ಭಂಡಾರ್ಕಾರ್ಸ್: ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರದ ಲಾಂಛನ ಮತ್ತು ರಾಗ ಬಿಡುಗಡೆ


ಕುಂದಾಪುರ: ನಿಮ್ಮ ಒಳಗೊಂದು ಕಿಚ್ಚು ಹುಟ್ಟಬೇಕು. ನಮ್ಮವರೇ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹ ನೀಡಿದಾಗ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ. ಕುಂದಾಪುರ ಪರಿಸರ ಭಾಗದಲ್ಲಿ ಹಲವರು ಕಲೆಗಳಿವೆ ಅವುಗಳಿಗೆ ಇದರ ಉಪಯೋಗವಾಗಲಿ ಇವತ್ತಿನ ವರೆಗಿನ ಹಾದಿಯ ನನ್ನ ದುಡಿಮೆಯ 20ಶೇಕಡಾ ಮಾತ್ರ ನನಗಾಗಿ ಉಳಿದ 80ಶೇಕಡಾ ಸಮಾಜಕ್ಕಾಗಿ ಎಂಬ ಪಾಲಿಸಿ ಹಾಕಿಕೊಂಡು ಬರುತ್ತಿದ್ದೇನೆ. ರೇಡಿಯೋ ಎನ್ನುವುದು ಮೊಬೈಲ್ ಅಥವಾ ಉಳಿದ ಮಾಧ್ಯಮಗಳಿಗಿಂತ ಭಿನ್ನ. ಇದರ ಹಿಂದಿನ ಕೆಲಸಗಳು ಶ್ಲಾಘನೀಯ ಎಂದು ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರ ಇದರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ಜಾದೂಗಾರ ಹಾಗೂ ಸಾಹಿತಿಗಳಾದ ಶ್ರೀ ಓಂ ಗಣೇಶ್ ಅವರು ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರ ಇದರಬಿಡುಗಡೆಗೊಳಿಸಿ ರೇಡಿಯೋ ಒಂದು ಪ್ರಗತಿ ದತ್ತವಾದ ವಿಶಿಷ್ಟವಾದ ವರ ರೇಡಿಯೋ ಹೊರೆತು ಪ್ರಪಂಚ ಇಷ್ಟು ಮುಂದೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.
ಕ. ಸ. ಪ ಉಡುಪಿ ಜಿಲ್ಲೆ ಇದರ ಮಾಜಿ ಅಧ್ಯಕ್ಷರಾದ ಶ್ರೀ.ಎ.ಎಸ್.ಎನ್ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕುಂದಾಪುರ ಕನ್ನಡಕ್ಕೆ ಅದರದೇ ಅದ ವೈಶಿಷ್ಟ್ಯವಿದೆ ಎಂದು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ .ಶಾಂತರಾಮ್ ಪ್ರಭು ರೇಡಿಯೋ ಕುಂದಾಪುರದ ಉಪಯೋಗವನ್ನು ವಿದ್ಯಾರ್ಥಿಗಳು ಸಂಘ ಸಂಸ್ಥೆ ಸಾರ್ವಜನಿಕರೆಲ್ಲರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕುಂದಾಪುರದ ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸುವುದು ಹಾಗೂ ಕುಂದಾಪುರ ಕನ್ನಡ ಎಷ್ಟು ಪ್ರಸಿದ್ಧಿಯನ್ನು ಹೊಂದಿದೆ ಅಷ್ಟೇ ಪ್ರಸಿದ್ಧಿ ನಮ್ಮೂರಿನ ಜನತೆ ಹೊಂದಬೇಕು ಎಂದು ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಯು.ಎಸ್ ಶೆಣೈ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ರೇಡಿಯೋ ಕುಂದಾಪುರ. 89.6 ಈಒ ಇದರ ರಾಗ ಸಂಯೋಜನೆ ಮಾಡಿದ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಲಾಂಛನ ವಿನ್ಯಾಸ ಸ್ಪರ್ಧೆಯ ವಿಜೇತರಾದ ಕೇಶವ ಸಸಿಹಿತ್ಲು ಮತ್ತು ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭಂಡರ್ಕಾರ್ಸ್ ಕಲಾ ಮತ್ತು ವಿಜ್ಞಾನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ದೇವದಾಸ್ ಕಾಮತ್, ಸದಾನಂದ ಛಾತ್ರ, ಜಯಕರ ಶೆಟ್ಟಿ ಪ್ರಜ್ಞೇಶ್ ಪ್ರಭು, ಆಡಳಿತ ಮಂಡಳಿಯ ಸದಸ್ಯರಾದ ಅಭಿನಂದನ್ ಶೆಟ್ಟಿ , ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರದ ಡಾ. ಜಿ.ಎಂ ಗೊಂಡ, ಗಣ್ಯರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರ ಆಚಾರಿ ಅತಿಥಿಗಳನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಎಂ ಗೊಂಡ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸುಮಲತಾ ನಾಯ್ಕ್ ಅತಿಥಿಗಳ ಪರಿಚಯಿದರು, ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.

