ಬರದ ನಡುವೆ ಪಶು ಆಹಾರ ಏರಿಕೆ ಮಾಡಿ ರೈತರ ಹಣದಲ್ಲಿ ವಿದೇಶಿ ಯುರೋಪ್ ಪ್ರವಾಸ ಹೊರಟಿರುವ ಒಕ್ಕೂಟದ ವ್ಯವಸ್ಥಾಪಕರಿಗೆ ಸೆಗಣಿಯೊಂದಿಗೆ ದಿಕ್ಕಾರ

ಕೋಲಾರ, ಅ-21, ಬರದ ನಡುವೆ ಪಶು ಆಹಾರ ಏರಿಕೆ ಮಾಡಿ ರೈತರ ಹಣದಲ್ಲಿ ವಿದೇಶಿ ಯುರೋಪ್ ಪ್ರವಾಸ ಹೊರಟಿರುವ ಒಕ್ಕೂಟದ ವ್ಯವಸ್ಥಾಪಕರು ಹಾಗೂ ನಿರ್ದೇಶಕರುಗಳ ವಿರುದ್ಧ ರೈತ ಸಂಘದಿಂದ ಗಾಂಧಿ ಪ್ರತಿಮೆ ಮುಂದೆ ಸಗಣಿ ಸಮೇತ ಹೋರಾಟ ಮಾಡಿ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳವಂತೆ ತಹಶೀಲ್ದಾರ್ ಮುಖಾಂತರ ಸಹಕಾರ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿ ಭೂಮಿಗೆ ಹಾಕಿರುವ ಭಿತ್ತನೆ ಬೀಜ ಮೊಳಕೆ ಒಡೆಯದೆ ಭೂಮಿಯಲ್ಲಿಯೇ ಒಣಗಿರುವ ಜೊತೆಗೆ ಬೆಳೆದ ಬೆಳೆಗಳಿಗೆ ರೋಗ ಬಾದೆಯಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿಲ್ಲದೆ ರಸ್ತೆಗಳಲ್ಲಿ ಸುರಿಯುತ್ತಿರುವುದು ಒಕ್ಕೂಟದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದರೂ ಸಹ ಪಶು ಆಹಾರದ ಬೆಲೆ ಏರಿಕೆ ಮಾಡಿ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ಒಕ್ಕೂಟದ ವಿರುದ್ಧ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳನಿಗೌಡ ಆಕ್ರೋಷ ವ್ಯಕ್ತಪಡಿಸಿದರು.
ಬರ ಆವರಿಸಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಸುಗಳಿಗೆ ಮೇವು, ನೀರು ಸಿಗದೆ ಹೊರ ರಾಜ್ಯಗಳಿಂದ ದುಬಾರಿ ಬೆಲೆಗೆ ಮೇವು ಖರೀದಿ ಮಾಡಲಾಗದ ಪರಿಸ್ಥಿತಿಯಲ್ಲಿರುವ ರೈತರು ಜಾನುವಾರುಗಳನ್ನು ಸಂತೆಗಳಲ್ಲಿ ಕಟುಕರ ಕೈಗೆ ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದರು ಒಕ್ಕೂಡ ಇಂತಹ ಬೀಕರ ಸಮಸ್ಯೆಯಲ್ಲಿಯೂ ಪಶು ಆಹಾರದ ಬೆಲೆಯನ್ನು ಏರಿಕೆ ಮಾಡಿ ಹೈನೋದ್ಯಮಕ್ಕೆ ಕಡೆ ಮೊಳೆ ಒಡೆಯುತ್ತಿದ್ದಾರೆಂದು ಆರೋಪ ಮಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಸರ್ಕಾರದ 40% ಕಮೀಷನ್ ಹಾವಳಿಗೆ ಉದಾಹರಣೆಯಂತೆ ಒಕ್ಕೂಟ ಟೆಟ್ರಾ ಪ್ಯಾಕ್ ವಿಭಾಗಕ್ಕೆ ಅವಶ್ಯಕತೆ ಇರುವ ಯಂತ್ರೋಪಕರಣವನ್ನು 24 ಕೋಟಿ ಯಂತ್ರವನ್ನು 26 ಕೋಟಿಗೆ ಹೆಚ್ಚುವರಿ 2 ಕೋಟಿ ಹೆಚ್ಚಳ ಮಾಡಿ ಕಂಪನಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಬರದ ಪರಿಸ್ಥಿತಿಯಲ್ಲಿಯೂ ವ್ಯವಸ್ಥಾಪಕರು ಹಾಗೂ ನಿರ್ದೇಶಕರು ಕುಟುಂಬ ಸಮೇತ ಯುರೋಪ್ ವಿದೇಶಿ ಪ್ರವಾಸ ಅವಶ್ಯಕತೆ ಇದೆಯೇ? ಎಂದು ಅಧ್ಯಕ್ಷರನ್ನು ಪ್ರಶ್ನೆ ಮಾಡಿದರು.
ಪ್ರವಾಸಕ್ಕೆ ಉಪಯೋಗಿಸುವ ಹಣವನ್ನು ಮೇವಿಗಾಗಿ ಪ್ರತಿ ಡೈರಿಗಳ ಮುಖಾಂತರ ರೈತರಿಗೆ ಬೋನಸ್ ರೂಪದಲ್ಲಿ ನೀಡಿದ್ದರೆ ಕಷ್ಟದಲ್ಲಿರುವ ರೈತರ ಸಮಸ್ಯೆಗೆ ಉಪಯೋಗವಾಗುತ್ತಿಲ್ಲವೇ? ಒಂದು ಕಡೆ ಒಕ್ಕೂಟದ ನಷ್ಟ, ಮತ್ತೊಂದು ಕಡೆ ಸಾರ್ವಜನಿಕ ರೈತರ ಹಣದಲ್ಲಿ ವ್ಯವಸ್ಥಾಪಕರು, ನಿರ್ದೇಶಕರು ಮೋಜು ಮಸ್ತಿಗಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಿರುವುದು ರೈತ ವಿರೋದಿ ದೋರಣೆಯಲ್ಲವೇ? ಎಂದು ಒಕ್ಕೂಟದ ವಿರುದ್ಧ ಕಿಡಿಕಾರಿದರು.
ಕೂಡಲೇ ವಿದೇಶಿ ಪ್ರವಾಸವನ್ನು ರದ್ದುಮಾಡಬೇಕು ಹಾಗೂ ಟೆಟ್ರಾ ಪ್ಯಾಕ್ ವಿಭಾಗದ ಯಂತ್ರೋಪಕರಣ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಬೇಕು ಪ್ರವಾಸಿ ಹಣವನ್ನು ರೈತರಿಗೆ ಮೇವಿಗಾಗಿ ಮೀಸಲಿಡಬೇಕು ಇಲ್ಲವಾದಲ್ಲಿ ಜಾನುವಾರುಗಳ ಸಮೇತ ಒಕ್ಕೂಟದ ಅಧ್ಯಕ್ಷರ ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಸಹಕಾರ ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದರು.

