇತರರ ವಿಷಯದ ಬಗ್ಗೆ ಬೋಧನೆ ಜೊತೆ ದೀನಿಯಾತ್ ಸಹ ಅರ್ಧ ಗಂಟೆ ಪಾಠ ನೀಡಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಮತ್ತು ವಿದ್ಯಾಭ್ಯಾಸದ ಕಡೆ ಗಮನ ಹರಿಸ ನಿಮ್ಮ ಭವಿಷ್ಯವನ್ನು ಉಜ್ಜಲುಗೊಳಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಸಾಧಿಕ್ ಎಸ್‌ಡಿಎಂಸಿ ಅಧ್ಯಕ್ಷ ಹಿದಾಯತ್ ಉಲ್ಲಾಖಾನ್ , ಇಂತಿಯಾಸ್ , ಮೌಲ , ಶೋಹೇಬ್ , ಸಲ್ಮಾನ್ ಮತ್ತು ಶಿಕ್ಷಕರು ಇದ್ದರು.

ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರಿಗೂ ಹೊಣೆಗಾರಿಕೆ ಇದೆ ; ಸಿ.ಆರ್.ಅಶೋಕ್

ಕೋಲಾರ / ಅಕ್ಟೋಬರ್ 30 : ಶಾಲೆಗಳು ಸಹ ಸಮುದಾಯದ ಒಂದು ಭಾಗ ಆಗಿರುವುದರಿಂದ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರಿಗೂ ಮಹತ್ವದ ಹೊಣೆಗಾರಿಕೆ ಇದೆ. ಮಕ್ಕಳಂತೆ ಸಸಿ ಗಿಡಗಳನ್ನು ಪ್ರೀತಿಸಿ, ಬೆಳೆಸಿ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಿ. ಆರ್.ಅಶೋಕ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಏರ್ಪಡಿಸಿದ್ದ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಯೆಂದರೆ ಕೇವಲ ಶಿಕ್ಷಕರು ಮತ್ತು ಮಕ್ಕಳಿಗμÉ್ಟೀ ಸೀಮಿತವಲ್ಲ. ಎಲ್ಲರ ಶೈಕ್ಷಣಿಕ ಬದುಕು ಆರಂಭವಾಗುವುದೇ ಶಾಲೆಯಿಂದ ಶಾಲೆಗಳೂ ಸಹ ಸಮುದಾಯದ ಒಂದು ಭಾಗವೇ ಆಗಿರುವುದರಿಂದ ಶಾಲೆಯ ಪ್ರಗತಿಗೆ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದರು.
ಮಕ್ಕಳ ಕಲಿಕೆಯ ಬಗ್ಗೆ ನಿಗಾ ವಹಿಸಬೇಕು. ಎಲ್ಲಾ ಮಕ್ಕಳೂ ತಪ್ಪದೇ ಶಾಲೆಗೆ ಬರುವಂತಾಗಬೇಕು. ಶಾಲೆಗಳಲ್ಲಿನ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಜಾಗೃತಿ ಉಂಟುಮಾಡುವತ್ತ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಶೈಕ್ಷಣಿಕ ಪ್ರಗತಿಯ ಚಿಂತನ ಮಂಥನಗಳು ನಡೆಯುತ್ತಿರುವುದು ಸುತ್ಯಾರ್ಹ, ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ ಸುಂದರವಾಗಿ ಕಾಣಬೇಕು ಎಂದರು.
ಶಾಲೆಗಳಲ್ಲಿನ ಹಾಜರಾತಿ ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಈ ರೀತಿಯ ಶಾಲೆಯಲ್ಲಿರುವ ಯೋಜನೆಗಳ ಬಗ್ಗೆ ಮಕ್ಕಳ ಪಾಲಕರು ಅರಿವು ಪಡೆದುಕೊಳ್ಳಲು ಸಮುದಾಯದತ್ತ ಶಾಲಾ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಮುದಾಯದತ್ತ ಶಾಲಾ ಮೇಲ್ವಿಚಾರಕ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೆಂಕಟರಮಣಪ್ಪ ಮಾತನಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಪಾಲಕರ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ. ಪಾಲಕರು ಶಾಲೆಗೆ ಆಗಾಗ್ಗೆ ಬೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ಮಾಡುವುದು ಸೂಕ್ತ ಎಂದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಜಿ.ಶ್ರೀನಿವಾಸ್, ಸಹ ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನಾ, ಸ್ವಾತಿ ಮತ್ತಿತರರು ಹಾಜರಿದ್ದರು.

ಶಿವಮೊಗ್ಗ ಧರ್ಮಪ್ರಾಂತ್ಯದ 7ನೇ ಮಧ್ಯಸ್ಥಿಕೆ ಪ್ರಾರ್ಥನೆ ಶಿವಮೊಗ್ಗದ ಶರಾವತಿ ನಗರದ ಇನ್ಫೆಂಟ್ ಜೀಸಸ್ ಚರ್ಚ್‌ನಲ್ಲಿ ನಡೆಯಿತು / The 7th Intercessory Prayer of Shimoga Diocese was held at Infant Jesus Church, Sharavati Nagar, Shimoga.

ಶಿವಮೊಗ್ಗ, ಅಕ್ಟೋಬರ್ 30, 2023: ಶಿವಮೊಗ್ಗ ಧರ್ಮಪ್ರಾಂತ್ಯದ 7ನೇ ಮಧ್ಯಸ್ಥಿಕೆ ಪ್ರಾರ್ಥನೆಯು ಶಿವಮೊಗ್ಗದ ಶರಾವತಿನಗರದ ಇನ್ಫೆಂಟ್ ಜೀಸಸ್ ಚರ್ಚ್‌ನಲ್ಲಿ ಅಕ್ಟೋಬರ್ 29 ರಂದು ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ನಡೆಯಿತು.

ಶಿವಮೊಗ್ಗ, ಅಕ್ಟೋಬರ್ 30, 2023: ಶಿವಮೊಗ್ಗ ಧರ್ಮಪ್ರಾಂತ್ಯದ 7ನೇ ಮಧ್ಯಸ್ಥಿಕೆ ಪ್ರಾರ್ಥನೆಯು ಶಿವಮೊಗ್ಗದ ಶರಾವತಿನಗರದ ಇನ್ಫೆಂಟ್ ಜೀಸಸ್ ಚರ್ಚ್‌ನಲ್ಲಿ ಅಕ್ಟೋಬರ್ 29 ರಂದು ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ನಡೆಯಿತು.

ಶಿವಮೊಗ್ಗ ಡಯಾಸಿಸ್‌ನ ವರ್ಚಸ್ವಿ ನವೀಕರಣ ಸೇವೆಗಳು ಅಂದರೆ, ಡಯೋಸಿಸನ್ ಸರ್ವಿಸ್ ಆಫ್ ಕಮ್ಯುನಿಯನ್ (DSC) ಜೊತೆಗೆ ಲೀಜನ್ ಆಫ್ ಮೇರಿ ಮತ್ತು ಸೇಂಟ್ ವಿನ್ಸೆಂಟ್ ಡಿ ಪಾಲ್ ಸೊಸೈಟಿ (SVP) ಶಿವಮೊಗ್ಗ ಡಯಾಸಿಸ್‌ನ ಉದ್ದೇಶಗಳಿಗಾಗಿ ಮಧ್ಯಸ್ಥಿಕೆ ಪ್ರಾರ್ಥನೆಯನ್ನು ನಡೆಸಿತು.