ಪುಸ್ತಕದೊಳಗೆ ಮನೆಯೊಳಗೆ ನವಿಲು ಗರಿ ಇಡುವುದು ಕೂಡ ಶಿಕ್ಷಾರ್ಹಾ ಅಪರಾಧ

ಬೆಂಗಳೂರು; ಹುಲಿ ಉಗುರಿನ ಲಾಕೆಟ್‌ ಧರಿಸಿದ್ದು ಅಪರಾಧ ಎನ್ನುವ ಸುದ್ದಿಯ ಬೆನ್ನಲ್ಲೇ ಇದೀಗ ಹಲವರಿಗೆ ಕಂಟಕ ಶುರುವಾಗಿದೆ. ಪ್ರಕರಣದ ಬೆನ್ನಲ್ಲೇ ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ ಅವರು ಕೂಡ ಜನರಿಗೆ ಅರಣ್ಯ ಕಾಯಿದೆ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು.
ಹೇಳಿದ್ದಾರೆ. ಈ ನಡುವೆ ಹುಲಿ ಉಗುರು ಅಲ್ಲದೆ ಮನೆಯಲ್ಲಿ ನವಿಲು ಗರಿ ಇಟ್ಟುಕೊಳ್ಳುವುದು ಕೂಡ ಅರಣ್ಯ ಸಂರಕ್ಷಣಾ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಮನವರಿಕೆ ಮಾಡಿದ್ದಾರೆ.

ಹಾಗೆಯೇ ವನ್ಯಜೀವಿ ನವಿಲು ಸಾಕುವುದೂ ಅಪರಾಧ. ನವಿಲಿನ ಗರಿಯನ್ನೂ ಇಟ್ಟುಕೊಳ್ಳುವುದು ಕೂಡ ಅಪರಾಧ, ಅರಣ್ಯದಂಚಿನ ಗ್ರಾಮದಲ್ಲಿದ್ದು, ನವಿಲು ಜನರ ಮನೆಯ ಆವರಣಕ್ಕೆ ಸ್ವ ಇಚ್ಛೆಯಿಂದ ಬಂದರೆ ಅಡ್ಡಿಯಿಲ್ಲ. ಆದರೆ, ಅದನ್ನು ಜನ ಸಾಕುವಂತಿಲ್ಲ . 1972ರ ವನ್ಯಜೀವಿ ಕಾಯ್ದೆ ವನ್ಯಜೀವಿ ವಸ್ತುಗಳ ಸಂಗ್ರಹ, ಪ್ರದರ್ಶನ ಇದನ್ನು ನಿಷೇಧಿಸಿತು. ಬಳಿಕ, 2006, 2012 ಹಾಗೂ 2022ರ ವನ್ಯಜೀವಿ ಕಾಯ್ದೆ ಇನ್ನಷ್ಟು ಬಲಿಷ್ಠವಾಗಿವೆ.

ಇದೀಗ ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಗೆ ಸಂಪೂರ್ಣವಾಗಿ ನಿಷೇಧವಿದೆ. ಯಾವುದೇ ಜೀವಿಯನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ. ಕಾಡು ಪ್ರಾಣಿಗಳ ಚರ್ಮವನ್ನು ಹದ ಮಾಡಿ. ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ. ವನ್ಯಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಸಹ ಅಪರಾಥ. ಹಾವಿನ ವಿಷವನ್ನೂ ಕೂಡ ಸಂಗ್ರಹ ಮಾಡುವಂತಿಲ್ಲ. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ. ವನ್ಯಜೀವಿಗಳ ಕೂದಲು, ಚರ್ಮ, ಉಗುರು, ಗೊರಸು, ಹಲ್ಲು, ಆನೆ ದಂತ ಸೇರಿದಂತೆ ದೇಹದ. ಯಾವುದೇ ಭಾಗವನ್ನು ಸಂಗ್ರಹಿಸುವುದು, ಸಾಗಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ವಿದ್ಯಾರ್ಥಿನಿಯ ಮೇಲೆ ಆಸಿಡ್ ಎರಚಿದ ಆರೋಪವಿದ್ದ ಮುಖ್ಯ ಶಿಕ್ಷಕನ ಅಮಾನತು

