ಗಣಿಯಲ್ಲಿ ಭಾರಿ ಸ್ಫೋಟ 32 ಜನರ ಸಾವು,14 ಜನರ ನಾ ಪತ್ತೆ

ಕಜಕಿಸ್ತಾನದ ಉಕ್ಕಿನ ದೈತ್ಯ ಅರ್ಸೆಲರ್‌ ಮಿತ್ತಲ್‌ ಒಡೆತನದ ಗಣಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 32 ಕಾರ್ಮಿಕರು ಸಾವನ್ನಪ್ಪಿದ್ದು, 14 ಜನ ನಾಪತ್ತೆಯಾಗಿದ್ದಾರೆ.

ಮಿಥೇನ್‌ ಅನಿಲ ಸೋರಿಕೆಯಿಂದಾಗಿ ಕೊಸ್ಟೆಂಕೊ ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು, 252 ಜನರಲ್ಲಿ 206 ಜನರನ್ನು ಸ್ಥಳಾಂತರಿಸಲಾಗಿದೆ. 18 ಜನರಿಗೆ ವೈದ್ಯಕೀಯ ನೆರವು ಅಗತ್ಯವಿದೆ ಎಂದು ಕಂಪನಿ ತಿಳಿಸಿದೆ.

ಲಕ್ಸೆಂಬರ್ಗ್‌ ಮೂಲದ ಬಹುರಾಷ್ಟ್ರೀಯ ಅರ್ಸೆಲರ್‌ ಮಿತ್ತಲ್‌ ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ಕಂಪನಿಯಾಗಿದೆ. ಸುರಕ್ಷತಾ ನಿಯಮಗಳನ್ನು ಪಾಲಿಸದ ಕಂಪನಿ ವಿರುದ್ಧ ಸರ್ಕಾರ ಕ್ರಮ ವಹಿಸಿದ್ದು, ಕಂಪನಿಯನ್ನು ವಶಪಡಿಸಿಕೊಳ್ಳಲು ಆದೇಶಿಸಿದೆ.

ಕೊಲ್ಲೂರು-ತಾಯಿ ಆತ್ಮಹತ್ಯೆ ಮಾಡಿಕೊಂಡು ಸಾವು, ಶೋಕ ತಡೆಯಲಾರದೆ ಪುತ್ರ ಕೂಡ ಆತ್ಮಹತ್ಯೆ

ಕೊಲ್ಲೂರು: ತಾಯಿ ಮೃತಪಟ್ಟ ಶೋಕದಿಂದ ಪುತ್ರ ಮಾನಸಿಕವಾಗಿ ನೊಂದು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಪುತ್ರ ವಿಶ್ವನಾಥ (37) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ತಾಯಿ ಗಿರಿಜಮ್ಮ (63) ಅವರು ಅ. 26ರಂದು ಜೀವನದಲ್ಲಿ ಜುಗುಪ್ಸೆಗೊಂಡು ಕೀಟನಾಶಕ ಸೇವಿಸಿದ್ದರು. ಅಸ್ವಸ್ಥಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ಮಧ್ಯರಾರಿಯಲ್ಲಿ ಮೃತಪಟ್ಟಿದ್ದರು. ಮೃತರ ಅಂತ್ಯಸಂಸ್ಕಾರ ಮುಗಿಸಿದ ಬಳಿಕ ಮನೆಯಲ್ಲಿ ಪತಿ ಮತ್ತು ಪುತ್ರ ಮಲಗಿದ್ದರು. ಬೆಳಗ್ಗೆ ಪುತ್ರನ ಬಾಯಿಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿದ ಮನೆಯವರು ಸಂಶಯದಿಂದ ಆಸ್ಪತ್ರೆಗೆ ಕೊಂಡೊಯ್ದು ಪರೀಕ್ಷಿಸಿದಾಗ ವೈದ್ಯರು ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ ಆಫ್‌ ಬರೋಡಾದಿಂದ ಬಾಬ್‌ ಲೈಟ್‌ ಉಳಿತಾಯ ಖಾತೆಯ ಪರಿಚಯ “ಜೀವಮಾನ ಶೂನ್ಯ ಬ್ಯಾಲೆನ್ಸ್‌ ಉಳಿತಾಯ ಖಾತೆ”