ಮಧ್ಯಾಹ್ನ 2 ಗಂಟೆಗೆ ಆಧ್ಯಾತ್ಮಿಕ ನಿರ್ದೇಶಕ ಫ್ರಾಂಕ್ಲಿನ್ ಡಿಸೋಜ ಅವರು ಪೂಜ್ಯ ಸಮ್ಮಾನವನ್ನು ತೆರೆದಿಟ್ಟರು ಮತ್ತು ಮಧ್ಯಾಹ್ನ 3 ಗಂಟೆಯವರೆಗೆ ಆರಾಧನೆಯನ್ನು ನಡೆಸಿದರು. ಮಧ್ಯಾಹ್ನ 3 ರಿಂದ 4:30 ರವರೆಗೆ ಡಿಎಸ್‌ಸಿ ಸದಸ್ಯರು ಮಧ್ಯಸ್ಥಿಕೆ ರೋಸರಿ ಮತ್ತು ಡಿವೈನ್ ಕರುಣೆಯನ್ನು ನಡೆಸಿದರು. ಪ್ರತಿ ದಶಕವು ನಾಲ್ಕು ಡೀನರಿಗಳು, ಅದರ ಪ್ಯಾರಿಷ್‌ಗಳು, ನಿಷ್ಠಾವಂತರು ಮತ್ತು ಅವರ ಉದ್ದೇಶಗಳಿಗೆ ಸಮರ್ಪಿಸಲಾಗಿದೆ. ಒಂದು ದಶಕವನ್ನು ಡಯಾಸಿಸ್ ಮತ್ತು ಅದರ ಎಲ್ಲಾ ಆಯೋಗಗಳು ಮತ್ತು ಗ್ರಾಮೀಣ ಚಟುವಟಿಕೆಗಳಿಗೆ ಸಮರ್ಪಿಸಲಾಗಿದೆ.

ನಂತರ ಫ್ರಾಂಕ್ಲಿನ್ ಡಿಸೋಜ ಅವರು ಜಿಲ್ಲೆಗಳು, ರಾಜ್ಯಗಳು ಮತ್ತು ರಾಷ್ಟ್ರಕ್ಕಾಗಿ ಪ್ರಾರ್ಥನೆ ನಡೆಸಿದರು. ಅವರು ವಿಶ್ವದ ಶಾಂತಿಗಾಗಿ ಪ್ರಾರ್ಥನೆಯನ್ನು ಸಹ ನಡೆಸಿದರು. ಸಂಜೆ 4:45 ಕ್ಕೆ ಅವರು ಭಾಗವಹಿಸುವವರಿಗೆ ಗುಣಪಡಿಸುವ ಪ್ರಾರ್ಥನೆಯನ್ನು ನಡೆಸಿದರು. ಸಂಜೆ 5:15 ಕ್ಕೆ ಅವರು ಪವಿತ್ರ ಯೂಕರಿಸ್ಟ್ ಅನ್ನು ಮುನ್ನಡೆಸಿದರು ಮತ್ತು ಮಧ್ಯಸ್ಥಿಕೆಯ ಪ್ರಾರ್ಥನೆಗಾಗಿ ದೇವರಿಗೆ ಧನ್ಯವಾದ ಅರ್ಪಿಸಿದರು.

ಫಾ. ಶಿವಮೊಗ್ಗ ಶರಾವತಿನಗರದ ಇನ್‌ಫೆಂಟ್ ಜೀಸಸ್ ಚರ್ಚ್‌ನ ಪ್ಯಾರಿಷ್ ಪ್ರೀಸ್ಟ್ ಬಿಜು, ಈ ಮಧ್ಯಸ್ಥಿಕೆಯ ಪ್ರಾರ್ಥನೆಯನ್ನು ಆಯೋಜಿಸಿದ್ದಕ್ಕಾಗಿ ಫ್ರಾಂಕ್ಲಿನ್ ಡಿಸೋಜ ಮತ್ತು ಡಿಎಸ್‌ಸಿ, ಎಸ್‌ವಿಪಿ ಮತ್ತು ಲೀಜನ್ ಆಫ್ ಮೇರಿ ಅವರಿಗೆ ಧನ್ಯವಾದಗಳು.

DSC ಪರವಾಗಿ ಅದರ ಸಂಯೋಜಕ ಬ್ರೋ. ಡೇವಿಡ್ ರಾಜ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಜೆ 6 ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಯಿತು.

The 7th Intercessory Prayer of Shimoga Diocese was held at Infant Jesus Church, Sharavati Nagar, Shimoga.

Shivamogga, October 30, 2023: 7th Intercessory Prayer for the Diocese of Shimoga held at Infant Jesus Church, Sharavathinagar, Shivamogga on October 29th from 2pm to 6pm.

Diocese of Shimoga’s Charismatic Renewal Services namely, Diocesan Service of Communion (DSC) together with Legion of Mary and St. Vincent De Paul Society (SVP) held Intercessory Prayer for the intentions of the Diocese of Shimoga.

At 2pm Spiritual Director Fr Franklin D’Souza exposed the Blessed Sacrament and led the worship till 3pm. From 3pm to 4:30pm DSC members led the Intercessory Rosary and Divine Mercy. Each decade dedicated to the four deaneries, its parishes, faithful and their intentions. One decade dedicated to the Diocese and all its Commissions and Pastoral activities.

Then Fr Franklin D’Souza led Prayer for the Districts, States and for the Nation. He also led the prayer for the peace in the world. At 4:45pm he led the healing prayers for the participants. At 5:15pm he led the Holy Eucharist and thanked God for the Intercessory Prayer.

Fr. Biju, Parish Priest of Infant Jesus Church, Sharavathinagar, Shivamogga thanked Fr Franklin D’Souza and the DSC, SVP and Legion of Mary for organizing this Intercessory prayer.

On behalf of DSC its coordinator Bro. David Raj thanked everyone. Program concluded at 6pm.

ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರಿ ಡುನಂಟ್ ಇವರ ಪುಣ್ಯ ತಿಥಿಯ ದಿನ ಕುಂದಾಪುರದಲ್ಲಿ ಆರೋಗ್ಯ ತಪಾಸಣೆ ಶಿಬಿರ

ಕುಂದಾಪುರ : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರಿ ಡುನಂಟ್ ಇವರ ಪುಣ್ಯ ತಿಥಿ ಯಾದ ಈ ದಿನ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದ ಎದುರು ಆರೋಗ್ಯ ತಪಾಸಣೆ ಶಿಭಿರ ವನ್ನು ಆಯೋಜಿಸಲಾಯಿತು ರೆಡ್ ಕ್ರಾಸ್ ಸಭಾಪತಿ ಶ್ರೀ ಜಯಕರ ಶೆಟ್ಟಿ ಯವರು ಕಾರ್ಯಕ್ರಮವನ್ನು ಉದ್ಗಾಟಿಸಿ ಪುಷ್ಪಾರ್ಚನೆ ಗೈದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ ಮತ್ತು ರೆಡ್ ಕ್ರಾಸಿನ ಸಿಭಂದಿಗಳು ಉಪಸ್ಥಿತರಿದ್ದರು. 167 ಜನರು ಇದರ ಪ್ರಯೋಜನ ಪಡೆದರು.