ಭೂ ಆಕ್ರಮಣ ವಿವಾದ ಮುಖ್ಯಮಂತ್ರಿ, ಗೃಹಮಂತ್ರಿಗೆ ಮನವಿ- ಹಳ್ಳಿಯ ಜಾಗದ ವಿವಾದವೊಂದು ವಿಧಾನಸೌಧದ ಮೆಟ್ಟಿಲೇರಿದ ಅಪರೂಪದ ಪ್ರಕರಣ

ಕುಂದಾಪುರ: ಕಳೆದ ಹಲವು ವರ್ಷಗಳಿಂದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನ್ಯಾಯಾಲಯ ಮೆಟ್ಟಿಲೇರಿದ ಬೇಳೂರು ಗ್ರಾಮದ ಸರ್ವೇ ನಂಬ್ರ 211/10ರ ಕೃಷಿ ಭೂಮಿ ವಿವಾದ ಈಗ ಮುಖ್ಯಮಂತ್ರಿ, ಗೃಹಮಂತ್ರಿಗಳ ತನಕ ಹೋಗಿದೆ.
ನಿವೃತ್ತ ಮುಖ್ಯೋಪಾಧ್ಯಾಯ ಬೇಳೂರಿನ ಆನಂದ ಶೆಟ್ಟಿ, ಬೇಳೂರು ಗ್ರಾಮದ ಸರ್ವೇ ನಂಬ್ರ 211/10ರ 57 ಸೆಂಟ್ಸ್ ಜಾಗ ತನ್ನದೆಂದು ಶಿಕ್ಷಕ ಶಶಿಧರ ಶೆಟ್ಟಿ, ರಜನಿ ಎಸ್. ಶೆಟ್ಟಿ ದಂಪತಿ ಅಕ್ರಮವಾಗಿ ವಶಪಡಿಸಿಕೊಂಡು ಕೃಷಿ ಮಾಡುತ್ತಿರುವುದಲ್ಲದೇ ತಮಗೆ ಜೀವ ಬೆದರಿಕೆ ಉಂಟು ಮಾಡುತ್ತಿದ್ದಾರೆಂದು ಹಲವು ವರ್ಷಗಳಿಂದ ದೂರು ನೀಡುತ್ತಾ ಬಂದಿದ್ದು, ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ನ್ಯಾಯಾಲಯ ನನ್ನ ಪರವಾಗಿ ನೀಡಿದ ಆದೇಶಕ್ಕೂ ಜಗ್ಗದೇ ಆರೋಪಿಗಳು ಕಾನೂನು ಬಾಹಿರ ಕೃತ್ಯ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹಮಂತ್ರಿ ಡಾ| ಪರಮೇಶ್ವರ ಅವರಿಗೆ ದೂರು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳು ಉಡುಪಿ ಜಿಲ್ಲೆಗೆ ಬಂದಾಗ 6-9-2023ರಂದು ಆನಂದ ಶೆಟ್ಟಿಯವರು ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಕಛೇರಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಅನಂತರ ಆನಂದ ಶೆಟ್ಟಿಯವರು 17-10-2023ರಂದು ಕೋಟ ಠಾಣೆಯಲ್ಲೂ ದೂರು ದಾಖಲಿಸಿದ್ದರು. ಆಮೇಲೆ 20-10-2023ರಂದು ಗೃಹ ಸಚಿವರಿಗೂ ದೂರು ಸಲ್ಲಿಸಿ, 90ರ ಹರೆಯದ ನಾನು ಹೋರಾಟ ಮಾಡಿ ಮಾನಸಿಕವಾಗಿ ನೊಂದಿದ್ದು, ದೈಹಿಕವಾಗಿ ಕುಗ್ಗಿದ್ದೇನೆ. ದಯವಿಟ್ಟು ಶೀಘ್ರ ಕ್ರಮಕೈಗೊಳ್ಳಿ ಎಂದು ವಿನಂತಿಸಿದ್ದಾರೆ. ಹಳ್ಳಿಯ ಜಾಗದ ವಿವಾದವೊಂದು ವಿಧಾನಸೌಧದ ಮೆಟ್ಟಿಲೇರಿದ ಅಪರೂಪದ ಪ್ರಕರಣ ಇದಾಗಿದೆ.