ಅಕ್ಟೋಬರ್‌ 27, 2023: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್‌ ಆಫ್‌ ಬರೋಡಾ (ಬ್ಯಾಂಕ್‌) ತನ್ನ “ಬಾಬ್‌ ಕಿ ಸಂಗ್‌, ತ್ಯೋಹಾರ್‌ ಕಿ ಉಮಂಗ್‌” ಹಬ್ಬದ ಅಂಗವಾಗಿ ಬಾಬ್‌ ಲೈಟ್‌ ಉಳಿತಾಯ ಖಾತೆ – ಜೀವಮಾನ ಶೂನ್ಯ ಬ್ಯಾಲೆನ್ಸ್‌ ಉಳಿತಾಯ ಬ್ಯಾಂಕ್‌ ಖಾತೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಯಾವುದೇ ಕನಿಷ್ಟ ಬ್ಯಾಲೆನ್ಸ್‌ ಅಗತ್ಯವಿಲ್ಲದ ಬ್ಯಾಂಕಿಂಗ್‌ ಅನುಭವವನ್ನು
ನೀಡುತ್ತದೆ. ಇದಲ್ಲದೆ, ವಿವಿಧ ಗ್ರಾಹಕರ ವಿಭಾಗಗಳ ಅಗತ್ಯತೆಗಳನ್ನು ಪೂರೈಸಲು, ಖಾತೆಯಲ್ಲಿ ನಾಮಮಾತ್ರ ತ್ರೈಮಾಸಿಕ
ಸರಾಸರಿ ಬ್ಯಾಲೆನ್ಸನ್ನು ನಿರ್ವಹಿಸುವ ಮೂಲಕ ಬಾಬ್‌ ಲೈಟ್‌ ಖಾತೆಯು ಜೀವಮಾನದ ಉಚಿತ ರುಪೇ ಪ್ಲಾಟಿನಂ ಡೆಬಿಟ್‌ ಕಾರ್ಡ್‌ನೊಂದಿಗೆ ಬರುತ್ತದೆ ಮತ್ತು ಖಾತೆದಾರರು ಜೀವಮಾನದ ಉಚಿತ ಕ್ರೆಡಿಟ್‌ ಕಾರ್ಡ್‌ ಅನ್ನು ಸಹ ಪಡೆಯಬಹುದು.

ಬಾಬ್‌ ಲೈಟ್‌ ಉಳಿತಾಯ ಖಾತೆಯು ಹಬ್ಬದ ಹುತುವಿನಲ್ಲಿ ಕೊಡುಗೆಗಳೊಂದಿಗೆ ನೀಡಲಾಗುತ್ತಿದೆ. “ಬಾಬ್‌ ಕಿ ಸಂಗ್‌ ತ್ಯೋಹಾರ್‌ ಕಿ. ಉಮಂಗ್‌’ ಹಬ್ಬದ ಪ್ರಚಾರದ ಭಾಗವಾಗಿ, ಬ್ಯಾಂಕ್‌ ಆಫ್‌ ಬರೋಡಾ ಎಲೆಕ್ಟಾನಿಕ್ಸ್‌ ಕನ್ನೂಮುರ್‌ ಡ್ಯೂರಬಲ್ಸ್‌, ಪ್ರಯಾಣ. ಆಹಾರ, ಫ್ಕಾಷನ್‌, ಮನರಂಜನೆ, ಜೀವನ ಶೈಲಿ, ದಿನಸಿ ಮತ್ತು ಆರೋಗ್ಯದಂತಹ ವಿಭಾಗಗಳಲ್ಲಿ ಪ್ರಮುಖ ಗ್ರಾಹಕ ಬ್ರಾ ನಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು. ಬ್ಯಾಂಕ್‌ ಆಫ್‌ ಬರೋಡಾ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳಲ್ಲಿ ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ. ಹಬ್ಬದ ಪ್ರಚಾರವು 31ನೇ ಡಿಸೆಂಬರ್‌, 2023ರವರೆಗೆ ನಡೆಯಲಿದೆ ಮತ್ತು ಕಾರ್ಡ್‌ದಾರರು ರಿಲಯನ್ಸ್‌ ಡಿಜಿಟಲ್‌, ಕ್ರೋಮಾ, ಮೇಕ್‌ಮೈಟ್ರಿಪ್‌, ಅಮೇಜಾನ್‌, ಬುಕ್‌ಮೈಶೋ, ಮಿಂತ್ರ, ಸ್ತಿಗ್ಗಿ ರೋಮೆಟೊ ಮತ್ತು ಇತರ ಬ್ರಾಂಡ್‌ಗಳಿಂದ ಎಶೇಷ ಕೊಡುಗೆಗಳಲ್ಲಿ ಆನಂದಿಸಬಹುದು.