ಕೊಂಕಣಿ ರಂಗ್‌ಮಂಚ್ ಆನಿ ನಾಟಕಾಂಚೆರ್ ಪರಿಸಂವಾದ್, ಕೊಂಕಣಿ ಪುಸ್ತಕಾಂಚೆಂ ಉಗ್ತಾವಣ್ / ಕೊಂಕಣಿ ನಾಟಕಗಳ ಪರಿಸಂವಾದ ಮತ್ತು ಕೊಂಕಣಿ ಪುಸ್ತಕ ಉದ್ಘಾಟನಾ ಕಾರ್ಯಕ್ರಮ

29 ಅಕ್ತೋಬರ್ (ಮಂಗ್ಳುರ್): ಆಶಾವಾದಿ ಪ್ರಕಾಶನಾನ್ ಸಾಂ ಜುಜೆ ಸೆಮಿನರಿಚ್ಯಾ ಸಭಾಸಾಲಾಂತ್ ’ಕೊಂಕಣಿ ರಂಗ್‌ಮಂಚ್ ಆನಿ ನಾಟಕಾಂಚೆರ್’ ಮಾಂಡುನ್ ಹಾಡ್‌ಲ್ಲೆಂ ಆದೇಸಾಚೆಂ ಪರಿಸಂವಾದ್ ಕಾರ್ಯೆಂ 29 ಅಕ್ತೋಬರ್ ತಾರಿಕೆರ್ (ಆಯ್ತಾರಾ) ಸಕಾಳಿಂ 10 ಥಾವ್ನ್ 1 ಪರ್ಯಾಂತ್ ಚಲ್ಲೆಂ. ಆಶಾವಾದಿ ಪ್ರಕಾಶನಾನ್ ಮಾ ದೊ ರೊನಾಲ್ಡ್ ಸೆರಾವೊಚ್ಯಾ ’ದಾನಿಯೆಲ್ ಆನಿ ಎಸ್ತೆರ್ ರಾಣಿ’ ನಾಂವಾಚಿಂ ದೋನ್ ಲಿಪಿಂನಿ ಪರ್ಗಟ್ಲೆಲಿಂ ದೋನ್ ನಾಟಕಾಂಚಿಂ ಪುಸ್ತಕಾಂ ತಶೆಂಚ್ ಪಯ್ಣಾರಿ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲಾಚೆಂ ಉಗ್ತಾವಣ್ ಕಾರ್ಯೆಂ ಚಲವ್ನ್ ವ್ಹೆಲೆಂ.

ಸಕಾಳಿಂ ಧಾ ವೊರಾಂಚೆರ್ ದಿವೊ ಪೆಟವ್ನ್ ಮಾನೆಸ್ತಿಣ್ ಮೀನಾ ರೆಬಿಂಬಸಾಚ್ಯಾ(ಕೊಂಕಣಿ ಮೈನಾ) ಹಾತಿಂ ಕಾರ್ಯಾಚೆಂ ಉಗ್ತಾವಣ್ ಕೆಲೆಂ. ಮುಖೆಲ್ ಸಯ್ರೊ ಜಾವ್ನ್ ಸಾಹಿತ್ಯ್ ಅಕಾಡೆಮಿಚೊ ಸಂಚಾಲಕ್ ಮಾನೆಸ್ತ್ ಮೆಲ್ವಿನ್ ರೊಡ್ರಿಗಸ್, ತಶೆಂಚ್ ಸಯ್ರಿಂ ಜಾವ್ನ್ ಮಾನೆಸ್ತಿಣ್ ಮಾರಿಯೆಟ್ ರಾಸ್ಕಿನ್ಹಾ, ಮಾನೆಸ್ತಿಣ್ ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ ತಶೆಂಚ್ ನಾಟಕಾಂ ಬರವ್ಪಿ ಮಾ ದೊ ರೊನಾಲ್ಡ್ ಸೆರಾವೊ ವೆದಿಚೆರ್ ಆಸ್ಲಿಂ. ಸೂತ್ರ್ ಸಂಚಾಲನ್ ಕೆಲ್ಲ್ಯಾ ಮಾನೆಸ್ತ್ ಅರುಣ್ ಅಜೆಕಾರಾನ್ ಪರಿಸಂವಾದಾಚ್ಯಾ ಮಹತ್ವಾವಿಶಿಂ ಸಾಂಗುನ್, ವೆದಿಚೆರ್ ಆಸ್‌ಲ್ಲ್ಯಾ ಮಾನ್ ಮನ್ಶಾಂಚಿ ಒಳೊಕ್ ಕರ್ತಚ್, ಮಾ ದೊ ರೊನಾಲ್ಡ್ ಸೆರಾವೊನ್ ಯೆವ್ಕಾರಾಚೆಂ ಉಲವ್ಪ್ ಕರ್ತಚ್ ಬಾಯ್ ನಿಯೊನಾ ಡಿಸೋಜಾನ್ ಸರ್ವ್ ಮಾನ್ ಸಯ್ರ್ಯಾಂಕ್ ಕೊಂಕಣಿ ಪುಸ್ತಕಾಂ ದಿವುನ್ ಸ್ವಾಗತ್ ಕೆಲೊ. ಮಾರಿಯೆಟ್ ರಾಸ್ಕಿನ್ಹಾ ಆನಿ ಮೆಲ್ವಿನ್ ರೊಡ್ರಿಗಸಾನ್ ಅಪ್ಲ್ಯಾ ಉಲವ್ಪಾಂತ್ ಕೊಂಕಣಿ ನಾಟಕಾಂಚ್ಯಾ ಸುರ್ವಿಲ್ಯಾ ದಿಸಾಂಚಿ ಮೊಟ್ವಿ ಯಾದ್ ಕರುನ್ ಸುರ್ವಿಲ್ಯಾ ನಾಟಕಿಸ್ತಾಂನಿ ನಾಟಕ್ ಶೆತಾಕ್ ದಿಲ್ಲ್ಯಾ ಅಮೊಲಿಕ್ ದೇಣ್ಗೆಚಿ ಮಾಹೆತ್ ದಿಲಿ.