ಕುದ್ರೋಳಿ ಕ್ಷೇತ್ರಕ್ಕೆ ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ ಸೌಹಾರ್ದ ಭೇಟಿ / Goodwill visit to Kudroli Kshetra from Saint Mother Teresa Forum

ಜಗತ್ಪ್ರಸಿದ್ಧ ಮಂಗಳೂರು ದಸರಾ ನಡೆಯುವ ಸೌಹಾರ್ದ ತಾಣ ಕುದ್ರೋಳಿ ಕ್ಷೇತ್ರಕ್ಕೆ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವೇದಿಕೆಯ ಇತರ ಸದಸ್ಯರೊಂದಿಗೆ ಸೌಹಾರ್ದ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪೂಜೆ ಪುರಸ್ಕಾರ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

 ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ವಿಶ್ವ ಮಾನವ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶ್ರೀ ಗೋಕರ್ಣಾನಾಥ ಕ್ಷೇತ್ರವು ಸರ್ವ ಧರ್ಮದ ಜನತೆಯ ಪ್ರೀತಿ ವಿಶ್ವಾಸಗಳಿಸುವ ಮೂಲಕ ಸೌಹಾರ್ದತೆಯ ತಾಣವಾಗಿ ಜಗತ್ಪಸಿದ್ದಗೊಂಡಿದೆ. ಮಾತ್ರವಲ್ಲದೆ ನಾಡ ಹಬ್ಬವಾದ ದಸರಾದ ಇಲ್ಲಿನ ವೈಭವವು ಎಲ್ಲರ ಕಣ್ಮಣ ಸೆಳೆಯುತ್ತಿದೆ. ಮಂಗಳೂರು ದಸರಾ ಇಂದು ಜಾಗತಿಕ ಮನ್ನಣೆ ಪಡೆದಿದ್ದು, ಇಲ್ಲಿನ ದಸರಾ ಸಂಭ್ರಮದಲ್ಲಿ ದೇಶ ವಿದೇಶಗಳಿಂದ ಜನತೆ ಭಾಗವಹಿಸುವ ಮೂಲಕ ಕೂಡಿ ಬಾಳುವ ಸಂಸ್ಕ್ರತಿಯ ಪ್ರತೀಕವಾಗಿದೆ ಎಂದು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಈ ಸಂದರ್ಭದಲ್ಲಿ ಮಾತನಾಡಿದರು.

 ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ರವಿಶಂಕರ್ ಮಿಜಾರ್,ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಮುಖರಾದ  ಸುನಿಲ್ ಕುಮಾರ್ ಬಜಾಲ್, ಮಂಜುಳಾ ನಾಯಕ್,ಅಶ್ರಫ್ ಕೆ, ಡೋಲ್ಫಿ ಡಿಸೋಜ,ಮಹೇಶ್ ನಾಯಕ್, ಮರ್ಲಿನ್ ರೇಗೋ, ಫ್ಲೇವಿ ಕ್ರಾಸ್ತಾ,ಡಯಾನ ಡಿಸೋಜ,ಫ್ಲೋರಿನ್ ಡಿಸೋಜ, ಸಂಜನಾ ಛಲವಾದಿ,ಸಮರ್ಥ್ ಭಟ್,ಸ್ಟಾನಿ ಡಿಕುನ್ನಾ ಬಂಟ್ವಾಳ,ಸಿಲ್ವಿಯಾ ಸಿಕ್ವೇರಾ ಮುಂತಾದವರು ಉಪಸ್ಥಿತರಿದ್ದರು

Goodwill visit to Kudroli Kshetra from Saint Mother Teresa Forum

President and Members of the St. Mother Terasa Vichara Vedike, an organization working towards communal harmony of coastal Karnataka  led by its President, former President of karnataka konkani Sahitya Academy Mr Roy castelino visited kudroli temple  Mangalore on occasion of Dasara Celebrations and greeted members of the temple committee.

Madhava suvarna, Secretary Temple Committee and member Ravishankar mijar welcomed them.

Sunil Kumar Bajal, Manjula Nayak ,K. Ashraf, Dolphy Dsouza, Mahesh Nayak, Merlyn Rego, Falvy crasta, Samarth Bhat, Diana DSouza, Sanjana Chalavadi, Sylvia Sequeira, Florine DSouza, Stanley D’Cunha and others were present on the occasion.