ಬ್ಯಾಂಕ್‌ ಆಫ್‌ ಬರೊಡಾದ ರಿಟೈಲ್‌ ಲಯಾಬಿಲಿಟೀಸ್‌ ಮತ್ತು ಎನ್‌ಆರ್‌ಐ ವ್ಯವಹಾರದ ಮುಖ್ಯ ಪ್ರಧಾನ ವ್ಯವಸ್ಥಾಪಕ ಶ್ರೀ ರವೀಂದ್ರ ಸಿಂಗ್‌ ನೇಗಿ ಇವರು 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಸೇರಿದಂತೆ ಯಾವುದೇ ನಿವಾಸಿ ಖಾತೆಯನ್ನು ತೆರೆಯಬಹುದು. ಹೊಸ ಪೀಳಿಗೆಗೆ ಔಪಚಾರಿಕ ಬ್ಯಾಂಕಿಂಗ್‌ ಪರಿಸರ ವ್ಯವಸ್ಥೆಗೆ ಬಾಬ್‌ ಲೈಟ್‌ ಬಾಗಿಲು. ತೆರೆಯುತ್ತದೆ ಮಹತ್ವಾಕಾಂಕ್ಷಿ ಭಾರತೀಯರ ಬ್ಯಾಂಕಿಂಗ್‌ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಯೋಹಾನನ ಸಾಕ್ಷಿಗಳ ಪ್ರಾರ್ಥನ ಸಮಾವೇಶದಲ್ಲಿ ಬಾಂಬ್ ಸ್ಪೋಟ – 2 ಸಾವು -ಇದು ಯೋಹಾನನ ಸಾಕ್ಷಿಗಳ ಪಂಗಡವನೇ ಮಾಡಿದ ಕ್ರತ್ಯವೆಂದು ಓರ್ವ ಶರಣು

ಕೇರಳ: ಎರ್ನಾಕುಲಂನಲ್ಲಿ ಯೋಹಾನ ಸಾಕ್ಷಿಗಳ ಪ್ರಾರ್ಥನ ಸಮಾವೇಶದಲ್ಲಿ ಬಾಂಬ್ ಸ್ಪೋಟಗೊಂಡು 2 ಸಾವು ಸಂಭವಿಸಿದ ಭಯಾನಕ ಘಟನೆ ನಡೆದಿದೆ. ಈ ಕ್ರತ್ಯಕ್ಕೆ ಭಯೋತ್ಪಾದಕರು ಎಂಬ ಸುಳಿವು ಎಂದು ಸುದ್ದಿ ಹರಡಿದ್ದಾರೂ, ಈಗ ಈ ಕ್ರತ್ಯವನ್ನು ತಾನೇ ಮಾಡಿದ್ದೆಂದು ಒರ್ವ ಪೊಲೀಸರಿಗೆ ಶರಣಾಗಿದ್ದಾನೆ.

ಡೊಮಿನಿಕ್ ಮಾರ್ಟಿನ್

ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯ ಪ್ರಾರ್ಥನಾ ಸಮಾವೇಶ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಬಾಂಬ್ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ಕುರಿತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಗಾಯಗೊಂಡವರಲ್ಲಿ ಕೆಲವರು ಚಿಂತಾಜನಕರಾಗಿದ್ದಾರೆ.

2,000 ಕ್ಕಿಂತಲೂ ಹೆಚ್ಚು ಜನರು ಜಮಾಯಿಸಿರುವ ‘ಯೆಹೋವನ ಸಾಕ್ಷಿ’ ಸಮಾವೇಶದ ಸಮಯದಲ್ಲಿ ಅನೇಕ ಸ್ಫೋಟಗಳು ಸಂಭವಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಶೇಷವಾಗಿ ಸರಣಿ ಸ್ಫೋಟ ಎಂದು ಸುದ್ದಿ ಮೂಲಗಳು ತಿಳಿಸಿವೆ. ಬಾಂಬ್ ಸ್ಕ್ವಾಡ್, ಫೋರೆನ್ಸಿಕ್ಸ್ ತಂಡ ಮತ್ತು ಎನ್ಐಎ ತಂಡವು ಸ್ಥಳಕ್ಕೆ ಧಾವಿಸಿದ್ದು, ಕಣ್ಣೂರು ರೈಲ್ವೆ ನಿಲ್ದಾಣದಿಂದ ಶಂಕಿತನನ್ನು ಬಂಧಿಸಲಾಗಿದೆ. “ಎಲ್ಲಾ ತನಿಖಾ ಸಂಸ್ಥೆಗಳು ಸ್ಥಳದಲ್ಲಿದ್ದು ತನಿಖೆ ನಡೆಯುತ್ತಿದೆ. ಇದು ಬಾಂಬ್ ಸ್ಫೋಟವೇ ಎಂಬುದನ್ನು ತನಿಖೆಯು ಬಹಿರಂಗಪಡಿಸುತ್ತದೆ … ಒಬ್ಬರು ಸತ್ತರು, 40 ಮಂದಿ ಗಾಯಗೊಂಡಿದ್ದಾರೆ, ನಾಲ್ವರು-ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬೇಬಿ ಪಿವಿ ತಿಳಿಸಿದ್ದಾರೆ.
ನಂತರ ಕೇರಳ ಡಿಜಿಪಿ ಅವರು ಸ್ಫೋಟಗಳಿಗೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸುವ ಬಗ್ಗೆ ಪ್ರಾಥಮಿಕ ತನಿಖಾ ಸುಳಿವುಗಳನ್ನು ಹೇಳಿದರೆ, ಅದನ್ನು ಸಂಗ್ರಹಿಸಲು “ಟಿಫಿನ್ ಬಾಕ್ಸ್” ಅನ್ನು ಬಳಸಲಾಗಿದೆ ಎಂದು ಶಂಕಿಸಲಾಗಿದೆ, ಬೆಂಕಿಯಿಡುವ ಸಾಧನದ ಬಳಕೆಯು ಸಹ ಈಗ ಹೊರಬರುತ್ತಿರುವ ಕೋನವಾಗಿದೆ.