ಪರಿಸಂವಾದ್ ಕಾರ್ಯಾಚೆಂ ಸಂಚಾಲನ್ ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವನ್ ಚಯ್ಲೆಂ, ಮಾನೆಸ್ತ್ ಜೋನ್ ಎಮ್ ಪೆರ್ಮನ್ನೂರ್ ಹಾಣೆ ಕೊಂಕಣಿ ನಾಟಕಾಂಚ್ಯಾ ಶೆಂಬೊರ್ ಆನಿ ಧಾ ವರ್ಸಾಂಚ್ಯಾ ಇತಿಹಾಸಾಚೆರ್ ಘಾಲ್ಲಿ ಸುಕ್ಣ್ಯಾನದರ್ ಭೋವ್ ಅಪುರ್ಭಾಯೆನ್ ಸಾದರ್ ಕೆಲಿ, ಮಾನೆಸ್ತ್ ಅರುಣ್ ರೊಡ್ರಿಗಸಾನ್ ಕೊಂಕಣಿ ನಾಟಕಾಂನಿ ಜಾಲ್ಲ್ಯಾ ವೆಗ್-ವೆಗಳ್ಯಾ ರಿತಿಚ್ಯಾ ಪ್ರಯೋಗಾಂಚೆರ್ ಭೋವ್ ಅಪುರ್ಭಾಯೆಚಿ ಮಾಹೆತ್ ದಿಲಿ. ಮಾನೆಸ್ತ್ ರಿಚಾರ್ಡ್ ಮೋರಸಾನ್ ಗಲ್ಫಾಂತ್ ಕೊಂಕಣಿ ನಾಟಕಾಂ ವಿಶ್ಯಾಚೆರ್ ಅಪ್ಲೆಂ ಉಲವ್ಪ್ ಕರ್ತಚ್ ಮಾ ದೊ ರೊನಾಲ್ಡ್ ಸೆರಾವೊನ್ ಕೊಂಕಣಿ ಧಾರ್ಮಿಕ್ ನಾಟಕಾಂಚಿ ಗರ್ಜ್ ಮ್ಹಳ್ಳ್ಯಾ ವಿಶ್ಯಾಚೆರ್ ಅಪ್ಲೆಂ ಉಲವ್ಪ್ ಕೆಲೆಂ. ಕನ್ಸೆಪ್ಟಾ ಫೆರ್ನಾಂಡಿಸಾನ್ ಕಾಂಯ್ ಪನ್ನಾಸಾಂ ವಯ್ರ್ ವರ್ಸಾಂಚೊ ಇತಿಹಾಸ್ ಆಸ್ಚ್ಯಾ ರೇಡಿಯೊ ನಾಟಕಾಂಚ್ಯಾ ಇತಿಹಾಸಾವಿಶಿಂ ಉಲಯ್ಲಿ.

ಪುಸ್ತಕ್ ಉಗ್ತಾವಣ್ ಕಾರ್ಯಾಚೆಂ ಸೂತ್ರ್ ಸಂಚಾಲನ್ ಕೆಲ್ಲ್ಯಾ ಬಾಯ್ ಅನಿತಾ ಮಿನೇಜಸಾನ್ ಪುಸ್ತಕಾಂಚಿ ಮೊಟ್ವಿ ಝಳಕ್ ದಿವುನ್ ಮಾನ್ ಸಯ್ರ್ಯಾಂಕ್; ಮಾ ಬಾ ರುಪೇಶ್ ಮಾಡ್ತಾ, ದೊ ಪೂರ್ಣಾನಂದ ಚಾರಿ, ಮಾನೆಸ್ತ್ ಅವಿಲ್ ರಾಸ್ಕಿನ್ಹಾ, ಮಾನೆಸ್ತ್ ಹೇಮಾಚಾರ್ಯಾ ಆನಿ ಮಾ ದೊ ರೊನಾಲ್ಡ್ ಸೆರಾವೊ ಹಾಂಕಾಂ ವೆದಿಕ್ ಆಪವ್ನ್ ತಾಂಚಿ ಮೊಟ್ವಿ ಒಳೊಕ್ ಕರುನ್ ದಿಲಿ. ಮಾ ದೊ ರೊನಾಲ್ಡ್ ಸೆರಾವೊಚ್ಯಾ ದೋನ್ ನಾಟಕಾಂಚಿಂ ದೋನ್ ಲಿಪಿಂತ್ಲಿಂ ಪುಸ್ತಕಾಂ, ಆಶಾವಾದಿ ಪ್ರಕಾಶನಾಚಿಂ 53ವೆಂ (ಕನ್ನಡ್ ಲಿಪಿ) ತಶೆಂಚ್ 54ವೆಂ (ನಾಗರಿ ಲಿಪಿ) ’ದಾನಿಯೆಲ್ ಆನಿ ಎಸ್ತೆರ್ ರಾಣಿ’ ಪುಸ್ತಕಾಂಚಿ ಒಳೊಕ್ ಕರುನ್ ದಿಲ್ಲ್ಯಾ ಮಾ ಬಾ ರುಪೇಶ್ ಮಾಡ್ತಾನ್ ತಶೆಂಚ್ ದೊ ಪೂರ್ಣಾನಂದ ಚಾರಿನ್ ಉಗ್ತಾವಣ್ ಕೆಲಿಂ. ತ್ಯೇ ಉಪ್ರಾಂತ್ ಮಾನೆಸ್ತ್ ಲಾರೆನ್ಸ್ ವಿನೋದ್ ಬಾರ್ಬೋಜಾನ್ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲಾಚಿ ಒಳೊಕ್ ಕರುನ್ ಜಾತಚ್ ಮಾನೆಸ್ತ್ ಆವಿಲ್ ರಾಸ್ಕಿನ್ಹಾ, ಹೇಮಾಚಾರ್ಯಾ ಆನಿ ದೊ ಪೂರ್ಣಾನಂದ ಚಾರಿನ್ ಡಿಜಿಟಲ್ ಸಾಹಿತಿಕ್ ಜರ್ನಲಾಚೆಂ ಉಗ್ತಾವಣ್ ಕೆಲೆಂ.

ಮುಖೆಲ್ ಸಯ್ರ್ಯಾಂನಿ; ಆವಿಲ್ ರಾಸ್ಕಿನ್ಹಾ, ಹೇಮಾಚಾರ್ಯ, ದೊ ಪೂರ್ಣಾನಂದ ಚಾರಿ ಹಾಣಿಂ ಅಪ್ಲೆ ಸಂಧೇಶ್ ದಿತಚ್ ಹೇಮಾಚಾರ್ಯಾನ್ ಮಾನ್ ಪ್ರತಿ ದಿವುನ್ ಸಮೆಸ್ತಾಂಚೊ ಮಾನ್ ಕೆಲೊ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟಯ್ಲೆ. ಜೆಸ್ಸಿ ಲೋಬೊ ಅಜೆಕಾರ್ ಹಿಣೆಂ ಸಗ್ಳ್ಯಾ ಕಾರ್ಯಾಚೆಂ ಡಿಜಿಟಲ್ ಸೂತ್ರ್ ಸಂಚಾಲನ್ ಕೆಲೆಂ. ನಾಮ್ನೆಚೆ ಕೊಂಕಣಿ ಬರವ್ಪಿ, ನಾಟಕಿಸ್ತ್; ಎಡ್ಡಿ ಸಿಕೇರಾ, ರಿಚ್ಚಿ ಪಿರೇರ್, ಕ್ಲೀಟಾ ನೊರೊನ್ಹಾ, ಎಮ್. ಪ್ಯಾಟ್ರಿಕ್, ಶಾಲಿನಿ ವಾಳೆನ್ಸಿಯಾ, ಜ್ಯೂಲಿಯೆಟ್ ಮೊರಾಸ್, ಎಚ್. ಆರ್. ಆಳ್ವ, ಜೆಮ್ಮಾ ಪಡೀಲ್, ವಿಶ್ವಾಸ್ ರೆಬಿಂಬಸ್, ಡೇವಿಡ್ ಡಿಸೋಜ ವಾಮಂಜೂರ್, ಪಿಂಟೊ ವಾಮಂಜೂರ್, ಅಲೆಕ್ಸ್ ಮಿರಾಂದಾ, ಕ್ಯಾಥರೀನ್ ರೊಡ್ರಿಗಸ್ ಕಟ್ಪಾಡಿ, ಮಾ ಬಾ ಐವನ್ ಮಿಯಾರ್, ಮಾ ಬಾ ನವೀನ್, ಮಾಚ್ಚಾ ಮಿಲಾರ್, ಜೆ.ಎಫ್. ಡಿಸೋಜ್ ಅತ್ತಾವರ್ ಆನಿ ಹೆರಾಂ ಹ್ಯಾ ಕಾರ್ಯಾಂತ್ ಹಾಜರ್ ಆಸ್ಲಿಂ