Mother Teresa Vichara Vedike has planned various activities to build and  promote social harmony through interfaith and Inter religious communication and dialogue.

This visit was very important to establish cordial relations with the community and society on a whole.

ಐ. ಎಂ. ಜೆ.  ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಮೂಡ್ಲಕಟ್ಟೆಯಲ್ಲಿ ನವರಾತ್ರಿ ಆಚರಣೆ

“ಐ. ಎಂಮ್. ಜೆ  ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಮೂಡ್ಲಕಟ್ಟೆಯಲ್ಲಿ ನವರಾತ್ರಿ ಆಚರಣೆಯ ಶುಕ್ರವಾರ ಶಾರದಾ ಮತ್ತು ಆಯುಧ ಪೂಜೆಯನ್ನು ಭಕ್ತಿ ಮತ್ತು ಶ್ರದ್ದೆ ಇಂದ ಆಚರಿಸಲಾಯಿತು. ಐ. ಎಂಮ್. ಜೆ ಸಮೂಹ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಿದ್ದಾರ್ಥ್ ಜೆ ಶೆಟ್ಟಿ ಅವರು ಪೂಜಾ ವಿಧಿ ವಿದಾನವನ್ನು ನೆರವೇರಿಸಿದರು. ಇದೆ ಸಂದರ್ಭದಲ್ಲಿ ಐ. ಎಂಮ್. ಜೆ ವಿದ್ಯಾಸಂಸ್ಥೆಗೆ ಒಳಪಡುವ  ಎಲ್ಲಾ ವಿಭಾಗದಲ್ಲೂ ಪ್ರತ್ಯೇಕವಾಗಿ ಪೂಜಾ ಕಾರ್ಯಗಳು ಜರುಗಿದವು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ  ವಿದ್ಯಾಸಂಸ್ಥೆಯ ಉಪಾಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಬಾಗಿಯಾದರು. ನೆರದಿದ್ದ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.

ರಾಷ್ಟೀಯ ಹಬ್ಬಗಳನ್ನ ಎಲ್ಲಾ ಇಲಾಖಾಧಿಕಾರಿಗಳು ಅದ್ದೂರಿಯಾಗಿ ನಡೆಸಲು ತಹಶೀಲ್ದಾರ್ ಶರೀನ್‍ತಾಜ್ ಇಲಾಖಾಧಿಕಾರಿಗಳಿಗೆ ಸೂಚನೆ