ಚಿತ್ರದುರ್ಗ: ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದ ರಂಗಸ್ವಾಮಿ ವಿರುದ್ದ ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ಬಾಲಕಿ ಮೇಲೆ ಎರಚಿದ ಆರೋಪ ಕೇಳಿಬಂದಿತ್ತು.

ದಸರಾ ರಜೆ ಮುಗಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ವಿದ್ಯಾರ್ಥಿಗಳಿಗೆ ಶೌಚಾಲಯ ತೊಳೆಯಲು ಸೂಚಿಸಿದ್ದರಂತೆ. ಅದೇ ವೇಳೆ ಎರಡನೇ ತರಗತಿ ವಿದ್ಯಾರ್ಥಿನಿ ಸಿಂಚನಾ(8) ನೋಡಲೆಂದು ಅಲ್ಲಿಗೆ ತೆರಳಿದ್ದಾಳೆ. ಆಗ ಕೋಪಗೊಂಡ ಮುಖ್ಯ ಶಿಕ್ಷಕ ರಂಗಸ್ವಾಮಿ ಶೌಚಾಲಯ ತೊಳೆಯಲು ಇರಿಸಿದ್ದ ಆ್ಯಸಿಡ್ ತೆಗೆದುಕೊಂಡು ಎರಚಿದ್ದರು. ಈ ಪರಿಣಾಮ ಸಿಂಚನಾಳ ಬೆನ್ನಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಬಾಲಕಿಯ ತಾಯಿ ಪವಿತ್ರಾ ಆಗ್ರಹಿಸಿದ್ದರು

ಇನ್ನು ಗಾಯಾಳು ಸಿಂಚನಾಳನ್ನು ಮುಖ್ಯ ಶಿಕ್ಷಕ ರಂಗಸ್ವಾಮಿಯೇ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದರು. ಪಾಕೆಟ್ ಕಟ್ ಮಾಡಿದ ಪುಡಿ ಸಿಂಚನಾಳ ಮೇಲೆ ಬಿದ್ದಿತು. ಯಾವುದೇ ದುರುದ್ದೇಶದಿಂದ ಎರಚಿಲ್ಲ ತಿಳಿಸಿದ್ದರು.ಇದೀಗ ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕ ಆ್ಯಸಿಡ್ ದಾಳಿ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ರಂಗಸ್ವಾಮಿ ಅಮಾನತುಗೊಳಿಸಿ DDPI ರವಿಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಂಗಸ್ವಾಮಿ ಅವರು ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಮೇಲೆ ಎರಚಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮುಖ್ಯಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಅಮಾನತುಗೊಳಿಸಲಾಗಿದೆ. 

ಕೋಲಾರ : ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿ, ಮಕ್ಕಳು ಹಾಗೂ ಹಿರಿಯರ ಜೀವವನ್ನು ರಕ್ಷಣೆ ಮಾಡಬೇಕು-ರೈತ ಸಂಘದಿಂದ ಒತ್ತಾಯ

ಕೋಲಾರ ಆ,27, ನಗರಾದ್ಯಂತ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಮಕ್ಕಳು ಹಾಗೂ ಹಿರಿಯರ ಜೀವವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ನಗರಸಭೆ ಆಯುಕ್ತರಾದ ಶಿವಾನಂದ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

                ಕೋಲಾರ ನಗರದಲ್ಲಿ ಕತ್ತಲಾದರೆ ನಾಯಿಗಳೇ ಹುಲಿಗಳಂತೆ ಮಕ್ಕಳು ಹಾಗೂ ವೃದ್ದರ ಮೇಲೆ ದಾಳಿ ಮಾಡುವ ಭಯದ ವಾತಾವರಣ ನಿರ್ಮಾಣವಾಗಿದ್ದರೂ ನಾಯಿಗಳ ಆಕ್ರಮಗಣಕ್ಕೆ ಕಡಿವಾಣ ಹಾಕದ ನಗರಸಭೆ ಅಧಿಕಾರಿಗಳ ವಿರುದ್ದ ರೈತ ಸಂಘದ  ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಷ ವ್ಯಕ್ತಪಡಿಸಿದರು.