ಕೊಂಕಣಿ ನಾಟಕದ ಪರಿಸಂವಾದ ಮತ್ತು ಕೊಂಕಣಿ ಪುಸ್ತಕ ಉದ್ಘಾಟನಾ ಕಾರ್ಯಕ್ರಮ

ಮಂಗಳೂರು: ಆಶಾವಾದಿ ಪ್ರಕಾಶನ್ ಸಂಸ್ಥೆ ವತಿಯಿಂದ 29 ಅಕ್ತೋಬರ್ ರವಿವಾರದಂದು ಸೈಂಟ್‌ ಜೋಸೆಪ್ ಸೆಮಿನಾರ್ ಸಭಾಂಗಣಾದಲ್ಲಿ ’ಕೊಂಕಣಿ ರಂಗವೇದಿಕೆ ಮತ್ತು ನಾಟಕ’ದ ಪರಿಸಂವಾದ ಕಾರ್ಯಕ್ರಮ ಹಾಗೂ ಆಶಾವಾದಿ ಪ್ರಕಾಶನ್ ಸಂಸ್ಥೆಯಿಂದ ಎರಡು ಭಾಷೆಗಳಲ್ಲಿ ಪ್ರಸ್ತುತ ಪಡಿಸಿದ ಫಾದರ್ ರೊನಾಲ್ಡ್ ಸೆರಾವೊ‌ ಅವರ ’ದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕ ಮತ್ತು ಪ್ರಸಿದ್ಧ ಕೊಂಕಣಿ ಲೇಖಕರಾದ ವಲ್ಲಿ ಕ್ವಾಡ್ರಸ್‌ ಅಜೆಕಾರ್‌ ಅವರ ʼಪಯ್ಣಾರಿ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲ್‌ʼ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕೊಂಕಣಿ ಮೈನಾ ಬಿರುದಿನ ಮೀನಾ ರೆಬಿಂಬಸ್‌ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತ್ಯ ಅಕಾಡೆಮಿ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್, ಮಾರಿಯೆಟ್ ರಾಸ್ಕಿನ್ಹಾ, ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ ಹಾಗೂ ಫಾದರ್ ರೊನಾಲ್ಡ್ ಸೆರಾವೊ ಅವರು ವೇದಿಕೆಯಲ್ಲಿ ಉಪಸ್ಥಿತಿಯಿದ್ದರು.‌ ಈ ಕಾರ್ಯಕ್ರಮದ ನಿರೂಪಣೆಯನ್ನು ಅರುಣ್ ಡಿʼಸೋಜಾ ಅಜೆಕಾರ್ ಅವರು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಗು ನಿಯೊನಾ ಡಿಸೋಜಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಕೊಂಕಣಿ ಪುಸ್ತಕಗಳನ್ನು ನೀಡುವುದರ ಮೂಲಕ ಸ್ವಾಗತಿಸಿದರು.

ಪರಿಸಂವಾದ ಕಾರ್ಯಾಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೋನ್ ಎಮ್ ಪೆರ್ಮನ್ನೂರ್, ಅರುಣ್‌ ರಾಜ್ ರೊಡ್ರಿಗಸ್‌, ರಿಚಾರ್ಡ್ ಮೋರಸ್‌, ಫಾದರ್ ರೊನಾಲ್ಡ್ ಸೆರಾವೊ‌ ಅವರು ಅತ್ಯುತ್ತಮ ವಿಷಯಗಳನ್ನು ಪ್ರಸ್ತುತ ಪಡಿಸಿದರು. ಪರಿಸಂವಾದ ಕಾರ್ಯಾಕ್ರಮವನ್ನು ನಿರ್ವಹಿಸಿದ‌ ಕನ್ಸೆಪ್ಟಾ ಫೆರ್ನಾಂಡಿಸ್ ಅವರು ರೇಡಿಯೊ ನಾಟಕಾದ ಇತಿಹಾಸ ಇದರ ಬಗ್ಗೆ ವಿವರಿಸಿದರು.