ಶ್ರೀನಿವಾಸಪುರ 2 : ರಾಷ್ಟೀಯ ಹಬ್ಬಗಳನ್ನ ಎಲ್ಲಾ ಇಲಾಖಾಧಿಕಾರಿಗಳು ಅದ್ದೂರಿಯಾಗಿ ನಡೆಸುವಂತೆ ತಹಶೀಲ್ದಾರ್ ಶರೀನ್‍ತಾಜ್ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಸಮಿತಿವತಿಯಿಂದ ವಾಲ್ಮೀಕಿ ಜಯಂತಿ, ಕನ್ನಡ ರಾಜ್ಯೋತ್ಸವ, ಕನಕ ಜಯಂತಿ, ಒನಿಕೆ ಓಬವ್ವ ಜಯಂತಿ, ಕಿತ್ತೂರುರಾಣಿ ಚನ್ನಮ್ಮ ಜಯಂತಿ ಅಂಗವಾಗಿ ನಡೆದ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದರು.
ವಾಲ್ಮೀಕಿ ಜಯಂತಿ ಅಂಗವಾಗಿ ಎಲ್ಲಾ ಗ್ರಾಮಪಂಚಾಯಿತಿಗಳಿಂದಲೂ ಸ್ತಬ್ದ ಚಿತ್ರಗಳನ್ನು ಮೆರವಣಿಗೆ ಮೂಲಕ ತಾಲೂಕು ಕೇಂದ್ರಕ್ಕೆ ತರುವಂತೆ ಸೂಚಿಸಲಾಯಿತು.
ಎಲ್ಲಾ ಇಲಾಖೆಗಳ ಕಛೇರಿಯ ಕಟ್ಟಡಗಳಿಗೆ ವಿದ್ಯುತ್‍ದೀಪಾ ಅಲಂಕಾರಗಳನ್ನು ಮಾಡಿ, ತಮ್ಮತಮ್ಮ ಕಛೇರಿಗಳಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ , ತಮ್ಮ ಇಲಾಖೆಗಳಿಗೆ ಸಂಬಂದಿಸಿದ ಸ್ತಬ್ದಚಿತ್ರಗಳನ್ನು ಮೆರವಣಿಗಾಗಿ ಸಿಂಗರಿಸುವಂತೆ ಸೂಚನೆ ನೀಡಿದರು.
ನವಂಬರ್ 1ರ ಕನ್ನಡರಾಜ್ಯೋತ್ಸವ ಕಾರ್ಯಕ್ರಮವು ಪಟ್ಟಣದ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದ್ದು, ಅಂದು ಕನ್ನಡ ದ್ವಜ, ರಾಷ್ಟ್ರದ್ವಜಾರೋಹಣ ನಡೆಸಲಾಗುವುದು, ಎಲ್ಲಾ ಇಲಾಖೆಗಳಿಗೆ ಸಂಬಂದಿಸಿದ ಸ್ತಬ್ದಚಿತ್ರಗಳ ಹಾಗು ಕಲಾತಂಡಗಳೊಂದಿಗೆ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಸಲಾಗುವುದು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗುವುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಇಒ ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ,ಎನ್.ಸತ್ಯನಾರಾಯಣ್, ಕೃಷಿ ಅಧಿಕಾರಿ ಕೆ.ಸಿ.ಮಂಜುನಾಥ್, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್, ಮುಖಂಡರಾದ ಹೊಗಳಗರೆ ಆಂಜನೇಯಪ್ಪ, ಗೌನಿಪಲ್ಲಿ ರಾಮಮೋಹನ್, ನರಸಿಂಹಪ್ಪ, ವ್ಯಾಪಲಪಲ್ಲಿ ನರೇಶ್, ಯಮ್ಮನೂರು ನಾಗರಾಜ್, ರಾಮಾಂಜನಮ್ಮ, ವೆಂಕಟೇಶ್, ಪೆದ್ದಪಲ್ಲಿ ಈರಪ್ಪ ಇದ್ದರು.

ಭಗಿನಿ ಮೇರಿ ಅನಿಸೆಟಾ ಎಸಿ (86) ಮಂಗಳೂರಿನಲ್ಲಿ ನಿಧನರಾದರು / Sr. Mary Aniceta AC (86) passed away in Mangalore

ಭಗಿನಿ ಮೇರಿ ಅನಿಸೆಟಾ ಎಸಿ (85), ಶುಕ್ರವಾರ, ಅಕ್ಟೋಬರ್ 20, 2023 ರಂದು ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಅನನ್ಸಿಯೇಷನ್ ಕಾನ್ವೆಂಟ್‌ನಲ್ಲಿ ನಿಧನರಾದರು. ಅವರು ಬೆಳ್ಳೂರು ಮೂಲದವರಾಗಿದ್ದು, ಅವರ ಮೂಲ ಹೆಸರು ಬೆನಿಟಾ ಸೆಲೆಸ್ತಿನಾ ರೊಡ್ರಿಗಸ್ ಆಗಿದ್ದು, ಅವರು ದಿವಂಗತ ಸಂತಾನ್ ರೋಡ್ರಿಗಸ್ ಮತ್ತು ದಿವಂಗತ ಮೊರ್ನೆಲ್ ಪಿರೇರಾ ಅವರ ಪುತ್ರಿಯಾಗಿದ್ದರು.