                ಜಿಲ್ಲಾ ಕೇಂದ್ರದಲ್ಲಿ ಕಳೆದ ಹಲವು ವರ್ಷಗಳಿಂದ ಬೀದಿನಾಯಿಗಳ ದಾಳಿ ಪ್ರಕರಣಗಳಿಗೆ ಲೆಕ್ಕವೇ ಇಲ್ಲ ಪ್ರತಿ ವಾರ್ಡ್‍ನಲ್ಲೂ ವರ್ಷದಿಂದ ವರ್ಷಕ್ಕೆ ನಿರೀಕ್ಷೆಗೂ ಮೀರಿ ಬೀದಿ ನಾಯಿಗಳು ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡು ಅಟ್ಟಹಾಸ ಮರೆಯುತ್ತಿದ್ದರು, ಕಡಿವಾಣ ಹಾಕಬೇಕಾದ ನಗರಸಭೆ ಅಧಿಕಾರಿಗಳು ನಾಪತ್ತೆಯಾಗಿದ್ದರೆಂದು ಕಿಡಿಕಾಡಿದರು.

                ಪುಟ್ಟ ಮಕ್ಕಳು ಕೈಯಲ್ಲಿ ಬಿಸ್ಕೆಟ್, ಬ್ರೆಂಡ್, ಹಿಡಿಯಂಗಿಲ್ಲ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಮನೆಗೆ ಬರುವಾಗ ಒಬ್ಬಂಟಿಯಾಗಿ ಹೋಗುವಂತಿಲ್ಲ, ಮಹಿಳೆಯರು, ವೃದ್ದರ ಕೈಯಲ್ಲಿ ಕೈ ಚೀಲವಿದ್ದರೆ ಸದಾ ಎಚ್ಚರವಾಗಿರಬೇಕು. ಸ್ವಲ್ಪ ಯಾಮಾರಿದರೆ ಬೀದಿ ನಾಯಿಗಳ ಅಟ್ಯಾಕ್ ಮಾಡುವುದು ಗ್ಯಾರೆಂಟಿ ಇದು ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ  ಚುನಾಯಿತ ಜನ ಪ್ರತಿನಿಧಿಗಳು ಗ್ಯಾರೆಂಟಿ ಭಾಗ್ಯವಾಗಿದೆ ಎಂದು ವ್ಯಂಗ್ಯವಾಡಿದರು.

                ನಗರಾಧ್ಯಂತ ಜನ ಸಂದಣಿ ಇರುವ ಪ್ರಮುಖ ಬೀದಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಎ.ಪಿ.ಎಂ.ಸಿ. ಜಿಲ್ಲಾ ಆಸ್ಪತ್ರೆ, ಬಸ್‍ನಿಲ್ದಾಣ, ಹೋಟೆಲ್, ಮತ್ತಿತರ ಕಡೆಗಳಲ್ಲಿ ಕಸದ ರಾಶಿ ಇರುವ ಬಳಿ ನಾಯಿಗಳ ಹಿಂಡು ಆಹಾರಕ್ಕಾಗಿ ಬಂದು ಅಲ್ಲಿಗೆ ಬರುವ ಮಕ್ಕಳ ಮೇಲೆ ದಾಳಿ ಮಾಡುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳ ನಿರ್ಲಕ್ಷ ಏಕೆ ಎಂದು ಪ್ರಶ್ನೆ ಮಾಡಿದರು.