ನಂತರ ನಡೆದ ಪುಸ್ತಕ ಉದ್ಘಾಟನೆ ಕಾರ್ಯಕ್ರಮದಲ್ಲಿ ʼರಾಕ್ಣೊʼ ಕೊಂಕಣಿ ವಾರ ಪತ್ರಿಕೆಯ ಸಂಪಾದಕರಾದ ಫಾದರ್ ರುಪೇಶ್ ಮಾಡ್ತಾ, ಪ್ರಸಿದ್ಧ ಲೇಖಕರು ಮತ್ತು ಕವಿಗಳಾದ ಡಾ| ಪೂರ್ಣಾನಂದ ಚಾರಿ, ಖ್ಯಾತ ಲೇಖಕ ಅವಿಲ್ ರಾಸ್ಕಿನ್ಹಾ, ಪ್ರಸಿದ್ಧ ಬರಹಗಾರರಾದ ಹೇಮಾಚಾರ್ಯಾ ಹಾಗೂ ಫಾದರ್ ರೊನಾಲ್ಡ್ ಸೆರಾವೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಶಾವಾದಿ ಪ್ರಕಾಶನ್ ಸಂಸ್ಥೆಯ 53ನೇ(ಕನ್ನಡ್ ಲಿಪಿ) ಹಾಗೂ 54ನೇ (ನಾಗರಿ ಲಿಪಿ) ʼದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕದ ಪರಿಚಯವನ್ನು ತಮ್ಮ ಅದ್ಭುತ ಮಾತುಗಳಲ್ಲಿ ಮಾಡಿಕೊಟ್ಟ ಫಾದರ್ ರೂಪೇಶ್ ಮಾಡ್ತಾ ಹಾಗೂ ಪ್ರಸಿದ್ಧ ಲೇಖಕರು ಮತ್ತು ಕವಿಗಳಾದ ಡಾ| ಪೂರ್ಣಾನಂದ ಚಾರಿ ಇವರು ʼದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕವನ್ನು ಉದ್ಘಾಟಿಸಿದರು. ಲಾರೆನ್ಸ್ ವಿನೋದ್ ಬಾರ್ಬೋಜ್‌ ಅವರು ಕೊಂಕಣಿ ಲೇಖಕರಾದ ವಲ್ಲಿ ಕ್ವಾಡ್ರಸ್‌ ಅಜೆಕಾರ್‌ ಇವರ ʼಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲ್‌ʼ ಬಗ್ಗೆ ತಮ್ಮ ಮಾತುಗಳಲ್ಲಿ ವರ್ಣಿಸಿದರು. ಇದರ ಉದ್ಘಾಟನೆಯನ್ನು ಲೇಖಕರಾದ ಆವಿಲ್ ರಾಸ್ಕಿನ್ಹಾ, ಬರಹಗಾರರಾದ ಹೇಮಾಚಾರ್ಯಾ ಹಾಗೂ ಡಾ| ಪೂರ್ಣಾನಂದ ಚಾರಿ ಅವರು ನಡೆಸಿದರು. ಅನಿತಾ ಮೀನೆಜಸ್‌ ಅಜೆಕಾರ್‌ ಅವರು ಪುಸ್ತಕ ಉದ್ಘಾಟನೆ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಕಾರ್ಯಕ್ರಮದ ಉಸ್ತುವಾರಿಯಾದ ವಲ್ಲಿ ಕ್ವಾಡ್ರಸ್‌ ಅಜೆಕಾರ್ ಅವರು ಧನ್ಯವಾದಗೈದು,‌ ಜೆಸ್ಸಿ ಲೋಬೊ ಅಜೆಕಾರ್ ಅವರು ಕಾರ್ಯಕ್ರಮದ ಡಿಜಿಟಲ್ ಸೂತ್ರ ಸಂಚಾಲನೆಗೈದರು. ಕಾರ್ಯಕ್ರಮದಲ್ಲಿ ಹೆಸರಾಂತ ಬರಹಗಾರರು ಹಾಗೂ ನಾಟಕ ಕಲಾವಿದರಾದ ಎಡ್ಡಿ ಸಿಕ್ವೇರಾ, ರಿಚ್ಚಿ ಪಿರೇರಾ, ಕ್ಲೀಟಾ ನೊರೊನ್ಹಾ, ಎಮ್. ಪ್ಯಾಟ್ರಿಕ್, ಶಾಲಿನಿ ವಾಲೆನ್ಸಿಯಾ, ಜ್ಯೂಲಿಯೆಟ್ ಮೊರಾಸ್, ಎಚ್.ಆರ್. ಆಳ್ವ, ಜೆಮ್ಮಾ ಪಡೀಲ್, ವಿಶ್ವಾಸ್ ರೆಬಿಂಬಸ್, ಡೇವಿಡ್ ಡಿಸೋಜ ವಾಮಂಜೂರ್, ಪಿಂಟೊ ವಾಮಂಜೂರ್, ಅಲೆಕ್ಸ್ ಮಿರಾಂದಾ, ಕ್ಯಾಥರೀನ್ ರೊಡ್ರಿಗಸ್ ಕಟ್ಪಾಡಿ, ಫಾದರ್ ಐವನ್ ಮಿಯಾರ್, ಫಾದರ್ ನವೀನ್, ಮಾಚ್ಚಾ ಮಿಲಾಗ್ರಿಸ್, ಜೆ.ಎಫ್. ಡಿಸೋಜ್ ಅತ್ತಾವರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಗಣಿಯಲ್ಲಿ ಭಾರಿ ಸ್ಫೋಟ 32 ಜನರ ಸಾವು,14 ಜನರ ನಾ ಪತ್ತೆ

ಕಜಕಿಸ್ತಾನದ ಉಕ್ಕಿನ ದೈತ್ಯ ಅರ್ಸೆಲರ್‌ ಮಿತ್ತಲ್‌ ಒಡೆತನದ ಗಣಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 32 ಕಾರ್ಮಿಕರು ಸಾವನ್ನಪ್ಪಿದ್ದು, 14 ಜನ ನಾಪತ್ತೆಯಾಗಿದ್ದಾರೆ.

ಮಿಥೇನ್‌ ಅನಿಲ ಸೋರಿಕೆಯಿಂದಾಗಿ ಕೊಸ್ಟೆಂಕೊ ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು, 252 ಜನರಲ್ಲಿ 206 ಜನರನ್ನು ಸ್ಥಳಾಂತರಿಸಲಾಗಿದೆ. 18 ಜನರಿಗೆ ವೈದ್ಯಕೀಯ ನೆರವು ಅಗತ್ಯವಿದೆ ಎಂದು ಕಂಪನಿ ತಿಳಿಸಿದೆ.

ಲಕ್ಸೆಂಬರ್ಗ್‌ ಮೂಲದ ಬಹುರಾಷ್ಟ್ರೀಯ ಅರ್ಸೆಲರ್‌ ಮಿತ್ತಲ್‌ ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ಕಂಪನಿಯಾಗಿದೆ. ಸುರಕ್ಷತಾ ನಿಯಮಗಳನ್ನು ಪಾಲಿಸದ ಕಂಪನಿ ವಿರುದ್ಧ ಸರ್ಕಾರ ಕ್ರಮ ವಹಿಸಿದ್ದು, ಕಂಪನಿಯನ್ನು ವಶಪಡಿಸಿಕೊಳ್ಳಲು ಆದೇಶಿಸಿದೆ.

ಕೊಲ್ಲೂರು-ತಾಯಿ ಆತ್ಮಹತ್ಯೆ ಮಾಡಿಕೊಂಡು ಸಾವು, ಶೋಕ ತಡೆಯಲಾರದೆ ಪುತ್ರ ಕೂಡ ಆತ್ಮಹತ್ಯೆ

ಕೊಲ್ಲೂರು: ತಾಯಿ ಮೃತಪಟ್ಟ ಶೋಕದಿಂದ ಪುತ್ರ ಮಾನಸಿಕವಾಗಿ ನೊಂದು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಪುತ್ರ ವಿಶ್ವನಾಥ (37) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ತಾಯಿ ಗಿರಿಜಮ್ಮ (63) ಅವರು ಅ. 26ರಂದು ಜೀವನದಲ್ಲಿ ಜುಗುಪ್ಸೆಗೊಂಡು ಕೀಟನಾಶಕ ಸೇವಿಸಿದ್ದರು. ಅಸ್ವಸ್ಥಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ಮಧ್ಯರಾರಿಯಲ್ಲಿ ಮೃತಪಟ್ಟಿದ್ದರು. ಮೃತರ ಅಂತ್ಯಸಂಸ್ಕಾರ ಮುಗಿಸಿದ ಬಳಿಕ ಮನೆಯಲ್ಲಿ ಪತಿ ಮತ್ತು ಪುತ್ರ ಮಲಗಿದ್ದರು. ಬೆಳಗ್ಗೆ ಪುತ್ರನ ಬಾಯಿಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿದ ಮನೆಯವರು ಸಂಶಯದಿಂದ ಆಸ್ಪತ್ರೆಗೆ ಕೊಂಡೊಯ್ದು ಪರೀಕ್ಷಿಸಿದಾಗ ವೈದ್ಯರು ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ ಆಫ್‌ ಬರೋಡಾದಿಂದ ಬಾಬ್‌ ಲೈಟ್‌ ಉಳಿತಾಯ ಖಾತೆಯ ಪರಿಚಯ “ಜೀವಮಾನ ಶೂನ್ಯ ಬ್ಯಾಲೆನ್ಸ್‌ ಉಳಿತಾಯ ಖಾತೆ”

