ಫುಟ್ ಪಾತಿಗೆ ಕಾರು ನುಗ್ಗಿಸಿ ಯುವತಿಯ ಸಾವಿಗೆ ಕಾರಣನಾದ ಕಮಲೇಶನ ಬಂಧನ

ಮಂಗಳೂರು: ನಿನ್ನೆ (18 ರಂದು) ಸಂಜೆ ನಾಲ್ಕಕ್ಕೆ  ನಗರದ ಲೇಡಿಹಿಲ್ ಬಳಿ ಫುಟ್ ಪಾತಿಗೆ ಕಾರು ನುಗ್ಗಿಸಿ ಯುವತಿಯ ಸಾವಿಗೆ ಕಾರಣನಾಗಿ ಕಾರಿನೊಂದಿಗೆ ಪರಾರಿಯಾದ ಚಾಲಕನು ಕಾರು ನಿಲ್ಲಿಸದೆ ಕಾರಿನೊಂದಿಗೆ ಪರಾರಿಯಾಗಿದ್ದ ಕಮಲೇಶ್ ಬಲದೇವ್ ಹೊಂಡಾ ಶೋ ರೂಮ್ ಬಳಿ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದ. ಮನೆಯಲ್ಲಿ ವಿಷಯವೆಲ್ಲ ಹೇಳಿದ ಬಳಿಕ ತಂದೆ ಎಚ್.ಎಂ. ಬಲದೇವ್ ಜತೆ ಬಂದು ಪಶ್ಚಿಮ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ ಈಗ ಈತನನ್ನು ಬಂಧಿಸಲಾಗಿದೆ, ಈತನನ್ನು ಕಮಲೇಶ್ ಬಲದೇವ್ ಎಂದು ಗುರುತಿಸಲಾಗಿದೆ.

ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ದಿಂದ ಕಾರು ಚಾಲನೆ ಮಾಡಿದ ಕಮಲೇಶ್ ಬಲದೇವ್ ಕುದ್ರೋಳಿ ದೇಗುಲಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದ ಯುವತಿ ಹಾಗೂ ಮಕ್ಕಳಿದ್ದ ಗುಂಪಿಗೆ ಕಾರು ನುಗ್ಗಿಸಿದ್ದ. ಇದರ ಪರಿಣಾಮ ಸುರತ್ಕಲ್ ಸಮೀಪದ ಕಾನ ಬಾಳದ ನಿವಾಸಿ ಗಂಗಾಧರ ಅವರ ಪುತ್ರಿ 23ರ ಹರೆಯದ ರೂಪಶ್ರೀ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪ್ರಾಪ್ತ ಬಾಲಕಿಯರು ಸೇರಿದಂತೆ ಇನ್ನೊರ್ವ ಯುವತಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿದ್ದ ಕಮಲೇಶ್ ಬಲದೇವ್ ಹೊಂಡಾ ಶೋ ರೂಮ್ ಬಳಿ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದ. ಮನೆಯಲ್ಲಿ ವಿಷಯವೆಲ್ಲ ಹೇಳಿದ ಬಳಿಕ ತಂದೆ ಎಚ್.ಎಂ. ಬಲದೇವ್ ಜತೆ ಬಂದು ಪಶ್ಚಿಮ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಅಪಘಾತದಲ್ಲಿ ಸುರತ್ಕಲ್‌ನ ರೂಪಶ್ರೀ (23) ಸ್ಥಳದಲ್ಲೇ ಕೂನಯುಸಿರಳದಿದ್ದರು ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರೂಪಶ್ರೀ ಜತೆಯಿದ್ದ ಸ್ವಾತಿ (26), ಹಿತ್ನವಿ (16), ಕೃತಿಕಾ(16) ಮತ್ತು ಯತಿಕಾ(12)ಗೆ ಗಂಭೀರ ಗಾಯಗಳಾಗಿವೆ.ಈ ಐವರೂ ಯುವತಿಯರು ಲೇಡಿಹಿಲ್‌ನಿಂದ ಮಣ್ಣಗುಡ್ಡ ಜಂಕ್ಷನ್‌ ಕಡೆಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಪಘಾತದ ಭೀಕರ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದನ್ನ ನೋಡಿ ಎಲ್ಲರು ಮರುಗುವಂತೆ ಮಾಡಿದೆ. ಹುಂಡೈ ಇಯಾನ್‌ ಕಂಪೆನಿಯ (ka 19 Md 5676) ನೋಂದಣಿ ಹೊಂದಿದ್ದ ಕಾರು ಇದಾಗಿದ್ದು, ಕಾರನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆರೋಪಿ ಕಾರಿನ ಚಾಲಕ ರಿಯಲ್‌ ಎಸ್ಟೇಟ್‌ ಏಜೆಂಟ್‌ ಎಂದು ತಿಳಿದುಬಂದಿದೆ.