                ಮಂಗಸಂದ್ರ ತಿಮ್ಮಣ್ಣ ಮಾತನಾಡಿ ಬೀತಿಯಲ್ಲಿ ಜನ ಬೀದಿನಾಯಿಗಳ ಹೆಚ್ಚಿನ ಹಾವಳಿಗೆ ಇತ್ತೀಚೆಗೆ ಬೆಳಿಗ್ಗೆ ಸಮಯದಲ್ಲಿ ಹೂ ಹಣ್ಣು, ತರಕಾರಿ, ಖರೀದಿಸಲು ಮಾರುಕಟ್ಟೆಗೆ ಹೋಗಲು ಜನ ಹಿಂದೇಟು ಹಾಕುತ್ತಾರೆ. ಜೊತೆಗೆ ಮನೆ ಮನೆಗೆ ಹಾಲು, ದಿನ ಪತ್ರಿಕೆ, ಹಾಕುವ ಹುಡುಗರ ಮೇಲೆಯೂ ಬೀದಿ ನಾಯಿಗಳ ಅಟ್ಯಾಕ್ ಮಾಡುತ್ತಿವೆ. ಭಿಕ್ಷಕರು, ಹೊಸಬರು, ಅಥವಾ ತಮ್ಮ ವ್ಯಾಪ್ತಿಯೊಳಗೆ ಬೇರೆ ಪ್ರದೇಶದ ನಾಯಿಗಳು ಬಂದರೆ ಅವುಗಳನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ನಾಯಿಗಳು ಎಲ್ಲಿ ಮಕ್ಕಳ ಮೇಲೆ, ವೃದ್ದರ ಮೇಲೆ ಎರಗುತ್ತವೋ ಎಂಬ ಭೀತಿ ಕಾಡುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.

                ರಾತ್ರಿವೇಳೆ ಚಿಕ್ಕಾಪಟ್ಟೆ ಕಿರಿ ಕಿರಿ ಇನ್ನು ರಾತ್ರಿವೇಳೆ ಹಿಂಡುಹಿಂಡಾಗಿ ಸೇರುವ ನಾಯಿಗಳ ಕೂಗಾಟ ಬೌ ಬೌ ಸದ್ದಿಗೆ ಗಾಡ ನಿದ್ರೆಯಲ್ಲಿರುವ ಎಚ್ಚರಗೊಂಡು ಮನೆಯಲ್ಲಿರುವ ಚಿಕ್ಕ ಮಕ್ಕಳು ಜೋರಾಗಿ ಕಿರಿಚಾಟ ಪ್ರಾರಂಭ ಮಾಡುವ ಮಟ್ಟಕ್ಕೆ ನಾಯಿಗಳು ಭಯ ಹುಟ್ಟಿಸುತ್ತಿವೆ ಎಂದರು.

                ಕಬಾಬ್ ಹಾಗೂ ಮಾಂಸದ ಅಂಗಡಿಗಳ ಹತ್ತಿರ ಶ್ವಾನಗಳ ಹಾವಳಿ, ನಗರಾದ್ಯಂತ ಕೋಳಿ, ಕುರಿ ಮಾಂಸದ ಜೊತೆಗೆ ಮೀನು ಮಾರಾಟ ಮಾಡುವ ರಸ್ತೆಗಳಲ್ಲಿಯೇ ಹೆಚ್ಚಾಗಿ ನಾಯಿಗಳು ಕಂಡು ಬರುವ ಜೊತೆಗೆ ನಾಗರೀಕರ ಸಂಚಾರಕ್ಕೆ ಸಂಚಾಕರವಾಗಿ ಮಾರ್ಪಟ್ಟಿದೆ. ಜೊತೆಗೆ ಒಂದು ಸಾರಿ ಮಾಂಸದ ರುಚಿ ನೋಡಿದ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುವ ಅಪಾಯದ ಜೊತೆಗೆ ರಸ್ತೆ ಬದಿ ಕಬಾಬ್, ಚಿಕ್ಕನ್ ಅಂಗಡಿ, ಮಾಂಸಹಾರಿ ಹೋಟೆಲ್‍ಗಳ ಬಳಿ ಉಳಿದ ಮೂಳೆ ಚೂರುಗಳನ್ನು ರಸ್ತೆಯಲ್ಲೇ ಹಾಕುವುದರಿಂದ ನಾಯಿ ಹಾವಳಿಗಳ ಹೆಚ್ಚಾಗಿದೆ. ಇದಕ್ಕೆ ಕಾರಣವಾಗಿರುವ ಅಂಗಡಿಗಳ ಮಾಲಿಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

                ಮನವಿ ನೀಡಿ ಮಾತನಾಡಿದ ಶಿವಾನಂದ ಮಾತನಾಡಿ ಬೀದಿ ನಾಯಿಗಳ ಕಡಿವಾಣಕ್ಕೆ ಈಗಾಗಲೆ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದಷ್ಟೂ ಶೀಘ್ರವಾಗಿ ಕಡಿವಾಣ ಹಾಕಲಾಗುವುದು.

                ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ನಳಿನಿಗೌಡ.ಎ, ಶಿವಾರೆಡ್ಡಿ, ಮಂಗಸಂದ್ರ ನರಸಿಂಹಯ್ಯ, ನಳಿನಿ.ವಿ, ಮೂರಾಂಡಹಳ್ಳಿ ಶಿವಾರೆಡ್ಡಿ ಮುಂತಾದವರಿದ್ದರು.




ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯಲ್ಲಿ “ರೋಸಾರಿಯನ್ ” ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನ


ಕುಂದಾಪುರ, ಅ.27: ಸ್ಥಳೀಯ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯ ವಿದ್ಯಾರ್ಥಿಗಳಿಂದ “ರೋಸಾರಿಯನ್ ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನ” ಏರ್ಪಡಿಸಲಾಗಿತ್ತು.
ಅ.27 ರಂದು ಇದರ ಉದ್ಘಾಟನೆಯನ್ನು ಶಾಲೆಯ ಜಂಟಿಕಾರ್ಯದರ್ಶಿಯಾಗಿರುವ ಅ.ವಂ. ಧರ್ಮಗುರು ಸ್ಟ್ಯಾನಿ ತಾವ್ರೊ ಕರಕುಶಲತೆಯಿಂದ ತಯಾರಿಸಲ್ಪಟ್ಟ ಚಿಟ್ಟೆಯ, ರೆಕ್ಕೆಗಳನ್ನು ತೆರೆದು ವಿಭಿನ್ನ ರೀತಿಯಲ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿ ಶಾಲೆಯ ಹಳೆ ವಿದ್ಯಾರ್ಥಿ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿಸ್ ಜತೆ ನೀಡಿದರು.
“ನಾನು ಇಂದು ವಸ್ತುಪ್ರದರ್ಶನ ಸಭಾ ಭವನದಲ್ಲಿ ಪ್ರವೇಶಗೊಂಡಾಗ,ವಿದ್ಯಾರ್ಥಿಗಳು ತಮ್ಮ ಸ್ವಂತ ಕೈಗಳಿಂದ ನಿರ್ಮಿಸಲ್ಪಟ್ಟ ವಸ್ತು ಪ್ರದರ್ಶವನ್ನು ನೋಡಿ ನಾನು ಹಬ್ಬದ ಸಂತೆಯಲ್ಲಿ ಪ್ರವೇಶಿಸಿದ್ದೇನೊ ಅಂತಾ ಭಾಸವಾಯಿತು,ಪೋಷಕರೆ ಇಂದು ನಿರ್ಮಿಸಲ್ಪಟ್ಟ ವೈವಿಧ್ಯಮಯ ವಸ್ತುಪ್ರದರ್ಶನ ನಿಮ್ಮ ಮಕ್ಕಳೇ ನಿರ್ಮಾಣ ಮಾಡಿದ್ದು, ಇದನ್ನು ಕಣ್ತುಂಬ ನೋಡಿ ಖುಶಿ ಪಡಬೇಕು, ನಮ್ಮ ಮಕ್ಕಳು ತುಂಬ ಬುದಿವಂತರಿದ್ದಾರೆ, ಅವರಿಗೆ ನೀವು ಪೆÇ್ರೀತ್ಸಾಹಿಸಬೇಕು” ಎಂದು ಸಂತಸವನ್ನು ಹಂಚಿಕೊಂಡರು.
ಮುಖ್ಯ ಅತಿಥಿ ಶ್ರೀದೇವಿ ಇನ್ಸುಟ್ಯುಟ್ ಆಫ್ ಟೆಕ್ನೋಜಿ ಮಂಗಳೂರು ಇದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿಸ್ “ನಾನು ಇಲ್ಲಿ ಕಲಿಯುವಾಗ ನಮ್ಮ ಶಿಕ್ಷಕರು ನನಗೆ ಬಹಳ ವಿಧದಲ್ಲಿ ಪ್ರೇರಣೆ ನಿಡ್ಡಿದ್ದರು, ನನ್ನನ್ನು ಹಂತ ಹಂತದಿಂದ ಮಾರ್ಗದರ್ಶನ ನೀಡಿ ಉತ್ತೇಜನ ನೀಡಿದ್ದು, ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಿ ನನ್ನಲ್ಲಿನ ಪ್ರತಿಭೆಯನ್ನು ಬೆಳಗಿಸಿದರು, ಹಾಗೇ ಇಂದು ನಾನು ಪಿಎಚ್‍ಡಿ ಪಡೆದುಕೊಂಡಿದ್ದೇನೆ, ನನ್ನ ಹಾಗೇ ನೀವೂ ಕೂಡ ಈ ಶಾಲೆಯಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳ ಬೇಕು’ ಎನ್ನುತ್ತಾ ಇಂದಿನ ನಿಮ್ಮ ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಭಗಿನಿ ಇವ್ಲಾ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ವೇದಿಕೆಯಲ್ಲಿ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ಉಪಸ್ಥಿತರಿದ್ದು, ವಸ್ತುಪ್ರದರ್ಶನಕ್ಕೆ ಮಾರ್ಗದರ್ಶನ ನೀಡಿದ ಶಿಕ್ಷಕರಾದ, ಮಹಿಮಾ, ಪ್ರಶಾಂತ್ ರೇಬೆರೊ, ರತ್ನಾಕರ ಶೆಟ್ಟಿ ಇವರನ್ನು ಗೌರವಿಸಲಾಯಿತು. ಶಿಕ್ಷಕಿ ನೀತಾ ಡಿಸೋಜಾ ಸ್ವಾಗತಿಸಿದರು, ಶಿಕ್ಷಕಿ ಪ್ರೀತಿ ಬ್ರಗಾಂಜಾ ನಿರೂಪಿಸಿದರು, ಶಿಕ್ಷಕಿ ಸೆಲಿನ್ ಡಿಸೋಜಾ ವಂದಿಸಿದರು
.