ಅಕ್ಟೋಬರ್‌ 27, 2023: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್‌ ಆಫ್‌ ಬರೋಡಾ (ಬ್ಯಾಂಕ್‌) ತನ್ನ “ಬಾಬ್‌ ಕಿ ಸಂಗ್‌, ತ್ಯೋಹಾರ್‌ ಕಿ ಉಮಂಗ್‌” ಹಬ್ಬದ ಅಂಗವಾಗಿ ಬಾಬ್‌ ಲೈಟ್‌ ಉಳಿತಾಯ ಖಾತೆ – ಜೀವಮಾನ ಶೂನ್ಯ ಬ್ಯಾಲೆನ್ಸ್‌ ಉಳಿತಾಯ ಬ್ಯಾಂಕ್‌ ಖಾತೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಯಾವುದೇ ಕನಿಷ್ಟ ಬ್ಯಾಲೆನ್ಸ್‌ ಅಗತ್ಯವಿಲ್ಲದ ಬ್ಯಾಂಕಿಂಗ್‌ ಅನುಭವವನ್ನು
ನೀಡುತ್ತದೆ. ಇದಲ್ಲದೆ, ವಿವಿಧ ಗ್ರಾಹಕರ ವಿಭಾಗಗಳ ಅಗತ್ಯತೆಗಳನ್ನು ಪೂರೈಸಲು, ಖಾತೆಯಲ್ಲಿ ನಾಮಮಾತ್ರ ತ್ರೈಮಾಸಿಕ
ಸರಾಸರಿ ಬ್ಯಾಲೆನ್ಸನ್ನು ನಿರ್ವಹಿಸುವ ಮೂಲಕ ಬಾಬ್‌ ಲೈಟ್‌ ಖಾತೆಯು ಜೀವಮಾನದ ಉಚಿತ ರುಪೇ ಪ್ಲಾಟಿನಂ ಡೆಬಿಟ್‌ ಕಾರ್ಡ್‌ನೊಂದಿಗೆ ಬರುತ್ತದೆ ಮತ್ತು ಖಾತೆದಾರರು ಜೀವಮಾನದ ಉಚಿತ ಕ್ರೆಡಿಟ್‌ ಕಾರ್ಡ್‌ ಅನ್ನು ಸಹ ಪಡೆಯಬಹುದು.

ಬಾಬ್‌ ಲೈಟ್‌ ಉಳಿತಾಯ ಖಾತೆಯು ಹಬ್ಬದ ಹುತುವಿನಲ್ಲಿ ಕೊಡುಗೆಗಳೊಂದಿಗೆ ನೀಡಲಾಗುತ್ತಿದೆ. “ಬಾಬ್‌ ಕಿ ಸಂಗ್‌ ತ್ಯೋಹಾರ್‌ ಕಿ. ಉಮಂಗ್‌’ ಹಬ್ಬದ ಪ್ರಚಾರದ ಭಾಗವಾಗಿ, ಬ್ಯಾಂಕ್‌ ಆಫ್‌ ಬರೋಡಾ ಎಲೆಕ್ಟಾನಿಕ್ಸ್‌ ಕನ್ನೂಮುರ್‌ ಡ್ಯೂರಬಲ್ಸ್‌, ಪ್ರಯಾಣ. ಆಹಾರ, ಫ್ಕಾಷನ್‌, ಮನರಂಜನೆ, ಜೀವನ ಶೈಲಿ, ದಿನಸಿ ಮತ್ತು ಆರೋಗ್ಯದಂತಹ ವಿಭಾಗಗಳಲ್ಲಿ ಪ್ರಮುಖ ಗ್ರಾಹಕ ಬ್ರಾ ನಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು. ಬ್ಯಾಂಕ್‌ ಆಫ್‌ ಬರೋಡಾ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳಲ್ಲಿ ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ. ಹಬ್ಬದ ಪ್ರಚಾರವು 31ನೇ ಡಿಸೆಂಬರ್‌, 2023ರವರೆಗೆ ನಡೆಯಲಿದೆ ಮತ್ತು ಕಾರ್ಡ್‌ದಾರರು ರಿಲಯನ್ಸ್‌ ಡಿಜಿಟಲ್‌, ಕ್ರೋಮಾ, ಮೇಕ್‌ಮೈಟ್ರಿಪ್‌, ಅಮೇಜಾನ್‌, ಬುಕ್‌ಮೈಶೋ, ಮಿಂತ್ರ, ಸ್ತಿಗ್ಗಿ ರೋಮೆಟೊ ಮತ್ತು ಇತರ ಬ್ರಾಂಡ್‌ಗಳಿಂದ ಎಶೇಷ ಕೊಡುಗೆಗಳಲ್ಲಿ ಆನಂದಿಸಬಹುದು.

ಬ್ಯಾಂಕ್‌ ಆಫ್‌ ಬರೊಡಾದ ರಿಟೈಲ್‌ ಲಯಾಬಿಲಿಟೀಸ್‌ ಮತ್ತು ಎನ್‌ಆರ್‌ಐ ವ್ಯವಹಾರದ ಮುಖ್ಯ ಪ್ರಧಾನ ವ್ಯವಸ್ಥಾಪಕ ಶ್ರೀ ರವೀಂದ್ರ ಸಿಂಗ್‌ ನೇಗಿ ಇವರು 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಸೇರಿದಂತೆ ಯಾವುದೇ ನಿವಾಸಿ ಖಾತೆಯನ್ನು ತೆರೆಯಬಹುದು. ಹೊಸ ಪೀಳಿಗೆಗೆ ಔಪಚಾರಿಕ ಬ್ಯಾಂಕಿಂಗ್‌ ಪರಿಸರ ವ್ಯವಸ್ಥೆಗೆ ಬಾಬ್‌ ಲೈಟ್‌ ಬಾಗಿಲು. ತೆರೆಯುತ್ತದೆ ಮಹತ್ವಾಕಾಂಕ್ಷಿ ಭಾರತೀಯರ ಬ್ಯಾಂಕಿಂಗ್‌ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಯೋಹಾನನ ಸಾಕ್ಷಿಗಳ ಪ್ರಾರ್ಥನ ಸಮಾವೇಶದಲ್ಲಿ ಬಾಂಬ್ ಸ್ಪೋಟ – 2 ಸಾವು -ಇದು ಯೋಹಾನನ ಸಾಕ್ಷಿಗಳ ಪಂಗಡವನೇ ಮಾಡಿದ ಕ್ರತ್ಯವೆಂದು ಓರ್ವ ಶರಣು

ಕೇರಳ: ಎರ್ನಾಕುಲಂನಲ್ಲಿ ಯೋಹಾನ ಸಾಕ್ಷಿಗಳ ಪ್ರಾರ್ಥನ ಸಮಾವೇಶದಲ್ಲಿ ಬಾಂಬ್ ಸ್ಪೋಟಗೊಂಡು 2 ಸಾವು ಸಂಭವಿಸಿದ ಭಯಾನಕ ಘಟನೆ ನಡೆದಿದೆ. ಈ ಕ್ರತ್ಯಕ್ಕೆ ಭಯೋತ್ಪಾದಕರು ಎಂಬ ಸುಳಿವು ಎಂದು ಸುದ್ದಿ ಹರಡಿದ್ದಾರೂ, ಈಗ ಈ ಕ್ರತ್ಯವನ್ನು ತಾನೇ ಮಾಡಿದ್ದೆಂದು ಒರ್ವ ಪೊಲೀಸರಿಗೆ ಶರಣಾಗಿದ್ದಾನೆ.