ಅಪಘಾತಕ್ಕೆ ಕಾರಣವಾದ ಕಾರು

ರೈತರು ತಂತ್ರಜ್ಞಾನ ಬಳಸಿ ಕೃಷಿ ಮಾಡಿದರೆ ನಷ್ಟವಾಗುವುದನ್ನ ತಪ್ಪಸಿ ಲಾಭಾದಾಯಕ ಕೃಷಿ ಮಾಡಬಹುದು:ಕೆ.ಸಿ.ಮಂಜುನಾಥ್

ಶ್ರೀನಿವಾಸಪುರ 1 : ರೈತರು ತಂತ್ರಜ್ಞಾನ ಬಳಸಿ ಕೃಷಿ ಮಾಡಿದರೆ ನಷ್ಟವಾಗುವುದನ್ನ ತಪ್ಪಸಿ ಲಾಭಾದಾಯಕ ಕೃಷಿ ಮಾಡಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ದೊಡ್ಡಬಂದಾರ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷವಾಗಿ ರೈತರು ನೈಸರ್ಗಿಕ ಸಂಪನ್ಮೂಲಗಳನ್ನು ಬಳಕೆ ಮಾಡಿದರೆ ಕೃಷಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು ಇದರೊಂದಿಗೆ ಮುಂದಿನ ಪೀಳಿಗೆಗೆ ಕೃಷಿ ವರ್ಗಾಯಿಸಬೇಕಾದರೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಬಹಳ ಮುಖ್ಯವಾಗಿದೆ . ಹಾಗು ಕೃಷಿ ಯಂತ್ರೋಪಕರಣಗಳಿಗೆ ಸರ್ಕಾರದಿಂದ ಸಿಗುವ ಅನುದಾನದ ಬಗ್ಗೆ, ಜಲಾನಯನ ಕಾರ್ಯಕ್ರಮದ ಬಗ್ಗೆ, ಕಿಸಾನ್ ಯೋಜನೆಯ ಬಗ್ಗೆ ಹಾಗೂ ಸರ್ಕಾರದ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ರವಣಾರೆಡ್ಡಿ, ಮುಖಂಡರಾದ ಮುನಿಯಪ್ಪ, ರವಣಪ್ಪ, ಜಯರಾಮರೆಡ್ಡಿ, ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪ, ಕೃಷಿ ಮೇಲ್ವಿಚಾರಕ ರಮೇಶ್, ವಲಯ ಮೇಲ್ವಿಚಾರಕ ಡಿ.ಕೆ.ವೆಂಕಟೇಶ್, ಒಕ್ಕೂಟದ ಅಧ್ಯಕ್ಷೆ ವನಜಾಕ್ಷಿ , ನೆಲವಂಕಿ ವಲಯ ಸೇವಾಪ್ರತಿನಿದಿಗಳು, ಪ್ರಗತಿಪರ ರೈತರು, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು ಇದ್ದರು.
18, ಎಸ್‍ವಿಪುರ್ 1 : ದೊಡ್ಡಬಂದಾರ್ಲಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಕೆ.ಸಿ.ಮಂಜುನಾಥ್ ಮಾತನಾಡಿದರು.
ಪೋಟು : ದೊಡ್ಡಬಂದಾರ್ಲಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಗಾಟಿಸಿದರು
.