ನಾಸ್ಕಾಮ್ ಫ್ಯೂಚರ್ಸ್ ಸ್ಕಿಲ್ಸ್ ಮತ್ತು ಎಂಐಟಿಕೆ ಒಡಂಬಡಿಕೆ / Nasscom Futures Skills and MITK Agreement

ನಾಸ್ಕಾಮ್, ಭಾರತದಲ್ಲಿನ ತಾಂತ್ರಿಕ ಉದ್ಯಮದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಯಾಗಿದ್ದು ಭಾರತ ಮತ್ತು ವಿದೇಶ ಸೇರಿ 3000ಕ್ಕೂ ಅಧಿಕ ಕಂಪನಿಗಳು ಒಳಗೊಂಡಿದೆ

ನಾಸ್ಕಂ ಫ್ಯೂಚರ್ಸ್ ಸ್ಕಿಲ್ಸ್ ಕೌಶಲ್ಯಗಳನ್ನು ಬೆಳೆಸುವಲ್ಲಿ ಭಾರತದ ವೇಗ ಹೆಚ್ಚಿಸಲು ಮತ್ತು ಉದಯೋನ್ಮುಖ ಹೊಸ ತಂತ್ರಜ್ಞಾನದಲ್ಲಿ ಪ್ರತಿಭಟಗಳಿಗೆ ಜಾಗತಿಕ ಕೇಂದ್ರವಾಗಲು ಉದ್ಯಮ ಚಾಲಿತ ಪರಿಸರ ಕಲಿಕಾ ವ್ಯವಸ್ಥೆ. ಈ ಸಂಸ್ಥೆಯೊಂದಿಗೆ ಎಂಐಟಿ ಕುಂದಾಪುರ ಒಡಂಬಡಿಕೆ ಮಾಡಿಕೊಂಡಿರುವುದು ವಿದ್ಯಾರ್ಥಿಗಳಿಗೆ ಅಭಿವೃದ್ದಿ ಹೊಂದಲು ಒಂದು ಸದಾವಕಾಶವಾಗಿದೆ. ಹಲವಾರು ಉದ್ಯೋಗಗಳಿಗೆ ಹಲವು ತಂತ್ರಜ್ಞಾನ ಕೌಶಲ್ಯಗಳಿಂದ ವಿದ್ಯಾರ್ಥಿಗಳನ್ನು ಭವಿಷ್ಯದ ತಾಂತ್ರಿಕತೆಗೆ ತಯಾರು ಮಾಡುವಲ್ಲಿ ಈ ಒಡಂಬಡಿಕೆ ಮುಖ್ಯ ಪಾತ್ರ ವಹಿಸಿದೆ

Nasscom Futures Skills and MITK Agreement

NASSCOM is a leading trade and commerce organization of the Technology Industry covering more than 3000 companies in India and abroad.

NASSCOM Futures Skills is an industry-driven learning ecosystem to accelerate India’s skills development and to become a global hub for talent in emerging new Technologies. MIT Kundapura tie-up with this institution is a great opportunity for students to thrive.This alliance will play a key role in preparing students for the technological future with many technology skills for many job roles.