ಡೊಮಿನಿಕ್ ಮಾರ್ಟಿನ್

ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯ ಪ್ರಾರ್ಥನಾ ಸಮಾವೇಶ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಬಾಂಬ್ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ಕುರಿತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಗಾಯಗೊಂಡವರಲ್ಲಿ ಕೆಲವರು ಚಿಂತಾಜನಕರಾಗಿದ್ದಾರೆ.

2,000 ಕ್ಕಿಂತಲೂ ಹೆಚ್ಚು ಜನರು ಜಮಾಯಿಸಿರುವ ‘ಯೆಹೋವನ ಸಾಕ್ಷಿ’ ಸಮಾವೇಶದ ಸಮಯದಲ್ಲಿ ಅನೇಕ ಸ್ಫೋಟಗಳು ಸಂಭವಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಶೇಷವಾಗಿ ಸರಣಿ ಸ್ಫೋಟ ಎಂದು ಸುದ್ದಿ ಮೂಲಗಳು ತಿಳಿಸಿವೆ. ಬಾಂಬ್ ಸ್ಕ್ವಾಡ್, ಫೋರೆನ್ಸಿಕ್ಸ್ ತಂಡ ಮತ್ತು ಎನ್ಐಎ ತಂಡವು ಸ್ಥಳಕ್ಕೆ ಧಾವಿಸಿದ್ದು, ಕಣ್ಣೂರು ರೈಲ್ವೆ ನಿಲ್ದಾಣದಿಂದ ಶಂಕಿತನನ್ನು ಬಂಧಿಸಲಾಗಿದೆ. “ಎಲ್ಲಾ ತನಿಖಾ ಸಂಸ್ಥೆಗಳು ಸ್ಥಳದಲ್ಲಿದ್ದು ತನಿಖೆ ನಡೆಯುತ್ತಿದೆ. ಇದು ಬಾಂಬ್ ಸ್ಫೋಟವೇ ಎಂಬುದನ್ನು ತನಿಖೆಯು ಬಹಿರಂಗಪಡಿಸುತ್ತದೆ … ಒಬ್ಬರು ಸತ್ತರು, 40 ಮಂದಿ ಗಾಯಗೊಂಡಿದ್ದಾರೆ, ನಾಲ್ವರು-ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬೇಬಿ ಪಿವಿ ತಿಳಿಸಿದ್ದಾರೆ.
ನಂತರ ಕೇರಳ ಡಿಜಿಪಿ ಅವರು ಸ್ಫೋಟಗಳಿಗೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸುವ ಬಗ್ಗೆ ಪ್ರಾಥಮಿಕ ತನಿಖಾ ಸುಳಿವುಗಳನ್ನು ಹೇಳಿದರೆ, ಅದನ್ನು ಸಂಗ್ರಹಿಸಲು “ಟಿಫಿನ್ ಬಾಕ್ಸ್” ಅನ್ನು ಬಳಸಲಾಗಿದೆ ಎಂದು ಶಂಕಿಸಲಾಗಿದೆ, ಬೆಂಕಿಯಿಡುವ ಸಾಧನದ ಬಳಕೆಯು ಸಹ ಈಗ ಹೊರಬರುತ್ತಿರುವ ಕೋನವಾಗಿದೆ.

ಯೆಹೋವನ ಸಾಕ್ಷಿಗಳು ಯಾರು

‘ಯೆಹೋವನ ಸಾಕ್ಷಿಗಳು’ ಏಸು ಕ್ರಿಸ್ತನು ಬರುವ ಮೊದಲು, ಅವನ ದಾರಿ ಸುಗಮಗೊಳಿಸಲು ಪಾಪಗಳನ್ನು ತೊರೆಯಿರಿ, ನ್ಯಾಯಮಾರ್ಗದಲ್ಲಿ ನೆಡೆಯಿರಿ ಎಂದು ಭೋದನೆ ಮಾಡುತಿದ್ದು, ಅವನೊರ್ವ ಶ್ರೇಷ್ಠ ಪ್ರೋಫೆತ್ ಎಂದು ಕ್ರೈಸ್ತರು ನಂಬುತ್ತಾರೆ, ಆದರೆ ಈ ಯೋವಾನನ ಸಾಕ್ಷಿಗಳ ಪಂಗಡ ಏಸುಕ್ರಿಸ್ತನು ದೇವನಲ್ಲಾ ಎಂದು ಸಾರಿ ಸಾರಿ ಹೇಳುತ್ತಾ, ಇತರರನ್ನು ತಮ್ಮಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ, ಈ ಭಿನಾಭಿಪ್ರಾಯಕ್ಕೆ ಅನ್ಯ ಕ್ರೈಸ್ತರು ಈ ಪಂಗಡಕ್ಕೆ ಕಡು ವಿರೋಧವಿದೆ. ಈಗಿನ ಸುದ್ದಿಯ ಪ್ರಕಾರ ಯೆಹೋವನ ಸಾಕ್ಷಿಯ ಪಂಗಡದವನೆ ಆದ ಯೆಹೋವಾನ ಸಾಕ್ಷಿಗಳ ಸಿದ್ದಾಂತಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಇದ್ದು ಇದನ್ನು ನಿರ್ಲಕ್ಷಿದಕ್ಕಾಗಿ ಈ ಕ್ರತ್ಯವನ್ನು ಮಾಡಿದ್ದೆನೆಂದು ಹೇಳಿಕೊಂಡಿದ್ದಾನೆ. ಇತನನ್ನು ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾಗಿದೆ.

ಯೆಹೋವನ ಸಾಕ್ಷಿ ಸಮಾವೇಶವು ವಾರ್ಷಿಕ ಕೂಟವಾಗಿದ್ದು, ಇದರಲ್ಲಿ “ಪ್ರಾದೇಶಿಕ ಸಮಾವೇಶಗಳು” ಎಂದು ಕರೆಯಲ್ಪಡುವ ದೊಡ್ಡ ಸಭೆಗಳು ಸಾಮಾನ್ಯವಾಗಿ ಮೂರು ದಿನಗಳ ಕಾಲ, ಶುಕ್ರವಾರದಿಂದ ಭಾನುವಾರದವರೆಗೆ ನಡೆಯುತ್ತವೆ. ಈ ಕೂಟವು ೩ ದಿನಗಳದಾಗಿದ್ದು, ಭಾನುವಾರ ಕೊನೆಯ ದಿನವಾಗಿತ್ತು.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಮಹಿಳೆಯಾಯರ ಬಗ್ಗೆ ಮಾಹಿತಿ ನೀಡಿದ ಕೇರಳ ಸಚಿವ ವಿಎನ್ ವಾಸವನ್, ಸ್ಫೋಟದಿಂದ ಉಂಟಾದ ಬೆಂಕಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಟರ್ ಮೆಡ್‌ಸಿಟಿ, ರಾಜಗಿರಿ ಮತ್ತು ಕೊಚ್ಚಿಯ ಸನ್‌ರೈಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.