ಯೆಹೋವನ ಸಾಕ್ಷಿಗಳು ಯಾರು

‘ಯೆಹೋವನ ಸಾಕ್ಷಿಗಳು’ ಏಸು ಕ್ರಿಸ್ತನು ಬರುವ ಮೊದಲು, ಅವನ ದಾರಿ ಸುಗಮಗೊಳಿಸಲು ಪಾಪಗಳನ್ನು ತೊರೆಯಿರಿ, ನ್ಯಾಯಮಾರ್ಗದಲ್ಲಿ ನೆಡೆಯಿರಿ ಎಂದು ಭೋದನೆ ಮಾಡುತಿದ್ದು, ಅವನೊರ್ವ ಶ್ರೇಷ್ಠ ಪ್ರೋಫೆತ್ ಎಂದು ಕ್ರೈಸ್ತರು ನಂಬುತ್ತಾರೆ, ಆದರೆ ಈ ಯೋವಾನನ ಸಾಕ್ಷಿಗಳ ಪಂಗಡ ಏಸುಕ್ರಿಸ್ತನು ದೇವನಲ್ಲಾ ಎಂದು ಸಾರಿ ಸಾರಿ ಹೇಳುತ್ತಾ, ಇತರರನ್ನು ತಮ್ಮಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ, ಈ ಭಿನಾಭಿಪ್ರಾಯಕ್ಕೆ ಅನ್ಯ ಕ್ರೈಸ್ತರು ಈ ಪಂಗಡಕ್ಕೆ ಕಡು ವಿರೋಧವಿದೆ. ಈಗಿನ ಸುದ್ದಿಯ ಪ್ರಕಾರ ಯೆಹೋವನ ಸಾಕ್ಷಿಯ ಪಂಗಡದವನೆ ಆದ ಯೆಹೋವಾನ ಸಾಕ್ಷಿಗಳ ಸಿದ್ದಾಂತಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಇದ್ದು ಇದನ್ನು ನಿರ್ಲಕ್ಷಿದಕ್ಕಾಗಿ ಈ ಕ್ರತ್ಯವನ್ನು ಮಾಡಿದ್ದೆನೆಂದು ಹೇಳಿಕೊಂಡಿದ್ದಾನೆ. ಇತನನ್ನು ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾಗಿದೆ.

ಯೆಹೋವನ ಸಾಕ್ಷಿ ಸಮಾವೇಶವು ವಾರ್ಷಿಕ ಕೂಟವಾಗಿದ್ದು, ಇದರಲ್ಲಿ “ಪ್ರಾದೇಶಿಕ ಸಮಾವೇಶಗಳು” ಎಂದು ಕರೆಯಲ್ಪಡುವ ದೊಡ್ಡ ಸಭೆಗಳು ಸಾಮಾನ್ಯವಾಗಿ ಮೂರು ದಿನಗಳ ಕಾಲ, ಶುಕ್ರವಾರದಿಂದ ಭಾನುವಾರದವರೆಗೆ ನಡೆಯುತ್ತವೆ. ಈ ಕೂಟವು ೩ ದಿನಗಳದಾಗಿದ್ದು, ಭಾನುವಾರ ಕೊನೆಯ ದಿನವಾಗಿತ್ತು.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಮಹಿಳೆಯಾಯರ ಬಗ್ಗೆ ಮಾಹಿತಿ ನೀಡಿದ ಕೇರಳ ಸಚಿವ ವಿಎನ್ ವಾಸವನ್, ಸ್ಫೋಟದಿಂದ ಉಂಟಾದ ಬೆಂಕಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಟರ್ ಮೆಡ್‌ಸಿಟಿ, ರಾಜಗಿರಿ ಮತ್ತು ಕೊಚ್ಚಿಯ ಸನ್‌ರೈಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.