   ಅವರ ಪಾರ್ಥಿವ ಶರೀರವನ್ನು ಅಕ್ಟೋಬರ್ 22 ರಂದು ಭಾನುವಾರ ಮಧ್ಯಾಹ್ನ 1.00 ಗಂಟೆಯಿಂದ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಅನನ್ಸಿಯೇಶನ್ ಕಾನ್ವೆಂಟ್ ಚಾಪೆಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು. ನಂತರ ಲೇಡಿಹಿಲ್ ಕಾನ್ವೆಂಟ್ ಸ್ಮಶಾನದಲ್ಲಿ ಅಂತ್ಯಕ್ರಿಯೆಯು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ.

ಅವರು ಕರ್ನಾಟಕ ಪ್ರಾಂತ್ಯದ ಅಪೋಸ್ತಲಿಕ್ ಕಾರ್ಮೆಲ್ ಸಭೆಗೆ ಸೇರಿದರು ಮತ್ತು ಹಲವಾರು ಶಾಲೆಗಳಲ್ಲಿ ಶಿಕ್ಷಕಿಯಾಗಿ ಮತ್ತು ಮುಖ್ಯೋಪಾಧ್ಯರಾಗಿ ಸೇವೆ ಸಲ್ಲಿಸಿದ್ದರು  ಪ್ರಾಥಮಿಕ ಹಂತದಲ್ಲಿ ಬಡ ಮಕ್ಕಳಿಗೆ ವಿಶೇಷವಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕುಂದಾಪುರದ ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿರುವಾಗ, ಅವರಿಗೆ ಸರಕಾರಿ ಶಿಕ್ಷಕಿಯರ ಉದ್ಯೋಗ ಸಿಗುವ ಮೊದಲೇ ಸಂತ ಮೇರಿ ಪ್ರಾಥಮಿಕ ಕನ್ನಡ ಮಾದ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಆರಂಭಿಸಿದ್ದರು.ಅವರು ತಮ್ಮ ಸಮರ್ಪಿತ ಸೇವೆಗಳನ್ನು ಸಲ್ಲಿಸಿದ್ದು, ಅವರೊಬ್ಬ ಉತ್ತಮ ಶಿಕ್ಷಕಿಯಾಗಿದ್ದುದು ಅಲ್ಲದೆ ಒಳ್ಳೆಯ ಸಂಗೀತಗಾರಾಗಿದ್ದರು ವಿದ್ಯಾರ್ಥಿಗಳ ಮೇಲೆ ಅತೀವ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಅವರ ಬಾಳಿನ ಕೊನೆಯಲ್ಲಿ ಕೂಡ ವಿದ್ಯಾರ್ಥಿಗಳಿಗಾಗಿ ಕನವರಿಸಿಕೊಳ್ಳುತಿದ್ದರು ಎಂದು ಅವರ ಜೊತೆಯಲ್ಲಿದ್ದವರು ಹೇಳಿಕೊಳ್ಳುತ್ತಾರೆ.

    ಅವರು ಸಂತ ಜೋಸೆಫ್ ಹಿರಿಯ ಪ್ರಾರ್ಥಮಿಕ ಶಾಲೆ ಗಂಗೂಳ್ಳಿ; ಕಾರ್ಮೆಲ್ ಕಾನ್ವೆಂಟ್, ಹಳಿಯಾಳ; ಸ್ಟೆಲ್ಲಾ ಮಾರಿಸ್ ಕಾನ್ವೆಂಟ್, ಕೋಟೆಕಾರ್; ಸೇಂಟ್ ಆಗ್ನೆಸ್ ಕಾನ್ವೆಂಟ್, ಬೆಂದೋರ್; ಸೇಂಟ್ ಜೋಸೆಫ್ ಕಾನ್ವೆಂಟ್, ಮೈಸೂರು; ಶಾಂತಿ ನಿಲಯ, ನಂಜನಗೂಡು ಮತ್ತು ಅನನ್ಸಿಯೇಷನ್ ಕಾನ್ವೆಂಟ್, ಲೇಡಿಹಿಲ್, ಮಂಗಳೂರು. ಇಲ್ಲಿ ಸೇವೆ ನೀಡಿದ್ದಾರೆ.

  ಸಂಪರ್ಕಕ್ಕೆ : 0824-2456851, 94814 60926

ಶ್ರದ್ದಾಂಜಲಿ ಸಿಸ್ಟರ್ ಮೇರಿ ಅನಿಸೆಟಾ ಎಸಿ ಅವರು ಕುಂದಾಪುರ ಸಂತ ಮೇರಿ ಶಾಲೆಯಲ್ಲಿ ಕಲಿಸುತ್ತೀರುವಾಗ, ನಾನು, ಬರ್ನಾಡ್ ಡಿ’ಕೋಸ್ತಾ ಅವರ ಶಿಸ್ಯನಾಗಿದ್ದೆ. ಹಾಗೇ ನನ್ನ ಪತ್ನಿ ವಿನಯಾ ಡಿ’ಕೋಸ್ತಾ ಇವರಿಗೂ ಅವರು ಕಲಿಸಿದ್ದಾರೆ. ಉತ್ತಮ ಶಿಕ್ಷಕಿಯಾಗಿದ್ದ ಅವರಿಗೆ ಗೌರವಪೂರ್ವಕವಾಗಿ ನಮಿಸಿ, ಆವರ ಆತ್ಮಕ್ಕೆ ದೇವರು ಸದ್ಗತಿ ನೀಡಲೆಂದು ಪ್ರಾರ್ಥಿಸುತ್ತಾ, ಜನನುಡಿ.ಕಾಮ್ ಸಂಪಾದಕನಾದ ನಾನು ಸಿಸ್ಟರ್ ಮೇರಿ ಅನಿಸೆಟಾ ಅವರಿಗೆ ಪ್ರೀತಿಪೂರ್ವಕ ಶ್ರದ್ದಾಂಜಲಿಯನ್ನು ಅರ್ಪಿಸುತ್ತೇನೆ

Sr. Mary Aniceta AC (86) passed away in Mangalore

Sister Mary Aniceta AC (85), passed away on Friday, October 20, 2023 at Annunciation Convent, Ladyhill, Mangalore. She hails from Bellur and her original name is Benita Celestina Rodriguez, daughter of late Santhan Rodriguez and late Mornel Pereira.

His mortal remains will be laid for public viewing at Annunciation Convent Chapel, Ladyhill, Mangalore on Sunday, October 22 from 1.00 pm. Interment to follow at Ladyhill Convent Cemetery at 3.30pm.

She joined the Apostolic Carmel Congregation in Karnataka Province and served as a teacher and headmaster in several schools  specially serving poor children at the primary level. While she was in St. Joseph’s Convent, Kundapur, she started serving as a teacher in Saint Mary’s Primary Kannada Medium School before she got a job as a government teacher. Even at the last days of her life, she dreamed for students.

She served as a teacher at Saint Joseph’s higher Primary School, Ganguli; Carmel Convent, Haliyala; Stella Maris Convent, Kotekar; St Agnes Convent, Bendore; St. Joseph’s Convent, Mysore; Shanti Nilaya, Nanjangudu and Annunciation Convent, Ladyhill, Mangalore. Served here.

Tribute
I, Bernard D’Costa, was a student of Sister Mary Aniceta AC when she was teaching at Saint Mary’s School, Kundapur. He also taught my wife Vinaya D’Costa. I, the Editor of Jananudi.com, pay my loving tribute to Sister Mary Aniceta, bowing respectfully to her great teacher, and praying for God to rest her soul.